Saturday, 21 March 2015

ಚಾಮುಂಡಿ ಬೆಟ್ಟದ ಕಾಡಿಗೆ ಬೆಂಕಿ

ಮೈಸೂರು: ಚಾಮುಂಡಿಬೆಟ್ಟದಲ್ಲಿ ಮತ್ತೆ 
ಕಿಡಿಗೇಡಿಗಳ ಕೆಂಗಣ್ಣಿಗೆ ಗುರಿಯಗಿ
 ಕಾಡಿಗೆ ಬೆಂಕಿ ಬಿದ್ದು ನೂರಾರು ಎಕರೆಯಲ್ಲಿರುವ ಅರಣ್ಯ ಸುಟ್ಟು ಭಸ್ಮವಾಗಿದೆ.

ಸಂಗ್ರಹ ಚಿತ್ರ.
 .   ನಂಜನಗೂಡು   ರಸ್ತೆಯಲ್ಲಿರುವ ಗೌರಿಶಂಕರ ನಗರಕ್ಕೆ ಹೊಂದಿಕೊಂಡಿರುವ ಚಾಮುಂಡಿ ಬೆಟ್ಟದ ಪಾದದ ಬಳಿ ಶುಕ್ರವಾರ ಮಧ್ಯಾಹ್ನ 2.15ರ ಹೊತ್ತಿಗೆ ಕಾಣಿಸಿಕೊಂಡಿದ್ದ ಬೆಂಕಿ ಇಡೀ ಬೆಟ್ಟವನ್ನು ಆವರಿಸಿಕೊಂಡಿದೆ. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಗಾಳಿಯ ವೇಗ ಹೆಚ್ಚಾಗಿರುವುದರಿಂದ ಬೆಂಕಿ ಜ್ವಾಲೆ ತೀವ್ರವಾಗಿ ಹರಡ ತೊಡಗಿದೆ. ಬೆಟ್ಟದ ಬುಡದಲ್ಲಿ ನಿನ್ನೆ ಸಂಜೆ 5 ಗಂಟೆ ಹೊತ್ತಿಗೆ ಬೆಂಕಿ ನಂದಿಸಲಾಯಿತಾದರೂ, ಮತ್ತೆ ಆರು ಗಂಟೆಯ ಹೊತ್ತಿಗೆ ಬೆಟ್ಟದ ಮಧ್ಯಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಅನಾಹುತಕ್ಕೆ ಕಿಡಿಗೇಡಿಗಳೆ ಕಾರಣ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಉಂಟಾದ ಕಾಡ್ಗಿಚ್ಚಿಗೂ ಇದೇ ಕಾರಣವಾಗಿತ್ತು. ಇದು ಮತ್ತೆ ಪುನರಾವರ್ತನೆ ಆಗಿರುವುದರಿಂದ ಮತ್ತಷ್ಟು ಅರಣ್ಯ ಸಂಪತ್ತು ಹಾಳಾಗಿದೆ.


.

No comments:

Post a Comment