Friday 23 June 2017

ಕೃಷ್ಣರಾಜಪೇಟೆ.ಬಹುತೇಕ ಬಡ ಕುಟುಂಬಗಳು ವಾಸಿಸುತ್ತಿರುವ ಹೇಮಾವತಿ ಬಡಾವಣೆಗೆ ದಶಕಗಳಿಂದ ಪುರಸಭೆ ಮತ್ತು ಸರ್ಕಾರದ ವತಿಯಿಂದ ಯಾವುದೇ ಸೌಲಭ್ಯ ನೀಡದೇ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಬಿಟ್ಟು ತಕ್ಷಣ ಶೌಚಾಲಯ ನಿರ್ಮಾಣಕ್ಕೆ ನೆರವು, ಮನೆಗಳ ಖಾತೆ ಬದಲಾವಣೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕು ಇಲ್ಲವಾದರೆ ಐನೂರಕ್ಕೂ ಹೆಚ್ಚು ಮಹಿಳೆಯರು ಪುರಸಭಾ ಕೆಛೇರಿ ಮುಂಭಾಗ ಅಮರಣಾಂತ ಉಪವಾಸದೊಂದಿಗೆ ಧರಣಿ ನಡೆಸಬೇಕಾಗುತ್ತದೆ ಎಂದು ಹೇಮಾವತಿ ಬಡಾವಣೆಯ ಮಹಿಳೆಯರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
 ಹೇಮಾವತಿ ಬಡಾವಣೆಯಲ್ಲಿ ಮಹಿಳೆಯರು ಪತ್ರಿಕಾ ಪ್ರತಿನಿಧಿಗಳನ್ನು ಬಡಾವಣೆಗೆ ಕರೆಸಿಕೊಂಡು ಅಲ್ಲಿನ ಸಮಸ್ಯಗಳ ಬಗ್ಗೆ ಖುದ್ದು ಪರಿಚಯಿಸಿ ಅಲ್ಲಿನ ನಿವಾಸಿಗಳು ನುಭವಿಸುತ್ತಿರುವ ನೋವನ್ನು ತೋಡಿಕೊಂಡು ನೀವಾದರು ನಮಗೆ ನ್ಯಾಯಾಕೊಡಿಸಿ ಎಂದು ಅಂಗಲಾಚಿ ತಮ್ಮ ಅಸಾಯಕತೆಯನ್ನು ತೋಡಿಕೊಂಡರು.
ಹೇಮಾವತಿ ಬಡಾವಣೆಯಲ್ಲಿ ಕೆಲವು ನಿವೇಶನಗಳನ್ನು ಅಕ್ರಮವಾಗಿ ವಿತರಣೆ ಮಾಡಿರುವ ಬಗ್ಗೆ ಎರಡು ದಶಕಗಳ ಹಿಂದೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಅಕ್ರಮ ನಡೆದಿರುವ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು ಈ ಬಡಾವಣೆಯಲ್ಲಿ ಯಾವುದೇ ಖಾತೆಗಳನ್ನು ಮಾಡಕೂಡದು, ಯಾವುದೇ ಮನೆಗಳನ್ನು ನಿರ್ಮಾಣ ಮಾಡಕೂಡದು ಎಂಬ ನಿಯಮಗಳನ್ನು ವಿಧಿಸಿ ಯಾಥಾ ಸ್ಥಿತಿ ಕಾಪಾಡುವಂತೆ ಆದೇಶಿಸಿತ್ತು. ಆದರೆ ದಶಕಗಳೇ ಕಳೆದರು ಪ್ರಕರಣ ಮುಕ್ತಾಯವಾಗಿಲ್ಲಾ. ಹಣ ಹೊಂದಿರುವವವರು ಲಂಚಾನೀಡಿ ನೂರಾರು ಮನೆಗಳನ್ನು ತಮ್ಮ ಕೆಲಸವನ್ನು ಮಾಡಿಸಿಕೊಳ್ಳುವ ಜೊತೆಗೆ ನೂರಾರು ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
ಬಡವರಾದ ಮನೆಗ ಮನೆ ನಿರ್ಮಾಣ ಮಾಡಲು ಸರ್ಕಾರದ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲಾ. ದೇಶದಲ್ಲಿ ಸ್ವಚ್ಛ ಭಾರತ್ ಎಂಬ ಯೋಜೆಯನ್ನು ಜಾರಿಗೆ ತಮದು ಪ್ರತಿಯೊಬ್ಬರೂ ಶೌಚಾಲಯ ನಿರ್ಮಾ ಮಾಡಿಕೊಳ್ಳಿ ನಾವುಹಣ ನೀಡುತ್ತೇವೆ ಎಂದು ಹೇಳುತ್ತಾರೆ ನಮ್ಮ ಬಡಾವಣೆಯವರು ಅರ್ಜಿಸಲ್ಲಿಸಿ ಹಣ ಬಿಡುಗಡೆ ಮಾಡಿ ಎಮದು ಮನವಿ ಸಲ್ಲಿಸಿದರೆ ನಿಮ್ಮ ಬಡಾವಣೆಯ ಪ್ರಕರಣ ಲೋಕಾಯುಕ್ತದಲ್ಲಿರುವುದರಿಂದ ಹಣ ನೀಡುವುದಿರಲಿ ನಿಮ್ಮ ಸ್ವಂತ ಹಣದಲ್ಲಿಯೂ ಯಾವುಧೇ ಕಾಮಗಾರಿ ಮಾಡಬೇಡಿ ಎಂದು ಬೆದರಿಕೆಯನ್ನು ಪುರಸಭಾ ಅಧಿಕಾರಿಗಳು ಹಾಕುತ್ತಿದ್ದಾರೆ. ಮುಂದಿನ ಒಂದು ವಾರದೊಳಗೆ ನಮ್ಮ ಬಡಾವಣೆಗೂ ಇತರ ಬಡಾವಣೆಗಳವಂತೆ ಮನೆ ನಿರ್ಮಾಣ ಮಾಡಿಕೊಳ್ಳಲು ಧನ ಸಹಾಯ ಮತ್ತು ಪರವಾನಿಗೆ ನೀಡಬೇಕು  ಆರ್ಥಿಕವಾಗಿ ಸಂಕಷ್ಠದಲ್ಲಿರುವ ಕುಟುಂಬಗಳ ನಿವೇಶನಗಳನ್ನು ಪರಬಾರೆ ಮಾಡಲು ಅನುಮತಿ ನೀಡಬೇಕು ಇಲ್ಲವಾದರೆ ನೂರಾರು ಮಹಿಳೆಯರು ಪುರಸಭಾ ಕಛೇರಿ ಮುಂಭಾಗ ಉಪವಾಸಧರಣಿ ನಡೆಸಬೇಕಾಗುತ್ತದೆ ಎಂದು ಮಹಿಳೆಯರು ಎಚ್ಚರಿಕೆ ನೀಡಿದರು.
ಹಿರಿಯ ಮಹಿಳೆಯರಾದ ಸಾವಿತ್ರಮ್ಮ, ಕೆಂಪಮ್ಮ, ಬೀರಮ್ಮ, ನಿಂಗಮ್ಮ, ಪುಟ್ಟಮ್ಮ, ರತ್ನಾ, ಕಮಲಮ್ಮ, ವನಜಾಕ್ಷಿ, ಬೆಡದಹಳ್ಳಿಲತಾ, ಚಂದ್ರಮ್ಮ, ವರಲಕ್ಷ್ಮಿ, ರುಕ್ಷ್ಮಿಣಿ ಸೇರಿದಂತೆ ಬಡಾವಣೆಯ ಮಹಿಳೆಯರು ಹಾಜರಿದ್ದರು.
ಚಿತ್ರಶೀರ್ಷಿಕೆ: 23-ಏಖPಇಖಿಇ-02  ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಗೆ ಮೂಲಕ ಭೂತ ಸೌಲಭ್ಯಗಳನ್ನು ಒದಗಿಸುವಂತೆ ಹಾಗೂ ಬಡಾವಣೆಯ ಸಮಸ್ಯೆಗಳನ್ನು ಮಹಿಳೆಯರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕೃಷ್ಣರಾಜಪೇಟೆ. ಮುಸ್ಲಿಂ ಬಂಧುಗಳು ತಮ್ಮ ಪವಿತ್ರ ಹಬ್ಬವಾದ ರಂಜಾನ್’ಅನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಬೇಕು. ವದಂತಿಗಳಿಗೆ ಕಿವಿಗೊಡದೇ ಪ್ರತ್ಯಕ್ಷವಾಗಿ ಕಂಡರೂ ಪ್ರಾಮಾಣಿಸಿ ನೋಡಬೇಕು. ಸಮಾಜದ ಶಾಂತಿಗೆ ಭಂಗತರುವ ಕಿಡಿಗೇಡಿಗಳ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ತಹಶೀಲ್ದಾರ್ ಕೆ.ರತ್ನಾ ಮನವಿ ಮಾಡಿದರು.
ಅವರು ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ನಡೆದ ಮುಸ್ಲಿಂ ಬಂದುಗಳ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಸಾಲಿನ ರಂಜಾನ್ ಹಬ್ಬದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮುಸ್ಲಿಂ ಬಂದುಗಳ ಎರಡು ಗುಂಪುಗಳ ನಡುವೆ ತೀವ್ರವಾದ ಮಾರಾಮಾರಿಯೇ ನಡೆದು ಘರ್ಷಣೆಯಾಗಿ ಪೋಲಿಸ್ ಠಾಣೆ ಮತ್ತು ನ್ಯಾಯಾಲಯದ ಮೆಟ್ಟಿಲನ್ನು ಹತ್ತಬೇಕಾದ ಸಂದರ್ಭವು ನಿರ್ಮಾಣವಾಗಿತ್ತು. ಆದರೆ ಈ ಭಾರಿ ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಸಮಾಜದ ಶಾಂತಿ ನೆಮ್ಮದಿಗೆ ಭಂಗ ತರುವ ಕಿಡಿಗೇಡಿಗಳ ಬಗ್ಗೆ ತಾಲೂಕು ಆಡಳಿತಕ್ಕೆ ಇಲ್ಲವೇ ಪೋಲಿಸರಿಗೆ ಮಾಹಿತಿಯನ್ನು ನೀಡಿ ಸಮಾಜದಲ್ಲಿ ಶಾಂತಿ ನೆಲೆಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ ತಹಶೀಲ್ದಾರ್ ಕೆ.ರತ್ನಾ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ದಯಮಾಡಿ ಎಲ್ಲರೂ ಕಾನೂನನ್ನು ಪಾಲಿಸಬೇಕು. ಕಾನೂನನ್ನು ಗೌರವಿಸಿ ಜೀವನ ನಡೆಸುವವರನ್ನು ಸಮಾಜವು ಗೌರವಿಸುತ್ತದೆ ಎಂಬ ಸತ್ಯವನ್ನು ಅರಿಯಬೇಕು ಎಂದು ಕಿವಿಮಾತು ಹೇಳಿದ ಅವರು ತಾಲೂಕಿನ ಸಿಂದಘಟ್ಟ, ಅಕ್ಕಿಹೆಬ್ಬಾಳು, ತೆಂಡೇಕೆರೆ, ಆನೆಗೊಳ, ಕಿಕ್ಕೇರಿ, ಮಂದಗೆರೆ, ದೊಡ್ಡಯಾಚೇನಹಳ್ಳಿ, ಚಾಕನಾಯಕನಹಳ್ಳಿ ಮುಂತಾದ ಗ್ರಾಮಗಳಲ್ಲಿಯೂ ಮುಸ್ಲಿಂ ಬಂಧುಗಳು ಹಬ್ಬ ಆಚರಣೆ ಮಾಡುತ್ತಾರೆ. ಎಲ್ಲಿಯೂ ಹಬ್ಬದ ಸಂಭ್ರಮಕ್ಕೆ ಚ್ಯುತಿಬರಬಾರದು, ಯಾರೂ ಗಲಾಟೆ ಗದ್ದಲಕ್ಕೆ ಅನುವು ಮಾಡಿಕೊಡಬಾರದು, ನಾವೆಲ್ಲರೂ ಒಂದು ನಮ್ಮ ಭಕ್ತಿಯು ಅಲ್ಲಾಹನಿಗೆ, ಶಿವ ಪರಮಾತ್ಮನಿಗೆ ಸಲ್ಲಬೇಕು ಎಂಬ ನಿಶ್ಕಲ್ಮಷವಾದ ಮನಸ್ಸಿನಿಂದ ಹಬ್ಬವನ್ನು ಆಚರಿಸಬೇಕು ಎಂದು ರತ್ನಾ ಮನವಿ ಮಾಡಿದರು.
ಸರ್ಕಲ್ ಇನ್ಸ್‍ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಸಬ್ ಇನ್ಸ್‍ಪೆಕ್ಟರ್ ಅರುಣ್‍ಕುಮಾರ್, ಪುರಸಭೆಯ ಮಾಜಿಅಧ್ಯಕ್ಷ ಕೆ.ಗೌಸ್‍ಖಾನ್, ಮುಸ್ಲಿಂ ಸಮಾಜದ ಮುಖಂಡರಾದ ಉಮ್ಮರ್‍ಬೇಗ್, ಶಬೀರ್ ಅಹಮದ್, ನಿಸಾರ್‍ಖಾನ್, ಆಫೀಜುಲ್ಲಾಷರೀಫ್, ದಡದಹಳ್ಳಿ ಅತೀಕ್, ಆಶ್ರಫ್ ಪಾಶ, ತಂಜೀಮಾಕೌಸರ್, ನವೀದ್ ಅಹಮದ್, ಅಕ್ಬರ್‍ಪಾಶ, ಸೈಯ್ಯದ್‍ಅಕ್ಬರ್, ಪಠಾಣ್‍ಬಾಬೂ, ನೂರ್ ಅಹಮದ್, ಸೈಯ್ಯದ್ ಮುನಾವರ್, ಸೈಯ್ಯದ್ ಖಲೀಲ್, ನೂರುಲ್ಲಾ ಷರೀಫ್ ಸೇರಿದಂತೆ ನೂರಾರು ಜನರು ಸಭೆಯಲ್ಲಿ ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಚಿತ್ರಶೀರ್ಷಿಕೆ: 23-ಏಖPಇಖಿಇ-01  ಕೆ.ಆರ್.ಪೇಟೆ ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ನಡೆದ ಮುಸ್ಲಿಂ ಬಂದುಗಳ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಕೆ.ರತ್ನಾ ಮಾತನಾಡಿದರು. ಸರ್ಕಲ್ ಇನ್ಸ್‍ಪೆಕ್ಟರ್ ಹೆಚ್.ಬಿ.ವೆಂಕಟೇಶಯ್ಯ, ಸಬ್ ಇನ್ಸ್‍ಪೆಕ್ಟರ್ ಅರುಣ್‍ಕುಮಾರ್, ಪುರಸಭೆಯ ಮಾಜಿಅಧ್ಯಕ್ಷ ಕೆ.ಗೌಸ್‍ಖಾನ್, ಮುಸ್ಲಿಂ ಸಮಾಜದ ಮುಖಂಡರಾದ ಉಮ್ಮರ್‍ಬೇಗ್, ಶಬೀರ್ ಅಹಮದ್, ನಿಸಾರ್‍ಖಾನ್, ಆಫೀಜುಲ್ಲಾಷರೀಫ್, ದಡದಹಳ್ಳಿ ಅತೀಕ್ ಮತ್ತಿತರರು ಚಿತ್ರದಲ್ಲಿದ್ದಾರೆ.

ಮಂಡ್ಯ : ಅಂಬೇಡ್ಕರ್ ಬ್ರಾಹ್ಮಣರನ್ನು ವಿರೋಧ ಮಾಡಲಿಲ್ಲ. ಬದಲಿಗೆ ಬ್ರಾಹ್ಮಣ್ಯವನ್ನು ವಿರೋಧ ಮಾಡಿದ್ದರು ಎಂದು ಚಿತ್ರನಟ ಕೆ. ಶಿವರಾಂ ಅಭಿಪ್ರಾಯಿಸಿದರು.

ಮಂಡ್ಯ : ಅಂಬೇಡ್ಕರ್ ಬ್ರಾಹ್ಮಣರನ್ನು ವಿರೋಧ ಮಾಡಲಿಲ್ಲ. ಬದಲಿಗೆ ಬ್ರಾಹ್ಮಣ್ಯವನ್ನು ವಿರೋಧ ಮಾಡಿದ್ದರು ಎಂದು ಚಿತ್ರನಟ ಕೆ. ಶಿವರಾಂ ಅಭಿಪ್ರಾಯಿಸಿದರು.
ಬಿಜೆಪಿ ಕಚೇರಿಯಲ್ಲಿ ನಡೆದ ಶ್ಯಾಂಪ್ರಕಾಶ್ ಮುಖರ್ಜಿ ಅವರ ಬಲಿದಾನ ದಿವಸ್ ಆಚರಣಾ ಸಮಾರಂಭದಲ್ಲಿ ಭಾಗವಹಿಸಿ ಮತಾನಾಡಿದ ಅವರು, ಅಂಬೇಡ್ಕರ್‍ರವರು ಬ್ರಾಹ್ಮಣ್ಯವನ್ನು ವಿರೋಧಿಸಿದರು. ದಲಿತರನ್ನು ಕೀಳಾಗಿ ಕಾಣುವ ಮನುಸ್ಮೃತಿಯನ್ನು ಸುಟ್ಟುಹಾಕಿದರು ಎಂದು ತಿಳಿಸಿದರು.
ವಿಶ್ವದ ನಾನಾ ದೇಶಗಳನ್ನು ಸುತ್ತಿ ಅಲ್ಲಿನ ಸಂವಿಧಾನವನ್ನು ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಅತ್ಯುತ್ತಮ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನ ಕರ್ತೃವಾಗಿರುವ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ಸಿಗರೇ ಸೋಲಿಸಿದರು. ಬಳಿಕ ಅವರನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಶ್ಯಾಂಪ್ರಕಾಶ್ ಅವರು ಅಂಬೇಡ್ಕರ್‍ವರನ್ನು ಗೆಲ್ಲಿಸಿ ಕಳುಹಿಸುತ್ತಾರೆ. ಇಬ್ಬರೂ ಒಳ್ಳೆಯ ಸ್ನೇಹಿತರಾಗುತ್ತಾರೆ. ಇಂತಹವರನ್ನು ದಲಿತರು ಎಂದಿಗೂ ಮರೆಯಬಾರದು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ತೊರೆದ ಅಂಬೇಡ್ಕರ್‍ರವರು ಸಂಘ ಪರಿವಾರದ ಧ್ಯೇಯೋದ್ದೇಶಗಳನ್ನು, ಶಿಸ್ತನ್ನು ಮೆಚ್ಚಿಕೊಂಡಿದ್ದರು. ಆರ್.ಎಸ್.ಎಸ್.ನ ಕ್ಯಾಂಪ್‍ಗಳಿಗೂ ಹೋಗಿ ಭಾಗವಹಿಸಿದ್ದರು. ಇದಾವುದನ್ನು ತಿಳಿಯದ ಕೆಲ ವಿಚಾರವಾದಿಗಳು, ಬಹುಜನ ಸಮಾಜವಾದಿ ಬುದ್ದಿವಂತರು ಆರ್.ಎಸ್.ಎಸ್.ನ್ನು ಸುಖಾಸುಮ್ಮನೆ ಟೀಕಿಸುತ್ತಾರೆ ಎಂದು ಅಸಮಾಧಾನ ವ್ಯಂಗ್ಯವಾಡಿದರು.
ಶ್ಯಾಂಪ್ರಕಾಶ್‍ರವರು ಅಂಬೇಡ್ಕರ್‍ರವರನ್ನು ಕರೆದೊಯ್ದು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಇಡೀ ದಲಿತ ಸಮುದಾಯಕ್ಕೆ ಜಯ ತಂದುಕೊಡುವಲ್ಲಿ ಸಹಕಾರಿಯಾದರು. ಇಂತಹ ಮಹನೀಯರನ್ನು ನಾವು ಮರೆಯಬಾರದು ಎಂದು ತಿಳಿಸಿದರು.
ಬಿಜೆಪಿ ದಲಿತ ವಿರೋಧಿಯಲ್ಲ, ನಿಜವಾದ ದಲಿತ ವಿರೋಧಿ ಎಂದರೆ ಅದು ಕಾಂಗ್ರೆಸ್. ಕಾಂಗ್ರೆಸ್‍ನವರು ಅಂಬೇಡ್ಕರ್‍ರವರನ್ನು ಆಯ್ಕೆ ಮಾಡಬಹುದಿತ್ತು. ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾದ ಸಂದರ್ಭದಲ್ಲಿ ಕೇವಲ 44 ಮಂದಿ ಸಂಸದರು ಮಾತ್ರ ಆಯ್ಕೆಯಾಗಿದ್ದರು. ಈ ವೇಳೆ ಮಲ್ಲಿಕಾರ್ಜುನ ಖರ್ಗೆಯವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದರು. ಶೇ. 10ರಷ್ಟು ಹೆಚ್ಚಳವಾಗಿದ್ದರೆ ಖರ್ಗೆಯವರು ವಿರೋಧ ಪಕ್ಷದ ನಾಯಕರಾಗುತ್ತಿರಲಿಲ್ಲ ಎಂದು ತಿಳಿಸಿದರು.
ನಗರ ಬಿಜೆಪಿ ಅಧ್ಯಕ್ಷ ಎಚ್.ಆರ್. ಅರವಿಂದ್, ಪ.ನಾ. ಸುರೇಶ್, ಕೆಂಪಬೋರಯ್ಯ, ನಿತ್ಯಾನಂದ, ಎನ್.ಆರ್.ಆತ್ಮಾನಂದ, ಮಹಂತೇಶಪ್ಪ ಇತರರಿದ್ದರು.

ಜೂ.25 ರಂದು ಉಪನ್ಯಾಸ ಹಾಗೂ ಕವಿಗೋಷ್ಠಿ

ಜೂ.25 ರಂದು ಉಪನ್ಯಾಸ ಹಾಗೂ ಕವಿಗೋಷ್ಠಿ
ಮಳವಳ್ಳಿ : ತಾಲೂಕು ಕÀಸ್ತೂರಿ ಸಿರಿಗನ್ನಡ ವೇದಿಕೆ ಹಾಗೂ ತಾಲೂಕು ಕರ್ನಾಟಕ ಪ್ರಾಂತ ರೈತ ಸಂಘದ ಸಂಯುಕ್ತ ಆಶ್ರಯದಲ್ಲಿ ಜೂ.25 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ,ಮೀಸಲಾತಿ ಮತ್ತು ಸಂವಿಧಾನದ ಆಶಯಗಳ ಕುರಿತು ಉಪನ್ಯಾಸ ಹಾಗೂ ಕವಿಗೋಷ್ಠಿಯು ನಡೆಯಲಿದೆ ಎಂದು ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್ ರಾಜ್ ತಿಳಿಸಿದ್ದಾರೆ.
 ಪ್ರಸಿದ್ಧ ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜೇ ಅರಸ್ ಸಮಾರಂಭ ಉದ್ಘಾಟಿಸಲಿದ್ದು,ಕಸ್ತೂರಿ ಸಿರಿಗನ್ನಡ ವೇದಿಕೆಯ ಅಧ್ಯಕ್ಷೆ ಪಿ.ನಾಗರತ್ನಮ್ಮ ಅಧ್ಯಕ್ಷತೆ ವಹಿಸುವರು.ಮೀಸಲಾತಿ ಮತ್ತು ಸಂವಿಧಾನದ ಆಶಯಗಳ ಕುರಿತು ಸಾಹಿತಿ ಡಾ.ರಾಜು ಗುಂಡಾಪುರ ಉಪನ್ಯಾಸ ನೀಡುವರು.ತಾಲೂಕು ಪಂಚಾಯಿತಿ ಅಧ್ಯಕ್ಷ ಆರ್.ಎನ್.ವಿಶ್ವಾಸ್,ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ವಿ.ಕೃಷ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
    ಬಳಿಕ ನಡೆಯಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ವಹಿಸಲಿದ್ದು,ಚುಸಾಪ ಅಧ್ಯಕ್ಷ ಬಸಪ್ಪ ನೆಲಮಾಕನಹಳ್ಳಿ,ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ದೇವಿ,ಕಾರ್ಯದರ್ಶಿ ಲಿಂಗರಾಜ ಮೂರ್ತಿ,ಸಂಘಟಕ ಪೊತೇರ ಮಹದೇವು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
   ಕವಿ-ಕವಿಯತ್ರಿಯರಾದ ಎಂ.ಬಿ.ರಾಮೇಗೌಡ,ನಾಗವೇಣಿ ರುದ್ರಸ್ವಾಮಿ,ಉಷಾ ನಂಜನಗೂಡು,ದಾಕ್ಷಾಯಿಣಿ,ಅನಾರ್ಕಲಿ ಸಲೀಂ,ಪುನೀತ್ ಭಾಸ್ಕರ್,ಚಿಕ್ಕರಾಜು,ಕೊ.ನಾ.ಪು.,ಸಾಲಮರದ ಸಿ.ನಾಗರಾಜು,ಶಿವಮಲ್ಲು,ಹೆಚ್.ಎನ್.ರಾಘವೇಂದ್ರ,ಕೆ.ಸಿ.ಚಲುವರಾಜು,ಪ್ರತಾಪ್ ಕಲಾವಿದ,ವಿ.ರಮೇಶ್,ಕೃಷ್ಣಸ್ವಾಮಿ,ವಸಂತ್,ಷಣ್ಮುಖಸ್ವಾಮಿ,ಸಿದ್ದರಾಜು ಕಂದೇಗಾಲ,ಕಂಠಿರಾಜ್,ಮಹೇಶ್ ತಮ್ಮ ಸ್ವರಚಿತ ಕವನ ವಾಚನ ಮಾಡುವರು.