Monday 12 September 2016

ದಸರಾ ಪ್ರಚಾರಕ್ಕಾಗಿ ಪೋಸ್ಟರ್ ಬಿಡುಗಡೆ.

ದಸರಾ ಪ್ರಚಾರಕ್ಕಾಗಿ ಪೋಸ್ಟರ್ ಬಿಡುಗಡೆ

ಮೈಸೂರು,ಸೆ.12- ನಾಡ ಹಬ್ಬ 2016ರ ದಸರಾ ಮಹೋತ್ಸವ ಆಚರಣೆಗಾಗಿ ದಸರಾ ಉಪಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ದಸರಾ ಪ್ರಚಾರದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.
 ಸಮಸದ ಆರ್. ದೃವನಾರಾಯಣ್ ನೇತೃತ್ವದಲ್ಲಿ ಶಾಸಕರುಗಳಾದ ಎಂ.ಕೆ. ಸೋಮಶೇಖರ್, ಜಿಲ್ಲಾಧಿಕಾರಿ ರಣದೀಪ್ ಹಾಗೂ ಉಪಸಮಿತಿಯ ಇತರೆ ಅಧಿಕಾರಿಗಳು ನಹಾಜರಿದ್ದು ದಸರಾ ಪ್ರಚಾರ ಕಾರ್ಯವನ್ನು ಹಮ್ಮಿಕೊಳ್ಳುವ ಸಲುವಾಗಿ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಲಭ್ಯವಾಗುವ ನಿಟ್ಟಿನಲ್ಲಿ ಪೋಸರಟರ್ ಬಿಡುಗಡೆ ಮಾಡಲಾಯಿತು.
 ನಂತರ ಮಾತನಾಡಿದ ದ್ರುವನಾರಾಯಣ್, ಪ್ರಚಾರಕ್ಕಾಗಿ ಪ್ರತಿ ತಾಲ್ಲೂಕಿಗೆ ಒಂದರಂತೆ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ಪ್ರಚುರ ಪಡಿಸಲು ಅನುಕೂಲವಾಗುವಂತೆ 10*20 ಅಡಿ ಅಳತೆಯ ಒಟ್ಟು 400 ಪೋಸ್ಟರ್ ಗಳನ್ನು ಸಿದ್ದಪಡಿಸಲಾಗಿದೆ ಎಂದರು.
 ಅಲ್ಲದೆ 1000 ಬಸ್‍ಗಳ ಅಂಟಿಸುವ ವಿನೈಲ್ ಪೋಸ್ಟರ್‍ಗಳನ್ನು ಬಿಡುಗಡೆಮಾಡಲಾಗಿದೆ, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಪ್ರವಾಸೋಧ್ಯಮ ಇಲಾಖೆ ವತಿಯಿಂದ ಪ್ರಚಾರ ಕಾರ್ಯಕೈಗೊಳ್ಳಲಾಗಿದೆ, ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಪ್ರಚಾರ ಕಾರ್ಯ ಕ್ರಮಕೈಗೊಳ್ಳಲಾಗಿದೆ,  ರೇಡಿಯೋ ಜಿಂಗಲ್ ಸಿದ್ಧಪಡಿಸಲಾಗಿದ್ದು, ಇದನ್ನು ರೆಡ್ ಎಫ್.ಎಂ ರೇಡಿಯೋಮೂಲಕ ಭಾರತದಾದ್ಯಂತ ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ.,  ಪ್ರಮೋಷನಲ್ ವಿಡಿಯೋ ಕ್ಲಿಪಿಂಗ್ ಅನ್ನು ಕನ್ನಡ ಮತ್ತು ಇಂಗ್ಲಿಷ್  ಭಾಷೆಗಳಲ್ಲಿ ಡಾಟ್ ಆಂಗಲ್ ಇವರಿಂದ ಸಿದ್ದಪಡಿಸಲಾಗಿದ್ದು, ಇದನ್ನು ವೆಬ್‍ಸೈಟ್ ಮತ್ತು ಇತರೆ ಮೂಲಗಳಿಂದ ಪ್ರಚುರ ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡದೇ ಕಾರ್ಯ ಸಾಧಿಸಿಕೊಳ್ಳಲು ಸಲಹೆ
ಮೈಸೂರು,ಸೆ.12-ದೇಶದಲ್ಲಿ ಸರ್ಕಾರಗಳು ಲಂಚಮುಕ್ತಗೊಳಿಸಲು  ಯಾವುದೇ ಕಾಯಿದೆ ಜೆರಿಗೆ ತಂದರೂ ಸರ್ಕಾರಿ ಕಚೇರಿಗಳಲ್ಲಿ ಒಮದಲ್ಲಾ ಒಮದು ರೀತಿಯಲ್ಲಿ ಲಂಚಗುಳಿತನ ತಾಂಡವವಾಡುತ್ತಿದೆ, ಕೆಲವೊಮ್ಮೆ ಲಮಚ ನೀಡದೇ ಯಾವುದೇ ಕೆಲಸಗಳು ಆಗುವುದಿಲ್ಲ ಆದ್ದರಿಂದ ಲಂಚ ಕೊಡುವುದೂ ತಪ್ಪು, ಲಂಚ ಸ್ವೀಕರಿಸುವುದೂ ತಪ್ಪು, ಇಬ್ಬರನ್ನು ಬಂಧಿಸಿ ಕಾನೂನುರೀತಿ ಕ್ರಮ ಕೈಗೊಳ್ಳಬೇಕು, ಹಾಗಾದರೆ ಮಾತ್ರ ಲಂಚಗುಳಿತನವನ್ನು ಸ್ವಲ್ಪಮಟ್ಟಿಗಾದರೂ ಕೊನೆಗಾಣಿಸಬಹುದು ಎಂದು ಮೈಸೂರಿನ ಲಂಚಮುಕ್ತ ಕರ್ನಾಟಕ ನಿಮಾರ್ಣ ವೇದಿಕೆಯ ರಶಜ್ಯ ಸಂಘಟನಾ ಕಾರ್ಯದರ್ಶಿಎಂ.ಎಸ್. ವೆಂಕಟೇಶ್ ಪ್ರಸಾದ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
 ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡುತ್ತಾ ಸಾರ್ವಜನಿಕರು ಯಾವುದೇ ಕಚೇರಿಗಳಲ್ಲಿ ನ್ಯಾಯಯುತವಾಗಿ ತಮಗೆ ಆಗಬೇಕಾದ ಕೆಲಸಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಲಂಚಕೊಟ್ಟು ಕೆಲಸಮಾಡಿಕೊಳ್ಳಬೇಡಿ, ಸಾರ್ವಜನಿಕ ಕೆಲಸ ಮಾಡಿಕೊಡುವುದು ಅವರ ಕರ್ತವ್ಯ, ಒಮದು ವೇಳೆ ಮಾಡಿಕೊಡದಿದ್ದಲ್ಲಿ ಅವರಿಗೆ ಮೇಲ್ಪಟ್ಟ ಅಧಿಕಾರಿಗಳ ಗಮನಕ್ಕೆ ತನ್ನಿ ಯಾವುದೇ ಕಾರಣಕ್ಕೂ ಲಂಚ ನೀಡಬೇಡಿ ಎಲ್ಲರೂ ಸೇರಿ ಲಮಚ ಮುಕ್ತ ಸಮಾಜ ನಿರ್ಮಾಣ ಮಾಡಲು ಶ್ರಮಿಸೋಣ ಎಂದು ಸಲಹೆ ನಿಡಿದರು.

14 ರಂದು ಮೈ.ವಿ.ವಿ.ಯ ಸಂಜೆ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮ
ಮೈಸೂರು,ಸೆ.12- ಇತಿಹಾಸ ಪ್ರಸಿದ್ಧ ಮೈಸೂರು ವಿಶ್ವ ವಿದ್ಯಾಲಯದ ಸಂಜೆ ಕಾಲೇಜುನ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭವನ್ನು  ಇದೇ ತಿಂಗಳ 14 ರಂದು ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಸಂಜೆ 5.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂಜೆ ಕಾಲೇಜಿನ ಪ್ರಾನ್ಸುಪಾಲರು ತಿಳಿಸಿದರು.
  ಈ ಕಾರ್ಯಕ್ರಮದಲ್ಲಿ ಬಿ.ಕಾಂ,ಬಿಬಿಎಂ, ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿಧ್ಯಾರ್ಥಿಗಳಿಗೆಚಿನ್ನದ ಪದಕ ಸ್ಥಪಿಸಲಾಗುವುದು, ಬಿಎ, ಪದವಿಯ ಎಲ್ಲಾ ಸಮೂಹಕ್ಕೆ  ಸಂಬಂಧಿಸಿದ ಅತೀ ಹೆಚ್ಚು ಅಂಕ ಗಳಿಸಿದವರಿಗೆ  ಚಿನ್ನದ ಪದಕ ಸ್ಥಾಪಿಸಲಾಗುವುದು,
 ಪ್ರಸ್ತುತ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ  ಎಲ್ಲಾ  ಪ್ರಾಧ್ಯಾಪಕರುಗಳಿಗೆ  ನೆನಪಿನ ಕಾನಿಕೆ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಕುಲಪತಿ  ಕೆ.ಎಸ್. ರಂಗಪ್ಪ ವಹಿಸಲಿದ್ದಾರೆ, ಸಿ.ಪಿ. ಕೃಷ್ಣಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ, ಸಂಸದ ಪ್ರತಾಪ್‍ಸಿಂಹ, ಶಾಸಕ ವಾಸು, ಸೋಮಶೇಖರ್, ಸಿ. ಬಸವರಾಜು ಮುಖ್ಯ ಅಥಿತಿಗಳಾಗಿ ಭಾಗವಿಸಲಿದ್ದಾರೆ ಎಂದು  ಹೇಳಿದರು.

No comments:

Post a Comment