Sunday 3 August 2014

ಕೆ.ಆರ್.ಪೇಟೆ- ಹುಣಸೇ ಮರದಿಂದ ಮನೆಯ ಗೋಡೆಗಳಲ್ಲಿ ಬಿರುಕು

ವಿಶೇಷ ವರದಿ: ಆರ್.ಶ್ರೀನಿವಾಸ್.
ಕೆ.ಆರ್.ಪೇಟೆ,ಆ.3, ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಚೌಡೇನಹಳ್ಳಿ ರಸ್ತೆಯಲ್ಲಿರುವ ಸಿಂಗಮ್ಮದೇವಿ ದೇವಾಲಯದ ಬಳಿ ಇರುವ ರಸ್ತೆ ಬದಿಯ ಹುಣಸೇ ಮರದಿಂದ ಬೇರುಗಳು ಸಮೀಪದ ಮನೆಗಳ ಗೋಡೆಯೊಳಕ್ಕೆ ಬೆಳೆದುಕೊಂಡಿದ್ದು ಮನೆಗಳ ಗೋಡೆಯು ಕುಸಿದು ಬೀಳುವ ಹಂತದಲ್ಲಿದ್ದು ಈ ಮರವನ್ನು ಕಡಿದು ಅಕ್ಕಪಕ್ಕದ ಮನೆಗಳನ್ನು ರಕ್ಷಿಸಬೇಕು ಎಂದು ನಿವಾಸಿಗಳು ಪುರಸಭೆಯ ಅಧಿಕಾರಿಗಳನ್ನು ಒತ್ತಾಯ ಮಾಡಿದ್ದಾರೆ. 
ಗ್ರಾಮದ ಸಿಂಗಮ್ಮ ದೇವಸ್ಥಾನ ಮತ್ತು ಕೋಟೇಭೈರವೇಶ್ವರ ದೇವಸ್ಥಾನ ರಸ್ತೆಯ ಮಧ್ಯೆಭಾಗದಲ್ಲಿ ಬೃಹತ್ ಹುಣಸೇಮರವೊಂದರ  ಬೇರುಗಳು ಸಮೀಪದ ಮನೆಗಳಿಗೆ ಬೆಳೆದುಕೊಂಡು  ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಯಾವುದೇ ಹಂತದಲ್ಲಿ ಬೀಳುವ ಹಂತದಲ್ಲಿವೆ.  ಆದ್ದರಿಂದ ಈ ಮರವನ್ನು ತೆರವುಗೊಳಿಸುವಂತೆ ಇಡೀ ಬಡಾವಣೆಯ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಸಂಸದರಿಗೆ ಸೇರಿದಂತೆ ಎಲ್ಲಾ ಹಂತದ ಜನಪ್ರತಿನಿಧಿಗಳಿಗೆ ಲಿಖಿತ ದೂರು ನೀಡಿದರೂ ಸಹ ಮರವನ್ನು ತೆರವುಗೊಳಿಸದೇ ಇರುವುದರಿಂದ ನಾಗರೀಕರಿಗೆ ತೀವ್ರ ತೊಂದರೆ ಉಂಟಾಗಿದೆ. ದುರ್ವಾಸನೆಯಿಂದಾಗಿ ಕೆಲವು ನಾಗರೀಕರಿಗೆ ತುರಿಕೆ ಸೇರಿದಂತೆ ಸಾಂಕ್ರಾಮಿಕ ಖಾಯಿಲೆಗಳು ಸೊಂಕು ತಗುಲಿರುವುದರಿಂದ ಪ್ರತಿದಿನ ಜನತೆಯು ತೊಂದರೆ ಪಡುವಂತಾಗಿದೆ. ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕರ ನೆಮ್ಮದಿಗೆ ಭಂಗವಾಗಿರುವ ಈ ಮರವನ್ನು ತೆರವುಗೊಳಿಸುವಂತೆ ಗ್ರಾಮದ ಯುವ ಮುಖಂಡ ಮಂಜುನಾಥ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

No comments:

Post a Comment