Monday 4 August 2014

ಮೈಸೂರು ಸುದ್ದಿಗಳು.

 ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ
     ಮೈಸೂರು,ಆ.4.ಮೈಸೂರು ಜಿಲ್ಲೆ ಹಾಗೂ ಟಿ.ನರಸೀಪುರ ತಾಲ್ಲೂಕು ಕೊರಬಗೆರೆ-ಬಾವಲಿ ರಸ್ತೆ ರಾಜ್ಯ ಹೆದ್ದಾರಿ 33 (ಮಳವಳ್ಳಿ-ಮೈಸೂರು ರಸ್ತೆ) ರ ಕಿ.ಮೀ. 154.77 ರಿಂದ ಕಿ.ಮೀ. 180.97 ರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಬನ್ನೂರು ಪಟ್ಟಣದ ಪರಿಮಿತಿಯಲ್ಲಿ ಚತುಷ್ಟಥ ರಸ್ತೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಆಗಸ್ಟ್ 6 ರಂದು ಬೆಳಿಗ್ಗೆ 11 ಗಂಟೆಗೆ ಬನ್ನೂರಿನ ಫುಟ್ ಬಾಲ್ ಮೈದಾನದಲ್ಲಿ ನಡೆಯಲಿದೆ.
    ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದು, ಲೋಕೋಪಯೋಗಿ ಸಚಿವ ಡಾ| ಹೆಚ್.ಸಿ. ಮಹದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಸಹಕಾರ ಹಾಗೂ ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ| ಪುಷ್ಪಾವತಿ ಅಮರನಾಥ್, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್, ಪ್ರತಾಪ ಸಿಂಹ, ಸಿ.ಎಸ್. ಪುಟ್ಟರಾಜು,  ವಿಧಾನಸಭಾ ಸದಸ್ಯರಾದ ಕೆ.ವೆಂಕಟೇಶ್, ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ವಾಸು, ಎಂ.ಕೆ.ಸೋಮಶೇಖರ್, ಸಾ.ರಾ.ಮಹೇಶ್, ಹೆಚ್.ಪಿ. ಮಂಜುನಾಥ್, ಚಿಕ್ಕಮಾದು,  ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ಎಸ್.ನಾಗರಾಜು, ಮರಿತಿಬ್ಬೇಗೌಡ, ಆರ್. ಧರ್ಮಸೇನ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.

ನೌಕರರ ಸಮ್ಮೇಳನ-ಭೂಮಿಪೂಜೆ

      ಮೈಸೂರು,ಆ.4.ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸರ್ಕಾರಿ ನೌಕರರ ಸಮ್ಮೇಳನಕ್ಕೆ ನಿರ್ಮಿಸಲಾಗುತ್ತಿರುವ ಬೃಹತ್ ವೇದಿಕೆಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಬೈರಪ್ಪ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಭೂಮಿಪೂಜೆ ನೆರವೇರಿಸಿದರು.
    ಸಂಘದ ಜಿಲ್ಲಾಧ್ಯಕ್ಷ ಹೆಚ್.ಕೆ.ರಾಮು, ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ|| ರಂಗಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
    ರಾಜ್ಯ ಸಂಘದ ಗೌರವಾಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ, ಕಾರ್ಯದರ್ಶಿಗಳಾದ ಜವರೇಗೌಡ, ಮಂಜುನಾಥ್, ಸೋಮಶೇಖರ್, ಜಿಲ್ಲಾ ಸಂಘದ ಕಾರ್ಯದರ್ಶಿ ಡಾ| ಕೆ.ಶಂಕರೇಗೌಡ, ಖಜಾಂಚಿ ಡಾ| ಚುಂಚಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಿ.ಇಡಿ/ಡಿ.ಪಿ.ಇಡಿ ಆಯ್ಕೆ ಪಟ್ಟಿ ಪ್ರಕಟ
      ಮೈಸೂರು,ಆ.4.ಪ್ರಥಮ ಡಿ.ಇಡಿ/ಡಿ.ಪಿ.ಇಡಿ ಕೋರ್ಸುಗಳ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ, ಅನುದಾನರಹಿತ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿ ಸರ್ಕಾರಿ ಕೋಟಾದಡಿ ದಾಖಲಾತಿಗಾಗಿ ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸಿದ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಜುಲೈ 31 ರಂದು ಪ್ರಕಟಿಸಲಾಗಿದೆ.
    ಆಯ್ಕೆಯಾಗಿರುವ ಅಭ್ಯರ್ಥಿಗಳು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ವಸಂತಮಹಲ್, ನಜರ್‍ಬಾದ್, ಮೈಸೂರು ಇಲ್ಲಿ ಆಗಸ್ಟ್ 10ರೊಳಗಾಗಿ ಮೂಲ ದಾಖಲಾತಿಗಳೊಂದಿಗೆ ನಿಗಧಿತ ಶುಲ್ಕ ಪಾವತಿಸಿ ದಾಖಲಾತಿಯಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2446419ನ್ನು ಸಂಪರ್ಕಿಸುವುದು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟ: ಆಕ್ಷೇಪಣೆಗಳಿದ್ದರೆ ಸಲ್ಲಿಸಿ
   ಮೈಸೂರು,ಆ.4.ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ ಸಹಶಿಕ್ಷಕ/ಮುಖ್ಯಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಬಾಧಿತ ಶಿಕ್ಷಕರು ಆಕ್ಷೇಪಣೆಗಳನ್ನು ದಾಖಲೆಗಳೊಂದಿಗೆ ಸಂಬಂಧಿಸಿದ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ದಿನಾಂಕ: 16.08.2014 ರೊಳಗೆ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಹಿರಂಗ ಹರಾಜು
    ಮೈಸೂರು,ಆ.4.-ಮೈಸೂರು ಜಿಲ್ಲಾ ಪೊಲೀಸ್ ಘಟಕದ ನಿರುಪಯುಕ್ತ ವಾಹನ ಕೆಎ.02.ಜಿ.35ನ್ನು ಅಂಬಾಸಿಡರ್ ಕಾರ್ ದಿನಾಂಕ 25-08-2014 ಇಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣ, ಜ್ಯೋತಿನಗರ, ಮೈಸೂರಿನಲ್ಲಿ ಮರು ಟೆಂಡರ್-ಕಂ-ಬಹಿರಂಗ ಹರಾಜು ಮೂಲಕ ವಿಲೇವಾರಿಗೊಳಿಸಲಾಗುವುದು.
   ಹೆಚ್ಚಿನ ಮಾಹಿತಿಗೆ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯನ್ನು ಸಂಪರ್ಕಿಸಬಹುದು.

ಅಲ್ಪಾವಧಿ ಭತ್ತದ ಬೆಳೆಗೆ ಕಟ್ಟು ನೀರು ವ್ಯವಸ್ಥೆ
   ಮೈಸೂರು,ಆ.4.ಹುಲ್ಲಹಳ್ಳಿ ಅಣೆಕಟ್ಟೆಯ ಹುಲ್ಲಹಳ್ಳಿ ಮತ್ತು ರಾಂಪುರ ನಾಲೆಗಳ ಅಚ್ಚುಕಟ್ಟುದಾರರ ಅಲ್ಪಾವಧಿ ಭತ್ತದ ಬೆಳೆಗೆ ಆಗಸ್ಟ್ 1 ರಿಂದ ನವೆಂಬರ್ 28ರವರೆಗೆ ಕಟ್ಟು ನೀರಿನ ವ್ಯವಸ್ಥೆಯಂತೆ ನೀರು ಸರಬರಾಜು ಮಾಡಲಾಗುವುದು ಎಂದು ಕಬಿನಿ ನಾಲೆಗಳ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
    ಹುಲ್ಲಹಳ್ಳಿ ಮತ್ತು ರಾಂಪುರ ನಾಲಾ ಅಚ್ಚುಕಟ್ಟಿಗೆ ಆಗಸ್ಟ್ 1 ರಿಂದ 30 ರವರೆಗೆ ಒಟ್ಟು 30 ದಿನಗಳು, ಸೆಪ್ಟೆಂಬರ್ 7 ರಿಂದ 22 ರವರೆಗೆ ಒಟ್ಟು 16 ದಿವಸ, ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 14 ರವರೆಗೆ ಒಟ್ಟು 15 ದಿನ, ಅಕ್ಟೋಬರ್ 22 ರಿಂದ ನವೆಂಬರ್ 6 ರವರೆಗೆ ಒಟ್ಟು 16 ದಿನ ಹಾಗೂ ನವೆಂಬರ್ 14 ರಿಂದ 28 ರವರೆಗೆ ಒಟ್ಟು 15 ದಿನ ನೀರು ಬಿಡಲಾಗುವುದು.
      ನೀರಿನ ನಿಯಂತ್ರಣವನ್ನು ಕಬಿನಿ ಜಲಾಶಯದಲ್ಲಿ ಸದ್ಯದಲ್ಲಿ ಇರುವ ನೀರಿನ ಶೇಖರಣೆ ಮತ್ತು ಜಲಾಶಯಕ್ಕೆ ಬರುವ ನೀರಿನ ಅಂದಾಜಿನ ಪ್ರಮಾಣದ ಆಧಾರದ ಮೇಲೆ ಮಾಡಲಾಗಿದೆ. ಇಂತಹ ನಿಯಂತ್ರಣ ಸೌಲಭ್ಯದಲ್ಲಿ ಮುಂದೆ ಯಾವುದೇ ನಿಯಂತ್ರಣ ವ್ಯತ್ಯಾಸ ನೀರಿನ ಕೊರತೆ ಅಥವಾ ಬೆಳೆ ನಷ್ಟವಾದಲ್ಲಿ ಇಲಾಖೆಯವರು ಜವಾಬ್ದಾರರಲ್ಲ ಹಾಗೂ ರೈತ ಬಾಂಧವರಿಗೆ ಬೆಳೆ ಪರಿಹಾರ ಕೇಳಲು ಯಾವ ಹಕ್ಕು ಇರುವುದಿಲ್ಲ.
      ಹೆಚ್ಚಿನ ಮಾಹಿತಿಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್,  ಕಬಿನಿ ನಾಲಾ ಉಪವಿಭಾಗ, ಹುಲ್ಲಹಳ್ಳಿ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಉಪವಿಭಾಗ ನಂಜನಗೂಡು ಇವರನ್ನು ಸಂಪರ್ಕಿಸಬಹುದು ಎಂದು ಅವರು ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
ಪ್ರೋತ್ಸಾಹ ಧನ: ಯುವ ಬರಹಗಾರರಿಂದ ಅರ್ಜಿ ಆಹ್ವಾನ
   ಮೈಸೂರು,ಆ.4.ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 18 ರಿಂದ 35 ವರ್ಷ ವಯೋಮಿತಿಯೊಳಗಿನ ಯುವ ಬರಹಗಾರರು ಕನ್ನಡ ಸಾಹಿತ್ಯದಲ್ಲಿ ರಚಿಸಿರುವ ಚೊಚ್ಚಲ ಕೃತಿಗಳಿಗೆ ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ದಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ, ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಸಾಹಿತ್ಯದ ಪ್ರಕಾರಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಿದೆ.
    ಆಸಕ್ತರು ತಾವು ರಚಿಸಿದ ಚೊಚ್ಚಲ ಕೃತಿಯನ್ನು ಬೆರಳಚ್ಚು/ಡಿ.ಟಿ.ಪಿ. ಮಾಡಿಸಿ, ತಮ್ಮ ಸ್ವ-ವಿವರಗಳೊಂದಿಗೆ ಅರ್ಜಿಗಳನ್ನು ಆಗಸ್ಟ್ 20 ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಇವರಿಗೆ ಸಲ್ಲಿಸುವುದು.
    ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 080-22484516/22017704ನ್ನು ಸಂಪರ್ಕಿಸಬಹುದು.
ಕಾಲೇಜಿನ ವಿವರವನ್ನು ಇ-ಪಾಸ್ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಿ
    ಮೈಸೂರು,ಆ.4.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ನೀಡಲಾಗುವ ಸೌಲಭ್ಯಗಳನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಕಾಲೇಜುಗಳು ಇ-ಪಾಸ್ ಪೋರ್ಟಲ್‍ನಲ್ಲಿ ಕಾಲೇಜಿನ ಮಾಹಿತಿ ಮತ್ತು ಕಾಲೇಜಿನಲ್ಲಿ ಬೋಧಿಸಲಾಗುತ್ತಿರುವ ಕೋರ್ಸುಗಳ ವಿವರಗಳನ್ನು ಅಪ್‍ಲೋಡ್ ಮಾಡಬೇಕಿರುತ್ತದೆ.
    2013-14ನೇ ಸಾಲಿನಲ್ಲಿ ಇ-ಪಾಸ್ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡದೇ ಇರುವ ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಕಾಲೇಜುಗಳ ರಿಜಿಸ್ಟ್ರೇಷನ್ ನಂ, ಅಫಿಲಿಯೇಷನ್ ನಂ, ಪೂರ್ಣ ವಿಳಾಸ, ಪ್ರಾಂಶುಪಾಲರ ಹೆಸರು, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸ, ವೆಬ್ ಸೈಟ್ (ಇದ್ದಲ್ಲಿ), ಕಾಲೇಜಿನ ಬ್ಯಾಂಕ್ ಖಾತೆ/ ಐ.ಎಫ್.ಎಸ್.ಸಿ ಕೋಡ್, ಬೋಧಿಸಲಾಗುತ್ತಿರುವ ಮಾನ್ಯತೆ ಪಡೆದ ಕೋರ್ಸುಗಳು ಮಾಹಿತಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವೆಬ್‍ಪೋರ್ಟಲ್ hಣಣಠಿ://ಞಚಿಡಿeಠಿಚಿss.ಛಿgg.gov.iಟಿ/ ರಲ್ಲಿ ಅಪ್‍ಲೋಡ್ ಮಾಡುವುದು.
    ಹೊಸದಾಗಿ ಯೂಸರ್-ಐಡಿ ಮತ್ತು ಪಾಸ್‍ವರ್ಡ್‍ಗಳ ಅಗತ್ಯ ಇರುವ ಕಾಲೇಜು ಪ್ರಾಂಶುಪಾಲರು ಕಾಲೇಜಿನ ಅಫಿಲಿಯೇಷನ್ ಆದೇಶ ಮತ್ತು ಮಾನ್ಯತೆ ಪಡೆದ ಕೋರ್ಸುಗಳ ಕುರಿತ ಆದೇಶಗಳ ಸ್ಕ್ಯಾನ್ ಪ್ರತಿಗಳೊಂದಿಗೆ, ಇ-ಮೇಲ್ bಛಿಜbಟಿg@ಞಚಿಡಿ.ಟಿiಛಿ.iಟಿ ವಿಳಾಸಕ್ಕೆ ಪತ್ರವನ್ನು ಕಳುಹಿಸಬಹುದು. ಕಾಲೇಜುಗಳಿಗೆ ನೀಡಲಾದ ಯೂಸರ್-ಐಡಿ ಮತ್ತು ಪಾಸ್‍ವರ್ಡ್‍ಗಳನ್ನು ಸಂಬಂಧಪಟ್ಟ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಿ, ದಿನಾಂಕ:10-08-2014ರೊಳಗಾಗಿ ಪಡೆದು ಅಪ್‍ಲೋಡ್ ಮಾಡುವುದು.
    ಪದವಿ ಪೂರ್ವ, ಐಟಿಐ, ಡಿಪ್ಲೋಮ, ಪಾಲಿಟೆಕ್ನಿಕ್, ಪದವಿ, ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್, ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ಮತ್ತು ಪಶುವೈದ್ಯಕೀಯ, ಸ್ನಾತಕೋತ್ತರ. ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ “ಊಟ ಮತ್ತು ವಸತಿ ಸಹಾಯ ಯೋಜನೆ.” “ವಿದ್ಯಾರ್ಥಿ ವೇತನ” ಮತ್ತು “ಶುಲ್ಕ ವಿನಾಯಿತಿ” ಇತ್ಯಾದಿ ಸೌ ಊಟ ಮತ್ತು ವಸತಿ ಸಹಾಯ ಯೋಜನೆ (ವಿದ್ಯಾಸಿರಿ)”, “ವಿದ್ಯಾರ್ಥಿ ವೇತನ”, ಮತ್ತು “ಶುಲ್ಕ ವಿನಾಯಿತಿ” ಇತ್ಯಾದಿಗಳನ್ನು ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿ ಇರುವ ರೀತಿಯಲ್ಲಿಯೇ, ಅವರ ಹೆಸರಿನಲ್ಲಿ ಯಾವುದಾದರೂ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ, ಬ್ಯಾಂಕ್ ಖಾತೆಯನ್ನು ತೆರೆಯುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲಭ್ಯಗಳನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.
    “
ರಾಷ್ಟ್ರೀಯ ಅರ್ಹತಾ ಪರೀಕ್ಷೆ ಅರ್ಜಿ ಆಹ್ವಾನ
         ಮೈಸೂರು,ಆ.4.ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ಮತ್ತು ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರೀಸರ್ಚ್  ಇವರು ಜಂಟಿಯಾಗಿ ಕಿರಿಯ ಸಂಶೋದನಾ ಶಿಷ್ಯವೇತನ ( ಎ.ಖ.ಈ.)  ಮತ್ತು ಉಪನ್ಯಾಸಕರ ಹುದ್ದೆಗಳ ಅರ್ಹತೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ ( ಓ.ಇ.ಖಿ.)  ನಡೆಸಲು ಅರ್ಹ ಅಬ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುತ್ತಾರೆ.
    ಅರ್ಜಿ ಸಲ್ಲಿಸುವವರು  ಕೆಮಿಕಲ್ ಸೈನ್ಸ್ , ಅರ್ತ್‍ಸೈನ್ಸ್, ಲೈಫ್ ಸೈನ್ಸ್, ಮ್ಯಾಥಮೆಟಿಕಲ್ ಸೈನ್ಸ್, ಪಿಜಿಕಲ್ ಸೈನ್ಸ್ ವಿಷಯಗಳಲ್ಲಿ ಸ್ನಾತಕೋತ್ತರ / ಇಂಜಿನಿಯರಿಂಗ್ ಪದವಿಯಲ್ಲಿ ಶೇಕಡ 55% ಅಂಕ ಗಳಿಸಿ ಉತ್ತೀರ್ಣರಾಗಿರಬೇಕು. ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಶೇಕಡ 50% ಅಂಕ ಗಳಿಸಿ ಉತ್ತೀರ್ಣರಾಗಿರಬೇಕು.
     ಅಂತಿಮ ವರ್ಷದಲ್ಲಿ ಎಂ.ಎಸ್ಸಿ.,/ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೂ ಸಹ ಅರ್ಜಿ ಸಲ್ಲಿಸಬಹುದು.
ಜೆ.ಅರ್.ಎಫ್‍ಗೆ ಅರ್ಜಿ ಸಲ್ಲಿಸುವವರ ವಯೋಮಿತಿ ದಿನಾಂಕ 1-7-2014ಕ್ಕೆ 19 ವರ್ಷ ಮೇಲ್ಪಟ್ಟಿದ್ದು 28 ವರ್ಷಗಳೊಳಗಿರಬೇಕು.ಎಸ್.ಸಿ./ಎಸ್.ಟಿ/ಒ.ಬಿಸಿ/ಪಿಹೆಚ್ ವಿದ್ಯಾರ್ಥಿಗಳಿಗೆ 5 ವರ್ಷಗಳ ಸಡಿಲಿಕೆಯುಂಟು. ಎಸ್.ಸಿ./ಎಸ್.ಟಿ ಅಭ್ಯರ್ಥಿಗಳಿಗೆ    ರೂ. 100-00,  ಒ.ಬಿ.ಸಿ(ಕೇಂದ್ರ) ಅಭ್ಯರ್ಥಿಗಳಿಗೆ    ರೂ. 200-00 ಇತರರಿಗೆ                        ರೂ. 400-00 ಪರೀಕ್ಷಾ ಶುಲ್ಕ ನಿಗಧಿಪಡಿಸಲಾಗಿದೆ.
     ಅರ್ಜಿಯನ್ನು ತಿತಿತಿ.ಛಿsiಡಿhಡಿಜg.ಡಿes.iಟಿ ವೆಬ್‍ಸೈಟ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 13 ಹಾಗೂ ದಾಖಲೆಗಳೊಂದಿಗೆ  ಮುದ್ರಿತ ಅರ್ಜಿ ಸಲ್ಲಿಸಲು ಆಗಸ್ಟ್ 19 ಕೊನೆ ದಿನಾಂಕವಾಗಿರುತ್ತದೆ.
      ಪರೀಕಾ ವಿಧಾನ, ಪಠ್ಯಕ್ರಮ ಮಾದರಿ ಪ್ರಶ್ನೆಪತ್ರಿಕೆ ಹಾಗೂ ಹೆಚ್ಚಿನ ಮಾಹಿತಿಗೆ ಉಪಮುಖ್ಯಸ್ಥರು, ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಗ್ರಂಥಾಲಯ ಕಟ್ಟಡ , ಮಾನಸಗಂಗೋತ್ರಿ ಮೈಸೂರು-6 ದೂರವಾಣಿ:  0821-2516844 ಅಥವಾ 9449686641 ಇಲ್ಲಿ ಸಂಪರ್ಕಿಸಬಹುದು.
                   ಎಸ್.ಎಸ್.ಎಲ್.ಸಿ. ಪರೀಕ್ಷೆ ಖಾಸಗಿ ಅಭ್ಯರ್ಥಿಗಳ ನೋಂದಣಿ                                                                                    
   ಮೈಸೂರು,ಆ.4.2015ರ ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳಾಗಿ ನೋಂದಣಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.
   ಅಭ್ಯರ್ಥಿಗೆ ದಿನಾಂಕ 01-03-2015ಕ್ಕೆ 15 ವರ್ಷಗಳು ಪೂರ್ಣಗೊಂಡಿರಬೇಕು. ನೋಂದಣಿ ಶುಲ್ಕ ರೂ. 185/- ಎನ್.ಇ.ಎಫ್.ಟಿ. ಚಲನ್‍ನಲ್ಲಿ ಕಾರ್ಪೋರೇಷನ್ ಬ್ಯಾಂಕ್‍ನಲ್ಲಿ ಪಾವತಿಸಬೇಕು. ಅರ್ಜಿ ಸಲ್ಲಿಸಲು ಆಗಸ್ಟ್ 8 ರಂದು ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿ ಮತ್ತು ಎನ್.ಇ.ಎಫ್.ಟಿ. ಚಲನ್‍ಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದಾಗಿದೆ.
ಹಾಕಿ ಆಟ ಬೆಳೆಸುವಂತೆ ಮನವಿ

    ಮೈಸೂರು,ಆ.4.ಕರ್ನಾಟಕದ ಹಾಕಿ ಆಟಗಾರ ವಿ.ಎಸ್. ವಿನಯ್ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ| ಪುಷ್ಪಾವತಿ ಅಮರನಾಥ್ ಅವರನ್ನು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಭೇಟಿ ಮಾಡಿ ಶುಭ ಹಾರೈಸಿದರು.
   ಗಿರಿಜನ ಹಾಡಿಯ ಮಕ್ಕಳಿಗೆ ಕ್ರೀಡೆಯಲ್ಲಿ ವಿಶೇಷ ತರಬೇತಿ ನೀಡಿದರೆ ಒಳ್ಳೆಯ ಪ್ರತಿಭೆ ಅನ್ವೇಷಣೆಯಾಗುತ್ತದೆ.  ತಮ್ಮ ಅವಧಿಯಲ್ಲಿ ಹಾಕಿ ಕ್ರೀಡೆಗೆ ವಿಶೇಷ ಆದ್ಯತೆ ನೀಡಿ ಶಾಲಾ ಮಟ್ಟದಲ್ಲೇ ಹಾಕಿ ಆಟವನ್ನು ಬೆಳೆಸುವಂತೆ ಕೋರಿದರು.
   ಇದೇ ಸಂದರ್ಭದಲ್ಲಿ ವಿ.ಎಸ್. ವಿನಯ್ ಅವರ ಪತ್ನಿ ನಮ್ರತ, ತಾಯಿ ಕಮಲಸ್ವಾಮಿ, ಭಾರತೀಯ ರೈಲ್ವೆ ಹಾಕಿ ಆಟಗಾರ ಗಿರೀಶ್ ಗಣಪತಿ ಉಪಸ್ಥಿತರಿದ್ದರು. (ಛಾಯಾಚಿತ್ರ ಲಗತ್ತಿಸಿದೆ).

ಅಪರಿಚಿತÀ ಮಹಿಳೆÀ ಶವÀ ಪತ್ತೆಗಾಗಿ ಮನವಿ
ಮೈಸೂರು,ಆ.4.ಮಂಡ್ಯ-ಹನಕೆರೆ ರೈಲುನಿಲ್ದಾಣಗಳ ಮಧ್ಯೆ ರೈಲ್ವೆ ಕಿ.ಮೀನಂ-89/400-500ರಲ್ಲಿ ಆಗಸ್ಟ್ 4 ರಂದು  ಸುಮಾರು 30 ವರ್ಷ ಅಪರಿಚಿತ ಮಹಿಳೆ ಮೃತಪಟ್ಟಿದ್ದಾರೆ. ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
 ಈ ಅಪರಿಚಿತ ಮಹಿಳೆ 5.5 ಅಡಿ ಎತ್ತರ, ಕೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡುಮುಖ, ದಪ್ಪನೆಯ ಮೂಗು, ತಲೆಯಲ್ಲಿ ಸುಮಾರು 15 ಅಡಿ ಉದ್ದದ ಕಪ್ಪು ಕೂದಲು ಬಲಗೈಯಲ್ಲಿ ತಾಮ್ರದ ಬಳೆ ಇರುತ್ತದೆ.
ಮೃತ ಹೆಂಗಸಿನ ದೇಹವÀನ್ನು ಮಂಡ್ಯ  ಜಿಲ್ಲಾ ಸರ್ಕಾರಿ ಆಸ್ಪತ್ರೆಯ  ಶವಾಗಾರದಲ್ಲಿಡಲಾಗಿದೆ. ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.














































No comments:

Post a Comment