Thursday 24 March 2016

 ಶ್ರೀ ಆದಿಚುಂಚನಗಿರಿ ಜಾತ್ರಾ ಮಹೋತ್ಸವ-೨೦೧೬, ದಿನಾಂಕ: ೨೪.೦೩.೨೦೧೬ರ ಬೆಳಗ್ಗೆ ೯.೩೦ ಗಂಟೆಗೆ ಬಿಂದು ಸರೋವರದಲ್ಲಿ ಗಂಗಾ ಪೂಜೆ ಅವಭೃತ ಮಹೋತ್ಸವ ಹಾಗೂ ಧರ್ಮಧ್ವಜ ಅವರೋಹಣ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ನಗರಸಭೆ ಸಾಮಾನ್ಯಸಭೆಯಲ್ಲಿ ಮಹಿಳಾ ಸದಸ್ಯರ ಚರ್ಚೆಗೆ ಅಡ್ಡಿ, ಗದ್ದಲದ ಗೂಡಾದ ಸಭೆ ,ರೂಲಿಂಗ್ ನೀಡುವಲ್ಲಿ ಅಧ್ಯಕ್ಷರ ವೈಫಲ್ಯ .
ಜೆಡಿಎಸ್-ಪಕ್ಷೇತರರ ಸಭಾತ್ಯಾಗ

ಮಂಡ್ಯ- ಮಹಿಳಾ ಸದಸ್ಯೆಯೊಬ್ಬರ ಚರ್ಚೆಗೆ ಅಡ್ಡಿ, ಸದಸ್ಯರ ನಡುವೆ ಮಾತಿನ ಚಕಮಕಿ, ರೂಲಿಂಗ್ ನೀಡುವಲ್ಲಿ ಅಧ್ಯಕ್ಷರ ವೈಫಲ್ಯ, ಗೊಂದಲದ ಗೂಡಾದ ಸಭೆ,ಜಾತ್ಯಾತೀತ ಜನತಾದಳ, ಪಕ್ಷೇತರರ ಸದಸ್ಯರ ಸಭಾತ್ಯಾಗ.ಇದು ಇಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಂಡು ಬಂದ ದೃಶ್ಯಗಳು.
 ಬೆಳಗ್ಗೆ ಸಭೆ ಆರಂಭವಾಗುತ್ತಿದ್ದಂತೆ  ಮಾತನಾಡಿದ  ನಗರಸಭೆ  ಮಾಜಿ ಅಧ್ಯಕ್ಷರು , ಹಾಲಿ ಸದಸ್ಯ ಸಿದ್ದರಾಜು, ಅಧ್ಯಕ್ಷರೆ... ನೀವು ಹೆಬ್ಬೆಟ್ ಆಗಬೇಡಿ...  ಸರಿಯಾದ ಸದನದ ನಡವಳಿಗಳ ಬಗ್ಗೆ ತಿಳಿದುಕೊಳ್ಳಿ. ಇದರಿಂದ ಸಭೆ ನಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.
 ಈ ಸಂದರ್ಭದಲ್ಲಿ ಸದಸ್ಯೆ ಮಧುಶ್ರೀ ಅವರು ಮಾತನಾಡಲು ಮುಂದಾದಾಗ , ಮತ್ತೊಬ್ಬ ಸದಸ್ಯ ಚಂದ್ರಕುಮಾರ್ ಅವರು ಅವರ ಮಾತಿಗೆ ಅಡ್ಡಿ ಪಡಿಸಿದರಲ್ಲದೇ, ಹೆಬ್ಬೆಟ್ ಪದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
 ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ  ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರು ಸಭೆಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಜತೆಗೆ ಸದಸ್ಯ ಚಂದ್ರಕುಮಾರ್ ಅವರು ಸದಸ್ಯೆ ಮಧುಶ್ರೀ ಅವರಿಗೆ ಏಕ ವಚನ ಸಂಬೋಧಿಸಿದ್ದಾರೆ. ಹಾಗಾಗಿ ಅವರು ಸಭೆಯಲ್ಲಿ P್ಷÀಮೆಯಾಚಿಸಬೇಕು.ಇಲ್ಲದಿದ್ದಲ್ಲಿ ಅಧ್ಯP್ಷÀರು ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಪಡಿಸಿದರು.
 ಇಷ್ಟು ಹೊತ್ತಿಗಾಗಲೇ  ಅಧ್ಯಕ್ಷರ  ಮುಂಭಾಗದಲ್ಲಿ ನೆರೆದ ಸದಸ್ಯರು  ಚಂದ್ರಕುಮಾರ್ ಅವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು.
 ಜತೆಗೆ  ಮಾತನಾಡಲು ಅವಕಾಶ ನೀಡದಿದ್ದ ಮೇಲೆ ನಾವು ಯಾಕೆ ಸಭೆಯಲ್ಲಿ ಭಾಗವಹಿಸಬೇಕು ಎಂದು ಮಧುಶ್ರೀ ಸೇರಿದಂತೆ ಅನೇಕ ಸದಸ್ಯರು  ಸಭಾತ್ಯಾಗ ಮಾಡಲು ಮುಂದಾದರು, ಆ ಸಂದರ್ಭದಲ್ಲಿ ಪಕ್ಷೇತರ ಸದಸ್ಯ  ಕೆ.ಸಿ.ರವೀಂದ್ರ, ಸಭೆಯಿಂದ ನಿರ್ಗಮಿಸುತ್ತಿದ್ದ ಸದಸ್ಯರಾದ ಸೋಮಶೇಖರ್ ಕೆರಗೋಡು,ಸಿದ್ದರಾಜು, ಮಧುಶ್ರೀ, ಚಿಕ್ಕಣ್ಣ, ಮಹೇಶ್‍ಕೃಷ್ಣ, ಸೇರಿದಂತೆ ಹಲವಾರು ಸದಸ್ಯರ ಮನವೊಲೈಸಿ ಸಭೆಗೆ ಕರೆತಂದರು.
 ನಂತರ ಸಭೆ ಆರಂಭವಾದಂತೆಯೇ  ಸದಸ್ಯೆ ಮಧುಶ್ರೀ ಮಾತನಾಡಿ, ಅಧ್ಯಕ್ಷರೆ, ನೀವು ಮಾತನಾಡಲು ಅವಕಾಶ ನೀಡಿದ್ದೀರಿ. ಅದರಂತೆ  ಮಾತಾಡುತ್ತಿz್ದÉೀವೆ.  ನಮ್ಮ ವಾರ್ಡುಗಳ ಸಮಸ್ಯೆಗಳು ಸಾಕಷ್ಟಿವೆ. ಅದರ ಪರಿಹಾರಕ್ಕಾಗಿ ನಾವು ಬಂದಿz್ದÉೀವೆ. ಆದರೆ ಕೆಲ ಸದಸ್ಯರು, ಚರ್ಚೆಗೆ ಅಡ್ಡಿ ಪಡಿಸುತ್ತಿದ್ದಾರೆ. ಆರೋಗ್ಯಕರವಾಗಿ ಸಭೆ ನಡೆಸಲು ಎಡೆ ಮಾಡಿಕೊಡುತ್ತಿಲ್ಲ ಎಂದು ದೂರಿದರು. ಈ ಸಮಯದಲ್ಲಿ  ಮತ್ತೆ ಕಾಂಗ್ರೆಸ್ ಸದಸ್ಯರು  ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ  ಅಧ್ಯP್ಷÀರ ಎದುರು ಜಮಾವಣೆಗೊಂಡ ಜಾ.ದಳ ಸದಸ್ಯರು, ಅಧ್ಯಕ್ಷರನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೇ ಸಭಾತ್ಯಾಗ ಮಾಡಿದರು.

ಉತ್ತರ ಕೊಡಲು ಆಯುಕ್ತರು ಇದ್ದಾರೆ
ಮಂಡ್ಯ- ಉತ್ತರ ಕೊಡಲು ಆಯುಕ್ತರು ಇದ್ದಾರೆ. ಅಧ್ಯP್ಷÀರೇನು ಕೊಡಬೇಕಿಲ್ಲ ಎಂದು   ನಗರಸಭಾ ಸದಸ್ಯ ಟಿ.ಕೆ.ರಾಮಲಿಂಗು  ತಿಳಿಸಿದರು.
ನಗರಸಭೆ ಸಾಮಾನ್ಯ ಸಭೆಯಲ್ಲಿ  ಅಧ್ಯP್ಷÀರ  ಬಗ್ಗೆ ಮಾಜಿ ಅಧ್ಯP್ಷÀ ಸಿದ್ದರಾಜು ಅವರು, ಹೆಬ್ಬೆಟ್ ಆಗಬೇಡಿ ಅಧ್ಯP್ಷÀರೇ... ನೀವು ಕೆಲ ನಿಯಾಮವಳಿಗಳನ್ನು ತಿಳಿದುಕೊಳ್ಳಬೇಕು. ಸದಸ್ಯರಿಗೆ ಉತ್ತರ ಕೊಡಲು ಇದು ಅವಶ್ಯಕ ಎಂದು ಸಲಹೆ ನೀಡಿದ ಸಂದರ್ಭದಲ್ಲಿ  ಟಿ.ಕೆ. ರಾಮಲಿಂಗು ಅವರು  ಈ ರೀತಿ ತಿಳಿಸಿದರು.
ಏರು ಧ್ವನಿಯಲ್ಲಿ ಮಾತನಾಡಿದ ಅವರು, ಅಧ್ಯP್ಷÀರೇ ಉತ್ತರ ಕೊಡುವಂತಿದ್ದರೆ ಆಯುಕ್ತರು ಯಾಕೆ ಬೇಕಿತ್ತು ಎಂದು ಈ ಸಮಯದಲ್ಲಿ ಪ್ರಶ್ನಿಸಿದರು.

ಅಧ್ಯಕ್ಷರೇ ಅಭಿವೃದ್ದಿಗೆ ಗಮನ ನೀಡಿ
ಮಂಡ್ಯ- ಅಧ್ಯಕ್ಷರೇ ನೀವು ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ, ನಗರದಲ್ಲಿ ಅನೇಕ ಸಮಸ್ಯೆಗಳು ತಾಂಡವವಾಡುತ್ತಿದೆ. ಹಾಗಾಗಿ ಉಳಿದಿರುವ  ಅವಧಿಯಲ್ಲಿ ನಗರದ ಅಭಿವೃದ್ದಿಗೆ ಗಮನ ಹರಿಸಿ ಎಂದು ಸದಸ್ಯ ಸೋಮಶೇಖರ್ ಕೆರಗೋಡು  ತಿಳಿಸಿದರು.
ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು,ನಗರದಲ್ಲಿ ಕೆಲವು ಸಮಸ್ಯೆಗಳು ಗಂಭೀರವಾಗಿದೆ. ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ.  ಇನ್ನು ಕೆಲವೇ ತಿಂಗಳುಗಳು  ಬಾಕಿಯುಳಿದಿದೆ. ಹಾಗಾಗಿ ಅಭಿವೃದ್ದಿಯತ್ತ ಚಿತ್ತ ಹರಿಸಿ ಎಂದು ಮನವಿ ಮಾಡಿದರು.
ಮತ್ತೊಬ್ಬ ಸದಸ್ಯ ಕೆ.ಸಿ.ರವೀಂದ್ರ ಮಾತನಾಡಿ, ಎರಡೂವರೆ ವರ್ಷಗಳಿಂದ ಅಭಿವೃದ್ದಿ ಕುಂಠಿತವಾಗಿದೆ. ಆದಕಾರಣ ಉಳಿದಿರುವ ಅವಧಿಯಲ್ಲಾದರೂ ಒಳ್ಳೆ ಕೆಲಸ ಮಾಡಿ ಎಂದರು.  ಇದೇ ಸಂದರ್ಭದಲ್ಲಿ ನೂತನ ಅಧ್ಯP್ಷÀರು ಮತ್ತು ಉಪಾಧ್ಯಕ್ಷರನ್ನು  ಅಭಿನಂದಿಸಲಾಯಿತು.

ಗಂಗಾಧರ ಶೆಟ್ಟಿಗೆ ಪಿಹೆಚ್‍ಡಿ ಪದವಿ
ಮಂಡ್ಯ- ಮೈಸೂರು ವಿಶ್ವವಿದ್ಯಾಲಯದಿಂದ ಹೆಚ್.ಎಂ. ಗಂಗಾಧರ ಶೆಟ್ಟಿ ಅವರಿಗೆ  ಪಿಹೆಚ್‍ಡಿ ಪದವಿ ಲಭಿಸಿದೆ.
ಡಾ.ಕೆ.ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರ ಪಡಿಸಿದ ಕೃಷ್ಣರಾಜ ಪೇಟೆ ತಾಲೂಕು- ಸಾಂಸ್ಕøತಿಕ ಅಧ್ಯಯನ ಎಂಬ ಮಹಾ ಪ್ರಬಂಧಕ್ಕೆ  ಈ ಪದವಿ ದೊರಕಿದ್ದು, ಮುಂದೆ ನಡೆಯಲಿರುವ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಪೆÇ್ರ.ಆರ್.ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಟ್ಟೆ ನೋವು ತಾಳಲಾರದೇ ಮಹಿಳೆ ಆತ್ಮಹತ್ಯೆ
ಮಂಡ್ಯ:ಹೊಟ್ಟೆನೋವು ತಾಳಲಾರದೇ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮದಲ್ಲಿ ಜರುಗಿದೆ.
ಅನುರಾಧ (39) ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ಮಹಿಳೆ.
ಪ್ರತಿನಿತ್ಯ ಅನುರಾಧಗೆ ಹೊಟ್ಟೆನೋವು ಬರುತ್ತಿತ್ತು. ಅಂತೆಯೇ ಇಂದು ಕೂಡ ನೋವು ಕಾಣಿಸಿಕೊಂಡ ಪರಿಣಾಮ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆರೋಗ್ಯಕರ ಜೀವನಕ್ಕೆ ಪರಿಸರ ಪ್ರಿಯ ತಂತ್ರಜ್ಞಾನಗಳ

ಕೃಷಿ ವಿಜ್ಞಾನ ಕೇಂದ್ರ, ವಿ.ಸಿ.ಫಾರಂ ವತಿಯಿಂದ “ಎಲೆಕೋಸು ಬೆಳೆಯಲ್ಲಿ ಸಮಗ್ರ ಪೋಷಕಾಂಶ ಮತ್ತು ಪೀಡೆ ನಿರ್ವಹಣೆ ಮುಂಚೂಣಿ ಪ್ರಾತ್ಯಕ್ಷಿಕೆಯ “ಕ್ಷೇತ್ರೋತ್ಸವ” ವನ್ನು ಪಾಂಡವಪುರ ತಾಲ್ಲೂಕಿನ ಸಂಗಾಪುರ ಗ್ರಾಮದಲ್ಲಿ,
ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.   ಪ್ರಾತ್ಯಕ್ಷಿಕೆ ಕೈಗೊಂಡಿರುವ ಕೆ.ವಿ.ಕೆಯ ತೋಟಗಾರಿಕಾ ತಜ್ಞರಾದ ಡಾ. ಎಂ.ವೆಂಕಟೇಶ್‍ರವರು ಸಮಗ್ರ ಪೋಷಕಾಂಶ ಮತ್ತು ಪೀಡೆ ನಿರ್ವಹಣೆಯಲ್ಲಿ ಬಳಕೆ ಮಾಡಿದ ಟ್ರೈಕೋಡರ್ಮಾ, ಸೂಡೋಮೊನಾಸ್, ಬೇವಿನ ಹಿಂಡಿ, ಬೇವಿನ ಎಣ್ಣೆ, ಹಳದಿ ಅಂಟು ಹಾಳೆ, ಮೋಹಕ ಬಲೆ ಇತ್ಯಾದಿ ಪರಿಸರ ಪ್ರಿಯ ತಂತ್ರಜ್ಞಾನಗಳನ್ನು ಬಳಕೆ ಮಾಡಿ, ಕೀಟ ಮತ್ತು ರೋಗ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಸಂಗಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಪ್ರಕಾಶ್, ಡಿ. ರವರು ಮಾತನಾಡಿ ಕೋಸು ಜಾತಿಯ ಬೆಳೆಗಳಿಗೆ ಹೆಚ್ಚು ವಿಷಕಾರಿ ಔಷಧ ಬಳಕೆ ಮಾಡದೇ, ವಿಜ್ಞಾನಿಗಳು ತಿಳಿಸಿರುವ ತಂತ್ರಜ್ಞಾನಗಳ ಬಳಕೆ ಮಾಡುವ ಮುಖೇನ ಪರಿಸರ ಮಾಲಿನ್ಯ ಕಡಿಮೆ ಮಾಡಿ, ತರಕಾರಿಗಳನ್ನು ಬಳಸುವ ಗ್ರಾಹಕರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಬೆಳೆಗಾರರ ಕರ್ತವ್ಯವೆಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆಯನ್ನು ಕೈಗೊಂಡ ರೈತರಾದ ಎಸ್.ಆರ್. ಭೋಜರಾಜ್, ಚಂದ್ರಶೇಖರ್, ಎಸ್, ಯೋಗಾನಂದ, ಚನ್ನಬಸಪ್ಪ ಪಾಲ್ಗೊಂಡು ತಾವು ಕೋಸು ಬೆಳೆಯಲ್ಲಿ ಅನುಸರಿಸಿದ ತಂತ್ರಜ್ಞಾನಗಳ ಮಾಹಿತಿಯನ್ನು ಇತರ ರೈತರಿಗೂ ಸಹ ಪರಿಚಯ ಮಾಡಿಸಿದರು.  ಆರೋಗ್ಯಕರ ಜೀವನಕ್ಕೆ ಪರಿಸರ ಪ್ರಿಯ ತಂತ್ರಜ್ಞಾನಗಳು ಬಹಳ ಮುಖ್ಯವೆಂಬುದು ರೈತರ ಅಭಿಪ್ರಾಯ.  ಶ್ರೀ ಹೆಚ್.ಎಂ. ಮಹೇಶ, ತರಬೇತಿ ಸಹಾಯಕರು, ಕೆ.ವಿ.ಕೆ ರವರು ಪಾಲ್ಗೊಂಡು ಕಾರ್ಯಕ್ರಮವನ್ನು ನಿರೂಪಿಸಿದರು.  ಸದರಿ ಕಾರ್ಯಕ್ರಮದಲ್ಲಿ ಗ್ರಾಮದ ಸುಮಾರು 27 ಜನ ರೈತರು, ರೈತ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.  


Monday 14 March 2016

ಮಾರ್ಚ 15 ರಂದು ವಿಶ್ವ ಗ್ರಾಹಕರ ದಿನಾಚರಣೆ
ಮೈಸೂರು,ಮಾ.  ಆಹಾರ, ನಾಗರಿಕ ಸರಬರಜು ಹಾಗೂ ಗ್ರಹಕ ವಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕರ, ಜೆ.ಎಸ್.ಎಸ್ ಕಾನೂನು ಕಾಲೇಜು, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ವತಿಯಿಂದ ಮಾರ್ಚ್ 15 ರಂದು ಬೆಳಿಗ್ಗೆ 10 ಗಂಟೆಗೆ ಕುವೆಂಪುನಗರದಲ್ಲಿರುವ ಜೆ.ಎಸ್.ಎಸ್. ಕಾನೂನು ಕಾಲೇಜಿನ ಆವರಣದಲ್ಲಿ  ವಿಶ್ವ ಗ್ರಾಹಕರ ದಿನಾಚರಣೆ ಮತ್ತು ವಿಶ್ವ ಗ್ರಾಹಕ ವಿಚಾರ ಸಂಕಿರಣ ನಡೆಯಲಿದೆ.
ಜಿಲ್ಲಾಧಿಕಾರಿ ಸಿ.ಶಿಖಾ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಗಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಜೆ.ಎಸ್.ಎಸ್. ಕಾನೂನು ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಸುರೇಶ್ ಅವರು ಅಧ್ಯಕ್ಷತೆ ವಹಿಸುವರು.
ಉದ್ಘಾಟನೆಯ ನಂತರ ಜೆ.ಎಸ್.ಎಸ್.ಕಾನೂನು ಕಾಲೇಜಿನ ಸಹ ಪ್ರಾಧ್ಯಪಕ ಡಾ|| ಎಸ್.ನಟರಾಜ್ ಅವರು ವಿಶ್ವ ಗ್ರಾಹಕ: ವಿಶ್ವ ಗ್ರಾಹಕ ಚಳವಳಿ ಕುರಿತು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ ಕೆ.ಸಿ ಬಸವರಾಜು ಅವರು ಭಾರತದಲ್ಲಿ ಗ್ರಾಹಕ ಚಳವಳಿಯ ಸಾರ್ವತ್ರೀಕರಣದ ಸಾಧ್ಯತೆ ಕುರಿತು ಉಪನ್ಯಾಸ ನೀಡಲಿದ್ದಾರೆ.
 ಗ್ರಾಹಕರ ಸಮಸ್ಯಗಳು ಕುರಿತು ಸಂವಾದ ನಡೆಯಲಿದ್ದು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷ ಶಿವಕುಮಾರ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಗ್ರಾಹಕ ನ್ಯಾಯ ನಿಷ್ಕರ್ಷೆ ವಿಷಯದ ಬಗ್ಗೆ ಸಂವಾದ ನಡೆಯಲಿದೆ.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷ ಶಿವಕುಮಾರ ಸ್ವಾಮಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ.

ಮಾರ್ಚ್ 15 ರಂದು ಶಾಲಾ ವಾರ್ಷಿಕೋತ್ಸವ ಸಮಾರಂಭ
ಮೈಸೂರು,ಮಾ.14.ಸರ್ಕಾರಿ ಅಂಧ ಮಕ್ಕಳ ಪಾಠಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಮಾರ್ಚ್ 15 ರಂದು ಸಂಜೆ 6 ಗಂಟೆಗೆ ಶಾಲಾ ಆವರಣದಲ್ಲಿ ನಡೆಯಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ರಾಧಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿವೃತ್ತ ನಿರ್ದೇಶಕಿ ಡಾ|| ನ. ರತ್ನ, ಹೆಲನ್ ಕೆಲರ್ ಶಿಕ್ಷಕರ ತರಬೇತಿ ಕೇಂದ್ರದ ಉಪನಿರ್ದೇಶಕಿ ಆರ್ ಸುಮಲತ, ಡಾ|| ವಿಜಯಲಕ್ಷ್ಮಿ ಬಸವರಾಜ್ ಚಾರಿಟಬಲ್ ಸೊಸೈಟಿ ಸಂಸ್ಥಾಪಕ ಬಸವರಾಜ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀನಿವಾಸ್ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಡಾ|| ವಿಜಯಲಕ್ಷ್ಮಿ ಬಸವರಾಜ್ ಅವರು ನಿರ್ದೇಶಿಸಿರುವ ಉಪಹಾರಕ್ಕೆ ಬಂದ ಹುಲಿರಾಯ ನಾಟಕವನ್ನು ಅಂಧ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದು, ಬಿ.ಆರ.ರವೀಶ್ ಅವರು ಸಂಗೀತ ನೀಡಲಿದ್ದಾರೆ.    
ಸಾಮಾನ್ಯ ಕೌನ್ಸಿಲ್ ಸಭೆ ಮುಂದೂಡಿಕೆ
ಮೈಸೂರು,ಮಾ.14.ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮಾರ್ಚ್ 14 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಬೇಕಿದ್ದ ಸಾಮಾನ್ಯ ಕೌನ್ಸಿಲ್ ಸಭೆಯನ್ನು ಮೈಸೂರಿನಲ್ಲಿ ಬಂದ್ ಪ್ರಯುಕ್ತ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸಹಾಯಕ ಪ್ರಾಧ್ಯಪಕರ ಹುದ್ದೆಗೆ ಸಂದರ್ಶನ
ಮೈಸೂರು,ಮಾ.14.ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಆಹ್ವಾನಿಸಲಾಗಿದ್ದ ತಾತ್ಕಾಲಿಕ ಸಹಾಯಕ ಪ್ರಾಧ್ಯಪಕರ ಹುದ್ದೆಗೆ ಸಂಬಂಧಿಸಿದಂತೆ ದಿನಾಂಕ್ 17-03-2016 ಹಾಗೂ 18-03-2016 ರಂದು ಸಂದರ್ಶನ ನಡೆಯಲಿದೆ.
ಅರ್ಜಿ ಸಲ್ಲಿಸಿರುವವರು ಹೆಚ್ಚಿನ ಮಾಹಿತಿಗೆ ತಿತಿ.uಟಿi-mಥಿsoಡಿe.ಚಿಛಿ.iಟಿ   ಮೂಲಕ ಪಡೆದುಕೊಳ್ಳುವುದು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಿಚಿತ ಶವ : ವಾರಸುದಾರರ ಪತ್ತೆಗಾಗಿ ಮನವಿ
ಮೈಸೂರು,ಮಾ.14.ಮೈಸೂರು ರೈಲು ನಿಲ್ದಾಣದ ವೇದಿಕೆ ನಂ.4-5 ರಲ್ಲಿ ರೈಲುಗಾಡಿ ನಂ 17308 ರ ಕೋಚ್ ನಂ 7454 ರಲ್ಲಿ  ಸುಮಾರು 60 ವರ್ಷದ ಅಪರಿಚಿತ ಗಂಡಸು ಮೃತಪಟ್ಟಿರುತ್ತಾರೆ. ಮೈಸೂರು ರೈಲ್ವೆ ಪೊಲೀಸ್ ಠಾಣೆಯವರು ಅಸಹಜ ಮರಣ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು, ವಾರಸುದಾರರು ಪತ್ತೆಯಾಗಿರುವುದಿಲ್ಲ.
ಮೃತ ವ್ಯಕ್ತಿಯ ವಯೋಮಿತಿ-60 ವರ್ಷ, ಎತ್ತರ-5.5 ಅಡಿ, ಕೋಲುಮುಖ, ಗೋಧಿ ಮೈಬಣ್ಣ, ಕೃಶವಾದ ಶರೀರ. ಮೃತಪಟ್ಟ ವ್ಯಕ್ತಿಯ ದೇಹದ ಮೇಲೆ ಕಾಫಿ ಬಣ್ಣದ ಪ್ಯಾಂಟ್ ಹಾಗೂ ಒಂದು ಬೂದು ಬಣ್ಣದ ಬೆಲ್ಟ್  ಇರುತ್ತದೆ.
ಈ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಇರುವವರು ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2516579 ಯನ್ನು ಸಂಪರ್ಕಿಸುವುದು.
ತ್ರೈಮಾಸಿಕ ಕೆ.ಡಿ.ಪಿ ಸಭೆ ಮುಂದೂಡಿಕೆ
ಮೈಸೂರು,ಮಾ.14-ಕಂದಾಯ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶೀನಿವಾಸ್ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 16 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಬೇಕಿದ್ದ  ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಪಿ.ಎ.ಗೋಪಾಲ್ ತಿಳಿಸಿದ್ದಾರೆ. ಸದರಿ ಸಭೆಯು ಮಾರ್ಚ್ 17 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟ್ಟು ನೀರಿನ ವ್ಯವಸ್ಥೆ
ಮೈಸೂರು,ಮಾ.14.ಹುಲ್ಲಹಳ್ಳಿ ಅಣೆಕಟ್ಟೆಯ ರಾಂಪುರ ನಾಲೆಯ ಅಚ್ಚುಕಟ್ಟುದಾರರಿಗೆ ಕಬಿನಿ ಜಲಾಶಯದಲ್ಲಿ ಹಾಲಿ ಇರತಕ್ಕ ನೀರಿನ ಪ್ರಮಾಣ ಹಾಗೂ ಕಳೆದ ಸಾಲುಗಳ ಅನುಭವಗಳನ್ನು ಗಮನಿಸಿ 2016 ನೇ ಬೇಸಿಗೆ ಅರೆನೀರಾವರಿ ಬೆಳೆಗಳಿಗೆ ಕಟ್ಟು ನೀರಿನ ವ್ಯವಸ್ಥೆ ಮಾಡಿ ನೀರು ಸರಬರಾಜು ಮಾಡಲಾಗುವುದು ಎಂದು ಕಬಿನಿ ನಾಲೆಗಳ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಮಾರ್ಚ್ 23 ರಿಂದ ಏಪ್ರಿಲ್ 4 ರವರೆಗೆ ಒಟ್ಟು 15 ದಿನಗಳು, ಏಪ್ರಿಲ್ 14 ರಿಂದ ಏಪ್ರಿಲ್ 28 ರವರೆಗೆ  ಒಟ್ಟು 15 ದಿನಗಳು, ಮೇ 6 ರಿಂದ ಮೇ 20 ರವರೆಗೆ ಒಟ್ಟು 15 ದಿನಗಳು ಹಾಗೂ ಮೇ 28 ರಿಂದ ಜೂನ್ 6 ರವರೆಗೆ ಒಟ್ಟು 10 ದಿನಗಳು ನೀರು ಬಿಡಲಾಗುವುದು.
 ಏಪ್ರಿಲ್ 7 ರಿಂದ ಏಪ್ರಿಲ್ 13 ರವರೆಗೆ  ಒಟ್ಟು 7 ದಿನಗಳು, ಏಪ್ರಿಲ್ 29 ರಿಂದ ಮೇ 5 ರವರೆಗೆ ಒಟ್ಟು 7 ದಿನಗಳು, ಮೇ 21 ರಿಂದ ಮೇ 27 ರವರೆಗೆ ಒಟ್ಟು 7 ದಿನಗಳು ನೀರನ್ನು ನಿಲ್ಲಿಸಲಾಗುವುದು. ಜೂನ್ 7 ರಿಂದ ನೀರು ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು.
ಹುಲ್ಲಹಳ್ಳಿ ನಾಲೆಯ ಆಧುನೀಕರಣ ಕಾಮಗಾರಿ ಕೈಗೊಂಡಿರುವುದರಿಂದ 2016 ರ ಬೇಸಿಗೆ ಬೆಳೆಗೆ ಹುಲ್ಲಹಳ್ಳಿ ಅಣೆಕಟ್ಟೆಯ ಹುಲ್ಲಹಳ್ಳಿ ನಾಲಾ ಅಚ್ಚುಕಟ್ಟಿಗೆ ನೀರು ಒದಗಿಸಲಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಟ್ಟು ನೀರಿನ ವ್ಯವಸ್ಥೆ
ಮೈಸೂರು,ಮಾ.14-ನುಗುಜಲಾಶಯ ಯೋಜನೆಯಡಿ ಬರುವ ನುಗು ಎಡದಂಡೆ ಮತ್ತು ನುಗು ಬಲದಂಡೆ ನಾಲೆಯ ಅಚ್ಚುಕಟ್ಟುದಾರರಿಗೆ ನುಗು ಜಲಾಶಯದಲ್ಲಿ ಹಾಲಿ ಇರತಕ್ಕ ನೀರಿನ ಪ್ರಮಾಣ ಹಾಗೂ ಕಳೆದ ಸಾಲುಗಳ ಅನುಭವಗಳನ್ನು ಗಮನಿಸಿ 2016 ನೇ ಬೇಸಿಗೆ ಅರೆಖುಷ್ಕಿ ಬೆಳೆಗಳಿಗೆ ಕಟ್ಟು ನೀರಿನ ವ್ಯವಸ್ಥೆ ಮಾಡಿ ನೀರು ಸರಬರಾಜು ಮಾಡಲಾಗುವುದು ಎಂದು ನಂಜನಗೂಡು ಕಬಿನಿ ನಾಲೆಗಳ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಮಾರ್ಚ್ 16 ರಿಂದ ಮಾರ್ಚ್ 30 ರವರೆಗೆ ಒಟ್ಟು 15 ದಿನಗಳು, ಏಪ್ರಿಲ್ 15 ರಿಂದ ಏಪ್ರಿಲ್ 25 ರವರೆಗೆ  ಒಟ್ಟು 11 ದಿನಗಳು, ಮೇ 7 ರಿಂದ ಮೇ 16 ರವರೆಗೆ ಒಟ್ಟು 10 ದಿನಗಳು ಹಾಗೂ ಜೂನ್ 1 ರಿಂದ ಜೂನ್ 10 ರವರೆಗೆ ಒಟ್ಟು 10 ದಿನಗಳು ನೀರು ಬಿಡಲಾಗುವುದು.
 ಮಾರ್ಚ್ 31 ರಿಂದ ಏಪ್ರಿಲ್ 14 ರವರೆಗೆ ಒಟ್ಟು 15 ದಿನಗಳು,  ಏಪ್ರಿಲ್ 26  ರಿಂದ ಮೇ 6 ರವರೆಗೆ ಒಟ್ಟು 11 ದಿನಗಳು, ಮೇ 17 ರಿಂದ ಮೇ 31 ರವರೆಗೆ ಒಟ್ಟು 15 ದಿನಗಳು ನೀರನ್ನು ನಿಲ್ಲಿಸಲಾಗುವುದು. ಜೂನ್ 11 ರಿಂದ ನೀರು ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.
ಕಲೆಗಳಲ್ಲಿ ಜೀವಕಳೆ ತುಂಬಿದೆ ಹೆಚ್.ಆರ್.ಬಸಪ್ಪ


ಮೈಸೂರು,ಮಾ.14-ಪ್ರಾಂತೀಯ ದೂರಸಂಪರ್ಕ ತರಬೇತಿ ಕೇಂದ್ರದಲ್ಲಿ ಮೈಸೂರು ವಿಭಾಗ ಮಟ್ಟದ ಚಿತ್ರಕಲಾ ಶಿಕ್ಷಕರಿಗೆ ಕರ್ನಾಟಕದ ಸಂಸ್ಕøತಿ ಕುರಿತು ಹಮ್ಮಿಕೊಳ್ಳಲಾಗಿದ್ದ 4 ದಿನಗಳ  ಚಿತ್ರಕಲಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಆರ್.ಬಸಪ್ಪ ಅವರು ಭಾಗವಹಿಸಿ ಕಲೆಗಳಲ್ಲಿ ಜೀವಕಳೆ ತುಂಬಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಬೆಂಗಳೂರಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಮಾರ್ಚ್ 9 ರಿಂದ 12 ರವರೆಗೆ ಏರ್ಪಡಿಸಿದ್ದ, ಈ ಕಾರ್ಯಾಗಾರದಲ್ಲಿ 5 ಜಿಲ್ಲೆಗಳ ಸುಮಾರು 56 ಚಿತ್ರಕಲಾಶಿಕ್ಷಕರು ಭಾಗವಹಿಸಿ ಕ್ಯಾನ್ವಾಸ್‍ಗಳ ಮೇಲೆ ಕರ್ನಾಟಕದ ಸಂಸ್ಕøತಿಯನ್ನು ಕುರಿತು ವಿವಿಧ ಶೈಲಿಯಲ್ಲಿ 4 ದಿನಗಳ ಕಾಲ ಕಲಾಕೃತಿಗಳನ್ನು ರಚಿಸಿದರು.
ಡಯಟ್‍ನ ಪ್ರಾಂಶುಪಾಲ  ಆರ್. ರಘುನಂದನ್ ಅವರು ಮಾತನಾಡಿ ಮಹಾಭಾರತ ಯುದ್ಧವು ನಡೆಯಲು ಚಿತ್ರಕಲಾವಿದನೇ ಕಾರಣ. ಮಹಾಭಾರತದಲ್ಲಿ ಪಾಂಡವರ ಅರಮನೆಯ ವೈಭವವನ್ನು ನೋಡುತ್ತ  “ಮಹಾರಾಜನಾದ ದುರ್ಯೋಧನನು ಪಾಂಡವರ ಅರಮನೆಗೆ ಆಗಮಿಸಿದಾಗ ಕಲಾವಿದನ ಕೈಚಳಕದಿಂದ 3ಡಿ ಶೈಲಿಯಲ್ಲಿ ಚಿತ್ರಿತವಾಗಿದ್ದ ಕೊಳವನ್ನು ಹೋಲುತ್ತಿದ್ದ ಚಿತ್ರವನ್ನು ನೋಡಿ ಕಾಲು ತೊಳೆÉಯಲು ಇಳಿದಾಗ ಅದು ಕೊಳವಲ್ಲ, ಕಲಾವಿದನ ಕೈಚಳಕವೆಂದು ತಿಳಿದು ಸಹನೆ ಕಳೆದುಕೊಂಡು ಮುನ್ನಡೆಯುತ್ತಾನೆ. ಮುಂದೆ ನಿಜವಾದ ಕೊಳವನ್ನು ಕಂಡು ಇದೂ ಸಹ ಚಿತ್ರವೆಂದು ಭ್ರಮಿಸಿ ಮುನ್ನಡೆಯುತ್ತಿರುವಾಗ ಕೊಳದಲ್ಲಿ ಕಾಲು ಜಾರಿ ಬೀಳುತ್ತಾನೆ. ಇದನ್ನು ನೋಡಿದ ದ್ರೌಪದಿಯು ಜೋರಾಗಿ ನಕ್ಕಳು”. ಇದೇ ಮಹಾಭಾರತದ ಮಹಾಭಾರತದ ಮಹಾಯುದ್ಧಕ್ಕೆ ಕಾರಣವಾಯಿತೆಂದು ಕಲಾವಿದರ ಕೌಶಲ್ಯತೆಯನ್ನು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಜಂಟಿ ನಿರ್ದೇಶಕರಾದ ಬಿ.ಕೆ. ಬಸವರಾಜು ಹಾಗೂ ನಿವೃತ್ತ ಚಿತ್ರಕಲಾ ಪರಿವೀಕ್ಷರಾದ ಕಲ್ಲನಗೌಡರ್‍ಟವರು ಭಾಗವಹಿಸಿದ್ದ ಚಿತ್ರಕಲಾ ಶಿಕ್ಷಕರಿಗೆ ಪ್ರಶಸ್ತಿ ಪತ್ರವನ್ನು ನೀಡಿದರು.   ಸಮಾರಂಭದಲ್ಲಿ ಹಿರಿಯ ಕಲಾವಿದರಾದ  ಜಿ.ಎಂ. ಜಂಗಿ, ಪಿ.ಕೆ.ಗೋಪಾಲಕೃಷ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಚಿನ್ನದ ಪದಕ: ಒಂದು ಲಕ್ಷ ರೂ ಚೆಕ್ ಹಸ್ತಾಂತರ


ಮೈಸೂರು,ಮಾ.14.ಮ್ಯೆಸೂರು ವಿಶ್ವವಿದ್ಯಾಲಯದ ಭೂಗರ್ಬ ಶಾಸ್ತ್ರದ ಪ್ರೋಫೇಸರ್,  ಡಾ: ಮಹೇಶ್ ಬಿಲ್ವ ಅವರು  “ಅಡ್ವಾನ್ಸಡ್ ಪೇಲಿಯಂಟಾಲಜಿಅಥವಾ ಪೇಲಿಯಂಟಾಲಜಿ” ವಿಷಯದಲ್ಲಿ ಮೊದಲ ಪ್ರಯತ್ನದಲ್ಲೇ ಅತ್ಯುನ್ನತ ಅಂಕಗಳಿಸುವ ವಿದ್ಯಾರ್ಥಿಯನ್ನು ಉತ್ತೇಜನ ನೀಡಿ ಪ್ರತ್ಸಾಹಿಸುವ ಸಲುವಾಗಿ 2016 ಮ್ಯೆಸೂರು ವಿಶ್ವವಿದ್ಯಾಲಯ ಶತಮಾನೋತ್ಸವ ಅಂಗವಾಗಿ ಶ್ಯಕ್ಷಣಿಕ ಸಾಲಿನಿಂದಲೇ ಅನ್ವಯಸುವಂತೆ ತಮ್ಮ ತಂದೆ ತಾಯಿ “ಶ್ರೀಮತಿ. ಸಿದ್ದಯ್ಯ ಲಕ್ಷ್ಮೀದೇವಮ್ಮ ಮತ್ತುಕೇಂಪೇಗೌಡ ಲಿಂಗಪ್ಪ”ರವರ ಹೆಸರಿನಲ್ಲಿಚಿನ್ನದ ಪದಕ ಪ್ರಧಾನ ಮಾಡಲು ಇತ್ತೀಚೆಗೆ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ: ಕೆ.ಎಸ್.ರಂಗಪ್ಪರವರಿಗೆ ಒಂದು ಲಕ್ಷ ರೂಪಾಯಿ ಚೆಕ್‍ನ್ನು ಹಸ್ತಾಂತರಿಸಿದರು.
   ಇದೇ ಸಂದರ್ಭದಲ್ಲಿ ಬಿಲ್ವ ಕುಟುಂಬದ ಸದಸ್ಯರುಗಳಾದ ಶ್ರೀಮತಿ ಉಷಾ, ಪುತ್ರ ರಾಕೇಶ್, ಸಹೋದರಿಯಾದ ಹೇಮಾಶೇಖರ್ ಇಂದಿರಾಜಯರಾಂ ಹಾಗು ಸಹೋದರ ಶ್ರೀ. ನಾಗೇಶ್ ಬಿಲ್ವ ಹಾಜರಿದ್ದರು.

ಆರ್.ಎಸ್.ಎಸ್.ಮುಖಂಡನ ಕೊಲೆ; ಮೈಸೂರು ಬಂದ್-ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

 ಆರ್.ಎಸ್.ಎಸ್.ಮುಖಂಡನ ಕೊಲೆ; ಮೈಸೂರು ಬಂದ್
 ಮೈಸೂರು, ಮಾ. 14- ಮೈಸೂರು ನಗರದ ಉದಯಗಿರಿ ಬಡಾವಣೆಯಲ್ಲಿ ನಿನ್ನೆ ಸಂಜೆ ಆರ್.ಎಸ್.ಎಸ್ ಮುಖಂಡ ಓರ್ವರ ಕಗ್ಗೊಲೆಯಾಗಿದ್ದು, ಈ ಹಿನ್ನೆಲೆಯಲ್ಲಿ  ಬಿಜೆಪಿ ಹಾಗೂ ಆರ್.ಎಸ್.ಎಸ್. ಕಾರ್ಯಕರ್ತರು ಕಲೆಯನ್ನು ಖಂಡಿಸಿ ಮೈಸೂರು ಬಂದ್‍ಗೆ ಕರೆನೀಡುವ ಮೂಲಕ ಶಾಂತಿಯುತ  ಬಂದ್ ಆಚರಿಸಿದರು.
 ಇಂದಿನ ಬಂದ್ ನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು, ಕೆಲವುಕಡೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೆ, ಮತ್ತೆ ಕೆಲವುಕಡೆ ತರೆದಿದ್ದವು, ಪೆಟ್ರೋಲ್ ಬಂಕ್‍ಗಳು ಮುಚ್ಚಿದ್ದರಿಂದ ಕೆಲ ವಾಹನ ಸವಾರರು ಪೆಟ್ರೋಲ್ ಸಿಗದೆ ಪರದಾಡುವಂತಾಯಿತು.
 ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿ ಸಾರಿಗೆ ವಾಹನಗಳನ್ನು ತಡೆದು, ಕೆಲವುಕಡೆ ಸಣ್ಣಪುಟ್ಟ ಕಲ್ಲು ತೂರಾಟ ನಡೆದವು, ಇದರಿಮದ ವಾತಾವರಣ ಪ್ರಕ್ಷುಬ್ದ ಸಿತಿಗೆ ತಲುಪಿತ್ತು.
 ಮುನ್ನೆಚ್ಚರಿಕೆ ಕ್ರಮವಾಗಿ ನಗರ ಪೊಲೀಸ್ ಆಯುಕ್ತರು ನಗರದಾದ್ಯಂತ ನಿಷೇಶಾಜ್ಞೆ ಜಾರಿಗೊಳಿಸಿದ್ದರಿಂದ ಪ್ರತಿಭಟನಾ ಕಾರರು ಗುಂಪು ಸೇರಲು ಸಾಧ್ಯವಾಗದ ಕಾರಣ  ಪೊಲೀಸರು ಪ್ರತಿಭಟನಾಕಾರರ ನಡುವೆ ವಾಗ್ವಾದ, ಮಾತಿನ ಚಕಮಖಿ ನಡೆದು ಕಲ್ಲು ಪೊಲೀಸರ ಮೇಲೆ ಕಲ್ಲು ತೂರಾಟ  ನಡೆಯಿತು. ಪೊಲೀಸರು  ಗುಂಪನ್ನು ಚದುರಿಸುವ ಸಲುವಾಗಿ ಲಘು ಲಾಟಿ ಪ್ರಹಾರ ಮಾಡಿದರು.
 ಕೆಲವುಕಡೆ ಕಿಡಿಗೇಡಿಗಳು  ಕಾರು, ಆಟೋ, ದ್ವಿಚಕ್ರ ವಾಹನಗಳ ಮೇಲೆ  ಕಲ್ಲು ತೂರಿ ಜಖಂಗೊಳಿಸಿದರು.
 ಇಂದು ಪಿಯುಸಿ ಪರೀಕ್ಷೆ ಇದ್ದುದರಿಂದ ಪರೀಕ್ಷೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ  ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಯಿತು.ಗ್ರಾಮಾಂತರ ಪ್ರದೇಶಗಳಿಂದ  ಬರುವ ವಿಧ್ಯಾರ್ಥಿಗಳು ಸ್ವಲ್ಪಮಟ್ಟಿಗೆ ತೊಂದರೆ ಅನುಭವಿಸುವಂತಾಯಿತು.
 ಎಲ್ಲಾ ಕಡೆ  ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
   ಘಟನೆಯ ವಿವರ: ಭಾನುವಾರ ಸಂಜೆ 5-30ರ ಸಮಯದಲ್ಲಿ ಕ್ಯಾತಮಾರನ ಹಳ್ಳಿಯ ವಾಸಿ ರಾಜು (33) ಎಂಬ ಆರ್.ಎಸ್.ಎಸ್. ಮುಖಂಡ ಉದಯಗಿರಿಯ  ರಾಜ್ ಕುಮಾರ್ ರಸ್ತೆಯ ವೃತ್ತದಲ್ಲಿರುವ  ಟೀ ಅಂಗಡಿಯೊಂದರ ಚಹ ಸೇವಸುತ್ತಿದ್ದಾಗ ಅಪರಿಚಿತ ವ್ಯಕ್ತಿ ಬಂದು ಏಕಾ ಏಖಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ  ಪರಾರಿ ಯಾದರು, ತೀವ್ರವಾಗಿ ಗಾಯಗೊಮಡ ಇವರನ್ನು ಅಲ್ಲಿನ ಸಾರ್ವಜನಿಕರು ತಕ್ಷಣ ಆಸ್ಪತ್ರೆಗೆ  ಸಾಗಿಸಿ  ಚಿಕಿತ್ಸೆಕೊಡಿಸಿದರು. ಚಿಕಿತ್ಸೆ ಫಲಕಾರಿಯಾಗದೆ  ರಾಜು ಮೃತಪಟ್ಟರು.
  ಹಳೆಯ ವೈಷಮ್ಯದ ಹಿಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆಯಾದರು ಪೊಲೀಸ್ ತನಿಖೆಯಿಂದ ನಿಜಾಂಶ ಹೊರಬರಬೇಕಿದೆ.
ಉದಯಗಿರಿ ಪೊಲೀಸರು  ಪ್ರಕರಣ ದಾಕಲಿಸಿಕೊಂಡು ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತಯೆಗಾಗಿ ಬಲೆಬೀಸಿದ್ದಾರೆ,
ಬಮದ್ ನಿಮಿತ್ತ ಯಾವುದೇ ಶಾಲಾ ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ    ರಜೆ ಘೊಷಣೆ ಯಿಲ್ಲ, ಸಾರ್ವ ಶಾಂತಿ ಭಂಗ ಉಮಟುಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು  ಎಂದು ಜಿಲ್ಲಾಧಿಕಾರಿ ಸಿ. ಶಿಖಾ  ಆದೇಶಹೊರಡಿಸಿದ್ದಾರೆ.
 ನಗರದಲ್ಲಿ ಪ್ರಕ್ಷುಬ್ದ ವಾತಾವರಣವಿರÀುವುದರಿಂದ  ಆಯಕಟ್ಟಿನ ಸೂಕ್ಷ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ತೆ ಮಾಡಲಾಗಿದೆ.
'

Wednesday 9 March 2016

 10 ರಂದು ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಮಂಡ್ಯ ಮಾರ್ಚ್ 9. ಮಾನ್ಯ ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಎಚ್. ಅಂಬರೀಷ್ ಅವರು 2016ರ ಮಾರ್ಚ್ 10 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅಂದು ಬೆಳಗ್ಗೆ 9.30ಕ್ಕೆ ಬೆಂಗಳೂರಿನಿಂದ ರಸ್ತೆ ಮೂಲಕ ಹೊರಟು ಮಧ್ಯಾಹ್ನ 12 ಗಂಟೆಗೆ ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ತ್ರೈಮಾಸಿಕ ಕೆ.ಡಿ.ಪಿ. ಸಭೆ ನಡೆಸುವರು.

“ರಾಷ್ಟ್ರೀಯ ಯುವ ಪಡೆ” ಯ ಸ್ವಯಂಸೇವಕರ ಆಯ್ಕೆ
ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯವು ದೇಶದಾದ್ಯಂತ “ರಾಷ್ಟ್ರೀಯ ಯುವ ಪಡೆ”(ಓಂಖಿIಔಓಂಐ ಙಔUಖಿಊ ಅಔಖPS) ಎಂಬ ಕಾರ್ಯಕ್ರಮವನ್ನು ನೆಹರು ಯುವ ಕೇಂದ್ರದ ಮೂಲಕ ಅನುಷ್ಟಾನಗೊಳಿಸುತ್ತಿದೆ. ಈ ಯೋಜನೆಯಲ್ಲಿ ಜಿಲ್ಲಾವಾರು ಈ ಕೆಳಗಿನ ನಿಬಂಧನೆಗಳಿಗೆ ಅನುಗುಣವಾಗಿ ಯುವಜನರನ್ನು ನೇಮಕ ಮಾಡಿಕೊಂಡು, ಅವರಿಗೆ ತರಬೇತಿ ನೀಡುವ ಮೂಲಕ ಅವರು ಗ್ರಾಮೀಣ ಪ್ರದೇಶದ ಯುವಜನರನ್ನು ಯುವಕ/ಯುವತಿ/ಮಹಿಳಾ ಮಂಡಳಿಗಳಾಗಿ ಸಂಘಟಿಸುವ ಹಾಗೂ ಅವರನ್ನು ಸಮಾಜಮುಖಿಗಳನ್ನಾಗಿಸುವ ಕಾರ್ಯವನ್ನು ನಿರ್ವಹಿಸಬೇಕು.
ಅರ್ಜಿ ಹಾಕಲು ಇಚ್ಛಿಸುವ ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆಯವರಿಗೆ ಆದ್ಯತೆಯಿದೆ.
ಅಭ್ಯರ್ಥಿಗಳು 18-25 ವಯೋಮಿತಿಯವರಾಗಿರಬೇಕು.
ಅಭ್ಯರ್ಥಿಗಳು ಕಡ್ಡಾಯವಾಗಿ ಮಂಡ್ಯ ಜಿಲ್ಲೆಯ ನಿವಾಸಿಗಳಾಗಿರಬೇಕು.
ಅರ್ಜಿ ಹಾಕಬಯಸುವವರು ಯಾವುದೇ ಶಾಲಾ/ಕಾಲೇಜುಗಳ ವಿದ್ಯಾರ್ಥಿಗಳಾಗಿರಬಾರದು ಹಾಗೂ ಬೇರೆ ಯಾವುದೇ ಸಂಘ/ಸಂಸ್ಥೆ ಅಥವಾ ಇಲಾಖೆಯಲ್ಲಿ ಪೂರ್ಣ ಅಥವಾ ಅರೆಕಾಲಿಕ ಹುದ್ದೆಯಲ್ಲಿ ತೊಡಗಿಸಿಕೊಂಡಿರಬಾರದು.
ಯೋಜನೆಯ ಅವಧಿಯು 2 ವರ್ಷಗಳದ್ದಾಗಿದ್ದು, ಮೊದಲ ವರ್ಷದಲ್ಲಿ ಅವರ ಕೆಲಸ-ಕಾರ್ಯಗಳು ತೃಪ್ತಿಕರವಾಗಿದ್ದಲ್ಲಿ ಮಾತ್ರ ಅವರ ಸೇವೆಯನ್ನು ಎರಡನೆಯ ವರ್ಷಕ್ಕೆ ವಿಸ್ತರಿಸಲಾಗುವುದು.
ಆಯ್ಕೆಯಾದವರು ತರಬೇತಿಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆಯಲ್ಲದೆ, ತರಬೇತಿ ನಂತರ ಗ್ರಾಮಗಳಿಗೆ ತೆರಳಿ ಯುವ ಸಂಘಟನಾ ಚಟುವಟಿಕೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಭಾವನೆ ಮತ್ತು ಪ್ರವಾಸ ಭತ್ಯೆಯೆಂದು ಮಾಹೆಯಾನ ರೂ. 2,500/ ಅನ್ನು ಮಾತ್ರ ನೀಡಲಾಗುವುದು.
ಮೇಲಿನ ನಿಬಂಧನೆಗಳಿಗನುಗುಣವಾಗಿ, ಮಂಡ್ಯ ಜಿಲ್ಲೆಯ ಅರ್ಹ ಮತ್ತು ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಕಛೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ದಿ:25-03-2016 ರ ಸಂಜೆ 5.00 ಗಂಟೆ ಒಳಗಾಗಿ ಜಿಲ್ಲಾ ಯುವಸಮನ್ವಯಾಧಿಕಾರಿಗಳು, ನೆಹರು ಯುವ ಕೇಂದ್ರ, ಜಿಲ್ಲಾ ಪಂಚಾಯತ್ ಹತ್ತಿರ, ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜು ರಸ್ತೆ, ಮಂಡ್ಯ ಇವರಿಗೆ ಸಲ್ಲಿಸಲು ತಿಳಿಸಲಾಗಿದೆ.

ಹೆಬ್ಬಕವಾಡಿ ಗ್ರಾಮದಲ್ಲಿ ವಿಶೇಷ ಸಭೆ
ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಕವಾಡಿ ಗ್ರಾಮದಲ್ಲಿ ವಾರ್ಡ್‍ಗಳ ಸಭೆಯನ್ನು 2016ರ ಮಾರ್ಚ್ 10 ರಂದು  ಹಾಗೂ ವಿಶೇಷ ಗ್ರಾಮ ಸಭೆಯನ್ನು 2016ರ ಮಾರ್ಚ್  11 ರಂದು ಆಯೋಜಿಸಲಾಗಿದೆ ಎಂದು ಮಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಹದೇವು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೀಲಾರದಲ್ಲಿ ಗ್ರಾಮ ಸಭೆ
ಕೀಲಾರ ಗ್ರಾಮ ಪಂಚಾಯಿತಿಯ 2ನೇ ಸುತ್ತಿನ ವಾರ್ಡ್‍ಸಭೆ 2016 ಮಾರ್ಚ್ 14 ರಂದು ಹಾಗೂ 15 ರಂದು 2ನೇ ಸುತ್ತಿನ ಗ್ರಾಮ ಸಭೆಯನ್ನು ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಲ್ಲೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿರುv
ಮೈಸೂರು.09ಮಾರ್ಚ್  2016
ವಸತಿ ಯೋಜನೆ ಮಾರ್ಚ್ ಅಂತ್ಯದೊಳಗೆ ಗುರಿ ಸಾಧಿಸಲುಶಂಭುದಯಾಳ್ ಮೀನ  ಸೂಚನೆ
ಮೈಸೂರು, ಮಾರ್ಚ್ 9 . ವಸತಿ ಯೋಜನೆಗಳಡಿ ಮನೆಗಳ ನಿರ್ಮಾಣಕ್ಕೆ ನಿಗದಿ ಪಡಿಸಿರುವ ಗುರಿಯನ್ನು ಮಾರ್ಚ್ ಅಂತ್ಯದೊಳಗೆ ಸಾಧಿಸಲು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಶಂಭು ದಯಾಳ್ ಮೀನಾ ತಿಳಿಸಿದರು.
 ಇಂದು ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಕೊಡಗು ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಯೋಜನೆಯಡಿ ಮನೆಗಳ ನಿರ್ಮಾಣದ ಪ್ರಗತಿ ಪರಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಬಡವರು ಹಾಗೂ ಆಶ್ರಯರಹಿತರಿಗೆ ಮನೆ ನಿರ್ಮಾಣಕ್ಕೆಂದು ಸರ್ಕಾರ ಸಾಕಷ್ಟು ಅನುದಾನವನ್ನು ಮೀಸಲಿರಿಸಿದೆ. ಆದರೆ ಅನುದಾನವನ್ನು ಸಮರ್ಪಕವಾಗಿ ಬಳಸÀಲು ಅಧಿಕಾರಿಗಳು ಜವಾಬ್ದಾರರಾಗಬೇಕು. ಮನೆ ನಿರ್ಮಾಣದಲ್ಲಿ ಫಲಾನುಭವಿಗಳು ಅನುದಾನವನ್ನು ಸರಿಯಾಗಿ ಬಳಸದಿದ್ದರೆ ಹಾಗೂ ವಿಳಂಬ ಮಾಡಿದರೆ ಕಾರಣ ಕೇಳಿ ಸಂಬಂಧಪಟ್ಟವರಿಗೆ ಮೂರು ನೋಟಿಸ್ ನೀಡಿ ಮೂಲಕ ಮುಂದಿನ ವಸತಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬ ಮಾಹಿತಿಯನ್ನು ನೀಡಬೇಕು ಎಂದ ಹೇಳಿದರು.
  ವಸತಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್ ಮಾತನಾಡಿ ಆಶ್ರಯರಹಿತರಿಗೆ ವಸತಿ ನೀಡುವುದು ಪುಣ್ಯದ ಕೆಲಸ. ವಸತಿ ಯೋಜನೆಯಡಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಫಲಾನಿಭವಿಗಳಿಗೆ ಹಾಗೂ ಅಧಿಕಾರಿಗಳಿಗೆ ವ್ಯವಸ್ಥೆಯನ್ನು ಸರಳಿಕರಿಸಲಾಗಿದೆ. ಹಿಂದೆ ಮನೆ ನಿರ್ಮಾಣ ಮಾಡದೆ ಹಣವನ್ನು ಪಡೆಯಲಾಗುತ್ತಿತ್ತು. ಆದರೆ ಇಂದು ಮನೆ ನಿರ್ಮಾಣದ ಪ್ರಗತಿ ಅನುಗುಣವಾಗಿ ಹಂತ ಹಂತವಾಗಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದರು.
  ವಸತಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ನೀಡಲಾಗುವ ಆದ್ಯತೆಯನ್ನು ನಗರ ಪ್ರದೇಶಗಳಲ್ಲಿ ಮನೆ  ನಿರ್ಮಾಣಕ್ಕೆ ನೀಡಬೇಕು. ಪ್ರತಿ ತಿಂಗಳೂ ಮುಖ್ಯಮಂತ್ರಿಗಳ ಕಾರ್ಯಾಲಯ ವಸತಿ ಯೋಜನೆಯ ಪ್ರಗತಿಯನ್ನು ಪರಿಶೀಲುಸುತ್ತಿದೆ. ಮನೆ ನಿರ್ಮಾಣದಿಂದ ವ್ಯಕ್ತಿಯ ಸಾಮಾಜಿಕ ಸ್ಥಿತಿ ಹೆಚ್ಚುವುದಲ್ಲದೆ ಆರ್ಥಿಕವಾಗಿ ಸಾವಲಂಬಿಯಾಗಲು ಸಹಕರಿಸುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚೆದ್ದುಕೊಂಡು ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಿಕೊಡಲು ಶ್ರಮಿಸಬೇಕು ಎಂದು ತಿಳಿಸಿದರು.
     ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಸತಿ ನಿರ್ಮಾಣದ ಎಂಪಿಕ್ ಗುರಿಗೆ ಶೇ49.71, ಚಾಮರಾಜನಗರ ಶೇ59.77, ಮಂಡ್ಯ ಶೇ54.78, ಹಾಸನ ಶೇ42.44 ಹಾಗೂ ಕೊಡಗು ಶೇ48.70 ಪ್ರಗತಿ ಸಾಧಿಸಿದೆ. ಮಾರ್ಚ್ 20ರೊಳಗೆ ಛಾವಣಿ ಹಂತದಲ್ಲಿರುವ ಶೇ90 ರಷ್ಟು ಹಾಗೂ ಲಿಂಟಲ್ ವರೆಗೆ ಪ್ರಗತಿ ಹೊಂದಿರುವ ಶೇ 50ರಷ್ಟು ಮನೆಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಿದರೆ ಎಂಪಿಕ್ ಗುರಿಯನ್ನು ಸಾಧಿಸಬಹುದು. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗುರಿ ಸಾಧಿಸಲು ವಿಪಲವಾದರೆ ಸರ್ಕಾರಕ್ಕೆ ಕ್ರಮವಹಿಸಲು ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
  ನಗರ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಎಂಪಿಕ್ ಪ್ರಗತಿಯಲ್ಲಿ ಚಾಮರಾಜನಗರ ಶೇ17.55, ಮೈಸೂರು ಶೇ 29.28, ಮಂಡ್ಯ ಶೇ 15.51, ಹಾಸನ ಶೇ12.56 ಹಾಗೂ ಕೊಡಗು ಶೇ 16.79 ಗುರಿ ಸಾಧಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ನೀಡಲಾಗುವ ಆದ್ಯತೆಯನ್ನು ನಗರ ಪ್ರದೇಶಗಳಿಗೂ ನೀಡಬೇಕು. ಆಶ್ರಯ ರಹಿತರು ನಗರ ಪ್ರದೇಶಗಲ್ಲೂ ಹೆಚ್ಚಿದ್ದಾರೆ. ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಆದ್ಯತೆ ಮೇರೆಗೆ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ನೆರವು ನೀಡಬೇಕು. ಗ್ರಾಮೀಣ ಅಥವಾ ನಗರ ಪ್ರದೇಶವಾಗಲಿ ಅಧಿಕಾರಿಗಳು ಮನೆಗಳ ಮನೆ ನಿರ್ಮಾಣ ಪ್ರಗತಿ ಕುರಿತು ಹೆಚ್ಚು ಕ್ಷೇತ್ರ ಪ್ರವಾಸಗಳನ್ನು ಕೈಗೊಳ್ಳಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು ಹೇಳಿದರು.
 ಸಭೆಯಲ್ಲಿ ಕೊಡಗು ಜಿಲ್ಲೆ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್, ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರತ್, ಮೈಸೂರು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಹಾಗೂ ಸಂಬಂಧಪಟ್ಟ ಇತರೆ ಅಧಿಕಾರಿಗಳು ಭಾಗವಹಿಸಿದರು.


ಮಾ 11 ರಂದು ನ್ಯಾಕ್ ಮೌಲ್ಯಮಾಪನ ಕಾರ್ಯಾಗಾರ
ಮೈಸೂರು,ಮಾ.9.ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ದಿನಾಂಕ:11.03.2016ರಂದು ಬೆಳಗ್ಗೆ 10.00ಗಂಟೆಗೆ ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ  ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ನ್ಯಾಕ್ ಮೌಲ್ಯಮಾಪನ ಮತ್ತು ಮರು ಮೌಲ್ಯಮಾಪನ ಕುರಿತು ಒಂದು ದಿನದ ನ್ಯಾಕ್ ಕಾರ್ಯಾಗಾರವನ್ನು ಆಯೋಜಿಸಿದೆ.
ಕಾರ್ಯಾಗಾರದ ನಂತರ ಮೈಸೂರು ವಲಯದ ಸರ್ಕಾರಿ ಕಾಲೇಜು ಪ್ರಾಂಶುಪಾಲರ ಒಕ್ಕೂಟದ ವತಿಯಿಂದ ಜಂಟಿ ನಿರ್ದೇಶಕರಾಗಿ ಹಾಗೂ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತರಾಗಿರುವವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕರ್ತವ್ಯನಿರತ ಪ್ರಾಂಶುಪಾಲರು ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಹಾಗೂ ನಿವೃತ್ತ ಪ್ರಾಂಶುಪಾಲರು ಸನ್ಮಾನ ಸ್ವೀಕರಿಸಲು ಅಗಮಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಪ್ರವಾಸ ಕಾರ್ಯಕ್ರಮ
ಮೈಸೂರು,ಮಾ.9.ಅಂಗವಿಲಕ ಅಧಿನಿಯಮದ ರಾಜ್ಯ ಆಯುಕ್ತರಾದ ಕೆ.ಎಸ್.ರಾಜಣ್ಣ ಅವರು ಮಾರ್ಚ್ 11 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಅಂದು ಬೆಳಿಗ್ಗೆ 11-30 ಗಂಟೆಗೆ ಲಕ್ಷ್ಮೀ ಪುರಂನಲ್ಲಿರುವ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿದ್ಯಾಲಯದಲ್ಲಿ ಸೆರೆಬ್ರೆಲ್ ಪಾಲಿನಸಿಯಿಂದಾಗಿ ಅಂಗವಿಕಲಳಾಗಿರುವ ವೈ.ಪಿ ಪ್ರಿಯದರ್ಶಿನಿ ಅವರಿಗೆ ವ್ಯಾಸಂಗ ಕುರಿತಾಗಿ ಉಂಟಾಗಿರುವ ತೊಂದರೆಗಳ ಬಗ್ಗೆ ವಿಚಾರಿಸಲಿದ್ದಾರೆ.
ಪ್ರವಾಸ ಕಾರ್ಯಕ್ರಮ
ಮೈಸೂರು,ಮಾ.9.ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಸಿ.ಜಿ.ಹುನಗುಂದ ಅವರು ಮಾರ್ಚ್ 11 ಹಾಗೂ 12 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಅವರು ಮಾರ್ಚ್ 11 ರಂದು ಸಂಜೆ 6 ಗಂಟೆಗೆ ಮೈಸೂರಿಗೆ ಆಗಮಿಸಿ, ಮೈಸೂರು ವಿಶ್ವವಿದ್ಯಾನಿಲಯದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಾರ್ಚ್ 12 ರಂದು ಬೆಳಿಗ್ಗೆ 11 ಗಂಟೆಗೆ ಕೃಷ್ಣಮೂರ್ತಿಪುರಂನಲ್ಲಿರುವ ಶಾರದ ವಿಲಾಸ ಕಾನೂನು ಕಾಲೇಜಿನಲ್ಲಿ ನಡೆಯಲಿರುವ ಮಾನವ ಹಕ್ಕುಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ

ಕೆ.ಎ.ಎಸ್ ಹಾಗೂ ಐ.ಎ.ಎಸ್. ಪರೀಕ್ಷೆಗೆ ತರಬೇತಿ
ಮೈಸೂರು,ಮಾ.9.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ 2016 ರ ಆಗಸ್ಟ್ ಮಾಹೆಯಲ್ಲಿ ನಡೆಯಲಿರುವ, ಕೆ.ಎ.ಎಸ್, ಐ.ಎ.ಎಸ್ ಹಾಗೂ ಐ.ಪಿ.ಎಸ್ ಪೂರ್ವಭಾವಿ ಪರೀಕ್ಷೆಗೆ ಹಾಗೂ ಕರ್ನಾಟಕ ಸರ್ಕಾರ ನಡೆಸುವ ವಿವಿಧ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ 50 ದಿನಗಳ ತರಬೇತಿ ನೀಡಲಾಗುವುದು.
ಆಸಕ್ತರು ಮಾರ್ಚ್ 20 ರೊಳಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2515944 ಯನ್ನು ಸಂಪರ್ಕಿಸುವುದು ಎಂದು ತರಬೇತಿ ಕೇಂದ್ರದ ಸಂಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಹಿರಂಗ ಹರಾಜು
ಮೈಸೂರು,ಮಾ.9.ಮೈಸೂರು ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಿಂದ  ಅಬಕಾರಿ ಅಪರಾಧಕ್ಕಾಗಿ ಜಪ್ತುಗೊಳಿಸಲಾದ ವಿವಿಧ ಮಾದರಿಯ 85 ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಹಾಲಿ ಇರುವ ಸ್ಥಿತಿಯಲ್ಲೇ ದಿನಾಂಕ 04-04-2016 ರಂದು ಬೆಳಿಗ್ಗೆ 11 ಗಂಟೆಗೆ ಅಬಕಾರಿ ಉಪ ಅಧೀಕ್ಷಕರು, ಉಪವಿಭಾಗ ನಜûರ್‍ಬಾದ್ ಇಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.
     ಆಸಕ್ತರು ವಾಹನದ ಮಾದರಿ ಹಾಗೂ ಹೆಚ್ಚಿನ ಮಾಹಿತಿಗೆ ಡೆಪ್ಯೂಟಿ ಕಮಿಷನರ್ ಆಫ್ ಎಕ್ಸೈಸ್ ಕಚೇರಿ ಮೈಸೂರು ಇಲ್ಲಿ ಸಂಪರ್ಕಿಸುವುದು.
ಸಾವಿರ ಮಾತÀನ್ನು ಒಂದು ಚಿತ್ರಕಲಾಕೃತಿ ಹೇಳುತ್ತದೆ:  ಜಿ.ಪಿ.ಚಂದ್ರಮ್ಮ
 ಮೈಸೂರು,ಮಾ.9. ಸಾವಿರ ಮಾತುಗಳನ್ನು ಒಂದು ಚಿತ್ರಕಲಾಕೃತಿ ತಿಳಿಸುತ್ತದೆ ಎಂದು ಡಿ.ಎಸ್.ಇ.ಆರ್.ಟಿ. ಸಹನಿರ್ದೇಶಕಿ ಜಿ.ಪಿ. ಚಂದ್ರಮ್ಮ ಅವರು ಅಭಿಪ್ರಾಯಪಟ್ಟರು.
    ಅವರು ಇಂದು  ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ  ಟಿ.ಕೆ.ಲೇಔಟ್‍ನಲ್ಲಿರುವ ಪ್ರಾಂತೀಯ ದೂರ ಸಂಪರ್ಕ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕದ ಸಂಸ್ಕøತಿ ಕುರಿತು ಚಿತ್ರ ರಚನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ತಮ್ಮ ಕೆಲಸವನ್ನು ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತಗೊಳಿಸಿಕೊಳ್ಳದೆ ಸಮಾಜದ ಬೆಳವಣಿಗೆಗೆ ಸಹಕಾರಿಯಾಗುವಂತೆ ವೃತ್ತಿಪರ ಕಲೆಗಳಾದ ಚಿತ್ರಕಲೆ, ಕರಕುಶಲ ಕಲೆ, ಸಂಗೀತ, ಸಾಹಿತ್ಯ, ನಾಟ್ಯಗಳಿಗೆ ಒತ್ತು ಕೊಟ್ಟು ಭೋದಿಸಿದರೆ ಸಮಾಜವು ಉನ್ನತ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಪರಿಣಾಮಕಾರಿಯಾಗುತ್ತದೆ ಎಂದು ಭಾಗವಹಿಸಿದ ಶಿಕ್ಷಕರಿಗೆ ಸಲಹೆ ನೀಡಿದರು.
   ಶ್ರೀ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿ ಡೀನ್ ಡಾ ಡಿ.ಎ. ಉಪಾದ್ಯ, ಅವರು ಚಿತ್ರಕಲೆಯ ಸೌಂದರ್ಯ ಮೀಮಾಂಸೆ ಹಾಗೂ ಶಾಸ್ತ್ರ ವಿಷಯಗಳನ್ನು ಮಕ್ಕಳಿಗೆ ಚಿತ್ರಕಲೆಯಲ್ಲಿ ತಿಳಿಸಿಕೊಡಬೇಕೆಂದು ಶಿಕ್ಷಕರಿಗೆ  ತಿಳಿಸಿದರು.
       ಕಾರ್ಯಕ್ರಮದಲ್ಲಿ ಪ್ರಾಂತೀಯ ದೂರಸಂಪರ್ಕ ಕೇಂದ್ರದ ಪ್ರಾಂಶುಪಾಲ ಎ.ವಿ.ಶ್ರೀಕಂಠನ್, ಸಿ.ಟಿ.ಇ ಪ್ರವಾಚಕಎಂ.ಡಿ.ಶಿವಕುಮಾರ್, ಚಿತ್ರಕಲಾ ವಿಭಾಗ ಆಯುಕ್ತರ ಕಚೇರಿ ಸಹಾಯಕ ನಿರ್ದೇಶಕ ಎಂ.ಎ. ಕಂಠಿ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಬಸವೇಗೌಡ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ನೆರವು ಧನ: ಅರ್ಜಿ ಆಹ್ವಾನ
ಮೈಸೂರು,ಮಾ.9-ಕೊಲ್ಕತ್ತಾದ ರಾಜಾರಾಂ ಮೋಹನ್‍ರಾಯ್ ಗ್ರಂಥಾಲಯ ಪ್ರತಿಷ್ಠಾನದ ವತಿಯಿಂದ 2015-16ನೇ ಸಾಲಿಗೆ ಸಾರ್ವಜನಿಕ ಗ್ರಂಥಾಲಯ ಸೇವೆ ಒದಗಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಹೊಂದಾಣಿಕೇತರ ನೆರವು ಧನ ಸಹಾಯ ಯೋಜನೆ ಅಡಿಯಲ್ಲಿ ಧನ ಸಹಾಯ ನೀಡಲಾಗುವುದು.
     ಆಸಕ್ತರು ನಿಗಧಿತ ಅರ್ಜಿಯನ್ನು ಜಿಲ್ಲಾ/ನಗರ ಕೇಂದ್ರ ಗ್ರಾಂಥಾಲಯದಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಮಾರ್ಚ್ 23 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2423678 ಯನ್ನು ಸಂಪರ್ಕಿಸುವುದು.
ನಬಾರ್ಡ್‍ನಿಂದ ಡಿಬೆಂಚರ್ ಸಾಲಪತ್ರ
ಮೈಸೂರು,ಮಾ.9.ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ರೂ 1000/-ಮುಖ ಬೆಲೆಯ ತೆರಿಗೆ ಮುಕ್ತ, ಸುರಕ್ಷಿತ, ಮರುಪಾವತಿಸುವ ರೂ 3500 ಕೋಟಿ ಪ್ರಮಾಣದ ನಾನ್ ಕನ್ವರ್ಟಿಬಲ್ ಡಿಬೆಂಚರ್ ಸಾಲಪತ್ರವನ್ನು ಸಾರ್ವಜನಿಕರಿಗಾಗಿ ಜಾರಿ ಮಾಡುತ್ತಿರುವುದಾಗಿ ಪ್ರಕಟಿಸಿದೆ. ಈ ಬಾಂಡ್‍ಗಳಿಗೆ ಆದಾಯ ತೆರಿಗೆ ಕಾಯಿದೆ 1961 ಸೆಕ್ಷನ್ 10(15)(iv)(h) ರಡಿ ವಿನಾಯತಿ ಇರುತ್ತದೆ.
    ಮಾರ್ಚ್ 9 ರಂದು ಮಾರುಕಟ್ಡೆಯಲ್ಲಿ ಬಿಡುಗಡೆಯಾಗಲಿರುವ ಬಾಂಡ್‍ಗಳು ಮಾರ್ಚ್ 14ಕ್ಕೆ ಅಥವಾ ಅದಕ್ಕೆ ಮುಂಚೆ ಮುಕ್ತಾಯ ಮಾಡುವ ಅಥವಾ ಅವಧಿ ವಿಸ್ತಣೆ ಮಾಡುವ ಸಾಧ್ಯತೆ ಹೋಂದಿದೆ. ಬಾಂಡ್‍ಗಳನ್ನು ಮುಂಬೈ ಶೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಲಾಗುವುದು.
     60% ಇಶ್ಯೂ ಪ್ರಮಾಣ ಪತ್ರವನ್ನು ಕೆಟಗರಿ 4 ರಲ್ಲಿ ಬರುವ ಭಾರತದ ನಿವಾಸಿ ವ್ಯಕ್ತಿ ಮತ್ತು ಕರ್ತಾ ಮೂಲಕ ಹೂಡಿಕೆ ಮಾಡು ಹಿಂದು ಅವಿಭಾಜಿತ ಕುಟುಂಬದ ಹೂಡಿಕೆದಾರರಿಗೆ ಹೂಡಿಕೆ ಮಾಡುವ ಪ್ರಮಾಣ ಒಟ್ಟು ರೂ 10 ಲಕ್ಷದ ವರೆಗೆ ಬಂಡ್‍ಗಳ ಸರಣಿಯಲ್ಲಿ ಕಾಯ್ದಿರಿಸಲಾಗಿದೆ. 15% ಇಶ್ಯೂ ಪ್ರಮಾಣವನ್ನು ಕೆಟಗರಿ 1 ರಲ್ಲಿ ಅನುಮೀದಿತ ಸಾಂಸ್ಥಿಕ ಖರೀದಿದಾರರು ಮತ್ತು ಕೆಟಗರಿ 2 ಕಾರ್ಪೋರೇಟ್ಸ್ ಹೂಡಿಕೆದಾರರಿಗೆ ಕಾಯ್ದಿರಿಸಲಾಗಿದೆ. 10% ಇಶ್ಯೂ ಪ್ರಮಾಣವನ್ನು ಕಟಗರಿ 3 ರಲ್ಲಿ ಬರುವ ಅಧಿಕ ಮೌಲ್ಯ ಹೊಂದಿರುವ ವ್ಯಕ್ತಿಗಳಿಗೆ ಕಾಯ್ದಿರಿಸಲಾಗಿದೆ.
    ಬಾಂಡ್‍ನಿಂದ ಬರುವ ಬಡ್ಡಿಗೆ ಆದಾಯ ತೆರಿಗೆ ವಿನಾಯಿತಿ ದೊರೆಯುತ್ತದೆ. ಬಾಂಡ್ ಹಂಚಿಕೆಯಲ್ಲಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಪ್ರಥಮ ಆದ್ಯತೆ ಕೊಡಲಾಗುವುದು.
ಬಾಂಡ್‍ಗಳು 10 ಮತ್ತು 15 ವರ್ಷ ಅವಧಿ ಹೊಂದಿರುತ್ತದೆ. ಕೆಟಗರಿ 4 ರ ಹೂಡಿಕೆದಾರರಿಗೆ ಕೂಪನ್ ದರ 7.29% 10 ವರ್ಷದ ಅವಧಿಗೆ ಮತ್ತು 7.64% 15 ವರ್ಷದ ಅವಧಿಗೆ ಇರುತ್ತದೆ. ಕೆಟಗರಿ 1,2, ಮತ್ತು 3 ರಲ್ಲಿ ಬರುವ ಹೂಡಿಕೆದಾರರಿಗೆ 7.04% 10 ವರ್ಷದ ಅವಧಿಗೆ ಮತ್ತು 7.35% 15 ವರ್ಷದ ಅವಧಿಗೆ ಇರುತ್ತದೆ.ಬಾಂಡ್‍ಗಳ ಮೇಲೆ ಬಡ್ಡಿ ವಾರ್ಷಿಕವಾಗಿ ನೀಡಲಾಗುವುದು. ಈ ಇಶ್ಯೂ ದಿಂದ ಬರುವ ಹಣವನ್ನು ಭಾರತದಲ್ಲಿಯ ನೀರಾವರಿ ಯೋಜನೆಗಳಿಗೆ ನೇರ ಸಾಲ ಕೊಡಲು ಅಥವಾ ಪುನರ್ಧನ ಒದಗಿಸಲು ಉಪಯೋಗಿಸಲಾಗುವುದು.
ಬಾಂಡ್‍ಗಳಿಗೆ ಅಖISIಐ  ಸಂಸ್ಥೆಯ   ಅಖISIಐ ಂಂಂ/Sಣಚಿbಟe ಮತ್ತು ಇಂಡಿಯಾ ರೇಟಿಂಗ್ ಸಂಸ್ಥೆಯ  Iಓಆ ಂಂಂ/Sಣಚಿbಟe ರೇಟಿಂಗ್ ದೊರೆತಿದೆ. ಈ ರೇಟಿಂಗ ಹೊಂದಿದ ಆರ್ಥಿಕ ಹೂಡಿಕೆಗಳು ಆರ್ಥಿಕ ಜವಾಬ್ದಾರಿ ನಿರ್ವಹಣೆಯಲ್ಲಿ ಅತ್ಯಧಿಕ ಸುರಕ್ಷಿತ ವೆಂದು ಪರಿಗಣಿಸಲ್ಪಡುತ್ತದೆ
 ಈ ಇಶ್ಯೂಗೆ ಂxis ಖಿಡಿusಣee Seಡಿviಛಿes ಐimiಣeಜ    ಂಏ ಅಚಿಠಿiಣಚಿಟ Seಡಿviಛಿes ಐimiಣeಜ, ಇಜeಟತಿeiss ಈiಟಿಚಿಟಿಛಿiಚಿಟ Seಡಿviಛಿes ಐimiಣeಜ, IಅIಅI Seಛಿuಡಿiಣies ಐimiಣeಜ, ಖಖ Iಟಿvesಣoಡಿs ಅಚಿಠಿiಣಚಿಟ Seಡಿviಛಿes Pಡಿivಚಿಣe ಐimiಣeಜ  SಃI ಅಚಿಠಿiಣಚಿಟ ಒಚಿಡಿಞeಣs ಐimiಣeಜ ಲೀಡ್ ಮ್ಯಾನೇಜರ್ ಆಗಿರುತ್ತದೆ ಎಂದು ಮೈಸೂರು ನಬಾರ್ಡ್‍ನ ಸಹಾಯಕ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Tuesday 8 March 2016

ಸಮಾನ ವೇತನಕ್ಕೆ ಆಗ್ರಹಿಸಿ 11 ರಂದು ವಿಧಾನಸೌದ ಚಲೋ
ಮೈಸೂರು, ಮಾ.8- ಸಮಾನ ಕನಿಷ್ಠ ವೇತ£, ಗುತ್ತಿಗೆ ಕಾರ್ಮಿಕರ ಖಾಯಂಗೆ ಶಾಸನ ತರಲು ಮತ್ತು ಅಸಂಘಟಿತ  ಕಾರ್ಮಿಕರಿಗೆ ಭವಿಷ್ಯ ನಿಧಿಗಾಗಿ ಒತ್ತಾಯಿಸಿ ಇದೇ ತಿಂಗಳ 11 ರಂದು ಸೆಂಟರ್ ಆಫ್ ಇಂಡಿಯನ್ ಟ್ರೆಡ್ ಯೂನಿಯನ್ (ಸಿಐಟಿಯು) ವತಿಯಿಂದ  ವಿಧಾನಸೌದ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಎನ್. ಉಮೇಶ್ ತಿಳಿಸಿದರು.
 ಮೈಸೂರಿನ ಪತ್ರಕÀರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಕಾರ್ಮಿಕರ ಬೇಡಿಕೆಗಳಿಗಾಗಿ ಈ ಬೃಹತ್ ವಿಧಾನ ಸೌದ ಚಲೋ ಕಾರ್ಯಕ್ರಮ ಹಮ್ಮಿಕೊಳಲಾಗಿದ್ದು, 7ನೇ ಕೇಂದ್ರ ವೇತನಾಯೋಗದ ಶಿಫಾರಸ್ಸಿನಂತೆ ರೂ. 18,000  ಸಮಾನ ಕನಿಷ್ಠ ವೇತನಕ್ಕಾಗಿ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಿವೆ, ಆದರೆ ರಾಜ್ಯ ಸರ್ಕಾರ ಇದುವರೆಗೆ  ರಾಜ್ಯದಲ್ಲಿ ಒಟ್ಟು 74  ಅನುಸೂಚಿತ ಉದ್ದಿಮೆಗಳಲ್ಲಿ 9 ಉದ್ದಿಮೆಗಳಿಗೆ 10.010 ರೂ. ಕನಿಷ್ಠ ವೇತನ  ನಿಗಧಿಪಡಿಸಿದೆ, ಅಂತೆಯೇ  ಅರೆಕುಶಲ ಕಾರ್ಮಿಕರಿಗೆ ರೂ. 10998 ನಿಗಧಿಗೊಳಿಸಿದೆ ಇದೇರೀತಿ ಅಲವು ಉದ್ದಿಮೆಗಳಿಗೆ ಕಡಿಮೆ ವೇತನ ನಿಗಧಿಪಡಿಸಿ  ಕಾರ್ಮಿಕರನ್ನು ವಂಚಿಸುತ್ತಿರುವುದನ್ನು ವಿರೋಧಿಸಿ , ಎಲ್ಲಾ ಉದ್ದಿಮೆಗಳಿಗೂ ಸಮಾನ ವೇತನ ಜಾರಿಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತದೆ ಎಂದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸ್ಕೀಂ ನೌಕರರಾಗಿ ಸೇವೆ ಸಲ್ಲಿಸುತ್ತಿರುವ   ಅಂಗನವಾಡಿ, ಬಿಸಿಯೂಟ ತಯಾರಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಮತ್ತಿತರೆ  ನೌಕರರನ್ನುಕನಿಷ್ಠ ವೇತನ ಅನುಸೂಚಿಗೆ ಒಳಪಡಿಸಲು  ಸಿಐಟಿಯು ಒತ್ತಾಯಿಸುತ್ತದೆ ಎಂದು ಹೇಳಿದರು.
 ಈ ಕಾರ್ಯಕ್ರದಲ್ಲಿ ರಾಜ್ಯಾದ್ಯಂತ ಸುಮಾರು ಹತ್ತುಸಾವಿರಕ್ಕು ಹೆಚ್ಚು ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
 ಪತ್ತರಿಕಾ ಗೋಷ್ಠಿಯಲ್ಲಿ  ಸಂಘಟನೆಯ ಜಿಲ್ಲಾಧ್ಯಕ್ಷ ಬಾಲಾಜಿರಾವ್,  ಪ್ರಧಾನ ಕಾರ್ಯದರ್ಶಿ ಜಯರಾಮ್ ಉಪಸ್ಥಿತರಿದ್ದರು.

ಜನನಿ ಟ್ರಸ್ಟ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
 ಮೈಸೂರು,ಮಾ. 8- ಮೈಸೂರಿನ ಜನನಿ ಟ್ರಸ್ಟ್ ವತಿಯಿಂದ ವಿಶ್ವ ಮಹಿಳಾ ದಿನವಾದ ಇಂದು  ಅಂತರಾಷ್ಟ್ರೀಯ ದಿನಾಚರಣೆಯನ್ನು ಪತ್ರಕರ್ತರ ಭವನದಲ್ಲಿ ಆಚರಿಸಲಾಯಿತು.
   ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ  ನಿರ್ದೇಶಕಿ ನಿರ್ಮಲ ಮಠಪತಿ  ಮಾತನಾಡಿ  ಇಮದು ಎಲ್ಲಾ ರಂಗಗಳಲ್ಲೂ ಪುರುಷರಷ್ಟೇ ಸರಿ ಸಮಾನರಾಗಿ ಮಹಿಳೆಯರು ದುಡಿಯುತ್ತಿದ್ದಾರೆ, ಸಮಾಜದಲ್ಲಿ ಮಹಿಳೆಯರು ಬಾಲಕಿಯಾಗಿ, ತಾಯಿಯಾಗಿ, ಅತ್ತೆಯಾಗಿ ಹಾಗೂ ಹಿರಿಯರಾಗಿ ಕುಟುಂಬದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ, ಮಹಿಳೆಯರನ್ನು ಗೌರವದಿಂದ ಕಾಣದ ಯಾವುದೇ ಕುಟುಂಬವು ಶಾಂತಿ ನಿಮ್ಮದಿಯಿಂದ ಬಾಳಲು ಸಾಧ್ಯವಿಲ್ಲ,  ಇಂದು ಮಹಿಳೇಯರ ಮೇಲೆ ನಾನಾ ರೀತಿಯ ದೌರ್ಜನ್ಯಗಳು ನಡೆಯುತ್ತಿರುವುದನ್ನು ದಿನನಿತ್ಯವೂ ಕಾಣುತ್ತಿದ್ದೇವೆ. ಎಂದರು.
 ಸಮಾಜದಲ್ಲಿ ಮಹಿಳೆಯರು ಮುಂದೆ ಬರಲು ಅವಕಾಶಗಳ ಕೊರತೆ ಇದೆ ಅವುಗಳನ್ನು ನಿವಾರಿಸುವ ಮನೋಬಾವ ಸಮಾಜದಲ್ಲಿ ಬೆಳೆಯಬೇಕು ಆಗ ಮಾತ್ರ ಮಹಿಳೇಯರು ಮುಂದೆಬರಲು ಸಾಧ್ಯ, ಈ ದಿಸೆಯಲ್ಲಿ ಮಹಿಳೆಯರು ತಮಗೆ ಎದುರಾಗುವ  ಯಾವುದೇ ಅಡ್ಡಿ ಆತಂಕಗಳನನು ದೈರ್ಯದಿಂದ ಎದುರಿಸಿ ಮುನ್ನುಗ್ಗಬೇಕೆಂದು ಮಹಿಳೆಯರಿಗೆ ಕರೆಯಿತ್ತರು.


 ಈ ಸಂದರ್ಭದಲ್ಲಿ  ಸಮಾಜದಲ್ಲಿ ಸಾರ್ವಜನಿಕರಿಗೆ  ಸೇವೆ ಸಲ್ಲಿಸಿರುವ ಮಹಿಳಾ ಸಾಧಕರುಗಳಾದ ನಗರವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸದಾಕಾಲ ತೊಡಗಿಸಿಕೊಂಡಿರುವ ಪಾಪಮ್ಮ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಸಂತಕುಮಾರಿ, ಬಸ್ ಡ್ರೈವರ್ ನಿಂಗಮ್ಮ, ಪೋಸ್ಟ್ ವುಮೆನ್ ವೆಂಕಟಲಕ್ಷ್ಮಮ್ಮ, ಶುಶ್ರೂಸಕಿ  ಡಿ. ಪಂಕಜ, ಹೋಂಗಾರ್ಡ್ ಶಿವರಂಜನಿ, ಶಾಲೆಯ ಮುಖ್ಯೋಪದ್ಯಾಯಿನಿ ಎಂ.ಜಿ. ಸುಗುಣ, ಪತ್ರಕರ್ತೆ ಪುಷ್ಪಲತಾ, ಅಂಗನವಾಡಿಯ ಎನ್. ಗಾಯಿತ್ರಿ, ಬಿಸಿಯೂಟ ತಯಾರಕಿ ಪಿ. ಮಂಜುಳ, ಸಮಾಜ ಸೇವಕಿ ಪಿ. ಶೋಭಾ, ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
 ಈ ಸಂದರ್ಭದಲ್ಲಿ ಪುಸಬೆಯ ಮಾಜಿ ಸದಸ್ಯ ಜಿಆರ್. ಚೆನ್ನಕೇಶವಯ್ಯ, ಜನನಿ ಟ್ರಸ್ಟ್ ಅಧ್ಯಕ್ಷ ಎಂ.ಕೆ. ಅಶೊಕ್,  ಉಪಾಧ್ಯಕ್ಷ ಎಸ್. ನಾಗರತ್ನ, ರೋಟರಿ ಕ್ಲಬ್ ಅಧ್ಯಕ್ಷೆ ಮಾಲಿನಿ ಶ್ರೀನಿವಾಸ್ ಹಾಗೂ ರಮೇಶ್‍ಕುಮಾರ್ ಉಪಸ್ಥಿತರಿದ್ದರು.
ನೂತನ ಮದ್ಯದಂಗಡಿಗಳನ್ನು ತೆರೆಯದಂತೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು,ಮಾ.8- ರಾಜ್ಯದಲ್ಲಿ ನೂತನವಾಗಿ ಮದ್ಯದ ಅಂಗಡಿಗಳನ್ನು ತೆರೆಯಲು  ಪರವಾನಗಿ ನೀಡಬಾರದು ಎಂದು ಒತ್ತಾಯಿಸಿ ಅಖಿಲಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ  ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
 ರಾಜ್ಯದಲ್ಲಿ ಇತ್ತೀಚಿನ ವರಧಿಗಳ ಪ್ರಕಾರ  ಹೊಸದಾಗಿ 9,600 ಅಂಗಡಿಗಳನ್ನು ತೆರೆಯಲು ಪರವಾನಗಿ ನೀಡಲಾಗಿದ್ದು, ಈ ಪೈಕಿ 3,950 ವೈನ್ ಶಾಪ್‍ಗಳಿವೆ ಎಂಬ ಮಾಹಿತಿ ಇದೆ, ಕೂಡಲೇ ಈ ನಿರ್ಧಾರ ದಿಂದ ಹಿಂದೆ ಸರಿಯಬೇಕು,
 ರಾಜ್ಯದಲ್ಲಿ ಅನಧಿಕೃತ ಮದ್ಯ ಮಾರಾಟದ ನೆಪವನ್ನು ಮುಂದುಟ್ಟುಕೊಂಡು ರಾಜ್ಯ ಸರ್ಕಾರವು ರಾಜಸ್ವವನ್ನು ಸಂಗ್ರಹಿಸಲು ಹೊರಟಿರುವ ಕ್ರಮವನ್ನು ರಾಜ್ಯದ ಜನತೆ ಸಹಿಸಲು ಸಾಧ್ಯವಿಲ್ಲ್, ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದಲ್ಲಿ ಮತ್ತಷ್ಟು ಬಡತನ, ಶೋಷಣೆ, ಕೌಟುಂಬಿಕ ಕಲಹ ಹಾಗೂ ಅಶಾಮತಿಗಳು ತಲೆದೋರುವ ಸಾಧ್ಯತೆಗಳಿವೆ ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತನ್ನ ಈ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
 ಪ್ರತಿಭಟನೆಯಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹೆಚ್.ವಿ. ರಾಜೀವ್, ಅಖಿಲ ಕರ್ನಾಟಕ ಜನಜಾಗೃತಿ ವೇಧಿಕೆಯ ರಾಜ್ಯಾಧ್ಯಕ್ಷ ಸತೀಶ್‍ಹೊನ್ನವಳ್ಳಿ, ದರ್ಮಸ್ಥಳ ಗ್ರಾಮಯೋಜನಾ ಜಿಲ್ಲಾ ನಿರ್ದೇಶಕ ಮಹಾಬಲಕುಲಾಲ್, ಪ್ರಭುಸ್ವಾಮಿ, ರಾಮೇಗೌಡ  ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

Monday 7 March 2016

ಸ್ವಸ್ಥ ಸಮಾಜಕ್ಕೆ ಶಿಕ್ಷಣ, ಆರೋಗ್ಯ ಮುಖ್ಯ: ಡಾ.ಅನಿಲ್ ಆನಂದ್

ಸ್ವಸ್ಥ ಸಮಾಜಕ್ಕೆ ಶಿಕ್ಷಣ, ಆರೋಗ್ಯ ಮುಖ್ಯ: ಡಾ.ಅನಿಲ್ ಆನಂದ್
- ಮಹಿಳೆಯರ ಸಮಸ್ಯೆಗಳ ಕುರಿತು ಡಾ.ಯಾಶಿಕಾ ಸಂವಾದ
70 ಸಾವಿರ ರೂ. ಔಷಧ ಉಚಿತ ವಿತರಣೆ
ಭಾರತೀನಗರ: ಸ್ವಸ್ಥ ಸಮಾಜಕ್ಕೆ ಶಿಕ್ಷಣ ಮತ್ತು ಆರೋಗ್ಯ ಬಹಳ ಮುಖ್ಯ. ಗ್ರಾಮೀಣ ಜನರು ವಿದ್ಯೆ ಕಲಿತು ಆರೋಗ್ಯಕರ ಜೀವನ ನಡೆಸಬೇಕು ಎಂದು ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಅವರು ಸಲಹೆ ನೀಡಿದರು.
ಮಂಡ್ಯ ಯೂತ್ ಗ್ರೂಪ್ ವತಿಯಿಂದ ಇಲ್ಲಿಗೆ ಸಮೀಪದ ಕಡಿಲುವಾಗಿಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ  ಏರ್ಪಡಿಸಿದ್ದ ಗ್ರಾಮೀಣ ಮಹಿಳೆಯರ ದೈಹಿಕ ಆರೋಗ್ಯ ಕುರಿತ ಜಾಗೃತಿ ಕಾರ್ಯಕ್ರಮ, ಉಚಿತ ಔಷಧಗಳ ವಿತರಣೆ ಕಾರ್ಯಕ್ರಮದಲ್ಲಿ ಗ್ರಾಮದ ಜನರ ಆರೋಗ್ಯ ತಪಾಸಣೆ ನಡೆಸಿ ಮಾತನಾಡಿದರು.
ಗ್ರಾಮದೊಳಗೆ ನೈರ್ಮಲ್ಯ ಕಾಪಾಡಿಕೊಂಡರೆ ಬಹಳಷ್ಟು ರೋಗಗಳನ್ನು ದೂರವಿಡಬಹುದು. ಚರಂಡಿಗಳಲ್ಲಿ ಶುಚಿತ್ವ ಕಾಪಾಡಿಕೊಂಡು, ತಿಪ್ಪೇಗುಂಡಿಗಳಿಗೆ ಗ್ರಾಮದ ಹೊರವಲಯದಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ಕುಡಿಯಲು ಶುದ್ಧವಾದ ನೀರನ್ನು ಬಳಸುವಂತೆ ಸಲಹೆ ನೀಡಿದರು.
ಅವೈಜ್ಞಾನಿಕವಾಗಿ ನೋವು ನಿವಾರಕ ಮಾತ್ರೆಗಳನ್ನು ಬಳಸಬಾರದು. ಇದರಿಂದ ಕಿಡ್ನಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಲೇಬಲ್ ಇಲ್ಲದ ಮಾತ್ರೆಗಳನ್ನು ಉಪಯೋಗಿಸುವುದರಿಂದ ನಾನಾ ರೀತಿಯ ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ವೈದ್ಯರ ಸಲಹೆ ಇಲ್ಲದೆ ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಎಂದರಲ್ಲದೆ, ದೈಹಿಕ ಚಿಕಿತ್ಸೆಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ಮಹಿಳೆಯರ ಸಮಸ್ಯೆಗಳ ಕುರಿತು ಸಂವಾದ:
ಗ್ರಾಮೀಣ ಮಹಿಳೆಯರ ದೈಹಿಕ ಆರೋಗ್ಯ ಹಾಗೂ ವೈಯಕ್ತಿಕ ಸಮಸ್ಯೆಗಳ ಬಗ್ಗೆ ತಪಾಸಣೆ ನಡೆಸಿ, ಅವರೊಂದಿಗೆ ಸಂವಾದ ನಡೆಸಿದ ಡಾ.ಯಾಶಿಕಾ ಅನಿಲ್, ಗ್ರಾಮೀಣ ಮಹಿಳೆಯರು ಸಮಾಜದ ಬೆನ್ನಲುಬಾಗಿದ್ದಾರೆ. ಮೂಢ ನಂಬಿಕೆ ಹಾಗೂ ಸ್ವಾತಂತ್ರ್ಯದ ಕೊರತೆಯಿಂದ ಮಹಿಳೆಯರು ಅನಾರೋಗ್ಯ, ಅಪೌಷ್ಠಿಕತೆ ಸೇರಿದಂತೆ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಚ್ಚಿಡುವ ಮನೋಭಾವದಿಂದ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ ಎಂದು ಹೇಳಿದರು.
ಮುಟ್ಟಾಗುವ ಸಮಯದಲ್ಲಿ ನೈರ್ಮಲ್ಯದ ಕೊರತೆಯಿಂದ ಹಲವು ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಸೂಕ್ತ ಮುಂಜಾಗ್ರತೆ ವಹಿಸದೆ ಹಳೆಯ ಕಾಲದ ಪದ್ಧತಿಗಳನ್ನೇ ಈಗಲೂ ಅನುಸರಿಸುತ್ತಿದ್ದಾರೆ. ಇದರಿಂದ ಗರ್ಭಕೋಶ ಸಮಸ್ಯೆಗಳು, ಬಿಳಿಸೆರಗು, ಸೋಂಕು ಹೆಚ್ಚಾಗುತ್ತಿದೆ ಎಂದು ತಿಳಿಸಿದರು. ಮುಟ್ಟಾಗುವ ಸಮಯದಲ್ಲಿ ವಹಿಸಬೇಕಾದ ನೈರ್ಮಲ್ಯ ಜಾಗೃತಿ ಹಾಗೂ ಅನುಸರಿಸಬೇಕಾದ ಕ್ರಮಗಳನ್ನು ಸಂವಾದದ ಮೂಲಕ ಅರಿವು ಮೂಡಿಸಲಾಯಿತು.
ಸಣ್ಣಪುಟ್ಟ ಗರ್ಭಕೋಶ ಸಮಸ್ಯೆಗಳಿಗೆಲ್ಲಾ ಗರ್ಭಕೋಶವನ್ನು ತೆಗೆಯಬೇಕಾದ ಅಗತ್ಯವಿಲ್ಲ. ನಂತರದ ದಿನಗಳಲ್ಲಿ ಹಾರ್ಮೋನ್‍ಗಳ ಕೊರತೆಯಿಂದ ನಾನಾ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದ ಡಾ.ಯಾಶಿಕಾ, ಗರ್ಭಕೋಶ ಸಮಸ್ಯೆಗಳ ನಿವಾರಣೆಗೆ ಮುಂಜಾಗ್ರತೆ ವಹಿಸುವುದು ಹೇಗೆ ಎಂಬ ಬಗ್ಗೆ ಮಹಿಳೆಯರಿಗೆ ತಿಳಿವಳಿಕೆ ಹೇಳಿದರು.
ಈ ಆರೋಗ್ಯ ಕಾರ್ಯಕ್ರಮದಲ್ಲಿ ಗ್ರಾಮದ ಸುಮಾರು 266 ರೋಗಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಇದರಲ್ಲಿ 130ಕ್ಕೂ ಹೆಚ್ಚು ಮಹಿಳೆಯರಿದ್ದರು. 25 ಜನರಿಗೆ ಇಸಿಜಿ ಚಿಕಿತ್ಸೆ ನೀಡಲಾಯಿತು. 76 ಜನರಿಗೆ ರಕ್ತದೊತ್ತಡ ಪರೀಕ್ಷೆ, 20 ಮಂದಿಗೆ ದೈಹಿಕ ಚಿಕಿತ್ಸೆ ಹಾಗೂ 6 ಮಂದಿಗೆ ಮದ್ಯಪಾನದಿಂದ ಮುಕ್ತಗೊಳಿಸುವ ಕುರಿತು ಚಿಕಿತ್ಸೆ ನೀಡಲಾಯಿತು.
ಶಿಬಿರದಲ್ಲಿ 70 ಸಾವಿರ ರೂ. ಔಷಧ ಉಚಿತ ವಿತರಣೆ:
ನರರೋಗ ಸಂಬಂಧಿತ ಸಮಸ್ಯೆಗಳು, ತಲೆನೋವು, ಮಂಡಿನೋವು, ಬೆನ್ನುನೋವು, ಮೂರ್ಛೆರೋಗ, ಪಾಶ್ರ್ವವಾಯು, ಮಾನಸಿಕ ಒತ್ತಡ ಸೇರಿದಂತೆ ಅನೇಕ ಸಮಸ್ಯೆಗಳಿಂದ ನರಳುತ್ತಿದ್ದವರಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡ ರೋಗಿಗಳಿಗೆ 70 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು. ಇಂಟಾಸ್, ಸನ್‍ಫಾರ್ಮಾ, ಮ್ಯಾನ್‍ಕೈಂಡ್, ಸಿಸ್ಪೋಪಿಕ್ ಕಂಪನಿಗಳು ಈ ಔಷಧಗಳ ಪ್ರಾಯೋಜಕತ್ವ ವಹಿಸಿದ್ದವು.
ಇದೇ ವೇಳೆ ಗ್ರಾಮೀಣ ಮಹಿಳೆಯರಿಗೆ ಅನುಕೂಲವಾಗುವಂತೆ `ಸೋಫಿ' ಕಂಪನಿಯ 1200 ನ್ಯಾಪ್ಕಿನ್‍ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಗ್ರೂಪ್‍ನ ಪದಾಧಿಕಾರಿಗಳು ನೇತ್ರದಾನದ ಮಹತ್ವ ಕುರಿತು ಗ್ರಾಮದ ಜನರಲ್ಲಿ ಅರಿವು ಮೂಡಿಸಿದರು. ಯೂತ್ ಗ್ರೂಪ್‍ನ ಮರಿಲಿಂಗೇಗೌಡ, ಪ್ರಮೋದ್, ರಾಜಣ್ಣ, ದರ್ಶನ್, ಮಂಜು, ಶಿವ, ಭರತ್, ವಿನಯ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ವಿಶ್ವ ದಂತ ವೈದ್ಯರ ದಿನದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ದಂತ ಆರೋಗ್ಯ ತಪಾಸಣೆ ಶಿಬಿರ

ಮಂಡ್ಯ: ಭಾರತ ದೇಶ ಅಭಿವೃದ್ಧಿಪಥದತ್ತ ಮುನ್ನುಗ್ಗುತ್ತಿದೆ. ಆದರೆ ಇಂದಿಗೂ ಬಡಜನರಿಗೆ ಸರಿಯಾದ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಮಿಮ್ಸ್‍ನ ದಂತ ವೈದ್ಯ ಡಾ.ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು.
ನಗರದ ಹಾಲಹಳ್ಳಿ ಸ್ಪಂ ಬೋರ್ಡ್ ಶಾಲೆ ಆವರಣದಲ್ಲಿ ಮಿಮ್ಸ್‍ನ ದಂತ ಚಿಕಿತ್ಸಾ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ನಡೆದ ವಿಶ್ವ ದಂತ ವೈದ್ಯರ ದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ದಂತ ಆರೋಗ್ಯ ತಪಾಸಣೆ ಶಿಬಿರ, ಉಪನ್ಯಾಸ ಹಾಗೂ ದಂತ ಶುಚಿತ್ವ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಬ್ಬರೂ ದಂತಗಳ ಸಂರಕ್ಷಣೆ ಮಾಡಿಕೊಳ್ಳಬೇಕು. ಮೂರು ತಿಂಗಳಿಗೊಮ್ಮೆ ಚಿಕಿತ್ಸೆ ಪಡೆಯುವುದರಿಂದ ದಂತಗಳಲ್ಲಿ ಕಂಡು ಬರುವ ದೋಷಗಳನ್ನು ನಿವಾರಿಸಿಕೊಳ್ಳಬಹುದು. ದಂತಗಳ ಆರೋಗ್ಯ ರಕ್ಷಣೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ಕರೆ ನೀಡಿದರು.
ದಂತ ಸ್ವಚ್ಛ ವಿಧಾನ ಕೇವಲ 2 ರಿಂದ 4 ನಿಮಿಷಗಳಲ್ಲಿ ಮುಗಿಸಬೇಕು. ಹೆಚ್ಚು ಹೊತ್ತು ಹಲ್ಲುಗಳನ್ನು ಉಜ್ಜುವುದರಿಂದ ಹೊಸಡುಗಳು ಸವೆದು ಹಲ್ಲಿನ ಆಯಸ್ಸು ಕ್ಷೀಣಿಸುತ್ತದೆ. ಇದರ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಹೇಳಿದರು.
ದಂತಗಳಿಂದ ಮುಖದ ಸೌಂದರ್ಯವೂ ಹೆಚ್ಚುತ್ತದೆ. ಆದ್ದರಿಂದ ಹಲ್ಲುಗಳ ರಕ್ಷಣೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಶಿಬಿರದಲ್ಲಿ 300ಕ್ಕೂ ಹೆಚ್ಚು ಜನರಿಗೆ ತಪಾಸಣೆ ಹಾಗೂ ಪರಿಕರಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ಶೋಭಾ, ಡಾ.ಸುಭಾಷ್, ಡಾ.ಶಶಿಧರ್, ಡಾ.ನಳಿನ, ಎಸ್.ಎಂ.ಸುರೇಶ್ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಂಡ್ಯ: ಜಿಲ್ಲೆಯ ಬಹುತೇಕ ಟಿಎಪಿಸಿಎಂಎಸ್‍ಗಳಿಗೆ ಸರ್ಕಾರದಿಂದ ಬರಬೇಕಾದ ಸಬ್ಸಿಡಿ ಹಣ ಸಕಾಲಕ್ಕೆ ತಲುಪದೆ ನಷ್ಟವನ್ನು ಅನುಭವಿಸುವ ಪರಿಸ್ಥಿತಿ ಎದುರಾಗಿದೆ ಎಂದು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿ.ಡಿ.ಹರೀಶ್ ಹೇಳಿದರು.
ನಗರದ ಜಿಲ್ಲಾ ಸಹಕಾರ ಒಕ್ಕೂಟದ ಸಭಾಂಗಹಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ವತಿಯಿಂದ ನಡೆದ ಮಂಡ್ಯ ಜಿಲ್ಲೆಯಲ್ಲಿ ಬರುವ ಎಲ್ಲ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳಿಗೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲ ಟಿಎಪಿಸಿಎಂಎಸ್‍ಗಳಲಿ ಹಲವಾರು ನಿರ್ದೇಶಕರುಗಳು ಹೊಸದಾಗಿ ಆಯ್ಕೆಗೊಂಡಿದ್ದು, ಇದರಲ್ಲಿ ಹೆಚ್ಚಿನ ಜನ ನಿರ್ದೇಶಕರು ಮೊದಲ ಬಾರಿಗೆ ಸಹಕಾರಿ ರಂಗವನ್ನು ಪ್ರವೇಶಿಸಿದ್ದಾರೆ. ಆದ್ದರಿಂದ ಇಂತಹ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರುವುದ ಸೂಕ್ತ ಎಂದರು.
ಸರ್ಕಾರದಿಂದ ಬರುವ ಸಬ್ಸಿಡಿ ಹಣ ಸರಿಯಾದ ಕಾಲಕ್ಕೆ ಬರದೆ ಇರುವುದರಿಂದ ಟಿಎಪಿಸಿಎಂಎಸ್‍ಗಳು ನಷ್ಟ ಅನುಭವಿಸುತ್ತಿದ್ದು, ಇದರಿಂದ ನೌಕರರಿಗೂ ಸಂಬಳ ಸಕಾಲಕ್ಕೆ ನೀಡಲಾಗುತ್ತಿಲ್ಲ ಎಂದು ಹೇಳಿದರು.
ಎಲ್ಲ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇದರ ಬಗ್ಗೆ ಚರ್ಚೆ ನಡೆಸಿ ಮನವಿ ತಯಾರಿಸಿ ನಿಯೋಗದೊಂದಿಗೆ ಶಾಸಕರು, ಮಂತ್ರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ಕನಿಷ್ಠ 2 ತಿಂಗಳಿಗೊಮ್ಮೆ ಸಭೆ ಸೇರಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಟಿ.ನಾರಾಯಣ್, ಸಹಕಾರ ಸಂಘಗಳ ಉಪನಿಬಂಧಕರ ಬಿ.ಆರ್.ಕೃಷ್ಣಮೂರ್ತಿ, ಎಸ್.ನಾಗೇಂದ್ರ, ಶ್ರೀಧರ್, ಎಚ್.ಕೆ.ಕೃಷ್ಣೇಗೌಡ, ಶಂಕರೇಗೌಡ, ಎಂ.ಕೆ.ಸುಂದರಪ್ಪ, ಕೆ.ಎಲ್.ಶಿವರಾಜು, ಎ.ಎಂ.ಪ್ರಕಾಶ್, ಜಯಶೀಲಮ್ಮ ಉಪಸ್ಥಿತರಿದ್ದರು.

ವಿಶ್ವ ಮಹಿಳಾ ದಿನಾಚರಣೆ





ವಿಶ್ವ ಮಹಿಳಾ ದಿನಾಚರಣೆ-2016ಈ ದಿನದ ಬಗ್ಗೆ ಅದೆಷ್ಟು ಮಹಿಳೆಯರಿಗೆ ಗೊತ್ತು?ಮಹಿಳಾ ದಿನಾಚರಣೆ ಹಬ್ಬವೂ ಅಲ್ಲ, ಆನಂದದಿಂದಆಚರಣೆಗೊಂಡ ದಿನವೂ ಅಲ್ಲ. ನ್ಯೂರ್ಯಾರ್ಕ್‍ನಲ್ಲಿ ಕ್ಲಾರಾಜೆಟ್‍ಕಿನ್ ಎಂಬ ಮಹಿಳೆ ಕಾರ್ಮಿಕ ಕೆಲಸಕ್ಕಾಗಿ, ಸಮಾನವೇತನಕ್ಕಾಗಿ, ಹೆರಿಗೆ ಸೌಲಭ್ಯಕ್ಕಾಗಿ ತಿಂಗಳುಗಟ್ಟಲೆ ಹೋರಾಟನಡೆಸಿ, ಗೆಲುವು ಸಾಧಿಸಿದ ದಿನ. ಹುಟ್ಟಿನಿಂದಸಾಯುವವರೆಗೂ ದಿನನಿತ್ಯ ಒಂದಿಲ್ಲೊಂದುಸಂಘರ್ಷದಿಂದ ಸಾಧಿಸಿದ ದಿನದ ಒಂದು ಸ್ಮರಣೆಯ ದಿನಮಾತ್ರ. ವಿಶ್ವಸಂಸ್ಥೆ 1975 ರಲ್ಲಿ ಈ ದಿನವನ್ನು "ವಿಶ್ವ ಮಹಿಳಾ ದಿನ" ಎಂದು ಘೋಷಿಸಿತು.ದುಡಿವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹನೀಡುವುದಕ್ಕೆ "ಮಹಿಳಾ ದಿನ" ಎಂದು ಆಚರಿಸಲಾಗುತ್ತದೆ.ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ.21ನೆಯ ಶತಮಾನದಲ್ಲಿ ಮಹಿಳೆ ಪಾತ್ರ ಬದಲಾಗಿದೆ.ವೃತ್ತಿ, ಸಂಸಾರ ಎರಡನ್ನೂ ನಿಭಾಯಿಸಬಲ್ಲೆ ಎಂದುಮಾದರಿಯಾಗಿ ನಿಂತಿದ್ದಾಳೆ. ಬಹುತೇಕ ಪ್ರಮುಖಹುದ್ದೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆರಾರಾಜಿಸುತ್ತಿದ್ದಾಳೆ. ಇವತ್ತು ಮಹಿಳೆ ಉತ್ತಮ ಶಿಕ್ಷಣಪಡೆಯುತ್ತಿದ್ದಾಳೆ.ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಮುನ್ನಡೆದಿದ್ದರೂಅವಳ ಸ್ಥಿತಿಗತಿ, ಸ್ಥಾನಮಾನ, ಆರ್ಥಿಕ, ಸಾಮಾಜಿಕ, ರಾಜಕೀಯಕ್ಷೇತ್ರಗಳಲ್ಲಿ ಮೇಲಕ್ಕೇರಿಸುವುದು ಹೆಚ್ಚುಸಾಧ್ಯವಾಗಿಲ್ಲ. ಇದಕ್ಕೆ ಕಾರಣಗಳು ಹಲವಾರು ಇದ್ದರೂಉತ್ತರ ಅತ್ಯಂತ ಸರಳ. ಮಹಿಳಾ ಅಭಿವೃದ್ಧಿ ಎಂದಾಕ್ಷಣಕೇವಲ ಬೆರಳೆಣಿಕೆಯ ಮಹಿಳೆಯರಿಗೆ ಅವಕಾಶಕಲ್ಪಿಸುವುದು, ಸಬಲೀಕರಣ ಎಂದಾಕ್ಷಣ ಗಂಡನನ್ನುಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವುದು ಎಂದರ್ಥವಲ್ಲ.'ಮಹಿಳಾ ಪರ ಸಂಘರ್ಷ' ಎನ್ನುವುದು ಒಂದು ದಿನದಕಾರ್ಯಕ್ರಮ ಮಾಡಿ ಮುಗಿಸುವಂತಹದ್ದೂ ಅಲ್ಲ.ಉದ್ಯೋಗ ಕ್ಷೇತ್ರದಲ್ಲಿ ಹೆಣ್ಣು ಗಂಡಿಗೆ ಸರಿಸಮಾನಎಂದು ತೋರಿಸಿಕೊಂಡಿದ್ದರೂ, ಹಲವೆಡೆಗಳಲ್ಲಿ ಇನ್ನೂನಡೆಯುತ್ತಿರುವ ಲಿಂಗ ತಾರತಮ್ಯ, ಹೆಣ್ಣು ಭ್ರೂಣಹತ್ಯೆ,ಅತ್ಯಾಚಾರ ಇವುಗಳನ್ನು ತಡೆಯಬೇಕು. ವಿಶ್ವಾಸ, ಪ್ರೀತಿ,ಮಮತೆ, ನಂಬಿಕೆ, ನೈತಿಕ ಮೌಲ್ಯಗಳು ನಮ್ಮಸಮಾಜದ ಕಣ್ಣುಗಳಾಗಬೇಕು. ಮಹಿಳೆಯರಸಾಧನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪುರುಷರನೈಕ ಬೆಂಬಲ ದೊರಕಬೇಕು. "ಯತ್ರ ನಾರ್ಯಸ್ತುಪೂಜ್ಯಂತೆ ರಮಂತೆ ತತ್ರ ದೇವತಾ:" ಎಂಬ ಮಾತು ಕೇವಲಮಾತಾಗಿಯೇ ಇರಬಾರದು. ಅದನ್ನು ಆಚರಣೆಗೆತರಬೇಕು. ಆಗ ಮಾತ್ರ ಈ ವ್ಯವಸ್ಥೆಯಲ್ಲಿಮಹಿಳೆಯರಿಗೆ ಒಂದು ಒಳ್ಳೆಯ ಸ್ಥಾನ ಸಿಗಲು ಸಾಧ್ಯ.ಹೀಗಾದಲ್ಲಿ ಮಾತ್ರ ಅಂತರಾಷ್ಟ್ರೀಯ ಮಹಿಳಾದಿನಾಚರಣೆಯ ಉದ್ದೇಶ ಅರ್ಥಪೂರ್ಣ. ಮಹಿಳೆಯರಿಗೆ"ಮಹಿಳಾ ದಿನಾಚರಣೆಯ ಶುಭಾಷಯಗಳು

                           ".ಮೈಸೂರು ಜಿಲ್ಲೆಯಲ್ಲಿ "ವಿಶ್ವ ಮಹಿಳಾದಿನಾಚರಣೆ"ಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿಪ್ರತಿ ವರ್ಷದಂತೆ ಈ ವರ್ಷವೂ ವಿನೂತನವಾಗಿ ಆಚರಿಸಲುಉದ್ದೇಶಿಸಲಾಗಿದೆ. ಅದರಂತೆ ದಿನಾಂಕ:08-03-2016 ರಂದುಗ್ರಾಮಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿಕೇವಲ ಮಹಿಳೆಯರಲ್ಲದೆ ಪುರುಷರೂ ಸಹಸಕ್ರಿಯವಾಗಿ ಪಾಲ್ಗೊಂಡು ಮಹಿಳೆಯರಿಗಿರುವಹಕ್ಕುಗಳು, ಕಾನೂನುಗಳು ಹಾಗೂ ಸರ್ಕಾರದಿಂದಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು

ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಎಲ್ಲಾ ತಾಲ್ಲೂಕುಕೇಂದ್ರಗಳಲ್ಲಿಯೂ ಸಹ ಮಹಿಳಾ ದಿನಾಚರಣೆ-2016 ರಪ್ರಯುಕ್ತ ವೈವಿಧ್ಯಮಯಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.ಜಿಲ್ಲಾ ಮಟ್ಟದಲ್ಲಿ ದಿನಾಂಕ:08-03-2016 ರಂದು ಮಧ್ಯಾಹ್ನ

2.30 ಗಂಟೆಗೆ ಚೆಲುವಾಂಬ ಆಸ್ಪತ್ರೆಯಲ್ಲಿ "ಉನ್ನತೀಕರಿಸಿದಮಹಿಳೆಯರ ಮತ್ತು ಮಕ್ಕಳ ವಿಶೇಷ ಚಿಕಿತ್ಸಾ ಘಟಕ"ದಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳುಉದ್ಘಾಟಿಸಲಿದ್ದು, ಶ್ರೀ ವಾಸು, ಶಾಸಕರು ಚಾಮರಾಜ ಕ್ಷೇತ್ರ

ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಿಷ್ಠಾಚಾರದಂತೆ ಅತಿಥಿಗಣ್ಯರು ಆಗಮಿಸಲಿದ್ದಾರೆ. ಚಿಕಿತ್ಸಾ ಘಟಕದಉನ್ನತೀಕರಣಕ್ಕಾಗಿ ಸಿಂಡಿಕೇಟ್ ಬ್ಯಾಂಕ್ ಆರ್ಥಿಕ ನೆರವುಹಾಗೂ ಸ್ವಾಮಿ ವಿವೇಕಾನಂದ ಯೂತ್‍ಮೂವ್‍ಮೆಂಟ್,ಮೈಸೂರುರವರು ಬೆಳಕಿನ ನಡಿಗೆ ಹಾಗೂ ಇತರೆಮನರಂಜನಾ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವಮಾಡಿರುತ್ತಾರೆ. ನಂತರ ಮಧ್ಯಾಹ್ನ 3.00 ಗಂಟೆಗೆ

ವೈದ್ಯಕೀಯ ಕಾಲೇಜು ಶತಮಾನೋತ್ಸವ ಭವನದಲ್ಲಿಸಭಾ ಕಾರ್ಯಕ್ರಮದ ಉದ್ಘಾಟನೆಯಾಗಲಿದ್ದು, ಈಕಾರ್ಯಕ್ರಮದಲ್ಲಿ ಉತ್ತಮ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹಾಗೂ ಉತ್ತಮ ಸ್ತ್ರೀಶಕ್ತಿ ಗುಂಪುಗಳಿಗೆಪ್ರಶಸ್ತಿ ಪ್ರಧಾನ ಮಾಡಲಾಗುವುದು. ಕೈಗಾರಿಕಾಮತ್ತು ವಾಣಿಜ್ಯ ಇಲಾಖೆ ವತಿಯಿಂದ ಮಹಿಳಾ ಉದ್ಯಮಿದಾರರಿಗೆಸಾಲ ಮಂಜೂರಾತಿ ಪತ್ರ ವಿತರಣೆ ಹಾಗೂ ಕೈಗಾರಿಕಾನಿವೇಶನ ಮತ್ತು ಕಟ್ಟಡ ಮಂಜೂರಾತಿ ಪತ್ರಗಳನ್ನುಕೆ.ಐ.ಎ.ಡಿ.ಬಿ. ಮತ್ತು ಕೆ.ಎಸ್.ಎಸ್.ಐ.ಡಿ.ಸಿ.ರವರಿಂದ

ವಿತರಿಸಲಾಗುವುದು. ಅಲ್ಲದೆ ಕಲೆ, ಶಿಕ್ಷಣ, ಸಾಂಸ್ಕøತಿಕಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅಸಾಧಾರಣೆ ಸಾಧನೆಮಾಡಿದ 8 ಅರ್ಹ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿನೀಡಲಾಗುವುದು.ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಮಹಿಳೆಯರಿಂದ ಅನುಭವ ಹಂಚಿಕೆ ಕಾರ್ಯಕ್ರಮ




Friday 4 March 2016

ಕೃಷಿ ಪರಿಕರ ಮಾರಾಟಗಾರರಿಗೆ ಕಾರ್ಯಾಗಾರ
ಮೈಸೂರು,ಮಾ.4.ರಾಜ್ಯದಲ್ಲಿ ಕೃಷಿ ಪರಿಕರಗಳ ಮಾರಾಟದಲ್ಲಿ ತೊಡಗಿರುವ ಡೀಲರ್‍ಗಳಿಗೆ, ಹೈದರಾಬಾದ್‍ನ ಒಂಓಂಉಇ ಸಂಸ್ಥೆವತಿಯಿಂದ ಒಂದು ವರ್ಷದ ‘ಆiಠಿಟomಚಿ iಟಿ ಂgಡಿiಛಿuಟಣuಡಿಚಿಟ ಇxಣeಟಿsioಟಿ Seಡಿviಛಿes ಜಿoಡಿ Iಟಿಠಿuಣ ಆeಚಿಟeಡಿs’ ಎಂಬ ಕೋರ್ಸ್ ಸಿದ್ದಪಡಿಸಲಾಗಿದ್ದು, ಸದರಿ ಕೋರ್ಸ್ ಬಗ್ಗೆ ಮೈಸೂರು ಜಿಲ್ಲೆಯಲ್ಲಿರುವ ಕೃಷಿ ಪರಿಕರ ಮಾರಾಟಗಾರರಿಗೆ ಅರಿವು ಮೂಡಿಸಲು ಹಾಗೂ 2016-17ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಸರಬರಾಜು ಸಿದ್ದತೆಗಳ ಬಗ್ಗೆ ಚರ್ಚಿಸಲು ದಿನಾಂಕ:05.03.2016ರಂದು ಬೆಳಿಗ್ಗೆ 10.00 ಗಂಟೆಗೆ ರಾಜೇಂದ್ರ ಭವನ, ಎಂ.ಜಿ.ರಸ್ತೆ, ಜೆ.ಎಸ್.ಎಸ್.ಆಸ್ಪತ್ರೆ ಹತ್ತಿರ, ಅಗ್ರಹಾರ, ಮೈಸೂರು ಇಲ್ಲಿ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಸದರಿ ಕಾರ್ಯಾಗಾರದಲ್ಲಿ ಜಿಲ್ಲೆಯ ಸುಮಾರು 250 ಜನ ಕೃಷಿ ಪರಿಕರ ಮಾರಾಟಗಾರರು ಭಾಗವಹಿಸುತ್ತಿದ್ದು, ಕೃಷಿಯಲ್ಲಿ ರಸಗೊಬ್ಬರ, ಕೀಟನಾಶಕ ಹಾಗೂ ಶಿಲೀಂದ್ರನಾಶಕಗಳ ಬಳಕೆ ಬಗ್ಗೆ ಅರಿವು ಮೂಡಿಸಲು ಕೃಷಿ ತಜ್ಞರೂ ಕೂಡ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.
 ಈ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳಲು ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರರಲ್ಲಿ ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ.
ವಸತಿ ಗೃಹಗಳ ಶಿಲಾನ್ಯಾಸ
ಮೈಸೂರು,ಮಾ.4.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದಿನಾಂಕ 05-03-2016 ರಂದು ಬೆಳಿಗ್ಗೆ 8-30 ಗಂಟೆಗೆ ಶ್ರೀರಾಂಪುರದ ಲಿಂಗಾಂಬುದಿ ಪಾಳ್ಯದಲ್ಲಿ ಗ್ರೂಪ್-ಸಿ ಮತ್ತು ಡಿ ನೌಕರರಿಗಾಗಿ ವಸತಿ ಗೃಹಗಳ ಶಿಲಾನ್ಯಾಸ ಸಮಾರಂಭ ನಡೆಯಲಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಸಿ.ಶಿಖಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಎ.ಗೋಪಾಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಮೌಳಿ, ಮೈಸೂರು ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಟಿ.ಸಿ.ನಾಗರಾಜು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ,ಎಸ್,ಮುದಗಲ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಸಿ,ಸತ್ಯನಾರಾಯಣ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಅವರು ತಿಳಿಸಿದ್ದಾರೆ.
ಮಾ.12 ರಂದು ರಾಷ್ಟ್ರೀಯ ಲೋಕ್‍ಅದಾಲತ್
ಮೈಸೂರು,ಮಾ.4-ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ದಿನಾಂಕ 12-03-2016 ರಂದು ಮಾಸಿಕ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದನ್ವಯ 2016 ನೇ ಸಾಲಿನಲ್ಲಿ ಪ್ರತಿ 2 ನೇ ಶನಿವಾರದಂದು ಲೋಕ್‍ಅದಾಲತ್‍ನ್ನು ನಡೆಸಲಾಗುತ್ತಿದ್ದು, ದಿನಾಂಕ 12-03-2016 ರಂದು ಸಿವಿಲ್ ಹಾಗೂ ರೆವೆನ್ಯೂ ಪ್ರಕರಣಗಳಿಗೆ ಸಂಬಂಧಪಟ್ಟಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಮತ್ತು ನ್ಯಾಯಾಲಯಕ್ಕೆ ದಾಖಲಾಗದೆ ಇರುವ ಪ್ರಕರಣಗಳು (ವ್ಯಾಜ್ಯ ಪೂರ್ವ ಪ್ರಕರಣಗಳು) ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗುವುದು. ಸರ್ಕಾರದ ಇತರೆ ಇಲಾಖೆಗಳ ಜಂಟೀ ಆಯೋಗದಲ್ಲಿ ಜಿಲ್ಲೆಯಾದ್ಯಂತ ಇತ್ಯರ್ಥವಾಗಬಹುದಾದಂತಹ ಎಲ್ಲಾ ರೀತಿಯ ವ್ಯಾಜ್ಯಗಳನ್ನು ಕಾನೂನು ರೀತ್ಯ ಇತ್ಯರ್ಥಗೊಳಿಸಲಾಗುವುದು. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ನ್ಯಾಯಾಲಯಗಳ ಅವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದೂರವಾಣಿ ಸಂಖ್ಯೆ 0821-2330130 ಇಮೇಲ್ ವಿಳಾಸ ಜಟsಚಿ_mಥಿsoಡಿe@ಡಿeಜiಜಿಜಿmಚಿiಟ.ಛಿom  ಸಂಪರ್ಕಿಸಿ ಸಲಹೆ ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
                        ಶಿವಕುಮಾರ್ ಎಂ.ಸಿ ಅವರಿಗೆ  ಪಿಎಚ್.ಡಿ. ಪದವಿ
ಮೈಸೂರು,ಮಾ.4-ಮೈಸೂರು ವಿಶ್ವವಿದ್ಯಾಲಯವು ಶಿವಕುಮಾರ್ ಎಂ.ಸಿ ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಎಸ್.ವೆಂಕಟೇಶ್   ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “ಅಚಿಡಿeeಡಿ ಔಡಿieಟಿಣಚಿಣioಟಿ ಚಿಟಿಜ ಖoಟe ಅoಟಿಜಿಟiಛಿಣ ಚಿmoಟಿg Womeಟಿ ಇmಠಿಟoಥಿees:(ಂ sಣuಜಥಿ oಟಿ ಂಜಿಜಿiಟiಚಿಣeಜ ಅoಟಟeges oಜಿ Uಟಿiveಡಿsiಣಥಿ oಜಿ ಒಥಿsoಡಿe” ಕುರಿತು ಸಾದರಪಡಿಸಿದ ವಾಣಿಜ್ಯ ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಶಿವಕುಮಾರ್ ಎಂ.ಸಿ  ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

ಎಸ್.ಎಂ.ಎಸ್.ಮೂಲಕ ಕೃಷಿ ಸಲಹೆ: ಹೆಸರು ನೊಂದಾಯಿಸಿಕೊಳ್ಳಿ
ಮೈಸೂರು,ಮಾ.4.ಗ್ರಾಮೀಣ ಕೃಷಿ ಮೌಸಮ್ ಯೋಜನೆಯಲ್ಲಿ ಭಾರತ ಹವಮಾನ ಇಲಾಖೆ, ಭೂ ವಿಜ್ಞಾನ ಸಚಿವಾಲು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆ ಸಹಯೋಗದೊಂದಿಗೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹವಾಮಾನ ವೈಪರೀತ್ಯ ಮತ್ತು ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ರೈತರ ಮೊಬೈಲ್‍ಗಳಿಗೆ ಎಸ್.ಎಂ.ಎಸ್ ಮೂಲಕ ನೀಡಲಾಗುವುದು.
ಭಾರತ ಹವಮಾನ ಇಲಾಖೆಯ ಅಂತರ್ಜಾಲದಲ್ಲಿ hಣಣಠಿ://imಜgಡಿimeಣ.gov.iಟಿ/ಜಿಚಿಡಿmeಡಿ/ಈಚಿಡಿmeಡಿಖegisಣಡಿಚಿಣioಟಿಈಡಿoಟಿಣಠಿಚಿge/ತಿeಟಛಿome.ಠಿhಠಿ ಈ ಲಿಂಕ್‍ನಲ್ಲಿ ರೈತರು ತಮ್ಮ ಹೆಸರು, ತಾಲ್ಲೂಕು, ಜಿಲ್ಲೆ, ಮೊಬೈಲ್ ಸಂಖ್ಯೆ  ಹಾಗೂ ಭಾಷೆಯನ್ನು ನಮೂದಿಸಿ ನೊಂದಯಿಸಿಕೊಳ್ಳುವುದು.
ಹೆಚ್ಚಿನ ಮಾಹಿತಿಗೆ ನಾಗನಹಳ್ಳಿ ಸಾವಯವ  ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧಕ ಎನ್ ನಾಗೇಂದ್ರ ದೂರವಾಣಿ ಸಂಖ್ಯೆ 0821-2591267, 2591383 ಮೊಬೈಲ್ ಸಂಖ್ಯೆ 8095227713, 9449869914 ಯನ್ನು ಸಂಪರ್ಕಿಸುವುದು.