Tuesday, 31 March 2015

ಕರ್ನಾಟಕದಲ್ಲಿ ಹತ್ತು ಸಾವಿರ ಕೋಟಿ ವೆಚ್ಚದ ರಸ್ತೆ ಯೋಜನೆಗಳು ಶೀಘ್ರ ಆರಂಭ : ನಿತಿನ್ ಗಡ್ಕರಿ

ಬೆಂಗಳೂರು.

ಕರ್ನಾಟಕದಲ್ಲಿ ಸುಮಾರು ಹತ್ತು ಸಾವಿರ ಕೋಟಿ ವೆಚ್ಚದ ಪ್ರಸ್ತಾವಿತ ಹತ್ತು ರಸ್ತೆ ಯೋಜನೆಗಳು ಡಿಸೆಂಬರ್ 2015 ಒಳಗೆ ಆರಂಭಗೊಳ್ಳಲಿವೆ. ಇದುವರೆಗೆ ರಸ್ತೆ ಸಾರಿಗೆ ಸಚಿವಾಲಯ ರಾಜ್ಯದಲ್ಲಿ 8263 ಕೋಟಿ ರೂಪಾಯಿ ವೆಚ್ಚದ 1196.47 ಕಿ.ಮಿ ವಿಸ್ತೀರ್ಣದ ರಸ್ತೆ ಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿಗಳುಮತ್ತು ನೌಕಾಯಾನ ಸಚಿವ ಶ್ರೀ ನಿತಿನ ಗಡ್ಕರಿ ಹೇಳಿದ್ದಾರೆ .                 

ಅವರು ಬೆಂಗಳೂರಿನಲ್ಲಿ ಇಂದು ಬಿಜಾಪುರ-ಗುಲ್ಬರ್ಗಾ-ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ ವಿಭಾಗ-218 (ನೂತನ ಎನ್ ಹೆಚ್ 50) ರ ಅಗಲೀಕರಣ ಮತ್ತು ಅಭಿವೃದ್ಧಿ  ಹಾಗೂ ಮಧುಗಿರಿ-ಗೌರಿಬಿದನೂರು-ಚಿಕ್ಕಬಳ್ಳಪುರ-ಚಿಂತಾಮಣಿ- ಮುಳುಬಾಗಲು ರಾಷ್ಟ್ರೀಯ ಹೆದ್ದಾರಿ ವಿಭಾಗ-234 (ನೂತನ ಎನ್ ಹೆಚ್ 69) ರ ಅಗಲೀಕರಣ ಮತ್ತು ಪುರ್ನವಸತಿ ಯೋಜನೆಗಳಿಗೆ ಶಂಕುಸ್ಥಾಪನೆಗೈದು ಮಾತನಾಡಿದರು.

ಹೊಸಪೇಟೆ-ಚಿತ್ರದುರ್ಗಾ-ಎನ್‍ಹೆಚ್-13, ಹೊಪೇಟೆ-ಬಳ್ಳಾರಿ-ಕರ್ನಾಟಕ-ಆಂಧ್ರಪ್ರದೇಶ ಗಡಿ- ಎನ್‍ಹೆಚ್-63, ಹಾಸನ-ಬಿಸಿರೋಡ್ ಎನ್‍ಹೆಚ್-48, ಶಿವಮೊಗ್ಗ-ಮಂಗಳೂರು- ಎನ್‍ಹೆಚ್-13, ಅಂಕೋಲ-ಹುಬ್ಬಳ್ಳಿ- ಎನ್‍ಹೆಚ್-64, ಹುಬ್ಬಳ್ಳಿ-ಹೊಸಪೇಟೆ- ಎನ್‍ಹೆಚ್—63, ಬಿಜಾಪುರ-ಗುಲ್ಬರ್ಗಾ-ಹೋಮ್ನಾಬಾದ್- ಎನ್‍ಹೆಚ್-218, ತಮಿಳುನಾಡು ಗಡಿ/ದಿಂಡಿಕಲ್-ಬೆಂಗಳೂರು- ಎನ್‍ಹೆಚ್-209, ನೆಲಮಂಗಲ-ತುಮಕೂರು( 6ಲೇನ್) ಎನ್‍ಹೆಚ್—4, ಚಿತ್ರದುರ್ಗ-ಹಾವೇರಿ(6 ಲೇನ್) - ಎನ್‍ಹೆಚ್-4 ಇವು ಕರ್ನಾಟಕದ ಹತ್ತು ಪ್ರಸ್ತಾವಿತ ರಸ್ತೆ ಯೋಜನೆಗಳಾಗಿವೆ. ಬೆಂಗಳೂರು ಮತ್ತು ಚೆನ್ನೈ ಎರಡು ಮೆಟ್ರೋ ನಗರಗಳನ್ನು ಜೋಡಿಸುವ ಎಕ್ಸೆಪ್ರೆಸ್ ಹೈವೆಯೊಂದನ್ನು ಆರಂಭಿಸುವ ಯೋಚನೆ ಸಚಿವಾಲಯಕ್ಕಿದೆ ಎಂದು ಸಚಿವರು ಹೇಳಿದರು.

ದೇಶದಲ್ಲಿ ಒಳನಾಡು ಜಲಮಾರ್ಗಗಳನ್ನು ಆರಂಭಿಸುವಲ್ಲಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ಸುಮಾರು 101 ನದಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ‘ಸ್ವಚ್ಛ ಭಾರತ- ಹೊಗೆ ಮುಕ್ತ ಭಾರತ’ದ ಗುರಿ ಸಾಧನೆಗಾಗಿ ಬಸ್ಸುಗಳಲ್ಲಿ ಜೈವಿಕ ಡಿಸೇಲ್ ಬಳಕೆಯನ್ನು ಕಡ್ಡಾಯಗೊಳಿಸುವ ಕುರಿತು ಸಚಿವಾಲಯ ಯೋಚಿಸುತ್ತದೆ ಎಂದು ಸಚಿವರು  ತಿಳಿಸಿದರು.

ಕೇಂದ್ರ ಕಾನೂನು ಸಚಿವ ಶ್ರೀ ಡಿ.ವಿ. ಸದಾನಂದ ಗೌಡ ಮಾತನಾಡಿ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕದ ಎಲ್ಲ ಅಗತ್ಯತೆಗಳನ್ನು ಪೂರೈಸಲಾಗುವುದು ಎಂದರು.

ಶ್ರೀ. ಜಿ.ಎಮ್ ಸಿದ್ದೇಶ್ವರ, ರಾಜ್ಯ ಸಚಿವರು, ಬೃಹತ್, ಉದ್ದಿಮೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳು, ಶ್ರೀ. ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕರು, ಶ್ರೀ. ಎನ್ .ಹೆಚ್ ಶಿವಶಂಕರ ರೆಡ್ಡಿ, ಉಪ ಸಭಾಪತಿ, ಕರ್ನಾಟಕ ವಿಧಾನಸಭೆ, ಡಾ. ಹೆಚ್.ಸಿ ಮಹದೇವಪ್ಪ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ, ಕರ್ನಾಟಕ ಸರ್ಕಾರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

No comments:

Post a Comment