Thursday 31 July 2014

ಮೈಸೂರು-ಪ್ರಮುಖ ಸುದ್ದಿಗಳು.

     ಫಲಪುಷ್ಪ ಪ್ರದರ್ಶನ:    ವೈವಿಧ್ಯತೆಗೆ ಸಲಹೆ
      ಮೈಸೂರು,ಜು.31.ಇದೇ ಮೊದಲ ಬಾರಿಗೆ ದಸರಾ ಫಲಪುಷ್ಪ ಪ್ರದರ್ಶನವನ್ನು ಕುಪ್ಪಣ ಪಾರ್ಕ್‍ನಲ್ಲಿ  ಆಯೋಜಿಸಲಾಗುತ್ತಿದ್ದು, ವೈವಿಧ್ಯಮಯ ಪ್ರದರ್ಶನಕ್ಕೆ ತೋಟಗಾರಿಕಾ ಇಲಾಖೆ ಸಿದ್ದತೆ ನಡೆಸಿದೆ.
    ತೋಟಗಾರಿಕಾ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕಾ ಸಂಘದಿಂದ ಇಂದು ನಡೆದ ಸಭೆಯಲ್ಲಿ 50ಕ್ಕೂ ಹೆಚ್ಚು ಆಸಕ್ತರು ಭಾಗವಹಿಸಿದ್ದು, ತೋಟಗಾರಿಕಾ ಪ್ರದರ್ಶನದಲ್ಲಿಯೂ ಭಾಗವಹಿಸುವ ಆಸಕ್ತಿ ವ್ಯಕ್ತಪಡಿಸಿದರು.
    ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ತಾರಸಿ ಕೈತೋಟ, ಮನೆಯಂಗಳದ ಕೈತೋಟದಲ್ಲಿ ಫಲಪುಷ್ಪ ಪ್ರದರ್ಶನದ ಸ್ಪರ್ಧೆ ನಡೆಸಲಾಗುತ್ತಿದ್ದು, ತೀರ್ಪುಗಾರರು ಅವರ ಮನೆಗಳಿಗೇ ತೆರಳಿ ಪರಿಶೀಲಿಸುತ್ತಿದ್ದರು, ಬಹುಮಾನ ಘೋಷಣೆ ಮಾಡಲಾಗುತ್ತಿತ್ತು.
    ಈ ವರ್ಷ ಕುಪ್ಪಣ ಪಾರ್ಕ್‍ನಲ್ಲಿಯೇ ಇಂತಹ ಸ್ಪರ್ಧೆ ಹಾಗೂ ಪ್ರದರ್ಶನ ನಡೆಸಲು ಯೋಜಿಸಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಹಲವರು ಕುಪ್ಪಣ ಪಾರ್ಕ್‍ನಲ್ಲಿ ನಡೆಯುವ ಪ್ರದರ್ಶನದಲ್ಲಿಯೂ ಭಾಗವಹಿಸುವ ಬಗ್ಗೆ ಆಸಕ್ತ ವ್ಯಕ್ತಪಡಿಸಿದರು.
    ತೋಟಗಾರಿಕಾ ಇಲಾಖಾ ವತಿಯಿಂದ ಈಗಾಗಲೇ ಸಿದ್ಧತೆ ಆರಂಭಿಸಲಾಗಿದ್ದು 70 ಸಾವಿರ ಸಸಿಗಳನ್ನು ಬೆಳಸಲಾಗುತ್ತಿದೆ. 25 ವಿವಿಧ ಬಗೆಯ 50ಕ್ಕೂ ಹೆಚ್ಚು ವರ್ಣಗಳ ವೈವಿಧ್ಯಮಯ ಫಲಪುಷ್ಪ ತರಕಾರಿ ಗಿಡಗಳ ಪ್ರದರ್ಶನಕ್ಕೆ ಕುಪ್ಪಣ್ಣ ಪಾರ್ಕ್ ಅನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿ.ಆರ್. ಕೃಷ್ಣಕುಮಾರ್ ತಿಳಿಸಿದರು.
    ಜಿಲ್ಲಾ ತೋಟಗಾರಿಕಾ ಸಂಘದ ಉಪಾಧ್ಯಕ್ಷ ಡಾ|| ಪ್ರಭಾಮಂಡಲ್, ಖಜಾಂಚಿ ವಿಜಯಲಕ್ಷ್ಮಿ, ಜಂಟಿ ಕಾರ್ಯದರ್ಶಿ ಹನುಮಯ್ಯ ಸೇರಿದಂತೆ ಆಸಕ್ತರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರವಾಸ ಕಾರ್ಯಕ್ರಮ
   ಮೈಸೂರು,ಜು.31.ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಸಿ.ಜೆ.ಹುನಗುಂದ ಅವರು ಆಗಸ್ಟ್ 2 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ಅಂದು 11 ಗಂಟೆಗೆ  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
    ಆಗಸ್ಟ್ 3 ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ತೆರಳುವರು.



                ದೌರ್ಜನ್ಯದ ವಿರುದ್ದ ಧ್ವನಿ

     ಮೈಸೂರು,ಜು.31.ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ಬಗ್ಗೆ ಅರಿವು ಮೂಡಿಸಲು ಜಿಲ್ಲೆಯಾದ್ಯಂತ ಇಂದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಾಥಾ ಹಾಗೂ ಸಭೆಗಳನ್ನು ಆಯೋಜಿಸಲಾಗಿತ್ತು.
    ಜಿಲ್ಲಾ ಪಂಚಾಯತ್ ಮೈಸೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಮತ್ತಿತರ ಇಲಾಖೆಗಳ ಸಹಯೋಗದೊಡನೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಶ್ರೀರಾಂಪುರ ಗ್ರಾಮ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮಾರಂಭವನ್ನು ಅಶ್ವಿನಿ ಕಲ್ಯಾಣಮಂಟಪದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಪುಷ್ಪಾವತಿ ಅಮರನಾಥ್ ಉದ್ಘಾಟಿಸಿದರು.
    ಮಹಿಳೆಯರು ಹಾಗೂ ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ಮಹಿಳೆಯರು ಮಕ್ಕಳು ಸ್ವಯಂ ರಕ್ಷಣಾ ವಿಧಾನಗಳನ್ನು ಅವಳಡಿಸಿಕೊಳ್ಳುವುದಲ್ಲದೆ ಇಂತಹ ಸಂದರ್ಭಗಳು ಸೃಷ್ಟಿಯಾಗದ ರೀತಿಯಲ್ಲಿ ಜಾಗ್ರತೆ ವಹಿಸಬೇಕು ಎಂದರು.
    ಆಧುನಿಕ ಸಂಪರ್ಕ ಉಪಕರಣ ಅಗತ್ಯವಾಗಿವೆ. ಆದರೆ ಅವುಗಳೇ ನಮಗೆ ಮಾರಕವಾಗಬಾರದು ತಂತ್ರಜ್ಞಾನದ ಮಿತಬಳಕೆ ಹಾಗೂ ವಿವೇಚನಾಯುಕ್ತ ಬಳಕೆಯತ್ತ  ಗಮನಹರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
    ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ನ್ಯಾಯವಾದಿ ಸುಮನಾ, ಮಹಿಳೆಯರ ಮೇಲೆ ದೌರ್ಜನ್ಯ ಅನಾದಿಕಾಲದಿಂದಲೂ ನಡೆದುಕೊಂಡು  ಬಂದಿದ್ದು, ಇಂದಿಗೂ ಮುಂದುವರಿಯುತ್ತಿರುವುದು ವಿಷಾಧನೀಯ ಎಂದರಲ್ಲದೆ ತಾಯಂದಿರು ಮಕ್ಕಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
   ದೌರ್ಜನ್ಯದ ವಿರುದ್ಧ ಸಮಾಜದ ಎಲ್ಲ ವರ್ಗದವರೂ ಧ್ವನಿ ಎತ್ತಬೇಕು ಮಕ್ಕಳು ಹಾಗೂ ಮಹಿಳೆಯರು ಎಚ್ಚರಿಕೆ ವಹಿಸಬೇಕು. ಸಮಾಜದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
   ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್ ಅವರು ಮಾತನಾಡಿ ಜಿಲ್ಲೆಯಾದ್ಯಂತ ಇಂದು ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದು, ಸರ್ಕಾರದ ಪ್ರಯತ್ನದ ಜೊತೆ ಸಮಾಜವೂ ಕೈಜೋಡಿಸಿ ಮಹಿಳೆಯರು ಹಾಗೂ ಮಕ್ಕಳ ವಿರುದ್ಧದ ದೌರ್ಜನ್ಯ ತಡೆಗಟ್ಟಬೇಕು ಎಂದರು.
    ಜಿಲ್ಲಾ ಪಂಚಾಯತ್ ಸದಸ್ಯ ಪಟೇಲ್ ಜವರೇಗೌಡ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅರುಳ್‍ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ಆರ್. ವಿಜಯ್ ಮತ್ತಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
    ಸಮಾರಂಭಕ್ಕೂ ಮುನ್ನ ವರ್ತುಲ ರಸ್ತೆಯಿಂದ ಅಶ್ವಿನಿ ಕಲ್ಯಾಣ ಮಂಟಪದವರೆಗೆ ಜಾಗೃತಿ ಜಾಥಾ ಆಯೋಜಿಸಲಾಗಿತ್ತು.
ಆಗಸ್ಟ್ 20 ರಂದು ಡಿ.ದೇವರಾಜ ಅರಸು ಅವರ ಜನ್ಮದಿನ ಆಚರಣೆ: ಪಾಲಯ್ಯ
   

 ಮೈಸೂರು,ಜು.31.ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು ಜಿಲ್ಲೆಯಲ್ಲಿ ಆಗಸ್ಟ್ 20 ರಂದು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಾಲಯ್ಯ ಅವರು ತಿಳಿಸಿದರು.
    ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಆಗಸ್ಟ್ 20 ರಂದು ಬೆಳಿಗ್ಗೆ 11 ಗಂಟೆಗೆ ರಾಣಿಬಹದ್ದೂರ್ ಸಭಾಂಗಣದಲ್ಲಿ ಜನ್ಮ ದಿನಾಚರಣೆ ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು.
    ಜಿಲ್ಲೆಯಲ್ಲಿ ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು  ಅರ್ಥಪೂರ್ಣವಾಗಿ ಆಚರಿಸಬೇಕು. ಕಾರ್ಯಕ್ರಮದಲ್ಲಿ ತಜ್ಞರಿಂದ ಉಪನ್ಯಾಸ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಬೇಕು.  ಅಧಿಕಾರಿಗಳು ಈ ಕಾರ್ಯಕ್ರಮಕ್ಕೆ ಬೇಕಿರುವ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
    ಸಮಾಜದ ಎಲ್ಲ ವರ್ಗದ ಜನರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
    ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜವರೇಗೌಡ ಕಾರ್ಯಕ್ರಮದ ರೂಪುರೇಷುಗಳ ಬಗ್ಗೆ ವಿವರಿಸಿದರು.
    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

                             ಆಗಸ್ಟ್ 2 ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
    ಮೈಸೂರು,ಜು.31.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ವತಿಯಿಂದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಆಗಸ್ಟ್ 2 ರಂದು ಬೆಳಿಗ್ಗೆ 11 ಗಂಟೆಗೆ ಕಾವೇರಿ ಸಭಾಂಗಣದಲ್ಲಿ ನಡೆಯಲಿದೆ.
    ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ನ್ಯಾ|| ಚಂದ್ರಶೇಖರ್ ಗುರುಬಸಪ್ಪ ಹುನಗುಂದ್ ಅವರು ಶುಭ ಹಾರೈಕೆ ಹಾಗೂ ಪ್ರತಿಭಾ ಪುರಸ್ಕಾರ ನೀಡುವರು. ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಅವರು ಅಧ್ಯಕ್ಷತೆ ವಹಿಸುವರು.
ಆಗಸ್ಟ್ 3 ರಂದು ಅರಿವು -ನೆರವು ಕಾರ್ಯಕ್ರಮ
   ಮೈಸೂರು,ಜು.31.ಬೆಂಗಳೂರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘದ ಇವರುಗಳ ಸಂಯುಕ್ತಾಶ್ರಯದಲ್ಲಿ ಮಕ್ಕಳ ಅಪೌಷ್ಠಿಕತೆ ತಡೆಗಟ್ಟುವುದು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದರ ಬಗ್ಗೆ ಅರಿವು-ನೆರವು ಕಾರ್ಯಕ್ರಮವನ್ನು ಆಗಸ್ಟ್ 3 ರಂದು ಬೆಳಿಗ್ಗೆ 10 ಗಂಟೆಗೆ ಸೆನೆಟ್ ಭವನದಲ್ಲಿ ಆಯೋಜಿಸಲಾಗಿದೆ.
  ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಎನ್.ಕೆ. ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್. ಮುದಗಲ್ ಅವರು ಅಧ್ಯಕ್ಷತೆ ವಹಿಸುವರು.
   ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್ ಜಿ. ನಿಜಗಣ್ಣನವರ್, ಜಿಲ್ಲಾಧಿಕಾರಿ ಎಸ್. ಪಾಲಯ್ಯ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿನವ್ ಖರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಹೆಚ್.ವಿ.ಎಸ್. ಮೂರ್ತಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಸಿ.ಎಂ. ಜಗದೀಶ್ ಹಾಗೀ ಸಿ. ಅಪ್ಪಾಜಿಗೌಡ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಬೆಳಿಗ್ಗೆ 11 ರಿಂದ ಮಧ್ಯಾಹ್ನ 12-15 ಗಂಟೆಯವರೆಗೆ ಮಕ್ಕಳಲ್ಲಿ ಅಪೌಷ್ಠಿಕತೆ, ಕಾರಣ ಮತ್ತು ಪರಿಹಾರ ಹಾಗೂ ಮಕ್ಕಳ ಅಪೌಷ್ಠಿಕತೆ ನಿವಾರಣೆಯಲ್ಲಿ ವಿವಿಧ ಇಲಾಖೆಗಳ ಪಾತ್ರ ಕುರಿತು ಮೈಸೂರಿನ ಮಾನಸ ಗಂಗೋತ್ರಿಯ ಆಹಾರ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಜಿ ಸರಸ್ವಾತಿ ಅವರು ಉಪನ್ಯಾಸ ನೀಡುವರು.
    ಮಧ್ಯಾಹ್ನ 12-30 ರಿಂದ ಮಕ್ಕಳು ಶಾಲೆ ಬಿಡಲು ಕಾರಣ ಮತ್ತು ಪರಿಹಾರ, ಇದನ್ನು ತಡೆಗಟ್ಟುವಲ್ಲಿ ವಿವಿಧ ಇಲಾಖೆಗಳ ಪಾತ್ರ ಕುರಿತು ಮೈಸೂರಿನ ಆರ್.ಐ.ಇ. ಪ್ರಾಧ್ಯಾಪಕ ಪ್ರೊ. ಸಿ.ಜಿ.ವೆಂಕಟೇಶ್‍ಮೂರ್ತಿ ಅವರು ಉಪನ್ಯಾಸ ನೀಡುವರು.   
ಮಿಲಿಟರಿ ಕಾಲೇಜಿನಲ್ಲಿ 8ನೇ ತರಗತಿ ಪ್ರವೇಶಕ್ಕಾಗಿ ಪರೀಕ್ಷೆ
ಮೈಸೂರು,ಜು.31.(ಕ.ವಾ.)-ಜುಲೈ 2015ನೇ ಅಧಿವೇಶನಕ್ಕಾಗಿ ಉತ್ತರಕಾಂಡ ರಾಜ್ಯದ ಡೆಹರಾಡೂನ್, ಇಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ 8ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆ ಡಿಸೆಂಬರ್ 01 ಮತ್ತು 02, 2014 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ ದಿನಾಂಕ 01-07-2015 ರಂತೆ 11ಳಿ ವರ್ಷದಿಂದ 13 ವರ್ಷದೊಳಗಿರುವ ( ದಿನಾಂಕ 02-07-2002 ರಿಂದ 01-01-2004 ರೊಳಗೆ ಜನಿಸಿರುವ) ಬಾಲಕರು ಮಾತ್ರ ಈ ಪರೀಕ್ಷೆಗೆ ಅರ್ಹರು.
ವಿವರಣ ಪತ್ರ ಹಾಗೂ ಹಳೇ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಅರ್ಜಿ ನಮೂನೆಯನ್ನು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭವನ, ನಂ.58, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು-560 025 ಇಲ್ಲಿಂದ ``ಖಿಊಇ ಅಔಒಒಂಓಆಂಓಖಿ ಖIಒಅ ಆಇಊಖಂಆUUಓ" Pಂಙಂಃಐಇ ಂಖಿ SಃI, ಖಿಇಐ ಃಊಂಗಿಂಓ, ಆಇಊಖಂಆUಓ (ಃಂಓಏ ಅಔಆಇ ಓಔ.01576) ಇವರ ಹೆಸರಿನಲ್ಲಿ ಸೆಳೆದ ರೂ. 400/-ಗಳಿಗೆ (ಸಾಮಾನ್ಯ ಅಭ್ಯರ್ಥಿಗಳಿಗೆ) & ರೂ. 355/- (ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ) ಪಡೆದ ಬ್ಯಾಂಕ್ ಡ್ರಾಫ್ಟ್ (ಬೆಂಗಳೂರು ಬ್ಯಾಂಕ್ ಶಾಖೆಯಲ್ಲಿ ಪಾವತಿಯಾಗುವಂತೆ) ಪಾವತಿಸಿ ಪಡೆಯಬಹುದಾಗಿದೆ. ರಿಜಿಸ್ಟರ್ಡ್ ಪಾರ್ಸಲ್ ಮೂಲಕ ಅರ್ಜಿ ನಮೂನೆಗಳನ್ನು ಪಡೆಯಲಿಚ್ಛಿಸುವವರು ಮೇಲೆ ತಿಳಿಸಿದ  ಬ್ಯಾಂಕ್ ಡ್ರಾಫ್ಟ್‍ನೊಂದಿಗೆ 11 ಇಂಚು ಉದ್ದ ಮತ್ತು 9 ಇಂಚು ಅಗಲದ ಸೈಜಿನ ಸ್ವ-ವಿಳಾಸದ ಲಕೋಟೆಯ ಮೇಲೆ ರೂ. 40/- ಮೌಲ್ಯದ ಅಂಚೆ ಚೀಟಿಗಳನ್ನು ಅಂಟಿಸಿ ಕಳುಹಿಸತಕ್ಕದ್ದು.ಲಕೋಟೆಯ ಮೇಲೆ ಅಭ್ಯರ್ಥಿಯ ಪೂರ್ಣ ಅಂಚೆ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು.
ಭರ್ತಿ ಮಾಡಿದ ಅರ್ಜಿ ನಮೂನೆಯ ಎರಡು ಪ್ರತಿಗಳನ್ನು ಹಾಗೂ ಅದರ ಅಗತ್ಯ ಅಡಕಗಳನ್ನು ಲಗತ್ತಿಸಿ ದಿನಾಂಕ:  30 ಸೆಪ್ಟಂಬರ್ 2014ರೊಳಗೆ ಸಲ್ಲಿಸುವುದು.
ಹೆಚ್ಚಿನ ವಿವರಗಳಿಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು-560 025 (ದೂರವಾಣಿ ಸಂಖ್ಯೆ 080-25589459)ನ್ನು ಸಂಪರ್ಕಿಸಬಹುದು.
ಬ್ಯಾಂಕ್ ಖಾತೆ ಸಂಖ್ಯೆ ನೀಡಿ
     ಮೈಸೂರು,ಜು.31. ಪಡಿತರ ಚೀಟಿದಾರರು ಸೀಮೆಎಣ್ಣೆ ನೇರ ನಗದು ಯೋಜನೆ ಲಾಭ ಪಡೆಯಲು ತಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಸಲ್ಲಿಸುವುದು ತಪ್ಪಿದಲ್ಲಿ 2014 ಆಗಸ್ಟ್ ಮಾಹೆಯ ಸೀಮೆಎಣ್ಣೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಡಾ|| ಕೆ. ರಾಮೇಶ್ವರಪ್ಪ ಅವರು ತಿಳಿಸಿದ್ದಾರೆ.
     ಮೈಸೂರು ನಗರದ ಮಂಡಿಮೊಹಲ್ಲಾ, ಲಷ್ಕರ್ ಮೊಹಲ್ಲಾ, ಎನ್.ಆರ್. ಮೊಹಲ್ಲಾ, ದೇವರಾಜ ಮೊಹಲ್ಲಾ ಹಾಗೂ ನಜರಬಾದ್ ಮೊಹಲ್ಲಾದ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ನೇರ ನಗದು ಯೋಜನೆ ಅನುಷ್ಠಾನ ಮಾಡಲು ಬ್ಯಾಂಕ್ ಖಾತೆ ಸಂಖ್ಯೆಯನ್ನು ಮಾರ್ಚ್ 2014 ರೊಳಗಾಗಿ ನೀಡುವಂತೆ ತಿಳಿಸಲಾಗಿತ್ತು. 5 ತಿಂಗಳು ಕಳೆದರು ನ್ಯಾಯಬೆಲೆ ಅಂಗಡಿಗಳಲ್ಲಿ ಶೇ. 50 ರಷ್ಟು ಪಡಿತರ ಚೀಟಿದಾರರು ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀಡಿರುವುದಿಲ್ಲ.
    ಸೀಮೆಎಣ್ಣೆ ನೇರ ನಗದು ಯೋಜನೆ ಅನುಷ್ಠಾನಕ್ಕಾಗಿ ಪಡಿತರ ಚೀಟಿದಾರರಿಗೆ ಶೂನ್ಯ ಠೇವಣಿ ಖಾತೆಯನ್ನು ತೆರೆಯಲು ಅವಕಾಶ ಮಾಡಿಕೊಡುವಂತೆ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಕೋರಲಾಗಿದೆ. ಪಡಿತರ ಚೀಟಿದಾರರು ಬ್ಯಾಂಕ್ ಖಾತೆ ತೆರೆದು  ಬ್ಯಾಂಕ್ ಖಾತೆ ಸಂಖ್ಯೆಯನ್ನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ನೀಡುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Wednesday 30 July 2014

ಬೆಂಗಳೂರು-ವಿಧಾನ ಸೌದದಲ್ಲಿ 2ರೂಗೆ 20ಲೀಟರ್ ಶುದ್ದ ಕುಡಿಯುವ ನೀರು ಯೋಜನೆಯ ಘಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ.

ಬೆಂಗಳೂರು-ವಿಧಾನ ಸೌದದಲ್ಲಿ 2ರೂಗೆ 20ಲೀಟರ್ ಶುದ್ದ ಕುಡಿಯುವ ನೀರು ಯೋಜನೆಯ ಘಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.ಸಂದರ್ಭದಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಹೆಚ್.ಕೆ.ಪಾಟಿಲ್,ವಾರ್ತಾಸಚಿವ ರೋಷನ್ ಬೇಗ್,ಡಿ.ಹೆಚ್.ಶಂಕರಮೂರ್ತಿ,ಸ್ವೀಕರ್ ಕಾಗೋಡು ತಿಮ್ಮಪ್ಪ ಉಪಸ್ಥಿತರಿದ್ದರು.

PIB-ಕಚ್ಚಾ ತೈಲ ಬೆಲೆಯಲ್ಲಿ ಅಲ್ಪ ಏರಿಕೆ

ಕಚ್ಚಾ ತೈಲ ಬೆಲೆಯಲ್ಲಿ ಅಲ್ಪ ಏರಿಕೆ

 ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಮರ್ಶಾ ಘಟಕ ಪ್ರಕಟಿಸಿದ ಇತ್ತೀಚಿನ ತೈಲ ಬೆಲೆ ಪಟ್ಟಿಯ ಪ್ರಕಾರ ದಿನಾಂಕ 29-07-2014 ರಂದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಕಚ್ಚಾತೈಲದ ಬೆಲೆ ಬ್ಯಾರೆಲ್‍ಗೆ ಡಾಲರ್  106.34 ಕ್ಕೆ ಏರಿದೆ. ಅದು ದಿನಾಂಕ 25-7-2014 ರಂದು ಡಾಲರ್ 106.01ನಷ್ಟಿತ್ತು.

                                           ಭಾರತ ಸರ್ಕಾರದ ವಾರ್ತಾ ಶಾಖೆ

ಬೆಂಗಳೂರು

ರಾಷ್ಟ್ರಪತಿ ಭವನದ ವಸ್ತು ಸಂಗ್ರಹಾಲಯ

ಆಗಸ್ಟ್ 1, 2014ರಿಂದ ಸಾರ್ವಜನಿಕ ವೀಕ್ಷಣೆಗೆ ಲಭ್ಯ

ರಾಷ್ಟ್ರಪತಿ ಭವನದ ವಸ್ತು ಸಂಗ್ರಹಾಲಯ ಆಗಸ್ಟ್ 1, 2014ರಿಂದ ಸಾರ್ವಜನಿಕ ವೀಕ್ಷಣೆಗೆ ತೆರದಿರುತ್ತದೆ.  ವಸ್ತು ಸಂಗ್ರಹಾಲಯ ಸಾರ್ವಜನಿಕ ರಜೆಗಳನ್ನು ಹೊರತುಪಡಿಸಿ ಪ್ರತೀ ಶುಕ್ರವಾರ, ಶನಿವಾರ ಮತ್ತು ರವಿವಾರಗಳಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ತೆರೆದಿರುತ್ತದೆ.

ಆಗಸ್ಟ್ 1, 2014ರಿಂದ ಅಕ್ಟೋಬರ್ 30, 2014ರ ವರೆಗೆ ವಸ್ತು ಸಂಗ್ರಹಾಲಯದ ವೀಕ್ಷಣೆ ಶುಲ್ಕ ರಹಿತವಾಗಿರುತ್ತದೆ.  ವಸ್ತು ಸಂಗ್ರಹಾಲಯದಲ್ಲಿ ರಾಷ್ಟ್ರಪತಿ ಭವನದ ಹಿನ್ನೆಲೆಯ ಕುರಿತ ಧ್ವನಿ-ಬೆಳಕಿನ  ಆನಿಮೇಶನ್ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇ ಮೇಲ್ ವಿಳಾಸ  ಡಿeಛಿeಠಿಣioಟಿ-oಜಿಜಿiಛಿeಡಿ@ಡಿb.ಟಿiಛಿ.iಟಿ  ಸಂಪರ್ಕಿಸಬಹುದು ಅಥವಾ 011-23013287, 23015321 ಇxಣಟಿ. 4662 ಸಂಖ್ಯೆಗಳಿಗೆ ಕರೆ ಮಾಡಬಹುದು. 

ಮಂಡ್ಯ- ವಿದ್ಯಾರ್ಥಿಗಳು ವಿಶ್ವದ ಪ್ರಜೆಯಾಗಬೇಕು-ಪ್ರದೀಪ್‍ಕುಮಾರ್

 ವಿದ್ಯಾರ್ಥಿಗಳು ವಿಶ್ವದ ಪ್ರಜೆಯಾಗಬೇಕು-ಪ್ರದೀಪ್‍ಕುಮಾರ್
ಮಂಡ್ಯ-ವಿದ್ಯಾರ್ಥಿಗಳು ವಿಶ್ವದ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕಾವೇರಿ ಪಬ್ಲಿಕ್ ಸ್ಕೂಲ್‍ನ ಪ್ರಾಂಶುಪಾಲ ಪ್ರದೀಪ್‍ಕುಮಾರ್ ಅಭಿಪ್ರಾಯಪಟ್ಟರು.
ಶಾಲೆಯ ಆವರಣದಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೇಶದ ಆಸ್ತಿ ಆದರೆ ಸಾಲದು, ಜಾಗೃತ ಪ್ರಜೆಗಳಾಗಬೇಕು, ವಿಶ್ವದ ಪ್ರಜೆಗಳಾಗಬೇಕು, ಈ ನಿಟ್ಟಿನಲ್ಲಿ ಶಾಲೆಗಳು ಭೂನಾದಿ ಹಾಕಬೇಕು ಎಂದು ತಿಳಿಸಿದರು.
ಶಿP್ಷÀಣ ಸಂಸ್ಥೆಗಳು ಮೌಲ್ಯಾಧಾರಿತ ಶಿP್ಷÀಣ ನೀಡುವ ಮೂಲಕ ನಮ್ಮ ದೇಶದ ಸಂಸ್ಕøತಿಯ ಬಗ್ಗೆ ಅರಿವು ಮೂಡಿಸಬೇಕು, ಕೇವಲ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಮನರಂಜನೆಗೆ ಸೀಮಿತರಾಗದೇ ಅವಿಭಕ್ತಕುಟುಂದ ಕಲ್ಪನೆ ಮೂಡಿಸಬೇಕು, ಹಬ್ಬ ಹರಿದಿನಗಳ ಬಗ್ಗೆ ತಿಳಿ ಹೇಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ನಾರಾಯಣ್, ಡಾ.ವಿಕ್ರಂ, ವಿಶ್ವಾಸ್, ಫಾದರ್ ಸಿಜೂಕರಿಯ ಉಪಸ್ಥಿತರಿದ್ದರು.
ಫೋಟೋ.30ಬಿಟಿಜಿ1- ಭಾರತೀನಗರದ ವೀರಶೈವ ಸಮುದಾಯ ಭವನದಲ್ಲಿ ನಡೆದ ಯೋಗಶಿಬಿರದ ಸಮಾರೋಪ ಸಮಾರಂಭದಲ್ಲಿ ಯೋಗಗುರು ಮಲ್ಲಿಕಾರ್ಜುನಾರವರಿಗೆ ಯೋಗರತ್ನ ಪ್ರಶಸ್ತಿಯನ್ನು ನೀಡಲಾಯಿತು.


ಭಾರತೀನಗರ.ಜು.30-ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗಿ ಯಾಂತ್ರಿಕ ಬದುಕು ಸಾಗಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬರು ಮನಸ್ಸನ್ನು ಗೆಲ್ಲಬೇಕಾದರೆ ಯೋಗ ಅತ್ಯವಶ್ಯಕವಾಗಿದೆ ಎಂದು ಧನಗೂರು ಮಠದ ಷಡಕ್ಷರ ಮುಮ್ಮಡಿ ದೇಶಿಕೇಂದ್ರ ಶಿವಚಾರ್ಯಸ್ವಾಮೀಜಿ ತಿಳಿಸಿದರು.
  ಇಲ್ಲಿನ ವೀರಶೈವ ಸಮುದಾಯ ಭವನದಲ್ಲಿ ಪತಾಂಜಲಿ ಯೋಗಾಶ್ರಮ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗಶಿಬಿರದ ಸಮಾರೋಪ ಸಮಾರಂಭದಲ್ಲಿ ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ಯುವಕರು ಸದೃಢರಾಗಿ ದೇಶಕಟ್ಟುವ ಕೆಲಸ ಮಾಡುವ ಬದಲು ಸೋಮಾರಿಗಳಾಗಿ ಜೀವನದ ಗುರಿಯನ್ನೇ ಮರೆತ್ತಿದ್ದಾರೆಂದು ವಿಷಾಧಿಸಿದರು.
  ಎಲ್ಲಾ ರಂಗಗಳು ಕಲುಷಿತಗೊಂಡಿವೆ. ಯೋಗದ ಶಿಬಿರದ ಮೂಲಕ ಜ್ಞಾನದ ಶಕ್ತಿಯನ್ನು ಪಡೆಯುವುದರೊಂದಿಗೆ ಚಂಚಲ ಮನಸ್ಸನ್ನು ತಡೆಹಿಡಿಯ ಬಹುದಾಗಿದೆ ಎಂದು ತಿಳುವಳಿಕೆ ನೀಡಿದರು.
  ತಾಯಿಯೇ ಮೊದಲ ಗುರು ಆಗಿರುವುದರಿಂದ ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬಹುದಾಗಿದೆ. ಆದರೆ ಟಿ.ವಿ.ಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳಿಗೆ ಮೊರೆಹೋಗಿ ತಮ್ಮ ಕರ್ತವ್ಯವನ್ನೇ ಮರೆತ್ತಿದ್ದಾರೆ ಎಂದರು.
  ಮುಖ್ಯಶಿಕ್ಷಕ ಎಂ.ಮಾಯಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗಗುರು ಮಲ್ಲಿಕಾರ್ಜುನಾಸ್ವಾಮಿ ಕೆ.ಎಂ.ದೊಡ್ಡಿಯಲ್ಲಿ 34 ಶಿಬಿರಗಳನ್ನು ಯಶಸ್ವಿಯಾಗಿ ಪೂರೈಸಿ ಯೋಗದ ಮೂಲಕ ಸಮಾಜ ಮುಖಿ ಕೆಲಸದಲ್ಲಿ ತೊಡಗಿದ್ದಾರೆಂದು ಪ್ರಶಂಸಿದರು.
   ವೇಗದ ಜೀವನದಲ್ಲಿ ಮಾನವೀಯ ಸಂಬಂಧಗಳು ಹಾಗೂ ಸದ್ಗುಣಗಳು ಕಡಿಮೆಯಾಗುತ್ತಿವೆ. ನೈತಿಕ ದಿವಾಳಿ ತನ ಹೆಚ್ಚಾಗುತ್ತಾ ಹೋಗುತ್ತಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಮನಸ್ಸನ್ನು ನಿಯಂತ್ರಣಗೊಳಿಸಲು ಯೋಗ ಅತ್ಯವಶ್ಯಕ ಎಂದರು.
 ಇದೇ ಸಂದರ್ಭದಲ್ಲಿ ಯೋಗಗುರು ಮಲ್ಲಿಕಾರ್ಜುನಾಸ್ವಾಮಿಗೆ ಭಾರತೀನಗರ ಯೋಗಶಿಬಿರಾರ್ಥಿಗಳಿಂದ ಯೋಗರತ್ನಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
    ಸರ್ಕಲ್ ಇನ್ಸ್‍ಪೆಕ್ಟರ್ ಗೋಪಾಲ್, ಹಿರಿಯ ಪತ್ರಕರ್ತ ಅಣ್ಣೂರು ಲಕ್ಷ್ಮಣ್, ವೀರಶೈವ ಸಂಘದ ಅಧ್ಯಕ್ಷ ಶಿವಣ್ಣ, ಮಾಯಪ್ಪರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
   ಹಿರಿಯ ಪತ್ರಕರ್ತ ಅಣ್ಣೂರು ಲಕ್ಷ್ಮಣ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
  ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜಕರಾದ ಜನನಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಜಗದೀಶ್,  ಬಿದರಹಳ್ಳಿ ಹನುಮೇಗೌಡ, ಯೋಗಪಟು ನಾಗಮ್ಮಮಲ್ಲಿಕಾರ್ಜುನಾಸ್ವಾಮಿ, ಸೌಮ್ಯ, ಶಶಿಕುಮಾರ್, ತಿಪ್ಪೂರು ಕೃಷ್ಣ, ಬಸವರಾಜು,  ಸೇರಿದಂತೆ ಇತರರು ಉಪಸ್ಥಿತರಿದ್ದರು.
========================================

 
 ಭಾರತೀನಗರ.ಜು.30- ದುಷ್ಕರ್ಮಿಗಳು 4 ಅಂಗಡಿಗಳ ಬಾಗಿಲು ಮುರಿದು ಸುಮಾರು 53 ಸಾವಿರ ರೂ ಹಣವನ್ನು  ದೋಚಿ ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ಕೆ.ಎಂ.ದೊಡ್ಡಿಯ ಹಲಗೂರು ರಸ್ತೆಯಲ್ಲಿ ನಡೆದಿದೆ.
   ಮಧು ಎಂಬುವವರಿಗೆ ಸೇರಿದ ಸಂತೋಷ್ ಪೀಡ್ಸ್ ಅಂಗಡಿಯಲ್ಲಿ 20 ಸಾವಿರ, ಕೃಷ್ಣಪ್ಪ ಮಾಲೀಕತ್ವದ ಸಂತೋಷ್ ಬಾರ್‍ನಲ್ಲಿ 10 ಮದ್ಯಬಾಟಲ್‍ಗಳು,  ಯೋಗೇಶ್ ಎಂಬುವವರಿಗೆ ಸೇರಿದ ಮಹಾಲಕ್ಷ್ಮಿ ಜನರಲ್‍ಸ್ಟೋರ್‍ನಲ್ಲಿ 30 ಸಾವಿರ ಹಾಗೂ ಬಸವೇಶ್ವರ ಜನರಲ್ ಸ್ಟೋರ್‍ನಲ್ಲಿ 3 ಸಾವಿರ ರೂಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
  ಸ್ಥಳಕ್ಕೆ ಸರ್ಕಲ್ ಇನ್ಸ್‍ಪೆಕ್ಟರ್ ಗೋಪಾಲ್ ಆಗಮಿಸಿ ಪರಿಶೀಲನೆ ನಡೆಸಿದರು.


ಮಂಡ್ಯ-4ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಸ್.ಕೃಷ್ಣಸ್ವರ್ಣಸಂದ್ರ ಆಯ್ಕೆ

4ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎಸ್.ಕೃಷ್ಣಸ್ವರ್ಣಸಂದ್ರ ಆಯ್ಕೆ
ಮಂಡ್ಯ: ಇದೇ ಆಗಸ್ಟ್ 5ರಂದು ನಗರದ ಕಲಾಮಂದಿರದಲ್ಲಿ ಜರುಗಲಿರುವ 4ನೇ ಮಂಡ್ಯ ಜಿಲ್ಲಾ ಚುಟುಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಖ್ಯಾತ ಸಾಹಿತಿ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ ಆಯ್ಕೆಯಾಗಿದ್ದಾರೆ.
ಮಂಗಳವಾರ ಸಂಜೆ ನಗರದ ಬಾಲಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಿ.ವಿ.ನಾಗರಾಜು, ಕೃಷ್ಣಸ್ವರ್ಣಸಂದ್ರ ಅವರನ್ನು ಅಭಿನಂದಿಸುವ ಮೂಲಕ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿ, ಸಮ್ಮೇಳನಕ್ಕೆ ಅವರನ್ನು ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿ.ವಿ.ನಾಗರಾಜು, ಎಸ್.ಕೃಷ್ಣಸ್ವರ್ಣಸಂದ್ರ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರನ್ನು 4ನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪರಿಷತ್‍ನ ಉಪಾಧ್ಯಕ್ಷ ಹಾಗೂ ನಗರಸಭಾ ಸದಸ್ಯ ಎಸ್.ಕೆ.ಶಿವಪ್ರಕಾಶ್‍ಬಾಬು, ಪ್ರಧಾನ ಕಾರ್ಯದರ್ಶಿ ಮಂಡ್ಯ ಸತ್ಯನ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಕೆ.ಪ್ರಹ್ಲಾದ್‍ರಾವ್, ಎಂ.ವಿ.ಧರಣೇಂದ್ರಯ್ಯ, ಗಾಯಕರಾದ ಡೇವಿಡ್, ಶ್ರೀಧರ್, ಮುಖಂಡರಾದ ಸುರೇಶ್, ರಮೇಶ್, ಪುರುಷೋತ್ತಮ್, ಅವಿನಾಶ್ ನಾಗಣ್ಣ, ಸ್ವಾಮಿ, ಶಿವಣ್ಣ ಇತರರು ಉಪಸ್ಥಿತರಿದ್ದರು.
ಸಮ್ಮೇಳನಾಧ್ಯಕ್ಷರ ಪರಿಚಯ: ಎಸ್.ಕೃಷ್ಣಸ್ವರ್ಣಸಂದ್ರ ಅವರು ಸಾಹಿತ್ಯ, ಸಂಘಟನೆ, ಪತ್ರಿಕೋದ್ಯಮ, ಸಾಂಸ್ಕøತಿಕ ಕಾರ್ಯಕ್ರಮಗಳ ಆಯೋಜನೆ, ಹೀಗೆ ಬಹುಮುಖ ಪ್ರತಿಭೆಗೆ ಹೆಸರಾಗಿದ್ದಾರೆ. ಹರೆಯ ಕಿರಿಯದಾದರೂ ಉತ್ಸಾಹ ಹಿರಿದಾಗಿದೆ. ಕಾಯಕಜೀವಿಯಾಗಿ  ಹೊಸ ನಿರೀಕ್ಷೆಗಳನ್ನು ಮೂಡಿಸುತ್ತಿರುವ ಕೃಷ್ಣಸ್ವರ್ಣಸಂದ್ರ ರವರು ಒಬ್ಬ ಅದ್ವಿತೀಯ ಸಾಹಿತ್ಯಿಕ, ಸಾಂಸ್ಕøತಿಕ ಯುವ ಮುಂದಾಳು, ಸಹೃದಯತೆ ಸ್ನೇಹಜೀವಿ.
ಕೆಂಪೇಗೌಡ ಸಿದ್ದಲಿಂಗಯ್ಯ ಹಾಗೂ ಕೆಂಪಮ್ಮ ದಂಪತಿಗಳ ಪುತ್ರರಾಗಿ ಮಂಡ್ಯದ ಸ್ವರ್ಣಸಂದ್ರದಲ್ಲಿ 21-11-1968ರಲ್ಲಿ ಜನ್ಮ ತಾಳಿದ ಅವರು, ಗುತ್ತಲುವಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿ, ಮೈಷುಗರ್ ಶಾಲೆಯಲ್ಲಿ  ಪ್ರೌಢ ಶಿಕ್ಷಣ ಪಡೆದು, ಪಿಇಎಸ್ ಕಾಲೇಜಿನಲ್ಲಿ ಪದವಿಗಳಿಸಿ, ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜಾನಪದ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಪ್ರಸ್ತುತ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೃಷ್ಣ ಅವರು ಕನ್ನಂಬಾಡಿ ದಿನಪತ್ರಿಕೆ ಸಂಪಾದಕರಾಗಿದ್ದು, ಮಂಡ್ಯದ ಪ್ರತಿಷ್ಟಿತ ಪಿಇಎಸ್ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಜಾನಪದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಓದಿನ ದಿನಗಳಲ್ಲೇ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿ ವಿದ್ಯಾರ್ಥಿಗಳ ಸಮಸ್ಯೆ ಹಾಗೂ ಕಾವೇರಿ ಸಮಸ್ಯೆ ವಿರುದ್ಧ ಹೋರಾಟ ನಡೆಸಿದವರು. ಎಂ.ಎ. ಪದವಿ ಗಳಿಸುವಾಗ ಕ್ಯಾಂಪಸ್ ಕಣ್ಣು ಎಂಬ ಪತ್ರಿಕೆಯ ಸಂಪಾದಕರಾಗಿ ದುಡಿದವರು. ನಂತರ ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆಯನ್ನು 1997ರಲ್ಲಿ ಸಂಸ್ಥಾಪಿಸಿ, ಅಧ್ಯಕ್ಷರಾಗಿ ಪ್ರತಿವರ್ಷ ಜಾನಪದ, ಭಾವಗೀತಾ ಸ್ಪರ್ಧೆ, ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ, ಕವಿಕಾವ್ಯ ಮೇಳ ಆಯೋಜನೆ, ಉದಯೋನ್ಮುಖ ಕವಿಗಳ ಪುಸ್ತಕ ಮುದ್ರಣ ಇವರ ಸಾಧನೆಗೆ ಸಾಕ್ಷಿಯಾಗಿದೆ. ಮೂರು ಅವಧಿಗೆ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ ಇವರು ಮಾಡಿದ ಸಾಧನೆ ಅನನ್ಯ.
ಸಾಹಿತ್ಯ ಕೃಷಿ: ಇದುವೇ ಭಾರತ (ಕವನ ಸಂಕಲನ), ಹನಿಕೇಕ್ (ಚುಟುಕು ಸಂಕಲನ), ಧರ್ಮದ್ವಜ (ನಾಟಕ), ಪರ್ವ ಕಾಲ (ಕಾದಂಬರಿ), ಗುಡ್ಡೆಬಾಡು (ಸಮಗ್ರ ಸಾಹಿತ್ಯ), ಮರ್ಯಾದಾ ಹತ್ಯೆ( ಕಥಾ ಸಂಕಲನ), ಬದುಕು ಸಪ್ತಬಣ್ಣ(ಕವನ ಸಂಕಲನ), ವಿಶ್ವರೂಪ(ಲೇಖನ ಸಂಗ್ರಹ) ಹಾಗೂ ಪುಣ್ಯಕೋಟಿ (ಪರಿಷ್ಕøತ ಸಮಗ್ರ ಸಾಹಿತ್ಯ) ಸೇರಿದಂತೆ ಹತ್ತು ಸ್ವತಂತ್ರ ಕೃತಿ ರಚಿಸಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ.
ಸಂಪಾದಕತ್ವ: ದರಿದ್ರರ ಮಾಕ್ಸ್‍ಕಾರ್ಡ್ ಸಾಹಿತ್ಯ, ನೆಲದ ನಗು, ಕಣಜ, ಹೊನ್ನೇರು, ನೆಲದ ನುಡಿ, ಸುಗ್ಗಿ, ಮುಂಗಾರು, ಕನ್ನಂಬಾಡಿ, ಪಾಂಚಜನ್ಯ, ಬೇವು-ಬೆಲ್ಲ, ಕಬ್ಬಿನ ಜಲ್ಲೆ, ತೂಗುವ ಗೊನೆಮಾವು,  ಕವನ ಸಂಕಲನಗಳನ್ನು ಹಾಗೂ ಕಾಚಕ್ಕಿ, ತವರು ಸ್ಮರಣ ಸಂಚಿಕೆಯನ್ನು ಸಂಪಾದಿಸಿ ಹೊರ ತಂದಿದ್ದಾರೆ. ರಾಜ್ಯದ ಉದಯೋನ್ಮಖ ಕವಿಗಳನ್ನು ಪ್ರೋತ್ಸಹಿಸಿದ್ದಾರೆ.
ಪ್ರಶಸ್ತಿ ಗೌರವ : ಇವರ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಸಾಧನೆಗಾಗಿ ಸಚಿವ ಎಸ್.ಡಿ.ಜಯರಾಂ ಅವರ ಸಾಹಿತ್ಯ ಮತ್ತು ಪತ್ರಿಕೋದ್ಯಮ ಪ್ರಶಸ್ತಿ, ಕರವೇಯಿಂದ ಕಾಯಕ ಯೋಗಿ ಪ್ರಶಸ್ತಿ, ಚುಟುಕು ಸಾಹಿತ್ಯ ಪರಿಷತ್‍ನಿಂದ ಕಾಯಕ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮುಡಾದಲ್ಲಿ ಭ್ರಷ್ಟಾಚಾರ ಸ್ಫೋಟ ತನಿಖಾ ವರದಿಗಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ, ಜಿಲ್ಲಾಡಳಿತದಿಂದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಪ್ರತಿನಿಧಿಯ ಗೌರವ. ಆದಿಚುಂಚನಗಿರಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹತ್ತು ಹಲವು ಪ್ರಶಸ್ತಿ ನೀಡಿ ಗೌರವಿಸಿದೆ. ವಿಜಾಪುರದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಕವಿಗೋಷ್ಟಿಯಲ್ಲಿ ಕವನ ವಾಚನ ಮಾಡಿದ ಹೆಗ್ಗಳಿಕೆ ಕೃಷ್ಣ ಅವರದ್ದಾಗಿದ್ದು, ಇವರ ಗುಡ್ಡೆಬಾಡು ಕಥೆಗೆ ಕರವೇ ನಲ್ನುಡಿ ಪತ್ರಿಕೆ ಆಯೋಗಿಸಿದ್ದ ರಾಜ್ಯೋತ್ಸವ ಕಥಾ ಸ್ಪರ್ದೆಯಲ್ಲಿ ತೃತೀಯ ಬಹುಮಾನ ಲಭಿಸಿದ್ದು, ಪ್ರಶಂಸೆಗೆ ಪಾತ್ರವಾಗಿದೆ. ಇವರ ಧರ್ಮಧ್ವಜ ನಾಟಕ ದ್ವಿತೀಯ ಮುದ್ರಣವನ್ನು ಕಂಡು, ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ವಿಮರ್ಶೆಗೊಂಡಿದೆ. ಅಲ್ಲದೇ ರಂಗ ಪ್ರಯೋಗವಾಗಿದೆ. ಪುಷ್ಪ ಇವರ ಬಾಳಿನ ಬೆಳಕು. ಎಂ.ಕೆ.ಮೋಹನ್‍ರಾಜ್ ಮತ್ತು ಮದನ್‍ಗೌಡ ಇವರ ಬಾಳಿನ ಎರಡು ಕಣ್ಣುಗಳು. ಇವರ ಸಾಹಿತ್ಯ, ಸಂಘಟನೆ ಹಾಗೂ ಪತ್ರಿಕೋದ್ಯಮದ ಅಪಾರ ಸಾಧನೆಯನ್ನು ಮನಗಂಡು ಇದೇ ಆಗಸ್ಟ್ 5ರಂದು ಮಂಡ್ಯ ನಗರದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಿರುವ ನಾಲ್ಕನೇ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಕೆ.ಆರ್.ಪೇಟೆ-ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣದ ಸಂಸ್ಕಾರವನ್ನು ಕೊಡಿಸಿ- ಕ್ಷೇತ್ರಶಿಕ್ಷಣಾಧಿಕಾರಿ ಎಸ್.ರೇವಣ್ಣ ಮನವಿ

ಕೃಷ್ಣರಾಜಪೇಟೆ. ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಸತ್ಪ್ರಜೆಗಳಾದ್ದರಿಂದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣದ ಸಂಸ್ಕಾರವನ್ನು ಕೊಡಿಸಿ ತಮ್ಮ ಮಕ್ಕಳನ್ನೇ ಸಮಾಜಕ್ಕೆ ಕೊಡುಗೆಯಾಗಿ ನೀಡಿ ನಾಗರಿಕ ಸಮಾಜದಲ್ಲಿನ ಒಂದೇ ಒಂದು ಮಗುವೂ ಕೂಡ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಸ್.ರೇವಣ್ಣ ಮನವಿ ಮಾಡಿದರು.
ಅವರು ಇಂದು ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ನಡೆದ ಶಾಲಾ ಮಕ್ಕಳ ವಿಶೇಷ ದಾಖಲಾತಿ ಆಂದೋಲನದ ಅಂಗವಾಗಿ ನಡೆದ ಜಾಗೃತಿ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಜ್ಞಾನವು ಯಾರೂ ಕದಿಯಲಾರದ ಆಸ್ತಿಯಾಗಿದೆ. ಶಿಕ್ಷಣದ ಜ್ಞಾನದ ಶಕ್ತಿಗೆ ಮಾತ್ರ ಸಾಮಾಜಿಕ ಅಸಮಾನತೆಯನ್ನು ಅಳಿಸಿಹಾಕಿ ಸಮಾನತೆಯ ಸಮಾಜವನ್ನು ನಿರ್ಮಿಸುವ ತಾಕತ್ತಿದೆಯಾದ್ದರಿಂದ ಸರ್ಕಾರದ ಆಶಯದಂತೆ 5ರಿಂದ15 ವರ್ಷದೊಳಗಿನ ಒಂದೇ ಒಂದು ಮಗುವೂ ಕೂಡ ಶಿಕ್ಷಣವನ್ನು ಪಡೆಯುವುದರಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಮಕ್ಕಳು ಆಟವಾಡಿಕೊಂಡು, ಓದಿ ವಿದ್ಯಾವಂತರಾಗುವ ಸಮಯದಲ್ಲಿ ಶಾಲೆಯನ್ನು ಬಿಡಿಸಿ ಬಾಲಕಾರ್ಮಿಕರನ್ನಾಗಿ ಮಾಡುವುದು ಹಾಗೂ ಮಕ್ಕಳ ಹಕ್ಕುಗಳ ಧಮನ ಮಾಡುವುದು ಕಾನೂನಿನ ದೃಷ್ಠಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಶಿಕ್ಷಣದ ಜ್ಞಾನವನ್ನು ಕೊಡಿಸಿ ಶ್ರೇಷ್ಠ ನಾಗರಿಕರನ್ನಾಗಿ ರೂಪಿಸಬೇಕು. ಈ ದಿಕ್ಕಿನಲ್ಲಿ ನಾಗರಿಕ ಸಮಾಜದ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಜಿ.ಬಿ.ರಾಮಪ್ಪ ಮಾತನಾಡಿ ಎಲ್ಲಾ ಜಾತಿ ಹಾಗೂ ವರ್ಗಗಳ ಮಕ್ಕಳಿಗೆ ಶಿಕ್ಷನದ ಜ್ಞಾನದ ಬೆಳಕನ್ನು ನೀಡುವ ಸರ್ಕಾರಿ ಶಾಲೆಗಳು ದೇವಾಲಯಗಳಿಗಿಂತಲೂ ಶ್ರೇಷ್ಠವಾಗಿವೆ. ಮಕ್ಕಳ ಅಭ್ಯುದಯದಲ್ಲಿ ಪೋಷಕರು ಸಂತೋಷ ಪಡಬೇಕಲ್ಲದೇ, ಮಕ್ಕಳಿಗೆ ಸರ್ಕಾರವು ಉಚಿತವಾಗಿ ನೀಡುತ್ತಿರುವ ಶಿಕ್ಷಣವನ್ನು ಕೊಡಿಸುವ ಬದ್ಧತೆಯನ್ನು ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು.
ಮುಖ್ಯಶಿಕ್ಷಕ ಸೋಮಶೇಖರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್.ಚಂದ್ರಶೇಖರ್, ಶಿಕ್ಷಣ ಸಂಯೋಜಕರಾದ ಪಿ.ಜೆ.ಕುಮಾರ್, ಬಲರಾಮು, ನವೀನ್, ಲೋಕೇಶ್, ಚೆನ್ನರಾಜು, ಯೋಗೇಂದ್ರ, ಎಸ್.ಕೆ.ರವಿಕುಮಾರ್, ಶಿಕ್ಷಕರಾದ ಲಕ್ಷ್ಮಣಗೌಡ, ನಾಗರಾಜೇಗೌಡ, ಸವಿತ ಮತ್ತಿತರರು ಜಾಥಾದಲ್ಲಿ ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ: 30-ಏಖPಇಖಿಇ-02  ಕೃಷ್ಣರಾಜಪೇಟೆ ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ ನಡೆದ ಶಾಲಾ ಮಕ್ಕಳ ವಿಶೇಷ ದಾಖಲಾತಿ ಆಂದೋಲನದ ಅಂಗವಾಗಿ ನಡೆದ ಜಾಗೃತಿ ಮೆರವಣಿಗೆಯನ್ನು ಉದ್ಘಾಟಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಜಿ.ಬಿ.ರಾಮಪ್ಪ ಮತ್ತಿತರರು ಚಿತ್ರದಲ್ಲಿದ್ದಾರೆ.

ಕೃಷ್ಣರಾಜಪೇಟೆ. ರಾಜ್ಯದ್ಯಂತ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯವನ್ನು ತಡೆಯುವಲ್ಲಿ ವಿಫಲವಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಇಂದು ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ ಮತ್ತು ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಅವರ ನೇತೃತ್ವದಲ್ಲಿ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿದ ವಕೀಲರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಾಲೂಕು ಕಛೇರಿಗೆ ತೆರಳಿ ತಹಶೀಲ್ದಾರ್ ಶ್ರೀಧರಮೂರ್ತಿ ಅವರಿಗೆ ಮನವಿ ಪತ್ರವನ್ನು ಅರ್ಪಿಸಿದರು. ವಕೀಲರಾದ ಕೆರೆಮೇಗಳಕೊಪ್ಪಲು ಶಂಕರೇಗೌಡ, ಎಂ.ಎಲ್.ಸುರೇಶ್, ಬಂಡಿಹೊಳೆ ಗಣೇಶ್, ಬಿ.ಎಲ್.ದೇವರಾಜು, ಕೆ.ಟಿ.ಮಂಜುಳ, ಬಿ.ಆರ್.ಪಲ್ಲವಿ, ಎಸ್.ಡಿ.ಸರೋಜಮ್ಮ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಮಂಡ್ಯ-ಸೇವೆ ಮಾಡುವುದು ರಕ್ತಗತವಾಗಿ ಬರಬೇಕು- ಲ. ಹೇಮಂತ್‍ಕುಮಾರ್

ಮಂಡ್ಯ: ಸೇವೆ ಮಾಡುವುದು ರಕ್ತಗತವಾಗಿ ಬರಬೇಕು. ಮನೆಯಿಂದಲೇ ಸೇವೆ ಮಾಡುವುದನ್ನು ಪ್ರಾರಂಭಿಸಬೇಕು. ನಂತರ ಸಂಸ್ಥೆಯಿಂದ ನಡೆಯುತ್ತದೆ. ನಾವು ಮಾಡುವ ಸೇವೆ ಕಡೆಯವರೆವಿಗೂ ಉಳಿಯುತ್ತದೆ ಎಂದು ಎಂ.ಜೆ.ಎಫ್.ನ ಮೊದಲನೇ ಉಪ ರಾಜ್ಯಪಾಲ ಲ. ಹೇಮಂತ್‍ಕುಮಾರ್ ತಿಳಿಸಿದರು.
ಷುಗರ್‍ಸಿಟಿ ಮಂಡ್ಯ ಲಯನ್ಸ್ ಸಂಸ್ಥೆ ವತಿಯಿಂದ ನಗರದ ಅಗ್ರಿ ಕ್ಲಬ್‍ನ ಸಭಾಂಗಣದಲ್ಲಿ ಲ. ಆರ್. ಸುರೇಶ್ ಮತ್ತು ತಂಡದವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಅವರು, ಎಲ್ಲಾ ಕ್ಲಬ್‍ಗಳೂ ಸೇರಿ ಟ್ರಸ್ಟ್‍ವೊಂದನ್ನು ರಚಿಸಿ ಆ ಮೂಲಕ ಸಮಾಜ ಸೇವೆಗೆ ತೊಡಗಿದಾಗ ಹೆಚ್ಚು ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಲಯನ್ಸ್ ಸಂಸ್ಥೆಯಲ್ಲಿ ಹೆಚ್ಚು ಹೆಚ್ಚಾಗಿ ಸದಸ್ಯತ್ವ ಮಾಡಿಸಿಕೊಳ್ಳುವುದರ ಜೊತೆಗೆ ಸಂಸ್ಥೆ ಬಿಟ್ಟು ತೆರಳದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದರು.
ನೂತನವಾಗಿ ಪದಗ್ರಹಣ ಸ್ವೀಕರಿಸಿ ತಂಡ ಎಲ್ಲರೂ ಒಗ್ಗಟ್ಟಿನಿಂದ ಉತ್ತಮ ಸಂಘಟನೆ ಮಾಡುವುದರ ಜೊತೆಗೆ ಸಮಾಜ ಸೇವಾ ಕಾರ್ಯಗಳನ್ನು ಮುಂದುವರಿಸಿ, ಸದಸ್ಯರ ಸಹಕಾರವಿಲ್ಲದೆ ಅಧ್ಯಕ್ಷರು ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಸೇವೆಯ ಜೊತೆಗೆ ಸಂಘಕ್ಕೆ ಒಳ್ಳೆಯ ಹೆಸರು ತರುವಂತೆ ಸಲಹೆ  ನೀಡಿದರು.
ಯಾವುದೇ ಸೌಲಭ್ಯವಿಲ್ಲದ ಕುಗ್ರಾಮಗಳಿಗೆ ಲಯನ್ಸ್ ಸಂಸ್ಥೆ ವತಿಯಿಂದ ಸೋಲಾರ್ ಲ್ಯಾಂಪ್ ಅಳವಡಿಸಲಾಗುತ್ತಿದೆ. ಇಂತಹ ಕಾರ್ಯವನ್ನು ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ನೆರವೇರಿಸುವಂತೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಚಿಂದಗಿರಿದೊಡ್ಡಿ ಮಹಿಳೆಯೊಬ್ಬರಿಗೆ ಹೊಲಿಗೆ ಯಂತ್ರ, ಹಾಲಹಳ್ಳಿ ಬಡಾವಣೆ ಶಾಲಾ ಮಕ್ಕಳಿಗೆ ನೋಟ್‍ಬುಕ್ ವಿತರಿಸಲಾಯಿತು.
2ನೇ ಉಪ ರಾಜ್ಯಪಾಲ ಅನಿಲ್‍ಕುಮಾರ್, ಅಪರ ಜಿಲ್ಲಾ ಸಂಪುಟ ಕಾರ್ಯದರ್ಶಿ ವಿ.ಕೆ. ಜಗದೀಶ್, ಪ್ರಾಂತೀಯ ಅಧ್ಯಕ್ಷ ನಾರಾಯಣಸ್ವಾಮಿ, ವಲಯಾಧ್ಯಕ್ಷ ಚಿಕ್ಕಣ್ಣ, ಡಿ.ಎಲ್.ಎಸ್.ಎಫ್ ಟ್ರಸ್ಟಿ ಜಿ.ಎ. ರಮೇಶ್, ನಿಕಟಪೂರ್ವ ಅಧ್ಯಕ್ಷ ಮೋಹನ್‍ಕುಮಾರ್, ಷುಗರ್‍ಸಿಟಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಆರ್. ಸುರೇಶ್, ಕಾರ್ಯದರ್ಶಿ ಜಯರಾಮೇಗೌಡ, ಖಜಾಂಚಿ ಬಿ.ಎಂ. ರಮೇಶ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ವಿ.ಸಿ.ಫಾರಂ. ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಬೇಕು-ರವಿಶಂಕರ್

ಮಂಡ್ಯ, ಜು.30- ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಹೆಚ್ಚಾಗಿ ಕ್ರೀಡೆಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಬೇಕು ಎಂದು ಶಿಕ್ಷಣ ಇಲಾಖೆಯ ರವಿಶಂಕರ್ ಹೇಳಿದರು.
ತಾಲ್ಲೂಕಿನ ವಿ.ಸಿ.ಫಾರಂ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ದುದ್ದ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಅವರು ಮಾತನಾಡಿ, ಕ್ರೀಡೆಯಿಂದ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಉನ್ನತ ಶಿಕ್ಷಣ ಪಡೆಯುವಲ್ಲಿಯೂ ಸಹಕಾರಿಯಾಗುತ್ತದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡು ಶಾಲೆ ಹಾಗೂ ಜಿಲ್ಲೆಯ ಕೀರ್ತಿಯನ್ನು ಬೆಳಗಬೇಕು ಎಂದು ಸಲಹೆ ನೀಡಿದರು.
ದುದ್ದ ಗ್ರಾಪಂ ಉಪಾಧ್ಯಕ್ಷ ಮಹದೇವು, ಸದಸ್ಯೆ ಯಶೋಧಮ್ಮ, ಶಿಕ್ಷಕರಾದ ಪರಮೇಶ್, ರಾಜಶೇಖರ್, ರಾಮಚಂದ್ರಪ್ಪ, ವಿಜಯಕುಮಾರ್ ಇತರರು ಭಾಗವಹಿಸಿದ್ದರು

ಮೈಸೂರು ಪ್ರಮುಖ ಸುದ್ದಿಗಳು.

ಓ ಆರ್ ಎಸ್ ದ್ರಾವಣದ ಉಪಯೋಗದ ಬಗ್ಗೆ ಅರಿವು ಮೂಡಿಸಿ: ಡಾ|| ಪುಷ್ಪಾವತಿ ಅಮರನಾಥ್
      ಮೈಸೂರು,ಜು.30.ಆಶಾ ಕಾರ್ಯಕರ್ತೆಯರು 5 ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಭೇಟಿ ನೀಡಿ ಓ ಆರ್ ಎಸ್ ದ್ರಾವಣದ ಉಪಯೋಗ ಹಾಗೂ ಅತಿಸಾರ ಭೇಧಿ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕೆಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ|| ಪುಷ್ಪಾವತಿ ಅಮರನಾಥ್ ಅವರು  ತಿಳಿಸಿದರು.
   ಅವರು ಸೋಮವಾರ ನಜರ್‍ಬಾದ್‍ನಲ್ಲಿರುವ ಎನ್.ಪಿ.ಸಿ. ಹೆರಿಗೆ ಆಸ್ಪತ್ರೆ ಪ್ರಾಂಗಣದಲ್ಲಿಂದು ಜೋಡಿ ನಂ.1 ಕಾರ್ಯಕ್ರಮವನ್ನು ಉದ್ಘಾಟಿಸಿ  ಸಾಂಕೇತವಾಗಿ ಮಕ್ಕಳಿಗೆ ಜಿಂಕ್ ದ್ರಾವಣ ಮತ್ತು  ಓ ಆರ್ ಎಸ್ ದ್ರಾವಣ ವಿತರಣೆ ಮಾಡಿದರು.
    ಮಕ್ಕಳಲ್ಲಿ ಅತಿಸಾರ ಭೇದಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಯಂದಿರು  ವೈಯಕ್ತಿಕ  ಸ್ವಚ್ಚತೆ, ಶುಚ್ಚಿತ್ವ ಆಹಾರ ಸೇವನೆ ಮತ್ತು ಶುದ್ಧ ಕುಡಿಯುವ ನೀರು ಬಳಕೆಗೆ ಹೆಚ್ಚಿನ ಗಮನಹರಿಸುವಂತೆ ಕರೆ ನೀಡಿದರು.  
    ಜಿಂಕ್ ಮತ್ತು ಓವ್ ಆರ್ ಎಸ್ ದ್ರಾವಣದ ಪ್ರಯೋಜನವನ್ನು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ|| ಉಮಾ ಇವರು ವಿವರಿಸುತ್ತಾ ಜಿಂಕ್ ಮತ್ತು  ಓ ಆರ್ ಎಸ್ ದ್ರಾವಣ ಸೇವನೆಯಿಂದ ದ್ವಿಗುಣ ಶಕ್ತಿ ದೊರೆಯುತ್ತದೆ. ಆದರಿಂದ ಈ ಯೋಜನೆಯನ್ನು ಜೋಡಿ ನಂ-1, ಎಂಬುದಾಗಿ ಹೆಸರಿಸಲಾಗಿದೆ ಎಂದರು.
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಹೆಚ್.ಟಿ. ಪುಟ್ಟಸ್ವಾಮಿ, ಅವರು ಮಾತನಾಡುತ್ತಾ, ಅತಿಸಾರ ಭೇಧಿಯಾದ ಮಕ್ಕಳಿಗೆ ಅಪೌಷ್ಠಿಕತೆ ಹಾಗೂ ನಿರ್ಜಲೀಕರಣ ಉಂಟಾಗಿ ಸಾವು ನೋವು ಸಂಭವಿಸುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಲು ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಮೈಸೂರು ಜಿಲ್ಲೆಯಾದ್ಯಾಂತ 2,01,726 ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.
    ಮಕ್ಕಳ ಸಾವನ್ನು ತಡೆಯುವುದೇ ಆರೋಗ್ಯ ಇಲಾಖೆಯ ಮುಖ್ಯ ಉದ್ದೇಶವಾಗಿರುತ್ತದೆ. ಜಿಂಕ್ ದ್ರಾವಣ ಸೇವನೆಯಿಂದ ಭೇಧಿಯ ನಿಯಂತ್ರಣ, ಮತ್ತೆ ಮತ್ತೆ ರೋಗ ಬರುವುದನ್ನು ತಡೆಗಟ್ಟುವುದು, ಶರೀರದ ತೂಕ ಹೆಚ್ಚಿಸಲು ಸಹಾಯಕವಾಗಿದೆ. ಭೇಧಿ ಪ್ರಕರಣದ 2-6 ತಿಂಗಳ ಮಕ್ಕಳಿಗೆ ದಿನಕ್ಕೊಮ್ಮೆ ಅರ್ಧ ಚಮಚ ಜಿಂಕ್ ಸಿರಫ್ 6ತಿಂಗಳಿನಿಂದ 5 ವರ್ಷದೊಳಗಿನ ಮಕ್ಕಳಿಗೆ 1 ಚಮಚದಂತೆ 14 ದಿನಗಳವರೆಗೆ ನೀಡಲಾಗುತ್ತದೆ.
   ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ|| ಉಮಾ ಅವರು ವಂದನಾರ್ಪಣೆ ಸಲ್ಲಿಸಿದರು.
ಮಲೇರಿಯಾ ವಿರೋಧಿ ಮಾಸಾಚರಣೆ
ಮೈಸೂರು,ಜು.30.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 2 ರಂದು ಬೆಳಿಗ್ಗೆ 11 ಗಂಟೆಗೆ ಕ್ಯಾತಮಾರನಹಳ್ಳಿ ಸಮುದಾಯ ಭವನದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಆಚರಿಸಲಾಗುವುದು.
     ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ತನ್ವೀರ್ ಸೇಠ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
    ಅಂದು ಬೆಳಿಗ್ಗೆ 10 ಗಂಟೆಗೆ ಹುಲಿಯಮ್ಮ ದೇವಾಲಯ ಆವರಣದಿಂದ ಮೈಸೂರು ಮಹಾನಗರ ಪಾಲಿಕೆ ಸದಸ್ಯೆ ಇಂದಿರಾ ಮಹೇಶ್ ಅವರು ಜಾಥಾಗೆ ಚಾಲನೆ ನೀಡಲಿದ್ದಾರೆ.
ಫ್ಲೆಕ್ಸ್, ಬ್ಯಾನರ್, ಭಿತ್ತಿಪತ್ರ ತೆರವುಗೊಳಿಸಲು ಸೂಚನೆ
    ಮೈಸೂರು,ಜು.30.ಮೈಸೂರು ನಗರವನ್ನು ಪಾರಂಪರಿಕ ನಗರವೆಂದು ಘೋಷಿಸಿದ್ದು ಹಾಗೂ ಫ್ಲೆಕ್ಸ್, ಬ್ಯಾನರ್, ಭಿತ್ತಿಪತ್ರಗಳು ಇತ್ಯಾದಿಗಳಿಂದ ಮುಕ್ತ ನಗರವನ್ನಾಗಿ ಮಾಡಲು ದಿನಾಂಕ 29-12-2011ರ ಮೈಸೂರು ನಗರ ಪಾಲಿಕೆಯ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ನಿರ್ಣಯವಾಗಿರುತ್ತದೆ.
    ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್, ಭಿತ್ತಿಪತ್ರಗಳು ಇತ್ಯಾದಿಗಳನ್ನು ಆಗಸ್ಟ್ 15 ರೊಳಗೆ ಸಂಬಂಧಪಟ್ಟವರು ಸ್ವ ಇಚ್ಫೆಯಿಂದ ತೆರೆವುಗೊಳಿಸ ತಕ್ಕದ್ದು, ತಪ್ಪಿದಲ್ಲಿ ಖಿhe ಏಚಿಡಿಟಿಚಿಣಚಿಞಚಿ oಠಿeಟಿ Pಟಚಿಛಿes (Pಡಿeveಟಿಣioಟಿ oಜಿ ಆisಜಿiguಡಿemeಟಿಣ ಂಛಿಣ 1981) g ರೀತ್ಯಾ  ಕಾನೂನು ಕ್ರಮ ಜರುಗಿಸಲಾಗುವುದೆಂದು ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ ಎಕ್ಸಾಮಿನೇಷನ್

     ಮೈಸೂರು,ಜು.30.ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲೊವರ್ ಡಿವಿಜನ್ ಕ್ಲರ್ಕ್ ಹಾಗೂ ಡಾಟ ಎಂಟ್ರಿ ಆಪರೇಟರ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ
      01-08-2014ಕ್ಕೆ    10+2 (ಪಿಯುಸಿ) ವಿದ್ಯಾರ್ಹತೆ ಅಥವಾ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಹಾಗೂ ವಯೋಮಿತಿ  01-08-2014  ಕ್ಕೆ   18 ರಿಂದ 27 ವರ್ಷದೊಳಗಿರುವವರು ಅರ್ಜಿ ಸಲ್ಲಿಸಬಹುದು. ಗರಿಷ್ಟ ವಯೋಮಿತಿಯಲ್ಲಿ ಪರಿಶಿಷ್ಟಜಾತಿ & ಪಂಗಡ/ ಓಬಿಸಿ(ಕೇಂದ್ರ)ಇವರಿಗೆ ಕ್ರಮವಾಗಿ 5 & 3 ವರ್ಷಗಳ ರಿಯಾಯಿತಿ  ಇರುತ್ತದೆ. ತಿತಿತಿ.ssಛಿoಟಿಟiಟಿe.ಟಿiಛಿ.iಟಿ   ಅಥವಾ ತಿತಿತಿ.ssಛಿoಟಿಟiಟಿe2.gov.iಟಿ  ಈ ವೆಬ್ ಸೈಟ್‍ಗಳ ಮೂಲಕ ಅನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ hಣಣಠಿ://ssಛಿ.ಟಿiಛಿ.iಟಿ   ವೆಬ್ ಸೈಟ್‍ನಲ್ಲಿ ರುವ ಅರ್ಜಿ ನಮೂನೆಯ ಪ್ರಿಂಟ್ ತೆಗೆದುಕೊಂಡು ಭರ್ತಿಮಾಡಿ ಅಂಚೆ ಮೂಲಕ ದಿನಾಂಕ:  19-8-2014 ರೊಳಗೆ ಅರ್ಜಿಸಲ್ಲಿಸಬಹುದು.
      ಅರ್ಜಿ ನಮೂನೆಯನ್ನು ಸದರಿ ವೆಬ್‍ಸೈಟ್  ಅಥವಾ ಉಪಮುಖ್ಯಸ್ಥರು,   ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇವರಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2516844, ಮೊಬೈಲ್ ಸಂಖ್ಯೆ 9449686641 ಯನ್ನು ಸಂಪರ್ಕಿಸುವುದು.
ಕಂಬೈನ್ಡ್  ಡಿಫೆನ್ಸ್ ಸರ್ವಿಸಸ್  ಎಕ್ಸಾಮಿನೇಷನ್-2014
   ಮೈಸೂರು,ಜು.30.(ಕ.ವಾ)-ನವದೆಹಲಿ ಕೇಂದ್ರ ಲೋಕ ಸೇವಾ ಆಯೋಗ  ರಕ್ಷಣಾ ಪಡೆಗಳಾದ ಆರ್ಮಿ, ನೇವಿ  & ಏರ್ ಫೋರ್ಸ್ ಗಳಲ್ಲಿ ಸುಮಾರು 464 ಆಫೀಸರ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅಂಗೀಕೃತ ವಿಶ್ವವಿದ್ಯಾನಿಲಯದಲ್ಲಿ  ಯಾವುದಾದರು ಪದವಿ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವವರೂ ಸಹ ಅರ್ಜಿ ಸಲ್ಲಿಸ ಬಹುದು. ತಿತಿತಿ.uಠಿsಛಿoಟಿಟiಟಿe.ಟಿiಛಿ.iಟಿ  ವೆಬ್ ಸೈಟ್ ನಲ್ಲಿ   ಆನ್‍ಲೈನ್ ಮೂಲಕ ಅರ್ಜಿಯನ್ನು ದಿನಾಂಕ           18-08-2014 ರೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಲೋಕ ಸೇವಾ ಆಯೋಗದ ವೆಬ್ ಸೈಟ್: hಣಣಠಿ://ತಿತಿತಿ.uಠಿsಛಿ.gov.iಟಿ   ಅಥವಾ ಉಪಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು ದೂರವಾಣಿ: 0821-2516844,9449686641 ಇವರನ್ನು ಸಂಪರ್ಕಿಸುವುದು.
ಬ್ಯಾಂಕಿಂಗ್ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ
     ಮೈಸೂರು,ಜು.30.(ಕ.ವಾ)-ಭಾರತದ 20 ಕ್ಕಿಂತ ಹೆಚ್ಚು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಪ್ರೊಬೇಷನರಿ ಅಧಿಕಾರಿ ಹುದ್ದೆಗಳನ್ನು  ಒಂದೇ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ  ಆನ್ ಲೈನ್‍ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

       ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ 20 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ   ಪ್ರೊಬೇಷನರಿ ಅಧಿಕಾರಿ ಹುದ್ದೆಗಳಿಗೆ ಒಂದು ವರ್ಷದವರೆಗೆ ಅರ್ಜಿ ಸಲ್ಲಿಸಿ ನೇರವಾಗಿ ಸಂದರ್ಶನಕ್ಕೆ ಅರ್ಹತೆ ಪಡೆಯಬಹುದು. ಪ್ರತಿಯೊಂದು ಬ್ಯಾಂಕಿನ  ನೇಮಕಾತಿಗೆ ಪ್ರತ್ಯೇಕ ಪರೀಕ್ಷೆ ಬರೆಯುವ ಅವಶ್ಯಕತೆ ಇರುವುದಿಲ್ಲ.
     ಯಾವುದಾದರು ಪದವಿಯಲ್ಲಿ ತೇರ್ಗಡೆ  ಹೊಂದಿರುವ ಹಾಗೂ ವಯೋಮಿತಿ ಕನಿಷ್ಟ  20 ವರ್ಷ ತುಂಬಿರಬೇಕು & ಗರಿಷ್ಟ 30 ವರ್ಷ ಮೀರಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪರಿಶಿಷ್ಟಜಾತಿ/ಪಂಗಡ & ಓಬಿಸಿ(ಕೇಂದ್ರ) ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ  ಇರುತ್ತದೆ ತಿತಿತಿ.ibಠಿs.iಟಿ  ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಸಲ್ಲಿಸಲು ಕೊನೆ ದಿನಾಂಕ: 11-08-2014 ಆಗಿರುತ್ತದೆ.
     ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ ಸೈಟ್ ತಿತಿತಿ.ibಠಿs.iಟಿ  ನೋಡಿ   ಅಥವಾ
 ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ದೂರವಾಣಿ- 2516844/8892019297 ಇವರನ್ನು ಸಂಪರ್ಕಿಸಿ. 
ಅಪರಿಚಿತÀ ಹೆಂಗಸು ಶವÀ ಪತ್ತೆಗಾಗಿ ಮನವಿ
ಮೈಸೂರು,ಜು.30.(ಕ.ವಾ)-ಮದ್ದೂರು-ಹನಕೆರೆ  ರೈಲು ನಿಲ್ದಾಣಗಳ ಮಧ್ಯ ರೈಲ್ವೆ ಕಿ.ಮೀ. ನಂ.75/500-600 ರಲ್ಲಿ ಜುಲೈ 29 ರಂದು   ಸುಮಾರು 35 ವರ್ಷದ ಅಪರಿಚಿತ ಹೆಂಗಸು ಮೃತಪಟ್ಟಿದ್ದಾರೆ. ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
 ಈ ಅಪರಿಚಿತ ಹೆಂಗಸು 5.3 ಅಡಿ ಎತ್ತರ, ಗೋಧಿ ಮೈಬಣ್ಣ, ದೃಢವಾದ ಶರೀರ, ದುಂಡುಮುಖ, ದಪ್ಪನೆಯ ಮೂಗು, ತಲೆಯಲ್ಲಿ ಸುಮಾರು 15 ಇಂಚು ಉದ್ದದ ಕಪ್ಪು  ಕೂದಲು, ಬಲ ಮೂಗಿನಲ್ಲಿ ಮೂಗುತಿ, ಬಲಕಾಲಿನಲ್ಲಿ ಕಪ್ಪು ದಾರ ಕಟ್ಟಿರುತ್ತದೆ. ಹಳದಿ ಬಣ್ಣದ ಚೂಡಿದಾರ, ಬಿಸ್ಕೇಟ್ ಬಣ್ಣದ ಜೂಡಿದಾರ್ ಪ್ಯಾಂಟ್ ಅದರಲ್ಲಿ ಕಪ್ಪು ಬಣ್ಣದ ಚುಕ್ಕೆಗಳು, ಕೆಂಪು ಬಣ್ಣದ ಚರ್ಮದ ಚಪ್ಪಲಿ ಧರಿಸಿರುತ್ತಾರೆ.
ಮೃತ ಹೆಂಗಸಿನ ದೇಹವÀನ್ನು ಮಂಡ್ಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.

ಕಾಣೆಯಾಗಿರುವ ಹೆಂಗಸು ಹಾಗೂ ಮಗುವಿನ ಪತ್ತೆಗಾಗಿ ಮನವಿ
ಮೈಸೂರು,ಜು.30. ಸಿದ್ದಯ್ಯ ಎಂಬುವವರು ತಮ್ಮ ಸೊಸೆ, ಶಿಲ್ಪ ಹಾಗೂ ಅವಳ ಮಗ ದಿನಾಂಕ 9-7-2014 ರಿಂದ  ಕಾಣೆಯಾಗಿದ್ದಾರೆÉ ಎಂದು ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಕಾಣೆಯಾದ ಶಿಲ್ಪ  ಚಹರೆ ಇಂತಿದೆ: 22 ವರ್ಷ,  5.2 ಅಡಿ ಎತ್ತರ, ಕಪ್ಪು ಬಣ್ಣ, ತೆಳ್ಳನೇ ಶರೀರ, ಕಪ್ಪ ಕೂದಲು, ಕನ್ನಡ ಮಾತನಾಡುತ್ತಾರೆ.  ಕೆಂಪು ಸೀರೆ, ಬಿಳಿ ರವಿಕೆ ಧರಿಸಿರುತ್ತಾಳೆ.
      ಕಾಣೆಯಾದ ಬಸವರಾಜು ಚಹರೆ ಇಂತಿದೆ:  1 ವರ್ಷ,  ಗಂಡು ಮಗು ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ಟೀ ಶರ್ಟ್ ಧರಿಸಿರುತ್ತಾರೆ.
       ಕಾಣೆಯಾದ ಹೆಂಗಸು ಹಾಗೂ ಮಗು ಪತ್ತೆಯ ಬಗ್ಗೆ ವಿವರ ಅಥವಾ ಮಾಹಿತಿ ತಿಳಿದು ಬಂದಲ್ಲಿ ಎಸ್.ಪಿ. ದೂ.ಸಂ: 2520040   ಅಥವಾ ಮೈಸೂರು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 2444800 ಅಥವಾ ಮೈಸೂರು ಸೌತ್ ಪೊಲೀಸ್ ಠಾಣೆ ದೂ.ಸಂ: 0821-2444955ನ್ನು ಅಥವಾ ಆರಕ್ಷಕ ಉಪ ನಿರೀಕ್ಷಕರವರಿಗಾಗಲಿ ತಿಳಿಸುವಂತೆ ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಉಪನಿರೀಕ್ಷಕರು ಕೋರಿದ್ದಾರೆ.

Monday 28 July 2014

ಕೆ.ಆರ್.ಪೇಟೆ-ಕೋಮು ಸೌಹಾರ್ಧತೆಗೆ ತಾಲೂಕು ಮಾದರಿ-ಕೆ.ಗೌಸ್ ಖಾನ್.

ಕೃಷ್ಣರಾಜಪೇಟೆ. ಹಿಂದೂ ಮತ್ತು ಮುಸ್ಲಿಂ ಬಂಧುಗಳು ತಾಲೂಕಿನಲ್ಲಿ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದು ಕೋಮು ಸೌಹಾರ್ಧತೆಗೆ ತಾಲೂಕು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದು ಪುರಸಭೆಯ ಅಧ್ಯಕ್ಷ ಕೆ.ಗೌಸ್‍ಖಾನ್ ಹೇಳಿದರು.
ಅವರು ಇಂದು ಪಟ್ಟಣದ ವೃತ್ತ ಆರಕ್ಷಕ ನಿರೀಕ್ಷಕರ ಕಚೇರಿಯಲ್ಲಿ ಪವಿತ್ರ ರಂಜಾನ್ ಹಬ್ಬದ ಆಚರಣೆಯ ಅಂಗವಾಗಿ ಆಯೋಜಿಸಿದ್ದ ಮುಸ್ಲಿಂ ಸಮೂದಾಯದ ಮುಖಂಡರು ಹಾಗೂ ಮುಖಂಡರ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷ್ಣರಾಜಪೇಟೆ ತಾಲೂಕಿನಲ್ಲಿ ಮುಸ್ಲಿಂ ಬಾಂಧವರು ಮತ್ತು ಹಿಂಧೂಗಳು ಪರಸ್ಪರ ಅಣ್ಣ-ತಮ್ಮಂದಿರಂತೆ ಬದುಕು ನಡೆಸುತ್ತಿದ್ದಾರೆ. ತಾಲೂಕಿನ ಇತಿಹಾಸದಲ್ಲಿ ಈವರೆಗೆ ಒಂದೇ ಒಂದು ಕೋಮು ಗಲಭೆ ನಡೆದ ಉದಾಹರಣೆಯಿಲ್ಲ. ಮುಸ್ಲಿಂ ಬಂಧುಗಳು ಶ್ರದ್ಧಾ ಭಕ್ತಿಯಿಂದ ಉಪವಾಸವ್ರತ ನಡೆಸಿ ಆಚರಿಸುತ್ತಿರುವ ರಂಜಾನ್ ಹಬ್ಬದ ಸಂಭ್ರಮದಲ್ಲಿ ಹಿಂದೂ ಭಾಂದವರು ಭಾಗವಹಿಸಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವರಲ್ಲದೇ ಹಬ್ಬದ ಊಟದ ಕಾರ್ಯಕ್ರಮದಲ್ಲಿ ಭಾಗವಹಿಸುವರು ಅಂತೆಯೇ ಹಿಂದೂಗಳು ಆಚರಿಸುವ ದೀಪಾವಳಿ, ಗೌರಿ-ಗಣಪತಿ, ವಿಜಯದಶಮಿ ಹಬ್ಬದಲ್ಲಿ ಮುಸ್ಲಿಂ ಬಂಧುಗಳು ಹಿಂಧೂ ಬಾಂಧವರ ಮನೆಗೆ ತೆರಳಿ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳುವರು. ಆದ್ದರಿಂದ ಸಮೂದಾಯದ ಮುಖಂಡರು ವದಂತಿಗಳು ಹಾಗೂ ಗಾಳಿಸುದ್ದಿಗೆ ಕಿವಿಗೊಡದೆ ಸಂತೋಷದಿಂದ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯ ನೇತೃತ್ವ ವಹಿಸಿದ್ದ ವೃತ್ತ ನಿರೀಕ್ಷಕ ಕೆ.ರಾಜೇಂದ್ರ ಮಾತನಾಡಿ ತಾಲೂಕು ಕೋಮುಸೌಹಾರ್ಧತೆಗೆ ಹೆಸರುವಾಸಿಯಾಗಿದೆ, ಈ ಸಂಪ್ರದಾಯವನ್ನು ಈ ಭಾರಿಯೂ ಮುಂದುವರೆಸಿಕೊಂಡು ಹೋಗುವ ಮೂಲಕ ತಾಲೂಕಿನ ಕೀರ್ತಿಯನ್ನು ಬೆಳಗಬೇಕು. ವದಂತಿಗಳಿಗೆ ಕಿವಿಗೊಡಬಾರದು ಕಾನೂನು ಸುವ್ಯವಸ್ಥೆಯ ಪಾಲನೆಗೆ ಪೋಲಿಸರು ಸದಾ ನಿಮ್ಮೊಂದಿಗಿದ್ದು ಸಹಕಾರ ನೀಡಲಿದ್ದಾರೆ ಆದ್ದರಿಂದ ಸಂತೋಷದಿಂದ ಶಾಂತಿಯುತವಾಗಿ ರಂಜಾನ್ ಹಬ್ಬವನ್ನು ಆಚರಿಸಿ ಅಲ್ಲಾಹನ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿಸದಸ್ಯ ಡಾ.ಎಸ್.ಕೃಷ್ಣಮೂರ್ತಿ, ನಗರಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹಾಫೀಜುಲ್ಲಾಶರೀಫ್, ಪುರಸಭೆ ಸದಸ್ಯೆ ತಂಜೀಮಾಕೌಸರ್, ಕೆ.ಪುರುಷೋತ್ತಮ್, ಕೆ.ವಿನೋದ್‍ಕುಮಾರ್, ಡಿ.ಪ್ರೇಮಕುಮಾರ್, ಪುರಸಭೆ ಮಾಜಿಅಧ್ಯಕ್ಷರಾದ ಕೆ.ಎಚ್.ರಾಮಕೃಷ್ಣ, ಕೆ.ಸಿ.ವಾಸು, ಮುಸ್ಲಿಂ ಸಮಾಜದ ಮುಖಂಡರಾದ ಉಮ್ಮರ್‍ಬೇಗ್, ಹಾಫಿಜ್ ಅಹಮದ್, ನವೀದ್‍ಅಹಮದ್, ನಜೀರ್ ಅಹಮದ್, ರಫೀಕ್ ಅಹಮದ್, ಶಬೀರ್ ಅಹಮದ್, ಸೈಯ್ಯದ್ ಅಕ್ಬರ್, ರಿಯಾಜ್‍ಪಾಶ, ಸೈಯ್ಯದ್ ಆಬೀದ್, ಮುಜೀಬ್ ಅಹಮದ್, ಅಶ್ರಫ್‍ಪಾಶ, ನಾಜಾ, ಸಯೀದ್, ಆಸರೆ ಸಮಾಜಸೇವಾ ಟ್ರಸ್ಟಿನ ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ತೊಗಟವೀರ ಸಮಾಜದ ಮುಖಂಡ ಹಂಸರಮೇಶ್ ಮತ್ತಿತರರು ಭಾಗವಹಿಸಿದ್ದರು.

ಮಂಡ್ಯ-5 ಎಕರೆ ಕಬ್ಬು ಭಸ್ಮ.

ಮಂಡ್ಯ, ಜು.28- ಅತಿ ಹೆಚ್ಚಿನ ವೊಲ್ಟೇಜ್ ನಿಂದಾಗಿ ಟ್ರಾನ್ಸ್‍ಫಾರ್ಮರ್‍ನಿಂದ ಕಿಡಿಗಳು ಹಾರಿದ ಪರಿಣಾಮ ಸುಮಾರು 5 ಎಕರೆ ಕಬ್ಬು ಭಸ್ಮವಾಗಿರುವ ಘಟನೆ ಇಂದು ಜರುಗಿದೆ.
ತಾಲ್ಲೂಕಿನ ಹೊನಗಳ್ಳಿ ಮಠ ಗ್ರಾಮದಲ್ಲಿ ಇಂದು ಬೆಳಿಗ್ಗೆ 8ರ ಸುಮಾರಿಗೆ ಈ ಘಟನೆ ಜರುಗಿದೆ. ಕಾಂಗ್ರೆಸ್ ಕಾರ್ಯ ಕರ್ತ ಮಹೇಶ್‍ರವರಿಗೆ ಸೇರಿದ 1.20ಗುಂಟೆ, ಹೊನಗಳ್ಳಿಮಠ ಗ್ರಾಮದ ವಕೀಲ ಸದಾಶಿವ ಎಂಬುವರಿಗೆ ಸೇರಿದ 2 ಎಕರೆ, ಮಹದೇವಪ್ಪರವರಿಗೆ ಸೇರಿದ 1.20 ಎಕರೆ ಜಮೀನಿಗೆ ಬೆಂಕಿ ತಗುಲಿ ಸುಮಾರು 5 ಎಕರೆ ಜಮೀನಿನಷ್ಟು ಕಬ್ಬು ಸಂಪೂರ್ಣ ಭಸ್ಮವಾಗಿದೆ.
ಕಾಂಗ್ರೆಸ್ ಕಾರ್ಯಕರ್ತ ಹೆಚ್.ಪಿ.ಮಹೇಶ್‍ರವರಿಗೆ ಸೇರಿದ ಕಬ್ಬಿನ ಗದ್ದೆಯ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಅಳವಡಿಸಿದ್ದು, ಇಂದು ಅತೀ ಹೆಚ್ಚು ವಿದ್ಯುತ್ ಪ್ರಸಾರವಾದಾಗ ಟ್ರಾನ್ಸ್‍ಫಾರ್ಮರ್ ನಲ್ಲಿದ್ದ ಅನಿಲ ಹೊರಚೆಲ್ಲಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ನೀರಿಲ್ಲದೆ ಕಬ್ಬುಗಳು ಒಣಗಿ ನಿಂತಿದ್ದರಿಂದ ಬೆಂಕಿ ಬಹು ಬೇಗ ವ್ಯಾಪಿಸಿ 5ಎಕರೆ ಕಬ್ಬಿನ ಗದ್ದೆ ಸುಟ್ಟು ಹೋಗಿದೆ.
ಹೆಚ್.ಪಿ.ಮಹೇಶ್ ಮಾತ ನಾಡಿ, ನಮ್ಮ ಗದ್ದೆಯಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಸುವ ಮೊದಲೆ ಚೆಸ್ಕಾಂ ಇಲಾಖೆಗೆ ಎಚ್ಚರಿಕೆ ನೀಡಿದ್ದು ಈ ಪ್ರದೇಶದಲ್ಲಿ ಅತೀ ಹೆಚ್ಚಾಗಿ ಕಬ್ಬು ಬೆಳೆಯುತ್ತೇವೆ ದಯ ಮಾಡಿ ಇಲ್ಲಿ ಟ್ರನ್ಸ್ ಫಾರ್ಮರ್ ಅಳವಡಿ ಸಬೇಡಿ ಮುಂದಿನ ದಿನಗಳಲ್ಲಿ ಅಪಾಯ ತಪ್ಪಿದಲ್ಲ ಎಂದು ಹೇಳಿದರೂ ಅವರು ನಮ್ಮ ಗದ್ದೆಯಲ್ಲೇ ಅಳವಡಿಸಿ ದ್ದಾರೆ. ಈ ಘಟನೆಗೆ ಕೆಇಬಿ ಯವರೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿ ಸಿದರು.
ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ
ಹಳ್ಳಿಗಳಿಗೆ ಚೆಸ್ಕಾಂ ಅಧಿಕಾರಿ ಗಳು ಸರಿಯಾಗಿ ಭೇಟಿ ನೀಡದೆ ಇದ್ದುದ್ದರಿಂದೇ ಈ ರೀತಿ ಅವಘಡಗಳು ಸಂಭವಿಸುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯುತ್ ತಂತಿಗಳ ಮೇಲೆ ತೆಂಗಿನ ಗರಿಗಳು, ಮರದ ಕೊಂಬೆಗಳು ಜೋತು ಬಿದ್ದಿದ್ದರೂ ಸಹ ಯಾವುದೇ ಚೆಸ್ಕಾಂ ಅಧಿಕಾರಿ ಗಳು ಅವುಗಳನ್ನ ತೆರುವು ಗೊಳಿಸಲು ಆಗಲಿ ಬರುವುದಿಲ್ಲ.
ಗ್ರಾಮದ ಒಳಗಡೆ ಯಾ ವುದೇ ರೀತಿಯ ಟ್ರಾನ್ಸ್‍ಫಾ ರ್ಮರ್ ಅಳವಡಿಸಬಾರದು ಎಂಬುದು ಅಧಿಕಾರಿಗಳಿಗೆ ತಿಳಿದಿದ್ದರೂ ಗ್ರಾಮದ ಮಧ್ಯ ಭಾಗದಲ್ಲಿರುವ ಪತ್ರಕರ್ತ ರವಿಯವರ ಮನೆ ಮುಂದೆ ಯೇ ಟ್ರಾನ್ಸ್‍ಫಾರ್ಮರ್ ಅಳವಡಿಸಲಾಗಿದೆ. ಇಂದು ಕಬ್ಬಿನಗದ್ದೆಯಲ್ಲಿ ಸ್ಫೋಟಗೊಂಡ ಟ್ರಾನ್ಸ್‍ಫಾರ್ಮರ್‍ನಿಂದ ಕಬ್ಬು ಭಸ್ಮವಾಗಿರುವುದು ಆತಂಕ ತಂದಿದೆ. ಈ ರೀತಿ ನಾಳೆ ಗ್ರಾಮದ ಮಧ್ಯದಲ್ಲಿರುವ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡರೆ  ಜನ ಜಾನುವಾರುಗಳ ಗತಿ ಏನು ಎಂದು ಗ್ರಾಮಸ್ಥರ ಭಯದಿಂದ ಮಾತನಾ ಡುತ್ತಿದ್ದು ಕಂಡು ಬಂತು.
ಕೆಲವು ತಿಂಗಳು ಹಿಂದೆ ಯಷ್ಟೇ ಕಬ್ಬಿನ ಗದ್ದೆಗೆ ಹುಲ್ಲು ಕುಯ್ಯಲು ಎಂದು ಹೋಗಿದ್ದ ರೇಣುಕಾ ಎಂಬುವರು ಅಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಸಾವನ್ನ ಪ್ಪಿದ್ದರು. ಇದೇ ಅಲ್ಲದೆ ಅದೇ ಗ್ರಾಮದ ಕಾಲುವೆ ಏರಿಯ ಮೇಲೆ ಗುಡಿಸಲು ನಿರ್ಮಿ ಸಿಕೊಂಡು ಜೀವನ ಸಾಗಿ ಸುತ್ತಿದ್ದ ಸಾಕಮ್ಮ ಎಂಬುವರ ಮನೆಯ ಮೇಲೆ ಹರಿದು ಹೋಗಿದ್ದ ವಿದ್ಯುತ್ ತಂತಿ ಯಿಂದ ಕಿಡಿ ಬಿದ್ದು ಗುಡಿಸಿಲಿನ ಜೊತೆಗೆ ಆಕೆಯೂ ಸಹ ಸಂಪೂರ್ಣ ಭಸ್ಮವಾದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಜರುಗಿದೆ.
ಈ ಗ್ರಾಮದ ಸುತ್ತಮುತ್ತ ಪ್ರದೇಶಗಳಲ್ಲಿ ತಂತಿಯ ಮೇಲೆ ಮರದ ಕೊಂಬೆಗಳು ಜೋತು ಬಿದ್ದಿದ್ದರೂ ಸಹ ಚೆಸ್ಕಾಂನ ಯಾವ  ಅಧಿಕಾರಿಗಳು  ಬಂದು ನೋಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇದ್ದರೂ ಸಹ ಹೊನಗಳ್ಳಿ ಮಠ ಗ್ರಾಮಕ್ಕೆ ಮಾತ್ರ ವಿದ್ಯುತ್ ನೀಡುವುದಿಲ್ಲ.  ತೆಂಗಿನ ಗರಿಗಳು ಕಡಿದಿಲ್ಲ. ಸರಿಯಾಗಿ ವಿದ್ಯುತ್ ನೀಡಿದರೆ ಅಲ್ಲಿ ಯಾವುದಾದರೂ ಶಾರ್ಟ್ ಸಕ್ರ್ಯೂಟ್ ಆದರೆ ಯಾರು ಅಲ್ಲಿಯವರೆಗೂ ಹೋಗುವರು ಎಂಬುದನ್ನು ಮನಗಂಡು ಚೆಸ್ಕಾಂ ಅಧಿಕಾರಿಗಳು ನಮಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ದೂರಿದರು.

ಮಂಡ್ಯ ಪ್ರಮುಖ ಸುದ್ದಿಗಳು.

ಜುಲೈ 28 ರಿಂದ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ಆಚರಣೆ
       ಮಂಡ್ಯ, ಜುಲೈ 28. “ಮಕ್ಕಳ ಅತಿಸಾರ ಭೇದಿಯಿಂದ ಶೂನ್ಯ ಸಾವು” ಎಂಬ ಧ್ಯೇಯದೊಂದಿಗೆ ಜುಲೈ 28 ರಿಂದ ಆಗಸ್ಟ್ 8 ನೇ ತಾರೀಖಿನವರೆಗೆ” ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ” ಆಚರಣೆಯನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ||ಹೆಚ್.ಪಿ.ಮಂಚೇಗೌಡ ಅವರು ತಿಳಿಸಿದರು.
       ಅವರು ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನಡೆದ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ಕೈಗೊಳ್ಳುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
 5 ವರ್ಷದ ಒಳಗಿನ ಮಕ್ಕಳ ಒಟ್ಟು ಮರಣಗಳಲ್ಲಿ ಶೇ.11 ರಷ್ಟು ಸಾವುಗಳು ಅತಿಸಾರ ಭೇದಿಯಿಂದಾಗುತ್ತಿದ್ದು, ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಉದ್ಧೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಅತಿಸಾರ ಭೇದಿಯಾದಾಗ ಓ.ಆರ್.ಎಸ್. ಮತ್ತು ಜಿಂಕ್ ದ್ರಾವಣವನ್ನು ಹಾಗೂ ಸೂಕ್ತ ಆಹಾರ ಪದಾರ್ಥಗಳನ್ನು ನೀಡುವುದರಿಂದ  ಭೇದಿಯಿಂದ ಉಂಟಾಗುವ ಸಾವುಗಳನ್ನು ತಪ್ಪಿಸಬಹುದು.  ಶುದ್ಥ ಕುಡಿಯುವ ನೀರು, ಪರಿಸರ ಹಾಗೂ ವೈಯಕ್ತಿಕ ನೈರ್ಮಲ್ಯ, ಎದೆ ಹಾಲುಣಿಸುವುದು, ಸೂಕ್ತ ಆಹಾರ ಸೇವನೆ ಮತ್ತು ಊಟಕ್ಕೆ ಮುನ್ನ ಹಾಗೂ ಶೌಚಾಲಯ ಬಳಕೆ ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆಯವುದರಿಂದ ಭೇದಿಯನ್ನು ತಡೆಗಟ್ಟಬಹುದು ಎಂದು ಅವರು ತಿಳಿಸಿದರು.
       ಪಾಕ್ಷಿಕದ ಅಂಗವಾಗಿ ಮೊದಲ ಹಂತದಲ್ಲಿ ಜುಲೈ 28 ರಿಂದ ಆಗಸ್ಟ್ 8 ರವರೆಗೆ  ಆಶಾ ಕಾರ್ಯಕರ್ತೆಯರು, ಐದು ವರ್ಷದೊಳಗಿನ ಮಕ್ಕಳಿರುವ ಪ್ರತಿ ಮನೆಗೂ ಭೇಟಿ ನೀಡಿ ಅತಿಸಾರ ಭೇದಿ ನಿಯಂತ್ರಣಕ್ಕೆ ಒಂದೊಂದು ಓ.ಆರ್.ಎಸ್. ಪೊಟ್ಟಣವನ್ನು ನೀಡಿ ಓ.ಆರ್.ಎಸ್. ದ್ರಾವಣ ತಯಾರಿಸಿ ಉಪಯೋಗಿಸುವ ವಿಧಾನವನ್ನು ತಿಳಿಸಿ ಕೊಡುವರು. ಹಾಗೂ ಅತಿಸಾರ ಭೇದಿಯಾದಾಗ ಆಶಾ ಕಾರ್ಯಕರ್ತೆಯರಿಂದ ಜಿಂಕ್ ಸಿರಪ್‍ನ್ನು ಪಡೆದು ಕೊಳ್ಳಲು ಮಾಹಿತಿ ನೀಡುವರು, ಮತ್ತು ವಯಸ್ಸಿಗನುಣವಾಗಿ ಎದೆ ಹಾಲುಣಿಸುವಿಕೆ ಮತ್ತು ಎಳೆ ಮಕ್ಕಳ ಆಹಾರ ಪದ್ಧತಿ ಬಗ್ಗೆ ಸಮಾಲೋಚನೆ ನಡೆಸುವರು.
  ತಾಯಿ- ಮಗು ರಕ್ಷಣೆ / ತಾಯಿ  ಕಾರ್ಡ್‍ನಲ್ಲಿ ಮಗು ಕೆಂಪು ಪಟ್ಟಿಯಲ್ಲಿದ್ದರೆ (ತೀವ್ರ ಅಪೌಷ್ಠಿಕತೆ) ಪೌಷ್ಠಿಕ ಪುನರ್‍ವಸತಿ ಕೇಂದ್ರಕ್ಕೆ ಕಳುಹಿಸುತ್ತಾರೆ. ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಮಕ್ಕಳ ತಜ್ಞರ ಸಹಭಾಗಿತ್ವದಲ್ಲಿ ಅವರ ಕ್ಲಿನಿಕ್‍ಗಳಲ್ಲಿ ಸಹ ಓ.ಆರ್.ಎಸ್. ಮತ್ತು ಜಿಂಕ್ ಸಿರಪ್ ನೀಡಲು ವ್ಯವಸ್ಥೆ ಮಾಡಲಾಗಿದೆ. ಶಾಲಾ ಮಕ್ಕಳಿಗೆ ನೈರ್ಮಲ್ಯ ಹಾಗೂ ಸ್ವಚ್ಛವಾಗಿ ಕೈ ತೊಳೆಯುವಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. 
           ಎರಡನೇ ಹಂತದಲ್ಲಿ ಆಗಸ್ಟ್ 4 ರಿಂದ 8ನೇ ತಾರೀಖಿನವರೆಗೆ  ಆಶಾ ಕಾರ್ಯಕರ್ತೆಯರು ಐದು ವರ್ಷದೊಳಗಿನ ಎಲ್ಲಾ ಮಕ್ಕಳ ಮನೆಗೆ ಭೇಟಿ ನೀಡಿ ಅಪೌಷ್ಠಿಕ ಮಕ್ಕಳನ್ನು ಗುರುತಿಸುವರು ಹಾಗೂ ಆಯ್ಧ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಶಿಶು ಮತ್ತು ಎಳೆಯ ಮಕ್ಕಳ ಆಹಾರ ಪದ್ಧತಿಯ ಬಗ್ಗೆ ಸಮಾಲೋಚನೆ ಮಾಡುವರು, ಹಾಗೂ ಅಪೌಷ್ಠಿಕ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು, ಮತ್ತು ಅವಶ್ಯವಿದ್ದವರಿಗೆ ಮೇಲ್ಮಟ್ಟದ ಸಂಸ್ಥೆಗಳಿಗೆ ನಿರ್ದೇಶಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಲು ಮುಂದಾಗಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದರು.
   ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಉದಯ ಕುಮಾರ್, ಜಿಲ್ಲಾ ಕುಷ್ಠ ರೋಗ ನಿಯಂತ್ರಣಾಧಿಕಾರಿಗಳಾದ ಡಾ.ಎಂ.ನಾಗರಾಜು, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳಾದ ಡಾ.ಶಶಿಕಲಾ .ಆರ್ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.
ತಗ್ಗಹಳ್ಳಿ ಗ್ರಾಮದಲ್ಲಿ ಗ್ರಾಮ ಸಭೆ
ಯಲಿಯೂರು ಗ್ರಾಮ ಪಂಚಾಯಿತಿ ವತಿಯಿಂದ  ಪ್ರಸಕ್ತ ಸಾಲಿನ ಒಂದೇ ಸುತ್ತಿನ ಗ್ರಾಮಸಭೆಯನ್ನು 2014ರ ಜುಲೈ 30ರಂದು ಸೋಮವಾರ ಬೆಳಗ್ಗೆ 11.00 ಗಂಟೆಗೆ ಯಲಿಯೂರು ಗ್ರಾಮದ ಪಂಚಾಯಿತಿ ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕೃಷ್ಣರಾಜಸಾಗರ ಜಲಾಶಯದ ವ್ಯಾಪ್ತಿಯ ಮೀನುಗಾರರಿಗೆ ಸೂಚನೆ
ಕೆ.ಆರ್.ಎಸ್ ಜಲಾಶಯದಲ್ಲಿ ಮೀನುಗಾರಿಕೆ ಕೈಗೊಳ್ಳಲು ಬೇಕಾದ ಗುರುತಿನ ಚೀಟಿ ಪಡೆಯಲು ಮೀನುಗಾರಿಕೆ ಕಚೇರಿಯಿಂದ ನಿಗÀಧಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಿದೆ.
ಅರ್ಜಿ ಪಡೆಯಲು ವಾಸ ಸ್ಥಳ ದೃಢೀಕರಿಸುವ ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ 2ಇತ್ತೀಚಿನ ಭಾವಚಿತ್ರ ಹಾಗೂ ಮೀನುಗಾರರು ಎಂದು ಗುರುತಿಸುವ ದೃಢೀಕೃತ ದಾಖಲಾತಿಗಳೊಂದಿಗೆ ಮೀನುಗಾರಿಕೆ ಕಚೇರಿಗೆ ನೀಡಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಗೆ ನೀಡಿ ಗುರುತಿನ ಚೀಟಿಯನ್ನು ಪಡೆದುಕೊಳ್ಳಲು ಕೆ.ಆರ್.ಸಾಗರದ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸದಾಗಿ ವರ್ತಕರ ಲೈಸೆನ್ಸ್ ಪಡೆದುಕೊಳ್ಳಲು ಸೂಚನೆ
       ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಅಧಿನಿಯಮ 1966 ರ ಕಲಂ 72ಕ್ಕೆ ತಿದ್ದುಪಡಿ ಹಾಗೂ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಾಮಾವಳಿ 1968 ರ ನಿಯಮ 76-ಎ ಗೆ ಸರ್ಕಾರವು ತಿದ್ದುಪಡಿ ಮಾಡಿದ್ದು, ವರ್ತಕರ ಲೈಸೆನ್ಸ್ ಪಡೆಯುವ ಬಗ್ಗೆ ಹೊಸದಾಗಿ ತಿದ್ದುಪಡಿಯಾಗಿರುವಂತೆ ಇನ್ನು ಮುಂದೆ ಯಾವುದೇ ಒಂದು ಸಮಿತಿಯಿಂದ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ವರ್ತಕರ ಲೈಸೆನ್ಸ್ ಪಡೆದುಕೊಂಡು ರಾಜ್ಯದ ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವರ್ತಕರಾಗಿ ವ್ಯವಹರಿಸಲು ಅವಕಾಶವಿರುತ್ತದೆ.
     ಈ ಹಿನ್ನೆಲೆಯಲ್ಲಿ ಮದ್ದೂರು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಯಲ್ಲಿ ವ್ಯವಹರಿಸಲು ಲೈಸೆನ್ಸ್ ಪಡೆದಿರುವ ವರ್ತಕರು ಇನ್ನು ಮುಂದೆ ಹೊಸದಾಗಿ ವರ್ತಕರ ಲೈಸೆನ್ಸ್‍ನ್ನು ಆಗಸ್ಟ್ 16 ರೊಳಗೆ ಪಡೆದುಕೊಳ್ಳಲು ನಮೂನೆ 37-ಎ ಅರ್ಜಿ ಮೂಲಕ ಇತರೆ ದಾಖಲಾತಿಗಳೊಂದಿಗೆ ಉಪ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಮಂಡ್ಯ ಜಿಲ್ಲೆ, ಮಂಡ್ಯ ಇವರಿಂದ ವರ್ತಕರ ಲೈಸೆನ್ಸ್ ನಿಗಧತ ಅವಧಿಯೊಳಗೆ ಪಡೆಯಬೇಕೆಂದು ತಿಳಿಸಿದೆ. ಈಗಾಗಲೇ ಸಮಿತಿಗೆ ಪಾವತಿಸಿರುವ ವರ್ತಕರ ಲೈಸೆನ್ಸ್ ಶುಲ್ಕದಲ್ಲಿ ಉಳಿದ ಅವಧಿಯ ಲೈಸೆನ್ಸ್ ಶುಲ್ಕವನ್ನು ಹಿಂದಿರುಗಿಸಲಾಗುವು ಎಂದು ಮದ್ದೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಸವಿತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರವೇಶಕ್ಕಾಗಿ ಅರ್ಜಿ ಸ್ವೀಕರಿಸುವ ದಿನಾಂಕ ವಿಸ್ತರಣೆ 
    ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಗಸ್ಟ್-2014ನೇ ಶೈಕ್ಷಣಿಕ ಸಾಲಿಗೆ ಐ.ಎಂ.ಸಿ. ಕೋಟಾದಡಿ  ಟೂಲ್ ಅಂಡ್ ಡೈ ಮೇಕರ್, ಜೋಡಣೆಗಾರ, ವಿದ್ಯುನ್ಮಾನ ದುರಸ್ತಿಗಾರ, ಎಂ.ಅರ್.ಸಿ. 2 ವರ್ಷದ ವೃತ್ತಿಗಳು  ಹಾಗೂ 1 ವರ್ಷದ ಕೋಪಾ ವೃತ್ತಿ   ಪ್ರವೇಶಕ್ಕಾಗಿ  ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದೂವರೆವಿಗೂ ಅರ್ಜಿ ಸಲ್ಲಿಸದಿರುವ ಎಸ್.ಎಸ್.ಎಲ್.ಸಿ. ತೇರ್ಗಡೆಯಾದ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಶುಲ್ಕ ರೂ.50/- ಅನ್ನು ಪಾವತಿಸುವುದು. ಅರ್ಜಿಯನ್ನು ಸಲ್ಲಿಸಲು ಜುಲೈ 31 ರವರೆಗೆ ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತರಬೇತಿ ಸಂಸ್ಥೆಯನ್ನು (ದೂರವಾಣಿ ಸಂಖ್ಯೆ 08232-232520) ಸಂಪರ್ಕಿಸಲು ಕೋರಿದೆ.
ಅಂತರ್ಜಾಲ ಮುಖಾಂತರ ವಿದ್ಯಾರ್ಥಿ ವೇತನ ಮಂಜೂರು
    ಮಂಡ್ಯ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ/ ವರ್ಗದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ 2014-15ನೇ ಸಾಲಿನಿಂದ ಜಾರಿಗೆ ಬರುವಂತೆ 1 ರಿಂದ 10ನೇ ತರಗತಿಯ ಪರಿಶಿಷ್ಟ ಜಾತಿ/ ವರ್ಗದ ವಿದ್ಯಾರ್ಥಿಗಳು ಅಂತರ್ಜಾಲದ ಮುಖಾಂತರ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗುವುದು.
   ಅರ್ಜಿಗಳನ್ನು ಇಲಾಖಾ ವೆಬ್ ಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ  ವಿಳಾಸದಲ್ಲಿ ಸಲ್ಲಿಸಬೇಕು. 2ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇದೂವರೆವಿಗೂ ಆನ್‍ಲೈನ್ ನೋಂದಣಿ ಮಾಡದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ನೊಂದಣಿ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಮುಖ್ಯೋಪಾದ್ಯಾಯರ ಮುಖಾಂತರ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಗೆ ನಿಗದಿತ ದಿನಾಂಕದೊಳಗೆ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆಯಾದಲ್ಲಿ ಇಲಾಖೆಯ ಟೂಲ್ ಫ್ರೀ ದೂರವಾಣಿ ಸಂಖ್ಯೆ 180042521111 ಗೆ ಕರೆ ಮಾಡುವುದು. ಅರ್ಜಿಯನ್ನು ಸಲ್ಲಿಸಲು  ಸೆಪ್ಟೆಂಬರ್ 30  ಕೊನೆಯ ದಿನಾಂಕವಾಗಿರುತ್ತದೆ.  
ವಿದ್ಯಾರ್ಥಿಗಳು ತಮ್ಮ ಹೆಸರಿನಲ್ಲಿ ಕಡ್ಡಾಯವಾಗಿ ರಾಷ್ಟ್ರೀಕೃತ ಅಥವಾ ಷೆಡ್ಯೂಲ್ ಬ್ಯಾಂಕಿನಲ್ಲಿ ಖಾತೆ ತೆರೆದು ಕಡ್ಡಾಯವಾಗಿ ಬ್ಯಾಂಕಿನ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು. ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವುದರಿಂದ ಕಡ್ಡಾಯವಾಗಿ ವಿದ್ಯಾರ್ಥಿ/ವಿದ್ಯಾರ್ಥಿನಿಯ ಹೆಸರಿನಲ್ಲಿ ಖಾತೆ ಹೊಂದಿರಬೇಕು. 
    ಪೋಷಕರ ವಾರ್ಷಿಕ ಆದಾಯ ಮಿತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮಂಡ್ಯ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು (ದೂರವಾಣಿ ಸಂಖ್ಯೆ 08232-223471) ಮೊದಲನೇ ಅಡ್ಡ ರಸ್ತೆ, ಬಂದೀಗೌಡ ಬಡಾವಣೆ, ಮಂಡ್ಯ ಇಲ್ಲಿ ಸಂಪರ್ಕಿಸುವುದು.
ಕಂಬೈನ್ಡ್ ಹೈಯರ್ ಸೆಕೆಂಡರಿ (10+2)ಲೆವೆಲ್ ಎಕ್ಸಾಮಿನೇಷನ್-2014.
       ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ  ಒಂದೇ ರೀತಿಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲು  ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಲೊವರ್ ಡಿವಿಜನ್ ಕ್ಲಕ್ರ್ಸ್  ಹಾಗೂ  ಡಾಟ ಎಂಟ್ರಿ ಆಪರೇಟರ್ಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ದಿನಾಂಕ 01-08-2014ಕ್ಕೆ  10+2 (ಪಿಯುಸಿ)ಪಾಸಾಗಿರುವ ಅಥವಾ ಹೆಚ್ಚಿನ ವಿದ್ಯಾರ್ಹತೆ ಹೊಂದಿರಬೇಕು. ದಿನಾಂಕ 01-08-2014 ಕ್ಕೆ   18 ರಿಂದ 27 ವರ್ಷದೊಳಗಿರಬೇಕು.ಗರಿಷ್ಟ ವಯೋಮಿತಿಯಲ್ಲಿ ಪರಿಶಿಷ್ಟಜಾತಿ & ಪಂಗಡ/ ಓಬಿಸಿ(ಕೇಂದ್ರ)ಇವರಿಗೆ ಕ್ರಮವಾಗಿ 5 & 3 ವರ್ಷಗಳ ರಿಯಾಯಿತಿ  ಇರುತ್ತದೆ. ಅರ್ಜಿಯನ್ನು ತಿತಿತಿ.ssಛಿ oಟಿಟiಟಿe.ಟಿiಛಿ.iಟಿ   ಅಥವಾ ತಿತಿತಿ.ssಛಿoಟಿಟiಟಿe2.gov.iಟಿ ಈ ವೆಬ್ ಸೈಟ್‍ಗಳ ಮೂಲಕ ಅನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ hಣಣಠಿ://ssಛಿ.ಟಿiಛಿ.iಟಿ  ವೆಬ್‍ಸೈಟ್‍ನಲ್ಲಿರುವ ಅರ್ಜಿನಮೂನೆಯ ಪ್ರಿಂಟ್ ತೆಗೆದುಕೊಂಡು ಭರ್ತಿಮಾಡಿ ಅಂಚೆಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 19 ಕೊನೆಯ ದಿನಾಂಕವಾಗಿರುತ್ತದೆ.
        ಹೆಚ್ಚಿನ ಮಾಹಿತಿಗೆ & ಅರ್ಜಿ ನಮೂನೆಗಾಗಿ   ಉಪಮುಖ್ಯಸ್ಥರು,   ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. (ದೂರವಾಣಿ ಸಂಖ್ಯೆ: 0821-2516844, ಮೊಬೈಲ್ ಸಂಖ್ಯೆ 9449686641) ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.
ಕಂಬೈನ್ಡ್  ಡಿಫೆನ್ಸ್ ಸರ್ವಿಸಸ್  ಎಕ್ಸಾಮಿನೇಷನ್-2014
        ಕೇಂದ್ರ ಲೋಕ ಸೇವಾ ಆಯೋಗ , ನವದೆಹಲಿ  ಇವರು  ರಕ್ಷಣಾ ಪಡೆಗಳಾದ ಆರ್ಮಿ, ನೇವಿ  & ಏರ್ ಫೋರ್ಸ್ ಗಳಲ್ಲಿ ಸುಮಾರು 464 ಆಫೀಸರ್ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.
      ಅಂಗೀಕೃತ ವಿಶ್ವವಿದ್ಯಾನಿಲಯದ  ಯಾವುದಾದರು ಪದವಿ ಪಡೆದಿರಬೇಕು. ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವವರೂ ಸಹ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ತಿತಿತಿ.uಠಿsಛಿoಟಿಟiಟಿe.ಟಿiಛಿ.iಟಿ ವೆಬ್ ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 18 ಕೊನೆಯ ದಿನಾಂಕವಾಗಿರುತ್ತದೆ.   
       ಹೆಚ್ಚಿನ ಮಾಹಿತಿಗೆ ಲೋಕ ಸೇವಾ ಆಯೋಗದ ವೆಬ್ ಸೈಟ್: hಣಣಠಿ://ತಿತಿತಿ.uಠಿsಛಿ.gov.iಟಿ  ನೋಡಿ ಅಥವಾ ಉಪಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು ಇವರನ್ನು  ( ದೂರವಾಣಿ: 0821-2516844,9449686641) ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ. 
ಬ್ಯಾಂಕಿಂಗ್ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ 2014
       ಭಾರತದ 20 ಕ್ಕಿಂತ ಹೆಚ್ಚು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಪ್ರೊಬೇಷನರಿ ಅಧಿಕಾರಿ ಹುದ್ದೆಗಳನ್ನು ಒಂದೇ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ “ಆನ್‍ಲೈನ್” ಮೂಲಕ ಅರ್ಜಿಗಳನ್ನುಆಹ್ವಾನಿಸಿದ್ದಾರೆ.
      ಈ ಪರೀಕ್ಷೆಯಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ 20 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ   ಪ್ರೊಬೇಷನರಿ ಅಧಿಕಾರಿ ಹುದ್ದೆಗಳಿಗೆ ಒಂದು ವರ್ಷದವರೆಗೆ ಅರ್ಜಿ ಸಲ್ಲಿಸಿ ನೇರವಾಗಿ ಸಂದರ್ಶನಕ್ಕೆ ಅರ್ಹತೆ ಪಡೆಯಬಹುದು. ಪ್ರತಿಯೊಂದು ಬ್ಯಾಂಕಿನ  ನೇಮಕಾತಿಗೆ ಪ್ರತ್ಯೇಕ ಪರೀಕ್ಷೆ ಬರೆಯುವ ಅವಶ್ಯಕತೆ ಇರುವುದಿಲ್ಲ.
        ಯಾವುದಾದರು ಪದವಿಯಲ್ಲಿ ತೇರ್ಗಡೆ ಹೊಂದಿರಬೇಕು. ಕನಿಷ್ಟ   20 ವರ್ಷ ತುಂಬಿರಬೇಕು & ಗರಿಷ್ಟ 30 ವರ್ಷ ಮೀರಿರಬಾರದು. ಪರಿಶಿಷ್ಟಜಾತಿ/ಪಂಗಡ &ಓಬಿಸಿ (ಕೇಂದ್ರ) ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅರ್ಜಿಯನ್ನು ವೆಬ್‍ಸೈಟ್; ತಿತಿತಿ.ibಠಿs.iಟಿ ನಲ್ಲಿ ಆನ್‍ಲೈನ್ ಮೂಲಕ  ಆಗಸ್ಟ್ 11 ರೊಳಗೆ ಅರ್ಜಿ ಸಲ್ಲಿಸಬೇಕು.
      ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ ಸೈಟ್ ತಿತಿತಿ.ibಠಿs.iಟಿ  ನೋಡಿ   ಅಥವಾ
 ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ದೂರವಾಣಿ- 2516844/8892019297 ಇವರನ್ನು ಸಂಪರ್ಕಿಸಲು ತಿಳಿಸಿದೆ.

ಕಲಾವಿದರುಗಳಿಗೆ ಸೂಚನೆ
   ಕಲೆ ಮತ್ತು ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಾಶಾಸನ ಪಡೆಯುತ್ತಿರುವ ಮಂಡ್ಯ ಜಿಲ್ಲೆಯ ಎಲ್ಲಾ ಕಲಾವಿದರು/ಸಾಹಿತಿಗಳು ಸ್ವಂತ ಮನೆ ಇಲ್ಲದೆ ಇರುವವರು ತಾವು ವಾಸಿಸುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ವಸತಿ ರಹಿತ ದೃಢಿಕರಣ ಪತ್ರವನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಲಾಮಂದಿರ, ಮಂಡ್ಯ ವಿಳಾಸಕ್ಕೆ ಒಂದು ವಾರದೊಳಗೆ ಸಲ್ಲಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾಸಿರಿ ಯೋಜನೆ : ಕಾಲೇಜುಗಳಿಗೆ ಸೂಚನೆ
  ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿಗಳು ಊಟ ಮತ್ತು ವಸತಿ ಸಹಾಯ ಯೋಜನೆ- ‘ವಿದ್ಯಾರ್ಥಿ ವೇತನ’ ಪಡೆಯುವ ನಿಟ್ಟಿನಲ್ಲಿ, ಎಲ್ಲ ಕಾಲೇಜುಗಳು-ಪಾಸ್ ಪೋರ್ಟಲ್ ನಲ್ಲಿ ಕೋರ್ಸ್‍ಗಳ ವಿವರವನ್ನು ಆಗಸ್ಟ್ 10 ರೊಳಗಾಗಿ ಅಪ್‍ಲೋಡ್ ಮಾಡುವಂತೆ ಸೂಚನೆ ನೀಡಲಾಗಿದೆ.
       ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವಿ ಪೂರ್ವ, ಐಟಿಐ, ಡಿಪ್ಲೋಮಾ, ಪಾಲಿಟೆಕ್ನಿಕ್, ಪದವಿ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್, ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ಮತ್ತು ಪಶುವೈದ್ಯಕೀಯ, ಸ್ನಾತಕೋತ್ತರ, ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸಹಾಯ ಯೋಜನೆ (ವಿದ್ಯಾಸಿರಿ) ವಿದ್ಯಾರ್ಥಿ ವೇತನ, ಶುಲ್ಕ ವಿನಾಯಿತಿ ಇತ್ಯಾದಿ ಸೌಲಭ್ಯಗಳನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ, ಸಂಬಂಧಪಟ್ಟ ಕಾಲೇಜುಗಳು ಇ-ಪಾಸ್ ಪೋರ್ಟ್‍ಲ್‍ನಲ್ಲಿ ಕಾಲೇಜಿನ ಮಾಹಿತಿ ಮತ್ತು ಕಾಲೇಜಿನ ಭೋಧಿಸಲಾಗುತ್ತಿರುವ ಕೋರ್ಸುಗಳ ವಿವರಗಳನ್ನು ಅಪ್‍ಲೋಡ್ ಮಾಡಬೇಕು.
 2013-2014 ನೇ ಸಾಲಿನಲ್ಲಿ ಇ-ಪಾಸ್ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡದೇ ಇರುವ, ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಕಾಲೇಜುಗಳ ರಜಿಸ್ಟ್ರೇಷನ್ ನಂ, ಅಫಿಲಿಯೇಷನ್ ನಂ, ಪೂರ್ಣ ವಿಳಾಸ, ಪ್ರಾಂಶುಪಾಲರ ಹೆಸರು, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ವೆಬ್‍ಸೈಟ್(ಇದ್ದಲ್ಲಿ), ಕಾಲೇಜಿನ ಬ್ಯಾಂಕ್‍ಖಾತೆ/ಐಎಫ್‍ಎಸ್‍ಸಿ ಕೋಡ್, ಭೋಧಿಸಲಾಗುತ್ತಿರುವ(ಮಾನ್ಯತೆ ಪಡೆದ) ಕೋರ್ಸುಗಳ ಮಾಹಿತಿಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವೆಬ್‍ಪೋರ್ಟಲ್ hಣಣಠಿ://ಞಚಿಡಿeಠಿಚಿss.ಛಿgg.gov.iಟಿ ರಲ್ಲಿ ಅಪ್ ಲೋಡ್ ಮಾಡಬೇಕು. ಹೊಸದಾಗಿ ಯೂಸರ್-ಐಡಿ ಮತ್ತು ಪಾಸ್‍ವರ್ಡ್‍ಗಳ ಅಗತ್ಯ ಇರುವ ಕಾಲೇಜು ಪ್ರಾಂಶುಪಾಲರು ಕಾಲೇಜಿನ ಅಫಿಲಿಯೇಷನ್ ಆದೇಶ ಮತ್ತು ಮಾನ್ಯತೆ ಪಡೆದ ಕೋರ್ಸುಗಳ ಕುರಿತ ಆದೇಶಗಳ ಸ್ಕ್ಯಾನ್ ಪ್ರತಿಗಳೊಂದಿಗೆ, ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ಇವರ ಇ-ಮೇಲ್ hಣಣಠಿ://bಛಿಜbಟಿg@ಞಚಿಡಿ.ಟಿiಛಿ.iಟಿ ವಿಳಾಸಕ್ಕೆ ಪತ್ರವನ್ನು ಕಳುಹಿಸಬಹುದು. ಕಾಲೇಜುಗಳಿಗೆ ನೀಡಲಾದ ಯೂಸರ್-ಐಡಿ ಮತ್ತು ಪಾಸ್‍ವರ್ಡ್‍ಗಳನ್ನು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಿ ಪಡೆದು ಆ.10 ರೊಳಗಾಗಿ ತಪ್ಪದೇ ಅಪ್‍ಲೋಡ್ ಮಾಡಬೇಕು.
  ಊಟ ಮತ್ತು ವಸತಿ ಸಹಾಯ ಯೋಜನೆ(ವಿದ್ಯಾಸಿರಿ), ವಿದ್ಯಾರ್ಥಿ ವೇತನ ಮತ್ತು ಶುಲ್ಕ ವಿನಾಯಿತಿ ಇತ್ಯಾದಿಗಳನ್ನು ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿ ಇರುವ ರೀತಿಯಲ್ಲಿಯೇ (ಉದಾಹರಣೆಗೆ, ಬಿ. ಸಂತೋಷ್ ಇದ್ದರೆ ಬ್ಯಾಂಕ್ ಖಾತೆ ತರೆಯುವಾಗ ಬಿ. ಸಂತೋಷ್ ಎಂದೇ ನಮೂದಿಸಬೇಕು.  ಸಂತೋಷ್. ಬಿ. ಎಂದು ನಮೂದಿಸಬಾರದು) ವಿದ್ಯಾರ್ಥಿಗಳ ಹೆಸರಿನಲ್ಲಿ ಯಾವುದಾದರೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ, ಬ್ಯಾಂಕ್ ಖಾತೆಯನ್ನು ತೆರೆಯಲು ವಿದ್ಯಾರ್ಥಿಗಳಿಗೆ ಸೂಚನೆಗಳನ್ನು ನೀಡುವಂತೆ ಬಿಸಿಎಂ ಜಿಲ್ಲಾ ಅಧಿಕಾರಿ ಲಿಂಗರಾಜಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
              ಕಾಣೆಯಾದ  ಗಂಡಸಿನ ಪತ್ತೆಗೆ ಸಹಕರಿಸಲು ಮನವಿ
ಮಂಡ್ಯ ನಗರದ ಹೌಸಿಂಗ್ ಬೋರ್ಡ್‍ನ ಮಹದೇವಮ್ಮ  ಪತಿ ಮುತ್ತುರಾಜ್ ದಿನಾಂಕ  14-7-2014 ರಿಂದ ನಾಪತ್ತೆಯಾಗಿದ್ದಾರೆ. 
 ಕಾಣೆಯಾದ ಗಂಡಸಿನ ಚಹರೆ ಇಂತಿದೆ.  ವಯಸ್ಸು 34 ವರ್ಷ, 5.2 ಅಡಿ ಎತ್ತರ,  ಎಣ್ಣೆಗೆಂಪು ಬಣ್ಣ ಹೊಂದಿದ್ದು, ಎಡಕಣ್ಣಿನ ಕೆಳಭಾಗ ಕಪ್ಪು ಮಚ್ಚೆ ಇರುತ್ತದೆ.  ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ಪ್ಯಾಂಟ್, ಪಿಂಕ್ ಬಣ್ಣದ ಶರ್ಟ್ ಧರಿಸಿರುತ್ತಾರೆ.  ಈ ಚಹರೆ ಪಟ್ಟಿಯುಳ್ಳ ವ್ಯಕ್ತಿ ಪತ್ತೆಯಾದಲ್ಲಿ ಕೂಡಲೇ ಮಂಡ್ಯ ಕಂಟ್ರೋಲ್ ರೂಂ : 08232-224888, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ: 08232-224500 ಹಾಗೂ ಪಶ್ಚಿಮ ಪೊಲೀಸ್ ಠಾಣೆ 08232-224666 ಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರಕ್ಕೆ ಅಧ್ಯಕ್ಷರು ಮತ್ತು ಮಹಾ ನಿರ್ದೇಶಕರಾದ ವಿ.ಕಣ್ಣನ್ ಭೇಟಿ.

 ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರಗಳಿಗೆ ಭೇಟಿ
     ವಿಜಯಾ ಬ್ಯಾಂಕ್ ಅಧ್ಯಕ್ಷರು ಮತ್ತು ಮಹಾ ನಿರ್ದೇಶಕರಾದ ವಿ.ಕಣ್ಣನ್ ಅವರು ಸ್ಥಳೀಯ ವಿಜಯಾ ಬ್ಯಾಂಕ್ ಶಾಖೆಗಳು, ಲೀಡ್ ಬ್ಯಾಂಕ್, ಆರ್ಥಿ ಸೇರ್ಪಡೆ ಕೇಂದ್ರ, ಆರ್ಥಿಕ ಸೇರ್ಪಡೆ ಸಂಪನ್ಮೂಲ ಕೇಂದ್ರ ಮತ್ತು ವಿಜಯಾ ಬ್ಯಾಂಕ ಸ್ವ ಉದ್ಯೋಗ ತರಬೇತಿ ಕೇಂದ್ರಗಳಿಗೆ ಜುಲೈ 25 ರಂದು ಭೇಟಿ ನೀಡಿ ಸಂಬಂಧಪಟ್ಟ ವ್ಯವಸ್ಥಾಪಕರೊಂದಿಗೆ  ಚರ್ಚಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಅಜಯ್ ನಾಗಭೂಷಣ್ ರೊಂದಿಗೆ ಸಂಪೂರ್ಣ ಆರ್ಥಿಕ ಸೇರ್ಪಡೆ ಕಾರ್ಯಕ್ರಮದ ಅನುಷ್ಟಾನ ಕುರಿತು ಚರ್ಚಿಸಿ ಸಲಹೆ ಸಹಕಾರವನ್ನು ಕೋರಿದರು.
    ಈ ಸಂದರ್ಭದಲ್ಲಿ ಎಲ್ಲಾ ಕುಟುಂಬಗಳನ್ನು ಆರ್ಥಿಕ ಸೇರ್ಪಡೆ ಚಟುವಟಿಕೆಗಳಲ್ಲಿ ಬಾಗಿಯಾಗಲು ಸಕಾಲಕ್ಕೆ ಕೇಂದ್ರ ಸರ್ಕಾರದ ನಿಯಮಾವಳಿಯ ಪ್ರಕಾರ ಸಕ್ರೀಯವಾಗಿ ಕಾರ್ಯ ನಿರ್ವಹಿಸಬೇಕೆಂದು ನಿರ್ದೇಶನ ನೀಡಿದರು.
    ಈ ಸಂದರ್ಭದಲ್ಲಿ ವಿಜಯಾಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಸತೀಶ್ ಬಲ್ಲಾಳ್, ಪ್ರಾದೇಶಿಕ ವ್ಯವಸ್ಥಾಪಕರಾದ ಉದಯಕುಮಾರ್ ಶೆಟ್ಟಿ, ಮಂಡ್ಯ ಜಿಲ್ಲಾ ನಬಾರ್ಡ್‍ನ ಎಜಿಎಂ ಬಿಂದುಮಾಧವ ವಡವಿ, ಆರ್ಥಿಕ ಸೇರ್ಪಡೆ ಮುಖ್ಯಸ್ಥರಾದ ದಯಾಕರ್ ರೆಡ್ಡಿ, ಮಂಡ್ಯ ಜಿಲ್ಲಾ ಲೀಡ್‍ಬ್ಯಾಂಕ್ ವ್ಯವಸ್ಥಾಪಕರಾದ ಬಸವರಾಜಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Saturday 26 July 2014

ಮೈಸೂರು-ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರ ಸೂಚನೆ.

ಮೈಸೂರು ನಗರದಲ್ಲಿ ಸಾರ್ವಜನಿಕರ ವಾಹನಗಳ ನಿಲುಗಡೆಯ ಬಗ್ಗೆ ಮಾಹಿತಿ

    ಇತ್ತೀಚೆಗೆ ಮೈಸೂರು ನಗರದಲ್ಲಿ ಬೊಲೆರೋ ಮತ್ತು ಸ್ಕಾರ್ಪಿಯೋ ವಾಹನಗಳ ಕಳ್ಳತನವಾಗುತ್ತಿದ್ದು, ರಾತ್ರಿ ವೇಳೆಯಲ್ಲಿ ನಿರ್ಲಕ್ಷತೆಯಿಂದ ಮನೆ ಹೊರಗೆ, ರಸ್ತೆಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ಗುರಿಯಾಗಿಟ್ಟುಕೊಂಡು ಕಳ್ಳತನ ಎಸಗುತ್ತಿರುತ್ತಾರೆ. ಈ ವಾಹನಗಳ ಕಳ್ಳತನ ತಡೆಗಟ್ಟುವ ಸಲುವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಾರ್ವಜನಿಕರಿಗೆ ಮತ್ತು ವಾಹನ ಮಾಲಿಕರುಗಳಿಗೆ ಪೊಲೀಸ್ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1.    ತಮ್ಮ ವಾಹನಗಳನ್ನು ತಮ್ಮ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿ ಸರಿಯಾದ ಲಾಕ್ ವ್ಯವಸ್ಥೆಯನ್ನು ಮಾಡುವುದು. ಸಾಧ್ಯವಾದಷ್ಟು ಕಾರ್ ಪಾರ್ಕಿಂಗ್ ಶೆಡ್‍ನಲ್ಲಿ ನಿಲ್ಲಿಸುವುದು.
2.    ಆಂಟಿ ಥೆಫ್ಟ್ ಅಲರಾಂ (ಂಟಿಣi ಣheಜಿಣ ಚಿಟಚಿಡಿm)  ಹಾಗೂ ಜಿ.ಪಿ.ಎಸ್. (ಉPS)  ವ್ಯವಸ್ಥೆಯನ್ನು ತಮ್ಮ ವಾಹನಗಳಿಗೆ ಅಳವಡಿಸುವುದು.
3.    ಕಾರ್ ಪೂಲ್ ಪಾರ್ಕಿಂಗ್ (ಅಚಿಡಿ ಠಿooಟ ಠಿಚಿಡಿಞiಟಿg) ವ್ಯವಸ್ಥೆ ಃ ಒಂದು ಬಡಾವಣೆಯಲ್ಲಿನ ವಾಹನಗಳ ಮಾಲೀಕರು, ರಾತ್ರಿ ವೇಳೆಯಲ್ಲಿ ಎಲ್ಲಾ ವಾಹನಗಳನ್ನು ಒಂದೆಡೆ ನಿಲ್ಲಿಸಿ ಅವುಗಳ ರಕ್ಷಣೆಗಾಗಿ ಸೆಕ್ಯುರಿಟಿ ಗಾರ್ಡ (Seಛಿuಡಿiಣಥಿ guಚಿಡಿಜ) ಗಳನ್ನು ನೇಮಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ.
4.    ರಸ್ತೆಗಳಲ್ಲಿ ವಾಹನಗಳನ್ನು ರಾತ್ರಿ ವೇಳೆಯಲ್ಲಿ ನಿಲ್ಲಿಸುವುದನ್ನು ತಡೆಯಬೇಕು.
5.    ವೀಲ್ ಲಾಕ್ (Wheeಟ ಟoಛಿಞ) ಹಾಗೂ ಸ್ಟೀರಿಂಗ್ ಲಾಕ್ (sಣeeಡಿiಟಿg ಟoಛಿಞ) ಗಳನ್ನು ಅಳವಡಿಸಿಕೊಳ್ಳುವುದು. ಈ ಬಗ್ಗೆ ಸಹಕರಿಸುವಂತೆ  ಮೈಸೂರು ನಗರ ಪೊಲೀಸ್ ಕಮೀಷನರ್ ರವರು ಸಾರ್ವಜನಿಕರಲ್ಲಿ ಕೋರಿದ್ದಾರೆ.
(2) ಮೈಸೂರು ನಗರದಲ್ಲಿ ಪೋಲಿಸರಿಂದ  ಎಸ್.ಸಿ./ಎಸ್.ಟಿ. ಕುಂದುಕೊರತೆ ಸಭೆ.

        ಮೈಸೂರು ನಗರದಲ್ಲಿ  ಎಲ್ಲಾ ಪೊಲೀಸ್ ನಿರೀಕ್ಷಕರು ದಿನಾಂಕ. 27-07-2014 ಭಾನುವಾರ (ಪ್ರತಿ ತಿಂಗಳ ಕಡೆಯ ಭಾನುವಾರ) ರಂದು ಠಾಣಾ ಸರಹದ್ದಿನ ವ್ಯಾಪ್ತಿಯಲ್ಲಿರುವ ಎಸ್.ಸಿ./ಎಸ್.ಟಿ. ಕಾಲೋನಿಗಳಿಗೆ ಆಯಾ ಠಾಣೆಯ ಪೊಲೀಸ್ ನಿರೀಕ್ಷಕರು ಭೇಟಿ ನೀಡಿ ಸಭೆಯನ್ನು ನಡೆಸಿ  ಅವರ ಕುಂದುಕೊರತೆಗಳನ್ನು ವಿಚಾರಿಸಿ ಕ್ರಮ ಕೈಗೊಳ್ಳುವ ಸಭೆ  ನಡೆಸುವರು ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೋಳ್ಳಬಹುದಾಗಿದೆ ಎಂದು ಪೊಲೀಸ್ ಕಮೀಷನರ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಮರ್ಪಕ ವಿದ್ಯುತ್ ಪೂರೈಸುವಂತೆ ಅಧಿಕಾರಿಗಳಿಗೆ ಸಂಸದ ಸಿ.ಎಸ್.ಪುಟ್ಟರಾಜು-ಸೂಚನೆ.

ಮಂಡ್ಯ: ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂದೆ  ಸಮರ್ಪಕ ವಿದ್ಯುತ್ ಪೂರೈಸುವಂತೆ ಅಧಿಕಾರಿಗಳಿಗೆ ಸಂಸದ ಸಿ.ಎಸ್.ಪುಟ್ಟರಾಜು ಸೂಚಿಸಿದರು.
ನಗರದ ಸೆಸ್ಕಾಂ  ಅಧೀಕ್ಷಕ ಅಭಿಯಂತರರ ಕಚೇರಿಯಲ್ಲಿಂದು ಸೆಸ್ಕಾಂ, ಜಲಮಂಡಳಿ ಹಾಗೂ ನಗರಸಭೆ ಆಡಳಿತಗಳ ಹಿರಿಯ ಅಧಿಕಾರಿಗಳೊಂದಿಗೆ ಜರುಗಿದ ಸಭೆಯಲ್ಲಿ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಪ್ರಮುಖ ಇಲಾಖೆಗಳ ಮುಖ್ಯಸ್ಥರು ಹೊಣೆಗಾರಿಕೆಯಿಂದ ನುಣುಚಿಕೊಳ್ಳದೇ ಜವಾಬ್ದಾರಿ ಹೊರಬೇಕು.  ಪ್ರತಿಷ್ಠೆ ಮೆರೆಯುವುದು ಬೇಡ. ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಕಾರ್ಯ ನಿರ್ವಹಿಸಲು ಮುಂದಾಗಬೇಕೆಂದು ಸಂಸದ ಸಿ.ಎಸ್.ಪುಟ್ಟರಾಜು ಸೆಸ್ಕ್ ಇಲಾಖೆಯ ಮುಖ್ಯಸ್ಥರ ಸಭೆಯಲ್ಲಿ ತಾಕೀತು ಮಾಡಿದರು.
ಹಲವಾರು ಗ್ರಾಮಾಂತರ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಒಂದೊಂದು ಗ್ರಾಮಗಳಲ್ಲಿ ಒಂದೊಂದು ಸಮಸ್ಯೆ ಉದ್ಭವವಾಗಿದೆ. ಅರ್ಧ ಊರಿಗೆ ವಿದ್ಯುತ್ ಸಂಪರ್ಕವಿದ್ದರೆ ಇನ್ನರ್ಧ ಗ್ರಾಮಕ್ಕೆ ವಿದ್ಯುತ್ ಇಲ್ಲದೇ ಗ್ರಾಮಸ್ಥರು ಪರಿತಪಿಸುತ್ತಿದ್ದಾರೆ. ರಾತ್ರಿ ಹತ್ತು ಗಂಟೆ ವೇಳೆಯಲ್ಲಿ ಮಹಿಳೆಯರು ಫೋನಾಯಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗುತ್ತಿರುವ ಬಗ್ಗೆ ನಿವೇದಿಸುತ್ತಿದ್ದಾರೆ. ಜನಪ್ರತಿನಿಧಿಗಳ ಕಾಳಜಿ ಅರ್ಥ ಮಾಡಿಕೊಂಡು ಸೂಕ್ತ ಕಾರ್ಯ ನಿರ್ವಹಣೆಗೆ ಮುಂದಾಗಬೇಕೆಂದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಂಡವಪುರ ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ ಹಗಲಿನ ವೇಳೆಯಲ್ಲಿ ನಾಲ್ಕುಗಂಟೆ, ರಾತ್ರಿ ವೇಳೆಯಲ್ಲಿ ಮೂರು ಗಂಟೆಗಳ ಕಾಲ ಕೃಷಿ ಪಂಪ್‍ಸೆಟ್‍ಗಳಿಗೆ ತ್ರಿಪೇಸ್ ವಿದ್ಯುತ್ ನೀಡಲಾಗುತ್ತಿದೆ. ಇತರೆ ಅವಧಿಯ ಸಿಂಗಲ್ ಪೇಸ್ ವಿದ್ಯುತ್ ಪೂರೈಕೆಯಲ್ಲಿ ಕೃಷಿ ಪಂಪ್‍ಸೆಟ್ ಬಳಕೆಗೆ ಮುಂದಾಗದಂತೆ ಸರ್ಕಾರ ಕಡಿವಾಣ ಹಾಕಲು ಸೂಚಿಸಿದೆ. ಈ ಹಿನ್ನಲೆಯಲ್ಲಿ ಅಲ್ಪ ಮಟ್ಟಿನ ತೊಂದರೆಯಾಗಿದ್ದು, ನಿವಾರಿಸಲು ಮುಂದಾಗುವ ಭರವಸೆ ವ್ಯಕ್ತಪಡಿಸಿದರು.
ಮಂಡ್ಯ ನಗರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜರುಗಿದ ಚರ್ಚೆಯಲ್ಲಿ ಎ ಬಿ ಕೇಬಲ್ ಅಳವಡಿಕೆಗೆ ಸುಮಾರು 20 ಲಕ್ಷ ಖರ್ಚಾಗಲಿದ್ದು, ಸದರಿ ಹಣ ಬರಿಸಿದರೆ ಪ್ರತ್ಯೇಕ ಕೇಬಲ್ ಅಳವಡಿಕೆ ಮಾರ್ಗದಿಂದ ಗುಣಮಟ್ಟದ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ  ಮಾತನಾಡಿದ ಸಂಸದರು ಸಮಸ್ಯೆ ಬಗೆ ಹರಿಸಲು ಪ್ರಯತ್ನಿಸಬೇಕೆಂದರು.
ಮಂಡ್ಯ ನಗರಸಭೆ ವಿದ್ಯುತ್ ಬಿಲ್ ಅನುದಾನ ಶ್ರೀರಂಗಪಟ್ಟಣ ಪುರಸಭೆ ಖಾತೆಗೆ ಜಮೆಯಾಗಿರುವ ಬಗ್ಗೆ ಅಧಿಕಾರಿಗಳು ಸಂಸದರ ಗಮನಕ್ಕೆ ತಂದಾಗ ಇಲಾಖಾವಾರು ಹಣ ಹಂಚಿಕೆಯ ವ್ಯತ್ಯಾಸಗಳನ್ನು ಸರಿಪಡಿಸಲು ಒಂದು ವಾರದೊಳಗೆ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ, ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಹಾಗೂ ವಸತಿ ಸಚಿವ ಅಂಬರೀಷ್ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆ ಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆಯಿಂದ ವಿದ್ಯುತ್ ಇಲಾಖೆಗೆ 17.61.36984 ರೂ.ಗಳು ಬಾಕಿ ಇದ್ದು, ಸದರಿ ಹಣ ಪಾವತಿಸಿದರೂ ಸೆಸ್ಕ್ ಇಲಾಖೆ ನೂತನ ಕೇಬಲ್ ಅಳವಡಿಸಿ ಸಮರ್ಪಕ ವಿದ್ಯುತ್ ಇಂಗಿತ ವ್ಯಕ್ತಪಡಿಸಿತು.
ಮಂಡ್ಯ ನಗರದ ನೀರು ಪೂರೈಸುವ ಜಲ ಸಂಗ್ರಹಗಾರಕ್ಕೆ  ಅಳವಡಿಸಿರುವ ಎಕ್ಸ್‍ಪ್ರೆಸ್ ಫೀಡರ್ ಲೈನ್‍ನಿಂದ ವೆಲ್ಲೆಸ್ಲಿ ಸೇತುವೆ ಬಳಿಯ ಬಡಾವಣೆಗಳಿಗೆ, ದರಿಯಾ ದೌಲತ್‍ಗೆ ಹಾಗೂ ಕೈಗಾರಿಕೆ ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದು, ಪದೇ ಪದೇ ವಿದ್ಯುತ್ ವ್ಯತ್ಯಯ ಉಂಟಾಗಲು ಕಾರಣವಾಗಿದೆ ಎಂದು ಜಲ ಮಂಡಳಿ ಅಧಿಕಾರಿಗಳು ದೂರಿದರು.
ಇದನ್ನು ಅಲ್ಲಗೆಳೆದ ಸೆಸ್ಕ್ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ತೆರಳಿದರೆ, ಸ್ಥಳದಲ್ಲೇ ಸಮಸ್ಯೆ ಬಗೆ ಹರಿಸಲು ಮುಂದಾಗುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಹಿನ್ನಲೆಯಲ್ಲಿ ನಗರಸಭೆ ಆಯುಕ್ತರು, ಜಲ ಮಂಡಳಿ, ಅಧಿಕಾರಿಗಳು ಹಾಗೂ ಸಭೆಯಲ್ಲಿ ಹಾಜರಿದ್ದ ನಗರಸಭಾ ಸದಸ್ಯರೊಟ್ಟಿಗೆ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಸದರು ಸೂಚಿಸಿದರು.
ಸಭೆಯಲ್ಲಿ ಸೆಸ್ಕ್ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಲೋಕೇಶ್, ರಂಗಸ್ವಾಮಿ, ಪರಶಿವಮೂರ್ತಿ, ನಾಗಭೂಷಣಪ್ಪ, ಪೌರಾಯುಕ್ತ ಶಶಿಕುಮಾರ್, ಜಲಮಂಡಳಿ ಕಾರ್ಯಪಾಲಕ ಅಭಿಯಂತರ ಸುಬ್ಬೇಗೌಡ, ನಗರಸಭಾ ಸದಸ್ಯರಾದ ಕೆ.ಸಿ.ರವೀಂದ್ರ, ಸೋಮಶೇಖರ್, ಶಶಿಧರ್ ಉಪಸ್ಥಿತರಿದ್ದರು.

Friday 25 July 2014

ಕೃಷ್ಣರಾಜಪೇಟೆ.ತೊಗಟವೀರ ನೇಕಾರ ಸಮಾಜದವರು ಆಯೋಜಿಸಿದ್ದ 4ನೇ ವರ್ಷದ ಶ್ರೀ ಚಾಮುಂಡೇಶ್ವರಿ ತಾಯಿಯ ಕರಗ ಮಹೋತ್ಸವ


ಕೃಷ್ಣರಾಜಪೇಟೆ. ಪಟ್ಟಣದಲ್ಲಿ ತೊಗಟವೀರ ನೇಕಾರ ಸಮಾಜದವರು ಆಯೋಜಿಸಿದ್ದ 4ನೇ ವರ್ಷದ ಶ್ರೀ ಚಾಮುಂಡೇಶ್ವರಿ ತಾಯಿಯ ಕರಗ ಮಹೋತ್ಸವವವು ಜಾನಪದ ಕಲಾ ತಂಡಗಳ ವೈಭವದ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ನಡೆಯಿತು.  ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಬೃಹನ್ಮಠದ ಆನೆ ಗೌರಿಯು ತಾಯಿ ಶ್ರೀಚಾಮುಂಡೇಶ್ವರಿ ತಾಯಿಯ ಮೂರ್ತಿಯನ್ನು ಹೊತ್ತು ಗಂಭೀರವಾಗಿ ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.
ಇತಿಹಾಸ ಪ್ರಸಿದ್ಧವಾದ ದೇವೀರಮ್ಮಣ್ಣಿ ಕೆರೆಯಿಂದ ಕರಗವನ್ನು ತಲೆಯ ಮೇಲೆ ಹೊತ್ತು ನಡೆಮುಡಿಯಲ್ಲಿ ಸಾಗಿದರೆ ದೇವರ ಗುಡ್ಡರು ತಾಯಿ ಚಾಮುಂಡಿಯನ್ನು ಜಾನಪದ ಗಾಯನದೊಂದಿಗೆ ಕರೆದು ನರ್ತಿಸಿದ್ದು ಭಕ್ತಿಯ ಪರಾಕಾಷ್ಠೆಗೆ ಭಕ್ತಾಧಿಗಳನ್ನು ಕರೆದೊಯ್ದಿತ್ತು. ಡೊಳ್ಳು ಕುಣಿತ, ಪಟ ಕುಣಿತ, ಪೂಜಾ ಕುಣಿತ, ನಂದಿಧ್ವಜ ಕುಣಿತ, ಸೋಮನಕುಣಿತ, ಕೋಲಾಟ, ವೀರಗಾಸೆ ನೃತ್ಯ, ಯಕ್ಷಗಾನ ಪಾತ್ರಧಾರಿಗಳು ಹಾಗೂ ಹಾಸ್ಯ ಪಾತ್ರಧಾರಿಗಳ ನೃತ್ಯವು ಸಾರ್ವಜನಿಕರನ್ನು ರಂಜಿಸಿದರೆ, ಸಿರಿಗೆರೆಯ ಬೃಹನ್ಮಠದ ಆನೆ ಗೌರಿಯು ತಾಯಿ ಚಾಮುಂಡೃಶ್ವರಿಯ ಮೂರ್ತಿಯನ್ನು ಹೊತ್ತು ಗಂಭೀರವಾಗಿ ಮೆರವಣಿಗೆಯಲ್ಲಿ ಸಾಗಿದ್ದು ಈ ಭಾರಿಯ ಕರಗ ಮಹೋತ್ಸವದ ವಿಶೇಷ ಆಕರ್ಷಣೆಯಾಗಿತ್ತು. ಬಾಣಬಿರುಸುಗಳು, ಪಟಾಕಿ ಮತ್ತು ಆಟಂ ಬಾಂಬ್‍ಗಳು ಹಾಗೂ ಸಿಡಿ ಮದ್ದುಗಳ ಸದ್ದಿಗೆ ಜಗ್ಗದೇ ಆನೆ ಗೌರಿಯು ಹೆಜ್ಜೆ ಹಾಕುತ್ತಾ ಶ್ರೀ ಚನ್ನಬಸವೇಶ್ವರ ದೇವಾಲಯದ ಪಕ್ಕದಲ್ಲಿರುವ ಶ್ರೀ ರಾಮಮಂದಿರದ ಜಾಗದಲ್ಲಿ ನಡೆದ ಪೂಜಾ ವಿಧಿವಿಧಾನಗಳಲ್ಲಿ ರಾಜ್ಯದ ದಾವಣಗೆರೆ, ಸಂತೇಸರಗೂರು, ಶ್ರೀರಂಗಪಟ್ಟಣ, ಕಡತನಾಳು, ಉಂಡಿಗನಾಳು, ಅರಳಕುಪ್ಪೆ, ಹೊನ್ನಾವಾರ, ಕುಣಿಗಲ್, ನಾಗಮಂಗಲ, ಪಾಂಡವಪುರ, ತುಮಕೂರು, ತಿಪಟೂರು, ಅಮ್ಮಸಂದ್ರ, ಚಿತ್ರದುರ್ಗ, ದಂಡಿನಶಿವರ, ತುರುವೇಕೆರೆ, ತೆಂಡೇಕೆರೆ, ಅಂಚನಹಳ್ಳಿ, ತಗಡೂರು ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕುಲಭಾಂದವರು ಆಗಮಿಸಿ ತಾಯಿ ಚಾಮುಂಡಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಜಿಲ್ಲಾ ತೊಗಟವೀರ ಸಮಾಜದ ಅಧ್ಯಕ್ಷ ಹಂಸರಮೇಶ್ ಕರಗ ಮಹೋತ್ಸವದ ನೇತೃತ್ವವನ್ನು ವಹಿಸಿದ್ದರೆ, ಪ್ರಧಾನ ಅರ್ಚಕರಾದ ನಂಜುಂಡಣ್ಣ ಪೂಜಾ ವಿಧಿ-ವಿಧಾನಗಳ ಉಸ್ತುವಾರಿಯನ್ನು ವಹಿಸಿದ್ದರು. ಪೂಜಾ ಕಾರ್ಯಕ್ರಮಗಳ ನಂತರ ನಡೆದ ಸಾಮೂಹಿಕ ಅನ್ನಸಂತರ್ಪಣೆಯಲ್ಲಿ 10ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಭಾಗವಹಿಸಿದ್ದರು.
ಕರಗಮಹೋತ್ಸವದಲ್ಲಿ ಶಾಸಕ ನಾರಾಯಣಗೌಡ, ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ, ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್, ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಮಾಜಿಅಧ್ಯಕ್ಷರಾದ ಕೆ.ಹೆಚ್.ರಾಮಕೃಷ್ಣ, ಕೆ.ಸಿ.ವಾಸು, ನಾಗರಾಜು, ಪುರಸಭೆ ಸದಸ್ಯರಾದ ಕೆ.ಆರ್.ಹೇಮಂತಕುಮಾರ್, ಕೆ.ಎಸ್.ಸಂತೋಷ್, ಡಿ.ಪ್ರೇಮಕುಮಾರ್, ಬಿ.ಎನ್.ಪದ್ಮಾವತಿ, ಚೆಲುವರಾಜು, ನಂಜುಂಡಯ್ಯ, ಪಟ್ಟಣ ಪೋಲಿಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಎಂ.ಶಿವಕುಮಾರ್, ಮುಖಂಡರಾದ ಕೆ.ಆರ್.ಪುಟ್ಟಸ್ವಾಮಿ. ಕೆ.ಸಿ.ರೇವಣ್ಣ, ಆರ್.ವೆಂಕಟಸುಬ್ಬೇಗೌಡ, ಎಸ್.ಜೆ.ಕುಮಾರಸ್ವಾಮಿ ಮತ್ತಿತರರು ಭಾಗವಹಿಸಿ ತಾಯಿ ಚಾಮುಂಡಿಯ ಆಶೀರ್ವಾದ ಪಡೆದರು.
ಕರಗ ಮಹೋತ್ಸವದಲ್ಲಿ ಭಾಗವಹಿಸಿದ್ದ ಚಿಕ್ಕಬಳ್ಳಾಪುರದ ತಪಸೀಹಳ್ಳಿಯ ನೇಕಾರ ತೊಗಟವೀರ ಗುರುಪೀಠದ ಪೀಠಾಧಿಪತಿ ಜಗದ್ದುರು ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ನಮ್ಮ ಸಂಸ್ಕøತಿಯ ಪ್ರತಿಬಿಂಬವಾದ ಹಬ್ಬ-ಹರಿದಿನಗಳು, ಉತ್ಸವಗಳು ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ಮೂಡಿಸುವ ಜೊತೆಗೆ ಎಲ್ಲರೂ ಒಂದಾಗಿ ಸಡಗರ ಸಂಭ್ರಮಗಳಿಂದ ಉತ್ಸವದಲ್ಲಿ ಭಾಗಿಗಳಾಗಿ ತಾಯಿ ಚಾಮುಂಡಿಯ ಆಶೀರ್ವಾದವನ್ನು ಪಡೆಯಲು ಸಾದ್ಯವಾಗುತ್ತದೆ. ಧರ್ಮ, ನ್ಯಾಯ, ನೀತಿ ಹಾಗೂ ಆದ್ಯಾತ್ಮ ಮಾರ್ಗದಿಂದ ಮಾತ್ರ ಜೀವನದಲ್ಲಿ ಯಶಸ್ಸನ್ನು ಗಳಿಸಿ ಗುರಿ ಸಾಧಸಿಬಹುದು. ಗುರು ಕೃಪೆಯಿಂದ ಮಾತ್ರ ಜೀವನದಲ್ಲಿ ಮೋಕ್ಷವನ್ನು ಹೊಂದಬಹುದು. ಆದ್ದರಿಂದ ಗಳಿಸಿದ ಹಣದಲ್ಲಿ ಅಲ್ಪಭಾಗವನ್ನು ಧಾನ-ಧರ್ಮ ಮಾಡುವ, ಬಡಜನರ ಕಣ್ಣೀರನ್ನು ಒರೆಸುವ ಕೆಲಸವನ್ನು ಮಾಡಿ ಸರಳವಾದ ಪೂಜೆ ಪುರಸ್ಕಾರಗಳಿಂದ ಭಗವಂತನ ಸಾಕ್ಷಾತ್ಕಾರವನ್ನು ಹೊಂದಬಹುದು ಎಂದು ಶ್ರೀಗಳು ಆಶೀರ್ವಚನ ನೀಡಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರನ್ನು ಕೆ.ಆರ್.ಕೃಷ್ಣ ಸ್ವಾಗತಿಸಿದರು. ನಿರಂಜನದಾದ ವಂದಿಸಿದರು.

ಕೃಷ್ಣರಾಜಪೇಟೆ..ಹಾಲು ಉತ್ಪಾದಕರು ಡೈರಿಗಳಿಗೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡದಿದ್ದರೆ ಸಹಕಾರ ಸಂಸ್ಥೆಗಳಿಗೆ ಉಳಿಗಾಲವಿಲ್ಲ.ಅಂಬರೀಶ್.

ಕೃಷ್ಣರಾಜಪೇಟೆ. ಹಾಲು ಉತ್ಪಾದಕರು ಡೈರಿಗಳಿಗೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡದಿದ್ದರೆ ಸಹಕಾರ ಸಂಸ್ಥೆಗಳಿಗೆ ಉಳಿಗಾಲವಿಲ್ಲ. ಇಂದಿನ ಮಾರುಕಟ್ಟೆಯ ಸ್ಪರ್ಧೆಯಲ್ಲಿ ಬೇರೆ ಬ್ರಾಂಡುಗಳ ಹಾಲುಗಳು ನೀಡುತ್ತಿರುವ ಪೈಪೋಟಿಯನ್ನು ಎದುರಿಸಿ ಮುನ್ನುಗ್ಗಬೇಕಾದರೆ ನಂದಿನಿ ಬ್ರಾಂಡ್ ಹಾಲು ಬೇರೆ ಹಾಲಿಗಿಂತ ಉತ್ತಮವಾಗಿರಬೇಕು. ಈ ದಿಕ್ಕಿನಲ್ಲಿ ಕಲಬೆರೆಕೆ ಮುಕ್ತ ಶುದ್ಧವಾದ ಹಾಲು ಸರಬರಾಜಾಗುವಂತೆ ನೋಡಿಕೊಳ್ಳಿ ಎಂದು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಮತ್ತು ಟೆಸ್ಟರ್‍ಗಳಿಗೆ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಸ್ವಾಮಿ ಮನವಿ ಮಾಡಿದರು.
ಅವರು ಇಂದು ಪಟ್ಟಣದ ಹೊರವಲಯದಲ್ಲಿರುವ ಹಾಲು ಶೀಥಲೀಕರಣ ಕೇಂದ್ರದ ಆವರಣದಲ್ಲಿ ತಾಲೂಕಿನ ಹಾಲು ಉತ್ಪಾದಕರ ನೌಕರರ ಯೂನಿಯನ್ ಜಿಲ್ಲಾ ಹಾಲು ಒಕ್ಕೂಟದ ನೂತನ ನಿರ್ದೇಶಕರಾಗಿ ತಾಲೂಕಿನಿಂದ ಆಯ್ಕೆಯಾಗಿರುವ ಎಸ್.ಅಂಬರೀಶ್ ಮತ್ತು ಕೆ.ರವಿಕುಮಾರ್ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹಾಲು ಒಕ್ಕೂಟದ ಅಭಿವೃದ್ಧಿಗೆ ದುಡಿಯುವ ಮನಸ್ಸಿರುವ ಕ್ರಿಯಾಶೀಲ ಯುವ ನಿರ್ದೇಶಕರು ತಾಲೂಕಿನಿಂದ ಆಯ್ಕೆಯಾಗಿದ್ದಾರೆ. ಇವರು ಆಯ್ಕೆಯಾದ 20 ದಿನಗಳಲ್ಲಿ ಹಾಲು ಉತ್ಪಾದಕರು ತಮ್ಮ ಡೈರಿಗಳಿಗೆ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮನೋಭಾವನೆಯನ್ನು ಬೆಳೆಸಿಕೊಂಡು ಡೈರಿಗಳನ್ನು ಉಳಿಸಿ ಬೆಳೆಸಿ ಎಂಬ ಅರಿವಿನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಭಿನಂದಿಸಿದ ಡಾ.ಸ್ವಾಮಿ ಹಾಲು ಉತ್ಪಾದಕರು ಮತ್ತು ಜಿಲ್ಲಾ ಹಾಲು ಒಕ್ಕೂಟದ ನಡುವೆ ಸೇತುವೆಯಂತೆ ಕೆಲಸ ನಿರ್ವಹಿಸುತ್ತಿರುವ ಹಾಲಿನ ಡೈರಿಗಳ ಕಾರ್ಯದರ್ಶಿಗಳು ಹಾಗೂ ಹಾಲು ಪರೀಕ್ಷಕರು ಬದ್ಧತೆಯನ್ನು ಅಳವಡಿಸಿಕೊಂಡು ಕಡಿಮೆ ಗುಣಮಟ್ಟದ ಹಾಲು ಡೈರಿಗಳಿಗೆ ಸರಬರಾಜಾಗದಂತೆ ನಿಗಾ ವಹಿಸಬೇಕು. ಮಹಿಳಾ ಡೈರಿಗಳ ಆಡಳಿತದಲ್ಲಿ ಪುರುಷರು ಹಸ್ತಕ್ಷೇಪ ಮಾಡದಂತೆ ಎಚ್ಚರ ವಹಿಸಬೇಕು. ಪ್ರಸ್ತುತ ತಾಲೂಕಿನ ಹಾಲಿನ ಗುಣಮಟ್ಟದಲ್ಲಿ ಏರಿಕೆಯಾಗುತ್ತಿದ್ದರೂ ಎಸ್.ಎನ್.ಎಫ್ ಪ್ರಮಾಣವು ಶೇ.85ಕ್ಕಿಂತ ಕಡಿಯಾಗದಂತೆ ನೋಡಿಕೊಳ್ಳಬೇಕು. ಕೆಲವೇ ಜನರು ನೀಡುವ ಕಡಿಮೆ ದರ್ಜೆಯ ಹಾಲನ್ನು ಮುಲಾಜಿಗೆ ಒಳಗಾಗಿ ಕಾರ್ಯದರ್ಶಿಗಳು ಖರೀದಿ ಮಾಡಿದರೆ ಇಡೀ ಗ್ರಾಮಕ್ಕೆ ಕೆಟ್ಟಹೆಸರು ಬರುವುದರಿಂದ ಜಿಲ್ಲೆಯ 85ಸಾವಿರ ಹಾಲು ಉತ್ಪಾದಕರು ಶುದ್ಧವಾದ ಹಾಲನ್ನೇ ಸರಬರಾಜು ಮಾಡುತ್ತೇವೆ ಎಂದು ಧಿಕ್ಷೆ ತೊಡಬೇಕಾಗಿದೆ ಎಂದು ಮನವಿ ಮಾಡಿದರು.
ನೌಕರರ ಯೂನಿಯನ್ ನೀಡಿದ ಆತ್ಮೀಯ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಎಸ್.ಅಂಬರೀಶ್ ಹೊಸದಾಗಿ ಆಯ್ಕೆಯಾಗಿರುವ ನಿರ್ದೇಶಕರು ಹಾಲಿನ ಗುಣಮಟ್ಟಕ್ಕೆ ಒತ್ತು ನೀಡಿ ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಹಾಲಿನ ಡೈರಿಗಳ ಕಾರ್ಯದರ್ಶಿಗಳು ಹಾಗೂ ಟೆಸ್ಟರ್‍ಗಳು ತಪ್ಪು ತಿಳಿಯಬಾರದು, ನಮಗೆ ಎಲ್ಲಾ ಡೈರಿಗಳೂ ಒಂದೇ, ಕಲಬೆರಕೆ ರಹಿತವಾದ ಗುಣಮಟ್ಟದ ಹಾಲನ್ನು ಸರಬರಾಜು ಆಗುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿರುವುದರಿಂದ  ನಾವುಗಳು ಸೇಡಿನ ರಾಜಕಾರಣ ಮಾಡದೇ ಹಾಲು ಒಕ್ಕೂಟದ ಅಭಿವೃಧ್ಧಿಯನ್ನು ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಕೆಲವು ಡೈರಿಗಳ ಮಾಜಿ ಅಧ್ಯಕ್ಷರೇ ಹಾಲಿಗೆ ಸಕ್ಕರೆ ಮತ್ತು ಯೂರಿಯಾವನ್ನು ಬೆರೆಸಿ ಕಲಬೆರಕೆ ಮಾಡಿರುವ ಹಾಲನ್ನು ಸರಬರಾಜು ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದೇವೆ. ಹಾಲಿನ ಡೈರಿಗಳು ಅಭಿವೃದ್ಧಿಹೊಂದಿ ಹಾಲು ಉತ್ಪಾದಕರು ಹೆಚ್ಚಿನ ಲಾಭವನ್ನು ಸಂಪಾದನೆ ಮಾಡಬೇಕಾದರೆ ಗುಣಮಟ್ಟದ ಕಾಪಾಡುವಿಕೆ ಬಹಳ ಮುಖ್ಯ ಈ ದಿಕ್ಕಿನಲ್ಲಿ ನೌಕರರು ಬದ್ಧತೆಯಿಂದ ಕೆಲಸ ಮಾಡಿ ಸಹಕಾರ ಕ್ಷೇತ್ರವನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಒಕ್ಕೂಟದ ಮತ್ತೋರ್ವ ನಿರ್ದೇಶಕ ಡಾಲುರವಿ ಮಾತನಾಡಿ ಸನ್ಮಾನಗಳು ಜವಾಬ್ಧಾರಿಯನ್ನು ಹೆಚ್ಚಿಸುವುದರಿಂದ ಹಾಲು ಉತ್ಪಾದಕರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಒಕ್ಕೂಟವನ್ನು ರಾಜ್ಯದಲ್ಲಿಯೇ ಮಾದರಿಯಾಗಿ ಅಭಿವೃದ್ಧಿಪಡಿಸಲು ದುಡಿಯುವ ಜೊತೆಗೆ ಜಿಲ್ಲೆಯ ಹಾಲು ಗುಣಮಟ್ಟದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ. ಹಾಲು ಉತ್ಪಾದಕರಿಗೆ ವರದಾನವಾಗಿರುವ ಜನಶ್ರೀ ವಿಮಾ ಯೋಜನೆಗೆ ಕಡ್ಡಾಯವಾಗಿ ಹಾಲು ಉತ್ಪಾದಕರು ಸದಸ್ಯರಾಗಿ ಅನುಕೂಲಗಳನ್ನು ಪಡೆದುಕೊಂಡು ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದರು.
ತಾಲೂಕು ಹಾಲು ಉತ್ಪಾದಕರ ನೌಕರರ ಯೂನಿಯನ್ ಅಧ್ಯಕ್ಷ ಮರಿಸ್ವಾಮಿಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಶೀಳನೆರೆ ಹಾಲಿನ ಡೈರಿಯ ಕಾರ್ಯದರ್ಶಿ ಸಿದ್ಧೇಗೌಡ, ಬೀರವಳ್ಳಿ ಹಾಲಿನ ಡೈರಿಯ ಕಾರ್ಯದರ್ಶಿ ಬಿ.ಟಿ.ಚಂದ್ರೇಗೌಡ ಹಾಗೂ ಈ ತಿಂಗಳ ಅಂತ್ಯಕ್ಕೆ ನಿವೃತ್ತರಾಗುತ್ತಿರುವ ವಿಸ್ತರಣಾಧಿಕಾರಿ ಸಿದ್ಧೇಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಒಕ್ಕೂಟದ ಉಪವ್ಯವಸ್ಥಾಪಕ ಡಾ.ಅಕ್ಕಲಪ್ಪರೆಡ್ಡಿ, ಸಹಾಯಕ ವ್ಯವಸ್ಥಾಪಕ ರವೀಂದ್ರನಾಥ್, ಮಾರ್ಗದ ವಿಸ್ತರಣಾಧಿಕಾರಿಗಳಾದ ದತ್ತಾತ್ರೇಯ, ಕೆ.ಬಿ.ನಾಗರಾಜ್, ಶೀಥಲೀಕರಣ ಕೇಂದ್ರದ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ, ಸ್ಟೋರ್‍ಕೀಪರ್ ರವಿಕುಮಾರ್, ಪುರಸಭೆಯ ಮಾಜಿಸದಸ್ಯ ಕೆ.ಆರ್.ನೀಲಕಂಠ ಭಾಗವಹಿಸಿ ಮಾತನಾಡಿದರು.
ಅಕ್ಕಿಹೆಬ್ಬಾಳು ಡೈರಿಯ ಕಾರ್ಯದರ್ಶಿ ಅನಂತು ಪ್ರಾರ್ಥಿಸಿದರು. ಹೊಸಹೊಳಲು ಹಾಲಿನ ಡೈರಿಯ ಕಾರ್ಯದರ್ಶಿ ಕಾಂತರಾಜು ಸ್ವಾಗತಿಸಿಸದರು. ಕಿಕ್ಕೇರಿ ಡೈರಿಯ ಕಾರ್ಯದರ್ಶಿ ಕೃಷ್ಣೇಗೌಡ ವಂದಿಸಿದರು. ಗುಬ್ಬಹಳ್ಳಿ ಹಾಲಿನ ಡೈರಿಯ ಕಾರ್ಯದರ್ಶಿ ವನಿತ ಮತ್ತು ಕೈಗೋನಹಳ್ಳಿ ಡೈರಿಯ ಕಾರ್ಯದರ್ಶಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪಿಡಿಜಿಕೊಪ್ಪಲು ಹಾಲಿನ ಡೈರಿಯ ಕಟ್ಟಡದ ನಿರ್ಮಾಣಕ್ಕೆ 75 ಸಾವಿರ ರೂ ಸಹಾಯ ಧನದ ಚೆಕ್ಕನ್ನು ವಿತರಿಸಲಾಯಿತು.
ಚಿತ್ರಶೀರ್ಷಿಕೆ: 25-ಏಖPಇಖಿಇ-02 ಕೃಷ್ಣರಾಜಪೇಟೆ ಪಟ್ಟಣದ ಹಾಲುಶೀಥಲಿಕರಣ ಕೇಂದ್ರದ ಆವರಣದಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಯೂನಿಯನ್ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾಗಿರುವ ಎಸ್.ಅಂಬರೀಶ್ ಮತ್ತು ಡಾಲುರವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಸ್ವಾಮಿ, ನೌಕರರ ಯೂನಿಯನ್ ಅಧ್ಯಕ್ಷ ಮರಿಸ್ವಾಮಿಗೌಡ ಮತ್ತಿತರರು ಚಿತ್ರದಲ್ಲಿದ್ದಾರೆ.

ಜನಸಾಮಾನ್ಯರಲ್ಲಿ ಪರಿಸರ ಪ್ರಜ್ಞೆ ಕಡಿಮೆ ಇರುವುದರಿಂದ ಹಲವು ಸಮಸ್ಯೆಗಳನ್ನು -ಕೆ.ಟಿ.ಶ್ರೀಕಂಠೇಗೌಡ

ಮಂಡ್ಯ: ಜನಸಾಮಾನ್ಯರಲ್ಲಿ ಪರಿಸರ ಪ್ರಜ್ಞೆ ಕಡಿಮೆ ಇರುವುದರಿಂದ ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
ಲಯನ್ಸ್ ಕ್ಲಬ್ ಆಫ್ ಮಂಡ್ಯ ಮಧುರ ಹಾಗೂ ಕೌಶಲ್ಯ ಯುವತಿ ಮತ್ತು ಮಹಿಳಾ ಮಂಡಳಿ ವತಿಯಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮ, ಪರಿಸರ ಸಂರಕ್ಷಣಾ ಕಾರ್ಯಕ್ರಮದ ಅಂಗವಾಗಿ ಕೈಚೀಲ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆಹಾರ ಉತ್ಪಾದನೆ, ನೀರು ಸೇರಿದಂತೆ ಇನ್ನಿತರೆ ಜೀವನಾವಶ್ಯಕ ವಸ್ತುಗಳಿಗೆ ನೀಡುವ ಆದ್ಯತೆಯನ್ನು ಪರಿಸರ ಉಳಿವಿಗೆ ನೀಡುತ್ತಿಲ್ಲ. ಇದರಿಂದಾಗಿ ಪರಿಸರ ಸಾಕಷ್ಟು ಕಲುಷಿತಗೊಂಡಿದ್ದು, ಇನ್ನಾದರೂ ಗಿಡಮರಗಳನ್ನು ನೆಟ್ಟು ಪೆÇೀಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮುಂದಿನ 20 ವರ್ಷಗಳಲ್ಲಿ ನೀರಿಗಾಗಿ ಯುದ್ಧ ನಡೆಯಲಿದೆ ಎಂದು ವಿಶ್ವಸಂಸ್ಥೆ ಅಂಕಿಅಂಶಗಳ ಮೂಲಕ ವರದಿ ಮಾಡಿದೆ. ಹಿಂದೆ ಎಂಟತ್ತು ಅಡಿಗಳ ಅಂತರದಲ್ಲಿ ಬಾವಿಗಳಲ್ಲಿ ನೀರು ದೊರಕುತ್ತಿತ್ತು. ನಂತರ 80ರಿಂದ 100 ಅಡಿ ಬೋರ್‍ವೆಲ್‍ಗಳಲ್ಲಿ ನೀರು ತೆಗೆಯಲು ಆರಂಭಿಸಿ, ಇದೀಗ ಸಾವಿರಾರು ಅಡಿ ಕೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಲಾರದಲ್ಲಿ ಮೂರ್ನಾಲ್ಕು ಮೋಟಾರ್‍ಗಳನ್ನು ಒಂದೇ ಬೋರ್‍ವೆಲ್‍ಗೆ ಅಳವಡಿಸಿ ನೀರು ತೆಗೆಯಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ಪೀಳಿಗೆ ಸಾಕಷ್ಟು ತೊಂದರೆಗೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುನಾಮಿ, ಭೂಕಂಪ ಸೇರಿದಂತೆ ಪ್ರಾಕೃತಿಕ ಪಲ್ಲವನ್ನು ಕಂಡಿದ್ದೇವೆ. ಪರಿಸರದ ಮೇಲಿನ ಅತ್ಯಾಚಾರ, ಅಮಾನವೀಯ ಕ್ರೌರ್ಯ ನಿಲ್ಲಿಸದಿದ್ದರೆ ಮಾನವ ಸಮುದಾಯದ ಉಳಿವಿಗೆ ಕಂಟಕವಾಗಲಿದೆ. ನೀರಿನ ಮೂಲ ಮಳೆ ಒಂದೇ ಆಗಿರುವುದರಿಂದ ಭೂಮಿಗೆ ಬಿದ್ದ ಮಳೆಯನ್ನು ಇಂಗಿಸಿ, ಅಂತರ್ಜಲ ವೃದ್ಧಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಕೆ.ಅವಿನಾಶ್, ಡಿ.ಎನ್.ಕಳಸೇಗೌಡ, ಎಂ.ಪಿ.ರಾಜಮ್ಮಣ್ಣಿ, ಶಕೀಲಾಭಾನು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಅರ್ಜುನ್ ಎಸ್.ಎಚ್.ಪಂಡಿತ್, ಕೆ.ಎಸ್.ಶ್ರೇಯಾಂಕ್‍ಗೌಡ, ಎಚ್.ಎಸ್.ಶ್ರಾವ್ಯ, ಎಸ್.ಟಿ.ಧನುಷ್, ಜಿ.ಎನ್.ವಿಶಾಲ್‍ಗೌಡ, ಬಿ.ಎಂ.ಪವನ್, ಪಿ.ತೇಜಸ್‍ಗೌಡ, ಎಂ.ಎಲ್.ಪ್ರಶಾಂತ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪರಿಸರ ಸಂರಕ್ಷಣೆ ಕಾರ್ಯಕ್ರಮದ ಅಂಗವಾಗಿ ಕೈಚೀಲ ವಿತರಿಸಲಾಯಿತು.
ಲಯನ್ಸ್ ಕ್ಲಬ್ ಆಫ್ ಮಂಡ್ಯ ಮಧುರ ಸಂಸ್ಥೆ ಅಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಕಾರ್ಯದರ್ಶಿ ಎಂ.ಆರ್.ಮಂಜು, ಖಜಾಂಚಿ ಸಿದ್ದರಾಮೇಗೌಡ, ಲಯನ್ಸ್ ಎಂಜೆಎಫ್ ಜಿ.ಸಿ.ದಿವಾಕರ್, ಪ್ರಾಂತೀಯ ಅಧ್ಯಕ್ಷ ನಾರಾಯಣಸ್ವಾಮಿ, ವಲಯ ಅಧ್ಯಕ್ಷ ಆನಂದ್, ಪರಿಸರ ಸಂಸ್ಥೆ ಗೌರವಾಧ್ಯಕ್ಷ ಕೆ.ಟಿ.ಹನುಮಂತು, ಕೌಶಲ್ಯ ಯುವತಿ ಮತ್ತು ಮಹಿಳಾ ಮಂಡಳಿ ಅಧ್ಯಕ್ಷೆ ವಿಜಯಕುಮಾರಿ ಇತರರು ಭಾಗವಹಿಸಿದ್ದರು.

ಕೆ.ಆರ್.ಪೇಟೆ.ಪ್ರಮುಖ ಸುದ್ದಿಗಳು.

ಕೆ.ಆರ್.ಪೇಟೆ,ಜು.25,ಕಳೆದ ಒಂದು ವರ್ಷದ ಹಿಂದೆ ಅಸ್ಸಾಂ ಗಡಿಯಲ್ಲಿ ಭಾರತೀಯ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ವೀರ ಮರಣವನ್ನಪ್ಪಿದ ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದ ಬಿ.ಎಸ್.ಎಫ್.ವೀರಯೋಧ ಎ.ಜೆ.ಜಯರಾಮೇಗೌಡ ಅವರ ಸ್ಮಾರಕ ಸೇವಾ ಸಮಿತಿ ವತಿಯಿಂದ ಯೋಧನ  ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ನೋಟ್‍ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಬೀಉಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹರಿರಾಯನಹಳ್ಳಿ ಸಿ.ಆರ್.ಸಿ.ಕೇಂದ್ರ ಸಂಪನ್ಮೂಲ ಅಧಿಕಾರಿ ಎ.ಎಂ.ಯೋಗೇಶ್ ಗ್ರಾಮ ಪಂಚಾಯಿತಿ ಸದಸ್ಯರಾದ ಎ.ಬಿ.ಕುಮಾರ್, ಅಭಿವೃದ್ಧಿ ಅಧಿಕಾರಿ ದೇವೇಗೌಡ, ಯೋಧನ ಸಹೋದರರಾದ ಎ.ಜೆ.ಧನೇಂದ್ರೇಗೌಡ, ಕೆಂಪೇಗೌಡ, ಲೋಕೇಶ್,  ಪುತ್ರಿ ಎ.ಜೆ.ಲಕ್ಷ್ಮೀ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜು, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಮಲಮ್ಮ, ಮುಖಂಡರಾದ ಎಸ್.ಡಿ.ಎಂ.ಸಿ.ಸದಸ್ಯರಾದ ಎ.ಎಸ್.ಶ್ರೀನಿವಾಸ್, ಪರಮೇಶ್, ಬಿ.ವಿ.ಭಗೀರಥ, ನಂಜುಂಡೇಗೌಡ, ಹರೀಶ್, ತೇಜ, ಶಿಕ್ಷಕರಾದ ಚಿಕ್ಕಸ್ವಾಮಿ, ತಮ್ಮಯ್ಯ, ರಾಮಕೃಷ್ಣ, ಚಂದ್ರಕಲಾ, ಶಾಂತಕುಮಾರಿ, ಟಿ.ಜೆ.ವಿಮಲಾ, ಕೆ.ಎಸ್.ರಾಜು, ಮೋದೂರು ಸುರೇಶ್, ರಮೇಶ್, ಪ್ರಶಾಂತ್‍ಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

==========================
ಕೆ.ಆರ್.ಪೇಟೆ:ಜು.25,ಪಟ್ಟಣದಲ್ಲಿ ತೊಗಟವೀರ ಕ್ಷತ್ರಿಯ ಸಮಾಜದವರು ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವವವು ಇಂದು ವೈಭಯುತವಾಗಿ ನಡೆಯಿತು.
ಪಟ್ಟಣದ ದೇವೀರಮ್ಮಣ್ಣಿ ಕೆರೆಯಿಂದ ಕರಗವನ್ನು ತಲೆಯ ಮೇಲೆ ಹೊತ್ತು ನಡೆಮುಡಿಯಲ್ಲಿ ಸಾಗಿದರೆ ದೇವರ ಗುಡ್ಡರು ತಾಯಿ ಚಾಮುಂಡಿಯನ್ನು ಜಾನಪದ ಗಾಯನದೊಂದಿಗೆ ಕರೆ ತರಲಾಯಿತು.  ಕಾರ್ಯಕ್ರಮದಲ್ಲಿ ಜಾನಪದ ಕಲಾಪ್ರಕಾರಗಳಾದ ಪೂಜಾ ಕುಣಿತ, ಡೊಳ್ಳು ಕುಣಿತ, ಪಟ ಕುಣಿತ, , ನಂದಿಧ್ವಜ ಕುಣಿತ, ಸೋಮನಕುಣಿತ, ಕೋಲಾಟ, ವೀರಗಾಸೆ ನೃತ್ಯ, ಮುಂತಾದ  ಕಲಾಪ್ರದರ್ಶನಗಳು ಹಬ್ಬಕ್ಕೆ ಮೆರಗು ನೀಡಿ ಸಾರ್ವಜನಿಕರನ್ನು ರಂಜಿಸಿದವು. ಸಿರಿಗೆರೆಯ ಬೃಹನ್ಮಠದ ಆನೆ ಗೌರಿ ತಾಯಿ ಚಾಮುಂಡೃಶ್ವರಿಯ ಉತ್ಸವದ ಮೆರವಣಿಗೆಯಲ್ಲಿ ಸಾಗಿದ್ದು ಈ ಭಾರಿಯ ಕರಗ ಮಹೋತ್ಸವದ ವಿಶೇಷ ಆಕರ್ಷಣೆಯಾಗಿತ್ತು.
ಕರಗ ಮಹೋತ್ಸವದಲ್ಲಿ ಭಾಗವಹಿಸಿದ್ದ ಚಿಕ್ಕಬಳ್ಳಾಪುರದ ತಪಸೀಹಳ್ಳಿಯ ನೇಕಾರ ತೊಗಟವೀರ ಗುರುಪೀಠದ ಪೀಠಾಧಿಪತಿ ಜಗದ್ದುರು ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಗಳು ಆಶೀರ್ವಚನ ನೀಡುತ್ತಾ ಹಬ್ಬ-ಹರಿದಿನಗಳು, ಉತ್ಸವಗಳು ನಮ್ಮ ಸಂಸ್ಕøತಿಯ ಪ್ರತಿಬಿಂಬವಾಗಿವೆ. ಆಚರಣೆಗಳು ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ಮೂಡಿಸುವ ಜೊತೆಗೆ ಎಲ್ಲರೂ ಒಂದಾಗಿ ಬದುಕಲು ಸಹಕಾರಿಯಾಗುತ್ತವೆ ಎಂದರು.
ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾಧಿಗಳು ತಾಯಿ ಚಾಮುಂಡಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ಜಿಲ್ಲಾ ತೊಗಟವೀರ ಸಮಾಜದ ಅಧ್ಯಕ್ಷ ಹಂಸರಮೇಶ್ ಮತ್ತು ರಾಜಶೇಖರ್ ಕರಗ ಮಹೋತ್ಸವದ ನೇತೃತ್ವವನ್ನು ವಹಿಸಿದ್ದರು. ಪ್ರಧಾನ ಅರ್ಚಕರಾದ ನಂಜುಂಡಣ್ಣ ಪೂಜಾ ವಿಧಿ-ವಿಧಾನಗಳ ನಡೆಸಿದರು. ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.

==============================
ಕೆ.ಆರ್.ಪೇಟೆ:ಜು.25,ತಾಲೂಕು ಕೃಷಿ ಇಲಾಖೆ ಹಾಗೂ ಮಂಡ್ಯದ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಶೀಳನೆರೆ ಹೋಬಳಿಯ ಮಲ್ಕೋನಹಳ್ಳಿ ಹಾಗೂ ಬೂಕನಕೆರೆ ಹೋಬಳಿಯ ಮತ್ತೀಕೆರೆ ಗ್ರಾಮದಲ್ಲಿ ರೈತರಿಗೆ ಸಾವಯವ ಕೃಷಿ ಪದ್ದತಿಯಲ್ಲಿ ಎರೆಹುಳು ಹಾಗೂ ಹಸಿರೆಲೆ ಗೊಬ್ಬರ ತಯಾರಿಕೆ ಕುರಿತ ಪ್ರಾತ್ಯಕ್ಷಿತೆ ಕಾರ್ಯಕ್ರಮ ನಡೆಯಿತು.
ಮಲ್ಕೋನಹಳ್ಳಿ ಗ್ರಾಮದಲ್ಲಿ ನಡೆದ ಪ್ರಾತ್ಯಕ್ಷಿತೆ ಕಾರ್ಯಕ್ರಮದಲ್ಲಿ ತೆಂಡೇಕೆರೆ ಕಾವೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಹಾಲೇಶ್ ಭಾಗವಹಿಸಿ ಮಾತನಾಡಿ ಪ್ರಗತಿಪರ ರೈತರು ಕೃಷಿ ಅಭಿವೃದ್ದಿಗಾಗಿ ಸಂಘಟಿತರಾಗಿ ರೈತಕೂಟಗಳನ್ನು ರಚಿಸಿಕೊಳ್ಳಬೇಕೆಂದು ಕರೆ ನೀಡಿದರು. ರೈತಕೂಟಗಳ ರಚನೆಯಾದರೆ ಬ್ಯಾಂಕಿನ ಮೂಲಕ ರೈತರಿಗೆ ಹತ್ತು ಹಲವು ನೆರವು ನೀಡಲು ಹೆಚ್ಚು ಸಹಕಾರಿಯಾಗುತ್ತದೆ ಎಂದ ಹಾಲೇಶ್ ಕೃಷಿ ಪದ್ದತಿಯಲ್ಲಿ ಸಮಗ್ರ ಬದಲಾವಣೆಯಾಗಬೇಕು. ಸಾಂಪ್ರದಾಯಿಕ ಕೃಷಿ ಪದ್ದತಿಯಿಂದ ರೈತರು ಹೊರಬಂದು ಆಧುನಿಕ ತಂತ್ರಜ್ಞಾನ ಹಾಗೂ ಸಂಶೋಧನೆಗಳ ಲಾಭ ಪಡೆದು ಆರ್ಥಿಕ ಪ್ರಗತಿ ಹೊಂದಬೇಕೆಂದರು.
ಎರೆಗೊಬ್ಬರದಿಂದ ಸಿಗುವ ಪೋಷಕಾಂಶಗಳು, ಎರೆ ಗೊಬ್ಬರ ತಯಾರಿಕಾ ಘಟಕಗಳ ನಿರ್ವಹಣೆ ಮತ್ತು ದೇಶಿಯ ತಳಿಗಳ ಬೆಳೆಗಳ ಬಗ್ಗೆ ಕಾರ್ಯಕ್ರಮದಲ್ಲಿ ರೈತರಿಗೆ ಮಾಹಿತಿ ನೀಡಲಾಯಿತಲ್ಲದೆ ಎರಹುಳು ಗೊಬ್ಬರ ತಯಾರಿಕೆ ಮತ್ತು ಸುಧಾರಿತ ಕಾಂಪೋಸ್ಟ್ ಗೊಬ್ಬರ ತಯಾರಿಕೆ ಕುರಿತು ರೈತರಿಗೆ ತರಬೇತಿ ನೀಡಲಾಯಿತು.
ವಿಕಸನ ಸಂಸ್ಥೆಯ ತಾಲೂಕು ಕ್ಷೇತ್ರಾಧಿಕಾರಿ ಎಸ್.ಸುನಿತ ಮಾತನಾಡಿ ಗ್ರಾಮದ ಸರ್ವರೂ ಯೋಜನೆಯ ಲಾಭ ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳನ್ನು ಸಂಪೂರ್ಣ ಸಾವಯವ ಗ್ರಾಮವನ್ನಾಗಿ ಪರಿವರ್ತಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಸಾವಯವ ಗೊಬ್ಬರದ ಬಳಕೆಯಿಂದ ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡಯಬಹುದಲ್ಲದೆ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದ ಆರೋಗ್ಯಕರ ಉತ್ಪನ್ನವನ್ನು ನಾಡಿನ ಜನರಿಗೆ ನೀಡಬಹುದೆಂದರು.
ಮಲ್ಕೋನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪ್ರಸನ್ನ ಆಂಜನೇಯ ಸಾವಯುವ ಕೃಷಿಕರ ಸಂಘದ ಅಧ್ಯಕ್ಷ ಶ್ರೀಕಂಠ ವಹಿಸಿದ್ದರು. ಪ್ರಗತಿಪರ ರೈತ ಶಿವಳ್ಳಿ ಬೋರೇಗೌಡ ಪ್ರಾತ್ಯಕ್ಷಿತೆ ನಡೆಸಿಕೊಟ್ಟರು. ಮತ್ತೀಕೆರೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮತ್ತೀಕೆರೆಯ ಶ್ರೀ ಲಕ್ಷ್ಮಿದೇವಿ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ನಾಗೇಗೌಡ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ರೈತ ಸುಬ್ಬೇಗೌಡ ಹಾಗೂ ವಿಕಸನ ಸಂಸ್ಥೆಯ ಕ್ಷೇತ್ರ ಸಹಾಯಕ ಚನ್ನಕೃಷ್ಣ ಭಾಗವಹಿಸಿ ರೈತರಿಗೆ ಮಾಹಿತಿ ನೀಡಿದರು.
ಚಿತ್ರಶೀರ್ಷಿಕೆ25ಞಡಿಠಿeಣ-02  ಕೆ.ಆರ್.ಪೇಟೆ: ತಾಲ್ಲೂಕಿನ ಮತ್ತೀಕೆರೆ ಗ್ರಾಮದಲ್ಲಿ ತಾಲೂಕು ಕೃಷಿ ಇಲಾಖೆ ಹಾಗೂ ಮಂಡ್ಯದ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ   ರೈತರಿಗೆ ಸಾವಯವ ಕೃಷಿ ನಡೆದ ಸಾವಯವ ಭಾಗ್ಯ ಯೋಜನೆಯ ಕುರಿತು ವಿಕಸನ ಸಂಸ್ಥೆಯ ತಾಲೂಕು ಕ್ಷೇತ್ರಾಧಿಕಾರಿ ಎಸ್.ಸುನಿತ ಮಾತನಾಡಿದರು.
========================
ಕೆ.ಆರ್.ಪೇಟೆ:ಜು.25,ಕಳೆದ 1ವರ್ಷದ ಅವಧಿಯಲ್ಲಿ ಸುಮಾರು 6ಮಂದಿ ತಹಸೀಲ್ದಾರರು ಹೀಗೆ ಬಂದು ಹಾಗೆ ಹೋಗಿದ್ದಾರೆ ಇದಕ್ಕೆ ತಾಲೂಕಿನ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ.  ಆದ್ದರಿಂದ ತಾಲೂಕಿಗೆ ಖಾಯಂ ತಹಸೀಲ್ದಾರರನ್ನು ನೇಮಕ ಮಾಡುವಂತೆ ಒತ್ತಾಯಿಸಲು ನಾಳೆ(ಜು.26) ತಾಲೂಕಿನ ದಲಿತ ಸಂಘಟನೆಗಳು ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಥೂ ಛೀ ಯಾಗ ಮಾಡುವುದಾಗಿ ದಲಿತ ಸಂಘಟನೆಗಳ ನೇತಾರ ಮಾಜಿ ಜಿ.ಪಂ ಸದಸ್ಯ ಡಾ.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಮಾಹಿತಿ ನೀಡಿರುವ ಅವರು ಕಳೆದ ಒಂದು ವರ್ಷದಿಂದ ಕೆ.ಆರ್.ಪೇಟೆಯಲ್ಲಿ ಖಾಯಂ ತಹಸೀಲ್ದಾರರಿಲ್ಲದೆ ಸಾರ್ವಜನಿಕ ಕೆಲಸಗಳಿಗೆ ಹಿನ್ನೆಡೆಯಾಗಿದೆ. ಬಹುತೇಕ ತಹಸೀಲ್ದಾರರು ಹಾಗೆ ಬಂದು ಹೀಗೆ ಹೋಗುತ್ತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ 6 ಜನ ತಹಸೀಲ್ದಾರರಾಗಿ ಅಧಿಕಾರ ಸ್ವೀಕರಿಸಿ ವರ್ಗಾವಣೆಗೊಂಡಿದ್ದಾರೆ. ರೈತ ಸಮುದಾಯದ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದೆ ತಹಸೀಲ್ದಾರರನ್ನು ಪದೇ ಪದೇ ವರ್ಗಾವಣೆ ಮಾಡುತ್ತಿರುವ ರಾಜ್ಯ ಸರ್ಕರದ ಆಡಳಿತ ನೀತಿಯನ್ನು ಖಂಡಿಸಲು ವಿಶೇಷ ಯಾಗ ಮಾಡಿ ಸರ್ಕರಕ್ಕೆ ಛೀಮಾರಿ ಹಾಕುವುದು ಈ ಯಾಗದ ಉದ್ದೇಶ ಎಂದು ಡಾ.ಕೃಷ್ಣಮೂರ್ತಿ ತಿಳಿಸಿದ್ದಾರೆ. ಇಂದು (ಜು25) ತಾಲೂಕಿನ ನೂತನ ತಹಸೀಲ್ದಾರರಾಗಿ ಶ್ರೀಧರಮೂರ್ತಿ ಅಧಿಕಾರ ಸ್ವೀಕರಿಸಿದ್ದಾರೆ. ಇವರಾದರೂ ಕನಿಷ್ಠ 3 ವರ್ಷ ಇಲ್ಲಿ ಉಳಿದು ಜನಪರ ಕೆಲಸ ಮಾಡಬೇಕು. ಇವರನ್ನೂ ವರ್ಗಾವಣೆ ಮಡಿ ಮತ್ತೆ ಜನರಿಗೆ ತೊಂದರೆ ಕೊಡಬಾರದೆಂಬ ಉದ್ದೇಶದಿಮದ ನೂತನ ತಹಸೀಲ್ದಾರರು ಅಧಿಕಾರ ಸ್ವೀಕರಿಸಿದ್ದರೂ ಈಗಾಗಲೇ ಸಿದ್ದತೆಯಾಗಿರುವ ಥೂ ಛೀ ಯಾಗವನ್ನು ಕೈ ಬಿಡದೆ ಸರ್ಕಾರವನ್ನು ಜಾಗೃತಿಗೊಳಿಸುವುದಾಗಿ ಮಾಜಿ ಜಿ.ಪಂ ಸದಸ್ಯ ಡಾ.ಕೃಷ್ಣಮೂರ್ತಿ ತಿಳಿಸಿದ್ದಾರೆ.

ಮೈಸೂರು -ಭೇರ್ಯ .ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸದಂತೆ ಜಾಗೃತಿ-ವೃತ್ತನಿರೀಕ್ಷಕ ಸಿದ್ದಯ್ಯ.

ಭೇರ್ಯ,ಜು,26- ರಸ್ತೆಯ ಬದಿಯಲ್ಲಿ ಯಾವುದೇ ಕಾರಣ್ಣಕ್ಕೂ ವಾಹನಗಳನ್ನು ನಿಲ್ಲಿಸ ಬೇಡಿ ನಾವು ತಿಳಿಸಿದ ಜಾಗದಲ್ಲಿ ಮಾತ್ರ ವಾಹನ ನಿಲ್ಲಿಸಿ ಎಂದು ವೃತ್ತನೀರಿಕ್ಷಕ ಸಿದ್ದಯ್ಯ ತಿಳಿಸಿದರು. ಅವರು ಭೇರ್ಯದ ಗ್ರಾ.ಪಂ.ಕಚೇರಿಯಲ್ಲಿ ಆಟೋ ಚಾಲಕರ, ಮಾಲೀಕರ, ವರ್ತಕರ ಮತ್ತು ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪಾದಚಾರಿಗಳು ಪುಟ್‍ಬಾತ್ ಮೇಲೆ ತಿರುಗಾಡಲು ಅನವು ಮಾಡಿ ಕೊಟ್ಟು ರಸ್ತೆ ಅಪಘಾತವನ್ನು ತಪ್ಪಿಸಿ ಎಂದು ವರ್ತಕರಿಗೆ ಮನವಿ ಮಾಡಿದ ಅವರು ನಿಮ್ಮ ಮಕ್ಕಳ ಕೈಯಲ್ಲಿ ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡಲು ಅವಕಾಶ ಕೊಡ ಬೇಡಿ ಏಕೆಂದರೆ ದಿನೆ ದಿನೇ ವಯಸ್ಕರಲ್ಲದ ಮಕ್ಕಳು ವಾಹನ ಚಾಲನೆ ಮಾಡಿ ಹೆಚ್ಚು ಅಪಘಾತವಾಗುತ್ತಿರುವುದನ್ನು ಕಣ್ಣಾರೆ ನೀವೆ ನೋಡುತ್ತಿದ್ದೀರಿ ಎಂದು ಸಭೆಯಲ್ಲಿ ನೆರದಿದ್ದ ಜನರಿಗೆ ಮನವರಿಕೆ ಮಾಡಿದ ಅವರು ಪ್ರತಿಯೊಬ್ಬರು ಕಡ್ಡಾಯವಾಗಿ ವಾಹನ ಚಾಲನಾ ಪರವಾನಿಗೆ ಪಡೆಯ ಬೇಕು, ಪರವಾನಿಗೆ ಇಲ್ಲದೆ ವಾಹನ ಚಾಲನೆ ಮಾಡಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಿದರು.
ಪುಟ್‍ಬಾತ್ ಮೇಲೆ ವ್ಯಾಪಾರ ಮಾಡುವುದರಿಂದ ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲುತ್ತವೆ ಮತ್ತೆ ವಾಹನ ಸಂಚಾರ ಅಸ್ತವ್ಯಸ್ತವಾಗುತ್ತದೆ ಅದಷ್ಟು ಆಟೋ ಚಾಲಕರು ನಿಮಗೆ ತಿಳಿಸಿದ ನಿಗದಿತ ಸ್ಥಳದಲ್ಲಿ ಆಟೋಗಳನ್ನು ನಿಲ್ಲಿಸಿ ಎಂದು ಹೇಳಿದ ಅವರು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ವಾಹನ ಚಾಲನೆ ಮಾಡಿ ಇಲ್ಲದಿದ್ದಲ್ಲಿ ನಿಮ್ಮ ವಾಹನ ಚಾಲನಾ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಜತೆಗೆ ಭೇರ್ಯ ಗ್ರಾಮದ ನಾಲ್ಕು ಕಡೆಗಳಲ್ಲಿ ರಸ್ತೆ ವಿಭಜನೆ ಇದ್ದು ಬಸ್‍ಗಳ ಸಂಚಾರ ಹೆಚ್ಚಾಗಿರುವುದರಿಂದ ಅತ್ತಾ ಈತ್ತಾ ಗಮನಿಸಿ ವಾಹನ ಚಾಲನೆ ಮಾಡಿ ಎಂದರು. ನಂತರ ಸಿಬ್ಬಂದಿಗಳೋಡನೆ ರಸ್ತೆಯ ಬದಿ ಮತ್ತು ಪುಟ್‍ಬಾತ್ ಮೇಲೆ ಅನಧಿಕೃತವಾಗಿ ಅಡಿಕೆ ಮರಗಳು, ಸೀಮೆಂಟ್ ಶೀಟ್, ಕಡ್ಡೆಕಾಯಿ ವ್ಯಾಪಾರಿಗಳು, ಪಾನಿಪುರಿ ಮತ್ತು ತಳ್ಳುವಗಾಡಿಗಳ ಂಏಲೆ ವ್ಯಾಪಾರ ಮಾಡುವವರ ಸ್ಥಳಕ್ಕೆ ಬೇಟಿ ಕೊಟ್ಟು ಪುಟ್‍ಬಾತ್ ಮೇಲೆ ಯಾವುದೇ ಕಾರಣಕ್ಕೂ ವ್ಯಾಪಾರ ಮಾಡ ಬೇಡಿ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಈ ಸಂಧರ್ಭದಲ್ಲಿ ಸಾಲಿಗ್ರಾಮ ಸಬ್ ಇನ್ಸ್‍ಪೆಕ್ಟರ್ ಮಹೇಶ್, ಮುಖ್ಯಪೇದೆ ಸತ್ಯನಾರಾಯಣರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ಪತ್ರಕರ್ತ ಭೇರ್ಯಮಹೇಶ್, ವರ್ತಕರಾದ ಬಿ.ವಿ.ನಾಗೇಂದ್ರ, ಖಾಲಿದ್‍ಪಾಷ, ಬಿ.ಎಂ.ಪ್ರಕಾಶ್, ಚಾಲಕರಾದ ಮಹೇಶ್, ಕೃಷ್ಣ, ಅಮೀನ್, ಮಂಜು, ಮತ್ತೀತರರು ಇದ್ದರು.

ಆದಾಯ ತೆರಿಗೆ ವಿವರ ಸಲ್ಲಿಕೆಗಾಗಿ 80 ವಿಶೇಷ ಕೌಂಟರ್‍ಗಳು

ಆದಾಯ ತೆರಿಗೆ ವಿವರ ಸಲ್ಲಿಕೆಗಾಗಿ 80 ವಿಶೇಷ ಕೌಂಟರ್‍ಗಳು
ಬೆಂಗಳೂರು , ಜುಲೈ 25, 2014
ವಾರ್ಷಿಕ ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವ ತೆರಿಗೆದಾರರ ಅನುಕೂಲತೆಗಾಗಿ ಆದಾಯ ತೆರಿಗೆ ವಿಭಾಗ ಇದೇ ಜುಲೈ 29ರಿಂದ 31ರವರಗೆ ಮೂರು ದಿನಗಳ ಕಾಲ ಬೆಂಗಳೂರಿನ ಗಾಯತ್ರಿ ವಿಹಾರ ಅರಮನೆ ಮೈದಾನದಲ್ಲಿ 80 ತೆರಿಗೆ ವಿವರ ಸಲ್ಲಿಕೆ ಕೌಂಟರ್‍ಗಳಮ್ಮು ತೆರೆಯಲಿದೆ.  ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಶ್ರೀ. ತಿರುಮಲ ಕುಮಾರ್ , ಹಿರಿಯ ಆದಾಯ ತೆರಿಗೆ ಆಯುಕ್ತ, ಬೆಂಗಳೂರು v, ಆದಾಯ ತೆರಿಗೆ ಪಾವತಿ ಪ್ರತಿಯೊಬ್ಬ ತೆರಿಗೆದಾರನ ಆದ್ಯ ಕರ್ತವ್ಯ ಈ ಬಾರಿ ಆದಾಯ ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ತೆರಿಗೆದಾರರಿಗೆ ಸಹಕರಿಸಲು ನಗರದಲ್ಲಿ ಮೂರು ದಿನಗಳ ಕಾಲ ವಿಶೇಷ ಆದಾಯ ತೆರಿಗೆ ಪಾವತಿ ಕೌಂಟರ್‍ಗಳನ್ನು ತೆರೆಯಲಾಗುತ್ತದೆ. ಈ ಕೌಂಟರ್‍ಗಳು ಮೂರು ದಿನಗಳ ಕಾಲ ಬೆಳಗ್ಗೆ 9:30 ರಿಂದ ಸಂಜೆ 5ರವರೆಗೆ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದರು.
ಐದು ಲಕ್ಷಕ್ಕೂ ಅಧಿಕ ಆದಾಯವನ್ನು ಹೊಂದಿರುವ ತೆರಿಗೆದಾರರು ಇ-ಪೈಲಿಂಗ್ ಮೂಲಕವಷ್ಟೇ ತೆರಿಗೆ ವಿವರಗಳನ್ನು ಸಲ್ಲಿಸಬಹುದಾದ ಕಾರಣ ಈ ಬಾರಿ ಇ-ಫೈಲಿಂಗ್ ಕೌಂಟರ್‍ಗಳನ್ನು ತೆರೆಯಲಾಗುತ್ತದೆ ಎಂದು ಶ್ರೀ. ತಿರುಮಲ ಕುಮಾರ್ ಹೇಳಿದರು. 
ಶ್ರೀ . ಪ್ರವೀಣ್ ಕಾರಂತ್ , ಜಂಟಿ ಆಯುಕ್ತರು, ರೇಂಜ್-14/15 , ಆದಾಯ ತೆರಿಗೆ ಇಲಾಖೆ, ಬೆಂಗಳೂರು ಮಾತನಾಡಿ ಇ-ಫೈಲಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸಲು ಈ ಬಾರಿ 60 ಮದ್ಯವರ್ತಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಇ-ಫೈಲಿಂಗ್ ಮೂಲಕ ತೆರಿಗೆ ಸಲ್ಲಿಸಲು ಇಚ್ಛಿಸುವ ತೆರಿಗೆದಾರರಿಗೆ ಅವರು ಸಹಕರಿಸಲಿದ್ದಾರೆ. 60 ಇ-ಫೈಲಿಂಗ್ ಕೌಂಟರ್‍ಗಳನ್ನು ಈ ಉದ್ದೆಶಕ್ಕಾಗಿ ತೆರೆಯಲಾಗುತ್ತದೆ ಎಂದು ಹೇಳಿದರು.ಶ್ರೀಮತಿ. ಹರಿತಾ, ಜಂಟಿ ಆಯುಕ್ತರು, ರೇಂಜ್-13, ಆದಾಯ ತೆರಿಗೆ ಇಲಾಖೆ, ಬೆಂಗಳೂರು ಮಾತನಾಡಿ ತೆರಿಗೆದಾರರು ಸರಿಯಾದ ಸಮಯಕ್ಕೆ ತೆರಿಗೆ ಪಾವತಿ ಮಾಡಲು ಕರೆ ನೀಡಿದರು.

ಕೆ.ಎಂ.ಪೊಲೀಸರಿಂದ ಬಸ್ ಗಳಿಗೆ ಭಿತ್ತಿಪ್ರ.

ಭಾರತೀನಗರ.ಜು.25- ಕೆ.ಎಂ.ದೊಡ್ಡಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 15 ಸಾವಿರಕ್ಕೂ ಹೆಚ್ಚು ಇರುವುದರಿಂದ ಬಸ್ ಸಂಚಾರದಲ್ಲಿ ತೊಡಕು ಉಂಟಾಗುತ್ತಿದೆ ಎಂಬ ದೂರಿನ ಮೇರೆಗೆ ಪೊಲೀಸ್ ವರಿಷ್ಟಾಧಿಕಾರಿ ಭೂಷಣ್‍ಜಿಬೊರಸೆರವರ ಸೂಚನೆ ಮೇರೆಗೆ ಸಹಾಯಕ ಪೊಲೀಸ್ ವರಿಷ್ಟಾಧಿಕಾರಿ ಎಂ.ಪುಟ್ಟಮಾದಯ್ಯ ಸ್ಥಳಕ್ಕೆ ಭೇಟಿನೀಡಿ ಸಮಸ್ಯೆಗಳನ್ನು ನಿಯಂತ್ರಿಸಲು ಬೆಳಿಗ್ಗೆಯಿಂದ ಸಂಜೆಯವರೆಗೆ ಜಾಗೃತಿ ಮೂಡಿಸುವ ಮೂಲಕ ಮುಂದಾದರು.
 ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಪಟ್ಟಣಕ್ಕೆ  ಕರೆಸಿ ವಿವಿಧ ಕಾಲೇಜುಗಳಲ್ಲಿ ಇರುವ ಪ್ರಾಂಶುಪಾಲರ ಅಭಿಪ್ರಾಯವನ್ನು ಕೇಳಿದ ನಂತರ ಬಸ್‍ನ ಮುಂಭಾಗದ ಬಾಗಿಲಿಗೆ ಮಹಿಳೆಯರು ಮಾತ್ರ ಹತ್ತಬೇಕು ಎಂಬ ಭಿತ್ತಿಚಿತ್ರವನ್ನು ಅಟ್ಟಿಸುವುದುರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
  ಇತ್ತೀಚಿಗೆ ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮುನ್ನೇಚ್ಚರಿಕೆಯಾಗಿ ಹಲವು ಕಟ್ಟುನಿಟ್ಟಿನ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಕಾಲೇಜು ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸಾರಿಗೆ ಬಸ್‍ನಲ್ಲಿ ಮುಂದಿನ ಬಾಗಿಲು ಮತ್ತು ಮುಂದಿನ ನಾಲ್ಕು ಸೀಟುಗಳು ಮಹಿಳೆಯರಿಗೆ ಮೀಸಲಿಟ್ಟಿರುವುದರಿಂದ ಪುರುಷರು ತೊಂದರೆ ನೀಡದೆ ಸಹಕರಿಸಬೇಕೆಂದು ಕೋರಿದರು. ವಿದ್ಯಾರ್ಥಿಗಳ ಅನುಕೂಲಕ್ಕೆ ಹೆಚ್ಚುವರಿ ಬಸ್‍ಸೌಲಭ್ಯವನ್ನು ಕಲ್ಪಿಸಲು ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿರುವುದಾಗಿ ತಿಳಿಸಿದರು. 
  ರಸ್ತೆಬದಿಯಲ್ಲಿ ಅಡ್ಡದಿಡ್ಡಿಯಿಂದ ನಿಲ್ಲಿಸಲಾಗಿದ್ದ ಪಾದಚಾರಿಗಳಿಗೆ ತುಂಬಾತೊಂದರೆ ಉಂಟಾಗಿತ್ತು. ಆದ್ದರಿಂದ ಸಾರ್ವಜನಿಕರಿಗೆ ಪ್ರತ್ಯೇಕ ಸ್ಥಳನಿರ್ಮಿಸಿ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದರು.
  ವಿದ್ಯಾರ್ಥಿಗಳು, ಸಾರ್ವಜನಿಕರು ರಸ್ತೆಯ ಎಡಬದಿಯಲ್ಲಿ ಮಾತ್ರ ಚಲಿಸಬೇಕು. ರಸ್ತೆ ನಿಯಮ ಉಲ್ಲಂಘಿಸಿದವರಿಗೆ ಮುಂದಿನ ದಿನಗಳಲ್ಲಿ ಕೇಸು ದಾಖಲಿಸಲಾಗುವುದೆಂದು ತಿಳಿಸಿದರು. 
  ಇದೇ ಸಂದರ್ಭದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಗೋಪಾಲ್, ಸಬ್ಬ್‍ಇನ್ಸ್‍ಪೆಕ್ಟರ್ ಗೋವಿಂದರಾಜು, ಕೆಎಸ್‍ಆರ್‍ಟಿಸಿ ಅಧಿಕಾರಿ ರಮೇಶ್, ಸಿಬ್ಬಂದಿಗಳಾದ ಎಂ.ಮಹದೇವಯ್ಯ, ಸಿ.ಮಹದೇವು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಆಗ್ರಹಿಸಿ ಜು. 28ರಂದು ಪಾಂಡವಪುರ ಬಂದ್
ಪಾಂಡವಪುರ: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಮಹಿಳೆಯರು ಹಾಗೂ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸುತ್ತಿರುವ ಆರೋಪಿಗಳನ್ನು ಗಲ್ಲಿಗೇರಿಸಬೇಕು ಹಾಗೂ ಅತ್ಯಾಚಾರ ಪ್ರಕರಣವನ್ನು ಹತ್ತಿಕ್ಕುವಲ್ಲಿ ವಿಫಲವಾಗಿರುವ ಗೃಹ ಸಚಿವ ಕೆ.ಜೆ.ಜಾರ್ಜ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಟೌನ್ ಬಿಜೆಪಿ ಘಟಕದ ವತಿಯಿಂದ ಜು. 28ರಂದು ಸೋಮವಾರ `ಪಾಂಡವಪುರ ಬಂದ್' ನಡೆಸಲಾಗುವುದು ಎಂದು ಟೌನ್ ಬಿಜೆಪಿ ಘಟಕ ಅಧ್ಯಕ್ಷ ಬೀರಶೆಟ್ಟಹಳ್ಳಿ ಭಾಸ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಪಟ್ಟಣದ ಎಲ್ಲಾ ಶಾಲಾ ಕಾಲೇಜುಗಳು, ಅಂಗಡಿ ಮಾಲೀಕರು, ಹೋಟೆಲ್ ಮಾಲೀಕರು ಹಾಗೂ ಚಿತ್ರಮಂದಿರಗಳ ಮಾಲೀಕರು ಒಂದು ದಿನದ ಮಟ್ಟಿಗೆ ಬಾಗಿಲು ಮುಚ್ಚಿ ಸ್ಥಗಿತಗೊಳಿಸುವ ಮೂಲಕ ಬಂದ್ ಆಚರಣೆಗೆ ಸಹಕಾರ ನೀಡಬೇಕು. ಜತೆಗೆ ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಂದ್ ಯಶಸ್ವಿಗೊಳಿಸಿಕೊಡಬೇಕು ಎಂದು ಬೀರಶೆಟ್ಟಹಳ್ಳಿ ಭಾಸ್ಕರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಆಯೋಜಿಸಿದ್ದ ಕಬ್ಬು ಮತ್ತು ಭತ್ತ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕುರಿತ  ಕೃಷಿ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಎ.ಯೋಗಿಶ್ ಉದ್ಘಾಟಿಸಿದರು.
ಪಾಂಡವಪುರ:  ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಕಬ್ಬು ಮತ್ತು ಭತ್ತ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕುರಿತು  ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಎ.ಯೋಗಿಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೈತ ಕೇವಲ ಒಂದು ಬೆಳೆಯನ್ನು ಬೆಳೆಯಲು ತನ್ನ ಭೂಮಿಯನ್ನು ಸಿಮೀತವಾಗಿರಿಸದೆ ವೈವಿಧ್ಯಮಯ ಬೆಳೆಗಳನ್ನು ಬೆಳೆದಾಗ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾದಾಗಲೂ ರೈತನಿಗೆ ಒಂದು ನಷ್ಟ ಹೊಂದಿದರೂ ಮತ್ತೊಂದು ಬೆಳೆಯಲ್ಲಿ ಲಾಭವನ್ನು ಹೊಂದುವ ಸಾಧ್ಯತೆ ಇರುತ್ತದೆ. ಹೀಗಾಗಿ ರೈತರು ಚಿಂತೆಯನ್ನು ಬಿಟ್ಟು ವೈವಿಧ್ಯಮಯ ಬೆಳೆ ಬೆಳೆಯುವತ್ತ ಚಿಂತನೆಯನ್ನು ಮಾಡಬೇಕು ಎಂದರು.
ಕೃಷಿಯನ್ನು ನಂಬಿ ಬದುಕುತ್ತಿರುವ ರೈತರಲ್ಲಿ ಕೃಷಿಯು ಲಾಭದಾಯಕ ಎಂಬ ವಿಷಯ ಕುರಿತು ಧೈರ್ಯ ತುಂಬುವ ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಡೆಸುತ್ತಿದೆ. ಹೀಗಾಗಿ ಆತಂಕಗೊಳ್ಳದೆ ಕಬ್ಬು ಮತ್ತು ಭತ್ತ ಬೆಳೆಯಲ್ಲಿ ಸುಧಾರಿಯ ಬೇಸಾಯ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟೇಲ್ ವೆಂಕಟೇಗೌಡ, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಗಿರಿಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಚಿಕ್ಕಾಡೆ ವಿಜೇಂದ್ರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಯಜಮಾನ್ ಕೋಡಿಗೌಡ, ಯಜಮಾನ್ ಪ್ರಕಾಶ, ಗ್ರಾಮದ ಮುಖಂಡರಾದ ಸಿ.ಎಚ್.ರಾಮು, ರಘು, ಸಿ.ಬಿ.ಹರೀಶ, ಚಂದ್ರಿಕಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಗಣೇಶ್ ಬಾನಪ್ಪನವರ್, ಸಿಬ್ಬಂದಿಗಳಾದ ಅಮಿತಾ, ಅನಿತಾ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಂತರ ನಡೆದ ವಿಚಾರ ಗೋಷ್ಠಿಯಲ್ಲಿ ಮಂಡ್ಯ ವಿ.ಸಿ.ಫಾರಂನ ಪ್ರಾಧ್ಯಾಪಕ ಡಾ.ರಾಮಚಂದ್ರ ಅವರು `ಭತ್ತ ಬೇಸಾಯದಲ್ಲಿ ಶ್ರೀಪದ್ದತಿ ಕ್ರಮಗಳ ಕುರಿತು' ಸಮಗ್ರ ಮಾಹಿತಿ ತಿಳಿಸಿದರು. ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೇಂದ್ರ ಕಚೇರಿಯ ಕೃಷಿ ನಿರ್ದೇಶಕ ಮನೋಜ್ ಮಿನೇಜಸ್ ಅವರು `ಕಬ್ಬಿನ ಸುಸ್ಥಿರ ಬೇಸಾಯದ ಕುರಿತು' ಹಾಗೂ `ಕಬ್ಬಿನಲ್ಲಿ ಅಂತರ್ ಬೆಳೆಯುವ ಕುರಿತು' ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಕೆ.ವಾಸುದೇವಮೂರ್ತಿ ಹಾಗೂ ಇತರರು ಕಬ್ಬಿನ ಬೇಸಾಯದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಜತೆಗೆ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನೂ ನಡೆಸಲಾಯಿತು.

ನಿಗಧಿತ ದರದಲ್ಲೇ ಸಿಲಿಂಡರ್ ಪೂರೈಸಿ- ಕೆ.ರಾಮೇಶ್ವರಪ್ಪ

ನಿಗಧಿತ ದರದಲ್ಲೇ ಸಿಲಿಂಡರ್ ಪೂರೈಸಿ ಕೆ.ರಾಮೇಶ್ವರಪ್ಪ
    ಮೈಸೂರು,ಜು.25.ಜಿಲ್ಲೆಯಲ್ಲಿನ ಎಲ್.ಪಿ.ಜಿ. ಡೀಲರ್‍ಗಳು ಸಬ್ ಏಜೆನ್ಸಿಗಳನ್ನು ಹೊಂದಿದಲ್ಲಿ ಕೂಡಲೇ ಅವುಗಳನ್ನು ಕೊನೆಗೊಳಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಡಾ| ಕೆ.ರಾಮೇಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
   ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಎಲ್.ಪಿ.ಜಿ. ಡೀಲರ್‍ಗಳ ಸಭೆ ನಡೆಸಿದ ಅವರು ಕೆಲವು ಏಜೆನ್ಸಿಗಳು ಸಬ್ ಏಜೆನ್ಸಿ ನೇಮಿಸಿಕೊಂಡು ಅವರ ಮೂಲಕವೂ ವ್ಯವಹಾರ ನಡೆಸುತ್ತಿರುವ ದೂರುಗಳು ಇವೆ. ಇಂತಹ ಪ್ರಕರಣ ಪತ್ತೆಯಾದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
   ಕಾನೂನು ಬದ್ದವಾಗಿ ಅನುಮತಿ ಪಡೆದ ಸ್ಥಳದಿಂದಲೇ ವ್ಯವಹಾರ ನಡೆಸಬೇಕು. ಅನಧಿಕೃತವಾಗಿ ವ್ಯವಹಾರ ನಡೆಸುವುದನ್ನು ನಿಲ್ಲಿಸಿ ಎಂದು ಡಾ. ರಾಮೇಶ್ವರಪ್ಪ ಹೇಳಿದರು.
   ಏಜೆನ್ಸಿಗಳು ಗ್ರಾಹಕರಿಗೆ ಅವರ ಮನೆ ಬಾಗಿಲಿಗೆ ಸಿಲಿಂಡರ್‍ಗಳನ್ನು ಪೂರೈಸಬೇಕು ಹಾಗೂ ನಿಗಧಿಪಡಿಸಿದ ದರವನ್ನೇ ಪಡೆಯಬೇಕು. 5 ಕಿ.ಮೀ.ಗಿಂತ ಹೆಚ್ಚಿನ ದೂರವಿದ್ದಲ್ಲಿ, ಪ್ರತಿ ಕಿ.ಮೀ. ದರವನ್ನು ನಿಗಧಿಪಡಿಸಿದ್ದು ಅದರಂತೆಯೇ ಹಣ ಪಡೆಯಬೇಕು ಎಂದು ಅವರು ಸೂಚನೆ ನೀಡಿದರು.
   ಈ ಬಗ್ಗೆ ಪ್ರತಿಕ್ರಿಯಿಸಿದ ಎಲ್.ಪಿ.ಜಿ. ಏಜೆಂಟರೊಬ್ಬರು, ಇಲಾಖೆಯಿಂದ ಈ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು. ಗ್ರಾಹಕರು ನಿಗಧಿಗಿಂತ ಹೆಚ್ಚಿನ ಹಣ ನೀಡಬೇಕಾದ ಅವಶ್ಯಕತೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
   ಎಲ್ಲಾ ಎಲ್.ಪಿ.ಜಿ. ಏಜೆಂಟರು ತಮ್ಮ ಅಧಿಕೃತ  ಸಂಗ್ರಹಾಗಾರಗಳು ಎಲ್ಲಿವೆ ಎಂಬುದರ ಮಾಹಿತಿ ನೀಡಬೇಕು ಹಾಗೂ ಅಂತಹ ಸ್ಥಳಗಳಿಂದಲೇ ಕಾರ್ಯಾಚರಣೆ ನಡೆಸಬೇಕು ಎಂದು ರಾಮೇಶ್ವರಪ್ಪ ಸೂಚಿಸಿದರು.
   ಬಿಲ್‍ಗಳಲ್ಲಿ ಎಸ್.ಆರ್. ಸಂಖ್ಯೆ ಕಡ್ಡಾಯವಾಗಿ ಇರಬೇಕು. ಏಜೆನ್ಸಿಗಳ ಬಗ್ಗೆ ಮಾಹಿತಿಯನ್ನು ಇಲಾಖೆಗೆ ನಿಗಧಿತ ಸಮಯದಲ್ಲಿ ಸಲ್ಲಿಸಬೇಕು ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
   ಎಲ್.ಪಿ.ಜಿ ಹೊಸ ಸಂಪರ್ಕವನ್ನು ಶೀಘ್ರದಲ್ಲೇ ಒದಗಿಸಲಾಗುವುದು. ಹೆಚ್ಚುವರಿ ಸಿಲೆಂಡರ್ ಸರಬರಜು ಕುರಿತಂತೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಏಜೆನ್ಸಿಯವರು ಸಭೆಗೆ ಮಾಹಿತಿ ನೀಡಿದರು.
 ಹೆಚ್.ಪಿ.ಸಿ.ಎಲ್. ಸೇಲ್ಸ್ ಮಾನ್ಯೇಜರ್ ಮಂಜುನಾಥ, ಐ.ಓ.ಸಿ. ಸೇಲ್ಸ್ ಮಾನ್ಯೇಜರ್ ಬೇಬಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯವಸ್ಥಾಪಕ ರಾಮು ಸೇರಿದಂತೆ ವಿವಿಧ ಡೀಲರ್‍ಗಳು ಸಭೆಯಲ್ಲಿ ಭಾಗವಹಿಸಿದ್ದರು.
                                                               
  
ಮಹಿಳೆಯರ ಉಳಿತಾಯ 103 ಕೋಟಿ ರೂ
       ಮೈಸೂರು,ಜು.25.ಮೈಸೂರು ಜಿಲ್ಲೆಯ ಸ್ತ್ರೀ ಶಕ್ತಿ  ಸಂಘಗಳ ಸದಸ್ಯರ ಉಳಿತಾಯದ ಹಣ 103 ಕೋಟಿ ರೂ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಎನ್.ಆರ್ ವಿಜಯ್ ಅವರು ಸ್ತ್ರೀಶಕ್ತಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ನೀಡಿದ ಮಾಹಿತಿ ಇದು. ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೊಪಾಲ್.
     ಜಿಲ್ಲೆಯಲ್ಲಿ 6602 ಗುಂಪುಗಳು ರಚನೆಯಾಗಿದ್ದು, 1,03,000 ಸದಸ್ಯರಿದ್ದಾರೆ. ಪ್ರತಿ ತಾಲ್ಲೂಕಿನಲ್ಲಿ ತಾಲ್ಲೂಕು ಒಕ್ಕೂಟ ರಚನೆಯಾಗಿದೆ ಎಂದು ವಿಜಯ್ ಹೇಳಿದರು.
ಜಿಲ್ಲೆಯಲ್ಲಿ ಸ್ತ್ರೀ ಶಕ್ತಿ ಸದಸ್ಯರ ಉಳಿತಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗೊಪಾಲ್ ಅವರು ಸ್ತ್ರಿ ಶಕ್ತಿ ಸಂಘಗಳ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಧಾರಿತ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೆರೇಪಣೆ ನೀಡಬೇಕು ಎಂದರು.
     ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ 688 ಗುಂಪುಗಳು ರಚನೆಯಾಗಿದ್ದು ಪ್ರತಿ ತಿಂಗಳು 53.33 ಲಕ್ಷ ರೂ ಕೆ.ಆರ್.ನಗರ ತಾಲ್ಲೂಕಿನಲ್ಲಿ 994 ಗುಂಪುಗಳು ರಚನೆಯಾಗಿದ್ದು ಪ್ರತಿ ತಿಂಗಳು 9.67 ಲಕ್ಷ ರೂ ನಂಜನಗೂಡು ತಾಲ್ಲೂಕಿನಲ್ಲಿ 637 ಗುಂಪುಗಳು ರಚನೆಯಾಗಿದ್ದು ಪ್ರತಿ ತಿಂಗಳು 4.93 ಲಕ್ಷ ರೂ ಹುಣಸೂರು ತಾಲ್ಲೂಕಿನಲ್ಲಿ 895 ಗುಂಪುಗಳು ರಚನೆಯಾಗಿದ್ದು ಪ್ರತಿ ತಿಂಗಳು 8.17 ಲಕ್ಷ ರೂ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 725 ಗುಂಪುಗಳು ರಚನೆಯಾಗಿದ್ದು ಪ್ರತಿ ತಿಂಗಳು 4.99 ಲಕ್ಷ ರೂ ತಿ.ನರಸಿಪುರ ತಾಲ್ಲೂಕಿನಲ್ಲಿ 943 ಗುಂಪುಗಳು ರಚನೆಯಾಗಿದ್ದು ಪ್ರತಿ ತಿಂಗಳು 6.16 ಲಕ್ಷ ರೂ ಮೈಸೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ 967 ಗುಂಪುಗಳು ರಚನೆಯಾಗಿದ್ದು 10.70 ಲಕ್ಷ ರೂ ಹಾಗೂ  ಬಿಳಿಕೆರೆ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ 753 ಗುಂಪುಗಳು ರಚನೆಯಾಗಿದ್ದು 5.49 ಲಕ್ಷ ರೂ ಉಳಿತಾಯ ಮಾಡುತ್ತಾರೆ ಎಂದು ವಿಜಯ್ ಅವರು ಸಭೆಗೆ ಮಾಹಿತಿ ನೀಡಿದರು. 
ಸೇನಾ ನೇಮಕಾತಿ ರ್ಯಾಲಿ
 ಮೈಸೂರು,ಜು.25-ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಸದೃಢ ಯುವಕ ಅಭ್ಯರ್ಥಿಗಳಿಗೆ ಮಂಗಳೂರು ಜಿಲ್ಲೆಯ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ  ಅಳ್ವಾಸ್ ಏಜುಕೇಷನ್ ಫೌಂಡೇಶನ್ ಗ್ರೌಂಡ್ಸ್ ಇಲ್ಲಿ ದಿನಾಂಕ  05-08-2014 ರಿಂದ 12-08-2014ರವರೆಗೆ ನೇಮಕಾತಿ ರ್ಯಾಲಿ ನಡೆಸಲಿದೆ.
ದಿನಾಂಕ 04-08-2014ರಂದು ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗೆ, 09-08-2014ರಂದು ಸೋಲ್ಜರ್ ಟ್ರೇಡ್ಸ್‍ಮನ್ ಹುದ್ದೆಗೆ ಹಾಗೂ 11-08-2014ರಂದು ಸೋಲ್ಜರ್ ಜಿ.ಡಿ., ಸೋಲ್ಜರ್ ಟೆಕ್ನಿಕಲ್ ಹುದ್ದೆಗೆ ಮಧ್ಯಾಹ್ನ 1 ಗಂಟೆಯಿಂದ  ಟೋಕನ್‍ಗಳನ್ನು ನೀಡಲಾಗುತ್ತದೆ.
ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗೆ: 17ಳಿ ರಿಂದ 23 ವರ್ಷದೊಳಗಿನ (05-08-1991 ರಿಂದ 05-02-1997ರೊಳಗೆ ಜನಿಸಿರಬೇಕು) ದ್ವಿತೀಯ ಪಿಯುಸಿಯಲ್ಲಿ ಶೇ. 50 ಅಂಕಗಳಿಸಿ ಉತ್ತೀರ್ಣರಾಗಿರಬೇಕು ಹಾಗೂ  ಪಿಯುಸಿ/ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಇಂಗ್ಲೀಷ್ ಮತ್ತು ಗಣಿತ ವಿಷಯಗಳಲ್ಲಿ ಶೇ. 40 ಅಂಕಗಳಿಸಿ ಪಾಸಾದ ಅಭ್ಯರ್ಥಿಗಳು.


ಸೋಲ್ಜರ್ ಟ್ರೇಡ್ಸ್‍ಮನ್ ಹುದ್ದೆಗೆ ವಯೋಮಿತಿ 17ಳಿ ರಿಂದ 23 (05-08-1991 ರಿಂದ 05-02-1997) ವರ್ಷದೊಳಗಿರಬೇಕು ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ/ 8ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ್ದರೆ ಸಾಕು.

ಸೋಲ್ಜರ್ ಟೆಕ್ನಿಕಲ್  ಹುದ್ದೆಗೆ ವಯೋಮಿತಿ 17ಳಿ ರಿಂದ 23 (03-08-1991 ರಿಂದ 03-02-1997) ವರ್ಷದೊಳಗಿನ, ಪಿಯುಸಿಯ ವಿe್ಞÁನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲೀಷ್ ವಿಷಯಗಳನ್ನು ಅಭ್ಯಾಸ ಮಾಡಿ ಪಾಸಾಗಿರಬೇಕು.

 ಸೋಲ್ಜರ್ ಜಿ ಹುದ್ದೆಗೆ ವಯೋಮಿತಿ 17ಳಿ ರಿಂದ 21 (05-08-1993 ರಿಂದ 05-02-1997) ವರ್ಷದೊಳಗಿನ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 45 ಅಂಕದೊಂದಿಗೆ ಕನಿಷ್ಟ 33% ಪ್ರತಿ ವಿಷಯದಲ್ಲಿ ಪಾಸಾದ ಅಭ್ಯರ್ಥಿಗಳು ರ್ಯಾಲಿಗೆ ಹಾಜರಾಗಬಹುದು.
ಮೂಲ ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಮೇಲ್ಪಟ್ಟ ತರಗತಿಗಳ ಅಂಕಪಟ್ಟಿ, ತಮ್ಮ ಇತ್ತೀಚಿನ 15 ಬಣ್ಣದ ಭಾವಚಿತ್ರಗಳು, ತಹಸೀಲ್ದಾರ್/ಜಿಲ್ಲಾಧಿಕಾರಿಗಳಿಂದ ದೃಢೀಕರಿಸಿದ ಹತ್ತು ವರ್ಷದಿಂದ ಮೂಲ ನಿವಾಸಿಯಾಗಿರುವ ಬಗ್ಗೆ ಮತ್ತು ಜಾತಿ ಪ್ರಮಾಣ ಪತ್ರ, ಪೊಲೀಸ್ ಅಧಿಕಾರಿಯಿಂದ 6 ತಿಂಗಳೊಳಗೆ ಪಡೆದ ನಡೆವಳಿಕೆ ಪ್ರಮಾಣ ಪತ್ರ, ಮಾಜಿ ಸೈನಿಕ/ಸೈನಿಕ/ಯುದ್ಧ ವಿಧವೆಯರ ಮಕ್ಕಳು ರೆಕಾಡ್ರ್ಸ್‍ನಿಂದ ಪಡೆದ ಅವರ ಸಂಬಂಧ ಧೃಢೀಕರಿಸುವ ಪ್ರಮಾಣ ಪತ್ರ ಹಾಗೂ ಮೂಲ ಎನ್‍ಸಿಸಿ ಪ್ರಮಾಣ ಪತ್ರಗಳು.ಎಲ್ಲಾ ದಾಖಲಾತಿಗಳ ಎರಡು ಸೆಟ್ ನೆರಳಚ್ಚು ಪ್ರತಿಗಳನ್ನು ದೈಡಿಕರಿಸಿರಬೇಕು. ರ್ಯಾಲಿಗೆ ಹಾಜರಾದ ಸಂದರ್ಭದಲ್ಲಿ ಹಾಜರುಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮೈಸೂರು ದೂರವಾಣಿ ಸಂಖ್ಯೆ: 0821-2425240 ಇವರನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.

ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವಿನ ಯುದ್ಧ ನಿಲ್ಲಿಸಲು ವಿಶ್ವಸಂಸ್ಥೆ ಮುಂದಾಗಲಿ.ಹರ್ಷಕುಮಾರ್.

ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವಿನ ಯುದ್ಧ ನಿಲ್ಲಿಸಲು ವಿಶ್ವಸಂಸ್ಥೆ ಮುಂದಾಗಲಿ.
ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವಿನ ಸಂಘರ್ಷ ಕೊನೆಗೊಂಡು ಎರೆಡು ರಾಷ್ಟ್ರಗಳು ಪರಸ್ಪರ ಗೌರವ ಭಾವನೆ ಹೊಂದುವಂತೆ ಮಾಡಲು ವಿಶ್ವಸಂಸ್ಥೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆ ಒತ್ತಾಯಿಸಿದರು.
ನಗರದ ಪುಸ್ತಕಮನೆಯ ವಾರದ ಓದುವಿನಲ್ಲಿ ನಡೆದ ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ನಡುವಿನ ಸಂಘರ್ಷ: ವಾಸ್ತವ ಏನು? ಎಂಬ ವಿಷಯದ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ಯಾಲೆಸ್ತೈನ್ ಮೇಲೆ ಇಸ್ರೇಲ್ ಪ್ರತಿನಿತ್ಯ ಉದ್ದೇಶಪೂರ್ವಕ ಯೋಜನಬದ್ಧ ಅಮಾನವೀಯ ದಾಳಿ ನಡೆಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.
ಈ ಸಂಘರ್ಷ ಕೇವಲ ಇಸ್ರೇಲ್ ಜಿಯೋನಿಷ್ಟ್‍ಗಳು ಮತ್ತು ಪ್ಯಾಲೆಸ್ತೈನ್‍ನ ಭಯೋತ್ಪಾದಕರ ನಡುವಿನ ಯುದ್ಧವಾಗಿಲ್ಲದೇ ಇದರ ಹಿಂದೆ ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಅರೇಬಿಯಾದ ತೈಲದ ಮೇಲೆ ಕಣ್ಣಿಟ್ಟಿರುವ ಹಲವು ರಾಷ್ಟ್ರಗಳ ಹಿತಾಸಕ್ತಿ ಅಡಗಿದ್ದು ಈ ರಾಷ್ಟ್ರಗಳ ಪರವೇ ವಿಶ್ವಸಂಸ್ಥೆ ಕೆಲಸ ಮಾಡುತ್ತಿರುವುದು ದುರಂತ ಎಂದರು.
1948ರಲ್ಲಿ ಉದಯವಾದ ಇಸ್ರೇಲ್ ಪ್ಯಾಲೆಸ್ತೈನ್ ಮೇಲೆ ಮೃಗೀಯ ದಾಳಿ ನಡೆಸುತ್ತಿದ್ದು ಇದುವರೆಗೂ 80ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ತೈನಿಯರನ್ನು ತಮ್ಮ ಮೂಲ ನೆಲೆಗಳಿಂದ ಹೊರದಬ್ಬುತ್ತಾ ನಿರಾಶ್ರಿತರನ್ನಾಗಿ ಮಾಡಿದೆ. ಈ ಕುರಿತು ವಿಶ್ವಸಂಸ್ಥೆ ಇದುವರೆಗೂ 72 ಒಪ್ಪಂದಗಳನ್ನು ಇಸ್ರೇಲ್ ಮೇಲೆ ಹೇರಿದ್ದರೂ ಸಹ ಆ ಎಲ್ಲಾ ಒಪ್ಪಂದಗಳನ್ನು ಇಸ್ರೇಲ್ ಯಾವುದೇ ಬೆಲೆ ನೀಡದೆ ಮುರಿದಿದೆ. ಆದರೂ ವಿಶ್ವಸಂಸ್ಥೆ ಅದರ ಮೇಲೆ ಕ್ರಮ ಕೈಗೊಳ್ಳದೆ ಪಕ್ಷಪಾತತನ ಅನುಸರಿಸುತ್ತಿದೆ ಎಂದು ದೂರಿದರು.
ಈ ವರ್ಷವೂ ಇಸ್ರೇಲ್‍ನ ಕ್ರೂರ ದಾಳಿಗೆ 680 ಪ್ಯಾಲೆಸ್ತೇನಿಯರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಅರ್ದಕ್ಕೂ ಹೆಚ್ಚು ಜನ ಮಕ್ಕಳಾಗಿರುವುದು ದುರ್ದೈವ ಎಂದರು.
ಇಸ್ರೇಲ್‍ನ ದಾಳಿಗೆ ಪ್ಯಾಲೇಸ್ತೈನ್‍ನಿಂದ ಕೆಲ ಭಯೋತ್ಪಾದಕರು ಪ್ರತಿ ದಾಳಿ ಮಾಡುತ್ತಿರುವುದು ಕೂಡ ಸಮರ್ಥನೀಯವಲ್ಲ. ಏಕೆಂದರೆ ಈ ಸಮಸ್ಯೆಗೆ ಯುದ್ಧ ಪರಿಹಾರವಲ್ಲ. ಎರೆಡೂ ರಾಷ್ಟ್ರಗಳ ಅಸ್ತಿತ್ವವನ್ನು ಘೋಷಿಸಿ ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ಪರಸ್ಪರರ ಸ್ವಯಂ ಆಡಳಿತವನ್ನು ಗೌರವಿಸುತ್ತಾ ಇರುವ ಪರಿಸ್ಥಿತಿಯನ್ನು ವಿಶ್ವಸಂಸ್ಥೆ ಮಾಡಬೇಕು, ಮತ್ತು ಇದರಲ್ಲಿ ಪಕ್ಷಪಾತತನ ಮಾಡಬಾರುದು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲಕ್ಷ್ಮಣ್ ಚೀರನಹಳ್ಳಿಯವರು, ಈ ಸಮಸ್ಯೆಯಿಂದ ಲಾಭ ಮಾಡಿಕೊಳ್ಳುತ್ತಿರುವ ಅಮೆರಿಕ ಮತ್ತು ಇಂಗ್ಲೆಂಡ್ ತಮ್ಮ ಧನದಾಯಿತನದ ನೀತಿಯನ್ನು ಕೈಬಿಡಬೇಕು ಮತ್ತು ಪ್ರತಿ ರಾಷ್ಟ್ರವೂ ಸಹ ಈ ವಿಚಾರದಲ್ಲಿ ತಮ್ಮ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು ಅಂದರು.

ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರಾದ ಟಿ.ಮಂಜುಳಾ ಪರಮೇಶ್, ಉಪಾಧ್ಯಕ್ಷರಾಗಿ ಸುಜಾತ ಆಯ್ಕೆ .

ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರಾದ ಟಿ.ಮಂಜುಳಾ ಪರಮೇಶ್, ಉಪಾಧ್ಯಕ್ಷರಾಗಿ ಸುಜಾತ ಆಯ್ಕೆ
    ಮಂಡ್ಯ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನದ ಮೂರನೇ ಅವಧಿಗೆ ಅಧ್ಯಕ್ಷರಾಗಿ ಟಿ.ಮಂಜುಳಾ ಪರಮೇಶ್ ಹಾಗೂ ಉಪಾಧ್ಯಕ್ಷರಾಗಿ ಸುಜಾತ ಅವರು ಅವಿರೋಧವಾಗಿ ಆಯ್ಕೆಯಾಗಿದೆ.
    ಚುನಾವಣಾಧಿಕಾರಿಗಳೂ ಆಗಿರುವ ಮೈಸೂರು ಪ್ರಾದೇಶಿಕ ಆಯುಕ್ತರಾದ ಎಂ.ವಿ. ಜಯಂತಿ ಅವರು ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಶುಕ್ರವಾರ ಜಿಲ್ಲಾ ಪಂಚಾಯತ್‍ನ ಕಾವೇರಿ ಸಭಾಂಗಣದಲ್ಲಿ ಘೋಷಿಸಿದರು.
ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಅವಧಿಯು 2016ರ ಫೆಬ್ರವರಿ 14ರ ವರೆಗೆ ಇರುತ್ತದೆ ಎಂದು ಅವರು ಪ್ರಾದೇಶಿಕ ಆಯುಕ್ತರು ತಿಳಿಸಿದರು.

ಕಾನೂನು ಬಾಹಿರ ಕೃತ್ಯಕ್ಕೆ ಕ್ಷಮೆ ಬೇಡ: ಡಾ. ಅಜಯ್ ನಾಗಭೂಷಣ್

ಕಾನೂನು ಬಾಹಿರ ಕೃತ್ಯಕ್ಕೆ ಕ್ಷಮೆ ಬೇಡ: ಡಾ. ಅಜಯ್ ನಾಗಭೂಷಣ್
        ಮಂಡ್ಯ, ಜುಲೈ 25. ಮಕ್ಕಳ ರಕ್ಷಣೆ ವಿಚಾರದಲ್ಲಿ ಯಾವುದೇ ರಾಜಿಗೆ ಒಳಗಾಗದೆ ಕಾನೂನು ಬಾಹಿರ ಕೃತ್ಯ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎಂ.ಎನ್. ಅಜಯ್ ನಾಗಭೂಷಣ್ ಅವರು ಹೇಳಿದರು.
    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಬಾಲ್ಯ ವಿವಾಹ ಕಾನೂನಿನ ಪ್ರಕಾರ ಅಪರಾಧ. ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ ಬಂಧನಕ್ಕೆ ಒಳಗಾದವರು ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪ್ರಕರಣಗಳು ಜರುಗಿದಾಗ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾಮೂಹಿಕ ವಿವಾಹ ಏರ್ಪಡಿಸುವವರು ವಧು ವರರ ವಯಸ್ಸನ್ನು ಸಾಕಷ್ಟು ಮುಂಚಿತವಾಗಿ ದೃಢಪಡಿಸಿಕೊಳ್ಳಬೇಕು ಎಂದು ಹೇಳಿದರು.
    ಬಾಲಕಿಯರ ಹಾಗೂ ಬಾಲಕರ ಬಾಲ ಮಂದಿರದಿಂದ ಬಿಡುಗಡೆಯಾದ ಮಕ್ಕಳು ಪೋಷಕರ ಜೊತೆ ಸೇರಿದ ನಂತರ ಸಹಜವಾಗಿ ಬೆಳವಣಿಗೆ ಆಗುತ್ತಿದ್ದಾರೆ ಎಂಬುದನ್ನು ಪದೇ ಪದೇ ಪರಿಶೀಲಸಬೇಕು. ಬಾಲಕಿಯ ಪೋಷಕರ ಬಳಿಗೆ ಆಗಾಗ ಮಹಿಳಾ ಅಧಿಕಾರಿಗಳನ್ನು ಕಳುಹಿಸುವ ವ್ಯವಸ್ಥೆ ಮಾಡುವಂತೆ ಜಿಲ್ಲಾ ಮಕ್ಕಳ ರಕ್ಷಣ ಸಮಿತಿ ಅಧಿಕಾರಿಗಳಿಗೆ ಸೂಚಿಸಿದರು.
    ಮಕ್ಕಳನ್ನು ದತ್ತು ಪಡೆದುಕೊಂಡವರು ದತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಸದಂತೆ ಕ್ರಮ ವಹಿಸಬೇಕು. ವಿದೇಶದಲ್ಲಿರುವವರು ದತ್ತು ಕೇಳಲು ಬಂದಾಗ ಸಾಧ್ಯವಾದಷ್ಟು ನಿರಾಕರಿಸುವುದು ಸೂಕ್ತ ಎಂದು ಹೇಳಿದರು.
    ಪ್ರೇಮ ಪ್ರಕರಣಗಳಲ್ಲಿ ಓಡಿ ಹೋಗುವ ಅಪ್ರಾಪ್ತ ಹೆಣ್ಣು ಮಕ್ಕಳು ಮುಂದೆ ಹಲವಾರು ತೊಂದರೆಗಳಿಗೆ ಸಿಲುಕುತ್ತಾರೆ. ಈ ಬಗ್ಗೆ ಸಾಕ್ಷ್ಯಚಿತ್ರಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
    ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಡಾ. ಎಸ್.ದಿವಾಕರ್ ಅವರು ಮಾತನಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕವು 2013-14 ಸಾಲಿನಿಂದ ಈ ವರೆಗೆ ವಿವಿಧ ಸಮಸ್ಯೆಗಳಿಗೆ ಒಳಗಾದ 117 ಮಕ್ಕಳನ್ನು ರಕ್ಷಣೆ ಮಾಡಿದೆ. ಈ ಪೈಕಿ 39 ಬಾಲ್ಯ ವಿವಾಹ ಪ್ರಕರಣಗಳು, 8 ನಿರ್ಗತಿಕ ಹಾಗೂ ಪರಿತ್ಯಕ್ತ ಮಕ್ಕಳು, 5 ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಪ್ರೇಮ ಪ್ರಕರಣಗಳಿಗೆ ಒಳಗಾದ 8 ಮಕ್ಕಳು 7 ಬಾಲ ಕಾರ್ಮಿಕರು, ಭಿಕ್ಷಾಟನೆಯಲ್ಲಿ ತೊಡಗಿದ್ದ 10 ಮಕ್ಕಳ ಪ್ರಕರಣಗಳು ಸೇರಿವೆ ಎಂದು ತಿಳಿಸಿದರು.
    ಬಾಲಕರ ಹಾಗೂ ಬಾಲಕಿಯರ ಬಾಲ ಮಂದಿರಕ್ಕೆ 2013-14 ನೇ ಸಾಲಿನಲ್ಲಿ 245 ಹಾಗೂ 2014-15 ನೇ ಸಾಲಿನಲ್ಲಿ ಈ ವರೆಗೆ 44 ಮಕ್ಕಳು ದಾಖಲಾಗಿ ಸೌಲಭ್ಯ ಪಡೆದಿದ್ದಾರೆ ಎಂದು ತಿಳಿಸಿದರು.
    ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಚಂದ್ರಶೇಖರಯ್ಯ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಮುಜೀಬ್ ಉನ್ನೀನ, ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್‍ಚಂದ್ರಗುರು, ಬಡ್ರ್ಸ್ ಸಂಸ್ಥೆ ಮುಖ್ಯಸ್ಥರಾದ ಮಿಕ್ಕೆರೆ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.