Friday 15 August 2014

ಮಂಡ್ಯ-68 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ.ಸಚಿವ ಅಂಬರೀಶ್.





ಭಾರತವನ್ನು ಬ್ರಿಟೀಷರ ಆಡಳಿತದಿಂದ ಮುಕ್ತಿಗೊಳಿಸಲು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ ಹೋರಾಟ ವಿಶ್ವದ ಇತಿಹಾಸದಲ್ಲಿಯೇ ಮಾದರಿಯಾಗಿದೆ ಎಂದು ಸಚಿವ ಅಂಬರೀಶ್ ಹೇಳಿದರು.
ಸರ್ ಎಂ ವಿ ಕ್ರೀಡಾಂಗಣದಲ್ಲಿ 68 ನೇ ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು
ದೇಶದಾದ್ಯಂತ ಆಚರಿಸುತ್ತಿರುವ ಸ್ವಾತಂತ್ರ್ಯ ಹಬ್ಬದ ಈ ಶುಭ ಸಂದರ್ಭದಲ್ಲಿ ತಮ್ಮ ತ್ಯಾಗ, ಬಲಿದಾನಗಳ ಮೂಲಕ ಈ ದೇಶಕ್ಕೆ ಸ್ವಾತಂತ್ರ ದೊರಕಿಸಿಕೊಟ್ಟ ಎಲ್ಲ ಸ್ವಾತಂತ್ರ್ಯ ಸೇನಾನಿಗಳನ್ನು ನಾನು ಹೃತ್ಪೂರ್ವಕವಾಗಿ ಸ್ಮರಿಸುತ್ತೇನೆ.
ಯಾವುದೇ ರಕ್ತಪಾತವಿಲ್ಲದೆ, ಮದ್ದುಗುಂಡುಗಳ ಕಾಳಗವಿಲ್ಲದೆ ಸತ್ಯ, ಅಹಿಂಸೆ ಹಾಗೂ ಉಪವಾಸ ಸತ್ಯಾಗ್ರಹದಂತಹ ಅಹಿಂಸಾತ್ಮಕ ಅಸ್ತ್ರಗಳ ಮೂಲಕ ಬ್ರಿಟೀಷರು ತಾವಾಗಿಯೇ ದೇಶ ಬಿಟ್ಟು ಹೋಗುವಂತೆ ಮಾಡಿದ ವಿನೂತನ ಹೋರಾಟವಿದು.
ಈ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಮುಖಂಡತ್ವದಲ್ಲಿ ಅನೇಕ ರಾಷ್ಟ್ರ ಪ್ರೇಮಿಗಳು ಕೈಜೋಡಿಸಿದರು. ಇವರುಗಳ ಹಿಂದೆ ಇಡೀ ದೇಶ ಅಖಂಡವಾಗಿ ನಿಂತು ಬೆಂಬಲ ನೀಡಿತು.
ಇದರಿಂದಾಗಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವುದು ಅನಿವಾರ್ಯವಾಯಿತು.
ಹೀಗೆ ಪಡೆದ ಸ್ವಾತಂತ್ರ್ಯಾ ನಂತರ ಭಾರತವು ಇಡೀ ವಿಶ್ವದಲ್ಲಿಯೇ ವಿನೂತನವಾದ ಪ್ರಜಾಪ್ರಭುತ್ವ ಮಾದರಿಯ ಆಡಳಿತ ವ್ಯವಸ್ಥೆಯನ್ನು ಹೊಂದಲು ತನ್ನದೇ ಆದ ಸಂವಿಧಾನವನ್ನು ರೂಪಿಸಿಕೊಂಡಿತು.
ಜನರಿಗಾಗಿ ಜನರಿಂದ ಜನರೇ ನಡೆಸುವ ಈ ಆಡಳಿತ ವ್ಯವಸ್ಥೆ ಇಡೀ ವಿಶ್ವದಲ್ಲಿಯೇ ಮಾದರಿಯಾಗಿದೆ.


ಸ್ವಾತಂತ್ರ್ಯ ಗಳಿಸಿದ ಕಳೆದ ಏಳು ದಶಕಗಳಲ್ಲಿ ದೇಶವು ಹಲವು ಕ್ಷೇತ್ರಗಳಲ್ಲಿ ಗಣನೀಯವಾದ ಸಾಧನೆ ಮಾಡಿದೆ.
ದೇಶವಾಸಿಗಳಿಗೆಲ್ಲಾ ಕಡ್ಡಾಯ ಶಿಕ್ಷಣವನ್ನು ನೀಡಿ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಲಾಗಿದೆ.
ಕೃಷಿ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿನ ಇತರ ದೇಶಗಳಿಗೆ ಸರಿಸಾಟಿಯಾದ ಸಾಧನೆ ಮಾಡಿದೆ.
ದೇಶದಲ್ಲಿನ ಬಡತನ, ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸಲು ಹಲವಾರು ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹರಡಿರುವ ವಿಶಾಲ ಭಾರತದಲ್ಲಿ ಹಲವು ಭಾಷೆ, ಹಲವು ಧರ್ಮ, ಹಲವು ಸಾಂಸ್ಕøತಿಕ ಆಚರಣೆಗಳು ಹಲವು ಭೌಗೋಳಿಕ ಸನ್ನಿವೇಶಗಳಿಂದ ಕೂಡಿದ್ದರೂ ವಿವಿಧತೆಯಲ್ಲಿ ಏಕತೆ (Uಟಿiಣಥಿ Iಟಿ ಆiveಡಿsiಣಥಿ)  ಎಂಬ ತತ್ವದಲ್ಲಿ ನಂಬಿಕೆ ಇರಿಸಿರುವ ನಾವು, ನಾವೆಲ್ಲಾ ಭಾರತೀಯರು ಎಂಬ ಭಾವನೆಯಿಂದ ಒಂದಾಗಿ ಬಾಳುತ್ತಿದ್ದೇವೆ.
ಹೀಗಿದ್ದಾಗ್ಯೂ ದೇಶದ ಏಕೆತೆ ಹಾಗೂ ಅಖಂಡತೆಯನ್ನು ಶಿಥಿಲಗೊಳಿಸುವ ವಿಚ್ಛಿದ್ರಕಾರಕ ಶಕ್ತಿಗಳು ಆಗ್ಗಿಂದಾಗ್ಗೆ ತಲೆ ಎತ್ತಿ, ದೇಶದಲ್ಲಿ ಕೋಮು ಸೌಹಾರ್ದಕ್ಕೆ ಭಂಗ ತರುವ ಪ್ರಯತ್ನ ಮಾಡುತ್ತಿರುವುದು ಆತಂಕದ ವಿಷಯವಾಗಿದೆ.. 
ಭಾರತ ದೇಶ ಪ್ರಾಚೀನ ಕಾಲದಿಂದಲೂ ಶಾಂತಿ, ಸಹಬಾಳ್ವೆಗೆ ಹೆಸರುವಾಸಿಯಾಗಿದೆ. ನೆರೆಹೊರೆಯ ದೇಶಗಳೊಡನೆ ಉತ್ತಮ ಬಾಂಧವ್ಯ ಹೊಂದಲು ಬದ್ದವಾಗಿದೆ.

ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಯಾವುದೇ ಜಾತಿ, ಮತ ಬೇಧಗಳನ್ನು ಮಾಡುವ ಶಕ್ತಿಗಳನ್ನು ದಮನ ಮಾಡಿ ಸರ್ವ ಧರ್ಮೀಯರು ಪ್ರೀತಿ ಹಾಗೂ ಸೌಹಾರ್ದತೆಯಿಂದ ಬಾಳಿ ಸುಭದ್ರವಾದ ಭಾರತವನ್ನು ನಿರ್ಮಿಸುವ ಸಂಕಲ್ಪ ಮಾಡಬೇಕಾಗಿದೆ.
ನಮ್ಮ ದೇಶದ ಮೊದಲ ಪ್ರಧಾನ ಮಂತ್ರಿಗಳಾದ ದಿವಂಗತ ಜವಹರ್‍ಲಾಲ್ ನೆಹರು ಅವರು ‘ಕೇವಲ ಸಂವಿಧಾನ ಹಾಗೂ ಕಾನೂನುಗಳಿಂದ ದೇಶ ಕಟ್ಟಲು ಸಾಧ್ಯವಿಲ್ಲ; ಪ್ರತಿಯೊಬ್ಬ ಪ್ರಜೆಯು ದೇಶ ಕಟ್ಟುವ ಕಾಯಕದಲ್ಲಿ ತೊಡಗಿದಾಗ ಮಾತ್ರ ಸ್ವಾತಂತ್ರದ ಉದ್ದೇಶ ಸಫಲಗೊಳ್ಳಲು ಸಾಧ್ಯ’ ಎಂದು ಹೇಳಿರುವ ಮಾತುಗಳನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬಹುದು.
 ಒಬ್ಬ ಮಹಿಳೆ ಮಧ್ಯರಾತ್ರಿಯಲ್ಲಿ ನಿರ್ಭಯಳಾಗಿ ಓಡಾಡುವಂತಹ ವಾತಾವರಣ ಸೃಷ್ಟಿಯಾದಾಗ ಮಾತ್ರ ನಮಗೆ ನಿಜವಾದ ಸ್ವಾತಂತ್ರ ಸಿಕ್ಕಿದಂತಾಗುತ್ತದೆ ಎಂಬ ಮಹಾತ್ಮಾ ಗಾಂಧೀಜಿಯವರ ಮಾತು ಪ್ರಸ್ತುತ ಸಂದರ್ಭದಲ್ಲಿ ಅರ್ಥಪೂರ್ಣವಾಗಿದೆ.
ಸ್ವಾತಂತ್ರ್ಯಾ ನಂತರ ಬಂದ ಎಲ್ಲಾ ಸರ್ಕಾರಗಳು ಹಲವಾರು ಜನಪರ ಯೋಜನೆಗಳ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಲು ತಮ್ಮದೇ ಆದ ಪ್ರಯತ್ನಗಳನ್ನು ಮಾಡುತ್ತಾ ಬಂದಿವೆ.
ಕಳೆದ ವರ್ಷ ತಮ್ಮೆಲ್ಲರ ಆಶೀರ್ವಾದದಿಂದ ಅಸ್ತಿತ್ವಕ್ಕೆ ಬಂದ ನಮ್ಮ ಸರ್ಕಾರ ಹಲವಾರು ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ.
ರಾಜ್ಯದ ಯಾವುದೇ ಒಬ್ಬ ವ್ಯಕ್ತಿಯೂ ಹಸಿವಿನಿಂದ ನರಳಬಾರದು ಎಂಬ ಆಶಯದಿಂದ ಪ್ರತಿಯೊಂದು ಬಡ ಕುಟುಂಬಕ್ಕೂ ಪ್ರತಿ ತಿಂಗಳು ಪ್ರತಿ ಕೆ.ಜಿ ಅಕ್ಕಿಗೆ ರೂ.1.00 ದರದಲ್ಲಿ 30 ಕೆ.ಜಿ ಅಕ್ಕಿ ನೀಡುವ ಕ್ರಾಂತಿಕಾರಕ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ.
ಶಿಕ್ಷಣಕ್ಕೆ ಪ್ರಥಮ ಆಧ್ಯತೆ ನೀಡಿರುವ ನಮ್ಮ ಸರ್ಕಾರ 10ನೇ ತರಗತಿವರೆಗೆ ಎಲ್ಲಾ ಮಕ್ಕಳಿಗೂ ಉಚಿತ ಪುಸ್ತಕ, ಬಟ್ಟೆ, ಮಧ್ಯಾಹ್ನದ ಬಿಸಿಊಟದ ಜೊತೆಗೆ ಹಾಲು ನೀಡುವ ಕಾರ್ಯಕ್ರಮ ರೂಪಿಸಿದೆ.
ಹಿಂದುಳಿದವರು, ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತರು ವಿವಿಧ ಯೋಜನೆಗಳಡಿ ಪಡೆದಿದ್ದ ಸಾಲದ ಮೊತ್ತವನ್ನು ಬಡ್ಡಿ ಸಮೇತ ಮನ್ನಾ ಮಾಡಿದೆ.
2014-15ನೇ ಸಾಲಿನ ಬಜೆಟ್‍ನಲ್ಲಿ ಅನೇಕ ವರ್ಷಗಳಿಂದ ವಿವಿಧ ವಸತಿ ಯೋಜನೆಗಳಡಿಯಲ್ಲಿ ವಸತಿ ಹೀನ ಬಡವರು ಹಾಗೂ ಕೊಳಚೆ ನಿವಾಸಿಗಳು ಮನೆ ನಿರ್ಮಿಸಿಕೊಳ್ಳಲು ಪಡೆದಿದ್ದ ರೂ. 2,718 ಕೋಟಿ ಸಾಲದ ಹಣವನ್ನು ಬಡ್ಡಿ ಸಮೇತ ಮನ್ನಾ ಮಾಡಿದ್ದು, ಇದರಿಂದ ಸುಮಾರು 11.41 ಲಕ್ಷ ಕುಟುಂಬಗಳಿಗೆ ನೆರವಾಗಿದೆ.
ರಾಜ್ಯವನ್ನು ಗುಡಿಸಲು ಮುಕ್ತ ರಾಜ್ಯವಾಗಿಸುವ ಆಶಯದಿಂದ ಬಡವರಿಗಾಗಿ ಪ್ರತಿ ವರ್ಷ 3.00 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯಂತೆ ಕಳೆದ ವರ್ಷ 3.17 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ.
ಮನೆಗಳ ನಿರ್ಮಾಣಕ್ಕೆ ಬಡವರಿಗೆ ನೀಡುತ್ತಿದ್ದ ಸಹಾಯಧನವನ್ನು ರೂ. 75 ಸಾವಿರದಿಂದ ರೂ.1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಈ ಉದ್ದೇಶಕ್ಕಾಗಿ ಕಳೆದ ಸಾಲಿನಲ್ಲಿ ಎರಡು ಸಾವಿರ ಕೋಟಿ ರೂ ವೆಚ್ಚಮಾಡಲಾಗಿದೆ.
2014-15ನೇ ಸಾಲಿನಲ್ಲಿ ರಾಜ್ಯದಲ್ಲಿ ವಾಸಿಸುತ್ತಿರುವ ಮತೀಯ ಗಲಭೆ ಹಾಗೂ ಚಳುವಳಿಗಳಿಂದ ಸಂತ್ರಸ್ಥರು, ದೌರ್ಜನ್ಯಕ್ಕೆ ಒಳಗಾದವರು, ಕುಷ್ಠರೋಗದಿಂದ ಗುಣಮುಖರಾದವರು, ಎಚ್‍ಐವಿ ಸೋಂಕಿತರು, ದೇವದಾಸಿಯರು, ಅಲೆಮಾರಿ ಜನಾಂಗದವರು, ಜೀತವಿಮುಕ್ತರು, ವಿಧವೆಯರು ಮುಂತಾದ ವಿಶೇಷ ವರ್ಗದ ಜನರಿಗೆ ಹತ್ತು ಸಾವಿರ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಹೈನುಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ಪ್ರತಿಯೊಬ್ಬ ಹಾಲು ಉತ್ಪಾದಕನಿಗೆ ಪ್ರತಿ ಲೀಟರ್‍ಗೆ ನಾಲ್ಕು ರೂ. ಸಹಾಯಧನ ನೀಡಲಾಗುತ್ತಿದೆ.
ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಮೈತ್ರಿ ಯೋಜನೆ ವಿಚ್ಛೇದಿತ ಮತ್ತು ಅವಿವಾಹಿತ ಮಹಿಳೆಯರಿಗಾಗಿ ಮನಸ್ವಿನಿ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಿದೆ.
ಹೀಗೆ ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ.
ಮಂಡ್ಯ ಜಿಲ್ಲೆ ರೈತಾಪಿ ಜಿಲ್ಲೆ. ಕೃಷಿಯೇ ಇಲ್ಲಿನ ಪ್ರಧಾನ ಕಸುಬು. ರಾಜ್ಯದಲ್ಲಿಯೇ ಸಕ್ಕರೆ ಜಿಲ್ಲೆ ಎಂದು ಹೆಸರಾಗಿದೆ,
 ಆದರೆ ನಮ್ಮ ರೈತರಿಗೆ ಅನೇಕ ಸಮಸ್ಯೆಗಳು ಇರುವುದು ತಿಳಿದಿದೆ. ಕಬ್ಬು ಬೆಳೆಗಾರರಿಗೆ ಯೋಗ್ಯ ಬೆಲೆ ದೊರಕಬೇಕಾಗಿದೆ.
ಸಕ್ಕರೆ ಕಾರ್ಖಾನೆಗಳು ರೈತರಿಂದ ಪಡೆದ ಕಬ್ಬಿಗೆ ಹಣ ಸಂದಾಯ ಮಾಡುವಲ್ಲಿಯೂ ವಿಳಂಬವಾಗಿ ರೈತರಿಗೆ ತೊಂದರೆಯಾಗಿದೆಎಂದ ಅವರು
ಈ ವರ್ಷ ಮುಂಗಾರು ವಿಳಂಬವಾಗಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡವು.
ಜಿಲ್ಲೆಯಲ್ಲಿ ಸಮರ್ಪಕ ಮಳೆ ಬೀಳದೆ, ಅಭಾವ ಪರಿಸ್ಥಿತಿ ನಿರ್ಮಾಣವಾಗಿದೆ.
ಇವೆಲ್ಲಾ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಸಕಾಲಿಕ ಕ್ರಮ ಕೈಗೊಂಡಿದೆ.
ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಎಚ್ಚರಿಕೆ ನೀಡಿ, ಬಾಕಿ ಹಣ ಪಾವತಿಸಲು ಏರ್ಪಾಟಾಗಿದೆ.
ಬರ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಡಳಿತ ಎಲ್ಲ ರೀತಿಯಲ್ಲಿಯೂ ಕ್ರಮ ಕೈಗೊಂಡಿದೆ.
ಕೃಷ್ಣರಾಜ ಸಾಗರ ಜಲಾಶಯದಿಂದ ಎಲ್ಲಾ ಕಾಲುವೆಗಳಿಗೂ ನೀರು ಹರಿಸಲಾಗಿದೆ.
ವಿಶ್ವೇಶ್ವರಯ್ಯ ನಾಲೆಯ ಹುಲಿಕೆರೆ ಸುರಂಗದಲ್ಲಿ ಕುಸಿತ ಉಂಟಾಗಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು, ಕೇವಲ 50 ದಿನಗಳ ದಾಖಲೆ ಅವಧಿಯಲ್ಲಿ ದುರಸ್ಥಿ ಕಾರ್ಯವನ್ನು ಪೂರ್ಣಗೊಳಿಸಿ, ನಾಲೆಗೆ ನೀರು ಹರಿಸಲಾಯಿತು.
ಇದರಿಂದ ವಿ.ಸಿ. ನಾಲಾ ಬಯಲಿನಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭಗೊಂಡಿವೆ. ಜೊತೆಗೆ ಮಂಡ್ಯ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಕಾರ್ಯವು ಪ್ರಾರಂಭವಾಗಿದೆ.
ಜಿಲ್ಲೆಯಲ್ಲಿ ನೀರಾವರಿಗೆ ಪೂರಕವಾಗುವಂತೆ ವಿಶ್ವೇಶ್ವರಯ್ಯ ನಾಲಾ ಜಾಲದ ಅಭಿವೃದ್ಧಿಯನ್ನು ಕೈಗೊಂಡು ಮೊದಲನೇ ಹಂತದಲ್ಲಿ 205 ಕಿ.ಮೀ.ಗಳ ನಾಲೆ ಅಭಿವೃದ್ಧಿಪಡಿಸಿದ್ದು, ರೂ.122.00 ಕೋಟಿ ವೆಚ್ಚಮಾಡಲಾಗಿದೆ.
ಉಳಿದ 320.ಕಿ.ಮೀ ಉದ್ದದ ನಾಲಾ ಅಭಿವೃದ್ಧಿ ಕಾರ್ಯವನ್ನು ರೂ.200.00 ಕೋಟಿಗಳಲ್ಲಿ ಈ ಸಾಲಿನಲ್ಲಿ ಕೈಗೊಳ್ಳಲಾಗುತ್ತಿದೆ. ಇದರಿಂದ ಜಲಾನಯನ ಪ್ರದೇಶದ ಕಡೆಯ ಭಾಗಗಳಿಗೂ ಸಮರ್ಪಕ ನೀರು ಪೂರೈಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹಾಗೆಯೇ ನದಿ ನಾಲೆಗಳಾದ ವಿರಿಜಾ ನಾಲೆ, ರಾಮಸ್ವಾಮಿ ನಾಲೆ, ಚಿಕ್ಕದೇವರಾಯ ನಾಲೆಗಳ ದುರಸ್ಥಿ ಕಾರ್ಯವನ್ನು ಸುಮಾರು ರೂ.250.00 ಕೋಟಿಗಳ ಅಂದಾಜಿನಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಜಿಲ್ಲೆಯ ಎಲ್ಲಾ ಭಾಗಗಳಿಗೂ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಕಾವೇರಿ ನದಿ ಹಾಗೂ ಇನ್ನಿತರ ಜಲಮೂಲಗಳಿಂದ ಶಾಶ್ವತವಾದ ಸುರಕ್ಷಿತ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಲಾಗಿದ್ದು, ಮುಂದಿನ 4 ವರ್ಷಗಳಲ್ಲಿ ಈ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು.
ಜಿಲ್ಲೆಯಲ್ಲಿ ವಸತಿ ಸಮಸ್ಯೆಯನ್ನು ಪರಿಹರಿಸಲು ಎಲ್ಲಾ ವಸತಿ ರಹಿತರ ಸಮೀಕ್ಷೆಯನ್ನು ಕೈಗೊಂಡು ಪ್ರತಿಯೊಬ್ಬ ಗುಡಿಸಲು ವಾಸಿ/ವಸತಿ ಹೀನರಿಗೆ ನಿವೇಶನ ಹಾಗೂ ವಸತಿ ಸೌಕರ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ.
ಜಿಲ್ಲೆಯಲ್ಲಿರುವ ಎಲ್ಲಾ ಕೊಳಚೆ ಪ್ರದೇಶಗಳ ಅಭಿವೃದ್ದಿಗೂ ಕಾರ್ಯಕ್ರಮ ರೂಪಿಸಲಾಗಿದೆ.
ಮಂಡ್ಯ ನಗರದ ಎಲ್ಲಾ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ರಾಜೀವ್ ಆವಾಸ್ ಯೋಜನೆಯಡಿ ರೂ.72.00 ಕೋಟಿಗಳ ಯೋಜನೆ ಮಂಜೂರಾಗಿದ್ದು, ಸದ್ಯದಲ್ಲಿಯೇ ಅನುಷ್ಠಾನ ಕಾರ್ಯ ಪ್ರಾರಂಭಿಸಲಾಗುವುದು.
ಈಗಾಗಲೇ ಘೋಷಿಸಿರುವಂತೆ ಮಂಡ್ಯ ನಗರದ ವಸತಿ ಬೇಡಿಕೆಯನ್ನು ಆಧರಿಸಿ, ತೂಬಿನಕೆರೆ ಕೈಗಾರಿಕಾ ವಲಯಕ್ಕೆ ಹೊಂದಿಕೊಂಡಂತೆ ಸ್ಯಾಟಲೈಟ್ ಟೌನ್ ನಿರ್ಮಾಣ ಕಾರ್ಯಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅಲ್ಲಿನ ರೈತರಿಗೆ ತೊಂದರೆಯಾಗದಂತೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂಮಿ ಪಡೆದು, ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು.
ಮಂಡ್ಯ ನಗರದ ಆರ್ಥಿಕವಾಗಿ ಹಿಂದುಳಿದ ಹಾಗೂ ಕಡಿಮೆ ಆದಾಯವುಳ್ಳ ಜನರಿಗೆ ವಿಶೇಷ ವಸತಿ ಯೋಜನೆಯೊಂದನ್ನು ರೂಪಿಸುತ್ತಿದ್ದು, ಈ ವರ್ಷದಲ್ಲಿ ಅನುಷ್ಠಾನಗೊಳಿಸಲಾಗುವುದು.
ನಗರ ಪ್ರದೇಶಗಳ ಅಭಿವೃದ್ದಿಗೂ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ಮಂಡ್ಯ, ಶ್ರೀರಂಗಪಟ್ಟಣ ಹಾಗೂ ಮಳವಳ್ಳಿ ಪಟ್ಟಣಗಳ ವ್ಯಾಪ್ತಿಯಲ್ಲಿ  UIಆSSಒಖಿ  ಯೋಜನೆ ಅಡಿ 24ಘಿ7 ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಗೆ ಯೋಜನೆ ರೂ.174.00 ಕೋಟಿಗಳ ಯೋಜನೆ ಮಂಜೂರಾಗಿದ್ದು, ಈ ಸಾಲಿನಲ್ಲಿ ಅನುಷ್ಠಾನ ಪ್ರಾರಂಭಿಸಲಾಗುವುದು. ಹಾಗೆಯೇ ಎಲ್ಲಾ ನಗರ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು.
ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕೆ ವಿಶೇಷ ಮಹತ್ವ ನೀಡಿದ್ದು, ಈಗಾಗಲೇ ಘೋಷಿಸಿದಂತೆ ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಕೇಂದ್ರ ಮಂಡ್ಯ ನಗರದಲ್ಲಿ ಕಾರ್ಯಾರಂಭ ಮಾಡಿದೆ. ಕೇಂದ್ರೀಯ ವಿದ್ಯಾಲಯ ಈ ಸಾಲಿನಿಂದ ಪ್ರಾರಂಭವಾಗಲಿದೆ.
 ಈ ಎರಡೂ ಪ್ರತಿಷ್ಠಿತ ವಿದ್ಯಾ ಕೇಂದ್ರಗಳಿಗೆ ಬಿ.ಹೊಸೂರು ಬಳಿ ಇರುವ 30 ಎಕರೆ ಭೂಮಿಯನ್ನು ಮಂಜೂರು ಮಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ.
ಮಂಡ್ಯ ನಗರದಲ್ಲಿ ಸಂವಿಧಾನ ಶಿಲ್ಪಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ಈ ಹಿಂದೆಯೇ ಪ್ರಾರಂಭವಾಗಿದ್ದರೂ ನಂತರದಲ್ಲಿ ಆದ ವಿಸ್ತøತ ಅಂದಾಜಿನಿಂದಾಗಿ ಈವರೆಗೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಿದ್ದು, ಅವಶ್ಯವಿರುವ ಪೂರ್ಣ ಅನುದಾನ ಒದಗಿಸಿ, ಈ ಭವನವನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲಾಗುವುದು.
ಮಂಡ್ಯ ನಗರಕ್ಕೆ ಈ ಸಾಲಿನ ಬಜೆಟ್‍ನಲ್ಲಿ ಕೇಂದ್ರ ಸರ್ಕಾರದ ನೆರವಿನಡಿ ಉನ್ನತ ಚಿಕಿತ್ಸೆ ನೀಡುವ ಕ್ಯಾನ್ಸರ್ ಆಸ್ಪತ್ರೆ ಸಹ ಮಂಜೂರಾಗಿದೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆ ಸ್ಥಾಪನೆಯಾಗಿ ಇದೇ ತಿಂಗಳು 27ಕ್ಕೆ 75 ವರ್ಷಗಳು ತುಂಬುತ್ತಿವೆ. ಆಧುನಿಕ ಮಂಡ್ಯ ಜಿಲ್ಲೆಯ ನಿರ್ಮಾತೃ ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ ದೂರದೃಷ್ಟಿಯ ಫಲವಾಗಿ ಮಂಡ್ಯ ಜಿಲ್ಲೆ 1939ರಲ್ಲಿ ಸ್ಥಾಪನೆಯಾಯಿತು.
ಕನ್ನಂಬಾಡಿ ಕಟ್ಟೆ, ಮೈಸೂರು ಸಕ್ಕರೆ ಕಾರ್ಖಾನೆ, ವಿಶ್ವೇಶ್ವರಯ್ಯ ಕೃಷಿ ಫಾರಂ ಹೀಗೆ ಹಲವು ಕೊಡುಗೆಗಳನ್ನು ನೀಡಿದ ಮಹಾರಾಜರು ಮಂಡ್ಯ ಜಿಲ್ಲೆ ಸ್ಥಾಪನೆಗೂ ಕಾರಣಕರ್ತರಾದರು.
ಈ ಮಹಾಪುರುಷನ ಸ್ಮರಣಾರ್ಥ ಅವರ ಪ್ರತಿಮೆ ಸ್ಥಾಪನೆ ಜೊತೆಗೆ ಮಂಡ್ಯ ಜಿಲ್ಲೆಯ ಅಮೃತ ಮಹೋತ್ಸವವನ್ನು ಆಚರಿಸುವ ಸಲುವಾಗಿ ಈ ಸಾಲಿನ ಬಜೆಟ್‍ನಲ್ಲಿ ರೂ.2.00 ಕೋಟಿ ಒದಗಿಸಲಾಗಿದೆ.
ದಸರಾ ಹಬ್ಬ ಮುಗಿದ ನಂತರ ನವೆಂಬರ್ ತಿಂಗಳಿನಲ್ಲಿ ಜಿಲ್ಲೆಯ ಅಮೃತ ಮಹೋತ್ಸವವನ್ನು ಇಡೀ ಜಿಲ್ಲೆಯ ಜನತೆಯನ್ನು ತೊಡಗಿಸಿ, ಅದ್ದೂರಿಯಾಗಿ ಅಚರಿಸಲಾಗುವುದು. ಈ ಸಂಬಂಧ ಈಗಾಗಲೇ ಪ್ರಕ್ರಿಯೆಗಳು ಪ್ರಾರಂಭವಾಗಿವೆÉ.
ಒಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಹಿರಿಯರ, ಚುನಾಯಿತ ಪ್ರತಿನಿಧಿಗಳ  ಮತ್ತು ನಾಗರೀಕರ ನೆರವು ಪಡೆದು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸುತ್ತಾ, ಮತ್ತೊಮ್ಮೆ ಎಲ್ಲರಿಗೂ ಸ್ವಾತಂತ್ರೋತ್ಸವದ ಶುಭಾಷಯಗಳನ್ನು ಕೋರಿ, ನನ್ನ ಮಾತುಗಳನ್ನು ಮುಗಿಸುತ್ತೇನೆ.



¸ÀA¸Àvï ¸ÀzÀ¸ÀågÁzÀ ²æà ¹.J¸ï.¥ÀÄlÖgÁdÄgÀªÀgÉ,
f¯Áè ¥ÀAZÁAiÀÄvï CzsÀåPÀëgÁzÀ ²æêÀÄw ªÀÄAdļÁ ¥ÀgÀªÉÄñï,
£ÀUÀgÀ ¸À¨sÉ CzsÀåPÀëgÁzÀ ²æà ©.¹zÀÝgÁdÄ É,
ªÀÄAqÀå vÁ®ÆèPÀÄ ¥ÀAZÁAiÀÄvï CzsÀåPÀëgÁzÀ ²æà n.¹. ±ÀAPÀgÉÃUËqÀ ,ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್.ಪೊಲೀಸ್ ವರಿಸ್ಟಾಧಿಕಾರಿ ಭೂಷಣ್ ಜಿ ಬೋರಸೆ,ಜಿ.ಪಂ.ಉಪಕಾರ್ಯದರ್ಶಿ ಎನ್.ಡಿ.ಪ್ರಕಾಶ್, Éà ¸ÁévÀAvÉÆæöåÃvÀìªÀ PÁAiÀÄðPÀæªÀÄzÀ°è G¥À¹ÜvÀjದ್ದರು

No comments:

Post a Comment