Friday 1 August 2014

ಮಂಡ್ಯ-ಜಿಲ್ಲಾ ಪೊಲೀಸರಿಂದ ಕಳ್ಳರ ಬಂಧನ -: ಎಸ್ಪಿ


ಜಿಲ್ಲಾ ಪೊಲೀಸರಿಂದ ವಿವಿಧ ಅಪರಾಧವೆಸಗಿದ ಅಪರಾಧಿಗಳ ಬಂಧನ : ಎಸ್ಪಿ
ಮಂಡ್ಯ,ಆ.1- ಮಂಡ್ಯ ಜಿಲ್ಲಾ ಪೊಲೀಸರು ತಮ್ಮ ಸತತ ಕಾರ್ಯಾಚರಣೆಯಿಂದಾಗಿ ವಿವಿಧ ಅಪರಾಧಗಳ ಅಡಿಯಲ್ಲಿ ಹಲವು ಅಪರಾಧಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅಪರಾಧಿಗಳಿಂದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣಗಳು, ವಾಹನಗಳು, ಕಂಪ್ಯೂಟರ್ ಹಾಗೂ ನಗದನ್ನು ವಷಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೋರಸೆ ತಿಳಿಸಿದರು.
ನಗರದ ತಮ್ಮ ಕಛೇರಿಯಲ್ಲಿಂದು ಸುದ್ಧಿಗೋಷ್ಠಿಯನ್ನು ಕರೆದು ಮಾತನಾಡಿದ ಅವರು ಮದ್ದೂರು ವ್ಯಾಪ್ತಿಯಲ್ಲಿ ಮನೆಗಳು ಹಾಗೂ ದೇವಾಲಯಗಳಲ್ಲಿ ಕಳ್ಳತನಾ ಪ್ರಕರಣಗಳು ಹೆಚ್ಚಾಗಿದ್ದರಿಂದ ಮದ್ದೂರಿನ ಪೆÇಲೀಸ್ ಅಧಿಕಾರಿಯವರ ನೇತøತ್ವದಲ್ಲಿ ವಿಶೇಷ ತಂಡವನ್ನ ರಚಿಸಲಾ ಗಿತ್ತು.
 ರಾಮನಗರ ಜಿಲ್ಲೆ,  ಕನಕ ಪುರ ತಾಲ್ಲೂಕಿನ ಸಾತನೂರಿನ ನಿವಾಸಿ ಕೆ.ಮಣಿಕಂಠ ಬಿನ್ ಕೆಂಗಲ್‍ಶೆಟ್ಟಿ (21) ಎಂಬು ವವನ್ನು ಬಂಧಿಸಿ 26ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ಬೈಕ್ ವಶಪಡಿಸಿಕೊಳ್ಳಲಾಗಿದೆ, ಹಾಗೂ ಮದ್ದೂರು ಟೌನ್ ನಿವಾಸ್ ಎಂ.ನಾಗೇಶ್ ಬಿನ್ ಮರಿಗೆಂಚಯ್ಯರವರ ಮನೆಯಿಂದ ಕಳವು ಮಾಡಲಾಗಿದ್ದ 64 ಗ್ರಾಂ ಚಿನ್ನಾಭರಣ ಹಾಗೂ 85 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
 ಅಪರಾಧ ಪ್ರಕರಣಗಳನ್ನು ಮುಂದುವರೆಸಿದ ಅವರು, ಬೆಂಗಳೂರಿನ ಕಲಾಸಿಪಾಳ್ಯ ಠಾಣ ವ್ಯಾಪ್ತಿಯ ಶನಿಮಹತ್ಮ ದೇವಾಲಯದಲ್ಲಿ 542 ಗ್ರಾಂನ ಒಂದು ಚಿನ್ನದ ಕಾಗೆ, ಹಾಗೂ 15 ಸಾವಿರ ನಗದನ್ನು ಸ್ವಾಧೀನಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ತಲಕಾಡು, ಕೆಸ್ತೂರು, ಮದ್ದೂರು, ಬೆಂಗಳೂರುಗಳ ವಿವಿಧ ದೇವಾಲಯಗಳಲ್ಲಿ ಕಳವು ಮಾಡಿದ್ದ ಚಿನ್ನಾಭರಣ ಹಾಗೂ ನಗದನ್ನು ವಶಕ್ಕೆ ಪಡೆಯಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಮಂಜುನಾಥ ನಗರದ ಎಸ್.ಎಸ್.ಮಂಜು ಬಿನ್ ಶಿವಣ್ಣ ಎಂಬಾತನನ್ನು ವಶಕ್ಕೆ ಪಡೆದು ಚನ್ನರಾಯಪಟ್ಟಣ ತಾಲ್ಲೂಕಿನ ಕಣಿವೆ ಬ್ಯಾಡರಹಳ್ಳಿ ಗ್ರಾಮದ ಮೋಹನ ಬಿನ್ ಗುರುಮೂರ್ತಿಚಾರ್ ಬೆಂಬಲದಿಂದ ವಾಹನ ಮಾಲೀಕರಿಗೆ ಮೋಸವೆಸಗಿದ್ದ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಆರೋಪಿಗಳು ತಾವು ಕಾರ್ ಬ್ರೋಕರ್ ಎಂದು ಹೇಳಿ ಕೆ.ಆರ್‍ಪೇಟೆಯ ರಾಘವೇಂದ್ರ ಬಾಬ್ತುರವರಿಂದ ಕೆಎ-04 ಡಿ-1371ರ ಪೆÇೀರ್ಡ್ ಪಿಯೆಸ್ತಾ ಕಾರನ್ನು ತೆಗೆದುಕೊಂಡು ಹೋಗಿದ್ದು ಈವರ ವಾಹನ ಮಾರಾಟ ಮಾಡಿದ ಹಣವನ್ನು ಕೊಡದೆ ವಾಹನವನ್ನು ವಾಪಸ್ ಕೊಡದೆ ಮೊಸ ಮಾಡಿದ್ದಾನೆ ಎಂದು ದೂರು ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಅವನ ವಿರುದ್ಧ ತನಿಖೆ ಮಾಡಲಾಗಿ ಅವನನ್ನು ಬಂಧಿಸಲಾಗಿದೆ. ಮತ್ತೊಂದು ಪ್ರಕರಣಕ್ಕೆ ಸೇರಿದಂತೆ ಕೆಎ-41 ಎಂ-2178 ಸ್ಕ್ರಾರ್ಪಿಯೋ ಕಾರ್‍ನನ್ನು ಸಹ ಈ ಆರೋ ಪಿಗಳಿಂದ ವಶಪಡಿಸಿಕೊಳ್ಳಲಾಗಿದ್ದು ಕೆ.ಆರ್.ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು.
ಮೂರನೇ ಪ್ರಕರಣದಲ್ಲಿ ನಾಗಮಂಗಲ ತಾಲ್ಲೂಕು ವೃತ್ತ ನಿರೀಕ್ಷಕ ವಸಂತಕುಮಾರ್ ನೇತೃತ್ವದಲ್ಲಿ ಅಂತರ ಜಿಲ್ಲಾ ಕಂಪ್ಯೂಟರ್ ಕಳ್ಳರನ್ನು ವಶಕ್ಕೆ ಪಡೆದುಕೊಂಡು 6,75000 ರೂ. ಬೆಲೆಯ 16 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.ಸದರಿ ಪ್ರಕರಣದಲ್ಲಿ ಆರೋಪಿಗಳಿಂದ 116 ಮಾನಿಟರ್‍ಗಳು, 8 ಸಿಪಿಯುಗಳು, 5 ಪ್ರೊಜೆಕ್ಟರ್‍ಗಳು, 4 ಸ್ಕ್ಯಾನರ್, 2 ಸ್ಪೀಕರ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.
ಸದರಿ ಕಳ್ಳತನದಿಂದ ಖರೀದಿಸಿದ್ದ ಎರಡು ಮೋಟಾರ್ ಸೈಕಲ್‍ಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ನಗರದ ಶ್ರೀನಿಧಿ ಗೋಲ್ಡ್ ಚಿನ್ನದ ಮಳಿಗೆಯಲ್ಲಿ ಕಳವು ಮಾಡಿದ್ದ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಈ ಕೃತ್ಯ ಹೊರ ರಾಜ್ಯದ ಕಳ್ಳರಿಂದ ಜರುಗಿದ್ದು, ಆರೋಪಿಗಳಿಂದ ಕಳವು ಮಾಲುಗಳನ್ನು ವಶಪಡಿಸಿಕೊಳ್ಳಲು ಇಲಾಖಾ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದರು.
ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು
ಗೋಷ್ಠಿಯಲ್ಲಿ ಇವರೊಂದಿಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಉಪಸ್ಥಿತರಿದ್ದರು.

ಮಹಿಳೆಯರ ರಕ್ಷಣೆಗೆ ನೂತನ ಕ್ರಮ : ಭೂಷಣ್ ಜಿ.ಬೊರಸೆ
ಮಂಡ್ಯ : ರಾಜ್ಯದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳಿಂದ ಮಹಿಳೆಯರನ್ನು ರಕ್ಷಿಸಲು ಸುರಕ್ಷತೆ ಹಾಗೂ ನೂತನ ರಕ್ಷಣಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಎಸ್ಪಿ ಭೂಷಣ್ ಜಿ. ಬೊರಸೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಈ ಸಂಬಂಧ ಮಹಿಳಾ ಸಂಘಟನೆಗಳು ಹಾಗೂ ಮುಖಂಡರ ಸಭೆ ಕರೆದು ಚರ್ಚಿಸಲಾಗಿದೆ. ಅವರಿಂದ ಹಲವಾರು ಸಲಹೆಗಳನ್ನು ಪಡೆಯಲಾಗಿದ್ದು, ಅವುಗಳ ಅನುಷ್ಠಾನಕ್ಕೆ ಇಲಾಖೆ ಮುಂದಾಗಿದೆ ಎಂದರು.
ಮಹಿಳೆಯರನ್ನು ಚುಡಾಯಿಸುವುದನ್ನು ಹತ್ತಿಕ್ಕುವುದು, ಬಸ್ ಏರಲು ಪರ್ಯಾಯ ವ್ಯವಸ್ಥೆ, ಮಹಿಳಾ ಶೌಚಾಲಯದ ಕೊರತೆ ನೀಗಿಸುವುದು, ಮಹಿಳಾ ಪೊಲೀಸ್ ಸಿಬ್ಬಂದಿಯ ನೇಮಕ. ಪ್ರತಿ ತಾಲ್ಲೂಕಿಗೊಂದು ಮಹಿಳಾ ಪೊಲೀಸ್ ಅಧಿಕಾರಿ ನೇತೃತ್ವದ ತಂಡ ರಚನೆ. ಶಾಲಾ ಕಾಲೇಜಿಗೆ ಭೇಟಿ ನೀಡಿ ಕುಂದುಕೊರತೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಶಾಲಾ ಕಾಲೇಜುಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯಾರ್ಥಿಗಳನ್ನು ಚುಡಾಯಿಸುವುದು ಹಾಗೂ ಇನ್ನಿತರ ರೀತಿಯಲ್ಲಿ ಕಿರುಕುಳ ನೀಡಿದಲ್ಲಿ, ವಾಹನ ಸವಾರರಾಗಿದ್ದಲ್ಲಿ, ವಾಹನ ಸಂಖ್ಯೆಯನ್ನು ನಮೂದಿಸಿ ಪೊಲೀಸರಿಗೆ ಒಪ್ಪಿಸ ಬೇಕು, ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪೊಲೀಸ್ ಇಲಾಖೆವತಿಯಿಂದ ದೂರು ಪೆಟ್ಟಿಗೆ ಯನ್ನು ಅಳವಡಿಸಲಿದ್ದು, ಲೈಂಗಿಕ ಕಿರುಕುಳ ಅಥವಾ ಇನ್ನಿತರೇ ದೌರ್ಜನ್ಯ ನಡೆದಿದ್ದೆ ಆದಲ್ಲಿ ಅನಾವ್ಮದ್ಯಯ ದೂರನ್ನು ನೀಡಬೇಕಾಗಿ ವಿನಂತಿಸಿದರು.
ಪೊಲೀಸ್ ಠಾಣೆಗೆ ದೂರು ನೀಡಲು ಆಗಮಿಸುವ ಮಹಿಳೆಯರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ತಿಳಿಸಲಾಗಿದ್ದು, ಶಾಲಾ ಕಾಲೇಜುಗಳಲ್ಲಿ ದೂರು ಪಟ್ಟಿಗೆ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದ ಎಂದರು. ಮಹಿಳೆಯರು ದೂರು ನೀಡಲು ನೆರವಾಗಲು ಮಹಿಳೆ ಸಿಬ್ಬಂದಿ ಬಳಕೆಗೂ ಆದ್ಯತೆ ನೀಡಲಾಗುವುದು ಎಂದರು.






ಮಂಡ್ಯ, ಆ.1- ಸಾವಿರಾರು ಹಮಾಲಿ ಕಾರ್ಮಿಕ ಕರ್ತವ್ಯದಿಂದ ವಜಾ ಮಾಡುತ್ತಿದ್ದು, ಇದು ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವಂತಾಗಿದ್ದು ಕೂಡಲೇ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ಜನಶಕ್ತಿ ನೇತøತ್ವದಲ್ಲಿ ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್‍ಲೋಡಿಂಗ್ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ನಗರದ ಸಿಲ್ವರ್ ಜೂಬಿಲಿ ಪಾರ್ಕ್‍ನಿಂದ ಪ್ರತಿಭಟನೆಯಲ್ಲಿ ಸಾಗಿದ ನೂರಾರು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಿ ಸರ್ಕಾರದ ಆದೇಶ ಹಿಂಪಡೆಯುವಂತೆ ಆಗ್ರಹಿಸಿದರು.
ಸರ್ಕಾರ ಮಹತ್ವಾಕಾಂಕ್ಷಿ ಮತ್ತು ಜನಪರ ಯೋಜನೆಯಾದ ಅನ್ನಭಾಗ್ಯ ಯೋಜನೆ ಜಾರಿಮಾಡಲು ಕೆಳಹಂತದಲ್ಲಿ ದುಡಿಯುತ್ತಿರುವ  ಕಾರ್ಮಿಕರು ದುಡಿ  ಯುತ್ತಿದ್ದು, ಇವರನ್ನು ಸರ್ಕಾರ ವಜಾ ಮಾಡಲು ಮುಂದಾಗಿದೆ. 30ವರ್ಷ ಗಳಿಂದ ಇದುವರೆಗು ಒಂದೇ ಒಂದು ಕಾರ್ಮಿಕ ಕಾನೂನು ಇವರ ಪರವಾಗಿ ಜಾರಿಯಾ ಗಿಲ್ಲ.  ಗುರುತಿನ ಚೀಟಿಯಿಲ್ಲ, ಇಎಸ್‍ಐ-ಪಿಎಫ್ ಸೌಲಭ್ಯ ವಿಲ್ಲ, ಕೆಲಸದ ಅವಧಿಯಿಲ್ಲ, ಅಪಘಾತ ಪರಿಹಾರವೂ ಇಲ್ಲ, ಕುಡಿಯುವ ನೀರಿನ ಸೌಲ ಭ್ಯವಿಲ್ಲ ಎಂದು ಆರೋಪಿಸಿ ದರು.
ಕರ್ನಾಟಕ ಜನಶಕ್ತಿಯ ಲಕ್ಷ್ಮಣ್ ಚೀರನಹಳ್ಳಿ ಮಾತ ನಾಡಿ, ಕಾರ್ಮಿಕರಿಗೆ ಕೂಲಿದರ ಪರಿಷ್ಕಕರಣೆಯಾಗಿ 6ವರ್ಷ ಗಳಾಗಿದ್ದು, ಕಳೆದ ವರ್ಷ ಜು.14ರಂದು ಪ್ರತಿಭಟನೆ ನಡೆಸಿದ್ದು, ಸೆ.3ರಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರು ಸಭೆ ನಡೆಸಿ ಕೂಲಿದರವನ್ನು ಹೆಚ್ಚಿ ಸುವ ಆಶ್ವಾಸನೆ ನೀಡಿದ್ದುರು ಆದರೂ ಜಾರಿ ಬರಲಿಲ್ಲ ಎಂದು ಹೇಳಿದರು.
ಸರ್ಕಾರದ ವತಿಯಿಂದ ಗುತ್ತಿಗೆ ನೀಡುವಾಗ ಕಾರ್ಮಿ ಕರಿಗೆ ಇಎಸ್‍ಐ ಮತ್ತು ಪಿಎಫ್ ನೀಡಬೇಕೆಂಬ ಷರತ್‍ತ್ತನ್ನು ಹಾಕುವುದು ಕಡಡ್ಡಾಯ. ಆದರೆ ಗುತ್ತಿಗೆ ಫಾರಂ ನಮೂನೆಗಳಲ್ಲಿ (ನಮ್ಮ ಸತತ ಒತ್ತಾಯದ ನಂತರವೂ)ಃ ಈ ಷರತ್ತನ್ನು ಸೇರಿಸುತ್ತಿಲ್ಲ. ಅರ್ಧ ಕೆಲಸವನ್ನು ಗುತ್ತಿಗೆದಾರರು, ಇನ್ನರ್ಧ ಕೆಲಸವನ್ನು ಸರ್ಕಾರವು ನಡೆಸುತ್ತಿರುವುದರಿಂದ, ಎರಡು ಕಡೆಯಿಂದ ಸಮಾನವಾಗಿ ವಂತಿಗೆ ನೀಡಿ ಇಎಸ್‍ಐ ಮತ್ತು ಪಿಎಫ್ ಕೊಡಲು ಕ್ರಮ ಕೈಗೊ ಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪುಟ್ಟಸ್ವಾಮಿ, ವರದರಾಜೇಂದ್ರ, ಮಹಿಳಾ ಮುನ್ನಡೆಯ ಈಶ್ವರಿ, ಮೈಸೂರು ಕರಿಯಪ್ಪ, ನಂಜ ನಗೂಡು ಮಣಿ, ಬನ್ನೂರು ನರಸಿಂಹಮೂರ್ತಿ, ಮಳವಳ್ಳಿ ಪುಟ್ಟರಾಜು, ಮದ್ದೂರು ರವಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

No comments:

Post a Comment