Friday 23 December 2016

ಜನಪರ ಹಾಗೂ ಸಮಾಜಮುಖಿ ಶಿಕ್ಷಣ ನೀಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಜನಪರ ಹಾಗೂ ಸಮಾಜಮುಖಿ ಶಿಕ್ಷಣ ನೀಡಿ: ಮುಖ್ಯಮಂತ್ರಿ  ಸಿದ್ದರಾಮಯ್ಯ
      ಮೈಸೂರು.ಡಿ.24ವಿಶ್ವವಿದ್ಯಾ£ಲಯಗಳು ಉತ್ತಮ ನಾಗರೀಕರನ್ನು ದೇಶಕ್ಕೆ ನೀಡಲು ಜನಪರ  ಹಾಗೂ ಸಮಾಜಮುಖಿ ಶಿಕ್ಷಣ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
      ಅವರು ಇಂದು ಮೈಸೂರು ವಿಶ್ವವಿದ್ಯಾ£ಲಯದ ಕ್ರಾಫರ್ಡ್ ಹಾಲ್‍ನಲ್ಲಿ ನಡೆದ ಮೈಸೂರು ವಿಶ್ವವಿದ್ಯಾ£ಲಯದ ಶತಮಾನೋತ್ಸವ ನಾಣ್ಯಗಳು, ಮೈಸೂರು ವಿಶ್ವವಿದ್ಯಾ£ಲಯದ ಇತಿಹಾಸ ತಿಳಿಸುವ ಸಚಿತ್ರ ಸಂಪುಟ ಹಾಗೂ ಕರ್ನಾಟಕ ವಿಶ್ವಕೋಶ ಸಂಪುಟ-1 ಇಂಗ್ಲೀಷ್ ಅನುವಾದ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
     ವಿಶ್ವವಿದ್ಯಾ£ಲಯಗಳು ವಿದ್ಯಾರ್ಥಿಗಳಿಗೆ ವೈಜ್ಞಾ£ಕ, ಮಾನವೀಯತೆ ಹಾಗೂ ವೈಚಾರಿಕತೆ ಇರುವ ಶಿಕ್ಷಣ £ೀಡಬೇಕು. ಈ ಶಿಕ್ಷಣದಿಂದ ಸಮಾಜದಲ್ಲಿರುವ ಮೂಡನಂಬಿಕೆ ಹಾಗೂ ಇ£್ನತರ ಅ£ಷ್ಠಗಳನ್ನು ಹೋಗಲಾಡಿಸಿ ಮಾನವೀಯತೆ ಬೆಳೆಸಲು ಸಾಧ್ಯ ಎಂದರು.
     ಮೂಲ ವಿಜ್ಞಾನ ಶಿಕ್ಷಣದ  ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ವಿಶ್ವವಿದ್ಯಾ£ಲಯಗಳು ಮೂಲ ವಿಜ್ಞಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದರ ಜೊತೆಗೆ ಆಕರ್ಷಣೀಯವಾದ ರೀತಿ ಮೂಲ ವಿಜ್ಞಾನವನ್ನು ಬೋಧಿಸಲು ಮುಂದಾಗಬೇಕು ಎಂದರು.
     ಬೇರೆ ಮುಂದುವರೆದ ರಾಷ್ಟ್ರಗಳನ್ನು ಗಮ£ಸಿದರೆ ಭಾರತ ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆ ಇದೆ. ಫಿನ್‍ಲ್ಯಾಂಡ್‍ನಂತಹ ಸಣ್ಣ ದೇಶದಲ್ಲಿ ಶೇ. 91 ರಷ್ಟು ಜನ ಉನ್ನತ ಶಿಕ್ಷಣ ಪಡೆದಿದ್ದಾರೆ. ದಕ್ಷಿಣ ಕೋರಿಯಾದಲ್ಲಿ ಶೇ. 95, ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಶೇ. 89. ಯುನೈಟೆಡ್ ಕಿಂಗ್‍ಡಂ ನಲ್ಲಿ ಶೇ. 57 ಇದ್ದರೆ. ಭಾರತದಲ್ಲಿ ಶೇ. 21 ಮಾತ್ರ ಉನ್ನತ ಶಿಕ್ಷಣ ಪಡೆದವರು ಇದ್ದಾರೆ. ಭಾರತದಲ್ಲಿ ಹೆಚ್ಚಿನ ಜನ ಉನ್ನತ ವ್ಯಾಸಂಗದಲ್ಲಿ ತೊಡಗಬೇಕು ಎಂದರು.
     ಮೈಸೂರು ವಿಶ್ವವಿದ್ಯಾ£ಲಯ ನೂರು ವರ್ಷ ಪೂರೈಸಿದ್ದು, ಇದು ದೇಶದಲ್ಲೇ ಮಾತ್ರವಲ್ಲ ವಿಶ್ವದಲ್ಲೇ ಪ್ರತಿಷ್ಠಿತ ವಿಶ್ವವಿದ್ಯಾ£ಲಯವಾಗಿದೆ, ನೂರು ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಹಲವಾರು ಉಪನ್ಯಾಸ ಸೇರಿದಂತೆ ವೈವಿದ್ಯಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿದೆ. ಈ ಭಾಷೆ ಹೊರ ರಾಜ್ಯಗಳಲ್ಲಿ ಮಾತ್ರವಲ್ಲ ದೇಶ ವಿದೇಶಗಳಲ್ಲೂ ಪರಿಚಯವಾಗಬೇಕು. ಇಂದು ಹೊರತಂದಿರುವ ಕರ್ನಾಟಕ ವಿಶ್ವಕೋಶ ಸಂಪುಟ-1 ಇಂಗ್ಲೀಷ್ ಅನುವಾದ ಕನ್ನಡ ಭಾಷೆ ಕಲಿಯಲು ಅನುಕೂಲಕರವಾಗಿದೆ ಎಂದರು.
    ಕೇಂದ್ರ ಸರ್ಕಾರ ನಡೆಸುವ £ೀಟ್ ಪರೀಕ್ಷೆಯನ್ನು ತಮಿಳು, ತೆಲಗು ಸೇರಿದಂತೆ 8 ವಿವಿಧ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ಇರುತ್ತದೆ. ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆಯಲು ಅನುಕೂಲಕರವಾದ ರೀತಿ ಕನ್ನಡ ಭಾಷೆಯಲ್ಲೂ ಸಹ ಪ್ರಶ್ನೆಪತ್ರಿಕೆ £ೀಡಬೇಕು ಎಂದು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಇನ್ನೂಮ್ಮೆ ಸಹ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಕರ್ನಾಟಕದ ಲೋಕಸಭಾ ಸದಸ್ಯರಿಗೂ ಸಹ ತಿಳಿಸಲಾಗುವುದು. ಕನ್ನಡ ನಮ್ಮ ಮಾತೃ ಭಾಷೆಯಾಗಿದ್ದು, ಇದನ್ನು ಯಾರು ಸಹ ಕಡೆಗಾಣಿಸಬಾರದು ಎಂದರು.
    ಇದೇ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾ£ಲಯದ ಶತಮಾನೋತ್ಸವ ನಾಣ್ಯಗಳು, ಮೈಸೂರು ವಿಶ್ವವಿದ್ಯಾ£ಲಯದ ಇತಿಹಾಸ ತಿಳಿಸುವ ಸಚಿತ್ರ ಸಂಪುಟ ಹಾಗೂ ಕರ್ನಾಟಕ ವಿಶ್ವಕೋಶ ಸಂಪುಟ-1 ಇಂಗ್ಲೀಷ್ ಅನುವಾದದ ರಚನೆ ಮಾಡಿದ ಗಣ್ಯರನ್ನು ಗೌರವಿಸಿದರು. ಮೈಸೂರು ಜನತೆಗೆ ಮುಂಗಡವಾಗಿ ಕ್ರಿಶ್‍ಮಸ್ ಹಾಗೂ ಹೊಸ ವರ್ಷಕ್ಕೆ ಶುಭಾಷಯ ಕೋರಿದರು.
    ಕಾರ್ಯಕ್ರಮದಲ್ಲಿ ಖ್ಯಾತ ವಿದ್ವಾಂಸ ಹಂ.ಪ.ನಾಗರಾಜಯ್ಯ, ಮೈಸೂರು ವಿಶ್ವವಿದ್ಯಾ£ಲಯದ ಕುಲಪತಿ ಪ್ರೊ: ರಂಗಪ್ಪ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.