Thursday 7 August 2014

ಕೃಷ್ಣರಾಜಪೇಟೆ. ವಿದ್ಯಾವಂತ ಯುವಜನರು ಗ್ರಾಮೀಣ ಪ್ರಧೇಶದ ಮುಗ್ಧ ಜನರಲ್ಲಿ ಅರಿವಿನ ಜಾಗೃತಿಯನ್ನು ಮೂಡಿಸಿ -ಬಿ.ಎಲ್.ದೇವರಾಜು

ಕೃಷ್ಣರಾಜಪೇಟೆ. ವಿದ್ಯಾವಂತ ಯುವಜನರು ಗ್ರಾಮೀಣ ಪ್ರಧೇಶದ ಮುಗ್ಧ ಜನರಲ್ಲಿ ಅರಿವಿನ ಜಾಗೃತಿಯನ್ನು ಮೂಡಿಸಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ದೊರಕಿಸಿಕೊಟ್ಟು ಪ್ರಗತಿಯ ದಿಕ್ಕಿನಲ್ಲಿ ಸಾಗಲು ಸಹಾಯ ಮಾಡಬೇಕು. ಯವ ಜನರು ಸೋಮಾರಿಗಳಾಗಿ ಸುಮ್ಮನೆ ವ್ಯರ್ಥವಾಗಿ ಕುಳೀತು ಕಾಲಹರಣ ಮಾಡದೇ ಅವರವರ ಪಾಲಿನ ಕರ್ತವ್ಯಗಳನ್ನು ಬದ್ಧತೆಯಿಂದ ಮಾಡಿದರೆ ಅದು ಸಮಾಜದ ಅಭಿವೃಧ್ಧಿಗೆ ನೀಡಿದ ಕಾಣಿಕೆಯಾಗುತ್ತದೆ ಎಂದು ರಾಜ್ಯ ಮೈಸೂರು ಲ್ಯಾಂಪ್ಸ್ ಸಂಸ್ಥೆಯ ಮಾಜಿಅಧ್ಯಕ್ಷರಾದ ಹಿರಿಯ ಸಹಕಾರಿ ಧುರೀಣ ಬಿ.ಎಲ್.ದೇವರಾಜು ಹೇಳಿದರು.
ಅವರು ಇಂದು ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಸಾಮಥ್ರ್ಯ ಸೌಧದಲ್ಲಿ ಕೇಂದ್ರ ಸರ್ಕಾರದ ಯುವಕಾರ್ಯ ಸಚಿವಾಲಯ, ಜಿಲ್ಲಾ ನೆಹರು ಯುವಕೇಂದ್ರ, ವಿಘ್ನೇಶ್ವರ ಯುವಕ ಸಂಘ, ಮಾದಾಪುರ, ಡಾ.ಅಂಬೇಡ್ಕರ್ ಯುವ ಸಂಘಗಳ ಒಕ್ಕೂಟ ಚಿಕ್ಕಗಾಡಿಗನಹಳ್ಳಿ , ತಾಲೂಕು ಪಂಚಾಯಿತಿ ಕೃಷ್ಣರಾಜಪೇಟೆ ಈ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 3ದಿನಗಳ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃಧ್ಧಿ ತರಬೇತಿ ಶಿಭಿರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಿದ್ಯಾವಂತ ಯುವಜನರು ಸ್ವಾರ್ಥಿಗಳಾಗದೇ ಸಮಾಜಮುಖಿಯಾಗಿ ಆಲೋಚಿಸಿ ಕಷ್ಟದಲ್ಲಿರುವ ಬಡ ಜನರು ಹಾಗೂ ಸಮಾಜದಲ್ಲಿ ಧನಿಯಿಲ್ಲದ ಕಡುಬಡವರ ಸೇವೆಯಲ್ಲಿ ಸಾರ್ಥಕತೆಯನ್ನು ಹೊಂದಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಯುವಕರು ನುಡಿಯುವುದು ಒಂದು ನಡೆಯುವುದು ಮತ್ತೊಂದು ಎಂಬಂತಾಗದೇ ನಮ್ಮ-ನಮ್ಮ ಪಾಲಿನ ಕರ್ತವ್ಯಗಳನ್ನು ಬದ್ಧತೆಯಿಂದ ಮಾಡಿ ಸುಭದ್ರವಾದ ಸಮಾಜವನ್ನು ಕಟ್ಟಲು ಶ್ರಮಪಟ್ಟರೆ, ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ-ಅಕ್ರಮಗಳ ವಿರುದ್ಧ ಸಂಗಟಿತ ಹೋರಾಟವನ್ನು ನಡೆಸಿದರೆ ಅದು ನಾವು ಹಿಟ್ಟಿದ ಮಣ್ಣಿನ ಋಣವನ್ನು ತೀರಿಸಲು ಮಾಡಿದ ಕೆಲಸದಂತಾಗುತ್ತದೆ ಎಂದು ಹೇಳಿದ ದೇವರಾಜು ದೇಶಕ್ಕೆ ಸ್ವಾತಂತ್ರ್ಯ ಬಂದು 67 ವರ್ಷಗಳು ಕಳೆಯುತ್ತಿದ್ದರೂ ಗ್ರಾಮೀಣ ಪ್ರದೇಶಗಳ ಸಮಗ್ರವಾಧ ಅಭಿವೃಧ್ಧಿಯಾಗಿಲ್ಲ ಗ್ರಾಮೀಣ ಪ್ರದೇಶದ ಶೇ.70ಕ್ಕೂ ಹೆಚ್ಚಿನ ಜನರು ಆರೋಗ್ಯಕ್ಕೆ ಸಂಜೀವಿನಿಯಾದ ಶೌಚಾಲಯಗಳನ್ನು ನಿರ್ಮಿಸಿಕೊಳ್ಳದೇ  ಇಂದಿಗೂ ಬಯಲು ಮಲ ವಿಸರ್ಜನೆಯನ್ನೇ ಮಾಡುತ್ತಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಗ್ರಾಮೀಣ ಜನರಲ್ಲಿ ಪರಿಸರದ ಹಾಗೂ ವಯಕ್ತಿಕ ಸ್ವಚ್ಛತೆಯ ಬಗ್ಗೆ ಅರಿವಿನ ಜಾಗೃತಿಯನ್ನು ಮೂಡಿಸಿ ನಿರ್ಮಲ ಭಾರತ ಅಭಿಯಾನದ ಯಶಸ್ಸಿಗೆ ತಮ್ಮ ಕಾಣಿಕೆಯನ್ನು ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿರುವ ಯುವಕ ಮತ್ತು ಯುವತಿ ಮಂಡಳಿಗಳು ಶೌಚಾಲಯ ನಿರ್ಮಾಣ ಕಾರ್ಯವನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಂಧಿ ಹಾಡಬೇಕು ಎಂದು ಕರೆ ನೀಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿಜಗಧೀಶ್ ಮಾತನಾಡಿ ಯುವಕರು ರಾಜಕೀಯದಿಂದ ಮುಕ್ತರಾಗಿ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ನಾನು ನನ್ನದು ಎಂಬ ಸ್ವಾರ್ಥವನ್ನು ಬದಿಗಿಟ್ಟು ಸಮಾಜದಲ್ಲಿನ ನೊಂದವರು ಮತ್ತು ಬಡಜನತೆಯ ಸೇವೆಯಲ್ಲಿ ಭಗವಂತನನ್ನು ಕಾಣಲು ಪ್ರಯತ್ನ ಮಾಡಬೇಕು. ಇಂದಿನ ಸಮಾಜದಲ್ಲಿನ ಸಾಮಾಜಿಕ ಅಸಮಾನತೆಯನ್ನು ಹೊಡೆದೋಡಿಸಲು ಶಿಕ್ಷಣವು ಪ್ರಬಲವಾದ ಅಸ್ತ್ರವಾಗಿರುವುದರಿಂದ ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ಶಿಕ್ಷಣದ ಜ್ಞಾನದ ಬೆಳಕು ನೀಡಲು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ತಮ್ಮ ಮಕ್ಕಳನ್ನೇ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ಗ್ರಾಮೀಣ ಜನರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು ಎಂದು ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಧಶ್ರೀ ನಾಗೇಶ್ ಮಾತನಾಢಿ ಯುವಜನರು ಕ್ಷಣಿಕ ಸುಖದ ಆಸೆಗೆ ಬಲಿಯಾಗಿ ಸಮಾಜ ಕಂಟಕರಾಗಿ ಬದಲಾಗದೇ ಕಾಯಕ ತತ್ವದ ಮಹತ್ವವನ್ನು ಅರಿತು ಕಷ್ಠಪಟ್ಟು ದುಡಿದು ಜೀವನವನ್ನು ನಡೆಸಬೇಕು. ಸ್ವಾಮಿ ವಿವೇಕಾನಂದ, ಕಾಯಕಜ್ಯೋತಿ ಬಸವಣ್ಣ, ಗೌತನಬುದ್ಧರ ಜೀವನದ ಆದರ್ಶಗಳನ್ನು ಕಡ್ಡಾಯವಾಗಿ ಪಾಲಿಸಿ ಸಮಾಜಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದ ಉಸಿರನ್ನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನೆಹರು ಯುವಕೇಂದ್ರದ ಯುವಸಮನ್ವಯಾಧಿಕಾರಿ ಎಸ್.ಸಿದ್ಧರಾಮಪ್ಪ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಸೋಮಶೇಖರ್, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ, ಪತ್ರಕರ್ತ ಕಾಡುಮೆಣಸ ಚಂದ್ರು, ಮೊರಾರ್ಜಿ ಸವತಿಶಾಲೆಯ ಪ್ರಾಂಶುಪಾಲ ಟಿ.ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಾಜ್ಯ ಯುವಪ್ರಶಸ್ತಿ ಪುರಸ್ಕರ್øತರಾದ ಮಾದಾಪುರ ಸೋಮಶೇಖರ್ ಸ್ವಾಗತಿಸಿದರು, ಹರಿಹರಪುರದ ಅಂಬೇಡ್ಕರ್ ಯುವಸಂಘದ ಅಧ್ಯಕ್ಷ ನರಸಿಂಹ ವಂದಿಸಿದರು. ನೆಹರು ಯುವಕೇಂದ್ರದ ಜಿಲ್ಲಾ ಸಂಚಾಲಕ ಚಿಕ್ಕಗಾಡಿಗನಹಳ್ಳಿ ಪರಮೇಶ್ ಕಾರ್ಯಕ್ರಮ ನಿರೂಪಿಸಿದರು. ನೆಹರು ಯುವಕೇಂದ್ರದ ಯುವಸಮನ್ವಯಾಧಿಕಾರಿ ಎಸ್.ಸಿದ್ಧರಾಮಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹೊಸಹೊಳಲು ಪ್ರತಿಭಾ ಮಹಿಳಾ ಮಂಡಳಿಯ ಲೀಲಾವತಿ ಪ್ರಾರ್ಥಿಸಿದರು.

No comments:

Post a Comment