Friday 30 September 2016

ಅಕ್ಟೋಬರ್ 2 ರಂದು ಪ್ರಾರ್ಥನಾ ಸಭೆ
    ಮೈಸೂರು.ಸೆ.30.ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಪ್ರಾರ್ಥನಾ ಸಭೆ ಅಕ್ಟೋಬರ್ 2 ರಂದು ಬೆಳಿಗ್ಗೆ 8-30ಕ್ಕೆ ಶ್ರೀ ರಂಗಚಾರ್ಲು ಸ್ಮಾರಕ ಪುರಭವನದಲ್ಲಿ ಏರ್ಪಡಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ. ಜಗದೀಶ ಅವರು ತಿಳಿಸಿದ್ದಾರೆ.
  

ಅಕ್ಟೋಬರ್ 2 ರಂದು ರಂಗೋಲಿ ಸ್ಪರ್ಧೆ
  ಮೈಸೂರು.ಸೆ.30. ಮೈಸೂರು ದಸರಾ ಮಹೋತ್ಸವ ಲಲಿತ ಕಲೆ ಮತ್ತು ಕರಕುಶಲ ಉಪಸಮಿತಿಯಿಂದ ಅಕ್ಟೋಬರ್ 2 ರಂದು ಬೆಳಿಗ್ಗೆ 10 ಗಂಟೆಗೆ ಸರಸ್ವತಿಪುರಂನ ಜೆ.ಎಸ್.ಎಸ್. ಸಂಸ್ಥೆಗಳ ಸಭಾಂಗಣದ ಆವರಣದಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
   ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದ್ದು, ಸ್ಪರ್ಧೆಗೆ ಬೇಕಾಗುವ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರಬೇಕು. ಅದಕ್ಕೆ ತಗಲುವ ಕನಿಷ್ಠ ವೆಚ್ಚವನ್ನು ಉಪಸಮಿತಿಯಿಂದ ನೀಡಲಾಗುವುದು. ಉತ್ತಮವಾಗಿ ರಚಿಸಿದ ರಂಗೋಲಿ ಸ್ಪರ್ಧಿಗಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು.
  ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2513225 ನ್ನು ಸಂಪರ್ಕಿಸಬಹುದು. 

ಅಕ್ಟೋಬರ್ 2 ರಂದು ಆಕಾಶವಾಣಿಯಲ್ಲಿ ಕ್ಷೀರಾಧಾರೆ
   ಮೈಸೂರು, ಸೆ. 30 . ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆಕಾಶವಾಣಿ ರೂಪಿಸಿರುವ ವಿನೂತನ ಕಾರ್ಯಕ್ರಮ ಭಾಗ್ಯವಾಣಿ-ಅಭಿವೃದ್ಧಿ ಯೋಜನೆಗಳೊಂದಿಗೆ ಅರ್ಥಪೂರ್ಣ ಪಯಣದ  5ನೇ ಸರಣಿಯಲ್ಲಿ ಅಕ್ಟೋಬರ್ 2 ರಂದು ಕ್ಷೀರಾಧಾರೆ-ಹೈನುಗಾರಿಕೆಗೆ ಉತ್ತೇಜನ  ರಾತ್ರಿ 7 ರಿಂದ 7-30ರವರೆಗೆ ರಾಜ್ಯದ 13 ಆಕಾಶವಾಣಿ ಕೇಂದ್ರಗಳ ಮೂಲಕ ರಾಜ್ಯಾದ್ಯಂತ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವ್‍ಮೂರ್ತಿ  ಅವರು ನಿರ್ಮಿಸಿದ್ದಾರೆ.
      ಸರ್ಕಾರ ರೂಪಿಸಿರುವ ಯೋಜನೆಯನ್ನು  ಪರಿಣಾಮಕಾರಿಯಾಗಿ ತಿಳಿಸುವುದೇ ಭಾಗ್ಯವಾಣಿ ಸರಣಿಯ ಮುಖ್ಯ ಆಶಯವಾಗಿದೆ. ಈ ಕಾರ್ಯಕ್ರಮ ನವೆಂಬರ್ 27 ರವರೆಗೆ ಪ್ರತಿ ಭಾನುವಾರ ರಾತ್ರಿ 7 ರಿಂದ 7-30 ರವರೆಗೆ ಅರ್ಧ ಗಂಟೆ ಪ್ರಸಾರವಾಗಲಿದೆ.  ಆಕಾಶವಾಣಿ ಮೂಲಕ ಪ್ರಸಾರವಾಗುವ ವಿವಿಧ ಯೋಜನೆಯ ಮಾಹಿತಿಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್ ವಿಶುಕುಮಾರ್ ಅವರು ಕೋರಿದ್ದಾರೆ

ಅಕ್ಟೋಬರ್ 1 ರಂದು ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ

ಅಕ್ಟೋಬರ್ 1 ರಂದು ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ
ಮೈಸೂರು ಅ30-ಮೈಸೂರು ದಸರಾ ಮಹೋತ್ಸವ -2016 ರ ದಸರಾ ಚಲನಚಿತ್ರೋತ್ಸವ ಅಕ್ಟೋಬರ್ 1 ಮಧ್ಯಾಹ್ನ 1 ಗಂಟೆಗೆ ಕಲಾಮಂದಿರದಲ್ಲಿ ನಡೆಯಲಿದೆ.
  ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ವಾಸು ಅವರು ಅಧ್ಯಕ್ಷತೆ ವಹಿಸುವರು.
  ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಸಹಕಾರ ಹಾಗೂ ಸಕ್ಕರೆ ಸಚಿವರಾದ ಹೆಚ್.ಎಸ್. ಮಹದೇವಪ್ರಸಾದ್, ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಹೀಮಾ ಸುಲ್ತಾನ ನಜೀರ್ ಅಹಮದ್, ಬೆಂಗಳೂರಿನ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾ.ರಾ. ಗೋವಿಂದ್, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನಸಭಾ ಸದಸ್ಯರುಗಳಾದ ವಿ. ಶ್ರೀನಿವಾಸ್ ಪ್ರಸಾದ್, ಜಿ.ಟಿ. ದೇವೇಗೌಡ, ಕೆ. ವೆಂಕಟೇಶ್, ಎಂ.ಕೆ. ಸೋಮಶೇಖರ್, ಸಾ.ರಾ. ಮಹೇಶ್, ಹೆಚ್.ಪಿ. ಮಂಜುನಾಥ್, ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರರಾದ ವನಿತಾ ಪ್ರಸನ್ನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಬಿ. ನಟರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಉಪಾಧ್ಯಕ್ಷ ಎನ್.ಬಿ. ಮಂಜು ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ  ಭಾಗವಹಿಸುವರು.
 ಹಿರಿಯ ಚಲನಚಿತ್ರ ಕಲಾವಿದರಾದ ಶ್ರೀಮತಿ ಭಾರತಿ ವಿಷ್ಣುವರ್ಧನ್, ಹಿರಿಯ ಚಲನಚಿತ್ರ ನಿರ್ದೇಶಕರಾದ ಎಸ್.ಕೆ. ಭಗವಾನ್, ಹಿರಿಯ ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ಚಲನಚಿತ್ರ ಕಲಾವಿದರಾದ ಶ್ರೀಮತಿ ಸುಧಾರಾಣಿ, ಚಲನಚಿತ್ರ ನಿರ್ದೇಶಕ ಪವನ್ ಕುಮಾರ್, ಚಲನಚಿತ್ರ ಕಲಾವಿದರಾದ ವಿಜಯ್ ಸೂರ್ಯ, ಚಲನಚಿತ್ರ ಕಲಾವಿದರಾದ ಕು|| ಮಯೂರಿ, ಕು|| ಕಾವ್ಯ ಶೆಟ್ಟಿ ಹಾಗೂ ಚಿತ್ರೋದ್ಯಮದ ಗಣ್ಯರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
 ರಘುಲೀಲಾ ಸಂಗೀತ ಮಂದಿರದ ಕಲಾವಿದರಿಂದ ಮಧ್ಯಾಹ್ನ 12 ಗಂಟೆಗೆ ಕನ್ನಡದ ಹಳೆಯ ಹಾಗೂ ಹೊಸ ಚಲನಚಿತ್ರಗಳು ಸುಮಧುರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.
    
ಅಕ್ಟೋಬರ್ 1 ರಂದು ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳು
    ಮೈಸೂರು.ಸೆ.30. ದಸರಾ ಮಹೋತ್ಸವ 2016 ರ ಅಂಗವಾಗಿ ವಿವಿಧ ವೇದಿಕೆಗಳಲ್ಲಿ ಅಕ್ಟೋಬರ್ 1 ರಂದು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅವುಗಳ ವಿವರ ಇಂತಿದೆ.

ಅರಮನೆ ವೇದಿಕೆ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಅಕ್ಟೋಬರ್ 1 ರಂದು ಸಂಜೆ 6 ಗಂಟೆಗೆ ಅರಮನೆ ಆವರಣದ ಸಾಂಸ್ಕøತಿಕ ವೇದಿಕೆಯಲ್ಲಿ ರಾಜ್ಯ ಸಂಗೀತ ವಿದ್ವಾನ್ -2016 ಗೌರವ ಪುರಸ್ಕಾರ ಸಮಾರಂಭ ನಡೆಯಲಿದೆ.
    ಹಿಂದೂಸ್ತಾನಿ ಸಂಗೀತ ಕಲಾವಿದ ಪಂ. ಸೋಮನಾಥ ಮರಡೂರ ಅವರಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಹಾಗೂ ಇತರೆ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರದಾನ ಮಾಡಲಿದ್ದಾರೆ.
ಸಂಜೆ 6 ರಿಂದ 6-30 ಗಂಟೆಯವರೆಗೆ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಂಜೆ 6-30 ರಿಂದ 7-45 ಗಂಟೆಯವರೆಗೆ  ಬೆಂಗಳೂರಿನ ಶ್ರೀಮತಿ ರೂಪಾರಾಜೇಶ್ ಮತ್ತು ತಂಡದವರಿ ನೃತ್ಯರೂಪಕ ಹಾಗೂ  ಸಂಜೆ 7-45 ರಿಂದ 9 ಗಂಟೆಯವರೆಗೆ ಬೆಂಗಳೂರಿನ ಶ್ರೀಮತಿ ಚೈತ್ರಾ ಮತ್ತು ತಂಡದಿಂದ ಅವರಿಂದ ಸಂಗೀತ ವೈವಿಧ್ಯ.
ಜಗನ್ಮೋಹನ ಅರಮನೆ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಮೈಸೂರಿನ ಶ್ರೀನಿವಾಸ ವಿ.ಎಸ್. ಮತ್ತು ತಂಡದವರಿಂದ ಸ್ಯಾಕ್ಸೋಫೋನ್, ಸಂಜೆ 6 ರಿಂದ 7 ಗಂಟೆಯವರೆಗೆ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ವತಿಯಿಂದ ಭರತನಾಟ್ಯಂ, ಸಂಜೆ 7 ರಿಂದ 8 ಗಂಟೆಯವರೆಗೆ ಮೈಸೂರಿನ ಡಾ|| ಸಿ.ಎ. ಶ್ರೀಧರ ಮತ್ತು ತಂಡದವರಿಂದ ಕೊಳಲು ವಾಹನ ಹಾಗೂ ಸಂಜೆ 8 ರಿಂದ 9 ಗಂಟೆಯವರೆಗೆ ಬೆಂಗಳೂರಿನ ಡಾ|| ಸಂಪದಾಭಟ್ ಮರಬಳ್ಳಿ ಅವರಿಂದ ಹಿಂದೂಸ್ತಾನಿ ಸಂಗೀತ.
      ಕಲಾಮಂದಿರ ವೇದಿಕೆ: ಸಂಜೆ  5-30 ರಿಂದ 6 ಗಂಟೆಯವರೆಗೆ ಮಂಡ್ಯ ಜಿಲ್ಲೆ ಮೇಲುಕೋಟೆ ಎಂ.ಎಸ್. ಆನಂದ ಅವರಿಂದ ನಾದಸ್ವರ, ಸಂಜೆ 6 ರಿಂದ 7 ಗಂಟೆಯವರೆಗೆ ಮಹಾರಾಷ್ಟ್ರ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ವತಿಯಿಂದ ಲಾವಣಿ,  ಸಂಜೆ 7 ರಿಂದ 8 ಗಂಟೆಯವರೆಗೆ ಮೈಸೂರಿನ ಶ್ರೀಮತಿ ಕವಿತಾ ಕಾಮತ್ ಅವರಿಂದ ಸುಗಮ ಸಂಗೀತ ಹಾಗೂ ಸಂಜೆ 8 ರಿಂದ 9 ಗಂಟೆಯವರೆಗೆ ಬೆಂಗಳೂರಿನ ವಿಜಯಕುಮಾರ್ ಮೈಕೋ ಮತ್ತು ತಂಡದವರಿಂದ ಭರತನಾಟ್ಯ.
ಗಾನಭಾರತಿ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಬೀದರ ಬದರಿನಾಥ ಮುಡಬಿ ಮತ್ತು ತಂಡದವರಿಂದ ಪಿಟೀಲು ವಾದನ, ಸಂಜೆ 6 ರಿಂದ 7 ಗಂಟೆಯವರೆಗೆ ತೆಲಂಗಾಣ ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ವತಿಯಿಂದ ಬಧುಕಂ ನೃತ್ಯ ಹಾಗೂ ಸಂಜೆ 7 ರಿಂದ 8 ಗಂಟೆಯವರೆ ಬೆಂಗಳೂರಿನ ಚಿಗುರು ತಂಡದರಿಂದ ಸಮೂಹ ನೃತ್ಯ. ಸಂಜೆ 8 ರಿಂದ 9 ಗಂಟೆಯವರೆ ಮೈಸೂರಿನ ಎ.ವಿ. ದತ್ತಾತ್ರೇಯ ಮತ್ತು ತಂಡದವರಿಂದ ಕೊಳಲು ವಾದನ.
     ಚಿಕ್ಕ ಗಡಿಯಾರ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ನಂಜನಗೂಡು ಕಳಲೆ ನಾರಾಯಣ ಮತ್ತು ತಂಡದವರಿಂದ ಮರಗಾಲು ಕಂಸಾಳೆ, ಸಂಜೆ 6 ರಿಂದ 7 ಗಂಟೆಯವರೆಗೆ  ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ ವತಿಯಿಂದ ರಣಪ್ಪಾ ನೃತ್ಯ ಹಾಗೂ ಸಂಜೆ 7 ರಿಂದ 8 ಗಂಟೆಯವರೆಗೆ ಹುಣಸೂರು ಬಿ.ಕೆ. ಚಿಕ್ಕಣ್ಣ ಮತ್ತು ತಂಡದವರಿಂದ ಸುಗ್ಗಿ ಕುಣಿತ.
ಪುರಭವನ ವೇದಿಕೆ: ಸಂಜೆ 7 ರಿಂದ 9 ಗಂಟೆಯವರೆಗೆ ನಂಜನಗೂಡು ಹೆಮ್ಮರಗಾಲ ವಿಶ್ವಮೂರ್ತಿ ಅವರಿಂದ ದಕ್ಷಯಜ್ಞ ಪೌರಾಣಿಕ ನಾಟಕ ನಡೆಯಲಿದೆ.
ಮಹಿಳಾ ದಸರಾ:- ಅಕ್ಟೋಬರ್ 1 ರಂದು ಬೆಳಿಗ್ಗೆ 7 ರಿಂದ 9-30 ಗಂಟೆಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮಹಿಳೆಯರಿಂದ ರಂಗೋಲಿ ಸ್ಪರ್ಧೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 11-30 ರಿಂದ 2 ಗಂಟೆಯವರೆಗೆ ಜೆ.ಕೆ.ಗ್ರೌಂಡ್‍ನಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಸ್ತ್ರೀಶಕ್ತಿ/ಸ್ವಸಹಾಯ ಸಂಘಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸುವ ವಿವಿಧ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ  2-30  ರಿಂದ 4 ಗಂಟೆಯವರೆಗೆ ಮಹಿಳಾ ದಸರಾ-2016 ಹಾಗೂ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.  ಸಂಜೆ 4-30 ರಿಂದ 5-30 ಗಂಟೆಯವರೆಗೆ ಹಿರಿಯ ನಾಗರೀಕರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು “ಕಾಳಜಿ ಹಿರಿಯರಲಿ: ಸಹಬಾಳ್ವೆ ಕಿರಿಯರಲಿ” ಹಿರಿಯ ನಾಗರೀಕರು ಹಾಗೂ ಕಿರಿಯರ ಸಮಾಗಮ ಕಾರ್ಯಕ್ರಮಗಳು ನಡೆಯಲಿವೆ.
    ಪ್ರವಾಸ ಕಾರ್ಯಕ್ರಮ   
       ಮೈಸೂರು.ಸೆ.30. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 1 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
      ಮೈಸೂರು ವಿಮಾನ ನಿಲ್ಲಾಣಕ್ಕೆ ಬೆಳಿಗ್ಗೆ 10-05 ಗಂಟೆಗೆ ಮೈಸೂರಿಗೆ ಆಗಮಿಸುವರು. ಬೆಳಿಗ್ಗೆ  11-30 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಪೂಜೆ ಹಾಗೂ ದರ್ಶನ ಮಾಡುವರು ನಂತರ  11-40ಕ್ಕೆ ದಸರಾ ಮಹೋತ್ಸವ 2016 ಉದ್ಘಾಟಿಸುವರು. ಮಧ್ಯಾಹ್ನ 12-40 ಗಂಟೆಗೆ  ಚಾಮುಂಡಿಬೆಟ್ಟದಲ್ಲಿ ದಸರಾ ಕ್ರೀಡಾ ಜ್ಯೋತಿ ಉದ್ಘಾಟಿಸುವರು.
     ಮಧ್ಯಾಹ್ನ 1-15 ಗಂಟೆಗೆ ಜೆ.ಕೆ. ಮೈದಾನದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸುವರು. ಸಂಜೆ 4 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ದಸರಾ ಕ್ರೀಡಾಕೂಟ ಉದ್ಘಾಟಿಸುವರು. ಸಂಜೆ 4-30 ಗಂಟೆಗೆ ವಸ್ತು ಪ್ರದರ್ಶನ ಆವರಣದಲ್ಲಿ ದಸರಾ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆಗೆ ಅರಮನೆ ಆವರಣದಲ್ಲಿ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ನಂತರ ರಾತ್ರಿ 8 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.
ಕ್ರೀಡಾ ರಾಜ್ಯ ಸಚಿವ ಪ್ರಮೋದ್ ಮಧ್ವರಾಜ್ಅವರ ಪ್ರವಾಸ ಕಾರ್ಯಕ್ರಮ.
   ಮೈಸೂರು.ಸೆ.30. ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ರಾಜ್ಯ ಸಚಿವ ಪ್ರಮೋದ್ ಮಧ್ವರಾಜ್ ಅವರು ಅಕ್ಟೋಬರ್ 1 ಹಾಗೂ 2 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ಅಕ್ಟೋಬರ್ 1 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿಗೆ ಆಗಮಿಸುವರು. ಬೆಳಿಗ್ಗೆ 11-45 ಗಂಟೆಗೆ  ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಮುಖ್ಯಮಂತ್ರಿಗಳೊಂದಿಗೆ ಕ್ರೀಡಾಜ್ಯೋತಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 12-30 ಗಂಟೆಗೆ ವರುಣ ಕೆರೆಯಲ್ಲಿ ದಸರಾ ಪ್ರಯುಕ್ತ ಆಯೋಜಿಸಿರುವ ಸಾಹಸ ಕ್ರೀಡೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 4 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಗಳೊಂದಿಗೆ ರಾಜ್ಯ ದಸರಾ ಕ್ರೀಡಾ ಕೂಟದ ಉದ್ಘಾಟನೆಯಲ್ಲಿ ಭಾಗವಹಿಸಿ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
    ಅಕ್ಟೋಬರ್ 2 ರಂದು ಬೆಳಿಗ್ಗೆ 6-30 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಹ್ಯಾಫ್ ಮ್ಯಾರಥಾನ್ ಕಾರ್ಯಕ್ರಮ ಉದ್ಘಾಟಿಸುವರು. ಬೆಳಿಗ್ಗೆ 10 ಗಂಟೆಗೆ ಮೈಸೂರು ನಗರದಲ್ಲಿ ನಿರ್ಮಿಸಿರುವ ಮೀನು ಮಾರುಕಟ್ಟೆಗಳ ವೀಕ್ಷಣೆ ಮತ್ತು ಕರ್ನಾಟಕ ಸಹಕಾರಿ ಮೀನುಗಾರಿಕೆ ಮಹಾಮಂಡಳದ ಕುಕ್ಕರಹಳ್ಳಿ ಮೀನು ಮಾರುಕಟ್ಟೆ ಕಿಯೋಸ್ಕ್‍ಗೆ ಭೇಟಿ ನೀಡುವರು. ಬೆಳಿಗ್ಗೆ 11 ಗಂಟೆಗೆ ಮೈಸೂರು ಜಿಲ್ಲೆ ಗಂಗಾ ಮತಸ್ಥ ಸಮಾಜದ ವತಿಯಿಂದ ಸಂಘಟಿಸಿರುವ ಸಭೆಯಲ್ಲಿ ಭಾಗವಹಿಸಿ ನಂತರ ಮಧ್ಯಾಹ್ನ 12 ಗಂಟೆಗೆ ಮೈಸೂರಿನಿಂದ ಕುಶಾಲನಗರಕ್ಕೆ ತೆರಳುವರು.
        ಚಾಮುಂಡಿಬೆಟ್ಟಕ್ಕೆ ಉಚಿತ ಸಾರಿಗೆ ವ್ಯವಸ್ಥೆ
    ಮೈಸೂರು.ಸೆ.30.ಮೈಸೂರು ದಸರಾ ಮಹೋತ್ಸವ  ಅಂಗವಾಗಿ ಚಾಮುಂಡಿ ಬೆಟ್ಟದ ಮೇಲೆ ಜನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಚಾಮುಂಡಿಬೆಟ್ಟಕ್ಕೆ ಹೋಗುವಂತಹ  ಸಾರ್ವಜನಿಕ ಪ್ರಯಾಣಿಕರಿಗೆ ಉಚಿತ ಹಾಗೂ ಉತ್ತಮ ಸಾರಿಗೆ ಸೌಲಭ್ಯವನ್ನು ಅಕ್ಟೋಬರ್ 2 ರಿಂದ ಬೆಳಿಗ್ಗೆ 6-30 ರಿಂದ ರಾತ್ರಿ 8-30 ಗಂಟೆಯವರೆಗೆ ಪ್ರತಿ 15 ನಿಮಿಷಗಳಿಗೆ ಒಂದು ಟ್ರಿಪ್‍ನಂತೆ 4 ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಕಾರ್ಯಚರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಿ. ರಂದೀಪ್ ಅವರು ತಿಳಿಸಿದ್ದಾರೆ.
    ಸಾರ್ವಜನಿಕರು ತಮ್ಮ ವಾಹನಗಳನ್ನು ಲಲಿತಮಹಲ್ ಹೆಲಿಪ್ಯಾಡ್‍ನ ಹತ್ತಿರ ವ್ಯವಸ್ಥೆ ಮಾಡಿರುವ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಕೆ.ಎಸ್.ಆರ್.ಟಿ.ಸಿ ಬಸ್‍ನಲ್ಲಿ ಬೆಟ್ಟದ ಮೇಲೆ ಹೋಗಿ ಬರಬಹುದಾಗಿದೆ. ಅಕ್ಟೋಬರ್ 1 ರಂದು ಬೆಟ್ಟದ ಮೇಲೆ ಹೋಗಲು ಯಾವುದೇ ನಿರ್ಬಂಧ ಇರುವುದಿಲ್ಲವೆಂದು ದಸರಾ ವಿಶೇಷಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಸರಾ ಕ್ರೀಡಾ ಜ್ಯೋತಿಗೆ ಚಾಲನೆ
      ಮೈಸೂರು.ಸೆ.30. ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕ್ರೀಡಾ ಉಪಸಮಿತಿ ವತಿಯಿಂದ ರಾಜ್ಯ ಮಟ್ಟದ ದಸರಾ ಕ್ರೀಡಾ ಸ್ಪರ್ಧೆಗಳು ಅಕ್ಟೋಬರ್ 1 ರಿಂದ 9 ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿದೆ.
   ಅಕ್ಟೋಬರ್ 1 ರಂದು ಬೆಳಿಗ್ಗೆ 11 -40 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ದಸರಾ-2016ರ ದಸರಾ ಕ್ರೀಡಾಕೂಟಗಳ ಕ್ರೀಡಾಜ್ಯೋತಿಗೆ ಚಾಲನೆ ನೀಡಲಿದ್ದಾರೆ. ಶಾಸಕ ಜಿ.ಟಿ. ದೇವೇಗೌಡ ಅವರು ಅಧ್ಯಕ್ಷತೆ ವಹಿಸುವರು.
   ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್. ಮಹದೇವಪ್ರಸಾದ್, ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ರಾಜ್ಯ ಸಚಿವ ಪ್ರಮೋದ್ ಮಧ್ವರಾಜ್, ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್,   ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಕು|| ಅಶ್ವಿನಿ ಪೊನ್ನಪ್ಪ ಅವರು ಕ್ರೀಡಾಜ್ಯೋತಿಗೆ ಚಾಲನೆ ನೀಡಲಿದ್ದಾರೆ.
ದಸರಾ ಚಲನಚಿತ್ರೋತ್ಸವಕ್ಕೆ ತಾರೆಯರ ರಂಗಿನ ಜೊತೆ
ಗಾನಯಾನ- ಕನ್ನಡ ಚಿತ್ರಗೀತೆಗಳ ಭಾವಯಾನ
       ಮೈಸೂರು.ಸೆ.30.ಕನ್ನಡ ಚಲನಚಿತ್ರರಂಗದ ಸುಮಧುರ ಕನ್ನಡ ಚಲನಚಿತ್ರಗೀತೆಗಳ ಭಾವಯಾನ ‘ಗಾನಯಾನ’ ಕಾರ್ಯಕ್ರಮ ಅಕ್ಟೋಬರ್ 1 ರಂದು ಕಲಾಮಂದಿರದಲ್ಲಿ ನಡೆಯುವ ದಸರಾ ಚಲನಚಿತ್ರೋತ್ಸವದ ಉದ್ಘಾಟನೆಗೂ ಮುನ್ನ  ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
     ದಸರಾ ಚಲನಚಿತ್ರೋತ್ಸವ ಸಮಿತಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ  ಉದಯೋನ್ಮುಖ ಗಾಯಕ, ಗಾಯಕಿಯರು ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
      ಕನ್ನಡ ಚಿತ್ರರಂಗದ ಇತಿಹಾಸವನ್ನು ಚಿತ್ರಗೀತೆಗಳ ಮೂಲಕ ಮೆಲುಕುಹಾಕುವ ಪ್ರಯತ್ನ ಇದಾಗಿದೆ. ವೃತ್ತಿ ರಂಗಭೂಮಿ ಹಿನ್ನೆಲೆಯ ಕನ್ನಡ ಚಲನಚಿತ್ರ ರಂಗ ಪೌರಾಣಿಕ ಚಿತ್ರಗಳಿಂದ ಆರಂಭಿಸಿ, ಸಾಮಾಜಿಕ ಚಿತ್ರಗಳಿಗೆ ಹೊರಳಿ, ಹೊಸ ಅಲೆಯ ಚಿತ್ರಗಳನ್ನು ನಿರ್ಮಿಸಿ ಇದೀಗ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮುಂದುವರಿಯುತ್ತಿದ್ದು, ಈ ಎಲ್ಲಾ ಕಾಲಘಟ್ಟಗಳನ್ನು ಗುರುತಿಸುವ ಪ್ರಯತ್ನವನ್ನು ಕಾರ್ಯಕ್ರಮದ ಮೂಲಕ ಮಾಡಲಾಗಿದೆ.
      ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಅಮೂಲ್ಯ ಕೊಡುಗೆ ನೀಡಿರುವ ಚಲನಚಿತ್ರ ಕಲಾವಿದರು, ತಂತ್ರಜ್ಞಾರು,  ಗೀತರಚನಕಾರರು, ಗಾಯಕರು, ನಿರ್ದೇಶಕರು ವಿವಿಧ ವಿಭಾಗಗಳಲ್ಲಿ ಪ್ರಮುಖರು ಕೊಡುಗೆಯನ್ನು ಸ್ಮರಿಸುವ ಯತ್ನವನ್ನು ಮಾಡಲಾಗಿದೆ.
         ಆಯ್ದ ಚಿತ್ರಗೀತೆಗಳನ್ನು ಪ್ರಸ್ತುತಪಡಿಸುತ್ತಲೇ ಚಿತ್ರರಂಗದ ಇತಿಹಾಸವನ್ನು ಹಾಗೂ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಚಿಂತ್ರರಂಗದಲ್ಲಿ ಉಂಟಾದ ಬದಲಾವಣೆಗಳನ್ನು ಬಿಂಬಿಸಲಾಗುವುದು. ಹಾಡಿನ ಜತೆಗೆ ಆಯಾ ಕಾಲಘಟ್ಟದ ಪ್ರಮುಖ ಚಿತ್ರಗಳ ತುಣಕುಗಳನ್ನು ಪ್ರದರ್ಶಿಸಲಾಗುವುದು.
      ಮೈಸೂರಿನ ಹೆಸರಾಂತ ಸಂಗೀತ ಸಂಯೋಜಕರು ರಘುಲೀಲಾ ಸಂಗೀತ ಶಾಲೆಯ ಸುನೀತಾ ಚಂದ್ರಕುಮಾರ್ ಅವರು ಕಾರ್ಯಕ್ರಮದ ಸಮನ್ವಯ ನಿರ್ವಹಿಸುತ್ತಿದ್ದು,   ಸಿ ವಿಶ್ವನಾಥ್( ಮ್ಯಾಂಡೋಲೀನ್), ಷಣ್ಮುಗ (ಕೀಬೋರ್ಡ್), ವಿನ್‍ಸೆಂಟ್ (ರಿದಂಸ್ಯಾಟ್), ಕಿರಣ್ (ತಬಲ) ವಾದ್ಯ ಸಹಕಾರ ನೀಡುವರು.ಶ್ರೇಯ ಕೆ ಭಟ್ಟ,  ವಸುಧಾ ಶಾಸ್ತ್ರಿ, ನವನೀತ್ ಕೃಷ್ಣ, ಕಾರ್ತೀಕ ಹಾಗೂ ರಕ್ಷಿತಾ ಸುರೇಶ್ ಚಲನಚಿತ್ರಗೀತೆಗಳಿಗೆ ದನಿಯಾಗಲಿದ್ದಾರೆ.
      ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ಕಲಾವಿದರಾದ ಭಾರತಿ ವಿಷ್ಣುವರ್ಧನ್, ಹಿರಿಯ ಚಲನಚಿತ್ರ ನಿರ್ದೇಶಕರಾದ ಎಸ್.ಕೆ. ಭಗವಾನ್, ಹಿರಿಯ ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ಚಲನಚಿತ್ರ ಕಲಾವಿದರಾದ ಸುಧಾರಾಣಿ, ಚಲನಚಿತ್ರ ನಿರ್ದೇಶಕ ಪವನ್ ಕುಮಾರ್, ಚಲನಚಿತ್ರ ಕಲಾವಿದರಾದ ವಿಜಯ್ ಸೂರ್ಯ, ಚಲನಚಿತ್ರ ಕಲಾವಿದರಾದ ಕು|| ಮಯೂರಿ, ಕು|| ಕಾವ್ಯ ಶೆಟ್ಟಿ ಹಾಗೂ ಚಿತ್ರೋದ್ಯಮದ ಗಣ್ಯರು ಭಾಗವಹಿಸಿ ದಸರಾ ಚಲನಚಿತ್ರೋತ್ಸವಕ್ಕೆ ವಿಶೇಷ ರಂಗು ನೀಡಲಿದ್ದಾರೆ.
      ಅಕ್ಟೋಬರ್ 2 ರಿಂದ 6 ರವರೆಗೆ ಮೈಸೂರು ನಗರದ ಸ್ಕೈಲೈನ್, ಒಲಂಪಿಯಾ, ಡಿ.ಆರ್.ಸಿ., ಐನಾಕ್ಸ್, ಲಕ್ಷ್ಮೀ, ಹೆಚ್.ಡಿ.ಕೋಟೆಯ ಮಂಜುನಾಥ್, ಕೆ.ಆರ್.ನಗರದ ಗೌರಿಶಂಕರ, ನಂಜನಗೂಡು ಲಲಿತ, ಪಿರಿಯಾಪಟ್ಟಣದ ಮಹದೇಶ್ವರ, ಹುಣಸೂರಿನ ಲೀಲಾ ಹಾಗೂ ಟಿ.ನರಸೀಪುರದ ಭಗವಾನ್ ಚಲನಚಿತ್ರ ಮಂದಿರಗಳಲ್ಲಿ ಬೆಳಗಿನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು. ಪ್ರವೇಶ ದರ ನೆಲ ಅಂತಸ್ತಿಗೆ ರೂ. 10/-, ಬಾಲ್ಕನಿ ರೂ. 20/- ಹಾಗೂ ಮಲ್ಟಿಫ್ಲೆಕ್ಸ್‍ಗೆ ರೂ. 30/- ನಿಗಧಿಪಡಿಸಲಾಗಿದೆ.
    ಚಿತ್ರಮಂದಿರಗಳಲ್ಲಿ ಮಾಣಿಕ್ಯ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ರನ್ನ, ಇಷ್ಟಕಾಮ್ಯ, ಬಬ್ರುವಾಹನ, ಉಳಿದವರು ಕಂಡಂತೆ, ಜೂಮ್, ಬುಲ್ ಬುಲ್, ವಾಸ್ತುಪ್ರಕಾರ, ಕ್ರಾಂತೀ ವೀರಾ ಸಂಗೊಳ್ಳಿ ರಾಯಣ್ಣ, ದೇವರ ನಾಡಲ್ಲಿ, ಕಿರಗೂರಿನ ಗಯ್ಯಾಳಿಗಳು, ಗೋಭಿ ಬಣ್ಣ ಸಾಧಾರಣ ಮೈಕಟ್ಟು, ಯುಟರ್ನ್, ಫಸ್ಟ್ ರ್ಯಾಂಕ್ ರಾಜು, ತಿಥಿ, ಸಂತೆಯಲ್ಲಿ ನಿಂತ ಕಬೀರ, ರಂಗಿತರಂಗ, ಲಾಸ್ಟ್ ಬಸ್, ಪ್ರಿಯಾಂಕ, ನಾನು ಅವನಲ್ಲ ಅವಳು, ನಾನು ನನ್ನ ಕನಸು, ರಿಕ್ಕಿ, ಅಸ್ತಿತ್ವ, ಕೆಂಡಸಂಪಿಗೆ, ಶಿವಲಿಂಗ, ಕನ್ನಡದ ಜನಪ್ರಿಯ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು.
     ಅಕ್ಟೋಬರ್ 2 ರಿಂದ 8 ರವರೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ-ಪುರಸ್ಕಾರ ಪಡೆದ ಚಲನಚಿತ್ರಗಳ ಜೊತೆಗೆ ದೇಶ-ವಿದೇಶಗಳ ಅತ್ಯುತ್ತಮ ಹಾಗೂ ಜಾಗತಿಕ ಮನ್ನಣೆ ಪಡೆದ ಚಲನಚಿತ್ರ ಹಾಗೂ ಸಾಕ್ಷ್ಯಚಿತ್ರಗಳನ್ನು ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮತ್ತು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಪ್ರದರ್ಶಿಸಲಾಗುವುದು. ಪ್ರವೇಶ ಉಚಿತವಾಗಿರುತ್ತದೆ.
      ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮತ್ತು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಆಗಸಿ ಪಾರ್ಲರ್, ಅತ್ತಿ ಹಣ್ಣು ಮತ್ತು ಕಣಜ, ಚುರುಕುಮಾರ, ಗಾಳಿ ಬೀಜ, ಮುನ್ಸೀಫಾ, ಪ್ರಕೃತಿ, ಪುಟ ತಿರುಗಿಸಿ ನೋಡಿ, ತಲ್ಲಣ, ತಿಥಿ ಹಾಗೂ ವಿದಾಯ ಕನ್ನಡ ಚಲನಚಿತ್ರಗಳು ಪನೋರಮಾ ಚಿತ್ರಗಳಾದ ಆಂಖೋ ದೇಖಿ, ಸಿನಿಮಾ ವಾಲಾ, ಕೋರ್ಟ್ ಏಕ್ ಹಜಾರ್ ಜಿ ನೋಟ್, ಎಲಿಝಬೆತ್ ಏಕಾದಶಿ, ಜಲ್, ಕುತ್ಯಾರ್ ಕಾಲ್ವಾತ್ ಗುರ್ಲಿ, ಕಿಲ್ಲ, ಕೋ ಯಾದ್, ಮಸಾನ್, ನಚೋಮ್-ಇ ಕುಂಪಸರ್, ರಾಮ್‍ಸಿಂಗ್ ಚಾರ್ಲಿ ಹಾಗೂ ದಿ ಹೆಡ್ ಹಂಟರ್ ಪ್ರದರ್ಶಿಸಲಾಗುವುದು.
     ವಿಶ್ವ ಚಿತ್ರಗಳಾದ 35 ರಮ್ಸ್, ಲಾರೆನ್ಸ್ ಎನಿವೇಸ್, ಮ್ಯಾಕ್‍ಬೆತ್, ಮಾನ್ ಅಂಕಲ್, ಮೈ ವಡ್ರ್ಸ್, ಮೈ ಲೈಸ್-ಮೈ ಲವ್, ಓ ಬಾಯ್, ಪೇರೆಂಟ್ಸ್, ಪೇಟರ್, ಪೋಲ್, ಸೋಲ್ ಕಿಚನ್, ಟಾಮ್ ಬಾಯ್, ಟೇಸ್ಟ್ ಆಫ್ ಚೆರ್ರಿ ಹಾಗೂ ದಿ ವಿಂಡ್ ವಿಲ್ ಕ್ಯಾರಿ ಅಸ್ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ಮುಂಬೈ ಇಂಟರ್ ನ್ಯಾಷನಲ್ ಚಲನಚಿತ್ರಗಳಾ ಅಗ್ಲಿ ಬಾರ್, ಆಲೈಸ್/ಕಮಲಾಕ್ಷಿ, ಛಾಯಾ, ಫೇಮಸ್ ಇನ್ ಅಹ್ಮದಾಬಾದ್, ಫಿಶರ್ ವುಮನ್ ಅಂಡ್ ಟುಕ್ ಟುಕ್, ಗೋಲ್ಡನ್ ಬರ್ಡ್, ಲೆಟರ್ ಫ್ರಂ ಕಾರ್ಲೈ, ನಪ್ಯಿಯಲ್ ಮೆಮೋರಿಸ್, ರೋಟರಿ ಲೈಫೈನ್, ಸೋಲೋ ಫಿನಾಲೆ, ಟಾಕಿಂಗ್ ವಾಲ್ಸ್, ದ ಲಾಸ್ಟ್ ಮ್ಯಾಂಗೊ ಬಿಫೋರ್ ದ ಮಾನ್ಸೂನ್, ಪಾರ್ ಪ್ರೌಂ ಹೋಂ, ಫೈರ್‍ಪೈಸ್ ಇನ್ ದಿ ಎಬಿಸ್, ಮೈ ನೇಮ್ ಇಸ್ ಸಾಲ್ಟ್, ಪುಮ್ ಶಾಂಗ್, ಪ್ಲೆಸಿಬೊ, ರಸನ್ ಪಿಯ, ದಿ ಇಮ್ಮಾರ್ಟಲ್ಸ್ ಹಾಗೂ ದಿ ಕ್ವೀನ್ ಆಫ್ ಸೈಲೆನ್ಸ್ ಪ್ರದರ್ಶಿಸಲಾಗುವುದು.
     ಉದ್ಘಾಟನಾ ಹಾಗೂ ಚಲನಚಿತ್ರೋತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದಸರಾ ಚಲನಚಿತ್ರೋತ್ಸವ ಸಮಿತಿಯ ಉಪವಿಶೇಷಧಿಕಾರಿ, ಕಾರ್ಯಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕೋರಿದ್ದಾರೆ.

ಅಕ್ಟೋಬರ್ 1 ರಂದು ದಸರಾ ಮಹೋತ್ಸವ ಉದ್ಘಾಟನೆ

ಅಕ್ಟೋಬರ್ 1 ರಂದು ದಸರಾ ಮಹೋತ್ಸವ ಉದ್ಘಾಟನೆ


   ಮೈಸೂರು.ಸೆ.30. ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಡನೆ ದಸರಾ ಮಹೋತ್ಸವ 2016 ರನ್ನು ಅಕ್ಟೋಬರ್ 1 ರಂದು ಬೆಳಿಗ್ಗೆ 11-40 ರಿಂದ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಖ್ಯಾತ ಸಾಹಿತಿ ನಾಡೋಜ ಚನ್ನವೀರ ಕಣವಿ ಅವರು ಉದ್ಘಾಟಿಸಲಿದ್ದಾರೆ.
      ಮುಖ್ಯಮಂತ್ರಿ ಸಿದ್ಧರಾಮಯ್ಯ, ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಸಹಕಾರ ಹಾಗೂ ಸಕ್ಕರೆ ಸಚಿವರಾದ ಹೆಚ್.ಎಸ್. ಮಹದೇವಪ್ರಸಾದ್,ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅವರುಗಳು ಭಾಗವಹಿಸಲಿದ್ದು, ಶಾಸಕ ಜಿ.ಟಿ. ದೇವೇಗೌಡ ಅವರು ಅಧ್ಯಕ್ಷತೆ ವಹಿಸುವರು.
   ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಸಮಾರಂಭ ಅಕ್ಟೋರಬರ್ 1 ರಂದು ಸಂಜೆ 6 ಗಂಟೆಗೆ ಅರಮನೆ ಆವರಣದಲ್ಲಿ ಆಯೋಜಿಸಲಾಗಿದೆ.
   ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಂ.ಕೆ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು.
   ಕರ್ನಾಟಕ ವಿಧಾನಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಸಹಕಾರ ಹಾಗೂ ಸಕ್ಕರೆ ಸಚಿವರಾದ ಹೆಚ್.ಎಸ್. ಮಹದೇವಪ್ರಸಾದ್,ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
  ಅಕ್ಟೋಬರ್ 1 ರಂದು ಮಧ್ಯಾಹ್ನ 12-30 ಗಂಟೆಗೆ ಚಾಮುಂಡಿಬೆಟ್ಟ ಗೃಹ ಸಚಿವರಾದ ಡಾ|| ಜಿ. ಪರಮೇಶ್ವರ್ ಅವರು ಪೊಲೀಸ್ ಸಹಾಯವಾಣಿ ಕೇಂದ್ರದ ಉದ್ಘಾಟಿಸುವರು. ಮಧ್ಯಾಹ್ನ 12-40 ಗಂಟೆಗೆ ಚಾಮುಂಡೇಶ್ವರಿ ದೇವಾಲಯದ ಎದುರಿನಲ್ಲಿ ದಸರಾ ಕ್ರೀಡಾ ಜ್ಯೋತಿಯನ್ನು ಯುವ ಸಬಲೀಕರಣ ಕ್ರೀಡೆ ಹಾಗೂ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಉದ್ಘಾಟಿಸುವರು. ಅಂತರÀರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಕು|| ಅಶ್ವಿನಿ ಪೊನ್ನಪ್ಪ ಅವರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ, ಮಧ್ಯಾಹ್ನ 1-15 ಗಂಟೆಗೆ ವರುಣಾ ಕೆರೆ ಆವರಣದಲ್ಲಿ ಸಾಹಸ ಕ್ರೀಡೋತ್ಸವವನ್ನು ಯುವ ಸಬಲೀಕರಣ ಕ್ರೀಡೆ ಹಾಗೂ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಉದ್ಘಾಟಿಸುವರು. ಮಧ್ಯಾಹ್ನ 1-15 ಗಂಟೆಗೆ ಜೆ.ಕೆ. ಮೈದಾನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಹಾಗೂ ಮಧ್ಯಾಹ್ನ 1-30 ಗಂಟೆಗೆ ಮಹಿಳಾ ದಸರಾವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಅವರು ಉದ್ಘಾಟಿಸುವರು.
  ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ಯು.ಟಿ. ಖಾದರ್ ಅವರು ಮಧ್ಯಾಹ್ನ 1-30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರವಿರುವ ಸ್ಕೌಟ್ಸ್ ಮತ್ತು ಗೈಡ್ ಆವರಣದಲ್ಲಿ ಆಹಾರ ಮೇಳ ಉದ್ಘಾಟಿಸುವರು. ಮಧ್ಯಾಹ್ನ 3 ಗಂಟೆಗೆ ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್ ಅವರು ಮೈಸೂರಿನ ದೇವರಾಜಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸುವರು. ಅರಣ್ಯ, ಪರಿಸರ ಜೀವಶಾಸ್ತ್ರ ಸಚಿವ ಬಿ. ರಮಾನಾಥ್ ರೈ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
 ಮಧ್ಯಾಹ್ನ 3-30 ಗಂಟೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಅವರು ಕಾಡಾ ಕಚೇರಿ ಆವರಣದಲ್ಲಿ ದಸರಾ ಪುಸ್ತಕ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.   
  ಸಂಜೆ 4 ಗಂಟೆಗೆ ಯುವ ಸಬಲೀಕರಣ ಕ್ರೀಡೆ ಹಾಗೂ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್, ಅಂತರರಾಷ್ಟ್ರೀಯ ಪ್ಯಾರಾ ಅಥ್ಲಿಟ್ ದೀಪಾ ಮಲ್ಲಿಕ್, ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಕು|| ಅಶ್ವಿನಿ ಪೊನ್ನಪ್ಪ ಅವರುಗಳು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ದಸರಾ ಕ್ರೀಡಾಕೂಟ ಉದ್ಘಾಟಿಸುವರು.
  ಸಂಜೆ 4 ಗಂಟೆಗೆ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಕುಪ್ಪಣ ಪಾರ್ಕ್(ನಿಶಾದ್‍ಬಾಗ್) ನಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟಿಸುವರು.
  ಸಂಜೆ 4 ಗಂಟೆಗೆ ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಅವರು ರಂಗಾಯಣದಲ್ಲಿ ರಂಗಾಯಣ ನಾಟಕೋತ್ಸವಕ್ಕೆ ಚಾಲನೆ ನೀಡುವರು.
  ಸಂಜೆ 4-30 ಗಂಟೆಗೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಸಣ್ಣ ಕೈಗಾರಿಕೆ ಸಚಿವ ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್ ಅವರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ವಸ್ತುಪ್ರದರ್ಶನ ಉದ್ಘಾಟಿಸುವರು.
  ಸಂಜೆ 6-30 ಗಂಟೆಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಸಯ್ಯಾಜಿರಾವ್ ರಸ್ತೆಯಲ್ಲಿ ಹಸಿರು ಮಂಟಪ ದಸರಾ ದೀಪಾಲಂಕಾರ ಉದ್ಘಾಟಿಸುವರು.
                               ದಸರಾ ಚಲನಚಿತ್ರೋತ್ಸವಕ್ಕೆ ತಾರೆಯರ ರಂಗಿನ ಜೊತೆ
                                 ಗಾನಯಾನ- ಕನ್ನಡ ಚಿತ್ರಗೀತೆಗಳ ಭಾವಯಾನ
       ಮೈಸೂರು.ಸೆ.29.-ಕನ್ನಡ ಚಲನಚಿತ್ರರಂಗದ ಸುಮಧುರ ಕನ್ನಡ ಚಲನಚಿತ್ರಗೀತೆಗಳ ಭಾವಯಾನ ‘ಗಾನಯಾನ’ ಕಾರ್ಯಕ್ರಮ ಅಕ್ಟೋಬರ್ 1 ರಂದು ಕಲಾಮಂದಿರದಲ್ಲಿ ನಡೆಯುವ ದಸರಾ ಚಲನಚಿತ್ರೋತ್ಸವದ ಉದ್ಘಾಟನೆಗೂ ಮುನ್ನ  ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
     ದಸರಾ ಚಲನಚಿತ್ರೋತ್ಸವ ಸಮಿತಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ  ಉದಯೋನ್ಮುಖ ಗಾಯಕ, ಗಾಯಕಿಯರು ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
      ಕನ್ನಡ ಚಿತ್ರರಂಗದ ಇತಿಹಾಸವನ್ನು ಚಿತ್ರಗೀತೆಗಳ ಮೂಲಕ ಮೆಲುಕುಹಾಕುವ ಪ್ರಯತ್ನ ಇದಾಗಿದೆ. ವೃತ್ತಿ ರಂಗಭೂಮಿ ಹಿನ್ನೆಲೆಯ ಕನ್ನಡ ಚಲನಚಿತ್ರ ರಂಗ ಪೌರಾಣಿಕ ಚಿತ್ರಗಳಿಂದ ಆರಂಭಿಸಿ, ಸಾಮಾಜಿಕ ಚಿತ್ರಗಳಿಗೆ ಹೊರಳಿ, ಹೊಸ ಅಲೆಯ ಚಿತ್ರಗಳನ್ನು ನಿರ್ಮಿಸಿ ಇದೀಗ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮುಂದುವರಿಯುತ್ತಿದ್ದು, ಈ ಎಲ್ಲಾ ಕಾಲಘಟ್ಟಗಳನ್ನು ಗುರುತಿಸುವ ಪ್ರಯತ್ನವನ್ನು ಕಾರ್ಯಕ್ರಮದ ಮೂಲಕ ಮಾಡಲಾಗಿದೆ.
      ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಅಮೂಲ್ಯ ಕೊಡುಗೆ ನೀಡಿರುವ ಚಲನಚಿತ್ರ ಕಲಾವಿದರು, ತಂತ್ರಜ್ಞಾರು,  ಗೀತರಚನಕಾರರು, ಗಾಯಕರು, ನಿರ್ದೇಶಕರು ವಿವಿಧ ವಿಭಾಗಗಳಲ್ಲಿ ಪ್ರಮುಖರು ಕೊಡುಗೆಯನ್ನು ಸ್ಮರಿಸುವ ಯತ್ನವನ್ನು ಮಾಡಲಾಗಿದೆ.
         ಆಯ್ದ ಚಿತ್ರಗೀತೆಗಳನ್ನು ಪ್ರಸ್ತುತಪಡಿಸುತ್ತಲೇ ಚಿತ್ರರಂಗದ ಇತಿಹಾಸವನ್ನು ಹಾಗೂ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಚಿಂತ್ರರಂಗದಲ್ಲಿ ಉಂಟಾದ ಬದಲಾವಣೆಗಳನ್ನು ಬಿಂಬಿಸಲಾಗುವುದು. ಹಾಡಿನ ಜತೆಗೆ ಆಯಾ ಕಾಲಘಟ್ಟದ ಪ್ರಮುಖ ಚಿತ್ರಗಳ ತುಣಕುಗಳನ್ನು ಪ್ರದರ್ಶಿಸಲಾಗುವುದು.
      ಮೈಸೂರಿನ ಹೆಸರಾಂತ ಸಂಗೀತ ಸಂಯೋಜಕರು ರಘುಲೀಲಾ ಸಂಗೀತ ಶಾಲೆಯ ಸುನೀತಾ ಚಂದ್ರಕುಮಾರ್ ಅವರು ಕಾರ್ಯಕ್ರಮದ ಸಮನ್ವಯ ನಿರ್ವಹಿಸುತ್ತಿದ್ದು,   ಸಿ ವಿಶ್ವನಾಥ್( ಮ್ಯಾಂಡೋಲೀನ್), ಷಣ್ಮುಗ (ಕೀಬೋರ್ಡ್), ವಿನ್‍ಸೆಂಟ್ (ರಿದಂಸ್ಯಾಟ್), ಕಿರಣ್ (ತಬಲ) ವಾದ್ಯ ಸಹಕಾರ ನೀಡುವರು.ಶ್ರೇಯ ಕೆ ಭಟ್ಟ,  ವಸುಧಾ ಶಾಸ್ತ್ರಿ, ನವನೀತ್ ಕೃಷ್ಣ, ಕಾರ್ತೀಕ ಹಾಗೂ ರಕ್ಷಿತಾ ಸುರೇಶ್ ಚಲನಚಿತ್ರಗೀತೆಗಳಿಗೆ ದನಿಯಾಗಲಿದ್ದಾರೆ.
      ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ಕಲಾವಿದರಾದ ಭಾರತಿ ವಿಷ್ಣುವರ್ಧನ್, ಹಿರಿಯ ಚಲನಚಿತ್ರ ನಿರ್ದೇಶಕರಾದ ಎಸ್.ಕೆ. ಭಗವಾನ್, ಹಿರಿಯ ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ಚಲನಚಿತ್ರ ಕಲಾವಿದರಾದ ಸುಧಾರಾಣಿ, ಚಲನಚಿತ್ರ ನಿರ್ದೇಶಕ ಪವನ್ ಕುಮಾರ್, ಚಲನಚಿತ್ರ ಕಲಾವಿದರಾದ ವಿಜಯ್ ಸೂರ್ಯ, ಚಲನಚಿತ್ರ ಕಲಾವಿದರಾದ ಕು|| ಮಯೂರಿ, ಕು|| ಕಾವ್ಯ ಶೆಟ್ಟಿ ಹಾಗೂ ಚಿತ್ರೋದ್ಯಮದ ಗಣ್ಯರು ಭಾಗವಹಿಸಿ ದಸರಾ ಚಲನಚಿತ್ರೋತ್ಸವಕ್ಕೆ ವಿಶೇಷ ರಂಗು ನೀಡಲಿದ್ದಾರೆ.
      ಅಕ್ಟೋಬರ್ 2 ರಿಂದ 6 ರವರೆಗೆ ಮೈಸೂರು ನಗರದ ಸ್ಕೈಲೈನ್, ಒಲಂಪಿಯಾ, ಡಿ.ಆರ್.ಸಿ., ಐನಾಕ್ಸ್, ಲಕ್ಷ್ಮೀ, ಹೆಚ್.ಡಿ.ಕೋಟೆಯ ಮಂಜುನಾಥ್, ಕೆ.ಆರ್.ನಗರದ ಗೌರಿಶಂಕರ, ನಂಜನಗೂಡು ಲಲಿತ, ಪಿರಿಯಾಪಟ್ಟಣದ ಮಹದೇಶ್ವರ, ಹುಣಸೂರಿನ ಲೀಲಾ ಹಾಗೂ ಟಿ.ನರಸೀಪುರದ ಭಗವಾನ್ ಚಲನಚಿತ್ರ ಮಂದಿರಗಳಲ್ಲಿ ಬೆಳಗಿನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು. ಪ್ರವೇಶ ದರ ನೆಲ ಅಂತಸ್ತಿಗೆ ರೂ. 10/-, ಬಾಲ್ಕನಿ ರೂ. 20/- ಹಾಗೂ ಮಲ್ಟಿಫ್ಲೆಕ್ಸ್‍ಗೆ ರೂ. 30/- ನಿಗಧಿಪಡಿಸಲಾಗಿದೆ.
    ಚಿತ್ರಮಂದಿರಗಳಲ್ಲಿ ಮಾಣಿಕ್ಯ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ರನ್ನ, ಇಷ್ಟಕಾಮ್ಯ, ಬಬ್ರುವಾಹನ, ಉಳಿದವರು ಕಂಡಂತೆ, ಜೂಮ್, ಬುಲ್ ಬುಲ್, ವಾಸ್ತುಪ್ರಕಾರ, ಕ್ರಾಂತೀ ವೀರಾ ಸಂಗೊಳ್ಳಿ ರಾಯಣ್ಣ, ದೇವರ ನಾಡಲ್ಲಿ, ಕಿರಗೂರಿನ ಗಯ್ಯಾಳಿಗಳು, ಗೋಭಿ ಬಣ್ಣ ಸಾಧಾರಣ ಮೈಕಟ್ಟು, ಯುಟರ್ನ್, ಫಸ್ಟ್ ರ್ಯಾಂಕ್ ರಾಜು, ತಿಥಿ, ಸಂತೆಯಲ್ಲಿ ನಿಂತ ಕಬೀರ, ರಂಗಿತರಂಗ, ಲಾಸ್ಟ್ ಬಸ್, ಪ್ರಿಯಾಂಕ, ನಾನು ಅವನಲ್ಲ ಅವಳು, ನಾನು ನನ್ನ ಕನಸು, ರಿಕ್ಕಿ, ಅಸ್ತಿತ್ವ, ಕೆಂಡಸಂಪಿಗೆ, ಶಿವಲಿಂಗ, ಕನ್ನಡದ ಜನಪ್ರಿಯ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು.
     ಅಕ್ಟೋಬರ್ 2 ರಿಂದ 8 ರವರೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ-ಪುರಸ್ಕಾರ ಪಡೆದ ಚಲನಚಿತ್ರಗಳ ಜೊತೆಗೆ ದೇಶ-ವಿದೇಶಗಳ ಅತ್ಯುತ್ತಮ ಹಾಗೂ ಜಾಗತಿಕ ಮನ್ನಣೆ ಪಡೆದ ಚಲನಚಿತ್ರ ಹಾಗೂ ಸಾಕ್ಷ್ಯಚಿತ್ರಗಳನ್ನು ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮತ್ತು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಪ್ರದರ್ಶಿಸಲಾಗುವುದು. ಪ್ರವೇಶ ಉಚಿತವಾಗಿರುತ್ತದೆ.
      ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮತ್ತು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಆಗಸಿ ಪಾರ್ಲರ್, ಅತ್ತಿ ಹಣ್ಣು ಮತ್ತು ಕಣಜ, ಚುರುಕುಮಾರ, ಗಾಳಿ ಬೀಜ, ಮುನ್ಸೀಫಾ, ಪ್ರಕೃತಿ, ಪುಟ ತಿರುಗಿಸಿ ನೋಡಿ, ತಲ್ಲಣ, ತಿಥಿ ಹಾಗೂ ವಿದಾಯ ಕನ್ನಡ ಚಲನಚಿತ್ರಗಳು ಪನೋರಮಾ ಚಿತ್ರಗಳಾದ ಆಂಖೋ ದೇಖಿ, ಸಿನಿಮಾ ವಾಲಾ, ಕೋರ್ಟ್ ಏಕ್ ಹಜಾರ್ ಜಿ ನೋಟ್, ಎಲಿಝಬೆತ್ ಏಕಾದಶಿ, ಜಲ್, ಕುತ್ಯಾರ್ ಕಾಲ್ವಾತ್ ಗುರ್ಲಿ, ಕಿಲ್ಲ, ಕೋ ಯಾದ್, ಮಸಾನ್, ನಚೋಮ್-ಇ ಕುಂಪಸರ್, ರಾಮ್‍ಸಿಂಗ್ ಚಾರ್ಲಿ ಹಾಗೂ ದಿ ಹೆಡ್ ಹಂಟರ್ ಪ್ರದರ್ಶಿಸಲಾಗುವುದು.
     ವಿಶ್ವ ಚಿತ್ರಗಳಾದ 35 ರಮ್ಸ್, ಲಾರೆನ್ಸ್ ಎನಿವೇಸ್, ಮ್ಯಾಕ್‍ಬೆತ್, ಮಾನ್ ಅಂಕಲ್, ಮೈ ವಡ್ರ್ಸ್, ಮೈ ಲೈಸ್-ಮೈ ಲವ್, ಓ ಬಾಯ್, ಪೇರೆಂಟ್ಸ್, ಪೇಟರ್, ಪೋಲ್, ಸೋಲ್ ಕಿಚನ್, ಟಾಮ್ ಬಾಯ್, ಟೇಸ್ಟ್ ಆಫ್ ಚೆರ್ರಿ ಹಾಗೂ ದಿ ವಿಂಡ್ ವಿಲ್ ಕ್ಯಾರಿ ಅಸ್ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ಮುಂಬೈ ಇಂಟರ್ ನ್ಯಾಷನಲ್ ಚಲನಚಿತ್ರಗಳಾ ಅಗ್ಲಿ ಬಾರ್, ಆಲೈಸ್/ಕಮಲಾಕ್ಷಿ, ಛಾಯಾ, ಫೇಮಸ್ ಇನ್ ಅಹ್ಮದಾಬಾದ್, ಫಿಶರ್ ವುಮನ್ ಅಂಡ್ ಟುಕ್ ಟುಕ್, ಗೋಲ್ಡನ್ ಬರ್ಡ್, ಲೆಟರ್ ಫ್ರಂ ಕಾರ್ಲೈ, ನಪ್ಯಿಯಲ್ ಮೆಮೋರಿಸ್, ರೋಟರಿ ಲೈಫೈನ್, ಸೋಲೋ ಫಿನಾಲೆ, ಟಾಕಿಂಗ್ ವಾಲ್ಸ್, ದ ಲಾಸ್ಟ್ ಮ್ಯಾಂಗೊ ಬಿಫೋರ್ ದ ಮಾನ್ಸೂನ್, ಪಾರ್ ಪ್ರೌಂ ಹೋಂ, ಫೈರ್‍ಪೈಸ್ ಇನ್ ದಿ ಎಬಿಸ್, ಮೈ ನೇಮ್ ಇಸ್ ಸಾಲ್ಟ್, ಪುಮ್ ಶಾಂಗ್, ಪ್ಲೆಸಿಬೊ, ರಸನ್ ಪಿಯ, ದಿ ಇಮ್ಮಾರ್ಟಲ್ಸ್ ಹಾಗೂ ದಿ ಕ್ವೀನ್ ಆಫ್ ಸೈಲೆನ್ಸ್ ಪ್ರದರ್ಶಿಸಲಾಗುವುದು.
     ಉದ್ಘಾಟನಾ ಹಾಗೂ ಚಲನಚಿತ್ರೋತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದಸರಾ ಚಲನಚಿತ್ರೋತ್ಸವ ಸಮಿತಿಯ ಉಪವಿಶೇಷಧಿಕಾರಿ, ಕಾರ್ಯಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕೋರಿದ್ದಾರೆ.   
ದಸರಾ ದರ್ಶನ ಉದ್ಘಾಟನಾ  ಸಮಾರಂಭ
      ಮೈಸೂರು.ಸೆ.29.-ದಸರಾ ಮಹೋತ್ಸವ-2016 ದಸರಾ ದರ್ಶನ ಉಪಸಮಿತಿಯ ಕಾರ್ಯಕ್ರಮದ  ಉದ್ಘಾಟನಾ  ಸಮಾರಂಭ ದಿನಾಂಕ : 02.10.2016 ರಂದು ಬೆಳಿಗ್ಗೆ 7.30 ಗಂಟೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ನಡೆಯಲಿದೆ.
      ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ: ಹೆಚ್.ಸಿ. ಮಹದೇವಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಡಿ. ರಂದೀಪ್, ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಕ್ಟೋಬರ್ 1 ರಂದು ದಸರಾ ಮಹೋತ್ಸವ ಉದ್ಘಾಟನೆ
      ಮೈಸೂರು.ಸೆ.29. ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಡನೆ ದಸರಾ ಮಹೋತ್ಸವ 2016 ರನ್ನು ಅಕ್ಟೋಬರ್ 1 ರಂದು ಬೆಳಿಗ್ಗೆ 11-40 ರಿಂದ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಖ್ಯಾತ ಸಾಹಿತಿ ನಾಡೋಜ ಚನ್ನವೀರ ಕಣವಿ ಅವರು ಉದ್ಘಾಟಿಸಲಿದ್ದಾರೆ.
      ಮುಖ್ಯಮಂತ್ರಿ ಸಿದ್ಧರಾಮಯ್ಯ, ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಸಹಕಾರ ಹಾಗೂ ಸಕ್ಕರೆ ಸಚಿವರಾದ ಹೆಚ್.ಎಸ್. ಮಹದೇವಪ್ರಸಾದ್,ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅವರುಗಳು ಭಾಗವಹಿಸಲಿದ್ದು, ಶಾಸಕ ಜಿ.ಟಿ. ದೇವೇಗೌಡ ಅವರು ಅಧ್ಯಕ್ಷತೆ ವಹಿಸುವರು.
   ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರಧಾನ ಸಮಾರಂಭ ಅಕ್ಟೋರಬರ್ 1 ರಂದು ಸಂಜೆ 6 ಗಂಟೆಗೆ ಅರಮನೆ ಆವರಣದಲ್ಲಿ ಆಯೋಜಿಸಲಾಗಿದೆ.
   ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಂ.ಕೆ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು.
   ಕರ್ನಾಟಕ ವಿಧಾನಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಸಹಕಾರ ಹಾಗೂ ಸಕ್ಕರೆ ಸಚಿವರಾದ ಹೆಚ್.ಎಸ್. ಮಹದೇವಪ್ರಸಾದ್,ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
  ಅಕ್ಟೋಬರ್ 1 ರಂದು ಮಧ್ಯಾಹ್ನ 12-30 ಗಂಟೆಗೆ ಚಾಮುಂಡಿಬೆಟ್ಟ ಗೃಹ ಸಚಿವರಾದ ಡಾ|| ಜಿ. ಪರಮೇಶ್ವರ್ ಅವರು ಪೊಲೀಸ್ ಸಹಾಯವಾಣಿ ಕೇಂದ್ರದ ಉದ್ಘಾಟಿಸುವರು. ಮಧ್ಯಾಹ್ನ 12-40 ಗಂಟೆಗೆ ಚಾಮುಂಡೇಶ್ವರಿ ದೇವಾಲಯದ ಎದುರಿನಲ್ಲಿ ದಸರಾ ಕ್ರೀಡಾ ಜ್ಯೋತಿಯನ್ನು ಯುವ ಸಬಲೀಕರಣ ಕ್ರೀಡೆ ಹಾಗೂ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಉದ್ಘಾಟಿಸುವರು. ಅಂತರÀರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಕು|| ಅಶ್ವಿನಿ ಪೊನ್ನಪ್ಪ ಅವರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ, ಮಧ್ಯಾಹ್ನ 1-15 ಗಂಟೆಗೆ ವರುಣಾ ಕೆರೆ ಆವರಣದಲ್ಲಿ ಸಾಹಸ ಕ್ರೀಡೋತ್ಸವವನ್ನು ಯುವ ಸಬಲೀಕರಣ ಕ್ರೀಡೆ ಹಾಗೂ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಉದ್ಘಾಟಿಸುವರು. ಮಧ್ಯಾಹ್ನ 1-15 ಗಂಟೆಗೆ ಜೆ.ಕೆ. ಮೈದಾನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಹಾಗೂ ಮಧ್ಯಾಹ್ನ 1-30 ಗಂಟೆಗೆ ಮಹಿಳಾ ದಸರಾವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಅವರು ಉದ್ಘಾಟಿಸುವರು.
  ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾದ ಯು.ಟಿ. ಖಾದರ್ ಅವರು ಮಧ್ಯಾಹ್ನ 1-30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರವಿರುವ ಸ್ಕೌಟ್ಸ್ ಮತ್ತು ಗೈಡ್ ಆವರಣದಲ್ಲಿ ಆಹಾರ ಮೇಳ ಉದ್ಘಾಟಿಸುವರು. ಮಧ್ಯಾಹ್ನ 3 ಗಂಟೆಗೆ ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್ ಅವರು ಮೈಸೂರಿನ ದೇವರಾಜಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸುವರು. ಅರಣ್ಯ, ಪರಿಸರ ಜೀವಶಾಸ್ತ್ರ ಸಚಿವ ಬಿ. ರಮಾನಾಥ್ ರೈ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
 ಮಧ್ಯಾಹ್ನ 3-30 ಗಂಟೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಅವರು ಕಾಡಾ ಕಚೇರಿ ಆವರಣದಲ್ಲಿ ದಸರಾ ಪುಸ್ತಕ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.   
  ಸಂಜೆ 4 ಗಂಟೆಗೆ ಯುವ ಸಬಲೀಕರಣ ಕ್ರೀಡೆ ಹಾಗೂ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್, ಅಂತರರಾಷ್ಟ್ರೀಯ ಪ್ಯಾರಾ ಅಥ್ಲಿಟ್ ದೀಪಾ ಮಲ್ಲಿಕ್, ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಕು|| ಅಶ್ವಿನಿ ಪೊನ್ನಪ್ಪ ಅವರುಗಳು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ದಸರಾ ಕ್ರೀಡಾಕೂಟ ಉದ್ಘಾಟಿಸುವರು.
  ಸಂಜೆ 4 ಗಂಟೆಗೆ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಕುಪ್ಪಣ ಪಾರ್ಕ್(ನಿಶಾದ್‍ಬಾಗ್) ನಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟಿಸುವರು.
  ಸಂಜೆ 4 ಗಂಟೆಗೆ ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಅವರು ರಂಗಾಯಣದಲ್ಲಿ ರಂಗಾಯಣ ನಾಟಕೋತ್ಸವಕ್ಕೆ ಚಾಲನೆ ನೀಡುವರು.
  ಸಂಜೆ 4-30 ಗಂಟೆಗೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಸಣ್ಣ ಕೈಗಾರಿಕೆ ಸಚಿವ ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್ ಅವರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ವಸ್ತುಪ್ರದರ್ಶನ ಉದ್ಘಾಟಿಸುವರು.
  ಸಂಜೆ 6-30 ಗಂಟೆಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಸಯ್ಯಾಜಿರಾವ್ ರಸ್ತೆಯಲ್ಲಿ ಹಸಿರು ಮಂಟಪ ದಸರಾ ದೀಪಾಲಂಕಾರ ಉದ್ಘಾಟಿಸುವರು.
ದಸರಾ ಮಹೋತ್ಸವ:  ಅ. 30 ರಂದು ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
       ಮೈಸೂರು.ಸೆ.29.ವಿಶ್ವವಿಖ್ಯಾತ ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರು ನಗರವನ್ನು ಸಜ್ಜುಗೊಳಿಸುವ ದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಸ್ವಚ್ಛತೆಯ ಅರಿವನ್ನು ಮೂಡಿಸಲು ಜನ ಜಾಗೃತಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಿರ್ವಹಿಸುವ ದೃಷ್ಟಿಯಿಂದ ವಿವಿಧ ಯೋಜನೆಗಳನ್ನು ದಸರಾ ವ್ಯವಸ್ಥೆ ಮತ್ತು ಸ್ವಚ್ಛತಾ ಕಾರ್ಯಕ್ರಮವನ್ನು ಅಕ್ಟೋಬರ್ 30 ರಂದು ರಾತ್ರಿ 9-30 ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ದಸರಾ ಸ್ವಚ್ಛತಾ ಕಾರ್ಯಕ್ರಮಕ್ಕೆ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಚಾಲನೆ ನೀಡಲಾಗುವುದು.
      ದಸರಾ-2016 ರ ಸಂದರ್ಭದಲ್ಲಿ  13 ದಿನಗಳ ಅವಧಿಗೆ ಸ್ವಚ್ಛತೆ ಕಾರ್ಯ ನಿರ್ವಹಿಸಲು ಹೆಚ್ಚುವರಿಯಾಗಿ 280 ಕಾರ್ಮಿಕರನ್ನು ನೇಮಿಸಿಕೊಂಡು 280 ಮಂದಿಯನ್ನು 4 ಪ್ಯಾಕೇಜ್‍ಗಳಲ್ಲಿ ವಿಂಗಡಿಸಿ, ಪ್ರತಿ ಪ್ಯಾಕೇಜ್‍ನಲ್ಲಿ 70 ಜನರನ್ನು ನಿಯೋಜಿಸಲಾಗುವುದು ನಗರದ ಪ್ರಮುಖ ರಸ್ತೆಗಳನ್ನು ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಲು ಕ್ರಮವಹಿಸಲಾಗುತ್ತಿದೆ.
     ಮೈಸೂರಿನ ಪ್ರವಾಸಿ, ಧಾರ್ಮಿಕ ಹಾಗೂ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಾದ ಅರಮನೆ ಮತ್ತು ಪ್ರವಾಸೋದ್ಯಮ, ಸ್ಥಬ್ದಚಿತ್ರ ಮೆರವಣಿಗೆ, ಚಾಮುಂಡಿ ಬೆಟ್ಟ, ವ್ಯವಸ್ಥೆ ಮತ್ತು ಸ್ವಚ್ಛತೆ ಹಾಗೂ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ  ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಕ್ರಮವಹಿಸಲಾಗಿರುತ್ತದೆ.
     ನಾಡಹಬ್ಬದ ದಸರಾದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಸ್ವಚ್ಛತೆಯ ಜಾಗೃತಿ ಮೂಡಿಸುವ ದೃಷ್ಟಿಯಿಂದ ದಸರಾ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday 29 September 2016

ಮೈಸೂರು ನಗರಕ್ಕೆಆಗಮಿಸಿದ ನಾಡೋಜ ಡಾ. ಚೆನ್ನವೀರ ಕಣವಿ ಅವರಿಗೆ ಆತ್ಮೀಯ ಸ್ವಾಗತ


ಸೆ. 30 ರಂದು ಶ್ರದ್ದಾಂಜಲಿ ವಾಹನ ಹಸ್ತಾಂತರ
       ಮೈಸೂರು.ಸೆ.29. ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ ಅವರು ಸೆಪ್ಟೆಂಬರ್ 30 ರಂದು ಬೆಳಿಗ್ಗೆ 10 ಗಂಟೆಗೆ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಶ್ರದ್ದಾಂಜಲಿ ವಾಹನವನ್ನು ಕೆ.ಆರ್.ಆಸ್ಪತ್ರೆಗೆ ಹಸ್ತಾಂತರಿಸಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು ನಗರಕ್ಕೆ ನಾಡೋಜ ಡಾ. ಚೆನ್ನವೀರ ಕಣವಿ ಅವರಿಗೆ ಆತ್ಮೀಯ ಸ್ವಾಗತ
ಮೈಸೂರು, ಸೆ. 29. ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆ ನೆರವೇರಿಸುವ ನಾಡೋಜ ಡಾ. ಚೆನ್ನವೀರ ಕಣವಿ ಅವರು ಗುರುವಾರ ಬೆಳಗ್ಗೆ 7 ಗಂಟೆಗೆ ಧಾರವಾಡ ಎಕ್ಸ್‍ಪ್ರೆಸ್ ರೈಲಿನ ಮೂಲಕ ಮೈಸೂರಿಗೆ ಆಗಮಿಸಿದರು.
ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡುವ ಅವರನ್ನು ಸ್ವಾಗತ ಹಾಗೂ ಆಮಂತ್ರಣ ಸಮಿತಿಯ ಕಾರ್ಯದರ್ಶಿಗಳಾದ ಪುಟ್ಟಶೇಷಗಿರಿ, ಮೈಸೂರು ತಾಲ್ಲೂಕು ತಹಶೀಲ್ದಾರ್ ರಮೇಶ್‍ಬಾಬು, ಉಪವಿಭಾಗಾಧಿಕಾರಿಗಳ ಕಚೇರಿ ತಹಶೀಲ್ದಾರ್ ಜಾನ್ಸನ್, ಶಿಷ್ಟಾಚಾರ ಅಧಿಕಾರಿಗಳಾದ ನವೀನ್, ಜಿಲ್ಲಾಧಿಕಾರಿಗಳ ಕಚೇರಿಯ ಲೆಕ್ಕಾಧಿಕಾರಿ ಗೋವಿಂದಯ್ಯ ಸೇರಿದಂತೆ ಸ್ವಾಗತ ಸಮಿತಿಯ ಸದಸ್ಯರು ಜಿಲ್ಲಾಡಳಿತದ ಪರವಾಗಿ ರೈಲ್ವೇ ನಿಲ್ದಾಣದಲ್ಲಿ ಮೈಸೂರು ನಗರಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.
ಅಲ್ಲಿಂದ ನಾಡೋಜ ಡಾ. ಚೆನ್ನವೀರ ಕಣವಿ ಅವರನ್ನು ಡಿ.ವಿ. ಕಾರಿನ ಮೂಲಕ ಸರ್ಕಾರಿ ಅತಿಥಿ ಗೃಹಕ್ಕೆ ಕರೆದುಕೊಂಡು ಬರಲಾಯಿತು. ಜಿಲ್ಲಾಧಿಕಾರಿಗಳಾದ ರಂದೀಪ್ ಡಿ. ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಟಿ. ವೆಂಕಟೇಶ್ ಅವರು ನಾಡೋಜ ಕಣವಿ ಅವರನ್ನು ಅತಿಥಿಗೃಹದಲ್ಲಿ ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿದರು.
ಸರ್ಕಾರಿ ಅತಿಥಿ ಗೃಹದಲ್ಲಿ ಅವರ ವಾಸ್ತವ್ಯಕ್ಕೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಶ್ರೀಯುತರು ಗುರುವಾರ ಮತ್ತು ಶುಕ್ರವಾರ ವಿವಿಧ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಅಕ್ಟೋಬರ್ 1 ರಂದು ಮಧ್ಯಾಹ್ನ 11.40 ಗಂಟೆಗೆಕ್ಕೆ ಮೈಸೂರು ದಸರಾ ಕಾರ್ಯಕ್ರಮ ಉದ್ಘಾಟನೆ ನೆರವೇರಿಸುವರು.
ಡಾ. ಚೆನ್ನವೀರ ಕಣವಿ ಅವರೊಂದಿಗೆ ಅವರ ಪುತ್ರ ಶಿವಾನಂದ ಕಣವಿ ಅವರು ಸಹ ಗುರುವಾರ ಆಗಮಿಸಿದ್ದು, ಅವರ ಕುಟುಂಬದ ಇತರ ಸುಮಾರು 20 ಸದಸ್ಯರು ಮುಂದಿನ ದಿನಗಳಲ್ಲಿ ಮೈಸೂರಿಗೆ ಆಗಮಿಸಿ, ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಅವರೆಲ್ಲರ ವಾಸ್ತವ್ಯಕ್ಕೆ ಜಿಲ್ಲಾಡಳಿತದಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಿಷ್ಟಾಚಾರ ಅಧಿಕಾರಿಗಳು ತಿಳಿಸಿದ್ದಾರೆ

Wednesday 28 September 2016

 ನಾಡ ಹಬ್ಬ ದಸರಾ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯರವರನ್ನ ದಸರಾ ಸಮಿತಿಯು ಫಲ ತಾಂಬೂಲ ನೀಡಿ ಆಹ್ವಾನಿಸಿತು ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ,ಹೆಷ್.ಎಸ್.ಮಹದೇವ್ ಪ್ರಸಾದ್,ಮುಖ್ಯಮಂತ್ರಿಗಳ ಕಾರ್ಯದರ್ಶಿ ರಾಮಯ್ಯ, ಮೇಯರ್ ಬಿ.ಎಲ್.ಬೈರಪ್ಪ,ಜಿಲ್ಲಾಧಿಕಾರಿ ರಂದೀಪ್,ಮಹಾನಗರ ಪಾಲಿಕೆಯ ಉಪ ಆಯುಕ್ತ ರಾಜು,ಮತ್ತಿತರರು ಇದ್ದರು.



ಸೆಪ್ಟೆಂಬರ್ 29 ರಂದು ಹೆಲಿಕಾಪ್ಟರ್ ರೈಡ್‍ಗೆ ಚಾಲನೆ

                                ಸೆಪ್ಟೆಂಬರ್ 29 ರಂದು ಹೆಲಿಕಾಪ್ಟರ್ ರೈಡ್‍ಗೆ ಚಾಲನೆ
    ಮೈಸೂರು.ಸೆ.28.ದಸರಾ ಮಹೋತ್ಸವ 2016 ರ ಅಂಗವಾಗಿ ಅಯೋಜಿಸಿರುವ ಹೆಲಿಕಾಪ್ಟರ್ ರೈಡ್ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 29 ರಂದು ಮಧ್ಯಾಹ್ನ 1 ಗಂಟೆಗೆ ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರಂದೀಪ್ ಡಿ ಅವರು ತಿಳಿಸಿದರು.
       ಮೈಸೂರು ನಗರದ ಸೌಂದರ್ಯವನ್ನು  ಅಕಾಶದಿಂದ ವೀಕ್ಷಿಸಿ ಪ್ರವಾಸಿಗರು ಸಂಭ್ರಮಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೆಲಿಕಾಪ್ಟರ್ ಮೈಸೂರಿನ ಮೃಗಾಲಯ, ಪ್ಯಾಲೇಸ್, ಸೆಂಟ್ ಫಿಲೋಮಿನಾಸ್ ಚರ್ಚ ಚಾಮುಂಡಿ ಬೆಟ್ಟದ ಸುತ್ತ ಮುತ್ತ ಹಾರಾಟ ನಡೆಸಲಿದೆ. ಹೆಲಿಕಾಪ್ಟರ್ ರೈಡಿಗೆ ಪ್ರತಿ ಟಿಕೇಟ್‍ಗೆ ರೂ 2499/- ನಿಗಧಿಪಡಿಸಲಾಗಿದೆ. ವಿಕಲಚೇತನರಿಗೆ ಮತ್ತು 10 ನೇ ತರಗತಿ ಒಳಪಟ್ಟ ವಿದ್ಯಾರ್ಥಿಗಳಿಗೆ ರೂ 2,299/- ನಿಗಧಿಪಡಿಸಲಾಗಿದೆ ಎಂದು  ಹೆಲಿಕಾಪ್ಟರ್ ಜಾಲಿ ರೈಡ್‍ನ ಸಂಯೋಜಕರಾದ ಶಶಿಧರ್  ವಾಲ್ಮೀಕಿ ಅವರು ತಿಳಿಸಿದ್ದಾರೆ.
ಹೆಲಿಕಾಪ್ಟರ್ 10 ನಿಮಿಷಗಳ ಹಾರಾಟ ನಡೆಸುತ್ತದೆ. ಒಂದು ಟ್ರಿಪ್‍ನಲ್ಲಿ 6 ಪ್ರಯಾಣಿಕರು ಹಾಗೂ ಒಬ್ಬ ಪೈಲೆಟ್ ಇರುತ್ತಾರೆ. ಪ್ರತಿದಿನ 50 ಟ್ರಿಪ್ ಸಂಚರಿಸಲಿದೆ. ಪ್ರಯಾಣಿಕರು ಲಲಿತ್ ಮಹಲ್ ಹೆಲಿಪ್ಯಾಡ್‍ನಲ್ಲಿ ತೆರೆಯಲಾಗಿರುವ ಕೌಂಟರ್ ನಲ್ಲಿ ಟಿಕೇಟ್ ಪಡೆದು ಸಂಚರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 9969403541 / 9969403574 ಯನ್ನು ಸಂಪರ್ಕಿಸಬಹುದಾಗಿದೆ.
ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಬಿ. ರಮಾನಾಥ ರೈ ಅವರ ಪ್ರವಾಸ ಕಾರ್ಯಕ್ರಮ      
    ಮೈಸೂರು.ಸೆ.28.ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಬಿ. ರಮಾನಾಥ ರೈ ಅವರು ಸೆಪ್ಟೆಂಬರ್ 29 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ಅವರು ಅಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿಗೆ ಆಗಮಿಸಿ ನಂತರ ಬೆಳಿಗ್ಗೆ 10-30 ಗಂಟೆಗೆ ಮೈಸೂರು ಅರಮನೆಯಲ್ಲಿ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಆನೆ ಮಾವುತ ಹಾಗೂ ಕಾವಾಡಿಗರಿಗೆ ಸಮವಸ್ತ್ರ ಮತ್ತು ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಬೆಳಿಗ್ಗೆ 11-30 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.

Tuesday 27 September 2016

ಮಂಡ್ಯ ಹನಕೆರೆಯಲ್ಲಿ ರೈತ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

 ರಸ್ತೆ ಉಬ್ಬು ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ
ಮಂಡ್ಯ : ಮೈಸೂರು-ಬೆಂಗಳೂರು ಹೆದ್ದಾರಿಯ  ತಾಲ್ಲೂಕಿನ ಹನಕೆರೆ ಸರ್ಕಲ್ ಬಳಿ ರಸ್ತೆ ಉಬ್ಬು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ರೈತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಗಳು ಇಂದು ಪ್ರತಿಭಟನೆ ನಡೆಸಿದರು.
ಈ ಸ್ಥಳದಲ್ಲಿ ಹಾಗಿಂದಾಗೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಅಪಘಾತದಲ್ಲಿ ಹಲವರು ಪ್ರಾಣ ಕಳೆದುಕೊಂಡಿ ದ್ದಾರೆ. ಸೋಮವಾರ ಸಂಜೆ ರೈತ ಶಿಕ್ಷಣ ಸಂಸ್ಥೆಯ ವಿದ್ಯಾ ರ್ಥಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸಾವನ್ನ ಪ್ಪಿದ್ದಾನೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ರಸ್ತೆ ದಾಟಲಾಗದಷ್ಟು ವಾಹನಗಳು ಸಂಚರಿಸುತ್ತವೆ. ಕೂಡಲೇ ರಸ್ತೆ ಉಬ್ಬು ನಿರ್ಮಾಣ ಮಾಡಬೇಡಬೇಕೆಂದು ಆಗ್ರಹಿಸಿ ಹೆದ್ದಾರಿ ಪಕ್ಕದಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದರು.
ಪ್ರತಿಭಟನಾ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಸವಿತ ಅವರು, ಹೆದ್ದಾರಿಗಳಲ್ಲಿ ಉಬ್ಬು ನಿರ್ಮಾಣಕ್ಕೆ ಸರ್ಕಾರದ ಒಪ್ಪಿಗೆ ಬೇಕಾಗುತ್ತದೆ. ಆದ್ದರಿಂದ ಬ್ಯಾರಿಕೇಟ್ ಅಳವಡಿಸಿ ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು. ಅಲ್ಲದೆ ಬೆಳಿಗ್ಗೆ 8ರಿಂದ 11 ಹಾಗೂ ಸಂಜೆ 3 ರಿಂದ 5 ಗಂಟೆಯ ವರೆಗೂ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಕ್ರಮ ವಹಿಸುವ ಭರವಸೆ ನೀಡಿದರು.
ಬಳಿಕ ಪ್ರತಿಭಟನಾ ವಾಪಸ್ ಪಡೆಯಲಾಯಿತು. ರೈತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೆಚ್.ಸಿ.ಪುಟ್ಟಯ್ಯ, ಉಪಾಧ್ಯಕ್ಷ ಹೆಚ್.ಬಿ.ರಾಜಣ್ಣ, ಗ್ರಾಮದ ಮುಖಂಡರಾದ ಹೆಚ್.ಬಿ. ಜಯರಾಮು, ಕಾಡಯ್ಯ ಸೇರಿದಂತೆ ನೂರಾರು  ವಿದ್ಯಾರ್ಥಿ ಗಳು ಪಾಲ್ಗೊಂಡಿದ್ದರು.
ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಆನಂದ್‍ಕುಮಾರ್, ಕೆರಗೋಡು ಠಾಣಾ ಉಪನಿರೀಕ್ಷಕ ಸತೀಶ್ ನಾಯಕ್ ಭೇಟಿ ನೀಡಿದರು.


Monday 26 September 2016

ಅರಮನೆ ಆವರಣದಲ್ಲಿ ಮಾವುತರೊಂದಿಗೆ ಉಸ್ತುವಾರಿ ಸಚಿವರಾದ ಡಾ|| ಹೆಚ್.ಸಿ. ಮಹದೇವಪ್ಪಅವರು ಉಪಹಾರ

 

ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಹೆಚ್.ಸಿ. ಮಹದೇವಪ್ಪ ಅವರು ಸೆಪ್ಟೆಂಬರ್ 27 ರಂದು ಬೆಳಿಗ್ಗೆ 8-30 ಕ್ಕೆ ಅರಮನೆ ಆವರಣದಲ್ಲಿ ಮಾವುತರೊಂದಿಗೆ ಉಪಹಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ
  ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಹೆಚ್.ಸಿ. ಮಹದೇವಪ್ಪ ಅವರು ಸೆಪ್ಟೆಂಬರ್ 27 ರಂದು ಮಧ್ಯಾಹ್ನ 1 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿಯಾಗಲು ಇಚ್ಫಿಸಿರುತ್ತಾರೆ.
    ಮಾಧ್ಯಮ ಪ್ರತಿನಿಧಿಗಳು ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಬೇಕಾಗಿ ಕೋರಿದೆ.    

      ಸೆಪ್ಟೆಂಬರ್ 29 ರಂದು ಉದ್ಯೋಗ ಮೇಳ
      ಮೈಸೂರು.ಸೆ.26. ಎನ್.ಆರ್.ಮೊಹಲ್ಲಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಚೇರಿಯ ಆವರಣದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಸೆಪ್ಟೆಂಬರ್ 29 ರಂದು ಬೆಳಿಗ್ಗೆ 10 ಘಂಟೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. 
    ಈ ಉದ್ಯೋಗ ಮೇಳದಲ್ಲಿ ಮೈಸೂರಿನ ಸುರಭಿ ಪ್ಲಾನ್‍ಟೆಕ್, ಬಿ.ಎಸ್.ಗೌಡ ಎಂಟರ್ ಪ್ರೈಸಸ್,  ಯುರೇಕಾಫೋಬ್ರ್ಸ್, ತೇಜಸ್ವಿನಿ ಎಂಟರ್‍ಪ್ರೈಸಸ್, ಹಿಂದುಜಾಗ್ಲೋಬಲ್ ಸಲ್ಯೂಷನ್,  ರಾಜಾ ಬಯೋಟೆಕ್, ರ್ಯಾಕ್ ಮಂಡ್ ಟೆಕ್ನಾಲಜಿ ಪ್ರೈ.ಲಿ., ಬೆಂಗಳೂರಿನ ರೀಟೇಲ್ ವಕ್ರ್ಸ್‍ಇಂಡಿಯಾ ಪ್ರೈ., ಲಿ., ಹಾಗೂ ಇನ್ನಿತರೆ ಖಾಸಗಿ ನಿಯೋಜಕರುಗಳು ಭಾಗವಹಿಸಲಿದ್ದಾರೆ.  ಎಸ್‍ಎಸ್‍ಎಲ್‍ಸಿ ಉತ್ತೀರ್ಣ ಅಥವಾ ಅನುತ್ತೀರ್ಣ, ಪಿಯುಸಿ, ಜೆಓಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
    ಹೆಚ್ಚಿನ ಮಾಹಿತಿಗೆ ಸಿ.ವಿಶ್ವನಾಥ ಸಹಾಯಕ ನಿರ್ದೇಶಕರು, ಜಿಲಾ ್ಲಉದ್ಯೋಗ ವಿನಿಮಯ ಕಛೇರಿ, ಮೈಸೂರು-07 ದೂರವಾಣಿ ಸಂಖ್ಯೆ: 0821-2489972 ನ್ನು ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 29 ಹಾಗೂ 30 ರಂದು ಸುಕನ್ಯಾ  ಸಮೃದ್ಧಿ ಖಾತೆ ಮೇಳ
      ಮೈಸೂರು.ಸೆ.26.ಮೈಸೂರು ಅಂಚೆ ವಿಭಾಗವೂ ಉದಯಗಿರಿ ಅಂಚೆ ಕಛೇರಿಯಲ್ಲಿ “ಸುಕನ್ಯಾ  ಸಮೃದ್ಧಿ ಖಾತೆ” ತೆರೆಯಲು ದಿನಾಂಕ 29.09.2016 & 30.09.2016  ರಂದು ಬೆಳಗ್ಗೆ  10  ಘಂಟೆ ಯಿಂದ ಸಂಜೆ  5 ರವರಗೆ  “ಸುಕನ್ಯಾ  ಸಮೃದ್ಧಿ ಖಾತೆ ಮೇಳ” ವನ್ನು ಅಯೋಜಿಸಿದೆ.  10 ವರ್ಷ ಒಳಪಟ್ಟ ಹೆಣ್ಣು ಮಕ್ಕಳ ಪೆÇೀಷಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವುದು.
      ಹೆಚ್ಚಿನ ಮಾಹಿತಿಗೆ ಉದಯಗಿರಿ ಅಂಚೆ ಕಛೇರಿ – 0821-2417336, ಇಲಾಖಾ ಪ್ರತಿನಿಧಿ– 9448164945, 9480809757 ನ್ನು ಸಂಪರ್ಕಿಸಬಹುದು.

ಅಕ್ಟೋಬರ್ 2 ರಂದು ಕುರಿಮಂಡಿ ಕಸಾಯಿಖಾನೆ ಬಂದ್
     ಮೈಸೂರು.ಸೆ.26.ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಕುರಿ, ಮೇಕೆ ಮತ್ತು ಇತರೆ ಎಲ್ಲ ಮಾಂಸದ ಅಂಗಡಿಗಳನ್ನು ಗಾಂಧಿ ಜಯಂತಿ ಪ್ರಯುಕ್ತ 2016 ರ ಅಕ್ಟೋಬರ್ 2 ರಂದು ಮುಚ್ಚಲಾಗುವುದು. ಮೈಸೂರು ನಗರದಲ್ಲಿ ಸದರಿ ದಿನದಂದು ಮಾಂಸದ ವ್ಯಾಪಾರವನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ ಹಾಗೂ ಮಾರುಕಟ್ಟೆ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕಾರ ಸ್ವೀಕಾರ
   ಮೈಸೂರು.ಸೆ.26.ಮೈಸೂರಿನ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್‍ರಾಗಿ ರಂಗಯ್ಯ ಅವರು ಸೆಪ್ಟೆಂಬರ್ 16 ರಂದು ಅಧಿಕಾರ ವಹಿಸಿಕೊಂಡಿರುತ್ತಾರೆ.
      ಸದರಿಯವರನ್ನು  ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ, ಮೈಸೂರು-570023 ವಿಳಾಸ ಅಥವಾ ದೂರವಾಣಿ ಸಂಖ್ಯೆ 0821-2560853 ನ್ನು ಮೂಲಕ ಸಂಪರ್ಕಿಸಬಹುದು.
ಪಿಎಂಇಜಿಪಿ ಯೋಜನೆ : ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ
       ಮೈಸೂರು.ಸೆ.26.ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ದಿನಾಂಕ 31-08-2016 ರಂದು ನಡೆದ ರಾಜ್ಯ ಮಟ್ಟದ ಸಭೆಯಲ್ಲಿ ತೀರ್ಮಾನಿಸಿದ ಪ್ರಕಾರ ಪಿಎಂಇಜಿಪಿ ಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಫಿಸುವ ಅಭ್ಯರ್ಥಿಗಳು 2016-17ನೇ ಸಾಲಿಗೆ ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ದಿನಾಂಕ 01-07-2016 ಕ್ಕೆ ಮುಂಚಿತವಾಗಿ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಿರುವವರು ಸಹ ಪುನ: ಆನ್‍ಲೈನ್ ಮುಖಾಂತರ ಅರ್ಜಿಯನ್ನು ಕಡ್ಡಾಯವಾಗಿ ಸಲ್ಲಿಸಲೇ ಬೇಕಾಗಿರುತ್ತದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ತಿತಿತಿ.ಠಿmegಠಿ.iಟಿ  /  ತಿತಿತಿ.ಞviಛಿ.oಡಿg.iಟಿ  ನ್ನು ಸಂಪರ್ಕಿಸುವುದು.
ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
    ಮೈಸೂರು.ಸೆ.26.-ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ  ಅಂಗವಿಕಲರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ/ಸಲ್ಲಿಸಿರುವ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ 15 ವರ್ಷಗಳಿಗೂ ಮೇಲ್ಪಟ್ಟು  ಸೇವೆ  ಸಲ್ಲಿಸುತ್ತಿರುವ/ಸಲ್ಲಿಸುವ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ
    ನಿಗದಿತ ಅರ್ಜಿಯನ್ನು ವೆಬ್ ಸೈÀಟ್ (hಣಣಠಿ://ತಿತಿತಿ.ತಿeಟಜಿಚಿಡಿeoಜಿಜisಚಿbಟeಜ.ಞಚಿಡಿ.ಟಿiಛಿ.iಟಿ)  ನಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಅಕ್ಟೋಬರ್ 14 ರೊಳಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪುಲಿಕೇಶಿ ರಸ್ತೆ, ತಿಲಕ್‍ನಗರ, ಮೈಸೂರು-570001 ಸಲ್ಲಿಸುವುದು.
     ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2490333/0821-2490111 ನ್ನು ಸಂಪರ್ಕಿಸುವುದು.
ಫಲಪುಷ್ಪ ಪ್ರದರ್ಶನ
     ಮೈಸೂರು.ಸೆ.26.ಮೈಸೂರು ವಿಶ್ವವಿದ್ಯಾನಿಲಯ ತೋಟಗಾರಿಕಾ ವಿಭಾಗವು 13ನೇ ವರ್ಷದ ದಸರಾ ಫಲಪುಷ್ಪ ಪ್ರದರ್ಶನವನ್ನು ಕುಕ್ಕರಹಳ್ಳಿ ಕೆರೆಯ ಪೂರ್ವ ಹಾಗೂ ಪಶ್ಚಿಮ ದಂಡೆಯಲ್ಲಿ ಅಕ್ಟೋಬರ್ 1 ರಿಂದ ಅಕ್ಟೋಬರ್ 12 ರವರೆಗೆ ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ಏರ್ಪಡಿಸಲಾಗಿದೆ.
     ಈ ಪ್ರದರ್ಶನವನ್ನು ಅಕ್ಟೋಬರ್ 1 ರಂದು ಸಂಜೆ 5 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯ ಕುಲಸಚಿವರಾದ ಪ್ರೊ. ಕೆ.ಎಸ್. ರಂಗಪ್ಪ ಅವರು ಉದ್ಘಾಟಿಸಲಿದ್ದಾರೆ.
     ಪುಷ್ಪ ಪ್ರದರ್ಶನದಲ್ಲಿ ವಿವಿಧ ಪುಷ್ಪಗಳು, ಮಾದರಿ ಎಲೆ ಗಿಡಗಳು ಹಾಗೂ ವೈವಿದ್ಯಮಯ ತರಕಾರಿ ಗಿಡಗಳನ್ನು ಪ್ರದರ್ಶಿಸಲಾಗುವುದು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ನಗರದ ಜನತೆ ಹಾಗೂ ಪ್ರವಾಸಿಗರು ಕುಕ್ಕರಹಳ್ಳಿ ಕೆರೆಯ ಸುಂದರ ಪ್ರಕೃತಿ ತಾಣಕ್ಕೆ ಭೇಟಿ ನೀಡುವಂತೆ ಮೈಸೂರು ವಿಶ್ವವಿದ್ಯಾನಿಲಯ ತೋಟಗಾರಿಕಾ ವಿಭಾಗದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತ ದಸರಾ ಸೆಪ್ಟೆಂಬರ್ 29 ರಂದು ಕ್ರೀಡಾ ಕಾರ್ಯಕ್ರಮ
      ಮೈಸೂರು.ಸೆ.26.ಮೈಸೂರು ದಸರಾ ಪ್ರಯುಕ್ತ ಮೈಸೂರು ತಾಲ್ಲೂಕಿನ ರೈತ ದಸರಾ ಕ್ರೀಡಾ ಕಾರ್ಯಕ್ರಮಗಳನ್ನು ಇಲವಾಲ ಹೋಬಳಿಯ ಇಲವಾಲ ಗ್ರಾಮದ ಸರ್ಕಾರಿ ಹೈಸ್ಕೂಲ್ ಆವರಣದಲ್ಲಿ ಸೆಪ್ಟೆಂಬರ್ 29 ರಂದು ಬೆಳಿಗ್ಗೆ 11 ಗಂಟೆಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರುಹಾಗೂ  ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಗುವುದು. 
     ಮಹಿಳೆಯರಿಗೆ ಚಮಚದಲ್ಲಿ ನಿಂಬೆಹಣ್ಣು ಇಟ್ಟು ಓಡುವ ಸ್ಪರ್ಧೆ, ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆಗಳು ನಡೆಯಲಿದೆ. ಪುರುಷರಿಗೆ ಗುಂಡು ಎತ್ತುವ ಸ್ಪರ್ಧೆ, ಗೊಬ್ಬರ ಚೀಲ (50.ಕೆ.ಜಿ) ಹೊತ್ತು ಓಡುವ ಸ್ಪರ್ಧೆ ಹಾಗೂ ಕೆಸರು ಗದ್ದೆಯಲ್ಲಿ ಓಡುವ ಸ್ಪಧೆಗಳು ನಡೆಯಲಿವೆ. ರೈತ ಬಾಂಧವರು ರೈತ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ
     ಹೆಚ್ಚಿನ ಮಾಹಿತಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಇಲವಾಲ ಕಂದಾಯ ಅಧಿಕಾರಿಗಳು ಮೊಬೈಲ್ ಸಂಖ್ಯೆ 9845313357, ಕೃಷಿ ಅಧಿಕಾರಿಗಳು ಮೊಬೈಲ್ ಸಂಖ್ಯೆ 7259005804 ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೊಬೈಲ್ ಸಂಖ್ಯೆ 9844238816 ಗಳನ್ನು ಸಂಪರ್ಕಿಸಬಹುದು.
   
ಸೆಪ್ಟೆಂಬರ್ 27 ರಂದು ಯೋಗ ಚಾರಣಾ ಕಾರ್ಯಕ್ರಮ
      ಮೈಸೂರು.ಸೆ.26.ಮೈಸೂರು ದಸರಾ ಮಹೋತ್ಸವ -2016 ರ ಯೋಗ ದಸರಾ ಉಪ ಸಮಿತಿ ಹಾಗೂ ಪ್ರವಾಸೋದ್ಯಮ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇದೇ ಪ್ರಥಮ ಬಾರಿಗೆ ಯೋಗ ಚಾರಣಾ ಕಾರ್ಯಕ್ರಮ ಸೆಪ್ಟೆಂಬರ್ 27 ರಂದು ಬೆಳಿಗ್ಗೆ 6 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನ ಪ್ರಾರಂಭಿಕ ಮೆಟ್ಟಿಲುಗಳ ಬಳಿ ಆಯೋಜಿಸಿದೆ.
      ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ ಅವರು ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ.  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ್ ನಜೀರ್ ಅಹಮದ್, ಶಾಸಕ ಜಿ.ಟಿ. ದೇವೇಗೌಡ, ಎಂ.ಕೆ. ಸೋಮಶೇಖರ್, ವಾಸು, ಜಿಲ್ಲಾಧಿಕಾರಿ ಡಿ. ರಂದೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ  ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.
                           ಸೆಪ್ಟೆಂಬರ್ 28 ರಂದು ಸಿನಿಮಾ ಸಮಯದಲ್ಲಿ ಪಲ್ಲಟ


  
 ಮೈಸೂರು.ಸೆ.26.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಮೈಸೂರು ಫಿಲ್ಮ್ ಸೊಸೈಟಿ, ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಸಿನಿಮಾ ಸಮಯದಲ್ಲಿ ಸೆಪ್ಟೆಂಬರ್ 28  ರಂದು ಬುಧವಾರ ಸಂಜೆ 6 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ  ರಘು ಎಸ್.ಪಿ. ಅವರು ನಿರ್ದೇಶನದ ಪಲ್ಲಟ ಕನ್ನಡ ಚಲನಚಿತ್ರ ಪ್ರದರ್ಶಿಸಲಾಗುವುದು.
   ಚಲನಚಿತ್ರ ಮುಗಿದ ನಂತರ ಪಲ್ಲಟ ಚಲನಚಿತ್ರದ ನಿರ್ದೇಶಕ ರಘು ಎಸ್.ಪಿ., ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕ ಹಾಗೂ ಸಿನಿ ವಿಮರ್ಶಕ ಪ್ರೊ. ವಿ.ಎನ್. ಲಕ್ಷ್ಮೀನಾರಾಯಣ್ ಹಾಗೂ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಕೃಷ್ಣಮೂರ್ತಿ ಹನೂರು ಅವರು ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ.
      ಇದಕ್ಕೂ ಮುನ್ನ ಅಂದು ಸಂಜೆ 5-30 ಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ ಸಾಕ್ಷ್ಯಚಿತ್ರ  ಪ್ರದರ್ಶಿಸಲಾಗುವುದು.
‘ಪಲ್ಲಟಗಳೆಂಬ ತಲ್ಲಣಗಳ ಸುತ್ತ...
ಗ್ರಾಮಭಾರತದ ಇಂದಿನ ಚಿತ್ರಣ ಹಿಂದಿನಂತಿಲ್ಲ. ಬದಲಾವಣೆಗೆ ಪಕ್ಕಾದ ಆಧುನಿಕ ಬದುಕಿನಂತೆಯೇ ಭಾರತದ ಹಳ್ಳಿಗಳ ಬಾಳೂ ಹೊಸ ಗಾಳಿಗೆ ತೆರೆದುಕೊಂಡಿದೆ. ‘ಹೊಸ ಗಾಳಿ’ ಎಂಬುದನ್ನು ನಾವು ಆಧುನಿಕತೆ ಎಂದೂ ಕರೆಯುವ ಸ್ಥಿತಿಯಲ್ಲಿ ಈಗ ಇಲ್ಲ. ಯಾಕೆಂದರೆ ಅಲ್ಲಿದ್ದ ಹಳೆಯ ವಿಚಾರಗಳು, ನಡಾವಳಿಗಳು, ಗ್ರಾಮೀಣರ ಬದುಕು, ಮೌಢ್ಯಗಳು ಕಂಡೂ ಕಾಣದಂತಿದ್ದರೂ ಪಳೆಯುಳಿಕೆಗಳಂತೆಯೇ ಕಣ್ಣಮುಂದಿನ ಊರ ‘ಮಾರಿ’ಹಬ್ಬಗಳಂತೆಯೇ ಉಳಿದುಕೊಂಡು ಬಂದಿವೆ.
ಪ್ರಜಾಪ್ರಭುತ್ವದ ಮಹತ್ವದ ಬದಲಾವಣೆಗಳನ್ನು ಇಂಡಿಯಾದ ಗ್ರಾಮ ಸಮಾಜ ಕಂಡಿದ್ದರೂ ಇಂದಿಗೂ ಹಳ್ಳಿಗಳನ್ನು ಭೂತ ಕಾಲದ ಭ್ರೂಣಗಳಂತೆ ಹಳೆಯ ಸಂಪ್ರದಾಯಗಳೇ ಆಳುತ್ತಿರುವುದು ಸುಳ್ಳಲ್ಲ. ಅಕ್ಷರಲೋಕವನ್ನು ಕಣ್ಣೆದುರಿಗೆ ಕಂಡಿದ್ದರೂ ನಮ್ಮ ಹಳ್ಳಿಗರು ಮುಗ್ಧರಂತೆಯೂ ಶೋಷಿತರಂತೆಯೂ ಅಥವಾ ಇವೆರಡನ್ನೂ ಒಟ್ಟಿಗೆ ಅನುಭವಿಸುತ್ತಿರುವ ಪಾತ್ರಗಳಂತೆಯೂ ಬದುಕುತ್ತಿರುವುದನ್ನು ಈಗಲೂ ನಮ್ಮ ಸುತ್ತಮುತ್ತಲಿನ ಸಾವಿರಾರು ಊರುಗಳಲ್ಲಿ ಕಾಣಬಹುದು.
ಹಳ್ಳಿಯೊಂದರಲ್ಲಿ ಶೋಷಣೆ ಎಂಬುದು ಶೋಷಣೆಯಂತೆ ಕಾಣುತ್ತಿಲ್ಲ. ಮೌಢ್ಯವೆಂಬುದು ಆಚರಣೆಯಂತೆಯೂ, ನಂಬಿಕೆ ಎಂಬುದು ಗುಲಾಮಗಿರಿಯಂತೆಯೂ ಒಟ್ಟೊಟ್ಟಿಗೆ ಆಳುತ್ತಿರುವ ತಲ್ಲಣಗಳು ಈಗಲೂ ಹಳ್ಳಿಗಳ ಕರುಳನ್ನು ಹಿಂಡುತ್ತಿವೆ. ಹಾಗೆಂದು ಇಲ್ಲಿ ನೋವೆಂಬುದೇ ಎಲ್ಲವೂ ಆಗಿಲ್ಲ. ಹಳ್ಳಿಯ ಒಡಬಾಳಿನ ಉಲ್ಲಾಸದ ಕ್ಷಣಗಳು, ನಲಿವಿನ ಗಳಿಗೆಗಳು ಎಲ್ಲವೂ ಮಿಳಿತಗೊಂಡಿವೆ. ಅದರ ನಡುವೆಯೂ ಗ್ರಾಮ ಸಮಾಜದ ಜೀವಗಳನ್ನು ಇಟ್ಟಾಡಿಸುವ, ತಟ್ಟಾಡಿಸುವ ಹತ್ತಾರು ಪಲ್ಲಟಗಳೂ ಇಲ್ಲಿವೆ. ಇಂತಹ ವೈವಿಧ್ಯಮಯ ‘ಪಲ್ಲಟ’ಗಳನ್ನು ಕಟ್ಟಿಕೊಡುವ ಪ್ರಯತ್ನವೊಂದು ಈ  ಸಿನಿಮಾದಲ್ಲಿದೆ...
      ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ

Saturday 24 September 2016

              ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ.
                  700 ಗ್ರಾಂ ಗಾಂಜಾ ಮತ್ತು ರೂ. 1700/- ನಗದು ವಶ.
ಮೈಸೂರು ನಗರ ಸಿ.ಸಿ.ಬಿ. ಮತ್ತು ಮಂಡಿ ಪೊಲೀಸರು ಮಾಹಿತಿ ಮೇರೆಗೆ  23 ರಂದು ಮಂಡಿ ಪೊಲೀಸ್ ಠಾಣಾ ಸರಹದ್ದು ಮಂಡಿ ಮೊಹಲ್ಲಾದ ಕೆ.ಟಿ ರಸ್ತೆ, 5ನೇ ಕ್ರಾಸ್‍ನಲ್ಲಿರುವ ಮನೆ ನಂ 2669 ರ ಮುಂಭಾಗ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂದಿಸಲೀಗಿದೆ ಎಂದು ಪೊಲೀಸ್ ಆಯುಕ್ತರವರ ಕಛೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತೀಳಿಸಿದ್ದಾರೆ.

ಸೈಯದ್ ಅಜ್ಮತ್, 27ವರ್ಷ, ಮಂಡಿ ಮೊಹಲ್ಲಾ, ಮೈಸೂರು. ಯಾಸ್ಮಿನ್ ತಾಜ್ @ ಜರೀನಾ ಭಾನು, 30ವರ್ಷ, ಮಂಡಿ ಮೊಹಲ್ಲಾ, ಮೈಸೂರು. ಎಂಬುವರುಗಳನ್ನು ಬಂಧಿಸಿ  ಅವರುಗಳ ವಶದಲ್ಲಿದ್ದ ಸುಮಾರು 35,000/-ರೂ ಬೆಲೆ ಬಾಳುವ 700 ಗ್ರಾಂ  ತೂಕದ ಗಾಂಜಾ, ಹಾಗೂ ನಗದು ಹಣ 1700/-ರೂ ಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆ ಕಾರ್ಯ ಮುಂದುವರೆದಿದೆ.
ಯಾಸ್ಮಿನ್ ತಾಜ್ ಈಕೆಯ ವಿರುದ್ದ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಈ ಹಿಂದೆಯೂ ಸಹ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ದಾಳಿ ಕಾರ್ಯವನ್ನು ಸಿ.ಸಿ.ಬಿ. ಘಟಕದ ಎ.ಸಿ.ಪಿ. ಶ್ರೀ. ಸಿ.ಗೋಪಾಲ್‍ರವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ಇನ್ಸ್‍ಪೆಕ್ಟರ್  ಪ್ರಸನ್ನಕುಮಾರ್, ಎ.ಎಸ್.ಐ. ರವರಾದ  ಶಾಂತರಾಜು, ಎಂ.ಡಿ ಶಿವರಾಜು ಹಾಗೂ ಸಿಬ್ಬಂದಿಗಳಾದ ಗಣೇಶ್, ರವಿ, ಮಹದೇವಪ್ಪ, ನಾಗುಬಾಯಿ, ಪಾರ್ವತಮ್ಮ, ಮಂಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಡೆಸಿರುತ್ತಾರೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರಾದ ಶ್ರೀ. ಬಿ. ದಯಾನಂದ, ಐ.ಪಿ.ಎಸ್. ರವರು ಪ್ರಸಂಶಿಸಿರುತ್ತಾರೆ

ಮಂಡ್ಯ ಕಾವೇರಿಗೆ ಬೆಂಬಲ ಸೂಚಿಸಿ ಚಳುವಳಿಯಲ್ಲಿ ಭಾಗಿಯಾಗಿದ್ದ ಮುರುಗ ಮಠದ ಶ್ರೀ ಶಿವಮೂರ್ತಿ ಮುರುಗರಾಜೇಂದ್ರ ಸ್ವಾಮೀಜಿ, .


 ದಿನಾಂಕ 24-09-2016 ಇಂದು ಮಂಡ್ಯ ನಗರದಲ್ಲಿ ತಮಿಳುನಾಡಿಗೆ ನೀರು ಹರಿಸಿರುವ ಕ್ರಮ ಮತ್ತು ಮುಂದಿನ ಕಾನೂನಾತ್ಮಕ ಹೋರಾಟದ ಹಿನ್ನಲೆಯಲ್ಲಿ ಕಾವೇರಿ ರೈತ ಹಿತರಕ್ಷಣಾ ಸಮಿತಿಯ ಹೋರಾಟವನ್ನು ಬೆಂಬಲಿಸಿ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಿಂದ ಬಸವಾಧಿ ಪ್ರಮಥ ಸ್ವಾಮೀಜಿಗಳಾದ ಚಿತ್ರದುರ್ಗ ಮುರುಗ ಮಠದ ಶ್ರೀ ಶಿವಮೂರ್ತಿ ಮುರುಗರಾಜೇಂದ್ರ ಸ್ವಾಮೀಜಿ, ಚಂದ್ರವನದ ಶ್ರೀ ತ್ರಿನೇತ್ರಾನಂದ ಸ್ವಾಮೀಜಿ, ಬೀದರ್‍ನ ಬಸವಾನಂದ ಸ್ವಾಮೀಜಿ, ದ್ಯಾವಪಟ್ಟಣದ ಸ್ವಾಮೀಜಿ, ತುಮಕೂರು ಮಠದ ಸವಾಮೀಜಿ ಮಂಡ್ಯ ನಗರದ ಸಂಜಯವøತ್ತಕ್ಕೆ ಆಗಮಿಸಿದಾಗ ಮಂಡ್ಯ ಜಿಲ್ಲಾ ರಾಷ್ಟ್ರೀಯ ಬಸವದಳದ ಜಿಲ್ಲಾಧ್ಯಕ್ಷ ವಕೀಲ ಎಂ. ಗುರುಪ್ರಸಾದ್ ಮಾಲಾರ್ಪಣೆ ಮಾಡಿ ಸ್ವಾಗತ ಕೋರಿದರು.




                                                       ಚಿತ್ರ ಬಿಡಿಸುವ ಸ್ಪರ್ಧೆ
       ಮೈಸೂರು.ಸೆ.24. ಮೈಸೂರು ದಸರಾ ಮಹೋತ್ಸವ -2016 ರ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಯಿಂದ ಸೆಪ್ಟೆಂಬರ್ 25 ರಂದು 10 ಗಂಟೆಯಿಂದ 12-30 ರವರೆಗೆ ಕಲಾಮಂದಿರದ ಆವರಣದಲ್ಲಿ ಮೂರು ವಿಭಾಗಗಳಲ್ಲಿ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದೆ.
      ಚಿತ್ರ ರಚನೆಗೆ ಬೇಕಾಗುವ ಬಣ್ಣ ಇತ್ಯಾದಿಗಳನ್ನು ಸ್ಪರ್ಧಿಗಳೇ ತರುವುದು ಡ್ರಾಯಿಂಗ್ ಪೇಪರ್‍ಗಳನ್ನು ಮಾತ್ರ ಸಮಿತಿಯಿಂದ ಒದಗಿಸಲಾಗುವುದು. ಮೊದಲನೇ ವಿಭಾಗ 1ನೇ ತರಗತಿಯಿಂದ 4ನೇ ತರಗತಿಯವರೆಗೆ, ಎರಡನೇ ವಿಭಾಗ 5 ರಿಂದ 8ನೇ ತರಗತಿಯವರೆಗೆ, ಮೂರನೇ ವಿಭಾಗ 9 ರಿಂದ 12ನೇ ತರಗತಿಯವರೆಗೆ ಮಕ್ಕಳು ಸ್ಪರ್ಧೆಗೆ ಹಾಜರಾಗುವ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಿಂದ ಅನುಮೋದಿಸಿದ ಪತ್ರ ಅಥವಾ ಶಾಲಾ ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ ಎಂದು ದಸರಾ ಮಹೋತ್ಸವ-2016 ಹಾಗೂ ಲಲಿತಕಲೆ ಮತ್ತು ಕರಕುಶಲಸಮಿತಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2513225 ನ್ನು ಸಂಪರ್ಕಿಸಬಹುದು.
ಪಾರ್ಕ್ ನಿರ್ವಹಣೆ: ಆಸಕ್ತರು ಮನವಿ ಸಲ್ಲಿಸಿ
    ಮೈಸೂರು.ಸೆ.24.ಮೈಸೂರು ನಗರ ವ್ಯಾಪ್ತಿಯಲ್ಲಿರುವ ಪಾರ್ಕ್, ವೃತ್ತ ಮತ್ತು ರಸ್ತೆ ವಿಭಜನೆ ಹಾಗೂ ಸ್ಮಶಾನಗಳನ್ನು ಆಸಕ್ತ ಸಾರ್ವಜನಿಕರು, ಸಂಘ ಸಂಸ್ಥೆಗಳು, ಕಂಪನಿಗಳು ಹಾಗೂ ಕೈಗಾರಿಕೆಗಳು ಸ್ವತ: ನಿರ್ವಹಣೆ ಮಾಡಲು ಉತ್ಸುಕರಾಗಿದ್ದು, ನಿರ್ವಹಣೆ ಮಾಡಲು ಇಚ್ಫಿಸಿ ಮುಂದೆ ಬಂದಲ್ಲಿ, ಸದರಿ ಪಾರ್ಕ್‍ನಲ್ಲಿ ಗರಿಷ್ಠ  3ಘಿ2 ಅಳತೆಯ ಪ್ರಾಯೋಜತ್ವದ ಬೋರ್ಡ್ ಅಳವಡಿಸಲು ಪಾಲಿಕೆಯ ಅನುಮೋದನೆಯೊಂದಿಗೆ ಅಳವಡಿಸಬಹುದಾಗಿದೆ. ಆಸಕ್ತರು ಮನವಿಯನ್ನು ನೀಡಲು ಅಕ್ಟೋಬರ್ 15 ರೊಳಗೆ  ಮೈಸೂರು ಮಹಾನಗರಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವ ಸಂಭ್ರಮ : ಸೆ. 25 ರಂದು ವಿವಿಧ ಕಾರ್ಯಕ್ರಮ   
    ಮೈಸೂರು.ಸೆ.24.ನಾಡಹಬ್ಬ ಮೈಸೂರು ದಸರಾ ಮಹೋತ್ಸವ -2016 ರ ಯುವ ದಸರಾ ಉಪಸಮಿತಿ ವತಿಯಿಂದ ಯುವ ಸಂಭ್ರಮವು ಸೆಪ್ಟೆಂಬರ್ 23 ರಿಂದ 28 ರವರೆಗೆ  ಪ್ರತಿ ದಿನ ಸಂಜೆ 6 ಗಂಟೆ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ನಡೆಯಲಿದೆ.
      ಸೆಪ್ಟೆಂಬರ್ 25 ರಂದು ಸಂಜೆ 6 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಹಾಸನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನೃತ್ಯರೂಪಕ, ಕೊಳ್ಳೇಗಾಲ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕನ್ನಡ ಸ್ನಾತಕೋತ್ತರ ಕೇಂದ್ರದ ವತಿಯಿಂದ ನೃತ್ಯರೂಪಕ, ಹೊಳೇನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ದೇಶಭಕ್ತಿ ಸಂಸ್ಕøತಿ ಪರಂಪರೆ, ಮೈಸೂರಿನ ರಾಮಕೃಷ್ಣನಗರದ ನಿರೀಕ್ಷೆ ವಿಶೇಷ ಮಕ್ಕಳ ಶಾಲೆ ವತಿಯಿಂದ ಗೋವಿನ ಹಾಡು, ಹುಣಸೂರು ತಾಲ್ಲೂಕಿನ ಹನಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನೃತ್ಯರೂಪಕ, ಸುಳ್ಯಾ ತಾಲ್ಲೂಕಿನ ಕುಕ್ಕೆ ಸುಬ್ರಮ್ಮಣ್ಯದ ಕೆ.ಎಸ್.ಎಸ್. ಕಾಲೇಜಿನ ವತಿಯಿಂದ ನೃತ್ಯರೂಪಕ, ಚಾಮರಾಜನಗರ ಜೆ.ಎಸ್.ಎಸ್. ಕಾಲೇಜಿನವತಿಯಿಂದ ಜಾನಪದ ನೃತ್ಯ, ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನ ವತಿಯಿಂದ ಮಹಿಳಾ ಸಬಲೀಕರಣ, ಚಾಮರಾಜನಗರ ಕೊಳ್ಳೇಗಾಲ ಜೆ.ಎಸ್.ಎಸ್. ಮಹಿಳಾ ಕಾಲೇಜಿನ ವತಿಯಿಂದ ಜಲ ಸಂರಕ್ಷಣೆ, ಮೈಸೂರಿನ ಹಿಂದೂಸ್ಥಾನ ಪ್ರಥಮ ದರ್ಜೆ ಕಾಲೇಜಿನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕುರಿತು ಕಾರ್ಯಕ್ರಮ, ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ವತಿಯಿಂದ ನೃತ್ಯರೂಪಕ, ಹುಣಸೂರು ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕಪಲ್ ನೃತ್ಯ, ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕಂಸಾಳೆ ನೃತ್ಯ, ಶಿವಮೊಗ್ಗ ಜಿಲ್ಲೆ ಸಾಗರ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ಫ್ಯೂಜನ, ಚಾಮರಾಜನಗರ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಜಲಸಂರಕ್ಷಣೆ ಮತ್ತು ಕಾಡಿನ ಸಂರಕ್ಷಣೆ, ಮೈಸೂರು ಜೆ.ಎಸ್.ಎಸ್. ಲಾ ಕಾಲೇಜಿನ ವತಿಯಿಂದ ಸಾಂಪ್ರದಾಯಿಕ ನೃತ್ಯ, ಹೊಳೇನರಸೀಪುರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನೃತ್ಯರೂಪಕ, ಹಾಸನ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ವತಿಯಿಂದ ಜಲ ಸಂರಕ್ಷಣೆ, ಮೈಸೂರಿನ ಜೆ.ಎಸ್.ಎಸ್. ಲಾ ಕಾಲೇಜಿನ ವತಿಯಿಂದ ಆಫ್ರಿಕನ್ ವಿದ್ಯಾರ್ಥಿಗಳಿಂದ ಬ್ರೇಕ್ ಡ್ಯಾನ್ಸ್ ಹಾಗೂ ಮೈಸೂರಿನ ಕುವೆಂಪುನಗರ ಬಸುದೇವ್ ಸೋಮಾನಿ ಕಾಲೇಜಿನ ವತಿಯಿಂದ ಭಾರತೀಯ ಸಮಕಾಲೀನ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. 
ಯೋಗ ಆರೋಗ್ಯ ಭಾರತಿ ಕಾರ್ಯಕ್ರಮ
    ಮೈಸೂರು.ಸೆ.24-ಮೈಸೂರು ದಸರಾ ಮಹೋತ್ಸವ, ಯೋಗ ದಸರಾ ಉಪಸಮಿತಿ -2016ರ ವತಿಯಿಂದ ಯೋಗ ಆರೋಗ್ಯ ಭಾರತಿ ಕಾರ್ಯಕ್ರಮ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 10-30 ಗಂಟೆಗೆ ಅಗ್ರಹಾರದ ನಟರಾಜ ಸಭಾ ಭವನದಲ್ಲಿ ಆಯೋಜಿಸಿದೆ.
    ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಬಿ.ಎಲ್. ಭೈರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಎಂ.ಕೆ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು. ಮೈಸೂರಿನ ಶಂಕರಮಠ ರಸ್ತೆಯ ಹೊಸಮಠದ ಚಿದಾನಂದ ಸ್ವಾಮಿ ಅವರು ದಿವ್ಯ ಸಾನಿಧ್ಯ ವಹಿಸುವರು.
    ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ ನಜಿûೀರ್ ಅಹಮದ್, ಮೈಸೂರು ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ವನಿತಾ ಪ್ರಸನ್ನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಜಿ. ನಟರಾಜ್, ಮೈಸೂರು ಮಹಾನಗರ ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಾಮಾಜಿಕ ಭದ್ರತಾ ಯೋಜನೆ : ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ
     ಮೈಸೂರು.ಸೆ.24. ಮೈಸೂರು ತಾಲ್ಲೂಕು ತಹಶೀಲ್ದಾರ್ ಕಚೇರಿ ವತಿಯಿಂದ ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ದಾಪ್ಯ, ಸಂದ್ಯಾಸುರಕ್ಷಾ, ವಿಧವಾ, ಮೈತ್ರಿ, ಮನಸ್ವಿನಿ ಮತ್ತು ಅಂಗವಿಕಲ ವೇತನ ಪಡೆಯುತ್ತಿರುವ ಆಧಾರ ಸಂಖ್ಯೆಯನ್ನು ಜಿಲ್ಲಾ ಖಜಾನೆ ವೇತನ ಬಡವಾಡೆಗೆ ನೋಂದಾಯಿಸಲಾಗುತ್ತಿದೆ.
     ಗ್ರಾಮಾಂತರ ಮತ್ತು ನಗರದ ಎಲ್ಲಾ ರೀತಿಯ ವೇತನ ಪಡೆಯುತ್ತಿರುವ ಇಲ್ಲಿಯವರೆಗೆ ಆಧಾರ ದಾಖಲೆ ನೀಡದ ಫಲಾನುಭವಿಗಳು ವೇತನ ಮಂಜೂರಾತಿ ಆದೇಶ ಪ್ರತಿ, ಎಂ ಒ ರಶೀದಿ, ಬ್ಯಾಂಕ್, ಅಂಚೆ ಪಾಸ್ ಪುಸ್ತಕದ ನಕಲು ಪ್ರತಿ ಮತ್ತು ಆಧಾರ ಕಾರ್ಡ್ ನಕಲು ಪ್ರತಿಯನ್ನು ಲಗತ್ತಿಸಿ ಗ್ರಾಮಾಂತರ ಪ್ರದೇಶದವರು ಆಯಾ ಹೋಬಳಿ ನಾಡಕಚೇರಿಯಲ್ಲಿ ಮತ್ತು ನಗರ ಪ್ರದೇಶದವರು ನಗರದ ನಜûರ್‍ಬಾದ್ ನಲ್ಲಿರುವ ಮಿನಿ ವಿಧಾನಸೌಧ, ತಾಲ್ಲೂಕು ಕಚೇರಿ ಕೊಠಡಿ ಸಂಖ್ಯೆ 5 ರಲ್ಲಿ ನಗರ ರಾಜಸ್ವ ನಿರೀಕ್ಷಕರಿಗೆ ಅಕ್ಟೋಬರ್ 15 ರೊಳಗೆ ತಲುಪಿಸಲು ಕೋರಲಾಗಿದೆ. ತಪ್ಪಿದ್ದಲ್ಲಿ ವೇತನ ಬರುವುದು ನಿಂತುಹೋಗುತ್ತದೆ ಎಂಬುದಾಗಿ ಮೈಸೂರು ತಾಲ್ಲೂಕು ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.        
ವಿಶೇಷ ಚಿಕಿತ್ಸಾ ಶಿಬಿರ
      ಮೈಸೂರು.ಸೆ.24.ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಆಯುರ್ವೇದ ಸಿದ್ಧಾಂತ ಸ್ನಾತಕೋತ್ತರ ಕೇಂದ್ರದಲ್ಲಿ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಆಗುವ ಅತಿರಕ್ತಸ್ರಾವ ಹಾಗೂ ಆದರಿಂದ ಆಗುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉಚಿತ ವಿಶೇಷ ಚಿಕಿತ್ಸಾ ಶಿಬಿರವನ್ನು ಸೆಪ್ಟೆಂಬರ್ 23 ರಿಂದ ಸೆಪ್ಟೆಂಬರ್ 30 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆಯೋಜಿಸಲಾಗಿದೆ. 
    ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ  9480585771ನ್ನು ಸಂಪರ್ಕಿಸಬಹುದು.

ಸೆಪ್ಟೆಂಬರ್ 26 ರಂದು ಸಂದರ್ಶನ
      ಮೈಸೂರು.ಸೆ.24.ಮೈಸೂರು ವಿಶ್ವವಿದ್ಯಾನಿಲಯದ ನಾಲ್ಕು ಅಧ್ಯಯನ ವಿಭಾಗಗಳಿಗೆ ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಸೆಪ್ಟೆಂಬರ್ 26 ರಂದು ಸಂದರ್ಶನ ನಿಗಧಿಪಡಿಸಲಾಗಿದೆ. ಅರ್ಜಿ ಸಲ್ಲಿಸಿರುವವರು ಸಂದರ್ಶನ ನಡೆಯಲಿರುವ ಸಮಯ ಮತ್ತು ವಿಷಯಗಳಿಗೆ ವಿಶ್ವವಿದ್ಯಾನಿಲಯದ ವೆಬ್‍ಸೈಟ್ ತಿತಿತಿ.uಟಿi-mಥಿsoಡಿe.ಚಿಛಿ.iಟಿ   ನೋಡುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                           ಸೆಪ್ಟೆಂಬರ್ 25 ರಂದು ಅಕಾಶವಾಣಿಯಲ್ಲಿ ಋಣಮುಕ್ತ
   ಮೈಸೂರು, ಸೆ. 10 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆಕಾಶವಾಣಿ ರೂಪಿಸಿರುವ ವಿನೂತನ ಕಾರ್ಯಕ್ರಮ ಭಾಗ್ಯವಾಣಿ-ಅಭಿವೃದ್ಧಿ ಯೋಜನೆಗಳೊಂದಿಗೆ ಅರ್ಥಪೂರ್ಣ ಪಯಣದ  4ನೇ ಸರಣಿಯಲ್ಲಿ ಋಣಮುಕ್ತ - ಹೊಸ ಬದುಕಿನ ಆಶಯಕ್ಕೆ ಮುನ್ನಡಿ  ಕಾರ್ಯಕ್ರಮ ಸೆಪ್ಟೆಂಬರ್ 25 ರಂದು ರಾತ್ರಿ 7 ರಿಂದ 7-30ರವರೆಗೆ ರಾಜ್ಯದ 13 ಆಕಾಶವಾಣಿ ಕೇಂದ್ರಗಳ ಮೂಲಕ ರಾಜ್ಯಾದ್ಯಂತ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವ್‍ಮೂರ್ತಿ  ಅವರು ನಿರ್ಮಿಸಿದ್ದಾರೆ.
    ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಗ್ರಾಮೀಣ ಜನರ ಆಡುನುಡಿಯಲ್ಲಿ ಋಣಮುಕ್ತ ಯೋಜನೆಯ  ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ. ಫಲಾನುಭವಿಗಳು ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ. ಸುಶ್ರಾವ್ಯ ಹಾಡುಗಳೊಂದಿಗೆ ಯೋಜನೆ ಕುರಿತು ಸಂವಾದ ಕೂಡ ನಡೆಯಲಿದೆ.
      ಸರ್ಕಾರ ರೂಪಿಸಿರುವ ಯೋಜನೆಯನ್ನು  ಪರಿಣಾಮಕಾರಿಯಾಗಿ ತಿಳಿಸುವುದೇ ಭಾಗ್ಯವಾಣಿ ಸರಣಿಯ ಮುಖ್ಯ ಆಶಯವಾಗಿದೆ. ಈ ಕಾರ್ಯಕ್ರಮ ನವೆಂಬರ್ 27 ರವರೆಗೆ ಪ್ರತಿ ಭಾನುವಾರ ರಾತ್ರಿ 7 ರಿಂದ 7-30 ರವರೆಗೆ ಅರ್ಧ ಗಂಟೆ ಪ್ರಸಾರವಾಗಲಿದೆ.  ಅಕಾಶವಾಣಿ ಮೂಲಕ ಪ್ರಸಾರವಾಗುವ ವಿವಿಧ ಯೋಜನೆಯ ಮಾಹಿತಿಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್ ವಿಶುಕುಮಾರ್ ಅವರು ಕೋರಿದ್ದಾರೆ

Friday 23 September 2016

ಕಾವೇರಿ ಚಳುವಳಿಯಲ್ಲಿ ಪತ್ರಕರ್ತರು ಭಾಗಿಯಾಗಿ ಬೆಂಬಲ ಸೂಚಿಸಿದರು.


ಕಾವೇರಿ ಚಳುವಳಿಯಲ್ಲಿ ಬಸ್ಸ್ ಮಾಲಿಕರು,ತಾಲ್ಲೂಕು ಪಂಚಾಯತ್ ಸದಸ್ಯರು ಭಾಗಿ.




ಪ್ಯಾಲೇಸ್ ಆನ್ ವೀಲ್ಸ್ : ಆನ್ ಲೈನ್ ಮೂಲಕ ಟಿಕೇಟ್ ಖರೀದಿಮಾಡಬಹುದು

                         ಪ್ಯಾಲೇಸ್ ಆನ್ ವೀಲ್ಸ್ : ಆನ್ ಲೈನ್ ಮೂಲಕ ಟಿಕೇಟ್ ಖರೀದಿಮಾಡಬಹುದು
ಮೈಸೂರು.ಸೆ.23.ಪ್ರವಾಸೋದ್ಯಮ ಇಲಾಖೆ ವತಿಯಿಂದ ದಸರಾ ಮಹೋತ್ಸವ-2016 ರ ಸಂದರ್ಭದಲ್ಲಿ ಪ್ರವಾಸಿಗರಿಗಾಗಿ ಜಿಲ್ಲಾಡಳಿತದ ವತಿಯಿಂದ ಅರಮನೆಗಳ ನಗರ ಮೈಸೂರಿನಲ್ಲಿ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ಸುಗಳಲ್ಲಿ “ಪ್ಯಾಲೇಸ್ ಆನ್ ವೀಲ್ಸ್” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಪ್ರವಾಸದಲ್ಲಿ ಅರಮನೆಗಳ ಬಗ್ಗೆ ನುರಿತ ಮಾರ್ಗದರ್ಶಿಗಳಿಂದ ವಿವರಣೆಗಳನ್ನು ನೀಡಲಾಗುವುದು. ಆಸಕ್ತ ಪ್ರವಾಸಿಗರು ಈ ವಿನೂತನ ಕಾರ್ಯಕ್ರಮದ ಸೊಬಗನ್ನು ಸವಿಯಲು ಟಿಕೇಟ್‍ಗಳನ್ನು ಆನ್‍ಲೈನ್ ಮುಖಾಂತರ ಬುಕಿಂಗ್ ಮಾಡಬಹುದಾಗಿರುತ್ತದೆ. ದಿನಾಂಕ 22.09.2016 ರ ಬೆಳಿಗ್ಗೆ 10.30 ರಿಂದ ಆನ್‍ಲೈನ್‍ನಲ್ಲಿ ಟಿಕೇಟ್ ಅನ್ನು ಖರೀಧಿಸಲು ಚಾಲನೆ ನೀಡಲಾಗಿದೆ ಹಾಗೂ ಎಲ್ಲಾ ಕೆ.ಎಸ್.ಆರ್.ಟಿ.ಸಿ. ಬುಕಿಂಗ್ ಕೇಂದ್ರಗಳಲ್ಲಿ ಟಿಕೇಟ್‍ಗಳನ್ನು ಖರೀಧಿಸಬಹುದಾಗಿದೆ. ವೆಬ್‍ಸೈಟ್ ತಿತಿತಿ.ಞsಡಿಣಛಿ.iಟಿ ಹಾಗೂ ಉಪ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, # 2, ಹೋಟೆಲ್ ಮಯೂರ ಹೊಯ್ಸಳ ಕಾಂಪ್ಲೆಕ್ಸ್, ಜೆ.ಎಲ್.ಬಿ. ರಸ್ತೆ, ಮೈಸೂರು – 570005, ದೂರವಾಣಿ ಸಂಖ್ಯೆ : 0821- 2422096, ಮೊಬೈಲ್ ಸಂಖ್ಯೆ 7760990820 ಸಂಪರ್ಕಿಸಬಹುದು

Thursday 22 September 2016

ಮೈಸೂರು -ವಿವಿಧ ಸಂಘಟನೆಗಳಿಂದ ಕಾವೇರಿ ಚಳುವಳಿ.

 ಕುರುಬೂರು ಶಾಂತಕುಮಾರ್ ನೇತ್ರತ್ವದಲ್ಲಿ ಕಾವೇರಿಗಾಗಿ ಮೈಸೈರಿನಲ್ಲಿ ಚಳುವಳಿ.





ಜೆಡಿಎಸ್ ವಿದ್ಯಾರ್ಥಿ ಘಟಕದಿಂದ ಕಾವೇರಿಗಾಗಿ ಮೈಸೂರಿನಲ್ಲಿ ಚಳುವಳಿ.
 ಅರಸು ಚಿಂತಕರ ಚಾವಡಿ ವೇಧಿಕೆಯಿಂದ ಕಾವೇರಿಗಾಗಿ ಮೈಸೂರಿನಲ್ಲಿ ಹೋರಾಟ.
ಕಾವೇರಿಗಾಗಿ ಎಂ.ಕೆ.ಸೋಮಶೇಖರ್ ನೇತ್ರತ್ವದಲ್ಲಿ ಪತ್ರ ಚಳುವಳಿ

ಸೆಪ್ಟೆಂಬರ್ 23 ರಂದು ವಿದ್ಯುತ್ ವ್ಯತ್ಯಯ

                                  ಸೆಪ್ಟೆಂಬರ್ 23 ರಂದು ವಿದ್ಯುತ್ ವ್ಯತ್ಯಯ
ಮಂಡ್ಯ ಸೆಪ್ಟೆಂಬರ್ 22. ದಿನಾಂಕ 23.09.2016 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ ವಿ.ಸಿ.ಫಾರಂ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಂಡಿರುವುದರಿಂದ ವಿ.ಸಿ.ಫಾರಂ, ಶಿವಳ್ಳಿ , ದುದ್ದ,  ಬಿ.ಹಟ್ನ, ಬೇವಕಲ್ಲು, ಹುಲಿಕೆರೆ, ಚಂದಗಾಲು, ಮಾಚಗೌಡನಹಳ್ಳಿ, ಹುಲ್ಲೇನಹಳ್ಳಿ, ಹೊಳಲು ಹಾಗೂ ಈ ಸುತ್ತ ಮುತ್ತಲಿನ ಗ್ರಾಮಗಳಿಗೆ ವಿದ್ಯುತ್‍ನಲ್ಲಿ ವ್ಯತಯ ಉಂಟಾಗುವುದರಿಂದ ಕಂಪನಿಯೊಂದಿಗೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಅಭಿಯಂತರರಾದ ಎ.ಎನ್.ರವಿಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                                             ಕನ್ನಡ ಪುಸ್ತಕ ಮೇಳ : ಅರ್ಜಿ ಆಹ್ವಾನ
ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ:1-10-2016 ರಿಂದ 9-10-2016ರವರೆಗೆ ಮೈಸೂರಿನಲ್ಲಿ ದಸರಾ ಕನ್ನಡ ಪುಸ್ತಕ ಮೇಳ-2016ನ್ನು ಏರ್ಪಡಿಸಲಾಗಿದೆ. ಪುಸ್ತಕ ಮಾರಾಟಕ್ಕೆ ಮಳಿಗೆ ಅವಶ್ಯವಿರುವ ಪುಸ್ತಕ ಮಾರಾಟಗಾರರು ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ದಿನಾಂಕ:28-9-2016 ರಂದು ಸಂಜೆ 5.00 ಗಂಟೆಯೊಳಗೆ ಆಡಳಿತಾಧಿಕಾರಿಗಳು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ ಬೆಂಗಳೂರು ಇವರಿಗೆ ಅರ್ಜಿಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಆಡಳಿತಾಧಿಕಾರಿಗಳು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ ಬೆಂಗಳೂರು-560002, ದೂರವಾಣಿ ಸಂಖ್ಯೆ:22484516/22107704 ನ್ನು ಸಂಪರ್ಕಿಸಬಹುದು.

                                   ಸೆಪ್ಟೆಂಬರ್ 24 ರಂದು ವಾರ್ಷಿಕ ಸಾಮಾನ್ಯ ಸಭೆ
ಮಂಡ್ಯ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಇದರ 2015-16ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಸೆಪ್ಟೆಂಬರ್ 24 ರಂದು ಶನಿವಾರ ಬೆಳಿಗ್ಗೆ 10.30 ಘಂಟೆಗೆ ರೈತ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಮಂಡ್ಯ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನ್‍ಮುಲ್‍ನಿಂದ ಹೈನುಗಾರಿಗೆ ರೈತರಿಗೆ ಸಿಗುವಂತ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು-ಉಮೇಶ್.

ಭಾರತೀನಗರ.ಸೆ.22-ಮಂಡ್ಯ ಮನ್‍ಮುಲ್‍ನಿಂದ ಹೈನುಗಾರಿಗೆ ರೈತರಿಗೆ ಸಿಗುವಂತ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನ್‍ಮುಲ್ ನಿರ್ದೇಶಕ ಉಮೇಶ್ ತಿಳಿಸಿದರು.
 ಇಲ್ಲಿಗೆ ಸಮೀಪದ ಮುಟ್ಟನಹಳ್ಳಿ ಹಾಲು ಉತ್ಪಾಧಕರ ಸಹಕಾರ ಸಂಘದ ಸರ್ವಸದಸ್ಯರ ಮಹಾಸಭೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 ಹೈನುಗಾರಿಕೆ ರೈತರಿಗೋಸ್ಕರವೇ ಎಲ್‍ಐಸಿ ಜನಶ್ರೀಭೀಮಾ ಯೋಜನೆಯಡಿ 65 ರೂ ಹಣ ಪಾವತಿಸಿದಂತ ಸದಸ್ಯರಿಗೆ ಆಕಸ್ಮಿಕವಾಗಿ ಅಂಗವಿಕಲರಾದವರಿಗೆ 70 ಸಾವಿರ ರೂ, ಅಥವಾ ಮರಣ ಹೊಂದಿದವರಿಗೆ 30 ಸಾವಿರ ರೂ ನೀಡಲಾಗುವುದು. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
  ಸಂಘದ ಕಾರ್ಯದರ್ಶಿ ಎಂ.ಬಿ.ಬೋರಯ್ಯ ಮಾತನಾಡಿ, ಪ್ರಸಕ್ತ ವರ್ಷ 5.71 ಲಕ್ಷ  ಹಾಲುಉತ್ಪಾಧಕರಿಂದ ಸಂಘಕ್ಕೆ ಆದಾಯ ದೊರಕಿದೆ. ಮುಂದಿನ ದಿನಗಳಲ್ಲಿ ಮರಣ ಪರಿಹಾರ ನಿಧಿ ಸ್ಥಾಪನೆಯನ್ನು ಸಂಘದಿಂದ ಮಾಡಲಾಗುವುದು ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಗಂಗಾಧರ್, ರೈತರು ಗುಣಮಟ್ಟದ ಹಾಲು ವಿತರಣೆ ಮಾಡಿದರೆ ಸಂಘವನ್ನು ಮತ್ತಷ್ಟು ಅಭಿವೃದ್ದಿ ಪಡಿಸಬಹುದೆಂದರು. 
 ಸಭೆಯಲ್ಲಿ 2015-16 ನೇ ಸಾಲಿನ ನಿವ್ವಳ ಲಾಭ ವಿಲಯವಾರಿ ಮಾಡುವುದರ ಬಗ್ಗೆ ಜಮಾಖರ್ಚು, ಲಾಭನಷ್ಟ, ಆಸ್ತಿ ಜವಬ್ದಾರಿ ವರದಿಯನ್ನು ಪರಿಶೀಲಿಸಿ ಅಂಗೀಕರಿಸಲಾಯಿತು.
  ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಮಕ್ಕಳು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದಂತಹ ವಿದ್ಯಾರ್ಥಿಗಳಿಗೆ ಹಾಗೂ ಹಸು, ಎಮ್ಮೆಯಿಂದ ಹೆಚ್ಚುಹಾಲು ವಿತರಣೆ ಮಾಡಿದಂತಹ ರೈತರಿಗೆ ಬಹುಮಾನ ವಿತರಿಸಲಾಯಿತು.
       ಹಾಲಿನ ದರ ಏರಿಕೆಗೆ ಆಗ್ರಹ:-
 ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಬರದಿಂದಾಗಿ ಪಶುಸಾಕಾಣೆ ಮಾಡಲು ತೀವ್ರಕಷ್ಟಪಡುವಂತಾಗಿದೆ. ಇದರಿಂದ ಮನ್‍ಮುಲ್‍ನವರು ಸಹಕಾರ ಸಂಘಗಳಿಗೆ ಪೂರೈಸುವ ಹಾಲಿನ ದರವನ್ನು ಪ್ರತೀ ಲೀಟರ್‍ಗೆ 2 ರೂಪಾಯಿ ಏರಿಕೆ ಮಾಡುವಂತೆ ಸಭೆಯಲ್ಲಿ ಸರ್ವ ಸದಸ್ಯರು ಆಗ್ರಹಿಸಿದರು.
  ಪ್ರಸ್ತುತ ಸಂದರ್ಭ ಬರಗಾಲದಿಂದ ರೈತರು ತತ್ತರಿಸಿದ್ದು, ಮಳೆಯಿಲ್ಲದೆ ರೈತರು ಕಳೆದ ಅಂಗಾಮಿನಲ್ಲಿ ಯಾವುದೇ ಬೆಳೆಗಳನ್ನು ಹೊಡ್ಡಿಲ್ಲ. ಭತ್ತದ ಬೆಳೆಯನ್ನು ಬೆಳೆದಿದ್ದರೆ ಒಣ ಹುಲ್ಲು ಸಿಗುತ್ತಿತ್ತು. ಸಕಾಲದಲ್ಲಿ ಮಳೆ ಬಿದ್ದಿದ್ದರೆ ಹಸಿರು ಮೇವಿನ ಕೊರತೆಯೂ ನೀಗುತ್ತಿತ್ತು. ಆದರೆ ಮಳೆಯೇ ಇಲ್ಲದೆ ಪಶುಗಳ ಸಾಕಣೆ ಮಾಡುವಲ್ಲಿ ರೈತರು ಹರಸಾಹಸಪಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
  ಹೈನುಗಾರಿಕೆಯನ್ನೇ ನೆಚ್ಚಿಕೊಂಡಿರುವುದರಿಂದ ಕೌಟುಂಬಿಕ ನಿರ್ವಹಣೆಯೂ ಕಷ್ಟವಾಗಿದೆ. ಆದ್ದರಿಂದ ಬೆಲೆಏರಿಕೆಯಾದಲ್ಲಿ ಸ್ವಲ್ಪವಾದರೂ ಚೇತರಿಕೆ ಕಾಣಬಹುದೆಂದು ತಿಳಿಸಿದರು.
ಇದೇ ವೇಳೆ ನಾಡಗೌಡ ಎಂ.ವೀರಯ್ಯ, ಮನ್‍ಮುಲ್ ವಿಸ್ತರಣಾಧಿಕಾರಿ ಎ.ನಂಜುಂಡಸ್ವಾಮಿ, ಸಂಘದ ಉಪಾಧ್ಯಕ್ಷ ಕೆಂಪೇಗೌಡ, ಸದಸ್ಯರಾದ ಕಾಳೇಗೌಡ, ಎಂ.ಎಸ್.ಪುರುಸೋತ್ತಮ್, ರಾಮಲಿಂಗಯ್ಯ, ಎಂ.ಟಿ.ವೆಂಕಟೇಶ್, ಎಂ.ಸಿ.ಶಿವಲಿಂಗೇಗೌಡ, ಪುಟ್ಟಾಚಾರಿ, ಕಲಾವತಿ, ಗೌರಮ್ಮ,  ಹಾಲು ಪರೀಕ್ಷಕ ಎಂ.ಪಿ.ಅರ್ಕೇಶ್, ಎಂ.ಇ.ಜವರಯ್ಯ, ಎಂ.ಸುರೇಶ್ ಸೇರಿದಂತೆ ಇತರರಿದ್ದರು.

ತಾಯಿ ಚಾಮುಂಡೇಶ್ವರಿಗೆ ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಲ್ಲಜಮ್ಮ ಪೂಜೆ.

  

  ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಲ್ಲಜಮ್ಮ ಅವರು ನೂರಾರು ಮಹಿಳೆಯರೊಂದಿಗೆ ಸೆಪ್ಟೆಂಬರ್ 23 ರಂದು ಬೆಳಿಗ್ಗೆ 9 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಬೆಳಿಗ್ಗೆ 7 ಗಂಟೆಗೆ ಮೆಟ್ಟಿಲುಗಳ ಮೂಲಕ ಚಾಮುಂಡಿಬೆಟ್ಟವನ್ನು ಹತ್ತಿ ರಾಜ್ಯದಲ್ಲಿ ಉದ್ಬವಿಸಿರುವ ನೀರಿನ ಸಮಸ್ಯೆಯನ್ನು ನಿವಾರಿಸುವಂತೆ ಪೂಜೆ ಸಲ್ಲಿಸುವರು.
              ದಸರಾ ರಜೆ ಅವಧಿಯನ್ನು ಮಾರ್ಪಾಡಿಸಲು ಶಿಕ್ಷಣ ಆಯುಕ್ತರಿಗೆ ಜಿಲ್ಲಾಧಿಕಾರಿಗಳ ಪತ್ರ
      ಮೈಸೂರು.ಸೆ.22. ಈ ಬಾರಿ ಮಕ್ಕಳಿಗಿಲ್ಲ ದಸರಾ ರಜಾ–ಮಜಾ, ಮಕ್ಕಳಿಗಿಲ್ಲ ದಸರಾ ಹಬ್ಬದ ಪೂರ್ಣ ರಜಾ-ಮಜಾ ಎಂಬ ಶೀರ್ಷಿಕೆಯಡಿ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ  ರಂದೀಪ್ ಡಿ. ಅವರು ದಸರಾ ಸಾಂಸ್ಕøತಿಕ ಹಬ್ಬದಲ್ಲಿ ಮಕ್ಕಳು ಸಂತೋಷವಾಗಿ ಪಾಲ್ಗೊಳ್ಳಲಿ ಎಂಬ ಸದುದ್ದೇಶದಿಂದ ದಸರಾ ರಜೆ ಅವಧಿ ಮಾರ್ಪಾಡಿಸುವಂತೆ ಬೆಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಬುಧವಾರ ಪತ್ರ ಬರೆದಿದ್ದಾರೆ.
     ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಮಕ್ಕಳ ದಸರಾ ಕಾರ್ಯಕ್ರಮ ಅಕ್ಟೋಬರ್ 4 ರಿಂದ 6 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಾಂಸ್ಕøತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಸಹಾ ಆಯೋಜಿಸಲಾಗಿದೆ.
    ಶಿಕ್ಷಣ ಇಲಾಖೆಯು ದಸರಾ ಮಧ್ಯಾಂತರ ರಜೆಯನ್ನು ಅಕ್ಟೋಬರ್ 9 ರಿಂದ 27 ರವರೆಗೆ ಘೋಷಿಸಿತ್ತು. ದಸರಾ ಕಾರ್ಯಕ್ರಮಗಳು ಅಕ್ಟೋಬರ್ 1 ರಿಂದ ಪ್ರಾರಂಭವಾಗಿ ಅಕ್ಟೋಬರ್  11 ರವರೆಗೆ ನಡೆಯಲಿದೆ. ಅಕ್ಟೋಬರ್ 9 ರಿಂದ ದಸರಾ ರಜೆ ಪ್ರಾರಂಭವಾದಲ್ಲಿ ಮಕ್ಕಳು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು  ರಜೆಯ ಅವಧಿಯನ್ನು ಮಾರ್ಪಾಡಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
     ಮಕ್ಕಳ ಸಾಂಸ್ಕøತಿಕ ಬೆಳವಣಿಗೆ ದಸರಾ ಒಂದು ಉತ್ತಮ ಕಾರ್ಯಕ್ರಮವಾಗಿದ್ದು, ದಸರಾ ಮಧ್ಯಂತರ ರಜಾ ಅವಧಿಯನ್ನು ಅಕ್ಟೋಬರ್ 3 ರಿಂದ 21 ರವರೆಗೆ ಘೋಷಿಸುವಂತೆ ಅವರು ಆಯುಕ್ತರಲ್ಲಿ ಕೋರಿದ್ದಾರೆ.
ಸಂಪೂರ್ಣ ಬೆಂಬಲ
       ಮೈಸೂರು.ಸೆ.22.ಸರ್ವೋಚ್ಫ ನ್ಯಾಯಾಲಯದ ಇತ್ತೀಚಿನ ಕಾವೇರಿ ನದಿ ನೀರಿನ ತೀರ್ಪಿನಂತೆ ನದಿ ನೀರನ್ನು ತಮಿಳುನಾಡಿಗೆ ಬಿಡುವುದರ ಬಗ್ಗೆ ವಿರೋಧಿಸಿ ರಾಜ್ಯದ ಜನರ ಹತಾಷೆ ಬುಗಿಲೆದ್ದು ತೀವ್ರವಾಗಿ ಪ್ರತಿಭಟಿಸುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಎಲ್ಲಾ ರಾಜಕೀಯ ಪಕ್ಷಗಳ ಹಾಗೂ ಸಂಘಟನೆಗಳೊಡನೆ ಚರ್ಚಿಸಿ ಮಂತ್ರಿ ಮಂಡಲದಲ್ಲಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರನ್ನು ಬಿಡಬಾರದೆಂದು ತೀರ್ಮಾನಿಸಿದ್ದು, ಈ ಹಿನ್ನಲೆಯಲ್ಲಿ ದಿನಾಂಕ 23-09-2016 ರಂದು ಶುಕ್ರವಾರ ವಿಧಾನ ಸಭೆಯಲ್ಲಿ ನಿರ್ಣಯವನ್ನು ಮಂಡಿಸಿ ಸದನದ ಸಂಪೂರ್ಣ ಒಪ್ಪಿಗೆಯನ್ನು ಪಡೆಯಲು ಮಂಡಿಸಿರುವ ನಿರ್ಣಯಕ್ಕೆ ನನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಕೇಂದ್ರ ಸಚಿವರು ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ವಿ. ಶ್ರೀನಿವಾಸ ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
      ಮೈಸೂರು.ಸೆ.22.-ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು ಸ್ವಚ್ಛ ಭಾರತ ಅಭಿಯಾನವನ್ನು 2ನೇ ಅಕ್ಟೋಬರ್ 2014 ರಿಂದ ಪ್ರಾರಂಭಿಸಿದ್ದು, ಸದರಿ ಯೋಜನೆಯು ಮುಂದಿನ 5 ವರ್ಷಗಳ ಕಾಲಾವಧಿಯವರೆಗೆ (2ನೇ ಅಕ್ಟೋಬರ್ 2019 ರವರೆಗೆ) ಜಾರಿಯಲ್ಲಿರುತ್ತದೆ. ಸದರಿ ಯೋಜನೆಯ ಪ್ರಮುಖ ಉದ್ದೇಶ ಬಯಲು ಶೌಚ ಮುಕ್ತ ನಗರಗಳನ್ನು ಸೃಜಿಸುವುದು ಆಗಿರುತ್ತದೆ. ಈ ಸಂಬಂದಿಸಿದಂತೆ, ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ  ಬಯಲು ಶೌಚ ಮುಕ್ತ ವಾರ್ಡ್‍ಗಳನ್ನು ಘೋಷಿಸಬೇಕಿದೆ.
ಪ್ರತಿ ವಾರ್ಡ್‍ನಲ್ಲಿ ಬಯಲು ಶೌಚ ಮುಕ್ತ ವಾರ್ಡ್ ಪ್ರದೇಶ ಎಂದು ಘೋಷಿಸಲು,  ಆಯಾ ವಾರ್ಡಿನ ಎಲ್ಲಾ ಶಾಲೆಗಳಲ್ಲಿ ಹಾಗೂ ಮನೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯ ಉಪಯೋಗಿಸುತ್ತಿರುವ ಬಗ್ಗೆ  ಹಾಗೂ ಸ್ವ ಸಹಾಯ ಸಂಘಗಳು ತಮ್ಮ ವಾರ್ಡ್‍ನ ಎಲ್ಲಾ ನಿವಾಸಿಗಳ ಮನೆಯಲ್ಲಿ ಶೌಚಾಲಯ ವ್ಯವಸ್ಥೆಯಿದ್ದು ಹಾಗೂ ಪ್ರತಿನಿತ್ಯ ಉಪಯೋಗಿಸುತ್ತಿರುವ ಬಗ್ಗೆ ಉಪ ಘೋಷಣೆಯನ್ನು ಪಡೆದು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಒಟ್ಟು 65 ವಾರ್ಡ್‍ಗಳಲ್ಲಿ ವಾರ್ಡ್ ನಂ.48, ನಾರ್ಥ್ ಈಸ್ಟ್ ಆಫ್ ಎನ್.ಆರ್.ಮೊಹಲ್ಲಾ(ಕಲ್ಪವೃಕ್ಷ ನಗರ) ವನ್ನು ಹೊರತುಪಡಿಸಿ, 64 ವಾರ್ಡ್‍ಗಳನ್ನು ಬಯಲು ಶೌಚ ಮುಕ್ತ ವಾರ್ಡ್‍ಗಳೆಂದು ಘೋಷಿಸಲಾಗಿತ್ತು.
ಪ್ರಸ್ತುತ ಉಳಿದ ಒಂದು ವಾರ್ಡ್ ಆದ, ವಾರ್ಡ್ ನಂ. 48 ನ ನಾರ್ಥ್ ಈಸ್ಟ್ ಆಫ್ ಎನ್.ಆರ್.ಮೊಹಲ್ಲಾ(ಕಲ್ಪವೃಕ್ಷ ನಗರ) ಅನ್ನು ಬಯಲು ಶೌಚ ಮುಕ್ತ ವಾರ್ಡ್ ಎಂದು ಘೋಷಿಲು ವಾರ್ಡ್‍ನ ಎಲ್ಲಾ ಶಾಲೆಗಳಲ್ಲಿ ಹಾಗೂ ಮನೆಗಳಲ್ಲಿ ವಿದ್ಯಾರ್ಥಿಗಳು ಶೌಚಾಲಯ ಉಪಯೋಗಿಸುತ್ತಿರುವ ಬಗ್ಗೆ  ಹಾಗೂ ಸ್ವ ಸಹಾಯ ಸಂಘಗಳು ತಮ್ಮ ವಾರ್ಡ್‍ನ ಎಲ್ಲಾ ನಿವಾಸಿಗಳ ಮನೆಯಲ್ಲಿ ಶೌಚಾಲಯ ವ್ಯವಸ್ಥೆಯಿದ್ದು ಹಾಗೂ ಪ್ರತಿನಿತ್ಯ ಉಪಯೋಗಿಸುತ್ತಿರುವ ಬಗ್ಗೆ ಉಪ ಘೋಷಣೆಯನ್ನು ಪಡೆದು ದಿನಾಂಕ:- 17-09-2016. ರಂದು ನಡೆದ ಕಾರ್ಪೋರೇಷನ್ ಕೌನ್ಸಿಲ್ ಸಭೆಯಲ್ಲಿ  ಮಂಡಿಸಿ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ 48. ನಾರ್ಥ್ ಈಸ್ಟ್ ಆಫ್ ಎನ್.ಆರ್.ಮೊಹಲ್ಲಾ(ಕಲ್ಪವೃಕ್ಷ ನಗರ) ಅನ್ನು ಬಯಲು ಶೌಚ ಮುಕ್ತ ವಾರ್ಡ್ ಎಂದು ಘೋಷಿಸಿ ಅನುಮೋದನೆಯನ್ನು ಪಡೆಯಲಾಗಿರುತ್ತದೆ. ನಗರ ವ್ಯಾಪ್ತಿಯಲ್ಲಿ ಮೂತ್ರ ವಿಸರ್ಜನೆ ಅಥವಾ ಬಯಲು ಶೌಚ ಮಾಡುತ್ತಿರುವುದು ಕಂಡು ಬಂದಲ್ಲಿ ಮೊದಲನೇ ಬಾರಿಗೆ ರೂ. 100/- ದಂಡ ವಿಧಿಸಲಾಗುವುದು ಹಾಗೂ ಪುನರಾವರ್ತನೆಯಾದಲ್ಲಿ ರೂ. 200/- ಗಳ ದಂಡ ವಿಧಿಸಲಾಗುವುದು.
      ಬಯಲು ಶೌಚ ವಾರ್ಡ್ ಎಂದು ಘೋಷಿಸಿರುವ ಬಗ್ಗೆ ಆಕ್ಷೇಪಣೆ ಹಾಗೂ ಪ್ರತಿಕ್ರಿಯೆ ಇದ್ದಲಿ, ಸಾರ್ವಜನಿಕರು 23.09.2016 ರೊಳಗೆ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ, ಮೈಸೂರು ಇವರಿಗೆ ಸಲ್ಲಿಸುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಅಂಚೆ ಸಂತೆ

     ಮೈಸೂರು.ಸೆ.22.ನಂಜನಗೂಡು ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ವತಿಯಿಂದ  ಚಾಮರಾಜನಗರ ಜಿಲ್ಲೆಯ ಬೇಗೂರು ಹೋಬಳಿಯಲ್ಲಿ ಅಂಚೆ ಸಂತೆಯನ್ನು ಸೆಪ್ಟೆಂಬರ್ 27 ರಂದು ಹಮ್ಮಿಕೊಳ್ಳಲಾಗಿದೆ.
    ಈ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಅವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣಾ ಅಂಚೆ ಜೀವ ವಿಮೆ ಮತ್ತು ಅಂಚೆ ಜೀವಾ ವಿಮೆ ಮುಂತಾದ ಅಂಚೆ ಯೋಜನೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಸ್ವೀಕರಿಸಲಾಗುವುದು. ವಾಟಾಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ನಂಜನಗೂಡು ಅಂಚೆ ವಿಭಾಗದ ಅಂಚೆ ಅಧೀಕ್ಷಕ ಜಿ.ಸಿ. ಶ್ರೀನಿವಾಸ್ ಅವರು ಕೋರಿದ್ದಾರೆ

ವಿಷಯ : ಐಐಎಮ್‍ಬಿ ಕಾರ್ಯಕ್ರಮದಲ್ಲಿ ತೀಸ್ತಾ ಸೆತಲ್ವಾಡ್‍ಗೆ ವೇದಿಕೆ ನೀಡುತ್ತಿರುವುದನ್ನು ಯುವಮೋರ್ಚಾದಿಂದ ಖಂಡನೆ.

 ಐಐಎಮ್‍ಬಿ ಕಾರ್ಯಕ್ರಮದಲ್ಲಿ ತೀಸ್ತಾ ಸೆತಲ್ವಾಡ್‍ಗೆ ವೇದಿಕೆ ನೀಡುತ್ತಿರುವುದನ್ನು ಯುವಮೋರ್ಚಾದಿಂದ ಖಂಡನೆ.
  
ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಹಾಗೂ ದೇಶಕ್ಕೆ ಉತ್ತಮ ಕೊಡುಗೆಗಳನ್ನು, ಪ್ರತಿಭಾವಂತರನ್ನು ನೀಡುತ್ತಿರುವ ಬೆಂಗಳೂರಿನ ಐಐಎಮ್‍ಬಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್) ಸಂಸ್ಥೆಯು ‘ಥಿಂಕ್ ಈಸ್ಟ್-2016’ ಎಂಬ ಹೆಸರಿನ ಮೂರು ದಿನಗಳ ಮ್ಯಾನೇಜ್‍ಮೆಂಟ್ ಫೆಸ್ಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ದಿನಾಂಕ 23/08/2016 ರಂದು ದೇಶದ ವಿವಾದಿತ ಲೇಖಕಿ ತೀಸ್ತಾ ಸೇತಲ್ವಾಡ್‍ರನ್ನುಮುಖ್ಯ ಭಾಷಣಕಾರರಾಗಿ ಕರೆಸುತ್ತಿರುವುದನ್ನು ಯುವಮೋರ್ಚಾ ಕರ್ನಾಟಕದ ಅಧ್ಯಕ್ಷ ಪ್ರತಾಪ್ ಸಿಂಹ ತೀವ್ರವಾಗಿ ಖಂಡಿಸಿದ್ದಾರೆ.
ತೀಸ್ತಾ ಸೇತಲ್ವಾಡ್‍ರ ‘ಸಬ್ರಾಂಗ್ ಕಮ್ಯುನಿಕೇಷನ್ಸ್’ ಸಂಸ್ಥೆಯು ವಿದೇಶದಿಂದ ಲೆಕ್ಕವಿಲ್ಲದೇ ಹಣಗಳನ್ನು ಪಡೆದು ದೇಶದಲ್ಲಿ ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಗುಜರಾತ್‍ನ ಗೋಧ್ರಾ ಘಟನೆಯನ್ನು ಮುಂದಿಟ್ಟುಕೊಂಡು ಪ್ರಪಂಚದಾದ್ಯಂತ ದೇಣಿಗೆ ಸಂಗ್ರಹಿಸಿ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ, ಗುಜರಾತ್‍ನ ಆಗಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ನರೇಂದ್ರ ಮೋದಿಯವರನ್ನು ಸಿಕ್ಕಿಸುವ ಷಡ್ಯಂತ್ರ ಮಾಡಿದ್ದು ಸುಪ್ರಿಮ್ ಕೋರ್ಟ್‍ನ ಆದೇಶದಿಂದಲೇ ಜಗಜ್ಜಾಹಿರಾಗಿದೆ. ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಮೋಸ ಮಾಡಲು ಯತ್ನಿಸಿದ ಇಂತಹ ವ್ಯಕ್ತಿಯನ್ನು ಯುವ ವಿದ್ಯಾರ್ಥಿಗಳೆದುರು ಮಾದರಿ ವ್ಯಕ್ತಿ ಎಂಬಂತೆ ಕಾರ್ಯಕ್ರಮಕ್ಕೆ ಕರೆದಿರುವುದು ಶೋಚನೀಯ. ತೀಸ್ತಾ ಸೆತಲ್ವಾಡ್‍ರ ಸಂಸ್ಥೆಯ ಮೇಲೆ ಹಣಕಾಸಿನ ವಿಚಾರದಲ್ಲಿ ಇ.ಡಿ (ಎನ್‍ಫೋರ್ಸ್‍ಮೆಂಟ್ ಡೈರಕ್ಟರೇಟ್) ಹಾಗೂ ಸಿಬಿಐನಿಂದ ತನಿಖೆ ನಡೆಯುತ್ತಿದೆ. ಸರ್ವೋಚ್ಛ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿರುವ ತೀಸ್ತಾ ಸೆತಲ್ವಾಡ್, ತನ್ನ ಸಂಸ್ಥೆಯ ಮುಖಾಂತರ ನಮ್ಮ ದೇಶದಲ್ಲಿ ನಕ್ಸಲ್ ಹಾಗೂ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡುತ್ತಿದ್ದು, ಈ ರೀತಿಯ ದೇಶ ವಿರೋಧಿ ಕೆಲಸಗಳಲ್ಲಿ ತೊಡಗಿರುವ ಇಂತಹ ವ್ಯಕ್ತಿಗೆ, ಪ್ರತಿಷ್ಠಿತ ಐಐಎಮ್‍ಬಿ ಸಂಸ್ಥೆಯುವೇದಿಕೆ ನೀಡುತ್ತಿರುವುದು ಖಂಡನೀಯವಾಗಿದೆ. ಇನ್ನು ಮುಂದೆ ಇಂತಹ ವ್ಯಕ್ತಿಗಳನ್ನು ಆಹ್ವಾನಿಸುವ ಮೊದಲು ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಐಐಎಮ್‍ಬಿ ವಿರುದ್ಧ ಯುವಮೋರ್ಚಾ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ಧಾರೆ.

Wednesday 21 September 2016

ಕೃಷ್ಣರಾಜಪೇಟೆ. ಕಾವೇರಿ ನದಿಯ ನೀರಿನ ಹಂಚಿಕೆಯ ವಿಚಾರದಲ್ಲಿ ವಾಸ್ತವಾಂಶವನ್ನು ಗಣನೆಗೆ ತೆಗೆದುಕೊಳ್ಳದೇ ತಮಿಳುನಾಡಿಗೆ ಪ್ರತಿದಿನ 6ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಯಬಿಡಬೇಕೆಂದು ಅವೈಜ್ಞಾನಿಕವಾದ ತೀರ್ಪನ್ನು ನೀಡಿರುವ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ ತೆಂಡೇಕೆರೆ ಬಾಳೆಹೊನ್ನೂರು ಶಾಖಾಮಠದ ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ತಮಿಳುನಾಡು ಸರ್ಕಾರದ ಏಜೆಂಟರಂತೆ ಕೆಲಸ ಮಾಡುತ್ತಿರುವ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳ ವರ್ತನೆಯು ಖಂಡನಾರ್ಹವಾಗಿದೆ. ಕಾವೇರಿ ನ್ಯಾಯಾಧಿಕರಣ ಮಂಡಳಿಯು 3ಸಾವಿರ ಕ್ಯೂಸೆಕ್ಸ್ ನಂತೆ ಕಾವೇರಿ ನೀರನ್ನು ಹರಿಸಬೇಕೆಂದು ತೀರ್ಪ ನೀಡಿದ್ದರೆ ಗಾಯದ ಮೇಲೆ ಬರೆಎಳೆಯುವಂತೆ ನ್ಯಾಯ ನೀಡಿ ಅನ್ಯಾಯವನ್ನು ಸರಿಪಡಿಸಬೇಕಾದ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳು 6ಸಾವಿರ ಕ್ಯೂಸೆಕ್ಸ್ ನೀರನ್ನು ಸೆಪ್ಟಂಬರ್ 27ರ ವೆರೆಗೆ ಹರಿಸಬೇಕೆಂದು ಆದೇಶ ನೀಡಿರುವುದು ಎಷ್ಟಮಟ್ಟಿಗೆ ಸರಿ ಎಂಬುದನ್ನು ಸ್ವತಃ ನ್ಯಾಯಾಧೀಶರೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ತೆಂಡೇಕೆರೆ ಬಾಲೆಹೊನ್ನೂರು ಶಾಖಾಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದರು.
ಕಾವೇರಿಕೊಳ್ಳದಲ್ಲಿ ಜನಸಾಮಾನ್ಯರಿಗೆ ಕುಡಿಯುವ ನೀರಿಗೆ ತೀವ್ರವಾದ ಹಾಹಾಕಾರ ಉಂಟಾಗಿರುವುದು ಬಹಿರಂಗ ಸತ್ಯವಾಗಿದೆ. ವಾಸ್ತವಾಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರೂ ಕಣ್ಣುಮುಚ್ಚಿಕೊಂಡು ಏಕಪಕ್ಷೀಯ ತೀರ್ಪನ್ನು ನೀಡುವ ನ್ಯಾಯಮೂರ್ತಿಗಳ ಕ್ರಮದಿಂದಾಗಿ ದೇಶದಲ್ಲಿ ನ್ಯಾಯವೇ ಸತ್ತುಹೋಗಿರುವಂತಹ ವಾತಾವರಣ ಕಂಡು ಬರುತ್ತಿದೆ. ಸುಪ್ರೀಂಕೋರ್ಟಿನ ತೀರ್ಪು ರಾಜ್ಯದ ರೈತರ ಪಾಲಿಗೆ ಮರಣಶಾಸನವಾಗಿದೆ. ಕಾವೇರಿಕೊಳ್ಳದ ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೇ ಖಾಲಿ ಹೊಡೆಯುತ್ತಿವೆ. ನಮ್ಮ ಕೆರೆ-ಕಟ್ಟೆಗಳನ್ನು ತುಂಬಿಸಲು ನೀರು ಬಿಡದ ಸರ್ಕಾರವು ಅಣೆಕಟ್ಟೆಗಳಲ್ಲಿ ಕುಡಿಯುವ ನೀರಿಗಾಗಿ ಸಂಗ್ರಹಿಸಿ ಇಟ್ಟಿದ್ದ ನೀರನ್ನು ತಮಿಳುನಾಡಿನ ರೈತರು ಸಾಂಭಾ ಬೆಳೆಯನ್ನು ಬೆಳೆಯಲು ಹರಿಸುವಂತೆ ತೀರ್ಪೂ ನೀಡುವುದು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ಸುಪ್ರೀಂಕೋರ್ಟಿನ ಆದೇಶವನ್ನು ಧಿಕ್ಕರಿಸಿ ತಮಿಳುನಾಡಿಗೆ ನೀರನ್ನು ಹರಿಸಬಾರದು. ಕಾವೇರಿಕೊಳ್ಳದ ಭಾಗದ ಸಂಸದರು ಮತ್ತು ಶಾಸಕರು ಸಾಮೂಹಿಕವಾಗಿ ರಾಜೀನಾಮೆಯನ್ನು ನೀಡುವ ಮೂಲಕ ಸಾಂವಿಧಾನಿಕ ಬಿಕ್ಕಟ್ಟನ್ನು ನಿರ್ಮಿಸಿ ಪ್ರಧಾನಮಂತ್ರಿಗಳು ಹಾಗೂ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ನ್ಯಾಯ ದೊರಕಿಸಿಕೊಡುವಂತೆ ಒತ್ತಡ ಹಾಕಬೇಕು ಎಂದು ಗಂಗಾಧರಶ್ರೀಗಳು ಒತ್ತಾಯಿಸಿದರು. ಧರಣಿ ಸತ್ಯಾಗ್ರಹದಲ್ಲಿ ಆಸರೆ ಸಮಾಜಸೇವಾ ಟ್ರಸ್ಟಿನ ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ರೈಲ್ವೆ ಮಾರ್ಗದ ಹೋರಾಟ ಸಮಿತಿಯ ಸಂಚಾಲಕ ಸಿಂದಘಟ್ಟ ಶಿವಲಿಂಗೇಗೌಡ, ಹಿಂದೂಪರ ಸಂಘಟನೆಗಳ ಕಾರ್ಯಕರ್ತರಾದ ಬಾಲು, ವಾಸುದೇವ, ಆರ್.ಜಗಧೀಶ್ ಸಮಾಜಸೇವಾ ಟ್ರಸ್ಟಿನ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಜಗಧೀಶ್, ಪುರಸಭೆಯ ಸದಸ್ಯರಾದ ದಿನೇಶ್, ಹೇಮಂತ್‍ಕುಮಾರ್, ಡಿ.ಪ್ರೇಮಕುಮಾರ್, ಮಾಜಿಸದಸ್ಯ ಕೆ.ಆರ್.ನೀಲಕಂಠ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಲೋಕೇಶ್ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ: 21-ಏಖPಇಖಿಇ-01   ಕೆ.ಆರ್.ಪೇಟೆ ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ತಮಿಳುನಾಡಿನ ಪರವಾಗಿ ಅವೈಜ್ಞಾನಿಕ ತೀರ್ಪನ್ನು ನೀಡಿರುವ ಸುಪ್ರೀಂಕೋರ್ಟಿನ ನ್ಯಾಯಾಧೀಶರ ವರ್ತನೆಯನ್ನು ಖಂಡಿಸಿ ತೆಂಡೇಕೆರೆ ಬಾಳೆಹೊನ್ನೂರು ಶಾಖಾಮಠದ ಶ್ರೀ ಗಂಗಾಧರಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಧರಣಿ ಉಪವಾಸ ಸತ್ಯಾಗ್ರಹ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಕೃಷ್ಣರಾಜಪೇಟೆ. ಪತ್ರಕರ್ತರು ಸಮಾಜಮುಖಿಯಾಗಿ ಕೆಲಸಮಾಡಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿತೀಡುತ್ತಾ ಜನಪರವಾಗಿ ಕೆಲಸಮಾಡಿ ನ್ಯಾಯವನ್ನು ಎತ್ತಿಹಿಡಿದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿ ವೃತ್ತಿಗೌರವವನ್ನು ಕಾಪಾಡಬೇಕು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಲೋಕೇಶ್ ಕರೆ ನೀಡಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿ ಕಟ್ಟಡದಲ್ಲಿರುವ ಸಂಘದ ಕಛೆರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ನೀಡಿದ ಪತ್ರಕರ್ತರ ಗುರುತಿನ ಕಾರ್ಡುಗಳನ್ನು ವಿತರಿಸಿ ಮಾತನಾಡಿದರು.
ಪತ್ರಕರ್ತರು ಸಂವಿಧಾನದ ನಾಲ್ಕನೇ ಅಂಗವಾಗಿ ಕರ್ತವ್ಯವನ್ನು ನಿರ್ವಹಿಸುತ್ತಾ ಸಮಾಜದ ಕಣ್ಣನ್ನು ತೆರೆಸಿ ಸಮಸ್ಯೆಗಳನ್ನು ಎತ್ತಿಹಿಡಿದು ಜನಸಾಮಾನ್ಯರ ನೋವು ನಲಿವುಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿರುವುದರಿಂದ ಪತ್ರಕಥ್ರ ಬಗ್ಗೆ ಸಮಾಜದಲ್ಲಿ ಗೌರವದ ಭಾವನೆಯಿದೆಯಾದ್ದರಿಂದ ಪತ್ರಕರ್ತರು  ಕೇವಲ ಕಾಟಾಚಾರಕ್ಕಾಗಿ ಕೆಲಸ ಮಾಡದೇ ವೃತ್ತಿಗೌರವವನ್ನು ಎತ್ತಿಹಿಡಿದು ದೇಶ ಕಾಯುವ ಯೋಧರಂತೆ ಕೆಲಸ ಮಾಡುತ್ತಾ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯಬೇಕು. ಪತ್ರಕರ್ತರ ನಡೆ-ನುಡಿಯು ಇತರರಿಗೆ ಮಾದರಿಯಾಗಿರಬೇಕು ಎಂದು ಲೋಕೇಶ್ ಕಿವಿಮಾತು ಹೇಳಿದರು.
ಸಂಘದಲ್ಲಿ ಭಿನ್ನಮತವಿಲ್ಲ: ಕೆ.ಆರ್.ಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಯಾವುದೇ ಗುಂಪುಗಾರಿಕೆಯಾಗಲೀ, ಭಿನ್ನಮತವಾಗಲೀ ಇಲ್ಲ, ನಾವೆಲ್ಲರೂ ಒಂದಾಗಿದ್ದೇವೆ. ಪತ್ರಿಕಾಧರ್ಮವನ್ನು ಎತ್ತಿಹಿಡಿದು ಸಮಾಜ ಮುಖಿಯಾಗಿ ಕೆಲಸ ಮಾಡುತ್ತೇವೆಂದು ಪ್ರಮಾಣ ಮಾಡಿದ್ದೇವೆ. ನಮ್ಮಲ್ಲಿ ಕಾಟಾಚಾರಕ್ಕಾಗಿ ಪತ್ರಿಕಾರಂಗದಲ್ಲಿ ಕೆಲಸ ಮಾಡುವವರು ಯಾರೂ ಇಲ್ಲ, ಹಾಗೆಯೇ ಸಂಘದ ನಿಯಮ ನಿಬಂಧನೆಗಳಿಗೆ ಬದ್ಧರಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿಯೇ ಕೆ.ಆರ್.ಪೇಟೆ ತಾಲೂಕು ಪತ್ರಕರ್ತರ ಸಂಘವು ಸದಾ ಕ್ರಿಯಾಶೀಲವಾಗಿ ಮುಂಚೂಣಿಯಲ್ಲಿದೆ. ಮುಂದಿನ ತಿಂಗಳು ನಮ್ಮ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಪತ್ರಕರ್ತರ ಕಾರ್ಯಾಗಾರವನ್ನು ನಡೆಸುವ ದಿಕ್ಕಿನಲ್ಲಿ ಜಿಲ್ಲಾ ಸಂಘದೊಂದಿಗೆ ಮಾತುಕತೆ ನಡೆಸಿದ್ದು ದಿನಾಂಕವು ನಿಗಧಿಯಾಗುವುದು ಮಾತ್ರ ಬಾಕಿಯಿದೆ. ಪತ್ರಕರ್ತರಾದ ನಾವೇ ಕಿತ್ತಾಡಿಕೊಂಡು ನಗೆಪಾಟಲಿಗೆ ಈಡಾಗದೇ, ನಮ್ಮ ನಮ್ಮಲ್ಲಿಯೇ ಸಮಸ್ಯೆಗಳನ್ನು ಬಗೆ ಹರಿಸಿಕೊಂಡು ಕೆಲಸ ಮಾಡೋಣ, ಸಂಘದ ಸಕ್ರೀಯ ಸದಸ್ಯರಲ್ಲಿ ಕೆಲವರಿಗೆ ಗುರುತಿನ ಚೀಟಿಯು ರಾಜ್ಯ ಸಂಘದಿಂದ ಬಂದಿಲ್ಲ, ಈ ಬಗ್ಗೆ ಜಿಲ್ಲಾಧ್ಯಕ್ಷರೊಂದಿಗೆ ಮಾತನಾಡಿ ಸಂಘದ ಸಕ್ರೀಐ ಸದಸ್ಯರೆಲ್ಲರಿಗೂ ಗುರುತಿನ ಕಾರ್ಡನ್ನು ಕೊಡಿಸಿಕೊಡುವ ಜೊತೆಗೆ ಸರ್ಕಾರದಿಂದ ಪತ್ರಕರ್ತರಿಗೆ ದೊರೆಯುವ ಸೌಲಭ್ಯಗಳನ್ನು ಕೊಡಿಸಿಕೊಡಲು ಸಂಘವು ಬದ್ಧವಾಗಿದೆ ಎಂದು ಹೇಳಿದ ಲೋಕೇಶ್ ಶಾಸಕರಾದ ನಾರಾಯಣಗೌಡ ಅವರು ಸಂಘವು ಸ್ವಂತ ಕಟ್ಟಡವನ್ನು ಹೊಂದುವ ದಿಕ್ಕಿನಲ್ಲಿ ಸೂಕ್ತವಾದ ನಿವೇಶನವನ್ನು ಪುರಸಭೆಯ ವತಿಯಿಂದ ಕೊಡಿಸಿಕೊಡುವ ಜೊತೆಗೆ ಕಟ್ಟಡದ ನಿರ್ಮಾಣಕ್ಕೆ ಶಾಸಕರ ಅನುಧಾನದಿಂದ 10ಲಕ್ಷರೂ ಹಣವನ್ನು ಕೊಡಲು ಬದ್ಧರಾಗಿದ್ದಾರೆ. ಪತ್ರಕರ್ತರಿಗೆ ನಿವೇಶನಗಳನ್ನು ಕೊಡಿಸಿಕೊಡುವ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಪುರಸಭೆಯ ಮುಖ್ಯಾಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ ಪತ್ರವ್ಯವಹಾರ ಮಾಡಿದ್ದಾರೆ. ಸಧ್ಯದಲ್ಲಿಯೇ ಫಲಕಾರಿಯಾಗುವ ಸಾಧ್ಯತೆಯಿದೆ ಎಂದು ವಿವರಿಸಿದರು.
ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಆರ್.ನೀಲಕಂಠ, ಪ್ರಧಾನ ಕಾರ್ಯದರ್ಶಿ ಅಪ್ಪನಹಳ್ಳಿ ಅರುಣ್, ಉಪಾಧ್ಯಕ್ಷ ಕೆ.ಎಸ್.ಸತೀಶ್, ನಿರ್ದೇಶಕರಾದ ಬಲ್ಲೇನಹಳ್ಳಿ ಮಂಜುನಾಥ್, ಹೆಚ್.ಬಿ.ಮಂಜುನಾಥ್, ಬಳ್ಳೇಕೆರೆ ಮಂಜುನಾಥ, ಹರಿಚರಣತಿಲಕ್, ಅಘಲಯ ತಮ್ಮಣ್ಣನಾಯಕ, ಆರ್.ಶ್ರೀನಿವಾಸ್, ಸಿಂಗನಹಳ್ಳಿ ಸುರೇಶ್, ಎಂ.ಎಸ್.ಮಂಜುನಾಥ್, ಕಾಡುಮೆಣಸಚಂದ್ರು, ಪ್ರವೀಣ್, ಕಿಕ್ಕೇರಿಶಂಭೂ, ಕಿಕ್ಕೇರಿಲೋಕೇಶ್, ಕಿಕ್ಕೇರಿ ಗೋವಿಂದರಾಜು, ಬೂಕನಕೆರೆ ಪ್ರಕಾಶ್, ಸೈಯ್ಯದ್‍ಖಲೀಲ್, ಹೊಸಹೊಳಲು ರಾಮಚಂದ್ರ, ಸಿಂಧಘಟ್ಟ ಮಹೇಶ್, ಬೂಕನಕೆರೆಕೃಷ್ಣ ಮತ್ತಿತರರು ಭಾಗವಹಿಸಿದ್ದರು.


Friday 16 September 2016

ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರ ಪ್ರವಾಸ ಕಾರ್ಯಕ್ರಮ

                                             ಪ್ರವಾಸ ಕಾರ್ಯಕ್ರಮ
     ಮೈಸೂರು.ಸೆ.16.ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಸೆಪ್ಟೆಂಬರ್ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಸೆಪ್ಟೆಂಬರ್ 17 ರಂದು ಮಧ್ಯಾಹ್ನ  1 ಗಂಟೆಗೆ ಮೈಸೂರಿಗೆ ಆಗಮಿಸಿದ ನಂತರ ಮೈಸೂರು ಜಗನ್ಮೋಹನ ಅರಮನೆಯಲ್ಲಿ ಮೈಸೂರು ಸಿಟಿ ಆರ್ಯವೈಶ್ಯ ಮಹಿಳಾ ಮಂಡಳಿಗಳ ಒಕ್ಕೂಟದಿಂದ ಆಯೋಜಿಸಿರುವ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ನಂತರ ಮೈಸೂರಿನಲ್ಲಿ ವಾಸ್ತವ್ಯ  ಹೂಡಲಿದ್ದಾರೆ. ಸೆಪ್ಟೆಂಬರ್ 18 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
     ಸೆಪ್ಟೆಂಬರ್ 19 ರಂದು ಬೆಳಿಗ್ಗೆ 8-30 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.  
ಪ್ರವಾಸ ಕಾರ್ಯಕ್ರಮ
   ಮೈಸೂರು.ಸೆ.16.ರಾಷ್ಟ್ರೀಯ ಪರಿಶಿಷ್ಟ ಪಂಗಡದ ಅಧ್ಯಕ್ಷರಾದ ಶ್ರೀ ಡಾ|| ರಾಮೇಶ್ವರ್ ಒರೋನ್, ಆಯೋಗದ ಜಂಟಿ ಕಾರ್ಯದರ್ಶಿಗಳಾದ ಅಶೋಕ ಪೈ, ಸಹಾಯಕ ನಿರ್ದೇಶಕರಾದ ಆರ್.ಕೆ.ದುಬೆ, ಆಪ್ತ ಕಾರ್ಯದರ್ಶಿ ಟಿ.ಡಿ. ಕುಕ್ರೆಜ ಅವರುಗಳ ಸೆಪ್ಟೆಂಬರ್ 19 ರಂದು ಹೆಚ್.ಡಿ.ಕೋಟೆ ಮೂಲಕ ಮೈಸೂರಿಗೆ ಆಗಮಿಸಿ ವಾಸ್ತವ್ಯ ಮಾಡುವರು. ಸೆಪ್ಟೆಂಬರ್ 20 ರಂದು ಬಿಳಿಗಿರಿರಂಗ ಬೆಟ್ಟಕ್ಕೆ ತೆರಳುವರು.
 ಬಹಿರಂಗ ಹರಾಜು
    ಮೈಸೂರು.ಸೆ.16.-ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಉಪ ನಿರ್ದೇಶಕರ ಕಾರ್ಯಾಲಯದಲ್ಲಿ ಹಳೆಯ ಅನುಪಯುಕ್ತ ಕನ್ನಡ-40 ಮತ್ತು ಇಂಗ್ಲೀಷ್ -79  ಬೆರಳಚ್ಚು ಯಂತ್ರಗಳು ಒಟ್ಟು 119 ಬೆರಳಚ್ಚು ಯಂತ್ರ ಹಾಗೂ ಒಂದು ದ್ವಿಪ್ರತಿ ಯಂತ್ರವನ್ನು ದಿನಾಂಕ 29-09-2016 ರಂದು ಮಧ್ಯಾಹ್ನ 12 ಗಂಟೆಗೆ ಟೆಂಡರ್ ಕಂ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.
   ಆಸಕ್ತರು ಟೆಂಡರ್‍ದಾರರು ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು, ಸರ್ಕಾರಿ ವಿಭಾಗೀಯ ಲೇಖನ ಸಾಮಗ್ರಿ ಮಳಿಗೆ, ಉಪ ನಿರ್ದೇಶಕರ ಕಾರ್ಯಾಲಯ, ಸರಸ್ವತಿಪುರಂ, ಮೈಸೂರು ದೂರವಾಣಿ ಸಂಖ್ಯೆ 0821-2343226/2540684 ನ್ನು ಸಂಪರ್ಕಿಸುವುದು.
    ಕೈತೋಟ ಮತ್ತು ತಾರಸಿ ತೋಟ
     ಮೈಸೂರು,ಸೆ.16.ತೋಟಗಾರಿಕೆ ಇಲಾಖೆ ವತಿಯಿಂದ ಕೈತೋಟ ಮತ್ತು ತಾರಸಿ ತೋಟಗಳ ಉತ್ತೇಜನ ಕಾರ್ಯಕ್ರಮದಡಿ ತರಕಾರಿ ಕಿಟ್‍ಗಳು ಮತ್ತು  ಸಾಮಾಗ್ರಿಗಳನ್ನು ವಿತರಣೆ  ಮಾಡಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಮೈಸೂರು ನಗರದಲ್ಲಿ ಮಾತ್ರ ಅನುಷ್ಠಾನಗೊಳಿಸುತ್ತಿದ್ದು, ಕೈತೋಟ ಕಾರ್ಯಕ್ರಮದಡಿ 294 ಫಲಾನುಭವಿಗಳು ಹಾಗೂ ತಾರಸಿ ಕಾರ್ಯಕ್ರಮದಡಿ ಸಾಮಾನ್ಯ ವರ್ಗಕ್ಕೆ 294 ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
      ಮೈಸೂರು ನಗರದಲ್ಲಿ ಕೈತೋಟ ಮತ್ತು ತಾರಸಿ ತೋಟ ನಿರ್ಮಾಣ ಮಾಡಲು ಆಸಕ್ತಿ ಹೊಂದಿರುವವರು ನಾಗರೀಕರು ಜಿಲ್ಲಾ ತೋಟಗಾರಿಕೆ ಸಂಘ ಕರ್ಜನ್ ಪಾರ್ಕ್ ಮೈಸೂರಿನಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಅರ್ಜಿಯನ್ನು ಅಕ್ಟೋಬರ್ 3 ರೊಳಗಾಗಿ ಸಲ್ಲಿಸುವುದು. ಈ ಹಿಂದೆ ಉಪಯೋಗ ಪಡೆದ ಫಲಾನುಭವಿಗಳು ಅರ್ಜಿ ಸಲ್ಲಿಸುವಂತಿಲ್ಲ.
     ಆಸಕ್ತಿಯುಳ್ಳ ಸಾಮಾನ್ಯ ಫಲಾನುಭವಿಗಳು ಅರ್ಜಿಯೊಂದಿಗೆ ಒಂದು ಭಾವಚಿತ್ರ, ವಿಳಾಸ ದಾಖಲಾತಿ ಹಾಗೂ ಪರಿಶಿಷ್ಟ ಜಾತಿ/ ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಲಗತ್ತಿಸಿ ಸಲ್ಲಿಸುವುದು. ಮೊದಲು ಸ್ವೀಕರಿಸಿದ ಅರ್ಜಿಗಳ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಿ ತರಕಾರಿ ಕಿಟ್ ಹಾಗೂ ತೋಟಗಾರಿಕೆ ಸಾಮಾಗ್ರಿಗಳನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ  ಮೊಬೈಲ್ ಸಂಖ್ಯೆ 7259123145 ನ್ನು ಸಂಪರ್ಕಿಸುವುದು.
ಸೆಪ್ಟೆಂಬರ್ 20 ರಿಂದ ಕೌನ್ಸಿಲಿಂಗ್
      ಮೈಸೂರು.ಸೆ.16.ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2016-17ನೇ ಸಾಲಿನ ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ವರ್ಗಾವಣೆ ಕೌನ್ಸಿಲಿಂಗ್ ಸೆಪ್ಟೆಂಬರ್ 20 ರಿಂದ 23 ರವರೆಗೆ ಜಿಲ್ಲಾ ಉಪನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಇಲ್ಲಿ ನಡೆಯಲಿದೆ.
ಸೆಪ್ಟೆಂಬರ್ 20 ರಂದು ಸಹ ಶಿಕ್ಷಕರು  ಕ್ರಮ ಸಂಖ್ಯೆ 1 ರಿಂದ 400 ವರೆಗೆ ಕೌನ್ಸಿಲಿಂಗ್ ನಡೆಯಲಿದೆ. ಸೆಪ್ಟೆಂಬರ್ 21 ರಂದು ಸಹ ಶಿಕ್ಷಕರು  ಕ್ರಮ ಸಂಖ್ಯೆ 401 ರಿಂದ 850 ವರೆಗೆ ಕೌನ್ಸಿಲಿಂಗ್ ನಡೆಯಲಿದೆ. ಸೆಪ್ಟೆಂಬರ್ 22 ರಂದು ಸಹ ಶಿಕ್ಷಕರು  ಕ್ರಮ ಸಂಖ್ಯೆ 851 ರಿಂದ 1350 ವರೆಗೆ ಕೌನ್ಸಿಲಿಂಗ್ ನಡೆಯಲಿದೆ. ಸೆಪ್ಟೆಂಬರ್ 23 ರಂದು ಸಹ ಶಿಕ್ಷಕರು  ಕ್ರಮ ಸಂಖ್ಯೆ 1351 ರಿಂದ 1749 ವರೆಗೆ, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಕ್ರಮ ಸಂಖ್ಯೆ 1 ರಿಂದ 75 ರವರೆಗೆ ಹಾಗೂ ವಿಶೇಷ ಶಿಕ್ಷಕರು ಕ್ರಮ ಸಂಖ್ಯೆ 1 ರಿಂದ 92 ರವರೆಗೆ ಕೌನ್ಸಿಲಿಂಗ್ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಕುಡಿತದ ಚಟದಿಂದ ಮುಕ್ತರಾಗಿ ನೆಮ್ಮದಿಯ ಜೀವನವನ್ನು ನಡೆಸಬೇಕು - ಎಲ್.ದೇವರಾಜ ಕರೆ

ಕುಡಿತದ ಚಟದಿಂದ ಮುಕ್ತರಾಗಿ ನೆಮ್ಮದಿಯ ಜೀವನವನ್ನು ನಡೆಸಬೇಕು - ಎಲ್.ದೇವರಾಜ ಕರೆ
ಕೃಷ್ಣರಾಜಪೇಟೆ. ಕುಡಿತದಿಂದ ಸಾಮಾಜಿಕವಾಗಿ ನಿಂದನೆಗೆ ಒಳಗಾಗಿ ಪಶ್ಚಾತ್ತಾಪ ಪಡಬೇಕಾಗುವುದಲ್ಲದೇ ಆರೋಗ್ಯವನ್ನೂ ಹಾಳು ಮಾಡಿಕೊಂಡು ನೆಮ್ಮದಿಯಿಲ್ಲದೇ ನರಳಬೇಕಾಗುತ್ತದೆ. ಆದ್ದರಿಂದ ಕುಡಿತದ ಚಟದಿಂದ ಮುಕ್ತರಾಗಿ ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್.ದೇವರಾಜ ಕರೆ ನೀಡಿದರು.
ಅವರು ತಾಲೂಕಿನ ಅಕ್ಕಿಹೆಬ್ಬಾಳಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸಭಾಭವನದಲ್ಲಿ ಬೆಳ್ತಂಗಡಿಯ ಅಖಿಲಕರ್ನಾಟಕ ಜನಜಾಗೃತಿ ವೇದಿಕೆ, ಕರ್ನಾಟಕ ರಾಜ್ಯು ಮಧ್ಯಪಾನ ಸಂಯಮ ಮಂಡಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಮಧ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಕುಡಿತವೆಂಬ ಚಟಕ್ಕೆ ಒಮ್ಮೆ ದಾಸರಾದರೆ ಸಾಕು, ಕುಡಿತವೇ ನಮ್ಮ ಜೀವನಪರ್ಯಂತ ದಾಸನನ್ನಾಗಿ ಮಾಡಿಕೊಂಡು, ಕುಟುಂಬದ ನೆಮ್ಮದಿ, ಆರೋಗ್ಯ ಎಲ್ಲವನ್ನೂ ಹಾಳು ಮಾಡಿ ಅನಾರೋಗ್ಯದಿಂದ ನರಳುವಂತೆ ಮಾಡುತ್ತದೆ. ಆದ್ದರಿಂದ ಯುವಜನರು ಕುಡಿತ ಸೇರಿದಂತೆ ಯಾವುದೇ ದುಷ್ಛಟಗಳ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಂಡು, ಅನಾರೋಗ್ಯ ಪೀಡಿತರಾಗಿ ಅಕಾಲ ಮೃತ್ಯುವಿಗೆ ಬಲಿಯಾಗಬಾರದು ಎಂದು ದೇವರಾಜು ಕಿವಿಮಾತು ಹೇಳಿದರು.
ಯುವಜನರು ಶಿಸ್ತು, ಸಂಯಮ, ಪರೋಪಕಾರ ಸೇರಿದಂತೆ ಜೀವನದಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಜೀವನ ನಡೆಸಬೇಕು. ಸಮಾಜದ ನೆಮ್ಮದಿಯನ್ನು ಹಾಳು ಮಾಡುವ, ಯುವಜನರನ್ನು ಹಾದಿ ತಪ್ಪಿಸಿ ಸಮಾಜ ಕಂಟಕರನ್ನಾಗಿ ಮಾಡುವ ಯಾವುದೇ ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಕುಡಿತಕ್ಕೆ ಬಲಿಯಾದ ವ್ಯಕ್ತಿಯನ್ನು ಸಮಾಜವು ನಿಂದಿಸಿ ಅವಹೇಳನ ಮಾಡುವುದಲ್ಲದೇ ಸಮಾಜಮುಖಿ ಕೆಲಸಗಳಿಗೆ ಭಾಗವಹಿಸದಂತೆ ತಿರಸ್ಕರಿಸುವುದರಿಂದ, ಅಂತಹ ಚಟಕ್ಕೆ ಬಲಿಯಾದ ವ್ಯಕ್ತಿಯು ಬದುಕಿದ್ದೂ ಸತ್ತಂತೆ. ಆದ್ದರಿಂದ ಗ್ರಾಮೀಣ ಭಾಗದ ಜನರು ಕುಡಿತ, ಡ್ರಗ್ಸ್ ಸೇರಿದಂತೆ ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗದೇ ಪೌಷ್ಠಿಕಾಂಶಗಳಿಂದ ಕೂಡಿರುವ ಆಹಾರ ಪದಾರ್ಥಗಳನ್ನು ಸೇವಿಸಿ, ಯೋಗಾಸನ, ಪ್ರಾಣಾಯಾಮ, ಆಟೋಟಗಳು ಸೇರಿದಂತೆ ಒಳ್ಳೆಯ ಮಾರ್ಗದಲ್ಲಿ ಸಾಗಿ ಸಮಾಜಕ್ಕೆ ಮಾದರಿಯಾಗಿ ಬದುಕು ನಡೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ವಿನುತ ಸುರೇಶ್, ಆಳಂಬಾಡಿಕಾವಲು ಗ್ರಾಮ ಪಂಚಾಯಿತಿ ಅದ್ಯಕ್ಷೆ ಕಲಾವತಿಶಿವಣ್ಣ,  ತಾಲೂಕು ಆರೋಗ್ಯಾಧಿಕಾರಿ ಡಾ.ಚಿಕ್ಕಾಡೆ ಅರವಿಂದ್,  ಮುಖಂಡರಾದ ಶ್ರೀನಿವಾಸ್, ನಾಗರಾಜು,  ಹಾಲು ಉತ್ಪಾಧಕರ ಸಂಘದ ಅಧ್ಯಕ್ಷ ಆನಂದ್ ಪಾಟೀಲ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ ಸತೀಶ್‍ಹೊನ್ನವಳ್ಳಿ  ಮತ್ತಿತರರು ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಸಂಯೋಜಕರಾದ ಲವಕುಮಾರ್ ಸ್ವಾಗತಿಸಿದರು, ಪತ್ರಕರ್ತ ಶ್ರೀನಿವಾಸ್ ವಂದಿಸಿ ಕಾರ್ಯಕ್ರಮ ನಡೆಸಿಕೊಟ್ಟರು.

ಕೆ.ಆರ್. ಕ್ಷೇತ್ರದ ಶಾಸಕರಾದ ಶ್ರೀ ಎಂ.ಕೆ. ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಣೆ

ನಾಳೆ ಬೆಳಿಗ್ಗೆ 10:30 ಗಂಟೆಗೆ ಕೆ.ಆರ್. ಕ್ಷೇತ್ರದ ಶಾಸಕರಾದ               ಶ್ರೀ ಎಂ.ಕೆ. ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ಚಿಕ್ಕಮಾನಿಕೇತನ ಕಲ್ಯಾಣ ಮಂಟಪ, ಕುವೆಂಪುನಗರ, ಮೈಸೂರು. ಇಲ್ಲಿ ವಿವಿಧ ಫಲಾನುಭವಿಗಳಿಗೆ ಚೆಕ್ ಮತ್ತು  ಮಂಜೂರಾತಿ ಆದೇಶ ಪ್ರತಿಗಳನ್ನು ಹಮ್ಮಿಕೊಳ್ಳಲಾಗಿದೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 30 ಜನರಿಗೆ ಮಂಜೂರಾದ ಚೆಕ್ ವಿತರಣೆ ಕಾರ್ಯಕ್ರಮ.
ದಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ನೇರಸಾಲದ 10 ಜನರಿಗೆ ಚೆಕ್ ವಿತರಣೆ ಕಾರ್ಯಕ್ರಮ
ಡಾ|| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ 4 ಜನ ಅಂಕವೀಕಲರಿಗೆ ಚೆಕ್ ವಿತರಣೆ ಕಾರ್ಯಕ್ರಮ
ವಿವಿಧ ಪಿಂಚಣಿ ಯೋಜನೆಗಳಾದ ವಿಧವಾ ವೇತನ-40, ಅಂಗವಿಕಲರ ವೇತನ-2, ಮನಸ್ವಿನಿ ಯೋಜನೆ-8, ವೃದ್ಧಪ್ಯ ವೇತನ-20 ಆದೇಶ ಪ್ರತಿ ವಿತರಣೆ ಕಾರ್ಯಕ್ರಮ.

      ಈ ಸಂದರ್ಭದಲ್ಲಿ ಕೆ.ಆರ್ ಕ್ಷೇತ್ರದ ಕಾಂಗ್ರೆಸ್ ನಗರ ಪಾಲಿಕೆ ಸದಸ್ಯರು, ಮಾಜಿ ಮೇಯರ್‍ಗಳು, ಕೆ.ಆರ್. ಬ್ಲಾಕ್ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ

Thursday 15 September 2016

ದಸರಾ ಆನೆ ಮಾವುತರ ಕುಟುಂಬಕ್ಕೆ ಆರೋಗ್ಯ ತಪಾಸಣೆ
ಮೈಸೂರು,ಸೆ.15- ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ನಾಡಿನಿಂದ  ನಾಡಿಗೆ ಆಗಮಿಸಿರುವ  ದಸರಾ ಆನೆಗಳ  ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬಗಳಿಗೆ  ಇಂದು ಇಂದು ಅರಮನೆ ಆವರಣದಲ್ಲಿ ನಿಮಿಸಿರುವ ಚಿಕಿತ್ಸಾ ಶಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿ ಆರೋಗ್ಯ ತೊಂದರೆ ಇರುವವರಿಗೆ ಚಿಕಿತ್ಸೆ ನೀಡಲಾಯಿತು.
 ಜಿಲ್ಲಾಡಳಿತದ ವತಿಯಿಂದ  ಏರ್ಪಡಿಸಿದ್ದ ಈ ಶಿಬಿರದಲ್ಲಿ ಕೆ.ಆರ್. ಆಸ್ಪತ್ರೆಯ ನುರಿತ ವೈದ್ಯರುಗಳು ಪಾಲ್ಗೊಂಡು ಮಾವುತರ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು.
 ನಿನ್ನೆಯಷ್ಟೇ  ಸಿಕ್ಕು ಎಂಬ ಮಾವುತ ಅರಮನೆ ಆವರಣದಲ್ಲಿ  ಕುಸಿದು ಬಿದ್ದು ಅಶ್ವತ್ಸ ನಾಗಿದ್ದ ರಿಂದ  ತಕ್ಷ ಣ ಎಚ್ಚೆತ್ತುಕೊಂಡ ಜಿಲ್ಲಾಡಳಿತ  ಈ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿತ್ತು.
 12 ಆನೆಗಳ ಮಾವುತರು, ಕಾವಾಡಿಗಳು ಅವರುಗಳ ಹೆಂಡತಿ ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಮಂದಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.

ಕರ್ನಾಟಕ ಸರ್ಕಾರ ಸು. ಕೋರ್ಟ್ ಸರಿಯಾದ ಅಂಕಿ ಅಂಶ ಕೊಟ್ಟಿಲ್ಲ- ಸಿ.ಶಿವಪ್ಪ
ಮೈಸೂರು,ಸೆ.15- ತಮಿಳುನಾಡಿಗೆ  ಕಾವೇರಿ ನೀರು ಹರಿಸುವ ವಿಷಯದಲ್ಲಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಸರಿಯಾದ ಅಂಕಿ ಅಂಶಗಳನ್ನು ಕೊಟ್ಟಿಲ್ಲ ಅದರಿಂದಾಗಿಯೇ ಸು.ಕೋರ್ಟ್ ತೀರ್ಪು ತಮಿಳುನಾಡು ಪರವಾಗಿದೆ, ಇಷ್ಟೆಲ್ಲಾ ಗೊಂದಲಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ತಮಿಳುನಾಡು ಹೈಕೋರ್ಟ್‍ನ ನಿವೃತ್ತ ನ್ಯಾಯಧಿಶ ಮಂಡ್ಯ ಜಿಲ್ಲೆಯ ಪಾಂಡವಪುರ ವಾಸಿ
 ಸಿ. ಶವಪ್ಪ ಸ್ಪಷ್ಟ ಪಡಿಸಿದರು.
 ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ಸಮಸ್ಯೆ ಬಹಳ ವರ್ಷಗಳಿಂದಲೂ ಇದೆ,  ತಮಿಳುನಾಡು ನೀರು ಕೇಳಿ ಸು.ಕೋರ್ಟ್ ಮೊರೆ ಹೋದಾಗ ಕರ್ನಾಟಕ ಸರ್ಕಾರ ಕೋರ್ಟಿಗೆ  ಸರಿಯಾದ ಅಂಕಿ ಅಂಶಗಳನ್ನು ಒದಗಿಸಿಲ್ಲ, ಮೊದಲಿಗೆ ಕುಡಿಯಲು ನೀರು, ವಿದ್ಯುತ್ ಉತ್ಪಾದನೆಗೆ ನೀರು, ಶಿಕ್ಷಣ ಕ್ಷೇತ್ರಗಳಿಗೆ ನೀರು, ಕೈಗಾರಿಕೆಗಳಿಗೆ ನೀರು, ಕೊನೆಯಲ್ಲಿ ವೆವಸಾಯಕ್ಕೆ, ಮತ್ತಿತರ ಕೆಲಸಗಳಿಗೆ ಇಂತಿಷ್ಟು ನೀರು ಅವಶ್ಯಕತೆಯಿದೆ ಎಂಬ ಅಂಕಿ ಅಂಶಗಳ ವಿವರಣೆ  ನೀಡಬೇಕಿತ್ತು, ಅದಬಿಟ್ಟು ಸುಮ್ಮನೆ ಕುಡಿಯಲು ನೀರು, ವ್ಯವಸಾಯಕ್ಕೆ ನೀರು ಸಾಲಲ್ಲ ಎಂದು ಹೇಳಿದರೆ ಕೋರ್ಟ್ ಅದನ್ನು ಕೇಳುವುದಿಲ್ಲ, ಸುಮ್ಮನೆ ಕೋರ್ಟ್ ಮೇಲೆಯು, ಜೆಡ್ಜ್‍ಗಳ ಮೇಲೆ ಕೋಪಗೊಂಡು ಕೋರ್ಟ್ ಗೌರವ ಹಾಳು ಮಾಡುವುದು ಸರಿಯಲ್ಲ, ಸು. ಕೊರ್ರ್ಟ ಭಾರತದ ಸಾರ್ವಭೌಮತ್ವವನ್ನು ಎತ್ತಿಹಿಡಿಯು ಸಂಸ್ಥೆಯಾಗಿದೆ ಎಂದರು.
 ಕರ್ನಾಟಕ ಸರ್ಕಾರ ಶವನ ಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಪ್ರತಿ ತಿಂಗಳು 2 ಟ.ಎಂ.ಸಿ. ನೀರು ಹರಿಸುತ್ತಿದೆ. ವಿದ್ಯುತ್ ಉತ್ಪಾದನೆಗೆ ಬಳಸಿದ ನೀರು ತಮಿಳುನಾಡಿಗೆ ತಾನೆ ಹೋಗುತ್ತದೆ ಅದನ್ನು ಏಕೆ ಎಲ್ಲೂ ಹೇಳಿಲ್ಲ ಅದು ಲೆಕ್ಕೆ ಇಲ್ಲವೇ, ಸು.ಕೋರ್ಟ್‍ಗೆ ಸರ್ಕಾರ ಏಕೆ ಮನವರಿಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಶವಪ್ಪರವರು ಎಲ್ಲಾ ತಪ್ಪುಗಳು ಆಳುವ ಸರ್ಕಾರದ ಮೇಲಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
 ನಾನು ನ್ಯಾಯಧೀಶನಾಗಿದ್ದವನು, ನಿವೃತ್ತಿ ಆದಮೇಲೆ ಕೃಷಿಯನ್ನೇ ಅವಲಂಭಿಸಿದ್ದೇನೆ, ಒಬ್ಬ ರೈತನಾಗಿ ವ್ಯವಸಾಯ ಮಡುತ್ತಿದ್ದೇನೆ, ನಾನು ಈ ನಾಡಿನ ಮಣ್ಣಿನ ಮಗನೇ ಆದರೂ ನನ್ನ ಮನೆಗೆ ತಿಳಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ, ಸರ್ಕಾರ ಸಣ್ಣ ಪುಟ್ಟ ಪುಡಾರಿಗಳಿಗೆ ರಕ್ಷಣೆ ಕೊಡುತ್ತದೆ, ಆದರೆ ಜೆಡ್ಜ್‍ಸ್‍ಗಳ ಮನೆಗಳಿಗೆ ರಕ್ಷಣೆ ನಿಡುತ್ತಿಲ್ಲ, ನನ್ನ ಮನೆಗೆ ಕಲ್ಲು ಹೊಡೆದವರನ್ನು ಇನ್ನೂ ಬಂಧಿಸಿಲ್ಲ, ಸರ್ಕಾರವೂ ಈಬಗ್ಗೆ ಯಾವೊಮಂದು ಮಾಹಿತಿ ಕೇಳಿಲ್ಲ, ನಾನೂ ಸಹ ಯಾವ ಸಹಾಯವನ್ನೂ ಕೇಳಲ್ಲ ಎಂದು ನುಡಿದರು.
 ಸರ್ಕಾರ ನೀರುಕೊಡುತ್ಗತೇವೆ ಎಂದು ಸುಳ್ಳು ಹೇಳಿ ರೈತರ ದಾರಿತಪ್ಪಿಸುತಿದೆ, ಸುಳ್ಳು ಹೇಳಬೇಡಿ,  ಮುಖ್ಯ ಮಂತ್ರಿ ಸಿದ್ದರಾಮಯ್ಯಗೆ ಕಾನೂನು ಸಲಹೆ ಬೇಕಾದರೆ ನನ್ನ ಬಳಿಬರಲಿ, ಆದರೆ ನಾನಾಗೆಯೇ ಅವರ ಬಳಿ ಹೋಗುವುದಿಲ್ಲ. ಎಂದರಲ್ಲದೆ, ರಾಜ್ಯದಲ್ಲಿ ನೀರಿಸ ಸಮಸ್ಯೆ ಉದ್ಭವವಾದಾಗ ರಾಜ್ಯದಲ್ಲೇ ನುರಿತ ಕಾನೂನು ತಜ್ಞರಿದ್ದಾರೆ, ನೀವೃತ್ತ ಜೆಡ್ಜ್‍ಸ್‍ಗಳಿದ್ದಾರೆ ಎಂದಾರೂ ಅವರನ್ನು ಕರೆದು ಚರ್ಚೆ ನಡೆಸಿದ್ದಾರೆಯೇ ಎಂದರು.
 ರಾಜ್ಯದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಬಂದ್ ಒಂದೇ ಪರಿಹಾರವಲ್ಲ, ಇನ್ನುಮಂದೆ ಬಂದ್‍ಗೆ ಕರೆಕೊಡಬೇಡಿ, ಇದರಿಮದ ಸಾವಿರಾರು ಮಂದಿ ಬq ಕೂಲಿ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ, ಬಡವರ ಅನ್ನ್ ಕಿತ್ತಂತಾಗುತ್ತದೆ,ಸಾವ್ಜನಿಕರ ಆಸ್ತಿ ಪಾಸ್ತಿ ಹಾಳಾಗುತ್ತದೆ ಎಂದು ತಿಳಿಸಿದರು.

Tuesday 13 September 2016

ರೈತರು ಹೈನುಗಾರಿಕೆಯನ್ನು ಅವಲಂಬಿಸಿದರೆ ಆರ್ಥಿಕವಾಗಿ ಸದೃಢರಾಗಬಹುದು-ಎಚ್.ಡಿ. ಚೌಡಯ್ಯ.

ರೈತರು ಹೈನುಗಾರಿಕೆಯನ್ನು ಅವಲಂಬಿಸಿದರೆ ಆರ್ಥಿಕವಾಗಿ ಸದೃಢರಾಗಬಹುದು-ಎಚ್.ಡಿ. ಚೌಡಯ್ಯ
ಮಂಡ್ಯ: ತಾಲೂಕಿನ ಹೊಳಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಮಾಜಿ ಶಾಸಕ ಎಚ್.ಡಿ. ಚೌಡಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆ ಉದ್ಘಾಟಿಸಿ ಮಾತನಾಡಿದ ಎಚ್.ಡಿ.ಚೌಡಯ್ಯ ಅವರು, ಸಹಕಾರ ಸಂಘ ಸ್ಥಾಪನೆಯಾಗಿ ನಾಲ್ಕು ದಶಕಗಳು ಕಳೆದಿದ್ದು, ಪ್ರಗತಿಯತ್ತ ಸಾಗಿದೆ. ಪ್ರಸ್ತುತ ಕೃಷಿಯಲ್ಲಿ ನಷ್ಟವೇ ಹೆಚ್ಚು ಆಗುತ್ತಿರುವುದರಿಂದ ರೈತರು ಹೈನುಗಾರಿಕೆಯನ್ನು ಅವಲಂಬಿಸಿದರೆ ಆರ್ಥಿಕವಾಗಿ ಸದೃಢರಾಗಬಹುದು ಎಂದು ತಿಳಿದರು.
ಮನ್‍ಮುಲ್ ನಿರ್ದೇಶಕ ಚಂದ್ರು ಮಾತನಾಡಿ, ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಿ. ಅಲ್ಲದೆ, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಣ ನೀಡಲಾಗುವುದು. ವಿದ್ಯಾರ್ಥಿಗಳು ಒಕ್ಕೂಟದ ಯೋಜನೆಗಳನ್ನು ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಡೇರಿಗೆ ಹೆಚ್ಚು ಹಾಲು ಸರಬರಾಜು ಮಾಡುವ ರೈತರಾದ ಎಚ್.ಕೆ.ನಾಗರಾಜು, ಸುಶೀಲಮ್ಮ ಪಾಪಣ್ಣ, ಬೋರಮ್ಮ, ಕುಮಾರಿ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಸಹಕಾರ ಸಂಘದ ಅಧ್ಯಕ್ಷ ಶಿವಲಿಂಗಯ್ಯ, ಕಾರ್ಯದರ್ಶಿ ಎಚ್.ಎಲ್.ಶಿವಕುಮಾರ್, ನಿರ್ದೇಶಕರಾದ ಎಚ್.ಎಲ್. ಸ್ವಾಮಿ, ಪುಟ್ಟಸ್ವಾಮಿ, ಅರುಣ್, ಎಚ್.ಪಿ.ಕೃಷ್ಣ, ತಾಪಂ ಮಾಜಿ ಸದಸ್ಯ ಹೊ.ರಾ. ಕುಮಾರಸ್ವಾಮಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ.ನಾಗರಾಜು, ಗ್ರಾಪಂ ಅಧ್ಯಕ್ಷೆ ಪ್ರೇಮಾ, ಉಪಾಧ್ಯಕ್ಷ ಜೋಗಯ್ಯ, ತಾಪಂ ಸದಸ್ಯೆ ರಜನಿಕುಮಾರ್, ಮನ್‍ಮುಲ್ ನಿರ್ದೇಶಕ ಎಸ್.ಪಿ. ಮಹೇಶ್,  ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್.ಶಿವಣ್ಣ, ಆರ್‍ಎಪಿಸಿಎಂಎಸ್ ನಿರ್ದೇಶಕ ಶ್ರೀಧರ್ ಇತರರಿದ್ದರು.

Monday 12 September 2016

ಇಂದು ಮಂಡ್ಯ- ಕಾವೇರಿ ಚಳುವಳಿಯ ಹಿನ್ನೆಯಲ್ಲಿ ಪೋಲೀಸರ ಬೂಟಿನ ಸದ್ದು




ಇಂದು ಮಂಡ್ಯ- ಕಾವೇರಿ ಚಳುವಳಿಯ ಹಿನ್ನೆಯಲ್ಲಿ ಪೋಲೀಸರ ಬೂಟಿನ ಸದ್ದು