Monday 25 August 2014

ನಾಗಮಂಗಲ-ಶಿಕ್ಷಣ ಕಲಿಕೆಯಲ್ಲಿ ಸಂಗೀತದ ಪಾತ್ರ ಮಹತ್ವದ್ದು;ಅನಂತರಾಜು.

ಶಿಕ್ಷಣ ಕಲಿಕೆಯಲ್ಲಿ ಸಂಗೀತದ ಪಾತ್ರ ಮಹತ್ವದ್ದು;ಅನಂತರಾಜು
ನಾಗಮಂಗಲ;ಮಕ್ಕಳು ಪ್ರತಿದಿನದ ಶಿಕ್ಷಣ ಕಲಿಕೆಯಲ್ಲಿ ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳಲು ಸಂಗೀತ ಮಹತ್ವದ ಪಾತ್ರವಹಿಸುತ್ತದೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಅನಂತರಾಜು ಅಭಿಪ್ರಾಯ ಪಟ್ಟರು
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಂಜೆ  ಬಳ್ಳಾರಿಯ ನಿಹಾರಿಕ ಸಾಂಸ್ಕøತಿಕ ಟ್ರಸ್ಟ್,ಮತ್ತು ನಾಗಮಂಗಲದ ಭುವನೇಶ್ವರಿ ಸಾಂಸ್ಕøತಿಕ ಟ್ರಸ್ಟ್,ಕನ್ನಡಸಂಘ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀ ಗುರು ಪಂಚಾಕ್ಷರ ಸಮ್ಮಾನ್ ಪ್ರಶಸ್ತಿ ಪ್ರದಾನ ಮತ್ತು ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು ಮನುಷ್ಯನ ಪಂಚೇಂದ್ರೀಯಗಳಲ್ಲಿ  ಲವಲವಿಕೆಯನ್ನು ತುಂಬುವ ಶಕ್ತಿ ಸಂಗೀತಕ್ಕಿರುವುದರಿಂದ ಮಕ್ಕಳು ಶಾಲಾ ಶಿಕ್ಷಣದ ಕಲಿಕೆಯಲ್ಲಿ ಕ್ರಿಯಾಶೀಲತೆಯಿಂದ ತೊಡಗುಕೊಳ್ಳುತ್ತಾರೆ ಆದ್ದರಿಂದ ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಿ ಸಂಗೀತ ಕ್ಷೇತ್ರದ ಬೆಳವಣಿಗೆಗೆ ದುಡಿಯುತ್ತಿರುವ ಸಂಸ್ಥಗೆ ಬೆನ್ನೆಲುಬಾಗಬೇಕು ಎಂದು ಹೇಳಿದರು
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಸಾಹಿತಿ ನಾ.ಶು.ನಾಗೇಶ್ ಮಾತನಾಡಿ ಅನೇಕ ಸಾಹಿತ್ಯಗಳು ಸಂಗೀತ ಸ್ಪರ್ಶದಿಂದಾಗಿ ಜೀವಂತಿಕೆಯನ್ನ ಪಡೆದುಕೊಂಡಿದ್ದು ಎಲ್ಲ ವರ್ಗದ ಜನರನ್ನು ಒಂದೇ ಬಾವದಲ್ಲಿ ಸಮ್ಮಿಳಿತಗೊಳಿಸುವ ಶಕ್ತಿ ಸಂಗೀತಕ್ಕಿದ್ದು ನಾಗಮಂಗಲದಲ್ಲಿ ಹಿಂದೂಸ್ಥಾನಿ ಸಂಗೀತ ಗಾಯಕರನ್ನ, ಸಂಗೀತ ಕಲಾಭಿಮಾನಿಗಳನ್ನ ಹುಟ್ಟುಹಾಕಿ ನಾಡಿನಲ್ಲಿ ಸಾದನೆ ಗೈದ ಹಿರಿಯ ಗಾಯಕರಾದ ಗುಲ್ಬರ್ಗಾದ ಪಂಡಿತ್ ಫಕೀರೇಶ್‍ಕಣವಿಯವರಿಗೆ  ಶ್ರೀ ಗುರು ಪಂಚಾಕ್ಷರ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು
ಕಾರ್ಯಕ್ರಮಕ್ಕೂ ಮುನ್ನ ನಾಡಿನ ಹಿರಿಯ ಸಾಹಿತಿ  ಯು ಆರ್ ಅನಂತಮೂರ್ತಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು ಹಾಗೂ ಗಾಯಕರಾದ ರೇಖಾ ಬೆಳಗಲ್ಲು, ಚಂದ್ರಪ್ಪವೈರಮುಡಿ,ಫ್ರಭುಸೊನ್ನ ಹೀದೂಸ್ಥಾನಿ ಗಾಯನ ನೆಡೆಸಿಕೊಟ್ಟರು ಕಾಂiÀರ್iಕ್ರಮದಲ್ಲಿ ಪ್ರಶಸ್ತಿ ಪುಸ್ಕøತರಾದ ಪಂಡಿತ್ ಪಕೀರೇಶ್ ಕಣವಿ, ಕನ್ನಡಸಂಘದ ಅದ್ಯಕ್ಷೆ ಮೀರಾಬಾಲಕೃಷ್ಣ,ನಿಹಾರಿಕಾ ಸಾಂಸ್ಕøತಿಕ ಟ್ರಸ್ಟ್‍ನ ಸಂಸ್ಥಾಪಕ ಅದ್ಯಕ್ಷರಾದ ಹನುಮಂತಕುಮಾರ್ ಬೆಳಗಲ್ಲು,ಭುನನೇಶ್ವರಿ ಟ್ರಸ್ಟ್‍ನ ಆಟೋ ಶ್ರೀನಿವಾಸ್,ಬೆಟ್ಟದಮಲ್ಲೇನಹಳ್ಳಿ ರಮೇಶ್,ಶಿವಕುಮಾರ್, ಮುಂತಾದವರು ಹಾಜರಿದ್ದರು

No comments:

Post a Comment