Sunday 31 August 2014


ಮಂಡ್ಯ: ತಾಳ್ಮೆಯಿಂದ ನಂಬಿಕೆ ಇಟ್ಟುಕೊಂಡು ಕೆಲಸ ಮಾಡಿದರೆ ಸಂಘವು ಅನುಕೂಲ ಕಲ್ಪಿಸಲಿದೆ ಎಂದು ಸಹಕಾರ ಸಂಘಗಳ ಲೆಕ್ಕಶೋಧಕ ನಂಜೇಗೌಡ ಸಭೆ ಉದ್ಘಾಟಿಸಿ ಮಾತನಾಡಿದರು.  ನಗರದ ಗುರುಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಪ್ರಥಮ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತಲಾಡಿದ ಅವರು ಸಂಘದ ಧ್ಯೇಯೋದ್ದೇಶಗಳು ಉತ್ತಮ ರೀತಿಯಲ್ಲಿದ್ದು, ಶೀಘ್ರದಲ್ಲಿ ನೌಕರರಿಗೆ ನಿವೇಶನ ಒದಗಿಸಿಕೊಡಲು ಮುಂದಾಗಬೇಕು ಎಂದರು.
ಸಂಘದ ಅಧ್ಯಕ್ಷ ಕೆ.ನಾಗೇಶ್ ಮಾತನಾಡಿ, ಮನೆ, ನಿವೇಶನ ಇಲ್ಲದ ಸರ್ಕಾರಿ ನೌಕರರಿಗೆ ನಿವೇಶನ ಒದಗಿಸಿಕೊಡಲು ಪ್ರಯತ್ನ ಮಾಡಲಾಗುತ್ತಿದೆ. ನಗರದ ಸುತ್ತಮುತ್ತಲ ಪ್ರದೇಶದಲ್ಲಿ ಕಡಿಮೆ ದರದಲ್ಲಿ ಜಮೀನನ್ನು ಖರೀದಿಸಿ, ನಿವೇಶನವಾಗಿ ಪರಿವರ್ತಿಸಲಾಗುವುದು. ಸಂಘದಲ್ಲಿ ಹಣ ಲೋಪವಾಗದ ರೀತಿಯಲ್ಲಿ ಕೆಲಸ ನಿರ್ವಹಿಸಲಿದೆ. ಈ ಬಗ್ಗೆ ನೌಕರರು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಹೇಳಿದರು.
ಸಂಘದ ಸದಸ್ಯತ್ವ ಪಡೆಯುವ ನೌಕರರು ಹಂತ ಹಂತವಾಗಿ ಹಣ ಪಾವತಿಸಬೇಕು. ಆ ನಂತರ ನಿವೇಶನ ಖರೀದಿಸಿ, ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಕೆ.ಜೆ.ಪುಟ್ಟೇಗೌಡ, ಕೆ.ಸಿ.ರವಿಶಂಕರ್, ಮುಖಂಡರಾದ  ಪುಟ್ಟಸ್ವಾಮಿಗೌಡ, ಡಿ.ಜೆ.ಈಶ್ವರ್, ಬಿ.ಎಂ.ಅಪ್ಪಾಜಪ್ಪ, ಎಚ್.ಸಿ.ಚೌಡಯ್ಯ, ಚಂದ್ರಶೇಖರ್,  ಹೇಮಣ್ಣ, ಸಿ.ಜೆ.ಜಲಜ, ರೇಷ್ಮಾ, ಕೆ.ಎನ್.ಕುಮಾರ್, ಕೆ.ಈಶ್ವರಸ್ವಾಮಿ, ದೇವರಾಜು, ಚಂದ್ರಶೇಖರ್, ಟಿ.ರವಿಶಂಕರ್ ಇತರರು ಭಾಗವಹಿಸಿದ್ದರು.

No comments:

Post a Comment