Sunday 17 August 2014

ಮೇಲು ಕೋಟೆ ಶ್ರಾವಣ ಪೂಜೆ.

 ಚಿತ್ರ 16 ಎಂ.ಎಲ್.ಕೆ 1 ಮೇಲುಕೋಟೆಯ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದ  ಮುಂದೆ 3 ನೇ ಶ್ರಾವಣ ಶನಿವಾರದಂದು ದರ್ಶನಕ್ಕಾಗಿ ಸರತಿಸಾಲಿನಲ್ಲಿ ನಿಂತಿರುವ ಭಕ್ತರು 2 ಶ್ರಾವಣ ಶನಿವಾರದ ಪ್ರಯುಕ್ತ ಮೂಲಮೂರ್ತಿ ಚೆಲುವನಾರಾಯಣಸ್ವಾಮಿ ಮತ್ತು ಯದುಗಿರಿ ನಾಯಕಿ ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
--------------------------------------------------------------------
ಮೇಲುಕೋಟೆ : ಐವತ್ತು ಸಾವಿರಕ್ಕೂ ಅಧಿಕ ಭಕ್ತರು ಮೂರನೇ ಶ್ರಾವಣಶನಿವಾರದಂದು ಶ್ರೀಚೆಲುವನಾರಾಯಣಸ್ವಾಮಿಯ ದರ್ಶನ ಮಾಡಿ ದನ್ಯತಾ ಭಾವ ಹೊಂದಿದರು. ಶ್ರಾವಣ ಶನಿವಾರಗಳಂದು ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿಯ  ದರ್ಶನ ಮಾಡಿದರೆ ಸಕಲ ಸಂಕಲ್ಪನೆರವೇರುತ್ತವೆ ಎಂಬ ನಂಬಿಕೆಯಿರುವ ಕಾರಣ ಬೆಳಿಗ್ಗೆ 7 ಗಂಟೆಯಿಂದಲೇ ಭಕ್ತರ ಮಹಾಪೂರವೇ ಮೇಲುಕೋಟೆಗೆ ಹರಿದುಬಂತು.  ಕಲ್ಯಾಣಿ, ರಾಯಗೋಪುರ ಮುಂತಾದಕಡೆ ಭಕ್ತರ ದಟ್ಟನೆ ಹೆಚ್ಚಾಗಿತ್ತು.
ಈ ಬಾರಿ ಕಳೆದೆರಡು ಶ್ರಾವಣ ಶನಿವಾರಗಳಿಂತಲೂ ಹೆಚ್ಚಿನ ಭಕ್ತರು ಆಗಮಿಸಿ ದೇವರದರ್ಶನ ಪಡೆದಿದ್ದಾರೆ ಎಂದು ಪೊಲೀಸ್ ಮತ್ತು ದೇವಾಲಯದ ಮೂಲಗಳು ಪತ್ರಕರ್ತರಿಗೆ ಮಾಹಿತಿನೀಡಿವೆ. ಪಂಚಕಲ್ಯಾಣಿಯಲ್ಲಿ ಸ್ನಾನ ಮುಗಿಸಿದ ನಂತರ ಯೋಗನರಸಿಂಹಸ್ವಾಮಿ ಮತ್ತು ಚೆಲುವನಾರಾಯಣನ ಸನ್ನಿಧಿಯ ಬಳಿಬುರುತ್ತಿದ್ದ ಭಕ್ತರು  ಸುಡುಬಿಸಿಲನ್ನೂ ಲೆಕ್ಕಿಸದೆ  ಸರತಿ ಸಾಲಿನಲ್ಲಿ ನಿಂತು ದೇವರದರ್ಶನ ಪಡೆದ ದೃಶ್ಯ ಸಂಜೆಯವರೆಗೂ ಕಂಡು ಬಂತು. ಕಡಲೆ ಪುರಿ ಮತ್ತು ಪುಳಿಯೋಗರೆ ವ್ಯಾಪಾರ ಬರ್ಜರಿಯಾಗಿ ನಡೆಯಿತು.
ಮೇಲುಕೋಟೆಗೆ ಭಕ್ತರ ವಾಹನಪ್ರವೇಶವನ್ನು ನಿರ್ಬಂದಿಸಿ ಆಸ್ಪತ್ರೆಯ ಮುಂಭಾಗ, ಚೆಸ್ಕಾಂ ಆವರಣ, ಬಸ್ ನಿಲ್ದಾಣದ ಬಳಿ,  ಆದಿಚುಂಚುನಗಿರಿ ಸಮುದಾಯದ ಆವರಣಗಳಲ್ಲಿ ಭಕ್ತರ ವಾಹನಗಳ ನಿಲುಗಡೆಗೆ ವ್ಯವಸ್ಥೆಮಾಡಲಾಗಿತ್ತು. ಮೇಲುಕೋಟೆ ಎಸ್.ಐ ಚಂದ್ರಶೇಖರ್ ಮತ್ತು ಸಿಬ್ಬಂದಿವರ್ಗ ಪೊಲೀಸರ ಕೊರತೆಯನಡುವೆಯೂ ಶ್ರಮವಹಿಸಿ ಕರ್ತವ್ಯ ನಿರ್ವಹಿಸಿ ಭಕ್ತರ ದಟ್ಟನೆಯನ್ನು ನಿಯಂತ್ರಿಸಿ ಸರಾಗವಾಗಿ ದೇವರದರ್ಶನ ಲಭ್ಯವಾಗುವಂತೆ ನೋಡಿಕೊಂಡರು. ಭಕ್ತರು ಬಸ್ ನಿಲ್ದಾಣದಿಂದ ದೇವಾಲಯದವರೆಗೆ ನಡೆದುಕೊಂಡೆ ಬರಬೇಕಿದ್ದ ಕಾರಣ  100ಕ್ಕೂ ಹೆಚ್ಚು ಸಂಖ್ಯೆಯ ಸಣ್ಣ ಪುಟ್ಟ ಅಂಗಡಿಯವರು ಬರ್ಜರಿ ವ್ಯಾಪಾರ ಮಾಡಿಕೊಂಡರು.
ಶ್ರಾವಣದ ನಂತರ ಕ್ರಮ : ಕಳೆದ ಶನಿವಾರ ಕಂಡಕಂಡಲ್ಲಿ  ಭಕ್ತರಿಗೆ ಮುಡಿಕೂದಲು ತೆಗೆದು ಅಭಾಸವಾದ ಬಗ್ಗೆ ಪೊಲೀಸ್ ಇಲಾಖೆ ದೇವಾಲಯಕ್ಕೆ ಪತ್ರ ಬರೆದಿದ್ದ ಕಾರಣ ಈ ಬಾರಿ ಅವ್ಯವಸ್ಥೆ ಕಂಡುಬರಲಿಲ್ಲ.  ಮುಡಿಕಟ್ಟೆಯಲ್ಲಿ ಯಾವುದೇ ಗೊಂದಲವುಂಟಾಗದಿದ್ದರೂ ದೇಗುಲಕ್ಕೆ ಆಧಾಯ ತರುವ ಕ್ರಮ ಈ ಸಲವೂ ಜಾರಿಯಾಗದಕ್ಕೆ ನಾಗರೀಕರು ಅಸಮದಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳೂ ಆದ ಪಾಂಡವಪುರ ತಹಸೀಲ್ದಾರ್ ಶಿವಕುಮಾರಸ್ವಾಮಿ ಶ್ರಾವಣಮಾಸ ಮುಕ್ತಾಯವಾದ ನಂತರ ಮುಡಿಕಟ್ಟೆ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ನಿರ್ವಹಿಸಲು ಪರಿಶೀಲಿಸಿ ಕ್ರಮಜರುಗಿಸಲಾಗುತ್ತದೆ ಎಂದರು. ಭಕ್ತರು ದೇವರಿಗೆ ನೀಡುವ ಕೂದಲನ್ನೂ ಖಾಸಗಿಯವರು ಹರಾಜುಮಾಡಿ ಲಕ್ಷಾಂತರ ರೂ ಆಧಾಯಮಾಡಿಕೊಳ್ಳುತ್ತಿದ್ದಾರೆಂಬ ದೂರಿನ ಬಗ್ಗೆಯೂ ಕಾನೂನುಕ್ರಮ ಜರುಗಿಸಲಾಗುತ್ತದೆ ಎಂದರು. ವಿಧಾನಪರಿಷತ್ ಸದಸ್ಯ ರಾಮಕೃಷ್ಣ ಕುಟುಂಬ ಸಹಿತ ದೇಗುಲಕ್ಕೆ ಆಗಮಿಸಿ ದೇವರದರ್ಶನ ಪಡೆದರು. ಈ ವೇಳೆ ಪಾಂಡವಪುರ ತಹಶೀಲ್ದಾರ್ ಶಿವಕುಮಾರಸ್ವಾಮಿ, ದೇವಾಲಯದ ಪಾರುಪತ್ತೇಗಾರ ಸ್ಥಾನೀಕಂ ನಾಗರಾಜಯ್ಯಂಗಾರ್ ಮತ್ತಿತರರು ಭಾಗವಹಿಸಿದ್ದರು.


No comments:

Post a Comment