Sunday 10 August 2014

ಮಂಡ್ಯ-ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಿಇಟಿ ವಿಚಾರ ಸಂಕಿರಣಗಳು ಅನುಕೂಲವಾಗಲಿ.ಪ್ರಾಧ್ಯಾಪಕ ಮಹೇಶ್.

ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಿಇಟಿ ವಿಚಾರ ಸಂಕಿರಣಗಳು ಅನುಕೂಲವಾಗಲಿ.ಪ್ರಾಧ್ಯಾಪಕ ಮಹೇಶ್
 ಮಂಡ್ಯ: ಜಿಲ್ಲೆಯ ವಿದ್ಯಾರ್ಥಿಗಳಿಗೆ ಸಿಇಟಿ ವಿಚಾರ ಸಂಕಿರಣಗಳು ಅನುಕೂಲವಾಗುತ್ತವೆ ಎಂದು ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಮಹೇಶ್ ಹೇಳಿದರು.. ಮಂಡ್ಯದ ಗಾಂಧಿ ಭವನದಲ್ಲಿ ಬ್ರೈಟ್ ಎಜುಕೇಷನ್ ಟ್ರಸ್ಟ್ ವತಿಯಿಂದ ನಡೆದ ಪಿಯುಸಿ, ಸಿಇಟಿ ಪರೀಕ್ಷಾ ತಯಾರಿ ಕುರಿತ ಉಪನ್ಯಾಸ ಕಾರ್ಯಕ್ರಮ ಹಾಗೂ ಮಾದರಿ ಸಿಇಟಿ ಪರೀಕ್ಷೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು
 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ವೈದ್ಯಕೀಯ ಮತ್ತು ಇಂಜಿನಿಯರಿಂಗ್‍ನಂತಹ ವೃತ್ತಿ ಕೋರ್ಸ್‍ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಜನೆ ಮಾಡಿ ಜಿಲ್ಲೆಗೆ ಕೀರ್ತಿ ತರಲಿ ಎಂದು ಹೇಳಿದರು.
ವಿಶ್ರಾಂತ ಪ್ರಾಂಶುಪಾಲ ರಮೇಶ್ ಹಂಡೆ, ಬ್ರೈಟ್ ಎಜುಕೇಷನ್ ಟ್ರಸ್ಟ್‍ನ ಅಧ್ಯಕ್ಷ ರವಿಕುಮಾರ್ ಎಸ್., ಗೌರವಾಧ್ಯಕ್ಷೆ ರೇಣುಕಾ ಸಿದ್ದಲಿಂಗಸ್ವಾಮಿ, ಕಾರ್ಯದರ್ಶಿ ಎಚ್.ಎನ್. ಮಧು, 24*7.ಕಾಂ ಮೇಲ್ವಿಚಾರಕ ಅಶೋಕ್ ಶೆಣೈ ಇತರರಿದ್ದಾರೆ.

ಮಂಡ್ಯ : ನಗರದ ಸಿಹಿ ನೀರು ಕೊಳದ ಬಳಿ ಇರುವ ಧ್ವನಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಆರ್.ಎಸ್.ಎಸ್. ವತಿಯಿಂದ ರಕ್ಷಾ ಬಂಧನದ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಮುಖ್ಯಸ್ಥ ಕಾಡೇನಹಳ್ಳಿ ನಾಗಣ್ಣಗೌಡ ಮಾತನಾಡಿ, ಹೆಣ್ಣು ಮಕ್ಕಳಿಗೆ ದೇಶದಲ್ಲಿ ಗೌರವ, ರಕ್ಷಣೆ ಕಾಪಾಡಬೇಕು. ಪರಸ್ತ್ರೀಯರನ್ನು ತಾಯಿಯಂತೆ ನೋಡು ಎಂದು ಸಾರಿದ ಸಂಸ್ಕøತಿ ಭಾರತ ದೇಶದ್ದು. ಭಾರತದ ಸಂಸ್ಕøತಿ ಉಳಿಯಬೇಕು ಎಂದರು.
ಬಂಧುತ್ವ, ಸಹೋದರತ್ವವನ್ನು ಸಮಾಜದಲ್ಲಿ ಜಾಗೃತಿಗೊಳಿಸುವ ಉತ್ಸಾಹ ಅದೇ ರಕ್ಷಾ ಬಂಧನ. ಸಾಮರಸ್ಯ ಸಂದೇಶದ ಮೂಲಕ ಮೇಲು-ಕೀಳನ್ನು ತೊಡೆದುಹಾಕುವ ಪ್ರಯತ್ನ ಇದು ಎಂದು ಹೇಳಿದರು.
ಪ್ರಾಂಶುಪಾಲ ಗಂಗೇಗೌಡ, ಆರ್.ಎಸ್.ಎಸ್. ಕಾರ್ಯಕರ್ತರಾದ ಮಣಿಕಂಠ, ಭೆರಸಿಂಗ್ ಇತರರಿದ್ದರು.

No comments:

Post a Comment