Wednesday, 11 March 2015

ಮೈಸೂರು.೧೧.ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ 2014-15ನೇ ಸಾಲಿನಲ್ಲಿ ಅನುಷ್ಟಾನಗೊಳಿಸುತ್ತಿರುವ ಕೃಷಿ ಭಾಗ್ಯ ಯೋಜನೆಯಡಿ ಪಾಲಿಹೌಸ್ ನಿರ್ಮಿಸಿ ಹೂವು/ ತರಕಾರಿ ಬೆಳೆಯುವ ಆಸಕ್ತಿ ಹೊಂದಿರುವ ರೈತರಿಗೆ ಸಹಾಯಧನ ನೀಡಲು ಕಾರ್ಯವನ್ನು ರೂಪಿಸಲಾಗಿರುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಮಾರ್ಗಸೂಚಿಯಂತೆ ಪಾಲಿಹೌಸ್ ನಿರ್ಮಿಸಿ ಆದರಲ್ಲಿ ಹೂ/ತರಕಾರಿ  ಬೆಳೆಯಲು ಇಚ್ಚಿಸುವ ರೈತರು ತಮ್ಮ ಜಮೀನಿನಲ್ಲಿ ಮೊದಲಿಗೆ ಮಳೆ ನೀರು ಸಂಗ್ರಹಣೆ ಕೃಷಿಹೊಂಡ ಡೀಸಲ್ ಪಂಪ್‍ಸೆಟ್ ಮತ್ತು ಲಘು ನೀರಾವರಿ ಘಟಕಗಳನ್ನ ಖಡ್ಡಾಯವಾಗಿ ತಮ್ಮ ಖರ್ಚಿನಲ್ಲಿ ಮಾರ್ಗಸೂಚಿಯಂತೆ  ಅಳವಡಿಸಿಕೊಳ್ಳಬೇಕಾಗಿರುತ್ತದೆ ಹಾಗೂ ಮೇಲಿನ ಘಟಕಗಳನ್ನು ಅಳವಡಿಸಿಕೊಳ್ಳವ ಜೊತೆಯಲ್ಲಿ ಪಾಲಿಹೌಸ್ ನಿರ್ಮಾಣ ಮಾಡಿಕೊಳ್ಳಬೇಕಾಗಿರುತ್ತದೆ. 4000 ಚದರ ಮೀಟರ್ ಅಳತೆವರೆವಿಗೂ ಪಾಲಿಹೌಸ್ ನಿರ್ಮಿಸಲು ಅವಕಾಶವಿದ್ದು ನಿಯಮಗಳಿಗೆ ಒಳಪಟ್ಟು ಒಂದು ಚದರ ಮೀಟರ್‍ಗೆ ಶೇಖಡ 50ರ ಸಹಾಯಧನದಲ್ಲಿ 445 ರೂ ಗಳನ್ನು ನೀಡುವ ಅವಕಾಶವಿರುತ್ತದೆ. ಅಲ್ಲದೆ ಪಾಲಿಹೌಸ್ ಘಟಕ ಜೊತೆಯಲ್ಲಿ ನಿರ್ಮಿಸುವ ಕೃಷಿಹೊಂಡ ಡೀಸಲ್ ಪಂಪ್‍ಸೆಟ್ ಮತ್ತು ಲಘು ನೀರಾವರಿ ಘಟಕಗಳಿಗೆ ಪ್ರತ್ಯೇಕವಾಗಿ ನಿಯಾಮಗಳಿಗೆ ಒಳಪಟ್ಟು ಸಹಾಯಧನ ನೀಡಲಾಗುವುದು.

ಆದ್ದರಿಂದ ಪಾಲಿಹೌಸನಲ್ಲಿ ಹೂ/ತರಕಾರಿ ಬೇಸಾಯ ಮಾಡಲು ಆಸಕ್ತಿ ಹೊಂದಿರುವ ರೈತರು ಕೂಡಲೆ ಸಮೀಪದ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿಗಳನ್ನು ನೀಡಿ ಸರ್ಕಾರದ ಸವಲತ್ತನ್ನು ಪಡೆಯಬೇಕಾಗಿ ರೈತ ಬಾಂಧವರನ್ನು ತೋಟಗಾರಿಕೆ ಇಲಾಖೆ ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಕಚೇರಿ ಹೆಸರು         ದೂರವಾಣಿ ಸಂಖ್ಯೆ
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ), ಮೈಸೂರು     0821-2430450
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ), ಹೆಚ್.ಡಿ.ಕೋಟೆ 08228-255261
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ), ಹುಣಸೂರು 08222-252447
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ), ಕೆ.ಆರ್.ನಗರ 08223-262791
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ), ನಂಜನಗೂಡು 08221-226201
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ), ಪಿರಿಯಾಪಟ್ಟಣ 08223-273535
ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ), ಟಿ.ನರಸೀಪುರ 08227-260086
ತೋಟಗಾರಿಕೆ ಉಪನಿರ್ದೇಶಕರು(ಜಿಪಂ), ಮೈಸೂರು 0821-2422255



No comments:

Post a Comment