Monday 12 September 2016

ಸೆಪ್ಟಂಬರ್ 20 ರ ವರೆಗೆ ಪ್ರತಿದಿನ 12 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಅವೈಜ್ಞಾನಿಕ ತೀರ್ಪು ನೀಡಿರುವುದನ್ನು ಬಹುಜನ ಸಮಾಜ ಪಕ್ಷವು ಖಂಡಿಸುತ್ತದೆ ಎಂದು ಕೃಷ್ಣಮೂರ್ತಿ ಹಣೆಳಿದ್ದಾರೆ.
       ಕರ್ನಾಟಕದ ಮಧ್ಯಂತರ ಅರ್ಜಿಯನ್ನು  ವಾಸ್ತವಿಕ ನೆಲೆಗಟ್ಟಿನಲ್ಲಿ ಪರಿಶೀಲನೆಗೆ ಒಳಪಡಿಸಲು ರಾಜ್ಯಕ್ಕೆ ಮತ್ತು ತಮಿಳುನಾಡಿಗೆ ತಜ್ಞರನ್ನೂಳಗೊಂಡ ಒಂದು ತಂಡವನ್ನು ಕಳುಹಿಸಿ, ನಂತರ ಸೂಕ್ತ ತೀರ್ಮಾನವನ್ನು ನೀಡಿದ್ದರೆ ಅದಕ್ಕೂಂದು ಮಹತ್ವ ಇರುತಿತ್ತು.
      ಆದರೆ ರಾಜ್ಯದ ಮನವಿಯನ್ನು ಕನಿಷ್ಟ ಸೌಜನ್ಯ ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಪರಿಶೀಲನೆಗೆ ಒಳಪಡಿಸದೇ ಮತ್ತೊಮ್ಮೆ ರಾಜ್ಯದ ಜನತೆಯ ಆಶಯಕ್ಕೆ ವಿರುದ್ಧವಾದ ತೀರ್ಪು ನೀಡಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಿದೆ.
        ಈ ಕಾರಣಕ್ಕಾಗಿಯೇ ನೆಲ, ಜಲ ವಿವಾದಗಳನ್ನು ಕೋರ್ಟ್ ವ್ಯಾಪ್ತಿಯಿಂದ ಹೊರಗಿಟ್ಟು ಬಗೆಹರಿಸುವುದೇ ಸೂಕ್ತ ಎನ್ನುವುದು ಬಹುಜನ ಸಮಾಜ ಪಕ್ಷದ ಅಭಿಪ್ರಾಯವಾಗಿದೆ.
         ಇಂತಹ ಅವೈಜ್ಞಾನಿಕ ತೀರ್ಪಿನಿಂದ ರಾಜ್ಯದ ರೈತರ ಹಿತಕ್ಕೆ ಧಕ್ಕೆಯಾಗಿದ್ದು, ಈ ಕೂಡಲೆ ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಬೇಕು.
      ಹಾಗೂ ಕಾವೇರಿ ಕಣಿವೆ ವ್ಯಾಪ್ತಿಯ ರಾಜ್ಯಗಳ ಪ್ರಮುಖರ ಸಭೆ ಕರೆದು ವೈಜ್ಞಾನಿಕ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗದಿದ್ದರೆ ಬಹುಜನ ಸಮಾಜ ಪಕ್ಪವು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯಾದ್ಯಾಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ.
       ವಂದನೆಗಳೊಂದಿಗೆ

No comments:

Post a Comment