Thursday 7 August 2014

ಕೆ.ಆರ್.ಪೇಟೆ-ಅಭಿವೃಧ್ದಿ ಕಾಮಗಾರಿಗೆ ಕೆ.ಗೌಸ್ ಖಾನ್ ಚಾಲನೆ.

ಕೃಷ್ಣರಾಜಪೇಟೆ. ಪುರಸಭೆಯ ವ್ಯಾಪ್ತಿಯಲ್ಲಿ ಆಮೆ ವೇಗದಲ್ಲಿ ನಡೆಯುತ್ತಾ ನೆನಗುದಿಗೆ ಬಿದ್ದಿದ್ದ ಪಟ್ಟಣದ ಪುರಸಭೆಯ ಒಳಚರಂಡಿ ಯೋಜನೆಯ ಸೆಪ್ಟಿಕ್ ಟ್ಯಾಂಕಿನ ಕಾಮಗಾರಿಗೆ ಅಧ್ಯಕ್ಷ ಕೆ.ಗೌಸ್‍ಖಾನ್ ಹೊಸಹೊಳಲಿನಲ್ಲಿ ಇಂದು ಚಾಲನೆ ನೀಡಿದರು.
ಕಳೆದ 6ವರ್ಷಗಳಿಂದ ಕುಂಟುತ್ತಾ ಆಮೆವೇಗದಲ್ಲಿ ಸಾಗುತ್ತಿರುವ ಒಳಚರಂಡಿ ಯೋಜನೆಯ ಕಾಮಗಾರಿಯು ಬಹುತೇಕ ಮುಗಿದಿದ್ದು ನಿವೇಶನ ವಿವಾದದಿಂದಾಗಿ ಅಪೂರ್ಣವಾಗಿ ಉಳಿದಿದ್ದ ಹೊಸಹೊಳಲಿನಲ್ಲಿನ ಸೆಪ್ಟಿಕ್ ಟ್ಯಾಂಕಿನ ನಿರ್ಮಾಣ ಕಾಮಗಾರಿಗೆ ಪುರಸಭೆಯ ಅಧ್ಯಕ್ಷರು ಹರಿಜನ ಕಾಲೋನಿಯ ಜನರ ಮನವೊಲಿಸಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಸ್ವಚ್ಛತೆಯನ್ನು ಕಾಪಾಢಿಕೊಂಡು ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ರೀತಿಯ ದುಶ್ಪರಿಣಾಮವಾಗದಂತೆ ಕಾಮಗಾರಿಯನ್ನು ನಡೆಸುವುದಾಗಿ ಮುಖ್ಯಾಧಿಕಾರಿ ಬಸವರಾಜು ಹಾಗೂ ಒಳಚರಂಡಿ ಯೋಜನೆಯ ಸಹಾಯಕ ಎಂಜಿನಿಯರ್ ಸುರೇಶ್ ಅವರ ಸಮ್ಮುಖದಲ್ಲಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ನೆನಗುದಿಗೆ ಬಿದ್ದಿದ್ದ ಸೆಪ್ಟಿಕ್ ಟ್ಯಾಂಕಿನ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ್ದರಿಂದಾಗಿ ಹೋದಜೀವ ಬಂದಂತಾಗಿದೆಯಲ್ಲದೇ ಒಳಚರಂಡಿ ಯೋಜನೆಯ ಕಾಮಗಾರಿಯು ಸಂಪೂರ್ಣಗೊಂಡು ಜನತೆಯ ಸೇವೆಗೆ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಿದ ಅಧ್ಯಕ್ಷ ಕೆ.ಗೌಸ್‍ಖಾನ್ ಇನ್ನೊಂದು ವರ್ಷದಲ್ಲಿ ಒಳಚರಂಡಿ ಯೋಜನೆಯ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸುತ್ತೇನೆ ಎಂದು ಜನತೆಗೆ ಭರವಸೆ ನೀಡಿದರು.
ವಾರ್ಡ್ ಸಭೆ: ಪುರಸಭೆ ವ್ಯಾಪ್ತಿಯ ಹೊಸಹೊಳಲಿನ ರಂಗಸ್ಥಳದ ಕುರ್ಜಿನ ಬಳಿ ನಡೆದ ವಾರ್ಡ್‍ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್ ಜನರಿಗೆ ಶುದ್ಧವಾದ ಕುಡಿಯುವ ನೀರು, ಸ್ವಚ್ಛತೆ ಹಾಗೂ ಬೀದಿ ದೀಪವನ್ನು ಒದಗಿಸಿಕೊಡುವುದು ಪುರಸಭೆಯ ಆಧ್ಯ ಕರ್ತವ್ಯವಾಗಿದೆ. ಪಟ್ಟಣಕ್ಕೆ ಕುಡಿಯುವ  ನೀರು ಸರಬರಾಜಾಗುವ ಹೇಮಗಿರಿಯ ಹೇಮಾವತಿ ನದಿಯ ಪಕ್ಕದಲ್ಲಿನ ಪಂಪ್‍ಹೌಸಿಗೆ ಎಕ್ಸ್‍ಪ್ರೆಸ್ ವಿದ್ಯುತ್ ಲೈನನ್ನು ಹೊಸದಾಗಿ ಅಳವಡಿಸಿ ಪಂಪ್ ಮಾಢಿಸಿ ನೀರನ್ನು ಶುದ್ಧೀಕರಣ ಮಾಡಿದ ನಂತರ ಸಾರ್ವಜನಿಕರಿಗೆ ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ಪುರಸಭೆಯ ವ್ಯಾಪ್ತಿಯಲ್ಲಿ ಕಳೆದ 10ವರ್ಷಗಳಿಂದ ಬಡವರು ಹಾಗೂ ಮಧ್ಯಮ ವರ್ಗದ ಜನತೆಗೆ ನಿವೇಶನಗಳನ್ನು ವಿತರಿಸುವ ಕೆಲಸವನ್ನೇ ಮಾಡಿಲ್ಲ. ಹೊಸಹೊಳಲಿನ 350 ನಿವೇಶನಗಳು, ಸಾಧುಗೋನಹಳ್ಳಿ ಬಳಿಯ 1200 ನಿವೇಶನಗಳು ಹಾಗೂ ಪಟ್ಟಣದ ತಮ್ಮಣ್ಣಗೌಡ ಬಡಾವಣೆ(ಟಿಬಿಬಡಾವಣೆ)ಯಲ್ಲಿ ವಿತರಿಸದೇ ಉಳದಿರುವ 350 ನಿವೇಶನಗಳಿಗೆ ಸಧ್ಯದಲ್ಲಿಯೇ ವಿವಿಧ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಸ್ವೀಕರಿಸಿ ನಿವೇಶನಗಳನ್ನು ವಿತರಣೆ ಮಾಡುವ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದ ಅಧ್ಯಕ್ಷ ಕೆ.ಗೌಸ್‍ಖಾನ್ ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹೊಸ ತೆರಿಗೆಗಳನ್ನು ವಿಧಿಸದೇ ಪುರಸಭೆಯು ಜನಪರವಾದ ಆಢಳಿತವನ್ನು ನೀಡುತ್ತಿದೆ. ಸಾರ್ವಜನಿಕರು ಪುರಸಭೆಗೆ ಪಾವತಿಸಬೇಕಾದ ತೆರಿಗೆ ಬಾಕಿ ಹಣವನ್ನು ಪಾವತಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇತಿಹಾಸ ಪ್ರಸಿದ್ಧವಾದ ಹೊಯ್ಸಳ ವಾಸ್ತು ವೈಭವದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯವನ್ನು ಹೊಂದಿರುವ ಹೊಸಹೊಳಲು ಪಟ್ಟಣವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃಧ್ಧಿ ಮಾಡಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗುವಂತೆ 10ಕೋಟಿ ರೂ ವಿಶೇಷ ಅನುಧಾನವನ್ನು ಬಿಡುಗಡೆ ಮಾಡಿಸಿಕೊಡುವಂತೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಗರಾಭಿವೃಧ್ಧಿ ಸಚಿವರಿಗೆ ಸದಸ್ಯರ ನಿಯೋಗದೊಂದಿಗೆ ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಗಿದೆ ಸಧ್ಯದಲ್ಲಿಯೇ ಕಾಮಗಾರಿಗಳೂ ಆರಂಭವಾಗಲಿವೆ. ಹೊಸಹೊಳಲು ತನ್ನ ಹಳೆಯ ಪೊರೆಯನ್ನು ಕಳಚಿ ಸಮಗ್ರವಾಗಿ ಅಭಿವೃಧ್ಧಿಯಾಗಿ ಕಂಗೊಳಸುವ ದಿನಗಳು ಹತ್ತಿರಕ್ಕೆ ಬಂದಿವೆ ಎಂದು ಗೌಸ್‍ಖಾನ್ ಹೇಳಿದರು. ಇದೇ ಸಂದರ್ಭದಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಂಡಿರುವ ವಿವಿಧ ಫಲಾನುಭವಿಗಳಿಗೆ 10ಸಾವಿರ ರೂಗಳ ಸಹಾಯ ಧನದ ಚೆಕ್ಕುಗಳನ್ನು ಪುರಸಭೆಯ ಉಪಾಧ್ಯಕ್ಷ ಹೆಚ್.ಕೆ.ಅಶೋಕ್ ಮತ್ತು ಸದಸ್ಯರು ವಿತರಿಸಿದರು.
ಸಭೆಯಲ್ಲಿ ಪುರಸಭೆ ಸದಸ್ಯರಾದ ರೂಪಪ್ರಕಾಶ್, ಆಟೋಕುಮಾರ್, ಕೆ.ವಿನೋದ್‍ಕುಮಾರ್, ಹೆಚ್.ಆರ್.ಲೋಕೇಶ್, ನಾಗರಾಜು, ತಂಜೀಮಾಕೌಸರ್, ಮುಖ್ಯಾಧಿಕಾರಿ ಎಸ್.ಬಸವರಾಜು, ಸಹಾಯಕ ಎಂಜಿನಿಯರ್ ಕುಮಾರ್, ನಗರನೀರು ಸರಬರಾಜು ಮಂಡಳಿಯ ಎಂಜಿನಿಯರ್ ಶ್ರೀನಿವಾಸ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಮುಖ್ಯಾಧಿಕಾರಿ ಎಸ್.ಬಸವರಾಜು ಹೊಸಹೊಳಲಿನಲ್ಲಿ ನಡೆದ ಪ್ರಥಮ ವಾರ್ಡ್ ಸಭೆಗೆ ಸರ್ವರನ್ನೂ ಸ್ವಾಗತಿಸಿದರು. ಕಛೇರಿಯ ವ್ಯವಸ್ಥಾಪಕ ಚಂದ್ರಶೇಖರ್ ವಂದಿಸಿದರು.
ಚಿತ್ರಶೀರ್ಷಿಕೆ: 07-ಏಖPಇಖಿಇ-02  ಕೃಷ್ಣರಾಜಪೇಟೆ ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಆಮೆ ವೇಗದಲ್ಲಿ ನಡೆಯುತ್ತಾ ನೆನಗುದಿಗೆ ಬಿದ್ದಿದ್ದ ಪಟ್ಟಣದ ಪುರಸಭೆಯ ಒಳಚರಂಡಿ ಯೋಜನೆಯ ಸೆಪ್ಟಿಕ್ ಟ್ಯಾಂಕಿನ ಕಾಮಗಾರಿಗೆ ಅಧ್ಯಕ್ಷ ಕೆ.ಗೌಸ್‍ಖಾನ್ ಹೊಸಹೊಳಲಿನಲ್ಲಿ ಇಂದು ಚಾಲನೆ ನೀಡಿದರು. ಮುಖ್ಯಾಧಿಕಾರಿ ಎಸ್.ಬಸವರಾಜು, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಎಂಜಿನಿಯರ್ ಶ್ರೀನಿವಾಸ್ ಮತ್ತಿತರರು ಚಿತ್ರದಲ್ಲಿದ್ದಾರೆ.

No comments:

Post a Comment