Monday, 2 March 2015



ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಹೋಬಳಿ ಪುರ ಗ್ರಾಮದಲ್ಲಿ ಮಹಿಳಾ ಸರ್ಕಾರಿ ಕಾಲೇಜು, ಮಂಡ್ಯ ಇವರು ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಮದ್ದೂರಿನ ಸ್ವಾಮಿ ವಿವೇಕಾನಂದ ಯುವ ಸಾಂಸ್ಕøತಿಕ ಕ್ರೀಡಾ ಸಂಘ ಹಾಗೂ ಮನುಜ ಮತ ಸೇವಾ ಟ್ರಸ್ಟ್‍ನ ಸಂಯುಕ್ತಾಶ್ರಯದಲ್ಲಿ ನಡೆದ ಕೆಸರು ಗದ್ದೆ ಕ್ರೀಡಾ ಸ್ಫರ್ಧೆಗೆ ಕಾವೇರಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀ. ನಂಜಪ್ಪ ಚಾಲನೆ ನೀಡಿದರು.  ನಂತರ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಸ್ವಾಮಿ ವಿವೇಕಾನಂದ ಯುವ ಸಾಂಸ್ಕøತಿಕ ಕ್ರೀಡಾ ಸಂಘ ಅಧ್ಯಕ್ಷ ಲಾರಾ ಪ್ರಸನ್ನ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಕ್ರೀಡೆಗಳಲ್ಲಿ ಯುವತಿಯರು ಪಾಲ್ಗೊಳ್ಳುವುದು ಕ್ಷೀಣಿಸುತ್ತಿದ್ದು ಇಂದು ಪುರ ಗ್ರಾಮದಲ್ಲಿ 150ಕ್ಕೂ ಹೆಚ್ಚು ಯುವತಿಯರೇ ಕೆಸರು ಗದ್ದೆ ಆಟಗಳಲ್ಲಿ ಭಾಗವಹಿಸಿರುವುದು ಮಂಡ್ಯ ಜಿಲ್ಲೆಯ ಗ್ರಾಮೀಣ ಕ್ರೀಡೆ ಹಾಗೂ ಸಂಸ್ಕøತಿಯನ್ನು ಮತ್ತೆ ಸಾರುವ ಕೆಲಸ ಆಗುತ್ತಿದೆ ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಗ್ರಾಮೀಣ ಸಂಸ್ಕøತಿ, ಜನಪದ, ಕ್ರೀಡೆಗಳನ್ನ ಆಡುವುದರ ಜೊತೆಗೆ ಅವುಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಕೆಲಸ ಸಂಘ ಸಂಸ್ಥೆಗಳ ಮೇಲಿದೆ ಎಂದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರ ಗ್ರಾ.ಪಂ ಸದಸ್ಯ ಮಹದೇವಪ್ಪ ವಹಿಸಿ ಮಾತನಾಡಿದರು.  ನಂತರ ನಡೆದ ಕೆಸರು ಗದ್ದೆ ಓಟದ ಸ್ಪರ್ಧೆಯಲ್ಲಿ ಯುವತಿಯರು ಭಾಗವಹಿಸಿ ಎದ್ದು ಬಿದ್ದು ನಾ ಮುಂದು ತಾ ಮುಂದು ಎನ್ನುತ್ತಾ ಗುರಿ ಮುಟ್ಟಲು ಹರ ಸಾಹಸಪಟ್ಟರು.  ನಂತರ ಕೂಸುಮರಿ ಓಟ, ತುಂಬಿದ ನೀರಿನ ಬಿಂದಿಗೆ ಓಟ, ಹಗ್ಗ ಜಗ್ಗಾಟ ಮತ್ತು ಕೆಸರುಗದ್ದೆಯಲ್ಲಿ ಫ್ಯಾಶನ್ ಷೋ ಸ್ಪರ್ಧೆಗಳನ್ನು ಉತ್ಸುಕತೆಯಿಂದ ಪಾಲ್ಗೊಂಡು ಗ್ರಾಮದ ಗ್ರಾಮಸ್ಥರಿಗೆ ಹಾಗೂ ನೆರೆದಿದ್ದ ಕ್ರೀಡಾ ಪೋಷಕರಿಗೆ ಮುದ ನೀಡಿದರು.  ಈ ಸಂದರ್ಭದಲ್ಲಿ ಗ್ರಾ.ಪಂ ಪಿ.ಡಿ.ಓ ಚಂದ್ರು ಎನ್.ಎಸ್.ಎಸ್ ಅಧಿಕಾರಿಗಳಾದ ಪ್ರೊ. ನಾರಾಯಣ ಕೆ ಬಿ ಮತ್ತು ಪ್ರೊ. ಪ್ರಮೀಳ ಎಂ ಬಿ, ಸಹಾಯಕ ನವೀನ್ ಕುಮಾರ್ ಎಂ ಎಸ್, ಗ್ರಾಮದ ಮುಂಖಡರುಗಳಾದ ಪ್ರಪುಲ್ಲಚಂದ್ರ, ಹಿರಿಯ ಸ್ವಯಂಸೇವಕಿ ಸುಕೃತ ಜಿ ಸಿ, ಸುಷ್ಮ ಎನ್ ಆರ್, ನಾಗರತ್ನ ಕೆ ಪಿ, ಸಂಧ್ಯಾ ಎಂ ಸಿ  ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದರು.
ಸ್ಪರ್ಧೆ ವಿಜೇತರ ವಿವರ.
1. ನೀರು ತುಂಬಿದ ಬಿಂದಿಗೆ ಓಟ: ಅಶ್ವಿನಿ ಎಸ್ (ಪ್ರಥಮ), ಕಾವ್ಯ ಹೆಚ್ ಕೆ (ದ್ವಿತೀಯ) & ರಮ್ಯ ಎ (ತೃತೀಯ).
2. ಕೂಸು ಮರಿ ಓಟ: ರಮ್ಯ – ಅಶ್ವಿನಿ (ಪ್ರಥಮ), ಮಾನಸ - ಸುಷ್ಮಾ ಸಿ ಎನ್ (ದ್ವಿತೀಯ).
3. ಹಗ್ಗ ಜಗ್ಗಾಟ ಸ್ಪರ್ಧೆ: ನರ್ಮದಾ ತಂಡ (ಪ್ರಥಮ), ಕಾವೇರಿ ತಂಡ  (ದ್ವಿತೀಯ)
4. 50 ಮೀ ಓಟದ ಸ್ಪರ್ಧೆ: ಸಹನ ಹೆಚ್.ಎಸ್ (ಪ್ರಥಮ), ಹರ್ಷಿತ ಎಲ್ ಎಸ್ (ದ್ವಿತೀಯ) ಪದ್ಮಶ್ರೀ ಎಸ್ (ತೃತೀಯ) ಸ್ಥಾನ ಪಡೆದರು.
5. ಗ್ರಾಮದ ಪುಟಾಣಿಗಳಿಗೆ ನಡೆದ ಓಟದ ಸ್ಪರ್ಧೆ ವಿಜೇತರ ವಿವರ: ಪ್ರಜ್ವಲ್ (ಪ್ರಥಮ), ಬಸವ (ದ್ವಿತೀಯ), ಚಂದನ್ (ತೃತೀಯ).
6. ಗ್ರಾಮದ ಯುವಕರ ಹಗ್ಗ ಜಗ್ಗಾಟ ಸ್ಪರ್ಧೆ : ಪುರ ಗ್ರಾಮದ ತಂಡ (ಪ್ರಥಮ), ಮಲ್ಲಿಗೆರೆ ಯುವ ತಂಡ (ದ್ವಿತೀಯ)
ವಿಶೇಷವೆಂಬಂತೆ ಈ ಎಲ್ಲಾ ಸ್ಪರ್ಧೆಗಳು ಕೆಸರು ಗದ್ದೆಯಲ್ಲೇ ನಡೆದು ನೆರೆದಿದ್ದವರನ್ನು ಖುಷಿಗೊಳಿಸಿತು.

No comments:

Post a Comment