Monday 25 August 2014

ಮೈಸೂರು-ಜಂಬೂ ಸವಾರಿ:ವೈವಿಧ್ಯತೆ ಇರಲಿ.

ಜಂಬೂ ಸವಾರಿ:ವೈವಿಧ್ಯತೆ ಇರಲಿ
ಮೈಸೂರು,ಆ.25.ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಯ ಸ್ಥಬ್ದಚಿತ್ರಗಳು ಹಾಗೂ ಸಾಂಸ್ಕøತಿಕ ತಂಡಗಳಲ್ಲಿ ವೈವಿಧ್ಯತೆ ಕಾಯ್ದುಕೊಳ್ಳಬೇಕೆಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಸೂಚನೆ ನೀಡಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ದಸರಾ ವೈಬ್‍ಸೈಟ್‍ಗೆ ಚಾಲನೆ ನೀಡಿದ ನಂತರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ವಿವಿಧ ಜಿಲ್ಲೆ ಪ್ರತಿನಿಧಿಸುವ ಸ್ಥಬ್ದಚಿತ್ರಗಳಿಗೆ ನಿರ್ದಿಷ್ಟ ವಿಷಯ ನೀಡಬೇಕು ಪೂರ್ವಭಾವಿ ಸಭೆಯಲ್ಲಿ ಪರಿಶೀಲಿಸಿ ಅತ್ಯುತ್ತಮ ವಿನ್ಯಾಸ ಆಯ್ಕೆ ಮಾಡಬೇಕು ಎಂದು ಹೇಳಿದರು.
ಸಾಂಸ್ಕøತಿಕ ಕಲಾತಂಡಗಳ ಆಯ್ಕೆಯಲ್ಲಿಯೂ ಎಚ್ಚರ ವಹಿಸಬೇಕು, ಒಂದೇ ಪ್ರಕಾರದ ತಂಡಗಳು ಇರದಂತೆ ನೋಡಿಕೊಳ್ಳಬೇಕು ಹಾಗೂ ಕರ್ನಾಟಕದ ಸಾಂಸ್ಕøತಿಕ ವೈವಿದ್ಯ ಬಿಂಬಿಸುವ ರೀತಿಯಲ್ಲಿ ಜಂಬೂ ಸವಾರಿ ಮೆರವಣಿಗೆ ಇರಬೇಕು ಎಂದು ಸಚಿವರು ತಿಳಿಸಿದರು.
ದೀಪಾಲಂಕಾರಕ್ಕೆ ಸಂಬಂಧಿಸಿ ಕಳೆದ ದಸರೆಯಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ದೀಪಾಲಂಕಾರಕ್ಕೆ ಬಳಸುವ ಬಲ್ಬ್‍ಗಳ ವಿಚಾರದಲ್ಲಿ ತಜ್ಞರ ಅಭಿಪ್ರಾಯ ಪಡೆದು ಮುಂದುವರಿಯುವಂತೆ ಸಚಿವರು ಸೂಚನೆ ನೀಡಿದರು.
ಪ್ರವಾಸಿ ಸರ್ಕೂಟ್ : ಮೈಸೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಪ್ರವಾಸಿ ಕೇಂದ್ರಗಳನ್ನು ಸಂಪರ್ಕಿಸುವ ರೀತಿಯಲ್ಲಿ ಪ್ರವಾಸಿ ಸರ್ಕೂಟ್ ನಿಗಧಿಪಡಿಸಿ ಪ್ರವಾಸಗಳನ್ನು ಏರ್ಪಡಿಸಬೇಕು. ಇದರಿಂದ ದಸರೆ ಸಮಯದಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಆಗುತ್ತದೆ ಎಂದು ಶಾಸಕ ತನ್ವೀರ್ ಸೇಠ್ ಸಲಹೆ ನೀಡಿದರು.
   ದೀಪಾಲಂಕಾರಕ್ಕೆ ಪ್ರಾಯೋಜಕತ್ವ ಪಡೆಯುವುದನ್ನು ಮುಂದುವರಿಸಿ, ಎಲ್.ಇ.ಡಿ. ಬಲ್ಬ್‍ಗಳಲ್ಲಿಯೇ ಚಿನ್ನದ ಬಣ್ಣದ ಮೆರುಗು ನೀಡುವ ಬಲ್ಬ್‍ಗಳ ಬಳಕೆಯ ಸಾಧ್ಯತೆ  ಬಗ್ಗೆ ಪರಿಶೀಲಿಸುವಂತೆ ಶಾಸಕ ವಾಸು ಹೇಳಿದರು.
  ವಿವಿಧ ಸಮಿತಿಗಳು ತಮ್ಮ ವ್ಯಾಪ್ತಿಗೊಳಪಟ್ಟ ಯೋಜನೆಗಳನ್ನು ರೂಪಿಸಿಕೊಂಡು ಕಾಲಬದ್ದರಾಗಿ ಅಧಿಕಾರೇತರ ಸದಸ್ಯರ ಸಹಕಾರದೊಡನೆ ಅನುಷ್ಠಾನಗೊಳಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
    ವಿವಿಧ ಸಮಿತಿಗಳ ಕಾರ್ಯಕ್ರಮಗಳಿಗೆ ಕೇಂದ್ರೀಕೃತ ಟೆಂಡರ್ ಕರೆಯುವ ಬದಲಿಗೆ ಆಯಾ ಸಮಿತಿಗಳಿಂದಲೇ ಅಥವಾ ಕಾರ್ಯಕ್ರಮವಾರು ಟೆಂಡರ್ ಕರೆದರೆ ಸ್ಥಳೀಯರಿಗೆ ಹೆಚ್ಚಿನ ಅವಕಾಶ ದೊರೆಯುತ್ತದೆ ಎಂದು ಶಾಸಕ ಎಂ.ಕೆ.ಸೋಮಶೇಖರ್ ಸಲಹೆ ನೀಡಿದರು.
   ದಸರಾ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಚಾರ ನೀಡಲು ಕ್ರಮ ವಹಿಸುವಂತೆ ಸಹಕಾರ ಸಚಿವ ಮಹದೇವ ಪ್ರಸಾದ್ ತಿಳಿಸಿದರು.  ರೈಲ್ವೆ ಹಾಗೂ ಅಂಚೆ ಇಲಾಖೆಗಳನ್ನು ಈ ನಿಟ್ಟಿನಲ್ಲಿ ಬಳಸಿಕೊಳ್ಳುವಂತೆ ಅವರು ಹೇಳಿದರು.
   ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ದಸರಾ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲು ತಲಾ ಒಂದು ಕೋಟಿ ರೂ.ಗಳ ಪ್ರಸ್ತಾವನೆಯನ್ನು ಆಯಾ ಜಿಲ್ಲಾಧಿಕಾರಿಗಳು ಸಲ್ಲಿಸಿರುವುದಾಗಿ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದರು.
   ಉಪಸಮಿತಿಗಳ ಆಯವ್ಯಯ ಪರಿಶೀಲಿಸಿ ಅನುಮೋದನೆ ನೀಡುವ ಅಧಿಕಾರ ನೀಡುವಂತೆಯೂ ಕಾರ್ಯಕಾರಿ ಸಮಿತಿ ಸಭೆಯನ್ನು ಅವರು ಕೋರಿದರು.
   ಸೆಪ್ಟೆಂಬರ್ 10 ರಂದು 2ನೇ ತಂಡದ ಆನೆಗಳನ್ನು ಮೈಸೂರಿಗೆ ಕರೆತರಲಾಗುವುದು ಎಂದು ಅರಣ್ಯಾಧಿಕಾರಿಗಳು ಸಭೆಗೆ ತಿಳಿಸಿದರು.
    ವೆಬ್‍ಸೈಟ್‍ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪುಪ್ಪಾ ಅಮರನಾಥ್, ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್  ಸೇರಿದಂತೆ ವಿವಿಧ ಜನಪ್ರತಿನಿಧಿಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
   ವೆಬ್‍ಸೈಟ್‍ನಲ್ಲಿ ಏನಿದೆ?
   ಮೈಸೂರು ದಸರಾ 2014ರ ವೆಬ್‍ಸೈಟ್ ವಿಳಾಸ ತಿತಿತಿ.mಥಿsoಡಿeಜಚಿsಚಿಡಿಚಿ.gov.iಟಿ ಆಗಿದ್ದು, ಡಾಟ್ ಅಂಗಲ್ ಎಂಬ ಮೈಸೂರಿನ ಒಂದು ಸಾಫ್ಟ್‍ವೇರ್ ಕಂಪನಿಯು ಎನ್. ಐ. ಸಿ. ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ನಿರ್ಮಿಸಿದೆ.
•    ವೆಬ್‍ಸೈಟ್ ವಿನ್ಯಾಸದಲ್ಲಿ ದಸರಾ ಮತ್ತು ಮೈಸೂರಿನ  ಪರಂಪರೆಯನ್ನು ಬಿಂಬಿಸುವ ಪ್ರಯತ್ನ.
•    ಮೈಸೂರು ದಸರಾ ಭಾಗವಾಗಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಮಾಹಿತಿ ವೆಬ್‍ಸೈಟಿನಲ್ಲಿ ಪಡೆಯಬಹುದಾಗಿದೆ.
•    ವೆಬ್‍ಸೈಟಿನ ಎಲ್ಲಾ ಮಾಹಿತಿಗಳನ್ನು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ನೀಡಲಾಗಿದೆ.
•    ಐಪ್ಯಾಡ್, ಐಪೋನ್, ಇತರೆ ಮೊಬೈಲ್ ಮತ್ತು ಟ್ಯಾಬ್ಲೆಟ್‍ಗಳು ಹಾಗೂ ಡೆಸ್ಕ್‍ಟಾಪ್ ಮತ್ತು ಲ್ಯಾಪ್ ಟಾಪ್ ಸೇರಿದಂತೆ ವಿಭಿನ್ನ ಸಾಧನಗಳಲ್ಲಿ ವೆಬ್‍ಸೈಟ್‍ನ್ನು ಸುಲಭವಾಗಿ ವೀಕ್ಷಿಸುವಂತೆ ರಚಿಸಲಾಗಿದೆ.
•    ವಾಟ್ಸ್ಯಾಪ್‍ನಲ್ಲಿ ದಸರಾ ಮಾಹಿತಿ-ಚಂದಾದರರು ದಸರಾ ಬಗೆಗಿನ ಸುದ್ದಿ ಸಮಾಚಾರಗಳನ್ನು ವಾಟ್ಸ್ಯಾಪ್  ಮೂಲಕ ತಮ್ಮ ಮೊಬೈಲ್‍ಗಳಲ್ಲಿಯೇ ವೀಕ್ಷಿಸಬಹುದು.
•    ಪಬ್ಲಿಕ್ ಐ (ಜನರ ನೋಟ)-ಜನರು ಕ್ಲಿಕ್ಕಿಸಿದ ದಸರಾ ಪೋಟೋಗಳನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು.
•    ಆನ್‍ಲೈನ್ ಅಪ್ಲಿಕೇಶನ್- ವಿವಿಧ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
•    ಚಿತ್ರ ಸಂಪುಟದಲ್ಲಿ ಎಲ್ಲಾ ಕಾರ್ಯಕ್ರಮಗಳ ಚಿತ್ರಗಳು, ಹಿಂದಿನ ದಸರಾ ಆಚರಣೆ ಚಿತ್ರಗಳು ಹಾಗೂ ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ವೀಕ್ಷಿಸಬಹುದು.
•    ರಾಜರ ಕಾಲದ ದಸರಾ ಆಚರಣೆ ವೀಡಿಯೋ ಸೇರಿದಂತೆ ಮೈಸೂರಿನ ಪ್ರವಾಸಿ ತಾಣಗಳ ವೀಡಿಯೋಗಳನ್ನು ವೀಕ್ಷಿಸಬಹುದು.
•    ದಿನಾಂಕಾಧಾರಿತ ಕಾರ್ಯಕ್ರಮಗಳ ಪಟ್ಟಿ ದೊರೆಯುವುದು.
•    ಕಾರ್ಯಕ್ರಮಗಳು ನಡೆಯುವ ಸ್ಥಳಗಳ ಸಂಪೂರ್ಣ ಮಾಹಿತಿ-ಪಾರ್ಕಿಂಗ್ ಸೌಲಭ್ಯ ಮಾಹಿತಿ ಮತ್ತು ಮ್ಯಾಪ್ ನೀಡಲಾಗಿದೆ.
•    50ಕ್ಕೂ ಹೆಚ್ಚು ಮೈಸೂರಿನ ಮತ್ತು ಸಮೀಪದ ಪ್ರವಾಸಿ ತಾಣಗಳ ಮಾಹಿತಿ.
•    ಆಹಾರ ಮತ್ತು ವಸತಿ ಬಗೆಗಿನ ಮಾಹಿತಿ-ಹಲವಾರು ಹೋಟೆಲುಗಳು ಮತ್ತು ಉಪಹಾರ ಗೃಹಗಳ ಪಟ್ಟಿ.
•    ದಸರಾ ವೆಬ್ ಪೋರಂ: ನೀಕ್ಷಕರು ತಮ್ಮ ಪ್ರಶ್ನೆಗಳನ್ನು ವೆಬ್‍ಸೈಟಿನಲ್ಲಿ ಕೇಳಿದರೆ ಅದಕ್ಕೆ ಅತೀ ಶೀಘ್ರದಲ್ಲಿ ಉತ್ತರ ದೊರೆಯುವುದು.
•    mಥಿsooಡಿuಜಚಿsಚಿಡಿಚಿ@gmಚಿiಟ.ಛಿom ಎಂಬ ಇ ಮೇಲ್ ಮೂಲಕ ವೀಕ್ಷಕರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮತ್ತು ಇತರೆ ಮಾಹಿತಿಯನ್ನು ನೀಡಲಾಗುವುದು.
ವiಕ್ಕಳು ಸಮಾಜದ ತಪ್ಪುಗಳನ್ನು ತಿದ್ದುವ ಶಿಕ್ಷಕರಾಗಬೇಕು: ಚಂದ್ರಕಾಂತ್
      ಮೈಸೂರು,ಆ.25.ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಮಾದಕ ವಸ್ತುಗಳ ಸೇವನೆ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯವಿವಾಹ ಪದ್ಧತಿಗಳನ್ನು ಸಂಪೂರ್ಣವಾಗಿ ಹೋಗಲಾಡಿಸಲು ಮಕ್ಕಳು ಹಾಗೂ ಯುವ ಪೀಳಿಗೆ ಇವುಗಳನ್ನು ವಿರೋಧಿಸಿ ತಮ್ಮ ಸುತ್ತಮುತ್ತಲಿನ ಜನರಿಗೂ ಸಹ ಇವುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ನಂಜನಗುಡು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಚಂದ್ರಕಾಂತ್ ಅವರು ತಿಳಿಸಿದರು.
    ಅವರು ಸೋಮವಾರ ನಂಜನಗೂಡು ತಾಲ್ಲೂಕಿನ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ಆವರಣದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮೈಸೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ನಂಜನಗೂಡು ಸರ್ಕಾರಿ ಪದವಿ ಪೂರ್ವ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಾದಕ ವಸ್ತು ದುಷ್ಪರಿಣಾಮಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
     12 ರಿಂದ 18 ವಯಸ್ಸನ್ನು ಹದಿಹರೆಯದ ವಯಸ್ಸು ಎನ್ನುತ್ತಾರೆ. ಈ ವಯಸ್ಸಿನಲ್ಲಿ ಮನಸ್ಸು ಚಂಚಲವಾಗಿರುತ್ತದೆ. ಈ ವಯಸ್ಸಿನಲ್ಲಿ ಮಕ್ಕಳು ಮಾದಕ ವಸ್ತುಗಳ ಸೇವನೆಯಂತಹ ದುಶ್ಚಟಕ್ಕೆ ಒಳಗಾಗದೇ ಮನಸ್ಸನ್ನು ಹತೋಟಿಯಲ್ಲಿಟ್ಟಿಕೊಂಡು ಸಮಾಜದ ಸತ್ಪ್ರಜೆಗಳಾಗಬೇಕು ಎಂದು ತಿಳಿಸಿದರು.
    ನಂಜನಗೂಡು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಗುರುಸ್ವಾಮಿ ಅವರು ಮಾತನಾಡಿ ಮೊದಲು ಕೂತುಹಲಕ್ಕಾಗಿ ಮಾದಕ ವಸ್ತು ಅಥವಾ ಮದ್ಯಪಾನ ಸೇವಿಸುತ್ತಾರೆ ನಂತರ ಅವರು ವ್ಯಸನಿಗಳಾಗಿ ತಮ್ಮ  ದೇಹದ ಮೇಲಿನ  ಹತೋಟಿಯನ್ನು ಕಳೆದುಕೊಳ್ಳುತ್ತಾರೆ. ಮಾದಕ ವಸ್ತುಗಳ ಖರೀದಿಗಾಗಿ ಬೇಕಾಗುವ ಹಣ ದೊರಕದ್ದಿದಾಗ ಕಳ್ಳತನ ಮಾಡುತ್ತಾರೆ. ತಾವು ಮಾಡುವ ಕೆಲಸದ ಬಗ್ಗೆ ಅರಿವೇ ಇಲ್ಲದೆ ಲೈಂಗಿಕ ಕಿರುಕೊಳ, ದೌರ್ಜನ್ಯದಲ್ಲಿ ಭಾಗಿಯಾಗಿ ಸಮಾಜಕ್ಕೆ ಕಳಂಕಿತರಾಗುತ್ತಾರೆ. ಮರಣ ನಂತರವೂ ಸಮಾಜ ಅವರನ್ನು ಗೌರವಿಸುವುದಿಲ್ಲ ಎಂದರು.
     ಮಾದಕ ವಸ್ತು, ಧೂಮಪಾನ ಹಾಗೂ ಮದ್ಯಪಾನ ಸೇವನೆಯಿಂದಾಗಿ ಹೃದಯ, ಶ್ವಾಸಕೋಶ ಸಂಬಂಧಿ ಖಾಯಿಲೆ ಹಾಗೂ  ಕ್ಯಾನ್ಸರ್ ಸಹ ಉಂಟಾಗುತ್ತದೆ. ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯ ಕುಂದಿಸಿ ಅಕಾಲ ಮೃತ್ಯುವಿಗೂ ಕಾರಣವಾಗುತ್ತದೆ. ದೇಶದಲ್ಲಿ ಮರಣ ಹೊಂದುವವರ ಪೈಕಿ ಶೇ. 37 ರಷ್ಟು ಜನ ಮಾದಕ ವಸ್ತುಗಳ ಸೇವನೆಯಿಂದ ಮರಣ ಹೊಂದುತ್ತರೆ ಎಂದರು.
    ನಂಜನಗೂಡು ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಚಿನ್ನಸ್ವಾಮಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ 6-14 ವರ್ಷದೊಳಗಿನ ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಶಾಲೆಯಿಂದ ಹೊರಗುಳಿದ ಮಕ್ಕಳು, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಗಳು ಕಂಡು ಬಂದರೆ ಮಕ್ಕಳು ಶಾಲೆಗೆ ಮಾಹಿತಿ ನೀಡುವಂತೆ ತಿಳಿಸಿದ ಅವರು ನಮ್ಮ ಜೀವನಕ್ಕೆ ಮಾರಕವಾಗಿರುವ ಮಾದಕ ವಸ್ತುಗಳಿಂದ ದೂರವಿದ್ದು, ವಿದ್ಯಾವಂತರಾಗಿ ದೇಶದ ಬೆಳಕಾಗುವಂತೆ ಕರೆ ನೀಡಿದರು.
     ಇದೇ ಸಂದರ್ಭದಲ್ಲಿ ರಂಗಜಂಗಮ ತಂಡದವರು ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಮದ್ಯಪಾನ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಗೀತೆ ಹಾಗೂ ನಾಟಕ ಪ್ರಸ್ತುತ ಪಡಿಸಿ ಮಕ್ಕಳಲ್ಲಿ ಅರಿವು ಮೂಡಿಸಿದರು.
     ಕಾರ್ಯಕ್ರಮವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ  ತೀರ್ಥಲಿಂಗಪ್ಪ ಮಳ್ಳೊಳ್ ಅವರು ನಿರೂಪಿಸಿದರು.

No comments:

Post a Comment