Wednesday 30 September 2015

ಸಂಚಾರಿ ಪೊಲೀಸರಿಗೆ ರಿಪ್ಲೆಕ್ಸ್ ಜಾಕೆಟ್ ವಿತರಣೆ
ಮೈಸೂರು,ಸೆ.30- ಮೈಸೂರಿನ ಸಾತಗಳ್ಳಿ ರಿಂಗ್ ರಸ್ತೆಯಲ್ಲಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಹೃದಯಾಲಯದ ವತಿಯಿಂದ  ನಗರದ ಸಂಚಾರಿ ಪೊಲೀಸರಿಗೆ  ಕಾರ್ಯ ನಿರ್ವಹಿಸಲು ಅನುಕೂಲವಾಗಲೆಂದು ಹಾಗೂ ಅವರ ಸುರಕ್ಷಾ ದೃಷ್ಟಿಯಿಂದ ರಿಪ್ಲೆಕ್ಸ್ ಜಾಕೆಟ್‍ಗಳನ್ನು ಇಂದು  ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿತರಿಸಲಾಯಿತು.
 ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ದತ್ತಾತ್ರೇಯ, ಡಿಸಿಪಿಗಳಾದ ಮಿರ್ಜಿ, ಶೇಖರ್ ಹಾಗೂ ಸಂಚಾರಿ ಎಸಿಪಿ ರವರುಗಳ ಸಮ್ಮುಖದಲ್ಲಿ ನಗರದ ಎಲ್ಲಾ ಸಂಚಾರಿ ಠಾಣೆಗಳ ಪೊಲೀಸ್ ಇನ್ಸ್ ಪೆಕ್ಟರ್‍ಗಳು ಎಎಸ್‍ಐಗಳು, ಪಿಎಸ್‍ಐಗಳು ಸೇರಿದಂತೆ 50 ಮಂದಿಗೆ ಜಾಕೆಟ್‍ಗಳನ್ನು ವಿತರಿಸಲಾಯಿತು.
 ಕಚೇರಿಯಲ್ಲಿ ಸಾಂಖೇತಿಕವಾಗಿ  ಆಯಾ ಠಾಣೆಗಳ ಇನ್ಸ್ ಪೆಕ್ಟರ್‍ಗಳಿಗೆ ವಿತರಿಸಿದರು ನಂತರ ಅವರುಗಳು ಎಲ್ಲಾ ಟ್ರಾಫಿಕ್ ಸಿಬ್ಬಂದಿಗಳಿಗೆ ವಿತರಿಸಲಿದ್ದಾರೆ.
 ಈ ಸಂದರ್ಭದಲ್ಲಿ ನಾರಾಯಣ ಹೃದಯಾಲಯದ ಎಂ.ಡಿ. ದತ್ತಾತ್ರೇಯ ಮಾತನಾಡಿ ನಮ್ಮ ಆಸ್ಪತ್ರೆ ವತಿಯಿಂದ ಸಾರ್ವಜನಿಕ ಕಳಕಳೀಯ ಜವಾಬ್ದಾರಿ ದೃಷ್ಟಿ ಇಟ್ಟುಕೊಂಡು ಈ ಸೇವೆ ಮಾಡಿದೆ, ನಗರದ ರಿಂಗ್ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚುತ್ತಿದ್ದು, ಅದನ್ನು ತಪ್ಪಿಸುವ ಸಲುವಾಗಿ ಪೊಲೀಸ್ ಇಲಾಖೆ ಬ್ಯಾರಿಕೆಡ್ಗಳನ್ನು ಕೇಳಿದೆ  ಮುಂದಿನ ದಿನಗಳಲ್ಲಿ ಸುಮಾರು 40 ಬ್ಯಾರಿಕೆಡ್‍ಗಳನ್ನು ನೀಡಲು ಒಪ್ಪಿಕೊಂಡಿರುವುದಾಗಿ ತಿಳಿಸಿದರು.  ಇದಲ್ಲದೆ  ಪೊಲೀಸ್ ಇಲಾಖೆ  ಹಗಲಿರುಳು ಸೇವೆ ಸಲ್ಲಿಸುತ್ತಿದೆ ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತವೆ ಆದ್ದರಿಂದ ಆಸ್ಪತ್ರೆವತಿಯಿಂದ ಪೊಲೀಸ್ ಸಿಬ್ಬಂದಿಗಳಿಗೆ ಯಾವುದೇ ಸಂದರ್ಭದಲ್ಲಿ ಬಮದರೂ ಅವರಿಗೆ ಉಚಿತವಾಗಿ ಆರೋಗ್ಯ ತಪಾಸಣೆ  ನಡೆಸಲಾಗುತ್ತದೆ ಎಂದು ಹೇಳಿದರು.    

Monday 28 September 2015

ದಸಂಸ ರಾಜ್ಯ ಸಂಚಾಲಕರಾಗಿ ಗುರುಪ್ರಸಾದ್ ಕೆರಗೋಡು ಪುನರಾಯ್ಕೆ
ಮಂಡ್ಯ:ಇತ್ತೀಚೆಗೆ ಗುಲ್ಬರ್ಗದಲ್ಲಿ ನಡೆದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸಭೆಯಲ್ಲಿ ಮಂಡ್ಯದ ಗುರುಪ್ರಸಾದ್ ಕೆರೆಗೋಡು ಅವರನ್ನು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರನ್ನಾಗಿ ಪುನರ್ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪದಾಧಿಕಾರಿಗಳನ್ನು ಕೂಡ ಆಯ್ಕೆ ಮಾಡಲಾಗಿದ್ದು, ಪಟ್ಟಿ ಇಂತಿದೆ.
ಗುರುಪ್ರಸಾದ್ ಕೆರಗೋಡು ರಾಜ್ಯ ಸಂಚಾಲಕ, ಮರಿಯಪ್ಪ  ಹಳ್ಳಿ,ರಾಜ್ಯ ಸಂಘಟನಾ ಸಂಚಾಲಕ ( ಆಂತರಿಕ ಶಿಸ್ತು ತರಬೇತಿ ವಿಭಾಗ), ಸಿದ್ದಲಿಂಗಯ್ಯ ಕಮಲನಗರ, ರಾಜ್ಯ ಸಂಘಟನಾ ಸಂಚಾಲಕ (ದಲಿತ ನೌಕರರು, ಕಾರ್ಮಿಕರ ವಿಭಾಗ), ಗೋವಿಂದಪ್ಪ ಕೊಡಗು, ರಾಜ್ಯ ಸಂಘಟನಾ ಸಂಚಾಲಕ ( ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ವಿಭಾಗ), ಶ್ರೀನಿವಾಸ್ ಚಿಕ್ಕಮಗಳೂರು, ರಾಜ್ಯ ಸಂಘಟನಾ ಸಂಚಾಲಕ, ಗಂಗನಂಜಯ್ಯ  ರಾಜ್ಯ ಖಜಾಂಚಿ ಹಾಗೂ ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಹಿರಿಯರಾದ ಹೆಬ್ಬಾಳೆ ಲಿಂಗರಾಜು, ಉಲ್ಕೆರೆ ಮಹದೇವ ಅವರನ್ನು ಆಯ್ಕೆ ಮಾಡಲಾಗಿದ್ದು, ಉಳಿದಂತೆ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನು ಮುಂದಿನ ರಾಜ್ಯ ಸಮಿತಿ ಸಭೆಯಲ್ಲಿ ನೇಮಕ ಮಾಡಲಾಗುವುದು.

Saturday 26 September 2015

ಪರಿಸರ ಸಂರಕ್ಷಣೆ ಇಂದಿನ ಅಗತ್ಯ .

ಪರಿಸರ ಸಂರಕ್ಷಣೆ ಇಂದಿನ ಅಗತ್ಯ
ಮಂಡ್ಯ, ಸೆ.26- ಇತ್ತೀಚಿನ ದಿನಗಳಲ್ಲಿ ಜನಮಾನಸದಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಅನಾದರ ಹೆಚ್ಚುತ್ತಿದ್ದು ಇದರಿಂದಾಗಿ ಪ್ರಕೃತಿಯಲ್ಲಿ ಏರುಪೇರಾದ ಸ್ಥಿತಿ ಉಂಟಾಗುತ್ತಿದೆ. ಪ್ರತಿದಿನವೂ ನೂರಾರು ರೀತಿಯ ಕಸ, ವಿಷಾನಿಲಗಳು ಪರಿಸರಕ್ಕೆ ಸೇರುತ್ತಿದ್ದು, ಪರಿಣಾಮವಾಗಿ ಓಜೋನ್ ಪದರಕ್ಕೆ ಧಕ್ಕೆ ಉಂಟಾಗಿದೆ. ಜನಸಮೂಹ ಹಸಿರೆಡೆಗೆ ನಡೆದಾಗ ಮಾತ್ರ ಈ ರೀತಿಯ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಗಿಡಮರಗಳನ್ನು ಬೆಳೆಸುವ, ಪೆÇೀಷಿಸುವ ಮತ್ತು ಅವುಗಳನ್ನು ಉಳಿಸುವ ಮನೋಭಾವ ಎಲ್ಲರಲ್ಲೂ ಮೂಡಬೇಕೆಂದು ಮಂಡ್ಯ ರೋಟರಿ ಕ್ಲಬ್ ಅಧ್ಯಕ್ಷ ಅನಂತಕುಮಾರ್ ತಿಳಿಸಿದರು.
ಪೆÇಲೀಸ್ ಕಾಲೋನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹಸಿರೆಡೆಗೆ ನಡೆಯೋಣ ಕಾರ್ಯಕ್ರಮದ ಅಂಗವಾಗಿ ಶಾಲಾವರಣದಲ್ಲಿ ಸಸಿಗಳನ್ನು ನೆಟ್ಟು ಮಾತನ್ನಾಡುತ್ತಿದ್ದರು.
ವಿದ್ಯಾರ್ಥಿಗಳು ಈಗಿನಿಂದಲೇ ಈ ಬಗ್ಗೆ ಗಮನ ನೀಡಿ ವನ್ಯಸಂಪತ್ತನ್ನು ವನ್ಯಮೃಗಗಳ ಸಂಪತ್ತನ್ನು ಉಳಿಸುವತ್ತ ಕಾರ್ಯ ಯೋಜನೆ ಹಾಕಿಕೊಳ್ಳಬೇಕೆಂದು ತಿಳಿಸುತ್ತ ಶಾಲಾಶಿಕ್ಷಕರು ಮಕ್ಕಳಲ್ಲಿ ಈ ಪ್ರವೃತ್ತಿ ಬೆಳೆಸಲು ಸಹಕರಿಸಲು ಕೋರಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ನಿವೃತ್ತ ಮುಖ್ಯ ಶಿಕ್ಷಕ ಶಿವಚಿದಂಬರ್, ರೋಟರಿ ಕಾರ್ಯದರ್ಶಿ ರಾಜೀವ್, ಅರವಿಂದ್ ಹಾಗೂ ಶಾಲಾಶಿಕ್ಷಕರು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಸುರೇಶ್ ಸ್ವಾಗತಿಸಿ, ನಂಜುಂಡಸ್ವಾಮಿ ವಂದಿಸಿದರು.

ಮೈಸೂರಲ್ಲಿ ಬಂದ್ ಭಾಗಶಃ ಯಶಸ್ವಿ : ಸಾರ್ವಜನಿಕರಿಗೆ ತೊಂದರೆ

ಮೈಸೂರಲ್ಲಿ ಬಂದ್ ಭಾಗಶಃ ಯಶಸ್ವಿ : ಸಾರ್ವಜನಿಕರಿಗೆ  ತೊಂದರೆ


ಮೈಸೂರು, ಸೆ.26- ಕಳಸಾಬಂಡೂರಿ ಕುಡಿಯುವ ನೀರಿನ ಯೋಜನೆಗೆ ಜಾರಿಗೆ ಸಂಬಂಧಿಸಿದಂತೆ ಕೆಲವು ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಿರುವ ಕರ್ನಾಟಕ ಬಂದ್ ಭಾಗಶಃ ಯಶಸ್ವಿಯಾಗಿದೆ.
 ನಗರದ ಹೃದಯಭಾಗ ಹೊರತುಪಡಿಸಿ ಉಳಿದಂತೆ ಎಲ್ಲಾ ಮೊಹಲ್ಲಾಗಳ ಒಳಭಾಗಗಳಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳನ್ನು ತೆರೆದುಕೊಂಡು ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಂಡಿದ್ದರು. ನಗರದ ಎನ್. ಆರ್. ಮೊಲ್ಲಾ, ಮಂಡಿಮೊಹಲ್ಲಾ, ಒಂಟಿಕೊಪ್ಪಲ್, ವಿಜಯನಗರ, ಕುವೆಂಪುನಗರ ಸಿದ್ಧಾರ್ಥ ಲೇಔಟ್ ನಜರ್‍ಬಾದ್, ಉದಯಗಿರಿ, ಶಾಂತಿನಗರ, ರಾಜೀವನಗರ, ಗಾಂಧಿನಗರ,  ಕೆಸರೆ ಸೇರಿದಂತೆ ಇನ್ನೂ ಹಲವಾರು ಭಾಗಗಳಲ್ಲಿ ಬಂದ್‍ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.  ಕಾರಣ ಇವರುಗಳಿಗೆÀ ಬಂದ್ ಇಷ್ಟವಿರಲಿಲ್ಲ, ಈಗಾಗಲೇ ಎರಡು ಭಾರಿ ಬಂದ್ ಬಿಸಿ ಎದುರಿಸಿರುವ ಸಾರ್ವಜನಿಕರು ಪದೇ ಪದೇ ಬಂದ್‍ಗೆ ಕರೆ ಕೊಡುವುದರಿಂದ ರೋಸಿಹೋಗಿದ್ದಾರೆ, ವ್ಯಾಪಾರ ವಹಿವಾಟುಗಳಲ್ಲಿ ನಷ್ಟ ಅನುಭವಿಸಿದ್ದಾರೆ,  ಈ ಬಗ್ಗೆ  ಸಾರ್ವಜನಿಕರನನ್ನು ಪ್ರಶ್ನಿಸಿದರೆ ಹೋಗ್ರಿ ಯಾರಿಗೆ ಬೇಕು ಬಂದ್, ಇದರಿಂದ ಯಾರಿಗೆ ಲಾಭ, ಕೆಲವು ರಾಜಕೀಯ ಮುಖಂಡರುಗಳು, ಸಂಘ ಸಂಸ್ಥೆಗಳವರು ತಮ್ಮ ತೆವಲಿಗಾಗಿ, ಪ್ರಚಾರಕ್ಕಾಗಿ ಇಂತಹ ಬಂದ್‍ಗೆ ಕರೆ ಕೊಡುತ್ತಾರೆ ಇದರಿಂದ ಯಾರಿಗೇನು ಲಾಭ? ಇದರಿಂದ ಜನರಿಗೆ ತೊಂದರೆ ಹೆಚ್ಚು ಎಂದು ಹೇಳುತ್ತಾರೆ.
 ನಗರದ ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸುರಸ್ತೆ,  ಅಶೋಕರಸ್ತೆ,  ನಗರ ಮತ್ತು ಕೇಂದ್ರ ಬಸ್ ನಿಲ್ದಾಣಗಳ ಆಸುಪಾಸು ಸಂಪೂರ್ಣ ಬಂದ್ ಆಗಿತ್ತು. ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ಪರಸ್ಥಳಗಳಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿ ಕಾದು ಕುಳಿತಿದ್ದ ದೃಶ್ಯ ಕಂಡುಬಂತು. ತಿಂಡಿ ಊಟದ ವಿಚಾರಕ್ಕೆ ಬಂದರೆ ದಿನದ ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ವ್ಯಾಪಾರ ಮಾಡುವ ಹಣ್ಣುವ್ಯಾಪಾರಿಗಳು ಕಾಫಿ ಟೀ ಮಾರುವವರಿಂದ ಬಸ್‍ಗಳಿಗಾಗಿ ಕಾದು ಕುಳಿತಿದ್ದವರಿಗೆ ಆಹಾರ ಸಿಕ್ಕಂತಾಯಿತು. ಕೆಲ ಕನ್ನಡ ಪರ ಸಂಘಟಕರು ಅಲ್ಲಲ್ಲಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುತ್ತಿದ್ದುದು ಕಂಡುಬಂತು, ಶಾಲಾ ಕಾಲೇಜುಗಳಿಗೆ ರಜೆ ಗೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿತ್ತು. ಸಾರ್ವಜನಿಕರ ಖಾಸಗಿ ವಾಹನಗಳು ಎಂದಿನಂತೆ ಓಡಾಡುತ್ತಿದ್ದವು. ಪೆಟ್ರೋಲ್ ಬಂಕ್‍ಗಳು ಮುಚ್ಚಿದ್ದರಿಂದ ಕೆಲ ವಾಹನಸವಾರರು ಪೆಟ್ರೋಲ್ ಡೀಸಲ್ ಸಿಗದೆ ಪರದಾಡಬೇಕಾಯಿತು. ಎಲ್ಲೂ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಲಿಲ್ಲ, ಎಲ್ಲಾ ಕಡೆಯು ವ್ಯಾಪಕ ಪೋಲೀಸ್ ಭದ್ರತೆ ಒದಗಿಸಲಾಗಿತ್ತು.
  ಕನ್ನಡ ಸಂಘಟನೆಯ ಗುಂಪೊಂದು ಜಿಲ್ಲಾಧಿಕಾರಿ ಕಚೇರಿ ಬಳಿ ಮೊಬೈಲ್ ಟವರ್ ಹತ್ತಿ ಪ್ರತಿಭಟಿಸಿದರೆ, ಮತೊಂದು ಸಂಘದ ಗುಂಪು ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಮತೊಂದು ಗುಂಪು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಬೈಕ್‍ಗಳಲ್ಲಿ ರ್ಯಾಲಿ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Wednesday 23 September 2015

ನವ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಕರ್ನಾಟಕದ ಮುಖ್ಯಮಂತ್ರಿ ಶ್ರೀ. ಸಿದ್ಧರಾಮಯ್ಯ

ನವದೆಹಲಿಯಲ್ಲಿ ಸೆಪ್ಟೆಂಬರ್ 23, 2015ರಂದು :ನಡೆದ  ಸಭೆಯಲ್ಲಿ ಪಾಲ್ಗೊಂಡ ಕರ್ನಾಟಕದ ಮುಖ್ಯಮಂತ್ರಿ  ಶ್ರೀ. ಸಿದ್ಧರಾಮಯ್ಯ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಶ್ರೀ. ಎನ್ ಚಂದ್ರಬಾಬು ನಾಯ್ಡು, ಉತ್ತರಖಂಡದ ಮುಖ್ಯಮಂತ್ರಿ ಶ್ರೀ. ಹರೀಶ್ ರಾವತ್, ಮಿಜೋರಾಂ ಮುಖ್ಯಮಂತ್ರಿ ಶ್ರೀ. ಲಾಲ್ ತನ್ಹವಾಲ, ಹರ್ಯಾಣದ ಮುಖ್ಯಮಂತ್ರಿ ಶ್ರೀ. ಮನೋಹರ್ ಲಾಲ್ ಕಟ್ಟರ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ. ದೇವೇಂದ್ರ ಫಡ್ನವೀಸ್ ಪಾಲ್ಗೋಂಡಿದಗದರು.
.25 ಬಕ್ರೀದ್ ರಜೆ
     ಮೈಸೂರು,ಸೆ.23.ಬಕ್ರೀದ್ ಹಬ್ಬಕ್ಕೆ ಸೆಪ್ಟೆಂಬರ್ 24 ರ ಬದಲು ಸೆಪ್ಟೆಂಬರ್ 25 ರಂದು ರಾಜ್ಯ ಸರಕಾರ ರಜೆ ಘೋಷಿಸಿದೆ.
ಪ್ರವಾಸ ಕಾರ್ಯಕ್ರಮ
    ಮೈಸೂರು,ಸೆ.23.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ  ಉಮಾಶ್ರೀ ಅವರು ಸೆಪ್ಟೆಂಬರ್ 30 ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
    ಅಂದು ಬೆಳಿಗ್ಗೆ 10-30ಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆ ಸಂಯುಕ್ತವಾಗಿ ಆಯೋಜಿಸಿರುವ ಕಾರ್ಯಾಗಾರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಧ್ಯಾಹ್ನ 1 ಗಂಟೆಗೆ ಮೈಸೂರು ದಸರಾ ಮಹೋತ್ಸವ ಸಾಂಸ್ಕøತಿಕ ಉತ್ಸವದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ಮೈಸೂರಿನಿಂದ ನಿರ್ಗಮಿಸಲಿದ್ದಾರೆ.
ಸೆಪ್ಟೆಂಬರ್ 27 ರಂದು ಟಿ.ಇ.ಟಿ ಅರ್ಹತಾ ಪರೀಕ್ಷೆ
       ಮೈಸೂರು,ಸೆ.23-ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಶಿಕ್ಷಕರ ಟಿ.ಇ.ಟಿ ಅರ್ಹತಾ ಪರೀಕ್ಷೆಯನ್ನು  ಸೆಪ್ಟೆಂಬರ್ 27 ರಂದು ಜಿಲ್ಲೆಯ 32 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
    ಸೆಪ್ಟೆಂಬರ್ 27 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಪತ್ರಿಕೆ-1 ರಲ್ಲಿ 7,824 ಹಾಗೂ ಮಧ್ಯಾಹ್ನ 1-30 ಗಂಟೆಯಿಂದ ಸಂಜೆ 4-30 ಗಂಟೆಯವರೆಗೆ ಪತ್ರಿಕೆ-2 ರಲ್ಲಿ 11,049 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಸಂಬಂಧ 32 ಮುಖ್ಯ ಪರೀಕ್ಷಾ ಅಧೀಕ್ಷಕರು, 32 ಸ್ಥಾನೀಕ ಜಾಗೃತಿ ದಳ ಹಾಗೂ 7 ಮಾರ್ಗಾಧಿಕಾರಿಗಳನ್ನು ನಿಯೋಜಿಸಲಾಗಿದೆ.
     ಪರೀಕ್ಷಾರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗುವುದು. ಪರೀಕ್ಷೆಯಲ್ಲಿ ನೀಲಿ  ಅಥವಾ ಕಪ್ಪು ಶಾಹಿ ಬಾಲ್ ಪೆನ್ನನ್ನು ಬಳಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
       
ಪ್ಯಾರಾ ಮೆಡಿಕಲ್ ಕೋರ್ಸ್ ಅರ್ಜಿ ಆಹ್ವಾನ
ಮೈಸೂರು,ಸೆ.23-ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2015-16ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ವಿವಿಧ ಅರೆ ವೈದ್ಯಕೀಯ (ಪ್ಯಾರಾ ಮೆಡಿಕಲ್ ಕೋರ್ಸ್‍ಗಳಿಗೆ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
     ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 25 ರಂದು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್ hಣಣಠಿ://sತಿ.ಞಚಿಡಿ.ಟಿiಛಿ.iಟಿ  ನಲ್ಲಿ  ಅಥವಾ ದೂರವಾಣಿ ಸಂಖ್ಯೆ 0821-2344661ನ್ನು  ಸಂಪರ್ಕಿಸಬಹುದು.
ಶಿಕ್ಷಣ ಅದಾಲತ್ : ದಿನಾಂಕ ಬದಲಾವಣೆ
     ಮೈಸೂರು,ಸೆ.23.2015-16ನೇ ಸಾಲಿನ ಮೈಸೂರು ಜಿಲ್ಲಾ ಮಟ್ಟದ ಶಿಕ್ಷಣ ಅದಾಲತ್ ಕಾರ್ಯಕ್ರಮ ದಿನಾಂಕ:26/09/2015ರ ಬದಲಾಗಿ 13/01/2016ರಂದು ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅರ್ಜಿಯಲ್ಲಿ ನ್ಯೂನತೆಗಳಿದ್ದಲ್ಲಿ ತಿದ್ದುಪಡಿಗೆ ಅವಕಾಶ
     ಮೈಸೂರು,ಸೆ.23.2015-16ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುವ “ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ”, “ಶುಲ್ಕ ವಿನಾಯಿತಿ”, ವಿದ್ಯಾಸಿರಿ – “ಊಟ ಮತ್ತು ವಸತಿ ಸಹಾಯ ಯೋಜನೆ” ಮತ್ತು ಪೂರ್ಣಾವಧಿ ಪಿ.ಹೆಚ್.ಡಿ. ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ/ಫೆಲೋಶಿಪ್ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಯಲ್ಲಿ ನೂನ್ಯತೆಗಳಿದ್ದಲ್ಲಿ ಸೆಪ್ಟೆಂಬರ್ 30 ರೊಳಗಾಗಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ  ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
     ವಿದ್ಯಾರ್ಥಿಗಳು ಬ್ಯಾಂಕ್ ಖಾತೆಯ ವಿವರ, ಕಾಲೇಜು, ಕೋರ್ಸು ಮತ್ತು ಕೋರ್ಸಿನ ವರ್ಷ, ಹಿಂದಿನ ಸಾಲಿನ ಅಂಕಪಟ್ಟಿ ಅಪ್‍ಲೋಡ್ ಮಾಡುವುದು, ದೂರದ ವಿವರ, ಪ್ರವೇಶ ಸಂಖ್ಯೆ ಮತ್ತು ದಿನಾಂಕ ಹಾಗೂ ಅಗತ್ಯ ದಾಖಲೆಗಳನ್ನು ಅಪ್‍ಲೋಡ್ ಮಾಡುವ ಅವಕಾಶವನ್ನು ಸಹ ಕಲ್ಪಿಸಲಾಗಿದೆ.
     ಹೆಚ್ಚಿನ ಮಾಹಿತಿಗೆ  ಸಂಬಂಧಪಟ್ಟ ಕಾಲೇಜು/ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು/ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಿ ತಿದ್ದುಪಡಿ ಮಾಡಿಕೊಳ್ಳುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 25 ರಂದು ಶುಭ ಹಾರೈಕೆ
    ಮೈಸೂರು,ಸೆ.23.ಕರ್ನಾಟಕ ರಾಜ್ಯ  ಮುಕ್ತ ವಿಶ್ವವಿದ್ಯಾಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಎಫ್‍ಡಿಎ/ಎಸ್‍ಡಿಎ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ  ಶುಭ ಹಾರೈಕೆ ಹಾಗೂ  ಅಧ್ಯಯನ ಪುಸ್ತಕ ಬಿಡುಗಡೆ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 11 ಗಂಟೆಗೆ ಕಾವೇರಿ ಸಭಾಂಗಣದಲ್ಲಿ ನಡೆಯಲಿದೆ.
    ಪ್ರೊಬೆಷನರಿ ಅಧಿಕಾರಿ ಸಿ.ಟಿ. ಶಿಲ್ವನಾಗ್ ಅವರು ಅಧ್ಯಯನ ಪುಸ್ತಕ ಬಿಡುಗಡೆ ಮಾಡುವರು. ಸಂಸ್ಕøತ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ| ಪದ್ಮಾಶೇಖರ್ ಅವರು ಶುಭಹಾರೈಸಲಿದ್ದು, ಕುಲಪತಿಗಳಾದ           ಪ್ರೊ, ಎಂ.ಜಿ.ಕೃಷ್ಣನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಸೆಪ್ಟೆಂಬರ್ 25 ರಂದು ಮತ್ಸ್ಯ ಭವನ ಕಟ್ಟಡ ಉದ್ಘಾಟನೆ
 ಮೈಸೂರು,ಸೆ.23.(ಕ.ವಾ.)-ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ವತಿಯಿಂದ ಶೀತಲ ಸರಪಳಿ ಯೋಜನೆಯಡಿ ಮೈಸೂರಿನಲ್ಲಿ ನಿರ್ಮಿಸಲಾದ ಮತ್ಸ್ಯ ಭವನ ಕಟ್ಟಡದ ಲೋಕಾರ್ಪಣೆ ಹಾಗೂ ಮಹಾಮಂಡಳಿಯ 25ನೇ ವರ್ಷದ ಬೆಳ್ಳಿ ಹಬ್ಬ ಆಚರಣೆ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ಆವರಣದಲ್ಲಿ ನಡೆಯಲಿದೆ.
     ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರು ಮತ್ಸ್ಯ ಭವನ  ಉದ್ಘಾಟಿಸುವರು. ಮೀನುಗಾರಿಕೆ ಮತ್ತು ಯುವಜನ ಖಾತೆ  ಸಚಿವ  ಅಭಯಚಂದ್ರ ಜೈನ್ ಅವರು ಬೆಳ್ಳಿ ಹಬ್ಬದ ಆಚರಣೆಗೆ ಚಾಲನೆ ನೀಡುವರು. ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್ ಅವರು ರಾಜ್ಯ ಉತ್ತಮ ಮೀ.ಸ.ಸ. ಪ್ರಶಸ್ತಿ ವಿತರಣೆ ಮಾಡುವರು. ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ಅಧ್ಯಕ್ಷ ಎಸ್. ಮಾದೇಗೌಡ ಅವರು ಅಧ್ಯಕ್ಷತೆ ವಹಿಸುವರು.
     ಲೋಕಸಭಾ ಸದಸ್ಯರಾದ ಪ್ರತಾಪ ಸಿಂಹ, ವಿಧಾನಸಭಾ ಸದಸ್ಯರಾದ ಎಂ.ಕೆ. ಸೋಮಶೇಖರ್, ನವದೆಹಲಿಯ ಡೈರೆಕ್ಟರ್ ಜನರಲ್ ಸೆಕ್ರೆಟರಿ  ಡಾ| ಎಸ್. ಅಯ್ಯಪ್ಪನ್, ಹೈದರಾಬಾದ್ ಎನ್.ಎಫ್.ಡಿ.ಬಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಕುಮಾರ್, ಮೀನುಗಾರಿಕೆ ಇಲಾಖೆ ಜಂಟಿ ಕಾರ್ಯದರ್ಶಿ ಆದಿತ್ಯ ಕುಮಾರ್ ಜೋಷಿ, ಮೀನುಗಾರಿಕೆ ಮತ್ತು ಪಶುಸಂಗೋಪನ ಇಲಾಖೆ ಪ್ರಧಾನ ಕಾರ್ಯದರ್ಶಿ ಚನ್ನಪ್ಪಗೌಡ, ಸಹಕಾರ ಸಂಘಗಳ ನಿಬಂಧಕ ಎಂ.ಕೆ. ಅಯ್ಯಪ್ಪ ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
 ಸರಳ ಸಾಮೂಹಿಕ ವಿವಾಹದ ದಿನಾಂಕ ಬದಲಾವಣೆ
     ಮೈಸೂರು ಜಿಲ್ಲಾಡಳಿತ ವತಿಯಿಂದ ಆಯೋಜಿಸುತ್ತಿರುವ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ “ಶುಭಾರಂಭ” ವನ್ನು ಅನಿವಾರ್ಯ ಕಾರಣಗಳಿಂದ ದಿನಾಂಕ 29/11/2015ರ ಬದಲಿಗೆ ದಿನಾಂಕ 08/11/2015 ರಂದು ಆಯೋಜಿಸಲಾಗುತ್ತದೆ.
      ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಲು ಬಯಸುವವರು ದಿನಾಂಕ 05/10/2015ರೊಳಗೆ ನಿಗಧಿತ ಅರ್ಜಿಯನ್ನು ಆಯಾ ತಾಲ್ಲೂಕಿನ ತಹಶೀಲ್ದಾರ್ ರವರಿಗೆ ಸಲ್ಲಿಸುವುದು. ಉಳಿದವರು ದಿನಾಂಕ 25/10/2015 ರೊಳಗೆ ನಿಗಧಿತ ಅರ್ಜಿಯನ್ನು ಭರ್ತಿಮಾಡಿ ಆಯಾ ತಾಲ್ಲೂಕಿನ ತಹಶೀಲ್ದಾರ್ ರವರಿಗೆ ಸಲ್ಲಿಸುವುದು ಹಾಗೂ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವವರಲ್ಲಿ ವಧು ಅಥವಾ ವರ ಕಡ್ಡಾಯವಾಗಿ ಮೈಸೂರು ಜಿಲ್ಲೆಯವರಾಗಿರಬೇಕಿರುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Monday 21 September 2015

ದಸರಾ ಈ ಬಾರಿ ಸರಳ, ಸಾಂಪ್ರದಾಯಿಕ :ಶ್ರೀನಿವಾಸ್ ಪ್ರಸಾದ್.

ದಸರಾ ಈ ಬಾರಿ ಸರಳ, ಸಾಂಪ್ರದಾಯಿಕ : V. Srinivas Prasad 

ಬೆಂಗಳೂರು, ಸೆಪ್ಟೆಂಬರ್ ೨೨.
ರಾಜ್ಯದಲ್ಲಿ ಮುಂಗಾರು ವಿಫಲವಾಗಿ, ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಹಿಂದೆಂದೂ ಕಾಣದಂತಹ ಭೀಕರ ಬರ ಪರಿಸ್ಥಿತಿ ಆವರಿಸಿರುವ ಹಿನ್ನೆಲೆಯಲ್ಲಿ, ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಅತ್ಯಂತ ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಂದಾಯ ಸಚಿವ ಶ್ರೀ ವಿ. ಶ್ರೀನಿವಾಸ ಪ್ರಸಾದ್ ಅವರು ತಿಳಿಸಿದರು. 
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ದಸರಾ ಮಹೋತ್ಸವಕ್ಕೆ ಅಧಿಕೃತ ಆಮಂತ್ರಣ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಪ್ರಗತಿಪರ ರೈತನಿಂದ ದಸರಾ ಉದ್ಘಾಟನೆ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶರನ್ನವರಾತ್ರಿಯ ಮೊದಲನೆಯ ದಿನದಂದು ಮುಖ್ಯಮಂತ್ರಿಯವರ ಜೊತೆಗೆ ಪ್ರಗತಿಪರ ರೈತರೋರ್ವರನ್ನು ಆಮಂತ್ರಿಸಿ, ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಿಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಅದೇ ದಿನ ಸಂಜೆ, ಮೈಸೂರು ಅರಮನೆಯ ಆವರಣದಲ್ಲಿ ನಡೆಯಲಿರುವ ದಸರಾ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲೂ, ಕಲಾವಿದರಿಗೆ ರೈತರಿಂದ ಸನ್ಮಾನ ಮಾಡಲಾಗುವುದು. ಈ ಬಾರಿಯ ದಸರಾ ಸಂದರ್ಭದಲ್ಲಿ ರಾಜ್ಯದ ಹೊರಗಿನ ಕಲಾವಿದರಿಗೆ ಆಮಂತ್ರಣ ನೀಡುತ್ತಿಲ್ಲ. ಎಲ್ಲಾ ಕಾರ್ಯಕ್ರಮಗಳನ್ನೂ ಸಂಪೂರ್ಣವಾಗಿ ಸ್ಥಳೀಯ ಕಲಾವಿದರೇ ನಡೆಸಿಕೊಡಲಿದ್ದಾರೆ.
ದಸರಾ ಸಂದರ್ಭದಲ್ಲಿ ಈ ಹಿಂದೆ, ಇಡೀ ಮೈಸೂರು ನಗರಕ್ಕೆ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ವಿಜಯ ದಶಮಿಯ ದಿನದಂದು ದಸರಾ ಮೆರವಣಿಗೆ ಸಾಗುವ ರಸ್ತೆಗಳಿಗೆ ಮಾತ್ರ ದೀಪಾಲಂಕಾರ ಮಾಡಲಾಗುವುದು. ರಾಜ್ಯಪಾಲ ಶ್ರೀ ವಜುಭಾಯಿ ರುಢಾಭಾಯಿ ವಾಲಾ ಅವರು ಆ ದಿನ ಪಂಜಿನ ಕವಾಯತು ವೀಕ್ಷಿಸಲಿದ್ದಾರೆ. ಈ ಬಾರಿ ಬಾಣಬಿರುಸುಗಳ ಪ್ರದರ್ಶನ ಇರುವುದಿಲ್ಲ. ಕಳೆದ ಬಾರಿ ದಸರಾ ಮಹೋತ್ಸವಕ್ಕೆ 15 ಕೋಟಿ ರೂ ವೆಚ್ಚ ಮಾಡಲಾಗಿತ್ತು. ಆದರೆ, ಈ ಬಾರಿ ಈ ವೆಚ್ಚವನ್ನು ಕೇವಲ ನಾಲ್ಕು ಕೋಟಿ ರೂ ಗಳಿಗೆ ಮಿತಿಗೊಳಿಸಲಾಗಿದೆ ಎಂದು ಶ್ರೀ ಶ್ರೀನಿವಾಸ ಪ್ರಸಾದ್ ಅವರು ವಿವರಿಸಿದರು.
ಸರ್ಕಾರದ ಈ ಕ್ರಮ ಪ್ರವಾಸೋದ್ಯಮಕ್ಕೆ ಮಾರಕವಾಗುವುದಿಲ್ಲವೇ ? ಎಂಬ ಪತ್ರಕರ್ತರೋರ್ವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಬರದ ಹಿನ್ನೆಲೆಯಲ್ಲಿ ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದಕಾರಣ, ಮಾನವೀಯತೆಯ ದೃಷ್ಠಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದರಲ್ಲಿ ಲಾಭ-ನಷ್ಟಗಳ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಸಹಕಾರ ಮತ್ತು ಸಕ್ಕರೆ ಸಚಿವ ಶ್ರೀ ಹೆಚ್. ಎಸ್. ಮಹದೇವ ಪ್ರಸಾದ್, ಶಾಸಕರಾದ ಶ್ರೀ ತನ್ವೀರ್ ಸೇಠ್, ಶ್ರೀ ಎಂ. ಕೆ. ಸೋಮಶೇಖರ್, ಶ್ರೀ ಕೆ. ವೆಂಕಟೇಶ್, ಶ್ರೀ ಧರ್ಮಸೇನಾ, ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಶ್ರೀಮತಿ ಶಿಖಾ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶ್ರೀ ಬೆಟ್ಟಸೂರ್ಮಠ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು

ಪೋಲಿಸ್ ಸುದ್ದಿ

ಶಿವಳ್ಳಿ ಠಾಣಾ  ಪೊಲೀಸರ ಭರ್ಜರಿ ಕಾರ್ಯಾಚರಣೆ: 9 ವರ್ಷಗಳ ಹಿಂದೆ ಕೊಲೆ  ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ


      ದಿನಾಂಕ:15-10-2006 ಬೆಳಿಗ್ಗೆ ಸುಮಾರು 11-30 ಗಂಟೆಯಲ್ಲಿ ತಮ್ಮ ಜಮೀನಿನ ಹತ್ತಿರ ಆಡುಗಳನ್ನು  ಮೇಯಿಸಲು ಹೋಗಿದ್ದ ರುದ್ರಮ್ಮ ಎಂಬುವಳನ್ನು ಜಮೀನಿನ ಹತ್ತಿರ ಮಾರಣಾಂತಕವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ  ಕೊಲೆ ಮಾಡಿದ್ದು  ಈ ಸಂಬಂಧವಾಗಿ ಶಿವಳ್ಳಿ ಠಾಣಾ ಮೊ.ಸಂ:53/2006 ಕಲಂ: ಕಲಂ 302-201-120( ಬಿ)ರೆ,ವಿ,34  ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು  ಈ ಪ್ರಕರಣದಲ್ಲಿ ತನಿಖೆ ನಡೆಸಿ ಆರೋಪಿ ಚಂದ್ರಮ್ಮ  ಎಂಬುವಳನ್ನು ಪತ್ತೇಮಾಡಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು ಉಳಿದ ಆರೋಪಿ ಮಂಜುನಾಥಸ್ವಾಮಿ @ ಮಂಜುನಾಥ @ ಮಂಜು ಮತ್ತು ದಿನೇಶ್ ಕುಮಾರ್ @ ದಿನೇಶ್ ರವರುಗಳು ತಲೆಮೆರಿಸಿಕೊಂಡು ಪರಾರಿಯಾಗಿದ್ದರಿಂದ ಸದರಿ ಆರೋಪಿಗಳನ್ನು ತಲೆಮರೆಸಿಕೊಂಡಿರುವ ಆರೋಪಿಗಳೆಂದು ಚಂದ್ರಮ್ಮರವರ ಮೇಲೆ ದೋಷಾರೋಪಣ ಪತ್ರವನ್ನು ಸಲ್ಲಿಸಿಕೊಂಡಿದ್ದು ಮಾನ್ಯ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಎಸ್.ಸಿ. ನಂ:61/2008 ರಲ್ಲಿ ವಿಚಾರಣೆಯಲ್ಲಿ ನಡೆಯುತ್ತಿರುತ್ತೆ.

       ಈ ಕೇಸಿನಲ್ಲಿ ಮಂಡ್ಯ ಗ್ರಾಮಾಂತರ ವೃತ್ತ ನಿರೀಕ್ಷಕರವರಾದ ಶ್ರೀ ಲೋಕೇಶ್‍ರವರ ನೇತೃತ್ವದ ತಂಡವು ಆರೋಪಿಗಳ ಪತ್ತೇಬಗ್ಗೆ ಮಾಹಿತಿ ಕಲೆಹಾಕಿ  ದಿನಾಂಕ:20-09-2015 ರಂದು 2ನೇ ಆರೋಪಿ ಮಂಜುನಾಥ @ ಮಂಜು ಎಂಬುವನನ್ನು ಬೆಂಗಳೂರಿನ ಯಶವಂತಪುರ ಯಾರ್ಡ್‍ನಲ್ಲಿ ಹಾಗೂ 3ನೇ ಆರೋಪಿಯನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇಹೌಟ್‍ನಲ್ಲಿ ಪತ್ತೇಮಾಡಿ ವಶಕ್ಕೆ ತೆಗೆದುಕೊಂಡು ಬಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರ್ಪಡಿಸಿರುತ್ತೆ.  ಆರೋಪಿಗಳು ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ.

ಆರೋಪಿಗಳ ವಿವರ

1] ಮಂಜುನಾಥಸ್ವಾಮಿ @ ಮಂಜುನಾಥ @ ಮಂಜು ಬಿನ್ ಲೆಟ್ ಚನ್ನ ಬಸಪ್ಪ 35ವರ್ಷ  ಲಿಂಗಾಯಿತರು  ಲಾರಿ ಮಾಲೀಕರು ಹಾಗೂ ಲಾರಿ ಡ್ರೈವರ್  ವಾಸ ನಂ. 37-1ನೇ ಮೇಯಿನ್ ರೋಡ್  6ನೇ ಕ್ರಾಸ್  ಬೈರವೇಶ್ವರ ನಗರ  ಲಗ್ಗೆರೆ ಬೆಂಗಳೂರು,  ಸ್ವಂತ ಊರು ಬಿ. ಹಟ್ಟಣ ಗ್ರಾಮ ದುದ್ದ ಹೋಬಳಿ ಮಂಡ್ಯ ತಾಲ್ಲೊಕು

2] ದಿನೇಶ್ ಕುಮಾರ್ @ ದಿನೇಶ್  ಬಿನ್  ಪ್ರಕಾಶ್  40ವರ್ಷ  ಚೌದರಿ ಜನಾಂಗ  ಕಾರ್ ಡ್ರೈವರ್  ಕೆಲಸ  ವಾಸ  ದೀಪಾ
  ಕಾಂಪ್ಲೆಕ್ಸ್ ವೈಸ್ ಮೆನ್ ಅಪಾರ್ಟ್ ಮೆಂಟ್  ಕೆ,ಕೆ ಲೇಔಟ್  ಲಿಂಗಮ್ಮನ ವಠಾರ  ಪಾಪರೆಡ್ಡಿಪಾಳ್ಯ ಬೆಂಗಳೂರು ಸ್ವಂತ ಸ್ಥಳ
  ರಾಜಸ್ಥಾನ ರಾಜ್ಯ

ಈ ಪತ್ತೇಕಾರ್ಯದಲ್ಲಿ ಪಾಲ್ಗೊಂಡಿದ್ದ ಮಂಡ್ಯ ಗ್ರಾಮಾಂತರ ವೃತ್ತ ಆರಕ್ಷಕ ವೃತ್ತ ನಿರೀಕ್ಷಕರವರಾದ ಶ್ರೀ ಲೋಕೇಶ್ ಶಿವಳ್ಳಿ ಠಾಣಾ ಪಿಎಸ್‍ಐ ಶ್ರೀ ಶಿವಮಾದಯ್ಯ, ಸಿಬ್ಬಂದಿಯವರಾದ ಶ್ರೀಬಿ.ಚಿಕ್ಕಯ್ಯ, ಶ್ರೀ ಮಹೇಶ್, ಶ್ರೀಅನಿಲ್‍ಕುಮಾರ್, ಶ್ರೀ ಉಮ್ಮರ್ ಶ್ರೀ ಕಾಳಯ್ಯ, ಶ್ರೀ ಪರಶಿವಮೂರ್ತಿ ಮತ್ತು ಚಾಲಕ ಶ್ರೀ ಕುಮಾರ್ ರವರುಗಳನ್ನು ಮಂಡ್ಯ ಜಿಲ್ಲಾ ಮಾನ್ಯ ಎಸ್‍ಪಿ ಭೂಷಣ್ ಜಿ ಬೋರಸೆ  ಶ್ಲಾಘಿಸಿದ್ದಾರೆ.















Tuesday 15 September 2015

 ಉತ್ತರ ಕರ್ನಾಟಕ ಕಳಸಾ ಬಂಡೂರಿ ಯೋಜನೆ, ರೈತರ ಸಾಲ ಮನ್ನಾ, ಗೋವಾ ಸರ್ಕಾರದ ವಿರುದ್ಧ ಸೆ.26ರಂದು ಕರ್ನಾಟಕ ಬಂದ್‍ಗೆ ಆಗ್ರಹಿಸಿ ಕನ್ನಡ ಒಕ್ಕೂಟ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದರು. ವಾಟಾಳ್‍ನಾಗರಾಜು, ಸಾ.ರಾ.ಗೋವಿಂದ್, ಗಿರೀಶ್‍ಗೌಡ, ಪಾರ್ಥಸಾರಥಿ, ಎಚ್.ಡಿ.ಜಯರಾಂ ಇತರರಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಟಾಸ್ಕ್‍ವರ್ಕ್ ದಿನಗೂಲಿ ನೌಕರರು ನಡೆಸುತ್ತಿರುವ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲಾ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಬಿ.ಎಂ. ಅಪ್ಪಾಜಪ್ಪ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಶಿವಲಿಂಗಯ್ಯ, ಗಿರೀಗೌಡ ಇತರರಿದ್ದಾರೆ.

Monday 14 September 2015

ಶಿಕ್ಷಣದಿಂದ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ.

 ಶಿಕ್ಷಣದಿಂದ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಮುಖ್ಯಮಂತ್ರಿ
     ಮೈಸೂರು,ಸೆ.14.-ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಮಾನವಾಗಿ ಸಿಕ್ಕರೆ ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
     ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಜೆ.ಎಸ್.ಎಸ್. ವಿದ್ಯಾಸಂಸ್ಥೆಯ ವಸತಿ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
     ಜ್ಞಾನ ವೃದ್ಧಿಗೆ ಗುಣಮಟ್ಟದ ಶಿಕ್ಷಣ ಪ್ರಮುಖ. ಗುಣಮಟ್ಟದ ಶಿಕ್ಷಣ ಪ್ರತಿಯೊಬ್ಬರೂ ಸಿಗಬೇಕು. ಗುಣಮಟ್ಟದ ಶಿಕ್ಷಣ ಪಡೆಯಬೇಕಾದರೆ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸಾಧ್ಯ. ಆದರಿಂದ ಸರ್ಕಾರವು ಪ್ರಾರ್ಥಮಿಕ ಶಿಕ್ಷಣದಿಂದ ಮಕ್ಕಳಿಗೆ ಹಾಲು, ಮಧ್ಯಾಹ್ನದ ಬಿಸಿ ಊಟ, ಕಬ್ಬಿಣಾಂಶದ ಮಾತ್ರೆ ಹಾಗೂ ಹಲವು ಆರೋಗ್ಯ ವೃದ್ಧ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ನೀಡಿದೆ ಎಂದು ತಿಳಿಸಿದರು.
      ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಪಠ್ಯ ವಿಷಯದ ಜ್ಞಾನದ ಜೊತೆಗೆ ನೈತಿಕ ಜ್ಞಾನದ ಬಗ್ಗೆಯೂ ಅರಿವು ಮೂಡಿಸಬೇಕು. ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಜಾತ್ಯಾತೀತ ಭಾವನೆಯನ್ನು ಬೆಳಿಸಿದರೆ ಮಕ್ಕಳು ಸಮಾಜದ ಆಸ್ತಿಯಾಗಿ ಹೊರಹೊಮ್ಮಲು ಸಾಧ್ಯ. ಪ್ರತಿ ಮಗುವಿಗೂ ಜ್ಞಾನದ ವಿಕಾಸ ಅಗತ್ಯ ಹಾಗೂ ಅವಶ್ಯಕ ಎಂದು ಹೇಳಿದರು.
      ಸುತ್ತೂರು ಶ್ರೀ ಕ್ಷೇತ್ರ ಯಾವ ಧರ್ಮ, ಜಾತಿ ಹಾಗೂ ವರ್ಗಕ್ಕೆ ಸೀಮಿತವಾಗದೆ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಸಂಶೋಧನೆಯ ಶಿಕ್ಷಣಕ್ಕೆ ನೆರವಾಗುತ್ತಿದೆ. ಕೇವಲ ಧಾರ್ಮಿಕ ಕ್ಷೇತ್ರವಾಗಿ ಸೀಮಿತಗೊಳ್ಳದೆ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲೂ ದೇಶವಲ್ಲದೇ ವಿಶ್ವದ ಹಲವೆಡೆ ಉತ್ತಮ ಸೇವೆಯನ್ನು ಸಮಾಜಕ್ಕೆ ಸಲ್ಲಿಸುತ್ತಿದೆ ಎಂದರು.
     ಘನತೆವೆತ್ತ ರಾಜ್ಯಪಾಲರಾದ ವಾಜೂಬಾಯಿ ವಾಲ ಮಾತನಾಡಿ ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯಲು  ಶಿಕ್ಷಣ ಒಳ್ಳೆಯ ಮಾಧ್ಯಮ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಒಳ್ಳೆಯ ವಿದ್ಯೆ ನೀಡುವುದರ ಜೊತೆ ಸಂಸ್ಕಾರವನ್ನು ಕಲಿಸಬೇಕು. ಸತ್ಯ ಹಾಗೂ ಧರ್ಮದ ದಾರಿಯನ್ನು ಆಯ್ಕೆ ಮಾಡುವವರಿಗೆ ಯಾವಾಗಲೂ ಒಳ್ಳೆಯದಾಗುತ್ತದೆ. ಮಕ್ಕಳು ಒಳ್ಳೆಯ ವಿಚಾರದ ಬಗ್ಗೆ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು.
     ಜೆ.ಎಸ್.ಎಸ್ ಮಠದ ಶಿವರಾತ್ರಿ ದೇಶಿಕೇಂದ್ರ ಸಾಮೀಜಿ, ಲೋಕೋಪಯೋಗಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಸಹಕಾರ ಸಚಿವರಾದ ಹೆಚ್.ಎಸ್.ಮಹದೇವಪ್ರಸಾದ್, ವಿಧಾನ ಪರಿಷರ್ ಉಪಸಭಾಪತಿ ಮರಿತಿಬ್ಬೇಗೌಡ, ಚಾಮರಾಜನಗರ ಲೋಕ ಸಭಾ ಸದಸ್ಯರಾದ ಧ್ರುವನಾರಾಯಣ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಏಕ ಮಾಲೀಕತ್ವ ಪಹಣಿಯಾಗಿ ಪರಿವರ್ತಿಸಲು ಪೋಡಿಮುಕ್ತ ಗ್ರಾಮ ಅಭಿಯಾನ
      ಮೈಸೂರು,ಸೆ.14.ರಾಜ್ಯದಲ್ಲಿ ಬಹು ಮಾಲೀಕತ್ವ ಹೊಂದಿರುವ 58 ಲಕ್ಷ ಆರ್.ಟಿ.ಸಿ ಗಳನ್ನು ಪೋಡಿ ಮುಕ್ತಗೊಳಿಸಿ ಏಕ ಮಾಲೀಕತ್ವ ಪಹಣಿಯಾಗಿ ಪರಿವರ್ತಿಸುವುದು ಪೋಡಿಮುಕ್ತ ಗ್ರಾಮ ಅಭಿಯಾನದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ತಿಳಿಸಿದರು.
      ಅವರು ಇಂದು ನಂಜನಗೂಡು ತಾಲ್ಲೂಕಿನ ಹೊಸಕೋಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಡಿಮುಕ್ತ ಗ್ರಾಮ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
      ಪೋಡಿಮುಕ್ತ ಗ್ರಾಮ ಅಭಿಯಾನಕ್ಕಾಗಿ ರಾಜ್ಯದ ನಗರಪ್ರದೇಶವನ್ನು ಹೊರತುಪಡಿಸಿ 171 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 3 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಈ ಕೆಲಸಕ್ಕಾಗಿ ಪ್ರತಿ ತಾಲ್ಲೂಕಿಗೆ ತಲಾ 4 ಮಂದಿ ಭೂಮಾಪಕರ ತಂಡವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
     ರಾಜ್ಯದಲ್ಲಿ 30,662 ಕಂದಾಯ ಗ್ರಾಮಗಳು ಇರುತ್ತವೆ. ಈ ಕಂದಾಯ ಗ್ರಾಮಗಳಲ್ಲಿ ಒಟ್ಟು 2 ಕೋಟಿ 50 ಲಕ್ಷ ಭೂ ಮಾಲೀಕರಿರುತ್ತಾರೆ. 1 ಕೋಟಿ 75 ಲಕ್ಷ ಆರ್.ಟಿ.ಸಿ.ಗಳು ಇರುತ್ತವೆ. ಈ ಪೈಕಿ 58 ಲಕ್ಷ ಬಹುಮಾಲೀಕತ್ವವಿರುವ ಆರ್.ಟಿ.ಸಿ.ಗಳು ಇರುತ್ತವೆ. ಒಂದೊಂದು ಬಹುಮಾಲೀಕತ್ವದ ಆರ್.ಟಿ.ಸಿ.ಯಲ್ಲಿ ಸರಾಸರಿ ಮೂರು ಮಂದಿ ಆರ್.ಟಿ.ಸಿ.ದಾರರು ಇರುತ್ತಾರೆ. ಅಂತಹ ಜಮೀನುಗಳ ಅಳತೆ ಮಾಡಿ ಪ್ರತ್ಯೇಕ ನಕ್ಷೆ ತಯಾರಿಸಿ, ಏಕಮಾಲೀಕತ್ವ ಪಹಣಿ ನೀಡಲಾಗುತ್ತದೆ ಎಂದರು.
     ರೈತರು ಜಮೀನುಗಳ ಪೋಡಿ ಅಳತೆಗೆ ಅರ್ಜಿ ಸಲ್ಲಿಸುವ  ಹಾಗೂ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಅಳತೆ ಮಾಡಬೇಕಾದ ಜಮೀನುಗಳ ದಾಖಲೆಯನ್ನು ತಹಶೀಲ್ದಾರ್ ಕಚೇರಿಯಿಂದಲೇ ಭೂಮಾಪಕರಿಗೆ ಪೂರೈಸಲಾಗುವುದು. ರೈತರಿಗೆ ಉಚಿತವಾಗಿ ನಕ್ಷೆ ಮತ್ತು ಹೊಸ ಪಹಣಿ ವಿತರಿಸಲಾಗುವುದು. ಪೋಡಿ ಅಳತೆಯಿಂದ ಆರ್.ಟಿ.ಸಿ.ದಾರರು ಹೊಂದಿರುವ ಹಕ್ಕು, ಸ್ವಾಧೀನಾನುಭವ ಮತ್ತು ನಕ್ಷೆ  ತಾಳೆ ಮಾಡಿಕೊಳ್ಳುವುದರಿಂದ ಭೂ ವ್ಯಾಜ್ಯಗಳು ಗಣನೀಯವಾಗಿ ಕಡಿಮೆಯಾಗಲಿದೆ. ರೈತರು ವ್ಯಾಜ್ಯಗಳನ್ನು ಹಾಕಿಕೊಂಡು ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಾಡುವುದುನ್ನು ತಪ್ಪಿಸಬಹುದು ಎಂದರು.
     40 ವರ್ಷಗಳ ನಂತರ ರಾಜ್ಯದಲ್ಲಿ ಬೀಕರ ಬರಗಾಲ ಎದುರಾಗಿದ್ದು, 135 ತಾಲ್ಲೂಕುಗಳು ಬರಗಾಲದಿಂದ ತತ್ತರಿಸಿದೆ. ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ನಷ್ಟ ಉಂಟಾಗಿದ್ದು, ಆಗಸ್ಟ್ 24 ರಂದು ಮೂರು ಸಾವಿರ ಕೋಟಿ ರೂ. ನೀಡುವಂತೆ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.
     ಕಬ್ಬಿನ ಬೆಳೆಗೆ ಕೇಂದ್ರ ಸರ್ಕಾರ ಬೆಲೆ ನಿಗಧಿಪಡಿಸುತ್ತದೆ. ಪ್ರತಿ ಟನ್ ಕಬ್ಬಿಗೆ 2300/- ರೂ.  ನಿಗಧಿಪಡಿಸಿದೆ.  ಉತ್ತರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಇಡೀ ದೇಶದಲ್ಲೇ ಸಕ್ಕರೆ ಬೆಲೆ ಕುಸಿದಿದ್ದು, ಪ್ರತಿ ಕೆ.ಜಿ.ಗೆ ರೂ. 22/- ರಿಂದ 23/- ಇದೆ. ಇದರಿಂದ ಸಕ್ಕರೆ ಕಾರ್ಖಾನೆಗಳಿಗೆ ಹಣ ಪಾವತಿಸಲು ಹಿಂಜರಿಯುತ್ತಿದೆ ಎಂದು ತಿಳಿಸಿದರು.
      ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರು ಮಾತನಾಡಿ ಪ್ರತ್ಯೇಕ ನಕ್ಷೆ ಮತ್ತು ಅದಕ್ಕನುಗುಣವಾಗಿ ಏಕ ಮಾಲೀಕತ್ವ ಆರ್.ಟಿ.ಸಿ. ಹೊಂದುವ ಮೂಲಕ ಸಾಲ ಪಡೆಯುವಾಗ, ಹಕ್ಕು ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗುವಾಗ, ಕ್ರಯದ ನೋಂದಣಿ, ವಿಭಾಗ ಪತ್ರದ ಖಾತೆ/ಪೌತಿ ಖಾತೆಯ ಸಮಯದಲ್ಲಿ ವಿಳಂಬಕ್ಕೆ ಆಸ್ಪದವಿಲ್ಲದಂತಾಗುತ್ತದೆ ಎಂದರು.
     ಇಲಾಖೆಯಿಂದ ನೇಮಕ ಮಾಡಿಕೊಂಡಿರುವ 1682 ಭೂಮಾಪಕರಿಗೆ 6 ತಿಂಗಳ ಕಾಲಾವಧಿಯ ತರಬೇತಿ ನೀಡಲಾಗಿದೆ. ಭೂಮಾಪನವನ್ನು ವೈಜ್ಞಾನಿಕವಾಗಿ  ಆಧುನಿಕ ಯಂತ್ರಗಳ ಮೂಲಕ ನಿರ್ವಹಿಸಲಾಗುತ್ತಿದೆ ಎಂದರು.
     ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಮಹದೇವ ಪ್ರಸಾದ್, ಕರ್ನಾಟಕ ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್, ಲೋಕಸಭಾ ಸದಸ್ಯ ಆರ್. ಧ್ರುವನಾರಾಯಣ್, ಕರ್ನಾಟಕ ಮಹಿರ್ಷ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಸಿ.ಬಸವರಾಜು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.  
(ಛಾಯಾಚಿತ್ರ ಲಗತ್ತಿಸಿದೆ).

ಅಂಚೆ ಅದಾಲತ್
      ಮೈಸೂರು,ಸೆ.14.-ಸಮಗ್ರ ಅಂಚೆ ಸೇವೆಗಳ ದೂರು ಮತ್ತು ಕುಂದುಕೊರತೆ ನಿವಾರಿಸಲು ಹಾಗೂ ಆಂಚೆ ಸೇವೆ ಸುಧಾರಣೆಗಾಗಿ ಸಲಹೆಗಳನ್ನು ದಿನಾಂಕ 22.09.2015 ರಂದು ಬೆಳಿಗ್ಗೆ 11 ಗಂಟೆಗೆ ಯಾದವಗಿರಿ ಅಂಚೆ ಕಛೇರಿಯ ಹಿರಿಯ ಅಧೀಕ್ಷಕರ ಕಾರ್ಯಾಲಯದಲ್ಲಿ  “ಡಾಕ್ ಅದಾಲತ್” ಅಯೋಜಿಸಿದೆ. ಗ್ರಾಹಕರು ದೂರು ಮತ್ತು ಕುಂದುಕೊರತೆ ಬಗ್ಗೆ ಲಿಖಿತವಾಗಿ ಪತ್ರವನ್ನು ದಿನಾಂಕ 21.09.2015 ರೊಳಗೆ ಯಾದವಗಿರಿಯಲ್ಲಿರುವ ಮೈಸೂರು ವಿಭಾಗದ ಅಂಚೆ ಸೇವೆಗಳ ಹಿರಿಯ ಅಧೀಕ್ಷಕರ ಕಾರ್ಯಾಲಯಕ್ಕೆ ಸಲ್ಲಿಸುವುದು.
 
     


ಅನುಮೋದಿಸಲ್ಪಟ್ಟಿರುವ ಕೇಂದ್ರದಲ್ಲಿ ಮಾತ್ರ ಆಧಾರ್ ಸೇವೆ ಉಚಿತವಾಗಿ ಪಡೆಯಿರಿ
     ಮೈಸೂರು,ಸೆ.14.ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಯುಐಡಿಎಐ ಪ್ರಾಧಿಕಾರದ ವತಿಯಿಂದ ಮೈಸೂರು ಜಿಲ್ಲೆಯಲ್ಲಿ ಅನುಮೋದಿಸಲ್ಪಟ್ಟಿರುವ ಆಧಾರ್ ನೋಂದಣಿ ಕೇಂದ್ರದಲ್ಲಿ ಮಾತ್ರ ಆಧಾರ್ ಸೇವೆಯನ್ನು ಉಚಿತವಾಗಿ ಪಡೆಯುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದ್ದಾರೆ.
     ಮೈಸೂರು ತಾಲ್ಲೂಕು ಇಲವಾಲ, ಜಯಪುರ, ವರುಣಾ, ನಂಜನಗೂಡು ಕಸಬಾ ನಂಜನಗೂಡು ತಾಲ್ಲೂಕಿನ ಚಿಕ್ಕಯ್ಯಛತ್ರ, ಬಿಳಿಗೆರೆ, ದೊಡ್ಡಕವಲಂದೆ, ಹುಲ್ಲಹಳ್ಳಿ, ಟಿ.ನರಸೀಪುರ ಕಸಬಾ ಟಿ.ನರಸೀಪುರ ತಾಲ್ಲೂಕಿನ ಬನ್ನೂರು, ಸೋಸಲೆ, ತಲಕಾಡು, ಮೂಗೂರು, ಗಾಡವಗೆರೆ, ಹನಗೂಡು, ಹುಣಸೂರು ಕಸಬಾ ಹುಣಸೂರು ತಾಲ್ಲೂಕಿನ ಬಿಳಿಕೆರೆ, ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮ, ಮಿರ್ಲೆ, ಹೊಸಅಗ್ರಹಾರ, ಚುಂಚನಕಟ್ಟೆ, ಹೆಬ್ಬಾಳ್, ಕೆ.ಆರ್.ನಗರ ಕಸಬಾ, ಹೆಚ್.ಡಿ.ಕೋಟೆ ಕಸಬಾ, ಹೆಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ, ಸರಗೂರು, ಕಂಡಲಿಕೆ, ಅಂತರಸಂತೆ, ಪಿರಿಯಾಪಟ್ಟಣ ತಾಲ್ಲೂಕಿನ ಹಾರನಹಳ್ಳಿ, ಬೆಟ್ಟದಪುರ ಹಾಗೂ ರಾವಂದೂರಿನಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರಗಳು ಅನುಮೋದಿಸಲ್ಪಟ್ಟಿರುವ ಕೇಂದ್ರಗಳಾಗಿರುತ್ತವೆ.
     ಮೈಸೂರಿನ ಸಿದ್ದಾರ್ಥನಗರ ಹಾಗೂ ಗೋಕುಲಂನಲ್ಲಿರುವ ಮೈಸೂರು ಒನ್ ಕೇಂದ್ರ, ಆದಿಚುಂಚನಗಿರಿ ರಸ್ತೆಯಲ್ಲಿರುವ ಬಿ.ಸಿ.ಎಂ ಬಾಲಕರ ವಿದ್ಯಾರ್ಥಿನಿಲಯ, ಮೈಸೂರು ತಾಲ್ಲೂಕಿನ ಸಿಂದುವಳ್ಳಿ ಗ್ರಾಮ ಪಂಚಾಯಿತಿ ಹಾಗೂ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ನೋಂದಣಿ ಕಾರ್ಯ ನಡೆಯುತ್ತದೆ.
    ಮೈಸೂರಿನ ಎಫ್‍ಟಿಎಸ್ ಸರ್ಕಲ್, ಮೇಟಿಗಳ್ಳಿಯಲ್ಲಿರುವ ಕಾರ್ಪೋರೇಷನ್ ಕಟ್ಟಡ, ಕೆ.ಆರ್.ಮೊಹಲ್ಲಾದ ಸುಣ್ಣದಕೇರಿ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಕಟ್ಟಡ, ಹುಣಸೂರು ತಾಲ್ಲೂಕಿನ ಹಳೇ ಬಸ್‍ಸ್ಯಾಂಡ್ ಹತ್ತಿರವಿರುವ ಜೆ.ಪಿ. ಟ್ರಸ್ಟ್ ಕಟ್ಟಡ, ಕೆ.ಆರ್.ನಗರದ ಮಿರ್ಲೆ ಪಂಚಾಯಿತಿ ಆಫೀಸ್ ಹತ್ತಿರ ಕಾರ್ಯನಿರ್ವಹಿಸುತ್ತಿರುವ  ಶ್ರೀ ಎನ್ರೋಲ್ಮೆಂಟ್ ಎಜೆನ್ಸಿ ಅನುಮೋದಿಸಲ್ಪಟ್ಟ ಕೇಂದ್ರಗಳಾಗಿರುತ್ತವೆ.
    ಸಾರ್ವಜನಿಕರು ಈ ಕೇಂದ್ರಗಳಲ್ಲಿ ಮಾತ್ರ ಆಧಾರ್ ಸೇವೆ ಉಚಿತವಾಗಿ ಪಡೆಯುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಸರಾ ಫಲಪುಷ್ಪ ಪ್ರದರ್ಶನ ಅರ್ಜಿ ಆಹ್ವಾನ
    ಮೈಸೂರು,ಸೆ.14.ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ವತಿಯಿಂದ 2015-16ನೇ ಸಾಲಿನಲ್ಲಿ ದಸರಾ ಫಲಪುಷ್ಪ ಪ್ರದರ್ಶನ ಏರ್ಪಡಿಸಿರುವ ಹಿನ್ನೆಯಲೆಯಲ್ಲಿ ಖಾಸಗಿ ಮನೆಗಳು, ಕೈಗಾರಿಕಾ ಸಂಸ್ಥೆ, ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ಸಂಘ ಸಂಸ್ಥೆಗಳು ತಪ್ಪು ಉದ್ಯಾನವನಗಳು ಮತ್ತು ತೋಟಗಳನ್ನು ಫಲಪುಷ್ಪ ಪ್ರದರ್ಶನದ ತೀರ್ಪುಗಾರರು ಬಂದು ವೀಕ್ಷಿಸಿ ತೀರ್ಪು ನೀಡಲು ಆಸಕ್ತ ಸಂಘಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.
     ಆಸಕ್ತರು ಜಿಲ್ಲಾ ತೋಟಗಾರಿಕಾ ಸಂಘ, ಕರ್ಜನ್ ಪಾರ್ಕ್, ಮೈಸೂರು ಇಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 3 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2428703ನ್ನು ಸಂಪರ್ಕಿಸುವುದು.

Friday 11 September 2015


     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿರುವ ಎಂ.ಎಸ್. ಸತ್ಯು ಸಿನಿಮಾವಲೋಕನ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 12 ರಂದು ಸಂಜೆ 5 ಗಂಟೆಗೆ ಕಲಾಮಂದಿರದಲ್ಲಿ ಜಿ.ಎಸ್. ಭಾಸ್ಕರ್ ಮತ್ತು ವಿ.ಎನ್. ಲಕ್ಷ್ಮಿನಾರಾಯಣ್ ಅವರು ಎಂ.ಎಸ್.ಸತ್ಯು ಜೊತೆಗೆ ಸಂವಾದ  ನಡೆಸಲಿದ್ದಾರೆ.
     ಈ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸುವಂತೆ ಕೋರಿದೆ.
ಮಾಧ್ಯಮ ಆಹ್ವಾನ-2
     ಮುಖ್ಯಮಂತ್ರಿಗಳು ಸುತ್ತೂರಿನಲ್ಲಿರುವ ಜೆ.ಎಸ್.ಎಸ್. ವಸತಿ ಪ್ರೌಢಶಾಲೆ ಸುವರ್ಣಮಹೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 14  ರಂದು ಭಾಗವಹಿಸಲಿದ್ದಾರೆ. ಮಾಧ್ಯಮ ಪ್ರತಿನಿಧಿಗಳನ್ನು ಕರೆದುಕೊಂಡು ಹೋಗಲು ವಾಹನದ ವ್ಯವಸ್ಥೆ ಮಾಡಲಾಗಿದ್ದು, ವಾಹನವು ಅಂದು ಬೆಳಿಗ್ಗೆ 9-30 ಗಂಟೆಗೆ ವಾರ್ತಾಭವನದಿಂದ ಹೊರಡಲಿದೆ. ಬೆಳಿಗ್ಗೆ 9 ಗಂಟೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ.
     ಮಾಧ್ಯಮ ಪ್ರತಿನಿಧಿಗಳು ಸಕಾಲಕ್ಕೆ ಆಗಮಿಸುವಂತೆ ಕೋರಿದೆ.

ಪ್ರವಾಸ ಕಾರ್ಯಕ್ರಮ
     ಮೈಸೂರು,ಸೆ.11.ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 14 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಅವರು ಅಂದು ಬೆಳಿಗ್ಗೆ 10-50ಕ್ಕೆ ಸುತ್ತೂರಿನ ಜೆ.ಎಸ್.ಎಸ್. ಸ್ಕೂಲ್ ಕ್ಯಾಂಪಸ್‍ನ ಹತ್ತಿರವಿರುವ ಹೆಲಿಪ್ಯಾಡ್‍ಗೆ ಹೆಲಿಕ್ಯಾಪ್ಟರ್ ಮೂಲಕ  ಆಗಮಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಜೆ.ಎಸ್.ಎಸ್. ಮಹಾವಿದ್ಯಾಪೀಠದ ವತಿಯಿಂದ ಸುತ್ತೂರಿನಲ್ಲಿ ಆಯೋಜಿಸಿರುವ ಜೆ.ಎಸ್.ಎಸ್. ವಸತಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮಧ್ಯಾಹ್ನ 12-30 ಗಂಟೆಗೆ  ಸುತ್ತೂರಿನಿಂದ  ಹೆಲಿಕ್ಯಾಪ್ಟರ್ ಮೂಲಕ ಮೂಲಕ ಬೆಂಗಳೂರಿಗೆ ತೆರೆಳಲಿದ್ದಾರೆ.
ನೈರ್ಮಲ್ಯ ವಾಹಿನಿಯ ಪ್ರವಾಸ ಕಾರ್ಯಕ್ರಮ
   ಮೈಸೂರು,ಸೆ.11.(
ಮೈಸೂರು ಜಿಲ್ಲಾ ಪಂಚಾಯಿತಿಯ ನಿರ್ಮಲ ಭಾರತ್ ಅಭಿಯಾನದ ಮಾಹಿತಿ ಶಿಕ್ಷಣ ಮತ್ತು ಸಂವಹನ(ಐಇಸಿ) ಕಾರ್ಯಕ್ರಮದ ನೈರ್ಮಲ್ಯ ವಾಹಿನಿ ಸಂಚಾರಿ ವಾಹನವು 2015ರ ಸೆಪ್ಟೆಂಬರ್  ಮಾಹೆಯಲ್ಲಿ ಮೈಸೂರು, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು ಹಾಗೂ ತಿ.ನರಸೀಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಸ್ವಚ್ಛತೆ, ನೈರ್ಮಲ್ಯ ಮತ್ತು ಆರೋಗ್ಯ ಕಾಪಾಡುವ ಬಗ್ಗೆ ಗ್ರಾಮೀಣ ಜನರಲ್ಲಿ ಸಮೂಹ ಮಾಧ್ಯಮಗಳ ಮೂಲಕ ಅರಿವು ಮೂಡಿಸಲಿದೆ.
ಮೈಸೂರು ತಾಲ್ಲೂಕಿನಲ್ಲಿ ಸೆಪ್ಟೆಂಬರ್ 25 ರಂದು ಆನಂದೂರು, ಸೆಪ್ಟೆಂಬರ್ 26 ರಂದು  ನಾಗನಹಳ್ಳಿ,  ಸೆಪ್ಟೆಂಬರ್ 28 ರಂದು ಡಿ.ಎಂ.ಜಿ. ಹಳ್ಳಿ, ನಂಜನಗೂಡು ತಾಲ್ಲೂಕಿನಲ್ಲಿ ಸೆಪ್ಟೆಂಬರ್ 14 ರಂದು  ನವಿಲೂರು, ಸೆಪ್ಟೆಂಬರ್ 19 ರಂದು  ಹೆಡಿಯಾಲ, ಸೆಪ್ಟೆಂಬರ್ 23 ರಂದು ಕಾರ್ಯ, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 15 ರಂದು  ಹಂಡಿತವಳ್ಳಿ, ಹುಣಸೂರು ತಾಲ್ಲೂಕಿನಲ್ಲಿ ಸೆಪ್ಟೆಂಬರ್ 18 ರಂದು  ದೊಡ್ಡಹೆಜ್ಜೂರು, ಸೆಪ್ಟೆಂಬರ್ 22 ರಂದು ಹರವೆ, ಸೆಪ್ಟೆಂಬರ್ 29 ರಂದು ಹಳೇಬೀಡು, ತಿ.ನರಸೀಪುರ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 21 ರಂದು ಸೋಮನಾಥಪುರ ಹಾಗೂ ಕೆ.ಆರ್.ನಗರ ತಾಲ್ಲೂಕಿನಲ್ಲಿ ಸೆಪ್ಟೆಂಬರ್ 30 ರಂದು ಕೆಗ್ಗರೆ ಗ್ರಾಮದಲ್ಲಿ ವಾಹನ ಸಂಚರಿಸಲಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.

ಸೆ. 17 ರಂದು ಶ್ರೀ ಗಣೇಶ ಪ್ರಯುಕ್ತ ಕುರಿಮಂಡಿ ಕಸಾಯಿಖಾನೆ ಬಂದ್
     ಮೈಸೂರು,ಸೆ.11.ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಕುರಿ, ಮೇಕೆ ಕಸಾಯಿಖಾನೆ ಮತ್ತು ಇತರೆ ಎಲ್ಲ ಮಾಂಸದ ಅಂಗಡಿಗಳನ್ನು ಶ್ರೀ ಗಣೇಶ ಚತುರ್ಥಿ ಪ್ರಯುಕ್ತ 2015 ರ ಸೆಪ್ಟೆಂಬರ್ 17 ರಂದು ಮುಚ್ಚಲಾಗುವುದು. ಮೈಸೂರು ನಗರದಲ್ಲಿ ಸದರಿ ದಿನದಂದು ಮಾಂಸದ ವ್ಯಾಪಾರವನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ ಹಾಗೂ ಎಲ್ಲ ಮಾರುಕಟ್ಟೆ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಸೆ. 12, 13 ರಂದು ಎಂ.ಎಸ್. ಸತ್ಯು ಸಿನಿಮಾವಲೋಕನ
     ಮೈಸೂರು,ಸೆ.11.ಕನ್ನಡಕ್ಕೆ ಹಲವು ವಿಭಿನ್ನ ಚಿತ್ರಗಳನ್ನು ನೀಡಿದ ಬಹುಭಾಷಾ ಚಿತ್ರ ನಿರ್ದೇಶಕ ಹಾಗೂ ರಂಗಕರ್ಮಿ ಎಂ.ಎಸ್. ಸತ್ಯು ಅವರ ಸಮಗ್ರ ಚಿತ್ರಕೃತಿಗಳ ವೀಕ್ಷಣೆ ಹಾಗೂ ಸಂವಾದ ಕಾರ್ಯಕ್ರಮವನ್ನು ಒಳಗೊಂಡ ಎಂ.ಎಸ್. ಸತ್ಯು ಸಿನಿಮಾವಲೋಕನ ಕಾರ್ಯಕ್ರಮವನ್ನು ಇದೇ ಸೆಪ್ಟೆಂಬರ್ 12 ಹಾಗೂ 13 ಶನಿವಾರ ಮತ್ತು ಭಾನುವಾರದಂದು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೈಸೂರು, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಮೈಸೂರು ಫಿಲ್ಮ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಲಾಗುವ ಸಿನಿಮಾ ಸಮಯ ಕಾರ್ಯಕ್ರಮದ ಅಂಗವಾಗಿ ಸಿನಿಮಾವಲೋಕನ ಕಾರ್ಯಕ್ರಮ ಏರ್ಪಡಿಸಲಾಗುತ್ತಿದ್ದು, ಎರಡು ದಿನಗಳ ಕಾಲ ಎಂ.ಎಸ್. ಸತ್ಯು ಅವರು ಉಪಸ್ಥಿತರಿದ್ದು ಚಿತ್ರವೀಕ್ಷಣೆಯ ನಂತರ ಪ್ರೇಕ್ಷಕರ ಜತೆ ಸಂವಾದದಲ್ಲಿ ಪಾಲ್ಗೊಳ್ಳುವರು.
    ಶನಿವಾರ ಸಂಜೆ 5 ಗಂಟೆಗೆ ಎಂ.ಎಸ್.ಸತ್ಯು ಅವರ ಜತೆ ಖ್ಯಾತ ಚಲನಚಿತ್ರ ಛಾಯಾಗ್ರಾಹಕ ಜಿ.ಎಸ್. ಭಾಸ್ಕರ್ ಹಾಗೂ ಚಲನಚಿತ್ರ ವಿಮರ್ಶಕ ವಿ.ಎನ್.ಲಕ್ಷ್ಮಿನಾರಾಯಣ್ ಅವರು ಸಂವಾದ ನಡೆಸುವರು. ರಂಗಾಯಣ ನಿರ್ದೇಶಕ ಹೆಚ್. ಜನಾರ್ಧನ್ (ಜನ್ನಿ) ಅವರು ಸಂವಾದಕ್ಕೆ ಚಾಲನೆ ನೀಡುವರು. ಈ ಸಂವಾದದಲ್ಲಿ ಎಂ.ಎಸ್. ಸತ್ಯು ಅವರು ಚಲನಚಿತ್ರ ರಂಗದ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
    ಎಂ.ಎಸ್.ಸತ್ಯು ಅವರ ನಿರ್ದೇಶನದ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಹಾಗೂ ಚಲನಚಿತ್ರಗಳ ಪ್ರದರ್ಶನವನ್ನು ಎರಡೂ ದಿನಗಳ ಕಾಲ ಆಯೋಜಿಸಲಾಗುತ್ತಿದ್ದು, ಶನಿವಾರ ಬೆಳಿಗ್ಗೆ 10-30 ರಿಂದಲೇ ಚಿತ್ರಗಳ ಪ್ರದರ್ಶನ ಆರಂಭವಾಗಲಿದೆ.
    ಮೈಸೂರಿನ ಖ್ಯಾತ ಛಾಯಾಗ್ರಾಹಕ ಟಿ.ಎಸ್.ಸತ್ಯನ್ ಅವರನ್ನು ಕುರಿತು ಸಾಕ್ಷ್ಯಚಿತ್ರ ಪ್ರದರ್ಶನದ ಜತೆ ಶನಿವಾರ ಬೆಳಿಗ್ಗೆ 10-30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ನಂತರ ಬೆಳಿಗ್ಗೆ 11 ಗಂಟೆಗೆ ಕನ್ನಡ ಚಲನಚಿತ್ರ ಕನ್ನೇಶ್ವರ ರಾಮ, ಮಧ್ಯಾಹ್ನ 2-30ಕ್ಕೆ ಗುಬ್ಬಿವೀರಣ್ಣ ಅವರನ್ನು ಕುರಿತ ಸಾಕ್ಷ್ಯಚಿತ್ರ ನಾಟಕರತ್ನ, ಮಧ್ಯಾಹ್ನ 3 ಗಂಟೆಗೆ ಕನ್ನಡ ಚಲನಚಿತ್ರ ಇಜ್ಜೋಡು, ಸಂಜೆ 6 ಗಂಟೆಗೆ ಕನ್ನಡ ಚಲನಚಿತ್ರ ಚಿತೆÉಗೂ ಚಿಂತೆ ಪ್ರದರ್ಶಿಸಲಾಗುವುದು.
   ಭಾನುವಾರ ಬೆಳಿಗ್ಗೆ 10-30ಕ್ಕೆ ಕಿರುಚಿತ್ರ ರೈಟ್ ಟು ಲಿವ್, ಬೆಳಿಗ್ಗೆ 11 ಗಂಟೆಗೆ ಕನ್ನಡ ಚಲನಚಿತ್ರ ಗಳಿಗೆ ಮಧ್ಯಾಹ್ನ 2-30ಕ್ಕೆ ಸಾಕ್ಷ್ಯಚಿತ್ರ ಮಾಸ್ತಿ, ಮಧ್ಯಾಹ್ನ 3 ಗಂಟೆಗೆ ಕನ್ನಡ ಚಲನಚಿತ್ರ ಬರ, ಪ್ರದರ್ಶನ ಇರುತ್ತದೆ.
    ಭಾನುವಾರ ಸಂಜೆ 5 ಗಂಟೆಗೆ ಸಾಹಿತಿ ಡಾ. ಕಾಳೇಗೌಡ ನಾಗವಾರ, ಚಿತ್ರನಟ, ರಂಗಕರ್ಮಿ ಮಂಡ್ಯ ರಮೇಶ್ ಸಮಾರೋಪ ನುಡಿಗಳನ್ನಾಡುವರು. ನಂತರ ಸಂಜೆ 6 ಗಂಟೆಗೆ ಗರಂ ಹವಾ ಹಿಂದಿ ಚಲನಚಿತ್ರ ಪ್ರದರ್ಶನ ಇರುತ್ತದೆ.
    ಮೈಸೂರು ಶ್ರೀನಿವಾಸ್ ಸತ್ಯು ಅವರು ಮೂಲತ: ಮೈಸೂರಿನವರೇ ಆಗಿದ್ದು ರಾಷ್ಟ್ರಮಟ್ಟದಲ್ಲಿ ಚಲನಚಿತ್ರ ನಿರ್ದೇಶನ, ನಾಟಕ ನಿರ್ದೇಶನ ಹಾಗೂ ಕಲಾ ನಿರ್ದೇಶನದಲ್ಲಿ ಹೆಸರು ಮಾಡಿದವರು. ಗರಂ ಹವಾ ಹಿಂದಿ ಚಲನಚಿತ್ರ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ. ಸತ್ಯು ಅವರಿಗೆ ಪದ್ಮಶ್ರೀ ಪ್ರಶಸ್ತಿಯು ಸೇರಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
    ಎಲ್ಲ ಚಿತ್ರಗಳಿಗೆ ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಲಾಗಿದೆ.
ಅಣಬೆ ಬೇಸಾಯ ತರಬೇತಿ
ಮೈಸೂರು,ಸೆ.11.ಮೈಸೂರಿನ ಕುಕ್ಕರಹಳ್ಳಿ ತೋಟಗಾರಿಕೆ ಕ್ಷೇತ್ರದ ಅಣಬೆ ಪ್ರಯೋಗಶಾಲೆಯಲ್ಲಿ ಸೆಪ್ಟೆಂಬರ್ 23 ರಂದು ಅಣಬೆ ಉತ್ಪಾದನೆ ಮತ್ತು ಸಂಸ್ಕರಣೆ ಬಗ್ಗೆ ಕೃಷಿಕರು , ಗೃಹಣಿಯರು, ನಿರುದ್ಯೋಗಿ ಪದವೀಧರರು ಹಾಗೂ ಉದ್ಯಮಿಗಳಿಗೆ ಒಂದು ದಿನದ ಪ್ರಾಯೋಗಿಕ ತರಬೇತಿ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಹಿರಿಯ ಸಹಾಯಕ  ತೋಟಗಾರಿಕೆ ನಿರ್ದೇಶಕರ ಕಚೇರಿ, ರಾಜ್ಯವಲಯ,  ಕರ್ಜನ್ ಪಾರ್ಕ್, ಮೈಸೂರು ಇಲ್ಲಿ ರೂ 50/- ಪಾವತಿಸಿ ಹೆಸರು ನೊಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9740596111 ನ್ನು ಸಂಪರ್ಕಿಸುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಂ.ಫಿಲ್ ಮತ್ತು ಪಿಹೆಚ್.ಡಿ ಪ್ರಬಂಧ ಮುದ್ರಿಸಲು ಧನಸಹಾಯ
      ಮೈಸೂರು,ಸೆ.11.ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಅನುಸೂಚಿತ ಜಾತಿ ಮತ್ತು ಪಂಗಡಗಳ ಸಂಶೋಧನಾ ವಿದ್ಯಾರ್ಥಿಗಳು 2014-15ನೇ ಸಾಲಿನಲ್ಲಿ ಕನ್ನಡದಲ್ಲಿ ಮಂಡಿಸಿದ ಎಂ.ಫಿಲ್ ಮತ್ತು ಪಿಹೆಚ್.ಡಿ ಪ್ರಬಂಧ ಮುದ್ರಿಸಲು ಧನಸಹಾಯ ನೀಡಲಿದೆ.
     ದಿನಾಂಕ 01.04.2015 ರಿಂದ 31.02.2015ರ ಒಳಗೆ ಯಾವುದೇ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯಗಳಲ್ಲಿ ಕನ್ನಡದಲ್ಲಿ ಎಂ.ಫಿಲ್ ಮತ್ತು ಪಿಹೆಚ್.ಡಿಗೆ ಮಂಡಿಸಿ ಪದವಿ ಪಡೆದ ಪ್ರೌಢ ಪ್ರಬಂಧಗಳಾಗಿರಬೇಕು.
     ಅರ್ಜಿ ನಮೂನೆ ಹಾಗೂ ನಿಯಮಾವಳಿ ವೆಬ್‍ಸೈಟ್ ತಿತಿತಿ.ಞಚಿಟಿಟಿಚಿಜಚಿsiಡಿi.ಛಿo.iಟಿ  ನಲ್ಲಿ ಅಥವಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಪಡೆದು  ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ  ದಾಖಲೆಗಳನ್ನು  ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇಲ್ಲಿಗೆ ಸೆಪ್ಟೆಂಬರ್ 25 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22111206 ಹಾಗೂ ಮೊಬೈಲ್ ಸಂಖ್ಯೆ 9449842132 ನ್ನು ಸಂಪರ್ಕಿಸಬಹುದು.
ಮ್ಯಾನೇಜರ್ ಸೆಕ್ಯುರಿಟಿ  ಹಾಗೂ ಮ್ಯಾನೇಜರ್ ರಾಜಭಾಷಾ ಹುದ್ದೆಗೆ ಅರ್ಜಿ ಆಹ್ವಾನ
    ಮೈಸೂರು,ಸೆ.11.ವಿಜಯ ಬ್ಯಾಂಕ್‍ನಲ್ಲಿ ಮ್ಯಾನೇಜರ್ ಸೆಕ್ಯುರಿಟಿ -24 ಹುದ್ದೆಗಳು ಹಾಗೂ ಮ್ಯಾನೇಜರ್ ರಾಜಭಾಷಾ -16 ಹುದ್ದೆಗಳನ್ನು ನೇಮಾಕಾತಿ ಮಾಡಿಕೊಳ್ಳಲಾಗುವುದು.
     ಮ್ಯಾನೇಜರ್ ಸೆಕ್ಯುರಿಟಿ  ಹುದ್ದೆಗೆ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ವಯೋಮಿತಿ 01/08/2015 ಕ್ಕೆ 20-45 ವರ್ಷದೊಳಗಿರಬೇಕು.  ಕನಿಷ್ಠ ಐದು ವರ್ಷ ಕಮೀಷಂಡ್ ರ್ಯಾಂಕ್‍ನಲ್ಲಿ ಸೇನೆ/ನೌಕದಳ/ವಾಯುದಳ ಸೇವೆಯಲ್ಲಿ ಅಥವಾ ಪೋಲೀಸ್ ಇಲಾಖೆಯಲ್ಲಿ ಂಅP/ಆಥಿSP ಸೇವೆಯಲ್ಲಿ ಅಥವಾ ಪ್ಯಾರ ಮಿಲಿಟರಿಯಲ್ಲಿ ಸೇವೆ ಸಲ್ಲಿಸರಬೇಕು.
    ಮ್ಯಾನೇಜರ್ ರಾಜಭಾಷಾ ಹುದ್ದೆಗೆ ಸ್ನಾತಕೋತ್ತರ ಪದವಿಯೊಂದಿಗೆ (ಹಿಂದಿ ಭಾಷೆಯಲ್ಲಿ) ಪದವಿ ಮಟ್ಟದಲ್ಲಿ ಆಂಗ್ಲ ಭಾಷೆಯನ್ನು ಐಚ್ಛಿಕ ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು ಅಥವಾ ಸ್ನಾತಕೋತ್ತರ ಪದವಿಯೊಂದಿಗೆ (ಸಂಸ್ಕøತ ಭಾಷೆಯಲ್ಲಿ) ಪದವಿ ಮಟ್ಟದಲ್ಲಿ ಆಂಗ್ಲ ಭಾಷೆ ಮತ್ತು ಹಿಂದಿ ಎರಡು ವಿಷಯಗಳನ್ನು ಅಧ್ಯಯನ ಮಾಡಿರಬೇಕು. ವಯೋಮಿತಿ 01/08/2015 ಕ್ಕೆ 20-35 ವರ್ಷದೊಳಗಿರಬೇಕು. ರಾಷ್ಟ್ರಿಕೃತ ಬ್ಯಾಂಕುಗಳಲ್ಲಿ/ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ/ಕೇಂದ್ರ ಸರ್ಕಾರದ/ರಾಜ್ಯ ಸರ್ಕಾರದ ಸೇವೆಯಲ್ಲಿ ಎರಡು ವರ್ಷಗಳ ಭಾಷಾನುಷ್ಠಾನದಲ್ಲಿ ಅನುಭವವಿರಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 19 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ವಿಳಾಸ: ತಿತಿತಿ.viರಿಚಿಥಿಚಿbಚಿಟಿಞ.ಛಿom  ರಲ್ಲಿ  ಪಡೆಯಬಹುದು.
ಬ್ಲಾಕ್ ಮಟ್ಟದ ಪ್ರತಿಭಾ ಕಾರಂಜಿ
     ಮೈಸೂರು,ಸೆ.11. ಮೈಸೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಮೈಸೂರು ದಕ್ಷಿಣ ವಲಯದ ಬ್ಲಾಕ್ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ  ಸೆಪ್ಟೆಂಬರ್ 15 ರಂದು ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಪ್ರತಿಭಾ ಕಾರಂಜಿ ನಡೆಯಲಿದೆ.
     ಕ್ಲಾಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿಗಳು ಸೆಪ್ಟೆಂಬರ್ 15 ರಂದು ಬೆಳಿಗ್ಗೆ 9 ಗಂಟೆಯೊಳಗೆ ಹಾಜರಾಗಿ ಹೆಸರು ನೋಂದಾಯಿಸಿಕೊಂಡು ಸ್ಫರ್ಧೆಗಳಲ್ಲಿ ಭಾಗವಹಿಸುವುದು.
ವಾರ್ಡನ್  ಹುದ್ದೆ: ಸೆಪ್ಟೆಂಬರ್ 13 ರಂದು ಲಿಖಿತ ಪರೀಕ್ಷೆ
    ಮೈಸೂರು,ಸೆ.11. ಕರ್ನಾಟಕ ಕಾರಾಗೃಹ ಇಲಾಖೆಯ ವಾರ್ಡ್‍ರ್ ಹುದ್ದೆಗೆ ಲಿಖಿತ ಪರೀಕ್ಷೆ ಸೆಪ್ಟೆಂಬರ್ 13 ರಂದು ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಬೆಂಗಳೂರು, ಬೆಳಗಾವಿ, ಮೈಸೂರು, ಕಲಬರುಗಿ, ಬಳ್ಳಾರಿ, ವಿಜಯಪುರ ಹಾಗೂ ಮಂಗಳೂರಿನಲ್ಲಿ ನಡೆಯಲಿದೆ.
    ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಲು ಹಾಜರಿ ಪತ್ರವನ್ನು ತಿತಿತಿ.ಞಚಿಡಿಟಿಚಿಣಚಿಞಚಿಠಿಡಿisoಟಿs.iಟಿ  ವೆಬ್‍ಸೈಟ್ ಮೂಲಕ ಪಡೆದು, ಪರೀಕ್ಷೆ ಪ್ರಾರಂಭವಾಗುವ 30 ನಿಮಿಷಗಳ ಮುಂಚಿತವಾಗಿ ಕರೆಪತ್ರ, ಆನ್‍ಲೈನ್ ಅರ್ಜಿಯ ಹಾರ್ಡ್‍ಕಾಪಿ ಹಾಗೂ ಹಣ ಪಾವತಿಸಿದ ಬಗ್ಗೆ ಬ್ಯಾಂಕ್ ಚಲನ್‍ನೊಂದಿಗೆ  ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ್ಲ
     ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 080-22261131ನ್ನು ಸಂಪರ್ಕಿಸುವುದು.                  
ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸಿ : ಸಿ. ಶಿಖಾ
 
   ಮೈಸೂರು,ಸೆ.11.ಬ್ಯಾಂಕ್‍ಗಳು ಸಾಮಾಜಿಕವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮನವಿ ಮಾಡಿದರು.
      ಅವರು ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಜವಾಬ್ದಾರಿ ಕುರಿತಂತೆ ವಿವಿಧ ಬ್ಯಾಂಕ್‍ಗಳ ಜೊತೆಗೆ ಸಭೆ ನಡೆಸಿ ಮಾತನಾಡಿದರು. ಸಭೆಯಲ್ಲಿ ಮುಖ್ಯವಾಗಿ ಸಂಸದ ಆದರ್ಶ ಗ್ರಾಮ ಯೋಜನೆಗೆ ಆಯ್ಕೆಯಾಗಿರುವ ಹುಣಸೂರು ತಾಲ್ಲೂಕಿನ ಕರಿಮುದ್ದನಹಳ್ಳಿ ಹಾಗೂ ಹೆಚ್.ಡಿ.ಕೋಟೆ ತಾಲ್ಲೂಕಿನ
ಬಿ. ಮಟಕೆರೆ ಗ್ರಾಮಗಳ ಅಭಿವೃದ್ಧಿ ಕುರಿತಂತೆ ಚರ್ಚೆಸಲಾಯಿತು.
    ಸರ್ಕಾರಿ ಯೋಜನೆಗಳು ಹೆಚ್ಚು ಉಪಯುಕ್ತವಾಗುವ ಹಾಗೂ ಫಲಪ್ರದವಾಗುವ ರೀತಿಯಲ್ಲಿ ಬ್ಯಾಂಕ್‍ಗಳು ಸಹಕಾರ ನೀಡಬೇಕು. ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವುದರಿಂದ ಸಾರ್ವಜನಿಕರು ಹಾಗೂ ಬ್ಯಾಂಕಿನ ನಡುವೆ ಉತ್ತಮ ಬಾಂದವ್ಯ ಬೆಳೆಯಲಿದೆ ಎಂದರು.
     ಸಭೆಯಲ್ಲಿ ಭಾಗವಹಿಸಿದ 20 ವಿವಿಧ ದೊಡ್ಡ ಹಾಗೂ ಸಣ್ಣ ಬ್ಯಾಂಕ್‍ಗಳ ಮುಖ್ಯಸ್ಥರು, ಸಂಸದ ಆದರ್ಶ ಗ್ರಾಮಗಳ ಶಾಲೆಗಳಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಗ್ರಂಥಾಲಯ ಹಾಗೂ ಕಂಪ್ಯೂಟರ್ ಒದಗಿಸಲು ಒಪ್ಪಿಗೆ ನೀಡಿದರು.
     ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನವರು ಕರಿಮುದ್ದನಹಳ್ಳಿ ಹಾಗೂ ಬಿ. ಮಟಕೆರೆ ಗ್ರಾಮಗಳಿಗೆ  ಮೂಲಭೂತ ಸೌಕರ್ಯಗಳನ್ನು ಒದಗಿಸಲು ತಲಾ 50 ಲಕ್ಷದಂತೆ 1 ಕೋಟಿ ರೂ. ನೀಡಲು ಒಪ್ಪಿಗೆ ನೀಡಿದರು. ಸ್ಟೇಟ್ ಬ್ಯಾಂಕ್ ಇಂಡಿಯದವರು ಬಿ. ಮಟಕೆರೆ ಶಾಲೆಗಳಿಗೆ ಶೌಚಾಲಯ ಕಲ್ಪಿಸಲು ರೂ. 9.75 ಲಕ್ಷ ನೀಡಲು ಒಪ್ಪಿಗೆ ನೀಡಿದರು.
      ಇಂಡಿಯನ್ ಓವರ್‍ಸಿಸ್ ಬ್ಯಾಂಕ್, ವಿಜಯಬ್ಯಾಂಕ್ ಹಾಗೂ ಕಾವೇರಿ ಗ್ರಾಮೀಣ ಬ್ಯಾಂಕ್‍ಗಳು ಜಂಟಿಯಾಗಿ  20 ಲಕ್ಷ ರೂ.ವೆಚ್ಚದಲ್ಲಿ ಕರಿಮುದ್ದನಹಳ್ಳಿ ಶಾಲೆಗಳಿಗೆ ಶೌಚಾಲಯ ನಿರ್ಮಿಸಲು ಒಪ್ಪಿಗೆ ನೀಡಿತು.
     20 ಲಕ್ಷ ರೂ. ವೆಚ್ಚದಲ್ಲಿ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುವ ಅಂಗನವಾಡಿಗಳಲ್ಲಿ ಶೌಚಾಲಯ ಸೌಲಭ್ಯ,  ಕಾಂಪೌಂಡ್ ನಿರ್ಮಾಣ, ಗೋಡೆ ಚಿತ್ರಗಳು, ಆಟದ ಸಾಮಾನು, ಹಾಗೂ ಬೋಧನಾ ಸಾಮಾಗ್ರಿಗಳನ್ನು ಒದಗಿಸುವ ಮೂಲಕ ಮಕ್ಕಳ ಸ್ನೇಹಿ ವಾತಾವರಣ ರೂಪಿಸಲು ಕಾರ್ಪೋರೇಷನ್ ಬ್ಯಾಂಕ್‍ನವರು ಒಪ್ಪಿಗೆ ಸೂಚಿಸಿತು.
       2 ಆದರ್ಶ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಉಪ ಕೇಂದ್ರಗಳ ನಿರ್ಮಾಣಕ್ಕೆ ರೂ. 8.50 ಲಕ್ಷ ನೀಡಲು   ಹೆಚ್‍ಡಿಎಫ್‍ಸಿ ಬ್ಯಾಂಕ್, ರೂ. 4 ಲಕ್ಷ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸಿಂಡಿಕೇಟ್ ಬ್ಯಾಂಕ್ ಹಾಗೂ ರೂ. 10 ಲಕ್ಷ ವೆಚ್ಚದಲ್ಲಿ ಗ್ರಂಥಾಲಯಕ್ಕೆ ಪುಸ್ತಕಗಳು ಹಾಗೂ ಕಂಪ್ಯೂಟರ್ ಒದಗಿಸಲು ಐ.ಡಿ.ಬಿ.ಐ ಬ್ಯಾಂಕ್ ಸಮ್ಮತಿಸಿತು.
       ಜಿಲ್ಲಾಧಿಕಾರಿ ಸಿ. ಶಿಖಾ ಅವರು ಮಾತನಾಡಿ ಮೈಸೂರಿನ ಭಾರತೀಯ ಕೈಗಾರಿಕಾ ಒಕ್ಕೂಟ ಚಾಮುಂಡಿಬೆಟ್ಟದಲ್ಲಿ ಈಗಾಗಲೇ 70 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಸೌಲಭ್ಯ ಕೇಂದ್ರ ನಿರ್ಮಿಸುತ್ತಿದೆ. ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲೂ 60 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಸೌಲಭ್ಯ ಕೇಂದ್ರ ನಿರ್ಮಿಸಲಿದ್ದಾರೆ. ಮೈಸೂರಿನ ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಮುತ್ತು ಕುಮಾರ್ ಅವರು ಮುಂದಿನ ದಿನಗಳಲ್ಲಿ ಇದೇ ರೀತಿ ಮೈಸೂರಿನ ಎಲ್ಲ ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಸೌಲಭ್ಯ ಕೇಂದ್ರ ನಿರ್ಮಿಸಿಕೊಡಲು ಒಪ್ಪಿದ್ದಾರೆ ಎಂದು ತಿಳಿಸಿದರು.  
     ಸಂಸ್ಥೆಗಳು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲು ಕೈಗಾರಿಕೆಗಳು ಹಾಗೂ ಬ್ಯಾಂಕರ್‍ಗಳೊಂದಿಗೆ ಜಿಲ್ಲಾಡಳಿತವು ಸಭೆ ನಡೆಸಿದ್ದು, ಕೈಗಾರಿಕೆಗಳು ಹಾಗೂ ಬ್ಯಾಂಕ್‍ಗಳು ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಸೌಲಭ್ಯಗಳನ್ನು ನೀಡಲು ಮುಂದೆ ಬಂದಿದ್ದು,  ವಿವಿಧ ಕೈಗಾರಿಕೆ ಹಾಗೂ ಬ್ಯಾಂಕ್‍ಗಳು ಸಾರ್ವಜನಿಕರ ಕೆಲಸಕ್ಕಾಗಿ 4.80 ಕೋಟಿ ರೂ. ನೀಡಲು ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
   ಸಭೆಯಲ್ಲಿ ವಿವಿಧ ಬ್ಯಾಂಕ್‍ಗಳ ಮುಖ್ಯಸ್ಥರು ಭಾಗವಹಿಸಿದ್ದರು.
                                                       

ಸರ್ಕಾರಿ ವೈದ್ಯರ ಔಷಧ ಸಲಹ ಚೀಟಿ ಪರಿಶೀಲಿಸಲು ಸೂಚನೆ
ಮೈಸೂರು, ಸೆಪ್ಟೆಂಬರ್ 11. ಸರ್ಕಾರಿ ವೈದ್ಯರು ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಲಭ್ಯವಿರುವ ಔಷಧಿಗಳನ್ನು ನೀಡದೆ ಸಮೀಪವಿರುವ ಖಾಸಗಿ ಔಷಧಿ ಅಂಗಡಿಗಳಲ್ಲಿ ಖರೀದಿಸಲು ಔಷಧü ಸಲಹ ಚೀಟಿ ಕೊಡುವ ದೂರುಗಳು ಕೇಳಿಬಂದಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ನಡೆಸಬೇಕೆಂದು  ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ.ಬಿ.ಪುಷ್ಪ ಅಮರನಾಥ್ ಸೂಚಿಸಿದರು.
  ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿ.ಪಂ. ಕೆ.ಡಿ.ಪಿ ಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯವಿದ್ದರೂ ಕೆಲವು ಸರ್ಕಾರಿ ವೈದ್ಯರು ಖಾಸಗಿ ಔಷಧ ಅಂಗಡಿಗಳಲ್ಲಿ ಔಷಧಿ ಖರೀದಿಸಲು ಸಲಹ ಚೀಟಿ ಕೊಡುವ ಬಗ್ಗೆ ಅನೇಕ ದೂರುಗಳು ಕೇಳಿ ಬಂದಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಔಷಧಿಗಳನ್ನು ಖಾಸಗಿ ಔಷಧü ಅಂಗಡಿಗಳಲ್ಲಿ ಖರೀದಿಸಲು ವೈದ್ಯರು ಸಲಹ ಚೀಟಿ ನೀಡುವುದು ಅರ್ಥಕರ. ಆದರೆ ದುಡ್ಡಿನ ಆಸೆಗೆ ಕೆಲವು ವೈದ್ಯರು ಖಾಸಗಿ ಔಷಧ ಅಂಗಡಿಗಳಲ್ಲಿ ಔಷಧಿ ಖರೀದಿಸಲು ರೋಗಿಗಳಿಗೆ ಸೂಚಿಸುತ್ತಿದ್ದಾರೆ. ಮಾನವಿಯತೆ ಮರೆತ ಈ ವೈದ್ಯರ ವಿರುದ್ಧ ಸಂಬಂಧಪಟ್ಟ ಇಲಾಖೆ ಕಠಿಣ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
  ಕಳೆದ ವರ್ಷದ ಮೈಸೂರು ಜಿಲ್ಲೆಯ ಪದವಿ ಪೂರ್ವ ಪರೀಕ್ಷಾ ಪಲಿತಾಂಶ ಉತ್ತಮವಾಗಿರಲಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಗಳಿಸಿರುವ ಮೈಸೂರು ಜಿಲ್ಲೆ, ಪದವಿ ಪೂರ್ವ ಪರೀಕ್ಷಾ ಪಲಿತಾಂಶÀದಲ್ಲಿ ಹಿಂದೆ ಉಳಿದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾಲೇಜು ಪ್ರಾಂಶುಪಾಲರ ಸಭೆಯನ್ನು ಶೀಘ್ರ ಕರೆದು ವಿದ್ಯಾರ್ಥಿಗಳಿಗೆ ಗುಣಮಟ್ಟದ  ತರಬೇತಿಯನ್ನು ನೀಡುವ ಕುರಿತು ಯೋಜನೆಯನ್ನು ತುರ್ತಾಗಿ ರೂಪಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಹೇಳಿದರು.
  ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ ಒದುತ್ತಿರುವ ಬಹುತೇಖ ವಿದ್ಯಾರ್ಥಿಗಳು ಗ್ರಾಮಾಂತರ ಪ್ರದೇಶದವರು. 500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಐತಿಹಾಸಿಕ ಹಿನ್ನಲೆ ಇರುವ ಮಹಾರಾಜ ಕಾಲೇಜಿನಲ್ಲಿ ಕೇವಲ 4 ಶೌಚಾಲಯಗಳಿರುವು ವಿಷಾಧನಿಯ. ಬಹಳಷ್ಟು ಖಾಸಗಿ ಕಾರ್ಖಾನೆಗಳು ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ಲಾಭಗಳಿಸುತ್ತಿದ್ದು, ಮೂಲಸೌಲಭ್ಯಕೆಂದೇ  ಮೀಸಲಿರುವ ಸಿಎಸ್‍ಆರ್ ಅನುದಾನವನ್ನು ಬಳಸಿಕೊಂಡು ಕಾಲೇಜಿನಲ್ಲಿ ಶೀಘ್ರ ಶೌಚಾಲಯವನ್ನು ನಿರ್ಮಾಣ ಮಾಡುವ ಜೊತೆಯಲ್ಲಿ ಮೂಲಭೂತ ಸೌಕರ್ಯವನ್ನು ಉತ್ತಮಗೊಳಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಅಧ್ಯಕ್ಷರು ತಿಳಿಸಿದರು.
     ಸರ್ಕಾರ ಇ ಆಡಳಿತಕ್ಕೆ ಒತ್ತು ನೀಡುತ್ತಿದ್ದು, ಸರ್ಕಾರಿ ಕಚೇರಿಯನ್ನು ಪೇಪರ್ ಮುಕ್ತವÀನ್ನಾಗಿ ಮಾಡಲು ಮುಂದಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಿರಿಗೂ ಕಂಪ್ಯೂಟರ್ ಶಿಕ್ಷಣದ ಜ್ಞಾನ ಅಗತ್ಯ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಬಹಳಷ್ಟು ಕೆಲಸಗಳು ಕಂಪ್ಯೂಟರ್ ಬಳಕೆಯಿಂದ ನಡೆಯುತ್ತಿವೆÉ. ಅಂತರ್ಜಾಲದ ಸಂಪರ್ಕ ಅಗತ್ಯವಾಗಿದ್ದು, ಬಿಎಸ್‍ಎನ್‍ಎಲ್ ಕಡೆಯಿಂದ ಬ್ರಾಡ್ಬ್ಯಾಂಡ್ ವ್ಯವಸ್ಥೆ ಬೇಕಾಗಿದೆ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಸಲುವಾಗಿ ಸರ್ಕಾರದಿಂದ ಶಾಲೆಗಳಿಗೆ ಕಂಪ್ಯೂಟರ್‍ಗಳನ್ನು ಸರಬರಾಜು ಮಾಡಲಾಗಿದೆ. ಕಂಪ್ಯೂಡರ್ ಜ್ಞಾನ ವಿದ್ಯಾರ್ಥಿಗಳಿಗೆ ಅವಶ್ಯವಾಗಿದ್ದು, ಕಲಿಕೆಗೆ ತೊಂದರೆಯಾಗದಂತೆ ಬ್ರಾಡ್ಬ್ಯಾಂಡ್ ವ್ಯವಸ್ಥೆಯನ್ನು ಬಿಎಸ್‍ಎನ್‍ಎಲ್ ಕಲ್ಪಿಸಬೇಕು ಎಂದು ಹೇಳಿದರು.
  ರೈ ಸಂಪರ್ಕ ಕೇಂದ್ರಗಳಲ್ಲಿ ನಡೆಯುವ ಕೃಷಿ ಅದಾಲತ್‍ಗಳು ಹೋಬಳಿ ಮಟ್ಟದಲ್ಲೂ ನಡೆಯಬೇಕು. ರೈತರಿಗೆ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು. ರೈತರನ್ನು ಉತ್ತೇಜಿಸಲು ಕೃಷಿಕರ ಗುಂಪುಗಳನ್ನು ಪ್ರತಿ ಗ್ರಾಮಗಳಲ್ಲಿ ಕಟ್ಟವ ಕುರಿತು ಗಂಭೀರ ಚಿಂತನೆ ನಡೆಯಬೇಕು. ರೈತ ಹಿತವನ್ನು ಕಾಪಾಡಲು ಸರ್ಕಾರ ಸಧಾ ಸಿದ್ಧವಿದೆ ಎಂಬುವ ಬಗ್ಗೆ ಜಾಗೃತಿ ಮೂಡಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಬೆಂಬಲಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಹಾಂಪ್‍ಕಾಮ್ಸ್ ಮಳಿಗೆಗಳನ್ನು ತೆರೆಯಲು ತೋಟಗಾರಿ ಇಲಾಖೆ ಮುಂದಾಗಬೇಕು ಎಂದು ಪುಷ್ಪ ಅಮರನಾಥ್ ತಿಳಿಸಿದರು.
  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಉಪಾಧ್ಯಕ್ಷರಾದ ಎಲ್.ಮಾದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರಾಜಣ್ಣ, ಜವರೇಗೌಡ, ರಾಜಯ್ಯ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.    


 
                    

Wednesday 2 September 2015

ಇಂದು ಬೆಳಿಗ್ಗೆ ಡಿ.ದೇವರಾಜ ಅರಸು ರಸ್ತೆಗೆ ಭೇಟಿ ನೀಡಿದ್ದ ಮೈಸೂರು ಮಹಾ ನಗರಪಾಲಿಕೆಯ ಆಯುಕ್ತ ಸಿ.ಜಿ.ಬೆಟ್ ಸೂರು ಮಠ್ ಪರಿಶೀಲನೆ ನಡೆಸಿದರು ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಅರಸುರವರ ಶತಮಾನೋತ್ಸವದ ಅಂಗವಾಗಿ ಅರಸು ರಸ್ತಯನ್ನ ಅಭಿವೃದ್ಧಿಗೆ ಕೈಗೆತ್ತಿಕೊಳ್ಳಲು ಅಂದಾಜು ಪಟ್ಟಿಯನ್ನು ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸಂದರ್ಭದಲ್ಲಿ ಅಧೀಕ್ಷಕ ಅಭಿಯಂತರ ಶ್ರೀ ನಿವಾಸ್, ಕಾರ್ಯಪಾಲಕ ಅಭಿಯಂತರ ನಾಗರಾಜು, ಅಭಿವೃದ್ಧಿ ಅಧಿಕಾರಿ ನಾಗರಾಜು, ಸಹಾಯಕ ಆಯುಕ್ತ ಸತ್ಯಮೂರ್ತಿ ಉಪಸ್ಥಿತರಿದ್ದರು.

Tuesday 1 September 2015

ಅತಿಯಾದ ಆಹಾರ ಸೇವನೆಯಿಂದ ಅಪೌಷ್ಠಿಕತೆ: ಕೆ.ಎಸ್.ಮುದಗಲ್
     ಮೈಸೂರು,ಸೆ.1ಅತಿಯಾದ ಆಹಾರ ಸೇವನೆಯಿಂದ ಅಪೌಷ್ಠಿಕತೆ ಉಂಟಾಗುತ್ತಿದ್ದು, ಸೇವಿಸುವ ಆಹಾರ ಉತ್ತಮ ಹಾಗೂ ಆರೋಗ್ಯವಂತವಾಗಿರಬೇಕು. ಉತ್ತಮ ಆಹಾರ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್.ಮುದಗಲ್ ಹೇಳಿದರು.
     ಇಂದು ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘಗಳ ಸಹಯೋಗದೊಂದಿಗೆ ಜಿ.ಪಂ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಸೃಷ್ಠಿ ಮನುಷ್ಯನಿಗೆ ಬೇಕಾದ ಎಲ್ಲವನ್ನು ನೀಡಿದ್ದರೂ, ನಾವು ಅದನ್ನು ಸೇವಿಸದೆ ಜಾಹೀರಾತಿಗೆ ಮರುಳಾಗಿ ತಂಪು ಪಾನೀಯ, ಜಂಕ್‍ಫುಡ್ ಆಹಾರಗಳನ್ನು ಸೇವನೆ ಮಾಡುತ್ತಿದ್ದೇವೆ. ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರ ಸೇವನೆಯ ಜತೆಗೆ ಕೆಟ್ಟ ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
    ಅಪೌಷ್ಠಿಕತೆ ದೇಶವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಪ್ರಪಂಚದ ಮೂರು ಮಕ್ಕಳಲ್ಲಿ ಭಾರತದ ಒಂದು ಮಗು ಅಪೌಷ್ಠಿಕತೆಯಿಂದ ಬಳಲುತ್ತಿದೆ. ಪೌಷ್ಠಿಕತೆ ಮತ್ತು ದೇಶದ ಅಭಿವೃದ್ಧಿ ಒಂದೇ ನಾಣ್ಯದ ಎರಡು ಮುಖಗಳಾಗಿದೆ. ಭವಿಷ್ಯದಲ್ಲಿ ಇವೆರಡನ್ನು ಒಟ್ಟಿಗೆ ಕೊಂಡೊಯ್ಯಬೇಕಾಗಿದೆ. ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮನುಷ್ಯರು ಪೌಷ್ಠಿಕ ಆಹಾರ ಸೇವಿಸುತ್ತಿಲ್ಲ.  ದೇಹದ ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಮತ್ತು ವಿಹಾರ ಕ್ರಮಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
     ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ  ಡಾ. ಬಿ. ಪುಷ್ಪಾ ಅಮರನಾಥ್ ಮಾತನಾಡಿ  ದೇಶದಲ್ಲಿ ಶೇ. 42.5ರಷ್ಟು, ರಾಜ್ಯದಲ್ಲಿ ಶೇ. 32ರಷ್ಟು, ಜಿಲ್ಲೆಯಲ್ಲಿ 449 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಒತ್ತಡ ಬದುಕಿನ ನಡುವೆಯೂ ಆಹಾರ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. 21ನೇ ಶತಮಾನಕ್ಕೆ ಕಾಲಿಡುವ ಜೊತೆಗೆ, ಆಹಾರ  ಭಧ್ರತಾ ಕಾಯಿದೆ ಜಾರಿಗೆ ತಂದರೂ ಅಪೌಷ್ಠಿಕತೆಯಿಂದ ಬಳಲುವ ವiಕ್ಕಳನ್ನು ಕಾಣುತ್ತಿದ್ದೇವೆ ಎಂದು ಆತಂಕ ವ್ಯಕ್ತ ಪಡಿಸಿದರು.
     ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಲು ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ, ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ಸದೃಢ ದೇಶ ಕಟ್ಟಬೇಕಾದರೆ ಆರೋಗ್ಯವಂತ ಜೀವನವನ್ನು ಬೆಳಸಿಕೊಳ್ಳಬೇಕು. ಉತ್ತಮ ಆರೋಗ್ಯವೇ ಎಲ್ಲಾ ರೀತಿಯ ಒತ್ತಡಗಳಿಗೆ ಉತ್ತರ. ದೇಶವನ್ನು ಅಪೌಷ್ಠಿಕತೆಯಿಂದ ಮುಕ್ತಗೊಳಿಸಲು ಎಲ್ಲರು ಒಗ್ಗೂಡಿ ಶ್ರಮಿಸಬೇಕು ಎಂದು ತಿಳಿಸಿದರು.
    ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದÀ ಎಲ್.ಮಾದಪ್ಪ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜವರೇಗೌಡ, ಜಿಲ್ಲಾ ಕಾನೂನು ಸೇವರಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಚಂದ್ರಮೌಳಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಕೆ.ರಾಧಾ, ಡಾ.ಜಿ.ಸರಸ್ವತಿ, ಡಾ.ಉಮಾ ಕೆ.ಕುಮಾರ್ ಮತ್ತು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



ಸೆಷ್ಟೆಂಬರ್ ಮಾಹೆ ಪಡಿತರ ಬಿಡುಗಡೆ    
     ಮೈಸೂರು,ಸೆ.1. ಮೈಸೂರು ಜಿಲ್ಲೆಯ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ  ಸೆಪ್ಟೆಂಬರ್ 2015ರ ಮಾಹೆಗೆ ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ 35 ಕೆ.ಜಿ. ಅಕ್ಕಿ, ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಪ್ರತಿ ಸದಸ್ಯರಿಗೆ ಉಚಿತವಾಗಿ 5 ಕೆ.ಜಿ. ಅಕ್ಕಿ,  ನೀಡಲಾಗುವುದು. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ 1 ಲೀಟರ್ ತಾಳೆ ಎಣ್ಣೆ  ರೂ. 25/-,  1 ಕೆ.ಜಿ. ಅಯೋಡೈಸ್ಡ್ ಉಪ್ಪು  ರೂ. 2 /-, ಹಾಗೂ 1 ಕೆ.ಜಿ. ಸಕ್ಕರೆ ರೂ. 13-50/- ದರದಲ್ಲಿ ಬಿಡುಗಡೆ ಮಾಡಲಾಗುವುದು.
     ಎಪಿಎಲ್ ಪಡಿತರ ಕಾರ್ಡು ಏಕಸದಸ್ಯರಿಗೆ 3 ಕೆ.ಜಿ. ಅಕ್ಕಿ ,(ರೂ. 15=00 ಪ್ರತಿ ಕೆ.ಜಿ.ಗೆ) 2 ಕೆ.ಜಿ. ಗೋಧಿ (ರೂ. 10=00 ಪ್ರತಿ ಕೆ.ಜಿ.ಗೆ) ಎರಡು ಅಥವಾ ಹೆಚ್ಚಿನ ಕುಟುಂಬ ಸದಸ್ಯರಿಗೆ 5 ಕೆ.ಜಿ. ಅಕ್ಕಿ,(ರೂ. 15=00 ಪ್ರತಿ ಕೆ.ಜಿ.ಗೆ) ಹಾಗೂ 5 ಕೆ.ಜಿ. ಗೋಧಿ (ರೂ. 10=00 ಪ್ರತಿ ಕೆ.ಜಿ.ಗೆ) ನೀಡಲಾಗುವುದು.
      ಜಿಲ್ಲೆಯಲ್ಲಿ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಕಾರ್ಡುದಾರರು ಸಂಬಂಧಿಸಿದ ಗ್ರಾಮ ಪಂಚಾಯಿತಿ/ತಾಲ್ಲೂಕು ಮಟ್ಟದ ಅಧಿಕಾರಿಗಳು ಅಥವಾ ತಹಶೀಲ್ದಾರ್ ಅವರನ್ನು ಸಂಪರ್ಕಿಸಬಹುದು ಅಥವಾ ಡಾ.ಕೆ. ರಾಮೇಶ್ವರಪ್ಪ, ಹಿರಿಯ ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮೈಸೂರು ದೂರವಾಣಿ ಸಂಖ್ಯೆ 0821-2422107 ಅಥವಾ ಬೆಂಗಳೂರಿನ ಶುಲ್ಕ ರಹಿತ ಸಹಾಯವಾಣಿ 1800-425-9339ಗೆ ದೂರು ಸಲ್ಲಿಸಬಹುದೆಂದು ತಿಳಿಸಿದ್ದಾರೆ.
ಸೆ. 5 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕುರಿಮಂಡಿ ಕಸಾಯಿಖಾನೆ ಬಂದ್
     ಮೈಸೂರು,ಸೆ.1.ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಕುರಿ, ಮೇಕೆ ಕಸಾಯಿಖಾನೆ ಮತ್ತು ಇತರೆ ಎಲ್ಲ ಮಾಂಸದ ಅಂಗಡಿಗಳನ್ನು ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ 2015 ರ ಸೆಪ್ಟೆಂಬರ್ 5 ರಂದು ಮುಚ್ಚಲಾಗುವುದು. ಮೈಸೂರು ನಗರದಲ್ಲಿ ಸದರಿ ದಿನದಂದು ಮಾಂಸದ ವ್ಯಾಪಾರವನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ ಹಾಗೂ ಎಲ್ಲ ಮಾರುಕಟ್ಟೆ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಸೆ. 5 ರೊಳಗಾಗಿ ಪಡಿತರ ಚೀಟಿ ನವೀಕರಿಸಿಕೊಳ್ಳಿ
 ಮೈಸೂರು,ಸೆ.1.(ಕ.ವಾ.)-ಮೈಸೂರು ಜಿಲ್ಲೆಯಲ್ಲಿ 2010 ಕ್ಕಿಂತಲೂ ಹಿಂದಿನ ಖಾಯಂ ಪಡಿತರ ಚೀಟಿಗಳನ್ನು ಹೊಂದಿರುವ ಕಾರ್ಡುದಾರರು ತಮ್ಮ ಪೋಟೋ ಮತ್ತು ಬಯೋಮೆಟ್ರಿಕ್ ಸಲ್ಲಿಸಲು ಸೆಪ್ಟೆಂಬರ್ 5 ಕೊನೆಯ ದಿನಾಂಕವಾಗಿರುತ್ತದೆ.
 2010ಕ್ಕಿಂತಲೂ ಹಿಂದಿನ ಖಾಯಂ ಪಡಿತರ ಚೀಟಿಗಳನ್ನು ನವೀಕರಿಸಲು ಹಾಗೂ ಚಾಲ್ತಿಯಲ್ಲಿರುವ ಎಲ್ಲಾ ಪಡಿತರ ಚೀಟಿಗಳನ್ನು ಹೊಂದಿರುವವರು ಪಡಿತರ ಚೀಟಿಗಳಲ್ಲಿರುವ ಕುಟುಂಬದ ಎಲ್ಲಾ ಸದಸ್ಯರ ಚುನಾವಣಾ ಗುರುತಿನ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಹೊಸದಾಗಿ ಫೋಟೋ ಮತ್ತು ಬಯೋಮೆಟ್ರಿಕ್ ಮಾಹಿತಿಗಳನ್ನು ನೀಡುವ ಅವಶ್ಯಕತೆ ಇರುತ್ತದೆ. 2010 ಕ್ಕಿಂತಲೂ ಹಿಂದೆ ಪಡಿತರ ಚೀಟಿ ಪಡೆದ 3,48,390 ಫಲಾನುಭವಿಗಳು ಸರ್ಕಾರ ಕೋರಿಕೆಯಂತೆ ಆನ್‍ಲೈನ್ ನಲ್ಲಿ ಹೊಸದಾಗಿ ಫೋಟೋ ಮತ್ತು ಬಯೋಮೆಟ್ರಿಕ್ ಮಾಹಿತಿ ನೀಡಿರುತ್ತಾರೆ ಇನ್ನು ಬಾಕಿ ಉಳಿದೆ 1,28,251  ಪಡಿತರ ಚೀಟಿದಾರರು ಮಾಹಿತಿಯನ್ನು ಒದಗಿಸಿರುವುದಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿರುವ ಕಾರ್ಡುದಾರರು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಹೋಗಿ ಅವರ ಪಡಿತರ ಚೀಟಿಗಳನ್ನು ನವೀಕರಿಸಲು ನಗರ ಪ್ರದೇಶದಲ್ಲಿ ಖಾಸಗಿ ಫೋಟೋ ಬಯೋ ಸೆಂಟರ್, ಜನಸ್ನೇಹಿ ಕೇಂದ್ರಗಳು, ಮೈಸೂರು ಒನ್ ಕೇಂದ್ರಗಳಲ್ಲಿ ಫೋಟೋ ಮತ್ತು ಬಯೋಮೆಟ್ರಿಕ್ ಮಾಹಿತಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಮೈಸೂರು-ಆಗಸ್ಟ್.,31ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಅನುಸರಿಸುತ್ತಿರುವ ಬ್ಯಾಕ್‍ಲಾಕ್ ನೀತಿಯನ್ನು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವರ್ಗದ ಅಭ್ಯರ್ಥಿಗಳಿಗೂ ಅನುಸರಿಸಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ.
ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ನೇತೃತ್ವದಲ್ಲಿ ಸಿದ್ಧಪಡಿಸಿ ಐದು ಶಿಫಾರಸ್ಸುಗಳೊಂದಿಗೆ ಸಲ್ಲಿಸಿದ್ದ ವರದಿಯನ್ನು ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಮೂಲಕ ಮೀಸಲಾತಿ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಕರ್ನಾಟಕ ರಾಜ್ಯ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಸಮಿತಿಯ ಐದು ಶಿಫಾರಸ್ಸುಗಳನ್ನು ಯಾವುದೇ ಬದಲಾವಣೆ ಇಲ್ಲದೆ ಒಪ್ಪಿದ ರಾಜ್ಯ ಸರಕಾರಕ್ಕೆ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿ ಕೃತಜ್ಞನೆ ಸಲ್ಲಿಸುತ್ತಿದೆ ಎಂದು ಸಮಿತಿ ಅಧ್ಯಕ್ಷ ಹಾಗೂ ಶಾಸಕ ತನ್ವೀರ್ ಸೇಠರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೇಮಕಾತಿ ಸಂದರ್ಭದಲ್ಲಿ ಪ.ಜಾತಿ, ಪ.ಪಂಗಡ ಅಭ್ಯರ್ಥಿಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಾಗ ಆ ಹುದ್ದೆಗಳನ್ನು ಬ್ಯಾಕ್‍ಲಾಗ್ ಹುದ್ದೆಗಳೆಂದು ಕಾಯ್ದಿರಿಸಲಾಗುತ್ತಿದೆ. ಆದರೆ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಅಲಭ್ಯರಿದ್ದಾಗ ಆ ಹುದ್ದೆಗಳನ್ನು ಸಾಮಾನ್ಯ ಅಭ್ಯರ್ಥಿಗಳಿಗೆ ಪರಿವರ್ತಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಈ ಆದೇಶವನ್ನು ಮಾರ್ಪಡಿಸಿ, ಪ.ಜಾತಿ ಮತ್ತು ಪ.ಪಂಗಡಗಳ ಬ್ಯಾಕ್‍ಲಾಗ್ ಹುದ್ದೆಗಳ ನೇಮಕಾತಿಯಲ್ಲಿ ಅನುಸರಿಸುವ ಮಾದರಿಯಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೂ ಹುದ್ದೆ ಮೀಸಲಿಡಬೇಕು ಎಂದು ಶಿಫಾರಸ್ಸಿನಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವರ್ಗದ ಅಭ್ಯರ್ಥಿಗಳು ಲಭ್ಯರಿಲ್ಲದ ಸಂದರ್ಭದಲ್ಲಿ ಕನಿಷ್ಟ ಪಕ್ಷ 6 ತಿಂಗಳಿಗೊಮ್ಮೆಯಾದರೂ ನೇಮಕಾತಿ ಪ್ರಕ್ರಿಯೆನಡೆಸಬೇಕು, ಎಲ್ಲಾ ಇಲಾಖೆಗಳಲ್ಲೂ ರೋಸ್ಟರ್ ರಿಜಿಸ್ಟರ್‍ನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿ ಪಾಲನೆಯನ್ನು ತಪಾಸಣೆ ಮಾಡಲು ಇಲಾಖೆಯಲ್ಲಿ ಹಾಲಿ ಇರುವ ಮಾರ್ಗದರ್ಶನ ಶಾಖೆಯನ್ನು ಮೀಸಲಾತಿ ತನಿಖಾ ಘಟಕ ಎಂದು ಮಾರ್ಪಡಿಸಬೇಕು, ವಿಶ್ವ ವಿದ್ಯಾನಿಲಯಗಳಲ್ಲಿ ನೇರ ನೇಮಕಾತಿ ಮಾಡಿಕೊಳ್ಳುವ ಬದಲಿಗೆ ಸರಕಾರದ ವತಿಯಿಂದಲೇ ಕೇಂದ್ರೀಕೃತ ನೇಮಕಾತಿ ಘಟಕ ಸ್ಥಾಪಿಸಿ ಈ ಮೂಲಕ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ವಿವಿಗಳಿಗೆ ಸಿಬ್ಬಂದಿಗಳನ್ನು ನಿಯೋಜಿಸುವ ಪದ್ಧತಿಯನ್ನು ಜಾರಿಗೆ ತರಬೇಕೆಂಬ ಶಿಫಾರಸ್ಸುಗಳನ್ನು ಮಾಡಿ ಸರಕಾರಕ್ಕೆ ಸಲ್ಲಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಈ ಶಿಫಾರಸ್ಸುಗಳನ್ನು ಮುಖ್ಯಮಂತ್ರಿ ನೇತೃತ್ವದ ರಾಜ್ಯ ಸರಕಾರ ಒಪ್ಪಿಗೆ ನೀಡಿ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಈ ಮೀಸಲಾತಿ ಅನ್ವಯಿಸಲಿದೆ. ಸಧ್ಯ ಜಾರಿಯಲ್ಲಿರುವ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಸಮಿತಿ ಸದಸ್ಯ ಅನ್ವರ್ ಪಾಷ, ಬ್ಲಾಕ್ ಅಧ್ಯಕ್ಷ ಮಂಜುನಾಥ್, ಉದ್ಯಮಿ ಬಿಳಿಗಿರಿ ರಂಗನಾಥ್, ಡಾ.ಅನಿಲ್ ಥಾಮಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.
------------

ಮೈಸೂರು
ಮೈಸೂರು ಕೆನೈನ್ ಕ್ಲಬ್ ವತಿಯಿಂದ ಸೆ.6 ರಂದು ಮೈಸೂರಿನ ಧನ್ವಂತ್ರಿ ರಸ್ತೆಯಲ್ಲಿರುವ ಪಶುವೈದ್ಯ ಆಸ್ಪತ್ರೆಯಲ್ಲಿ ಶ್ವಾನಗಳಿಗೆ ಮೈಕ್ರೋಚಿಪ್ ಅಳವಡಿಸುವ ಮತ್ತು ದಾಖಲೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಕೆನೈನ್ ಕ್ಲಬ್ ಅಧ್ಯಕ್ಷ ಬಿ.ಪಿ.ಮಂಜುನಾಥ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಲಬ್‍ನಿಂದ ಅಳವಡಿಸಲಾಗುವ ಮೈಕ್ರೋಚಿಪ್‍ನಿಂದ ಶ್ವಾನಗಳ ಭದ್ರತೆ, ಗುರುತು ಮತ್ತು ಎಲ್ಲಾ ವಿಧದ ಶ್ವಾನ ಪ್ರದರ್ಶನಗಳಲ್ಲಿ ಭಾಗವಹಿಸಬಹುದಾಗಿದೆ. ಅಲ್ಲದೆ ಅಕ್ಟೋಬರ್ 25 ರಂದು ಮೈಸೂರಿನಲ್ಲಿ ನಡೆಯುವ 2ನೇ ಆಲ್ ಇಂಡಿಯಾ ಆಲ್ ಬ್ರೀಡ್ ಓಪನ್ ಡಾಗ್ ಶೋನಲ್ಲಿ ಭಾಗವಹಿಸಲು ಸ್ಥಳೀಯ ಸ್ಥಾನಗಳಿಗೆ ಇಂತಹ ಅವಕಾಶ ಒದಿಗಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ ಶ್ವಾಣಗಳು ಕಾಣೆಯಾದಲ್ಲಿ ಮೈಕ್ರೋಚಿಪ್‍ನಿಂದ ಗುರುತಿಸಬಹುದು. ಒಮ್ಮೆ ಅಳವಡಿಸಿದರೆ ನಾಯಿಯ ಆಯಸ್ಸು ಮುಗಿಯುವರೆಗೂ ಮೈಕ್ರೋಚಿಪ್ ಕಾರ್ಯ ನಿರ್ವಹಿಸಲಿದೆ. ಇದರಿಂದ ನಾಯಿಗಳ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಇದನ್ನು ಅಳವಡಿಸಲು ಒಂದು ಸಾವಿರ ರೂ. ಪಾವತಿಸಬೇಕಾಗಿರುತ್ತದೆ. ಮೈಕ್ರೋಚಿಪ್ ಅಳವಡಿಸಿಕೊಳ್ಳುವ ಶ್ವಾನಗಳಿಗೆ ಒಂದು ವರ್ಷ ತುಂಬಿರಬೇಕು. ಮೈಕ್ರೋಚಿಪ್ ಅಳವಡಿಸುವ ಮುನ್ನ ಈ ಶ್ವಾನಗಳನ್ನು ವೈದ್ಯಕೀತ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ ಕಾರ್ಯದರ್ಶಿ ಡಾ.ಸಂಜೀವ್ ಮೂರ್ತಿ, ಜಂಟಿ ಕಾರ್ಯದರ್ಶಿ ಟಿ.ಶಶಿಕುಮಾರ್, ಎಂ.ಎಸ್.ತೇಜಸ್ವಿ, ಎನ್.ಸಿ.ವಿನೋದ್ ಕುಮಾರ್, ಎಲ್.ಎಸ್.ಸಂದೀಪ್, ಸಂಜಯ್ ಇದ್ದರು.