Thursday 14 August 2014

ಭೇರ್ಯ- 2.7 ಕೋಟಿ ರೂ.ವೆಚ್ಚದ ಶಿಕ್ಷಕರು ಮತ್ತು ಸಿಬ್ಬಂದಿಯ ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ

ಭೇರ್ಯ,ಆ,15- ತಾಲ್ಲೂಕಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಇನ್ನೀತರ ವಸತಿ ಶಾಲೆ ಸೇರಿದಂತೆ ವಿದ್ಯಾರ್ಥಿಗಳು ಒಂದೇ ಸೂರಿನಡಿ ಪಿಯು ವ್ಯಾಸಂಗ ಮಾಡಲು ಸರ್ಕಾರಿ ಪದವಿ ಪೂರ್ವ ಕಾಲೇಜು ತೆರೆಯಲು ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು. ಅವರು ಭೇರ್ಯಕ್ಕೆ ಸಮೀಪದ ಅರಕೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಗಣದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್ಟ್)ದ ವತಿಯಿಂದ ಸುಮಾರು 2.7 ಕೋಟಿ ರೂ.ವೆಚ್ಚದ ಶಿಕ್ಷಕರು ಮತ್ತು ಸಿಬ್ಬಂದಿಯ ವಸತಿ ಗೃಹಗಳ ನಿರ್ಮಾಣಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಮೂರು ವಸತಿ ಶಾಲೆ ಮತ್ತು ಆದರ್ಶ ಶಾಲೆ ಇದ್ದು ಒಟ್ಟಾರೆಯಾಗಿ ಒಂದು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಿಯು ಕಾಲೇಜ್ ತೆರಯಲು ಕ್ರಮವಹಿಸುತ್ತೇನೆ ಎಂದ ಶಾಸಕರು ಮೈಸೂರು ಜಿಲ್ಲೆಯಲ್ಲಿ ಶಿಕ್ಷಣದಲ್ಲಿ ನಾವುಗಳು 21ನೇ ಸ್ಥಾನ ಪಡೆದಿದ್ದು ಮುಂದಿನ ದಿನಗಳಲ್ಲಿ ಪ್ರಥಮ ಸ್ಥಾನ ಪಡೆಯಲು ವಿದ್ಯಾರ್ಥಿಗಳು ಮುಂದಾಗುವಂತೆ ಕರೆ ನೀಡಿದ ಶಾಸಕರು ತಾಲ್ಲೂಕಿನ ಮೂರು ಹೋಬಳಿಗಳಲ್ಲಿಯು ವಸತಿ ಶಾಲೆ ಆರಂಬಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರ ಜತೆಗೆ ಆತ್ಮೀಯವಾಗಿ ಅಭಿನಂದಿಸುವುದಾಗಿ ಹೇಳಿದರು.ತಾಲೂಕಿನಲ್ಲಿ ಈಗಾಗಲೇ ಎರಡು ಮೊರಾರ್ಜಿ ದೇಸಾಯಿ ,ಒಂದು ಕಿತ್ತೂರುರಾಣಿ  ಚೆನ್ನಮ್ಮ ವಸತಿ ಹಾಗು ಆದರ್ಶ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು,ಸುಸಜ್ಜಿತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ.ಶಿಕ್ಷಕರು ಇಲ್ಲಿಯೇ ವಾಸ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
    ಶಿಕ್ಷಕರು  ಗುಣಮಟ್ಟದ ಶಿಕ್ಷಣ ನೀಡುವ ಮೂಲಕ  ವಿದ್ಯಾರ್ಥಿಗಳು ತಾಲೂಕಿಗೆ ಕೀರ್ತಿ ತರಲೆಂದು ಹಾರೈಸಿದ ಅವರು,ಉದ್ಯೋಗಕ್ಕೆ ಸೇರಿದ ಬಳಿಕ ತಾವು ಗಳಿಸಿದ ಆದಾಯದಲ್ಲಿ ಸಮಾಜ ಸೇವೆಗೆಂದು ಒಂದಷ್ಟು ಮುಡುಪಾಗಿಡಿ.ಅದೇ ದೇಶಕ್ಕೆ ಸಲ್ಲಿಸುವ ನಿಜವಾದ ಸೇವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
      ತಾ.ಪಂ.ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ,ಉಪಾಧ್ಯಕ್ಷೆ ಲಕ್ಷ್ಮೀಕನಕರಾಜು, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ಟಿ.ಸೋಮಶೇಖರ್, ಗ್ರಾ.ಪಂ.ಅಧ್ಯಕ್ಷೆ ಅನಿತಾಅಮರ್, ತಾ.ಪಂ.ಸದಸ್ಯ ಸಾಧೀಕ್‍ಖಾನ್, ಸಾಮಾಜಿಕ ಅರಣ್ಯ ಇಲಾಖೆಯ ವಲಯಾಧಿಕಾರಿ ಸುಮಿತ್ರಾ, ಪ್ರಾಂಶುಪಾಲ ಪ್ರಸನ್ನಕುಮಾರ್, ಕ್ರೈಸ್ಟ್ ಎಇಇ ಬಸವರಾಜ್, ಎಪಿಎಂಸಿ ನಿರ್ದೇಶಕ ಓಬೇಗೌಡ, ಗ್ರಾ.ಪಂ.ಸದಸ್ಯರಾದ ಬಿ.ಕೆ.ಕುಮಾರ್, ಅನಿಲ, ಭಾಗ್ಯಮ್ಮ, ರಾಮನಾಯಕ, ವೆಂಕಟೇಶ್, ತಾ|| ಜೆಡಿಎಸ್ ಮಹಿಳಾ ಪ್ರಧಾನಕಾರ್ಯದರ್ಶಿ ಪೂರ್ಣಿಮಾ, ಜೆಡಿಎಸ್ ಮುಖಂಡರಾದ ಡೈರಿಲೋಕೇಶ್, ಡಿ.ವಿ.ಗುಡಿ ಯೋಗೇರ್ಶ, ಧನಪಾಲ್, ಡೈರಿರಾಜೇಗೌಡ, ಚಿದಂಬರ,ಚೆಲುವರಾಜ್, ಮೊಂಗೀಯಾ, ಮತ್ತೀತರರು ಹಾಜರಿದ್ದರು.


No comments:

Post a Comment