Monday 11 August 2014

ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ 67ನೇ ಹುಟ್ಟುಹಬ್ಬ

ವಿಶೇಷ ವರದಿ: ಎಂ.ಡಿ.ಉಮೇಶ್ ಮಳವಳ್ಳಿ.(9241783399)
        ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ  67ನೇ ಹುಟ್ಟುಹಬ್ಬ
ಸ್ವಾತಂತ್ರ್ಯ, ಸಮಾನತೆ, ಪ್ರಜಾಪ್ರಭುತ್ವದ ಗನತೆಯನ್ನು ಮೊಳಗಿಸಿದ ಕುವೆಂಪು ನೀಡಿದ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂಬ ಕವಿವಾಣಿಗೆ ಕಿವಿಗೊಟ್ಟ ನೂರಾರು ವಿದ್ಯಾರ್ಥಿಗಳಲ್ಲಿ ಸಿದ್ದರಾಮಯ್ಯನವರು ಸಹ ಒಬ್ಬರಾಗಿದ್ದು ಮೊದಲ ಬಾರಿಗೆ ಮೀಸಲಾತಿಯನ್ನು ತಂದುಕೊಟ್ಟ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಪ್ರಾರಂಭವಾದ ಸಾಮಾಜಿಕ ಕ್ರಾಂತಿ ಇಂದಿಗೂ ಸಹ ಮುಂದುವರೆಯುತ್ತಿದೆ.

ಪೆÇ್ರೀಪೇಸರ್ ನಂಜುಂಡಸ್ವಾಮಿ, ಕೆ. ರಾಮದಾಸ್, ಸುಂದ್ರೇಶ್, ಗೋಪಾಲಗೌಡ, ಕಡಿದಾಳ್ ಶಾಮಣ್ಣ, ಪೂರ್ಣಚಂದ್ರ ತೇಜಸ್ವಿ, ಕೊಣಂದೂರು ಲಿಂಗಪ್ಪ, ವಿಶ್ವನಾಥ್, ಶ್ರೀನಿವಾಸ್ ಪ್ರಸಾದ್ ಹಾಗೂ ಸಿದ್ದರಾಮಯ್ಯ ಇವರೆಲ್ಲಾ ಕವಿಯ ಆಶಯದಂತೆ ಸಮಾಜ ಸುಧಾರಣೆಯ ಕಡೆಗೆ ಮುಖಮಾಡಿದರು ಇವರಲ್ಲಿ ಕೆಲವರು ಕೃಷಿಕರು ಹಾಗೂ ಉಪನ್ಯಾಸಕರಾದರು ಆದರೆ ಸಿದ್ದರಾಮಯ್ಯ ಮಾತ್ರ ಅಪ್ಪಟ್ಟ ರಾಜಕಾರಣಿಯಾಗಿ ಬಿಂಬಿತರಾಗಿದ್ದಾರೆ.

ನೂರು ಕುರಿ ಏಣಿಸಲು ಬಾರದವ ರಾಜಕೀಯ ಮಾಡಲು ಸಾಧ್ಯವೆ ? ಎಂಬ ಮಾತಿಗೆ ಛಲದ ಜೊತೆಗೆ ಸಾಧನೆಯನ್ನು ಮೈಗೂಡಿಸಿಕೊಂಡ ಸಿದ್ದರಾಮಯ್ಯ ರಾಜಕೀಯ ಏಳು ಬೀಳನ್ನು ಸವಾಲಾಗಿ ಸ್ವೀಕರಿಸಿಕೊಂಡು ಸಾಮಾಜಿಕ ನ್ಯಾಯ ನೀಡುವಲ್ಲಿ ನಾಡನ್ನಾಳಿದ ಮುಖ್ಯಮಂತ್ರಿಗಳಲ್ಲಿ "ಎ1" ಮುಖ್ಯಮಂತ್ರಿಯಾಗಿ ಸಾಧನೆಯ ಸರದಾರನೆಂದೆ ರಾಜ್ಯದುದ್ದಗಲಕ್ಕೂ ಮನೆ ಮಾತಾಗಿದೆ.

ಶೋಷಿತ ಧಮನಕ್ಕೊಳಗಾದ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡುವಲ್ಲಿ ದಿವಂಗತ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸ್ಸು ಅವರನ್ನು ಹೊರತು ಪಡಿಸಿದರೆ ಇಂತಹ ಮಹಾನ್ ನಾಯಕ ಹಿಡಿಯುವ ಕ್ಷಣಗಣನೆಯನ್ನು ರಾಜ್ಯದ ಜನತೆ ಕಳೆದ 5 ವರ್ಷಗಳ ಹಿಂದೆಯೆ ನಿರ್ಧರಿಸಿದ್ದು, ಇದರ ಫಲವಾಗಿಯೆ ಒಂದೂವರೆ ವರ್ಷದ ಜನಪ್ರಿಯ ಮುಖ್ಯಮಂತ್ರಿಯಾಗಿ ಸುಧೀರ್ಘ ರಾಜಕೀಯ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿದ್ದ ಭ್ರಷ್ಟಾಚಾರವನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡಲು ಕೈಗೊಂಡ ಕ್ರಮಗಳು ಫಲ ನೀಡಲು ಆರಂಭಿಸಿವೆ.

ಕಡು ಬಡತನದ ಕುಟುಂಬದಲ್ಲಿ ಜನಿಸಿದ ಸಿದ್ದರಾಮಯ್ಯ ತಮ್ಮ ಬಾಲ್ಯದಲ್ಲಿ ಸ್ವಗ್ರಾಮದ ಸಂಗಡಿಗರೊಂದಿಗೆ ಆಡಿದ ಆಠ ಪಾಟಗಳನ್ನು ಹಾಗೂ ಕುರಿ ಹಾಗೂ ಎಮ್ಮೆ ದನಗಳನ್ನು ಮೇಯಿಸಿದ್ದನ್ನು ಇಂದಿಗೂ ಮರೆತಿಲ್ಲ ಬಾಲ್ಯದಲ್ಲಿಯೆ ಅಚಲ ಮನಸ್ಸು ಹಿಡಿದ ಕೆಲಸವನ್ನು ಎಂದಿಗೂ ಕೈಬಿಡದ ಸಿದ್ದರಾಮಯ್ಯ ಹಠದಿಂದಲೆ ಸಾಧಸುವುದುವನ್ನು ಮೈಗೂಡಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲೆಯ ವರುಣಾ ಹೋಬಳಿಯ ಸಿದ್ಧರಾಮನಹುಂಡಿಯಲ್ಲಿ 1948ರ ಆಗಸ್ಟ್ 12 ರಂದು ಸಿದ್ಧರಾಮೇಗೌಡ-ಬೋರಮ್ಮ ದಂಪತಿಗಳಿಗೆ ಎರಡನೇಯ ಮಗನಾಗಿ ಜನಿಸಿದ ಇವರು ಜನಿಸಿ ವಿದ್ಯಾರ್ಥಿ ದೆಸೆಯಲ್ಲಿಯೆ ಸಾಧನೆಯನ್ನು ಮೈಗೂಡಿಸಿಕೊಂಡರಲ್ಲದೆ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲಿಯೆ ಮುಗಿಸಿ ಮುಂದಿನ ವಿಭ್ಯಾಸಕ್ಕಾಗಿ ಅರಮನೆಗಳ ನಗರಿ ಮೈಸೂರನ್ನು ಪ್ರವೇಶಿಸಬೇಕಾದ ಅನಿವಾರ್ಯತೆ ಅವರ ಮುಂದಿತ್ತು ಪಿ.ಯು. ವಿದ್ಯಾಭ್ಯಾಸಕ್ಕೆ ವಿದ್ಯೆಯರಸಿ ಮೈಸೂರಿಗೆ ಬಂದರಾದರು ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚವನ್ನು ಭರಿಸಲು ಆತನ ತಂದೆ ಸಿದ್ದರಾಮೇಗೌಡ ಮನೆಯಲ್ಲೂ ಕೂಡಿಟ್ಟಿದ್ದ ಹಣವನ್ನು ಮಗನ ವಿದ್ಯಾಭ್ಯಾಸಕ್ಕೆ ಹೊಂದಿಸಲಾಗಿದೆ ಅನಿವಾರ್ಯವಾಗಿ ಮನೆಯಲ್ಲಿದ್ದ ಜಾನುವಾರುವೊಂದನ್ನು ಮಾರಿ ವಿದ್ಯಾಭ್ಯಾಸದ ಹೊರೆಯಯನ್ನು ದೂಗಿಸಿದರಲ್ಲದೆ ಪಿಯುಸಿ ನಂತರ ವೈಧ್ಯಕೀಯ ಶಿಕ್ಷಣವನ್ನು ಬಯಸಿದ ಸಿದ್ದರಾಮಯ್ಯನವರಿಗೆ ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲೀಷ್ ಭಾಷೆ ಕಬ್ಬಿಣದ ಕಡಲೆಯಾದ್ದರಿಂದ ವೈಧ್ಯಕೀಯ ಶಿಕ್ಷಣದ ಆಸೆಯನ್ನು ಮೊಟಕುಗೊಳಿಸಿ ಬಿ.ಎಸ್ಸಿ ವಿದ್ಯಾಭ್ಯಾಸಕ್ಕೆ ಮುಂದಾಗಬೇಕಾದ ಅನಿವಾರ್ಯತೆ ಎದುರಾಯಿತು.

ಅದರಂತೆ ಸಿದ್ದರಾಮಯ್ಯ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಪದವಿಯನ್ನು ಮುಗಿಸಿ ನಂತರ ಮಾನಸಗಂಗೋತ್ರಿ ಮೈಸೂರು ವಿಶ್ವ ವಿದ್ಯಾನಿಲಯದಿಂದ ಕಾನೂನು ಪದವಿ ಪಡೆದು ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿಯರ್ ಆಗಿ ನಂತರ 1978ರವರೆಗೆ ಸ್ವಂತ ವಕೀಲಿ ವೃತ್ತಿ ನಡೆಸಿದರು.

ಬಡ ರೈತ ಕುಟುಂಬದ ಹಿನ್ನೆಲೆಯಲ್ಲಿ ಜನಿಸಿದ್ದ ಇವರು, ಸದಾ ಬಡರೈತರ ಹಿತಕ್ಕಾಗಿ ಹಾತೊರೆಯುತ್ತಿದ್ದರು, ತಂದೆಯ ಜೊತೆಗೆ ವೈಧ್ಯಕೀಯ ಶಿಕ್ಷಣ ಮಾಡಲಿಕ್ಕಾಗಲಿಲ್ಲವೆಂಬ ಮನಸ್ತಾಪವಿದ್ದರು ಛಲಬಿಡದೆ ಕಾನೂನು ಪದವೀಧರರಾಗಿ ಸ್ವಲ್ಪ ಸಮಯ ವಕೀಲರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಆದರೆ, ಆಗಲೇ ಅವರಲ್ಲಿ ಮನೆ ಮಾಡಿತ್ತು ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಆನ್ಯಾಯಗಳ ಕುರಿತು ಏನನ್ನಾದರು ಸಾಧಿಸಬೇಕು ಎಂಬ ಮನಸ್ಸು ವಕೀಲ ವೃತ್ತಿಯಲ್ಲೆ ನೆಲೆಯೂರಿ ನಿಲ್ಲಲು ಬಿಡಲಿಲ್ಲ.

ಹಾಗೆಂದು ಅವರು ಮುಂದುವರಿದ ವರ್ಗಗಳು ಹಾಗೂ ಜಾತಿಗಳ ಜೊತೆ ಎಂದಿಗೂ ವಿರೋಧಾಭಾಸ ಮಾಡುವುಂತದ ಕೀಳು ಮನೋಭಾವನೆಯನ್ನು ಹೊಂದಿದ್ದವರಲ್ಲ ಎಲ್ಲರಿಗೂ ಸಮಾನತೆ ದೊರಕಬೇಕೆಂದು ಬಯಸಿದರೆ ವಿನಃ ಮುಂದುವರಿದವರ ಅಟ್ಟಡಗಿಸಬೇಕೆಂದು ಎಂಬ ಕುಬ್ಜ ಮನಸ್ಥಿತಿಯನ್ನು ಹಾಗೂ ಮುಂದುವರಿದ ಜಾತಿಗಳ ಕುರಿತಾಗಿ ಅಸಹ್ಯ ಅಥವಾ ಉಪೇಕ್ಷಿತ ಮನೋಭಾವಯನ್ನೇನು ಹೊಂದಿರದಿಲ್ಲ ಹೀಗಾಗಿ ಸಿದ್ದರಾಮಯ್ಯ ಅವರು ಸಕಲ ಜನ ವರ್ಗಗಳ ನಾಯಕರಾಗಿ ರೂಪಿತಗೊಳ್ಳಲು ಅವರ ರಾಜಕೀಯ ಹಾದಿ ಸುಗಮವಾಗಲು ಸಹಕಾರಿಯಾಯಿತೆಂದರೆ ತಪ್ಪಾಗಲಾರದು.

ತಮ್ಮೆಲ್ಲಾ ಜೀವನವನ್ನು ಒಟ್ಟಾರೆ ಸಮಾಜದ ಪ್ರಗತಿ ಹಾಗೂ ಅಭಿವೃದ್ಧಿಗಾಗಿ ಮೀಸಲಿಟ್ಟ ಸಿದ್ದರಾಮಯ್ಯ ಅವರು ಜನನಾಯಕರಾಗಿ ದಿನೇ ದಿನೇ ಪ್ರವರ್ಧಮಾನಕ್ಕೆ ಬಂದರು, ವಿದ್ಯಾರ್ಥಿ ಜೀವನದಲ್ಲೇ ಭಾರತದಲ್ಲಿ ಸಮಾಜವಾದಿ ತತ್ವದ ಪ್ರಬಲ ಪ್ರತಿಪಾದಕರಾದ ಡಾ. ರಾಮ ಮನೋಹರ ಲೋಹಿಯ ಚಿಂತನೆಯಿಂದ ಪ್ರಭಾವಿತರಾಗಿದ್ದ ಸಿದ್ದರಾಮಯ್ಯನವರು, ಆಗಲೇ ಕಾಲೇಜು ಮಟ್ಟದಲ್ಲಿ ತಮ್ಮ ವಾಕ್ಪಟುತ್ವದಿಂದ ವಿದ್ಯಾರ್ಥಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

ಸಾಮಾಜಿಕ ನ್ಯಾಯದ ಕುರಿತು ಸಿದ್ದರಾಮಯ್ಯ ಅವರ ಪ್ರತಿಪಾದನೆ ಮನಸ್ಸಿನಲ್ಲಿಯೆ ಅಡಕವಾಗಿದ್ದು ವಿದ್ಯಾರ್ಥಿ ದೆಸೆಯಲ್ಲಿಯೆ ಮೊಳಕೆಯಾಗಿ ಚಿಗುರಿದ ಪರಿಣಾಮ ಅಂದಿನ ದಿನಗಳಲ್ಲಿಯೆ ಅವರು ನೀಡುತ್ತಿದ್ದ ಭಾಷಣಕ್ಕೆ ಇಡೀ ಸಭಾಂಗಣವೇ ನಿಶ್ಶಬ್ದವಾಗಿ ಅವರ ಮಾತುಗಳನ್ನು ಆಲಿಸುತ್ತಿತ್ತು, ಇದೇ ಪರಿಸ್ಥಿತಿ, ಮುಂದೆ ಅವರು ಅರ್ಥ ಸಚಿವರಾಗಿ ಮಾತನಾಡುತ್ತಿದ್ದಾಗ ಅಥವಾ ವಿರೋಧಿ ಪಕ್ಷದ ನಾಯಕರಾಗಿ ಆರ್ಥಿಕ ವಿಷಯದ ಬಗ್ಗೆ ತಮ್ಮ ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾಗ ಇಡೀ ಸದನವೇ ಮೌನವಾಗಿ, ಅವರು ಹೇಳುತ್ತಿದ್ದ ಅಥವಾ ನೀಡುತ್ತಿದ್ದ ಸಲಹೆ-ಸೂಚನೆಗಳನ್ನು ಪಕ್ಷಬೇಧ ಮರೆತು ಸಚಿವ-ಶಾಸಕರೆಲ್ಲರೂ ಪಾಂಟ್ ಔಟ್ ಮಾಡುತ್ತಿದ್ದ ಸನ್ನಿವೇಶವೂ ಸಹ ಎಲ್ಲರ ಮುಂದಿದೆ.


•1980 ಪ್ರಪ್ರಥಮವಾಗಿ ರಾಜಕೀಯ ಪ್ರವೇಶ ಮಾಡಿದ ಸಿದ್ದರಾಮಯ್ಯ ಭಾರತ ಲೋಕದಳ ಪಕ್ಷದಿಂದ ಪ್ರಥಮವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರಲ್ಲದೆ ಆರ್ಥಿಕವಾಗಿ ಹಿಂದುಳಿದಿದ್ದ ಇವರಿಗೆ ಪೆÇ್ರಪೇಸರ್ ನಂಜುಡಸ್ವಾಮಿ ಅವರು ಕಾರು ಹಣ ನೀಡಿ ಪ್ರಚಾರ ಸೇರಿದಂತೆ ಇತರೆ ಕಾರ್ಯಗಳಿಗೆ ಸಹಾಯ ಹಸ್ತ ನೀಡಿ ಸಿದ್ದರಾಮಯ್ಯನವರನ್ನು ಪ್ರೇರೇಪಿಸಿದರೂ ಸಹ ಸಿದ್ದರಾಮಯ್ಯ ಪರಾಭಾರಗೊಂಡರು.

• 1983ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು ಪ್ರಥಮ ಬಾರಿಗೆ ವಿಧಾನಸೌಧದ ಮೆಟ್ಟಿಲೇರಿದರು, ಆಗಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗ್ಗಡೆ ಯವರಿಗೆ ರಾಚಯ್ಯ ಹಾಗೂ ನಜೀರ್ ಸಾಹೇಬ್ ಅವರು ಸಿದ್ದರಾಮಯ್ಯ ವ್ಯಕ್ತಿತ್ವದ ಬಗ್ಗೆ ತಿಳಿಸಿದ್ದರ ಫಲವಾಗಿ ಇದೇ ಸಂದರ್ಭದಲ್ಲಿ ಕನ್ನಡವನ್ನು ರಾಜ್ಯ ಸರ್ಕಾರದ ಭಾಷೆಯನ್ನಾಗಿ ಮತ್ತು ಕನ್ನಡವನ್ನು ಈ ನೆಲದಲ್ಲಿ ಉಳಿಸುವ ಬೆಳೆಸುವ ನಿಟ್ಟಿನಲ್ಲಿ ರಚನೆಯಾದ ಕರ್ನಾಟಕ ಕಾವಲು ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರಲ್ಲದೆ ಕನ್ನಡ ಭಾಷೆಯ ಉನ್ನತಿಗೆ ಕಾರಣರಾದರು.

• 1984ರಲ್ಲಿ ಗಡಿಭಾಗಗಳಾದ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದೆಡೆ ಪ್ರವಾಸ ಕೈಗೊಂಡು ವರದಿ ಸಲ್ಲಿಸಿದ ಸಿದ್ಧರಾಮಯ್ಯ, ಕನ್ನಡ ಕಾವಲು ಸಮಿತಿಯನ್ನು ಜನಮನದಲ್ಲಿ ಚಿರಸ್ಥಾಯಿಯಾಗಿಸಿದರು.

•1985ರ ಮಧ್ಯಂತರ ಚುನಾವಣೆಯಲ್ಲಿ 8ನೇ ರಾಜ್ಯ ವಿಧಾನಸಭೆಗೆ ಮತ್ತೆ ಶಾಸಕರಾಗಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಾಗ, ಸಿದ್ಧರಾಮಯ್ಯನವರ ಕನ್ನಡ ಕಾವಲು ಸಮಿತಿಯ ಕೆಲಸದಿಂದ ಉತ್ತೇಜಿತರಾದ ರಾಮಕೃಷ್ಣ ಹೆಗ್ಡೆ, ಇವರನ್ನು ಪಶುಸಂಗೋಪನೆ ಸಚಿವರನ್ನಾಗಿ ನೇಮಿಸಿದರು. ಸಂಪುಟ ಪುನರ್ ರಚನೆಯ ನಂತರ ರೇಷ್ಮೆ ಸಚಿವರಾಗಿ ಕರ್ನಾಟಕ ರಾಜ್ಯದಲ್ಲಿ ಬಡತನದಿಂದ ಬಳಲುತ್ತಿರುವ ರೈತರಿಗೆ ರೇಷ್ಮೆ ಕೃಷಿಯ ಮೂಲಕ ಮತ್ತೆ ಜೀವ ಸೆಲೆ ಉಕ್ಕುವಂತೆ ಮಾಡಿದರು ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.

•1989ರ ಕಾಂಗ್ರೆಸ್ ಅಲೆಯಲ್ಲಿ ಚುನಾವಣೆ ಸೋತ ಸಿದ್ಧರಾಮಯ್ಯ, ಜನತಾ ಪಕ್ಷ ಹೋಳಾದಾಗ ಜನತಾದಳ ಸೇರಿದರು. 1992ರಲ್ಲಿ ದೇವೇಗೌಡರು ಸಮಾಜವಾದಿ ಜನತಾ ಪಕ್ಷದಿಂದ ಜನತಾದಳ ಸೇರಿದಾಗ, ಆ ಜನತಾದಳದ ಕಾರ್ಯದರ್ಶಿಯಾದರು. 1994ರ ಚುನಾವನಣೆಯಲ್ಲಿ ಗೆದ್ದು ಹಣಕಾಸು ಸಚಿವರಾದರು, ಹಣಕಾಸು ಖಾತೆ ಸಚಿವರಾದ ಇವರನ್ನು ಕುರಿಗಳನ್ನು ಏಣಿಸಲು ಬಾರದವ ಅರ್ಥ ಖಾತೆಯನ್ನು ನಿಭಾಯಿಸುವನೇ ? ಎಂದು ಆಡಿಕೊಂಡ ಜನರಿಗೆ ಸತತ 7 ಭಾರಿ ರಾಜ್ಯದ ಬಜೆಟ್ ಮಂಡಿಸಿದರಲ್ಲದೆ ಪ್ರತಿ ಬಾರಿಯ ಅವರ ಬಜೆಟ್ ನಲ್ಲೂ ಖೋತಾ ಬಜೆಟ್ ಅನ್ನುವುದು ಇರಲೇ ಇಲ್ಲ. ರಾಜ್ಯದ ಬೊಕ್ಕಸವನ್ನು ಹೇಗೆ ತುಂಬಿಸಬೇಕು, ಆ ಮೂಲಕ ರಾಜ್ಯವನ್ನು ಯಾವ ರೀತಿಯಲ್ಲಿ ಆರ್ಥಿಕ ಪ್ರಗತಿ ಪಥದಲ್ಲಿ ನಡೆಸಬೇಕು ಎನ್ನುವುದು ಅವರಿಗೆ ಚೆನ್ನಾಗಿ ತಿಳಿದಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

•ನಬಾರ್ಡ್ ಅಧ್ಯಕ್ಷರಾದ ಪಿ. ಕೋಟಯ್ಯನವರ ಮುಂದೆ ಸಮರ್ಥವಾಗಿ ವಾದ ಮಂಡಿಸಿ, ರೈತರ ಸಾಲ ಮನ್ನಾ ಮಾಡುವ ದೇವೇಗೌಡರ ಚುನಾವಣೆಯ ವಾಗ್ದಾನವನ್ನು ನಡೆಸಿಕೊಟ್ಟರು.

•1996ರಲ್ಲಿ ದೇವೇಗೌಡರು ಪ್ರಧಾನಿಯಾದಾಗ ಮೊದಲ ಬಾರಿ ಮುಖ್ಯಮಂತ್ರಿಯಾಗುವ ಉತ್ಸಾಹ ವ್ಯಕ್ತ ಪಡಿಸಿದರು. ಇದು ಕುರುಬ ಸಮಾಜದಲ್ಲಿ ರಾಜಕೀಯ ಪ್ರಜ್ನೆ ಮತ್ತು ಹುಮ್ಮಸ್ಸು ಮೂಡಿಸಿತ್ತೆಂದರೆ ತಪ್ಪಾಗಲಾದರು ಆದರೆ, ತಮಗಿಂತ ಹಿರಿಯರಾದ ಜೆ.ಎಚ್. ಪಾಟೀಲರು ಮುಖ್ಯಮಂತ್ರಿಯಾಗಲು ಮುಂದಾದಾಗ, ತಾವೇ ಪಟೇಲರಿಗೆ ಸಮರ್ಥನೆ ನೀಡಿ, ತಾವು ಉಪ ಮುಖ್ಯಮಂತ್ರಿಯಾದರು.

•ರಾಜಕೀಯ ಬೆಳವಣಿಗೆಯಲ್ಲಿ ರಾಮಕೃಷ್ಣ ಹೆಗ್ಡೆಯವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದಾಗ, ಅದನ್ನು ಸಮರ್ಥಿಸಿದ ಸಿದ್ಧರಾಮಯ್ಯ, ಜನತಾದಳದಲ್ಲೇ ಉಳಿದರು. 5ನೇ ಬಾರಿಗೆ ಬಜೆಟ್ ಮಂಡಿಸಿ, ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತಂದರು. ಆದರೆ, ಅವರ ಆಸೆಯಂತೆ ಖೋತಾ ಇಲ್ಲದ ಬಜೆಟ್ ಮಂಡಿಸಲು ಆಗಲಿಲ್ಲ.

•1999ರ ಚುನಾವಣೆಯ ಹೊತ್ತಿಗೆ ಜನತಾದಳ ಎರಡು ಭಾಗವಾದಾಗ, ದೇವೇಗೌಡರೊಂದಿಗೆ ಜಾತ್ಯತೀತ ಜನತಾದಳ ಸೇರಿ, ಆ ಪಕ್ಷದ ಅಧ್ಯಕ್ಷರಾದರು. 1999ರ ಚುನಾವಣೆಯಲ್ಲಿ ಸೋತರೂ ಸಹಿತ, ಪಕ್ಷದ ಸಂಘಟನೆ ಮಾಡಿ, 2004ರ ಹೊತ್ತಿಗೆ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರು.

•2004ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ, ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ ಎರಡನೇ ಭಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಧರ್ಮಸಿಂಗ್ ಮುಖ್ಯಮಂತ್ರಿಯಾದರು, ಅಹಿಂದ (ಅಲ್ಪ ಸಂಖ್ಯಾತರು, ಹಿಂದುಳಿದವರು ಮತ್ತು ದಲಿತ) ಸಂಘಟನೆಯನ್ನು ಬಲಪಡಿಸಲು ಮುಂದಾದ ಸಿದ್ಧರಾಮಯ್ಯ, ದೇವೇಗೌಡರ ಕೋಪಕ್ಕೆ ತುತ್ತಾಗಿ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು.

•ಜುಲೈ 24, 2005ರಂದು ಹುಬ್ಬಳ್ಳಿಯಲ್ಲಿ ಅಹಿಂದ ಸಮುದಾಯಗಳ ದೊಡ್ಡ ಸಮಾವೇಶ ಏರ್ಪಡಿಸಿದ ಸಿದ್ಧರಾಮಯ್ಯ, ಬಹುತೇಕ ಸಚಿವ ಸಂಪುಟದಿಂದ ಹೊರನಡೆಯಲು ಸಿದ್ಧರಾದರು. ಸಿದ್ಧರಾಮಯ್ಯ, ಎಚ್. ಸಿ. ಮಹಾದೇವಪ್ಪ ಮತ್ತು ಸತೀಶ್ ಜಾರಕಿಹೊಳಿ, ಈ ಮೂವರನ್ನು ಧರ್ಮಸಿಂಗ್ ಸಂಪುಟದಿಂದ ಕಿತ್ತು ಹಾಕಿ, ಎಂ.ಪಿ. ಪ್ರಕಾಶ್ ರನ್ನು ಉಪಮುಖ್ಯಮಂತ್ರಿಯಾಗಿ ಮಾಡಿದರು. ಸಿದ್ಧರಾಮಯ್ಯ ಮತ್ತು ಸಂಗಡಿಗರನ್ನು ಜಾತ್ಯತೀತ ಜನತಾದಳದಿಂದ ವಜಾ ಮಾಡಲಾಯಿತು.

•ಅಧಿಕಾರ ಮತ್ತು ರಾಜಕಾರಣದ ಮತ್ತೊಂದು ಮಜಲು ಕಂಡ ಸಿದ್ಧರಾಮಯ್ಯರನ್ನು ಪ್ರಾದೇಶಿಕ ಪಕ್ಷ ರಚಿಸುವಂತೆ, ಹಲವು ಸಾಹಿತಿಗಳು ಮತ್ತು ಪತ್ರಕರ್ತರು ಸಲಹೆ ನೀಡಿದರು. ಆದರೆ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಎಂದೂ ಸ್ವತಂತ್ರವಾಗಿ ಅಧಿಕಾರ ಹಿಡಿಯಲಾರವು ಎಂದು ಸ್ಪಷ್ಟವಾಗಿ ತಿಳಿದ ಸಿದ್ಧರಾಮಯ್ಯ, ಮೊದಲ ಬಾರಿ ತಮ್ಮ ಕುರುಬ ಜಾತಿಯ ನಾಯಕರೆಂದು ಬಿಂಬಿಸಿಕೊಂಡರಾದರೂ ಅಹಿಂದ ವರ್ಗಗಳಲ್ಲಿನ ಸಂಘಟನೆಗೆ ಮುಂದಾದರು.

•ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ, ಕಾಂಗ್ರೆಸ್ ಪಕ್ಷ ಸೇರಿ, 2006ರ ಡಿಸೆಂಬರ್ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ, ಈ ಚುನಾವಣೆಯನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡರು. ಕುತೂಹಲ ಕೆರಳಿಸಿದ ಉಪಚುನಾವಣೆಯ ವೀಕ್ಷಕರಾಗಿ ಬಂದ ರೇಮಂಡ್ ಪೀಟರ್, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರಿಗೆ ಚುನಾವಣೆಯ ಕ್ಷೇತ್ರದಿಂದ ಹೊರನಡೆಯುವಂತೆ ಆದೇಶ ಹೊರಡಿಸಿದರು. ಸಿದ್ಧರಾಮಯ್ಯ 257 ಮತಗಳ ಅಂತರದಿಂದ ಬಿಜೆಪಿ-ಜಾತ್ಯತೀತ ಜನತಾದಳದ ಜಂಟಿ ಅಭ್ಯರ್ಥಿ ಶಿವಬಸಪ್ಪರನ್ನು ಸೋಲಿಸಿದರು, ಈ ಚುನಾವಣೆಯನ್ನು ಎಂದಿಗೂ ಮರೆಯಲಾಗುವುದಿಲ್ಲ ಯಾವ ನಾಯಕರಿಗೂ ಸಹ ಇಂತಹ ಪರಿಸ್ಥಿತಿ ಬೇಡ ಎಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದು ಉಂಟು.

•ಸದನದಲ್ಲಿ ಸರ್ಕಾರವನ್ನು ಕಟು ನುಡಿಗಳಿಂದ ತರಾಟೆಗೆ ತೆಗೆದುಕೊಳ್ಳುವ ಸಿದ್ಧರಾಮಯ್ಯ, ಉತ್ತಮ ಕೆಲಸಗಳಿಗೆ ಬೆಂಬಲ ಮತ್ತು ಮೆಚ್ಚುಗೆ ಕೂಡ ಸೂಚಿಸುತ್ತಿದ್ದರು. 2008ರಲ್ಲಿ ಗೆದ್ದ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದರು.

•ಅಕ್ರಮ ಅನ್ಯಾಯ ಭ್ರಷ್ಟಾಚಾರ ಹಾಗೂ ಲೂಟಿಕೋರರ ವಿರುದ್ದ ಹೋರಾಟ ಮಾಡಿಕೊಂಡು ಬಂದಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಮತ್ತು ಅಕ್ರಮ ಗಣಿಗಾರಿಕೆಯ ಬಲವನ್ನು ವಿರೋಧಿಸಿ ಬೆಂಗಳೂರಿನಿಂದ ಬಳ್ಳಾರಿಗೆ ಜಾಥಾ ನಡೆಸಿದ ಸಿದ್ಧರಾಮಯ್ಯ, ಮೂಲ ಕಾಂಗ್ರೆಸ್ಸಿಗರಿಗಿಂತಲೂ ಹೆಚ್ಚು ಉತ್ಸಾಹದಿಂದ ಮುಂದಾದರು. 2013ರ ಚುನಾವಣೆಯ ಹೊತ್ತಿಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರು. ಇದೇ ತಮ್ಮ ಕೊನೆಯ ಚುನಾವಣೆ ಎಂಬ ಸಿದ್ಧರಾಮಯ್ಯನವರ ಕಳಕಳಿಯಿಂದ ಕಾಂಗ್ರೆಸ್ ಸರಳ ಬಹುಮತ ಪಡೆಯಿತು.

•ಮೇ 10, 2013ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ, ಮೇ 13, 2014ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಪಡೆದರು. ದೇವರ ಹೆಸರಿನ ಬದಲು ಸತ್ಯ ಹೆಸರಿನಲ್ಲಿ ಅಧಿಕಾರದ ಗದ್ದುಗೆ ಏರಿದ ಸಿದ್ಧರಾಮಯ್ಯ, ಅದೇ ದಿನ ಅನ್ನ ಭಾಗ್ಯ, ಕ್ಷೀರ ಭಾಗ್ಯ, ದಲಿತ ಹಿಂದುಳಿದ ವರ್ಗಗಳ ಹಾಗೂ ಬಡ ರೈತರ ಉದ್ಯೋಗ, ಸಾಲ ಮನ್ನಾ ಮಾಡಿ ಅಪಾರ ಜನಮನ್ನಣೆಗಳಿಸಿದರು.

ಸಿದ್ದರಾಮಯ್ಯನವರು ಕೇವಲ ಒಂದು ಜನಾಂಗ ಅಥವಾ ಜಾತಿಯ ನಾಯಕರಾಗಿಲ್ಲ, ಬದಲಾಗಿ ಸಮಸ್ತ ಮತ್ತು ಸಮಗ್ರ ಕರ್ನಾಟಕದ ಶ್ರೇಯೋಭಿವೃದ್ಧಿಯನ್ನು ಬಯಸಿ, ರಾಜ್ಯವನ್ನು ಸಮಗ್ರ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ನಾಯಕರಾಗಿದ್ದರಿಂದಲೆ ಈಗ ರಾಜ್ಯದ ಪರಮೋಚ್ಚ ಸ್ಥಾನವನ್ನು ಅಂದರೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದು ಹಾಗೆಯೇ, ಅವರನ್ನು ಇಂತಹ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಮತದಾನ ಮಾಡಿ ಗೆಲ್ಲಿಸಿಕೊಟ್ಟ ರಾಜ್ಯದ 6 ಕೋಟಿ ಜನತೆಯ ಆಶೀರ್ವಾದವನ್ನು ಪಡೆದು ಪ್ರಾಮಾಣಿಕ ರಾಜಕಾರಣಿಯಾಗಿ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ.

ಮಂಡ್ಯ ಜಿಲ್ಲೆಗೆ ಸಿದ್ದರಾಮಯ್ಯನವರ ಕೊಡುಗೆ ಅಪಾರವಾಗಿದ್ದು ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ವಿಶೇಷ ನಿಗಾ ವಹಿಸಿದ್ದಾರೆ, ಅದರಲ್ಲೂ ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಶೀರ್ವಾದ ಪಡೆದ ಎಂತಹ ಅಭ್ಯರ್ಥಿಯಾದರು ಚುನಾವಣೆಯಲ್ಲಿ ಗೆಲ್ಲುವುದು ಶತಸಿದ್ದ ವಿಧಾನಸಭಾ ಚುನಾವಣೆಗಳಲ್ಲಿ ಮಳವಳ್ಳಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಮಾಜಿ ಸಚಿವರಾದ ಬಿ.ಸೋಮಶೇಖರ್, ಮಾಜಿ ಶಾಸಕ ಕೆ.ಅನ್ನಧಾನಿ ಮಾಜಿ ಮಂತ್ರಿ ಹಾಗೂ ಹಾಲಿ ಸಚಿವ ನರೇಂದ್ರಸ್ವಾಮಿ ಸಹ ಸಿದ್ದರಾಮಯ್ಯನವರ ಬೆಂಬಲದಿಂದಲೆ ತಮ್ಮ ಗೆಲುವನ್ನು ಸಾಧಿಸಿದ್ದಾರೆ ಹಾಗೂ ಇಂದಿಗೂ ಸಹ ಸಾಧಿಸುತ್ತಿದ್ದಾರೆ.

ಕಳೆದ ಗ್ರಾ.ಪಂ, ತಾ.ಪಂ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿಯೂ ಸಹ ಸಿದ್ದರಾಮಯ್ಯ ಆಶೀರ್ವದಿಸಿದ ಅಭ್ಯರ್ಥಿಗಳು ಈ ಕ್ಷೇತ್ರದಿಂದ ಗೆಲ್ಲುವುದಂತು ಶತಸಿದ್ದ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ವಸಂತಾ ಜಯಸ್ವಾಮಿ, ಶಿವರಾಂ, ಸುಧಾ ಚಂದ್ರಶೇಖರ್, ಭಾಗ್ಯಮ್ಮ ಬಸವರಾಜ್, ಶಿವಮ್ಮ, ಭಾಗ್ಯಮ್ಮ, ಮಹದೇವಸ್ವಾಮಿ ಹಾಗೂ ಹಾಲಿ ಜಿ.ಪಂ ಸದಸ್ಯರಾದ ವಿಶ್ವಾಸ್ ಸೇರಿದಂತೆ ಇನ್ನು ಹಲವಾರು ಸ್ಥಳೀಯ ಸಂಸ್ಥೆಗಳಲ್ಲಿ ಸಿದ್ದರಾಮಯ್ಯ ಆರ್ಶೀವಾದದ ಫಲವಾಗಿಯೆ ಗೆಲವು ಸಾಧಿಸಿದ್ದಾರೆ. 

ಸಿದ್ದರಾಮಯ್ಯ ಕಟ್ಟಾಬೆಂಬಲಿಗರಲ್ಲಿ ಒಬ್ಬರಾದ ದಡದಪುರದ ಶಿವಣ್ಣ ಹಾಗೂ ಡಾಬಾ ಸೋಮಣ್ಣ ಸೇರಿದಂತೆ ಇವರ ಅನುಯಾಯಿಗಳು ಸಹ ಮಳವಳ್ಳಿ ಮೀಸಲು ಕ್ಷೇತ್ರದ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು ಶೋಷಿತ ಹಿಂದುಳಿದ ವರ್ಗಗಳ ಸಂಘಟನೆಗೆ ನಿರ್ಣಾಯ ಪಾತ್ರ ವಹಿಸಿದ್ದು ರಾಜ್ಯದುದ್ದಗಲಕ್ಕೂ ಸಿದ್ದರಾಮಯ್ಯ ಅಭಿಮಾನಿಗಳೆಂದೆ ಬಿಂಬಿತರಾಗಿದ್ದಾರೆ.

ಮಳವಳ್ಳಿ ಮೀಸಲು ಕ್ಷೇತ್ರದ ಹಾಲಿ ಶಾಸಕ ನರೇಂದ್ರಸ್ವಾಮಿ ಸಹ ಸಿದ್ದರಾಮಯ್ಯನವರ ಅಣತಿಯನ್ನು ಚಾಚೂ ತಪ್ಪದೆ ಪಾಲಿಸುತ್ತಿರುವುದರ ಫಲವಾಗಿಯೆ ಕಳೆದ ಚುನಾವಣೆಗಳಲ್ಲಿ ಸೋಲನ್ನು ಅನುಭವಿಸಿದ್ದ ಅವರು ಅಹಿಂದ ನಾಯಕ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಜೀವನದುದ್ದಕ್ಕೂ ಮರೆಯಲಾಗುವುದಿಲ್ಲ ಎಂದು ಹಲವಾರು ಭಾಷಣಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಇಂತಹ ಮಹಾನ್ ನಾಯಕ ಬಾಲ್ಯದಲ್ಲಿ ತುತ್ತು ಅನ್ನಕ್ಕಾಗಿ ಪಟ್ಟ ಕಷ್ಟವನ್ನು ಇಂದಿನ ಜನರು ಪಡಬಾರದೆಂದು ಅನ್ನಭಾಗ್ಯವನ್ನು ಅಧಿಕಾರವಹಿಸಿಕೊಂಡ ಮರುಗಳಿಗೆಯಲ್ಲಿಯೆ ಜಾರಿಗೆ ತಂದಿದ್ದಾರೆ, ಕ್ಷೀರಭಾಗ್ಯವನ್ನು ನೀಡುವ ಮೂಲಕ ಮಕ್ಕಳಲ್ಲಿ ಉಂಟಾಗುವ ಅಪೌಷ್ಠಿಕತೆಯನ್ನು ನಿವಾರಿಸಲು ಮುಂದಾಗಿದ್ದಾರೆ, ಶಿಕ್ಷಣವೇ ಹಕ್ಕು, ಶಿಕ್ಷಣದಿಂದಲೇ ಪ್ರಗತಿ ವಿದ್ಯಾರ್ಜನೆಯೊಂದೆ ಅಭಿವೃದ್ದಿಗೆ ದಾರಿ ಎಂಬುವುದನ್ನು ಅರಿತ ಸಿದ್ದರಾಮಯ್ಯ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ಜಾರಿಗೊಳಿಸುಂತೆ ಆದೇಶಿಸಿ ಜನಪರ ಕಾಳಜಿ ತೋರಿದ್ದಾರೆ. 

ಕಳೆದ ಮಳವಳ್ಳಿ ಪುರಸಭಾ ಅವಧಿಯಲ್ಲಿ ಮಾಜಿ ಅಧ್ಯಕ್ಷರುಗಳಾದ ಗಂಗರಾಜೇಅರಸ್, ಅಯ್ಯೂಬ್ ಪಾಷ, ಕೃಷ್ಣಮ್ಮ, ರಶ್ಮೀ ರಮೇಶ್, ನಾಗರತ್ನಮ್ಮ, ವಿಜಯಮ್ಮ  ಸೇರಿದಂತೆ ಹಾಲಿ ಪುರಸಭಾಧ್ಯಕ್ಷೆ ಸರೋಜಮ್ಮ ಹಾಗೂ ನಿರ್ಗಮಿತ ತಾಲ್ಲೂಕು ಪಂಚಾಯತಿ ಅಧ್ಯಕ್ಷರುಗಳಾದ ಸುಮಿತ್ರಾ, ಬಸವರಾಜ್, ಬಿ.ಸಿ ರಾಧಾ, ಪ್ರಕಾಶ್ ಹಾಗೂ ಹಾಲಿ ಅಧ್ಯಕ್ಷ ಚಿಕ್ಕಲಿಂಗಯ್ಯ ಸಹ ನರೇಂದ್ರಸ್ವಾಮಿ ಬೆಂಬಲಿತ ಸಿದ್ದರಾಮಯ್ಯ ಅಭಿಮಾನಿಗಳೇ ಆಗಿದ್ದಾರೆ.

ಮಳವಳ್ಳಿ ಕ್ಷೇತ್ರಕ್ಕೆ ಅದರಲ್ಲೂ ಅತೀ ಹಿಂದುಳಿದ ಬಿ.ಜಿ.ಪುರ ಹೋಬಳಿಗೆ ರಾಜ್ಯದಲ್ಲಿಯೆ ಪ್ರಥಮ ಭಾರಿಗೆ ಹನಿ ನೀರಾವರಿ ಯೋಜನೆಯನ್ನು ಜಾರಿಗೊಳಿಸಿದ್ದು, ದೇವರಾಜ ಅರಸ್ಸು ಭವನ ಸೇರಿದಂತೆ ರಸ್ತೆ ಹಾಗೂ ವಿವಿಧ ಅಭಿವೃದ್ದಿಗಳಿಗೆ ಸಿದ್ದರಾಮಯ್ಯ 35ಕೋಟಿ ರೂಗಳಿಗೂ ಹೆಚ್ಚಿನ ಹಣವನ್ನು ಬಿಡುಗಡೆಗೊಳಿಸಿದ್ದು ಇದರ ಜೊತೆಗೆ ಮೈಸೂರು-ಮಳವಳ್ಳಿ ರಸ್ತೆ ದ್ವಿಪದ ರಸ್ತೆಯ ಅಭಿವೃದ್ದಿಗೆ ಕಳೆದ ವಾರವಷ್ಟೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.  

No comments:

Post a Comment