Monday, 9 March 2015

  ಮಂಡ್ಯ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಪ್ರವಾಸ ಕಾರ್ಯಕ್ರಮ
ಮಂಡ್ಯ, ಮಾ.9- ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಮಂಜುಳಾ ಮಾನಸ ಅವರು ಮಾರ್ಚ್ 12 ರಂದು ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.
   ಅವರು ಅಂದು ಕೆ.ಆರ್.ಪೇಟೆಯ ಶ್ರೀಮತಿ ನಂಜಮ್ಮ ಮುದ್ದೇಗೌಡ ಸಮುದಾಯ ಭವನದಲ್ಲಿ ಕುವೆಂಪು ಮಂತ್ರಮಾಂಗಲ್ಯ ಮದುವೆ, ಜನಪದ ಗೀತಗಾಯನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಸುವರು. ನಂತರ ಮಧ್ಯಾಹ್ನ 2.30 ಗಂಟೆಗೆ ಕೆ.ಆರ್ ಪೇಟೆಯ ರಿವರ್ ವ್ಯಾಲಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ದಾಖಲೆಗಳನ್ನು ಪರಿಶೀಲಿಸುವರು ರಮದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
                      ಶ್ರೀ ಶಂಭೂಲಿಂಗೇಶ್ವರ ದೇವರ ಹಬ್ಬ: ನಿಷೇದಾಜ್ಞೆ ಜಾರಿ
ಪಾಂಡವಪುರ ತಾಲ್ಲೂಕು ಎಂ.ಬೆಟ್ಟಹಳ್ಳಿ ಗ್ರಾಮದಲ್ಲಿ ದಿನಾಂಕ 9-3-2015 ರಂದು ನಡೆಯಲಿರುವ ಶ್ರೀ ಶಂಭೂಲಿಂಗೇಶ್ವರ ದೇವರ ಹಬ್ಬದ ಹಿನ್ನೆಲೆಯಲ್ಲಿ ಎಂ. ಬೆಟ್ಟಹಳ್ಳಿ ಹಾಗೂ ಜಾಗಶೆಟ್ಟಹಳ್ಳಿ ಗ್ರಾಮಗಳಲ್ಲಿ ಜಿಲ್ಲೆಯಾದ್ಯಂತ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದಿನಾಂಕ 10-3-2015 ರ ಮಧ್ಯರಾತ್ರಿ 12.00 ಗಂಟೆಯವರೆಗೆ  ಕಲಂ 144 ರಡಿಯಲ್ಲಿ   ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಿಷೇದಾಜ್ಞೆ ಜಾರಿಯಿರುವ ಪ್ರದೇಶದ ವ್ಯಾಪ್ತಿಯಲ್ಲಿ 5 ಕ್ಕಿಂತ ಹೆಚ್ಚು ಜನ ಒಂದೇ ಕಡೆ ಸೇರುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ತಿರುಗಾಡುವಂತಿಲ್ಲ. ಯಾವುದೇ ಬಂಡಿ ಕಟ್ಟುವುದು, ಮೆರವಣಿಗೆ ಮಾಡುವುದು ಮತ್ತು ಸಾರ್ವಜನಿಕವಾಗಿ ಪೂಜಾ ಕೈಂಕರ್ಯಗಳನ್ನು ನಡೆಸುವುದನ್ನು ನಿಬಂಧಿಸಲಾಗಿದೆ.
ಈ ಅವಧಿಯಲ್ಲಿ ಅನಿವಾರ್ಯವಾಗಿ ನಡೆಸಬೇಕಾದ ಶುಭ ಸಮಾರಂಭಗಳು ಅಥವಾ ಶವ ಸಂಸ್ಕಾರ ಇತ್ಯಾದಿಗಳಿಗೆ ಪೂರ್ವಾನುಮತಿ ಪಡೆದು ಕ್ರಮ ವಹಿಸತಕ್ಕದ್ದು ಎಂದು ತಹಶೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿ ಡಿ.ಎಸ್.ಶಿವಕುಮಾರಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ವಿದ್ಯಾರ್ಥಿನಿಯರಿಗೆ ಕಾನೂನು ಅರಿವು ಕಾರ್ಯಕ್ರಮ
  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಡ್ಯ, ಮಹಿಳಾ ಸರ್ಕಾರಿ ಕಾಲೇಜು ಹಾಗೂ ವಿಕಸನ ಸಂಸ್ಥೆ, ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್ 10 ರಂದು ಮಧ್ಯಾಹ್ನ 2 ಗಂಟೆಗೆ ಮಂಡ್ಯ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ವಿದ್ಯಾರ್ಥಿನಿಯರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
   ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ಸದಾನಂದ ಎಂ. ದೊಡ್ಡಮನಿ ಅವರು ಉದ್ಘಾಟಿಸವರು. ಅಧ್ಯಕ್ಷತೆಯನ್ನು ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾ ಅಪ್ಪಾಜಿ ಅವರು ವಹಿಸಿವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 11 ರಂದು ಗ್ರಾಮೀಣಾ ಕ್ರೀಡೋತ್ಸವ
ಜಿಲ್ಲಾಡಳಿತ ಮಂಡ್ಯ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಪರಿಷತ್,ಮಂಡ್ಯ, ಗ್ರಾಮ ಪಂಚಾಯತಿ, ಕೆರೆಗೋಡು, ಗ್ರಾಮಾಂತರ ಪ್ರಥಮ ದರ್ಜೆ ಕಾಲೇಜು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಕೆರೆಗೋಡು ಇವರ ಸಂಯುಕ್ತಶ್ರಯದಲ್ಲಿ ಮಾರ್ಚ್ 11 ರಂದು ಬೆಳಿಗ್ಗೆ 10.30 ಗಂಟೆಗೆ ಮಂಡ್ಯ ತಾಲ್ಲೂಕು ಕೆರೆಗೋಡು ಗ್ರಾಮಾಂತರ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗ್ರಾಮೀಣಾ ಕ್ರೀಡೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಗೊರವಾಲೆ ಚಂದ್ರಶೇಖರ್ ( ಮೊ. 9141545306) ಮೇಲ್ವಿಚಾರಕರಾದ ವೈ. ಲಿಂಗರಾಜು ( ಮೊ:9141545306) ಇವರನ್ನು ಸಂಪರ್ಕಿಸುವಂತೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕುರಿಗಳು/ ಟಗರುಗಳ ಬಹಿರಂಗ ಹರಾಜು
ನಾಗಮಂಗಲದ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರದಲ್ಲಿ ಮಾರ್ಚ್ 11 ರ ಬೆಳಿಗ್ಗೆ 11.30 ಗಂಟೆಗೆ ಮಂಡ್ಯ (ಬಂಡೂರು/ ಬನ್ನೂರು) ಕುರಿಗಳು/ ಟಗರುಗಳ ಬಹಿರಂಗ ಹರಾಜು ನಡೆಯಲ್ಲಿದ್ದು, ಅವುಗಳನ್ನು ಖರೀದಿಸಲು ಇಚ್ಚಿಸುವವರು ಮಾರ್ಚ್ 11 ರ ಬೆಳಿಗ್ಗೆ 11 ಗಂಟೆಯೊಳಗಾಗಿ ರೂ 5,000 ಕನಿಷ್ಠ ಠೇವಣಿ ಹಣವನ್ನು ಕ್ಷೇತ್ರ ಅಧೀಕ್ಷಕರು, ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ, ನಾಗಮಂಗಲ ಇಲ್ಲಿ ಸಂದಾಯಿಸಿ, ತಮ್ಮ ಹೆಸರನ್ನು ನೋಂದಾಯಿಸಿ ಹರಾಜು ಪ್ರಕಿಯೆಯಲ್ಲಿ ಭಾಗವಹಿಸುವಂತೆ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಕ್ಷೇತ್ರ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲ್ಪಾವಧಿ ಟೆಂಡರ್ ಆಹ್ವಾನ
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಗಣಕಯಂತ್ರ ಹಾಗೂ ಇತರೆ ಯಂತ್ರೋಪಕರಣಗಳ ಅವಶ್ಯಕತೆ ಇರುವುದರಿಂದ ಅಧಿಕೃತ ಮಾರಾಟಗಾರರಿಂದ ಟಂಡರ್ ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಅಧಿಕೃತ ಮಾರಾಟಗಾರರು ಟೆಂಡರ್‍ನ್ನು ಪ್ರತ್ಯೇಕವಾಗಿ (ಯಂತ್ರೋಪಕರಣವಾರು) ಮಾರ್ಚ್ 13 ರಂದು ಸಂಜೆ 5.00 ಗಂಟೆಯೊಳಗೆ ಮುದ್ರಿತ ಲಕೋಟೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ, ಮಂಡ್ಯ ಜಿಲ್ಲೆ, ಮಂಡ್ಯ ಇಲ್ಲಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೇಖನ ಸಾಮಗ್ರಿ : ದರಪಟ್ಟಿಗೆ ಅರ್ಜಿ ಆಹ್ವಾನ
         2015-16ನೇ ಸಾಲಿಗೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಲೇಖನ ಸಾಮಗ್ರಿಗಳನ್ನು ಸರಬರಾಜು ಮಾಡಲು ಆಸಕ್ತ ಲೇಖನ ಸಾಮಗ್ರಿ ಸರಬರಾಜುದಾರರಿಂದ  ದರಪಟ್ಟಿಯನ್ನು ಆಹ್ವಾನಿಸಿದೆ. ದರಪಟ್ಟಿಯನ್ನು ಮಾರ್ಚ್ 23 ರ ಸಂಜೆ 5.00 ಗಂಟೆಯೊಳಗೆ ಸಲ್ಲಿಸಬಹುದಾಗಿದ್ದು, ಸರಬರಾಜು ಮಾಡಬೇಕಾದ ಐಟಂ ವಿವರ ಹಾಗೂ ಇತರೆ ಷರತ್ತುಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ, ಮಂಡ್ಯ ಇವರನ್ನು ಸಂಪರ್ಕಿಸುವಂತೆ  ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment