Sunday 31 August 2014

ಭಾರತೀನಗರ.ಆ.31-ಚಾಮುಂಡೇಶ್ವರಿ ಹಾಗೂ ಕೊಪ್ಪ ಸಕ್ಕರೆ ಕಾರ್ಖಾನೆಗಳು  ರೈತರಿಗೆ ಬರಬೇಕಾದ ಬಾಕಿ ಹಣವನ್ನು ಪಾವತಿಸದೆ ರೈತರಿಗೆ  ವೈಜ್ಞಾನಿಕ ಬೆಲೆ ನೀಡದಿರುವುದರಿಂದ  ಕಬ್ಬು ಬೆಳೆಗಾರರ ಮತ್ತು ರೈತರ  ಸಭೆಯನ್ನು ಕೆ.ಎಂ.ದೊಡ್ಡಿಯ ಡಿ.ಸಿ.ತಮ್ಮಣ್ಣನವರ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ. ಎಲ್ಲಾ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶಾಸಕ ಡಿಸಿತಮ್ಮಣ್ಣ ಕೋರಿದ್ದಾರೆ.
    ಈ ಭಾಗದಲ್ಲಿ ಸಮರ್ಪಕವಾಗಿ ಮಳೆಇಲ್ಲದೆ, ನಾಲೆಯಲ್ಲಿ ನೀರು ಇಲ್ಲದೆ ಬೆಳೆಗಳು ಒಣಗುತ್ತಿವೆ.   ಈಗಾಗಲೇ ಜಿಲ್ಲೆಯಲ್ಲಿ ಮಂಡ್ಯ ಮೈಷುಗರ್, ಪಾಂಡುಪುರ ಪಿಎಸ್‍ಎಸ್‍ಕೆ, ಕೆಆರ್‍ಪೇಟೆ ಕೋರಮಂಡಲ್ ಸಕ್ಕರೆ ಕಾರ್ಖಾನೆಗಳು ಪ್ರಾರಂಭಗೊಂಡಿವೆ. ಆದರೆ  ಮದ್ದೂರು ತಾಲ್ಲೂಕಿನ ಕೊಪ್ಪ ಎನ್‍ಎಸ್‍ಎಲ್, ಭಾರತೀನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಇನ್ನೂ ಪ್ರಾರಂಭಗೊಳ್ಳದಿರುವುದರಿಂದ ರೈತರ ಸಭೆಯನ್ನು ಆಯೋಜಿಸಲಾಗಿದೆ. ಅಲ್ಲಿ ಸಾಧಕ, ಬಾಧಕ ವಿಚಾರವನ್ನು ಚರ್ಚಿಸಿ ಕಬ್ಬು ಸರಬರಾಜಿಗೆ ತೀರ್ಮಾನವನ್ನು ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.

No comments:

Post a Comment