Wednesday 20 August 2014

ಕೃಷ್ಣರಾಜಪೇಟೆ.ಸುದ್ದಿ.

ಕೃಷ್ಣರಾಜಪೇಟೆ. ತಾಲೂಕಿನ ಮೈಸೂರು-ಕೆ.ಆರ್.ಪೇಟೆ ಮುಖ್ಯ ರಸ್ತೆಯ ಅಗಸರಹಳ್ಳಿ ಗೇಟ್ ಬಳಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಡಿಕ್ಕಿಹೊಡೆದ ಪರಿಣಾಮವಾಗಿ ಆತನು ಸ್ಥಳದಲ್ಲಿಯೇ ಮೃತನಾದ ಘಟನೆಯು ಇಂದು ಸಂಜೆ ನಡೆದಿದೆ.
ತಾಲೂಕಿನ ಅಗಸರಹಳ್ಳಿ ಗ್ರಾಮದ ಸೋಮಣ್ಣ/ಅ/ ಲಕ್ಷ್ಮೇಗೌಡ(55) ಎಂಬ ವ್ಯಕ್ತಿಯೇ ಬಸ್ಸಿನ ಢಿಕ್ಕಿಯಿಂದ ಮೃತನಾದ ದುರ್ದೈವಿಯಾಗಿದ್ದಾನೆ. ಮೈಸೂರಿನಿಂದ ತಿಪಟೂರಿಗೆ ಹೋಗುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಚಾಲಕ ಶಿವರಾಮೇಗೌಡ ಬಸ್ಸಿನ ಬ್ರೇಕ್ ಫೇಲ್ ಆದ ಕಾರಣ ರಸ್ತೆಯ ಬದಿಯಲ್ಲಿ ಎಮ್ಮೆಯನ್ನು ಹಿಡಿದುಕೊಂಡು ಹೋಗುತ್ತಿದ್ದ ಲಕ್ಷ್ಮೇಗೌಡನಿಗೆ ಡಿಕ್ಕಿಹೊಡೆಸಿದ ಪರಿಣಾಮವಾಗಿ ಪಾದಚಾರಿಯು ಸ್ಥಳದಲ್ಲಿಯೇ ಮೃತನಾದನು.
ಘಟಬೆಯ ಬಗ್ಗೆ ದೂರು ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆಯ ಎಸ್‍ಐ ಧನರಾಜ್ ಆರೋಪಿ ಚಾಲಕನನ್ನು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬೈಕುಗಳ ನಡುವೆ ಮುಖಾಮುಖಿ ಢಿಕ್ಕಿ ನಾಲ್ವರಿಗೆ ತೀವ್ರಗಾಯ: ಪಟ್ಟಣದ ಹೊರವಲಯದ ಮೈಸೂರು ರಸ್ತೆಯ ಕಾಗುಂಡಿ ಹಳ್ಳದ ಬಳಿಯ ಮಯೂರ ಬಾರ್ ಎದುರು ಎರಡು ಬೈಕುಗಳಿಗೆ ನಡೆದ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಯುವಕರಿಗೆ ತೀವ್ರಪೆಟ್ಟು ಬಿದ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ತೆಗೆ ದಾಖಲಿಸಲಾಗಿದೆ.
ಬಣ್ಣೇನಹಳ್ಳಿ ಗ್ರಾಮದ ರಾಮಣ್ಣ ಅವರ ಮಗನಾದ ಸ್ವಾಮಿಯು(38) ತನ್ನ ಮೋಟಾರ್ ಬೈಕಿನಲ್ಲಿ ಬರುತ್ತಿದ್ದಾಗ ಟ್ರಿಬ್ಬಲ್ ರೈಡಿಂಗ್‍ನಲ್ಲಿ ಹೋಗುತ್ತಿದ್ದ ಪಟ್ಟಣದ ರಚನಾ ಐಟಿಐ ಕಾಲೇಜಿನ ವಿದ್ಯಾರ್ಥಿಗಳಾದ ಅಟ್ಟುಪ್ಪೆ ಗ್ರಾಮದ ಬಾಲರಾಜು(24) ಮಡುವಿನಕೋಡಿ ಗ್ರಾಮದ ಕಾರ್ತೀಕ್(23) ಮತ್ತು ಹೊಸಕೋಟೆ ಗ್ರಾಮದ ದಿಲೀಪ್(25) ಅವರಿದ್ದ ಬೈಕುಗಳ ನಡುವೆ ಮಯೂರ ಬಾರ್ ಎದುರು ಪರಸ್ಪರ ಡಿಕ್ಕಿ ಸಂಭವಿಸಿತು. ಕೂಡಲೇ 108 ಆಂಬ್ಯುಲೆನ್ಸ್ ಮೂಲಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಅಲ್ಲಿ ನಾಲ್ವರಿಗೂ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಪಟ್ಟಣ ಪೋಲಿಸ್ ಠಾಣೆಯ ಎಸ್‍ಐ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆಯು ಪ್ರಗತಿಯಲ್ಲಿದೆ. ಎಎಸ್‍ಐ ಮಾದಯ್ಯ, ಸರ್ಕಲ್ ಇನ್ಸ್‍ಪೆಕ್ಟರ್ ಕೆ.ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

No comments:

Post a Comment