Monday 14 March 2016

ಆರ್.ಎಸ್.ಎಸ್.ಮುಖಂಡನ ಕೊಲೆ; ಮೈಸೂರು ಬಂದ್-ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

 ಆರ್.ಎಸ್.ಎಸ್.ಮುಖಂಡನ ಕೊಲೆ; ಮೈಸೂರು ಬಂದ್
 ಮೈಸೂರು, ಮಾ. 14- ಮೈಸೂರು ನಗರದ ಉದಯಗಿರಿ ಬಡಾವಣೆಯಲ್ಲಿ ನಿನ್ನೆ ಸಂಜೆ ಆರ್.ಎಸ್.ಎಸ್ ಮುಖಂಡ ಓರ್ವರ ಕಗ್ಗೊಲೆಯಾಗಿದ್ದು, ಈ ಹಿನ್ನೆಲೆಯಲ್ಲಿ  ಬಿಜೆಪಿ ಹಾಗೂ ಆರ್.ಎಸ್.ಎಸ್. ಕಾರ್ಯಕರ್ತರು ಕಲೆಯನ್ನು ಖಂಡಿಸಿ ಮೈಸೂರು ಬಂದ್‍ಗೆ ಕರೆನೀಡುವ ಮೂಲಕ ಶಾಂತಿಯುತ  ಬಂದ್ ಆಚರಿಸಿದರು.
 ಇಂದಿನ ಬಂದ್ ನಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು, ಕೆಲವುಕಡೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರೆ, ಮತ್ತೆ ಕೆಲವುಕಡೆ ತರೆದಿದ್ದವು, ಪೆಟ್ರೋಲ್ ಬಂಕ್‍ಗಳು ಮುಚ್ಚಿದ್ದರಿಂದ ಕೆಲ ವಾಹನ ಸವಾರರು ಪೆಟ್ರೋಲ್ ಸಿಗದೆ ಪರದಾಡುವಂತಾಯಿತು.
 ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿ ಸಾರಿಗೆ ವಾಹನಗಳನ್ನು ತಡೆದು, ಕೆಲವುಕಡೆ ಸಣ್ಣಪುಟ್ಟ ಕಲ್ಲು ತೂರಾಟ ನಡೆದವು, ಇದರಿಮದ ವಾತಾವರಣ ಪ್ರಕ್ಷುಬ್ದ ಸಿತಿಗೆ ತಲುಪಿತ್ತು.
 ಮುನ್ನೆಚ್ಚರಿಕೆ ಕ್ರಮವಾಗಿ ನಗರ ಪೊಲೀಸ್ ಆಯುಕ್ತರು ನಗರದಾದ್ಯಂತ ನಿಷೇಶಾಜ್ಞೆ ಜಾರಿಗೊಳಿಸಿದ್ದರಿಂದ ಪ್ರತಿಭಟನಾ ಕಾರರು ಗುಂಪು ಸೇರಲು ಸಾಧ್ಯವಾಗದ ಕಾರಣ  ಪೊಲೀಸರು ಪ್ರತಿಭಟನಾಕಾರರ ನಡುವೆ ವಾಗ್ವಾದ, ಮಾತಿನ ಚಕಮಖಿ ನಡೆದು ಕಲ್ಲು ಪೊಲೀಸರ ಮೇಲೆ ಕಲ್ಲು ತೂರಾಟ  ನಡೆಯಿತು. ಪೊಲೀಸರು  ಗುಂಪನ್ನು ಚದುರಿಸುವ ಸಲುವಾಗಿ ಲಘು ಲಾಟಿ ಪ್ರಹಾರ ಮಾಡಿದರು.
 ಕೆಲವುಕಡೆ ಕಿಡಿಗೇಡಿಗಳು  ಕಾರು, ಆಟೋ, ದ್ವಿಚಕ್ರ ವಾಹನಗಳ ಮೇಲೆ  ಕಲ್ಲು ತೂರಿ ಜಖಂಗೊಳಿಸಿದರು.
 ಇಂದು ಪಿಯುಸಿ ಪರೀಕ್ಷೆ ಇದ್ದುದರಿಂದ ಪರೀಕ್ಷೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ  ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಯಿತು.ಗ್ರಾಮಾಂತರ ಪ್ರದೇಶಗಳಿಂದ  ಬರುವ ವಿಧ್ಯಾರ್ಥಿಗಳು ಸ್ವಲ್ಪಮಟ್ಟಿಗೆ ತೊಂದರೆ ಅನುಭವಿಸುವಂತಾಯಿತು.
 ಎಲ್ಲಾ ಕಡೆ  ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
   ಘಟನೆಯ ವಿವರ: ಭಾನುವಾರ ಸಂಜೆ 5-30ರ ಸಮಯದಲ್ಲಿ ಕ್ಯಾತಮಾರನ ಹಳ್ಳಿಯ ವಾಸಿ ರಾಜು (33) ಎಂಬ ಆರ್.ಎಸ್.ಎಸ್. ಮುಖಂಡ ಉದಯಗಿರಿಯ  ರಾಜ್ ಕುಮಾರ್ ರಸ್ತೆಯ ವೃತ್ತದಲ್ಲಿರುವ  ಟೀ ಅಂಗಡಿಯೊಂದರ ಚಹ ಸೇವಸುತ್ತಿದ್ದಾಗ ಅಪರಿಚಿತ ವ್ಯಕ್ತಿ ಬಂದು ಏಕಾ ಏಖಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ  ಪರಾರಿ ಯಾದರು, ತೀವ್ರವಾಗಿ ಗಾಯಗೊಮಡ ಇವರನ್ನು ಅಲ್ಲಿನ ಸಾರ್ವಜನಿಕರು ತಕ್ಷಣ ಆಸ್ಪತ್ರೆಗೆ  ಸಾಗಿಸಿ  ಚಿಕಿತ್ಸೆಕೊಡಿಸಿದರು. ಚಿಕಿತ್ಸೆ ಫಲಕಾರಿಯಾಗದೆ  ರಾಜು ಮೃತಪಟ್ಟರು.
  ಹಳೆಯ ವೈಷಮ್ಯದ ಹಿಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆಯಾದರು ಪೊಲೀಸ್ ತನಿಖೆಯಿಂದ ನಿಜಾಂಶ ಹೊರಬರಬೇಕಿದೆ.
ಉದಯಗಿರಿ ಪೊಲೀಸರು  ಪ್ರಕರಣ ದಾಕಲಿಸಿಕೊಂಡು ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತಯೆಗಾಗಿ ಬಲೆಬೀಸಿದ್ದಾರೆ,
ಬಮದ್ ನಿಮಿತ್ತ ಯಾವುದೇ ಶಾಲಾ ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ    ರಜೆ ಘೊಷಣೆ ಯಿಲ್ಲ, ಸಾರ್ವ ಶಾಂತಿ ಭಂಗ ಉಮಟುಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು  ಎಂದು ಜಿಲ್ಲಾಧಿಕಾರಿ ಸಿ. ಶಿಖಾ  ಆದೇಶಹೊರಡಿಸಿದ್ದಾರೆ.
 ನಗರದಲ್ಲಿ ಪ್ರಕ್ಷುಬ್ದ ವಾತಾವರಣವಿರÀುವುದರಿಂದ  ಆಯಕಟ್ಟಿನ ಸೂಕ್ಷ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ತೆ ಮಾಡಲಾಗಿದೆ.
'

No comments:

Post a Comment