Friday 15 August 2014

ಕೆ.ಆರ್.ಪೇಟೆ-ಸುದ್ದಿ.

ಕೃಷ್ಣರಾಜಪೇಟೆ. ನಮ್ಮ ಹಿರಿಯರು ತ್ಯಾಗ ಬಲಿದಾನದ ಮೂಲಕ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರಕ್ಕೆ ಬಳಸಿಕೊಳ್ಳದೇ ದೇಶವನ್ನು ಸುಭದ್ರವಾಗಿ ಕಟ್ಟುವ ಕಾಯಕದಲ್ಲಿ ಯುವಜನರು ತಮ್ಮನ್ನು ಅರ್ಪಿಸಿಕೊಳ್ಳಬೇಕು. ದೇಶದ ಅಭಿವೃಧ್ಧಿಗೆ ಮಾರಕವಾಗಿರುವ ಭ್ರಷ್ಠಾಚಾರ ಹಾಗೂ ಅನ್ಯಾಯ, ಅಕ್ರಮಗಳ ನಿರ್ಮೂಲನೆಗೆ ಸಂಘಟಿತ ಹೋರಾಟ ನಡೆಸಬೇಕು ಎಂದು ಶಾಸಕ ನಾರಾಯಣಗೌಡ ಕರೆ ನೀಡಿದರು.
ಅವರು ಪಟ್ಟಣದ ಮಾಧ್ಯಮಿಕ ಶಾಲಾ ಮೈದಾನದಲ್ಲಿ ತಾಲೂಕು ಆಡಳಿತವು ಆಯೋಜಿಸಿದ್ದ 68ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಧ್ವಜವಂಧನೆಯನ್ನು ಸ್ವೀಕರಿಸಿ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿದರು.
ಇಂದು ಸಮಾಜವು ಸಂಪೂರ್ಣವಾಗಿ ಕುಷಿತಗೊಂಡಿದೆ. ವಿದ್ಯಾವಂತ ಯುವಜನರಲ್ಲಿ ನಾನು ನನ್ನದು ಎಂಬ ಸ್ವಾರ್ಥವು ಮನೆ ಮಾಡಿದೆಯಲ್ಲದೇ ಸಂಕುಚಿತ ಮನೋಭಾವನೆಯಿಂದಾಗಿ ನೈತಿಕವಾಗಿ ಅಧೋಃಪಥನದತ್ತ ಸಮಾಜವು ಸಾಗುತ್ತಿದೆ. ಪಾಶ್ಚಿಮಾತ್ಯ ಸಂಸ್ಕøತಿಯ ಪ್ರಭಾವಕ್ಕೆ ಒಳಗಾಗುತ್ತಿರುವ ಯುವಜನರು ನಮ್ಮ ಸಂಸ್ಕøತಿ ಮತ್ತು ಪರಂಪರೆಯನ್ನು ಮರೆತು ಹಣದಾಸೆಗಾಗಿ ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಮಾನವ ಶಕ್ತಿಯು ಸದ್ಭಳಕೆಯಾಗುವ ಬದಲಿಗೆ ದುರ್ಬಳಕೆಯಾಗುತ್ತಿದೆ. ಹಾದಿ ತಪ್ಪಿ ನಡೆಯುತ್ತಿರುವ ಯುವ ಸಮೂದಾಯವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಜವಾಬ್ಧಾರಿಯು ಗುರು-ಹಿರಿಯರ ಮೇಲಿದೆ. ಮಾನವರಾದ ನಾಲು ಅಲ್ಪಮಾನವರಾಗದೇ ಸಮಾಜದ ಅಭ್ಯುದಯಕ್ಕಾಗಿ ದುಡಿಯಲು ಸಂಕಲ್ಪ ಮಾಡಿ ವಿಶ್ವಮಾನವ ಪಥದಲ್ಲಿ ಸಾಗುವ ಮೂಲಕ ಜಾತಿರಹಿತ ಸಮಾನತೆಯ ಸಮಾಜವನ್ನು ಕಟ್ಟಲು ಪಣತೊಡಬೇಕು. ಕಣ-ಕಣದಲ್ಲಿಯೂ ದೇಶಭಕ್ತಿಯನ್ನು ಬೆಳೆಸಿಕೊಂಡು ಸುಭದ್ರವಾಗಿ ದೇಶವನ್ನು ಕಟ್ಟುವ ಕಾಯಕದಲ್ಲಿ ಯುವ ಜನರು ತೊಡಗಿಸಿಕೊಂಡು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಂಧಿ ಹಾಡಬೇಕು ಎಂದು ನಾರಾಯಣಗೌಡ ಕರೆ ನೀಡಿದರು.
68ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಧ್ವಜ ಸಂದೇಶ ನೀಡಿದ ತಹಶೀಲ್ದಾರ್ ಹೆಚ್.ಎಲ್.ಶಿವರಾಮ್ ಸಾಮಾಜಿಕ ಪಿಡುಗಾಗಿರುವ ಜಾತಿಪದ್ದತಿ, ಭ್ರಷ್ಠಾಚಾರ ಹಾಗೂ ಸಾಮಾಜಿಕ ಅಸಮಾನತೆಯನ್ನು ಅಳಿಸಿಹಾಕಿ ಸಮಾನತೆಯ ನವ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಹಿಂಜರಿಕೆಯನ್ನು ಮರೆತು ಒಂದಾಗಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲಿ ಹೊಸ-ಹೊಸ ವಿಷಯಗಳನ್ನು ಆವಿಷ್ಕಾರ ಮಾಡುವ ಮೂಲಕ ಭಾರತೀಯ ಯುವಕರು ವಿಶ್ವಮಟ್ಟದಲ್ಲಿ ಶ್ರೇಷ್ಠ ಸಾಧನೆ ಮಾಡಲು ದೀಕ್ಷೆ ತೊಡಬೇಕು. ಅಡಿಯಿಂದ ಮುಡಿಯವರೆಗೆ ವ್ಯಾಪಿಸಿರುವ ಭ್ರಷ್ಠಾಚಾರವೆಂಬ ಪೆಡಂಭೂತವನ್ನು ಹೊಡೆದೊಡಿಸಲು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಇಂದಿನ ಮಕ್ಕಳೇ ನಾಳಿನ ಭವಿಷ್ಯದ ಭಾರತದ ಸತ್ಪ್ರಜೆಗಳಾದ್ದರಿಂದ ಯುವಜನರು ಸೋಮಾರಿಗಳಾಗಿ ವ್ಯರ್ಥವಾಗಿ ಸುಮ್ಮನೆ ಕುಳಿತು ಕಾಲಹರಣ ಮಾಡದೇ ಕಾಯಕ ತತ್ವದ ಮಹತ್ವವನ್ನು ಅರಿತು ಕಷ್ಠಪಟ್ಟು ಬದುಕು ನಡೆಸುವುದನ್ನು ಕಲಿಯಬೇಕು. ನಮ್ಮ ನಡೆ-ನುಡಿಯು ಇತರರಿಗೆ ಮನನೋಯುವಂತಿರದೇ ಮಾದರಿಯಾಗಿರಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ಜಗಧೀಶ್, ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಅನುಸೂಯ ಗಂಗಾಧರ್ ಮಾತನಾಡಿ ಯುವಜನರು ರಾಷ್ಟ್ರಪ್ರೇಮವನ್ನು ಬೆಳೆಸಿಕೊಂಡು ದೇಶವನ್ನು ಪ್ರಗತಿಯ ಪಥದತ್ತಕೊಂಡೊಯ್ಯಲು ಪ್ರಾಮಾಣಿಕವಾಗಿ ದುಡಿಮೆ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಯರಾಮು, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್.ಚಂದ್ರಶೇಖರ್, ಜಿ.ಪಂ ಮಾಜಿ ಸದಸ್ಯರಾದ ಬಿ.ನಾಗೇಂದ್ರಕುಮಾರ್, ಡಾ.ಎಸ್.ಕೃಷ್ಣಮೂರ್ತಿ, ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್, ದಲಿತಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮದಾಸ್, ವೃತ್ತ ನಿರೀಕ್ಷಕ ಕೆ.ರಾಜೇಂದ್ರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೆಂಚಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಜವರೇಗೌಡ, ತಾಲೂಕು ಸಹಾಯ ಕೃಷಿ ನಿರ್ದೇಶಕ ಚನ್ನಯ್ಯ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಲೋಕೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸಾಂಸ್ಕøತಿಕ ನೃತ್ಯ ಪ್ರದರ್ಶನ ನೀಡಿದ ಶಾಲೆಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮುಖ್ಯ ರಸ್ತೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು.
ಕ್ಷೇತ್ರಶಿಕ್ಷಣಾಧಿಕಾರಿ ಜವರೇಗೌಢ ಸ್ವಾಗತಿಸಿದರು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎನ್.ಕೆಂಚಪ್ಪ ವಂದಿಸಿದರು. ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್.ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment