Saturday 29 August 2015

ಬಿಎಸ್‍ಎನ್‍ಎಲ್ ಸೇವೆ ಚುರುಕುಗೊಳಿಸಲು ಸಂಸದರ ಸೂಚನೆ

ಬಿಎಸ್‍ಎನ್‍ಎಲ್ ಸೇವೆ ಚುರುಕುಗೊಳಿಸಲು ಸಂಸದರ ಸೂಚನೆ
     ಮಂಡ್ಯ, ಆ. 29. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸೇವೆಯನ್ನು ಸಮರ್ಪಕವಾಗಿ ಗ್ರಾಹಕರಿಗೆ ಒದಗಿಸಲು ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಮಂಡ್ಯ ಸಂಸದರಾದ ಸಿ.ಎಸ್.ಪುಟ್ಟರಾಜು ಅವರು ಸೂಚನೆ ನೀಡಿದರು.
ಶನಿವಾರ ಬಿ.ಎಸ್.ಎನ್.ಎಲ್. ಕಚೇರಿಯಲ್ಲಿ ನಡೆದ ದೂರಸಂಪರ್ಕ ಸಲಹಾ ಸಮಿತಿ ಸಭೆ ನಡೆಸಿದ ಅವರು, ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಅತ್ಯುತ್ತಮವಾಗಿದ್ದರೂ ನೌಕರರ ಕಾರ್ಯವೈಖರಿಯ ಪರಿಣಾಮ ಸಾರ್ವಜನಿಕರಿಗೆ ಈ ನೆಟ್‍ವರ್ಕ್ ಬಗ್ಗೆ ಬೇಸರವಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಿಎಸ್‍ಎನ್‍ಎಲ್ ಬಗ್ಗೆ ಹಲವಾರು ದೂರುಗಳಿವೆ. ಖಾಸಗಿ ಒಡೆತನದ ನೆಟ್‍ವರ್ಕ್‍ಗಳು ದೂರು ನೀಡಿದ ತಕ್ಷಣವೇ ಸ್ಪಂದಿಸುತ್ತಾರೆ. ಆದರೆ ಬಿಎಸ್‍ಎನ್‍ಎಲ್‍ಗೆ ದೂರು ನೀಡಿದರೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ನನಗೂ ವೈಯಕ್ತಿಕ ಅನುಭವ ಆಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳಿವೆ. ಮಂಡ್ಯ ತಾಲ್ಲೂಕು ಬಸರಾಳು ಹೋಬಳಿಯ ಗ್ರಾಮವೊಂದರಲ್ಲಿ ಇರುವ ದೂರವಾಣಿ ಎಕ್ಸ್‍ಚೇಂಜ್ ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದಿದ್ದಾಗ ದೂರಸಂಪರ್ಕ ಕೂಡ ಸ್ಥಗಿತವಾಗುತ್ತಿದೆ. ಈ ರೀತಿಯ ಸೇವೆಯಿಂದ ವಿಶ್ವಾಸಾರ್ಹತೆ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಇಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ಉಚಿತ ವೈ-ಫೈ ಸೇವೆ ಅಳವಡಿಸಬೇಕು. ಮೇಲುಕೋಟೆ, ವಿಶ್ವವಿಖ್ಯಾತ ಬೃಂದಾವನ ಗಾರ್ಡನ್, ಬಸ್ ನಿಲ್ದಾಣಗಳು, ಮುಂತಾದ ಸ್ಥಳಗಳಲ್ಲಿ ಈ ಸೌಲಭ್ಯ ಕಲ್ಪಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿರುವ ಕೆರೆ ತೊಣ್ಣೂರನ್ನು ಸಂಸದರ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಈ ಸ್ಥಳದಲ್ಲೂ ವೈ-ಫೈ ಸೇವೆ ದೊರಬೇಕು ಎಂದು ಸಂಸದರು ತಿಳಿಸಿದರು.
ಮಂಡ್ಯ ನಗರದ ಚಾಮುಂಡೇಶ್ವರಿ ನಗರದಲ್ಲಿ ಸರಿಯಾಗಿ ಸಿಗ್ನಲ್ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಪಿ.ಇ.ಎಸ್. ಕಾಲೇಜಿನ ಹತ್ತಿರ ಇರುವ ಟವರ್‍ನಿಂದ ಇಲ್ಲಿ ಸಂಪರ್ಕ ದೊರೆಯುತ್ತದೆ. ಇದರ ಸಂಪರ್ಕದ ಕಾರ್ಯಕ್ಷಮತೆ ಹೆಚ್ಚಿಸಬೇಕು ಅಥವಾ ಚಾಮುಂಡೇಶ್ವರಿ ನಗರಕ್ಕೆ ಪ್ರತ್ಯೇಕ ಟವರ್ ಅಳವಡಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಮಂಡ್ಯ ದೂರಸಂಪರ್ಕ ಜಿಲ್ಲಾ ಪ್ರಬಂಧಕರಾದ ಆನಂದ್ ದೇವಪ್ರಸಾದ್, ಡಿಜಿಎಂ(ಮೊಬೈಲ್) ರವೀಂದ್ರನಾಥ್, ಎಜಿಎಂ(ಮೊಬೈಲ್) ಶ್ರೀನಾಥ್, ಶಂಕರನಾರಾಯಣ್, ಉಪ ವಿಭಾಗೀಯ ಇಂಜಿನಿಯರ್‍ಗಳಾದ ಕೃಷ್ಣ, ಸುವರ್ಣ ಮೂರ್ತಿ, ಸುನೀತಾ ಮತ್ತಿತರರು ಉಪಸ್ಥಿತರಿದ್ದರು.

ಮಾನವ ಹಕ್ಕುಗಳ ಆಯೋಗದ ಸದಸ್ಯರಿಂದ 13 ಅರ್ಜಿ ಸ್ವೀಕಾರ
      ಮೈಸೂರು,ಆ.29. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ  ಸಿ.ಜಿ. ಹುನಗುಂದ ಅವರು ಮೈಸೂರು ಸರ್ಕಾರಿ ಅತಿಥಿಗೃಹದಲ್ಲಿ ಸಾರ್ವಜನಿಕರಿಂದ 13 ಅರ್ಜಿಗಳನ್ನು ಸ್ವೀಕರಿಸಿದರು.
      ಸುರಗಹಳ್ಳಿ ಹಾಲು ಉತ್ಪಾದಕರ ಸಂಘದ ನಿರ್ದೇಶಕರು ಮತದಾನದ ಹಕ್ಕು ಚ್ಯುತಿಯಾಗಿರುತ್ತದೆ ಎಂದು ದೂರು ಸಲ್ಲಿಸಿದಾಗ ಮತದಾನ ಹಕ್ಕು ಚ್ಯುತಿಯಾಗಿದ್ದಲ್ಲಿ ಸಂಘದ ನಿರ್ದೇಶಕರು ಉಚ್ಚ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಿ ಚುನಾವಣೆಯನ್ನು ತಡೆಗಟ್ಟಬಹುದು. ಈ ಅರ್ಜಿಯಲ್ಲಿ ಕಾನೂನು ಅಂಶಗಳನ್ನು ಪರಿಶೀಲಿಸಿ ಸಂಬಂಧಿಸಿದವರಿಗೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
      ಅರ್ಜಿ ಸ್ವೀಕರಿಸಿದ ನಂತರ ಮಾತನಾಡಿದ ಸದಸ್ಯರು ಸ್ವೀಕರಿಸಿರುವ ಬಹಳಷ್ಟು ಅರ್ಜಿಗಳು ಸಿವಿಲ್ ಪ್ರಕರಣಗಳ ಸ್ವರೂಪದಾಗಿರುತ್ತದೆ. ಅರ್ಜಿಗಳನ್ನು ಸ್ವೀಕರಿಸಿ ಅವುಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸಿ ಸಂಬಂಧಿಸಿದ ಇಲಾಖೆಗಳಿಗೆ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಪತ್ರ ಬರೆಯಲಾಗುವುದು ಎಂದರು.
    ಮಾನವ ಹಕ್ಕುಗಳ ಆಯೋಗಕ್ಕೆ  ದೂರು ಅರ್ಜಿಗಳನ್ನು ಸಲ್ಲಿಸುವಾಗ ಅರ್ಜಿದಾರರು ಮಾನವ ಹಕ್ಕುಗಳ ಆಯೋಗದ ಸದಸ್ಯರಿಗೆ ನಮೂದಿಸಿ ದೂರು ಅರ್ಜಿ ನೀಡಬೇಕು. ಬೇರೆ ಇಲಾಖೆಗೆ ದೂರು ಅರ್ಜಿ ನೀಡಿರುವ ಪ್ರತಿಗಳನ್ನು ಸಲ್ಲಿಸಬಾರದು. ಸಲ್ಲಿಸುವ ಅರ್ಜಿ ಸಂಕ್ಷಿಪ್ತವಾಗಿದ್ದು, ಯಾವ ಹಕ್ಕು ಉಲ್ಲಂಘನೆಯಾಗಿದೆ ಮತ್ತು ಯಾರಿಂದ ಉಲ್ಲಂಘನೆಯಾಗಿದೆ ಎಂಬುದನ್ನು ಸ್ಪಷ್ಠವಾಗಿ ನಮೂದಿಸುವಂತೆ ತಿಳಿಸಿದರು.
 
ಪ್ರವಾಸ ಕಾರ್ಯಕ್ರಮ
      ಮೈಸೂರು,ಆ.29.ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರು ಆಗಸ್ಟ್ 31 ಹಾಗೂ ಸೆಪ್ಟೆಂಬರ್ 3 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಆಗಸ್ಟ್ 31 ರಂದು ಸಂಜೆ 6 ಗಂಟೆಗೆ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಸೆಪ್ಟೆಂಬರ್ 1 ರಂದು ಬೆಳಿಗ್ಗೆ 9 ಗಂಟೆಗೆ ಕುಶಾಲನಗರಕ್ಕೆ ತೆರಳಲಿದ್ದಾರೆ. ಸೆಪ್ಟೆಂಬರ್ 3 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ಜಿಲ್ಲಾ ಕಾಂಗ್ರೇಸ್ ಪಕ್ಷದ ಕಚೇರಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ನಂತರ ಮಧ್ಯಾಹ್ನ 3 ಗಂಟೆಗೆ ಮಂಡ್ಯಕ್ಕೆ ತೆರಳಲಿದ್ದಾರೆ.
ವ್ಯಾಸಂಗವೇತನ: ಅರ್ಜಿ ಆಹ್ವಾನ
     ಮೈಸೂರು,ಆ.29. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ಪೂರ್ಣವಾಧಿ ಪಿಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾಸಿಕ ರೂ. 5000/- ವ್ಯಾಸಂಗ ವೇತನ ಮಂಜೂರು ಮಾಡಲು ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
     ಅರ್ಜಿಯನ್ನು  ಞಚಿಡಿeಠಿಚಿss.ಛಿgg.gov.iಟಿ / ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ
 ನಲ್ಲಿ ಆನ್‍ಲೈನ್ ಮೂಲಕ ಸೆಪ್ಟೆಂಬರ್ 5 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2342917ನ್ನು ಸಂಪರ್ಕಿಸುವುದು.

ನೋಂದಣಿಗೆ ಅರ್ಜಿ ಆಹ್ವಾನ
      ಮೈಸೂರು,ಆ.29.ಹೊಸ ಸಂಗೀತ, ನೃತ್ಯ, ನಾಟಕ ಶಾಲೆ ಪ್ರಾರಂಭಿಸಲು ಇಚ್ಫಿಸುವ  ಅರ್ಹ ನೋಂದಾಯಿತ ಸಂಸ್ಥೆಗಳು ನೋಂದಣಿಗಾಗಿ  ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿಯಲ್ಲಿ ನಿಗಧಿತ ಅರ್ಜಿ ಸಲ್ಲಿಸಿ ಹೆಸರು ನೊಂದಾಯಿಸಿಕೊಳ್ಳಬೇಕಿರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 1 ಕೊನೆಯ ದಿನಾಂಕವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ವಿಭಾಗೀಯ ಕಾರ್ಯದರ್ಶಿಗಳು, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ಪದನಿಮಿತ್ತ ಜಂಟಿನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ದೂರವಾಣಿ ಸಂಖ್ಯೆ 0821-2422208ನ್ನು ಸಂಪರ್ಕಿಸುವುದು.
ಹಿರಿಯ ನಾಗರಿಕರಿಗೆ  ಸಾಂಸ್ಕøತಿಕ ಸ್ಪರ್ಧೆ
ಮೈಸೂರು,ಆ.29.ವಿಶ್ವ ಹಿರಿಯ ನಾಗರಿಕರ  ದಿನಾಚರಣೆ  ಪ್ರಯುಕ್ತ ದಿನಾಂಕ: 03.09.2015 ರಂದು ಧನ್ವಂತರಿ ರಸ್ತೆಯಲ್ಲಿರುವ  ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಸಾಂಸ್ಕøತಿಕ ಸ್ಪರ್ಧೆ ಆಯೋಜಿಸಿದೆ.
      60 ರಿಂದ 70 ವರ್ಷ, 71 ರಿಂದ 80 ವರ್ಷ, 80 ವರ್ಷಕ್ಕೆ ಮೇಲ್ಪಟ್ಟ ಪುರಷರಿಗೆ ಮೂರು ವಿಭಾಗಗಳಲ್ಲಿ ಜಾನಪದ ಗೀತೆ , ಪಿಕ್ ಅಂಡ್ ಸ್ಪೀಕ್ ಯಾವುದೇ ವಿಷಯದ ಬಗ್ಗೆ  ಹಾಗೂ 60 ರಿಂದ 70 ವರ್ಷದೊಳಗಿನ ಮಹಿಳೆಯರಿಗೆ ಜಾನಪದ ಗೀತೆ, ಪಿಕ್ ಅಂಡ್ ಸ್ಪೀಕ್ ಯಾವುದೇ ವಿಷಯದ ಬಗ್ಗೆ ಸ್ಪರ್ಧೆ ನಡೆಯಲಿದೆ
ಆಸಕ್ತರು ದಿನಾಂಕ:01.09.2015 ರೊಳಗಾಗಿ ಅಥವಾ ಸ್ಪರ್ಧೆಯ ದಿನ ಸ್ಥಳದಲ್ಲೇ ಹೆಸರನ್ನು ನೊಂದಾಯಿಸಿ ಕೊಳ್ಳುವುದು. ಹೆಚ್ಚಿನ ವಿವರಗಳಿಗೆ  ಶ್ರೀ ಹೆಚ್.ವಿ.ಗಣೇಶ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ದೂರವಾಣಿ ಮೊಬೈಲ್ ಸಂಖ್ಯೆ: 9742396193, 9379037678 ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆ:0821-2490 111 ಯನ್ನು ಸಂಪರ್ಕಿಸಬಹುದಾಗಿದೆ. ಸಾಂಸ್ಕøತಿಕ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನ ಪಡೆದದವರು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸಾಂಸ್ಕøತಿಕ  ಸ್ಪÀರ್ಧೆಯಲ್ಲಿ  ಭಾಗವಹಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪ್ರೆಂಟಿಸ್ ಟ್ರೈನಿಂಗ್ ತರಬೇತಿ: ಅರ್ಜಿ ಆಹ್ವಾನ
     ಮೈಸೂರು,ಆ.29.ಬೆಂಗಳೂರಿನ ಹಿಂದೂಸ್ಥಾನ್ ಏರೋನ್ಯಾಟಿಕ್ಸ (ಲಿ) ಟೆಕ್ನಿಕಲ್ ಟ್ರೈನಿಂಗ್ ಇಸ್ಟಿಟ್ಯೂಟ್ ರವರಿಂದ ವೆಲ್ಡರ್, ಶೀಟ್ ಮೇಟಲ್ ವರ್ಕರ್, ಪಾಸ (PಂSಂಂ)(Pಡಿogಡಿಚಿmmiಟಿg ಂssisಣಚಿಟಿಣ ಚಿಟಿಜ Sಥಿsಣem ಂಜmiಟಿisಣಡಿಚಿಣive) ಟ್ರೇಡ್ ಗಳಿಗೆ ಫುಲ್ ಟರ್ಮ ಅಪ್ರೆಂಟಿಸ್ ಟ್ರೈನಿಂಗ್ ತರಬೇತಿ ನೀಡಲಿದ್ದಾರೆ.
ಎಸ್.ಎಸ್.ಎಲ್.ಸಿ ಯನ್ನು ಶೇಕಡ 60 ಅಂಕಗಳೊಂದಿಗೆ ಸಾಮಾನ್ಯ ವರ್ಗ ಹಾಗೂ ಓ.ಬಿ.ಸಿ ಅಭ್ಯರ್ಥಿಗಳು ತೇರ್ಗಡೆಯಾಗಿರಬೇಕು. ಪರಿಶಿಷ್ಟಜಾತಿ/ಪರಶಿಷ್ಟಪಂಗಡ/ವಿಕಲಚೇತರು ಶೇಕಡ  50% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ವಯೋಮಿತಿ 01-10-2015 ಕ್ಕೆ 15 ರಿಂದ 18 ವರ್ಷದೊಳಗಿರಬೇಕು.          ತರಬೇತಿ ಉಚಿತವಾಗಿದ್ದು, ತರಬೇತಿ ಅವಧಿಯಲ್ಲಿ ಸ್ಟೈಫಂಡ್ 7,000=00 ಹಾಗೂ ಇನ್ನಿತರೆ ಸೌಲಭ್ಯ ನೀಡಲಾಗುವುದು.
    ಆಸಕ್ತರು ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ. ಕರ್ನಾಟಕ ಕೃಷಿ ಮಾರಾಟ ಅಧ್ಯಯನ ಸಂಸ್ಥೆ ಕಟ್ಟಡ, ಹುಣಸೂರು ರಸ್ತೆ ಮೈಸೂರು-06 ರವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ: 04-09-2015 ರೊಳಗಾಗಿ ಸಲ್ಲಿಸಬೇಕು.
      ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2489972 ಯನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಸಹಾಯಕ ನಿರ್ದೇಶಕ ಸಿ.ವಿಶ್ವನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೇಡಿ ಮಣ್ಣಿನ ಮುದ್ದಾದ ಪುಟ್ಟ ಗಣೇಶ ವಿಗ್ರಹ ಸ್ಥಾಪಿಸಿ
ಮೈಸೂರು,ಆ.29.ಗಣೇಶ ಹಬ್ಬ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರೀಸ್ ಹಾಗೂ ವಿಷಕಾರಿ ರಸಾಯನಿಕ ಬಣ್ಣ ಬಳಸಿ ತಯಾರಿಸಿರುವ ಗಣೇಶ ಮೂರ್ತಿ ಬಳಕೆ ಮಾಡದೆ ಜೇಡಿ ಮಣ್ಣಿನ ಮುದ್ದಾದ ಪುಟ್ಟ ಗಣೇಶ ವಿಗ್ರಹವನ್ನು ಬಳಸುವಂತೆ  ಮೈಸೂರು ಮಹಾನಗರಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.
ಸಾರ್ವಜನಿP್ಪರು ಎಲೆ, ಹೂವುಗಳಿಂದ ಮಾಡಿದ ನೈಸರ್ಗಿಕ ಬಣ್ಣ ಹಚ್ಚಿದ ಗಣಪನನ್ನೇ ಪೂಜಿಸಿ. ಸಾಮೂಹಿಕವಾಗಿ ನಡೆಸುವ ಗಣೇಶನ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ, ಎಲ್ಲೂ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬೇಡಿ. ಬಾವಿ, ಕೆರೆ, ಹೊಳೆಗಳಲ್ಲಿ ಗಣಪತಿ ವಿಸರ್ಜನೆ ಮಾಡಬೇಡಿ. ಹಾಗೆ ಮಾಡಿದರೆ ಅಂತರ್ಜಲ, ಕುಡಿಯುವ ನೀರಿನ ಸೆಲೆ- ಎಲ್ಲವೂ ಹಾಳಾಗುತ್ತವೆ. ಬದಲಿಗೆ ಬಕೆಟ್‍ನಲ್ಲಿ ಸಂಚಾರಿ ವಿಸರ್ಜನಾ ವಾಹನದಲ್ಲಿ ವಿಸರ್ಜಿಸಿ, ಸೂಚಿತ ಕೆರೆಗಳಲ್ಲಿ ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಪ್ಲಾಸ್ಟಿಕ್ ಹಾರ ಎಲ್ಲವನ್ನೂ ತೆಗೆಯಿರಿ. ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಬೇಡಿ. ಪಟಾಕಿಯ ಹೊಗೆ ವಿಷಪೂರಿತ; ಅಲ್ಲದೆ ರಸ್ತೆ ತುಂಬಾ ಕಸವಾಗುತ್ತದೆ.
       ಗಣೇಶ ಮತ್ತು ಗೌರಿ ಮೂರ್ತಿ ಸಿದ್ದಪಡಿಸುವವರು / ತಯಾರಿಸುವವರು / ಮಾರಾಟ ಮಾಡುವವರು ವಿಷಪೂರಿತ, ರಸಾಯನಿಕವುಳ್ಳ ಬಣ್ಣ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ಅನ್ನು ಮೂರ್ತಿಗಳ ತಯಾರಿಕೆಗೆ ಉಪಯೋಗಿಸಬಾರದು. ಒಂದು ವೇಳೆ ಈ ರೀತಿಯ ಮೂರ್ತಿಗಳನ್ನು ತಯಾರಿಸುವುದಾಗಲೀ / ಮಾರಾಟ ಮಾಡುವುದಾಗಲೀ / ಉಪಯೋಗಿಸುವುದಾಗಲೀ ಕಂಡು ಬಂದರೆ ಅಂತಹ ಮೂರ್ತಿಗಳನ್ನು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಜಪ್ತಿ ಮಾಡಲಾಗುತ್ತದೆ. ಹಾಗೂ ಸಂಬಂಧಪಟ್ಟವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನನ ಮರಣ ಆನ್‍ಲೈನ್ ನೋಂದಣಿ
      ಮೈಸೂರು,ಆ.29.ಜನನ, ಮರಣ ಮತ್ತು ನಿರ್ಜೀವ ಜನನ ಘಟನೆಗಳನ್ನು ಇ-ಜನ್ಮ ತಂತ್ರಾಂಶದಲ್ಲಿ ಆನ್‍ಲೈನ್ ನೋಂದಣಿ ಮಾಡಿ ಸಾರ್ವಜನಿಕರಿಗೆ ಪ್ರಮಾಣ ಪತ್ರ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ತಿಳಿಸಿದ್ದಾರೆ.
      1ನೇ ಸೆಪ್ಟೆಂಬರ್ 2015ರಿಂದ ನೋಂದಣಾಧಿಕಾರಿಗಳು/ ಉಪ ನೋಂದಣಾಧಿಕಾರಿಗಳು ಆನ್‍ಲೈನ್ ನಲ್ಲಿ ನೋಂದಣಿ ಮಾಡಿ ಗಣಕಯಂತ್ರದಿಂದ ಮುದ್ರಿತವಾದ ಜನನ, ಮರಣ ಪ್ರಮಾಣ ಪತ್ರವನ್ನು ನೀಡುವುದು. ಸಾರ್ವಜನಿಕರು ಸೆಪ್ಟೆಂಬರ್ 1ರಿಂದ ಕೈಬರಹದ ಪ್ರಮಾಣಪತ್ರವನ್ನು ಪಡೆಯಬಾರದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Friday 28 August 2015

ಭಾರತದ ಅತಿ ದೊಡ್ಡ ಕೆಫೆ ಸರಣಿಯಾದ ಕೆಫೆ ಕಾಫಿ ಡೇ ಮೈಸೂರಿನಲ್ಲಿ ಕಾಫೀ ಹಬ್ಬವನ್ನು ಆಚರಿಸುತ್ತಿದೆ
ಅಅಆಯಿಂದ ಕಾಫಿ ಮಾಡುವುದನ್ನು ಕಲಿಯಿರಿ
ಮತ್ತು ಮನೆಗೆ ತನ್ನಿರಿ ನಿಮ್ಮ ಅಚ್ಚುಮೆಚ್ಚಿನ ಪೇಯದ ತಾಜಾತನ ಮತ್ತು ಸುಗಂಧ

ಮೈಸೂರು, 27 ಆಗಸ್ಟ್ 2015: ಭಾರತದ ಅತಿ ದೊಡ್ಡ ಕೆಫೆ ಮಳಿಗೆಗಳ ಸರಣಿಯಾದ ಕೆಫೆ ಕಾಫಿ ಡೇ (ಅಅಆ) ಆಚರಿಸುತ್ತಿರುವ ಕಾಫಿ ಹಬ್ಬವು ಗ್ರಾಹಕರಿಗೆ ಪೇಯವನ್ನು ತೋರಿಸಿ, ಕಲಿಸುವ ಉಪಕ್ರಮವಾಗಿದೆ. ಕಾಫಿ ಹಬ್ಬದ ಸರಣಿಗಳ ಮೂಲಕ ಕಾಫಿ ತಯಾರಿಸುವ ಕಲೆಯನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳಲು ಅಅಆ ಯು ಶ್ರಮಿಸುತ್ತಿದೆ. ಈ ಹಬ್ಬವನ್ನು ಇಂದು ಮೈಸೂರಿನಲ್ಲಿ ಆರಂಭಿಸಲಾಗಿದ್ದು, 26 ಸೆಪ್ಟೆಂಬರ್ 2015 ವರೆಗೂ ನಡೆಯುತ್ತದೆ. ಕಾಫಿ ಹಬ್ಬದ ಮೊದಲ ನೋಟವು ಇಂದು ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಕಂಡುಬಂದಿತು.
ಈ ಪೂರ್ಣ ತಿಂಗಳು ಮೈಸೂರಿನ ಎರಡು ಕೆಫೆಗಳು ಕಾಫಿ ಹಬ್ಬವನ್ನು ನಡೆಸಲಿವೆ – ಕಾಳಿದಾಸ ರಸ್ತೆಯಲ್ಲಿರುವ ಅಅಆ ಕೆಫೆ ವiತ್ತು ದೇವರಾಜ ಅರಸ್ ರಸ್ತೆಯಲ್ಲಿರುವ ಅಅಆ ಕೆಫೆ. ಗ್ರಾಹಕರು ಈ ಎರಡು ಕೆಫೆಗಳಿಗೆ ನಡೆದು, ಸರಳವಾದ ಕಾಫಿ ತಯಾರಿಕಾ ಸಲಕರಣೆಗಳಾದ ಫ್ರೆಂಚ್ ಪ್ರೆಸ್ ಮತ್ತು ಸ್ಟೋವ್ ಟಾಪ್ ಎಸ್ಪ್ರೆಸ್ಸೊಗಳನ್ನು ಬಳಸಿ ಮನೆಯ ಆರಾಮದಲ್ಲಿಯೇ ಕಾಫಿ ತಾಯರಿಸುವುದನ್ನು ಕಲಿಯಬಹುದು. ಇದರ ಜೊತೆಗೆ ಕಾಫಿ ಡೇ ವೇಕ್ ಕಪ್ ಎಂಬ ಕ್ಯಾಪ್ಸೂಲ್ ತಂತ್ರಜ್ಞಾನ ಬಳಸಲಾದ, ಮತ್ತು 30 ಸೆಕೆಂಡ್ ಗಳಲ್ಲಿ ಉತ್ತಮ ಕಾಫಿ ತಯಾರಿಸಬಲ್ಲ ಕಾಫಿ ಮಾಡುವ ವ್ಯವಸ್ಥೆಯನ್ನೂ ತೋರಿಸಲಾಗುತ್ತದೆ.
ಕಾಫಿ ಹಬ್ಬವನ್ನು ಆರಂಭಿಸುತ್ತಾ, ದೇವಿದಾಸ್ ಪೈ, ಕೆಫೇ ಕಾಫಿ ಡೇಯ ಕಾಫಿ ಪ್ರಚಾರಕರು ಹೀಗೆ ಹೇಳಿದರು – ಕಾಫಿ ಕುಡಿಯುವುದು ನಮ್ಮ ದೈನಂದಿನ ಜೀವನಶೈಲಿಯ ಅಂಗವಾಗಿದೆ ಮತ್ತು ಈ ಕಲೆಯನ್ನು ಕಲಿಯಲು ನಮಗೆ ಬರುವ ಕೋರಿಕೆಗಳು ಇದಕ್ಕೆ ಸಾಕ್ಷಿಯಾಗಿದೆ. ಕೆಫೆಗಳಲ್ಲಾಗಬಹುದು ಅಥವಾ ಮನೆಯಲ್ಲಾಗಬಹುದು, ಈ ಪೇಯವು ಎಲ್ಲಾ ಸಂವಾದಗಳ ಕೇಂದ್ರದಲ್ಲಿರುತ್ತದೆ. ಈ ಉತ್ತಮವಾದ ಪೇಯವನ್ನು ಆಸ್ವಾದಿಸಲು ಗ್ರಾಹಕರಿಗೆ ಸಹಾಯವಾಗುವಂತೆ ಮತ್ತು ತಮ್ಮೊಂದಿಗೆ ಈ ಕೆಫೆ ಅನುಭವವನ್ನು ಇಯ್ಯಲು ಈ ಕಾಫಿ ಹಬ್ಬಗಳ ಮೂಲಕ ಯತ್ನಿಸುತ್ತಿದ್ದೇವೆ.
ಕೆಫೆಗಳಲ್ಲಿರುವ ರುಚಿಯಂಥೆ ಕಾಫಿ ತಯಾರಿಸಲು ಕಾಫಿ ಮೇಕರ್ ಮತ್ತು ಕಾಫಿ ಪುಡಿಗಳಿರುವ ಕಾಫಿ ತಯಾರಿಕಾ ಕಿಟ್ ಗಳನ್ನು ಗ್ರಾಹಕರು ಈಗ ಕೊಳ್ಳಬಹುದು. ಇವು ನಗರದ ಎಲ್ಲಾ ಅಅಆ ಮಳಿಗೆಗಳಲ್ಲಿ ಲಭ್ಯವಿರುತ್ತವೆ. ವಿವಿಧ ರೀತಿಯ ಕಾಫಿ ಮಿಶ್ರಣಗಳಾದ ಅರಾಬಿಕಾ, ಚಾರ್ಜ್, ಮತ್ತು ಪರ್ಫೆಕ್ಟ್. ಗಳ ಜೊತೆಗೆ. ಗ್ರಾಹಕರು ಇದರ ಉತ್ಕೃಷ್ಟವಾದ ಶ್ರೇಣಿಯನ್ನೂ ಆರಿಸಿಕೊಳ್ಳಬಹುದು – ಮೈಸೂರು ರಾಯಲ್, ಮತ್ತು ಡಾರ್ಕ್ ಫಾರೆಸ್ಟ್. ಮತ್ತೊಂದು ನೀಡಿಕೆಯೆಂದರೆ ಫಿಲ್ಟಾ ಫ್ರೆಶ್, ಒಂದು ಸರಳ ನೀವೇ ಮಾಡಿಕೊಳ್ಳುವ ವಿಧಾನದಿಂದ ಒಂದೇ ನಿಮಿಷದಲ್ಲಿ ನಿಮಗೆ ಫಿಲ್ಟರ್ ಕಾಫಿ ನೀಡುವ ಅನನ್ಯ ನೀಡಿಕೆ.
ಕೆಫೇ ಕಾಫಿ ಡೇ ಬಗ್ಗೆ:
ಕೆಫೆ ಮಳಿಗೆಗಳ ಸಂಖ್ಯೆಯಲ್ಲಿ ಭಾರತದ ಅತಿ ದೊಡ್ಡ ಕೆಫೆ ಸರಣಿ ಕೆಫೆ ಕಾಫಿ ಡೇ ಮತ್ತು ತನ್ನ ಅಂಗಸಂಸ್ಥೆಯಾದ ಕಾಫಿ ಡೇ ಗ್ಲೋಬಲ್ ಲಿ (ಅಆಉಐ) ಮೂಲಕ ಕಾರ್ಯನಿರ್ವಹಿಸುತ್ತದೆ; ಅಆಉಐ ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆ ತೆರೆಯುವ ಮೂಲಕ ಭಾರತದಲ್ಲಿ ಸರಣಿ ಕಾಫಿ ಕ್ಷೇತ್ರವನ್ನು ಹುಟ್ಟುಹಾಕಿತು (ಮೂಲ: ಭಾರತೀಯ ಕಾಫಿ ಉದ್ಯಮ ಪರಿವೀಕ್ಷಣೆ, ಮಾರ್ಚ್ 2015, ಟೆಕ್ನೊಪ್ಯಾಕ್). ಕೆಫೆ ಕಾಫಿ ಡೇಯ ಮೆನ್ಯು ಹಲವಾರು ಬಿಸಿ ಮತ್ತು ತಣ್ಣನೆಯ ಕಾಫಿಗಳ ಶ್ರೇಣಿಯನ್ನು ಹೊಂದಿದೆ, ಮತ್ತು ಹಲವಾರು ಖಾದ್ಯಗಳನ್ನು, ಡೆಸ್ಸರ್ಟ್ ಮತ್ತು ಪಾಸ್ಟ್ರೀ ಗಳನ್ನೂ ಹೊಂದಿದೆ. ಇದರ ಜೊತೆಗೆ ವಿವಿಧ ಸರಕುಗಳಾದ ಕಾಫಿ ಪುಡಿ, ಕೂಕಿ, ಮಗ್, ಕಾಫಿ ಫಿಲ್ಟರ್ ಇತಾದಿಗಳೂ ಕೆಫೆಗಳಲ್ಲಿ ಲಭ್ಯವಿದೆ.
ಹಕ್ಕುತ್ಯಾಗ
ಅನ್ವಯವಾಗುವ ಶಾಸನಬದ್ಧ ಮತ್ತು ನಿಯಂತ್ರಣಾ ನಿಯಮಗಳಿಗೆ, ಅಗತ್ಯವಾದ ಅನುಮೋದನೆ ಸ್ವೀಕೃತಿಗೆ, ಮಾರುಕಟ್ಟೆ ಪರಿಸ್ಥಿತಿಗಳಿಗೆ, ಮತ್ತು ಇತರ ಪರಿಗಣನೆಗೆ ಒಳಪಟ್ಟಂತೆ, ಕಾಫಿ ಡೇ ಎಂಟಪ್ರ್ರೈಸಸ್ ಲಿ. ತನ್ನ ಈಕ್ವಿಟಿ ಶೇರ್ ಗಳ ಆರಂಭಿಕ ಸಾರ್ವಜನಿಕ ನೀಡಿಕೆ ಮಾಡಲು ಪ್ರಸ್ತಾಪಿಸಿದೆ ಮತ್ತು SಇಃI ಯೊಂದಿಗೆ ಡ್ರಾಫ್ಟ್ ರೆಡ್ ಹೆರ್ರಿಂಗ್ ಪ್ರಾಸ್ಪೆಕ್ಟಸ್ ಅನ್ನು ದಾಖಲಿಸಿದೆ. ಡ್ರಾಫ್ಟ್ ರೆಡ್ ಹೆರ್ರಿಂಗ್ ಪ್ರಾಸ್ಪೆಕ್ಟಸ್ SಇಃI, ಃSಇ, ಓSಇ ಗಳ ಜಾಲತಾಣಗಳಾದ ತಿತಿತಿ.sebi.gov.iಟಿ , ತಿತಿತಿ.bseiಟಿಜiಚಿ.ಛಿom  ತಿತಿತಿ.ಟಿseiಟಿಜiಚಿ.ಛಿom , ಉಅಃಖಐಒ  ಗಳಾದ ತಿತಿತಿ.iಟಿvesಣmeಟಿಣbಚಿಟಿಞ.ಞoಣಚಿಞ.ಛಿom, hಣಣಠಿ://ತಿತಿತಿ.oಟಿಟiಟಿe.ಛಿiಣibಚಿಟಿಞ.ಛಿo.iಟಿ/ಡಿhಣm/ಛಿiಣigಡಿouಠಿgಟobಚಿಟsಛಿಡಿeeಟಿ1.hಣm hಣಣಠಿ://ತಿತಿತಿ.moಡಿgಚಿಟಿsಣಚಿಟಿಟeಥಿ.ಛಿom/ಚಿbouಣ-us/gಟobಚಿಟ-oಜಿಜಿiಛಿes/iಟಿಜiಚಿ/ ಗಳಲ್ಲಿ ಅನುಕ್ರಮವಾಗಿ ಲಭ್ಯವಿದ್ದು, ಃಖಐಒ ನ : ನಲ್ಲಿ ಅನುಕ್ರಮವಾಗಿ ಲಭ್ಯವಿದೆ. ಯಾವುದೇ ಸಂಭಾವ್ಯ ಹೂಡಿಕೆದಾರರು, ಈಕ್ವಿಟಿ ಶೇರ್ ಗಳಲ್ಲಿ ಹೂಡಿಕೆ ಮಾಡುವುದು ಬಹಳ ಅಪಾಯದಿಂದ ಕೂಡಿರುತ್ತದೆ ಮತ್ತು ಇದರ ಬಗ್ಗೆ ವಿವರಗಳಿಗಾಗಿ, ಡ್ರಾಫ್ಟ್ ರೆಡ್ ಹೆರ್ರಿಂಗ್ ಪ್ರಾಸ್ಪೆಕ್ಟಸ್ ನ ಪುಟ 24ರಲ್ಲಿರುವ  ಅಪಾಯದ ಅಂಶಗಳು ಎಂಬ ವಿಭಾಗವನ್ನು ನೋಡಬಹುದು. SಇಃIಯೊಂದಿಗೆ ದಾಖಲಿಸಲಾದ ಡ್ರಾಫ್ಟ್ ರೆಡ್ ಹೆರ್ರಿಂಗ್ ಪ್ರಾಸ್ಪೆಕ್ಟಸ್ ಅನ್ನು ಸಂಭಾವ್ಯ ಹೂಡಿಕೆದಾರರು ಅವಲಂಬಿಸಬಾರದು.
ಈ ಈಕ್ವಿಟಿ ಶೇರ್ ಗಳನ್ನು ಭಾರತದ ಹೊರಗೆ ಯಾವುದೇ ನ್ಯಾಯಪ್ರದೇಶದಲ್ಲಿ ನೋಂದಾಯಿಸಲಾಗಿಲ್ಲ, ಪಟ್ಟಿ ಮಾಡಲಾಗಿಲ್ಲ ಅಥವಾ ಯಾವುದೇ ರೀತಿಯಲ್ಲಿ ನೀರುಪಿಸಲಾಗಿಲ್ಲ ಮತ್ತು ಮಾಡುವುದೂ ಇಲ್ಲ ಮತ್ತು ಇದನ್ನು ನೀಡಬಾರದ ಅಥವಾ ಮಾರಬಾರದು ಮತ್ತು ಅಂತಹ ನ್ಯಾಯಪ್ರದೇಶಗಳಲ್ಲಿರುವ ವ್ಯಕ್ತಿಗಳು, ಅಂತಹ ನ್ಯಾಯಪ್ರದೇಶಗಳಿಗೆ ಅನ್ವಯವಾಗುವ ಶಾಸನಗಳ ಅನುಸರಣೆಯ ಹೊರತಾಗಿ, ಇದಕ್ಕೆ ಬಿಡ್ ಮಾಡಬಾರದು. ಈ ಈಕ್ವಿಟಿ ಶೇರ್ ಗಳನ್ನು ಯುನೈಟೆಡ್ ಸ್ಟೇಟ್ಸ್ ನ US ಸೆಕ್ಯುರಿಟೀಸ್ ಕಾಯಿದೆ 1933 (U.S. ಸೆಕ್ಯುರಿಟೀಸ್ ಕಾಯಿದೆ) ಅಥವಾ ಯಾವುದೇ ಅಂಥ ರಾಜ್ಯ ಭದ್ರತಾ ಕಾಯಿದೆ ಅಡಿಯಲ್ಲಿ ನೋಂದಾಯಿಸಲಾಗಿಲ್ಲ ಮತ್ತು ಮಾಡುವುದೂ ಇಲ್ಲ ಮತ್ತು , ವಿನಾಯಿತಿ ಪತ್ರದ ಅನುಸರಣೆಯ ಹೊರತಾಗಿ, ಇದನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿ ನೀಡಬಾರದು ಅಥವಾ ಮಾರಬಾರದು ಅಥವಾ , US ಸೆಕ್ಯುರಿಟೀಸ್ ಕಾಯಿದೆಯ ನೋಂದಣಿ ಅಗತ್ಯಗಳಿಗೆ ಒಳಪಡದ ಮತ್ತು ಯಾವುದೇ ಅನ್ವಯವಾಗುವ ಯುನೈಟೆಡ್ ಸ್ಟೇಟ್ಸ್ ರಾಜ್ಯ ಭದ್ರತಾ ಕಾಯಿದೆಯ ಅನುಸರಣೆಗೆ ಒಳಪಡದ ಯಾವುದೇ ವ್ಯವಹಾರದಲ್ಲಿ ಇದನ್ನು ನೀಡಬಾರದು ಅಥವಾ ಮಾರಬಾರದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಎಳಂಗೀವನ್ ಎಂ ಡಿ
9880260239


ಕೃಷ್ಣರಾಜಪೇಟೆ. ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಿರುವ ಕುರಿತು ಸರ್ವೇ ಅಧಿಕಾರಿಗಳ ತಂಡದಿಂದ ಅಳತೆ ಕೆಲಸವು ಭರದಿಂದ ಸಾಗಿದೆ. ಅಕ್ರಮ ಒತ್ತುವರಿದಾರರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ತೆರವು ಕಾರ್ಯಾಚರಣೆಯು ನಿಲ್ಲುವುದಿಲ್ಲ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಸ್ಪಷ್ಠಪಡಿಸಿದರು.
ಅವರು ಇಂದು ಪಟ್ಟಣಕ್ಕೆ ಭೇಟಿ ನೀಡಿ ತಹಶೀಲ್ದಾರ್ ಶಿವಕುಮಾರ್ ಮತ್ತು ಪುರಸಭೆಯ ಮುಖ್ಯಾಧಿಕಾರಿ ಬಸವರಾಜು ಅವರಿಂದ ಒತ್ತುವರಿ ತೆರವು ಕಾರ್ಯಾಚರಣೆಯ ಪ್ರಗತಿ ಕುರಿತು ಮಾಹಿತಿ ಪಡೆದುಕೊಂಡು ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದರು.
ಪ್ರಸ್ತುತ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ನಿರ್ಮಿಸಿರುವ ಚನ್ನಪ್ಪನಕಟ್ಟೆಗೆ ಸೇರಿದ 6.5 ಎಕರೆ ಕಟ್ಟೆಯ ಭೂಮಿಯಲ್ಲಿ ಸುಮಾರು ಎರಡು ಎಕರೆಗೂ ಹೆಚ್ಚಿನ ಭೂಮಿಯು ಒತ್ತುವರಿಯಾಗಿರುವುದು ಸರ್ವೇ ಅಧಿಕಾರಿಗಳಿಗೆ ಮೇಲ್ನೋಟಕ್ಕೆ ಕಂಡು ಬಂದಿದೆ. ಅಕ್ರಮ ಒತ್ತುವರಿಯನ್ನು ಗುರುತಿಸುವ ಕೆಲಸವು ಕಳೆದ 4 ದಿನಗಳಿಂದಲೂ ಭರದಿಂದ ಸಾಗಿದೆ. ಸ್ಥಳೀಯ ಶಾಸಕರಾದ ನಾರಾಯಣಗೌಡ ಅವರು ರಾಜ್ಯಪಾಲರು, ಮುಖ್ಯಮಂತ್ರಿಗಳು ಮತ್ತು ಲೋಕಾಯುಕ್ತರಿಗೆ ಮನವಿ ಸಲ್ಲಿಸಿ ಪಟ್ಟಭದ್ರ ಹಿತಾಸಕ್ತಿಗಳಿಂದ ಚನ್ನಪ್ಪನಕಟ್ಟೆಯ ಒತ್ತುವರಿಯನ್ನು ತೆರವುಗೊಳಿಸಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಮನವಿ ಸಲ್ಲಿಸುವ ಜೊತೆಗೆ ಸದನದಲ್ಲಿ ಚರ್ಚೆ ಮಾಡಿ ಒತ್ತಾಯಿಸಿದ್ದರು.
ಶಾಸಕರ ಮನವಿಯ ಮೇರೆಗೆ ಸರ್ಕಾರವು ಅಕ್ರಮ ಒತ್ತುವರಿಯನ್ನು ಗುರುತಿಸಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ನಾನು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಒತ್ತುವರಿಯನ್ನು ಗುರುತಿಸುವ ಕೆಲಸ ಮಾಡುತ್ತಿದ್ದೇವೆ. ಮೈಸೂರು-ಚನ್ನರಾಯಪಟ್ಟಣ ರಸ್ತೆಯಲ್ಲಿನ ಗ್ರಾವೆಲ್ ಗುಂಡಿಗಳನ್ನು ಗುರುತಿಸುವ ಕಾರ್ಯವು ಸಂಪೂರ್ಣಗೊಂಡಿದೆ. ಸರ್ಕಾರಿ ಭೂಮಿಯನ್ನು ಪಟ್ಟಭದ್ರ ಹಿತಾಸಕ್ತಿಗಳಿಂದ ತೆರವುಗೊಳಿಸಲು ಕ್ರಮಕ್ಕೆ ಮುಂದಾಗಿದ್ದೇವೆ. ಸರ್ಕಾರಿ ಜಾಗದ ಒಂದಿಂಚೂ ಭೂಮಿಯನ್ನು ಒತ್ತುವರಿಯಾಗಲು ಬಿಡುವ ಪ್ರಶ್ನೆಯೇ ಇಲ್ಲ, ಏಕೆಂದರೆ ನಾವು ಸರ್ಕಾರದ ಸೇವಕರು, ಸರ್ಕಾರದ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಪಟ್ಟಣದ ನಾಗಮಂಗಲ ರಸ್ತೆಯ ಅಗಲೀಕರಣ ಕೆಲಸವನ್ನೂ ಸಧ್ಯದಲ್ಲಿಯೇ ಆರಂಭಿಸುತ್ತೇವೆ. ಸರ್ಕಾರವು ಹಣ ಬಿಡುಗಡೆ ಮಾಡಲು ಮನವಿ ಸಲ್ಲಿಸಿ ಕಾಯುತ್ತಿದ್ದೇವೆ ಎಂದು ಸ್ಪಷ್ಠಪಡಿಸಿದ ನಾಗರಾಜು ನಾವು ಎಲ್ಲಿ ಕೆಲಸ ಮಾಡುತ್ತೇವೆಯೋ ಅದು ನಮ್ಮೂರು, ಅಲ್ಲಿರುವವರು ನಮ್ಮ ಜನರು, ವರ್ಗಾವಣೆಗೆ ತಲೆಕೆಡೆಸಿಕೊಳ್ಳುವುದಿಲ್ಲ. ನೀರಿನ ಋಣ ಮತ್ತು ಉಪ್ಪಿನ ಋಣವು ಇರುವವರೆಗೂ ಅಷ್ಟು ಸುಲಭವಾಗಿ ಹೊರಗೆ ಕಳುಹಿಸಲು ಆಗುವುದಿಲ್ಲ. ದೇವರಿದ್ದಾನೆ ನೋಡೋಣ ಬಿಡಿ ಎಂದು ಮಾರ್ಮಿಕವಾಗಿ ತಿಳಿಸಿದ ನಾಗರಾಜು ಅವರು ತಮ್ಮ ವರ್ಗಾವಣೆಗೆ ಕೆಲವು ಕಾಣದ ಕೈಗಳ ಅವಿರತ ಪ್ರಯತ್ನ ಮಾಡುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಏನನ್ನೂ ಹೇಳಲು ಬಯಸುವುದಿಲ್ಲ ಎಂದು ಸ್ಪಷ್ಠಪಡಿಸಿದರು. ಸರ್ವೇ ಸೂಪರ್‍ವೈಸರ್‍ಗಳಾದ ದೇವೇಗೌಡ, ರಮೇಶ್, ರಾಜು, ಮುಖ್ಯಾಧಿಕಾರಿ ಬಸವರಾಜು, ತಹಶೀಲ್ದಾರ್ ಶಿವಕುಮಾರ್, ಪುರಸಭೆಯ ಸಹಾಯಕ ಎಂಜಿನಿಯರ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ಮರಿಸಿದ್ದೇಗೌಡ, ರಾಜಶ್ವನಿರೀಕ್ಷಕ ಬಸವರಾಜು, ಪಟ್ಟಣ ಪೋಲಿಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಹೆಚ್.ಎನ್.ವಿನಯ್ ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ಅದಾಲತ್‍ನಲ್ಲಿ 15 ಕ್ರಿಮಿನಲ್ ಮೊಕ್ಕದಮೆ ವಿಲೇವಾರಿ

 ಅದಾಲತ್‍ನಲ್ಲಿ 15 ಕ್ರಿಮಿನಲ್ ಮೊಕ್ಕದಮೆ ವಿಲೇವಾರಿ
     ಮೈಸೂರು,ಆ.27.ಜಿಲ್ಲಾ ನ್ಯಾಯಾಲಯದಲ್ಲಿ ಇಂದು ನಡೆದ ಲೋಕ ಅದಾಲತ್‍ನಲ್ಲಿ ಮೈಸೂರು ನಗರಕ್ಕೆ ಸಂಬಂಧಪಟ್ಟ 15 ಕ್ರಿಮಿನಲ್ ಮೊಕ್ಕದಮೆಯನ್ನು ಸಂದಾನ ಮೂಲಕ ವಿಲೇವಾರಿ ಮಾಡಲಾಯಿತು.
    ಜಿಲ್ಲೆಯಲ್ಲಿ  01, ಜನವರಿ 2015 ರಿಂದ ಲೋಕ ಅದಾಲತ್ ನಡೆಯುತ್ತಿದ್ದು, ಇಂದು ಮೈಸೂರು ನಗರದ ಕ್ರಿಮಿನಲ್ ಮೊಕ್ಕದಮೆಗೆ ಸಂಬಂಧಿಸಿದಂತೆ ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಎಸ್. ಮುದಗಲ್ ಹಾಗೂ  ಮೈಸೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರುಗಳು ಲೋಕ ಅದಾಲತ್ ನಡೆಸಿ ಸಂದಾನದ ಮೂಲಕ ಮೊಕ್ಕದಮೆಗಳನ್ನು ವಿಲೇವಾರಿ ಮಾಡಿದರು.
     ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಎಸ್. ಮುದಗಲ್ ಅವರು 11 ಕ್ರಿಮಿನಲ್ ಮೊಕ್ಕದಮೆಗಳನ್ನು ಸಂಕೇತಿಕವಾಗಿ ವಿಲೇವಾರಿ ಮಾಡಿದರು. ಇನ್ನುಳಿದ ಮೊಕ್ಕದಮೆಗಳು ವಿವಿಧ ನ್ಯಾಯಾಧೀಶರ ನೇತೃತ್ವದಲ್ಲಿ ವಿಲೇವಾರಿ ಮಾಡಲಾಯಿತು.
    ಮೈಸೂರು ಜಿಲ್ಲೆಯಲ್ಲಿ 4233 ಕ್ರಿಮಿನಲ್ ಮೊಕ್ಕದಮೆಗಳಿದ್ದು ಲೋಕ ಅದಾಲತ್‍ನಲ್ಲಿ  ವಿಲೇವಾರಿ ಮಾಡಲು 3 ಸಾವಿರ ಮೊಕ್ಕದಮೆಗಳನ್ನು ಗುರುತಿಸಲಾಗಿದೆ. ಈವರೆಗೆ 1500 ಮೊಕ್ಕದಮೆಗಳು ವಿಲೇವಾರಿ ಮಾಡಲಾಗಿದೆ. ಮೈಸೂರು ತಾಲ್ಲೂಕಿಗೆ ಸಂಬಂಧಿಸಿದಂತೆ 650 ಮೊಕ್ಕದಮೆಗಳಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಉಪಸ್ಥಿತಿಯಲ್ಲಿ ಸೆಪ್ಟೆಂಬರ್ 2 ರಂದು ಲೋಕ ಅದಾಲತ್ ನಡೆಸಲಾಗುವುದು. ಮೈಸೂರು ಜಿಲ್ಲೆಯ ನ್ಯಾಯಾಲಯಗಳಲ್ಲಿ ದಿನಾಂಕ 12-09-2015 ರವರೆಗೆ ಲೋಕ ಅದಾಲತ್ ನಡೆಯಲಿದೆ. ಆಗಸ್ಟ್ 28 ರಂದು ಮೈಸೂರು ಕೇಂದ್ರ ಕಾರಾಗೃಹದಲ್ಲಿಯೂ ಸಹ ಲೋಕ ಅದಾಲತ್ ನಡೆಸಲಾಗುವುದು.
      

Wednesday 26 August 2015

ಮೈಸೂರು, ಆ. 26- ಯಾವುದೇ ರಾಷ್ಟ್ರದಲ್ಲಿ ರಫ್ತು ವಹಿವಾಟು ಹೆಚ್ಚಿನ ಪ್ರಮಾಣದಲ್ಲಿದ್ದರೆ ಆ ದೇಶದ ಹಣದ ಅಪಮೌಲ್ಯ ಕಾಣುವುದಿಲ್ಲ ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಎ. ಎಸ್. ಸತೀಶ್ ತಿಳಿಸಿದರು.
ಅವರು ಇಂದು ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರ್ಸ್ ಸಂಸ್ಥೆಯಲ್ಲಿ ವಿಟಿಪಿಸಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮೈಸೂರು ಹಾಗೂ ಮೈಸೂರು ಕೈಗಾರಿಕೆಗಳ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೈಗಾರಿಕೋದ್ಯಮಿಗಳು ಮತ್ತು ವಾಣಿಜೊದ್ಯಮಿಗಳಿಗಾಗಿ ಆಯೋಜಿಸಿದ್ದ ರಫ್ತು ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕೈಗಾರಿಕೊದ್ಯಮಿಗಳು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಸಿದ್ಧಪಡಿಸುವತ್ತ ಹೆಚ್ಚು ಗಮನ ಹರಿಸಬೇಕು. ಪದಾರ್ಥಗಳ ಗುಣಮಟ್ಟ ಉತ್ತಮವಾಗಿದ್ದರೆ ಅವುಗಳಿಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದ್ದೇ ಇರುತ್ತದೆ. ಪದಾರ್ಥಗಳ ಗುಣಮಟ್ಟ ಚೆನ್ನಾಗಿದ್ದಲ್ಲಿ ದೇಶದ ರಫ್ತು ವಹಿವಾಟು ಹೆಚ್ಚುವುದರೊಂದಿಗೆ ಕೈಗಾರಿಕೆಗಳ ಪ್ರಗತಿಯೂ ಆಗಲಿದೆ ಎಂದರು.
ಮೈಸೂರು ಜಿಲ್ಲೆಯಿಂದ ವಿದೇಶಗಳಿಗೆ ಸುಮಾರು 7.5 ಕೋಟಿ ರೂಗಳ ಮೌಲ್ಯದ ವಿವಿಧ ವಸ್ತುಗಳು ರಫ್ತಾಗುತ್ತಿವೆ. ಈ ಮೊತ್ತವನು 20 ಸಾವಿರ ಕೋಟಿಗಳಿಗೆ ಹೆಚ್ಚಿಸುವಂತಾಗಬೇಕೆಂಬ ಗುರಿಯನ್ನು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಇಟ್ಟುಕೊಂಡಿದ್ದು ಈ ಗುರಿಯನ್ನು ಸಾಧಿಸಲು ಇಂದಿನಿಂದಲೇ ಕೈಗಾರಿಕೋದ್ಯಮಿಗಳು ಮುಂದಾಗುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ. ವಿಶ್ವನಾಥ್ ಮಾತನಾಡಿ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಷ್ಟು ವಿಸ್ತೀರ್ಣಯುಳ್ಳ ಜಪಾನ್ ದೇಶವು ಅದರಂತೆ ಚೈನಾದೇಶವೂ ರಫ್ತು ವಹಿವಾಟಿನಲ್ಲಿ ನಮ್ಮ ದೇಶಕ್ಕಿಂತ ಮುಂದಿದೆ. ಇದಕ್ಕೆ ಕಾರಣ ಅಲ್ಲಿ ತಯಾರಾಗುವ ಉತ್ತಮ ಗುಣ ಮಟ್ಟದ ಪದಾರ್ಥಗಳೇ ಆಗಿವೆ. ಅದಾಗ್ಯೂ ನಮ್ಮ ದೇಶದಿಂದ ಸಾಂಬಾರ ಪದಾರ್ಥಗಳು, ದ್ವಿಚಕ್ರವಾಹನಗಳು, ಕ್ರೀಡಾ ಸಾಮಗ್ರಿಗಳು, ರಬ್ಬರ್ ಉತ್ಪನ್ನಗಳಾದ ಟಯರ್‍ಗಳು, ಟ್ಯೂಬ್‍ಗಳು ಸಿದ್ಧಪಡಿಸಿದ ಉಡುಪುಗಳು, ಚಹಾ ಇತ್ಯಾದಿ ಪದಾರ್ಥಗಳು ಸೇರಿದಂತೆ ಇನ್ನೂ ಹಲವಾರೂ ಉತ್ಪನ್ನಗಳು ಹೊರ ದೇಶಗಳಿಗೆ ರಫ್ತಾಗುತ್ತವೆ. ಇದರಿಂದ ಸುಮಾರು 573 ಕೊಟಿ ರೂ. ಗಳ ವಾರ್ಷಿಕ ವಹಿವಾಟು ನಡೆಸಲಾಗುತ್ತಿದೆ ಎಂದು  ಹೇಳಿದ ವಿಶ್ವನಾಥ್ ನಮ್ಮ ಕೈಗಾರಿಕೋದ್ಯಮಿಗಳು ಉತ್ತಮ ಗುಣಮಟ್ಟದ ವಸ್ತುಗಳನ್ನು ಸಿದ್ಧಪಡಿಸುವತ್ತ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು. ರಫ್ತು ವಹಿವಾಟಿಗೆ ಸಂಘದ ವತಿಯಿಂದ ಎಲ್ಲ ರೀತಿಯ ನೆರವನ್ನು ನೀಡುವುದಾಗಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ. ಶಿವಂಕರ್, ಉಪ ನಿರ್ದೇಶಕ ಮಹಮದ್ ಅತೀಕುಲ್ಲಾ ಷರೀಫ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಶ್ರೀಶೈಲರಾಮಣ್ಣನವರ್ ಹಾಗೂ 50ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಫ್‍ಕೆಸಿಸಿಐನ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ವಹಿಸಿದ್ದರು.

Monday 24 August 2015

ಮೈಸೂರು ಸುದ್ದಿಗಳು

ಬರ ಮತ್ತು ಪ್ರವಾಹ ಪರಿಸ್ಥಿತಿ ಕುರಿತು ಸಭೆ
      ಮೈಸೂರು,ಆ.24.ರಾಜ್ಯದಲ್ಲಿ ಬರ ಮತ್ತು ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸುವ ಬಗ್ಗೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಚಿವ ಸಂಪುಟದ ಉಪ ಸಮಿತಿಯ ಮಂತ್ರಿಗಳ ಉಪಸ್ಥಿತಿಯಲ್ಲಿ ಮೈಸೂರು ವಿಭಾಗದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಸಂಬಂಧಪಟ್ಟ  ಇಲಾಖೆ ಅಧಿಕಾರಿಗಳ ಸಭೆಯನ್ನು ದಿನಾಂಕ 26ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಕರೆಯಲಾಗಿದೆ.
     ಸಭೆಯಲ್ಲಿ ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಚಿವರುಗಳು ಹಾಗೂ ವಿಧಾನಸಭಾ ಮತ್ತು ವಿಧಾನ ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ ಸಭೆಯಲ್ಲಿ  ಪ್ರಸಕ್ತ ಸಾಲಿನ ಋತುಮಾನ ಪರಿಸ್ಥಿತಿ ಬಗ್ಗೆ ಹಾಗೂ ಕೃಷಿ ಚಟುವಟಿಕೆ, ಕುಡಿಯುವ ನೀರಿನ ವ್ಯವಸ್ಥೆ, ಮೇವು ಪರಿಸ್ಥಿತಿ, ವಿದ್ಯುದ್ಧೀಕರಣ ಇತ್ಯಾದಿಗಳ ಬಗ್ಗೆ ಚರ್ಚಿಸಲಾಗುವುದು ಎಂದು ಪ್ರಾದೇಶಿಕ ಆಯುಕ್ತರ ಕಚೇರಿ ಹೆಚ್ಚುವರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 28 ರಂದು ನೇರ ಫೋನ್-ಇನ್- ಕಾರ್ಯಕ್ರಮ
       ಮೈಸೂರು,ಆ.24.(ಕ.ವಾ.)-ಮೈಸೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿನ  ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಾರ್ವಜನಿಕ ಕುಂದುಕೊರತೆ ಅರ್ಜಿ ವಿಲೇವಾರಿ ಬಗ್ಗೆ ನೇರ ಫೋನ್-ಇನ್- ಕಾರ್ಯಕ್ರಮವನ್ನು ದಿನಾಂಕ: 28.08.2015  ರಂದು  ಬೆಳಿಗ್ಗೆ 10-00 ಗಂಟೆಯಿಂದ 11-00 ಗಂಟೆಯವರೆಗೆ ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ ನಡೆಸಲಿದ್ದಾರೆ. ಸಾರ್ವಜನಿಕರು ದೂರವಾಣಿ ಸಂಖ್ಯೆ: 0821-2414433 ಗೆ ಕರೆಮಾಡಿ ತಮ್ಮ ಕುಂದುಕೊರತೆಗಳ ಬಗ್ಗೆ ಚರ್ಚಿಸಬಹುದು ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 27 ರಂದು ಮುಂದುವರೆದ ಕೌನ್ಸಿಲ್ ಸಭೆ
       ಮೈಸೂರು,ಆ.24.(ಕ.ವಾ.)-ದಿನಾಂಕ 30-07-2015ರ ಮೈಸೂರು ಮಹಾನಗರಪಾಲಿಕೆ ಮುಂದುವರೆದ ಕೌನ್ಸಿಲ್ ಸಭೆ ಆಗಸ್ಟ್ 27 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ಮಹಾನಗರ ಪಾಲಿಕೆ ನಾಲ್ವಡಿ ಕೃಷ್ಣರಾಜ ಸಭಾಂಗಣದಲ್ಲಿ ನಡೆಯಲಿದೆ ಎಂದು ಕೌನ್ಸಿಲ್ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಮೇಶ್ ಕುಮಾರ್ ಅವರಿಗೆ ಪಿಎಚ್.ಡಿ. ಪದವಿ
    ಮೈಸೂರು,ಆ.24.(ಕ.ವಾ.)- ಮೈಸೂರು ವಿಶ್ವವಿದ್ಯಾಲಯವು ರಮೇಶ್ ಕುಮಾರ್ ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಪಾರ್ವತಮ್ಮ ಜಿ.ಹೆಚ್. ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “ಹಿರಿಯ ಪ್ರಾಥಮಿಕ ಶಾಲಾ ಬುಡಕಟ್ಟು ವಿದ್ಯಾರ್ಥಿಗಳ ಪರಿಸರ ಅಧ್ಯಯನ ಜ್ಞಾನ ಮತ್ತು ಸಂಬಂಧಿತ ಚಲಕಗಳು” ಕುರಿತು ಸಾದರಪಡಿಸಿದ ಶಿಕ್ಷಣ ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ರಮೇಶ್ ಕುಮಾರ್ ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.




ಸರ್ವ ಸದಸ್ಯರ ಸಭೆ
     ಮೈಸೂರು,ಆ.24.ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಹಾಮಂಡಳಿ ವಾರ್ಷಿಕ ಸರ್ವಸದಸ್ಯರ ಸಭೆ ಆಗಸ್ಟ್ 29 ರಂದು ಬೆಳಿಗ್ಗೆ 11 ಗಂಟೆಗೆ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಹಾಮಂಡಳದ ಕಚೇರಿಯ ಆವರಣದಲ್ಲಿ ನಡೆಯಲಿದೆ.
ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಹಾಮಂಡಳಿ ಪುನ:ಶ್ಚೇತನ ವಿಷಯದ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯನವನ್ನು ತೆಗೆದುಕೊಳ್ಳುವ ಸಂಬಂಧ ಸಭೆ ಕರೆಯಲಾಗಿದೆ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಹಾಮಂಡಳಿಆಡಳಿತಾಧಿಕಾರಿಗಳ ವ್ಯವಸ್ಥಾಪಕ ನಿರ್ದೇಶಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 26 ರಂದು ಚಿಗುರು ಕಾರ್ಯಕ್ರಮ
    ಮೈಸೂರು,ಆ.24.ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಗಸ್ಟ್ 26 ರಂದು ಬೆಳಿಗ್ಗೆ          10-30 ಗಂಟೆಗೆ ಹೆಚ್.ಡಿ.ಕೋಟೆ ತಾಲ್ಲೂಕಿನ ಸವ್ವೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಚಿಗುರ ಕಾರ್ಯಕ್ರಮ ನಡೆಯಲಿದೆ.
     ಚಿಗುರು ಕಾರ್ಯಕ್ರಮದಲ್ಲಿ ಅಮೋಘ ಮತ್ತು ತಂಡದಿಂದ ಕೊಳಲು ವಾದನ, ಮಲ್ಲೇಶ್ ಎಸ್. ಮತ್ತು ತಂಡದಿಂದ ಸಮೂಹ ನೃತ್ಯ, ಶಿಶಿರ್ ಆರ್. ಆತ್ರೇಯೆಸ್ ಮತ್ತು ತಂಡದಿಂದ ಶಾಸ್ತ್ರೀಯ ಸಂಗೀತ, ವರಲಕ್ಷ್ಮಿ ಸಿ. ಮತ್ತು ತಂಡದಿಂದ ಜನಪದ ಗೀತೆ, ರಮ್ಯ ಮತ್ತು ತಂಡದಿಂದ ಶಾಸ್ತ್ರೀಯ ನೃತ್ಯ, ಜಿ. ರಾಜಶೇಖರ್ ಅವರಿಂದ ಏಕಪಾತ್ರಾಭಿಯ, ಪ್ರೇಕ್ಷಾ ಮತ್ತು ತಂಡದಿಂದ ಹಾಡುಗಾರಿಕೆ ಹಾಗೂ ಬಿ.ಆರ್. ಭರತ್ ಮತ್ತು ತಂಡದಿಂದ ನಾಟಕ ನಡೆಯಲಿದೆ.
     ಜಿಲ್ಲಾ ಪಂಚಾಯತ್ ಸದಸ್ಯ ಡಿ.ಎಂ. ಚಿಕ್ಕಣ್ಣೇಗೌಡ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಧಾನಸಭಾ ಸದಸ್ಯ ಚಿಕ್ಕಮಾದು ಅವರು ಅಧ್ಯಕ್ಷತೆ ವಹಿಸುವರು.
     ಹೆಚ್.ಡಿ.ಕೋಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಸ್. ಬಾಲಚಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಹೇಶ್ವರಿ ತಂಗವೇಲು, ಸವ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮ, ಉಪಾಧ್ಯಕ್ಷ ಎಸ್.ಕೆ. ಕುಮಾರ್ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
    ಮೈಸೂರು,ಆ.25.ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಜಿ.ಕೆ.ವಿ.ಕೆ ನವೆಂಬರ್ ತಿಂಗಳಲ್ಲಿ ಕೃಷಿ ಮೇಳ ಆಯೋಜಿಸಲಿದೆ. ಈ ಸಂದರ್ಭದಲ್ಲಿ ಕೃಷಿ ಪ್ರಶಸ್ತಿ ನೀಡಲು  ಅರ್ಹರ ರೈತ ಹಾಗೂ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ.
    ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಹಾಗೂ ರೈತ ಮಹಿಳಾ ಪ್ರಶಸ್ತಿ, ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಮತ್ತು ರೈತ ಮಹಿಳಾ ಪ್ರಶಸ್ತಿ ಕಾರ್ಪೋರೇಷನ್ ಬ್ಯಾಂಕ್ ಆಯೋಜಿತ ಕಾರ್ಪ್ ರೈತ ಪ್ರಶಸ್ತಿ, ಡಾ|| ಎಂ.ಹೆಚ್. ಮರೀಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ ಹಾಗೂ ಸಿ. ಭೈರೇಗೌಡ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ನೀಡಲಾಗುವುದು.
     ಮೈಸೂರು ಜಿಲ್ಲೆಯ ಅರ್ಹ ರೈತರು ಅರ್ಜಿಯನ್ನು ವಿಸ್ತರಣಾ ಮುಖ್ಯಸ್ಥರು, ವಿಸ್ತರಣಾ ಶಿಕ್ಷಣ ಘಟಕ, ಸಾವಯವ ಕೃಷಿ ಸಂಶೋಧನಾ ಕೇಂದ್ರ, ನಾಗನಹಳ್ಳಿ ಮೈಸೂರು-3  ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿ,   ಅಥವಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳು ಅಥವಾ ಜಿಲ್ಲಾ ಮತ್ತು ತಾಲ್ಲೂಕಿನ ಪಶುಸಂಗೋಪನೆ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಇಲಾಖೆಯಲ್ಲಿ ಅಥವಾ ವೆಬ್‍ಸೈಟ್ ತಿತಿತಿ.uಚಿsbಚಿಟಿgಚಿಟoಡಿe.eಜu.iಟಿ  ನಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 30 ರೊಳಗೆ ಸಲ್ಲಿಸಬೇಕು.    ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2591263ನ್ನು ಸಂಪರ್ಕಿಸಬಹುದು.
ದೂರು ಪ್ರಾಧಿಕಾರ ರಚನೆ
    ಮೈಸೂರು,ಆ.24.ಉಪ ಪೊಲೀಸ್ ಅಧೀಕ್ಷಕರು ಹಾಗೂ ಈ ರ್ಯಾಂಕ್‍ಗಿಂತ ಕಡಿಮೆ ದರ್ಜೆಯ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಂದ ಸಾರ್ವಜನಿಕರಿಗೆ ಕಿರುಕುಳ ಉಂಟಾದಲ್ಲಿ ಸಾರ್ವಜನಿಕರು ದೂರುಗಳನ್ನು ಆಯಾ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮಂಗಳೂರು ಮತ್ತು ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಾಸಗಿ ಅಭ್ಯರ್ಥಿಗಳ ನೋಂದಣಿ
    ಮೈಸೂರು,ಆ.24. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2016ರ ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಣಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.
   ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 14 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸುವವರು ದಿನಾಂಕ 01-03-2016ಕ್ಕೆ 15 ವರ್ಷ ಪೂರ್ಣಗೊಂಡಿರಬೇಕು. ನೋಂದಣಿ ಶುಲ್ಕ ರೂ. 185/- ನ್ನು ನೆಫ್ಟ್ ಚಲನ್ ಮೂಲಕ ಕಾರ್ಪೋರೇಷನ್ ಬ್ಯಾಂಕ್‍ನಲ್ಲಿ ಪಾವತಿಸಬೇಕಿದ್ದು, ಅರ್ಜಿ ಹಾಗೂ ನೆಫ್ಟ್ ಚಲನ್‍ಗಳನ್ನು ಉಚಿತವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ.

Friday 21 August 2015

ಕ್ರೀಡೆಯಿಂದ ಸ್ನೇಹ, ಬಾಂಧವ್ಯ ವೃದ್ಧಿ: ಸಚಿವ ಅಂಬರೀಶ್


ಕ್ರೀಡೆಯಿಂದ ಸ್ನೇಹ, ಬಾಂಧವ್ಯ ವೃದ್ಧಿ: ಸಚಿವ ಅಂಬರೀಶ್
* ಮಿಮ್ಸ್‍ನಲ್ಲಿ ರಾಜ್ಯ ಮಟ್ಟದ ಅಂತರ ವೈದ್ಯಕೀಯ ಕಾಲೇಜುಗಳ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ
ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ವತಿಯಿಂದ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಆಯೋಜಿಸಿರುವ ಮೂರು ದಿನಗಳ ರಾಜ್ಯ ಮಟ್ಟದ ಅಂತರ ವೈದ್ಯಕೀಯ ಕಾಲೇಜುಗಳ ಸಾಂಸ್ಕøತಿಕ ಮತ್ತು ಕ್ರೀಡಾಕೂಟ ‘ಮಿಡಿತ-2015’ಕ್ಕೆ ವರ್ಣರಂಜಿತ ಚಾಲನೆ ನೀಡಲಾಯಿತು.
ಮಿಮ್ಸ್‍ನ ಕ್ರೀಡಾಂಗಣದ ಆವರಣದಲ್ಲಿ ಆಯೋಜಿಸಿದ್ದ ವರ್ಣರಂಜಿತ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳನ್ನು ಬೆಸೆಯಲು ಕ್ರೀಡಾಕೂಟ ಸಹಕಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವುದರ ಜತೆಗೆ ಸ್ನೇಹ, ಬಾಂಧವ್ಯವನ್ನು ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಎಲ್ಲ ಕ್ಷೇತ್ರಗಳಿಗಿಂತ ವೈದ್ಯಕೀಯ ಕ್ಷೇತ್ರ ಹೆಚ್ಚಿನ ಮಹತ್ವ ಪಡೆದಿದೆ. ವೈದ್ಯರು ರೋಗಿಗಳೊಂದಿಗೆ ಉತ್ತಮವಾಗಿ ನಾಲ್ಕು ಮಾತನಾಡಿದರೆ ಅರ್ಧ ರೋಗ ಗುಣವಾದಂತಾಗುತ್ತದೆ. ಹಣಕ್ಕೆ ಹೆಚ್ಚಿನ ಮಹತ್ವ ನೀಡದೆ, ಮಾನವೀಯ ನೆಲೆಯಲ್ಲಿ ರೋಗಿಗಳಿಗೆ ಸ್ಪಂದಿಸುವ ಗುಣವನ್ನು ವೈದ್ಯರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಂಡ್ಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು ಎಲ್ಲಿಯಾದರೂ ಉತ್ತಮ ಸೇವೆ ಮಾಡುವಷ್ಟು ತರಬೇತಿ ಪಡೆಯಬಹುದು. ಕಾಲೇಜಿನಲ್ಲಿ ಉತ್ತಮ ಶಿಕ್ಷಣ ದೊರಕುವ ಜತೆಗೆ ಎಲ್ಲ ರೀತಿಯ ರೋಗಿಗಳಿಗೆ ಚಿಕಿತ್ಸೆ ನೀಡಿ, ಉತ್ತಮ ತರಬೇತಿ ಹೊಂದಿರುತ್ತಾರೆ. ಇದರಿಂದ ಮುಂದೆ ರೋಗಿಗಳಿಗೆ ನುರಿತ ಚಿಕಿತ್ಸೆ ನೀಡಬಹುದಾಗಿದೆ ಎಂದರು.
ಮಂಡ್ಯ ವೈದ್ಯಕೀಯ ಶಿಕ್ಷಣ ಸಂಸ್ಥೆ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದ್ದು, ನಿರ್ದೇಶಕಿ ಡಾ.ಪುಷ್ಪಾ ಸರ್ಕಾರ್ ಅವರ ಉತ್ತಮ ಆಡಳಿತ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು ರಾಷ್ಟ್ರ ಮಟ್ಟದಲ್ಲಿ ಕಾಲೇಜು ಕೀರ್ತಿ ಪಡೆಯಲಿ ಎಂದು ಹಾರೈಸಿದರು.
ಜಿಲ್ಲಾಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಂ.ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇಂತಹ ಕ್ರೀಡಾಕೂಟಗಳು ಅತ್ಯಾವಶ್ಯಕವಾಗಿವೆ. ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ, ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಮಿಮ್ಸ್ ನಿರ್ದೇಶಕಿ ಡಾ.ಪುಷ್ಪಾ ಸರ್ಕಾರ್ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟ ಸಮಿತಿ ಅಧ್ಯಕ್ಷ ಡಾ.ಎಂ.ಎಸ್.ಶಿವಕುಮಾರಸ್ವಾಮಿ, ಡಾ.ಬಿ.ಆರ್.ಹರೀಶ್ ಇತರರು ಭಾಗವಹಿಸಿದ್ದರು.
ಲಗೋರಿ ಬ್ಯಾಂಡ್ ಶೋ ತಂಡ ಆಕರ್ಷಕ ಕಾರ್ಯಕ್ರಮ ಪ್ರದರ್ಶಿಸಿದರು. ವಿವಿಧ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ಪ್ರದರ್ಶನ ಮಾಡಿದರು. ರಾಜ್ಯದ 49 ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ರವ
ವರಿಗೆ ಮಾಜಿ ಸಚಿವ ಜಿ.ಮಾದೇಗೌಡರವರು ಕೊಲೆ ಬೆದರಿಕೆ ಹಾಕಿರುವುದನ್ನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಖಂಡಿಸುತ್ತದೆ ಎಂದು ಸಂಘದ ಮಂಡ್ಯ ಜಿಲ್ಲಾದ್ಯಕ್ಷ ನಾಗೇಶ್ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳು ಅತ್ಯಂತ ದಕ್ಷರಾಗಿ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹ ಅಧಿಕಾರಿಯವರಿಗೆ ಈ ರೀತಿಯಲ್ಲಿ ಕೊಲೆ ಬೆದರಿಕೆ ಹಾಕಿರುವುದನ್ನ ಕೆಳ ಹಂತದ ಅಧಿಕಾರಿಗಳು ಹಾಗೂ ನೌಕರರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಹಿರಿಯ ರಾಜಕಾರಣಿ ಯಾದ ಮಾದೇಗೌಡರವರು ಪ್ರಮಾಣಿಕ ಜಿಲ್ಲಾಧಿಕಾರಿಗಳಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡುವ ಬದಲು ಕೊಲೆ ಬೆದರಿಕೆ ಹಾಕಿರುವ ದುರಂತ ಎಂದು ಹೇಳಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಅಪ್ಪಾಜಪ್ಪ,ಚಂದ್ರಶೇಖರ್, ತಮ್ಮಣ್ಣಗೌಡ,ಮಹೇಶ್, ನಾಗೇಶ್, ಹೇಮಣ್ಣ ಉಪಸ್ಥಿತರಿದ್ದ ರು.

ಮಂಡ್ಯ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಲ ಸಂಪನ್ಮೂಲ ಇಲಾಖೆ(ಸಣ್ಣ ನೀರಾವರಿ) 5ನೇ ಸಣ್ಣ ನೀರಾವರಿ ಗಣತಿಯ ಜಿಲ್ಲಾ ಮಟ್ಟದ ಕಾರ್ಯಾಗಾರ ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಅಧ್ಯಕ್ಷತೆಯಲ್ಲಿ ನಡೆಯಿತು.
ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯು ಶೇ.100ರಷ್ಟು ಕೇಂದ್ರ ಪುರಸ್ಕøತ ಸಣ್ಣ ನೀರಾವರಿ ಅಂಕಿಅಂಶಗಳ ಸಮನ್ವಯೀಕರಣ ಯೋಜನೆಯಡಿಯಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಸಣ್ಣ ನೀರಾವರಿ ಗಣತಿ ಕೈಗೊಳ್ಳಲಾಗುತ್ತಿದೆ. ಸಣ್ಣ ನೀರಾವರಿ ಯೋಜನೆ ಗಣತಿಯಡಿ ಎರಡು ಮುಖ್ಯ ವಿಧಗಳಾಗಿ ಅಂತರ್ಜಲ ಯೋಜನೆ ಮತ್ತು ಮೇಲ್ಮೈಜಲ ಯೋಜನೆಗಳೆಂದು ಪರಿಗಣಿಸಿ ಗಣತಿ ಮಾಡಲಾಗುತ್ತಿದೆ ಎಂದರು.
ಜಾತಿಗಣತಿ ಮಾದರಿಯಲ್ಲಿ ನೀರಾವರಿ ಗಣತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ಜಿಲ್ಲಾಧಿಕಾರಿಗಳು ಜಿಲ್ಲಾ ಸಮಿತಿ ಅಧ್ಯಕ್ಷರಾಗಿದ್ದು, ಜಂಟಿ ಕೃಷಿ ನಿರ್ದೇಶಕರು, ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ವಿಭಾಗದ ಎಂಜಿನಿಯರ್ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಚನ್ನಕೇಶವ, ಸಾಂಖ್ಯಿಕ ಅಧಿಕಾರಿ ಸತ್ಯನ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲ ಎಂಜಿನಿಯರ್ ಕೆ.ವೆಂಕಟೇಶ್ ಸೇರಿದಂತೆ ತಹಸೀಲ್ದಾರ್‍ಗಳು, ತಾಪಂ ಇಒಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.


ಮಂಡ್ಯ: ನಗರದ ಸಿದ್ದಾರ್ಥ ವಿದ್ಯಾಸಂಸ್ಥೆಯಲ್ಲಿ ರೋಟರಿ, ಇನ್ನರ್‍ವ್ಹೀಲ್ ಸಂಸ್ಥೆ ವತಿಯಿಂದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮಶತಮಾನೋತ್ಸವ ಅಂಗವಾಗಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಶೂಗಳನ್ನು ಇನ್ನರ್‍ವ್ಹೀಲ್ ಅಧ್ಯಕ್ಷೆ ರಮ್ಯಾರಾಣಿ ವಿತರಿಸಿದರು.
ನಂತರ ಅವರು ಮಾತನಾಡಿ, ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹಲವು ಯೋಜನೆಗಳ ಮೂಲಕ ಸಾವಿರಾರು ಕೋಟಿ ರೂ. ನೀಡುತ್ತಿದೆ. ಇದರ ಜತೆಗೆ ಸಂಘಸಂಸ್ಥೆಗಳು ಸಹ ಸಮವಸ್ತ್ರ, ನೋಟ್‍ಬುಕ್ ಸೇರಿದಂತೆ ಇನ್ನಿತರೆ ಸೌಲಭ್ಯ ಕಲ್ಪಿಸುತ್ತಿವೆ. ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರುವಂತೆ ತಿಳಿಸಿದರು.
ಇನ್ನರ್ ವ್ಹೀಲ್ ಸಂಸ್ಥೆಯ ಚಂದ್ರ ರವೀಂದ್ರ, ರೋಟರಿ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಆರ್.ರವೀಂದ್ರ, ಸಿದ್ದಾರ್ಥ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಡಿ.ಜಯರಾಮ್, ನಗರಸಭೆ ಸದಸ್ಯರಾದ ಬಿ.ಸಿದ್ದರಾಜು, ಅರುಣ್‍ಕುಮಾರ್, ಉಪನ್ಯಾಸಕ ಎಚ್.ಎಸ್.ನಾಗೇಶ್ ಭಾಗವಹಿಸಿದ್ದರು.

ಮಂಡ್ಯ: ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಕ್ರೀಡಾಪಟುಗಳ ಸಂಖ್ಯೆ ಕಡಿಮೆ ಇದೆ ಎಂದು ಲೋಕಸಭಾ ಸದಸ್ಯ ಸಿ.ಎಸ್.ಪುಟ್ಟರಾಜು ಹೇಳಿದರು.
ನಗರದ ರೈತ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮತ್ತು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇಂದು ಬಹುತೇಕ ಪಾಲಕರು ಮಕ್ಕಳನ್ನು ಅಂಕಗಳಿಸಲಿಕ್ಕಷ್ಟೇ ಸೀಮಿತಗೊಳಿಸಿದ್ದಾರೆ. ಇದ್ದರಿಂದಾಗಿ ಕ್ರೀಡಾಪಟುಗಳ ಸಂಖ್ಯೆ ಕಡಿಮೆಯಾಗುವಂತಾಗಿದೆ ಎಂದರು.
ಪಠ್ಯದಂತೆ ಕ್ರೀಡಾ ಚಟುವಟಿಗಳಿಗೂ ಹೆಚ್ಚಿನ ಮಹತ್ವ ನೀಡಬೇಕು. ಕ್ರೀಡಾ ಚಟುವಟಿಕೆಗಳಿಂದ ಮನುಷ್ಯ ಮಾನಸಿಕ, ದೈಹಿಕವಾಗಿ ಸಧೃಡವಾಗಬಹುದು. ಅದೇ ರೀತಿ ಕ್ರೀಡೆಯಿಂದ ಶಿಸ್ತು ಬೆಳೆಯುತ್ತದೆ. ಇಂದು ಜನಪ್ರತಿನಿಧಿಗಳಿಗೆ ಶಿಸ್ತು ಎನ್ನುವುದಿದ್ದರೆ ಅದು ಕ್ರೀಡೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿರುವುದು ಎಂದರು.
ಪಠ್ಯೇತರ ಚಟುವಟಿಕೆಗಳಲ್ಲಿ ಬದಲಾವಣೆ ತರುವ ಉz್ದÉೀಶದಿಂದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಅಲ್ಲದೆ ಸಮಿತಿ ರಚಿಸಿದ್ದು, ಇದರಲ್ಲಿ ತಾನು ಕೂಡ ಸದಸ್ಯನಾಗಿz್ದÉೀನೆ. ಈಗಾಗಲೇ ಈ ಸಂಬಂಧ ಎರಡು ಸಭೆ ನಡೆದಿವೆ ಎಂದರು.
 ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ಕ್ರೀಡಾ ಚಟುವಟಿಕೆಗಳು ಮನುಷ್ಯ ಮತ್ತು ದೇಶದ ನಡುವೆ ಸಂಬಂಧ ವೃದ್ದಿಸುತ್ತದೆ. ಜಗತ್ತಿನೆಲ್ಲೆಡೆ ಮಾನವ ಸಂಬಂಧ ಹುಟ್ಟುಹಾಕುತ್ತದೆ ಎಂದರು
ನಮ್ಮ ದೇಶದಲ್ಲಿ ಕ್ರಿಕೆಟ್ ಆಟಕ್ಕೆ ಇರುವಷ್ಟು ಬೆಂಬಲ ಬೇರೆ ಕ್ರೀಡೆಗಳಿಗೆ ಸಿಗುತ್ತಿಲ್ಲ. ಆದರೆ, ಈ ಕ್ರಿಕೆಟ್‍ನಿಂದಾಗಿ ಜೂಜಾಡುವವರ ಸಂಖ್ಯೆ ಹೆಚ್ಚಿದ್ದು, ಮಧ್ಯರಾತ್ರಿಯಾದರೂ ನಡೆಯುತ್ತಲೇ ನಡೆಯುತ್ತಿರುತ್ತದೆ. ಆದ್ದರಿಂದ ಮೊದಲು ಕ್ರಿಕೆಟ್ ಅನ್ನು ತೆಗದುಹಾಕಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಗೋ.ಮಧುಸೂಧನ್ ಮಾತನಾಡಿ, ದೈಹಿಕ ಶಿಕ್ಷಣ ಶಿಕ್ಷಕರ ವೇತನದಲ್ಲಿರುವ ತಾರತಮ್ಯ ಹೋಗಲಾಡಿಸಲು ಕುಮಾರ ನಾಯಕ ವರದಿ ಜಾರಿಯಾಗಬೇಕು. ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಬೇಕು ಎಂದರು.
ಮೊದಲು ದೈಹಿಕ ಶಿಕ್ಷಣ ಶಿಕ್ಷಕರು ಆಟ ಮಾತ್ರ ಆಡಿಸುತ್ತಿದ್ದರು. ಆದರೆ ಇಂದು ಪಾಠವನ್ನು ಮಾಡುತ್ತಿದ್ದು, ಈಗಲೂ ಅವರನ್ನು ಸಹ ಶಿಕ್ಷಕರ ಎನ್ನಲು ಆಗದಿದ್ದರೆ ಅದು ಮೂರ್ಖತನದ ಪರಮಾವಧಿ ಎಂದರು.
ವಿಧಾನ ಪರಿಷತ್ತಿನ ಉಪಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೋಮಲಾಸ್ವಾಮಿ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಎಂ.ಸೋಮಶೇಖರ್, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಇತರರು ಇದ್ದರು.

ಕೋಟ್
ವಿಶ್ವ ಮಾನವ ಪದಕ್ಕೆ ಅರ್ಹ
ಕ್ರೀಡೆ ಎಲ್ಲರಲ್ಲಿಯೂ ಸಮಾನತೆಯನ್ನು ಸೃಷ್ಠಿಸುತ್ತದೆ. ಇಂತಹ ಕ್ರೀಡೆಯನ್ನು ಕಲಿಸುವ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಆದ್ದರಿಂದ ವಿಶ್ವ ಮಾನವ ಪದವನ್ನು ದೈಹಿಕ ಶಿಕ್ಷಣ ಶಿಕ್ಷಕರಿಗೆ ನೀಡಬೇಕು.
 ಕೆ.ಎಸ್.ಪುಟ್ಟಣ್ಣಯ್ಯ
ಶಾಸಕರು

Wednesday 19 August 2015

“ಗಾಂಧೀಜಿ ದೃಷ್ಟಿಯಲ್ಲಿ ಅಧಿಕಾರ ವಿಕೇಂದ್ರೀಕರಣ ಮತ್ತು ಆದರ್ಶಗ್ರಾಮ ಪರಿಕಲ್ಪನೆ

“ಗಾಂಧೀಜಿ ದೃಷ್ಟಿಯಲ್ಲಿ ಅಧಿಕಾರ ವಿಕೇಂದ್ರೀಕರಣ ಮತ್ತು ಆದರ್ಶಗ್ರಾಮ ಪರಿಕಲ್ಪನೆ”
ಕುರಿತ ಕಾರ್ಯಾಗಾರ ದ ಸಭೆಯಲ್ಲಿ ಸರ್ವಾನುಮತದಿಂದ ಕೈಗೊಂಡ ನಿರ್ಣಯಗಳು
1. ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಗ್ರಾಮದ ಸಮಸ್ಯೆಗಳು, ವ್ಯಾಜ್ಯಗಳು ಪಂಚಾಯ್ತಿ ಕಟ್ಟೆಯಲ್ಲೇ ತೀರ್ಮಾನ ಕೈಗೊಳ್ಳುವಂತೆ ಅಧಿಕಾರವನ್ನು ನೀಡುವುದೆಂದು ಈ ಸಭೆಯು ಸರ್ಕಾರವನ್ನು ಒತ್ತಾಯಿಸುತ್ತದೆ.
2. ಗ್ರಾಮಗಳ ಮೂಲ ಕಸುಬುಗಳಿಗೆ ಸರ್ಕಾರದಿಂದ ವಿಶೇಷ ರಿಯಾಯಿತಿ ಮತ್ತು ಪ್ಯಾಕೇಜ್‍ಗಳನ್ನು ನೀಡಲು ಸಭೆ ಸರ್ಕಾರವನ್ನು ಆಗ್ರಹಿಸುತ್ತದೆ.
3. ಗ್ರಾಮ ಸ್ವಚ್ಛತೆ, ಗ್ರಾಮ ನೈರ್ಮಲ್ಯ, ಕುಡಿಯುವ ನೀರು, ವಿದ್ಯುಚ್ಛಕ್ತಿ, ರಸ್ತೆ, ಶಾಲೆ, ಶೌಚಾಲಯಗಳ ವ್ಯವಸ್ಥೆ ಸಮರ್ಪಕವಾಗಿರುವಂತೆ ಗಮನ ಹರಿಸುವಂತೆ ಸ್ಥಳೀಯ ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತದೆ.
4. ಆಯಾ ಗ್ರಾಮದಲ್ಲಿ ರೈತರು ಸ್ಥಳೀಯವಾಗಿ ಬೆಳೆಯುವ ದವಸ ಧಾನ್ಯಗಳಿಗೆ, ಸರ್ಕಾರದಿಂದಲೇ ನಿಗದಿಮಾಡಿ, ವೈಜ್ಞಾನಿಕ ಬೆಲೆ ನಿಗದಿಪಡಿಸುವ ಸಮಿತಿಯಲ್ಲಿ ರೈತ ಪ್ರತಿನಿಧಿಗಳನ್ನು ನೇಮಿಸಿಕೊಳ್ಳುವುದೆಂದು ಒತ್ತಾಯಿಸುತ್ತದೆ.
5. ಸ್ವದೇಶಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವಂತಹ ರೇಷ್ಮೆ ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ಈ ಕೂಡಲೇ ರದ್ದು ಮಾಡುವುದೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.
6. ರೈತರು ಬೆಳೆದ ಕಬ್ಬಿಗೆ ಆಯಾ ವ್ಯಾಪ್ತಿಗೆ ಬರುವಂತಹ ಸಕ್ಕರೆ ಕಾರ್ಖಾನೆಗಳು ಸೂಕ್ತ ವೈಜ್ಞಾನಿಕ ಬೆಲೆ ನೀಡುವುದರ ಜೊತೆಗೆ ಸೂಕ್ತ ಸಮಯದಲ್ಲಿ ಒಂದು ವಾರದೊಳಗೆ ಹಣ ಪಾವತಿಸುವಂತೆ ಹಾಗೂ ತತ್‍ಕ್ಷಣದಿಂದಲೇ ಕಾರ್ಖಾನೆಗಳು ಪ್ರಾರಂಭಗೊಳ್ಳುವಂತೆ ಸರ್ಕಾರ ಆದೇಶ ನೀಡುವಂತೆ ಸಣೆಯು ಆಗ್ರಹಿಸುತ್ತದೆ.
7. 60 ವರ್ಷ ಮೀರಿದ ಕೃಷಿ ಸ್ವಾವಲಂಬಿತರಿಗೆ ಸರ್ಕಾರಿ ನೌಕರರ ರೀತಿಯ ವೃದ್ಧಾಪ್ಯವೇತನವನ್ನು ಕಡ್ಡಾಯಗೊಳಿಸಲು ಸರ್ಕಾರವನ್ನು ಒತ್ತಾಯಿಸುತ್ತದೆ.
8. ಸಣ್ಣ ಹಿಡುವಳಿದಾರ ರೈತರ ಮಕ್ಕಳಿಗೆ ವೃತ್ತಿಪರ ಕೋರ್ಸ್‍ಗಳ ವೆಚ್ಚವನ್ನು ಸರ್ಕಾರವೇ ಪೂರ್ಣವಾಗಿ ಭರಿಸುವಂತೆ ಸಭೆಯು ಒತ್ತಾಯಿಸುತ್ತದೆ.
9. ಮದ್ಯಪಾನ ಮುಂತಾದ ದುಶ್ಚಟಗಳನ್ನು ಕಡ್ಡಾಯವಾಗಿ ಸರ್ಕಾರ ನಿಷೇಧಿಸುವಂತೆ ಸಭೆ ಆಗ್ರಹ ಪೂರ್ವವಾಗಿ ಒತ್ತಾಯಿಸುತ್ತದೆ.
10. ಸಣ್ಣ ಹಿಡುವಳಿ ರೈತರ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದೆಂದು ಸಭೆಯು ಸರ್ಕಾರವನ್ನು ಒತ್ತಾಯಿಸುತ್ತದೆ.
11. ರೈತರು ಅದ್ದೂರಿ ಮದುವೆ, ಹಬ್ಬ, ತಿಥಿ ಇತ್ಯಾದಿ ಸಮಾರಂಭಗಳನ್ನು ಆಚರಿಸದಂತೆ ಮನವೊಲಿಸುವುದು..
12. ಸರ್ಕಾರ ಗಾಂಧಿ ಆದರ್ಶ ಗ್ರಾಮ ಪರಿಕಲ್ಪನೆಯ ಚಿಕ್ಕ-ಚಿಕ್ಕ ಪುಸ್ತಕಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ವಿತರಿಸುವುದು. ಅದರ ಜವಾಬ್ದರಿಯೆಂದು ಅರಿತು ಕಾರ್ಯೋನ್ಮುಖರಾಗುವಂತೆ ಸಭೆ ಆಗ್ರಹಿಸುತ್ತದೆ.
13. ಸರ್ಕಾರ ಪ್ರಾಥಮಿಕ, ಪ್ರೌಢಶಾಲೆ ಮತ್ತು ಉನ್ನತ ಶಿಕ್ಷಣ ಪಠ್ಯ ಪುಸ್ತಕಗಳಲ್ಲಿ ಗಾಂಧೀತತ್ವ, ಸಿದ್ಧಾಂತಗಳನ್ನು ಅಳವಡಿಸಲು ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸುತ್ತದೆ.
14. ಗ್ರಾಮದ ನಿರುದ್ಯೋಗಿ ಯುವಕರಿಗೆ, ರೈತ ಮಹಿಳೆಯರಿಗೆ ಸ್ವಾವಲಂಬನೆಯ ಬದುಕಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ನಿಡುವುದು ಶ್ರೇಯಸ್ಕರ ಎಂದು ಸಭೆಯು ನಿರ್ಣಯಿಸುತ್ತದೆ.
15. ಗ್ರಾಮ ರಾಷ್ಟ್ರ ವ್ಯವಸ್ಥೆಯ ಅತಿಚಿಕ್ಕ ಘಟಕ. ಅದೊಂದು ಪುಟ್ಟ ಸರ್ಕಾರ. ಇಲ್ಲಿಂದಲೇ ಸಮೃದ್ಧ ಭಾರತದ ಸಾಕಾರವಾಗಬೇಕಾಗಿದೆ.
16. ಈ ಮೇಲಿನ ನಿರ್ಣಯಗಳ ಸಮರ್ಪಕ ಕಾರ್ಯನಿರ್ವಹಣೆ ಆದಲ್ಲಿ ರೈತರ ಆತ್ಮಹತ್ಯೆಯನ್ನು ತಡೆಗಟ್ಟಬಹುದೆಂದು ಸಭೆಯು ಸರ್ವಾನುಮತದಿಂದ ಒತ್ತಾಯಿಸುತ್ತದೆ.
 ಕಾರ್ಯಕ್ರಮ
    ಮೈಸೂರು,ಆ.18.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 20 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
    ಅಂದು ಬೆಳಿಗ್ಗೆ 10-35 ಗಂಟೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಬೆಳಿಗ್ಗೆ 11-30 ಗಂಟೆಗೆ ಹುಣಸೂರಿನ ಡಿ.ದೇವರಾಜ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಡಿ.ದೇವರಾಜ ಅರಸು ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.  ಮಧ್ಯಾಹ್ನ 12 ಗಂಟೆಗೆ ಹುಣಸೂರಿನ ಕಲ್ಲಹಳ್ಳಿ ಗ್ರಾಮದಲ್ಲಿ ಡಿ.ದೇವರಾಜ ಅರಸು ಅವರ ಸಮಾಧಿಗೆ ಗೌರವಾರ್ಪಣೆ ಹಾಗೂ ಕಲ್ಲಹಳ್ಳಿಯನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿ ಪಡಿಸಲು ದತ್ತು ತೆಗೆದುಕೊಳ್ಳುವ ಬಗ್ಗೆ ಘೋಷಿಸಿದ  ನಂತರ ಮಧ್ಯಾಹ್ನ 3 ಗಂಟೆಗೆ ಮಾನಸ ಗಂಗೋತ್ರಿ ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಉದ್ಘಾಟನೆ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 6 ಗಂಟೆಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರೆಳಲಿದ್ದಾರೆ.
 ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ.
    ಮೈಸೂರು,ಆ.18:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 6 ವರ್ಷ ಮೇಲ್ಪಟ್ಟ ಹಾಗೂ  15 ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು, ಇತರರ ಪ್ರಾಣ ರಕ್ಷಣೆಗಾಗಿ ಅಸಾಧಾರಣ ಧೈರ್ಯ, ಸಾಹಸ ಪ್ರದರ್ಶಿಸಿದ ಬಾಲಕರಿಗೆ “ಹೊಯ್ಸಳ ಪ್ರಶಸ್ತಿ” ಮತ್ತು ಬಾಲಕಿಯರಿಗೆ “ಕೆಳದಿ ಚೆನ್ನಮ್ಮ ಪ್ರಶಸ್ತಿ” ನೀಡಿ ಗೌರವಿಸಲು ಅರ್ಜಿ ಆಹ್ವಾನಿಸಿದೆ.  ಈ ಪ್ರಶಸ್ತಿ ರೂ.10,000/-ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
     ಅಸಾಧಾರಣ ಧೈರ್ಯ, ಶೌರ್ಯ ಸಾಧಿಸಿರುವ ಪ್ರಕರಣವು ಆಗಸ್ಟ್-2014 ರಿಂದ ಜುಲೈ-2015 ರೊಳಗೆ ನಡೆದಿರಬೇಕು ಹಾಗೂ ಸಾಧನೆ ಜಿಲ್ಲಾ ಮಟ್ಟದಲ್ಲಿ ಗುರುತಿಸಿರಬೇಕು. ಶೌರ್ಯ ಸಾಧನೆ ತೋರಿದ ಬಗ್ಗೆ, ಆರಕ್ಷಕ ಇಲಾಖೆ ಪ್ರಾಥಮಿಕ ತನಿಖಾ ವರದಿ (ಎಫ್.ಐ.ಆರ್) ಅನ್ನು ಲಗತ್ತಿಸಬೇಕು.
       ಈ ಹಿಂದೆ ಯಾವುದಾದರೂ ವರ್ಷಗಳಲ್ಲಿ ಪ್ರಸ್ತಾವನೆ ಜಿಲ್ಲಾ/ರಾಜ್ಯ/ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಪರಿಗಣಿಸಲ್ಪಟ್ಟಿದ್ದಲ್ಲಿ ಮತ್ತೊಮ್ಮೆ ಸಲ್ಲಿಸಲು ಅವಕಾಶವಿರುವುದಿಲ್ಲ.
     ಅರ್ಜಿ ನಮೂನೆಯನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ನಂ:9/ಎ, 3ನೇ ಮಹಡಿ, ಕೃಷ್ಣಧಾಮ ಎದುರು, ಸಾಹುಕಾರ್ ಚೆನ್ನಯ್ಯ ರಸ್ತೆ, ಸರಸ್ವತಿಪುರಂ, ಮೈಸೂರು ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು  ತ್ರಿಪ್ರತಿಯಲ್ಲಿ   ದಿನಾಂಕ:05-09-2015ರೊಳಗೆ ಸಲ್ಲಿಸುವುದು.
   ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:2498031 ಅಥವಾ 2495432ನ್ನು ಸಂಪರ್ಕಿಸಬಹುದಾಗಿದೆ.                                            
ತಂಬಾಕು ನಿಷೇಧ ಕಾಯ್ದೆ ಕುರಿತು ಕಾರ್ಯಾಗಾರ
     ಮೈಸೂರು,ಆ.18.ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಸಿಗರೇಟು ಮತ್ತು ಇತರೇ ತಂಬಾಕು ಉತ್ಪನ್ನಗಳ ನಿಷೇಧ ಕಾಯ್ದೆ 2003 (ಛಿoಠಿಣಚಿ-2003) ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ ಆಗಸ್ಟ್ 19 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ಮಹಾನಗರ ಪಾಲಿಕೆ ಕಚೇರಿ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದೆ.
    ಈ ತರಬೇತಿ ಕಾರ್ಯಾಗಾರಕ್ಕೆ  ಆರೋಗ್ಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗಳು ವಲಯ ಆಯುಕ್ತರು ಮತ್ತು ಅಭಿವೃದ್ಧಿ ಅಧಿಕಾರಿಗಳು ತಪ್ಪದೇ ಹಾಜರಾಗುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 20 ರಂದು ಸಮಾಜಿಕ ಅಭಿವೃದ್ಧಿ ಕುರಿತು ವಿಚಾರ ಸಂಕಿರಣ
      ಮೈಸೂರು,ಆ.18-ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಹಾಗೂ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಸಾಮಾಜಿಕ ಅಭಿವೃದ್ಧಿ ಕುರಿತು ವಿಚಾರ ಸಂಕಿರಣ ಆಗಸ್ಟ್ 20 ರಂದು ಮಧ್ಯಾಹ್ನ 2 ಗಂಟೆಗೆ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
     ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ. ವಿಶ್ವನಾಥ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಯೋಜನಾ ನಿರ್ದೇಶಕ ಕೆ.ಎಸ್. ಶಂಕರ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ, ಮಾನಸಗಂಗೋತ್ರಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ|| ಮಹೇಂದ್ರಕುಮಾರ್ ಎಸ್., ಅಶೋಕ ಹಾರ್ಡ್‍ವೇರ್ ಪ್ರೊಪೈಟರ್ ಪಿ. ರಾಜೇಂದ್ರಕುಮಾರ್., ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ|| ಎನ್. ಶಂಕರ್, ಮಾನಸ ಗಂಗೋತ್ರಿ  ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ|| ಎಂ. ಮಹೇಶ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೆ. ತಿಬ್ಬೇಗೌಡ ಅವರುಗಳು ಭಾಗವಹಿಸುವರು.
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಮೈಸೂರು,ಆ.18.ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 2015-16ನೇ ಸಾಲಿಗೆ ಜಿಎನ್‍ಎಂ, ಪ್ಯಾರಾ ಮೆಡಿಕಲ್ (ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ) ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ತರಬೇತಿ ಶುಲ್ಕ ಹಾಗೂ ಇತರೆ ಶುಲ್ಕ ನೀಡಲು ಅರ್ಜಿ ಆಹ್ವಾನಿಸಿದೆ.
ಈ ಹಿಂದೆ ತರಬೇತಿ ಶುಲ್ಕ ಮತ್ತು ಶಿಷ್ಯ ವೇತನಕ್ಕೆ ಆಯ್ಕೆಯಾಗಿದ್ದು ಪ್ರಸಕ್ತ ಸಾಲಿನಲ್ಲೂ ವ್ಯಾಸಂಗ ಮುಂದುವರಿಸಿರುವ ಅಭ್ಯರ್ಥಿಗಳು ಸಹ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬೇಕು.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 5 ಕಡೆಯ ದಿನವಾಗಿದೆ. ಹೆಚ್ಚಿನ  ವಿವರಗಳಿಗೆ ವೆಬ್ ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ಹಾಗೂ ಞಚಿಡಿeಠಿಚಿss.ಛಿgg.gov.iಟಿ  ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


     
ಕೋರಿಕೆ ವರ್ಗಾವಣೆ : ಆಗಸ್ಟ್ 23 ರಿಂದ ಕೌನ್ಸಿಲಿಂಗ್
    ಮೈಸೂರು,ಆ.18.-ಸಾರ್ವಜನಿಕ ಶಿಕ್ಷಣ ಇಲಾಖೆ 2015ನೇ ಸಾಲಿನ, ಮೈಸೂರು ವಿಭಾಗದೊಳಗಿನ ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ಕೋರಿಕೆ ವರ್ಗಾವಣೆಯ ಅಂತಿಮ ಆದ್ಯತಾ ಪಟ್ಟಿ ಯನ್ನು ದಿನಾಂಕ 17-08-2015 ರಂದು ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ. ಕೋರಿಕೆ ವರ್ಗಾವಣೆಯ ಅಂತಿಮ ಆದ್ಯತಾ ಪಟ್ಟಿಯಲ್ಲಿರುವ ಶಿಕ್ಷಕ ವೃಂದದವರಿಗೆ ದಿನಾಂಕ 23-08-2015ರಿಂದ 25-08-2015ರವರೆಗೆ ಕೌನ್ಸಿಲಿಂಗ್ ಇರುತ್ತದೆ.
      ಕೌನ್ಸಿಲಿಂಗ್‍ಗೆ ಹಾಜರಾಗುವ ಶಿಕ್ಷಕರು  ಇತ್ತೀಚಿನ ಭಾವಚಿತ್ರ ಲಗತ್ತಿಸಿರುವ ಸೇವಾ ದೃಢೀಕರಣ ಪತ್ರ, ತೀವ್ರತರಹ ಖಾಯಿಲೆ/ಅಂಗವಿಕಲ ಪ್ರಕರಣದವರು ಮೈಸೂರು ವಿಭಾಗದ ವೈದ್ಯಕೀಯ ಮಂಡಳಿಯಿಂದ ನೀಡಲಾದ ಮೂಲ ಪ್ರಮಾಣ ಪತ್ರ,  ಪತಿ ಮತ್ತು ಪತ್ನಿ ಪ್ರಕರಣದವರು ಪತಿ ಅಥವಾ ಪತ್ನಿಯ ಮೂಲ ಸೇವಾ ಮತ್ತು ವಾಸ  ದೃಢೀಕರಣ ಪತ್ರ, ವಿಧವಾ ಶಿಕ್ಷಕರ ಪ್ರಕರಣದವರು ಪತಿಯ ಮೂಲ ಮರಣ ಪ್ರಮಾಣ ಪತ್ರ ಅಥವಾ ಇತರೆ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸುವುದು, ಸೈನಿಕ ಪ್ರಕರಣದವರು ಸಕ್ಷಮ ಪ್ರಾಧಿಕಾರದಿಂದ ಪಡೆದ ಮೂಲ ಪ್ರಮಾಣ ಪತ್ರ., ವಿವಾಹಿತ ಶಿಕ್ಷಕರ ಪ್ರಕರಣದಲ್ಲಿ ಪತಿ ಅಥವಾ ಪತ್ನಿ ಈ ಆದ್ಯತೆಯಡಿಯಲ್ಲಿ ಎಷ್ಟು ಬಾರಿ ವರ್ಗಾವಣೆ ಪಡೆದಿರುತ್ತಾರೆ ಎಂಬ ಬಗ್ಗೆ ಸಕ್ಷಮ ಅಧಿಕಾರಿಗಳಿಂದ ದೃಢೀಕರಣ ಪತ್ರದೊಂದಿಗೆ ಹಾಜರಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಭಾಗೀಯ ಕಾರ್ಯದರ್ಶಿಗಳು ಬಿ.ಕೆ. ಬಸವರಾಜ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ದರಪಟ್ಟಿ ಕರೆಯಲು ಮಾಹಿತಿ ಆಹ್ವಾನ
     ಮೈಸೂರು,ಆ.18-ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೈಸೂರು ಕಚೇರಿ ವತಿಯಿಂದ ಆಗಿಂದಾಗ್ಗೆ ಆಹ್ವಾನ ಪತ್ರಿಕೆಗಳ ಮುದ್ರಣ, ಹೆದ್ದಾರಿ ಫಲಕಗಳಿಗೆ ಫ್ಲೆಕ್ಸ್/ವಿನೈಲ್ ಅಳವಡಿಕೆ, ಕ್ಷೇತ್ರಪ್ರಚಾರ ವಾಹನಕ್ಕೆ ಫ್ಲೆಕ್ಸ್ ಅಳವಡಿಕೆ, ಕಿರುಹೊತ್ತಿಗೆ ಮುದ್ರಣ ಮೊದಲಾದ ಕೆಲಸಗಳಿಗೆ ದರಪಟ್ಟಿ ಕರೆಯಬೇಕಾಗಿರುತ್ತದೆ. ಆದ್ದರಿಂದ ಇಂತಹ ಕಾರ್ಯಗಳನ್ನು ನಿರ್ವಹಿಸಿ ಅನುಭವ ಇರುವ ಸಂಸ್ಥೆಗಳನ್ನು ಗುರುತಿಸಿ ಪಟ್ಟಿ ಮಾಡಲು ಹಾಗೂ ಅಗತ್ಯವಿದ್ದಾಗ ದರಪಟ್ಟಿ ಪಡೆಯಲು ನಿಗಧಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಿದೆ. ನಿಗಧಿತ ನಮೂನೆಯನ್ನು ಹಾಗೂ ಹೆಚ್ಚಿನ ವಿವರಗಳನ್ನು ಉಪನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾಭವನ, ಧನ್ವಂತ್ರಿ ರಸ್ತೆ ಮೈಸೂರು ಇವರಿಂದ ಪಡೆದುಕೊಂಡು ದಿನಾಂಕ 22-08-2015ರ ಒಳಗೆ ಮಾಹಿತಿ ನೀಡಲು ಕೋರಲಾಗಿದೆ.

ವಿದ್ಯಾರ್ಥಿವೇತನ: ಹೊಸ ವೆಬ್‍ಸೈಟ್‍ನಲ್ಲಿ ನೋಂದಣಿ
  ಮೈಸೂರು,ಆ.18.ಪರಿಶಿಷ್ಟ ವರ್ಗದ ಇಲಾಖಾ ವತಿಯಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಈ ಹಿಂದೆ ಉಪಯೋಗಿಸುತ್ತಿದ್ದ ವೆಬ್‍ಸೈಟ್‍ನ್ನು ಸ್ಥಗಿತಗೊಳಿಸಲಾಗಿದೆ. ಹೊಸದಾಗಿ ನ್ಯಾಷಿನಲ್ ಸ್ಕಾಲರ್‍ಶಿಪ್ ಪೊರ್ಟಲ್ ತಂತ್ರಾಂಶ ಪ್ರಾರಂಭಿಸಲಾಗಿದೆ.
   9ನೇ ತರಗತಿ, 10ನೇ ತರಗತಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಶಿಕ್ಷಣ ಹಾಗೂ ಇನ್ನುಳಿದ ಮೆಟ್ರಿಕ್ ನಂತರದ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ತಿತಿತಿ.sಛಿhoಟಚಿಡಿshiಠಿ.gov.iಟಿ  ವೆಬ್‍ಸೈಟ್‍ನಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಈ ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಮಾತ್ರ ಭಾರತ ಸರ್ಕಾರದ ವಿದ್ಯಾರ್ಥಿವೇತನ  ಮಂಜೂರು ಮಾಡಲು ಸಾಧ್ಯವಾಗುತ್ತದೆ ಎಂದು ಮೈಸೂರು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿದ್ದರೆ: ದೂರು ಸಲ್ಲಿಸಿ
      ಮೈಸೂರು,ಆ.18.-ಮೈಸೂರು ನಗರ ಆಹಾರ ಇಲಾಖೆಗೆ ತಪ್ಪು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದವರಿಗೆ ಜುಲೈ 31 ರೊಳಗಾಗಿ ಸ್ವಯಂ ಪ್ರೇರಿತರಾಗಿ ಬಿಪಿಎಲ್ ಕಾರ್ಡ್‍ನ್ನು ಸರ್ಕಾರಕ್ಕೆ ಆಧ್ಯರ್ಪಿಸುವಂತೆ ತಿಳಿಸಲಾಗಿತ್ತು.
      ಮೈಸೂರು ನಗರದಲ್ಲಿ ಸ್ವಯಂ ಪ್ರೇರಿತರಾಗಿ 74 ಅರ್ಹರಲ್ಲದ ಬಿಪಿಎಲ್ ಕಾರ್ಡುದಾರರು ಕಾರ್ಡ್‍ನ್ನು ಸರ್ಕಾರಕ್ಕೆ ಆಧ್ಯರ್ಪಿಸಿರುತ್ತಾರೆ ಎಂದು ಮೈಸೂರು ನಗರ ಅನೌಪಚಾರಿಕ ಪಡಿತರ ಪ್ರದೇಶ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
      ಅನರ್ಹರು, ಸರ್ಕಾರಿ ನೌಕರರು, ಪಿಂಚಣಿದಾರರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಲ್ಲಿ  ಹಾಗೂ ಒಂದೇ ಮನೆಯಲ್ಲಿ ಎರಡು ಅನಿಲ ಸಂಪರ್ಕ ಹೊಂದಿರುವುದು ಕಂಡು ಬಂದಲ್ಲಿ ಮಾಹಿತಿಯನ್ನು ಸಹಾಯಕ ನಿರ್ದೇಶಕರು ಪಡಿತರ ಕಚೇರಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಕೊಠಡಿ ಸಂಖ್ಯೆ 21 ಇಲ್ಲಿಗೆ ದೂರು ಸಲ್ಲಿಸುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 29 ರಂದು ತ್ರೈಮಾಸಿಕ ಕೆ.ಡಿ.ಪಿ ಸಭೆ
      ಮೈಸೂರು,ಆ.18-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 29 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮಗಳು ಸೇರಿದಂತೆ) ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ. ಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 20 ರಂದು ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ
      ಮೈಸೂರು,ಆ.18.-ಮಾಜಿ ಮುಖ್ಯಮಂತ್ರಿ ಸಾಮಾಜಿಕ ಪರಿವರ್ತನೆ ಹರಿಕಾರ ಡಿ. ದೇವರಾಜ ಅರಸು ಜನ್ಮ ಶತಮಾನೋತ್ಸವ ಹಾಗೂ ದೇವರಾಜ ಅರಸು ಪ್ರಶಸ್ತಿ ಪ್ರಧಾನ ಸಮಾರಂಭವು ಆಗಸ್ಟ್ 20 ರಂದು ನಡೆಯಲಿದೆ.
     ಬೆಳ್ಳಿಗೆ 9 ಗಂಟೆಗೆ ಬೆಂಗಳೂರು ವಿಧಾನಸೌಧ ಆವರಣದ ಪಶ್ಚಿಮ ದ್ವಾರದಲ್ಲಿರುವ ದೇವರಾಜ ಅರಸು ಅವರ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗಣ್ಯರು ಮಾಲಾರ್ಪಣೆ ಮಾಡಲಿದ್ದಾರೆ. ಬೆಳಿಗ್ಗೆ 11-15ಕ್ಕೆ ಹುಣಸೂರು ಟೌನ್‍ನಲ್ಲಿ ಡಿ. ದೇವರಾಜ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ದೇವರಾಜ ಅರಸು ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಲಾಗುವುದು. ಮಧ್ಯಾಹ್ನ 12 ಗಂಟೆಗೆ ಕಲ್ಲಹಳ್ಳಿ ಪುಣ್ಯ ಭೂಮಿಯಲ್ಲಿ  ಗೌರವಾರ್ಪಣೆ ಹಾಗೂ ಕಲ್ಲಹಳ್ಳಿಯನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿ ಪಡಿಸಲು ಸರ್ಕಾರದಿಂದ ದತ್ತು ಸ್ವೀಕಾರ ಘೋಷಿಸುವ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಹೆಚ್.ಪಿ. ಮಂಜುನಾಥ್ ಅವರು ಅಧ್ಯಕ್ಷತೆ ವಹಿಸುವರು.
    ಮಧ್ಯಾಹ್ನ 3 ಗಂಟೆಗೆ ಮೈಸೂರು ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಡಿ. ದೇವರಾಜ ಅರಸು ಶತಮಾನೋತ್ಸವ ಮತ್ತು ದೇವರಾಜ ಅರಸು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
    ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್. ಆಂಜನೇಯ, ಭಾರತ ಸರ್ಕಾರದ ಕಾನೂನು ಸಚಿವ ಡಿ.ವಿ. ಸದಾನಂದಗೌಡ, ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪಶುಸಂಗೋಪನೆ ಸಚಿವ ಟಿ.ಬಿ. ಜಯಚಂದ್ರ,  ಸಹಕಾರ ಹಾಗೂ ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್, ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಹಜ್ ಸಚಿವ ಆರ್. ರೋಷನ್ ಬೇಗ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ, ವಿಧಾನಸಭೆ ಅಧ್ಯಕ್ಷ ಕಾಗೋಡು ತಿಮ್ಮಪ್ಪ,  ಮಾಜಿ ಮುಖ್ಯಮಂತ್ರಿ  ಹಾಗೂ ಲೋಕಸಭಾ ಸದಸ್ಯ ಎಂ. ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ  ಧರಂಸಿಂಗ್, ಮಾಜಿ ಮುಖ್ಯಮಂತ್ರಿ  ಹಾಗೂ ಲೋಕಸಭಾ ಸದಸ್ಯ ಬಿ.ಎಸ್. ಯಡಿಯೂರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಮಾಜಿ ಪ್ರಧಾನಮಂತ್ರಿ  ಹಾಗೂ ಲೋಕಸಭಾ ಸದಸ್ಯ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ  ಜಗದೀಶ್ ಶೆಟ್ಟರ್, ಮಾಜಿ ಕೇಂದ್ರ ಸಚಿವ ಹಾಗೂ ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್‍ಫೆರ್ನಾಂಡೀಸ್ , ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್, ಮೈಸೂರು ಮಹಾನಗರಪಾಲಿಕೆ ಮಹಾಪೌರ ಆರ್.ಲಿಂಗಪ್ಪ, ವಿಧಾನಸಭೆ ಉಪಾಧ್ಯಕ್ಷ ಶಿವಶಂಕರ್ ರೆಡ್ಡಿ,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಪುಷ್ಪಾವತಿ ಅಮರನಾಥ್, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್, ಪ್ರತಾಪ ಸಿಂಹ, ಸಿ.ಎಸ್. ಪುಟ್ಟರಾಜು,  ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್, ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಸಾ.ರಾ.ಮಹೇಶ್, ಹೆಚ್.ಪಿ. ಮಂಜುನಾಥ್, ಚಿಕ್ಕಮಾದು, ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್. ಧರ್ಮಸೇನ, ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಸಿ. ದಾಸೇಗೌಡ, , ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಚಂದ್ರಪ್ಪ, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀನಿವಾಸಾಚಾರಿ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ, ಮಾಜಿ ಸಚಿವೆ ಹಾಗೂ ಮಾಜಿ ಲೋಕಸಭಾ ಸದಸ್ಯೆ ಚಂದ್ರಪ್ರಭಾ ಅರಸು, ದೇವರಾಜ ಅರಸು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಪ್ರೊ| ಓ. ಅನಂತರಾಮಯ್ಯ, ಡಿ.ದೇವರಾಜ ಅರಸು ಅವರ ಪುತ್ರಿ ಭಾರತೀ ಅರಸು, ಮಾಜಿ ಸಚಿವ ಹಾಗೂ ಡಿ.ದೇವರಾಜ ಅರಸು ಜನ್ಮ ಶತಮಾನೋತ್ಸವ ಕಾರ್ಯಕಾರಿ ಸಮಿತಿ ಅಧ್ಯಕ್ಷ ಅಡಗೂರು ಹೆಚ್. ವಿಶ್ವನಾಥ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್  ಸೇರಿದಂತೆ  ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾಣೆಯಾದವರ ಪತ್ತೆಗಾಗಿ ಮನವಿ
    ಮೈಸೂರು,ಆ.18.-ಬೆಂಗಳೂರು ಬಿ.ಡಿ.ಎ. ಲೇಔಟ್  ನಿವಾಸಿ 39 ವರ್ಷದ ಸಂಜಯ್ ಮತ್ತು ಅವರ ಪತ್ನಿ 32 ವರ್ಷದ ಶಶಿರೇಖಾ ಹಾಗೂ ಅವರ ಮಗ 8 ವರ್ಷದ ಸೋಹನ್ ಜುಲೈ 26 ರಿಂದ ಕಾಣೆಯಾಗಿದ್ದು, ಬೆಂಗಳೂರಿನ ಬ್ಯಾಟರಾಯನಪುರ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
    ಕಾಣೆಯಾದವರ ಚಹೆರೆ ಇಂತಿದೆ: ಸಂಜಯ್ ವಯಸ್ಸು 39 ವರ್ಷ, ಸಾಧಾರಣ ಮೈಕಟ್ಟು, ಕೋಲುಮುಖ, ಗೋಧಿ ಮೈಬಣ್ಣ, 6 ಅಡಿ ಎತ್ತರ, ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಮಾತನಾಡುತ್ತಾರೆ.
     ಶಶಿರೇಖ ವಯಸ್ಸು 32 ವರ್ಷ, ಸಾಧಾರಣ ಮೈಕಟ್ಟು, ಕೂಲುಮುಖ, ಎಣ್ಣೆಗೆಂಪು ಮೈಬಣ್ಣ, 5.6 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ.
     ಸೋಹನ್ ವಯಸ್ಸು 8 ವರ್ಷ, ಸಾಧಾರಣ ಮೈಕಟ್ಟು, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ, 3.6 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ತಿಳಿಸುವುದು ಎಂದು ಪ್ರಕಟಣೆ ತಿಳಿಸಿದೆ.  

Monday 17 August 2015

. ದೇವರಾಜ ಅರಸು ಶತಮಾನೋತ್ಸವ ಆಚರಣೆ : ಸ್ಥಳ ಪರಿಶೀಲನೆ

. ದೇವರಾಜ ಅರಸು ಶತಮಾನೋತ್ಸವ ಆಚರಣೆ : ಸ್ಥಳ ಪರಿಶೀಲನೆ
    ಮೈಸೂರು,ಆ.17.ಡಿ.ದೇವರಾಜ ಅರಸು ಅವರ ಶತಮಾನೋತ್ಸವ ವೇದಿಕೆ ಕಾರ್ಯಕ್ರಮ ಆಗಸ್ಟ್ 20 ರಂದು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಈ ಕುರಿತು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರು ಇಂದು ಸ್ಥಳ ಪರಿಶೀಲನೆ ನಡೆಸಿದರು.
     ಈ ಪರಿಶೀಲನೆಯ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಯಾವುದೇ ಲೋಪ ಉಂಟಾಗದಂತೆ ಸುಸೂತ್ರವಾಗಿ ನಡೆಯಬೇಕು, ಅಧಿಕಾರಿಗಳು ಈಗಾಗಲೇ ಪೂರ್ವ ಸಿದ್ದತಾ ಸಭೆಯಲ್ಲಿ ಸೂಚಿಸಿರುವ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಂತೆ ತಿಳಿಸಿದರು.
     ಆಹ್ವಾನ ಪತ್ರಿಕೆಗಳನ್ನು ಎಲ್ಲಾ ಗಣ್ಯರಿಗೆ ತಲುಪಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ವೇದಿಕೆ ಆಕರ್ಷಿತವಾಗಿ ನಿರ್ಮಾಣವಾಗಬೇಕು. ವೇದಿಕೆಯಲ್ಲಿ  ಎಲ್‍ಇಡಿ ಸ್ಕ್ರೀನ್ ಅಳವಡಿಸಿ ಅದರಲ್ಲಿ ಅರಸು ಅವರ ಭಾವಚಿತ್ರ ಹಾಗೂ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುವಂತೆ ತಿಳಿಸಿದರು.
    ಆಗಸ್ಟ್ 18 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶತಮಾನೋತ್ಸವ ಲಾಂಛನ ಬಿಡುಗಡೆ ಮಾಡಲಾಗುವುದು ಎಂದ ಅವರು ಲಾಂಛನ ವಿನ್ಯಾಸವನ್ನು ಪರಿಶೀಲಿಸಿದರು.  ವಾಹನ ನಿಲುಗಡೆಗೆ ಗಣ್ಯರು, ಅತಿಗಣ್ಯರು ಹಾಗೂ ಸಾರ್ವಜನಿಕರಿಗೆ ಮೂರು ಸ್ಥಳಗಳಲ್ಲಿ ವ್ಯವಸ್ಥೆ ಮಾಡುವಂತೆ ಹಾಗೂ ಮೂರು ಪ್ರವೇಶ ದ್ವಾರಗಳ ವ್ಯವಸ್ಥೆ ಮಾಡುವಂತೆ ತಿಳಿಸಿದರು.
     ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್ ಮಾತನಾಡಿ ಕಾರ್ಯಕ್ರಮದಲ್ಲಿ 10,000 ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಆಗಸ್ಟ್ 20 ರಂದು ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆಯ ನಂತರ 2015 ಆಗಸ್ಟ್ 20 ರಿಂದ 2016ರ ಆಗಸ್ಟ್ 19 ರವರೆಗೆ ವಿವಿಧ ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
     ಪರಿಶೀಲನೆಯ ವೇಳೆ ಮಾಜಿ ಸಂಸದ  ವಿಶ್ವನಾಥ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೋಹನ್ ಕುಮಾರ್, ಜಿಲ್ಲಾಧಿಕಾರಿಗಳ ಸಿ.ಶಿಖಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ.ಎ. ಗೋಪಾಲ್, ಸಮಾಜ ಕಲ್ಯಾಣಾಧಿಕಾರಿ ಪ್ರಕಾಶ್, ಗಿರಿಜನ ಅಭಿವೃದ್ಧಿ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಭಾರತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

     ಮೈಸೂರು,ಆ.17-ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಗಳಿಗೆ ಗ್ರಾಮಸಭೆ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ತಿಳಿಸಿದರು.
     ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್.ಸಿ.ಎಸ್.ಪಿ ಹಾಗೂ ಟಿ ಎಸ್ ಪಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ಇಲಾಖೆ ಅಧಿಕಾರಿಗಳು ಮಾರ್ಚ್ 2016 ರ ಅಂತ್ಯದಲ್ಲಿ ತರಾತುರಿಯಲ್ಲಿ ನಿಗಧಿಪಡಿಸಿರುವ ಗುರಿಯನ್ನು ಪೂರ್ಣಗೊಳಿಸುವ ಬದಲು ಜನವರಿ 2016 ರೊಳಗಾಗಿ ನಿಗಧಿಪಡಿಸಿರುವ ಗುರಿಯನ್ನು ಎಲ್ಲಾ ಇಲಾಖೆಗಳು ಸಾಧಿಸಬೇಕು ಎಂದರು.
     ಆಯುಷ್ ಇಲಾಖೆಯಲ್ಲಿ ಈ ಸಾಲಿನಿಂದ 50 ಸಂಖ್ಯೆ ವಿದ್ಯಾರ್ಥಿಗಳಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ. ಒಟ್ಟು 8 ಹಾಸ್ಟೆಲ್‍ಗಳಲ್ಲಿ ಆರೋಗ್ಯ ಶಿಬಿರ ನಡೆಸಲು ರೂ. 1,60,000 ಅನುದಾನ  ನಿಗಧಿಯಾಗಿದೆ. ಒಂದು ಶಿಬಿರಕ್ಕೆ ರೂ. 50 ಸಾವಿರ ವೆಚ್ಚ ಮಾಡಲು ಅವಕಾಶವಿದ್ದು,  ಆಯುಷ್ ಇಲಾಖೆಯವರು ಆಯುರ್ವೇದ ಕಾಲೇಜಿನ ಸಹಯೋಗದೊಂದಿಗೆ ಶಿಬಿರ ಆಯೋಜಿಸಿದರೆ ಶಿಬಿರದ ವೆಚ್ಚ ಕಡಿಮೆಯಾಗಲಿದ್ದು, 8 ಕ್ಕಿಂತ  ಹೆಚ್ಚಿನ ಶಿಬಿರ ಆಯೋಜಿಸಬಹುದು ಎಂದರು.
    ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು 2012-13, 2013-14 ಹಾಗೂ 2014-15ನೇ ಸಾಲಿನ 1321.20 ಲಕ್ಷ ಮೊತ್ತದ 82 ಕಾಮಗಾರಿಗಳ ಪೈಕಿ 23 ಕಾಮಗಾರಿಗಳು ಮುಕ್ತಾಯವಾಗಿದ್ದು, 65 ಕಾಮಗಾರಿ ಪ್ರಗತಿಯಲ್ಲಿದೆ. ಅಕ್ಟೋಬರ್ ಅಂತ್ಯದೊಳಗಾಗಿ ನಿಗಧಿಪಡಿಸಿರುವ ಗುರಿ ಸಾಧಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಜಿಲ್ಲಾ ನಗರಾಭಿವೃದ್ಧಿ ಕೋಶದವರು ಮೈಸೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ಕರೆದು ಕಾಮಗಾರಿಗಳು ಪೂರ್ಣಗೊಳಿಸಲು ಸಲಹೆ ಹಾಗೂ ಸೂಚನೆ ನೀಡುವಂತೆ ತಿಳಿಸಿದರು.
     ರೇಷ್ಮೆ ಇಲಾಖೆ ಅಧಿಕಾರಿಗಳು ಮಾತನಾಡಿ ಜಿಲ್ಲೆಯಲ್ಲಿ ಹೊಸದಾಗಿ 45 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆ ಬೆಳೆಯಲಾಗುತ್ತಿದೆ. ಕುಸಿತವಾಗಿದ್ದ ರೇಷ್ಮೆ ಬೆಲೆಯಲ್ಲಿ ಸುಧಾರಣೆ  ಕಂಡುಬಂದಿದೆ. ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಬೀಜ ಉತ್ಪಾದಕ ಸಂಸ್ಥೆಗಳಾದ ಎನ್‍ಎಸ್‍ಎಸ್‍ಒ ಹಾಗೂ ಎಲ್‍ಎಸ್‍ಪಿ ಉತ್ತಮ ಬೆಲೆ ನೀಡಿ ರೇಷ್ಮೆ ಖರೀದಿಸುತ್ತಿದ್ದಾರೆ. ಇಲಾಖೆಯಿಂದ 60 ಕೆ.ಜಿ.ಕ್ಕಿಂತ ಹೆಚ್ಚು ರೇಷ್ಮೆ ಬೆಳೆಯುವವರಿಗೆ ಪ್ರತಿ ಕೆ.ಜಿ.ಗೆ ರೂ. 50/- ಸಹಾಯ ಧನ ನೀಡಲಾಗುತ್ತಿದೆ ಎಂದರು.
     ಮೀನುಗಾರಿಕೆ ಇಲಾಖೆ ಅಧಿಕಾರಿಗಳು ವಿಶೇಷ ಎಸ್.ಸಿ., ಎಸ್.ಟಿ. ಯೋಜನೆಯಡಿ 35 ಫಲಾನುಭವಿಗಳಿಗೆ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ವಿತರಣೆಗೆ ರೂ. 2.80 ಲಕ್ಷ ಹಾಗೂ 18 ಫಲಾನುಭವಿಗಳಿಗೆ ರೂ. 1.44 ಲಕ್ಷ ವೆಚ್ಚದಲ್ಲಿ ಮೀನುಗಾರಿಕೆ ಸಲಕರಣೆ ಕಿಟ್ಟು ಮತ್ತು ಫೈಬರ್ ಗ್ಲಾಸ್ ಹರಿಗೋಲು ವಿತರಣೆ ಕಾರ್ಯಕ್ರಮ ಇದೆ. ಫಲಾನುಭವಿಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು, ಮೀನುಗಾರಿಕೆ ಇಲಾಖೆ ಕೇಂದ್ರ ಕಚೇರಿಯಿಂದ ಏಜೆನ್ಸಿ ನಿಗಧಿಪಡಿಸಿದ ಕೂಡಲೇ ಫಲಾನುಭವಿಗಳಿಗೆ ಸಲಕರಣೆ  ವಿತರಿಸಿ ಗುರಿ ಸಾಧಿಸಲಾಗುವುದು ಎಂದರು.
     ಶಾಸಕ ಸಾ.ರಾಮಹೇಶ್ ಅವರು ಮಾತನಾಡಿ ಸಾಮಾಜಿಕ ಅರಣ್ಯ ವಿಭಾಗದವರು ಶಾಸಕರ ಗಮನಕ್ಕೆ ತರದೇ ಫಲಾನುಭವಿಗಳನ್ನು ಆಯ್ಕೆ ಮಾಡುತಿರುವುದು ಕಂಡು ಬಂದಿದ್ದು, ಇನ್ನು ಮುಂದೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ  ಶಾಸಕರ ಗಮನಕ್ಕೆ ತರುವಂತೆ ತಿಳಿಸಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ. ಗೋಪಾಲ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರಕಾಶ್, ಗಿರಿಜನ ಅಭಿವೃದ್ಧಿ ಇಲಾಖೆ ಯೋಜನಾ ಸಮನ್ವಯಾಧಿಕಾರಿ ಭಾರತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬದಲಿ ವಾಹನ ಸಂಚಾರ ವ್ಯವಸ್ಥೆ
     ಮೈಸೂರು,ಆ.17. ಮೈಸೂರು ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿನ ಹೊಟೇಲ್ ಹೈವೆ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿನ ಹೊಟೇಲ್ ಹೈವೆ ವೃತ್ತದಿಂದ ಯಾದವಗಿರಿ ಜಾವಾ ಫ್ಯಾಕ್ಟರಿ ಕಡೆಗೆ ಸಾಗುವ ಜಾವಾ ಫ್ಯಾಕ್ಟರಿ ರಸ್ತೆಯಲ್ಲಿ ಹೊಟೇಲ್ ಹೈವೆ ವೃತ್ತದಿಂದ ಮೇದರ ಕೇರಿ ಮುಖ್ಯರಸ್ತೆ ಜಂಕ್ಷನ್ ವರೆಗಿನ ಭಾಗದ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಮಾದರಿ ವಾಹನÀ ಸಂಚಾರವನ್ನು ನಿರ್ಬಂಧಿಸಿ ಮೈಸೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.
     ಹೊಟೇಲ್ ಹೈವೆ ವೃತ್ತದಿಂದ ಜಾವಾ ಕಾರ್ಖಾನೆ ರಸ್ತೆ ಮೂಲಕ ಸಾಗುವ ಭಾರಿ ವಾಹನಗಳನ್ನು ಹೊರತು ಪಡಿಸಿ ಉಳಿದ ವಾಹನಗಳು ಹೊಟೇಲ್ ಹೈವೆ ವೃತ್ತದಿಂದ ದಕ್ಷಿಣಕ್ಕೆ ಸಾಗಿ ಗಣೇಶ ಸಾಮಿಲ್ ರಸ್ತೆಯಲ್ಲಿ ಬಲತಿರುವು ಪಡೆದು ಮೇದರ ಕೇರಿಯ ಮುಖ್ಯ ರಸ್ತೆಯ ಮೂಲಕ ಜಾವ ಫ್ಯಾಕ್ಟರಿ ಮುಖ್ಯ ರಸ್ತೆ ತಲುಪಿ ಮುಂದೆ ಸಾಗುವುದು. ಭಾರಿ ವಾಹನಗಳು ಜೋಡಿ ತೆಂಗಿನ ಮರದ ರಸ್ತೆಯಲ್ಲಿ ಸಾಗಿ ರಿಂಗ್ ರಸ್ತೆ ತಲುಪಿ ಮುಂದೆ ಸಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.



ಬದಲಿ ವಾಹನ ಸಂಚಾರ ವ್ಯವಸ್ಥೆ
      ಮೈಸೂರು,ಆ.17.ಮೈಸೂರು ನಗರದ ಗನ್‍ಹೌಸ್ ಹತ್ತಿರ ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ಸೇತುವೆಯ ಪುನರ್ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿರುತ್ತದೆ.  ಬಿ.ಎನ್. ರಸ್ತೆಯ ಚೆನ್ನಯ್ಯ ಕುಸ್ತಿ ಅಖಾಡದ ಜಂಕ್ಷನ್ ಬಳಿ ನಂಜನಗೂಡು ರಸ್ತೆಗೆ ತಿರುವು ಪಡೆಯುವ ಜಂಕ್ಷನ್‍ನಿಂದ ದಕ್ಷಿಣಕ್ಕೆ ಗನ್ ಹೌಸ್ ರಸ್ತೆ ಸಂದಿಸುವ ವರೆಗಿನ ಭಾಗದ ರಸ್ತೆಯು ಏಕಮುಖ ವಾಹನ ಸಂಚಾರದ ರಸ್ತೆಯಾಗಿದ್ದು, ಈ ಭಾಗದ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಬಂಧಿಸಿ ಮೈಸೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.
     ನಿರ್ಬಂಧಿಸಿದ ಭಾಗದ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಚೆನ್ನಯ್ಯ ಕುಸ್ತಿ ಅಖಾಡ ಜಂಕ್ಷನ್‍ನಿಂದ ಪಶ್ಚಿಮಕ್ಕೆ ನೇರವಾಗಿ ಸಾಗಿ ಗನ್ ಹೌಸ್ ವೃತ್ತದಲ್ಲಿ ಎಡತಿರುವು ಪಡೆದು ನಂಜನಗೂಡು ರಸ್ತೆಯನ್ನು ತಲುಪಿ ಮುಂದೆ ಸಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಬದಲಿ ವಾಹನ ಸಂಚಾರ ವ್ಯವಸ್ಥೆ
     ಮೈಸೂರು,ಆ.17.ಮೈಸೂರು ನಗರದ ರಾಜ್ಯಮಾರ್ಗ ಕಾಮಗಾರಿ ಸಂಬಂಧ ಸಯ್ಯಾಜಿರಾವ್ ರಸ್ತೆಯ ಓಲ್ಡ್ ಬ್ಯಾಂಕ್ ರಸ್ತೆ ಕತ್ತರಿಸುವ ಕಾಮಗಾರಿಯನ್ನು ಮೈಸೂರು ಮಹಾನಗರ ಪಾಲಿಕೆಯವರು ಕೈಗೊಂಡಿರುತ್ತಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ರಸ್ತೆ ಓಲ್ಡ್ ಬ್ಯಾಂಕ್ ರಸ್ತೆಯಲ್ಲಿ ಸಯ್ಯಾಜಿರಾವ್ ರಸ್ತೆ ಜಂಕ್ಷನ್ ನಿಂದ ಪೂರ್ವಕ್ಕೆ ಬೆಂಕಿನವಾಬ ರಸ್ತೆ ಜಂಕ್ಷನ್ ವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರ ನಿರ್ಬಂಧಿಸಿ ಮೈಸೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.
     ಸರ್ದಾರ್ ವಲ್ಲಭಭಾಯಿ ಪಟೇಲ್ ರಸ್ತೆಯಿಂದ ಸಯ್ಯಾಜಿರಾವ್ ರಸ್ತೆ ತಲುಪುತಿದ್ದ ವಾಹನಗಳು ಹೊಟೇಲ್ ದಾಸ್ ಪ್ರಕಾಶ್ ವೃತ್ತದಿಂದ ಹನುಮಂತರಾವ್ 1ನೇ ರಸ್ತೆಯಲ್ಲಿ ದಕ್ಷಿಣಕ್ಕೆ ಸಾಗಿ ಶಿವರಾಂ ರಸ್ತೆ ಮೂಲಕ ಸಯ್ಯಾಜಿರಾವ್ ರಸ್ತೆ ತಲುಪುವುದು. ಸಯ್ಯಾಜಿರಾವ್ ರಸ್ತೆಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ರಸ್ತೆಗೆ ಸಂಚರಿಸುತ್ತಿದ್ದ ವಾಹನಗಳು ಕೆ.ಎಸ್.ಆರ್.ಟಿ.ಸಿ. ನಗರ ಸಾರಿಗೆ ಸಂಸ್ಥೆಯ ವಾಹನಗಳನ್ನು ಹೊರತುಪಡಿಸಿ ಸಯ್ಯಾಜಿರಾವ್ ರಸ್ತೆಯಿಂದ ಕೆ.ಆರ್ ಆಸ್ಪತ್ರೆ ರಸ್ತೆ ಮೂಲಕ ಬೆಂಕಿನವಾಬ ರಸ್ತೆ ತಲುಪಿ ಮುಂದೆ ಸಾಗುವುದು. ಸಯ್ಯಾಜಿರಾವ್ ರಸ್ತೆಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ರಸ್ತೆಗೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ನಗರ ಸಾರಿಗೆ ಸಂಸ್ಥೆಯ ವಾಹನಗಳು ಆಯುರ್ವೇಧಿಕ್ ಆಸ್ಪತ್ರೆ ವೃತ್ತದಿಂದ ನೇರವಾಗಿ ಇರ್ವಿನ್ ರಸ್ತೆಯಲ್ಲಿ ಸಂಚರಿಸಿ ನೆಹರು ವೃತ್ತ-ಅಶೋಕ ರಸ್ತೆ ಮೂಲಕ ಸಂಚರಿಸಿ ದೊಡ್ಡ ಗಡಿಯಾರ ವೃತ್ತ ತಲುಪಿ ಮುಂದೆ ಸಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಫೋನ್ ಇನ್ ಕಾರ್ಯಕ್ರಮ ರದ್ದು
    ಮೈಸೂರು,ಆ.17.ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಗಸ್ಟ್ 20 ರಂದು ನಡೆಯಬೇಕಿದ್ದ ಫೋನ್ ಇನ್ ಕಾರ್ಯಕ್ರಮ ಸದರಿ ದಿನದಂದು ಮಾನ್ಯ ಮುಖ್ಯಮಂತ್ರಿಗಳು ಮೈಸೂರು ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ರದ್ದುಪಡಿಸಿದೆ. ಸಾರ್ವಜನಿಕರು ಸಹಕರಿಸಬೇಕಾಗಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಭಾರತ ಮಹಿಳಾ ಕೃಷಿ ಜಾಗೃತಿ ಕಾರ್ಯಾಗಾರ
   ಮೈಸೂರು,ಆ.17.ಸಿಎಸ್‍ಐಆರ್  ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ವತಿಯಿಂದ ಆಗಸ್ಟ್ 19 ರಂದು ಬೆಳಿಗ್ಗೆ 9-30ಕ್ಕೆ ಸಿಎಫ್‍ಟಿಆರ್‍ಐನ ಐಎಫ್‍ಎಫ್‍ಟಿಟಿಸಿ ಸಭಾಂಗಣದಲ್ಲಿ ದಕ್ಷಿಣ ಭಾರತ ಮಹಿಳಾ ಕೃಷಿ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
     ಮಹಿಳಾ ಆದಾಯೋತ್ಪತ್ತಿ ಕೇಂದ್ರದ ಸಂಸ್ಥಾಪನಾ ಕಾರ್ಯದರ್ಶಿ ಇಂದಿರಾ ಓಯಿನಮ್ ಅವರು ಕಾರ್ಯಕ್ರಮ ಉದ್ಘಾಟಿಸಿ ಸ್ಮರಣಾ ಸಂಚಿಕೆ ಬಿಡುಗಡೆ ಮಾಡುವರು. ಐಎಸ್‍ಎಫ್‍ಎ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮಿದೇವಿ, ಐಎಸ್‍ಎಫ್‍ಎ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ನಿರ್ದೇಶಕ ರಾಮರಾಜಶೇಖರ್ ಹಾಗೂ ವಿಜ್ಞಾನಿ ಡಾ|| ಎಂ.ಸಿ. ವರದರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
    ಉದ್ಘಾಟನೆಯ ನಂತರ ಮಹಿಳಾ ಸಬಲೀಕರಣ ಕುರಿತು ವಿಡಿಯೋ ಚಿತ್ರಪ್ರದರ್ಶನ, ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ತಂತ್ರಜ್ಞಾನಿಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಸಂಜೆ 4 ಗಂಟೆಗೆ ಕೃಷಿ ಉತ್ಪನ್ನಗಳ ಮೈಕ್ರೋ ಫೈನಾನ್ಸಿಂಗ್ ಹಾಗೂ ಮಾರಾಟ ಕಾರ್ಯಕ್ರಮ ನಡೆಯಲಿದೆ.
    ಈ ಕಾರ್ಯಕ್ರಮದಲ್ಲಿ  ಉದ್ಯಮಿಗಳಿಗೆ ಕೈಗಾರಿಕಾ ಸೇವೆಗಳು,  ಮಹಿಳಾ ಉದ್ಯಮಗಳಿಗೆ ಅವಕಾಶಗಳು, ಮಹಿಳಾ ಸಬಲೀಕರಣ, ಕೃಷಿ ಮಾರಾಟದಲ್ಲಿ ಮಹಿಳೆಯರ ಪಾತ್ರ ಕುರಿತು ಮಾಹಿತಿ ನೀಡಲಾಗುವುದು.

ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ
     ಮೈಸೂರು,ಆ.17.ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಸ್. ಓಬಯ್ಯ ಮೂಲ್ಯ ಅವರಿಗೆ 2015ನೇ ಸಾಲಿನ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ದೊರಕಿದೆ. ಎಸ್. ಓಬಯ್ಯ ಮೂಲ್ಯ ಅವರು 14-03-1980 ರಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ನೇಮಕಾತಿಗೊಂಡು 2000 ಹಾಗೂ 2007ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿ ಬೆಳ್ಳಿ ಪದಕ ಮತ್ತು ಚಿನ್ನ ಪದಕ ಪುರಸ್ಕøತರಾಗಿರುತ್ತಾರೆ.
ಜಿಲ್ಲಾ ಮಟ್ಟದ ಕಾರ್ಯಾಗಾರ
ಮೈಸೂರು,ಆ.17.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತು ರೇಡಿಯೋಲಿಜ್ಟ್/ ಸೋನೋಲಿಜಿಸ್ಟ್/ ಮಕ್ಕಳ ತಜ್ಞರು/ಸ್ತ್ರೀ ಮತ್ತು ಪ್ರಸೂತಿ ತಜ್ಞರು/ ತಹಶೀಲ್ದಾರ್ ಹಾಗೂ ಖಾಸಗಿ ಆಸ್ಪತ್ರೆ ಮುಖ್ಯಸ್ಥರಿಗೆ ಆಗಸ್ಟ್ 19 ರಂದು ಬೆಳಿಗ್ಗೆ 10 ಗಂಟೆ ಜೆ.ಕೆ. ಗ್ರೌಂಡ್ಸ್ ನಲ್ಲಿರುವ ವೈದ್ಯಕೀಯ ಕಾಲೇಜು ಅಮೃತ ಮಹೋತ್ಸವ ಭವನದಲ್ಲಿ ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆಯಲಿದೆ.
ಜಿಲ್ಲಾ ಮತ್ತು ಸತ್ರನ್ಯಾಯಾಧೀಶರಾದ ಕೆ.ಎಸ್. ಮುದಗಲ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಸಿ.ಶಿಖಾ ಅವರು ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ. ಬಸವರಾಜ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ದಿನೇಶ್ ಹೆಗ್ಡೆ, ಆರೋಗ್ಯ ಮತ್ತು ಕುಟುಂಬ ಸೇವೆಗಳ ನಿರ್ದೇಶಕ ಡಾ| ವಾಮ್‍ದೇವ್, ಉಪನಿರ್ದೇಶಕ ಡಾ| ರಾಮಚಂದ್ರಬಾಯರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ. ಗೋಪಾಲ್, ಜಿಲ್ಲಾ ಸಶಸ್ತ್ರ ಚಿಕಿತ್ಸಕ ಡಾ| ಎಂ.ಪಶುಪತಿ, ಐ.ಎಂ.ಎ. ಅಧ್ಯಕ್ಷ ಡಾ| ಕೆಂಪೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್ ಭಾಗವಹಿಸಲಿದ್ದಾರೆ. 

ಮೈಸೂರು, ಆ. 17- ಸನ್ಮಿತ್ ಸಾವು ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಒತ್ತಾಯಿಸಿದರು.
ಅವರು ಇಂದು ಸರಕಾರಿ ಅತಿಥಿಗೃಹಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ 2 ತಿಂಗಳ ಹಿಂದೆ ಪಿರಿಯಾಪಟ್ಟಣದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸನ್ಮಿತ್ ಕೆರೆಗೆ ಬಿದ್ದು ಸತ್ತಿರುವುದರ ಬಗ್ಗೆ ಪೊಲೀಸರ ತನಿಖೆ ನಡೆಸಿದ್ದರೂ ಅಪರಾಧಿಗಳು ಯಾರು? ಎಂಬುದು ಪತ್ತೆ ಆಗಿಲ್ಲ. ಆದ್ದರಿಂದ ಈ ಪ್ರಕರಣವನ್ನು ಕೂಡಲೇ ಸಿಐಡಿಗೆ ವಹಿಸುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಈಶ್ವರಪ್ಪ ಒತ್ತಾಯಿಸಿದರು.
ಸನ್ಮಿತ್ ಸಾವಿನ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸಿರುವ ವಿಷಯದ ಬಗ್ಗೆ ಸ್ಥಳೀಯ ನಾಗರೀಕರನ್ನು ಭೇಟಿ ಮಾಡಿ ಅವರ ಆಭಿಪ್ರಾಯ ಕೇಳಿ ಸರಕಾರ ತನಿಖೆಗೆ ಮುಂದಾಗಬೇಕು ಎಂದರು.
ಈ ಪ್ರಕರಣವು ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲೇ ನಡೆದಿದ್ದು, ಅದನ್ನು ಕಂಡು ಕಾಣದಂತೆ ಸಿಎಂ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದ ಅವರು ತಮ್ಮ ಕುರ್ಚಿ ಉಳಿದರೆ ಸಾಕು ಎಂಬ ಧೋರಣೆಯನ್ನು ತಾಳಿದ್ದಾರೆಂದರು.
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜಯಗಳಿಸುವ ಪೂರ್ಣ ಭರವಸೆ ತಮಗೆ ಇದೆ. ಬಿಬಿಎಂಪಿ ಚುನಾವಣೆ ನಡೆಸುವ ಬಗ್ಗೆ ಮುಖ್ಯಮಂತ್ರಿಗಳು ವಿವಿಧ ರೀತಿಯ ಕಸರತ್ತು ನಡೆಸಿದರೂ ಯಾವುದೇ ಪ್ರಯೋಜನವಾಗದೆ ಸುಪ್ರೀಂ ಕೋರ್ಟ್ ಆದೇಶದಂತೆ ಚುನಾವಣೆ ನಡೆಸಲು ಮುಂದಾಗಿರುವುದು ಸ್ವಾಗತಾರ್ಹ ಎಂದರು.
ನನಗೆ ಬಿಬಿಎಂಪಿಯನ್ನು ಒಡೆಯುವ ಆಸೆ ಇಲ್ಲ. ಸಿದ್ದರಾಮಯ್ಯನವರು ಸೋಲಿನ ಭೀತಿ ಹಿನ್ನೆಲೆಯಲ್ಲಿ ಬಿಬಿಎಂಪಿಯನ್ನು ಒಡೆಯಲು ಮುಂದಾಗಿರುವುದು ಸರಿಯಲ್ಲ ಎಂದು ಈಶ್ವರಪ್ಪ ಹೇಳಿದರು.
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆಯೇ? ಎಂದು ಕೇಳಿದಾಗ ಈಶ್ವರಪ್ಪ ಉತ್ತರಿಸಿ ಆಯಾ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಟಿಕೆಟ್ ಹಂಚುವುದು ಆ ಕ್ಷೇತ್ರದ ಮುಖಂಡರಿಗೆ ಸೇರಿದ್ದು ಅದರಂತೆ ಆರ್. ಅಶೋಕ್ ಅವರಿಗೆ ಟಿಕಟ್ ಹಂಚುವ ಕಾರ್ಯವನ್ನು ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆ ಪ್ರಚಾರಕ್ಕಾಗಿ ಯಾವ ವಿಧಾನ ಸಭಾ ಕ್ಷೇತ್ರಕ್ಕೆ ಯಾವ ನಾಯಕರನ್ನು ಕಳುಹಿಸಬೇಕು ಎಂಬುದರ ಬಗ್ಗೆ ನಾಳೆ ಸಭೆ ಸೇರಿ ಚರ್ಚಿಸಿ ನಿರ್ಧರಿಸಲಾಗುವುದೆಂದರು.
ಲೋಕಾಯುಕ್ತವು ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಮತ್ತು ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಮೊಕದ್ದಮೆ ದಾಖಲಿಸಿದೆ. ಆದರೆ ಸಿದ್ದರಾಮಯ್ಯನವರ ಮೇಲೆ ಏಕೆ ಮೊಕದ್ದಮೆ ದಾಖಲಿಸಿಲ್ಲ. ಇದನ್ನು ನೋಡಿದರೆ ಲೋಕಾಯುಕ್ತ ಮತ್ತು ಸಿದ್ದರಾಮಯ್ಯನವರ ನಡುವೆ ಒಳ ಒಪ್ಪಂದ ಆಗಿರುವುದು ಕಂಡು ಬರುತ್ತದೆ ಎಂದರು.
ರಾಜ್ಯದಲ್ಲಿ ಅತ್ಯಾಚಾರಕ್ಕೆ ಕೊನೆಯೇ ಇಲ್ಲ ಮತ್ತು ರೈತರ ಬಗ್ಗೆ ಕಾಳಜಿ ಇಲ್ಲ. ಇತ್ತೀಚೆಗೆ ಸಹಕಾರ ಸಚಿವ ಮಹದೇವಪ್ರಸಾದ್ ರೈತರನ್ನು ಸೋಮಾರಿಗಳೆಂದು ಹೇಳಿರುವುದರಿಂದ  ಅವರನ್ನು ಸಂಪುಟದಿಂದ ಕಿತ್ತುಹಾಕಬೇಕು ಇಲ್ಲವೆ ಅವರ ರಾಜೀನಾಮೆ ಪಡೆಯುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ಸಿ. ಹೆಚ್. ವಿಜಯಶಂಕರ್ ಮತ್ತಿತರರು ಇದ್ದರು.

Sunday 16 August 2015

 ಯಾವುದೇ ರೈತರು ಏನೇ ಸಮಸ್ಯೆಗಳು ಇದ್ದರೂ ಆತ್ಮಹತ್ಯೆಗೆ ಶರಣಾಗಬಾರದೆಂದು ಸಚಿವ ಅಂಬರೀಶ್ ಮನವಿ ಮಾಡಿದರು ೬೯ ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿಸಿ ಅವರು
  ಭಾರತದ ಸ್ವಾತಂತ್ರ್ಯದ 69ನೇ ವರ್ಷದ ಆಚರಣೆಗಾಗಿ ಸೇರಿರುವ ತಮಗೆಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳು.
ಸುಮಾರು 200 ವರ್ಷಗಳ ಕಾಲ ಬ್ರಿಟೀಷರ ದಾಸ್ಯಕ್ಕೆ ಒಳಗಾದದ್ದು, ಭಾರತದ ಇತಿಹಾಸದ ಕರಾಳ ಅಧ್ಯಾಯವಾಗಿದೆ.
ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟೀಷರು ಇಲ್ಲಿನ ಸನ್ನಿವೇಶದ ಲಾಭ ಪಡೆದು, ಆಡಳಿತವನ್ನು ಕೈವಶ ಮಾಡಿಕೊಂಡು ತಮ್ಮ ಅಧಿಪತ್ಯ ಸ್ಥಾಪಿಸಿದರು.
200 ವರ್ಷಗಳ ಪರಕೀಯರ ಆಳ್ವಿಕೆಯಿಂದ ಮುಕ್ತರಾಗಲು ಭಾರತದಲ್ಲಿ ದೊಡ್ಡ ಹೋರಾಟವೇ ನಡೆಯಬೇಕಾಯಿತು.
ಮಹಾತ್ಮಗಾಂಧಿಯವರ ನೇತೃತ್ವದಲ್ಲಿ ಸಾವಿರಾರು ದೇಶಭಕ್ತ ನಾಯಕರು ಸ್ವಾತಂತ್ರ್ಯದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿ ಅಖಂಡ ಭಾರತ ಒಟ್ಟಾಗಿ ಹೋರಾಟಕ್ಕೆ ಇಳಿಯಿತು.
ಯಾವುದೇ ಮದ್ದುಗುಂಡುಗಳಿಲ್ಲದೆ, ರಕ್ತಪಾತವಿಲ್ಲದೆ ಸತ್ಯ ಅಹಿಂಸೆಗಳ ಮೂಲಕ ಸ್ವಾತಂತ್ರ್ಯ ಗಳಿಸಿದ್ದು, ಜಗತ್ತಿನ ಇತಿಹಾಸದಲ್ಲಿಯೇ ಬಹುದೊಡ್ಡ ಘಟನೆಯಾಗಿದೆ.
ಈ ಸ್ವಾತಂತ್ರ್ಯದ ಹೋರಾಟದಲ್ಲಿ ನಮ್ಮ ಜಿಲ್ಲೆಯಲ್ಲಿನ ಅನೇಕ ವೀರಸೇನಾನಿಗಳು ಹೋರಾಟ ನಡೆಸಿದ್ದಾರೆ.
ಮದ್ದೂರಿನ ಶಿವಪುರದಲ್ಲಿನ ಧ್ವಜ ಸತ್ಯಾಗ್ರಹ ಸ್ವಾತಂತ್ರ್ಯ ಹೋರಾಟದಲ್ಲಿಯೇ ಒಂದು ಅವಿಸ್ಮರಣೀಯ ಘಟನೆಯಾಗಿದೆ.
ಇಂತಹ ದೇಶ ಪ್ರೇಮಿಗಳ ನೇತೃತ್ವದಲ್ಲಿ ನಡೆದ ಹೋರಾಟ ಹಳ್ಳಿಹಳ್ಳಿಗಳಿಗೂ ಹಬ್ಬಿ ಎಲ್ಲಾ ಜನತೆಯ ಹೋರಾಟವಾಯಿತು.
ಈ ಎಲ್ಲಾ ಮಹನೀಯರ ಹೋರಾಟದ ಫಲವಾಗಿ ದೊರಕಿದ ಸ್ವಾತಂತ್ರ್ಯದ ನಂತರ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.
ಜನರಿಂದ ಜನರಿಗಾಗಿ ಜನರೇ ಆಡಳಿತ ನಡೆಸುವ ವಿನೂತನ ಪ್ರಜಾತಂತ್ರ ವ್ಯವಸ್ಥೆ ವಿಶ್ವದಲ್ಲಿಯೇ ಮಾದರಿಯಾಗಿದೆ.
ಸ್ವಾತಂತ್ರ್ಯಾ ನಂತರ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಆಶಯದಡಿಯಲ್ಲಿ ಬಡವ, ಬಲ್ಲಿದ ಎನ್ನದೆ ಸರ್ವರಿಗೂ ಸಮಾನತೆ ಕಲ್ಪಿಸುವ ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ ರವರ ಅಪಾರ ಜ್ಞಾನ ಮತ್ತು ದೂರದೃಷ್ಟಿಯ ಫಲವಾಗಿ ನಮ್ಮ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಎಂಬ ಮಾನ್ಯತೆಗೆ ಒಳಗಾಯಿತು.ಇಂತಹ ವಿನೂತನ ಸಂವಿಧಾನದ ಅಡಿ ಅಸ್ತಿತ್ವಕ್ಕೆ ಬಂದ ಪ್ರಜಾತಂತ್ರ ಸರ್ಕಾರ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅವಶ್ಯವಿರುವ ಯೋಜನೆಗಳನ್ನು ರೂಪಿಸಿತು.
ಬ್ರಿಟೀಷರು ಬಿಟ್ಟು ಹೋದ ಪ್ರಾರಂಭದಲ್ಲಿ ಅನಕ್ಷರತೆ, ನಿರುದ್ಯೋಗ, ಬಡತನ ಮುಂತಾದ ದೊಡ್ಡ ಸವಾಲುಗಳು ದೇಶದ ಮುಂದಿದ್ದವು.
ಕೃಷಿ, ಕೈಗಾರಿಕೆ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧಿಸಬೇಕಾದ ಹಲವಾರು ವಿಚಾರಗಳಿದ್ದವು.
ಪಂಚವಾರ್ಷಿಕ ಯೋಜನೆಗಳ ಮೂಲಕ ಹಂತ ಹಂತವಾಗಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲಾಯಿತು.
ಕೃಷಿ, ಕೈಗಾರಿಕೆ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಗಣನೀಯವಾದ ಸಾಧನೆ ಮಾಡಲಾಯಿತು.
ಅನಕ್ಷರತೆ ಹೋಗಲಾಡಿಸಲು ಪ್ರತಿಯೊಬ್ಬ ವ್ಯಕ್ತಿಗೂ ಕಡ್ಡಾಯ ಶಿಕ್ಷಣ ಜಾರಿಗೊಳಿಸಲಾಯಿತು.
ಬಡತನ ನಿವಾರಣೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಯಿತು.
ಸ್ವಾತಂತ್ರ್ಯಾ ನಂತರ ಅಸ್ತಿತ್ವಕ್ಕೆ ಬಂದ ಎಲ್ಲಾ ಸರ್ಕಾರಗಳು ಈ ದಿಶೆಯಲ್ಲಿ ಗಣನೀಯ ಸಾಧನೆ ಮಾಡಿದವು.
ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನಮ್ಮ ಸರ್ಕಾರವು ಕಳೆದ ಎರಡೂವರೆ ವರ್ಷಗಳಿಂದ ಜನಪರವಾದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ.
ಪ್ರತಿಯೊಬ್ಬ ನಾಗರೀಕರಿಗೂ ಆಹಾರ ಭದ್ರತೆ ಒದಗಿಸುವ ಮೂಲಕ ಹಸಿವು ಮುಕ್ತ ಕರ್ನಾಟಕ ರೂಪಿಸಲು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ.
ಪ್ರತಿಯೊಬ್ಬ ವ್ಯಕ್ತಿಯೂ ಗೌರವಯುತ ಜೀವನ ನಡೆಸುವಂತಾಗಲು ಗುಡಿಸಲು ಮುಕ್ತ ರಾಜ್ಯ ಸ್ಥಾಪಿಸಲು ನೂತನ ವಸತಿ ಯೋಜನೆ ಜಾರಿಗೊಳಿಸಿದೆ.
ಹಾಗೆಯೇ ಮಕ್ಕಳ ಪೌಷ್ಠಿಕತೆ ಹೆಚ್ಚಿಸಲು ಮಧ್ಯಾಹ್ನದ ಬಿಸಿಯೂಟದ ಜೊತೆ ಉಚಿತ ಹಾಲು ನೀಡುವ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದೆ.
ಬಡವ ಬಲ್ಲಿದರೆನ್ನದೆ ಎಲ್ಲಾ ವರ್ಗದ ಜನರು ಗೌರವಯುತ ಜೀವನ ನಡೆಸುವಂತಾಗಲು ಅವಶ್ಯವಿರುವ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಿದೆ.
ರಸ್ತೆ, ವಿದ್ಯುತ್, ನೀರಾವರಿ, ಕೈಗಾರಿಕೆ ಮುಂತಾದ ಕ್ಷೇತ್ರಗಳಿಗೂ ಸಮಾನ ಆದ್ಯತೆ ನೀಡಿ, ಗಣನೀಯ ಸಾಧನೆ ಮಾಡಲಾಗಿದೆ.
ಆದರೆ ಇಷ್ಟರಿಂದ ಸಮಸ್ಯೆಗಳು ಸಂಪೂರ್ಣವಾಗಿ ಬಗೆಹರಿದಿರುವುದಿಲ್ಲ.
ಅಭಿವೃದ್ಧಿ ಎಂಬುದು ಒಂದು ನಿರಂತರ ಪ್ರಕ್ರಿಯೆ. ಜನರ ಜೀವನಮಟ್ಟ ಸುಧಾರಿಸಲು ಅವಶ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ.
ಈ ವರ್ಷ ತಮಗೆಲ್ಲರಿಗೂ ತಿಳಿದಿರುವಂತೆ ಸಂಕಷ್ಟದ ವರ್ಷ. ಇಡೀ ರಾಜ್ಯದಾದ್ಯಂತ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಬರಪರಿಸ್ಥಿತಿ ಆವರಿಸಿದೆ.
ಮಂಡ್ಯ ಜಿಲ್ಲೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ.
ಜಿಲ್ಲೆಯಲ್ಲಿ ಸಕಾಲದಲ್ಲಿ ಮಳೆಯಾಗದೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.
ಬೆಳೆದು ನಿಂತ ಕಬ್ಬನ್ನು ಅರೆಯಲು ಕಾರ್ಖಾನೆಗಳು ಪ್ರಾರಂಭವಾಗಬೇಕಾಗಿದೆ.
ಕನ್ನಂಬಾಡಿ ಕಟ್ಟೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೆ ಒಳಗಾದ ರೈತ ಆತ್ಮಹತ್ಯೆಯ ಹಾದಿ ಹಿಡಿದಿದ್ದಾನೆ.
ಸರ್ಕಾರ ಈ ಪರಿಸ್ಥಿತಿ ನಿಭಾಯಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಲು ಪ್ರಯತ್ನ ನಡೆದಿದ್ದು,  ಮಂಡ್ಯ ಸಕ್ಕರೆ ಕಾರ್ಖಾನೆ ಹೊರತುಪಡಿಸಿ, ಈ ತಿಂಗಳ ಅಂತ್ಯದೊಳಗೆ ಇತರೆ ಎಲ್ಲಾ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗಲಿವೆ.
ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಆದಷ್ಟು ಶೀಘ್ರ ದುರಸ್ಥಿಗೊಳಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ.
ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಈ ಸಾಲಿನ ಆಯವ್ಯಯದಲ್ಲಿ ಸರ್ಕಾರದ ವತಿಯಿಂದ 120 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
ರೈತರ ಕಬ್ಬಿನ ಬಾಕಿ ಪಾವತಿಸಲು ಸರ್ಕಾರದಿಂದ 17.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ರೈತರ ಸಾಲ ವಸೂಲಿಗೆ ಒತ್ತಾಯಿಸದಂತೆ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಲಾಗಿದೆ.
ರೈತರನ್ನು ಶೋಷಿಸುವ ಲೇವಾದೇವಿದಾರರು, ಮೀಟರ್ ಬಡ್ಡಿ ದಂಧೆಕೋರರ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗುತ್ತಿದೆ.
ಆತ್ಮಹತ್ಯೆಗೆ ಒಳಗಾದ ರೈತರಿಗೆ ಸರ್ಕಾರದ ವತಿಯಿಂದ ತಲಾ ರೂ.2.00 ಲಕ್ಷ ಪರಿಹಾರ ನೀಡಲಾಗುತ್ತಿದೆ.
ಆತ್ಮಹತ್ಯೆಗೊಳಗಾದ ರೈತರ ಕುಟುಂಬಗಳಿಗೆ ಸ್ವತ: ಮುಖ್ಯಮಂತ್ರಿಗಳು ಭೇಟಿ ನೀಡಿ ಸಾಂತ್ವನ ಹೇಳಿರುತ್ತಾರೆ.
ರೈತರ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಮಂಡ್ಯ ಜಿಲ್ಲೆಯ ರೈತರು ಸ್ವಾಭಿಮಾನಿಗಳು. ಬೆವರು ಸುರಿಸಿ ದುಡಿದು ಬದುಕುವವರು. ದಿಟ್ಟತನಕ್ಕೆ ಹೆಸರಾದ ಜಿಲ್ಲೆಯ ಜನತೆ ಸಮಸ್ಯೆಗಳಿಗೆ ಹೆದರಿ, ಆತ್ಮಹತ್ಯೆಗೆ ಶರಣಾಗುವುದು ಸರಿಯಾದ ಕ್ರಮವಲ್ಲ.

ಹುಲಿಕೆರೆ ಸುರಂಗವನ್ನು ದುರಸ್ಥಿಪಡಿಸಿ, ನಾಲೆಯಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯ ನಾಲೆಗಳ ದುರಸ್ಥಿಗಾಗಿ ವಿಶೇಷ ಯೋಜನೆ ರೂಪಿಸಲಾಗಿದೆ.
ಸುಮಾರು 600 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದ್ದು, 80 ಕೋಟಿ ರೂ. ವೆಚ್ಚದಲ್ಲಿ ವಿರಿಜಾ ನಾಲೆ ಆಧುನೀಕರಣ ನಡೆಸಲಾಗುತ್ತಿದೆ.
240 ಕೋಟಿ ರೂ.ಗಳ ವೆಚ್ಚದಲ್ಲಿ ಚಿಕ್ಕದೇವರಾಯ ನಾಲೆ ಆಧುನೀಕರಣ ಪ್ರಾರಂಭಿಸಲಾಗಿದೆ.
ವಿಶ್ವವಿಖ್ಯಾತ ಬೃಂದಾವನವನ್ನು ವಿಶ್ವದರ್ಜೆಗೆ ಉನ್ನತೀಕರಿಸಲು ಈ ಸಾಲಿನ ಆಯವ್ಯಯದಲ್ಲಿ ಅನುದಾನ ಒದಗಿಸಲಾಗಿದೆ.
ಜಿಲ್ಲೆಯ ರಸ್ತೆಗಳ ಸುಧಾರಣೆಗೆ ಹೆಚ್ಚಿನ ಪ್ರಮಾಣದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಬಹುದಿನಗಳಿಂದ ನೆನೆಗುದಿಗೆ ಬಿದಿದ್ದ ಮಂಡ್ಯ-ಕೆರಗೋಡು-ಕೌಡ್ಲೆ ರಸ್ತೆಗಳ ಕಾಮಗಾರಿಗಳನ್ನು ರೂ.168 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ.
ಅದೇರೀತಿ ಮಳವಳ್ಳಿ-ಪಾವಗಡ ರಸ್ತೆಯನ್ನು ರೂ.570 ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ.
ನಗರೋತ್ಥಾನ ಯೋಜನೆಯಡಿ ಮಂಡ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ರೂ.50 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿವೆ.
ಪಾರಂಪರಿಕ ನಗರ ಶ್ರೀರಂಗಪಟ್ಟಣ ಅಭಿವೃದ್ಧಿಗೆ ಆಯವ್ಯಯದಲ್ಲಿ ಹಣ ಒದಗಿಸಲಾಗಿದೆ.
ನಿರ್ಮಲ ಭಾರತ ಅಭಿಯಾನದಡಿ ಮಂಡ್ಯ ಜಿಲ್ಲೆಯ ಸಾಧನೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ.
ಕೇಂದ್ರ ಸಕಾರದ ಸ್ವಚ್ಛ ಭಾರತ ಮಿಷನ್ ಅಡಿ ಮಾಡಿರುವ ಸಮೀಕ್ಷೆ ಪ್ರಕಾರ ಮಂಡ್ಯ ನಗರವು 6ನೇ ಸ್ಥಾನ ಪಡೆದಿರುವುದು ಗಮನಾರ್ಹವಾದ ಸಂಗತಿಯಾಗಿದೆ.ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯ ಸಾಧನೆ ಉತ್ತಮವಾಗಿದೆ.
ಉನ್ನತ ಶಿಕ್ಷಣಕ್ಕೆ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಮಂಡ್ಯದಲ್ಲಿ ಈಗಾಗಲೇ ಕಾರ್ಯಾರಂಭ ಮಾಡಿದೆ.
ಈ ವರ್ಷದಿಂದ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಹಾಗೂ ಸಂಗೀತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಮಂಡ್ಯದಲ್ಲಿ ಸ್ಥಾಪನೆಯಾಗಿರುವುದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿವೆ.
ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಕೃಷಿ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಹಿಂದಿನಿಂದಲೂ ಮಂಡ್ಯದಲ್ಲಿ ನಡೆಯುತ್ತಿವೆ.ಮಂಡ್ಯ ಜಿಲ್ಲೆ ಸ್ಥಾಪನೆಯಾಗಿ 75 ವರ್ಷಗಳು ತುಂಬಿದ ಸವಿನೆನಪಿಗಾಗಿ ಅಮೃತ ಮಹೋತ್ಸವವನ್ನು ಈ ವರ್ಷದ ಫೆಬ್ರವರಿ ಮಾಹೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗಿದೆ.
ಈ ಆಚರಣೆಯಲ್ಲಿ ಜಾತಿ, ಧರ್ಮ, ಪಕ್ಷಬೇಧ ಮೆರೆತು ಜಿಲ್ಲೆಯ ಸಮಸ್ತ ಜನರು ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿರುತ್ತಾರೆ.
ಈ ಅಮೃತ ಮಹೋತ್ಸವದ ಸವಿನೆನಪಿಗಾಗಿ ಅಮೃತ ಮಹೋತ್ಸವ ಭವನ ನಿರ್ಮಿಸಲು ತೀರ್ಮಾನಿಸಲಾಗಿದೆ.
ಏನೇ ಸಮಸ್ಯೆಗಳು ಬಂದರೂ ಎದೆಗುಂದದೆ ನಾವೆಲ್ಲ ಸೇರಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕೋರುತ್ತಾ ಮತ್ತೊಮ್ಮೆ ತಮಗೆಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ ನನ್ನ ಮಾತುಗಳನ್ನ ಮುಗಿಸಿದರು.




Monday 10 August 2015

ಜನರ ವಲಸೆಯನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿಸುವಂತೆ ತಾಪಂಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಎನ್.ಡಿ. ಪ್ರಕಾಶ್ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ನಡೆದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ಬರದ ಛಾಯೆ ಆವರಿಸಿರುವುದರಿಂದ ಜನರ ಸಂಕಷ್ಟಗಳನ್ನು ದೂರ ಮಾಡುವ ನಿಟ್ಟಿನಲ್ಲಿ  ಉದ್ಯೋಗ ಸೃಜಿಸುವಂತೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 234 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಪಂಚಾಯಿತಿಯಿಂದ ಕನಿಷ್ಠ 50 ವ್ಯಕ್ತಿಗತ ಕಾಮಗಾರಿಗಳನ್ನು ಮಾಡಿಸಬೇಕು ಎಂದರು.
ಅರ್ಹ ರೈತರ ಜಮೀನು ಅಭಿವೃದ್ಧಿಪಡಿಸಲು ಮಾದರಿ ಅಂದಾಜು ಪಟ್ಟಿಯಂತೆ ಬದು ನಿರ್ಮಾಣ, ಕೃಷಿಹೊಂಡ, ಗಿಡನೆಡುವಿಕೆ, ತೋಟಗಾರಿಕೆ/ ರೇಷ್ಮೆ ಅಭಿವೃದ್ಧಿ ಮತ್ತು ಮನೆಯಲ್ಲಿ ಜಾನುವಾರು ದೊಡ್ಡಿ ಕಾಮಗಾರಿಗಳಿಗೆ ಕೂಡಲೇ ಚಾಲನೆ ನೀಡುವಂತೆ ತಿಳಿಸಿದರು.
ಜಲ ಮತ್ತು ಮಣ್ಣಿನ ಸಂರP್ಷÀಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಕೆರೆಗಳ ಅಭಿವೃದ್ಧಿ, ಜಲಾನಯನ ಪ್ರದೇಶಗಳ ಅಭಿವೃದ್ಧಿ, ಕೃಷಿ ಹೊಂಡಗಳ ನಿರ್ಮಾಣ, ಅರ್ಹ ರೈತರ ಜಮೀನುಗಳಲ್ಲಿ ತೋಟಗಾರಿಕೆ ಕಾಮಗಾರಿಗೆ ಆದ್ಯತೆ ನೀಡಬೇಕು. ನೆಡುತೋಪು, ದನದ ಕೊಟ್ಟಿಗೆಗಳ ನಿರ್ಮಾಣ ಮುಂತಾದ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.
ಅನುಷ್ಠಾನ ಇಲಾಖೆಗಳೊಂದಿಗೆ ಒಗ್ಗೂಡಿಸುವಿಕೆಗಾಗಿ ಸಮನ್ವಯ ಸಾಧಿಸುವುದು. ವಿಶೇಷವಾಗಿ ಅರಣ್ಯ ಇಲಾಖೆಯಡಿ ಪ್ರತಿ ತಾಲೂಕಿಗೆ ಕನಿಷ್ಠ 20 ಕಿ.ಮೀ  ರಸ್ತೆ ಬದಿ ಸಾಲುಮರ ನೆಡುವ ಕಾಮಗಾರಿ ಕೈಗೆತ್ತಿಕೊಳ್ಳುವುದು ಹಾಗೂ ಅರ್ಹ ಫಲಾನುಭವಿಗಳ ಹೊಲಗಳಲ್ಲಿ ನೆಡುತೋಪು ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡಿದರು.
ಈ ಎಲ್ಲಾ ಕೆಲಸಗಳನ್ನು ತP್ಷÀಣದಿಂದಲೇ ಪ್ರಾರಂಭಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವುದು. ಅಕುಶಲ ಕೆಲಸ ಬಯಸುವ ಜನರಿಗೆ ಉದ್ಯೋಗ ನೀಡದಿದ್ದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಮಂಡ್ಯ: ಸರ್ಕಾರಿ ನೌಕರರು ಮತ್ತು ಕುಟುಂಬದ ಅವಲಂಬಿತ ಸದಸ್ಯರುಗಳಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಜ್ಯೋತಿ ಸಂಜೀವಿನಿ ಯೋಜನೆ ಅನುಷ್ಠಾನ ಸಂಬಂಧ ಆ. 12ರಂದು ಬೆಳಿಗ್ಗೆ 10 ಗಂಟೆಗೆ ನಗರದ ರೈತ ಸಭಾಂಗಣದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಬರುವ ಎಲ್ಲಾ ವೇತನ ಬಟವಾಡೆ ಅಧಿಕಾರಿಗಳು, ಸಂಬಂಧಪಟ್ಟ ಸಿಬ್ಬಂದಿ ಹಾಗೂ ಮಂಡ್ಯ ಜಿಲ್ಲಾ ನೌಕರರ ಸಂಘದ ಎಲ್ಲಾ ಹಂತದ ಪದಾಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.

Sunday 9 August 2015

ಕೆ.ಆರ್.ಪೇಟೆ,ಆ.09-  ತಾಲೂಕಿನಲ್ಲಿ ಭೀಕರ ಬರ ತಾಂಡವಾಡುತ್ತಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ ಹಾಗಾಗಿ ರಾಜ್ಯ ಸರ್ಕಾರವು ತಕ್ಷಣ ಕೆ.ಆರ್.ಪೇಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಶಾಸಕ ಕೆ.ಸಿ.ನಾರಾಯಣಗೌಡ ಒತ್ತಾಯ ಮಾಡಿದರು.
ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸಂಬಂಧ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರಿಗೆ ಬರೆದಿರುವ ಮನವಿ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿ ತಾಲೂಕಿನ ಮೂರು ತಾಲೂಕು ಸಂಪೂರ್ಣ ಮಳೆಯಾಶ್ರಿತ ಹೋಬಳಿಗಳಿವೆ ಇಲ್ಲಿ ಮಳೆಯಾಗದೇ ಇರುವ ಪರಿಣಾಮ ಕೊಳವೆಬಾವಿಗಳಲ್ಲಿ ಅಂತರ್ಜಲ ಬತ್ತಿಹೋಗಿದ್ದು ಕನಿಷ್ಠ ಕುಡಿಯುವ ನೀರಿಗೂ ತೀವ್ರ ತೊಂದರೆಯಾಗಿದೆ ಈ ಬಗ್ಗೆ ಉಸ್ತುವಾರಿ ಸಚಿವರು ಪರಿಸ್ಥಿತಿಯನ್ನು ಖುದ್ದು ಬೇಟಿ ನೀಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಅಗತ್ಯ ಪರಿಹಾರ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದೆ ರೈತರು ಮತ್ತು ನಾಗರೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗೆ ಬಂದಿರುವ ಬೆಳೆ ಮಳೆಯಿಲ್ಲದೆ ಒಣಗುತ್ತಿದೆ. ಸಾಲದ ಬಾಧೆಯಿಂದ ತಾಲೂಕಿನ 08 ಜನ ರೈತರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಪೂರ್ಣ ಮಳೆಯಾಶ್ರಿತ ಪ್ರದೇಶ ಹೊಂದಿರುವ ತಾಲೂಕಿನ ಸಂತೇಬಾಚಹಳ್ಳಿ, ಶೀಳನೆರೆ, ಬೂಕನಕೆರೆ ಮತ್ತು ಅರೆ ನೀರಾವರಿ ಪ್ರದೇಶಗಳನ್ನು ಹೊಂದಿರುವ ಕಸಬಾ, ಅಕ್ಕಿಹೆಬ್ಬಾಳು ಹಾಗೂ ಕಿಕ್ಕೇರಿ ಹೋಬಳಿಗಳಲ್ಲಿ ಅಂತರ್ಜಲ ಸ್ಥಗಿತಗೊಂಡಿದ್ದು ಪಂಪ್ ಸೆಟ್ ಬಳಕೆದಾರ ರೈತರು ಬೆಳೆದಿರುವ ಕಬ್ಬು, ಬಾಳೆ, ತೆಂಗು, ಅಡಕೆ ಮುಂತಾದ ಬೆಳೆಗಳು ರೈತರ ಕಣ್ಣ ಮುಂದೆಯೇ ಒಣಗಲಾರಂಭಿಸಿವೆ. ಬೆಳೆ ಕೈತಪ್ಪಿರುವುದರಿಂದ ರೈತರು ಕೃಷಿಗಾಗಿ ಮಾಡಿದ ಸಾಲದ ಬಡ್ಡಿ ಬೆಲೆಯುತ್ತಿದ್ದು ರೈತ ಸಮುದಾಯ ಆತ್ಮಹತ್ಯೆ ಮಾಡಿಕೊಲ್ಳುವ ಅಥವಾ ಹೊಟ್ಟೆ ಪಾಡಿಗಾಗಿ ಗುಳೇ ಹೋಗುವ ಸನ್ನಿವೇಶ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ 03 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಆದರೆ ಬರದ ಕರಿನೆರಳಿಗೆ ಸಿಕ್ಕಿ ತತ್ತರಿಸುತ್ತಿರುವ ಕೆ.ಆರ್.ಪೇಟೆ ತಾಲೂಕನ್ನು ಮಾತ್ರ ಬರಪಿಡಿತ ಪ್ರದೇಶವೆಂದು ಘೋಷಿಸದೆ ಇರುವುದು ದುರ್ದೈವದ ಸಂಗತಿ ಎಂದು ನೋವಿನಿಂದ ಹೇಳಿದರು.
ಈ ಬಗ್ಗೆ ತಾವು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸಿದರೂ ರಾಜಕೀಯ ಕಾರಣಗಳಿಗಾಗಿ ಕೆ.ಆರ್.ಪೇಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದೆ ರೈತರ ಬದುಕಿನ ಮೇಲೆ ಬರೆ ಎಳೆಯಲಾಗುತ್ತಿದೆಯೆಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಎಲ್ಲಾ ಕೆರೆಕಟ್ಟೆಗಳನ್ನು ಹೇಮಾವತಿ  ನೀರಿನಿಂದ ತುಂಬಿಸದೆ ಬೇರೆ ತಾಲೂಕುಗಳಿಗೆ ನೀರು ಹರಿಸಲು ಸಂಚು ರೂಪಿಸಲಾಗುತ್ತಿದೆ ಈಗೇನಾದರೂ ಆದರೆ ತಾಲೂಕಿನ ರೈತರೊಂದಿಗೆ ಸೇರಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ನಾರಾಯಣಗೌಡ ಎಚ್ಚರಿಸಿದರು.
ಗೋಷ್ಠಿಯಲ್ಲಿ ಪುರಸಭಾ ಸದಸ್ಯರಾದ ಹೆಚ್.ಆರ್.ಲೋಕೇಶ್, ಸಂತೋಷ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

'
 
ಕೆ.ಆರ್.ಪೇಟೆ,ಆ.09-  ತಾಲೂಕಿನ ಮುರುಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾದ ಹೆಮ್ಮನಹಳ್ಳಿ ಗ್ರಾಮದ ರೇಣುಕಾಮಂಜೇಗೌಡ ಅವರನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಜೆ.ರಮೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹೊನ್ನೇನಹಳ್ಳಿ ಕೃಷ್ಣೇಗೌಡ, ಹೆಚ್.ವಿ.ಸತೀಶ್, ಹೆಮ್ಮನಹಳ್ಳಿ ಕೃಷ್ಣೇಗೌಡ, ಅಗಸರಹಳ್ಳಿ ದೇವರಾಜು ಇತರರು ಇದ್ದರು.
ಚಿತ್ರಶೀರ್ಷಿಕೆ:09ಞಡಿಠಿeಣ-02 ಕೆ.ಆರ್.ಪೇಟೆ: ತಾಲೂಕಿನ ಮುರುಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾದ ರೇಣುಕಮ್ಮಮಂಜೇಗೌಡ ಅವರನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಭಿನಂದಿಸಿದರು. ಮುಖಂಡರಾದ ಹೆಚ್.ಜೆ.ರಮೇಶ್, ಹೊನ್ನೇನಹಳ್ಳಿ ಕೃಷ್ಣೇಗೌಡ, ಎಚ್.ವಿ.ಸತೀಶ್, ಹೆಮ್ಮನಹಳ್ಳಿ ಕೃಷ್ಣೇಗೌಡ  ಇತರರು ಇದ್ದರು.
=======================
ಕೆ.ಆರ್.ಪೇಟೆ,ಆ.09- ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಸರ್ಕಾರಿ ನೌಕರರಾದ ನಾವು ಆಡಳಿದಲ್ಲಿ ಸಂಪೂರ್ಣ ಕನ್ನಡ ಬಳಕೆಯ ಬಗ್ಗೆ ಪ್ರತಿಜ್ಞೆ ಮಾಡುತ್ತೇವೆ. ನಾಡಿನ ಉದ್ದಗಲಕ್ಕೂ ಸರ್ಕಾರಿ ನೌಕರರ ಸಂಘದ ವತಿಯಿಂದ ಶಾಲಾ ಕಾಲೇಜುಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಮಕ್ಕಳಲ್ಲಿ ಕನ್ನಡ ಅಭಿಮಾನ ಮೂಡಿಸುವ ಕಾರ್ಯ ಮಾಡುತ್ತೇವೆ. ರಾಜ್ಯದಾದ್ಯಂತ ವಿಚಾರ ಸಂಕಿರಣಗಳ ಮೂಲಕ ಸರ್ಕಾರಿ ನೌಕರರಿಗೆ ಆಡಳಿದಲ್ಲಿ ಕನ್ನಡದ ಬಳಕೆಯ ಬಗ್ಗೆ ಕಾರ್ಯಾಗಾರಗಳನ್ನು ಏರ್ಪಡಿಸುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಂಡು ಘೋಷಿಸಿದ್ದಾರೆ.
ಪಟ್ಟಣದ ಎಂ.ಕೆ.ಬೊಮ್ಮೇಗೌಡ ಸಮುದಾಯ ಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸರ್ಕಾರಿ ಆಡಳಿತದಲ್ಲಿ ಸಂಪೂರ್ಣ ಕನ್ನಡ ಬಳಕೆ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರಿ ನೌಕರರ ಸಂಘ ಅವಳಿ-ಜವಳಿಗಳಿದ್ದಂತೆ. ಕಸಾಪ ಸಂಘಟಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೂ ಸರ್ಕಾರಿ ನೌಕರರ ಸಂಘ ಅಂತಕರಣ ಮತ್ತು ಆರ್ಥಿಕ ಶಕ್ತಿಯನ್ನು ನೀಡಿದೆ. ಸಮ್ಮೆಳನಗಳ ಯಶಸ್ಸಿನಲ್ಲಿ ಸರ್ಕಾರಿ ನೌಕರರ ಪಾಲಿದೆಯೆಂದ ಪಟೇಲ್ ಪಾಂಡು ಪ್ರತಿಯೊಬ್ಬ ಸರ್ಕಾರಿ ನೌಕರನೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಳ್ಳಬೇಕೆಂದರು. ಪರಿಷತ್ತಿನ ಕಾರ್ಯಚಟುವಟಿಕೆಗಳಲ್ಲಿ ಪ್ರವೆಶಿಸುವ ಮೂಲಕ ಕನ್ನಡ ಕಟ್ಟುವ ಪರಿಷತ್ತಿನ ಕೆಲಸಕ್ಕೆ ಹೊಸ ಆಯಾಮ ನೀಡಬೇಕೆಂದರು.
ಪ್ರತಿಯುಬ್ಬ ನೌಕರನಲ್ಲೂ ಕನ್ನಡದ ಕೆಚ್ಚು ಪ್ರತಿಫಲಗೊಳ್ಳಬೇಕು. ನಾವು ಬದ್ದತೆಯಿಂದ ಕೆಲಸ ಮಾಡಿದರೆ ಕನ್ನಡ ನಾಡಿನಲ್ಲಿ ಕನ್ನಡ ಕಟ್ಟುವುದು ಸವಾಲಿನ ವಿಚಾರವಲ್ಲ. ಸರ್ಕಾರಿ ನೌಕರರ ಹೋರಾಟದ ಫಲವಾಗಿಯೇ ಇಂದು ಆಡಳಿತದಲ್ಲಿ ಶೇ. 80 ರಷ್ಟು ಕನ್ನಡದ ಬಳಕೆಯಾಗುತ್ತಿದೆ. ಎಲ್ಲಾ ಸರ್ಕಾರಿ ಆದೇಶಗಳೂ ಕನ್ನಡದಲ್ಲಿಯೇ ಹೊರಬರುತ್ತಿವೆ. ಆಡಳಿದಲ್ಲಿ ಕನ್ನಡ ಬಳಸದ ಅಧಿಕಾರಿಗಳಿಗೆ ದಂಡ ವಿಧಿಸುವುದಕ್ಕೆ ನೌಕರರ ಸಂಘದ ಬೆಂಬಲವಿದೆಯೆಂದು ತಿಳಿಸಿದ ಅವರು ಸರ್ಕರಿ ನೌಕರರೂ ಕನ್ನಡದ ಮಕ್ಕಳೇ. ನಮ್ಮ ಉಸಿರಿನಲ್ಲಿ ಕನ್ನಡವಿದೆಯೆಂದರು.
ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ವೇತನ ಭತ್ಯೆಗಳನ್ನು ನೀಡಬೇಕು. ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗವಾಗುತ್ತಿದ್ದು ಇದರಿಂದ ನೌಕರರಿಗೆ ಕಿರುಕುಳವಾಗುತ್ತಿದೆ. ಆಡಳಿತ ಲೋಪ, ಅನುದಾನ ಬಳಕೆಯ ಲೋಪ ಮುಂತಾದ ಆಡಳಿತಾತ್ಮಕ ವಿಷಯಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಬಳಕೆ ಮಾಡಿದರೆ ನಮ್ಮ ವಿರೋಧವಿಲ್ಲ. ಆದರೆ ನಮ್ಮ ವೈಯಕ್ತಿಕ ಮಾಹಿತಿ ಕೇಳುವುದಕ್ಕೆ ನಮ್ಮ ವಿರೋಧವಿದೆಯೆಂದು ಪಾಂಡು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಕನ್ನಡ ಪರಂಪರೆಯ ಇತಿಹಾಸ ಮತ್ತು ಆಡಳಿದಲ್ಲಿ ಕನ್ನಡ ಬಳಕೆ ಕುರಿತು ವಿಚಾರ ಮಂಡಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಜಯರಾಮ್ ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಪ್ರದಾನ ಕಾರ್ಯದರ್ಶಿ ಎಸ್.ಕೆ.ರವಿಕುಮಾರ್,  ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮೇಶ್, ಖಜಾಂಚಿ ಬಿ.ಆರ್.ವೆಂಕಟೇಶ್, ಪಿ.ಜೆ.ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಕಂದಾಯ ಇಲಾಖೆಯ ಮಾದೇಗೌಡ, ಕೆ.ಆರ್.ನೀಲಕಂಠ ವೇದಿಕೆಯಲ್ಲಿದ್ದರು.
ಚಿತ್ರಶೀರ್ಷಿಕೆ:09ಞಡಿಠಿeಣ-03: ಕೆ.ಆರ್.ಪೇಟೆ: ಪಟ್ಟಣದ ಎಂ.ಕೆ.ಬೊಮ್ಮೇಗೌಡ ಸಮುದಾಯ ಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸರ್ಕಾರಿ ಆಡಳಿತದಲ್ಲಿ ಸಂಪೂರ್ಣ ಕನ್ನಡ ಬಳಕೆ ಕುರಿತ ವಿಚಾರ ಸಂಕಿರಣವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಂಡು ಉದ್ಘಾಟಿಸಿ ಮಾತನಾಡಿದರು.
=============================
ಕೆ.ಆರ್.ಪೇಟೆ,ಆ.09:  ಖಾಸಗಿ ಶಾಲೆಗೆ  ಸರಸಮನಾಗಿ ಸುಮಾರು 500ಮಕ್ಕಳನ್ನು ದಾಖಲು ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿರುವ ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲೆಗೆ ವಿಧಾನಪರಿಷತ್ ಸದಸ್ಯ ಗೋ.ಮಧುಸೂಧನ್ 2ಲಕ್ಷ ರೂಗಳ ಅನುಧಾನವನ್ನು ನೀಡುತ್ತಿರುವುದಾಗಿ ಪ್ರಕಟಿಸಿದರು.
ಅವರು ಪಟ್ಟಣದ ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷರಾಗಿದ್ದ ಈಚೆಗೆ ನಿಧನರಾದ ದಿವಂಗತ ಯು.ಗೋಪಾಲರಾವ್ ನಿವಾಸಕ್ಕೆ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮಿಕ ಶಾಲೆಗೆ ಬೇಟಿ ನೀಡಿ ಪಾಂಡವಪುರ ಉಪವಿಭಾಗಾಧಿಕಾರಿಗಳ ವಿಶೇಷ ಆಸಕ್ತಿಯಿಂದ 150ಮಕ್ಕಳಿದ್ದ ಈ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ 500ಕ್ಕೂ ಹೆಚ್ಚು ಮಕ್ಕಳು ದಾಖಲಾಗಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು ತಕ್ಷಣವೆ ತಮ್ಮ ಅನುದಾನದಲ್ಲಿ 2ಲಕ್ಷ ರೂಗಳನ್ನು ತಕ್ಷಣವೇ ನೀಡುವುದಾಗಿ ತಿಳಿಸಿದರು.ನ  ಗುಣಮಟ್ಟದ ಶಿಕ್ಷಣ ನೀಡಲು ಸನ್ನದ್ದವಾಗಿರುವ ಶತಮಾನ ತುಂಬಿದ ಸರ್ಕಾರಿ ಶಾಲೆ ಯ ಬೆಳವಣೆಗೆ ಒಳ್ಳೆಯ ಮುನ್ನುಡಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಬಿ.ಸಿ.ಎಸ್.ಕುಮಾರ್, ಶಿಕ್ಷಕ ಸುರೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜು, ಕತ್ತರಘಟ್ಟವಾಸು, ಲೇಪಾಕ್ಷಿಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜು, ಉಪಾಧ್ಯಕ್ಷ ಬಸವರಾಜು ಮತ್ತಿತರರು ಹಾಜರಿದ್ದರು.