Wednesday 20 August 2014

ಜಿಲ್ಲಾಪಂಚಾಯತ್ ಮಂಡ್ಯ.

ಮಂಡ್ಯ:ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗ ಬಯಸಿ ಅರ್ಜಿ ಹಾಕಿದ ಕೂಲಿ ಕಾರ್ಮಿಕರಿಗೆ,ತಡ ಮಾಡದೆ ಉದ್ಯೋಗ ಕಲ್ಪಿಸಿ ಕೊಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ಅವರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
        ಅವರು ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ನಿರ್ಮಲ ಭಾರತ ಅಭಿಯಾನ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
    ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಸಂಬಂಧ ತಾತ್ಸಾರ ಮಾಡದೆ ಉದ್ಯೋಗ ಕೊಡಲು ಕ್ರಮವಹಿಸಬೇಕು.ಈ ತಿಂಗಳ ಶೌಚಾಲಯ ಪ್ರಗತಿಯ ಸಂಬಂಧ ನಿಗದಿಪಡಿಸಿರುವ ಗುರಿಯನ್ನು ಮುಟ್ಟಬೇಕು.ಎನ್.ಎಂ.ಆರ್ ಸೃಜನೆ ಆಗಬೇಕು.ಪಂಚತಂತ್ರ,ಬೇಸ್‍ಲೈನ್ ಸರ್ವೆ ಜರೂರು ಸಲ್ಲಿಸಬೇಕು.ಶೌಚಾಲಯ ಇಲ್ಲದಿರುವ ಅಂಗನವಾಡಿಗಳಿಗೆ ಶೀಘ್ರವಾಗಿ ಶೌಚಾಲಯ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಬೇಕು.ಆದ್ಯತೆ ಮೇಲೆ ಶಾಲಾ ಶೌಚಾಲಯಗಳನ್ನು ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎನ್.ಡಿ.ಪ್ರಕಾಶ್,ಮುಖ್ಯ ಯೋಜನಾಧಿಕಾರಿ ಕೆಂಡಗಣ್ಣಪ್ಪ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

No comments:

Post a Comment