Friday 4 March 2016

ಕೃಷಿ ಪರಿಕರ ಮಾರಾಟಗಾರರಿಗೆ ಕಾರ್ಯಾಗಾರ
ಮೈಸೂರು,ಮಾ.4.ರಾಜ್ಯದಲ್ಲಿ ಕೃಷಿ ಪರಿಕರಗಳ ಮಾರಾಟದಲ್ಲಿ ತೊಡಗಿರುವ ಡೀಲರ್‍ಗಳಿಗೆ, ಹೈದರಾಬಾದ್‍ನ ಒಂಓಂಉಇ ಸಂಸ್ಥೆವತಿಯಿಂದ ಒಂದು ವರ್ಷದ ‘ಆiಠಿಟomಚಿ iಟಿ ಂgಡಿiಛಿuಟಣuಡಿಚಿಟ ಇxಣeಟಿsioಟಿ Seಡಿviಛಿes ಜಿoಡಿ Iಟಿಠಿuಣ ಆeಚಿಟeಡಿs’ ಎಂಬ ಕೋರ್ಸ್ ಸಿದ್ದಪಡಿಸಲಾಗಿದ್ದು, ಸದರಿ ಕೋರ್ಸ್ ಬಗ್ಗೆ ಮೈಸೂರು ಜಿಲ್ಲೆಯಲ್ಲಿರುವ ಕೃಷಿ ಪರಿಕರ ಮಾರಾಟಗಾರರಿಗೆ ಅರಿವು ಮೂಡಿಸಲು ಹಾಗೂ 2016-17ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಸರಬರಾಜು ಸಿದ್ದತೆಗಳ ಬಗ್ಗೆ ಚರ್ಚಿಸಲು ದಿನಾಂಕ:05.03.2016ರಂದು ಬೆಳಿಗ್ಗೆ 10.00 ಗಂಟೆಗೆ ರಾಜೇಂದ್ರ ಭವನ, ಎಂ.ಜಿ.ರಸ್ತೆ, ಜೆ.ಎಸ್.ಎಸ್.ಆಸ್ಪತ್ರೆ ಹತ್ತಿರ, ಅಗ್ರಹಾರ, ಮೈಸೂರು ಇಲ್ಲಿ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಸದರಿ ಕಾರ್ಯಾಗಾರದಲ್ಲಿ ಜಿಲ್ಲೆಯ ಸುಮಾರು 250 ಜನ ಕೃಷಿ ಪರಿಕರ ಮಾರಾಟಗಾರರು ಭಾಗವಹಿಸುತ್ತಿದ್ದು, ಕೃಷಿಯಲ್ಲಿ ರಸಗೊಬ್ಬರ, ಕೀಟನಾಶಕ ಹಾಗೂ ಶಿಲೀಂದ್ರನಾಶಕಗಳ ಬಳಕೆ ಬಗ್ಗೆ ಅರಿವು ಮೂಡಿಸಲು ಕೃಷಿ ತಜ್ಞರೂ ಕೂಡ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.
 ಈ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೊಳ್ಳಲು ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರರಲ್ಲಿ ಜಂಟಿ ಕೃಷಿ ನಿರ್ದೇಶಕರು ಕೋರಿದ್ದಾರೆ.
ವಸತಿ ಗೃಹಗಳ ಶಿಲಾನ್ಯಾಸ
ಮೈಸೂರು,ಮಾ.4.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದಿನಾಂಕ 05-03-2016 ರಂದು ಬೆಳಿಗ್ಗೆ 8-30 ಗಂಟೆಗೆ ಶ್ರೀರಾಂಪುರದ ಲಿಂಗಾಂಬುದಿ ಪಾಳ್ಯದಲ್ಲಿ ಗ್ರೂಪ್-ಸಿ ಮತ್ತು ಡಿ ನೌಕರರಿಗಾಗಿ ವಸತಿ ಗೃಹಗಳ ಶಿಲಾನ್ಯಾಸ ಸಮಾರಂಭ ನಡೆಯಲಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಸಿ.ಶಿಖಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಎ.ಗೋಪಾಲ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಮೌಳಿ, ಮೈಸೂರು ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಟಿ.ಸಿ.ನಾಗರಾಜು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ,ಎಸ್,ಮುದಗಲ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಇಂಜಿನಿಯರ್ ಸಿ,ಸತ್ಯನಾರಾಯಣ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಅವರು ತಿಳಿಸಿದ್ದಾರೆ.
ಮಾ.12 ರಂದು ರಾಷ್ಟ್ರೀಯ ಲೋಕ್‍ಅದಾಲತ್
ಮೈಸೂರು,ಮಾ.4-ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ದಿನಾಂಕ 12-03-2016 ರಂದು ಮಾಸಿಕ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದನ್ವಯ 2016 ನೇ ಸಾಲಿನಲ್ಲಿ ಪ್ರತಿ 2 ನೇ ಶನಿವಾರದಂದು ಲೋಕ್‍ಅದಾಲತ್‍ನ್ನು ನಡೆಸಲಾಗುತ್ತಿದ್ದು, ದಿನಾಂಕ 12-03-2016 ರಂದು ಸಿವಿಲ್ ಹಾಗೂ ರೆವೆನ್ಯೂ ಪ್ರಕರಣಗಳಿಗೆ ಸಂಬಂಧಪಟ್ಟಂತೆ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಮತ್ತು ನ್ಯಾಯಾಲಯಕ್ಕೆ ದಾಖಲಾಗದೆ ಇರುವ ಪ್ರಕರಣಗಳು (ವ್ಯಾಜ್ಯ ಪೂರ್ವ ಪ್ರಕರಣಗಳು) ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗುವುದು. ಸರ್ಕಾರದ ಇತರೆ ಇಲಾಖೆಗಳ ಜಂಟೀ ಆಯೋಗದಲ್ಲಿ ಜಿಲ್ಲೆಯಾದ್ಯಂತ ಇತ್ಯರ್ಥವಾಗಬಹುದಾದಂತಹ ಎಲ್ಲಾ ರೀತಿಯ ವ್ಯಾಜ್ಯಗಳನ್ನು ಕಾನೂನು ರೀತ್ಯ ಇತ್ಯರ್ಥಗೊಳಿಸಲಾಗುವುದು. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ನ್ಯಾಯಾಲಯಗಳ ಅವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದೂರವಾಣಿ ಸಂಖ್ಯೆ 0821-2330130 ಇಮೇಲ್ ವಿಳಾಸ ಜಟsಚಿ_mಥಿsoಡಿe@ಡಿeಜiಜಿಜಿmಚಿiಟ.ಛಿom  ಸಂಪರ್ಕಿಸಿ ಸಲಹೆ ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
                        ಶಿವಕುಮಾರ್ ಎಂ.ಸಿ ಅವರಿಗೆ  ಪಿಎಚ್.ಡಿ. ಪದವಿ
ಮೈಸೂರು,ಮಾ.4-ಮೈಸೂರು ವಿಶ್ವವಿದ್ಯಾಲಯವು ಶಿವಕುಮಾರ್ ಎಂ.ಸಿ ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಎಸ್.ವೆಂಕಟೇಶ್   ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “ಅಚಿಡಿeeಡಿ ಔಡಿieಟಿಣಚಿಣioಟಿ ಚಿಟಿಜ ಖoಟe ಅoಟಿಜಿಟiಛಿಣ ಚಿmoಟಿg Womeಟಿ ಇmಠಿಟoಥಿees:(ಂ sಣuಜಥಿ oಟಿ ಂಜಿಜಿiಟiಚಿಣeಜ ಅoಟಟeges oಜಿ Uಟಿiveಡಿsiಣಥಿ oಜಿ ಒಥಿsoಡಿe” ಕುರಿತು ಸಾದರಪಡಿಸಿದ ವಾಣಿಜ್ಯ ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಶಿವಕುಮಾರ್ ಎಂ.ಸಿ  ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

ಎಸ್.ಎಂ.ಎಸ್.ಮೂಲಕ ಕೃಷಿ ಸಲಹೆ: ಹೆಸರು ನೊಂದಾಯಿಸಿಕೊಳ್ಳಿ
ಮೈಸೂರು,ಮಾ.4.ಗ್ರಾಮೀಣ ಕೃಷಿ ಮೌಸಮ್ ಯೋಜನೆಯಲ್ಲಿ ಭಾರತ ಹವಮಾನ ಇಲಾಖೆ, ಭೂ ವಿಜ್ಞಾನ ಸಚಿವಾಲು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆ ಸಹಯೋಗದೊಂದಿಗೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹವಾಮಾನ ವೈಪರೀತ್ಯ ಮತ್ತು ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ರೈತರ ಮೊಬೈಲ್‍ಗಳಿಗೆ ಎಸ್.ಎಂ.ಎಸ್ ಮೂಲಕ ನೀಡಲಾಗುವುದು.
ಭಾರತ ಹವಮಾನ ಇಲಾಖೆಯ ಅಂತರ್ಜಾಲದಲ್ಲಿ hಣಣಠಿ://imಜgಡಿimeಣ.gov.iಟಿ/ಜಿಚಿಡಿmeಡಿ/ಈಚಿಡಿmeಡಿಖegisಣಡಿಚಿಣioಟಿಈಡಿoಟಿಣಠಿಚಿge/ತಿeಟಛಿome.ಠಿhಠಿ ಈ ಲಿಂಕ್‍ನಲ್ಲಿ ರೈತರು ತಮ್ಮ ಹೆಸರು, ತಾಲ್ಲೂಕು, ಜಿಲ್ಲೆ, ಮೊಬೈಲ್ ಸಂಖ್ಯೆ  ಹಾಗೂ ಭಾಷೆಯನ್ನು ನಮೂದಿಸಿ ನೊಂದಯಿಸಿಕೊಳ್ಳುವುದು.
ಹೆಚ್ಚಿನ ಮಾಹಿತಿಗೆ ನಾಗನಹಳ್ಳಿ ಸಾವಯವ  ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧಕ ಎನ್ ನಾಗೇಂದ್ರ ದೂರವಾಣಿ ಸಂಖ್ಯೆ 0821-2591267, 2591383 ಮೊಬೈಲ್ ಸಂಖ್ಯೆ 8095227713, 9449869914 ಯನ್ನು ಸಂಪರ್ಕಿಸುವುದು.

No comments:

Post a Comment