Wednesday 21 September 2016

ಕೃಷ್ಣರಾಜಪೇಟೆ. ಪತ್ರಕರ್ತರು ಸಮಾಜಮುಖಿಯಾಗಿ ಕೆಲಸಮಾಡಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿತೀಡುತ್ತಾ ಜನಪರವಾಗಿ ಕೆಲಸಮಾಡಿ ನ್ಯಾಯವನ್ನು ಎತ್ತಿಹಿಡಿದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿ ವೃತ್ತಿಗೌರವವನ್ನು ಕಾಪಾಡಬೇಕು ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಲೋಕೇಶ್ ಕರೆ ನೀಡಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿ ಕಟ್ಟಡದಲ್ಲಿರುವ ಸಂಘದ ಕಛೆರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ನೀಡಿದ ಪತ್ರಕರ್ತರ ಗುರುತಿನ ಕಾರ್ಡುಗಳನ್ನು ವಿತರಿಸಿ ಮಾತನಾಡಿದರು.
ಪತ್ರಕರ್ತರು ಸಂವಿಧಾನದ ನಾಲ್ಕನೇ ಅಂಗವಾಗಿ ಕರ್ತವ್ಯವನ್ನು ನಿರ್ವಹಿಸುತ್ತಾ ಸಮಾಜದ ಕಣ್ಣನ್ನು ತೆರೆಸಿ ಸಮಸ್ಯೆಗಳನ್ನು ಎತ್ತಿಹಿಡಿದು ಜನಸಾಮಾನ್ಯರ ನೋವು ನಲಿವುಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿರುವುದರಿಂದ ಪತ್ರಕಥ್ರ ಬಗ್ಗೆ ಸಮಾಜದಲ್ಲಿ ಗೌರವದ ಭಾವನೆಯಿದೆಯಾದ್ದರಿಂದ ಪತ್ರಕರ್ತರು  ಕೇವಲ ಕಾಟಾಚಾರಕ್ಕಾಗಿ ಕೆಲಸ ಮಾಡದೇ ವೃತ್ತಿಗೌರವವನ್ನು ಎತ್ತಿಹಿಡಿದು ದೇಶ ಕಾಯುವ ಯೋಧರಂತೆ ಕೆಲಸ ಮಾಡುತ್ತಾ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯಬೇಕು. ಪತ್ರಕರ್ತರ ನಡೆ-ನುಡಿಯು ಇತರರಿಗೆ ಮಾದರಿಯಾಗಿರಬೇಕು ಎಂದು ಲೋಕೇಶ್ ಕಿವಿಮಾತು ಹೇಳಿದರು.
ಸಂಘದಲ್ಲಿ ಭಿನ್ನಮತವಿಲ್ಲ: ಕೆ.ಆರ್.ಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಯಾವುದೇ ಗುಂಪುಗಾರಿಕೆಯಾಗಲೀ, ಭಿನ್ನಮತವಾಗಲೀ ಇಲ್ಲ, ನಾವೆಲ್ಲರೂ ಒಂದಾಗಿದ್ದೇವೆ. ಪತ್ರಿಕಾಧರ್ಮವನ್ನು ಎತ್ತಿಹಿಡಿದು ಸಮಾಜ ಮುಖಿಯಾಗಿ ಕೆಲಸ ಮಾಡುತ್ತೇವೆಂದು ಪ್ರಮಾಣ ಮಾಡಿದ್ದೇವೆ. ನಮ್ಮಲ್ಲಿ ಕಾಟಾಚಾರಕ್ಕಾಗಿ ಪತ್ರಿಕಾರಂಗದಲ್ಲಿ ಕೆಲಸ ಮಾಡುವವರು ಯಾರೂ ಇಲ್ಲ, ಹಾಗೆಯೇ ಸಂಘದ ನಿಯಮ ನಿಬಂಧನೆಗಳಿಗೆ ಬದ್ಧರಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿಯೇ ಕೆ.ಆರ್.ಪೇಟೆ ತಾಲೂಕು ಪತ್ರಕರ್ತರ ಸಂಘವು ಸದಾ ಕ್ರಿಯಾಶೀಲವಾಗಿ ಮುಂಚೂಣಿಯಲ್ಲಿದೆ. ಮುಂದಿನ ತಿಂಗಳು ನಮ್ಮ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಪತ್ರಕರ್ತರ ಕಾರ್ಯಾಗಾರವನ್ನು ನಡೆಸುವ ದಿಕ್ಕಿನಲ್ಲಿ ಜಿಲ್ಲಾ ಸಂಘದೊಂದಿಗೆ ಮಾತುಕತೆ ನಡೆಸಿದ್ದು ದಿನಾಂಕವು ನಿಗಧಿಯಾಗುವುದು ಮಾತ್ರ ಬಾಕಿಯಿದೆ. ಪತ್ರಕರ್ತರಾದ ನಾವೇ ಕಿತ್ತಾಡಿಕೊಂಡು ನಗೆಪಾಟಲಿಗೆ ಈಡಾಗದೇ, ನಮ್ಮ ನಮ್ಮಲ್ಲಿಯೇ ಸಮಸ್ಯೆಗಳನ್ನು ಬಗೆ ಹರಿಸಿಕೊಂಡು ಕೆಲಸ ಮಾಡೋಣ, ಸಂಘದ ಸಕ್ರೀಯ ಸದಸ್ಯರಲ್ಲಿ ಕೆಲವರಿಗೆ ಗುರುತಿನ ಚೀಟಿಯು ರಾಜ್ಯ ಸಂಘದಿಂದ ಬಂದಿಲ್ಲ, ಈ ಬಗ್ಗೆ ಜಿಲ್ಲಾಧ್ಯಕ್ಷರೊಂದಿಗೆ ಮಾತನಾಡಿ ಸಂಘದ ಸಕ್ರೀಐ ಸದಸ್ಯರೆಲ್ಲರಿಗೂ ಗುರುತಿನ ಕಾರ್ಡನ್ನು ಕೊಡಿಸಿಕೊಡುವ ಜೊತೆಗೆ ಸರ್ಕಾರದಿಂದ ಪತ್ರಕರ್ತರಿಗೆ ದೊರೆಯುವ ಸೌಲಭ್ಯಗಳನ್ನು ಕೊಡಿಸಿಕೊಡಲು ಸಂಘವು ಬದ್ಧವಾಗಿದೆ ಎಂದು ಹೇಳಿದ ಲೋಕೇಶ್ ಶಾಸಕರಾದ ನಾರಾಯಣಗೌಡ ಅವರು ಸಂಘವು ಸ್ವಂತ ಕಟ್ಟಡವನ್ನು ಹೊಂದುವ ದಿಕ್ಕಿನಲ್ಲಿ ಸೂಕ್ತವಾದ ನಿವೇಶನವನ್ನು ಪುರಸಭೆಯ ವತಿಯಿಂದ ಕೊಡಿಸಿಕೊಡುವ ಜೊತೆಗೆ ಕಟ್ಟಡದ ನಿರ್ಮಾಣಕ್ಕೆ ಶಾಸಕರ ಅನುಧಾನದಿಂದ 10ಲಕ್ಷರೂ ಹಣವನ್ನು ಕೊಡಲು ಬದ್ಧರಾಗಿದ್ದಾರೆ. ಪತ್ರಕರ್ತರಿಗೆ ನಿವೇಶನಗಳನ್ನು ಕೊಡಿಸಿಕೊಡುವ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಪುರಸಭೆಯ ಮುಖ್ಯಾಧಿಕಾರಿಗಳ ಜೊತೆಯಲ್ಲಿ ಚರ್ಚಿಸಿ ಪತ್ರವ್ಯವಹಾರ ಮಾಡಿದ್ದಾರೆ. ಸಧ್ಯದಲ್ಲಿಯೇ ಫಲಕಾರಿಯಾಗುವ ಸಾಧ್ಯತೆಯಿದೆ ಎಂದು ವಿವರಿಸಿದರು.
ಸಭೆಯಲ್ಲಿ ಸಂಘದ ಗೌರವಾಧ್ಯಕ್ಷ ಕೆ.ಆರ್.ನೀಲಕಂಠ, ಪ್ರಧಾನ ಕಾರ್ಯದರ್ಶಿ ಅಪ್ಪನಹಳ್ಳಿ ಅರುಣ್, ಉಪಾಧ್ಯಕ್ಷ ಕೆ.ಎಸ್.ಸತೀಶ್, ನಿರ್ದೇಶಕರಾದ ಬಲ್ಲೇನಹಳ್ಳಿ ಮಂಜುನಾಥ್, ಹೆಚ್.ಬಿ.ಮಂಜುನಾಥ್, ಬಳ್ಳೇಕೆರೆ ಮಂಜುನಾಥ, ಹರಿಚರಣತಿಲಕ್, ಅಘಲಯ ತಮ್ಮಣ್ಣನಾಯಕ, ಆರ್.ಶ್ರೀನಿವಾಸ್, ಸಿಂಗನಹಳ್ಳಿ ಸುರೇಶ್, ಎಂ.ಎಸ್.ಮಂಜುನಾಥ್, ಕಾಡುಮೆಣಸಚಂದ್ರು, ಪ್ರವೀಣ್, ಕಿಕ್ಕೇರಿಶಂಭೂ, ಕಿಕ್ಕೇರಿಲೋಕೇಶ್, ಕಿಕ್ಕೇರಿ ಗೋವಿಂದರಾಜು, ಬೂಕನಕೆರೆ ಪ್ರಕಾಶ್, ಸೈಯ್ಯದ್‍ಖಲೀಲ್, ಹೊಸಹೊಳಲು ರಾಮಚಂದ್ರ, ಸಿಂಧಘಟ್ಟ ಮಹೇಶ್, ಬೂಕನಕೆರೆಕೃಷ್ಣ ಮತ್ತಿತರರು ಭಾಗವಹಿಸಿದ್ದರು.


No comments:

Post a Comment