Saturday 23 August 2014

ಹೆಚ್.ಡಿ.ಕೋಟೆ-ಯು.ಆರ್.ಅನಂತ ಮೂರ್ತಿಗೆ ಶ್ರದಾಂಜಲಿ.

ಹೆಚ್.ಡಿ.ಕೋಟೆ,ಆ23- ಸಮಾಜದ ಯೋವುದೇ ವಿಚಾರಗಳ ಬಗ್ಗೆ ಅಭಿಪ್ರಾಯಗಳನ್ನು  ಯು.ಆರ್.ಅನಂತಮೂರ್ತಿ  ದೂರದರ್ಶಿತ್ವ ಮತ್ತು ಬುದ್ದಿವಂತಿಕೆಯಿಂದ ವ್ಯಕ್ತಪಡಿಸುತ್ತಿದ್ದ ಅಪರೂಪದ ಸಾಹಿತಿಯಾಗಿದ್ದರು ಎಂದು ಶಾಸಕ ಚಿಕ್ಕಮಾದು ಹೇಳಿದರು.
ಪಟ್ಟಣದ ಬಾಪೂಜಿ ವೃತ್ತದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿವಿದ ಸಂಘಟನೆಗಳಿಂದ  ಎರ್ಪಡಿಸಿದ್ದ  ಶ್ರದ್ದಾಂಜಲಿ ಸಭೆಯಲ್ಲಿ ಶಾಸಕ ಚಿಕ್ಕಮಾದು ಮಾತನಾಡಿ ಎಷ್ಟೇ ಉನ್ನತಸ್ಥಾನದಲ್ಲಿ ಇರಲಿ ಯು.ಆರ್.ಅನಂತಮೂರ್ತಿ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹೇಳುವಂತ ಮನೋಭಾವ ಅವರಲ್ಲಿತ್ತು, ಅದರಿಂದ ಬಂದಂತಹ ಟೀಕೆ ಟಿಪ್ಪಣಿಗಳಿಗೆ ಹೆದರುತ್ತಿರಲಿಲ್ಲ. ಅವರ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯದ ಸಾರವನ್ನು ವಿಶ್ವಕ್ಕೆ ಪಸರಿಸಲಾಯಿತು. ಸಾಮಾಜಿಕ ಚಿಂತನೆಯವರಾಗಿದ್ದ ಅವರು ತಮ್ಮ ಬರಹದ ಮೂಲಕ ಸಮಾಜದ ಬದಲಾವಣೆಗೆ ಪ್ರಯತ್ನಪಟ್ಟರು
ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಕನ್ನಡಪ್ರಮೋದ ಮಾತನಾಡಿ ಯು.ಆರ್.ಅನಂತಮೂರ್ತಿಯವರು ಮೈಸೂರು ವಿವಿಯಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ ಇಲ್ಲಿಯೇ ಹೆಚ್ಚು ಕಾಲ ಜೀವಿಸಿದರು. ಹಾಗೇ ನಮ್ಮ ತಾಲ್ಲೂಕಿಗೂ ಅವರ ಒಡನಾಟವಿತ್ತು, ತಾಲ್ಲೂಕಿನ ಆಲನಹಳ್ಳಿಯ ಅವರ ತೋಟದಲ್ಲಿ 2 ಬಾರಿ ಭೇಟಿಯಾದ ಸಂದರ್ಭವನ್ನು ಸ್ಮರಿಸಿದರು. ಬೇಟಿ ಸಂದರ್ಭದಲ್ಲಿ ಚಿಕ್ಕವರು, ದೊಡ್ಡವರು ಎಂಬ ಭೇದವಿಲ್ಲದೆ ತಮ್ಮ ವಿಚಾರಗಳನ್ನು ಮುಕ್ತವಾಗಿ ಹೇಳುತ್ತಿದ್ದರು.
ಅವರ ಸಹಿತ್ಯದ ವಿಚಾರಧಾರೆ ಬಗ್ಗೆ ಶರಣ ಸಾಹಿತ್ಯ ಪರಿಷತ್, ಮತ್ತು ಕಸ್ತೂರಿ ಸಂಸ್ಥೆ  ಅಧ್ಯಕ್ಷ ಕುಮಾರಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಆರ್.ಮಹೇಶ್, ಜೀವಿಕ ಬಸವರಾಜು ಮಾತನಡಿದರು.
ವರ್ತಕರ ಸಂಘದ ಅಧ್ಯಕ್ಷ  ಚಂದ್ರಶೇಖರಾರಾಧ್ಯ, ವಕೀಲರ ಸಂಘದ ಪ್ರಭಾರ ಜವರಯ್ಯ, ಅಧ್ಯಕ್ಷ ಕನ್ನಡಸೇನೆ ಅಧ್ಯಕ್ಷ ಕುಮಾರ,ರೋಟರಿ ಅಧ್ಯಕ್ಷ  ಕೃಷ್ಣ ,ಪತ್ರಕರ್ತರಾದ ಮಂಜುಕೋಟೆ, ಸತೀಶ್‍ಆರಾಧ್ಯ, ದೊಡ್ಡನಾಯಕ, ಚಾ.ನಂಜುಂಡಮೂರ್ತಿ, ವಕೀಲಸತೀಶ್,ನಾರಾಯಣಗೌಡ, ಹೆಚ್.ಕೆ.ಸುರೇಶ್, ಆಟೋರಮೇಶ್, ನಿಂಗೇಗೌಡ, ಬಸವರಾಜು, ಶಫಿ, ಸಣ್ಣಕುಮಾರ, ಇನ್ನಿತರರು

No comments:

Post a Comment