Tuesday 26 August 2014

ಮೈಸೂರು-ಆ 27 ರಂದು ಟೆಂಟ್ ಶಾಲೆ ಉದ್ಘಾಟನೆ

ಆ 27 ರಂದು ಟೆಂಟ್ ಶಾಲೆ ಉದ್ಘಾಟನೆ
      ಮೈಸೂರು,ಆ.26.ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆನೆಗಳೊಂದಿಗೆ ಆಗಮಿಸಿರುವ ಮಾವುತರು ಹಾಗೂ ಕಾವಾಡಿಗಳ ಮಕ್ಕಳಿಗೆ ಅರಮನೆ ಆವರಣದಲ್ಲಿ ಟೆಂಟ್ ಶಾಲೆಯನ್ನು ದಿನಾಂಕ: 27/08/2014 ಬುಧವಾರ ಬೆಳಿಗ್ಗೆ 11 ಗಂಟೆಗೆ ಪ್ರಾರಂಭಿಸಿಲಾಗುತ್ತಿದೆ.
      ಮೈಸೂರು ವಿಭಾಗದ ಉಪಅರಣ್ಯಸಂರಕ್ಷಣಾಧಿಕಾರಿ ಡಾ|| ವಿ.ಕರಿಕಾಳನ್  ಟೆಂಟ್ ಶಾಲೆ ಉದ್ಘಾಟಿಸಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್. ಆರ್.ಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್, ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿ ಡಾ|| ನಾಗರಾಜ್ ಮೈಸೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್.ಶಿವರಾಮೇಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮೂಲಿಕಾ ದಸರಾ: ಔಷಧೀಯ ಸಸ್ಯ ನೆಡುವ ಕಾರ್ಯಕ್ರಮ
     ಮೈಸೂರು,ಆ.26.ಮೂಲಿಕಾ ದಸರಾ 2014ರ ಆಚರಣೆಯ ಅಂಗವಾಗಿ ದಿನಾಂಕ:27/08/2014ರ ಬೆಳಿಗ್ಗೆ 9-30ಕ್ಕೆ ಹುಣಸೂರು ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಸಿ. ಶಿಖಾ ಅವರ ನಿವಾಸದ ಆವರಣದಲ್ಲಿ ಅಪರೂಪದ ಔಷಧೀಯ ಸಸ್ಯ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಪೀಚ್ ಅಂಡ್ ಆಡಿಯಾಲಜಿ ಉಪನ್ಯಾಸಕÀ ಹುದ್ದೆಗೆ ಅರ್ಜಿ  ಆಹ್ವಾನ
     ಮೈಸೂರು,ಆ.26.ವಿಕಲಚೇತನರ ಹಾಗೂ ಹಿರಿಯ  ನಾಗರಿಕರ  ಸಬಲೀಕರಣ  ಇಲಾಖಾ ವತಿಯಿಂದ  ಮೈಸೂರಿನ  ತಿಲಕ  ನಗರದ  ಅಂಧ  ಮಕ್ಕಳ ಸರ್ಕಾರಿ ಪಾಠಶಾಲೆಯ ಆವರಣದಲ್ಲಿ  ಕಾರ್ಯ  ನಿರ್ವಹಿಸುತ್ತಿರುವ  ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ಸ್ಪೀಚ್ ಅಂಡ್ ಆಡಿಯಾಲಜಿ ಉಪನ್ಯಾಸಕÀ ಹುದ್ದೆಗೆ ಅರ್ಜಿ  ಆಹ್ವಾನಿಸಿದೆ. ಹುದ್ದೆಯು  ತಾತ್ಕಲಿಕವಾಗಿದ್ದು,   ಮಾಸಿಕ ಗೌರವಧನದ   ಆಧಾರದ   ಮೇರೆಗೆ   ನೇಮಕ   ಮಾಡಿಕೊಳ್ಳಲಾಗುವುದು.
     ಬಿ.ಎಸ್ಸಿ. ಸ್ಪೀಚ್ ಅಂಡ್ ಹಿಯರಿಂಗ್ ಜೊತೆ ಇಂಟರ್ನ್‍ಶಿಪ್ ಮತ್ತು  2 ವರ್ಷಗಳ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು  ಎಂ.ಎಸ್ಸಿ.ಸ್ಪೀಚ್ ಅಂಡ್ ಹಿಯರಿಂಗ್‍ನೊಂದಿಗೆ 1 ವರ್ಷಗಳ ಅನುಭವ   ಹೊಂದಿದವರಿಗೆ  ಆದ್ಯತೆ ನೀಡಲಾಗುವುದು.  ಆರ್.ಸಿ.ಐ. ನವದೆಹಲಿ ಸಂಸ್ಥೆಯಲ್ಲಿ ಕಡ್ಡಾಯವಾಗಿ ಹೆಸರನ್ನು ನೊಂದಣಿ ಮಾಡಿಸಿರಬೇಕು.
     ಆಸಕ್ತರು ತಮ್ಮ ವೈಯಕ್ತಿಕ ಮಾಹಿತಿಗಳನ್ನು ಒಳಗೊಂಡಂತೆ ದಿನಾಂಕ: 05-09-2014ರ  ಸಂಜೆ 5.00  ಗಂಟೆಯ   ಒಳಗಾಗಿ ಅರ್ಜಿ ಹಾಗೂ ಇತರೆ ಅಗತ್ಯ ದಾಖಲಾತಿಗಳನ್ನು ದ್ವಿಪ್ರತಿಯಲ್ಲಿ “ಉಪ ನಿದರ್Éೀಶಕರು (ತರಬೇತಿ), ಅಂಧ  ಹಾಗೂ  ಶ್ರವಣ ದೋಷವುಳ್ಳ  ಮಕ್ಕಳ  ಶಿಕ್ಷಕರ ತರಬೇತಿ  ಕೇಂದ್ರ,   ಪುಲಿಕೇಶಿ ರಸ್ತೆ, ತಿಲಕ ನಗರ, ಮೈಸೂರು “ ಇಲ್ಲಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ  ದೂರವಾಣಿ ಸಂ: 0821-2491600 ಸಂಪರ್ಕಿಸುವುದು.
ತಾಲ್ಲೂಕುಮಟ್ಟದ ಕ್ರೀಡಾಕೂಟ
     ಮೈಸೂರು,ಆ.26.ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ 2014-15ನೇ ಸಾಲಿನ ಮೈಸೂರು ತಾಲ್ಲೂಕುಮಟ್ಟದ ರಾಜೀವ್ ಗಾಂಧಿ ಕ್ರೀಡಾ ಮತ್ತು ಖೇಲ್ ಅಭಿಯಾನ (ಆರ್‍ಜಿಕೆಎ) ಗ್ರಾಮೀಣ ಕ್ರೀಡಾಕೂಟವನ್ನು ದಿನಾಂಕ 30-08-2014 ರಂದು ಮೈಸೂರು ವಿಶ್ವವಿದ್ಯಾನಿಲಯದ ಓವೆಲ್ ಮೈದಾನದಲ್ಲಿ ಏರ್ಪಡಿಸಲಾಗಿರುತ್ತದೆ. ವಿಜೇತರಾದ ಕ್ರೀಡಾಪಟುಗಳಿಗೆ ಪ್ರಥಮ ಸ್ಥಾನ ಪಡೆದವರಿಗೆ ರೂ. 250-00, ದ್ವಿತೀಯ ಸ್ಥಾನ ಪಡೆದವರಿಗೆ ರೂ. 150-00, ತೃತೀಯ ಸ್ಥಾನ ಪಡೆದವರಿಗೆ ರೂ. 100-00 ಗಳಂತೆ ಬಹುಮಾನ ನೀಡಲಾಗುವುದು.
   ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ದಿನಾಂಕ 31-12-1998 ರ ನಂತರ ಜನಿಸಿರಬೇಕು ಹಾಗೂ ಶಾಲೆಯಿಂದ ದೃಢೀಕರಿಸಿ ಜನ್ಮ ದಿನಾಂಕದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಭಾಗವಹಿಸುವ ಕ್ರೀಡಾಪಟುಗಳು ಗ್ರಾಮ ಪಂಚಾಯಿತಿಯಿಂದ ವಾಸಸ್ಥಳ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
      ಮೈಸೂರು ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟ ಮತ್ತು ಆರ್‍ಜಿಕೆಎ ಮಹಿಳಾ ಕ್ರೀಡಾಕೂಟವನ್ನು ದಿನಾಂಕ 01-09-2014 ರಂದು ಮೈಸೂರು ವಿಶ್ವವಿದ್ಯಾನಿಲಯದ ಓವೆಲ್ ಮೈದಾನದಲ್ಲಿ ಏರ್ಪಡಿಸಲಾಗಿರುತ್ತದೆ.
ಕ್ರೀಡಾಕೂಟದಲ್ಲಿ ರಕ್ಷಣಾಪಡೆ, ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಲ್ಲ. ಒಬ್ಬ ಕ್ರೀಡಾಪಟು ಅಥವಾ ತಂಡ ಯಾವುದೇ ತಾಲ್ಲೂಕಿನಲ್ಲಿ ಒಂದು ಬಾರಿ ಭಾಗವಹಿಸಿದ ನಂತರ ಬೇರೆ ಯಾವುದೇ ತಾಲ್ಲೂಕಿನಿಂದ ದಸರಾ ಹಾಗೂ ಆರ್‍ಜಿಕೆಎ ಮಹಿಳಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಭಾಗವಹಿಸುವ ಸ್ಪರ್ಧಿಗಳಿಗೆ ಯಾವುದೇ ರೀತಿಯ ಭತ್ಯೆಯನ್ನು ಹಾಗೂ ಬಹುಮಾನಗಳನ್ನು ವಿತರಿಸಲಾಗುವುದಿಲ್ಲ, ಪ್ರಶಸ್ತಿ ಪತ್ರಗಳನ್ನು ಮಾತ್ರ ನೀಡಲಾಗುವುದು.
ಕ್ರೀಡಾಕೂಟ ನಡೆಯುವ  ದಿನಾಂಕಗಳಂದು ಕ್ರೀಡಾಪಟುಗಳು ಕ್ರೀಡಾಕೂಟ ನಡೆಯುವ ಸ್ಥಳಗಳಲ್ಲಿ ಬೆಳಿಗ್ಗೆ 9.00 ಗಂಟೆಯೊಳಗೆ ಕ್ರೀಡಾ ಸಂಘಟನೆಯ ವ್ಯವಸ್ಥಾಪಕರಲ್ಲಿ ವರದಿ ಮಾಡಿಕೊಳ್ಳಲು ಕೋರಲಾಗಿದೆ.ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 0821-2564179 ರ ಮೂಲಕ ಸಂಪರ್ಕಿಸಬಹುದಾಗಿದೆ.                                                             
ನೈರ್ಮಲ್ಯ ವಾಹಿನಿಯ ಪ್ರವಾಸ ಕಾರ್ಯಕ್ರಮ
   ಮೈಸೂರು,ಆ.26.ಮೈಸೂರು ಜಿಲ್ಲಾ ಪಂಚಾಯಿತಿಯ ನಿರ್ಮಲ ಭಾರತ್ ಅಭಿಯಾನದ ಮಾಹಿತಿ ಶಿಕ್ಷಣ ಮತ್ತು ಸಂವಹನ(ಐಇಸಿ) ಕಾರ್ಯಕ್ರಮದ ನೈರ್ಮಲ್ಯ ವಾಹಿನಿ ಸಂಚಾರಿ ವಾಹನವು 2014ರ ಸೆಪ್ಟೆಂಬರ್  ಮಾಹೆಯಲ್ಲಿ ಮೈಸೂರು, ತಿ.ನರಸೀಪುರ,  ನಂಜನಗೂಡು, ಹುಣಸೂರು, ಪಿರಿಯಾಪಟ್ಟಣ ಹಾಗೂ ಕೆ.ಆರ್.ನಗರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಸ್ವಚ್ಛತೆ, ನೈರ್ಮಲ್ಯ ಮತ್ತು ಆರೋಗ್ಯ ಕಾಪಾಡುವ ಬಗ್ಗೆ ಗ್ರಾಮೀಣ ಜನರಲ್ಲಿ ಸಮೂಹ ಮಾಧ್ಯಮಗಳ ಮೂಲಕ ಅರಿವು ಮೂಡಿಸಲಿದೆ.
    ಸೆಪ್ಟೆಂಬರ್ 1 ರಂದು ಮೈಸೂರು ತಾಲ್ಲೂಕಿನ ವರುಣ, ಸೆಪ್ಟೆಂಬರ್ 3 ರಂದು ದೂರ, ಸೆಪ್ಟೆಂಬರ್ 5 ರಂದು ನಾಗವಾಲ, ಸೆಪ್ಟೆಂಬರ್ 8 ರಂದು ನಾಗನಹಳ್ಳಿ, ಸೆಪ್ಟೆಂಬರ್ 10 ರಂದು ಹಾರೋಹಳ್ಳಿ(ಬಿ), ಸೆಪ್ಟೆಂಬರ್ 16 ರಂದು ಜಯಪುರ, ಸೆಪ್ಟೆಂಬರ್ 22 ರಂದು ದೂರ, ಸೆಪ್ಟೆಂಬರ್ 27 ರಂದು  ವರುಣ, ಸೆಪ್ಟೆಂಬರ್ 29 ರಂದು ಎಂ.ಬಿ.ಹಳ್ಳಿ, ಸೆಪ್ಟೆಂಬರ್ 30 ರಂದು ವರುಣ, ಸೆಪ್ಟೆಂಬರ್ 2 ರಂದು ತಿ.ನರಸೀಪುರದಲ್ಲಿರುವ  ತುರಗನೂರು, ಸೆಪ್ಟೆಂಬರ್ 4 ರಂದು ತುರಗನೂರು, ಸೆಪ್ಟೆಂಬರ್ 6 ರಂದು ತುರಗನೂರು, ಸೆಪ್ಟೆಂಬರ್ 9 ರಂದು ಸೋಸಲೆ, ಸೆಪ್ಟೆಂಬರ್ 11 ರಂದು ಮೂಗೂರು, ಸೆಪ್ಟೆಂಬರ್ 12 ರಂದು ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ, ಸೆಪ್ಟೆಂಬರ್ 19 ರಂದು ಬಿದರಗೂಡು, ಸೆಪ್ಟೆಂಬರ್ 23 ರಂದು ಹೆಮ್ಮರಗಾಲ,  ಸೆಪ್ಟೆಂಬರ್ 26 ರಂದು ಕೆ.ಎಸ್.ಹುಂಡಿ, ಸೆಪ್ಟೆಂಬರ್ 15 ರಂದು ಹುಣಸೂರಿನ ತಾಲ್ಲೂಕಿನ ದೊಡ್ಡಹೆಜ್ಜೂರು, ಸೆಪ್ಟೆಂಬರ್ 17 ರಂದು ಮರದೂರು, ಸೆಪ್ಟೆಂಬರ್ 18 ರಂದು ಕೆ.ಆರ್.ನಗರ ತಾಲ್ಲೂಕಿನ ಡೋರ್ನಹಳ್ಳಿ, ಸೆಪ್ಟೆಂಬರ್ 25 ರಂದು ಮಳಲಿ ಹಾಗೂ ಸೆಪ್ಟೆಂಬರ್ 20 ರಂದು ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 29 ರಂದು ಕುರಿಮಂಡಿ ಕಸಾಯಿಖಾನೆ ಬಂದ್
    ಮೈಸೂರು,ಆ.26.ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಕುರಿ, ಮೇಕೆ ಕಸಾಯಿಖಾನೆ ಮತ್ತು ಇತರೆ ಎಲ್ಲ ಮಾಂಸದ ಅಂಗಡಿಗಳನ್ನು ಗಣೇಶ್ ಚತುರ್ಥಿ ಹಬದ್ಬ ಪ್ರಯುಕ್ತ 2014 ರ ಆಗಸ್ಟ್ 29 ರಂದು ಮುಚ್ಚಲಾಗುತ್ತದೆ. ಮೈಸೂರು ನಗರದಲ್ಲಿ ಸದರಿ ದಿನದಂದು ಮಾಂಸದ ವ್ಯಾಪಾರವನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ ಹಾಗೂ ಎಲ್ಲ ಮಾರುಕಟ್ಟೆ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 28 ರಂದು ಜಿಲ್ಲಾ ಮಟ್ಟದ ಡೆಂಗ್ಯು ವಿರೋಧಿ ಮಾಸಾಚರಣೆ
      ಮೈಸೂರು,ಆ.26.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ  ಜಿಲ್ಲಾ ಮಟ್ಟದ ಡೆಂಗ್ಯೂ ವಿರೋಧಿ ಮಾಸಾಚರಣೆಯನ್ನು  ಆಗಸ್ಟ್ 28 ರಂದು ಬೆಳಿಗ್ಗೆ 11 ಗಂಟೆಗೆ ನಜûರ್‍ಬಾದ್ ಎನ್.ಪಿ.ಸಿ.ಆಸ್ಪತ್ರೆ ಆವರಣದ ವೈದ್ಯರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ವಾಸು ಅವರು ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಆರ್.ಸಿ.ಎಚ್. ಕಾರ್ಯಕ್ರಮ ಅಧಿಕಾರಿ ಡಾ| ಡಿ.ಎಸ್.ಉಮಾ ಅವರು ಡೆಂಗ್ಯೂ ರೋಗದ ಬಗ್ಗೆ ಅರಿವು ಭಾಷಣ ಮಾಡಲಿದ್ದಾರೆ.
     ಲೋಕೋಪಯೋಗಿ ಸಚಿವ ಡಾ| ಹೆಚ್.ಸಿ. ಮಹದೇವಪ್ಪ,  ಮೈಸೂರು ಮಹಾನಗರ ಪಾಲಿಕೆ ಪೂಜ್ಯ ಮಹಾ ಪೌರರಾದ ಎನ್.ಎಂ. ರಾಜೇಶ್ವರಿ ಸೋಮು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ| ಪುಷ್ಪಾವತಿ ಅಮರನಾಥ್, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್, ಪ್ರತಾಪ ಸಿಂಹ,  ಸಿ.ಎಸ್. ಪುಟ್ಟರಾಜು,  ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ,  ಕೆ.ವೆಂಕಟೇಶ್, ಎಂ.ಕೆ.ಸೋಮಶೇಖರ್, ಸಾ.ರಾ.ಮಹೇಶ್, ಚಿಕ್ಕಮಾದು, ಹೆಚ್.ಪಿ. ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್. ಧರ್ಮಸೇನ, ಮೈಸೂರು ಮಹಾನಗರ ಪಾಲಿಕೆ ಉಪಮೇಯರ್ ವಿ.ಶೈಲೇಂದ್ರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಜಿ. ಕುಮಾರ್, ಉಪಾಧ್ಯಕ್ಷರಾದ ಲೋಕಮಣಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸುವರು.
   ಅಂದು ಬೆಳಿಗ್ಗೆ 10 ಗಂಟೆಗೆ ವೈದ್ಯರ ಭವನದ ಮುಂಭಾಗದಿಂದ ಅರಿವು ಜಾಥಾ ನಡೆಯಲಿದ್ದು, ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಶಿವಮ್ಮ ಅವರು ಜಾಥಾಕ್ಕೆ ಚಾಲನೆ ನೀಡಲಿದ್ದಾರೆ.


ನೇರ ಫೋನ್ ಇನ್ ಕಾರ್ಯಕ್ರಮ
    ಮೈಸೂರು,ಆ.26.ಮೈಸೂರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕ ಕುಂದು ಕೊರತೆ ಅರ್ಜಿ ವಿಲೇವಾರಿ ಬಗ್ಗೆ ಆಗಸ್ಟ್ 27 ರಂದು ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರಗೆ ನೇರ ಫೋನ್-ಇನ್-ಕಾರ್ಯಕ್ರಮ ನಡೆಯಲಿದೆ. ಮೈಸೂರು ತಾಲ್ಲೂಕು ಕಚೇರಿಯ ವ್ಯಾಪ್ತಿಯಲ್ಲಿ ಸಮಸ್ಯೆ ಹೊಂದಿರುವ ಸಾರ್ವಜನಿಕರು ದೂರವಾಣಿ ಸಂಖ್ಯೆ 0821-2414433 ಗೆ ಕರೆ ಮಾಡಿ ತಮ್ಮ ಕುಂದುಕೊರತೆಗಳ ಬಗ್ಗೆ ಚರ್ಚಿಸಬಹುದಾಗಿದೆ ಎಂದು ಮೈಸೂರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment