Thursday 12 May 2016

 ನೀತಿಸಂಹಿತೆ ಪಾಲನೆಗೆ ಪ್ರಾದೇಶಿಕ ಆಯುಕ್ತರ ಸೂಚನೆ
ಮೈಸೂರು,ಮೇ.12. ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಅಧಿಸೂಚನೆ ಮೇ 16 ರಂದು ಪ್ರಕಟಗೊಳ್ಳಲಿದ್ದು, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಮಾದರಿ  ನೀತಿಸಂಹಿತೆಯು ಜೂನ್ 15 ರವರೆಗೆ ಜಾರಿಯಲ್ಲಿರಲಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ  ಕಟ್ಟುನಿಟ್ಟಾಗಿ ನೀತಿಸಂಹಿತೆ ಪಾಲಿಸುವಂತೆ ಮೈಸೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿ ಎ.ಎಂ. ಕುಂಜಪ್ಪ ಅವರು ತಿಳಿಸಿದರು.
 ಅವರು ಇಂದು ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಸಂಬಂಧ ನಡೆದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷಾಧಿಕಾರಿಗಳು, ಅಬಕಾರಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಚುನಾವಣೆಗೆ ಜಿಲ್ಲಾಧಿಕಾರಿ ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದು, ಚುನಾವಣಾ ಕಾರ್ಯದಲ್ಲಿ ಯಾವುದೇ ಲೋಪ ಉಂಟಾಗದಂತೆ ಕಾರ್ಯನಿರ್ವಹಿಸಬೇಕು. ಚುನಾವಣಾ ಕಾರ್ಯಗಳಿಗೆ ಹೆಚ್ಚಾಗಿ ಅನುಭವವಿರುವ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವಂತೆ ತಿಳಿಸಿದರು.
ನಾಮಪತ್ರಗಳನ್ನು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಗೆ ಅಭ್ಯರ್ಥಿಗಳು ಸಲ್ಲಿಸಬೇಕಿದ್ದು, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಚೇರಿಯ 100 ಮೀ. ವ್ಯಾಪ್ತಿಯೊಳಗೆ ಮೂರು ವಾಹನಗಳಿಗೆ ಮಾತ್ರ ಪ್ರವೇಶವಿರುತ್ತದೆ.  ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಐದು ಜನರಿಗೆ ಮಾತ್ರ ಕಚೇರಿಗೆ ಪ್ರವೇಶವಿರುತ್ತದೆ. ಈ ನಿಟ್ಟಿನಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತರು ಸೂಕ್ತ ಕ್ರಮವಹಿಸÀಬೇಕು ಎಂದರು.
ಚುನಾವಣೆಗೆ ಸ್ಪರ್ಧಿಸುವವರ ವಯಸ್ಸು 30ಕ್ಕೂ ಕಡಿಮೆ ಇರಕೂಡದು. ಕರ್ನಾಟಕ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಬೇಕು. ಕಾನೂನಿ ಅಡಿಯಲ್ಲಿ ಅನರ್ಹರಾಗಿರಬಾರದು. ನಾಮಪತ್ರದೊಂದಿಗೆ ಮತದಾರರಾಗಿದ್ದ ಬಗ್ಗೆ ಸಂಬಂಧಿಸಿದ ಮತದಾರರ ನೋಂದಾಣಾಧಿಕಾರಿ/ಸಹಾಯಕ ನೋಂದಾಣಾಧಿಕಾರಿಗಳಿಂದ ಮತದಾರರ ಪಟ್ಟಿಯ ದೃಢೀಕೃತ ನಕಲು ಲಗತ್ತಿಸಬೇಕು. ನಾಮನಿರ್ದೇಶನದ ಪತ್ರದಲ್ಲಿ ಕನಿಷ್ಠ ಹತ್ತು ಮತದಾರರು ಪ್ರಸ್ತಾಪಕರಾಗಿ ಸಹಿ ಮಾಡಿರಬೇಕು ಮತ್ತು ಪ್ರತಿ ಅಭ್ಯರ್ಥಿ ರೂ. 10,000 ಠೇವಣಿ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ರೂ. 5,000 ಠೇವಣಿ ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವರು ಸಕ್ಷಮ ಪ್ರಾಧಿಕಾರದಿಂದ ಪಡೆದ ದೃಢೀಕರಣ ಪತ್ರ ಸಲ್ಲಿಸಬೇಕು ಎಂದರು.    
 ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿರುವ ಅಂತರರಾಜ್ಯ ಗಡಿ ಪ್ರದೇಶಗಳಲ್ಲಿ  ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಿ ಹೆಚ್ಚಿನ ನಿಗಾ ವಹಿಸಬೇಕು. ಚೆಕ್ ಪೋಸ್ಟ್‍ಗಳಲ್ಲಿ ಪರಿಶೀಲನೆ ನಡೆಸಲು ಅಬಕಾರಿ, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ಶೀಘ್ರ ರಚಿಸಬೇಕು ಎಂದರು.
1200 ಮತದಾರರಿಗೆ ಒಂದು ಮತಕೇಂದ್ರ ಸ್ಥಾಪಿಸಬೇಕಿದ್ದು, ಈ ಹಿಂದೆ ನಡೆದ ಚುನಾವಣೆಯಲ್ಲಿ 116 ಮತ ಕೇಂದ್ರಗಳನ್ನು ತೆರೆಯಲಾಗಿತ್ತು. ಈ ಬಾರಿ ಮತ ಕೇಂದ್ರಗಳ ಸಂಖ್ಯೆ 130ಕ್ಕೆ ಹೆಚ್ಚಳವಾಗುವ ಸಾದ್ಯತೆ ಇದ್ದು, ಮತ ಕೇಂದ್ರಗಳ ಹೆಚ್ಚಳದ ಬಗ್ಗೆ ಮಾಹಿತಿ ಸಲ್ಲಿಸುವುದು. ಮತ ಕೇಂದ್ರಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸುವುದು ಹಾಗೂ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತ ಕೇಂದ್ರಗಳ ಪಟ್ಟಿಯನ್ನು ಸಲ್ಲಿಸುವಂತೆ  ತಿಳಿಸಿದರು.
ದಿನಾಂಕ 18-01-2016ಕ್ಕೆ ಮೈಸೂರು ಜಿಲ್ಲೆಯಲ್ಲಿ 31271 ಪುರುಷ ಹಾಗೂ 14633 ಮಹಿಳಾ ಮತದಾರರು ಸೇರಿದಂತೆಒಟ್ಟು 45,904 ಮತದಾರರಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 21062 ಪುರುಷ ಹಾಗೂ 8257 ಮಹಿಳಾ ಮತದಾರರು ಸೇರಿದಂತೆಒಟ್ಟು 29,319 ಮತದಾರರಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ 5950 ಪುರುಷ ಹಾಗೂ 1645 ಮಹಿಳಾ ಮತದಾರರು ಸೇರಿದಂತೆಒಟ್ಟು 7595 ಮತದಾರರಿದ್ದಾರೆ. ಹಾಸನ ಜಿಲ್ಲೆಯಲ್ಲಿ 15745 ಪುರುಷ 6694 ಮಹಿಳಾ ಹಾಗೂ 2 ಇತರೆ ಮತದಾರರು ಸೇರಿದಂತೆ ಒಟ್ಟು 22,441 ಮತದಾರರಿದ್ದಾರೆ. ಒಟ್ಟಾರೆ ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ 74028 ಪುರುಷ, 31129 ಮಹಿಳಾ ಮತ್ತು 2 ಇತರೆ ಮತದಾರರು ಸೇರಿದಂತೆ ಒಟ್ಟು 105259 ಮತದಾರರಿದ್ದಾರೆ. ಮೇ 16 ರವರಗೆ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದಾಗಿದ್ದು ಮತದಾರರ ಸಂಖ್ಯೆ ಹೆಚ್ಚಳವಾಗಲಿದೆ ಎಂದರು.
     ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ  ನಡೆಯುವ ಸಭೆ ಸಮಾರಂಭ, ಸಾಂಸ್ಕøತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು. ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ಸೂಚನೆಗಳನ್ನು ಚುನಾವಣಾ ಆಯೋಗ ನೀಡಲಿದ್ದು, ಜಿಲ್ಲಾಧಿಕಾರಿಗಳಿಗೆ ಚುನಾವಣೆಯ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯನ್ನು ಸಂಪರ್ಕಿಸದೇ ನೇರವಾಗಿ ಚುನಾವಣಾ ಆಯೋಗವನ್ನು ಸಂಪರ್ಕಿಸುವುದು ಎಂದರು.
ಚುನಾವಣಾ ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ನಾಲ್ಕು ಜಿಲ್ಲೆಗಳಲ್ಲಿ ಒಂದೇ ವಾಹನ ಬಳಸುತ್ತಿದ್ದಲ್ಲಿ ಅಂತಹ ವಾಹನಗಳಿಗೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಅನುಮತಿ ಪಡೆದುಕೊಳ್ಳುವುದು. ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ವಾಹನಗಳನ್ನು ಬಳಸುತ್ತಿದ್ದಲ್ಲಿ ಸಂಬಂದಿಸಿದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆದುಕೊಳ್ಳುವುದು. ಚುನಾವಣಾ ಪ್ರಚಾರಕ್ಕೆ ಸ್ಥಳದ ಅನುಮತಿ ಸ್ಥಳದ ಪಡೆಯುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ಸಲ್ಲಿಸಿ ಅನುಮತಿ ಪಡೆದ ಪತ್ರವನ್ನು ನಂತರ ಸಂಬಂದಿಸಿದ ಪೊಲೀಸ್ ಇಲಾಖೆಗೆ ಸಲ್ಲಿಸುವುದು ಎಂದರು.
ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ವೇಳಾಪಟ್ಟಿಯು ಮೇ 16 ರಂದು ಪ್ರಕಟಗೊಳ್ಳಲಿದ್ದು, ಮೇ 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮೇ 24 ರಂದು ನಾಮಪತ್ರಗಳು ಪರಿಶೀಲನೆ ಕಾರ್ಯ ನಡೆಯಲಿದ್ದು, ಮೇ 26 ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನ. ಜೂನ್ 9 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಜೂನ್ 13 ರಂದು ಎಣಿಕೆ ಕಾರ್ಯ ನೆರವೇರಲಿದೆ. ನೀತಿಸಂಹಿತೆಯು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ಜೂನ್ 15 ರವರೆಗೂ ಜಾರಿಯಲ್ಲಿರುತ್ತದೆ ಎಂದರು.
     ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ, ಮಂಡ್ಯ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್, ಹಾಸನ ಜಿಲ್ಲಾಧಿಕಾರಿ ಉಮೇಶ್, ಚಾಮರಾಜನಗರ ಜಿಲ್ಲಾಧಿಕಾರಿ ರಾಮು, ಹೆಚ್ಚುವರಿ ಆಯುಕ್ತರಾದ ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷಾಧಿಕಾರಿಗಳು, ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. (ಛಾಯಾಚಿತ್ರ ಲಗತ್ತಿಸಿದೆ).
ಯೋಜನೆ ಅನುಷ್ಠಾನ ಮಾಡುವಲ್ಲಿ ಯಶಸ್ವಿ : ಆಯೋಗದ ಸದಸ್ಯರು
     ಮೈಸೂರು,ಮೇ.12. ಮೈಸೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮತ್ತು ಯೋಜನಾ ಸಮನ್ವಯಾಧಿಕಾರಿಗಳು ಸರ್ಕಾರಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರದಿಂದ ಮೀಸಲಿಟ್ಟ ಹಣವನ್ನು ಪರಿಶಿಷ್ಟ ಜಾತಿ/ಪಂಗಡದವರಿಗೆ ತಲುಪಿಸುವಲ್ಲಿ ಮತ್ತು ಏಳಿಗೆಗೆ ಶ್ರಮ ವಹಿಸಿರುವುದು ತಿಳಿದು ಬಂದಿರುತ್ತದೆ ಎಂದು  ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯರುಗಳಾದ ಎಂ. ಕುಂಬಯ್ಯ ಮತ್ತು ಎನ್. ದಿವಾಕರ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    ಅವರು ಮೇ 7 ರಿಂದ 10 ರವರೆಗೆ ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಕೆಲವು ದಲಿತ ಕಾಲೋನಿಗಳು ಹಾಗೂ ಗಿರಿಜನ ಹಾಡಿಗಳಿಗೆ ಭೇಟಿ ನೀಡಿ ಕುಂದುಕೊರತೆಗಳನ್ನು ವಿಚಾರಿಸಿದ ನಂತರ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
    ಕರ್ನಾಟಕ ಪ್ರಾಚ್ಯ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪರಿಶಿಷ್ಟ ಜಾತಿ/ ಪಂಗಡಗಳಿಗೆ ತಲುಪಬೇಕಾದ ಯಾವುದೇ ವಿಧದವಾದ ಸವಲತ್ತುಗಳನ್ನು ಒದಗಿಸದೇ ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನವನ್ನು ಖರ್ಚು ಮಾಡಿರುವುದಿಲ್ಲ. ಸರ್ಕಾರಿ ಆದೇಶ ಸಂಖ್ಯೆ ಎಸ್.ಡಬ್ಲ್ಯೂಡಿ. 34 ಬಿ.ಸಿ.ಎ. 2004 ಬೆಂಗಳೂರು ದಿನಾಂಕ 10-03-2005ರ ಪ್ರಕಾರ ಪರಿಶಿಷ್ಟ ಜಾತಿ/ಪಂಗಡಗಳ ನಿರುದ್ಯೋಗಿಗಳಿಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಅಡಿಯಲ್ಲಿ ನಿಯಮಾನುಸಾರ ಗುತ್ತಿಗೆಗಳನ್ನು ನೀಡಿರುವುದಿಲ್ಲ. ಇವರು ಸ್ವಜನ ಪಕ್ಷಪಾತವಾಗಿ ಇಷ್ಟಾನುಸಾರ ಗುತ್ತಿಗೆ ನೀಡಿರುವುದು ಕಂಡುಬಂದಿದ್ದು, ಭಾರತ ಸಂವಿಧಾನದ ಅನುಚ್ಫೇಧ 46ರನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಇವರಿಗೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ವತಿಯಿಂದ ನೋಟೀಸ್ ಜಾರಿ ಮಾಡಲಾಗಿದೆ.
    ಮೇ 10 ರಂದು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್.ಐ.ಇ) ಕಾಲೇಜಿಗೆ ಭೇಟಿ ನೀಡಿ ಮೀಸಲಾತಿ ಬಗ್ಗೆ ವಿಚಾರಣೆ ಮಾಡಿದಾಗ, ಸರಿಯಾಗಿ ಮೀಸಲಾತಿ ನಿಯಮವನ್ನು ಅನುಸರಿಸದೇ ಇರುವುದು ಕಂಡು ಬಂದಿದ್ದು ಇವರಿಗೆ ಸಹ ಆಯೋಗದ ವತಿಯಿಂದ ನೋಟೀಸ್ ಜಾರಿ ಮಾಡಲಾಗಿದೆ ಎಂದು ಆಯೋಗದ ಸದಸ್ಯರುಗಳಾದ ಎಂ. ಕುಂಬಯ್ಯ ಮತ್ತು ಎನ್. ದಿವಾಕರ ಅವರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಛಾಯಾಚಿತ್ರ ಲಗತ್ತಿಸಿದೆ).
ಮೇ 13 ರಂದು ಭಗೀರಥ ಜಯಂತಿ
      ಮೈಸೂರು,ಮೇ.12. ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ  ಮಾದರಿ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಮೇ 13 ರಂದು ಬೆಳಿಗ್ಗೆ 10-30ಕ್ಕೆ ಕಲಾಮಂದಿರದಲ್ಲಿ ಶ್ರೀ ಭಗೀರಥ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು. ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಡಿ. ಜಗನ್ನಾಥ್ ಸಾಗರ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
      ಮೇ 13 ರಂದು ಬೆಳಿಗ್ಗೆ 9 ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ  ಜಿಲ್ಲೆಯ ಉಪ್ಪಾರ ಸಮುದಾಯವರಿಂದ ಮೆರವಣಿಗೆ ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ ಅವರು ತಿಳಿಸಿದ್ದಾರೆ.

ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ
      ಮೈಸೂರು,ಮೇ.12.ಮೈಸೂರಿನ ನಿರ್ಮಿತಿ ಕೇಂದ್ರವು ಅSIಖ-ಅಃಖI-ಖಔಔಖಏಇಇ,  ಸಹಯೋಗದೊಂದಿಗೆ ನಿರ್ಮಾಣ ಕ್ಷೇತ್ರದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸುತ್ತಿರುವ ಮತ್ತು ಉನ್ನತೀಕರಣಗೊಂಡಿರುವ ತಾಂತ್ರಿಕತೆಗಳನ್ನು ಪರಿಚಯಿಸುವ ಮತ್ತು ತಿಳುವಳಿಕೆ ನೀಡುವ ಸಂಬಂಧ ಮೇ 13 ರಂದು ಬೆಳಿಗ್ಗೆ 10-30ಕ್ಕೆ ಕರ್ನಾಟಕ ವಸ್ತುಪ್ರದರ್ಶನ ಆವರಣದಲ್ಲಿರುವ ಪ್ರಾಚ್ಯ ವಸ್ತು ಸಂಗ್ರಹಣಾಲಯ ಮತ್ತು ಪುರತತ್ವ ಇಲಾಖೆ ಸಭಾಂಗಣದಲ್ಲಿ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
    ಜಿಲ್ಲಾಧಿಕಾರಿ ಸಿ.ಶಿಖಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಬೆಟಸೂರ್ ಮಠ್,  ಅSIಖ-ಅಃಖI-ಖಔಔಖಏಇಇ,  ಸ ನಿರ್ದೇಶಕರು, ಹಿರಿಯ ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕೇರಳ-ಕರ್ನಾಟಕ ಗಡಿಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧ
     ಮೈಸೂರು,ಮೇ.12.-ಕೇರಳ ರಾಜ್ಯದಲ್ಲಿ ದಿನಾಂಕ 16-05-2016 ರಂದು ವಿಧಾನಸಭಾ ಚುನಾವಣೆ ಹಾಗೂ ಮತ ಎಣಿಕೆ ಕಾರ್ಯವು ದಿನಾಂಕ 19-05-2016 ರಂದು ನಡೆಯಲಿದೆ. ಚುನಾವಣೆಯು ಮುಕ್ತ, ನ್ಯಾಯ ಸಮ್ಮತ ಶಾಂತಿಯುತವಾಗಿ ನಡೆಸಲು ಕೇರಳ-ಕರ್ನಾಟಕ ಗಡಿಪ್ರದೇಶಗಳ 3 ಕಿ.ಮೀ. ವ್ಯಾಪ್ತಿಯಲ್ಲಿ ದಿನಾಂಕ 16-05-2016 ರಂದು ಚುನಾವಣೆ/ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುಂಚಿತವಾಗಿ ಮತ್ತು ದಿನಾಂಕ 19-05-2016 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿಯವರೆಗೆ ಎಲ್ಲಾ ವಿಧದ ಮದ್ಯದಂಗಡಿಗಳನ್ನು (ಸಿಎಲ್-2, ಸಿಎಲ್-9, ಸಿಎಲ್-7, ಸಿಎಲ್-11ಸಿ, ಸಿಎಲ್-4, ಸಿಎಲ್-6ಎ, ಸಿಎಲ್-8, ಸಿಎಲ್-8ಎ) ಮುಚ್ಚಲು ಮತ್ತು ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆಯನ್ನು ನಿಷೇಧಿಸಿ ಒಣ ದಿವಸಗಳೆಂದು ಜಿಲ್ಲಾಧಿಕಾರಿ ಸಿ. ಶಿಖಾ ಅವರು ಘೋಷಿಸಿ ಆದೇಶ ಹೊರಡಿಸಿರುತ್ತಾರೆ.
    ಮೇ 13 ರಂದು  ಹಿರಿಯ  ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದ ಉದ್ಘಾಟನೆ
      ಮೈಸೂರು,ಮೇ.12.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಹಾಗೂ ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಮೇ 13 ರಂದು ಬೆಳಿಗ್ಗೆ 11 ಗಂಟೆಗೆ ಕುವೆಂಪುನಗರ 2ನೇ ಹಂತದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಯೋಗಮಂದಿರದ ಕಟ್ಟಡದಲ್ಲಿ ಹಿರಿಯ  ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದ ಉದ್ಘಾಟನೆ ನಡೆಯಲಿದೆ.
    ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎಂ.ಕೆ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು.

Wednesday 11 May 2016

ದಕ್ಷಿಣ ಪದವೀಧರರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆ
ನೀತಿಸಂಹಿತೆ ಪಾಲನೆಗೆ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ
ಮೈಸೂರು,ಮೇ.11.ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದು ಅಧಿಕಾರಿಗಳು ಅತ್ಯಂತ ಕಟ್ಟುನಿಟ್ಟಾಗಿ ನೀತಿಸಂಹಿತೆ ಪಾಲನೆಗೆ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಶಿಖಾ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಸಂಬಂಧ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮೇ 10 ರಿಂದಲೇ ಸದಾಚಾರ ಸಂಹಿತೆ ಜಾರಿಗೆ ಬಂದಿದ್ದು, ನೀತಿಸಂಹಿತೆಯು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ಜೂನ್ 15 ರವರೆಗೂ ಇರಲಿದೆ. ಈ ಅವಧಿಯಲ್ಲಿ ಅನುಸರಿಸಬೇಕಿರುವ ಸದಾಚಾರ ಸಂಹಿತೆ ಕುರಿತು ಚುನಾವಣಾ ಆಯೋಗ ಸುತ್ತೋಲೆ ಹೊರಡಿಸಿದೆ. ಈ ಪ್ರಕಾರ ಅಧಿಕಾರಿಗಳು ಅತ್ಯಂತ ಜಾಗರೂಕರಾಗಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ವೇಳಾಪಟ್ಟಿಯು ಮೇ 16 ರಂದು ಪ್ರಕಟಗೊಳ್ಳಲಿದ್ದು, ಮೇ 23 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮೇ 24 ರಂದು ನಾಮಪತ್ರಗಳು ಪರಿಶೀಲನೆ ಕಾರ್ಯ ನಡೆಯಲಿದ್ದು, ಮೇ 26 ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನ. ಜೂನ್ 9 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಜೂನ್ 13 ರಂದು ಎಣಿಕೆ ಕಾರ್ಯ ನೆರವೇರಲಿದೆ. ನೀತಿಸಂಹಿತೆಯು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ಜೂನ್ 15 ರವರೆಗೂ ಜಾರಿಯಲ್ಲಿರುತ್ತದೆ ಎಂದರು.    
ನೀತಿ ಸಂಹಿತೆ ಅವಧಿ ಜಾರಿ ಇರುವ ಸಮಯದಲ್ಲಿ ಉಲ್ಲಂಘನೆ ಪ್ರಕರಣಗಳÀು ಕಂಡುಬಂದಲ್ಲಿ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಬೇಕು. ನೀತಿಸಂಹಿತೆ ಪಾಲನೆ ನಿಗಾ ಕೆಲಸವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕು. ಯಾವುದೇ ನಿರ್ಲಕ್ಷ್ಯ ವಹಿಸದೇ ಚುನಾವಣಾ ಕರ್ತವ್ಯವನ್ನು ಹೊಣೆಗಾರಿಕೆಯಿಂದ ನಿಭಾಯಿಸಬೇಕೆಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಅಧಿಕಾರಿಗಳು ಅನುಮತಿಯಿಲ್ಲದೆ ರಜೆ ಹೋಗುವಂತಿಲ್ಲ. ಪ್ರತಿ ಚುನಾವಣೆ ಸಂದರ್ಭದಲ್ಲೂ ಹೊಸ ವಿಷಯ ನಿಯಮಗಳು ಸೇರ್ಪಡೆಯಾಗುತ್ತವೆ. ಈ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಯಾವುದೇ ಅನುಮಾನ ಗೊಂದಲಗಳಿದ್ದರೆ ಪರಿಹರಿಸಿಕೊಂಡು ಕೆಲಸ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
     ಮತದಾರರ ಪಟ್ಟಿಗೆ ಹೆಸರನ್ನು ಸೇರಿಸುವ ಸಂಬಂಧ ಸ್ವೀಕೃತವಾಗಿರುವ ಎಲ್ಲಾ ಅರ್ಜಿಗಳನ್ನು ಕೂಡಲೇ ಡೇಟಾ ಎಂಟ್ರಿ ಮಾಡಿ ಅನುಮೋದನೆಯನ್ನು ಮೇ 13 ರೊಳಗೆ ನೀಡಲು ಕ್ರಮವಹಿಸುವುದು. ಮೇ 16 ರ ತನಕ ಮಾತ್ರ ಅರ್ಜಿಗಳನ್ನು ಸ್ವೀಕರಿಸುವುದು ಅವುಗಳನ್ನು ಸಹ ಮೇ 23 ರೊಳಗೆ ನಿಯಮಾನುಸಾರ ಇತ್ಯರ್ಥ ಪಡಿಸಲು ಕ್ರಮವಹಿಸುವುದು ಎಂದರು.
    ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ   ಪ್ರಮುಖ ಸ್ಥಳದಲ್ಲಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಬೇಕು.   ಪ್ರಿಂಟಿಂಗ್ ಪ್ರೆಸ್‍ಗಳಿಗೆ ಸೂಚನೆ ನೀಡಿ, ಚುನಾವಣೆ ಸಂಬಂಧ ಯಾವುದೇ ಅಭ್ಯರ್ಥಿಯಾಗಲಿ ಅಥವಾ ರಾಜಕೀಯ ಪಕ್ಷವಾಗಲಿ ಚುನಾವಣಾ ಪ್ರಚಾರ ಸಾವiಗ್ರಿಗಳನ್ನು ಮುದ್ರಣ ಮಾಡಿಸಿಕೊಂಡ ಬಾಬ್ತು ತಾಲ್ಲೂಕು ತಹಶೀಲ್ದಾರ್‍ರವರ ಕಛೇರಿಗೆ ಪ್ರತಿ ದಿನ ಅಪೆಂಡಿಕ್ಸ್ ಎ ಮತ್ತು ಅಪೆಂಡಿಕ್ಸ್ ಬಿ ಯಲ್ಲಿ ಮಾಹಿತಿಯನ್ನು ನೀಡುವಂತೆ ತಿಳಿಸಬೇಕು.  ಚುನಾವಣಾ ಸಾಮಗ್ರಿಗಳನ್ನು ಮುದ್ರಣ ಮಾಡಿದ ಪಕ್ಷದಲ್ಲಿ ಯಾವ ಮುದ್ರಕರು ಮುದ್ರಣ ಮಾಡಿದ್ದಾರೆ, ಮತ್ತು ಎಷ್ಟು ಪ್ರತಿಗಳನ್ನು ಮುದ್ರಣ ಮಾಡಿರುತ್ತಾರೆಂದು ಆ ಪೋಸ್ಟರ್‍ನಲ್ಲಿ ತಪ್ಪದೇ ನಮೂದಿಸಲು ಸೂಚನೆಗಳನ್ನು ಚುನವಣಾ ಅಭ್ಯರ್ಥಿಗಳ ಸಭೆ ಕರೆದು ನೀಡಬೇಕು ಎಂದರು.
    ತಹಶೀಲ್ದಾರಗಳು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹಾಗೂ ಎ.ಪಿ.ಎಂ.ಸಿ ಅಧ್ಯಕ್ಷರ ವಾಹನ ಹಾಗೂ ಸರ್ಕಾರಿ ಅತಿಥಿ ಗೃಹ / ಪ್ರವಾಸಿ ಮಂದಿರ ತಹಶೀಲ್ದಾರ್‍ರವರ ಸುಪರ್ದಿಗೆ ಪಡೆದುಕೊಳ್ಳಬೇಕು. ಅಕ್ರಮ ಮದ್ಯ ತಯಾರಿಸಿರುವ ಕೇಂದ್ರಗಳು, ವಿತರಣಾ ಕೇಂದ್ರಗಳ ಮೇಲೆ ದಾಳಿ ನಡೆಸುವಂತೆ ಹಾಗೂ ಸಭೆ ಸಮಾರಂಭ, ಸಾಂಸ್ಕøತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದು ತಿಳಿಸಿದರು.
     ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಮೈಸೂರು ಮಹಾನಗರಪಾಲಿಕೆ ಆಯುಕ್ತ ಬೆಟಸೂರ ಮಠ್, ಮೈಸೂರು ಉಪವಿಭಾಗಾಧಿಕಾರಿ ಆನಂದ್, ಮೈಸೂರು ನಗರ ಪೊಲೀಸ್ ಉಪ ಆಯುಕ್ತ ಶೇಖರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ದೂರುಗಳಿದ್ದಲ್ಲಿ ಸಲ್ಲಿಸಿ:
ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೇ10 ರಿಂದಲೇ ಸದಾಚಾರ ಸಂಹಿತೆ ಜಾರಿಗೆ ಬಂದಿದ್ದು, ನೀತಿಸಂಹಿತೆಯು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ಜೂನ್ 15 ರವರೆಗೂ ಜಾರಿಯಲ್ಲಿರುತ್ತದೆ. ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ಸಾರ್ವಜನಿಕರು ಈ ಕೆಳಕಂಡ ಅಧಿಕಾರಿಗಳನ್ನು ಅಥವಾ ಜಿಲ್ಲಾ ಕಂಟ್ರೋಲ್ ರೂಂ ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದ್ದಾರೆ. ವಿವರ ಇಂತಿದೆ
ಜಿಲ್ಲಾ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 1077 ಅಥವಾ 0821-2423800
ಕ್ರ.
ಸಂ.
ಅಧಿಕಾರಿಯವರ ವಿವರ
ಶ್ರೀಯುತರು
ಮೊಬೈಲ್ ಸಂಖ್ಯೆ
ಕಛೇರಿ ದೂರವಾಣಿ
ಕಂಟ್ರೋಲ್ ರೂಂ
1
ಸಿ. ರಾಜು
ಉಪ ಆಯುಕ್ತರು, (ಆಡಳಿತ )
ಮೈಸೂರು ಮಹಾನಗರ ಪಾಲಿಕೆ
94498-41199
0821-2418807
0821-2418800
0821-2418816
2
ಸಿ.ಎಲ್.ಆನಂದ್
ಉಪವಿಭಾಗಾಧಿಕಾರಿಗಳು
ಮೈಸೂರು ಉಪವಿಭಾಗ, ಮೈಸೂರು
95358-70900
0821-2422100
-
3
ರಾಜೇಶ್
ಉಪವಿಭಾಗಾಧಿಕಾರಿಗಳು
ಹುಣಸೂರು ಉಪವಿಭಾಗ, ಹುಣಸೂರು
9986502491
08222-252073
-
4
ಎ.ನವೀನ್‍ಜೋಸೆಫ್
ತಹಶೀಲ್ದಾರ್
ಮೈಸೂರು ತಾಲ್ಲೂಕು, ಮೈಸೂರು
99452-54100
0821-2414811
0821-2414812
5
ಹೆಚ್.ರಾಮಪ್ಪ
ತಹಶೀಲ್ದಾರ್,
ನಂಜನಗೂಡು ತಾಲ್ಲೂಕು, ನಂಜನಗೂಡು
94484-14555
08221-226252
08221-223108
6
ಶೂಲದಯ್ಯ
ತಹಶೀಲ್ದಾರ್,
ಟಿ.ನರಸೀಪುರ ತಾಲ್ಲೂಕು,ಟಿ.ನರಸೀಪುರ
98458-80132
08227-261233
08227-260210
7
ಎನ್.ವಂಕಟಾಚಲಪ್ಪ
ತಹಶೀಲ್ದಾರ್,
ಹುಣಸೂರು ತಾಲ್ಲೂಕು, ಹುಣಸೂರು
94800-58094
08222-252040
08222-252040
8
ಹೆಚ್.ಕೆ.ನಾಗರಾಜು
ತಹಶೀಲ್ದಾರ್,
ಕೆ.ಆರ್.ನಗರ ತಾಲ್ಲೂಕು, ಕೆ.ಆರ್.ನಗರ
84948-28571
08223-262234
08223-262371
9
ರಂಗರಾಜು
ತಹಶೀಲ್ದಾರ್,
ಪಿರಿಯಾಪಟ್ಟಣ ತಾಲ್ಲೂಕು, ಪಿರಿಯಾಪಟ್ಟಣ
9449095793
08223-274175
08223-274007
10
ನಂಜುಂಡಯ್ಯ
ತಹಶೀಲ್ದಾರ್
ಹೆಚ್.ಡಿ.ಕೋಟೆ ತಾಲ್ಲೂಕು, ಹೆಚ್.ಡಿ.ಕೋಟೆ
94490-95782
08228-255325
08228-255325


ದರಪಟ್ಟಿ ಆಹ್ವಾನ
      ಮೈಸೂರು,ಮೇ.11-ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಕೋರ್ಟ್ ಹಾಲ್‍ನಲ್ಲಿರುವ ಯು.ಪಿ.ಎಸ್. ಅನ್ನು ಸದರಿ ಕಚೇರಿಯಲ್ಲಿ ತೆರೆದ ಬ್ಯಾಟರಿ ಕೊಠಡಿಗೆ ಸ್ಥಳಾಂತರಿಸಲು ಅಗತ್ಯವಿರುವ ವಿದ್ಯುತ್ ವೈರಿಂಗ್ ಕಾಮಗಾರಿಯನ್ನು ನಿರ್ವಹಿಸಲು ಆಸಕ್ತ ಸಂಸ್ಥೆಗಳಿಂದ ದರಪಟ್ಟಿ ಆಹ್ವಾನಿಸಿದೆ.
     ಆಸಕ್ತ ಸಂಸ್ಥೆಯವರು ಸ್ಥಳ ಪರಿಶೀಲನೆ ಮಾಡಿಕೊಂಡು ಮೇ 16 ರ ಸಂಜೆ 4 ಗಂಟೆಯೊಳಗಾಗಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಗೆ ದರಪಟ್ಟಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಸದರಿ ಕಚೇರಿಯನ್ನು ಸಂಪರ್ಕಿಸುವುದು ಎಂದು ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿ: ನಾಮ ನಿರ್ದೇಶನ ಆಹ್ವಾನ
    ಮೈಸೂರು,ಮೇ.11.ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಪತ್ರಕರ್ತರನ್ನು 2014-15ನೇ ದಿನದರ್ಶೀ ವರ್ಷಗಳ ತಲಾ 50,000 ರೂ ನಗದು ಒಳಗೊಂಡ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಹಾಗೂ ಪತ್ರಿಕಾ ಸಂಘಟನೆಗಳು ಮತ್ತು ಸಂಘ-ಸಂಸ್ಥೆಗಳಿಂದ ನಾಮ ನಿರ್ದೇಶನಗಳನ್ನು ಆಹ್ವಾನಿಸಿದೆ.
ವಾರ್ತಾ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿನ ಪರಿಣಿತರನ್ನೊಳಗೊಂಡ ತ್ರಿಸದಸ್ಯ ಸಮಿತಿಯು ಈ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಲಿದೆ.
ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸುವವರು ಮುದ್ರಣ ಮಾಧಯಮ ಮತ್ತು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಗಳಲ್ಲಿ ಕನಿಷ್ಟ 10 ವರ್ಷಗಳ ಸೇವೆ ಸಲ್ಲಿಸಿರಬೇಕು  ಅಲ್ಲದೆ ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮಕ್ಕೆ ವಿಶೇಷ ಕೊಡುಗೆ ನೀಡಿರಬೇಕು.
ಅಭಿವೃದ್ಧಿ ಪ್ರಶಸ್ತಿ: ಅಭಿವೃದ್ಧಿಗೆ ರಾಜ್ಯದೆಲ್ಲೆಡೆ ಉತ್ತಮ ವಾತಾವರಣ ಕಲ್ಪಿಸಲು ಅನುವಾಗುವಂತೆ ಅಭಿವೃದ್ಧಿಗೆ ಪೂರಕವಾದ ಲೇಖನಗಳನ್ನು ಬರೆದು ಅಭಿವೃದ್ಧಿ ಪ್ರಕ್ರಿಯೆಗೆ ಪುಷ್ಟಿ ನೀಡಿ ಸಮಾಜಕ್ಕೆ ಉಪಕರಿಸುವ ಪತ್ರಕರ್ತರಿಗೆ ರೂ 50,000 ನಗದು ಒಳಗೊಂಡ ವಾರ್ಷಿಕ ಪ್ರಶಸ್ತಿ ನೀಡಲಾಗುವುದು.
ಪರಿಸರ ಪ್ರಶಸ್ತಿ: ಪರಿಸರ ಸಂರಕ್ಷಣೆ ಕುರಿತು ಪೂರಕ ಲೇಖನಗಳನ್ನು ಬರೆದು ರಾಜ್ಯದಲ್ಲಿನ ಪರಿಸರ ಪ್ರಕೃತಿ ಹಾಗೂ ನಿಸರ್ಗದ ಸಮತೋಲನ ಕಾಯ್ದುಕೊಳ್ಳಲು ನೆರವಾಗಿರುವ ಪತ್ರಕರ್ತರಿಗೆ ರೂ 50,000 ನಗದು ಒಳಗೊಂಡ ವಾರ್ಷಿಕ ಪ್ರಶಸ್ತಿ ನೀಡಲಾಗುವುದು.
ಮೊಬೈಲ್ ಸಂಖ್ಯೆ ಒಳಗೊಂಡಂತೆ ಸಂಪರ್ಕ ವಿಳಾಸದೊಂದಿಗೆ ಸ್ವ ವಿವರಗಳು ಹಾಗೂ ಮಾಡಿರುವ ಸಾಧನೆಗಳ ವಿವರಗಳನ್ನು ‘ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಸೌಧ ಸಂಖ್ಯೆ : 17, ಭಗವಾನ್ ಮಹಾವೀರ ರಸ್ತೆ ಬೆಂಗಳೂರು-560001’ ಈ ವಿಳಾಸಕ್ಕೆ ಮೇ 25 ರೊಳಗೆ ಸಲ್ಲಿಸಬಹುದು.
ಅರ್ಜಿಯೊಂದಿಗೆ ತಮ್ಮ ವಿಶೇಷ ಸಾಧನೆಯನ್ನು ಸಮರ್ಥಿಸಲು ತಮ್ಮ ಪ್ರಕಟಿತ ವಿಶೇಷ ಲೇಖನಗಳು, ಲೇಖನಾ ಮಾಲೆಗಳ ಪತ್ರಿಕಾ ತುಣುಕುಗಳು ಅಥವಾ ಪ್ರಕಟಿತ ಪುಸ್ತಕಗಳ ಪ್ರತಿಗಳು ಈಗಾಗಲೇ ಪಡೆದಿರುವ ಗೌರವಗಳ ದಾಖಲೆಗಳನ್ನೂ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ನೈರ್ಮಲ್ಯ ವಾಹಿನಿಯ ಪ್ರವಾಸ ಕಾರ್ಯಕ್ರಮ
     ಮೈಸೂರು,ಮೇ.11.ಮೈಸೂರು ಜಿಲ್ಲಾ ಪಂಚಾಯಿತಿಯ ಸ್ವಚ್ಫ ಭಾರತ್ ಅಭಿಯಾನದ ಮಾಹಿತಿ ಶಿಕ್ಷಣ ಮತ್ತು ಸಂವಹನ(ಐಇಸಿ) ಕಾರ್ಯಕ್ರಮದ ನೈರ್ಮಲ್ಯ ವಾಹಿನಿ ಸಂಚಾರಿ ವಾಹನವು 2016ರ ಮೇ ಮಾಹೆಯಲ್ಲಿ ಮೈಸೂರು, ಕೆ.ಆರ್.ನಗರ, ಹೆಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು ಹಾಗೂ ತಿ.ನರಸೀಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಸ್ವಚ್ಛತೆ, ನೈರ್ಮಲ್ಯ ಮತ್ತು ಆರೋಗ್ಯ ಕಾಪಾಡುವ ಬಗ್ಗೆ ಗ್ರಾಮೀಣ ಜನರಲ್ಲಿ ಸಮೂಹ ಮಾಧ್ಯಮಗಳ ಮೂಲಕ ಅರಿವು ಮೂಡಿಸಲಿದೆ.
ಕೆ.ಆರ್.ನಗರ ತಾಲ್ಲೂಕಿನಲ್ಲಿ ಮೇ 12 ರಂದು ಹನಸೋಗೆ, ಮೇ 18 ರಂದು ಹಂಪಾಪುರ, ಮೇ 25 ರಂದು ಹೆಬ್ಬಾಳು, ಮೇ 30 ರಂದು ಹನಸೋಗೆ, ಮೈಸೂರು ತಾಲ್ಲೂಕಿನಲ್ಲಿ ಮೇ 13 ರಂದು ಕೀಳನಪುರ, ಮೇ 26 ರಂದು ಯಡಕೊಳ, ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಮೇ 16  ರಂದು ನಾಗನಹಳ್ಳಿ,  ಹುಣಸೂರು ತಾಲ್ಲೂಕಿನಲ್ಲಿ ಮೇ 17  ರಂದು ಬೋಳನಹಳ್ಳಿ, ಮೇ 24 ರಂದು ಬಿಜಗನಹಳ್ಳಿ, ತಿ.ನರಸೀಪುರ ತಾಲ್ಲೂಕಿನಲ್ಲಿ ಮೇ 19 ರಂದು ಗರ್ಗೇಶ್ವರಿ, ಮೇ 23 ರಂದು ಸೋಮನಾಥಪುರ, ಮೇ 28 ರಂದು ಕೇತುಪುರ, ನಂಜನಗೂಡು ತಾಲ್ಲೂಕಿನಲ್ಲಿ ಮೇ 20 ರಂದು ದೇಬೂರು, ಮೇ 31 ರಂದು ಹುಳಿಮಾವು ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಮೇ 21 ರಂದು ಬೈಲುಕುಪ್ಪೆ, ಮೇ 27 ರಂದು ಕಣಗಾಲು ಗ್ರಾಮದಲ್ಲಿ ವಾಹನ ಸಂಚರಿಸಲಿದೆ  ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.
ಸ್ಥಗಿತಗೊಂಡಿರುವ ಸಹಕಾರ ಸಂಘಗಳ ಸಮಾಪನೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
    ಮೈಸೂರು,ಮೇ.11-ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಸ್ಥಗಿತಗೊಂಡಿರುವ ಅಗಸನಹುಂಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ., ದೇವಲಾಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ., ಹೆಚ್.ಡಿ.ಕೋಟೆಯ ತಾಲ್ಲೂಕು ಸ್ತ್ರೀಶಕ್ತಿ ಮಹಿಳಾ ಸಹಕಾರ ಸಂಘ ನಿ., ವಡ್ಡರಗುಡಿಯ ಚಿಕ್ಕದೇವಮ್ಮ ಕಲ್ಲುಕುಟಿಕರ ಲೆಬರ್ ಕಂಟ್ರಾಕ್ಟ್ ಸಹಕಾರ ಸಂಘ ನಿ., ಬಿದರಳ್ಳಿಯ ಬಿದರಳ್ಳಿ ವಿವಿದೋದ್ದೇಶ ಸಹಕಾರ ಸಂಘ ನಿ., ಕಾಟವಾಳು ಶ್ರೀ ಹುಲಿಮಾಸ್ತಮ್ಮ ವಿವಿದೋದ್ದೇಶ ಸಹಕಾರ ಸಂಘ ನಿ., ವಡ್ಡರಪಾಳ್ಯದ ಭೀಮನಕೊಲ್ಲಿ ಮಹದೇಶ್ವರ ಸ್ವಾಮಿ ಲೇಬರ್ ಕಂಟ್ರಾಕ್ಟ್ ಸಹಕಾರ ಸಂಘ ನಿ., ಬೀರನಹಳ್ಳಿಯ ಕಾಳಿಕಾಂಬ ಕಲ್ಲುಕುಟಿಕರ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘ ನಿ., ಸರಗೂರಿನ ಬೆಲ್ಲದಕುಪ್ಪೆ ಮಹದೇಶ್ವರ ಸ್ವಾಮಿ ಕಲ್ಲುಕುಟಿಕರ ಲೆಬರ್ ಕಂಟ್ರಾಕ್ಟ್ ಸಹಕಾರ ಸಂಘಗಳು ಸೆಪ್ಟೆಂಬರ್-2015ನೇ ಸಾಲಿನಲ್ಲಿ ನಡೆಸಬೇಕಾಗಿದ್ದ 2014-15ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಸಿರುವ ಬಗ್ಗೆ ಹಾಗೂ 2014-15ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಮೈಸೂರು ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರು, ಹುಣಸೂರು ಉಪವಿಭಾಗದ  ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಥವಾ ಹೆಚ್.ಡಿ.ಕೋಟೆ ತಾಲ್ಲೂಕಿನ ಸಹಕಾರ ಅಭಿವೃದ್ಧಿ ಕಚೇರಿಗೆ ಮಾಹಿತಿ ಸಲ್ಲಿಸಿರುವುದಿಲ್ಲ.
     ಮಾಹಿತಿ ಸಲ್ಲಿಸುವ ಬಗ್ಗೆ  ಸದರಿ ಸಂಘಗಳಿಗೆ ನೋಟೀಸ್ ಜಾರಿ ಮಾಡಿ ಖುದ್ದು ಹಾಜರಾಗುವಂತೆ ತಿಳಿಸಿದ್ದÀರು. ಹಾಜರಾಗಿರುವುದಿಲ್ಲ. ಆದ್ದರಿಂದ  ಸದರಿ ಸಂಘಗಳನ್ನು ಸಮಾಪನೆಗೊಳಿಸುವುದು ಸೂಕ್ತವೆಂದು ಪರಿಗಣಿಸಲಾಗಿದೆ.  ಸಮಾಪನೆಗೊಳಿಸಲುವ ಬಗ್ಗೆ  ಏನಾದರೂ ಆಕ್ಷೇಪಣೆಗಳಿದ್ದಲ್ಲಿ   ಹೆಚ್.ಡಿ.ಕೋಟೆ ತಾಲ್ಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿಗಳ ಕಚೇರಿಗೆಈ ಪ್ರಕಟಣೆ  ಪ್ರಕಟಣೆಗೊಂಡ 15 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸುವುದು.
ಸಿನಿಮಾ ಸಮಯದಲ್ಲಿ ಮೇ 12 ರಂದು ಪಥೇರ್ ಪಾಂಚಾಲಿ
      ಮೈಸೂರು,ಮೇ.11.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಮೈಸೂರು ಫಿಲ್ಮ್ ಸೊಸೈಟಿ ಆಯೋಜಿಸುವ ಸಿನಿಮಾ ಸಮಯದಲ್ಲಿ ಮೇ 12  ರಂದು ಗುರುವಾರ ಸಂಜೆ 6 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಸತ್ಯಜಿತ್ ರೇ ನಿರ್ದೇಶನದ ಪಥೇರ್ ಪಾಂಚಾಲಿ 60ನೇ ವರ್ಷ ಆಚರಣೆ ಸಂಭ್ರಮ ಒಂದು ಸಂವಾದ ನಡೆಯಲಿದೆ.
    ಇದಕ್ಕೂ ಮುನ್ನ ಅಂದು ಸಂಜೆ 5-30 ಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ ಸಾಕ್ಷ್ಯಚಿತ್ರವÀನ್ನು ಪ್ರದರ್ಶಿಸಲಾಗುವುದು.
     ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ.
                                                       
   ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ
    ಮೈಸೂರು,ಮೇ.11.-ಮೈಸೂರು ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ  2016-17 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೊಮಾ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
     ಆಸಕ್ತರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಉಳಿತಾಯ ಖಾತೆ ಚಲನ್ ಪಡೆದು, ಕಾರ್ಯ ನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇವರ ಉಳಿತಾಯ ಖಾತೆ ಸಂಖ್ಯೆ: ಇಆ-ಏಇಂ-ಆಅಇಖಿ-2016 64097386381 ಕ್ಕೆ ಸಾಮಾನ್ಯ ಅಭ್ಯರ್ಥಿಗಳು ಹಾಗೂ ಇತರೆ ವರ್ಗ ರೂ. 100-00  ಹಾಗೂ Sಅ/Sಖಿ/ಛಿಚಿಣ-I  ಅಭ್ಯರ್ಥಿಗಳು ರೂ-50/- ಗಳ ಶುಲ್ಕವನ್ನು ಜಮೆ ಮಾಡಿ, ಚಲನ್ ಪ್ರತಿಯನ್ನು ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಮೈಸೂರು ಸಂಸ್ಧೆ ಇವರಿಗೆ ಸಲ್ಲಿಸಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಮೇ 30 ರೊಳಗಾಗಿ ಸಲ್ಲಿಸುವುದು.
      ಅರ್ಜಿ ಪಡೆದ ನಂತರ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ದಾಖಲೆ ಪರಿಶೀಲನೆ, ಆನ್‍ಲೈನ್ ಅರ್ಜಿ ಸಲ್ಲಿಕೆ/ ಆಪ್ಷನ್ ಎಂಟ್ರಿ ಸಹಾಯ ಕೇಂದ್ರ (ಆoಛಿumeಟಿಣ ಗಿeಡಿiಜಿiಛಿಚಿಣioಟಿ ಅum ಔಟಿ ಐiಟಿe ಂಠಿಠಿಟiಛಿಚಿಣioಟಿ Submissioಟಿ ಅeಟಿಣಡಿe/ಔಠಿಣioಟಿ ಇಟಿಣಡಿಥಿ ಊeಟಠಿ ಅeಟಿಣeಡಿes)” ಇರುತ್ತದೆ.
      ಮಾಹಿತಿ ಪುಸ್ತಕದಲ್ಲಿ ನೀಡಿರುವ ಮೂಲ ದಾಖಲಾತಿಗಳು, ಮೂಲ ದಾಖಲಾತಿಗಳ 1 ಜೊತೆ ದೃಢೀಕೃತ ಜೆರಾಕ್ಸ್ ಪ್ರತಿ,  ಮೊಬೈಲ್ ಸಂಖ್ಯೆ ಮತ್ತು  ಈ ಮೇಲ್ ವಿಳಾಸ ಸಹ ಹೊಂದಿರಬೇಕು. “ದಾಖಲೆ ಪರಿಶೀಲನೆ ಹಾಗೂ ಆನ್‍ಲೈನ್ ಅರ್ಜಿ ಸಲ್ಲಿಕೆ/ ಆಪ್ಷನ್ ಎಂಟ್ರಿ ಸಹಾಯ ಕೇಂದ್ರದಲ್ಲಿ ಖುದ್ದು ಹಾಜರಾಗಿ ದಾಖಲಾತಿ ಪರಿಶೀಲಿಸಿಕೊಂಡು ಆನ್‍ಲೈನ್‍ನಲ್ಲಿ ಅಪ್ ಲೋಡ್   ಮಾಡಿಸಿ ಭರ್ತಿ ಮಾಡಿದ ಅರ್ಜಿಗೆ ಅomಠಿuಣeಡಿ ಉeಟಿeಡಿಚಿಣeಜ  ಪ್ರತಿ ಹಾಗೂ ಸ್ವೀಕೃತಿ   ಪಡೆಯುವುದು.
     ಹೆಚ್ಚಿನ ಮಾಹಿತಿಗೆ ತಿತಿತಿ.ಜಣe.ಞಚಿಡಿ.ಟಿiಛಿ.iಟಿ  / ತಿತಿತಿ.ಞeಚಿ.ಞಚಿಡಿ.ಟಿiಛಿ.iಟಿ   ಅಥವಾ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಸಂಸ್ಧೆಯನ್ನು  ಸಂಪರ್ಕಿಸುವುದು.
ಕಾರ್ಖಾನೆಗಳ ಸುತ್ತಮುತ್ತ ಪಾಲಿಕೆಯಿಂದ ಸ್ವಚ್ಫತಾ ಕಾರ್ಯಕ್ರಮ
ಮೈಸೂರು,ಮೇ.11. ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ವಿಶ್ವ ಕಾರ್ಮಿಕ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಕಾರ್ಖಾನೆಗಳ ಸುತ್ತಮುತ್ತಲಿನ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮೇ2 ರಂದು ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ-2ರಲ್ಲಿ ವಾರ್ಡ್ ನಂ 11 ರ ವಿಶ್ವೇಶ್ವರ ನಗರದ ಫ್ಲೋರ್‍ಮಿಲ್ ಫ್ಯಾಕ್ಟರಿ ಹಾಗೂ ಜಾಕಿ ಫ್ಯಾಕ್ಟರಿಯ ಸುತ್ತಮುತ್ತಲಿನ ಆವರಣವನ್ನು ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಖಾನೆ ಸಿಬ್ಬಂದಿಗಳೊಂದಿಗೆ ಸ್ವಚ್ಛತಾ ಕಾರ್ಯ ನಡೆಸಿದರು.

ಶಾಲೆಗಳಲ್ಲಿ ಆರ್.ಟಿ.ಇ. ಪ್ರವೇಶ: ಹೆಚ್ಚುವರಿ ಶುಲ್ಕ ಪಡೆದರೆ ದೂರು ನೀಡಲು ಜಿಲ್ಲಾಧಿಕಾರಿ ಸೂಚನೆ


 ಶಾಲೆಗಳಲ್ಲಿ ಆರ್.ಟಿ.ಇ. ಪ್ರವೇಶ:
ಹೆಚ್ಚುವರಿ ಶುಲ್ಕ ಪಡೆದರೆ ದೂರು ನೀಡಲು ಜಿಲ್ಲಾಧಿಕಾರಿ ಸೂಚನೆ.
ಮಂಡ್ಯ, ಮೇ. 11. ಶಿಕ್ಷಣ ಹಕ್ಕು (ಆರ್.ಟಿ.ಇ.) ಕಾಯ್ದೆಯ ಅನ್ವಯ ಖಾಸಗಿ ಶಾಲೆಗಳು ಪ್ರವೇಶ ನೀಡಲು ನಿಗದಿಗಿಂತ ಹೆಚ್ಚು ಶುಲ್ಕ ಪಡೆದರೆ ದೂರು ನೀಡುವಂತೆ ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್ ಅವರು ಪೋಷಕರಿಗೆ ತಿಳಿಸಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಗೃಹ ಕಚೇರಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಆರ್‍ಟಿಇ ಪ್ರಕ್ರಿಯೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಪ್ರವೇಶಕ್ಕೆ ಸರ್ಕಾರ ನಿಗದಿಪಡಿಸಿದ ಶುಲ್ಕ ಮತ್ತಿತರ ವಿವರಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲು ಎಲ್ಲಾ ಶಾಲೆಗಳಿಗೆ ಸೂಚನೆ ನೀಡುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ರಸೀದಿ ಪಡೆಯದೇ ಪೋಷಕರು ಶುಲ್ಕ ಪಾವತಿಸಬಾರದು. ಹೆಚ್ಚುವರಿ ಶುಲ್ಕ ಪಾವತಿಯಾಗಿದ್ದಲ್ಲು ಹಣ ಹಿಂದಿರುಗಿಸಲು ಕ್ರಮವಹಿಸಲಾಗುವುದು ಎಂದು ಹೇಳಿದ ಅವರು ಶಾಲೆಗಳು ಸೂಕ್ತ ಪ್ರಾಧಿಕಾರದಿಂದ ಅನುಮತಿ ಪಡೆದಿರುವುದು, ಮಕ್ಕಳ ಸುರಕ್ಷತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿರುವುದನ್ನು ಖಾತರಿ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಎಲ್ಲಾ ಶಾಲೆಗಳು ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಬೇಕು. ಮಕ್ಕಳ ಪೋಷಕರ ಸಮಿತಿ ರಚಿಸಿರಬೇಕು. ಪರವಾನಿಗೆ ಪಡೆದ ಬೋಧನಾ ಮಾಧ್ಯಮ, ಪಠ್ಯ ಕ್ರಮ (ರಾಜ್ಯ ಅಥವಾ ಸಿ.ಬಿ.ಎಸ್.ಸಿ.)ದ ಬಗ್ಗೆ ಸೂಚನಾ ಫಲಕ ಪ್ರಕಟಿಸಬೇಕು. ವಿದ್ಯಾರ್ಥಿಗಳ ರಕ್ಷಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಪೋಷಕರು ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಮಾದಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ 427 ಅನುದಾನ ರಹಿತ ಶಾಲೆಗಳು ಆರ್‍ಟಿಇ ವ್ಯಾಪ್ತಿಗೆ ಒಳಪಟ್ಟಿದ್ದು, ಒಟ್ಟು 2578 ಸ್ಥಾನಗಳ ಪ್ರವೇಶಾವಕಾಶ ಲಭ್ಯವಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆದಿದ್ದು, 3151 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.
ಶಾಲಾ ವ್ಯಾಪ್ತಿಯ ಹಳ್ಳಿ ಹಾಗು ವಾರ್ಡ್‍ಗಳ ವಿದ್ಯಾರ್ಥಿಗಳು ಮಾತ್ರ ಈ ಕಾಯ್ದೆಯಡಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳು ಆಯ್ಕೆಯಾಗಿದ್ದರೂ ಸಹ ಶಾಲೆ ಒಳಪಡುವ ಹಳ್ಳಿ ಅಥವಾ ವಾರ್ಡ್‍ಗಳಿಗೆ ಸೇರದಿದ್ದರೆ ಪ್ರವೇಶ ನಿರಾಕರಿಸಲಾಗುತ್ತದೆ ಎಂದು ಅವರು ಹೇಳಿದರು.
ಅನಧಿಕೃತ ಶಾಲೆಗಳು ಹಾಗೂ ಅನಧಿಕೃತ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು ಎಂದು ಪ್ರಚಾರ ಮಾಡಲಾಗುವುದು ಎಂದು ಶಿವಮಾದಪ್ಪ ಅವರು ಹೇಳಿದರು.
ಸಭೆಯಲ್ಲಿ ಎಲ್ಲಾ ಬ್ಲಾಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಒ.ಟಿ.ಸಿ ಸಮೀಕ್ಷೆ : ಒಂದೇ ದಿನದಲ್ಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ
ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಒಂದೇ ದಿನದಲ್ಲಿ ಪಡೆಯುವ ಉದ್ದೇಶಕ್ಕಾಗಿ ಒ.ಟಿ.ಸಿ ಸಮೀಕ್ಷೆ ನಡೆಯುತ್ತಿದ್ದು ಈ ಸಮೀಕ್ಷೆಗೆ ಸಾರ್ವಜನಿಕರು ಅವರ ರೇಷನ್ ಕಾರ್ಡ್, ಮನೆಯ ಸದಸ್ಯರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಬಗ್ಗೆ ದಾಖಲೆ ಇವುಗಳನ್ನು ಸಂಬಂಧಪಟ್ಟ ಗ್ರಾಮಲೆಕ್ಕಿಗರಿಗೆ ದಿನಾಂಕ:20-05-2016 ರೊಳಗೆ ತಲುಪಿಸಿ ನಿಮ್ಮ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಶಿಲ್ಕು ರೂ.15/-ಗಳನ್ನು ಪಾವತಿಸಿ ಒಂದೇ ದಿನದಲ್ಲಿ ಪಡೆಯಬಹುದು ಆದ್ದರಿಂದ ಸಾರ್ವಜನಿಕರು ದಿನಾಂಕ:20-5-2016 ರೊಳಗೆ ತಮ್ಮ ಗ್ರಾಮ ವ್ಯಾಪ್ತಿಯ ಗ್ರಾಮ ಲೆಕ್ಕಿಗರನ್ನು ಸಂಪರ್ಕಿಸಬೇಕು ಎಂದು ಮಂಡ್ಯ ತಾಲ್ಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಹಿರಂಗ ಹರಾಜು ಪ್ರಕಟಣೆ
ಸಹಾಯಕ ಪ್ರಾದೇಶಿಕ ಅಧಿಕಾರಿಗಳ ಕಛೇರಿ ನಾಗಮಂಗಲ ಇವರ ವಾಹನ ಸಂಖ್ಯೆ: ಕೆಎ21-ಎ-3555 (ಹೆಚ್ಪಿವಿ-ಬಸ್ಸು) ವಾಹನವನ್ನು ದಿನಾಂಕ:26-05-2016 ರಂದು ಶನಿವಾರ ಬೆಳಿಗ್ಗೆ 11.00 ಗಂಟೆಗೆ ಬೆಳ್ಳೂರು ಪೊಲೀಸ್ ಠಾಣೆಯ ಆವರಣದಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ. ಆಸಕ್ತ ಬಿಡ್ಡುದಾರರು ಹರಾಜಿಗೆ ನಿಗದಿಪಡಿಸಿರುವ ದಿನಾಂಕದಂದು ಬೆಳಿಗ್ಗೆ 10.30 ಗಂಟೆಗೆ ಹರಾಜು ಸ್ಥಳಕ್ಕೆ ಆಗಮಿಸಿ ರೂ.5,000/- ಇಒಆ ಮೊತ್ತ ಪಾವತಿಸಿ ಹರಾಜು ಟೋಕನ್ ಪಡೆಯಲು ತಿಳಿಸಲಾಗಿದೆ, ಹರಾಜಿನಲ್ಲಿ  ವಾಹನ ಖರೀದಿಸಿದ ಬಿಡ್ಡುದಾರರು ಸ್ಥಳದಲ್ಲೆ ಹರಾಜಿನ ಶೇ.25 ರಷ್ಟು ಹಣವನ್ನು ಪಾವತಿಸಬೇಕಾಗುತ್ತದೆ ಉಳಿದ ಮೊತ್ತವನ್ನು ಹರಾಜು ನಡೆದ ಮೂರು ದಿನಗಳ ಒಳಗಾಗಿ ಪಾವತಿಸಬೇಕಾಗುತ್ತದೆ. ವ್ಯಾಟ್ ಅನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಹಾಯಕ ಪ್ರಾದೇಶಿಕ ಅಧಿಕಾರಿಗಳ ಕಛೇರಿ, ಕೆ.ಮಲ್ಲೇನಹಳ್ಳಿ, ಕೆ.ಆರ್.ಪೇಟೆ ರಸ್ತೆ ನಾಗಮಂಗಲ, ಮಂಡ್ಯ ಜಿಲ್ಲೆ, ದೂರವಾಣಿ ಸಂಖ್ಯೆ:08234-285598 ಅನ್ನು ಸಂಪರ್ಕಿ¸ಸಿ.
 ಸುತ್ತಮುತ್ತ ಪಾಲಿಕೆಯಿಂದ ಸ್ವಚ್ಫತಾ ಕಾರ್ಯಕ್ರಮ
ಮೈಸೂರು,ಮೇ.10- ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ವಿಶ್ವ ಕಾರ್ಮಿಕ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಕಾರ್ಖಾನೆಗಳ ಸುತ್ತಮುತ್ತಲಿನ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮೇ2 ರಂದು ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ-2ರಲ್ಲಿ ವಾರ್ಡ್ ನಂ 11 ರ ವಿಶ್ವೇಶ್ವರ ನಗರದ ರೋಲನ್ ಫ್ಯಾಕ್ಟರಿ ಹಾಗೂ ಜಾಕಿ ಫ್ಯಾಕ್ಟರಿಯ ಸುತ್ತಮುತ್ತಲಿನ ಆವರಣವನ್ನು ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಖಾನೆ ಸಿಬ್ಬಂದಿಗಳೊಂದಿಗೆ ಸ್ವಚ್ಛತಾ ಕಾರ್ಯ ನಡೆಸಿದರು.

ಮೇ 13 ರಂದು  ಹಿರಿಯ  ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದ ಉದ್ಘಾಟನೆ
     ಮೈಸೂರು,ಮೇ.10-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಹಾಗೂ ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಮೇ 13 ರಂದು ಬೆಳಿಗ್ಗೆ 11 ಗಂಟೆಗೆ ಕುವೆಂಪುನಗರ 2ನೇ ಹಂತದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಯೋಗಮಂದಿರದ ಕಟ್ಟಡದಲ್ಲಿ ಹಿರಿಯ  ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದ ಉದ್ಘಾಟನೆ ನಡೆಯಲಿದೆ.
    ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎಂ.ಕೆ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು.
    ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಹೆಚ್.ಎಸ್. ಮಹಾದೇವ ಪ್ರಸಾದ್, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ, ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ವಿಧಾನಸಭಾ ಸದಸ್ಯರುಗಳಾದ ತನ್ವೀರ್ ಸೇಠ್, ಜಿ.ಟಿ. ದೇವೇಗೌಡ, ಕೆ. ವೆಂಕಟೇಶ್, ಹೆಚ್.ಸಿ.ಮಂಜುನಾಥ್, ಸಾ.ರಾ. ಮಹೇಶ್, ಚಿಕ್ಕಮಾದು, ವಾಸು, ವಿಧಾನ ಪರಿಷತ್ ಸದಸ್ಯರಾದ ಸಿ.ಹೆಚ್. ವಿಜಯಶಂಕರ್, ಗೋ. ಮಧುಸೂಧನ್, ಎಸ್. ನಾಗರಾಜು, ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯಿಮಾ ಸುಲ್ತಾನ, ಉಪಾಧ್ಯಕ್ಷ ಕಯ್ಯಂಬಳ್ಳಿ ನಟರಾಜು,  ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್‍ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ,  ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರರು ವನಿತಾ ಪ್ರಸನ್ನ ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ  ಭಾಗವಹಿಸುವರು.
ಆಡಳಿತ್ಮಾಕ ಅಧಿಕಾರಿ ಹುದ್ದೆ : ಸ್ಪರ್ಧಾತ್ಮಕ ಪರೀಕ್ಷೆ
ಮೈಸೂರು,ಮೇ.10.(ಕ.ವಾ):- ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮೆಟೆಡ್‍ನಲ್ಲಿ 300 ಆಡಳಿತ್ಮಾಕ ಅಧಿಕಾರಿ ಹುದ್ದೆಗಳನ್ನು  ಸ್ಪರ್ಧಾತ್ಮಕ ಪರೀಕ್ಷೆ  ಮೂಲಕ ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ “ಆನ್ ಲೈನ್” ಮೂಲಕ ಅರ್ಜಿ ಆಹ್ವಾನಿಸಿದೆ.
     ಅರ್ಜಿ ಸಲ್ಲಿಸುವವರು ದಿನಾಂಕ:31-03-2016 ಕ್ಕೆ  ಯಾವುದಾದರೂ ಪದವಿಯಲ್ಲಿ  ತೇರ್ಗಡೆ ಹೊಂದಿರಬೇಕು.  ದಿನಾಂಕ: 31-03-2016 ಕ್ಕೆ ಕನಿಷ್ಟ 21-30 ವರ್ಷ ಮೀರಿರಬಾರದು.  ಪರಿಶಿಷ್ಟಜಾತಿ/ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ(ಕೇಂದ್ರ) ಅಭ್ಯರ್ಥಿಗಳಿಗೆ 3 ವರ್ಷ & ಪಿ.ಹೆಚ್. ಅಭ್ಯರ್ಥಿಗಳಿಗೆ 10 ವರ್ಷ  ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ  ಇರುತ್ತದೆ. ಅರ್ಜಿ ಸಲ್ಲಿಸಲು ಮೇ 17 ಕೊನೆಯ ದಿನಾಂಕವಾಗಿದ್ದು, ಅರ್ಜಿಯನ್ನು ತಿತಿತಿ.uiiಛಿ.ಛಿo.iಟಿ   ವೆಬ್‍ಸೈಟ್ ವಿಳಾಸದಲ್ಲಿ ಆನ್‍ಲೈನ್ ಮೂಲಕ ಸಲ್ಲಿಸಬೇಕು.
    ಹೆಚ್ಚಿನ ಮಾಹಿತಿಗೆ ಉಪಮುಖ್ಯಸ್ಥರು,  ವಿಶ್ವ ವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತುಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ , ಮೈಸೂರು ಇವರನ್ನು ಸಂಪರ್ಕಿಸಬಹುದು.
ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
   ಮೈಸೂರು,ಮೇ.10. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರವನ್ನು ಗ್ರೀನ್ ಗ್ರಾಮೀಣ ಅಭಿವ್ರøದ್ಧಿ ಮತ್ತು ತರಬೇತಿ ಸಂಸ್ಥೆ ಅವರು ನಿರ್ವಹಿಸಲಿದ್ದಾರೆ. ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಖಾಲಿ ಇರುವ ಸಮಾಜ ವಿಷಯ ಪರಿಶೀಲಕರು,  ಶುಷ್ರೂಷಕÀರು  ಹಾಗೂ ಕಚೇರಿ ಸಹಾಯಕರ ಹುದ್ದೆಗಳನ್ನು  ಗೌರವಧನದ ಆಧಾರ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
     ಸಮಾಜ ವಿಷಯ ಪರಿಶೀಲಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂ.ಎಸ್.ಡಬ್ಲೂ/ ಸ್ನಾತಕೋತ್ತರ / ಮನೋತಜ್ಞದಲ್ಲಿ  ವಿದ್ಯಾರ್ಹತೆ ಹೊಂದಿರಬೇಕು. ಶುಷ್ರೂಷಕÀರ ಹುದ್ದೆಗೆ ಅರ್ಜಿ ಸಲ್ಲಿಸುವವರು ಡಿಪ್ಲೊಮಾ ಇನ್ ನರ್ಸಿಂಗ್ ವಿದ್ಯಾರ್ಹತೆ ಹೊಂದಿರಬೇಕು. ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣ ಹೊಂದಿದವರು ಕಚೇರಿ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
      ಆಸಕ್ತರು ಸ್ವವಿವರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಗ್ರೀನ್ ಗ್ರಾಮೀಣ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ, ಬ್ರಹ್ಮಶ್ರೀ ನಾರಾಯಣಗುರು ಯೋಗಮಂದಿರದ ಕಟ್ಟಡ #362/ಎ, ನಿಮಿಷಾಂಬನಗರ, ಕುವೆಂಪುನಗರ 2ನೇ ಹಂತ, ಮೈಸೂರು ಇವರಿಗೆ ಸಲ್ಲಿಸುವುದು  ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ:9448425408, 9900667482 ಸಂಪರ್ಕಿಸುವುದು ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ                                                                                              
ಪ್ರವಾಸ ಕಾರ್ಯಕ್ರಮ
     ಮೈಸೂರು,ಮೇ.10-ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಮೇ 11 ರಿಂದ 13 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಮೇ 11 ರಂದು ಸಂಜೆ 4-30 ಗಂಟೆಗೆ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಮೇ 12 ರಂದು ಬೆಳಿಗ್ಗೆ 10-30 ಗಂಟೆಗೆ ಸರಸ್ವತಿಪುರಂ ನಲ್ಲಿರುವ ವಿಶ್ವಮಾನವ ಅಂತರಾಷ್ಟ್ರೀಯ ವಿದ್ಯಾರ್ಥಿನಿಲಯದಲ್ಲಿ ಆಯೋಜಿಸಿರುವ ಭೋದನೆ ಮತ್ತು ಸಂಶೋಧನೆಯಲ್ಲಿ ಮಹಿಳಾ ದೃಷ್ಠಿಕೋನಗಳನ್ನು ಅಳವಡಿಸಲು ಅನುಸರಿಸುವ ವಿಧಾನಗಳು ಮತ್ತು ಅಗತ್ಯವಾದ ಕೌಶಲ್ಯಗಳ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿದ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಮೇ 13 ರಂದು ಬೆಳಿಗ್ಗೆ 10 ಗಂಟೆಗೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬಿ.ಮಟಕೆರೆ  ಶಾಲಾ ಆವರಣದಲ್ಲಿ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.                                                            
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ
     ಮೈಸೂರು,ಮೇ.10.(ಕ.ವಾ):-2016 ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ ಅನುಷ್ಠಾನಗೊಳಿಸಲು ನಿಗಧಿತ ತೋಟಗಾರಿಕೆ ಬೆಳೆಗಳನ್ನು ಗುರುತಿಸಲಾಗಿದೆ. ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಅಂತರಸಂತೆಗೆ-ಅರಿಶಿಣ, ಹಂಪಾಪುರಕ್ಕೆ-ಟಮೊಟೋ(ನಿ), ಅರಿಶಿಣ ಹಾಗೂ ಬದನೆ, ಹೆಗ್ಗಡದೇವನಕೋಟೆಗೆ- ಟಮೊಟೋ(ನಿ), ಅರಿಶಿಣ, ಕಂದಲಿಕೆಗೆ-ಅರಿಶಿಣ, ಸರಗೂರಿಗೆ-ಅರಿಶಿಣ ತೋಟಗಾರಿಕೆ ಬೆಳೆ  ನಿಗಧಿಪಡಿಸಲಾಗಿದೆ.
   ಹುಣಸೂರಿನ ಬಿಳಿಕೆರೆಗೆ - ಟಮೊಟೋ(ನಿ) ಹಾಗೂ ಅರಿಶಿಣ, ಕೃಷ್ಣರಾಜನಗರ ತಾಲ್ಲೂಕಿನ ಹೆಬ್ಬಾಳಿಗೆ- ಟಮೊಟೋ(ನಿ), ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರಕ್ಕೆ –ಆಲೂಗಡ್ಡೆ(ಮ.ಅ). ಟಿ.ನರಸೀಪುರ ತಾಲ್ಲೂಕಿನ ಸೋಸಲೆಗೆ- ಟಮೊಟೋ(ನಿ) ತೋಟಗಾರಿಕಾ ಬೆಳೆ ನಿಗಧಿಪಡಿಸಲಾಗಿದೆ.
    ಮೈಸೂರು ತಾಲ್ಲೂಕಿನ ಇಲವಾಲಕ್ಕೆ- ಟಮೊಟೋ(ನಿ), ಬೀನ್ಸ್, ಜಯಪುರಕ್ಕೆ- ಟಮೊಟೋ(ನಿ), ಎಲೆಕೋಸು ಮತ್ತು ಬದನೆ, ವರುಣಕ್ಕೆ- ಟಮೊಟೋ(ನಿ) ಮತ್ತು ಬೀನ್ಸ್, ನಂಜನಗೂಡು ತಾಲ್ಲೂಕಿನ ಬಿಳಿಗೆರೆಗೆ-ಅರಿಶಿಣ, ಚಿಕ್ಕಯ್ಯನಛತ್ರಕ್ಕೆ- ಟಮೊಟೋ(ನಿ), ಹುಲ್ಲಹಳ್ಳಿಗೆ ಟಮೊಟೋ(ನಿ), ಕೌಲಂದೆಗೆ- ಟಮೊಟೋ(ನಿ) ಮತ್ತು ಅರಿಶಿಣ ಹಾಗೂ ನಂಜನಗೂಡಿಗೆ- ಟಮೊಟೋ(ನಿ) ಮತ್ತು ಅರಿಶಿಣ ನಿಗಧಿಪಡಿಸಲಾಗಿದೆ.
    ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಬ್ಯಾಂಕುಗಳಿಗೆ ರೈತರು ಘೋಷಣೆಗಳನ್ನು ಸಲ್ಲಿಸಲು ಜುಲೈ 30 ಕೊನೆಯ ದಿನಾಂಕವಾಗಿರುತ್ತದೆ.
   ಹೆಚ್ಚಿನ ವಿವರಗಳಿಗೆ ಸಂಬಂಧಿಸಿದ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಅಥವಾ ಸಹಾಯಕ ತೋಟಗಾರಿಕಾ ನಿದೇರ್ಶಕರನ್ನು ಸಂಪರ್ಕಿಸುವುದು ಎಂದು ತೋಟಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
               

ಇಲಾಖೆಗೆ ಅಗತ್ಯ ಅನುದಾನ: ಮುಖ್ಯಮಂತ್ರಿ : ಸಿದ್ದರಾಮಯ್ಯ

 ಇಲಾಖೆಗೆ ಅಗತ್ಯ ಅನುದಾನ: ಮುಖ್ಯಮಂತ್ರಿ : ಸಿದ್ದರಾಮಯ್ಯ
        ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಾಧನೆ ಮಾಡಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರೂಪಿಸುವ ಹೊಸ ಕಾರ್ಯಕ್ರಮಗಳಿಗೆ ಅಗತ್ಯ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
    ಅವರು ಇಂದು ಸೆನೆಟ್ ಭವನದಲ್ಲಿ ಬೆಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಏಕಲವ್ಯ, ಜೀವಮಾನ ಸಾಧನೆ ಮತ್ತು ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಹಾಗೂ ಕ್ರೀಡಾ ಶ್ರೇಷ್ಠತೆ ಸಹಾಯಧನ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
    ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಮುಂದಿನ ವರ್ಷಗಳಲ್ಲಿ ವಿಶ್ವ ಚಾಂಪಿಯನ್‍ಷಿಪ್, ಒಲಂಪಿಕ್ಸ್ ಹಾಗೂ ಮೊದಲಾದ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ಸಾಮಥ್ರ್ಯವಿರುವ ಹಾಗೂ ಈಗಾಗಲೇ ಉತ್ತಮ ಸಾಧನೆ ದಾಖಲಿಸಿ, ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಿಗೆ ಅವರ ಕ್ರೀಡೆಗೆ ಅನುಸಾರವಾಗಿ ಸಹಾಯಧನ ನೀಡಲಾಗುತ್ತಿದೆ. ಎಂದರು.
       ನಮ್ಮ ದೇಶ, ರಾಜ್ಯದ ಕ್ರೀಡಾಪಟುಗಳು ವಿಶ್ವಮಟ್ಟದಲ್ಲಿ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪದಕಗಳಿಸಿದಾಗ ಆಗುವ ಆನಂದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ದೇಶದ ಹೆಸರನ್ನು ಪ್ರಜ್ವಲಗೊಳಿಸುವ ಕ್ರೀಡಾಪಟುಗಳು ನಮ್ಮ ದೇಶದ ಹೆಮ್ಮೆಯ ಮಕ್ಕಳು ಎಂದು ಶ್ಲಾಘಿಸಿದರು.
    ಕ್ರೀಡೆಗಳು ಸ್ಪರ್ಧಾತ್ಮಕ ಮನೋಭಾವ , ಆರೋಗ್ಯ, ಶಿಸ್ತು, ನಾಯಕತ್ವ ಗುಣ, ದೇಶಪ್ರೇಮದಂತಹ ಗುಣಗಳನ್ನು ಬೆಳೆಸುತ್ತದೆ. ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬ ಕ್ರೀಡಾಪಟುವು ಗೆಲ್ಲಲು ಸಾಧ್ಯವಿಲ್ಲ ಆದರೆ ವಿಶ್ವ ಚಾಂಪಿಯನ್‍ಷಿಪ್, ಒಲಂಪಿಕ್ಸ್ ಹಾಗೂ ಏಷಿಯನ್ ಗೇಮ್ಸ್‍ನಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಒಂದು ಗೌರವ ಎಂದರು.
       ಮೈಸೂರು ಮಹಾನಗರಪಾಲಿಕೆ ಮಹಾಪೌರ ಬಿ.ಎಲ್ ಭೈರಪ್ಪ ಅವರು ಮೈಸೂರು ನಗರದ ಕೇಂದ್ರಸ್ಥಾನದಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣವಿದ್ದು, ಎಲ್ಲ ಮಕ್ಕಳು ಆಟವಾಡಲು ಇಲ್ಲಿ ಬರಲು ಸಾಧ್ಯವಾಗುವುದಿಲ್ಲ. ಮೈಸೂರು ನಗರದ ಇತರೆ ಭಾಗಗಳಲ್ಲೂ ಕ್ರೀಡಾಂಗಣವಾಗಬೇಕು. ಶಾಸಕ ವಾಸು ಅವರು ಕರ್ನಾಟಕ ಕ್ರೀಡಾ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ನೀಡಿ ಹೊಸ ಯೋಜನೆಗಳನ್ನು ಕ್ರೀಡಾಪಟುಗಳಿಗೆ ರೂಪಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದಾಗ ಮುಖ್ಯಮಂತ್ರಿಗಳು ಇದಕ್ಕೆ ಪ್ರತಿಕ್ರಿಯಿಸಿ ನಗರ ಪ್ರದೇಶಗಳಲ್ಲಿರುವ ಶಾಲೆ ಹಾಗೂ ವಸತಿ ಪ್ರದೇಶಗಳಲ್ಲಿ ಆಟದ ಮೈದಾನದ ಕೊರತೆ ಇದೆ. ಕ್ರೀಡಾಂಗಣಕ್ಕೆ ಬೇಕಾಗುವ ಸ್ಥಳವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಒದಗಿಸಲು ಹಾಗೂ ಕ್ರೀಡಾಂಗಣದ ಅಭಿವೃದ್ಧಿ ಕೆಲಸವನ್ನು ಮೈಸೂರು ಮಹಾನಗರಪಾಲಿಕೆ, ಜಿಲ್ಲಾ ಪಂಚಾಯತ್ ಹಾಗೂ ಇನ್ನಿತರ ಇಲಾಖೆಗಳು ಒಗ್ಗೂಡಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು. ಕ್ರೀಡಾ ಇಲಾಖೆಗೆ ಹೆಚ್ಚಿನ ನೆರವು ನೀಡಲಾಗುವುದು ಎಂದರು.
     ಕ್ರೀಡಾಪಟು ಅರವಿಂದ್ ಎಂ.,ಆಕಾಶ್ ಆರಾದ್ಯ, ಡಾ. ಖ್ಯಾತಿ ಎಸ್. ವಖಾರಿಯಾ , ಮಲಪ್ರಭಾ ವೈ. ಜಾದವ್, ಸುನ್ನುವಂಡ ಕುಶಾಲಪ್ಪ ಉತ್ತಪ್ಪ,   ಟ್ವಿಶಾ ಕೆ., ಪುರುಷೋತ್ತಮ ಕೆ,  ವಿನೀತ್ ಮ್ಯಾನ್ಯುಯಲ್, ಸುಷ್ಮಿತಾ ಪವಾರ್ ಓ, ಶರ್ಮದಾ ಬಾಲು, ಅರ್ಚನಾ ಗಿರೀಶ್ ಕಾಮತ್, ನಿಶಾ ಜೋಸೆಫ್, ಲೋಕೇಶ್ ಎನ್.,ಲಕ್ಷ್ಮಣ ಸಿ. ಕುರಣಿ,ನಿರಂಜನ್ ಎಂ. ಅವರುಗಳಿಗೆ ಏಕಲವ್ಯ ಪ್ರಶಸ್ತಿ 2014 ನ್ನು  ನೀಡಿ ಮುಖ್ಯಮಂತ್ರಿಗಳು ಗೌರವಿಸಿದರು. ಪ್ರಶಸ್ತಿಯು ರೂ 2.00 ಲಕ್ಷ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ.
     2014ರ ಜೀವನ ಪರ್ಯಂತ ಸಾಧನೆ ಪ್ರಶಸಿಯನ್ನು ಡಾ. ಪ್ರಭಾಕರ್ ಐ. ದೇವಾಂಗವಿ, ಹೆಚ್. ಚಂದ್ರಶೇಖರ್, ಶ್ರೀಧರ್ ಕುಮಾರ್, ಐ ಅಮಲ್‍ದಾಸ್ ಅವರುಗಳಿಗೆ ನೀಡಿ ಗೌರವಿಸಿದರು. ಈ ಪ್ರಶಸ್ತಿಯು ರೂ 1.50 ಲಕ್ಷ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಒಳಗೊಂಡಿದೆ.

     ಕರ್ನಾಟಕ ರಾಜ್ಯದ ದೇಸೀ ಮತ್ತು ಸ್ಥಳೀಯ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 2014 ನೇ ಸಾಲಿನ ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿಯನ್ನು ಕಾವ್ಯ ಎಂ.ಆರ್.,ವಿನೋದ್ ರಾಠೋಡ, ದುಂಡಪ್ಪ ದಾಸನ್ನವರ, ರೂಪಶ್ರೀ ಬಿ.ಕೆ., ಕಾರ್ತಿಕ್ ಜಿ ಕಾಟಿ, ಯೋಗೇಶ್, ಅನಿಲ್ ಕುಮಾರ್ ಹೆಚ್. ಶೆಟ್ಟರ್, ಜಯಕರ ಯಾನೆ ನಕ್ರೆ ಜಯಕರ ಮಡಿವಾಳ, ಕೊಳಚ್ಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ, ಇಬ್ರಾಹಿಂ ಸಾಬ್ ಮ. ಅರಬ್ ಅವರಿಗೆ ಮುಖ್ಯಮಂತ್ರಿಗಳು ನೀಡಿದರು. ಈ ಪ್ರಶಸ್ತಿಯು ರೂ 1.00 ಲಕ್ಷ ನಗದು, ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ಒಳಗೊಂಡಿದೆ.
     2015-16ಸಾಲಿನಲ್ಲಿ ಕ್ರೀಡಾ ಶ್ರೇಷ್ಠತಾ ಯೋಜನೆಯಡಿ ಸಹಾಯಧನ ಪಡೆಯಲು ಆಯ್ಕೆಯಾದ 41 ಕ್ರೀಡಾಪಟುಗಳಿಗೆ ಒಟ್ಟು ರೂ 1 ಕೋಟಿ 48 ಲಕ್ಷ ರೂ ವನ್ನು ವಿತರಿಸಲಾಯಿತು.
    ಕಾರ್ಯಕ್ರಮದಲ್ಲಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ, ಶಾಸಕ ಸೋಮಶೇಖರ್, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ.ಸೋಮಶೇಖರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Monday 9 May 2016

ಬಸವಣ್ಣರವರತತ್ವ ಹಾಗೂ ಚಿಂತನೆ ಇಂದಿಗೂ ಪ್ರಸ್ತುತ: ಮುಖ್ಯಮಂತ್ರಿ ಸಿದ್ದರಾಮಯ್ಯ


 ತತ್ವ ಹಾಗೂ ಚಿಂತನೆ ಇಂದಿಗೂ ಪ್ರಸ್ತುತ: ಮುಖ್ಯಮಂತ್ರಿ ಸಿದ್ದರಾಮಯ್ಯ
    ಮೈಸೂರು,ಮೇ.9. ಜಗತ್ ಜ್ಯೋತಿ ಬಸವಣ್ಣ ನವರ  ತತ್ವ, ಆದರ್ಶ ಹಾಗೂ ಚಿಂತನೆಗಳೂ ಇಂದಿಗೂ ಮಾತ್ರವಲ್ಲ ಎಂದೆದಿಂಗೂ ಪ್ರಸ್ತುತ ಎಂದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
       ಅವರು ಇಂದು ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ  ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಬಸವ ಜಯಂತಿ ಹಾಗೂ ಬಸವ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಬಸವಣ್ಣ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ  ಮಾತನಾಡಿದರು.
ಮನುಷ್ಯರಾಗಿ ಹುಟ್ಟುವ ನಾವು ಚಿಕ್ಕವಯಸ್ಸಿನಲ್ಲಿ ಬೆಳೆಯುವಾಗ ಯಾವುದೇ ಜಾತಿ, ಧರ್ಮದ ಬೇಧವಿಲ್ಲದೇ ಬೆಳೆಯುತ್ತೇವೆ. ಮನುಷ್ಯರಾಗಿ ಹುಟ್ಟುವ ನಾವು ಯಾವುದೇ ಜಾತಿ, ಮತ, ಧರ್ಮದ ಹೆಸರನ್ನು ಹಣೆಪಟ್ಟಿಗೆ ಕಟ್ಟುಕೊಳ್ಳದೇ ಮನುಷ್ಯರಾಗಿ ಮರಣ ಹೊಂದುವುದೇ ನಾವು ಈ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ ಎಂದರು.
       12 ನೇ ಶತಮಾನದಲ್ಲಿಯೇ ಬಸವಣ್ಣನವರು ಜಾತಿ ಪದ್ಧತಿ, ಸಮಾಜದಲ್ಲಿ ಕೆಳವರ್ಗದ ಜನರಿಗೆ ಸಮಾನತೆ, ಮಹಿಳಾ ಸಮಾನತೆ, ಆರ್ಥಿಕ ಸಮಾನತೆಗಾಗಿ ಹೋರಾಟ ನಡೆಸಿದರು. ಇಂದಿಗೂ ನಾವು ಸಮಾಜದಲ್ಲಿ ಕೆಳ ವರ್ಗದ ಜನರಿಗೆ  ದೇವಸ್ಥಾನಕ್ಕೆ ಪ್ರವೇಶ ನಿಷೇಧ, ಮೌಡ್ಯ, ಕಂದಾಚಾರ ಮುಂತಾದ ಪ್ರಕರಣಗಳನ್ನು ನೋಡುತ್ತಿರುವುದು ಚಿಂತಾಜನಕ ವಿಷಯವಾಗಿದೆ ಎಂದರು.
       ಸಮಾಜದಲ್ಲಿ ಎಲ್ಲರೂ ಸಮಾನರು, ಎಲ್ಲರೂ ನಮ್ಮವರು ಎಂಬ ಬಸವಣ್ಣನವರ ಆದರ್ಶವನ್ನು ಪ್ರಮಾಣಿಕವಾಗಿ ಪಾಲಿಸಿದರೆ ನಾವು ಬಸವಣ್ಣನವರಿಗೆ ಸಲ್ಲಿಸುವ ದೊಡ್ಡ ಗೌರವ ಹಾಗೂ ಬಸವಣ್ಣ ನವರು ಕಂಡ ಸಮ ಸಮಾಜ ಎಂಬ ಕನಸು ನೆನಸಾಗುತ್ತದೆ ಎಂದರು.
      12 ಶತಮಾನದಲ್ಲಿಯೇ ಬಸವಣ್ಣನವರ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಹಾಗೂ ಕೆಳವರ್ಗದವರಿಗೆ ಶೇ 90 ರಷ್ಟು ಸ್ಥಾನ ನೀಡಲಾಗಿತ್ತು. ಅಕ್ಷರ ವಂಚಿತರು, ಕೆಳವರ್ಗದವರು, ಮಹಿಳೆಯರು ತಮ್ಮ ನೋವುಗಳ ಬಗ್ಗೆ  ಚರ್ಚಿಸಿ ವಚನಗಳಲ್ಲಿ ವ್ಯಕ್ತ ಪಡಿಸುತ್ತಿದ್ದರು. ಬಸವಣ್ಣನವರು ಕಾಯಕ ವರ್ಗ ಎಂಬುದನ್ನು ತಿಳಿಸಿದರು. ಕಾಯಕ ಎಂದರೇ ನ್ಯಾಯವಾಗಿ ದುಡಿಯಬೇಕು. ದುಡಿಮೆಯಿಂದ ಗಳಿಸಿದ ಹಣವನ್ನು ಸಮಾನವಾಗಿ ಹಂಚಿಕೆಯಾಗಬೇಕು. ಕಾರ್ಲ್ ಮಾಕ್ಸ್ ಅವರು 19 ನೇ ಶತಮಾನದಲ್ಲಿ ಯಾರು ದುಡಿಯುತ್ತರೋ ಅವರಿಗೆ ಆಹಾರ ಸೇವಿಸುವ ಹಕ್ಕಿದೆ ಎಂದರು. ಒಟ್ಟಾರೆ ಮಹಾನ್ ವ್ಯಕ್ತಿಗಳು ಕಾಯಕವೇ ಮನುಷ್ಯನ ಲಕ್ಷಣ ಎಂದು ತಿಳಿಸಿದ್ದಾರೆ ಎಂದರು.
      ರಾಷ್ಟ್ರನಾಯಕರು, ದಾರ್ಶನಿಕರ ಜಯಂತಿ ಆಚರಿಸುವ ಸಂದರ್ಭದಲ್ಲಿ ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದವರನ್ನು ಗುರುತಿಸಿ ಗೌರವಿಸಲಾಗುವುದು. ಈ ಬಾರಿಯ ಬಸವ ಜಯಂತಿಯಲ್ಲಿ ಬಸವ ರಾಷ್ಟ್ರೀಯ ಪುರಸ್ಕಾರ 2015 ನೀಡಲು ಜನಪದ ಹಾಗೂ ವಚನ ಸಾಹಿತ್ಯದಲ್ಲಿ ಅಪಾರ ಕೊಡುಗೆ ನೀಡಿರುವ  ಡಾ. ಗೊ.ರು. ಚನ್ನಬಸಪ್ಪ  ಅವರನ್ನು ಸಮಿತಿ ಆಯ್ಕೆ ಮಾಡಿರುತ್ತದೆ. ಇದು ಸಂತೋಷದ ವಿಷಯವಾಗಿದೆ  ಎಂದರು.
  ಇದೇ ಸಂದರ್ಭದಲ್ಲಿ ಡಾ. ಗೊ.ರು. ಚನ್ನಬಸಪ್ಪ ಅವರಿಗೆ ಬಸವ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಿದರು. ಚಾಮರಾಜನಗರ ಜಿಲ್ಲೆಯ ಮೊದಲ ಗ್ಯಾಸೆಟಿಯರ್‍ನ್ನು ಬಿಡುಗಡೆ ಮಾಡಿದರು.  ಶಾಸಕ ವಾಸು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುತ್ತೂರು ಸುಕ್ಷೇತ್ರದ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಅವರ ದಿವ್ಯಸಾನಿಧ್ಯ ವಹಿಸಿದ್ದರು.  ಹಿರಿಯ ಚಿಂತಕ ರಂಜಾನ್ ದರ್ಗಾ ಅವರು ಬಸವಣ್ಣನವರ ಕುರಿತು ಉಪನ್ಯಾಸ ನೀಡಿದರು.   ಪ್ರಶಸ್ತಿ ಪುರಸ್ಕøತ ಭಾಗವಹಿಸಲಿದ್ದಾರೆ.
     ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಸಹಕಾರ ಸಚಿವ ಹೆಚ್.ಎಸ್. ಮಹಾದೇವ ಪ್ರಸಾದ್, ಕನ್ನಡ ಮತ್ತು ಸಂಸ್ಕøತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಉಮಾಶ್ರೀ, ವಿಧಾನಸಭಾ ಸದಸ್ಯರುಗಳಾದ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ವಿಧಾನ ಪರಿಷತ್ ಸದಸ್ಯರಾದ  ಗೋ. ಮಧುಸೂಧನ್, ಆರ್. ಧರ್ಮಸೇನ, ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್‍ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದ
ಉನ್ನತ ಮಟ್ಟದ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿಯವರೊಂದಿಗೆ ಬರ ಮತ್ತು ನೀರಿನ ಅಭಾವ ಪರಿಸ್ಥಿತಿಯ ಕುರಿತಂತೆ  ಪರಾಮರ್ಶಿಸಿದ ಪ್ರಧಾನಿ
ಕರ್ನಾಟಕದ ಕೆಲವು ಭಾಗಗಳಲ್ಲಿ ತಲೆದೋರಿರುವ ಬರ ಮತ್ತು ನೀರಿನ ಅಭಾವ ಪರಿಸ್ಥಿತಿ ಕುರಿತಂತೆ ದೆಹಲಿಯಲ್ಲಿಂದು ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಹಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ  ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಭಾರತ ಸರ್ಕಾರದ ಮತ್ತು  ರಾಜ್ಯದ ಹಿರಿಯ ಅಧಿಕಾರಿಗಳು ಸಹ ಉಪಸ್ಥಿತರಿದ್ದರು.

ಚರ್ಚೆಯನ್ನು ಆರಂಭಿಸಿದ ಪ್ರಧಾನಮಂತ್ರಿಯವರು, ತಾವು ಬರಪೀಡಿತ 11 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಬರದಿಂದ ಉದ್ಭವಿಸಿರುವ ಸಮಸ್ಯೆಗಳನ್ನು ತಗ್ಗಿಸಲು ಏನು ಮಾಡಬಹುದು ಎಂಬ ಬಗ್ಗೆ ಮತ್ತು ಮಧ್ಯಮ ಮತ್ತು ದೀರ್ಘಕಾಲೀನ ಕ್ರಮಗಳ ಬಗ್ಗೆ ಗಮನ ಹರಿಸಿದ್ದಾಗಿ ತಿಳಿಸಿದರು.

ಮುಂಗಾರಿನ ಮನವಿಗೆ ಸ್ಪಂದಿಸಿ 1540.20 ಕೋಟಿ ರೂಪಾಯಿಗಳ ನೆರವು ನೀಡಿದ ಭಾರತ ಸರ್ಕಾರಕ್ಕೆ ಕರ್ನಾಟಕದ ಮುಖ್ಯಮಂತ್ರಿಗಳು ಧನ್ಯವಾದ ಅರ್ಪಿಸಿದರು ಮತ್ತು ಇದನ್ನು ರೈತರಿಗೆ ನೆರವು ನೀಡಲು ಸಂಪೂರ್ಣವಾಗಿ ಬಳಸಿಕೊಂಡಿದ್ದಾಗಿ ತಿಳಿಸಿದರು. ಈ ಹಣವನ್ನು ಆರ್.ಟಿ.ಜಿ.ಎಸ್. ಮೂಲಕ ರೈತರಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು. ಹಿಂಗಾರು ಅವಧಿಗೆ 723.23 ಕೋಟಿ ರೂಪಾಯಿಗಳನ್ನು ಇತ್ತೀಚೆಗೆ ಅನುಮೋದಿಸಿದ್ದು, ಅದನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಕೋರಿದರು.

ಇದು 2015-16ನೇ ಸಾಲಿನಲ್ಲಿ ಬಿಡುಗಡೆ ಮಾಡಲಾಗಿರುವ ಎಸ್.ಡಿ.ಆರ್.ಎಫ್.ನ ಕೇಂದ್ರದ ಪಾಲಾದ 207 ಕೋಟಿ ರೂಪಾಯಿಗಳ ಹೊರತಾದ ಹೆಚ್ಚುವರಿ ಮೊತ್ತ ಎಂಬುದನ್ನು ತಿಳಿಸಲಾಯಿತು. ಜೊತೆಗೆ 2016-17ರ ಅವಧಿಗೆ ಈಗಾಗಲೇ 108.75 ಕೋಟಿ ರೂಪಾಯಿಗಳನ್ನು ಎಸ್.ಡಿ.ಆರ್.ಎಫ್.ನ ಪ್ರಥಮ ಕಂತಾಗಿ ಬಿಡುಗಡೆ ಮಾಡಲಾಗಿದೆ.
ಅಲ್ಲದೆ 2016-17ನೇ ಸಾಲಿನಲ್ಲಿ ಭಾರತ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಬರ ತಡೆಯಲು ಮತ್ತು ಜಲ ಸಂರಕ್ಷಣೆಗೆ ಕರ್ನಾಟಕದಲ್ಲಿ 603 ಕೋಟಿ ರೂಪಾಯಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ತಿಳಿಸಲಾಯಿತು. ಅದೇ ರೀತಿ ವಿವಿಧ ಕೃಷಿ ಯೋಜನೆಗಳ ಅಡಿಯಲ್ಲಿ 830 ಕೋಟಿ ಲಭ್ಯವಾಗಲಿದೆ.

ಭೀಕರ ಬರದಿಂದ ರಾಜ್ಯದ ಜನತೆ ಅನುಭವಿಸುತ್ತಿರುವ ಸಂಕಷ್ಟವನ್ನು ಮುಖ್ಯಮಂತ್ರಿಯವರು ವಿವರಿಸಿದರು. ರಾಜ್ಯದ ಪ್ರಮುಖ ಜಲಾಶಯಗಳು, ನದಿಗಳು ನೀರಿಲ್ಲದೆ ಸೊರಗಿವೆ ಎಂದು ತಿಳಿಸಿದರು. ಹೂಳೆತ್ತುವುದು, ಕೃಷಿ ಹೊಂಡ ನಿರ್ಮಾಣ, ಹನಿ ನೀರಾವರಿ ಮತ್ತು ಸಾಕಷ್ಟು ಕುಡಿಯುವ ನೀರಿನ ಪೂರೈಕೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಪ್ರಧಾನಮಂತ್ರಿಯವರು ಹೂಳೆತ್ತುವ, ಜಲ ಸಂರಕ್ಷಿಸುವ ಮತ್ತು ಅಂತರ್ಜಲ ಮರು ಪೂರಣ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದರು. ಮುಂಗಾರು ಆರಂಭಕ್ಕೆ ಮುನ್ನ ಮುಂದಿನ 30ರಿಂದ 40 ದಿನಗಳ ಅವಧಿಯಲ್ಲಿ ಕೃಷಿ ಹೊಂಡ, ಹೂಳೆತ್ತುವುದು ಮತ್ತು ಅಣೆಕಟ್ಟೆಗಳ ನಿರ್ಮಾಣಕ್ಕೆ ಗರಿಷ್ಠ ಗಮನ ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಧಾನಿ ಆಗ್ರಹಿಸಿದರು.

ತ್ಯಾಜ್ಯ ನೀರಿನ ನಿರ್ವಹಣೆಗೆ ಕರ್ನಾಟಕ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳಿಗೆ ವಿವರಿಸಿದರು. ಈ ಎಲ್ಲ ಕ್ರಮಗಳನ್ನು ಪ್ರಶಂಸಿಸಿದ ಪ್ರಧಾನಮಂತ್ರಿಯವರು, ಇವೆಲ್ಲವನ್ನೂ ನಗರ ಹಾಗೂ ಪಟ್ಟಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆಯ ಜಾರಿಗೆ ಕೈಗೊಂಡಿರುವ ಪೂರ್ವಭಾವಿ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿಗಳಿಗೆ ವಿವರಿಸಿದರು. ರಾಜ್ಯ ಸರ್ಕಾರ ಕೂಡ ಬೆಳೆ ವಿಮೆ ಕುರಿತಂತೆ ಕೆಲವು ಸಲಹೆಗಳನ್ನು ನೀಡಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಪ್ರಧಾನಮಂತ್ರಿಯವರಿಗೆ ಮನವಿಪತ್ರವೊಂದನ್ನು ಅರ್ಪಿಸಿದರು. ಪ್ರಧಾನಿಯವರು ಎಲ್ಲ ಅಗತ್ಯ ಬೆಂಬಲದ ಭರವಸೆ ನೀಡಿದರು.
ಬರದಿಂದ ಉದ್ಭವಿಸಿರುವ ಸಮಸ್ಯೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಗ್ಗೂಡಿ ಎದುರಿಸಬೇಕು ಎಂದು ಪ್ರಧಾನಮಂತ್ರಿಯವರು ತಿಳಿಸಿದರು.  ಇದು “ನಮ್ಮ” ಸಮಸ್ಯೆ ಎಂದು ಪ್ರಧಾನಿ ಹೇಳಿದರು. ಸಮಸ್ಯೆಗಳಿಗೆ ಪರಿಹಾರವನ್ನು ಒಗ್ಗೂಡಿ ಹುಡುಕಬೇಕೆಂದು ಅವರು ತಿಳಿಸಿದರು.

ಜಲ ಸಂರಕ್ಷಣೆ ಮತ್ತು ನಿರ್ವಹಣೆ ಪ್ರಯತ್ನಗಳ ಬಗ್ಗೆ ರಾಜ್ಯಗಳು ಮಾತನಾಡುವ ಆರೋಗ್ಯಪೂರ್ಣ ಸ್ಪರ್ಧೆಯ ಸಮಯ ಬಂದಿದೆ ಎಂದ ಪ್ರಧಾನಮಂತ್ರಿಯವರು, ಈ ನಿಟ್ಟಿನ ಕ್ರಮಗಳು ಜಿಎಸ್ ಡಿಪಿ ಹೆಚ್ಚಿಸುತ್ತವೆ ಮತ್ತು ಹೂಡಿಕೆಗಳ ಬಗ್ಗೆ ವರ್ಣಿಸಲಾಗುತ್ತದೆ ಎಂದರು. ಜಲ ಸಂರಕ್ಷಣೆ ಮತ್ತು ನಿರ್ವಹಣೆಯ ಅಳೆಯಲು ಸೂಚ್ಯಂಕವೊಂದನ್ನು ಅಭಿವೃದ್ಧಿಪಡಿಸುವಂತೆ ನೀತಿ ಆಯೋಗಕ್ಕೆ ಪ್ರಧಾನಮಂತ್ರಿಯವರು ಸೂಚಿಸಿದರು. 

Monday 2 May 2016

ಮಂಡ್ಯ, ಮೇ.2- ಜಿಲ್ಲಾ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಜಾ.ದಳ ಪಕ್ಷದ ಅಭ್ಯರ್ಥಿಗಳಾದ ಪ್ರೇಮಕುಮಾರಿ ಅಧ್ಯಕ್ಷರಾಗಿ ಹಾಗೂ ಗಾಯಿತ್ರಿ ರೇವಣ್ಣ ಉಪಾಧ್ಯಕ್ಷರಾಗಿ ಆಯ್ಕೆಯಾದರು.
41 ಸದಸ್ಯ ಬಲದ ಮಂಡ್ಯ ಜಿಲ್ಲಾ ಪಂಚಾಯತ್‍ನಲ್ಲಿ ಜೆಡಿಎಸ್ 27, ಕಾಂಗ್ರೆಸ್ 13 ಸ್ಥಾನಗಳಿಸಿದ್ದರೆ ಓರ್ವ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಜಾ.ದಳ ಪಕ್ಷದಿಂದ ಅಧಿಕøತ ಅಭ್ಯರ್ಥಿಯಾಗಿ ಪಕ್ಷದ ಹಿರಿಯ ಸದಸ್ಯೆ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಜಿ.ಪಂ. ಸದಸ್ಯೆ ಜೆ.ಪ್ರೇಮಕುಮಾರಿ ಹಾಗೂ ಅದೇ ತಾಲ್ಲೂಕಿನ ಉಪಾಧ್ಯಕ್ಷ ಸ್ಥಾನಕ್ಕೆ ಬೂಕನಕೆರೆ ಕ್ಷೇತ್ರದ ಪಿ.ಕೆ.ಗಾಯಿತ್ರಿ ರೇವಣ್ಣಅವರನ್ನು ಜಾ.ದಳ ಜಿಲ್ಲಾಧ್ಯಕ್ಷ ಡಿ.ರಮೇಶ್ ಘೋಷಣೆ ಮಾಡಿದರು. ಕಾಂಗ್ರೆಸ್ ಪಕ್ಷದಿಂದ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಜಿ.ಪಂ. ಸದಸ್ಯ ಜಯಕಾಂತ ಅಂಕರಾಜು ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೋಳ ಜಿ.ಪಂ. ಸದಸ್ಯೆ ಸವಿತಾ ನಾಮಪತ್ರ ಸಲ್ಲಿಸಿದ್ದರು. ಪ್ರೇಮಕುಮಾರಿ ಹಾಗೂ ಗಾಯಿತ್ರಿ ರೇವಣ್ಣ 27 ಮತಗಳ ಪಡೆಯುವ ಮೂಲಕ ಜಯಕಾಂತ ಅಂಕರಾಜು, ಸವಿತಾರವರನ್ನು (13)ಯವರನ್ನು 14 ಮತಗಳ ಅಂತರದಲ್ಲಿ ಸೋಲಿಸಿದರು.
 ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಲ್ಲಿ ಪ್ರಬಲ ಆಕಾಂಕ್ಷಿತರಾಗಿದ್ದ  ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಕ್ಷೇತ್ರದ ಎಸ್.ನಾಗರತ್ನಸ್ವಾಮಿ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಲಕ್ಷ್ಮೀಸಾಗರ ಕ್ಷೇತ್ರದ ಶಾಂತಲರಾಮಕೃಷ್ಣ, ಹೊಳಲು ಕ್ಷೇತ್ರದ ಅನುಪಮ ಕುಮಾರಿ, ದುದ್ದ ಕ್ಷೇತ್ರದ ಸುಧಾಜಯಶಂಕರ್ ಹಾಗೂ ನಾಗಮಂಗಲ ತಾಲ್ಲೂಕಿನ ದೇವಲಾಪುರ ಕ್ಷೇತ್ರದ ಹೆಚ್.ಸಿ.ರುಕ್ಮಿಣಿ ಶಂಕರ್ ಅವರನ್ನು ಸಮಾಧಾನಪಡಿಸಿದ ಜೆಡಿಎಸ್ ವರಿಷ್ಠರು ಅಂತಿಮವಾಗಿ ಪಕ್ಷದ ಹಿರಿಯ ಸದಸ್ಯೆ ಜೆ.ಪ್ರೇಮಕುಮಾರಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಜೆಡಿಎಸ್‍ನಲ್ಲಿ ಉಂಟಾಗಬಹುದಾಗಿದ್ದ ವ್ಯತಿರಿಕ್ತ ಪರಿಣಾಮಕ್ಕೆ ಇತಿಶ್ರೀ ಹಾಡಲು ಮುಂದಾದರೂ ಭಿನ್ನಮತ ಸ್ಫೋಟಗೊಂಡು ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಕ್ಷೇತ್ರದ ಎಸ್.ನಾಗರತ್ನಸ್ವಾಮಿ ಬಂಡಾಯವಾಗಿ ನಾಮಪತ್ರ ಸಲ್ಲಿಸಿ ಪಕ್ಷದ ಮುಖಂಡರ ತೀರ್ಮಾನಕ್ಕೆ ಸೆಡ್ಡು ಹೊಡೆದರು.
ಜೆಡಿಎಸ್ ಮುಖಂಡರ ಸಭೆ
ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಘೋಷಿಸುವ ಮುನ್ನ ಸಂಸದ ಪುಟ್ಟರಾಜು, ಶಾಸಕರಾದ ಚಲುವರಾಯಸ್ವಾಮಿ, ಡಿ.ಸಿ.ತಮ್ಮಣ್ಣ, ರಮೇಶ್‍ಬಾಬು, ನಾರಾಯಣಗೌಡ, ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ಹಾಗೂ ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಡಾ.ಅನ್ನದಾನಿ, ಜಿ.ಬಿ.ಶಿವಕುಮಾರ್, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ಅಂತಿಮವಾಗಿ ಜೆ.ಪ್ರೇಮಕುಮಾರಿ ಹಾಗೂ ಗಾಯಿತ್ರಿ ರೇವಣ್ಣ ಅವರನ್ನು ಪ್ರಥಮ ಅವಧಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ವರಿಷ್ಠರು ಪ್ರಕಟಿಸಿದರು.
 ಪಕ್ಷೇತರ ಅಭ್ಯರ್ಥಿ ತಟಸ್ಥ
ಬಸರಾಳು ಜಿ.ಪಂ. ಕ್ಷೇತ್ರದಿಂದ ಜಾ.ದಳ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಚಂದಗಾಲು ಶಿವಣ್ಣ ಕಾಂಗ್ರೆಸ್ ಹಾಗೂ ಜಾ.ದಳ ಅಭ್ಯರ್ಥಿಗಳಿಬ್ಬರನ್ನು ಬೆಂಬಲಿಸದೆ ತಟಸ್ಥವಾಗಿ ಉಳಿದರು.


ನಾಗಮಂಗಲ, ಮೇ.2- ವಿಜ್ಞಾನ ಎಷ್ಟೇ ಬೆಳೆದರೂ ಜನತೆ ನಮ್ಮ ಸಂಸ್ಕøತಿಯನ್ನು ಎಂದೂ ಮರೆಯಬಾರದೆಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಬೆಳ್ಳೂರು ಹೋಬಳಿ ಚಾಮಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬಸವೇಶ್ವರ ದೇವಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ದೇವಾಲಯಕ್ಕೆ ಬಂದಾಗ ಮಾತ್ರ ಮನಸ್ಸನ್ನು ಶುದ್ಧಿಯಾಗಿಟ್ಟುಕೊಂಡು ಹೊರಗೆ ಹೋದಾಗ ತಮ್ಮ ಅನಾಚಾರವನ್ನು ಮತ್ತೆ ಮುಂದುವರಿಸುವ ಪ್ರವøತ್ತಿಯನ್ನು ಬಿಡಬೇಕು ಎಂದು ತಿಳಿಹೇಳಿದರು.
ಜನರು ತಮ್ಮಲ್ಲಿರುವ ದ್ವೇಷ, ಅಸೂಯೆಯನ್ನು ಬಿಟ್ಟು ಸಮಾಜದಲ್ಲಿರುವ ಅವೈಜ್ಞಾನಿಕ ವಿಷಯಗಳನ್ನು ಹೋಗಲಾಡಿಸಿ, ನಂಬಿಕೆ, ಭಕ್ತಿಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ತಾ.ಪಂ.ಸದಸ್ಯೆ ಜಯಲಕ್ಷ್ಮಮ್ಮ, ಕೆ.ಎಸ್.ಪುಟ್ಟಸ್ವಾಮಿಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಪಾರ್ಥಸಾರಥಿ, ಸುರೇಶ್, ಕೆ.ಎಚ್. ವೆಂಕಟೇಶ್, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ಮಂಡ್ಯ,ಮೇ 2: ವಿದ್ಯಾರ್ಥಿ ಜೀವನದಲ್ಲಿ ಎನ್‍ಎಸ್‍ಎಸ್ ಶಿಬಿರಗಳಲ್ಲಿ ಭಾಗವಹಿಸಿದರೆ ಸರಳ ಹಾಗೂ ಸಂಘಟಿತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಮೈಸೂರು ವಿಭಾಗದ ಎನ್‍ಎಸ್‍ಎಸ್‍ನ ಸಹಾಯಕ ಕಾರ್ಯ ಸಂಯೋಜನಾಧಿಕಾರಿ ಸಿ.ಆರ್.ದಿನೇಶ್ ತಿಳಿಸಿದರು.
ತಾಲೂಕಿನ ಕೋಣನಹಳ್ಳಿ ಗ್ರಾಮದಲ್ಲಿ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯ ಮಂಡ್ಯ ಗ್ರಾಮಾಂತರ ಪಂಚಾಯಿತಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.
ಮನೆಯಲ್ಲಿ ವಿದ್ಯಾರ್ಥಿಗಳು ಐಷಾರಾಮಿ ಬದುಕು ಸಾಗಿಸಬಹುದು ಅಥವಾ ಬಡತನದಲ್ಲಿ ಇರಬಹುದು. ಆದರೆ ಶಿಬಿರದಲ್ಲಿ ಎಲ್ಲರೂ ಸಹ ಸಾಮೂಹಿಕವಾಗಿ ಭಾಗವಹಿಸಿದಾಗ ಪಂಕ್ತಿ ಭೋಜನ, ಗ್ರಾಮಸ್ಥರ ಒಡನಾಟ, ಸಂಘಟಿತ ಬದುಕನ್ನು ಕಲಿಸಿಕೊಡಲಿದೆ ಎಂದರು.
ಜನರ ಒಡನಾಟದಿಂದ ತಾವೂ ಸಹ ಪರಿ ವರ್ತರಾಗುವ ಮೂಲಕ ಊರಿನ ಪರಿಸರವನ್ನು ಬದಲಾಯಿಸಬಹುದು. ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದ ಜನರಲ್ಲಿ ಅರಿವು ಮೂಡಿಸಬಹುದು. ಇದಕ್ಕಿಂತ ಹೆಚ್ಚಾಗಿ ಕೃಷಿ ವಿದ್ಯಾರ್ಥಿಗಳಾಗಿರು ವುದರಿಂದ ರೈತರಲ್ಲಿ ಕೃಷಿ ಜ್ಞಾನ ಮೂಡಿಸ ಬಹುದಾಗಿದೆ ಎಂದು ಹೇಳಿದರು.
ನಗರಸಭಾಧ್ಯಕ್ಷ ಹೊಸಹಳ್ಳಿ ಬೋರೇಗೌಡ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದುದು. ನಾವು ಸಹ ವಿದ್ಯಾರ್ಥಿಯಾಗಿದ್ದಾಗ ನಾಯಕತ್ವ ಗುಣ ಮೈಗೂಡಿಸಿಕೊಂಡು ಈ ಮಟ್ಟಕ್ಕೆ ಬೆಳೆದಿದ್ದೇನೆ. ಕೃಷಿ ವಿದ್ಯಾರ್ಥಿಗಳು ದೇಶದ ಭವಿಷ್ಯದ ರೂಪಕರು. ಶ್ರಮದಾನದ ಮೂಲಕ ಜನರ ವಿಶ್ವಾಸ ಪ್ರೀತಿ ಗಳಿಸಿ ಗ್ರಾಮಾಭಿವೃದ್ಧಿಗೆ ಸಹಕಾರಿಯಾಗ ಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿ ಜೀವನದ ನೆನಪು ಜೀವನದಲ್ಲಿ ಸದಾ ಕಾಲ ಇರಬೇಕು. ಅಷ್ಟರ ಮಟ್ಟಿಗೆ ತಮ್ಮ ಸೇವೆಯನ್ನು ಮಾಡಬೇಕು. ಗ್ರಾಮೀಣ ಜನರ ಬದುಕಿಗೆ ನೆರವಾಗುವ ಮೂಲಕ ಪೋಷಕರು ಹಾಗೂ ಕಾಲೇಜಿಗೆ ಕೀರ್ತಿ ತರಲು ಮುಂದಾಗ ಬೇಕೆಂದು ಹೇಳಿದರು.
ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಟಿ. ಶಿವಶಂಕರ್ ಮಾತನಾಡಿ, ಎನ್‍ಎಸ್‍ಎಸ್ ಶಿಬಿರ ವಿದ್ಯಾರ್ಥಿಗಳಿಗೆ ಗ್ರಾಮೀಣ ಪರಿಸರ ಪರಿಚಯ ಮಾಡಿಕೊಡಲಿದೆ. ಅಷ್ಟೇ ಅಲ್ಲದೆ ಹೊಸ ಅನುಭವವನ್ನು ತಂದು ಕೊಡಲಿದೆ. ಕೋಣನಹಳ್ಳಿ ಗ್ರಾಮ ಅಚ್ಚುಕಟ್ಟಾಗಿದೆ. ಆದರೆ ಇಲ್ಲಿ ಪರಿಸರ ನ್ಯೂನ್ಯತೆ ಎದ್ದು ಕಾಣುತ್ತಿದೆ. ಮರ-ಗಿಡಗಳು ಇಲ್ಲದಂತಾಗಿವೆ. ಪರಿಸರ ಸಂರಕ್ಷಣೆ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.
ಮರ ಗಿಡಗಳನ್ನು ಬೆಳೆಸಿದರೆ ಗ್ರಾಮಕ್ಕೆ ಶೋಭೆ ತರಲಿದೆ. ಇಂದಿನ ಕೆರೆಗೆ ತ್ಯಾಜ್ಯ ನೀರು ಸೇರ್ಪಡೆಯಾಗುತ್ತಿದ್ದು, ಇದರಿಂದ ಅನಾನು ಕೂಲವೇ ಹೆಚ್ಚು. ಕೆರೆಯ ಅಚ್ಚುಕಟ್ಟು ಕಾಪಾಡಲು ಗ್ರಾಮಸ್ಥರು ಮುಂದಾಗಬೇಕು ಎಂದರು.
ಕೃಷಿ ವಿದ್ಯಾರ್ಜಿಗಳು ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ. ಭತ್ತ ಮತ್ತು ಕಬ್ಬು ರೈತರಿಗೆ ಹೆಚ್ಚಿನ ಆದಾಯ ತಂದು ಕೊಡಲಿದೆ. ಪರ್ಯಾಯ ಬೆಳೆಗಳ ಬಗ್ಗೆ ಆಲೋಚಿಸಬೇಕಿದೆ. ಎನ್‍ಎಸ್‍ಎಸ್ ಶಿಬಿರಾರ್ಥಿಗಳು ಗ್ರಾಮದ ಮಕ್ಕಳ ಸೇವಾ ಮನೋಭಾವಕ್ಕೆ ಪ್ರೇರಣೆ ಯಾಗಲಿದೆ ಎಂದು ಆಶಿಸಿದರು.
ಗ್ರಾಪಂ ಅಧ್ಯಕ್ಷ ಶಾರದಾ ಸಿದ್ದರಾಜು, ಕೆಪಿಸಿಸಿ ಸದಸ್ಯ ಟಿ.ಎಸ್.ಸತ್ಯಾನಂದ, ಅರುಣ್, ರೈತ ಮುಖಂಡ ಜವರೇಗೌಡ, ಗ್ರಾಪಂ ಸದಸ್ಯರಾದ ಪಟೇಲ್ ಶಂಕರ, ಧನಂಜಯ, ವೇಣುಗೋಪಾ ಲಸ್ವಾಮಿ, ಕೆ.ಎಸ್.ಮಂಜು, ಹೆಚ್.ಎಸ್. ರೂಪಾ, ಪ್ರಮೀಳಾ, ಬಿಲ್‍ಕಲೆಕ್ಟರ್ ಸೋಮಶೇಖರ, ವಾಟರ್ ಮನ್ ರಘು, ಕೃಷಿ ಡಿಪ್ಲೊಮಾ ಕಾಲೇಜು ಪ್ರಾಂಶು ಪಾಲ ಡಾ.ಹೆಚ್.ಡಿ. ನಾಗರಾಜು, ಶಿಬಿರಾಧಿಕಾರಿ ಗಳಾದ ಡಾ.ಜೆ.ಮಹದೇವು, ಡಾ.ಕೆ.ಪುಷ್ಪಾ, ಸದಾನಂದ ಆರ್ ಇನಾಂದಾರ್ ಉಪಸ್ಥಿತರಿದ್ದರು.