Sunday 31 August 2014

ಕೃಷ್ಣರಾಜಪೇಟೆ. ಇಂದಿನ ನಾಗರಿಕ ಜಗತ್ತಿನ ಸ್ಪರ್ಧಾಪ್ರಪಂಚದಲ್ಲಿ ಟೈಲರಿಂಗ್ ಮತ್ತು ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಹೆಣ್ಣು-ಗಂಡು ಎಂಬ ಬೇಧ-ಭಾವವಿಲ್ಲದಂತೆ ಕಷ್ಟಪಟ್ಟು ದುಡಿಮೆ ಮಾಡಿದರೆ ಆರ್ಥಿಕವಾಗಿ ಸ್ವಾವಲಂಭಿ ಜೀವನವನ್ನು ನಡೆಸುವ ಜೊತೆಗೆ ಇಡೀ ಕುಟುಂಬವನ್ನು ಸಮರ್ಥವಾಗಿ ಮುನ್ನಡೆಸಬಹುದಾಗಿದೆ ಎಂದು ಪಾಂಡವಪುರ ತಾಲೂಕು ಟೈಲರ್ಸ್ ಸಂಘದ ಅಧ್ಯಕ್ಷ ಕೃಪಾಕರ್ ಹೇಳಿದರು.
ಅವರು ಇಂದು ಪಟ್ಟಣದ ಟೈಲರ್ಸ್ ಸಂಘದ ಆಶ್ರಯದಲ್ಲಿ ಆಚರಿಸುತ್ತಿರುವ ಗಣೇಶೋತ್ಸವ ಸಮಾರಂಭದ ಅಂಗವಾಗಿ ನಡೆದ ಶರ್ಟಿಗೆ ಕಾಚ-ಗುಂಡಿ ಹಾಕುವ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಟೈಲರಿಂಗ್ ಮತ್ತು ಎಂಬ್ರಾಯಿಡರಿಂಗ್ ಎನ್ನುವುದು ಒಂದು ವೃತ್ತಿ ಕೌಶಲ್ಯವಾಗಿದೆ. ಟೈಲರಿಂಗ್ ಅನ್ನು ಕಷ್ಟಪಟ್ಟು ಕಲಿತು ಇದೇ ವ್ರತ್ತಿಯನ್ನು ಕಸುಬನ್ನಾಗಿಸಿಕೊಂಡು ಮುಂದುವರೆದರೆ ಖಂಡಿತವಾಗಿಯೂ ಸ್ವಾವಲಂಭಿ ಜೀವನವನ್ನು ನಡೆಸಬಹುದಲ್ಲದೇ ಇಡೀ ಕುಟುಂಬಕ್ಕೆ ಆರ್ಥಿಕವಾದ ಶಕ್ತಿಯನ್ನು ನೀಡಿ ಸಂಸಾರವನ್ನು ಮುನ್ನಡೆಸಬಹುದಾಗಿದೆ. ಆದರೆ ಕಷ್ಟಪಟ್ಟು ವೃತ್ತಿಯನ್ನು ನಡೆಸುವ ವೃತ್ತಿ ಬಾಂಧವರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸದೇ ಅನಿರೀಕ್ಷಿತವಾಗಿ ಆಕಸ್ಮಿಕವಾದ ಸಾವಿಗೆ ಶರಣಾಗುತ್ತಿರುವುದನ್ನು ಕಾಣುತ್ತಿದ್ದೇನೆ. ಇಂದಿನ ರೆಡಿಮೇಡ್ ಬಟ್ಟೆಗಳ ಯುಗದಲ್ಲಿಯೂ ವೃತ್ತಿನಿರತ ಟೈಲರ್‍ಗಳಿಗೆ ಇರುವ ಬೇಡಿಕೆಯು ಸ್ವಲ್ಪವೂ ಕಡಿಮೆಯಾಗಿಲ್ಲ. ಮಾರುಕಟ್ಟೆಯ ಪೈಪೋಟಿಯಲ್ಲಿ 200ರೂಗಳಿಗೆ ಒಂದು ಶರ್ಟು ಸಿಗುತ್ತದೆ ಆದರೆ ಒಂದು ಶರ್ಟ್ ಹೊಲಿಯಲು ವೃತ್ತಿನಿರತ ಟೈಲರ್ ಕನಿಷ್ಠ 150ರೂ ಕೂಲಿಯನ್ನು ಪಡೆದರೆ ಒಂದು ಹೆಂಗಸರ ಬ್ಲೌಸ್ ಹೊಲೆಯಲು 250ರೂ ಪಡೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಆದ್ದರಿಂದ ಟೈಲರಿಂಗ್ ಕ್ಷೇತ್ರದಲ್ಲಿ ದುಡಿಯುತ್ತಿರುವ ಬಂಧುಗಳು ಕಡ್ಡಾಯವಾಗಿ ಸಂಘದ ಸದಸ್ಯರಾಗಿ ಗುರುತಿನ ಚೀಟಿಯನ್ನು ಪಡೆದುಕೊಂಡು ತಮಗೆ ನ್ಯಾಯಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಕೇಳಿ ಪಡೆಯಬೇಕು. ಟೈಲರ್‍ಗಳು ತಾವು ಕಷ್ಟಪಟ್ಟುಗಳಿಸಿದ ಹಣದಲ್ಲಿ ಅಲ್ಪ ಭಾಗವನ್ನು ಕೂಡಿಡುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಕೂಡಿಟ್ಟ ಹಣವು ಕಷ್ಟಕಾಲದಲ್ಲಿ ಸಂಸಾರದ ನೆರವಿಗೆ ಬಂದು ಕಾಪಾಡುತ್ತದೆ ಎಂಬ ಸತ್ಯವನ್ನು ಅರಿಯಬೇಕು. ಟೈಲರ್‍ಗಳು ದುಶ್ಚಟಗಳಿಂದ ದೂರವಿದ್ದು ಸಂತೋಷದಿಂದ ನೆಮ್ಮದಿಯ ಜೀವನ ನಡೆಸಬೇಕು ಎಂದು ಕರೆ ನೀಡಿದರು.
ಟೈಲರ್ಸ್ ಸಂಘದ ತಾಲೂಕು ಘಟಕದ ಅಧ್ಯಕ್ಷ ಸುಬ್ಬೇಗೌಡ ಮಾತನಾಡಿ ಕೃಷ್ಣರಾಜಪೇಟೆ ತಾಲೂಕು ಟೈಲರ್ಸ್ ಸಂಘವು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆಯಲ್ಲದೇ ಸಂಕಷ್ಟದಲ್ಲಿರುವ ಟೈಲರ್‍ಗಳ ಕುಟುಂಬ ವರ್ಗದವರಿಗೆ ಕೈಲಾದ ಸಹಾಯವನ್ನು ಮಾಡುತ್ತಾ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಸದಸ್ಯತ್ವವನ್ನು ಪಡೆದಿರುವ ಸದಸ್ಯರಿಗೆ ಜನಶ್ರೀ ವಿಮಾ ಯೋಜನೆಯಡಿಯಲ್ಲಿ ಸಾಮೂಹಿಕ ವಿಮಾ ಸೌಲಭ್ಯ ಹಾಗೂ ಅಕಾಲಿಕವಾಗಿ ಅನಾರೋಗ್ಯದಿಂದ ಮೃತರಾದ ಟೈಲರ್‍ಗಳ ಕುಟುಂಬಕ್ಕೆ ಧನ ಸಹಾಯಮಾಢಿ ಸಹಾಯ ಹಸ್ತವನ್ನು ಚಾಚಿದೆ. ಕ್ಷೇತ್ರದ ಶಾಸಕರಾದ ನಾರಾಯಣಗೌಡ ಅವರು ಟೈಲರ್‍ಗಳಿಗೆ ಬಿಪಿಎಲ್ ಕಾರ್ಡನ್ನು ಕೊಡಿಸಿಕೊಡುವ ಜೊತೆಗೆ ಪಟ್ಟಣದ ವ್ಯಾಪ್ತಿಯಲ್ಲಿ ನಿವೇಶನವನ್ನು ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಟೈಲರ್‍ಗಳು ಧೃತಿಗೆಡದೇ ಆತ್ಮವಿಶ್ವಾಸದಿಂದ ಜೀವನ ನಡೆಸಬೇಕು. ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವ ಮೂಲಕ ವಿದ್ಯಾವಂತರನ್ನಾಗಿ ರೂಪಿಸಬೇಕು ಎಂದು ಸುಬ್ಬೇಗೌಡ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ನಡೆದ ಕಾಚ-ಗುಂಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಿಕ್ಕೇರಿಯ ಮಂಜುನಾಥ( 10ಸಾವಿರ ರೂ), ದ್ವತೀಯ ಬಹುಮಾನ ಪಡೆದ ಪಾಂಡವಪುರದ ಕೇಶವರಾಂಪೋರೆ(ದ್ವಿತೀಯ, 5ಸಾವಿರ ರೂ) ಮತ್ತು ಕೆ.ಆರ್.ಪೇಟೆ ಸ್ವಾಮಿ(ತೃತೀಯ ಬಹುಮಾನ 3ಸಾವಿರ ರೂ) ಹಾಗೂ ಸಮಾಧಾಶನಕರ ಬಹುಮಾನ ಅಕ್ಕಿಹೆಬ್ಬಾಳಿನ ಅರ್ಫತ್( ಒಂದು ಸಾವಿರ ರೂ) ನಗಧು ಬಹುಮಾನ ಮತ್ತು ನೆನಪಿನ ಕಾಣಿಕೆಯನ್ನು ಅತಿಥಿಗಳಿಂದ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಟೈಲರ್ಸ್ ಸಂಘದ ಕಾರ್ಯದರ್ಶಿ ಹೊಸಹೊಳಲು ಕೃಷ್ಣ, ಖಜಾಂಚಿ ಶ್ರೀಕಾಂತ್ ಟೈಲರ್ಸ್ ಕಾಂತರಾಜು, ಉಪಾಧ್ಯಕ್ಷ ಭಾಬೂರಾವ್, ಲೋಕೇಶ್, ದೇವರಾಜ್, ಪತ್ರಕರ್ತರಾದ ಬೂಕನಕೆರೆ ಪ್ರಕಾಶ್, ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಶಿವಸಾಗರ್ ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.
ಚಿ

No comments:

Post a Comment