Wednesday 9 March 2016

ಮೈಸೂರು.09ಮಾರ್ಚ್  2016
ವಸತಿ ಯೋಜನೆ ಮಾರ್ಚ್ ಅಂತ್ಯದೊಳಗೆ ಗುರಿ ಸಾಧಿಸಲುಶಂಭುದಯಾಳ್ ಮೀನ  ಸೂಚನೆ
ಮೈಸೂರು, ಮಾರ್ಚ್ 9 . ವಸತಿ ಯೋಜನೆಗಳಡಿ ಮನೆಗಳ ನಿರ್ಮಾಣಕ್ಕೆ ನಿಗದಿ ಪಡಿಸಿರುವ ಗುರಿಯನ್ನು ಮಾರ್ಚ್ ಅಂತ್ಯದೊಳಗೆ ಸಾಧಿಸಲು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಶಂಭು ದಯಾಳ್ ಮೀನಾ ತಿಳಿಸಿದರು.
 ಇಂದು ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಹಾಗೂ ಕೊಡಗು ಜಿಲ್ಲೆಗಳ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಯೋಜನೆಯಡಿ ಮನೆಗಳ ನಿರ್ಮಾಣದ ಪ್ರಗತಿ ಪರಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಬಡವರು ಹಾಗೂ ಆಶ್ರಯರಹಿತರಿಗೆ ಮನೆ ನಿರ್ಮಾಣಕ್ಕೆಂದು ಸರ್ಕಾರ ಸಾಕಷ್ಟು ಅನುದಾನವನ್ನು ಮೀಸಲಿರಿಸಿದೆ. ಆದರೆ ಅನುದಾನವನ್ನು ಸಮರ್ಪಕವಾಗಿ ಬಳಸÀಲು ಅಧಿಕಾರಿಗಳು ಜವಾಬ್ದಾರರಾಗಬೇಕು. ಮನೆ ನಿರ್ಮಾಣದಲ್ಲಿ ಫಲಾನುಭವಿಗಳು ಅನುದಾನವನ್ನು ಸರಿಯಾಗಿ ಬಳಸದಿದ್ದರೆ ಹಾಗೂ ವಿಳಂಬ ಮಾಡಿದರೆ ಕಾರಣ ಕೇಳಿ ಸಂಬಂಧಪಟ್ಟವರಿಗೆ ಮೂರು ನೋಟಿಸ್ ನೀಡಿ ಮೂಲಕ ಮುಂದಿನ ವಸತಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂಬ ಮಾಹಿತಿಯನ್ನು ನೀಡಬೇಕು ಎಂದ ಹೇಳಿದರು.
  ವಸತಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್ ಮಾತನಾಡಿ ಆಶ್ರಯರಹಿತರಿಗೆ ವಸತಿ ನೀಡುವುದು ಪುಣ್ಯದ ಕೆಲಸ. ವಸತಿ ಯೋಜನೆಯಡಿ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಫಲಾನಿಭವಿಗಳಿಗೆ ಹಾಗೂ ಅಧಿಕಾರಿಗಳಿಗೆ ವ್ಯವಸ್ಥೆಯನ್ನು ಸರಳಿಕರಿಸಲಾಗಿದೆ. ಹಿಂದೆ ಮನೆ ನಿರ್ಮಾಣ ಮಾಡದೆ ಹಣವನ್ನು ಪಡೆಯಲಾಗುತ್ತಿತ್ತು. ಆದರೆ ಇಂದು ಮನೆ ನಿರ್ಮಾಣದ ಪ್ರಗತಿ ಅನುಗುಣವಾಗಿ ಹಂತ ಹಂತವಾಗಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದರು.
  ವಸತಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ನೀಡಲಾಗುವ ಆದ್ಯತೆಯನ್ನು ನಗರ ಪ್ರದೇಶಗಳಲ್ಲಿ ಮನೆ  ನಿರ್ಮಾಣಕ್ಕೆ ನೀಡಬೇಕು. ಪ್ರತಿ ತಿಂಗಳೂ ಮುಖ್ಯಮಂತ್ರಿಗಳ ಕಾರ್ಯಾಲಯ ವಸತಿ ಯೋಜನೆಯ ಪ್ರಗತಿಯನ್ನು ಪರಿಶೀಲುಸುತ್ತಿದೆ. ಮನೆ ನಿರ್ಮಾಣದಿಂದ ವ್ಯಕ್ತಿಯ ಸಾಮಾಜಿಕ ಸ್ಥಿತಿ ಹೆಚ್ಚುವುದಲ್ಲದೆ ಆರ್ಥಿಕವಾಗಿ ಸಾವಲಂಬಿಯಾಗಲು ಸಹಕರಿಸುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚೆದ್ದುಕೊಂಡು ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಿಕೊಡಲು ಶ್ರಮಿಸಬೇಕು ಎಂದು ತಿಳಿಸಿದರು.
     ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಸತಿ ನಿರ್ಮಾಣದ ಎಂಪಿಕ್ ಗುರಿಗೆ ಶೇ49.71, ಚಾಮರಾಜನಗರ ಶೇ59.77, ಮಂಡ್ಯ ಶೇ54.78, ಹಾಸನ ಶೇ42.44 ಹಾಗೂ ಕೊಡಗು ಶೇ48.70 ಪ್ರಗತಿ ಸಾಧಿಸಿದೆ. ಮಾರ್ಚ್ 20ರೊಳಗೆ ಛಾವಣಿ ಹಂತದಲ್ಲಿರುವ ಶೇ90 ರಷ್ಟು ಹಾಗೂ ಲಿಂಟಲ್ ವರೆಗೆ ಪ್ರಗತಿ ಹೊಂದಿರುವ ಶೇ 50ರಷ್ಟು ಮನೆಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಿದರೆ ಎಂಪಿಕ್ ಗುರಿಯನ್ನು ಸಾಧಿಸಬಹುದು. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗುರಿ ಸಾಧಿಸಲು ವಿಪಲವಾದರೆ ಸರ್ಕಾರಕ್ಕೆ ಕ್ರಮವಹಿಸಲು ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
  ನಗರ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಎಂಪಿಕ್ ಪ್ರಗತಿಯಲ್ಲಿ ಚಾಮರಾಜನಗರ ಶೇ17.55, ಮೈಸೂರು ಶೇ 29.28, ಮಂಡ್ಯ ಶೇ 15.51, ಹಾಸನ ಶೇ12.56 ಹಾಗೂ ಕೊಡಗು ಶೇ 16.79 ಗುರಿ ಸಾಧಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ನೀಡಲಾಗುವ ಆದ್ಯತೆಯನ್ನು ನಗರ ಪ್ರದೇಶಗಳಿಗೂ ನೀಡಬೇಕು. ಆಶ್ರಯ ರಹಿತರು ನಗರ ಪ್ರದೇಶಗಲ್ಲೂ ಹೆಚ್ಚಿದ್ದಾರೆ. ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಆದ್ಯತೆ ಮೇರೆಗೆ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ನೆರವು ನೀಡಬೇಕು. ಗ್ರಾಮೀಣ ಅಥವಾ ನಗರ ಪ್ರದೇಶವಾಗಲಿ ಅಧಿಕಾರಿಗಳು ಮನೆಗಳ ಮನೆ ನಿರ್ಮಾಣ ಪ್ರಗತಿ ಕುರಿತು ಹೆಚ್ಚು ಕ್ಷೇತ್ರ ಪ್ರವಾಸಗಳನ್ನು ಕೈಗೊಳ್ಳಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು ಹೇಳಿದರು.
 ಸಭೆಯಲ್ಲಿ ಕೊಡಗು ಜಿಲ್ಲೆ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್, ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶರತ್, ಮೈಸೂರು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಹಾಗೂ ಸಂಬಂಧಪಟ್ಟ ಇತರೆ ಅಧಿಕಾರಿಗಳು ಭಾಗವಹಿಸಿದರು.


ಮಾ 11 ರಂದು ನ್ಯಾಕ್ ಮೌಲ್ಯಮಾಪನ ಕಾರ್ಯಾಗಾರ
ಮೈಸೂರು,ಮಾ.9.ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ದಿನಾಂಕ:11.03.2016ರಂದು ಬೆಳಗ್ಗೆ 10.00ಗಂಟೆಗೆ ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ  ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ನ್ಯಾಕ್ ಮೌಲ್ಯಮಾಪನ ಮತ್ತು ಮರು ಮೌಲ್ಯಮಾಪನ ಕುರಿತು ಒಂದು ದಿನದ ನ್ಯಾಕ್ ಕಾರ್ಯಾಗಾರವನ್ನು ಆಯೋಜಿಸಿದೆ.
ಕಾರ್ಯಾಗಾರದ ನಂತರ ಮೈಸೂರು ವಲಯದ ಸರ್ಕಾರಿ ಕಾಲೇಜು ಪ್ರಾಂಶುಪಾಲರ ಒಕ್ಕೂಟದ ವತಿಯಿಂದ ಜಂಟಿ ನಿರ್ದೇಶಕರಾಗಿ ಹಾಗೂ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತರಾಗಿರುವವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕರ್ತವ್ಯನಿರತ ಪ್ರಾಂಶುಪಾಲರು ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಹಾಗೂ ನಿವೃತ್ತ ಪ್ರಾಂಶುಪಾಲರು ಸನ್ಮಾನ ಸ್ವೀಕರಿಸಲು ಅಗಮಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಪ್ರವಾಸ ಕಾರ್ಯಕ್ರಮ
ಮೈಸೂರು,ಮಾ.9.ಅಂಗವಿಲಕ ಅಧಿನಿಯಮದ ರಾಜ್ಯ ಆಯುಕ್ತರಾದ ಕೆ.ಎಸ್.ರಾಜಣ್ಣ ಅವರು ಮಾರ್ಚ್ 11 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಅಂದು ಬೆಳಿಗ್ಗೆ 11-30 ಗಂಟೆಗೆ ಲಕ್ಷ್ಮೀ ಪುರಂನಲ್ಲಿರುವ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿದ್ಯಾಲಯದಲ್ಲಿ ಸೆರೆಬ್ರೆಲ್ ಪಾಲಿನಸಿಯಿಂದಾಗಿ ಅಂಗವಿಕಲಳಾಗಿರುವ ವೈ.ಪಿ ಪ್ರಿಯದರ್ಶಿನಿ ಅವರಿಗೆ ವ್ಯಾಸಂಗ ಕುರಿತಾಗಿ ಉಂಟಾಗಿರುವ ತೊಂದರೆಗಳ ಬಗ್ಗೆ ವಿಚಾರಿಸಲಿದ್ದಾರೆ.
ಪ್ರವಾಸ ಕಾರ್ಯಕ್ರಮ
ಮೈಸೂರು,ಮಾ.9.ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಸಿ.ಜಿ.ಹುನಗುಂದ ಅವರು ಮಾರ್ಚ್ 11 ಹಾಗೂ 12 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಅವರು ಮಾರ್ಚ್ 11 ರಂದು ಸಂಜೆ 6 ಗಂಟೆಗೆ ಮೈಸೂರಿಗೆ ಆಗಮಿಸಿ, ಮೈಸೂರು ವಿಶ್ವವಿದ್ಯಾನಿಲಯದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಾರ್ಚ್ 12 ರಂದು ಬೆಳಿಗ್ಗೆ 11 ಗಂಟೆಗೆ ಕೃಷ್ಣಮೂರ್ತಿಪುರಂನಲ್ಲಿರುವ ಶಾರದ ವಿಲಾಸ ಕಾನೂನು ಕಾಲೇಜಿನಲ್ಲಿ ನಡೆಯಲಿರುವ ಮಾನವ ಹಕ್ಕುಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮೈಸೂರಿನಿಂದ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ

ಕೆ.ಎ.ಎಸ್ ಹಾಗೂ ಐ.ಎ.ಎಸ್. ಪರೀಕ್ಷೆಗೆ ತರಬೇತಿ
ಮೈಸೂರು,ಮಾ.9.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ 2016 ರ ಆಗಸ್ಟ್ ಮಾಹೆಯಲ್ಲಿ ನಡೆಯಲಿರುವ, ಕೆ.ಎ.ಎಸ್, ಐ.ಎ.ಎಸ್ ಹಾಗೂ ಐ.ಪಿ.ಎಸ್ ಪೂರ್ವಭಾವಿ ಪರೀಕ್ಷೆಗೆ ಹಾಗೂ ಕರ್ನಾಟಕ ಸರ್ಕಾರ ನಡೆಸುವ ವಿವಿಧ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ 50 ದಿನಗಳ ತರಬೇತಿ ನೀಡಲಾಗುವುದು.
ಆಸಕ್ತರು ಮಾರ್ಚ್ 20 ರೊಳಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2515944 ಯನ್ನು ಸಂಪರ್ಕಿಸುವುದು ಎಂದು ತರಬೇತಿ ಕೇಂದ್ರದ ಸಂಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಹಿರಂಗ ಹರಾಜು
ಮೈಸೂರು,ಮಾ.9.ಮೈಸೂರು ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಿಂದ  ಅಬಕಾರಿ ಅಪರಾಧಕ್ಕಾಗಿ ಜಪ್ತುಗೊಳಿಸಲಾದ ವಿವಿಧ ಮಾದರಿಯ 85 ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಹಾಲಿ ಇರುವ ಸ್ಥಿತಿಯಲ್ಲೇ ದಿನಾಂಕ 04-04-2016 ರಂದು ಬೆಳಿಗ್ಗೆ 11 ಗಂಟೆಗೆ ಅಬಕಾರಿ ಉಪ ಅಧೀಕ್ಷಕರು, ಉಪವಿಭಾಗ ನಜûರ್‍ಬಾದ್ ಇಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.
     ಆಸಕ್ತರು ವಾಹನದ ಮಾದರಿ ಹಾಗೂ ಹೆಚ್ಚಿನ ಮಾಹಿತಿಗೆ ಡೆಪ್ಯೂಟಿ ಕಮಿಷನರ್ ಆಫ್ ಎಕ್ಸೈಸ್ ಕಚೇರಿ ಮೈಸೂರು ಇಲ್ಲಿ ಸಂಪರ್ಕಿಸುವುದು.
ಸಾವಿರ ಮಾತÀನ್ನು ಒಂದು ಚಿತ್ರಕಲಾಕೃತಿ ಹೇಳುತ್ತದೆ:  ಜಿ.ಪಿ.ಚಂದ್ರಮ್ಮ
 ಮೈಸೂರು,ಮಾ.9. ಸಾವಿರ ಮಾತುಗಳನ್ನು ಒಂದು ಚಿತ್ರಕಲಾಕೃತಿ ತಿಳಿಸುತ್ತದೆ ಎಂದು ಡಿ.ಎಸ್.ಇ.ಆರ್.ಟಿ. ಸಹನಿರ್ದೇಶಕಿ ಜಿ.ಪಿ. ಚಂದ್ರಮ್ಮ ಅವರು ಅಭಿಪ್ರಾಯಪಟ್ಟರು.
    ಅವರು ಇಂದು  ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ  ಟಿ.ಕೆ.ಲೇಔಟ್‍ನಲ್ಲಿರುವ ಪ್ರಾಂತೀಯ ದೂರ ಸಂಪರ್ಕ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕದ ಸಂಸ್ಕøತಿ ಕುರಿತು ಚಿತ್ರ ರಚನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ತಮ್ಮ ಕೆಲಸವನ್ನು ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತಗೊಳಿಸಿಕೊಳ್ಳದೆ ಸಮಾಜದ ಬೆಳವಣಿಗೆಗೆ ಸಹಕಾರಿಯಾಗುವಂತೆ ವೃತ್ತಿಪರ ಕಲೆಗಳಾದ ಚಿತ್ರಕಲೆ, ಕರಕುಶಲ ಕಲೆ, ಸಂಗೀತ, ಸಾಹಿತ್ಯ, ನಾಟ್ಯಗಳಿಗೆ ಒತ್ತು ಕೊಟ್ಟು ಭೋದಿಸಿದರೆ ಸಮಾಜವು ಉನ್ನತ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಪರಿಣಾಮಕಾರಿಯಾಗುತ್ತದೆ ಎಂದು ಭಾಗವಹಿಸಿದ ಶಿಕ್ಷಕರಿಗೆ ಸಲಹೆ ನೀಡಿದರು.
   ಶ್ರೀ ಅಲ್ಲಮಪ್ರಭು ಲಲಿತಕಲಾ ಅಕಾಡೆಮಿ ಡೀನ್ ಡಾ ಡಿ.ಎ. ಉಪಾದ್ಯ, ಅವರು ಚಿತ್ರಕಲೆಯ ಸೌಂದರ್ಯ ಮೀಮಾಂಸೆ ಹಾಗೂ ಶಾಸ್ತ್ರ ವಿಷಯಗಳನ್ನು ಮಕ್ಕಳಿಗೆ ಚಿತ್ರಕಲೆಯಲ್ಲಿ ತಿಳಿಸಿಕೊಡಬೇಕೆಂದು ಶಿಕ್ಷಕರಿಗೆ  ತಿಳಿಸಿದರು.
       ಕಾರ್ಯಕ್ರಮದಲ್ಲಿ ಪ್ರಾಂತೀಯ ದೂರಸಂಪರ್ಕ ಕೇಂದ್ರದ ಪ್ರಾಂಶುಪಾಲ ಎ.ವಿ.ಶ್ರೀಕಂಠನ್, ಸಿ.ಟಿ.ಇ ಪ್ರವಾಚಕಎಂ.ಡಿ.ಶಿವಕುಮಾರ್, ಚಿತ್ರಕಲಾ ವಿಭಾಗ ಆಯುಕ್ತರ ಕಚೇರಿ ಸಹಾಯಕ ನಿರ್ದೇಶಕ ಎಂ.ಎ. ಕಂಠಿ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಬಸವೇಗೌಡ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ನೆರವು ಧನ: ಅರ್ಜಿ ಆಹ್ವಾನ
ಮೈಸೂರು,ಮಾ.9-ಕೊಲ್ಕತ್ತಾದ ರಾಜಾರಾಂ ಮೋಹನ್‍ರಾಯ್ ಗ್ರಂಥಾಲಯ ಪ್ರತಿಷ್ಠಾನದ ವತಿಯಿಂದ 2015-16ನೇ ಸಾಲಿಗೆ ಸಾರ್ವಜನಿಕ ಗ್ರಂಥಾಲಯ ಸೇವೆ ಒದಗಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಹೊಂದಾಣಿಕೇತರ ನೆರವು ಧನ ಸಹಾಯ ಯೋಜನೆ ಅಡಿಯಲ್ಲಿ ಧನ ಸಹಾಯ ನೀಡಲಾಗುವುದು.
     ಆಸಕ್ತರು ನಿಗಧಿತ ಅರ್ಜಿಯನ್ನು ಜಿಲ್ಲಾ/ನಗರ ಕೇಂದ್ರ ಗ್ರಾಂಥಾಲಯದಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಮಾರ್ಚ್ 23 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2423678 ಯನ್ನು ಸಂಪರ್ಕಿಸುವುದು.
ನಬಾರ್ಡ್‍ನಿಂದ ಡಿಬೆಂಚರ್ ಸಾಲಪತ್ರ
ಮೈಸೂರು,ಮಾ.9.ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ರೂ 1000/-ಮುಖ ಬೆಲೆಯ ತೆರಿಗೆ ಮುಕ್ತ, ಸುರಕ್ಷಿತ, ಮರುಪಾವತಿಸುವ ರೂ 3500 ಕೋಟಿ ಪ್ರಮಾಣದ ನಾನ್ ಕನ್ವರ್ಟಿಬಲ್ ಡಿಬೆಂಚರ್ ಸಾಲಪತ್ರವನ್ನು ಸಾರ್ವಜನಿಕರಿಗಾಗಿ ಜಾರಿ ಮಾಡುತ್ತಿರುವುದಾಗಿ ಪ್ರಕಟಿಸಿದೆ. ಈ ಬಾಂಡ್‍ಗಳಿಗೆ ಆದಾಯ ತೆರಿಗೆ ಕಾಯಿದೆ 1961 ಸೆಕ್ಷನ್ 10(15)(iv)(h) ರಡಿ ವಿನಾಯತಿ ಇರುತ್ತದೆ.
    ಮಾರ್ಚ್ 9 ರಂದು ಮಾರುಕಟ್ಡೆಯಲ್ಲಿ ಬಿಡುಗಡೆಯಾಗಲಿರುವ ಬಾಂಡ್‍ಗಳು ಮಾರ್ಚ್ 14ಕ್ಕೆ ಅಥವಾ ಅದಕ್ಕೆ ಮುಂಚೆ ಮುಕ್ತಾಯ ಮಾಡುವ ಅಥವಾ ಅವಧಿ ವಿಸ್ತಣೆ ಮಾಡುವ ಸಾಧ್ಯತೆ ಹೋಂದಿದೆ. ಬಾಂಡ್‍ಗಳನ್ನು ಮುಂಬೈ ಶೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಲಾಗುವುದು.
     60% ಇಶ್ಯೂ ಪ್ರಮಾಣ ಪತ್ರವನ್ನು ಕೆಟಗರಿ 4 ರಲ್ಲಿ ಬರುವ ಭಾರತದ ನಿವಾಸಿ ವ್ಯಕ್ತಿ ಮತ್ತು ಕರ್ತಾ ಮೂಲಕ ಹೂಡಿಕೆ ಮಾಡು ಹಿಂದು ಅವಿಭಾಜಿತ ಕುಟುಂಬದ ಹೂಡಿಕೆದಾರರಿಗೆ ಹೂಡಿಕೆ ಮಾಡುವ ಪ್ರಮಾಣ ಒಟ್ಟು ರೂ 10 ಲಕ್ಷದ ವರೆಗೆ ಬಂಡ್‍ಗಳ ಸರಣಿಯಲ್ಲಿ ಕಾಯ್ದಿರಿಸಲಾಗಿದೆ. 15% ಇಶ್ಯೂ ಪ್ರಮಾಣವನ್ನು ಕೆಟಗರಿ 1 ರಲ್ಲಿ ಅನುಮೀದಿತ ಸಾಂಸ್ಥಿಕ ಖರೀದಿದಾರರು ಮತ್ತು ಕೆಟಗರಿ 2 ಕಾರ್ಪೋರೇಟ್ಸ್ ಹೂಡಿಕೆದಾರರಿಗೆ ಕಾಯ್ದಿರಿಸಲಾಗಿದೆ. 10% ಇಶ್ಯೂ ಪ್ರಮಾಣವನ್ನು ಕಟಗರಿ 3 ರಲ್ಲಿ ಬರುವ ಅಧಿಕ ಮೌಲ್ಯ ಹೊಂದಿರುವ ವ್ಯಕ್ತಿಗಳಿಗೆ ಕಾಯ್ದಿರಿಸಲಾಗಿದೆ.
    ಬಾಂಡ್‍ನಿಂದ ಬರುವ ಬಡ್ಡಿಗೆ ಆದಾಯ ತೆರಿಗೆ ವಿನಾಯಿತಿ ದೊರೆಯುತ್ತದೆ. ಬಾಂಡ್ ಹಂಚಿಕೆಯಲ್ಲಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಪ್ರಥಮ ಆದ್ಯತೆ ಕೊಡಲಾಗುವುದು.
ಬಾಂಡ್‍ಗಳು 10 ಮತ್ತು 15 ವರ್ಷ ಅವಧಿ ಹೊಂದಿರುತ್ತದೆ. ಕೆಟಗರಿ 4 ರ ಹೂಡಿಕೆದಾರರಿಗೆ ಕೂಪನ್ ದರ 7.29% 10 ವರ್ಷದ ಅವಧಿಗೆ ಮತ್ತು 7.64% 15 ವರ್ಷದ ಅವಧಿಗೆ ಇರುತ್ತದೆ. ಕೆಟಗರಿ 1,2, ಮತ್ತು 3 ರಲ್ಲಿ ಬರುವ ಹೂಡಿಕೆದಾರರಿಗೆ 7.04% 10 ವರ್ಷದ ಅವಧಿಗೆ ಮತ್ತು 7.35% 15 ವರ್ಷದ ಅವಧಿಗೆ ಇರುತ್ತದೆ.ಬಾಂಡ್‍ಗಳ ಮೇಲೆ ಬಡ್ಡಿ ವಾರ್ಷಿಕವಾಗಿ ನೀಡಲಾಗುವುದು. ಈ ಇಶ್ಯೂ ದಿಂದ ಬರುವ ಹಣವನ್ನು ಭಾರತದಲ್ಲಿಯ ನೀರಾವರಿ ಯೋಜನೆಗಳಿಗೆ ನೇರ ಸಾಲ ಕೊಡಲು ಅಥವಾ ಪುನರ್ಧನ ಒದಗಿಸಲು ಉಪಯೋಗಿಸಲಾಗುವುದು.
ಬಾಂಡ್‍ಗಳಿಗೆ ಅಖISIಐ  ಸಂಸ್ಥೆಯ   ಅಖISIಐ ಂಂಂ/Sಣಚಿbಟe ಮತ್ತು ಇಂಡಿಯಾ ರೇಟಿಂಗ್ ಸಂಸ್ಥೆಯ  Iಓಆ ಂಂಂ/Sಣಚಿbಟe ರೇಟಿಂಗ್ ದೊರೆತಿದೆ. ಈ ರೇಟಿಂಗ ಹೊಂದಿದ ಆರ್ಥಿಕ ಹೂಡಿಕೆಗಳು ಆರ್ಥಿಕ ಜವಾಬ್ದಾರಿ ನಿರ್ವಹಣೆಯಲ್ಲಿ ಅತ್ಯಧಿಕ ಸುರಕ್ಷಿತ ವೆಂದು ಪರಿಗಣಿಸಲ್ಪಡುತ್ತದೆ
 ಈ ಇಶ್ಯೂಗೆ ಂxis ಖಿಡಿusಣee Seಡಿviಛಿes ಐimiಣeಜ    ಂಏ ಅಚಿಠಿiಣಚಿಟ Seಡಿviಛಿes ಐimiಣeಜ, ಇಜeಟತಿeiss ಈiಟಿಚಿಟಿಛಿiಚಿಟ Seಡಿviಛಿes ಐimiಣeಜ, IಅIಅI Seಛಿuಡಿiಣies ಐimiಣeಜ, ಖಖ Iಟಿvesಣoಡಿs ಅಚಿಠಿiಣಚಿಟ Seಡಿviಛಿes Pಡಿivಚಿಣe ಐimiಣeಜ  SಃI ಅಚಿಠಿiಣಚಿಟ ಒಚಿಡಿಞeಣs ಐimiಣeಜ ಲೀಡ್ ಮ್ಯಾನೇಜರ್ ಆಗಿರುತ್ತದೆ ಎಂದು ಮೈಸೂರು ನಬಾರ್ಡ್‍ನ ಸಹಾಯಕ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

No comments:

Post a Comment