Friday 31 October 2014

ಮುಖ್ಯ ಮಂತ್ರಿಯವರ ಪ್ರವಾಸ ಕಾರ್ಯಕ್ರಮ


                 ಮುಖ್ಯ ಮಂತ್ರಿಯವರ ಪ್ರವಾಸ ಕಾರ್ಯಕ್ರಮ
    ಮೈಸೂರು,ಅ.31.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್4 ಹಾಗೂ 5 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ನವೆಂಬರ್ 4 ರಂದು ಬೆಳಿಗ್ಗೆ 11-30 ಗಂಟೆಗೆ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ನವೆಂಬರ್ 5 ಬೆಳಿಗ್ಗೆ 11 ಗಂಟೆಗೆ ಹೊಸ ಸಯ್ಯಾಜಿರಾವ್ ರಸ್ತೆಯಲ್ಲಿರುವ ಧರ್ಮಪ್ರಕಾಶ ಡಿ. ಬನುಮಯ್ಯ ವಿದ್ಯಾಸಂಸ್ಥೆಯ ನೂತನ ಸ್ನಾತಕೋತ್ತರ ವಿಭಾಗವನ್ನು ಉದ್ಘಾಟಿಸುವರು.ಮಧ್ಯಾಹ್ನ 2 ಗಂಟೆಗೆ ಜಗನ್ಮೋಹನ ಪ್ಯಾಲೇಸ್‍ನಲ್ಲಿ ಮೈಸೂರು ಜಿಲ್ಲೆ ಮತ್ತು ಮಂಡ್ಯ ಜಿಲ್ಲೆ ವಿಭಜನೆಯ 75 ವರ್ಷ ತುಂಬಿರುವ ಸಂದರ್ಭದಲ್ಲಿ ಆಯೋಜಿಸಿರುವ ವಜ್ರ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 4 ಗಂಟೆಗೆ ಮೈಸೂರು ವಕೀಲರ ಸಂಘದ ಕಟ್ಟಡದ ಶಂಕುಸ್ಥಾಪನೆಯಲ್ಲಿ ಭಾಗವಹಿಸಿದ ನಂತರ ರಾತ್ರಿ 7 ಗಂಟೆಗೆ  ಬೆಂಗಳೂರಿಗೆ  ತೆರಳುವರು.
ನ.1 ರಂದು ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟನೆ
ಮೈಸೂರು,ಅ.31. 2014 ರ ದಸರಾ ವಸ್ತು ಪ್ರದರ್ಶನದ ಅಂಗವಾಗಿ ನವೆಂಬರ್ 1 ರಂದು ಸಂಜೆ 6-30 ಗಂಟೆಗೆ ವಸ್ತು ಪ್ರದರ್ಶನದ ಒಳ ಆವರಣದಲ್ಲಿರುವ ಬಿ.ವಿ.ಕಾರಂತ್ ರಂಗಗಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದೆ.
ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು.
ಸಹಕಾರ ಸಚಿವ ಹೆಚ್.ಎಸ್. ಮಹದೇವಪ್ರಸಾದ್, ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ, ಉಪಮಹಾಪೌರರಾದ  ಮಹದೇವಮ್ಮ,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಬಿ.ಪುಷ್ಪಾ ಅಮರನಾಥ್, ಉಪಾಧ್ಯಕ್ಷ ಎಲ್ ಮಹದೇವಪ್ಪ, ಸಾಂಸ್ಕøತಿಕ ಉಪಸಮಿತಿ ಅಧ್ಯಕ್ಷ ಆರ್. ಮೂರ್ತಿ, ಉಪಾಧ್ಯಕ್ಷ ಹೆಚ್.ಕೆ.ಅನಂತ, ಮೈ.ನಾ.ಗೋಪಾಲಕೃಷ್ಣ ಹಾಗೂ ಸಿ.ಎಸ್. ರಘು ಅವರು ಭಾಗವಹಿಸಲಿದ್ದಾರೆ.



ಅಪ್ರೆಂಟಿಸ್ ಟ್ರೈನಿಂಗ್ ತರಬೇತಿ
     ಮೈಸೂರು,ಅ.31.ಹಿಂದೂಸ್ಥಾನ್ ಏರೋನ್ಯಾಟಿಕ್ಸ (ಲಿ) ಟೆಕ್ನಿಕಲ್ ಟ್ರೈನಿಂಗ್ ಇಸ್ಟಿಟ್ಯೂಟ್ ಬೆಂಗಳೂರು ಇವರು  ಮೇಸಿನಿಸ್ಟ್ ಟ್ರೇಡ್ ಗಳಿಗೆ 3 ವರ್ಷಗಳ ಫುಲ್ ಟರ್ಮ ಅಪ್ರೆಂಟಿಸ್ ಟ್ರೈನಿಂಗ್ ತರಬೇತಿ ನೀಡಲಿದ್ದಾರೆ. ಅಸಕ್ತ ಅರ್ಹ ಅಭ್ಯರ್ಥಿಗಳು ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ. 9ನೇ ಮೇನ್ ಕೆ.ಹೆಚ್.ಬಿ ಕಟ್ಟಡ ಸರಸ್ವತಿಪುರಂ ಮೈಸೂರು-09 ಇವರಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ನವೆಂಬರ್ 6 ರೊಳಗೆ ಸಲಿಸಬೇಕು.
       ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗ ಹಾಗೂ ಓ.ಬಿ.ಸಿ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಯನ್ನು ಶೇ 60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಪರಿಶಿಷ್ಟಜಾತಿ/ಪರಶಿಷ್ಟಪಂಗಡ/ವಿಕಲಚೇತರು ಶೇ50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಈ ಹುದ್ದೆಗೆ ಮಹಿಳೆಯರೂ ಅರ್ಹರಿರುತ್ತಾರೆ. ವಯೋಮಿತಿ:- 01-10-2014 ಕ್ಕೆ 15 ರಿಂದ 18 ವರ್ಷದೊಳಗಿರಬೇಕು.
       ತರಬೇತಿಯು ಉಚಿತವಾಗಿದ್ದು, ತರಬೇತಿ ಅವಧಿಯಲ್ಲಿ ಸ್ಟೈಫಂಡ್ ಹಾಗೂ ಇತರೆ ಭತ್ಯೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0821-2489972 ಯನ್ನು ಸಂಪರ್ಕಿಸುವುದು.
ಧನ ಸಹಾಯ: ಅರ್ಜಿ ಆಹ್ವಾನ
ಮೈಸೂರು,ಅ.31.ಕೊಲ್ಕತ್ತಾದ ರಾಜಾರಾಂ ಮೋಹನ್‍ರಾಯ್ ಗ್ರಂಥಾಲಯ ಪ್ರತಿಷ್ಠಾನ  2014-15 ನೇ ಸಾಲಿಗೆ “ಸಾರ್ವಜನಿಕ ಗ್ರಂಥಾಲಯ ಸೇವೆ ಒದಗಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಹೊಂದಾಣಿಕೇತರ ನೆರವು ಧನ ಸಹಾಯ” ಯೋಜನೆ ಅಡಿಯಲ್ಲಿ ಧನ ಸಹಾಯ ಒದಗಿಸಲು ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿರುವ  ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ನಿಗಧಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಿಸೆ.
ಆಸಕ್ತರು ಅರ್ಜಿ ನಮೂನೆಯನ್ನು  ಉಪನಿರ್ದೇಶಕರ ಕಛೇರಿ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ: 07.11.2014 ರ ಒಳಗೆ ಉಪನಿರ್ದೇಶಕರು ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯ, ಮೈಸೂರು,  ಇವರಿಗೆ ಸಲ್ಲಿಸುವುದು  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0821-2423678 ಯನ್ನು ಸಂಪರ್ಕಿಸುವುದು.
ಪ್ರಶಸ್ತಿಗಾಗಿ ಮಹಿಳೆಯರಿಂದ ಅರ್ಜಿ ಆಹ್ವಾನ
ಮೈಸೂರು,ಅ.31.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಒಂದು ಜಿಲ್ಲಾ ಮಹಿಳಾ ಸಮ್ಮಾನ್ ಮತ್ತು ರಾಜ್ಯ ಮಹಿಳಾ ಸಮ್ಮಾನ್” ಪ್ರಶಸ್ತಿ ನೀಡಲು ಅರ್ಹ ಮಹಿಳೆಯರಿಂದ  ಅರ್ಜಿ ಆಹ್ವಾನಿಸಿದೆ. ಜಿಲ್ಲಾ ಮಹಿಳಾ ಸಮ್ಮಾನ್ ಪ್ರಶಸ್ತಿಯು ರೂ.20000/-ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ರಾಜ್ಯ ಮಹಿಳಾ ಸಮ್ಮಾನ್ ಪ್ರಶಸ್ತಿಯು ರೂ.40000/- ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. 

        ಈ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಮಹಿಳೆಯರು ಜನವರಿ-2014ಕ್ಕೆ 21 ವರ್ಷ ಮೇಲ್ಪಟ್ಟವರಾಗಿರಬೇಕು, ಮಹಿಳಾ ಅಭಿವೃದ್ದಿ ಕ್ಷೇತ್ರಗಳಲ್ಲಿ ಹಿಂದಿನ ಎರಡು ವರ್ಷಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ/ಸಲ್ಲಿಸುತ್ತಿರುವವರು ಆಗಿರಬೇಕು.
ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಂ:9/ಎ, 3ನೇ ಮಹಡಿ, ಕೃಷ್ಣಧಾಮ ಎದುರು, ಸಾಹುಕಾರ್ ಚೆನ್ನಯ್ಯ ರಸ್ತೆ, ಸರಸ್ವತಿಪುರಂ, ಮೈಸೂರು-09, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ನವೆಂಬರ್ 10 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:2498031 ಅಥವಾ  2495432ನ್ನು ಸಂಪರ್ಕಿಸುವುದು.
ಫಲಾನುಭವಿಗಳಿಗೆ ಮನೆಗಳಿಗೆ ತೆರಳಲು ಸೂಚನೆ
ಮೈಸೂರು,ಅ.31.ಕರ್ನಾಟಕ ಕೊಳಗೇರಿ ಅಭಿವೃಧ್ಧಿ ಮಂಡಳಿ ವತಿಯಿಂದ ಮೈಸೂರು ನಗರದ ನಂ.1ನೇ ಉಪ-ವಿಭಾಗ ವ್ಯಾಪ್ತಿಯಲ್ಲಿ ಎಟಿಓUಖಒ-ಃSUP ಯೋಜನೆಯಡಿಯಲ್ಲಿ ಮೈಸೂರು ನಗರದ ವಿವಿಧ ಪ್ರದೇಶಗಳಲ್ಲಿ ನಿರ್ಮಿಸಿರುವ ಮನೆಗಳನ್ನು ಅನುಮೋದಿತ ಪಟ್ಟಿಯಲ್ಲಿರುವ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಕೆಲವು ಪ್ರದೇಶಗಳಲ್ಲಿ ಹಂಚಿಕಾತಿ ಪಡೆದ ಕೆಲವು ಫಲಾನುಭವಿಗಳು ವಾಸಕ್ಕೆ ಬಂದಿರುವುದಿಲ್ಲ. ಹಂಚಿಕಾತಿ ಪಡೆದ ಫಲಾನುಭವಿಗಳು ಕೂಡಲೇ ಮನೆಗಳಿಗೆ ವಾಸಕ್ಕೆ ಬರತಕ್ಕದು. ತಪ್ಪಿದ್ದಲ್ಲಿ ಅಂತಹ ಫಲಾನುಭವಿಗಳು ಮಂಡಳಿಗೆ ಪಾವತಿಸಿರುವ ಫಲಾನುಭವಿಗಳ ವಂತಿಕೆ ಹಣವನ್ನು ಮಂಡಳಿಗೆ ಮುಟ್ಟುಗೋಲು ಹಾಕಿಕೊಂಡು ಹಂಚಿಕಾತಿಯನ್ನು ರದ್ದುಪಡಿಸಲಾಗುವುದು. ಎಂದು ಮೈಸೂರು ನಗರದ ನಂ.1ನೇ ಉಪ-ವಿಭಾಗದ ಕರ್ನಾಟಕ ಕೊಳಗೇರಿ ಅಭಿವೃಧ್ಧಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕನ್ನಡ ರಾಜ್ಯೋತ್ಸವ : ಸನ್ಮಾನ ಸಮಾರಂಭ
ಮೈಸೂರು,ಅ.31.ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತವು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 14 ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದು, ಅವರನ್ನು ನವೆಂಬರ್ 1 ರಂದು ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ಸನ್ಮಾನಿಸಲಾಗುವುದು ಎಂದು ಮೈಸೂರು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
         ಆಯ್ಕೆಯಾದ ಮಹನೀಯರ ವಿವರ ಇಂತಿದೆ: ರಂಗಭೂಮಿ-ಬಿ.ವಾಸುದೇವ, ಪತ್ರಿಕೋದ್ಯಮ- ಅಂಶಿ ಪ್ರಸನ್ನಕುಮಾರ್, ವೈದ್ಯಾಕೀಯ- ಡಾ.ಬಸವನಗೌಡಪ್ಪ, ಸಾಹಿತ್ಯ- ಬನ್ನೂರು ಶ್ರೀ ಕೆ.ರಾಜು, ಕನ್ನಡ ಹೋರಾಟ- ನಾಲಾ ಬೀದಿ ಶ್ರೀ ರವಿ ಹಾಗೂ ಬಿ.ಎ.ಶಿವಶಂಕರ್, ಕ್ರೀಡೆ-ಸುಬ್ಬಶೆಟ್ಟಿ, ಶಿಲ್ಪಕಲೆ- ವಿ.ಶ್ರೀನಿವಾಸ್, ಪರಿಸರ ಕ್ಷೇತ್ರ- ಬಾನು ಮೋಹನ್, ಸಮಾಜ ಸೇವೆ- ವೇಣುಗೋಪಾಲ್, ಸಂಘ ಸಂಸ್ಥೆಗಳು- ಗಾನಭಾರತಿ ಸಂಸ್ಥೆ, ಕನ್ನಡಪರ ಹೋರಾಟ- ಶ್ರೀನಿವಾಸ್ ಮಿತ್ರ, ಛಾಯಚಿತ್ರ - ಪ್ರಗತಿ ಗೋಪಾಲಕೃಷ್ಣ ಹಾಗೂ ಜಾನಪದ ಕ್ಷೇತ್ರ - ಮಹದೇವು(ಕಂಸಾಳೆ).
ರೇಷ್ಮೆ ವ್ಯವಸಾಯ ಕುರಿತು ಚಲನಚಿತ್ರ ಪ್ರದರ್ಶನ
ಮೈಸೂರು,ಅ.31.ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರು ವಸ್ತು ಪ್ರದರ್ಶನ ಆವರಣದಲ್ಲಿರುವ ರೇಷ್ಮೆ ಇಲಾಖೆಯ ಮಳಿಗೆಯಲ್ಲಿ ನವೆಂಬರ್ 1 ಹಾಗೂ 2 ರಂದು ಸಂಜೆ 6 ಗಂಟೆಯಿಂದ ರೇಷ್ಮೆ ವ್ಯವಸಾಯ ಮಣ್ಣಿನಿಂದ ರೇಷ್ಮೆವರೆಗಿನ ಮಾಹಿತಿಯನ್ನು ಚಲನಚಿತ್ರ ರೂಪದಲ್ಲಿ ಪ್ರದರ್ಶಿಸಲಾಗುವುದು. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರೇಷ್ಮೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 1 ರಿಂದ ಮಹಿಳಾ ವಿಶೇಷ ಚಿಕಿತ್ಸಾ ಘಟಕ ಪ್ರಾರಂಭ
ಮೈಸೂರು,ಅ.31.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕವನ್ನು ನವೆಂಬರ್ 1 ರಿಂದ ಪ್ರಾರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
       ಈ ಘಟಕದಲ್ಲಿ 24x7 ಗಂಟೆಗಳು ಸಿಬ್ಬಂದಿಗಳು ಹಾಜರಿದ್ದು, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಎಲ್ಲಾ ಅಗತ್ಯ ಸೇವೆಗಳು ಒಂದೇ ಸೂರಿನಲ್ಲಿ ದೊರೆಯುವಂತೆ ವ್ಯವಸ್ಥೆಗೊಳಿಸಲಾಗಿರುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಇವರ ಸುತ್ತೋಲೆ ಪ್ರಕಾರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ / ಬಾಲಕಿಯರಿಗೆ ಮೆಡಿಕೋಲೀಗಲ್ ಪ್ರಕರಣದಡಿ ದಾಖಲಿಸುವ ಬಗ್ಗೆ ವೈದ್ಯಾಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ನೀಡಲಾಗಿರುತ್ತದೆ.
        ದೈಹಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಗುಣಾತ್ಮಕವಾದ ಮತ್ತು ಸೂಕ್ಷ್ಮ ತೆರನಾದ ಚಿಕಿತ್ಸೆಯನ್ನು ನೀಡುವುದರ ಮುಖಾಂತರ “ದ್ವಿತೀಯ ಹಿಂಸೆ”ಯನ್ನು ಮಹಿಳಾ ವಿಶೇಷ ಚಿಕಿತ್ಸಾ ಘಟಕವು ಕಡಿಮೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ವಿಶೇಷ ಚಿಕಿತ್ಸಾ ಘಟಕದಲ್ಲಿ ದಿನದ 24 ಗಂಟೆಗಳು ಹೆಲ್ಪ್ ಡೆಸ್ಕ್ ಕಾರ್ಯನಿರ್ವಹಿಸುತ್ತದೆ.
         ಉಚಿತ ವೈದ್ಯಕೀಯ ಚಿಕಿತ್ಸೆ, ಪರೀಕ್ಷೆ ಮತ್ತು ಔಷಧೋಪಚಾರ, ಸ್ಥಳೀಯ ಠಾಣೆಯಿಂದ ಪ್ರಥಮ ಮಾಹಿತಿ ವರದಿ (ಎಫ್.ಐ.ಆರ್)ನ್ನು ದಾಖಲಿಸುವುದು, ಸರ್ಕಾರೇತರ ಸಂಸ್ಥೆಯಿಂದ ನೇಮಿಸಲ್ಪಟ್ಟ ಸಮಾಲೋಚಕರಿಂದ ಮಾನಸಿಕ ಸಮಾಲೋಚನೆ, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ/ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನೇಮಿಸಲ್ಪಟ್ಟ ನುರಿತ ವಕೀಲರಿಂದ ಕಾನೂನು ಸಮಾಲೋಚನೆ ಮತ್ತು ಕಾನೂನು ನೆರವು , ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ವಸತಿ ಮತ್ತು ಸುರಕ್ಷಿತ ವಾಸ್ತವ್ಯ ವ್ಯವಸ್ಥೆಯನ್ನುಈ ಘಟಕದಲ್ಲಿ ಒದಗಿಸಲಾಗುವುದು.
       ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳನ್ನು ಟಿ.ನರಸೀಪುರ-08227-261267, ನಂಜನಗೂಡು-08221-226168, ಪಿರಿಯಾಪಟ್ಟಣ-08223-274742, ಮೈಸೂರು ನಗರ-0821-2491962, ಮೈಸೂರು ಗ್ರಾಮಾಂತರ 0821-2567940, ಹುಣಸೂರು-08222-252254, ಹೆಚ್.ಡಿ.ಕೋಟೆ-08228-255320, ಕೆ.ಆರ್.ನಗರ-08223-262714, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿಗಳು, ಮೈಸೂರು-0821-2543003, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ- ದೂ:0821-2495432 ಮತ್ತು 0821-2498031 ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ
     ಮೈಸೂರು,ಅ.29. ಜಿಲ್ಲಾಡಳಿತ ವತಿಯಿಂದ ನವೆಂಬರ್ 1 ರಂದು ಬೆಳಗ್ಗೆ 9 ಗಂಟೆಗೆ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
     ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಧ್ವಜಾರೋಹಣ ನೆರವೇರಿಸುವರು.
     ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ,್ಪ ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಬಿ.ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್.ಪುಟ್ಟರಾಜು, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ವಾಸು ಜಿ.ಟಿ.ದೇವೇಗೌಡರು, ಚಿಕ್ಕಮಾದು, ಸಾ.ರಾ. ಮಹೇಶ್, ಹೆಚ್.ಪಿ. ಮಂಜುನಾಥ್, ಕೆ.ವೆಂಕಟೇಶ್, ವಿಧಾನಪರಿಷತ್ ಸದಸ್ಯ ಸಿ.ಹೆಚ್.ವಿಜಯಶಂಕರ್, ಗೋ.ಮಧುಸೂದನ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್. ಧರ್ಮಸೇನ, ಮಹಾನಗರಪಾಲಿಕೆಯ ಉಪ ಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಎ ಲೋಕಮಣಿ ಭಾಗವಹಿಸುವರು.
     ಅಂದು ಬೆಳಗ್ಗೆ 8-30 ಗಂಟೆಗೆ ಅರಮನೆ ಆರವಣದಲ್ಲಿರುವ ಶ್ರೀ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಕೆ ನಂತರ ಬೆಳಗ್ಗೆ 9 ಗಂಟೆಗೆ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿರುವ ಶ್ರೀ ಭುವನೇಶ್ವರಿ ದೇವಿ ಪುತ್ಥಳಿಗೆ  ಪುಷ್ಪಾರ್ಚನೆ ನಂತರ ಮೆರವಣಿಗೆಯು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೋರಟು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಹಾದು ವಾಪಸ್ಸು ಪುರಭವನ ತಲುಪುವುದು.
     ಸಂಜೆ 5 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಮತ್ತು ಶಾಲಾ ಕಾಲೇಜು   ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡುವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು. ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಲು ಸೂಚನೆ
ಮೈಸೂರು,ಅ.29.ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಜ್ಯೋತ್ಸವ ಸಮಾರಂಭ ನಡೆಯಲಿದೆ. ಮೈಸೂರು ನಗರದಲ್ಲಿರುವ ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳು (ಮಂಡಳಿ, ನಿಗಮ, ಸ್ವಯತ್ತ ಸಂಸ್ಥೆಗಳು)  ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ತೋಟಗಾರಿಕೆ ಇಲಾಖೆಯ ಕರ್ಜನ್ ಪಾರ್ಕ್ ಆವರಣದಲ್ಲಿ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ತಾತ್ಕಾಲಿಕ ಕಚೇರಿಯಲ್ಲಿ ಇರಿಸಲಾಗಿರುವ ಹಾಜರಾತಿ ವಹಿಯಲ್ಲಿ ಎಲ್ಲ ಇಲಾಖೆ ಅಧಿಕಾರಿ ಮತ್ತು ನೌಕರರು ಸಹಿ ಮಾಡುವುದು. ಗೈರು ಹಾಜರಾಗುವ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು  ಪ್ರಕಟಣೆಯಲ್ಲಿತಿಳಿಸಿದ್ದಾರೆ.


ಮೈಸೂರು-ನಗರದ ಲಷ್ಕರ್ ಮೋಹಲ್ಲಾ ಗರಡಿಕೇರಿಯ ಶ್ರೀ ಮಲೈ ಮಹದೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ ನಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾರ್ಥನಾ ಮಂದಿರವನ್ನ ಸುತ್ತೂರು ಶ್ರಿ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.ಸಂದರ್ಭದಲ್ಲಿ ಶಾಸಕ ಎಂ.ಕೆ.ಸೋಮಶೇಖರ್ ಉಪಸ್ತಿತರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಹೆಚ್.ಅಂಬರೀಷ್ರವರ ಪ್ರವಾಸ ಕಾರ್ಯಕ್ರಮ

ಜಿಲ್ಲಾ ಉಸ್ತುವಾರಿ ಸಚಿವ ಎಂ.ಹೆಚ್.ಅಂಬರೀಷ್ರವರ ಪ್ರವಾಸ ಕಾರ್ಯಕ್ರಮ.


     ಮಂಡ್ಯ, ಅ.31-ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎಂ.ಹೆಚ್.ಅಂಬರೀಷ್ ಅವರು ನವೆಂಬರ್ 1, 2 ಹಾಗೂ 3 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.   ನವೆಂಬರ್ 1 ರಂದು ಬೆಳಿಗ್ಗೆ 9.00 ಕ್ಕೆ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 59 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. 10.30ಕ್ಕೆ ಗಿರಿಜಾ ಚಲನಚಿತ್ರ ಮಂದಿರದಲ್ಲಿ ಗ್ರಾಮೀಣಾಭಿವೃದ್ಧಿ ಕುರಿತ ಕನ್ನಡ ಚಲನಚಿತ್ರ “ಗಾಂಧೀಜಿ ಕನಸು” ಪ್ರದರ್ಶನಕ್ಕೆ ಚಾಲನೆ ನೀಡುವರು. ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
      ನವೆಂಬರ್ 2 ರಂದು ಮಧ್ಯಾಹ್ನ 1.00 ಗಂಟೆಗೆ ಕೆರಗೋಡು ಹೋಬಳಿಯ ಮಾರಗೌಡನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 1.30 ಗಂಟೆಗೆ ಕೆರಗೋಡು ಹೋಬಳಿಯ ಕೆ.ಗೌಡಗೆರೆ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಕಟ್ಟಡ ಉದ್ಘಾಟನೆ ಮಧ್ಯಾಹ್ನ 2.00 ಗಂಟೆಗೆ ಪಿ.ಎಂ.ಜಿ.ಎಸ್.ವೈ. ಕಾಮಗಾರಿಯ ವೀಕ್ಷಣೆ, ಮಧ್ಯಾಹ್ನ 2.30ಕ್ಕೆ ಕೆರಗೋಡು ಹೋಬಳಿಯ ಹೊನಗಾನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ,  ಮಧ್ಯಾಹ್ನ 3.00 ಗಂಟೆಗೆ ಕೆರಗೋಡು ಹೋಬಳಿಯ ಸಾತನೂರಿನಲ್ಲಿ ಸಮುದಾಯ ಭವನ ಕಟ್ಟಡದ ಉದ್ಘಾಟನೆ, ಸಂಜೆ 4.00 ಗಂಟೆಗೆ ಮಂಡ್ಯದಲ್ಲಿ ಸಾರ್ವಜನಿಕರ ಭೇಟಿ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು.
       ನವೆಂಬರ್ 3 ರಂದು ಬೆಳಿಗ್ಗೆ 11.00 ಗಂಟೆಗೆ ಬಸರಾಳು ಹೋಬಳಿಯ ಗುಡಿಗೇನಹಳ್ಳಿಯಲ್ಲಿ ಪಿ.ಎಂ.ಜಿ.ಎಸ್.ವೈ ಕಾಮಗಾರಿಗಳ ಪರಿವೀಕ್ಷಣೆ, ಮಧ್ಯಾಹ್ನ 12.00 ಕ್ಕೆ ದೊಡ್ಡಗರುಡನಹಳ್ಳಿಯಲ್ಲಿ ರಾಜೀವಗಾಂಧಿ ಸೇವಾ ಕೇಂದ್ರದ ಉದ್ಘಾಟನೆ, ಮಧ್ಯಾಹ್ನ 1.00 ಕ್ಕೆ ಹುನಗನಹಳ್ಳಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪರಿವೀಕ್ಷಣೆ, ಮಧ್ಯಾಹ್ನ 1.30ಕ್ಕೆ ಬಸರಾಳು ಐ.ಟಿ.ಐ. ಹಾಗೂ ಕಾಲೇಜುಗಳ ಕಟ್ಟಡಗಳ ಪರಿವೀಕ್ಷಣೆ, ಮಧ್ಯಾಹ್ನ 2.00 ಕ್ಕೆ ಚಂದಗಾಲು ರಾಜೀವಗಾಂಧಿ ಸೇವಾ ಕೇಂದ್ರ ಉದ್ಘಾಟನೆ, ಮಧ್ಯಾಹ್ನ 2.30ಕ್ಕೆ ಚಿಕ್ಕಬಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.   
ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ
     ಜಿಲ್ಲಾಡಳಿತದ ವತಿಯಿಂದ ನವೆಂಬರ್ 1 ರಂದು ಬೆಳಿಗ್ಗೆ 9.00 ಕ್ಕೆ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 59 ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುವುದು. ವಸತಿ ಹಾಗೂ  ಜಿಲ್ಲಾ ಉಸ್ತುವಾರಿ ಸಚಿವ ಎಂ.ಹೆಚ್.ಅಂಬರೀಷ್ ಅವರು ಧ್ವಜಾರೋಹಣ ಹಾಗೂ ಕನ್ನಡ ರಾಜ್ಯೋತ್ಸವ ಸಂದೇಶವನ್ನು ನೀಡಲಿದ್ದಾರೆ.
     ಸಂಜೆ 4.00 ಗಂಟೆಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸತಿ ಹಾಗೂ  ಜಿಲ್ಲಾ ಉಸ್ತುವಾರಿ ಸಚಿವ ಎಂ.ಹೆಚ್.ಅಂಬರೀಷ್ ಅವರು ವಹಿಸುವರು. ಖ್ಯಾತ ಸಾಹಿತಿಗಳು ಹಾಗೂ ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು.
 ಜಿಲ್ಲಾಪಂಚಾಯತ್ ಅಧ್ಯಕ್ಷರಾದ ಮಂಜಳಾ ಪರಮೇಶ್, ಖಾನ್,  ಲೋಕಸಭಾ ಸದಸ್ಯರಾದ ಸಿ.ಎಸ್.ಪುಟ್ಟರಾಜು, ರಾಜ್ಯಸಭಾ ಸದಸ್ಯರಾದ ಕೆ. ರೆಹಮಾನ್ ವಿಧಾನಸಭೆಯ ಶಾಸಕರುಗಳಾದ ಕೆ.ಎಸ್. ಪುಟ್ಟಣ್ಣಯ್ಯ, ಎನ್.ಚೆಲುವರಾಯಸ್ವಾಮಿ, ಡಿ.ಸಿ.ತಮ್ಮಣ್ಣ, ಕೆ.ಸಿ.ನಾರಾಯಣಗೌಡ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡೀಸಿದ್ದೇಗೌಡ ಹಾಗೂ ವಿಧಾನ ಪರಿಷತ್ ಶಾಸಕರುಗಳಾದ ಮರಿತಿಬ್ಬೇಗೌಡ, ಅಶ್ವಥ್ ನಾರಾಯಣ್, ಡಿ.ಎಸ್.ವೀರಯ್ಯ, ಬಿ. ರಾಮಕೃಷ್ಣ, ಗೋ.ಮಧುಸೂದನ್,  ನಗರಸಭೆಯ ಅಧ್ಯಕ್ಷರಾದ ಸಿದ್ದರಾಜು, ಮಂಡ್ಯ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರಾದ ಟಿ.ಸಿ.ಶಂಕರಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ಡಾ|| ಅಜಯ್ ನಾಗಭೂಷಣ್ ಅವರು ತಿಳಿಸಿರುತ್ತಾರೆ.
ಮುಂದಿನ ಮಾರ್ಚ್ ಒಳಗೆ ಎಲ್ಲಾ ಪೋಡಿ, ಪಹಣಿ ಪ್ರಕರಣಗಳು ಇತ್ಯರ್ಥ
ಎಲ್ಲಾ ಗ್ರಾಮಗಳಲ್ಲಿ ಕಂದಾಯ ಅದಾಲತ್‍ಗಳನ್ನು ಏರ್ಪಡಿಸಿ ಸ್ಥಳದಲ್ಲಿಯೇ ದೋಷರಹಿತ ಪೋಡಿ ಮತ್ತು ಪಹಣಿಗಳನ್ನು ಹಳೇ ಕ್ರಯಪತ್ರಗಳಂತೆ ಖಾತೆ ಮಾಡುವ ಮೂಲಕ ಪ್ರಕರಣಗಳನ್ನು ಮುಂದಿನ ಮಾರ್ಚ್ ವೇಳೆಗೆ ಇತ್ಯರ್ಥಗೊಳಿಸಲಾಗುವುದು ಎಂದು ಕಂದಾಯ ಸಚಿವರಾದ ವಿ. ಶ್ರೀನಿವಾಸ್ ಪ್ರಸಾದ್ ಅವರು ತಿಳಿಸಿದರು.
       ಅವರು ಶುಕ್ರವಾರ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ಮಂಡ್ಯ ಜಿಲ್ಲಾಡಳಿತ ಆಯೋಜಿಸಿದ್ದ  ಬೃಹತ್ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
      1995 ರಿಂದ 2001 ರವರೆಗೆ ಕೈ ಬರವಣಿಗೆ ಪಹಣಿಯಿಂದ ಹಾಗೂ ಮಾಹಿತಿಯನ್ನು ಗಣಕೀಕರಣಗೊಳಿಸುವಾಗ ಪಹಣಿಯಲ್ಲಿ ಹಲವಾರು ಲೋಪದೋಷಗಳು ಉಂಟಾಗಿದ್ದು, ಇದರಿಂದ ರೈತರಿಗೆ ತಮ್ಮ ಪಹಣಿಗಳ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ತಾಲ್ಲೂಕು ಕಚೇರಿಗೆ ಅಲೆದಾಡುವ ಸನ್ನಿವೇಶ ಸೃಷ್ಟಿಯಾಗಿತ್ತು. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲ ಮಾಡಲು ಎಲ್ಲಾ ಗ್ರಾಮಗಳಲ್ಲಿ ಪೈಲೆಟ್ ಪ್ರಾಜೆಕ್ಟ್ ಮೂಲಕ ಕಂದಾಯ ಅದಾಲತ್‍ಗಳನ್ನು ಏರ್ಪಡಿಸಿ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತಿದ್ದು ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
      ಪ್ರತಿ ಗ್ರಾಮದಲ್ಲಿಯೂ ಸರ್ಕಾರಿ ರುದ್ರಭೂಮಿಗೆ ಭೂಮಿ ಗುರುತಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ಪ್ರತಿ ಗ್ರಾಮಗಳಲ್ಲಿಯೂ ರುದ್ರಭೂಮಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ ಸಚಿವರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉತ್ತಮ ಸಂಬಂಧ ಹೊಂದುವುದರಿಂದ ಸರ್ಕಾರದ ಜನಪರ ಯೋಜನೆಗಳು ಫಲಪ್ರದವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
       ಇದೇ ಸಂದರ್ಭದಲ್ಲಿ ಮಾತನಾಡಿದ ಲೋಕಸಭಾ ಸದಸ್ಯರಾದ ಸಿ.ಎಸ್.ಪುಟ್ಟರಾಜು ಅವರು ರೈತರು ಬೃಹತ್ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಲು ಮುಂದಾಗಬೇಕು. ಕಚೇರಿಗಳಲ್ಲಿ ಯಾವುದೇ ತಮ್ಮ ಕೆಲಸ ಕಾರ್ಯಗಳಿಗೆ ದುಡ್ಡು ನೀಡುವುದನ್ನು ನಿಲ್ಲಿಸಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
      ಜಿಲ್ಲಾಧಿಕಾರಿಗಳಾದ ಡಾ|| ಅಜಯ್ ನಾಗಭೂಷಣ್ ಅವರು ಮಾತನಾಡಿ ಪಾಂಡವಪುರ ಉಪ ವಿಭಾಗದ ಪಾಂಡವಪುರ ತಾಲ್ಲೂಕಿನಲ್ಲಿ 2348 ಪ್ರಕರಣಗಳು, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 731 ಪ್ರಕರಣಗಳು, ನಾಗಮಂಗಲ ತಾಲ್ಲೂಕಿನಲ್ಲಿ 5701 ಪ್ರಕರಣಗಳು, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ 16,755 ಪ್ರಕರಣಗಳು ಬಾಕಿ ಇದ್ದು, ಮುಂದಿನ ಮಾರ್ಚ್‍ರೊಳಗಾಗಿ ಪ್ರತಿ ಗ್ರಾಮ, ಹೋಬಳಿಗಳಲ್ಲಿಯೂ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ  ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಿದರು.
      ಈ ಕಾರ್ಯಕ್ರಮದಲ್ಲಿ  ಕೆ.ಆರ್.ಪೇಟೆಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಸಿ.ನಾರಾಯಣಗೌಡ, ಪಾಂಡವಪುರ ಉಪವಿಭಾಗಾಧಿಕಾರಿಗಳಾದ ಡಾ|| ಹೆಚ್.ಎಲ್.ನಾಗರಾಜ್, ಜಿಲ್ಲಾ ಪಂಚಾಯತ್ ಸದಸ್ಯರಾದ ಸರ್ವಮಂಗಳ ವೆಂಕಟೇಶ್, ಬೂಕನಕೆರೆ ತಾಲ್ಲೂಕು ಪಂಚಾಯತ್ ಸದಸ್ಯರಾದ ಯಳವೇಗೌಡ, ಬೂಕನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸರಸ್ವತಿ ಬೋಳೇಗೌಡ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.


ರಾಷ್ಟ್ರೀಯ ಸಂಕಲ್ಪ ದಿನ ಹಾಗೂ ರಾಷ್ಟ್ರೀಯ  ಏಕತಾ ದಿನ ಆಚರಣೆ
     ದಿವಂಗತ ಇಂದಿರಾಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ರಾಷ್ಟ್ರೀಯ ಸಂಕಲ್ಪ ದಿನ ಹಾಗೂ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿನವನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಆಚರಿಸಲಾಯಿತು.
     ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕರಾದ ಜಿ.ಟಿ.ಶಿವಕುಮಾರ್, ಜಿಲ್ಲಾಧಿಕಾರಿಗಳಾದ ಡಾ|| ಅಜಯ್ ನಾಗಭೂಷಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಭೂಷಣ್ ಜಿ. ಬೊರಸೆ ಅವರು ಈ ಮಹನೀಯರುಗಳ ಬಗ್ಗೆ ಗುಣಗಾನ ಮಾಡಿದರು. ಇದೇ ಸಂದರ್ಭದಲ್ಲಿ ಸರ್ವಧರ್ಮ ಪ್ರಾರ್ಥನೆ, ಭಜನೆ, ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು. ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು. ಮಹನೀಯರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಪ್ರತಿಜ್ಞಾವಿಧಿ ಬೋಧಿಸಲಾಯಿತು.                        ರಾಜ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನ
      ಅಂಗವಿಕಲರ ಕಲ್ಯಾಣ ಇಲಾಖೆಯು ಅಂಗವಿಕಲರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಾಲೆಗಳಲ್ಲಿ 15 ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ / ಸಲ್ಲಿಸಿರುವ ಶಿಕ್ಷಕರಿಗೆ 2014ನೇ ಸಾಲಿನಲ್ಲಿ ರಾಜ್ಯಪ್ರಶಸ್ತಿ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.  ಅಂಗವಿಕಲರ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿ, ಸಂಸ್ಥೆ ಮತ್ತು ವಿಶೇಷ ಶಿಕ್ಷಕರು ನಿಗದಿತ  ಅರ್ಜಿ ನಮೂನೆಯನ್ನ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ನವೆಂಬರ್ 7 ರೊಳಗಾಗಿ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ತಾಲ್ಲೂಕು ಕಚೇರಿ ಆವರಣ ಇವರಿಗೆ ಹಿಂದಿರುಗಿಸುವಂತೆ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವಿದ್ಯುತ್ ವ್ಯತ್ಯಯ
 ದಿನಾಂಕ 05.11.2014 ರಂದು  ಕೆ.ಐ.ಎ.ಡಿ.ಬಿ ವಿದ್ಯುತ್ ವಿತರಣಾ ಕೇಂದ್ರದ ಗುತ್ತಲು ಫೀಡರ್‍ನಲ್ಲಿ  ವ್ಯಾಪ್ತಿಗೆ ಬರುವಂತಹ ನಗರ ಪ್ರದೇಶಗಳಾದ ಗುತ್ತಲು ರೋಡ್, ಸ್ವರ್ಣಸಂದ್ರ, ಸಾಹುಕಾರ್ ಚನ್ನಯ್ಯ ಬಡಾವಣೆ, ಇಂದಿರಾ ಕಾಲೋನಿ, ಹಳೆಗುತ್ತಲು, ಅರಕ್ಷೇಶ್ವರ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಾದ ಚನ್ನಪ್ಪನದೊಡ್ಡಿ, ಯತ್ತಗದಹಳ್ಳಿ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ರಸ್ತೆ ಅಗಲೀಕರಣ ಕೆಲಸದ ನಿಮಿತ್ತ ವಿದ್ಯುತ್‍ನಲ್ಲಿ ಅಡಚಣೆ ಉಂಟಾಗುತ್ತದೆ. ಗ್ರಾಹಕರು ಹಾಗೂ ಸಾರ್ವಜಿನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಮಂಡ್ಯ ವಿಭಾಗದ ಸೆಸ್ಕ್‍ನ ಕಾರ್ಯನಿರ್ವಾಹಕ ಅಭಿಯಂತರ ಎ.ಎನ್.ರವಿಶಂಕರ್ ಅವರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.
ಅಯೋಡಿನ್ ಕೊರತೆಯಿಂದ ಕಲಿಕೆ ಕುಂಠಿತ :  ಪಿ.ಶಿವಾನಂದ
      ಅಯೋಡಿನ್ ಥೈರಾಯಿಡ್ ಗ್ರಂಥಿಯ ಸಮರ್ಪಕ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದ್ದು ಇದರಿಂದ ಬಿಡುಗಡೆಯಾಗುವ ಥೈರಾಕ್ಸಿನ್ ಹಾರ್ಮೋನ್ ಮೆದುಳಿನ ಉತ್ತಮ ಬೆಳವಣಿಗೆಗೆ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ  ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಪಿ.ಶಿವಾನಂದ ರವರು ತಿಳಿಸಿದರು.
      ಅವರು “ವಿಶ್ವ ಅಯೋಡಿನ್ ದಿನಾಚರಣೆಯ ಸಪ್ತಾಹ”ದ ಅಂಗವಾಗಿ ಶ್ರೀ ಶಂಕರಾನಂದ ಭಾರತಿ ವಿದ್ಯಾಪೀಠ, ಕುವೆಂಪು ಪ್ರೌಢಶಾಲೆ, ಕುಂತಿಬೆಟ್ಟ,  ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
      ಅಯೋಡಿನ್ ಕೊರತೆಯಿಂದ ಶಾಲಾಮಕ್ಕಳ ಕಲಿಕೆಯ ಪ್ರಗತಿಯಲ್ಲಿ ಕುಂಠಿತವಾಗುವುದಲ್ಲದೇ  ಬುದ್ದಿಮಾಂದ್ಯತೆ, ಸರಿಪಡಿಸಲಾಗಾದ ದೈಹಿಕ ಹಾಗೂ ಮಾನಸಿಕ ವಿಕಲತೆ, ಕಿವುಡು ಹಾಗೂ ಮೂಕತನ,  ಮೆಳ್ಳಗಣ್ಣು, ಕುಬ್ಜ್ಜತನ, ಅಂಗವಿಕಲತೆ, ನಡಿಗೆಯಲ್ಲಿ ಸರಿಪಡಿಸಲಾಗದಂತಹ ಲೋಪದೋಷಗಳು ಉಂಟಾಗುತ್ತವೆ ಎಂದು ತಿಳಿಸಿದ ಅವರು ಶಾಲಾ ವಯಸ್ಸಿನ ಮಕ್ಕಳಿಗೆ ದಿನವೊಂದಕ್ಕೆ 120ಮೈಕ್ರೋಗ್ರಾಂ ಅಯೋಡಿನ್ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿನಿತ್ಯದ ಆಹಾರದಲ್ಲಿ ಅಯೋಡಿನ್‍ಯುಕ್ತ ಉಪ್ಪನ್ನು ಬಳಸಬೇಕು ಹಾಗೂ ಅಯೋಡಿನ್‍ಯುಕ್ತ ಆಹಾರ ಪದಾರ್ಥಗಳಾದ ಸಮುದ್ರದ ಮೀನು, ಸೀಗಡಿ ಹಾಗೂ ಕ್ಯಾರೆಟ್‍ನ ಬಳಕೆಯಿಂದ ಅಯೋಡಿನ್ ಕೊರತೆಯನ್ನು ನೀಗಿಸಬಹುದಾಗಿದೆ  ಎಂದು ಅವರು ತಿಳಿಸಿದರು.
ಅಲ್ಲದೇ ಸಾಮಾನ್ಯ ಉಪ್ಪಿನೊಂದಿಗೆ “ಪೊಟಾಷಿಯಂ-ಅಯೋಡೇಟ್” ಹಾಗು ಕಬ್ಬಿಣಾಂಶವನ್ನು ಮಿಶ್ರಣಗೊಳಿಸಿರುವ ಡಬಲ್‍ಫೋರ್ಟಿಫೈಡ್” ಉಪ್ಪನ್ನು ಇತ್ತೀಚಿಗೆ ತಯಾರಿಸಲಾಗಿದ್ದು ಸೂರ್ಯ ಗುರುತಿನ ಚಿಹ್ನೆಯನ್ನು ಮುದ್ರಿಸಲಾಗಿರುವ  ಪ್ಯಾಕೇಟ್ ಉಪ್ಪನ್ನು  ಬಳಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 
       ಶ್ರೀ ಶ್ರೀ ಆದಿತ್ಯನಾಥಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾದ್ಯಾಯರಾದ ವೆಂಕಟೇಶ್, ಶಿಕ್ಷಕರಾದ ರಮ್ಯ,  ಪವಿತ್ರಮ್ಮ  ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅಯೋಡಿನ್ ಕೊರತೆ ರೋಗಗಳ ನಿಯಂತ್ರಣದ ಬಗ್ಗೆ ವೀಡಿಯೋ ಪ್ರದರ್ಶನ ಏರ್ಪಡಿಸಲಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಅದರ ಪ್ರಾಮುಖ್ಯತೆಯನ್ನು ತಿಳಿಸಲಾಯಿತು.
ನ. 1 ರಂದು ಮಂಡ್ಯ  ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕ ಪ್ರಾರಂಭ
    ದೌರ್ಜನಕ್ಕೆ ಒಳಗಾದ ಮಹಿಳೆಯರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ, ರಕ್ಷಣೆ, ಕಾನೂನು ನೆರವು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ನವೆಂಬರ್ 1 ರಂದು ಮಂಡ್ಯ ನಗರದ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 07 ಮತ್ತು 08 ರಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗುತ್ತಿದ್ದು ಈ ಘಟಕವು ದಿನದ 24 ಘಂಟೆಯೂ ಕಾರ್ಯ ನಿರ್ವಹಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಅಜಯ್ ನಾಗಭೂಷಣ ಅವರು ತಿಳಿಸಿದ್ದಾರೆ.
      ಈ ಘಟಕವು ಇಬ್ಬರು ವೈದ್ಯಾಧಿಕಾರಿಗಳು, ಓರ್ವ ಮಹಿಳಾ ಪೊಲೀಸ್ ಅಧಿಕಾರಿ, ನಾಲ್ವರು ನರ್ಸ್‍ಗಳು, ಓರ್ವ ಆಪ್ತ ಸಮಾಲೋಚಕರು, ಇಬ್ಬರು ಕಾನೂನು ಸಲಹೆಗಾರರು, ಮೂವರು ಸಮಾಜ ಸೇವಾ ಕಾರ್ಯಕರ್ತರು ಹಾಗೂ ಇಬ್ಬರು ಸ್ವಚ್ಛತಗಾರರನ್ನು ಹೊಂದಿದ್ದು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆ ಪೊಲೀಸ್ ನೆರವು, ಕಾನೂನು ನೆರವು, ಸಮಾಲೋಚನೆ, ಮಹಿಳಾ ಸಹಾಯವಾಣಿ ಮುಂತಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಈ ಘಟಕದ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
    ಮಹಿಳಾ ವಿಶೇಷ ಚಿಕಿತ್ಸಾ ಘಟಕವು 181 ರ ದೂರವಾಣಿ ಸಂಖ್ಯೆಯ ಉಚಿತ ಸಹಾಯವಾಣಿ ಸೌಲಭ್ಯವನ್ನು ಹೊಂದಿರುತ್ತದೆ. ಈ ಘಟಕದಲ್ಲಿ ವೈದ್ಯರು, ಕಾನೂನು ಸಲಹೆಗಾರರು, ಮಹಿಳಾ ಪೊಲೀಸ್ ಅಧಿಕಾರಿ, ಸಮಾಲೋಚಕರು, ಸಮಾಜ ಸೇವಾ ಕಾರ್ಯಕರ್ತರು ಲಭ್ಯರಿರುತ್ತಾರೆ.
    ಮಹಿಳಾ ವಿಶೇಷ ಚಿಕಿತ್ಸಾ ಘಟಕವು ಒಂದು ಸಮಗ್ರವಾದ ಸೇವೆಯನ್ನು ಒದಗಿಸುವ ಹಾಗೂ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಯನ್ನು ಸಂಪರ್ಕಿಸಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುತ್ತದೆ. ಲೈಂಗಿಕ ಮತ್ತು ಕೌಟುಂಬಿಕ ದೌರ್ಜನಕ್ಕೆ ಒಳಗಾದ ಮಹಿಳೆಯರು ದೌರ್ಜನ್ಯಕ್ಕೆ ಒಳಗಾದ ಪರಿಸರ ಮತ್ತು ಅವರ ಸಾಮಾಜಿಕ ಸ್ಥಿತಿಗತಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಸಮಾನ ರೀತಿಯ ಸೇವೆಯನ್ನು ಒದಗಿಸಲಾಗುವುದು.
        ಅಲ್ಲದೇ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ವಿವರ, ವೈದ್ಯಕೀಯ ಮಾದರಿಗಳು ಮತ್ತು ದಾಖಲಾತಿಗಳಿಗೆ ಸಂಬಂಧಿಸಿದಂತೆ ಗೌಪ್ಯತೆಯನ್ನು ಕಾಪಾಡಲಾಗುವುದು.ಈ ವಿಶೇಷ ಚಿಕಿತ್ಸಾ ಘಟಕದಲ್ಲಿ ದಿನದ 24 ಘಂಟೆಗಳೂ ಕಾರ್ಯ ನಿರ್ವಹಿಸುವಂತಹ ಮಹಿಳಾ ಹೆಲ್ಪ್ ಡೆಸ್ಕನ್ನು ಸ್ಥಾಪಿಸಲಾಗುವುದು. ಈ ಘಟಕದಲ್ಲಿ ಕಾರ್ಯನಿರ್ವಹಿಸುವ ಸಮಾಲೋಚಕರು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸೌಕರ್ಯ ಒದಗಿಸುವ (ಈeಛಿiಟiಣಚಿಣoಡಿ) ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ.
     ಜಿಲ್ಲಾ ವಿಶೇಷ ಮಹಿಳಾ ಚಿಕಿತ್ಸಾ ಘಟಕವನ್ನು ದಿನಾಂಕ :01-11-2014ರಂದು ಮಾನ್ಯ ವಸತಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ಅಂಬರೀಶ್, ಕರ್ನಾಟಕ ಸರ್ಕಾರ ರವರು ಉದ್ಘಾಟಿಸಲಿದ್ದು, ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದಂತಹ ಶ್ರೀಮತಿ ಮಂಜುಳಾ ಪರಮೇಶ್ವರ್ ರವರು ಹಾಗೂ ಮಾನ್ಯ ಸಂಸತ್ ಸದಸ್ಯರಾದ ಶ್ರೀ ಸಿ.ಎಸ್. ಪುಟ್ಟರಾಜು ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಾನ್ಯ ನಗರಸಭಾ ಅಧ್ಯಕ್ಷರಾದ ಶ್ರೀ ಸಿದ್ದರಾಜುರವರು ಹಾಗೂ ಇತರ ಗಣ್ಯರು ಸದರಿ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
                                                                        

ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲು ಕರೆ

                              ಸಾಲ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲು ಕರೆ
ಮಂಡ್ಯ,- ಮಹಿಳೆಯರು ಸಂಘ-ಸಂಸ್ಥೆಗಳ ಸಾಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಸಬಲರಾಗಬೇಕು ಎಂದು ತಹಸೀಲ್ದಾರ್ ಪ್ರಿಯದರ್ಶಿನಿ ಹೇಳಿದರು.
ಇಂದು ತಾಲ್ಲೂಕಿನ ಎ.ಹುಲ್ಲುಕೆರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು/ಸ್ವಸಹಾಯ ಸಂಘಗಳ ನೂತನ ಒಕ್ಕೂಟ ಹಾಗೂ ಐಸಿರಿ ಮಹಿಳಾ ಜ್ಞಾನ ವಿಕಾಸ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಲಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು, ಸಾಲವನ್ನು ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ನೀವುಗಳು ಸಹ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸ್ವಯಂ ಉದ್ಯೋಗವನ್ನು ಕಂಡು ಕೊಳ್ಳಬೇಕು ಎಂದು ಸಲಹೆ ನೀಡಿದರು.
ನಮ್ಮಲ್ಲಿ ಆಗಬಹುದಾದ ಕೆಲಸಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಹಾಗೂ ಊರಿನ ಅಭಿವೃದ್ಧಿಗಾಗಿ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ನಂತರ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಮಾತನಾಡಿ, ಸಾಲದ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಂಘದಿಂದ ಅಭಿವೃದ್ಧಿ ಹೊಂದಿ ಬೇರೆಯವರಿಗೆ ಮಾದರಿಯಾಗಿರಬೇಕು. ಅದೇ ರೀತಿ ಮಾರ್ಗದರ್ಶಕರಾಗಿ ಮುಂದುವರೆಯಬೇಕು ಎಂದು ಹೇಳಿದರು.
ಸಂಘ-ಸಂಸ್ಥೆಗಳ ನೆರವಿನೊಂದಿಗೆ ಗ್ರಾಮಗಳ ಸ್ವಚ್ಛತಾ ನೈರ್ಮಲ್ಯ ಕಾಪಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮಗಳ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಇವುಗಳನ್ನು ಗ್ರಾಮಸ್ಥರು ಬಳಸಿಕೊಂಡು ಮಾದರಿ ಗ್ರಾಮ ಮಾಡಲು ಒಗ್ಗಟ್ಟಿನಿಂದ ಎಲ್ಲರೂ ಪಣತೊಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬೇವಿನಹಳ್ಳಿ ಗ್ರಾ.ಪಂ. ಅಧ್ಯಕ್ಷ ಮಹೇಶ್, ತಾ.ಪಂ. ಸದಸ್ಯ ರೇವಣ್ಣ, ನಾಗರತ್ನಮ್ಮ, ಸಿ.ಮಹದೇವು, ಅಂದಾನಿಗೌಡ, ಸಂಪತ್‍ಕುಮಾರ್, ಮೇಲ್ವಿಚಾರಕ ಮಹೇಶ್, ಸುನೀತಾ.ಕೆ.ಎಸ್, ಎಸ್‍ಡಿಎಂಸಿ ಅಧ್ಯಕ್ಷ ಗಣೇಶ್ ಸೇರಿದಂತೆ 25ಕ್ಕೂ ಮಹಿಳಾ  ಸ್ವಸಹಾಯ ಸಂಘಗಳ ಮಹಿಳೆಯರು ಭಾಗವಹಿಸಿದ್ದರು.

ಮೈಸೂರು- ಪ್ರತಿ ಜಿಲ್ಲೆಗೂ ಕೇಂದ್ರೀಯ ವಿದ್ಯಾಲಯ : ಧೃವನಾರಾಯಣ್

             ಪ್ರತಿ ಜಿಲ್ಲೆಗೂ ಕೇಂದ್ರೀಯ ವಿದ್ಯಾಲಯ : ಧೃವನಾರಾಯಣ್
ಮೈಸೂರು,ಅ.31-ರಾಜ್ಯದ ಪ್ರತಿ ಜಿಲ್ಲೆಗೂ ಕೇಂದ್ರೀಯ ವಿದ್ಯಾಲಯ ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿ ಎಂದು ಚಾಮರಾಜನಗರ ಸಂಸದ ಆರ್.ಧೃವನಾರಾಯಣ್ ತಿಳಿಸಿದರು.
ಮೈಸೂರಿನ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ರಾಜ್ಯದಲ್ಲಿ ಈಗಾಗಲೆ 40 ಕೇಂದ್ರೀಯ ವಿದ್ಯಾಲಯಗಳಿದ್ದು, ಬೆಂಗಳೂರಿನಲ್ಲಿಯೇ 14 ವಿದ್ಯಾಲಯಗಳಿವೆ. ಉಳಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿವೆ ಎಂದರು.
ಚಾಮರಾಜನಗರ ಜಿಲ್ಲೆಗೆ ಒಂದು ಕೇಂದ್ರೀಯ ವಿದ್ಯಾಲಯ ಮಂಜೂರಾಗಿದೆ. ನವೆಂಬರ್ 3 ರಂದು ಭೂಮಿ ಪೂಜೆ ನೆರವೇರಿಸಲಾಗುವುದು.
ಮೈಸೂರಿನಲ್ಲಿಯೂ ಒಂದೆ ಒಂದು ಕೇಂದ್ರೀಯ ವಿದ್ಯಾಲಯವಿದ್ದು, ವಿದ್ಯಾರ್ಥಿಗಳಿಗೆ ಅದು ಸಾಲದ ಕಾರಣ ಮತ್ತೊಂದು ವಿದ್ಯಾಲಯಕ್ಕೆ ರಾಷ್ಟ್ರೀಯ ಮಂಡಲ ಆಯುಕ್ತರಿಗೆ ಕೋರಿಕೆಯನ್ನು ಸಲ್ಲಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
 ಕೇಂದ್ರ ಸರ್ಕಾರ 585.78 ಕೋಟಿ ರೂ.ಗಳ ವೆಚ್ಚದ ಕೊಳ್ಳೇಗಾಲದಿಂದ ಟಿ.ನರಸಿಪುರ, ನಂಜನಗೂಡು, ಗುಂಡ್ಲು ಪೇಟೆ ಮಾರ್ಗವಾಗಿ ಕೇರಳ ಗಡಿ ತಲುಪಲಿರುವ 131 ಕಿ.ಮೀ ವ್ಯಾಪ್ತಿಯ ರಾಷ್ಟ್ರೀಯ 4 ಪಥಗಳ ಹೆದ್ದಾರಿ ರಸ್ತೆ ಕಾಮಗಾರಿಯು ಸುಸೂತ್ರವಾಗಿ ನಡೆಯುತ್ತಿದೆ ಎಂದರು.
ಕಾಮಗಾರಿಯ ಗುತ್ತಿಗೆಯನ್ನು ರಾಜಸ್ತಾನದ ದಿಲೀಲ್ ಬಿಲ್ಡ್ ಕಾಂ ಕಂಪನಿಗೆ ನೀಡಲಾಗಿದ್ದು, ಕಂಪನಿಯು ಪ್ರಾಥಮಿಕ ಹಂತಹ ಕಾಮಗಾರಿಯಾದ ರಸ್ತೆ ಬದಿಯ ಮರಗಳನ್ನು ಕಡಿಯುವುದು, ವಿದ್ಯುತ್-ದೂರವಾಣಿ ಲೈನ್‍ನ್ನು ಸ್ಥಳಾಂತರಿಸಿರುವುದಿಂದ ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.
ಕಾಮಗಾರಿಯು 20 ತಿಂಗಳಿನಲ್ಲಿ ಅಂದರೆ 2015ರ ಮಾರ್ಚ್ ಪೂರ್ಣಗೊಳ್ಳಲಿದ್ದು, ನಂಜನಗೂಡಿನಲ್ಲಿ 235 ಖಾಸಗಿ ಜಮೀನಿನ ಮಾಲೀಕರು ಸೂಕ್ತ ದಾಖಲಾತಿ ನೀಡಿರುವುದರಿಂದ ಪರಿಹಾರದ ಮೊತ್ತವನ್ನು ಒಂದು ತಿಂಗಳಲ್ಲಿ ಪಾವತಿಸಲು ಕಾಲಾವಕಾಶ ಕೋರಲಾಗಿದೆ. ಪರಿಹಾರದ ಹಣ 28.83 ಕೋಟಿಯನ್ನು ಜಂಟಿ ಕಾತೆಯಲ್ಲಿ ಇರಿಸಲಾಗಿದೆ ಎಂದರು.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ಯುಪಿಎ ಸರ್ಕಾರವು 40 ಸಾವಿರ ಕೋಟಿ ರೂಗಳನ್ನು ನೀಡಿತ್ತು, ಆದರೆ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು ಅದನ್ನು ಕಡಿತಗೊಳಿಸಿ 33 ಸಾವಿರ ರೂ.ಗಳಿಗೆ ಇಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕಕ್ಕೆ ಈ ಯೋಜನೆಯಿಂದ 3,700 ಕೋಟಿ ರೂ,ಗಳು ದೊರೆಯುತ್ತಿದ್ದವು.ಆದರೆ ಈಗ ಅದು 1,700 ಕೋಟಿ ರೂ.ಗಳಿಗೆ ಇಳಿಸಿರುವುದು ಬಡವರಿಗೆ ಉದ್ಯೋಗ ದೊರೆಯುವುದಕ್ಕೆ ಒಡೆತ ಬಿದ್ದಂತಾಗಿದೆ. ಈ ಹಿಂದಿನ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಗೆ ನಿಗಧಿ ಪಡಿಸಿದಂತೆಯೇ ಮುಂದುವರೆಯುವಂತೆ ಅಧಿವೇಶನದಲ್ಲಿ ಒತ್ತಾಯಿಸಲಾಗುವುದೆಂದರು.
ಚಾಮರಾಜನಗರದಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ ನಾಳೆ ಹಸಿರು ನಿಷಾನೆ ದೊರಯಲಿದ್ದು, ಬೆಳಿಗ್ಗೆ 6.45ಕ್ಕೆ ಬೆಂಗಳೂರು-ಚಾಮರಾಜನಗರ ನೇರ ರೈಲು ಸಂಪರ್ಕಕ್ಕೆ ಚಾಲನೆ ನೀಡಲಾಗುವುದೆಂದಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಜಿ.ಪಂ. ಉಪಾಧ್ಯಕ್ಷ ಮಾದಪ್ಪ, ಕಾಂಗ್ರೆಸ್ ಮುಂಡರಾದ ವೆಂಕಟೇಶ್, ಮುತ್ತುರಾಜು, ಸುಬ್ಬಣ್ಣ ಇತರರಿದ್ದರು.

Wednesday 29 October 2014



                 ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ
     ಮೈಸೂರು,ಅ.29.ಜಿಲ್ಲಾಡಳಿತ ವತಿಯಿಂದ ನವೆಂಬರ್ 1 ರಂದು ಬೆಳಗ್ಗೆ 9 ಗಂಟೆಗೆ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
     ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಧ್ವಜಾರೋಹಣ ನೆರವೇರಿಸುವರು.
     ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ,್ಪ ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಬಿ.ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್.ಪುಟ್ಟರಾಜು, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ವಾಸು ಜಿ.ಟಿ.ದೇವೇಗೌಡರು, ಚಿಕ್ಕಮಾದು, ಸಾ.ರಾ. ಮಹೇಶ್, ಹೆಚ್.ಪಿ. ಮಂಜುನಾಥ್, ಕೆ.ವೆಂಕಟೇಶ್, ವಿಧಾನಪರಿಷತ್ ಸದಸ್ಯ ಸಿ.ಹೆಚ್.ವಿಜಯಶಂಕರ್, ಗೋ.ಮಧುಸೂದನ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್. ಧರ್ಮಸೇನ, ಮಹಾನಗರಪಾಲಿಕೆಯ ಉಪ ಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಎ ಲೋಕಮಣಿ ಭಾಗವಹಿಸುವರು.
     ಅಂದು ಬೆಳಗ್ಗೆ 8-30 ಗಂಟೆಗೆ ಅರಮನೆ ಆರವಣದಲ್ಲಿರುವ ಶ್ರೀ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಕೆ ನಂತರ ಬೆಳಗ್ಗೆ 9 ಗಂಟೆಗೆ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿರುವ ಶ್ರೀ ಭುವನೇಶ್ವರಿ ದೇವಿ ಪುತ್ಥಳಿಗೆ  ಪುಷ್ಪಾರ್ಚನೆ ನಂತರ ಮೆರವಣಿಗೆಯು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಹೋರಟು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಹಾದು ವಾಪಸ್ಸು ಪುರಭವನ ತಲುಪುವುದು.
     ಸಂಜೆ 5 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಮತ್ತು ಶಾಲಾ ಕಾಲೇಜು   ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡುವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು. ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಲು ಸೂಚನೆ
ಮೈಸೂರು,ಅ.29.ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಜ್ಯೋತ್ಸವ ಸಮಾರಂಭ ನಡೆಯಲಿದೆ. ಮೈಸೂರು ನಗರದಲ್ಲಿರುವ ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳು (ಮಂಡಳಿ, ನಿಗಮ, ಸ್ವಯತ್ತ ಸಂಸ್ಥೆಗಳು)  ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ತೋಟಗಾರಿಕೆ ಇಲಾಖೆಯ ಕರ್ಜನ್ ಪಾರ್ಕ್ ಆವರಣದಲ್ಲಿ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ತಾತ್ಕಾಲಿಕ ಕಚೇರಿಯಲ್ಲಿ ಇರಿಸಲಾಗಿರುವ ಹಾಜರಾತಿ ವಹಿಯಲ್ಲಿ ಎಲ್ಲ ಇಲಾಖೆ ಅಧಿಕಾರಿ ಮತ್ತು ನೌಕರರು ಸಹಿ ಮಾಡುವುದು. ಗೈರು ಹಾಜರಾಗುವ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

             ಹೆಣ್ಣು ಮಕ್ಕಳಿಗೆ ಫೇರ್ & ಲವ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
    ಮೈಸೂರು,ಅ.29.ಫೇರ್ & ಲವ್ಲಿ ಫೌಂಡೇಶನ್ ಇವರು ಪದವಿ, ಸ್ನಾತಕೋತ್ತರ ಪದವಿ ಅಥವಾ ಪಿಹೆಚ್.ಡಿ ವ್ಯಾಸಂಗ ಮಾಡುತ್ತಿರುವ ಬಡ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.
     ಪದವಿ  ಅಥವಾ ಸ್ನಾತಕೋತ್ತರ ಪದವಿಗಳಿಗೆ ಅಥವಾ ಪಿ.ಹೆಚ್‍ಡಿ ಗೆ ಪ್ರವೇಶ ಪಡೆದಿರಬೇಕು. 10ನೇತರಗತಿ & ಪಿಯುಸಿ ಯಲ್ಲಿ ಶೇ.60 ಅಂಕ ಗಳಿಸಿರಬೇಕು, ಆಂಗ್ಲಭಾಷೆ ತಿಳಿದಿರಬೇಕು.
ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನಾಂಕವಾಗಿದ್ದು, ವೆಬ್ ಸೈಟ್: hಣಣಠಿ://ತಿತಿತಿ.ಜಿಚಿiಡಿಚಿಟಿಜಟoveಟಥಿ.iಟಿ/ಜಿಚಿಟಜಿouಟಿಜಚಿಣioಟಿ/sಛಿhoಟಚಿಡಿshiಠಿ.hಣmಟ  ಇದರಲ್ಲಿ ಮಾಹಿತಿ ಪಡೆದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
    ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ನಮೂನೆಗಾಗಿ ಉಪಮುಖ್ಯಸ್ಥರು,ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮೈಸೂರು ವಿಶ್ವವಿದ್ಯಾನಿಲಯ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ , ಮೈಸೂರು ದೂರವಾಣಿ ಸಂಖ್ಯೆ 0821-2516844, ಮೊಬೈಲ್ 9449686641ನ್ನು ಸಂಪರ್ಕಿಸಬಹುದು.
 ಜಿ.ಟಿ & ಟಿ.ಸಿ ಯಲ್ಲಿ ತಾಂತ್ರಿಕ ತರಬೇತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
   ಮೈಸೂರು,ಅ.29.ಮೈಸೂರು ನಗರದ ಕೆ.ಆರ್.ಎಸ್ ರಸ್ತೆಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ. 93/94, ಇಲ್ಲಿ “ರಾóಪ್ಟ್ರೀಯ ನಗರ ಜೀವನೋಪಾಯ ಆಬಿಯಾನ” ಅಡಿಯಲ್ಲಿ ಎಸ್.ಎಸ್.ಎಲ್.ಸಿ/ ಐ.ಟಿ.ಐ / ಡಿಪ್ಲೊಮ / ಬಿ.ಇ (ಮೆಕ್ಯಾನಿಕಲ್ ಕ್ಷೇತ್ರ ) ಪಾಸಾಗಿರುವ ಮೈಸೂರು ನಿವಾಸಿಗಳಿಗೆ ಸಿ.ಎನ್.ಸಿ ಮೆಷಿನ್ ಆಪರೇಷನ್, ಕ್ಯಾಡ್ ಕ್ಯಾಮ್, ಟರ್ನರ್, ಮಿಲ್ಲರ್ ಮತ್ತು ಗ್ರೈಂಡರ್ ಕೋರ್ಸ್‍ಗಳ ಬಗ್ಗೆ ಉಚಿತವಾಗಿ ತರಬೇತಿ ನೀಡಲಾಗುವುದು.
     ಆಸಕ್ತ ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ಮತ್ತು ವಾಸ ಸ್ಥಳ ದಾಖಲೆಗಳೊಂದಿಗೆ   ದಿನಾಂಕ:. 10.11.2014, ಒಳಗೆ ಸದರಿ ವಿಳಾಸದಲ್ಲಿ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ 9035376071, 8710807963, 0821-2582464ನ್ನು ಸಂಪರ್ಕಿಸಬಹುದು.
                             ಕುಕ್ಕರಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅಣಬೆ ಮಾರಾಟ
   ಮೈಸೂರು,ಅ.29.ಕುಕ್ಕರಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿರುವ ಅಣಬೆ ಪ್ರಯೋಗ ಶಾಲೆಯಲ್ಲಿ ಸಾವಯವ ಕೃಷಿಯಲ್ಲಿ ಬೆಳೆದ ಉತ್ತಮ ಗುಣಮಟ್ಟದ ಅಣಬೆ ಮಾರಾಟಕ್ಕೆ ಲಭ್ಯವಿರುತ್ತದೆ. ಹಾಗೂ ಅಣಬೆ ಬೀಜಗಳು(ಸ್ಫಾನ್) ಸಹ ದೊರೆಯುತ್ತದೆ.
   ಹೆಚ್ಚಿನ ಮಾಹಿತಿಗೆ ಅಣಬೆ ಪ್ರಯೋಗ ಶಾಲೆ, ಕುಕ್ಕರಹಳ್ಳಿ ತೋಟಗಾರಿಕೆ ಕ್ಷೇತ್ರ, ಮೈಸೂರು. ಮೊಬೈಲ್ ಸಂಖ್ಯೆ 9740596111ನ್ನು ಸಂಪರ್ಕಿಸಬಹುದು.
                       ವೃತ್ತಿ ಸಮ್ಮೇಳನ ಮತ್ತು ವೃತ್ತಿ ಸಾಹಿತ್ಯ ಪ್ರದರ್ಶನ
     ಮೈಸೂರು,ಅ.29.ಉದ್ಯೋಗ ಮಾಹಿತಿ & ಮಾರ್ಗದರ್ಶನ ಕೇಂದ್ರ ,ಮಾನಸ ಗಂಗೋತ್ರಿ,ಮೈಸೂರು. ಸ್ನಾತಕೋತ್ತರ  ಕೇಂದ್ರ ,sಮಹಾರಾಣಿ ಮಹಿಳಾ ಕಲಾ ಕಾಲೇಜು ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 31 ರಂದು ಬೆಳಗ್ಗೆ 11-30 ಗಂಟೆಗೆ ಮೈಸೂರು ಮಹಾರಾಣಿ ಕಲಾ ಕಾಲೇಜು ಆವರಣದಲ್ಲಿ ವೃತ್ತಿ ಸಮ್ಮೇಳನ ಮತ್ತು ವೃತ್ತಿ ಸಾಹಿತ್ಯ ಪ್ರದರ್ಶನ  ನಡೆಯಲಿದೆ.
   ಮೈಸೂರು ಮಹಾನಗರ ಪಾಲಿಕೆ ವಲಯ ಆಯುಕ್ತೆ ಎಂ ಜೆ ರೂಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ:ಪುರುóಷೋತ್ತಮ್ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉದ್ಯೋಗಾವಕಾಶಗಳು ಹಾಗೂ ವ್ಯಕ್ತಿತ್ವ ವಿಕಸನ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ.
ಪರೀಕ್ಷೆ ಮುಂದೂಡಿಕೆ
    ಮೈಸೂರು,ಅ.29.ಮೈಸೂರು ವಿಶ್ವವಿದ್ಯಾನಿಲಯವು ನವೆಂಬರ್/ಡಿಸೆಂಬರ್ 2014ರಲ್ಲಿ ನಡೆಸಲಿರುವ 1, 3 ಮತ್ತು 5ನೇ ಸೆಮಿಸ್ಟರ್ ಪದವಿ ಪರೀಕ್ಷೆಗಳು ದಿನಾಂಕ 12.11.2014 ರಿಂದ ಪ್ರಾರಂಭವಾಗಬೇಕಿತ್ತು. ಕಾರಣಾಂತರದಿಂದ ಸದರಿ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ಪರೀಕ್ಷೆಯು ದಿನಾಂಕ 18.11.2014ಕ್ಕೆ ಪ್ರಾರಂಭವಾಗಲಿದೆ ಎಂದು ಪರೀಕ್ಷಾ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಪುನರ್ ರಚನೆ
    ಮೈಸೂರು,ಅ.29.ಅನುಸೂಚಿತ ಜಾತಿ/ಪಂಗಡಗಳ ದೌರ್ಜನ್ಯ ನಿಯಂತ್ರಣ ನಿಯಮ 1995ರ ನಿಯಮ 17ರ ರೀತ್ಯಾ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯನ್ನು ದಿನಾಂಕ 06-03-2008ರಲ್ಲಿ  ರಚಿಸಲಾಗಿದ್ದು, ಸದರಿ ಸಮಿತಿಯನ್ನು ಪುನರ್ ರಚಿಸಲಾಗಿದೆ.
   ಜಿಲ್ಲಾಧಿಕಾರಿಗಳು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು/ಪೊಲೀಸ್ ಕಮೀಷನರ್ ಮೈಸೂರು ನಗರ, ಸದಸ್ಯರಾಗಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರ ಜೊತೆಯಲ್ಲಿ ರಾಜ್ಯ ಸರ್ಕಾರ ಸೇವೆಯಲ್ಲಿರುವ 3 ಜನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಸಮೂಹ ಎ ಪತ್ರಾಂಕಿತ ಅಧಿಕಾರಿಗಳು, ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರಿದ 5 ಅಧಿಕಾರೇತರ ಸದಸ್ಯರು ಹಾಗೂ ಪರಿಶಿಷ್ಟ ಜಾತಿ/ವರ್ಗಕ್ಕೆ ಸೇರದೇ ಇರುವ ಇತರೆ ವರ್ಗದ ಸರ್ಕಾರೇತರ ಸಂಘ-ಸಂಸ್ಥೆಗಳೊಡನೆ ಸಂಪರ್ಕ ಹೊಂದಿರುವ 3  ಅಧಿಕಾರೇತರ ಸದಸ್ಯರು ಈ ಸಮಿತಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
     ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಂಕರರಾಜು, ರೇಷ್ಮೆ ಇಲಾಖೆಯ ಉಪನಿರ್ದೇಶಕ ವೈ.ಎನ್.ಚಿಗರಿ, ಹುಣಸೂರು ತಾಲ್ಲೂಕಿನ ಕಟ್ಟೆಮಲಳವಾಡಿ ನಿಂಗರಾಜು ಮಲ್ಲಾಡಿ, ನಂಜನಗೂಡು ತಾಲ್ಲೂಕಿನ ಗಾಯತ್ರಿ ಮಹೋನ್, ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ದೇವಗಳ್ಳಿ ಸೋಮಶೇಖರ್, ಟಿ.ನರಸೀಪುರ ತಾಲ್ಲೂಕಿನ ಕುಕ್ಕೂರಿನ ಪ್ರಸನ್ನ, ಪಿರಿಯಾಪಟ್ಟಣ ತಾಲ್ಲೂಕಿನ ಎಸ್. ರಾಮು, ಸರಸ್ವತಿಪುರಂ ಮಹಿಳಾ ಸಮುಖ್ಯ ಸಂಸ್ಥೆ, ಹೆಚ್.ಡಿ.ಕೋಟೆಯ ಮೈರಾಡ್ ಸಂಸ್ಥೆ ಮತ್ತು ಮೈಸೂರಿನ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಪುನರ್ ರಚನೆಗೊಂಡಿರುವ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ.
     ಸಭೆ: ಪುನರ್ ರಚಿಸಲಾಗಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ನವೆಂಬರ್ 3 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ. ಸಮಿತಿಯ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನೋಂದಣಿಗೆ ಅವಕಾಶ
     ಮೈಸೂರು,ಅ.29.ಮೈಸೂರು ತಾಲ್ಲೂಕು ಬೀರಿಹುಂಡಿ, ವರುಣ ಹಾಗೂ ಟಿ.ನರಸೀಪುರ ತಾಲ್ಲೂಕಿನಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಫಿಟರ್ ಹಾಗೂ ಎಲೆಕ್ಟ್ರೀಷಿಯನ್(ಎಸ್‍ಸಿವಿಟಿ)  ವೃತ್ತಿಗಳನ್ನು ಪ್ರಾರಂಭಿಸಲಾಗಿದ್ದು, ಈ ಸಂಸ್ಥೆಯಲ್ಲಿ ಖಾಲಿ ಉಳಿದಿರುವ ಸೀಟುಗಳ ಭರ್ತಿಗಾಗಿ ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 30 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಸರು ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಅಕ್ಟೋಬರ್ 31 ರಂದು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು.
   ಹೆಚ್ಚಿನ ಮಾಹಿತಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರನ್ನು ಬೀರಿಹುಂಡಿ ದೂರವಾಣಿ ಸಂಖ್ಯೆ 0821-2484001, ಮೊಬೈಲ್ ಸಂಖ್ಯೆ 9845876618, ವರುಣ ಮೊಬೈಲ್ ಸಂಖ್ಯೆ 7411331635 ಹಾಗೂ ಟಿ.ನರಸೀಪುರ  ಮೊಬೈಲ್ ಸಂಖ್ಯೆ 9448402175 ನ್ನು ಸಂಪರ್ಕಿಸಬಹುದು.
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ
ಮೈಸೂರು,ಅ.29.ದಿನಾಂಕ 01.01.2015 ಕ್ಕೆ ಅಥವಾ ಅದಕ್ಕೂ ಮುಂಚೆ 18 ವರ್ಷ ಪೂರೈಸುವ / ಪೂರೈಸಿರುವ  ಅರ್ಹ ಯುವ ಸಮೂಹದವರು ಹಾಗೂ ಮತದಾರರ ಪಟ್ಟಿಗಳಲ್ಲಿ ಈವರೆಗೆ ಹೆಸರುಗಳನ್ನು ನೋಂದಣಿ ಮಾಡಿಸಿಕೊಳ್ಳದೇ ಇರುವ ಸಾರ್ವಜನಿಕರು ಮತದಾರರ ಪಟ್ಟಿಗಳಿಗೆ ನೋಂದಣಿ ಮಾಡಿಸಿಕೊಳ್ಳುವ ಸಲುವಾಗಿ ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷ್ಷಿಪ್ತ ಪರಿಷ್ಕರಣೆ ಅರ್ಹತಾ ದಿನಾಂಕ 01-01-2015 ರ ಕಾರ್ಯಕ್ರಮವನ್ನು ದಿನಾಂಕ 30.10.2014 ರಿಂದ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದ್ದಾರೆ.
      ಪರಿಷ್ಕರಣೆಯ ವೇಳಾಪಟ್ಟಿಯ ವಿವಿರ ಇಂತಿದೆ:  ದಿನಾಂಕ 30-10-2014 ರಂದು ಕರಡು ಮತದಾರರ ಪಟ್ಟಿಯ ಪ್ರಕಟಣೆ,  30-10-2014 ದಿಂದ 25-11-2014 ರÀವರೆಗೆ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳ ಸಲ್ಲಿಕೆ, 05-11-2014 ರಿಂದ 14-11-2014 ರವರೆಗೆ ಗ್ರಾಮಸಭೆ / ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಸಂಬಂಧಿಸಿದ ಮತದಾರರ ಪಟ್ಟಿಯ ಭಾಗಗಳನ್ನು ಓದಿ ಹೇಳುವುದು ಮತ್ತು ಹೆಸರುಗಳನ್ನು ಪರಿಶೀಲಿಸುವುದು, 09-11-2014 ಮತ್ತು  23-11-2014 ರಂದು ರಾಜಕೀಯ ಪಕ್ಷಗಳ ಬೂತ್ ಲೆವಲ್ ಏಜೆಂಟರುಗಳಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವ ವಿಶೇಷ ಕಾರ್ಯಾಚರಣೆ ದಿವಸಗಳು, ದಿನಾಂಕ 05-12-2014 ರೊಳಗಾಗಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಪಡಿಸುವುದು, ದಿನಾಂಕ 20-12-2014 ಪೂರಕ ಪಟ್ಟಿಗಳನ್ನು ಸಿದ್ದಪಡಿಸುವುದು ಮತ್ತು ಮುದ್ರಿಸುವುದು ಹಾಗೂ ದಿನಾಂಕ 05-01-2015 ಅಂತಿಮ ಮತದಾರರ ಪಟ್ಟಿಗಳ ಪ್ರಕಟಿಸಲಾಗುವುದು.
 ಮೈಸೂರು ಜಿಲ್ಲೆಯ ವ್ಯಾಪ್ತಿಗೆ ಬರುವ 11 ವಿಧಾನಸಭಾ ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ ಸಂಬಂದಪsÀಟ್ಟ ತಹಶೀಲ್ದಾರ್‍ರವರ ಕಚೇರಿಗಳಲ್ಲಿ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ, ಮೈಸೂರು ಮಹಾನಗರ ಪಾಲಿಕೆಗೆ ಒಳಪಡುವ ವಲಯ ಕಚೇರಿಗಳಲ್ಲಿ ಸಂಬಂಧಿಸಿದ ಕರಡು ಮತದಾರರ ಪಟ್ಟಿಗಳನ್ನು (ಆಡಿಚಿಜಿಣ ಇಟeಛಿಣoಡಿಚಿಟ ಖoಟಟs) ದಿನಾಂಕ 30-10-2014 ರಂದು ಪ್ರಕಟಿಸಲಾಗುವುದು.
ಪ್ರಚುರಪಡಿಸಲಾಗುವ ಮತದಾರರ ಪಟ್ಟಿಗಳಲ್ಲಿ ಹೆಸರು ಇಲ್ಲದಿರುವವರು ನಿಗದಿತ ನಮೂನೆಯಲ್ಲಿ (ಈoಡಿm-6) ಸೇರ್ಪಡೆಗೆ ಅರ್ಜಿಗಳನ್ನು ಅಗತ್ಯ ದಾಖಲಾತಿಗೊಂದಿಗೆ ತಮ್ಮ ಹತ್ತಿರದ ಮತಗಟ್ಟೆಗಳಲ್ಲಿ ದಿನಾಂಕ 25-11-2014 ರವರೆಗೆ ಸಲ್ಲಿಸಬಹುದು. ಮತದಾರರ ಪಟ್ಟಿಗಳಲ್ಲಿ ಹೆಸರಿದ್ದು ವಿವರಗಳಲ್ಲಿ ತಿದ್ದುಪಡಿ ಮಾಡಿಸಲು, ಮತದಾರರ ಪಟ್ಟಿಗಳಿಂದ ಹೆಸರುಗಳನ್ನು ತೆಗೆದುಹಾಕಲು ಹಾಗೂ ವಿಳಾಸಗಳ ಬದಲಾವಣೆಗಳಿಗಾಗಿ ಸಂಬಂಧಿಸಿದ ಅರ್ಜಿಗಳನ್ನು ಸಹ ಸದರಿ ಅವಧಿಯಲ್ಲಿ ಸ್ವೀಕರಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೋರಿದೆ.
ಮತದಾರರು ತಮ್ಮ ಹೆಸರುಗಳು ಕರಡು ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್ ತಿತಿತಿ.ಛಿeoಞಚಿಡಿಟಿಚಿಣಚಿಞಚಿ.ಞಚಿಡಿ.ಟಿiಛಿ.iಟಿ ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ ಅಥವಾ ತಮ್ಮ ಮತದಾರರ ಗುರುತಿನ ಚೀಟಿ ವಿವರಗಳನ್ನು ಈ ಕೆಳಕಂಡಂತೆ ಟೈಪ್ ಮಾಡಿ 9731979899 ಗೆ ಎಸ್.ಎಂ.ಎಸ್ ಮಾಡಿ ತಿಳಿದುಕೊಳ್ಳಬಹುದಾಗಿದೆ.
ಏಂಇPIಅ <Sಠಿಚಿಛಿe> Iಆ ಅಚಿಡಿಜ ಓumbeಡಿ (ಇxಚಿmಠಿಟe  - ಏಂಇPIಅ  ಘಿಙZ1509201)

ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲಿಚ್ಚಿಸುವವರು ಅರ್ಜಿಗಳನ್ನು ತಿತಿತಿ.ಛಿeoಞಚಿಡಿಟಿಚಿಣಚಿಞಚಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಸಲ್ಲಿಸಬಹುದಾಗಿದೆ.
ಸಾರ್ವಜನಿಕರು ಪರಿಷ್ಕರಣೆಗೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಲು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ.
ಮೈಸೂರು ಮಹಾನಗರ ಪಾಲಿಕೆ ಕಚೇರಿ -
0821-2418860
ಉಪ ವಿಭಾಗಾಧಿಕಾರಿಗಳ ಕಚೇರಿ, ಮೈಸೂರು ಉಪ ವಿಭಾಗ, ಮೈಸೂರು    0821-2422100    ಉಪ ವಿಭಾಗಾಧಿಕಾರಿಗಳ ಕಚೇರಿ ಹುಣಸೂರು ಉಪ ವಿಭಾಗ, ಹುಣಸೂರು    08222-252073
ಮೈಸೂರು ತಾಲ್ಲೂಕು ಕಚೇರಿ    0821-2414811    ಪಿರಿಯಾಪಟ್ಟಣ ತಾಲ್ಲೂಕು ಕಚೇರಿ    08223-274175
ನಂಜನಗೂಡು ತಾಲ್ಲೂಕು ಕಚೇರಿ    08221-226002    ಕೆ.ಆರ್.ನಗರ ತಾಲ್ಲೂಕು ಕಚೇರಿ    08223-262371
ಟಿ.ನರಸೀಪುರ ತಾಲ್ಲೂಕು ಕಚೇರಿ    08227-261233    ಹುಣಸೂರು ತಾಲ್ಲೂಕು ಕಚೇರಿ    08222-252040
        ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ    08228-255325

ರಾಜಕೀಯ ಪಕ್ಷಗಳ ಸಭೆ
ಮತದಾರರ ಪಟ್ಟಿಗಳ ನೋಂದಣಿ ಅಭಿಯಾನದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ಕೋರಿ ಇಂದು (ದಿನಾಂಕ 29.10.2014) ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಭೆ ಏರ್ಪಡಿಸಲಾಗಿತ್ತು.
ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ವತಿಯಿಂದ ಬೂತ್ ಲೆವಲ್ ಏಜಂಟರುಗಳನ್ನು ನೇಮಕ ಮಾಡಿ ಬೂತ್ ಮಟ್ಟದಿಂದಲೇ ಮತದಾರರ ನೋಂದಣಿ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಕೋರಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಹಾಗೂ ಪ್ರಮುಖ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಎನ್.ಸಿ.ಸಿ.  ತರಬೇತಿ ಶಿಬಿರ ಸಮಾರೋಪ ಸಮಾರಂಭ
ಮೈಸೂರು,ಅ.29.13 ಕರ್ನಾಟಕ ಬಿ.ಎನ್. ಎನ್.ಸಿ.ಸಿ. ಇವರು ಇಲವಾಲದ ಅಲೋಕ್ ವಿಹಾರ್ ಪ್ಯಾಲೇಸ್‍ನಲ್ಲಿ ನಡೆಸಿದ 10 ದಿನಗಳ ಕಾಲಾವಾಧಿಯ ಎನ್.ಸಿ.ಸಿ. ತರಬೇತಿ ಶಿಬಿರವು ಇತ್ತಿಚೇಗೆ ಸಮಾರೋಪ ಸಮಾರಂಭದಲ್ಲಿ 13 ಏಚಿಡಿ ಃಟಿ ಓಅಅ ಕಮ್ಯಾಡಿಂಗ್ ಆಫೀಸರ್ ಅಭ್ರಹಂ ಅವರು ಭಾಗವಹಿಸಿ ಎನ್.ಸಿ.ಸಿ. ಶಿಬಿರಾರ್ಥಿಗಳಿಗೆ ಶಿಸ್ತು ಪಾಲನೆಯ ಬಗ್ಗೆ ತಿಳಿಸಿದರು.
 ಶಿಬಿರದಲ್ಲಿ ಮೈಸೂರು, ಹಾಸನ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯ 500ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಮಾಯಾದೇವಿ ಎನ್. ಅವರಿಗೆ ಪಿಎಚ್.ಡಿ. ಪದವಿ

ಮೈಸೂರು,ಅ.29.-ಮೈಸೂರು ವಿಶ್ವವಿದ್ಯಾಲಯವು ಮಾಯಾದೇವಿ ಎನ್. ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಪ್ರೀತಿಶ್ರೀ ಮಂದಾರಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “ಮಹಿಳಾ ಸಬಲೀಕರಣದಲ್ಲಿ ಮಹಿಳಾವಾದಿ ಹಾಗೂ ಮಹಿಳಾ ಕೇಂದ್ರಿತ ಕನ್ನಡ ನಿಯತಕಾಲಿಕೆಗಳ ಪಾತ್ರ” ಕುರಿತು ಸಾದರಪಡಿಸಿದ Womeಟಿ’s Sಣuಜies  ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಮಾಯಾದೇವಿ ಎನ್. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಲಿದ್ದಾರೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.
ಸಿದ್ದಲಿಂಗಮೂರ್ತಿ ಎಸ್. ಅವರಿಗೆ ಪಿಎಚ್.ಡಿ. ಪದವಿ
ಮೈಸೂರು,ಅ.29.ಮೈಸೂರು ವಿಶ್ವವಿದ್ಯಾಲಯವು ಸಿದ್ದಲಿಂಗಮೂರ್ತಿ ಎಸ್. ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಡಿ. ನಾಗರಾಜು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “Iಟಿಣegಡಿಚಿಣeಜ ಂಠಿಠಿಡಿoಚಿಛಿh ಜಿoಡಿ ಆeಟiಟಿeಚಿಣiಟಿg ಉಡಿouಟಿಜತಿಚಿಣeಡಿ Poಣeಟಿಣiಚಿಟ Zoಟಿes iಟಿ ಅhಚಿmಚಿಡಿಚಿರಿಚಿಟಿಚಿgಚಿಡಿ ಖಿಚಿಟuಞ, ಅhಚಿmಚಿಡಿಚಿರಿಚಿಟಿಚಿgಚಿಡಿ ಆisಣಡಿiಛಿಣ, ಏಚಿಡಿಟಿಚಿಣಚಿಞಚಿ, Iಟಿಜiಚಿ Usiಟಿg ಖemoಣe Seಟಿsiಟಿg & ಉIS” ಕುರಿತು ಸಾದರಪಡಿಸಿದ ಭೂವಿಜ್ಞಾನ  ವಿಷಯದಲ್ಲಿ ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಸಿದ್ದಲಿಂಗಮೂರ್ತಿ ಎಸ್. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಲಿದ್ದಾರೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.
ಅಪರಿಚಿತÀ ವ್ಯಕ್ತಿಯ ಶವÀ ಪತ್ತೆಗಾಗಿ ಮನವಿ
ಮೈಸೂರು,ಅ.29.ಮೈಸೂರು-ಎಂಎನ್‍ಜಿಟಿ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ ಕಿ.ಮೀ. ನಂ.135/100-200 ರಲ್ಲಿ  ಅಕ್ಟೋಬರ್  29 ರಂದು   ಸುಮಾರು 25-30 ವರ್ಷ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದಾರೆ. ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
 ಅಪರಿಚಿತ ವ್ಯಕ್ತಿಯು  ಐದುವೆರೆ ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಸುಮಾರು 3 ಇಂಚು ಉದ್ದದ ಕಪ್ಪು-ಬಿಳಿ ಕೂದಲು, ಮುಖವು ಸಂಪೂರ್ಣ ಜಜ್ಜಿ ಹೋಗಿರುವುದರಿಂದ. ಬಿಳಿ ಬಣ್ಣದ ಹಸಿರು ಮತ್ತು ಕಪ್ಪು ಚೌಕಳಿಗಳಿರುವ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಮೃತನ ವಶದಲ್ಲಿ ದಿ:27-10-2014 ರ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣದ ಒಂದು ರೈಲ್ವೆ ಟಿಕೇಟ್ ದೊರೆತಿರುತ್ತದೆ.
ಮೃತ ವ್ಯಕ್ತಿ ದೇಹವÀನ್ನು ಮೈಸೂರಿನ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ  ಶವಾಗಾರದಲ್ಲಿಡಲಾಗಿದೆ. ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.
                   ಬಹಿರಂಗ ಹರಾಜು
    ಮೈಸೂರು,ಅ.29.ಮೈಸೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಇಲಾಖಾ ವಾಹನ ಟಾಟಾ ಸುಮೋ ಎಲ್‍ಎಂವಿ ವಾಹನ ಸಂಖ್ಯೆ ಕೆಎ-09-ಜಿ-8888ನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಮೈಸೂರು ಪಶ್ಚಿಮ, ವಾಣಿವಿಲಾಸ ರಸ್ತೆ, ಚಾಮರಾಜಪುರಂ, ಮೈಸೂರು ಇಲ್ಲಿ ನವೆಂಬರ್ 18 ರಂದು ಬೆಳಿಗ್ಗೆ 11 ಗಂಟೆಗೆ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.
    ಹೆಚ್ಚಿನ ಮಾಹಿತಿಗೆ ಸದರಿ ಕಚೇರಿಯ ದೂರವಾಣಿ ಸಂಖ್ಯೆ 0821-2330364 ನ್ನು ಸಂಪರ್ಕಿಸಬಹುದು



ಅಭಿವೈದ್ದಿ ಪತ್ರಿಕೋದ್ಯಮ ,ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೆ  ನಮ್ಮ ಮಿತ್ರ ಅಂಶಿ ಪ್ರಸನ್ನ ಆಯ್ಕೆಯಾಗಿದ್ದಾರೆ .ಅವರನ್ನ ನಮ್ಮ ಮಿತ್ರ ಬಳಗ ಅಭಿನಂದಿಸಿದೆ.

ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ


ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ
ಮಂಡ್ಯ,ಅ.29- 1950 ರಿಂದ 2014ರ ವರೆಗೂ ಬಾಕಿ ಉಳಿದಿರುವಂತಹ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಸರ್ಕಾರಕ್ಕೆ ಒತ್ತಡ ಹೇರುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಯ ವೆಂಕಟಗಿರಿಯಯ್ಯರವರು ಕರ್ನಾಟಕ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಿದರು.
ಜಿ.ಪಂನ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕುಂದು ಕೊರತೆ ಹಾಗೂ ಪ್ರಗತಿ ಪರಿಶೀಲನ ಸಭೆಯಲ್ಲಿಂದು ಅವರು ಮಾತನಾಡಿದರು.
ಸರ್ಕಾರವು 1993-97ರ ವರೆಗಿನ ಬ್ಯಾಕ್‍ಲಾಗ್ ಹುದ್ದೆಗಳನ್ನು ಪರಿಗಣನೆಗೆ ತೆಗೆದು ಕೊಂಡು, ಪರಿಶಿಷ್ಟ ಜಾತಿಗೆ 29,570 ಹಾಗೂ ಪರಿಶಿಷ್ಟ ಪಂಗಡಗಳ 4777 ಹುದ್ದೆಗಳು ಸೇರಿ 34 ಸಾವಿರಕ್ಕು ಹೆಚ್ಚು ಬ್ಯಾಕ್ ಲಾಗ್ ಹುದ್ದೆಗಳು ಖಾಲಿ ಇರುವಂತೆ ವ್ಯಕ್ತಪಡಿಸಿದ್ದು ಇದರಿಂದ ಪರಿಶಿಷ್ಟ ಜಾತಿ/ಪಂಗಡದವರಿಗೆ ಬಾರಿ ಅನ್ಯಾಯವಾಗಲಿದೆ ಎಂದರು.
1950ರಲ್ಲಿ ಸಂವಿಧಾನ ರಚನೆಯಾದಾಗಿನಿಂದಲೂ ಇಲ್ಲಿಯ(2014ರ) ವರೆಗಿನ ಬ್ಯಾಕ್ ಲಾಗ್‍ಹುದ್ದೆಗಳನ್ನು ಪರಿಗಣನೆಗೆ ತೆಗೆದುಕೊಂಡಲ್ಲಿ ಒಟ್ಟು 1,50,000 ಹುದ್ದೆಗಳು ಖಾಲಿಇದ್ದು, ಈ ಹುದ್ದೆಗಳನ್ನು ಪೂರ್ಣಗೊಳಿಸಿದ್ದಲ್ಲಿ 10 ಲಕ್ಷ ಕುಟುಂಬಗಳಿಗೆ ರಕ್ಷಣೆ ದೊರಯುತ್ತದೆ ಎಂದು ಹೇಳಿದರು.
ಸಂಸತ್ತಿನಲ್ಲಿ ಚನ್ನಪ್ಪ ರೆಡ್ಡಿ ಆಯೋಗವು ಹಿಂದುಳಿದ ವರ್ಗಗಳಲ್ಲಿ ಕೆಲವನ್ನು ಪರಿಶಿಷ್ಠ ಜಾತಿ/ಪಂಗಡಗಳಿಗೆ ಸೇರಿಸಲು ಮುಂದಾಗಿದ್ದು, ಇದು ಬಹಳ ಗೊಂದಲಗಳಿಗೆ ಎಡೆ ಮಾಡುತ್ತದೆ. ಅಸ್ಪøಷ್ಯತೆಯನ್ನು ಅನುಭವಿಸದ ಜಾತಿಗಳನ್ನು ಪಟ್ಟಿಗೆ ಸೇರಿಸಿಲ್ಲಿ ಅನ್ಯಾಯವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಮೂಲಧರ್ಮ ಬೌದ್ಧ ಧರ್ಮ. ಇದು ಜಗತ್ತಿನಾದ್ಯಂತ ಹೊರದೇಶಗಳಲ್ಲಿ ಜನ ಮಣ್ಣನೆಗೆ ಪಾತ್ರವಾಗಿದ್ದು, ನಮ್ಮ ನೆಲದ ಧರ್ಮವು ನಮ್ಮ ನೆಲದಲ್ಲಿಯೇ ನಷಿಸುವಂತಹ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಬೌದ್ಧ ಸ್ತೂಪಗಳ ರಕ್ಷಣೆ ಮಾಡುವಂತಹ ಅಗತ್ಯವಿದೆ.
ಬೌದ್ಧ ಸ್ತೂಪಗಳನ್ನು ರಕ್ಷಿಸುವ ಸಲುವಾಗಿ ಅದಕ್ಕೆ ಒಂದು ಪ್ರಾಧಿಕಾರವನ್ನು ಸ್ಥಾಪಿಸುವ ಸಲುವಾಗಿ ಹಾಗೂ ಪ್ರತಿ ಜಿಲ್ಲೆ, ತಾಲ್ಲೂಕುಗಳ ಕೇಂದ್ರಗಳಲ್ಲಿ ಬೌದ್ಧ ವಿಹಾರ ಸ್ಥಾಪನೆಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡವಂತೆ ಮನವಿ ಮಾಡಿದರು.
ಸುಪ್ರೀಂ ಕೋರ್ಟು ಅಟ್ರಾಸಿಟಿ ಕೇಸುಗಳು ಬೇಲ್ ನೀಡುವಂತಿಲ್ಲ ಎಂದು ಆದೇಶವನ್ನು ಹೊರಡಿಸಿದ್ದರು, ನಮ್ಮ ಉಚ್ಛನ್ಯಾಯಾಲಯವು ಆದೇಶ ಸಂಖ್ಯೆ ಐಎಲ್‍ಆರ್20023308ರಲ್ಲಿ ಬೇಲ್ ನೀಡುವಂತೆ ರಾಜ್ಯದಾದ್ಯಂತ ಆಧೇಶ ಹೊರಡಿಸಿದ್ದು, ರಾಜ್ಯದ ಎಲ್ಲಾ ಸೆಷನ್ಸ್ ನ್ಯಾಯಾಲಯಗಳಲ್ಲಿ ಇದನ್ನೆ ಪಾಲಿಸುವಂತಾಗಿದೆ.
ಇದರಿಂದಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೆ ಇವೆ ಇದನ್ನು ಬದಲಾಯಿಸಿ, ದಲಿತರನ್ನು ನಿಂದಿಸಿದರೆ, ಅವರ ಮೇಲೆ ಹಲ್ಲೆ ಮಾಡಿದ್ದಲ್ಲಿ ಬೇಲ್ ದೊರೆಯದಂತಹ ಸರ್ವೋಚ್ಛó ನ್ಯಾಯಾಲಯದ ಆದೇಶವನ್ನು ಪರಿಪಾಲನೆ ಜಾರಿಗೊಳಿಸಲು ಮುಖ್ಯ ಮಂತ್ರಿಗಳ ಗಮನಕ್ಕೆ ತರಬೇಕೆಂದು ಒತ್ತಾಯಿಸಿದರು.
ಮಂಡ್ಯ ತಾಲ್ಲೂಕಿನ ಈಚಗೆರೆ ಗ್ರಾಮದಲ್ಲಿ ತಮಟೆ ಹೊಡೆಯಲಿಲ್ಲ ವೆಂಬ ಕಾರಣಕ್ಕೆ ದಲಿತನಿಗೆ ತನ್ನ ಜಮೀನಿನಲ್ಲ ಸಾಗುವಳಿಗೆ ಹಾಗೂ ಬೆಳೆದಂತಹ ಕಬ್ಬಿನ ಸಾಕಾಣಿಕೆಗೆ ಅವಕಾಶ ಕೊಡದೆ ಆತನ ಕಬ್ಬು ಒಣಗಿ ಸರ್ಕಾರ ಅವನಿಗೆ ಪರಿಹಾರ ನೀಡಿತ್ತಾದರೂ, ಇಂತಹ ಹಲವು ಪ್ರಕರಣಗಳು ಜಿಲ್ಲೆಯಲ್ಲ ನಡೆಯುತ್ತಲಿದ್ದು, ಇಂತಹ ಪ್ರಕರಣಗಳ ಕಡೆಗೆ ಗಮನ ಹರಿಸುವಂತೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಬಿ.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿನಡೆಯುವಂತಹ ಗುತ್ತಿಗೆಗಳಲ್ಲಿ ಶೇಕಡವಾರು ಗುತ್ತಿಗೆಯನ್ನು ದಲಿತ ಗುತ್ತಿಗೆ ದಾರರಿಗೆ ಮೀಸಲು ಇಡಬೇಕು, ಇ-ಟೆಂಡರ್ ರೂಪದಲ್ಲಿ ಗುತ್ತಿಗೆ ಕರೆಯುತ್ತಲಿರುವುದರಿಂದ ದಲಿತರು ಗುತ್ತಿಗೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ದಲಿತರಿಗೆ ಪ್ರತ್ಯೇಕವಾಗಿ ಇ-ಟೆಂಡರ್ ಪ್ರಕ್ರಿಯೆ ನಡೆಯಬೇಕೆಂದು ಒತ್ತಾಯಿಸಿದರು.
ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ಪಡೆಯದೆ ಅವರುಗಳನ್ನು ಖಾಯಂ ಗೊಳಿಸಿ ಸರ್ಕಾರಿ ನೌಕರರ ಡಿ.ಗ್ರೂಪಿಗೆ ಸೇರಿಸಬೇಕು. ಅವರನ್ನು ಸರ್ಕಾರಿ ನೌಕರನ್ನಾಗಿ ಮಾಡಬೇಕೆಂದರು.
ರಾಜ್ಯದಲ್ಲಿ ಮುಜರಾಯಿ ಇಲಾಖೆ ಸೇರಿದಂತಹ ದೇವಾಲಯಗಳಲಿ ದಲಿತರನ್ನು ಬಿಡುತ್ತಿಲ್ಲ, ಇಂತಹ ಸಂದರ್ಭದಲ್ಲಿ ಶ್ಮಸಾನಗಳಲ್ಲಿ ಅಂತಿಮ ಸಂಸ್ಕಾರ ದಿಂದ ದಲಿತರು ವಂಚಿತರಾಗುತ್ತಿದ್ದು, ಒಂದು ವರ್ಷದೊಳಗೆ ರಾಜ್ಯದಾದ್ಯಂತ ಪ್ರತಿ ಗ್ರಾಮದಲ್ಲಿಯೂ ದಲಿತರಿಗೆ ಪ್ರತ್ಯೇಕ ಸ್ಮಶಾನವನ್ನು ರೋಪಿಸಬೇಕು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಿ ದಲಿತರ ಮೇಲಿನ ದೌರ್ಜನ್ಯವನ್ನು ತಡೆಯಲು ಮುಂಧಾಬೇಕು.
ಈಗ ದಲಿತರ ನಿಧಿಗೆ ದೊರೆತಿರುವ 22.75 ಕೋಟಿ ಹಣವನ್ನು ಸದ್ಬಳಕೆ ಮಾಡಿ, ಪ್ರತಿ ವರ್ಷದ ಅನುದಾನವನ್ನು ಅದೇ ವರ್ಷದಲ್ಲಿ ಬಳಕೆಯಾಗುವಂತಾಗಬೇಕೆಂದು ಒತ್ತಾಯಿಸಿದರು.
ಕರಾದಸಂಸ ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ ಮಾತನಾಡಿ, ಮಿಮ್ಸ್‍ನ ನಿರ್ದೇಶಕಿ ಪುಷ್ಪಾ ಸರ್ಕಾರ್‍ರವರು ಆಸ್ಪತ್ರೆಯಲ್ಲಿನ ದಲಿತ ಸಿಬ್ಬಂದಿಗೆ ಮಾನಸಿಕ ಕಿರುಕುಳವನ್ನು ನೀಡುತ್ತಿದ್ದು, ಅವರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಅಲ್ಲಿನ ದಲಿತ ನೌಕರರೊಬ್ಬರಿ 35 ವರ್ಷಗಳಿಂದ ಅಲ್ಲಿಯೇ ಸೇವೆ ಸಲ್ಲಿಸಿದ್ದರು, ಅವರಿಗೆ ಮುಂಬಡ್ತಿಯನ್ನು ನೀಡದೇ ಹಾಗೆಯೇ ಉಳಿಸಿಕೊಂಡು ಹೊಸ ಸಿಬ್ಬಂದಿ ನೇಮಕಾತಿ ಮಾಡುತ್ತಿರುವುದು ಅಸಹನೀಯ ಘಟನೆಯಾಗಿದ್ದು, ಇಂತಹ ಹಲವು ಪ್ರಕರಣಗಳ ಬಗ್ಗೆ 7 ಪುಟಗಳ ವರದಿಯನ್ನು ಸಲ್ಲಿಸಿದರು.
ಸಭೆಯಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಇ.ಅಶ್ವಥ್ ನಾರಾಯಣ್, ಆಯೋಗದ ಕಾರ್ಯದರ್ಶಿ ಕಮಲ, ಜಿಲ್ಲಾಧಿಕಾರಿ ಅಜಯ್‍ನಾಗಭೂಷಣ್, ಎಸ್ಪಿ ಭೂಷಣ್ ಜಿ. ಬೋರಸೆ, ಸಿಇಓ ರೋಹಿಣಿ ಸಿಂಧೂರಿ, ಜಿ.ಪಂ ಸದಸ್ಯ ಸುರೇಶ್ ಕಂಠಿ ಉಪಸ್ಥಿತರಿದ್ದರು.


ಸಾರ್ವಜನಿಕರು ಜಾಗೃತರಾಗಿ ಲೋಕಾಯುಕ್ತಕ್ಕೆ ದೂರು ನೀಡುವ ಧೈರ್ಯವನ್ನು ಪ್ರದರ್ಶಿಸಬೇಕು .

 ಕೃಷ್ಣರಾಜಪೇಟೆ. ಸರ್ಕಾರಿ ನೌಕರರು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿಗಧಿತ ಅವಧಿಯೊಳಗೆ ಮಾಡಿಕೊಡುವ ಮೂಲಕ ಜನಮೆಚ್ಚಿದ ಅಧಿಕಾರಿಗಳಾಗಬೇಕು. ಸರ್ಕಾರದ ಕೆಲಸವನ್ನು ಮಾಡಿಕೊಟ್ಟು ಸೌಲಭ್ಯವನ್ನು ವಿತರಿಸಲು ಲಂಚದ ಹಣಕ್ಕಾಗಿ ಒತ್ತಾಯಿಸುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಜಾಗೃತರಾಗಿ ಲೋಕಾಯುಕ್ತಕ್ಕೆ ದೂರು ನೀಡುವ ಧೈರ್ಯವನ್ನು ಪ್ರದರ್ಶಿಸಬೇಕು ಎಂದು ಮಂಡ್ಯದ ಲೋಕಾಯುಕ್ತ ಇನ್ಸ್‍ಪೆಕ್ಟರ್ ಬಿ.ಎಸ್.ದಿನೇಶ್‍ಕುಮಾರ್ ಮನವಿ ಮಾಡಿದರು.
ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಯನ್ನು ನಡೆಸಿ ಅಹವಾಲುಗಳನ್ನು ಸ್ವೀಕರಿಸಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಿ ಮಾತನಾಡಿದರು.
ಸರ್ಕಾರದ ಕೆಲಸವು ದೇವರ ಕೆಲಸವಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆಯಲು ಕಛೇರಿಗೆ ಬರುವ ಬಡ ಜನರನ್ನು ವಿನಾಕಾರಣ ಅಲೆದಾಡಿಸಿ ಗೋಳುಹೊಯ್ದುಕೊಂಡು ಲಂಚದ ಹಣಕ್ಕಾಗಿ ಒತ್ತಾಯಿಸದೇ ನಿಗಧಿತ ಅವಧಿಯೊಳಗೆ ಜನಸಾಮಾನ್ಯರ ಕೆಲಸಗಳನ್ನು ಮಾಡಿಕೊಡುವ ಇಚ್ಛಾಶಕ್ತಿ ಹಾಗೂ ಬದ್ಧತೆಯನ್ನು ಅಧಿಕಾರಿಗಳು ಪ್ರದರ್ಶನ ಮಾಡಿ ತಾವು ಪಡೆಯುವ ಸರ್ಕಾರದ ಸಂಬಳದ ಹಣಕ್ಕೆ ಮೌಲ್ಯವನ್ನು ತಂದುಕೊಡಬೇಕು. ಸಾಮಾಜಿಕವಾಗಿ ಅಧಃಪಥನದತ್ತ ಸಾಗುತ್ತಿರುವ ಮೌಲ್ಯಗಳ ಉಳಿವಿಗೆ ಅಧಿಕಾರಿಗಳು ಬದ್ಧರಾಗಿ ವೃತ್ತಿಯಲ್ಲಿ ದಕ್ಷತೆ ಮತ್ತು ಕಾರ್ಯತತ್ಪರತೆಯನ್ನು ಮೈಗೂಡಿಸಿಕೊಂಡು ಬದ್ಧತೆಯಿಂದ ಕೆಲಸ ಮಾಡಬೇಕು. ನಾನಿಲ್ಲಿ ಕಾಟಾಚಾರಕ್ಕೆ ಹಾಗೂ ಪ್ರಚಾರಕ್ಕೆ ಸಭೆ ನಡೆಸಲು ಇಲ್ಲಿಗೆ ಬಂದಿಲ್ಲ ಎಂದು ಪುರಸಭೆಯ ಮುಖ್ಯಾಧಿಕಾರಿ, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಹಾಗೂ ಬಿಸಿಎಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಹೇಮಾವತಿ ಬಡಾವಣೆ, ಟಿ.ಬಿ ಬಡಾವಣೆಯಲ್ಲಿ ನಿವೇಶನಗಳ ಅವ್ಯವಹಾರ ಕುರಿತು ಲೋಕಾಯುಕ್ತ ತನಿಖೆಯು ಸಂಪೂರ್ಣಗೊಂಡಿದ್ದು ಸಂಬಂಧಪಟ್ಟ ಕಡತಗಳು ಹಾಗೂ ದಾಖಲೆಗಳು ಸರ್ಕಾರದ ನಗರಾಭಿವೃಧ್ಧಿ ಇಲಾಖೆಯಲ್ಲಿವೆ. ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳು ಹಾಗೂ ಅಕ್ರಮ ನಿವೇಶನಗಳಿಗೆ ದಂಡವನ್ನು ನಿಗಧಿಪಡಿಸಿ ಸಕ್ರಮಗೊಳಿಸಿ ಅರ್ಹರಿಗೆ ವಿತರಣೆ ಮಾಡುವ ಇಲ್ಲವೇ ಸರ್ಕಾರವೇ ಮತ್ತೆ ವಶಕ್ಕೆ ಪಡೆಯುವ ಬಗ್ಗೆ ಸರ್ಕಾರವೇ ನಿರ್ಧರಿಸಬೇಕು ಇದರಲ್ಲಿ ಲೋಕಾಯುಕ್ತ ಸಂಸ್ಥೆಯ ಪಾತ್ರವೇನಿಲ್ಲ ಎಂದು ಸ್ಪಷ್ಠಪಡಿಸಿದ ಲೋಕಾಯುಕ್ತ ಇನ್ಸ್‍ಪೆಕ್ಟರ್ ದಿನೇಶ್ ಉಪನೊಂದಣಾಧಿಕಾರಿಗಳ ಕಛೇರಿ, ಕಂದಾಯ ಇಲಾಖೆ, ಪುರಸಭೆ, ಬಿಸಿಎಂ ಹಾಗೂ ಸಮಾಜಕಲ್ಯಾಣ ಇಲಾಖೆಯಲ್ಲಿ ಜನಸಾಮಾನ್ಯರ ಕೆಲಸಗಳು ನಿಗಧಿತ ಅವಧಿಯಲ್ಲಿ ಆಗುತ್ತಿಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಪಡಿತರ ಚೀಟಿಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುತ್ತಿಲ್ಲ ಎಂದು ವ್ಯಾಪಕವಾದ ದೂರುಗಳಿವೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ಬಡವರಿಗೆ ಸಾಮಾಜಿಕ ನ್ಯಾಯವನ್ನು ನೀಡುವ ಮೂಲಕ ಪ್ರಜಾಫ್ರಭುತ್ವದ ಮೌಲ್ಯಗಳನ್ನು ಉಳಿಸಲು ಮುಂದಾಗಬೇಕು. ಮುಂದಿನ ತಿಂಗಳ ಅಂತ್ಯದಲ್ಲಿ ನಡೆಯುವ ಜನಸಂಪರ್ಕ ಸಭೆಯಲ್ಲಿ ಅಗತ್ಯವಾದ ಮಾಹಿತಿ ಹಾಗೂ ಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡಬೇಕು ಎಂದು ನಿರ್ದೇಶನ ನೀಡಿದರು.
ನಿವೇಶನ ನೀಡಲು ಕ್ರಮಕೈಗೊಳ್ಳಿ: ಪುರಸಭೆಯು ಕಳೆದ 15 ವರ್ಷಗಳಿಂದ ಪಟ್ಟಣ ವ್ಯಾಪ್ತಿಯ ಮಧ್ಯಮ ವರ್ಗಧ ಜನರು ಹಾಗೂ ಕಡು ಬಡವರಿಗೆ ನಿವೇಶನಗಳನ್ನು ವಿತರಿಸಲು ಯಾವುದೇ ಕ್ರಮಕೈಗೊಂಡಿಲ್ಲ, ಬಡ ಜನರಿಗೆ ನಿವೇಶನ ನೀಡುವಂತೆ ಪುರಸಭೆಗೆ ನಿರ್ದೇಶನ ನೀಡಬೇಕು ಎಂದು ನೂರಾರು ಬಡ ಜನರು ನೀಡಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಲೋಕಾಯುಕ್ತ ದಿನೇಶ್ ಪುರಸಭೆಯ ವ್ಯಾಪ್ತಿಯಲ್ಲಿ ಕಡು ಬಡವರಿಗಾಗಿ ವಿತರಣೆ ಮಾಡಲು ಮೀಸಲಾಗಿಟ್ಟಿರುವ ನಿವೇಶನಗಳು ಖಾಲಿ ಬಿದ್ದಿವೆ. ರಾಜಕೀಯ ಪುಡಾರಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಈ ನಿವೇಶನಗಳಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಆದ್ದರಿಂದ ನಿವೇಶನರಹಿತ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಸ್ವೀಕರಿಸಿ ನಿವೇಶನ ವಿತರಣೆಗೆ ಪುರಸಭೆಯ ಆಡಳಿತ ಮಂಡಳಿಯು ಮುಂದಾಗಬೇಕು. ಹೇಮಾವತಿ ಬಡಾವಣೆ ಹಾಗೂ ಟಿಬಿ ಬಡಾವಣೆಯ ನಿವೇಶನಗಳಿಗೆ ಸಂಬಂಧಿಸಿದ ಕಡತಗಳೊಂದಿಗೆ ತಮ್ಮ ಕಛೇರಿಗೆ ನವೆಂಬರ್ 3ರಂದು ಹಾಜರಾಗಬೇಕು ಎಂದು ದಿನೇಶ್ ನಿರ್ದೇಶನ ನೀಡಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ರಂಗನಾಥ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೆಂಚಪ್ಪ, ನೀರಾವರಿ ಇಲಾಖೆಯ ಸುರೇಶ್, ಜಿ.ಪಂ ಕುಡಿಯುವ ನೀರು ವಿಭಾಗದ ಎಇಇ ರಮೇಶ್, ಸೆಸ್ಕ್ ಎಇಇ ಗಣೇಶನ್, ರಾಜಶೇಖರ್, ಸಿಡಿಪಿಓ ದೇವಕುಮಾರ್, ತೋಟಗಾರಿಕೆ ಇಲಾಖೆಯ ಪುಷ್ಪಲತ, ಅಬ್ಕಾರಿ ಇನ್ಸ್‍ಪೆಕ್ಟರ್ ಪ್ರಶಾಂತಿ, ಕಾರ್ಮಿಕ ನಿರೀಕ್ಷಕಿ ವನಜಾಕ್ಷಿ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.


ಕೃಷ್ಣರಾಜಪೇಟೆ. ಮಹಿಳೆಯರು ಆತ್ಮವಿಶ್ವಾಸದಿಂದ ಮುನ್ನಡೆದು ತಮ್ಮಲ್ಲಿನ ವೃತ್ತಿಕೌಶಲ್ಯವನ್ನು ಸದ್ಭಳಕೆ ಮಾಡಿಕೊಂಡು ಗುಡಿ ಕೈಗಾರಿಕೆಗಳ ಮೂಲಕ ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡಿ ಆರ್ಥಿಕ ಸ್ವಾವಲಂಭನೆಯನ್ನು ಸಾಧಿಸಿ ಪ್ರಗತಿಯ ದಿಕ್ಕಿನತ್ತ ಸಾಗಬೇಕು ಎಂದು ಪುರಸಭೆಯ ಸ್ವರ್ಣಜಯಂತಿ ಶಹರಿ ರೋಜ್‍ಗಾರ್ ಯೋಜನೆಯ ಅಧ್ಯಕ್ಷೆ ಚಂದ್ರಕಲಾ ರಮೇಶ್ ಮನವಿ ಮಾಡಿದರು.
ಅವರು ಪಟ್ಟಣದ ಪುರಸಭೆ ವ್ಯಾಪ್ತಿಯ ಬಸವನಗುಡಿ ಬಡಾವಣೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಹಟ್ಟಿಲಕ್ಕಮ್ಮ ಸ್ತ್ರೀಶಕ್ತಿ ಸ್ವಸಹಾಯ ಸಂಘದ ವಾರ್ಷಿಕೋತ್ಸವ ಸಮಾರಂಭವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಇಂದು ಸಮಾಜದ ಎಲ್ಲಾ ಸ್ತರಗಳಲ್ಲಿಯೂ ಸ್ವಾಭಿಮಾನ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಾ ತಾವೂ ಮುನ್ನಡೆಯುವ ಜೊತೆಗೆ ದೇಶವನ್ನೂ ಅಭಿವೃಧ್ಧಿಯ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಹಿರಿಯರ ನಾಣ್ಣುಡಿಯಂತೆ ತಮ್ಮಲ್ಲಿನ ವೃತ್ತಿಕೌಶಲ್ಯವನ್ನು ತಮ್ಮ ಬಡಾವಣೆಯ ಎಲ್ಲಾ ಮಹಿಳೆಯರಿಗೂ ಕಲಿಸಿಕೊಟ್ಟು ಮೇಣದ ಬತ್ತಿ ತಯಾರಿಕೆ, ಊಟದ ತಟ್ಟೆ, ಗಂಧಧ ಕಡ್ಡಿ, ಲೆದರ್ ಬ್ಯಾಗುಗಳ ತಯಾರಿಕೆ ಹಾಗೂ ಟೈಲರಿಂಗ್ ಎಂಬ್ರಾಯಿಡರಿಂಗ್ ವೃತ್ತಿಯನ್ನು ಮಾಡುತ್ತಾ ಆರ್ಥಿಕವಾಗಿ ಸ್ವಾವಲಂಭಿಗಳಾಗಿ ತಮ್ಮ ಸ್ತ್ರೀಶಕ್ತಿ ಗುಂಪನ್ನೂ ಪ್ರಗತಿಯ ದಿಕ್ಕಿನತ್ತಕೊಂಡೊಯ್ದು ಒಂದೇ ವರ್ಷದ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಲಾಭ ಸಂಪಾದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳು ಸಮಾಜದಲ್ಲಿ ಟೀಕೆ-ಟಿಪ್ಪಣಿಯ ಮಾತುಗಳಿಗೆ ತಲೆಕೆಡಿಕೊಳ್ಳದೇ ಆತ್ಮವಿಶ್ವಾಸದಿಂದ ಮುನ್ನಡೆದು ಸಾಮಾಜಿಕ ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಕಂಕಣತೊಟ್ಟು ಕೆಲಸ ಮಾಡಬೇಕು. ಪರಿಸರ ಸ್ವಚ್ಛತೆ, ನೈರ್ಮಲ್ಯ ಮತ್ತು ಆರೋಗ್ಯದ ಬಗ್ಗೆ ಜನಜಾಗೃತಿಯನ್ನು ಮೂಡಿಸಿ ಶಿಕ್ಷಣದ ಮಹತ್ವದ ಬಗ್ಗೆ ತಿಳುವಳಿಕೆ ನೀಡಿ ಸಮಾಜದ ಒಂದೇ ಒಂದು ಮಗುವೂ ಕೂಡ ಶಿಕ್ಷಣದ ಹಕ್ಕಿನಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು ಚಂದ್ರಕಲಾ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಕೆ.ಆರ್.ಹೇಮಂತ್‍ಕುಮಾರ್, ಮಾಜಿಅಧ್ಯಕ್ಷ ಕೆ.ಹೆಚ್.ರಾಮಕೃಷ್ಣ, ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಸ್ಥೆಯ ನಗರ ಸಂಚಾಲಕಿ ಕಾಂತಿಕಾಮಣಿ ಸೇವಾ ಪ್ರತಿನಿಧಿ ಭಾರತಿ, ಹಟ್ಟಿಲಕ್ಕಮ್ಮ ಪ್ರಗತಿಬಂಧು ಸ್ತ್ರೀಶಕ್ತಿ ಸಂಘದ ಪ್ರತಿನಿಧಿಗಳಾದ ಸರೋಜಮ್ಮ, ಅನುಜಮ್ಮ, ಶಾಂಭವಿ, ಮಮತ, ಸುಮಲತಾ, ಜಯಮ್ಮ, ಲತಾ, ಸಲ್ಮಾಭಾನು, ರತ್ನಮ್ಮ ಮತ್ತಿತರರು ಭಾಗವಹಿಸಿದ್ದರು.
ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಸ್ಥೆಯ ಸೇವಾ ಪ್ರತಿನಿಧಿ ಭಾರತಿ ಸ್ವಾಗತಿಸಿದರು, ಅನುಜಮ್ಮ ವಂದಿಸಿದರು. ಶಾಂಭವಿ ಮತ್ತು ಲತಾ ಕಾರ್ಯಕ್ರಮ ನಿರೂಪಿಸಿದರು.

ಕೆ.ಆರ್.ಪೇಟೆ ಸುದ್ದಿಗಳು.


===============================================
ಕೆ.ಆರ್.ಪೇಟೆ. ಅ.29- ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ  ದೊಡ್ಡಕ್ಯಾತನಹಳ್ಳಿ ಮಾರ್ಗದಲ್ಲಿರುವ ಕೆರೆ ಏರಿಯ ಮೇಲಿನ ಮುಖ್ಯ ರಸ್ತೆಯು ಕಳೆದ ಹತ್ತಾರು ವರ್ಷಗಳಿಂದ ದುರಸ್ತಿ ಕಾಣದೇ ಕಾಡು ರಸ್ತೆಯಂತಾಗಿದ್ದು ತಕ್ಷಣ ದುರಸ್ತಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ತಾಲೂಕು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಾಲೂಕು ಅಧ್ಯಕ್ಷ ಎ.ಸಿ.ಕಾಂತರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಸದರಿ ಮಾರ್ಗವು ವಿಶ್ವವಿಖ್ಯಾತ ಗೊಮ್ಮಟ ಕ್ಷೇತ್ರವಿರುವ ಶ್ರವಣಬೆಳಗೊಳಕ್ಕೆ, ನಾಗಮಂಗಲಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಆದರೆ ರಸ್ತೆಯ ಅಲ್ಲಲ್ಲಿ ಗುಂಡಿ ಬಿದ್ದಿ ತೀರ ಅದ್ವಾನಗೊಂಡಿದೆ. ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಹಲವು ಅಪಘಾತಗಳು ನಿತ್ಯ ನಡೆಯುತ್ತಿದ್ದ ಈ ರಸ್ತೆಯ ಅವ್ಯವಸ್ಥೆ ನೋಡಿ ನೋಡಿ ಸಾಕಾಗಿರುವ ವಾಹನ ಸವಾರರು ತಮ್ಮ ವಾಹನವನ್ನು ಈ ರಸ್ತೆಯಲ್ಲಿ ಓಡಿಸುವುದನ್ನು ಕಳೆದ 1ವರ್ಷದಿಂದ ನಿಲ್ಲಿಸಿದ್ದಾರೆ.  ಹುಬ್ಬನಹಳ್ಳಿ ಮಾರ್ಗವಾಗಿ ಸುತ್ತಿ ಬಳಿಸಿ ಹೋಗುತ್ತಿದ್ದಾರೆ ಆದರೂ  ಈ ಭಾಗದ ಯಾವುದೇ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸದೇ ಇರುವುದು ತೀವ್ರ ನೋವಿನ ಸಂಗತಿಯಾಗಿದೆ ಎಂದು ಹೇಳಿದ ಕಾಂತರಾಜು ಅವರು ತಕ್ಷಣ ಈ ಮುಖ್ಯ ರಸ್ತೆಯನ್ನು ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ವಾಹನ ಸವಾರರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.  ಮುಂದಿನ ಒಂದು ತಿಂಗಳೊಳಗೆ ಯಾವುದೇ ಕ್ರಮ ವಹಿಸದೇ ಇದ್ದಲ್ಲಿ ಸಂತೇಬಾಚಹಳ್ಳಿ ಬಂದ್ ನಡೆಸಿ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಬೇಕಾಗುತ್ತದೆ ಎಂದು ಕಾಂತರಾಜು ಹೇಳಿದರು. ಪ್ರತಿಭಟನೆಯಲ್ಲಿ  ಕರವೇ ಪದಾಧಿಕಾರಿಗಳಾದ ಶಶಿ, ಚೇತನ್, ರಾಜು, ಮಂಜು, ರಾಘು ಮತ್ತಿತರರ ಭಾಗವಹಿಸಿದ್ದರು.


ಕೆ.ಆರ್.ಪೇಟೆ,ಅ.29- ತಾಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಸರ್ಕಾರಿ ಸಾಮ್ಯದ ಕಾವೇರಿ ಗ್ರಾಮೀಣ ಬ್ಯಾಂಕ್‍ನ 423ನೇ ಶಾಖೆಯನ್ನು ತಾಲೂಕು ಪಂಚಾಯಿತಿ ಸದಸ್ಯ ಎಂ.ಸಿ.ರಾಮೇಗೌಡ ಇಂದು(ಬುಧವಾರ) ಉದ್ಘಾಟನೆ ಮಾಡಿದರು.
ಅವರು ಮಾತನಾಡಿ ಗ್ರಾಮೀಣ ಬ್ಯಾಂಕ್‍ಗಳು ದೇಶದ ಜನಸಾಮಾನ್ಯರ ಪ್ರಗತಿಯಲ್ಲಿ ಬ್ಯಾಂಕುಗಳ ಪಾತ್ರ ಅಪಾರವಾಗಿದೆ. ಸಾರ್ವಜನಿಕರು ತಾವು ಗಳಿಸಿದ ಹಣದಲ್ಲಿ ಉಳಿತಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ನಿರುದ್ಯೋಗಿಗಳು ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುವ ಸಾಲ ಸೌಲಭ್ಯವನ್ನು ಪಡೆದುಕೊಂಡು ಸ್ವಂತ ಉದ್ಯೋಗ ಕೈಗೊಂಡು ಸ್ವಾವಲಂಭಿಗಳಾಗಿ ಜೀವನ ಸಾಗಿಸಬೇಕು ಎಂದು ರಾಮೇಗೌಡ ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾದ ಷಣ್ಮುಗಂಸ್ವಾಮಿ ಮಾತನಾಡಿ ಕಾವೇರಿ ಗ್ರಾಮೀಣ ಬ್ಯಾಂಕ್ ಕಾವೇರಿ ಕಣಿವೆ ಜಿಲ್ಲೆಗಳ ಜನರ ವಿಶ್ವಾಸಕ್ಕೆ ಪಾತ್ರವಾದ ಬ್ಯಾಂಕ್ ಆಗಿದೆ. ಮೈಸೂರಿನಲ್ಲಿ ಪ್ರಧಾನ ಕಚೇರಿ ಹೊಂದಿದೆ. ರಾಜ್ಯದ 10ಜಿಲ್ಲೆಗಳಲ್ಲಿ ವಿಸ್ತಾರಗೊಂಡಿದ್ದು ಇಂದು ಉದ್ಘಾಟನೆಗೊಂಡ ಮಾಕವಳ್ಳಿ ಶಾಖೆ ಸೇರಿದಂತೆ ಒಟ್ಟು 423 ಶಾಖೆಗಳನ್ನು ಹೊಂದಿದೆ.  ರಾಜಧಾನಿ ಬೆಂಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ, ಮಡಿಕೇರಿ, ಚಾಮರಾಜನಗರ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ತೆರೆದಿದೆ. ಗ್ರಾಮೀಣ ಜನರ ಅಭಿವೃದ್ಧಿಯ ದೃಷ್ಟಿಯಲ್ಲಿಟ್ಟುಕೊಂಡು ಆರಂಭವಾಗಿರುವ ಬ್ಯಾಂಕ್ ಪ್ರದೇಶಗಳಲ್ಲಿಯೇ ಶೇ.90ರಷ್ಟು ಶಾಖೆಗಳನ್ನು ಗ್ರಾಮೀಣ ಪ್ರದೇಶದಲ್ಲಿಯೇ ಆರಂಭಿಸಲಾಗಿದೆ.  ರೈತರಿಗೆ ಪ್ರಥಮ ಆಧ್ಯತೆ ನೀಡಲಾಗುತ್ತಿದೆ.  ಸಣ್ಣ ಸಣ್ಣ ವ್ಯಾಪಾರಸ್ಥರು, ಗೃಹ ಕೈಗಾರಿಕೆ ಆರಂಭಿಸುವವರಿಗೆ, ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘಗಳಿಗೆ, ರೈತರಿಗೆ ವಿವಿಧ ರೀತಿಯ ಬೆಳೆ ಸಾಲಗಳನ್ನು ಸುಲಭ ದಾಖಲಾತಿಗಳನ್ನು ಪಡೆದು ನೀಡಲಾಗುತ್ತಿದೆ. ಇದಲ್ಲದೇ ಗ್ರಾಮೀಣ ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಸಾಲ ನೀಡಲಾಗುತ್ತಿದೆ.  ಒಟ್ಟಾರೆ ಎಲ್ಲಾ ವರ್ಗದ ಗ್ರಾಹಕರಿಗೆ ತೃಪ್ತಿದಾಯಕ ಸೇವೆಯನ್ನು ಬ್ಯಾಂಕ್ ನೀಡುತ್ತಾ ಬಂದಿದ್ದು ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಷಣ್ಮುಗಂಸ್ವಾಮಿ  ಹೇಳಿದರು.
ಬ್ಯಾಂಕಿನ ಪ್ರಾದೇಶಿಕ ಹಿರಿಯ ಅಧಿಕಾರಿ ನಂದಕುಮಾರ್, ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ  ಮಾಕವಳ್ಳಿ ಸಣ್ಣಯ್ಯ, ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿ ಕೆ.ಬಾಬುರಾಜ್, ಸಹಾಯಕ ಅಧಿಕಾರಿಗಳಾದ ಪುಟ್ಟೇಗೌಡ, ದತ್ತಾತ್ರೇಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಕುಮಾರಿ, ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಮಮತಾ, ರಾಜೇಶ್, ರಾಜಶೆಟ್ಟಿ, ವಸಂತಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತಕುಮಾರ್, ವಿ.ಎಸ್.ಎಸ್.ಎನ್.ಬ್ಯಾಂಕ್ ಮಾಜಿ ಅಧ್ಯಕ್ಷ ರವಿಕುಮಾರ್, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ರಾಜೇಗೌಡ, ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ಜಿ.ನಾಗೇಶ್, ಮಾಕವಳ್ಳಿ ಶಾಖಾ ವ್ಯವಸ್ಥಾಪಕ ಧರಣೇಶ್, ಆಲೇನಹಳ್ಳಿ ಶಾಖೆಯ ಮ್ಯಾನೇಜರ್ ಗಂಗಾಧರ್, ಬಂಡಿಹೊಳೆ ವ್ಯವಸ್ಥಾಪಕ ಮಲ್ಲಾರಿರಾವ್,  ಮುಖಂಡರಾದ ಆನಂದ್, ಯೋಗಮೂರ್ತಿ, ನಾಗೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಆಹ್ವಾನಿತರಾಗಿ ಭಾಗವಹಿಸಿದ್ದರು.

Tuesday 28 October 2014

ಸುಭದ್ರ ಸಮಾಜಕ್ಕೆ ಕೌಟುಂಬಿಕ ವ್ಯವಸ್ಥೆ ಅಗತ್ಯ : ಪಾಟೀಲ

           ಸುಭದ್ರ ಸಮಾಜಕ್ಕೆ ಕೌಟುಂಬಿಕ ವ್ಯವಸ್ಥೆ ಅಗತ್ಯ : ಪಾಟೀಲ


ಮಂಡ್ಯ,ಅ.28- ಸುಭದ್ರ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆ ಅತ್ಯಗತ್ಯ ವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿ.ಕಾ.ಷೇ.ಪ್ರಾ ಅಧ್ಯಕ್ಷರಾದ ಚಂದ್ರಶೇಖರ್ ಪಾಟೀಲ ತಿಳಿಸಿದರು.
ನಗರದ ಹರ್ಡಿಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಲಾಗಿದ್ದ “ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ನಿಯಮ 2006ರ ಅನುಷ್ಟಾನ” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಸಂವಿಧಾನದಲ್ಲಿ ಕೌಟುಂಬಿಕ ವ್ಯವಸ್ಥೆಯು ಎದ್ದು ಕಾಣುತ್ತಲಿರುವುದರಿಂದ ಭಾರತವು ಸುಭದ್ರವಾಗಿದೆ. ಸಂಸಾರಗಳಲ್ಲಿ ಸಣ್ಣ ಪುಟ್ಟ ವ್ಯತಿರಿಕ್ತ ಭಾವನೆಗಳಿಗೆ ಒಳಗಾಗಿ ಅಹಿತರಕರ ಘಟನೆಗಳು ನಡೆಯುತ್ತಲೆ ಇರುತ್ತವೆ. ಇದನ್ನು ದೊಡ್ಡದನ್ನಾಗಿಸಿ ಹೊರ ತರುವುದು ಸರಿಯಲ್ಲ ಎಂದರು.
ಸಣ್ಣ ಸಣ್ಣ ಕೌಟುಂಬಿಕ ಕಲಹಗಳನ್ನು ಠಾಣೆಗಳ ಮತ್ತು ನ್ಯಾಯಾಲಯಗಳ ಮೆಟ್ಟಿಲೇರಿಸದೇ ಸಮಾಧಾನವಾಗಿ ಕುಳಿತು ಬಗೆ ಹರಿಸಿಕೊಳ್ಳುವುದು ಮತ್ತರವಾದ ಪಾತ್ರವನ್ನು ವಹಿಸುತ್ತವೆ ಎಂದು ಕಿವಿ ಮಾತನ್ನು ಹೇಳಿದರು.
ಸಂವಿಧಾನ ರಚನೆಗೂ ಮುನ್ನ ಮಹಿಳೆಯರಿಗೆ ಯಾವುದೇ ವಿಶೇಷ ಸ್ಥಾನ ಮಾನಗಳಿರಲಿಲ್ಲ, ಸಂವಿಧಾನ ಜಾರಿಯಾದ ನಂತರವಷ್ಟೇ ಅನೇಕ ಕಾಯ್ದೆಗಳು ಮತ್ತು ಮಹಿಳೆಯರಿಗೆ ವಿಶೇಷ ಹಕ್ಕುಗಳು ಜಾರಿಯಾದವು ಎಂದು ತಿಳಿಸಿದರು.
ದೌರ್ಜನ್ಯಗಳ ತಡೆಗೆ, ದೌರ್ಜನ್ಯಗಳಿಗೆ ಒಳಗಾದವರಿಗೆ, ಮಹಿಳೆಯರ ರಕ್ಷಣೆಗೆ ಕಾಯ್ದೆಗಳು ಜಾರಿಯಾಗಿದ್ದು ಇವನ್ನು ಅರ್ಥೈಸಿಕೊಳ್ಳಬೇಕಾದಂತಹ ಅವಶ್ಯಕತೆ ಎಲ್ಲರಿಗೂ ಇರುತ್ತದೆ.
ಮಹಿಳೆಯರಿಗೆ ಇರುವಂತಹ ಕಾಯ್ದಗಳನ್ನು ತಿಳಿದುಕೊಂಡು ಸುಭದ್ರ ಸಮಾಜವನ್ನು ಕಟ್ಟುವಲ್ಲಿ ಎಲ್ಲರೂ ಸಹಕಾರಿಯಾಗಿ ಭಾಗವಹಿಸುವಂತೆ ಕರೆ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಸದಾನಂದ ದೊಡ್ಡಮನಿ ಮಾತನಾಡಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯಲು ಕಾರಣ ಅವರಲ್ಲಿ ಅವರ ಹಕ್ಕುಗಳ ಅರಿವು ಇಲ್ಲದೆ ಇರುವುದೇ ಕಾರಣ, 1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಒಂದರೂ ಸಹ ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆಗಳಂತಹ ಅಮಾನುಷ ಕೃತ್ಯಗಳು ನಡೆಯುತ್ತಲೆ ಇವೆ ಎಂದು ವಿಷಾಧಿಸಿದರು.
ಮಹಿಳಾದೌರ್ಜನ್ಯ ಕಾಯ್ದೆ 2005ರಲ್ಲಿ 35 ಕಾನೂನುಗಳಿದ್ದು, ಮಹಿಳಾ ದೌರ್ಜನ್ಯದ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯ ಪಾತ್ರ , ವೈದ್ಯರ ಪಾತ್ರ ಸೇರಿದಂತೆ ಹಲವಾರು ನಿಮಯಮಗಳನ್ನು ತಿಳಿಸಲಾಗಿದೆ.
ಕಾನೂನಿನ ಚೌಕಟ್ಟಿನಲ್ಲಿ ಪ್ರತಿಯೊಬ್ಬರೂ ನಡೆದಾಗ ದೇಶದಲ್ಲಿ ಎಷ್ಟೋ ದೌರ್ಜನ್ಯಗಳು, ಹಲ್ಲೆಗಳನ್ನು ತಡೆಯಬಹುದು ಇದರಿಂದ ಒಳ್ಳೆಯ ಜೀವನವನ್ನು ನಡೆಸಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರಯ್ಯ, ಜಿಲ್ಲಾಧಿಕಾರಿ ಅಜಯ್‍ನಾಗಭೂಷಣ್, ವಕೀಲ ಸಂಘದ ಅಧ್ಯಕ್ಷ ಬಸವರಾಜು, ಮತ್ತು ವಕೀಲ ಬಿ.ಟಿ.ವಿಶ್ವನಾಥ್ ಇತರರಿದ್ದರು.



ಗಾಂಧಿ ವಿಚಾರಗಳ ವಿರೋಧ ಸರಿಯಲ್ಲ : ಸುರೇಂದ್ರ ಕೌಲಗಿ


             ಗಾಂಧಿ ವಿಚಾರಗಳ ವಿರೋಧ ಸರಿಯಲ್ಲ : ಸುರೇಂದ್ರ ಕೌಲಗಿ
       ಮಂಡ್ಯ, ಅ.28- ಮಹಾತ್ಮ ಗಾಂಧೀಜಿಯವರ ತತ್ವಗಳು, ವಿಚಾರಗಳ ವಿರೋಧ ಸರಿಯಲ್ಲ ಎಂದು ಹೇಳಿದ ಗಾಂಧೀವಾದಿ ಹಾಗೂ ಜಮನಲಾಲ್ ಬಜಾಜ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಸುರೇಂದ್ರ ಕೌಲಗಿ ಅವರು, ಗಾಂಧಿ ವಿಚಾರಗಳನ್ನು ವಿರೋಧಿಸುವವರು ಮೊದಲು ಅವುಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
   ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಗಾಂಧಿ ಚಿಂತನೆಗಳ ಪ್ರಸ್ತುತತೆ’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಇಂದಿನ ಸಮಾಜದಲ್ಲಿ ಗಾಂಧಿ ವಿಚಾರಗಳು ಅಪ್ರಸ್ತುತವಾಗುತ್ತಿವೆ ಎಂಬ ಭಾವನೆ ಕೆಲವರಿಗೆ ಇದೆ. ಗಾಂಧೀಜಿಯವರು ಅಹಿಂಸೆ, ಸತ್ಯವನ್ನು ಪ್ರತಿಪಾದಿಸಿದರು. ಆದರೆ ಇಂದು ಅಸತ್ಯ ಹಾಗೂ ಹಿಂಸೆ ವ್ಯಾಪಕವಾಗಿರುವುದು ಅವರ ಈ ಭಾವನೆಗೆ ಕಾರಣ ಎಂದು ಹೇಳಿದರು.
    ಗಾಂಧಿ ಚಿಂತನೆಗಳ ಬಗ್ಗೆ ಮಾತನಾಡಿದಷ್ಟು ಅನುಷ್ಟಾನದ ಕಡೆಗೆ ಶ್ರಮವಹಿಸಿಲ್ಲ. ಆಡಳಿತಗಾರರು ಬದಲಾಗುತ್ತಾರೆ, ಸರ್ಕಾರಗಳು ಬದಲಾಗುತ್ತವೆ. ಆದರೆ ಗಾಂಧೀಜಿಯವರ ಚಿಂತನೆಗಳ ಅಳವಡಿಕೆಗೆ ಯಾರೂ ಮುಂದಾಗಿಲ್ಲ ಎಂದು ಹೇಳಿದರು.
   ಗಾಂಧೀಜಿಯವರು ಅಹಿಂಸೆ, ಸತ್ಯಾಗ್ರಹವನ್ನೇ ಅಸ್ತ್ರವಾಗಿ ಇಟ್ಟುಕೊಂಡು ಹೋರಾಟ ನಡೆಸಿದರು. ಉತ್ತಮವಾದುದನ್ನು ನಿರೀಕ್ಷಿಸುವಾಗ ನಾವು ಉತ್ತಮವಾದ ಹಾದಿಯಲ್ಲಿ ಸಾಗಬೇಕು ಎಂಬುದು ಗಾಂಧಿ ಪ್ರತಿಪಾದನೆ. ಹಾಗಾಗಿ ಅವರು ಬ್ರಿಟಿಷರಿಗೂ ಪ್ರಿಯರಾಗಿದ್ದರು ಎಂದು ಹೇಳಿದರು.
    ಗಾಂಧಿಯವರ ವಿಚಾರಗಳು ಅತ್ಯಂತ ಪ್ರಬಲವಾಗಿದ್ದು ಇದನ್ನು ಅನುಸರಿಸಬೇಕಾದರೆ ಧೈರ್ಯ ಅತಿ ಮುಖ್ಯವಾಗಿ ರುತ್ತದೆ. ಪ್ರತಿಯೊಬ್ಬರು ಧೈರ್ಯದಿಂದ ಗಾಂಧಿಯವರ ವಿಚಾರಗಳನ್ನು ಅನುಸರಿಸಿದರೆ ಉತ್ತಮ ಸಮಾಜ ಸøಷ್ಠಿಸಲು ಸಾಧ್ಯವಾಗುತ್ತದೆ ಎಂದರು.
    ಮಹಾತ್ಮಾ ಗಾಂಧೀಜಿಯವರು ಅಹಿಂಸಾ ಮಾರ್ಗದಲ್ಲಿ ನಡೆದು, ಅಹಿಂಸೆಯನ್ನೇ ದೇಶದಾದ್ಯಂತ ಸಾರಿದರು, ಪಾಕಿಸ್ತಾನದವರು ನಮ್ಮ ದೇಶವನ್ನು ಇಂದಿಗೂ ಶಸ್ತ್ರಾಸ್ತಗಳಿಂದ ಹಿಂಸಿಸುತ್ತಲೇ ಬಂದಿದ್ದಾರೆ. ಭಾರತದ ಕಳಸದಂತಿರುವ ಕಾಶ್ಮೀರವನ್ನು ಕಬಳಿಸಲು ಇಂದಿಗೂ ಅವರು ಶಸ್ತ್ರಾಸ್ತ್ರ ಗಳನ್ನು ಕೂಡಿ ಹಾಕಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ.
   ಚೀನಾದ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದಾಗ ಚೀನಾ-ಭಾರತ ಬಾಯಿ ಬಾಯಿ ಎಂದು ಹೇಳುತ್ತಾರೆ. ಆದರೆ ಚೀನಾಕ್ಕೆ ಹಿಂದುರುಗಿದೊಡನೆ ಅರುಣಾಚಲ ಪ್ರದೇಶ ನಮ್ಮದು ಎಂದು ಹೇಳಿ ಸೈನ್ಯವನ್ನು ಕಳುಹಿಸಿ ಹಿಂಸಾಚಾರಕ್ಕೆ ಮುಂದಾಗುತ್ತಾರೆ. ಸ್ವಾತಂತ್ಯ ಬಂದು ಇಷ್ಟು ವರ್ಷವಾದರೂ, ಇಂದಿಗೂ ಕೂಡ ದಲಿತರ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು ಹಿಂಸಾತ್ಮಕ ಕೃತ್ಯಗಳು ನಡೆಯುತ್ತಲೇ ಇವೆ ಎಂದು ಹೇಳಿದರು.
   ಗಾಂಧಿರವರ ಅಸ್ರøಶ್ಯತೆಯನ್ನು ತೊಲಗಿಸುವುದು, ಕೋಮು ಸೌಹಾರ್ದತೆಯನ್ನು ಕಾಪಾಡುವ ಕನಸು ನನಸಾಗಿಯೇ ಉಳಿದಿವೆ. ಖಾದಿಯ ಕೆಲಸವೆಂಬುದು ಒಂದು ವಿಚಾರ. ಸರಳ ಜೀವನದ ವಿಚಾರ, ಸ್ವಾವಲಂಬನೆಯ ವಿಚಾರ, ಆದರೆ ಸರ್ಕಾರ ಖಾದಿಗೆ ತದ್ವಿರುದ್ಧವಾಗಿ ಕಾಯ್ದೆಯನ್ನು ರೂಪಿಸುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳನ್ನು ವಹಿವಾಟಿಗೆ ಆಹ್ವಾನಿಸಿದ್ದು, ಪುನಃ ಭಾರತ ವನ್ನು ಪರಾವಲಂಬಿಯನ್ನಾಗಿಸುವತ್ತ ನಮ್ಮ ವ್ಯವಸ್ಥೆ ಸಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
   ನಮ್ಮಲ್ಲಿ ಗಾಂಧಿವಾದಿಗಳು, ಗಾಂಧೀಜಿಯವರ ಆಶಯಗಳನ್ನು ಇಟ್ಟುಕೊಂಡು ಸ್ಥಾಪನೆಯಾದ ಸಂಘ ಸಂಸ್ಥೆಗಳಿದ್ದರೂ ಅವುಗಳು ಹೆಚ್ಚು ಪ್ರಭಾವವನ್ನು ಬೀರುತ್ತಿಲ್ಲ. ಏಕೆಂದರೆ ಅವುಗಳು ಗಾಂಧೀಜಿರವರ ವಿಚಾರವನ್ನು ಅಳವಡಿಸಿಕೊಳ್ಳಲು ವಿಫಲವಾಗಿರುವುದೇ ಕಾರಣ ಎಂದರು.
    ಅಭಿವೃದ್ಧಿ ಬಗೆಗಿನ ಇಂದಿನ ಪರಿಕಲ್ಪನೆಯೇ ತಪ್ಪಾಗಿದೆ. ಅಭಿವೃದ್ದಿಗೆ ಸರಿಯಾದ ವ್ಯಾಖ್ಯಾನ ಯಾವ ಆಡಳಿತಗಾರರಿಗೂ ತಿಳಿದಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ನಮ್ಮ ಪ್ರಾಕೃತಿಕ ಸಂಪತ್ತನ್ನು ವಿದೇಶಿ ಕಂಪನಿಗಳಿಗೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ಭಾರತೀಯರೆಲ್ಲ ಒಂದಾಗಿ ಹೊರದೇಶದ ಕಂಪನಿಗಳಿಗೆ ಭಾರತ ಬಿಟ್ಟು ತೊಲಗಿ ಎಂದು ಚಳುವಳಿ ನಡೆಸಬೇಕಾದ ಸಂದರ್ಭ ಬರಬಹುದು ಎಂದು ನುಡಿದರು.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ. ಉಮಾದೇವಿ ವಹಿಸಿದ್ದರು, ಆಪ್ನಾದೇಶ್ ಕಾರ್ಯದರ್ಶಿಗಳಾದ ಡಾ. ಹೆಚ್.ಎಸ್.ಸುರೇಶ್ ಅವರು ಉಪನ್ಯಾಸ ನೀಡಿದರು.  ಪ್ರೊಬೇಷನರಿ ಐಎಎಸ್ ಅಧಿಕಾರಿ ಸ್ನೇಹಲ್, ವಾರ್ತಾಧಿಕಾರಿ ಆರ್. ರಾಜು ಉಪಸ್ಥಿತರಿದ್ದರು.
                                    ಅರ್ಹ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ
       ಪ್ರಸಕ್ತ ಸಾಲಿನ ರಾಜ್ಯದ ಕುಶಲಕರ್ಮಿಗಳಿಗೆ ವಿಶೇಷ ಗೃಹ ನಿರ್ಮಾಣ ಯೋಜನೆಯಡಿ ವೈಯಕ್ತಿಕ ಹಾಗೂ ಗುಂಪು ಮನೆ ನಿರ್ಮಾಣಕ್ಕಾಗಿ ಜಿಲ್ಲೆಯಲ್ಲಿರುವ ಕುಶಲಕರ್ಮಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿಗಳನ್ನು ಪಡೆಯುವ ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ಅವಧಿಯನ್ನು ದಿನಾಂಕ:25/10/2014 ರಿಂದ 10/11/2014ರವರೆಗೆ ವಿಸ್ತರಿಸಲಾಗಿದೆ. ಸ್ವಂತ ಖಾಲಿ ನಿವೇಶನ ಅಥವಾ ಗುಡಿಸಲು/ಶಿಥಿಲಗೊಂಡಿರುವ ಮನೆಯನ್ನು ಹೊಂದಿರುವ ಅರ್ಹ ಕುಶಲಕರ್ಮಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
     ಬಿದಿರು, ಬೆತ್ತದ ಕೆಲಸ, ಬಡಗಿ, ಕಮ್ಮಾರಿಕೆ, ಚರ್ಮಗಾರಿಕೆ, ಕರಕುಶಲ ವಸ್ತು ತಯಾರಿಕೆ (ಕರಕುಶಲದ ಹೆಸರು ನಮೂದಿಸುವುದು) ತೆಂಗಿನ ನಾರಿನ ಉತ್ಪನ್ನಗಳ ತಯಾರಿಕೆ, ಕುಂಬಾರಿಕೆ, ನೇಯ್ಗೆ, ಜನರಲ್ ಇಂಜಿನಿಯರಿಂಗ್, ಚಾಪೆ ಹೆಣೆಯುವುದು, ಬುಟ್ಟಿ ಹೆಣೆಯುವುದು, ಕಸೂತಿ, ಹಗ್ಗ ಮಾಡುವುದು (ಪ್ಲಾಸ್ಟಿಕ್ ಹೊರತುಪಡಿಸಿ), ಅಗರಬತ್ತಿ ತಯಾರಿಕೆ, ಜೀನ್ಸ್ ಹೊಲಿಗೆ, ಬೆಳ್ಳಿ ಬಂಗಾರ ಆಭರಣ ತಯಾರಿಕೆ, ನೂಲುಗಾರರು, ಕೌದಿ ಹೊಲಿಯುವುದು, ಕಲ್ಲಿನ ಕೆತ್ತನೆ, ಎತ್ತಿನ ಗಾಡಿ ತಯಾರಿಕೆ ವೃತ್ತಿಯಲ್ಲಿ ತೊಡಗಿರಬೇಕು. ವಸತಿ ಕಾರ್ಯಾಗಾರವನ್ನು ನಿರ್ಮಿಸಲು ಯೋಜನಾ ವೆಚ್ಚ 2.5 ಲಕ್ಷ ಆಗಿದ್ದು, ಇದರಲ್ಲಿ ರೂ.2,20,00/-ಗಳು ಸಹಾಯಧನವಾಗಿರುತ್ತದೆ, ಇನ್ನುಳಿದ ರೂ.30,000/-ಗಳನ್ನು ಫಲಾನುಭವಿಯು ಭರಿಸಬೇಕಾಗಿರುತ್ತದೆ. ಜಿಲ್ಲೆಯಲ್ಲಿರುವ 20 ಮಂದಿ ವೈಯ್ಯಕ್ತಿಕ ಕುಶಲಕರ್ಮಿಗಳಿಗೆ ಹಾಗೂ 20 ಮಂದಿ ಗುಂಪು ಕುಶಲ ಕರ್ಮಿಗಳಿಗೆ ಮಾತ್ರ ಅವಕಾಶವಿರುತ್ತದೆ. ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ಆಯಾ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳು ಹಾಗೂ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಡ್ಯ ಇವರುಗಳಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿ ಜೊತೆಗೆ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವೃತ್ತಿನಿರತ ಕುಶಲಕರ್ಮಿ ಪ್ರಮಾಣ ಪತ್ರ, ಸ್ವಂತ ನಿವೇಶನ ಹೊಂದಿರುವ ಬಗ್ಗೆ ದಾಖಲೆಗಳು, ಈಗಿರುವ ಗುಡಿಸಲು/ಶಿಥಿಲಗೊಂಡ ಮನೆಗಳ ಫೋಟೋಗಳನ್ನು ದಿನಾಂಕ:10/11/2014ರ ಒಳಗಡೆ ಆಯಾ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳು ಅಥವಾ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕಾರ್ಮೆಲ್ ಕಾನ್ವೆಂಟ್ ಎದುರು, ಸುಭಾಷ್‍ನಗರ, ಮಂಡ್ಯ ಇವರ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು-ಮೈಸೂರು ಚಲೋ ಚಳವಳಿ: ಉಸ್ತುವಾರಿ ಸಚಿವÀರಿಂದ ರಾಷ್ಟ್ರ ಧ್ವಜಾರೋಹಣ .



ಮೈಸೂರು ಚಲೋ ಚಳವಳಿ: ಉಸ್ತುವಾರಿ ಸಚಿವÀರಿಂದ ರಾಷ್ಟ್ರ ಧ್ವಜಾರೋಹಣ
    ಮೈಸೂರು,ಅ.28.ಮೈಸೂರು ಚಲೋ ಚಳವಳಿಯ ಕಾರ್ಯಕ್ರಮದ ಅಂಗವಾಗಿ   ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕ ಉದ್ಯಾನವನದಲ್ಲಿ (ಸುಬ್ಬರಾಯನಕೆರೆ) ಇಂದು ಮೈಸೂರು ಪ್ರಾಂತ್ಯದ ಹಲವು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. 
    ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಸ್ವಾತಂತ್ರ್ಯ ನಂತರ ಮೈಸೂರು ಸಂಸ್ಥಾನ ಸ್ವತಂತ್ರ ಭಾರತದಲ್ಲಿ ವಿಲೀನವಾಗದೇ ಇದ್ದಾಗ ಮೈಸೂರು ಚಲೋ ಚಳವಳಿ ನಡೆಸಲಾಗಿತು.್ತ ಮೈಸೂರು ಸಂಸ್ಥಾನವನ್ನು 1947ರ ಅಕ್ಟೋಬರ್ 24 ರಂದು ಸ್ವತಂತ್ರ ಭಾರತದಲ್ಲಿ ವಿಲೀನಗೊಳಿಸಲಾಯಿತು. ಇದರ ಸ್ಮರಣಿಗಾಗಿ ಮೈಸೂರು ಚಲೋ ಚಳವಳಿ ದಿನವನ್ನು ಇಂದು ಆಚರಿಸಲಾಗುತ್ತಿದ್ದೆ ಎಂದರು.
    ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಆರ್.ಲಿಂಗಪ್ಪ ಅವರು ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕ ಉದ್ಯಾನವನದ ಎದುರು ಕಲಾ ತಂಡಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನೊಳಗೊಂಡ ಮೈಸೂರು ಚಲೋ ಚಳವಳಿ ಮೆರವಣಿಗೆಗೆ ಚಾಲನೆ ನೀಡಿದರು.
     ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಶಾಸಕ ತನ್ವೀರ್ ಸೇಠ್, ಜಿಲ್ಲಾಧಿಕಾರಿ ಶಿಖಾ, ಮೈಸೂರು ನಗರ ಪೊಲೀಸ್ ಆಯುಕ್ತ  ಡಾ||ಎಂ.ಎ. ಸಲೀಮ್, ಅಪರ ಜಿಲ್ಲಾಧಿಕಾರಿ ಅರ್ಚನಾ, ತಹಸೀಲ್ದಾರ್ ನವೀನ್ ಜೋಸೆಫ್ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನವೆಂಬರ್ 3 ರಂದು ವಿಶ್ವವಿದ್ಯಾನಿಯಲದ ಸಭೆ
    ಮೈಸೂರು,ಅ.28.ಮೈಸೂರು ವಿಶ್ವವಿದ್ಯಾನಿಯಲದ ಎರಡನೇ ಸಾಮಾನ್ಯ ಸಭೆಯು ನವೆಂಬರ್ 3 ರಂದು ಬೆಳಗ್ಗೆ 11 ಗಂಟೆಗೆ ಕ್ರಾಫರ್ಡ್‍ಭವನದ ಶಿಕ್ಷಣ ಮಂಡಳಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
                             ಅಕ್ಟೋಬರ್ 29 ರಂದು ಸಮಾರೋಪ ಸಮಾರಂಭ
    ಮೈಸೂರು,ಅ.28.ಮೈಸೂರು ವಿಶ್ವವಿದ್ಯಾನಿಯಲದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ವತಿಯಿಂದ 2014-15ನೇ ಸಾಲಿನ ಅಂತರ ಕಾಲೇಜು ಸಾಹಿತ್ಯದ ಮತ್ತು ಸಾಂಸ್ಕøತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭವನ್ನು ಅಕ್ಟೋಬರ್ 29 ರಂದು ಸಂಜೆ 4 ಗಂಟೆಗೆ ಮಾನಸಗಂಗೋತ್ರಿಯ ಇ.ಎಂ.ಆರ್.ಸಿ. ಸಭಾಂಗಣದಲ್ಲಿ ನಡೆಯಲಿದೆ.
    ಮೈಸೂರು ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯ ಅಧಿಕಾರಿ ಎಂ.ಎನ್.ನಟರಾಜ್ ಅವರು ಸಮಾರೋಪ ಭಾಷಣ ಮಾಡುವರು. ಕುಲಸಚಿವ ಪ್ರೊ| ಸಿ. ಬಸವರಾಜು ಅವರು ಅಧ್ಯಕ್ಷತೆ ವಹಿಸುವರು. ಮೈಸೂರಿನ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
                                                          ಬದಲಿ ಮಾರ್ಗ ವ್ಯವಸ್ಥೆ
    ಮೈಸೂರು,ಅ.28.ಮೈಸೂರು ನಗರ ಕುವೆಂಪುನಗರದ ಪಂಚಮಂತ್ರ ರಸ್ತೆ ಮತ್ತು ಅನಿಕೇತನ ರಸ್ತೆ ಸಂಧಿಸುವ ಸ್ಥಳದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯ ಸಮಯದಲ್ಲಿ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಚಲಿಸಲು ತಾತ್ಕಾಲಿಕ ಅಧಿಸೂಚನೆ  ಹೊರಡಿಸಲಾಗಿದೆ.
    ಪಂಚಮಂತ್ರ ರಸ್ತೆಯಲ್ಲಿ ಅನಿಕೇತನ ರಸ್ತೆ ಸಂಧಿಸುವ ಜಂಕ್ಷನ್‍ನಿಂದ ದಕ್ಷಿಣಮುಖನಾಗಿ ಸಾಗುವ ವಾಹನಗಳು ಅನಿಕೇತನ ರಸ್ತೆಗೆ ಬಲತಿರುವು (ಪಶ್ಚಿಮಕ್ಕೆ) ಪಡೆದು ವಿಶ್ವಮಾನವ ಜೋಡಿ ರಸ್ತೆ ತಲುಪಿ ಪಡುವಣ ರಸ್ತೆ ಮೂಲಕ ಉದಯರವಿ ರಸ್ತೆ ತಲುಪಿ ಮುಂದೆ ಸಂಚರಿಸತಕ್ಕದ್ದು.
   ಪಂಚಮಂತ್ರ ರಸ್ತೆಯಲ್ಲಿ ಜ್ಞಾನಗಂಗಾ ಶಾಲೆಯ ದಕ್ಷಿಣ ಭಾಗದಲ್ಲಿರುವ ಕ್ರಾಸ್ ರಸ್ತೆ ಜಂಕ್ಷನ್‍ನಿಂದ ಉತ್ತರಕ್ಕೆ ಸಾಗುವ ಎಲ್ಲಾ ಮಾದರಿಯ ವಾಹನಗಳು ಕ್ರಾಸ್ ರಸ್ತೆಯ ಮೂಲಕ ಪಶ್ಚಿಮಾಭಿಮುಖವಾಗಿ ಸಾಗಿ ಚಿತ್ರಭಾನು ರಸ್ತೆ ತಲುಪಿ ಮುಂದೆ ಸಂಚರಿಸಬೇಕು ಹಾಗೂ ಪಂಚಮಂತ್ರ ರಸ್ತೆಯಲ್ಲಿ ಉದಯರವಿ ರಸ್ತೆಯಿಂದ ಉತ್ತರಮುಖನಾಗಿ ಸಾಗುತ್ತಿದ್ದ ನಗರ ಸಾರಿಗೆ ಬಸ್ಸುಗಳು ಉದಯರವಿ ರಸ್ತೆಯಿಂದ ಅಮ್ಮ ಬಿಲ್ಡಿಂಗ್ ಜಂಕ್ಷನ್ ಮೂಲಕ ಪಡುವಣ ರಸ್ತೆಯಲ್ಲಿ ಸಾಗಿ ವಿಶ್ವ ಮಾನವ ಜೋಡಿ ರಸ್ತೆಯ ಮೂಲಕ ಮುಂದೆ ಚಲಿಸಬೇಕೆಂದು ಪೊಲೀಸ್ ಆಯುಕ್ತ ಡಾ|| ಎಂ.ಎ. ಸಲೀಮ್ ಅವರು ಆದೇಶ ಹೊರಡಿಸಿದ್ದಾರೆ.
                          ಅಕ್ಟೋಬರ್ 31 ರಂದು ನಿರ್ಗಮನ ಪಥ ಸಂಚಲನ
    ಮೈಸೂರು,ಅ.28.ಕರ್ನಾಟಕ ಕಾರಾಗೃಹಗಳ ಇಲಾಖೆ ವತಿಯಿಂದ ಅಕ್ಟೋಬರ್ 31 ರಂದು ಬೆಳಗ್ಗೆ 9 ಗಂಟೆಗೆ ಸಂಸ್ಥೆಯ ಕವಾಯತು ಮೈದಾನದಲ್ಲಿ 42ನೇ ತಂಡದ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ನಡೆಯಲಿದೆ.
   ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಅಧ್ಯಕ್ಷತೆ ವಹಿಸುವರು. ಕರ್ನಾಟಕ ಕಾರಾಗೃಹಗಳ ಮಹಾನಿರೀಕ್ಷಕ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ. ಗಗನ್ ದೀಪ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಅಕ್ಟೋಬರ್ 29 ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ವಿಚಾರ ಗೋಷ್ಠಿ
    ಮೈಸೂರು,ಅ.28.ಮೈಸೂರು ವಿಶ್ವವಿದ್ಯಾನಿಯಲದ ಮನೋವಿಜ್ಞಾನ ಅಧ್ಯಯನ ವಿಭಾಗದ ವತಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ವಿಚಾರ ಗೋಷ್ಠಿಯನ್ನು ಅಕ್ಟೋಬರ್ 29 ರಂದು ಬೆಳಗ್ಗೆ 9-30 ಗಂಟೆಗೆ ಮನೋವಿಜ್ಞಾನ ಅಧ್ಯಯನದ ಸಭಾಂಗಣದಲ್ಲಿ ನಡೆಯಲಿದೆ.
    ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಸಿ. ಬಸವರಾಜು ಕಾರ್ಯಕ್ರಮ ಉದ್ಘಾಟಿಸುವರು. ಮನೋವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ಎನ್.ಎಲ್. ಶ್ರೀಮತಿ ಅವರು ಅಧ್ಯಕ್ಷತೆ ವಹಿಸುವರು.
    ಮಕ್ಕಳ ಮನೋವೈದ್ಯರು ಹಾಗೂ ವೈದ್ಯಕೀಯ ನಿರ್ದೇಶಕ ಡಾ| ರಾಮ್‍ಪ್ರಸಾದ್ ಅತ್ತೂರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
                          ಕಾಣೆಯಾಗಿರುವ ಹುಡುಗನ ಪತ್ತೆಗೆ ಮನವಿ
ಮೈಸೂರು,ಅ.28.ಮೈಸೂರಿನ ಭಾಗ್ಯ  ಎಂಬುವರ ಮಗ ಮಾ|| ರಾಜು ಅವರು ಅಕ್ಟೋಬರ್ 16 ರಿಂದ ಕಾಣೆಯಾಗಿದ್ದಾರೆ. ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಪ್ರಕರಣವನ್ನು ನೋಂದಾಯಿಸಿ ತನಿಖೆ ಕೈಗೊಳ್ಳಲಾಗಿದೆ.
 ಕಾಣೆಯಾಗಿರುವ ಹುಡುಗನ ಚಹರೆ ಇಂತಿದೆ:  4.5  ಅಡಿ ಎತ್ತರ, ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಬಲಗಡೆ ಕತ್ತಿನ ಹತ್ತಿರ ಹಾಗೂ ಬಲಗೈ ತೋಳಿನ ಮೇಲೆ ಸಣ್ಣ ಗಂಟುಗಳು ಇರುತ್ತದೆ. ಹಳದಿ ಬಣ್ಣದ ಟೀ ಶರ್ಟ್, ಕಾಫಿ ಕಲರ್ ನಿಕ್ಕರ್ ಧರಿಸಿರುತ್ತಾರೆ. ಕನ್ನಡ ಮಾತನಾಡುತ್ತಾರೆ.
 ಕಾಣೆಯಾಗಿರುವ ಹುಡುಗನ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಮೈಸೂರು ಉದಯಗಿರಿ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಪ್ರಕಟಣೆ ತಿಳಿಸಿದೆ.

   
ಕೃಷ್ಣರಾಜಪೇಟೆ. ಮಾನವನ ಅಮೂಲ್ಯವಾದ ಪ್ರಾಣವನ್ನು ಉಳಿಸಲು ರಕ್ತವು ಸಂಜೀವಿನಿಯಂತೆ ಕೆಲಸ ಮಾಡುವುದರಿಂದ ಯುವಜನರು ರಕ್ತದಾನವನ್ನು ಮಾಡುವ ಮೂಲಕ ಸಾವು-ಬದುಕುಗಳ ನಡುವೆ ಹೋರಾಟ ನಡೆಸುತ್ತಿರುವ ಲಕ್ಷಾಂತರ ಜೀವಗಳನ್ನು ಉಳಿಸಲು ಮುಂದಾಗಬೇಕು ಎಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ಕೃಷ್ಣ ಕರೆ ನೀಡಿದರು.
ಅವರು ಇಂದು ಪಟ್ಟಣದ ಲಯೆನಸ್ ಕ್ಲಬ್ ಆಫ್ ಹೇಮಾವತಿ ಸಂಸ್ಥೆಯು ಮಂಡ್ಯದ ವೈದ್ಯಕೀಯ ಕಾಲೇಜಿನ ರಕ್ತನಿಧಿ ಘಟಕ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ತಾಲೂಕು ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅಪಘಾತದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ವ್ಯಕ್ತಿಯ ಅಮೂಲ್ಯವಾದ ಪ್ರಾಣವನ್ನು ಕಾಪಾಡಲು ಇಲ್ಲವೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ವ್ಯಕ್ತಿಯ ಜೀವವನ್ನು ಉಳಿಸಲು ರಕ್ತವು ಅವಶ್ಯಕವಾಗಿ ಬೇಕಾಗಿರುವುದರಿಂದ ಆರೋಗ್ಯವಂತ ಯುವಜನರು ಪ್ರತೀ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ರಕ್ತದಾನ ಮಾಡುವ ಸೇವಾ ಕಾರ್ಯವು ನೊಂದ ವ್ಯಕ್ತಿಗಳ ಜೀವವನ್ನು ಉಳಿಸುವ ಅಮೂಲ್ಯವಾದ ಕೆಲಸಕ್ಕೆ ಸದ್ಭಳಕೆಯಾಗುವುದರಿಂದ ಯುವಜನರು ತಮ್ಮ ರಕ್ತಪರೀಕ್ಷೆಯನ್ನು ಮಾಡಿಸಿಕೊಂಡು ಕಡ್ಡಾಯವಾಗಿ ತಮ್ಮ ರಕ್ತದ ಗುಂಪು ಯಾವುದೆಂದು ತಿಳಿದಿರಬೇಕು. ಬೆಲೆಕಟ್ಟಲಾಗದ ಪ್ರಾಣವನ್ನು ಉಳಿಸುವ ಸಂಜೀವಿನಿಯಾದ ರಕ್ತವು ಜೀವಧಾರೆಯಾಗಿರುವುದರಿಂದ ದಾನದಾನಗಳಲ್ಲಿಯೇ ರಕ್ತದಾನವು ಶ್ರೇಷ್ಠವೆಂದು ತಿಳಿದು ಸ್ವಯಂ ಪ್ರೇರಣೆಯಿಂದ ರಕ್ತದಾನ ಶಿಬಿರದಲ್ಲಿ ಭಾಗವಹಿಸಬೇಕು ಎಂದು ಪ್ರಾಂಶುಪಾಲ ಕೃಷ್ಣ ಮನವಿ ಮಾಡಿದರು.
ಲಯೆನಸ್ ಕ್ಲಬ್ ಆಫ್ ಹೇಮಾವತಿ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಮಂಜುನಾಥ್ ಮಾತನಾಡಿ ಲಯೆನಸ್ ಸೇವಾ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಸಾಮಾನ್ಯರಲ್ಲಿ ಅರಿವಿನ ಜಾಗೃತಿಯನ್ನು ಮೂಡಿಸಿ ಸೇವೆಯ ಮಹತ್ವದ ಬಗ್ಗೆ ಯುವಜನರು ಸ್ವಯಂಪ್ರೇರಣೆಯಿಂದ ಭಾಗವಹಿಸುವಂತೆ ಮಾಡುತ್ತಿದೆ. ಹೆಣ್ಣು ಮಕ್ಕಳು ಸುಭದ್ರವಾದ ರಾಷ್ಟ್ರದ ನಿರ್ಮಾಣದಲ್ಲಿ ತಾವೂ ಭಾಗಿಯಾಗಬಲ್ಲರು ಎಂಬ ಸತ್ಯವನ್ನು ಅನಾವರಣ ಮಾಡುತ್ತಿದೆ. ಬಡವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಧನಸಹಾಯ, ನೋಟ್ ಪುಸ್ತಕಗಳು ಹಾಗೂ ಲ್ಯಾಪ್‍ಟಾಪ್’ಗಳನ್ನು ವಿತರಣೆ ಮಾಡುತ್ತಿದೆ. ಬಡ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಿ ಜೀವನ ನಡೆಸಲು ಆಸರೆಯಾಗಿದೆ ಎಂದು ಪೂರ್ಣಿಮ ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ.ಸತೀಶ್, ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹೆಚ್.ಪಿ.ಸೋಮಣ್ಣ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್, ಲಯೆನಸ್ ಸಂಸ್ಥೆಯ ಪದಾಧಿಕಾರಿಗಳಾದ ಮುಬೀನಾಸುರೇಶ್, ಸುಚೇತಸೋಮಶೇಖರ್, ಪರಿಮಳನಾಗರಾಜ್, ನಾಗರತ್ನಸಿದ್ಧಪ್ಪಶೆಟ್ಟಿ, ಲತಾಮೋಹನ್, ಸವಿತರಾಜಶೇಖರ್, ಸಾಕಮ್ಮ, ವಿನೋದರಾಮಕೃಷ್ಣೇಗೌಡ, ಲಯೆನಸ್ ಕೌನ್ಸಿಲ್ ಸದಸ್ಯೆ ಗಿರಿಜಾ ನಂಜಪ್ಪಗೌಡ, ಲಯನ್ಸ್ ಇಬ್ಬನಿ ಸಂಸ್ಥೆಯ ಅಧ್ಯಕ್ಷೆ ಸುಧಾಮಣಿ, ಮಂಡ್ಯದ ರಕ್ತನಿಧಿ ಕೇಂದ್ರದ ಮುಖ್ಯವೈದ್ಯೆ ಡಾ.ಶೋಭ, ಪುರಸಭೆಯ ಮಾಜಿಅಧ್ಯಕ್ಷೆ ಶಕುಂತಲಾ, ಪುರಸಭೆ ಸದಸ್ಯೆ ಸೌಭಾಗ್ಯ ಅಶೋಕ್, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಯಶೇಖರ್, ಡಾ.ಕೃಷ್ಣಮೂರ್ತಿ, ಐಸಿಟಿಸಿ ಕೌನ್ಸಿಲರ್ ಸತೀಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ವೆಂಕಟಲಕ್ಷ್ಮೀ ಮತ್ತಿತರರು ಭಾಗವಹಿಸಿದ್ದರು.



ಕೆ.ಆರ್.ಪೇಟೆ-ಪಾಂಡವಪುರ ಸುದ್ದಿಗಳು.

ಕೃಷ್ಣರಾಜಪೇಟೆ. ಇದೇ ತಿಂಗಳ 31ರಂದು ಮಧ್ಯಾಹ್ನ 3ಗಂಟೆಗೆ ತಾಲೂಕಿನ ಬೂಕನಕೆರೆ ಗ್ರಾಮದಲ್ಲಿ ಹೋಬಳಿ ಮಟ್ಟದ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ರಾಜ್ಯದ ಕಂದಾಯ ಸಚಿವರಾದ ವಿ.ಶ್ರೀನಿವಾಸಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಶಾಸಕ ಕೆ.ಸಿ.ನಾರಾಯಣಗೌಡ ತಿಳಿಸಿದರು.
ಅವರು ಇಂದು ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕನಕ ಜಯಂತಿ ಆಚರಣೆಯ ಸಂಬಂಧವಾಗಿ ತಾಲೂಕು ಆಡಳಿತವು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಮುಖಂಡರ ಸಭೆಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಬೂಕನಕೆರೆ ಹೋಬಳಿಯ 16 ಕಂದಾಯ ವೃತ್ತಗಳ ವ್ಯಾಪ್ತಿಯ 2ಸಾವಿರ ಫಲಾನುಭವಿಗಳ ಪಹಣಿ ತಿದ್ದುಡಿಯನ್ನು ಯಶಸ್ವಿಯಾಗಿ ಮಾಡಲಾಗಿದ್ದು ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಈ ತಿದ್ದುಪಡಿಯಾಗಿರುವ ಪಹಣಿಗಳು ಹಾಗೂ ವಿವಿಧ ಸೌಲಭ್ಯಗಳನ್ನು ರೈತ ಬಂಧುಗಳಿಗೆ ಕಂದಾಯ ಸಚಿವರು ವಿತರಿಸುವ ಈ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್, ಮೈಸೂರು ವಿಭಾಗಾಧಿಕಾರಿ ವಿ.ರಶ್ಮೀ ಜಿಲ್ಲಾಧಿಕಾರಿ ಡಾ.ಅಜಯ್‍ನಾಗಭೂಷಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿಣಿಸಿಂಧೂರಿ, ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ರೈತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಶಾಸಕ ನಾರಾಯಣಗೌಡ ಮನವಿ ಮಾಡಿದರು.
ಕನಕಜಯಂತಿ ಸಾಧಕರಿಗೆ ಸನ್ಮಾನ: ನವೆಂಬರ್ 8ರಂದು ತಾಲೂಕು ಆಡಳಿತದ ನೇತೃತ್ವದಲ್ಲಿ ನಡೆಯಲಿರುವ ಕನಕ ಜಯಂತಿ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿರುವ ಐವರು ಸಾಧಕರನ್ನು ಸನ್ಮಾನಿಸುವುದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲಂಕೃತ ವಾಹನದಲ್ಲಿ ದಾಸಶ್ರೇಷ್ಠರಾದ ಭಕ್ತ ಕನಕದಾಸರ ಭಾವಚಿತ್ರವನ್ನು ಜಾನಪದ ಕಲಾ ತಂಡಗಳ ಅದ್ದೂರಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಗುವುದು. ವಿದ್ವಾಂಸರಿಂದ ಕನಕದಾಸರನ್ನು ಕುರಿತು ವಿಶೇಷ ಉಪನ್ಯಾಸವನ್ನು ಕೊಡಿಸಲಾಗುವುದು. ಪಕ್ಷಾತೀತವಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗಳಿಸಿಕೊಡಬೇಕು ಎಂದು ಶಾಸಕ ನಾರಾಯಣಗೌಡ ಮನವಿ ಮಾಡಿದರು. ತಹಶೀಲ್ದಾರ್ ಹೆಚ್.ಎಲ್.ಶಿವರಾಮ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿ.ಪಂ ಸದಸ್ಯ ವಿ.ಮಂಜೇಗೌಡ, ಪುರಸಭೆ ಸದಸ್ಯರಾದ ಕೆ.ವಿನೋದ್‍ಕುಮಾರ್, ಡಿ.ಪ್ರೇಮಕುಮಾರ್, ಆಟೋಕುಮಾರ್, ಕೆ.ಬಿ.ನಂದೀಶ್,  ನಂಜುಂಡಯ್ಯ, ಕೆ.ಕೆ.ಪುರುಷೋತ್ತಮ್, ಮುಖಂಡರಾದ ಎಲ್.ಪಿ.ನಂಜಪ್ಪ, ಕೆ.ಶ್ರೀನಿವಾಸ್, ಸಂತೇಬಾಚಹಳ್ಳಿ ಮರೀಗೌಡ, ಮಾದಾಪುರ ಚಂದ್ರಶೇಖರ್, ಮಲ್ಲೇನಹಳ್ಳೀ ಮೋಹನ್, ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಟಿ.ಎಂ.ಪುನೀತ್, ತಾಲೂಕು ಸಮಾಜಕಲ್ಯಾಣಾಧಿಕಾರಿ ಸುಧಾಮಣಿ, ಬಿಸಿಎಂ ಅಧಿಕಾರಿ ನಂದಕುಮಾರ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಕಛೇರಿಯ ಸುತ್ತಮುತ್ತಲಿನ ಪರಿಸರವನ್ನೂ  ಚೊಕ್ಕಟವಾಗಿಟ್ಟುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಕರೆ ನೀಡಿದರು.


ಪಾಂಡವಪುರ, ಅ. 28 : ಆಯಾಯಾ ಸರ್ಕಾರಿ ಇಲಾಖೆಯ ಅಧಿಕಾರಿ ವರ್ಗ ಹಾಗೂ ನೌಕರರ ವರ್ಗ ತಮ್ಮ ಇಲಾಖೆಯನ್ನು ಸ್ವಚ್ಛಗೊಳಿಸುವ ಮೂಲಕ ಕಸ ಮುಕ್ತವನ್ನಾಗಿ ಮಾಡುವ ಜತೆಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನೂ ಬಹಳ ಚೊಕ್ಕಟವಾಗಿಟ್ಟುಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಕರೆ ನೀಡಿದರು.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಕಂದಾಯ ಇಲಾಖೆ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ `ಸ್ವಚ್ಛತಾ ಆಂದೋಲನಾ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾರೇ ಆಗಲೀ ತಮ್ಮ ಭೌತಿಕ ಪರಿಸರವನ್ನು ಮೊದಲು ಸ್ವಚ್ಛವಾಗಿಟ್ಟುಕೊಳ್ಳಬೇಕು. ಗ್ರಾಮಗಳನ್ನು ಸ್ವಚ್ಛಗೊಳಿಸುವ ಮೊದಲು ಸರ್ಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ವರ್ಗ ತಮ್ಮ ಇಲಾಖೆಯಲ್ಲಿ ಕಸ ಬೀಳದಂತೆ ಎಚ್ಚರ ವಹಿಸಬೇಕು. ಕಿಟಕಿಗಳನ್ನು ಒರೆಸುವುದು, ಟೇಬಲ್‍ಗಳನ್ನು ಸ್ವಚ್ಛಗೊಳಿಸುವುದು, ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಬೇರೆಡೆಗೆ ವಿಲೇವಾರಿ ಮಾಡುವುದು, ಗೋಡೆಗಳ ಮೇಲೆ ತುಂಬಿಕೊಂಡಿರುವ ಜೇಡವನ್ನು ತೆಗೆಯುವುದು, ಜತೆಗೆ ಮೇಲ್ಛಾವಣಿಯಲ್ಲಿ ಕಟ್ಟಿಕೊಂಡಿರುವಂತಹ ಧೂಳುಗಳನ್ನು ತೆಗೆಯುವ ಮೂಲಕ ಕಾಲ ಕಾಲಕ್ಕೆ ತಮ್ಮ ಇಲಾಖೆಗಳನ್ನು ಶುಚಿಗೊಳಿಸಬೇಕು ಎಂದು ಸಲಹೆ ನೀಡಿದರು.
ಇಡೀ ತಾಲೂಕಿನಲ್ಲಿ ಪ್ರಪ್ರಥಮವಾಗಿ ಕಂದಾಯ ಇಲಾಖೆಯಿಂದಲೇ ಸ್ವಚ್ಛತೆಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲು ಮುಂದಾಗಿದ್ದು, ಪ್ರತಿ 15 ದಿನಗಳಿಗೊಮ್ಮೆ ಕಂದಾಯ ನೌಕರರು ಇಲಾಖೆಯನ್ನು ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ. ಜತೆಗೆ ಕಾಫಿ, ಟೀ, ತಿಂಡಿ ಇತರೆ ಪದಾರ್ಥಗಳನ್ನು ಕಂದಾಯ ಇಲಾಖೆಯ ನೌಕರರು ಒಳಗಡೆಗೆ ತರುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಯಾರಾದರೂ ಕಾಫಿ, ಟೀ, ತಿಂಡಿಯನ್ನು ಕಚೇರಿ ಒಳಗೆ ತೆಗೆದುಕೊಂಡು ಬಂದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಮಹಾತ್ಮಾಗಾಂಧೀಜಿ ಅವರ `ಗ್ರಾಮ ಸ್ವರಾಜ್ಯ’ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ಅವರು `ಸ್ವಚ್ಛ ಗ್ರಾಮ, ಸ್ವಚ್ಛ ಭಾರತ’ ಅಭಿಯಾನ ಯೋಜನೆಗೆ ಚಾಲನೆ ನೀಡಿದ್ದಾರೆ. ಹೀಗಾಗಿ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಪರಿಸರ ಪ್ರೇಮವನ್ನು ಮೆರೆಯಬೇಕು. ಪರಿಸರ ಚೆನ್ನಾಗಿದ್ದರೆ ನಮ್ಮ ಆರೋಗ್ಯ, ಸಮುದಾಯದ ಆರೋಗ್ಯವು ಉತ್ತಮವಾಗಿರುತ್ತದೆ ಎಂದರು.
ಕಡತಗಳ ಯಜ್ಞಕ್ಕೆ ಶೀಘ್ರ ಚಾಲನೆ:
ಕಂದಾಯ ಇಲಾಖೆಯಲ್ಲಿನ ಕಡತಗಳನ್ನು ಬಹಳ ಅಚ್ಚುಕಟ್ಟಾಗಿ ಜೋಡಿಸಲು ಅನುಕೂಲವಾಗುವಂತೆ ಅತಿ ಶೀಘ್ರದಲ್ಲಿಯೇ `ಕಡತಗಳ ಯಜ್ಞ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇದೇ ಸಂದರ್ಭದಲ್ಲಿ ತಿಳಿಸಿದರು.
ತಹಶೀಲ್ದಾರ್ ಡಿ.ಎಸ್.ಶಿವಕುಮಾರಸ್ವಾಮಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಉಪ ತಹಶೀಲ್ದಾರ್ ಸುಧಾಕರ್, ಶಿರಸ್ತೇದಾರ್ ಕೀರ್ತನಾ, ರೆವಿನ್ಯೂ ಇನ್ಸ್‍ಪೆಕ್ಟರ್‍ಗಳಾದ ಪ್ರಸನ್ನ, ಲಕ್ಷ್ಮೀಕಾಂತ್, ದಿನೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಚ್.ಬಿ.ನಾಗರಾಜಯ್ಯ, ಮೇಲ್ವಿಚಾರಕ ಕಾಳಯ್ಯ, ಇಂಜಿನಿಯರ್ ಚೌಡಪ್ಪ, ಸಮುದಾಯ ಸಂಘಟನಾಧಿಕಾರಿ ಪುಟ್ಟಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಳಿಕ ಮಿನಿ ವಿಧಾನಸೌಧ ಆವರಣದಲ್ಲಿದ್ದ ಕಸವನ್ನು ಬೇರೆಡೆಗೆ ವಿಲೇವಾರಿ ಮಾಡುವ ಮೂಲಕ ಸ್ವಚ್ಛಗೊಳಿಸಲಾಯಿತು. ಜತೆಗೆ ಮಿನಿ ವಿಧಾನಸೌಧದ ಪರಿಸರಕ್ಕೆ ಅಡಚಣೆಯಾಗಿದ್ದ ಮರದ ರಂಬೆ-ಕೊಂಬೆಗಳನ್ನು ಕಡಿದು ಇಡೀ ಮಿನಿ ವಿಧಾನಸೌಧವನ್ನೇ ಶುಚಿಗೊಳಿಸಲಾಯಿತು.

               ಅನಾರೋಗ್ಯದ ಭಿತ್ತುವ ಆಸ್ಪತ್ರೆ : ಎಸಿ ಬೇಸರ


ಪಾಂಡವಪುರ : ಪಾಂಡವಪುರ ಪಟ್ಟಣದಲ್ಲಿರುವ ಉಪ ವಿಭಾಗೀಯ ಆಸ್ಪತ್ರೆಯು ಆರೋಗ್ಯ ತಪಾಸಣೆ ಮಾಡುವ ಕೇಂದ್ರದ ಬದಲಿಗೆ ಅನಾರೋಗ್ಯ ಭಿತ್ತುವ ಕೇಂದ್ರವಾಗಿ ಪರಿಣಮಿಸಿದೆ ಎಂದು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಬೇಸರ ವ್ಯಕ್ತಪಡಿಸಿದರು.
ಮಿನಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಸ್ವಚ್ಛತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದ ಅವರು, ಆಸ್ಪತ್ರೆಯ ಹೊರ ಆವರಣದಲ್ಲಿ ಪಾರ್ಥೇನಿಯಂ ಗಿಡಗಳು ಯಥೇಚ್ಚವಾಗಿ ಬೆಳೆದಿದ್ದು, ರೋಗಿಗಳು ತಪಾಸಣೆ ಹೋಗಲೇಬಾರದು ಎನ್ನುವ ಮಟ್ಟಿಗೆ ಆಸ್ಪತ್ರೆಯ ಪರಿಸರ ಸಂಪೂರ್ಣ ಕಲುಷಿತಗೊಂಡಿದೆ. ಇನ್ನು ಆಸ್ಪತ್ರೆಯ ಹೊರ ಆವರಣಕ್ಕೆ ಹೊಂದಿಕೊಂಡಂತಿರುವ ಮಹಿಳಾ ವೈದ್ಯರ ವಸತಿ ಗೃಹದ ಆವರಣದಲ್ಲಿ ಸ್ವಲ್ಪವೂ ಅಚ್ಚಕಟ್ಟು ಎನ್ನುವ ಮಾತೇ ಇಲ್ಲ. ವಸತಿ ಕೇಂದ್ರದ ಕಾಂಪೌಂಡ್ ಸುತ್ತಲೂ ಗಿಡ-ಗಂಟೆಗಳು ಬೆಳೆದುನಿಂತಿವೆ. ಇಷ್ಟಾದರೂ ಆಸ್ಪತ್ರೆಯ ಮುಖ್ಯ ಆಡಳಿತಾ ವೈದ್ಯಾಧಿಕಾರಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ನಾಗರಾಜು ಅವರು, ತಾವು ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿದಂತೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿಕೊಡುತ್ತೇನೆ. ತಕ್ಷಣವೇ ಆಸ್ಪತ್ರೆಯ ಸ್ವಚ್ಛತೆಗೆ ಮುಂದಾಗುವಂತೆ ಪ.ಪಂ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.




Saturday 25 October 2014

ವಿಜಯನಗರ ಪೊಲೀಸರಿಂದ ಇಬ್ಬರು ಮೊಬೈಲ್ ಕಳ್ಳರ ಬಂಧನ

     
                ವಿಜಯನಗರ ಪೊಲೀಸರಿಂದ ಇಬ್ಬರು ಮೊಬೈಲ್ ಕಳ್ಳರ ಬಂಧನ                     ರೂ: 2,00,000/- ಬೆಲೆ ಬಾಳುವ 07 ವಿವಿಧ ಕಂಪನಿಯ ದುಬಾರಿ ಮೊಬೈಲ್ ಫೋನ್‍ಗಳ ವಶ.
     
         ದಿನಾಂಕ: 19/10/2014 ರಂದು ವಿಜಯನಗರ ಪೊಲೀಸ್ ಠಾಣಾ ಸರಹದ್ದಿನ ಹೂಟಗಳ್ಳಿಯ ಮಂಜುನಾಥ ರವರ ಮೊಬೈಲ್ ಫೋನ್ ಕಳ್ಳತನವಾಗಿದ್ದು, ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  ಈ ಪ್ರಕರಣದ ಪತ್ತೆಗೆ ಸಂಬಂಧಪಟ್ಟಂತೆ ಬಾತ್ಮಿದಾರರ ಮಾಹಿತಿ ದಿನಾಂಕ: 23/10/2014 ರಂದು ವಿಜಯನಗರದ ತ್ರಿನೇತ್ರ ಸರ್ಕಲ್ ಬಳಿ-

1) ತಮ್ಮಯ್ಯ ಬಿನ್ ತಿಮ್ಮಾಬೋವಿ, 30 ವರ್ಷ, ಲಕ್ಕವಳ್ಳಿ ಭದ್ರವಾತಿ ತಾ. ಶಿವಮೊಗ್ಗ ಜಿಲ್ಲೆ
2) ಹರೀಶ್ ಬಿನ್ ದುರ್ಗಪ್ಪ 21 ವರ್ಷ # 18, ಸುಭಾಷ್‍ನಗರ, ಕಡೂರು ತಾ. ಚಿಕ್ಕಮಗಳೂರು ಜಿಲ್ಲೆ

ಎಂಬುವವರುಗಳನ್ನು  ವಶಕ್ಕೆ ಪಡೆದು  ವಿಚಾರಣೆ ಮಾಡಿದಾಗ ಆರೋಪಿಗಳು ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆ, ದೇವರಾಜ ಪೊಲೀಸ್ ಠಾಣೆ ಹಾಗೂ ಕೆ.ಆರ್ ಪೊಲೀಸ್ ಠಾಣೆ, ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆ ಮತ್ತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ  ದುಬಾರಿ ಬೆಲೆಯ ವಿವಿಧ ಕಂಪನಿಯ 07 ಮೊಬೈಲ್ ಫೋನ್‍ಗಳನ್ನ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಗಳಿಂದ ಒಟ್ಟು 2,00,000/- ಬೆಲೆಯ ಒಟ್ಟು  7 ಮೊಬೈಲ್ ಪೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು  ಮೈಸೂರು ನಗರದ ಪೊಲೀಸ್ ಆಯುಕ್ತರ ಕಛೇರ ಸಾರ್ವಜನಿಕ ಸಂಪರ್ಕ ಅಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ಮೇಲ್ಕಂಡ      ಪತ್ತೆ      ಕಾರ್ಯವನ್ನು     ಮೈಸೂರು ನಗರದ ಅಪರಾಧ ವಿಭಾಗದ ಡಿ.ಸಿ.ಪಿ. ರವರಾದ ಶ್ರೀ.   ಎಂ.ಎಂ. ಮಹದೇವಯ್ಯನವರು  ಮತ್ತು ಎ.ಸಿ.ಪಿ. ನರಸಿಂಹರಾಜ ವಿಭಾಗ ರವರಾದ ಎ.ಕೆ. ಸುರೇಶ್‍ರವರುಗಳ ಮಾರ್ಗದರ್ಶನದಲ್ಲಿ ವಿಜಯನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸಿ.ವಿ. ರವಿ, ಸಬ್‍ಇನ್ಸ್‍ಪೆಕ್ಟರ್ ರಘುಪ್ರಸಾದ್  ಮತ್ತು ಸಿಬ್ಬಂದಿಗಳಾದ  ಕೃಷ್ಣ, ದಿವಾಕರ, ಚನ್ನಬಸವಯ್ಯ, ಸೋಮಶೆಟ್ಟಿ, ಸಾಗರ್, ಸುರೇಶ್, ಈರಣ್ಣ ಮತ್ತು ಮಹೇಶ್ ನೇತೃತ್ವದ ಅಪರಾಧ ವಿಭಾಗದ ತಂಡವು ಪತ್ತೆ ಕಾರ್ಯದಲ್ಲಿ ಶ್ರಮಿಸಿರುತ್ತಾರೆ.   
      ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ: ಎಂ.ಎ. ಸಲೀಂ, ಐ.ಪಿ.ಎಸ್. ರವರು ಶ್ಲಾಫಿಸಿರುತ್ತಾರೆ.


ಬೃಹತ್ ಧ್ವನಿ ಬೆಳಕು ಕಾರ್ಯಕ್ರಮ


                    ಬೃಹತ್ ಧ್ವನಿ ಬೆಳಕು ಕಾರ್ಯಕ್ರಮ
                                 ನವೆಂಬರ್ 7 ರಿಂದ ಮೈಸೂರಿನಲ್ಲಿ ಕರ್ನಾಟಕ ವೈಭವ
    ಮೈಸೂರು,ಅ.25.ಕರ್ನಾಟಕದ ಸಾಂಸ್ಕøತಿಕ ವೈಭವವನ್ನು ಬಿಂಬಿಸುವ ಬೃಹತ್ ಧ್ವನಿ ಬೆಳಕು ಕಾರ್ಯಕ್ರಮ ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನದಲ್ಲಿ ನವೆಂಬರ್ 7 ರಿಂದ 14 ರವರೆಗೆ ಅನಾವರಣಗೊಳ್ಳಲಿದೆ.  
    ಕನ್ನಡ ರಾಜ್ಯೋತ್ಸವದ ಅಂಗವಾಗಿ  ಹಾಗೂ ಪ್ರವಾಸಿಗರನ್ನು ಮೈಸೂರಿನತ್ತ ಸೆಳೆಯುವ ಪ್ರಯತ್ನವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಸಂಗೀತ ಮತ್ತು ನಾಟಕ ವಿಭಾಗ ಈ ಆಕರ್ಷಕ ಧ್ವನಿ ಬೆಳಕು ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದೆ.
    ಜಿಲ್ಲಾಡಳಿತ ವತಿಯಿಂದ ಕೈಗೊಳ್ಳಬೇಕಾದ ಸಿದ್ದತಾ ಕಾರ್ಯಕ್ರಮಗಳ ಬಗ್ಗೆ ಚರ್ಚೆಸಲು ಜಿಲ್ಲಾಧಿಕಾರಿ ಸಿ.ಶಿಖಾ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಏರ್ಪಡಿಸುವ ಬಗ್ಗೆ ವಿವಿಧ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
    ಕಾರ್ಯಕ್ರಮಕ್ಕೆ ಅಗತ್ಯವಿರುವ ಕಲಾವಿದರನ್ನು ಸ್ಥಳೀಯವಾಗಿಯೇ ಆಯ್ಕೆ ಮಾಡಿಕೊಳ್ಳಲಿದ್ದು, ನೇರ ಸಂದರ್ಶನದ ಮೂಲಕ ಕಲಾವಿರದನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಕಲಾವಿದರ ವಾಸ್ತವ್ಯ, ಸಾರಿಗೆ ವ್ಯವಸ್ಥೆ, ವೇದಿಕೆ ವ್ಯವಸ್ಥೆ, ಉದ್ಘಾಟನಾ ಸಮಾರಂಭದ ವ್ಯವಸ್ಥೆಗಳ ಬಗ್ಗೆ ಸಭೆಯಲ್ಲಿ ಚರ್ಚೆಸಲಾಯಿತು. ಯಾವುದೇ ಲೋಪಕ್ಕೆ ಅವಕಾಶವಾಗದ ರೀತಿಯಲ್ಲಿ ಸಿದ್ದತೆ ಕೈಗೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.
    ಮೈದಾನಕ್ಕೆ ಅಗತ್ಯವಿರುವ ಬ್ಯಾರಿಕೇಡಿಂಗ್ ಕಾರ್ಯ ಕೈಗೊಳ್ಳಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಲಾಯಿತು. ವೇದಿಕೆ, ಪ್ರಸಾದನ ಕೊಠಡಿ ನಿರ್ಮಾಣ ಬಗ್ಗೆ ಕ್ರಮವಹಿಸಲು ಲೋಕೋಪಯೋಗಿ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
    ಉದ್ಘಾಟನಾ ಸಮಾರಂಭದಲ್ಲಿ ನಾಡಗೀತೆ, ವೇದಿಕೆ ಕಾರ್ಯಕ್ರಮಗಳ ಸಮನ್ವಯ ನಿರ್ವಹಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು ಒಟ್ಟಾರೆ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
    ಕಾರ್ಯಕ್ರಮ ನಡೆಯುವ ಅವಧಿಯಲ್ಲಿ ತಡೆ ರಹಿತ ವಿದ್ಯುತ್ ಪೂರೈಸುವಂತೆ ಚೆಸ್ಕಾಂ ಅಧಿಕಾರಿಗಳಿಗೆ  ತಿಳಿಸಲಾಯಿತು.
     ಸಭೆಯಲ್ಲಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು, ಮುಡಾ ಆಯುಕ್ತ ಪಾಲಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.
     ಕರ್ನಾಟಕ ವೈಭವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಸುಮಾರು 80 ಕಲಾವಿದರು, ನಟ, ನಟಿಯರು, ಬಾಲಕಲಾವಿದರು, ನೃತ್ಯಗಾತಿಯರು ಅವಶ್ಯಕತೆ ಇದ್ದು, ಅಕ್ಟೋಬರ್ 30 ರಂದು ಬೆಳಗ್ಗೆ 10-30ಕ್ಕೆ ನಗರದ ರೈಲ್ವೆ ನಿಲ್ದಾಣದ ಸಮೀಪ ದಾಸಪ್ಪವೃತ್ತ, ಧನ್ವಂತ್ರಿರಸ್ತೆಯಲ್ಲಿರುವ ವಾರ್ತಾಭವನದಲ್ಲಿ ಕಲಾವಿದರ ಆಯ್ಕೆ ನಡೆಯಲಿದೆ.
   ಸ್ಥಳೀಯ ಹಾಗೂ ಮೈಸೂರು ಸುತ್ತಮುತ್ತಲಿನ ಆಸಕ್ತರು ಆಯ್ಕೆಗಾಗಿ ಹಾಜರಾಗಬಹುದಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಫಿಸುವ ಕಲಾವಿದರು ದೃಢೀಕರಿಸಿದ ಮೂರು ಸ್ಟ್ಯಾಂಪ್ ಅಳತೆಯ ಭಾವಚಿತ್ರದೊಡನೆ ವೈಯಕ್ತಿಕ ವಿವರಗಳನ್ನೊಳಗೊಂಡ ಅರ್ಜಿಯೊಂದಿಗೆ ಆಯ್ಕೆಯ ಸಂದರ್ಶನಕ್ಕೆ ಹಾಜರಾಗಬೇಕಾಗಿದೆ.
    ಅರ್ಜಿಗಳು ಪ್ರಾದೇಶಿಕ ಉಪನಿರ್ದೇಶಕರು, ಸಂಗೀತ ನಾಟಕ ವಿಭಾಗ, ಬೆಂಗಳೂರು ಮುಕ್ಕಾಂ ಮೈಸೂರು ಇವರ ಹೆಸರಿನಲ್ಲಿರಬೇಕು. ಆಯ್ಕೆಯಾದ ಕಲಾವಿದರಿಗೆ ನಿಗಧಿತ ಗೌರವ ಧನ ಹಾಗೂ ಪ್ರಮಾಣಪತ್ರ ನೀಡಲಾಗುವುದು. ಆಯ್ಕೆದಾರರ ನಿರ್ಧಾರವೇ ಅಂತಿಮವಾಗಿರುತ್ತದೆ.
                  ಟಿ.ನರಸೀಪುರ ತಾಲೂಕಿನಲ್ಲಿ ಗ್ರಾಮಸಂಪರ್ಕ ಕಾರ್ಯಕ್ರಮ
ಮೈಸೂರು,ಅ.25.ಟಿ.ನರಸೀಪುರ ತಾಲೂಕಿನ ಆಯ್ದ  ಗ್ರಾಮಗಳಲ್ಲಿ  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ  ಇಲಾಖೆಯಿಂದ ಗ್ರಾಮವಾಹಿನಿ ಮತ್ತು ಗ್ರಾಮಸಂಪರ್ಕ ಕಾರ್ಯಕ್ರಮವನ್ನು  ಅಕ್ಟೋಬರ್ 27 ರಿಂದ ನವೆಂಬರ್ 7 ರವರೆಗೆ ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 27-ಮೂಗೂರು, ಹೊಸಹಳ್ಳಿ, 28-ಮಾದಾಪುರ, ಹಿರಿಯೂರು, 29-ಟಿ.ನರಸೀಪುರ, ಕೊತ್ತೇಗಾಲ, ಕುರುಬೂರು, 30-ತಲಕಾಡು, ಒಡೆಯಾಂಡಹಳ್ಳಿ, 31-ವಾಟಾಳು, ಸುಜ್ಜಲೂರು, ನವೆಂಬರ್ 3-ಬನ್ನೂರು, ಸೋಮನಹಳ್ಳಿ, 4-ಬಿ.ಸೀ.ಹಳ್ಳಿ, ಭುಗತಹಳ್ಳಿ, 5-ಕೊಡಗಹಳ್ಳಿ, ಗಾಡಿ ಜೋಗಿಹುಂಡಿ, 6-ಹೆಗ್ಗೂರು, ನಂಜಾಪುರ ಹಾಗೂ 7-ಬೀಡನಹಳ್ಳಿ, ದಾಸೇಗೌಡನಕೊಪ್ಪಲು ಗ್ರಾಮಗಳಲ್ಲಿ ಚಾಮರಾಜನಗರದ ರಂಗಜಂಗಮ ಕಲಾ ಬಳಗ ತಂಡದಿಂದ ಬೀದಿನಾಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಚಲನಚಿತ್ರ  ಪ್ರದರ್ಶನ ಹಾಗೂ ಛಾಯಾಚಿತ್ರಪ್ರದರ್ಶನ ಕಾರ್ಯಕ್ರಮ ನಡೆಯಲಿದೆ.
ಗಾಂಧಿ ಸಪ್ತಾಹ: ಇದೇ ಸಂದರ್ಭದಲ್ಲಿ ಮೈಸೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧಿ ಸಪ್ತಾಹ ಕಾರ್ಯಕ್ರಮವನ್ನು ಅಕ್ಟೋಬರ್ 27 ರಿಂದ ನವೆಂಬರ್ 4 ರವರೆಗೆ ಟಿ.ನರಸೀಪುರ ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 27 ರಂದು ಮೂಗೂರು ಸರ್ಕಾರಿ ಪ್ರೌಢಶಾಲೆ, 28 ರಂದು ಮಾದಾಪುರ ಸರ್ಕಾರಿ ಪ್ರೌಢಶಾಲೆ, 29 ರಂದು ಟಿ.ನರಸೀಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, 30 ರಂದು ತಲಕಾಡು ಸರ್ಕಾರಿ ಪದವಿ ಪೂರ್ವ ಕಾಲೇಜು, 31 ರಂದು ವಾಟಾಳು ಸರ್ಕಾರಿ ಪ್ರೌಢಶಾಲೆ, ನವೆಂಬರ್ 3 ರಂದು ಬನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ 4 ರಂದು ಬಿ.ಸೀಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಕುರಿತ ಚಲನಚಿತ್ರ ಪ್ರದರ್ಶನ, ಗಾಂಧಿಸ್ಮøತಿ ವಾಚನ, ಪ್ರಾರ್ಥನಾ ಗೀತೆಗಳ ಕಾರ್ಯಕ್ರಮ ಹಾಗೂ ಸ್ವಚ್ಫತಾ ಕಾರ್ಯಕ್ರಮ ನಡೆಯಲಿದೆ ಎಂದು ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
        ಅಕ್ಟೋಬರ್  31 ರಂದು ವಿಶೇಷ ಸಭೆ
     ಮೈಸೂರು,ಅ.25.ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ  ಅಕ್ಟೋಬರ್ 31 ರಂದು ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ವಿಶೇಷ ಸಭೆ ಜರುಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಮುಂದೂಡಿಕೆ
     ಮೈಸೂರು,ಅ.25.ದಿನಾಂಕ 28-10-2014 ರಂದು ನಿಗಧಿಯಾಗಿದ್ದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ದಿನಾಂಕ 6-11-2014ಕ್ಕೆ ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

                    ಸಾಂಸ್ಕøತಿಕ ಸ್ಪರ್ಧೆ
     ಮೈಸೂರು,ಅ.25.ಮೈಸೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ವತಿಯಿಂದ 2014-15ನೇ ಸಾಲಿನ ಅಂತರ ಕಾಲೇಜು ಸಾಹಿತ್ಯ ಮತ್ತು ಸಾಂಸ್ಕøತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ  ಅಕ್ಟೋಬರ್ 27 ರಿಂದ 29 ರವರೆಗೆ ನಡೆಯಲಿದ್ದು,  ಅಕ್ಟೋಬರ್ 27 ರಂದು ಬೆಳಗ್ಗೆ 10 ಗಂಟೆಗೆ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
     ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪಿ.ಕೆ.ರಾಜಶೇಖರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅವರು ಅಧ್ಯಕ್ಷತೆ ವಹಿಸುವರು.
    ಬೆಂಗಳೂರಿನ ಖ್ಯಾತ ಚಲನಚಿತ್ರ ಹಾಗೂ ಕಿರುತೆರೆ ನಟಿ ಸೌಮ್ಯಲತ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅಕ್ಟೋಬರ್ 28 ರಂದು ಮೈಸೂರು ಚಲೋ ಚಳವಳಿ ದಿನಾಚರಣೆ
    ಮೈಸೂರು,ಅ.25.ಜಿಲ್ಲಾಡಳಿತ ವತಿಯಿಂದ ಮೈಸೂರು ಚಲೋ ಚಳವಳಿ ದಿನಾಚರಣೆಯು ಅಕ್ಟೋಬರ್ 28 ರಂದು ಬೆಳಗ್ಗೆ 11-30 ಗಂಟೆಗೆ ಶಾಂತಲಾ ಚಿತ್ರಮಂದಿರದ ಎದುರು ಸುಬ್ಬರಾಯನಕೆರೆ ಉದ್ಯಾನವನದಲ್ಲಿ ನಡೆಯಲಿದೆ.
    ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಧ್ವಜಾರೋಹಣ ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು.
     ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ,್ಪ ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಬಿ.ಪುಷ್ಪಾ ಅಮರನಾಥ್, ಲೋಕಸಬಾ ಸದಸ್ಯ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್.ಪುಟ್ಟರಾಜು, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ಜಿ.ಟಿ.ದೇವೇಗೌಡರು, ಚಿಕ್ಕಮಾದು, ಸಾ.ರಾ. ಮಹೇಶ್, ಹೆಚ್.ಪಿ. ಮಂಜುನಾಥ್, ಕೆ.ವೆಂಕಟೇಶ್, ವಿಧಾನಪರಿಷತ್ ಸದಸ್ಯ ಸಿ.ಹೆಚ್.ವಿಜಯಶಂಕರ್, ಗೋ.ಮಧುಸೂದನ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್. ಧರ್ಮಸೇನ, ಮಹಾನಗರಪಾಲಿಕೆಯ ಉಪ ಮಹಾಪೌರ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷ ಎ ಲೋಕಮಣಿ ಭಾಗವಹಿಸುವರು.
    ಅಂದು ಬೆಳಗ್ಗೆ 10 ಗಂಟೆಗೆ ಸುಬ್ಬರಾಯನಕೆರೆ ಸ್ಮಾರಕ ಭವನದಿಂದ ಮೆರವಣಿಗೆಗೆ ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ ಅವರು ಚಾಲನೆ ನೀಡುವರು. ಮೆರವಣಿಗೆಯು ಸುಬ್ಬರಾಯನಕೆರೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಭವನದಿಂದ ಹೊರಟು ನೂರಡಿ ರಸ್ತೆಯಲ್ಲಿ ಬಲಕ್ಕೆ ತಿರುಗಿ ರಾಮಸ್ವಾಮಿ ವೃತ್ತ ತಲುಪಿ, ರಾಮಸ್ವಾಮಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮತ್ತೆ ನೂರಡಿ ರಸ್ತೆ ಮಾರ್ಗವಾಗಿ ಪಾಠಶಾಲೆ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ, ಡಿ.ದೇವರಾಜ ಅರಸ್ ರಸ್ತೆಯಲ್ಲಿ ಎಡಕ್ಕೆ ತಿರುಗಿ ನಾರಾಯಣ ಶಾಸ್ತ್ರಿ ರಸ್ತೆ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಭವನ ತಲುಪುವುದು. ಮಧ್ಯಾಹ್ನ 2-30 ಗಂಟೆಗೆ ಕಲಾಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
    ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಿ.ಎಸ್. ಜಗದೀಶ್ ಅವರುಗಳು ವಿಶೇಷ ಉಪನ್ಯಾಸ ನೀಡುವರು.
ಅಪರಿಚಿತÀ ವ್ಯಕ್ತಿಯ ಶವÀ ಪತ್ತೆಗಾಗಿ ಮನವಿ
ಮೈಸೂರು,ಅ.25.ಮೈಸೂರು ರೈಲು ನಿಲ್ದಾಣದ ಯಾರ್ಡ್‍ನ ಪಿಟ್ ಲೈನ್  ನಂ. 3ರಲ್ಲಿ ನಿಂತಿದ್ದ ನಂ 56234 ಪ್ಯಾಸೆಂಜರ್ ರೈಲುಗಾಡಿಯ ಕೋಚ್ ನಂ. ಎಸ್‍ಡಬ್ಲ್ಯೂಆರ್ ಜಿಎಸ್ 08420ರಲ್ಲಿ ಅಕ್ಟೋಬರ್  23 ರಂದು   ಸುಮಾರು 65 ವರ್ಷ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದಾರೆ. ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
 ಅಪರಿಚಿತ ವ್ಯಕ್ತಿಯು  ಐದುವೆರೆ ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಸುಮಾರು 3 ಅಡಿ ಉದ್ದದ ಕಪ್ಪು-ಬಿಳಿ ಕೂದಲು, ಮೃತನ ಎಡಗಣ್ಣಿನ ಪಕ್ಕದಲ್ಲಿ ಒಂದು ಅವರೆ ಕಾಳು ಗಾತ್ರದ ಕಾರಳು ಇರುತ್ತದೆ. ತಿಳಿ ಗುಲಾಬಿ ಬಣ್ಣದ ತುಂಬು ತೋಳಿನ ಶರ್ಟ್, ಬಿಳಿ ಸ್ಯಾಂಡೋ ಬನಿಯನ್, ನಶೆ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಮೃತ ವ್ಯಕ್ತಿ ದೇಹವÀನ್ನು ಮೈಸೂರಿನ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ  ಶವಾಗಾರದಲ್ಲಿಡಲಾಗಿದೆ. ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.