Saturday 30 August 2014

ಕೃಷ್ಣರಾಜಪೇಟೆ. ಬಡಜನರು, ಸಾರ್ವಜನಿಕರು ಹಾಗೂ ಅನಾಥ ಶವಗಳ ಸಂಸ್ಕಾರ ಮಾಡಲು ಸಾಗಾಣಿಕೆ ಮಾಡಲು ಅನುಕೂಲವಾಗುವಂತೆ ತಮ್ಮ ಕ್ಷೇತ್ರ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ಎಲ್ಲಾ ಪುರಸಭೆಗಳು ಮತ್ತು ನಗರ ಸಭೆಗಳಿಗೆ ತಮ್ಮ ಶಾಸಕರ ಅನುದಾನದಿಂದ ಶವಸಾಗಾಣಿಕೆ ಚಿರಶಾಂತಿ ವಾಹನವನ್ನು ಕೊಡುಗೆಯಾಗಿ ನೀಡಿ ಸಮಾಜದ ಋಣ ತೀರಿಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಗೋ.ಮಧುಸೂಧನ್ ಹೇಳಿದರು.
ಅವರು ಇಂದು ಕೃಷ್ಣರಾಜಪೇಟೆ ಪುರಸಭೆಗೆ ಮೂರು ಲಕ್ಷರೂ ವೆಚ್ಚದಲ್ಲಿ ನೀಡಿದ ಶವಸಾಗಾಣಿಕೆಯ ಚಿರಶಾಂತಿ ವಾಹನದ ಕೀಯನ್ನು ಹಸ್ತಾಂತರಿಸುವ ಮೂಲಕ ಪುರಸಭೆಯು ತಮಗೆ ಆತ್ಮೀಯವಾಗಿ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ದಕ್ಷಿಣ ಪದವೀದರ ಕ್ಷೇತ್ರದ ಮೈಸೂರು, ಹಾಸನ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯ ಪಧವೀಧರರ ಮತವನ್ನು ಪಡೆದು ವಿಧಾನ ಪರಿಷತ್ತಿಗೆ ಮೂರಬೇ ಅವಧಿಗೆ ಆಯ್ಕೆಯಾಗಿರುವ ನಾನು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಹಾಗೂ ಪಧವೀಧರ ಬಂಧುಗಳ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಸಮಾಜದಲ್ಲಿನ ಕಡುಬಡವರು ಹಾಗೂ ಅನಾಥ ಶವಗಳನ್ನು ಸಂಸ್ಕಾರ ಮಾಡಲು ಅನುಕೂಲವಾಗುವಂತೆ ಗ್ಯಾಸ್ ಚಿತಾಗಾರಗಳನ್ನು ಸ್ಥಾಪಿಸಿ ಜನತೆಗೆ ಅನುಕೂಲ ಮಾಡಿಕೊಡಲು ಚಿಂತಿಸಿದ್ದೇನೆ. ಪ್ರಸ್ತುತ ಶವಗಳ ಸಾಗಾಣಿಕೆಗಾಗಿ ಆಂಬ್ಯುಲೆನ್ಸ್ ಮಾದರಿಯಲ್ಲಿ 22 ಮಾರುತಿ ಓಮ್ನಿ ವಾಹನಗಳು ಮತ್ತು 5 ಟೆಂಪೋ ಟ್ರಾವೆಲರ್ ವಾಹನಗಳನ್ನು 1ಕೋಟಿ ನಾಲ್ಕು ಲಕ್ಷರೂಗಳ ವೆಚ್ಚದಲ್ಲಿ ನೀಡಿ ಸಮಾಜದ ಋಣವನ್ನು ತೀರಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದ ಮಧುಸೂಧನ್  ಜನಪ್ರತಿನಿಧಿಗಳಿಗೆ ಗೆಲ್ಲುವವರೆಗೆ ಮಾತ್ರ ಪಕ್ಷ, ಗೆದ್ದ ನಂತರ ಸಮಾಜದ ಹಾಗೂ ನೊಂದ ಜನತೆಯ ಸೇವೆಯನ್ನು ಪಕ್ಷಾತೀತವಾಗಿ ಮಾಡಿಕೊಡಲು ಜನಪ್ರತಿನಿಧಿಗಳು ಮುಂದಾಗಬೇಕು. ನಾನು ಬಿಜೆಪಿ ಪಕ್ಷಕ್ಕೆ ಸೇರಿರುವ ಸದಸ್ಯನಾಗಿದ್ದರೂ ತಮ್ಮ ಪುರಸಭೆಯ ಹಾಗೂ ತಾಲೂಕಿನ ವ್ಯಾಪ್ತಿಯ ಕೆಲಸ-ಕಾರ್ಯಗಳಿದ್ದರೆ ನೇರವಾಗಿ ನನ್ನ ಬಳಿ ಬನ್ನಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಂಭಂದಪಟ್ಟ ಯಾವುದೇ ಕೆಲಸಗಳನ್ನು ಮಾಡಿಸಿ ಕೊಡಲು ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡುತ್ತೇನೆ ಎಂದು ಹೇಳಿದರು.
ಶವ ಸಾಗಾಣಿಕೆಯ ವಾಹನವನ್ನು ಸುಸ್ಥಿತಿಯಲ್ಲಿಟ್ಟುಕೊಂಡು ದಿನದ 24ಗಂಟೆಗಳ ಕಾಲವೂ ನೊಂದ ಜನತೆಗೆ ಸೇವೆ ಸಿಗುವಂತೆ ನೋಡಿಕೊಳ್ಳಬೇಕು. ಅನಾಥ ಶವಗಳ ಸೇವೆಗೆ ಉಚಿತ ಸಹಾಯ ಮಾಡಿ ಉಳಿದಂತೆ ನೂರಿನ್ನೂರು ರೂ ಶುಲ್ಕವನ್ನು ಪಡೆದು ಶವಗಳ ಸಾಗಾಣಿಕೆಯ ಸೇವೆ ನೀಡಬೇಕು ಎಂದು ಮನವಿ ಮಾಡಿದ ಮಧುಸೂಧನ್ ಉಳ್ಳವರು ಶವಸಾಗಾಣಿಕೆ ವಾಹನಕ್ಕೆ ಪೆಟ್ರೋಲ್ ಹಾಕಿಸಿ ನೆರವಾಗುವ ಮೂಲಕ ಎಲ್ಲಾ ಬಡ ಜನರಿಗೂ ಉಚಿತ ಸೇವೆ ದೊರೆಯುವಂತೆ ನೋಡಿಕೊಳ್ಳಬೇಕು. ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮುಖ್ಯಾಧಿಕಾರಿಗಳು ಈ ಬಗ್ಗೆ ನಿಗಾ ವಹಿಸಿ ಶವ ಸಾಗಾಣಿಕೆ ವಾಹನದ ಸಾರ್ಥಕ ಬಳಕೆಗೆ ಮುಂದಾಗಿ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್, ಉಪಾಧ್ಯಕ್ಷ ಅಶೊಕ್, ಮುಖ್ಯಾಧಿಕಾರಿ ಬಸವರಾಜು, ಬಿಜೆಪಿ ಮುಖಂಡರಾದ ತೋಟಪ್ಪಶೆಟ್ಟಿ, ಕೆ.ಪಿ.ಜಯಂತ್, ಜಯದೀಪ್, ಶೀಳನೆರೆ ಭರತ್, ಜಾಗಿನಕೆರೆ ನಿಂಗರಾಜು, ಹೆಚ್.ಬಿ.ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.

No comments:

Post a Comment