ಹಜ್ ಸಿನಿಮಾ ಪ್ರದರ್ಶನ
ಮೈಸೂರು,ಮಾ.11.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಮೈಸೂರು ಫಿಲ್ಮ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಲಾಗುವ ಸಿನಿಮಾ ಸಮಯದಲ್ಲಿ ಮಾರ್ಚ್ 13 ರಂದು ಶುಕ್ರವಾರ ಸಂಜೆ 5-30ಕ್ಕೆ ಕಲಾಮಂದಿರದಲ್ಲಿ ನಿಖಿಲ್ ಮಂಜು ನಿರ್ದೇಶನದ ಹಜ್ ಚಲನಚಿತ್ರ ಪ್ರದರ್ಶಿಸಲಾಗುವುದು.
ಹಜ್ ಚಿತ್ರದ ನಟನೆಗಾಗಿ ನಿಖಿಲ್ ಮಂಜು ಎಲ್. ಅವರು 2013ನೇ ಸಾಲಿನ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಾಗೂ ಹಜ್ ಚಲನಚಿತ್ರ ಪ್ರಥಮ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಚಿತ್ರ ಪ್ರದರ್ಶನದ ನಂತರ ನಿರ್ದೇಶಕ ನಿಖಿಲ್ ಮಂಜು ಹಾಗೂ ನಿರ್ಮಾಪಕ ರಾಜೀವ್ ಕೊಠಾರಿ ಅವರ ಜೊತೆ ಸಂವಾದ ಕೂಡ ಇರುತ್ತದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಎ.ಆರ್.ಪ್ರಕಾಶ್ ಅವರು ಕೋರಿದ್ದಾರೆ.
“ಕೃಷಿ ಭಾಗ್ಯ” : ರೈತರಿಂದ ಅರ್ಜಿ ಆಹ್ವಾನ
ಮೈಸೂರು,ಮಾ.11.ಕೃಷಿ ಇಲಾಖೆ ವತಿಯಿಂದ ಕೃಷಿ ಭಾಗ್ಯ ಯೋಜನೆಯಡಿ ಸಹಾಯಧನ ನೀಡಲು ಆಸಕ್ತ ಹುಣಸೂರು ಮತ್ತು ಹೆಚ್.ಡಿ.ಕೋಟೆ ತಾಲ್ಲೂಕಿನ ರೈತರಿಂದ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಲ್ಲಿ ಮಳೆ ನೀರಿನ ಸಂಗ್ರಹಣೆ, ಸಂರಕ್ಷಣೆ ಹಾಗೂ ಉಪಯುಕ್ತ ಬಳಕೆ, ಲಾಭದಾಯಕ ಬೆಳೆ ಪದ್ಧತಿ ಅಳವಡಿಕೆ, ಉತ್ತಮ ಆದಾಯ ತರುವ ತೋಟಗಾರಿಕೆ ಬೆಳೆ, ಪಶುಸಂಗೋಪನಾ ಚಟುವಟಿಕೆ, ಕೃಷಿ ವಲಯಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುವುದು
ಈ ಸೌಲಭ್ಯ ಎಲ್ಲಾ ವರ್ಗದ ರೈತರು ಪಡೆಯಬಹುದಾಗಿದೆ. ರೈತರು ದಿನಾಂಕ 16-03-2015 ರಿಂದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಛೇರಿಗಳಿಗೆ ದಿನಾಂಕ 31-03-2015 ರೊಳಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ರೈತರು ರೈತ ಸಂಪರ್ಕ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ತಿತಿತಿ.ಡಿಚಿiಣಚಿmiಣಡಿಚಿ.ಞಚಿಡಿ.ಟಿiಛಿ.iಟಿ ಮತ್ತು ಉಚಿತ ಸಹಾಯವಾಣಿ ಸಂಖ್ಯೆ 18004253553 & 18001801551 ಗೆ ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಮರು ನಾಮಕರಣ
ಮೈಸೂರು,ಮಾ.11-ಕರ್ನಾಟಕ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆಯನ್ನು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾಲಿಹೌಸ್ ನಿರ್ಮಿಸಲು ಸಹಾಯಧನ: ರೈತರಿಂದ ಅರ್ಜಿ ಆಹ್ವಾನ
ಮೈಸೂರು,ಮಾ.11. ಜಿಲ್ಲಾ ತೋಟಗಾರಿಕಾ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿ ಪಾಲಿಹೌಸ್ ನಿರ್ಮಿಸಿ ಹೂವು/ ತರಕಾರಿ ಬೆಳೆಯಲು ಆಸಕ್ತಿ ಹೊಂದಿರುವ ರೈತರಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ.
ಪಾಲಿಹೌಸ್ ನಿರ್ಮಿಸಿ ಅದರಲ್ಲಿ ಹೂ/ತರಕಾರಿ ಬೆಳೆಯಲು ಇಚ್ಚಿಸುವ ರೈತರು ತಮ್ಮ ಜಮೀನಿನಲ್ಲಿ ಮೊದಲಿಗೆ ಮಳೆ ನೀರು ಸಂಗ್ರಹಣೆ ಕೃಷಿಹೊಂಡ ಡೀಸಲ್ ಪಂಪ್‍ಸೆಟ್ ಮತ್ತು ಲಘು ನೀರಾವರಿ ಘಟಕಗಳನ್ನು ಕಡ್ಡಾಯವಾಗಿ ತಮ್ಮ ಖರ್ಚಿನಲ್ಲಿ ಮಾರ್ಗಸೂಚಿಯಂತೆ ಅಳವಡಿಸಿಕೊಳ್ಳಬೇಕಾಗಿರುತ್ತದೆ ಹಾಗೂ ಪಾಲಿಹೌಸ್ ನಿರ್ಮಾಣ ಮಾಡಿಕೊಳ್ಳಬೇಕಾಗಿರುತ್ತದೆ.
4000 ಚದರ ಮೀಟರ್ ಅಳತೆವರೆವಿಗೂ ಪಾಲಿಹೌಸ್ ನಿರ್ಮಿಸಲು ಅವಕಾಶವಿದ್ದು ಒಂದು ಚದರ ಮೀಟರ್‍ಗೆ ಶೇ. 50ರ ಸಹಾಯಧನದಲ್ಲಿ 445 ರೂ.ಗಳನ್ನು ನೀಡುವ ಅವಕಾಶವಿರುತ್ತದೆ. ಪಾಲಿಹೌಸ್ ಘಟಕ ಜೊತೆಯಲ್ಲಿ ನಿರ್ಮಿಸುವ ಕೃಷಿಹೊಂಡ ಡೀಸಲ್ ಪಂಪ್‍ಸೆಟ್ ಮತ್ತು ಲಘು ನೀರಾವರಿ ಘಟಕಗಳಿಗೆ ಪ್ರತ್ಯೇಕವಾಗಿ ನಿಯಮಗಳಿಗೆ ಒಳಪಟ್ಟು ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಮೈಸೂರಿನ ಜಿಲ್ಲಾ ಪಂಚಾಯತ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ದೂರವಾಣಿ ಸಂಖ್ಯೆ 0821-2430450, ತೋಟಗಾರಿಕೆ ಜಿಲ್ಲಾ ಪಂಚಾಯತ್, ಉಪನಿರ್ದೇಶಕರು 0821-2422255, ಹೆಚ್.ಡಿ.ಕೋಟೆ ಜಿಲ್ಲಾ ಪಂಚಾಯತ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು 08228-255261, ಹುಣಸೂರಿನ ಜಿಲ್ಲಾ ಪಂಚಾಯತ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು 08222-252447, ಕೆ.ಆರ್.ನಗರ ಜಿಲ್ಲಾ ಪಂಚಾಯತ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು 08223-262791, ನಂಜನಗೂಡಿನ ಜಿಲ್ಲಾ ಪಂಚಾಯತ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು 08221-226201, ಪಿರಿಯಾಪಟ್ಟಣ ಜಿಲ್ಲಾ ಪಂಚಾಯತ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು 08223-273535 ಹಾಗೂ ಟಿ.ನರಸೀಪುರ ಜಿಲ್ಲಾ ಪಂಚಾಯತ್ ಸಹಾಯಕ ತೋಟಗಾರಿಕೆ ನಿರ್ದೇಶಕರು 08227-260086ನ್ನು ಸಂಪರ್ಕಿಸಬಹುದು.
ಕರಾಮುವಿ ಪದವಿ ಪರೀಕ್ಷೆ: ಶುಲ್ಕ ಪಾವತಿಸಿ
ಮೈಸೂರು,ಮಾ.11-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2014-15ನೇ ಸಾಲಿನಲ್ಲಿ ನಡೆಯುವ ಅಂತಿಮ ಎಂ.ಎ/ಎಂ.ಕಾಂ., ಪದವಿ ಪರೀಕ್ಷೆ ದಿನಾಂಕ 06-05-2015 ರಿಂದ ಹಾಗೂ ಪ್ರಥಮ ಎಂ.ಎ/ಎಂ.ಕಾಂ., ಪದವಿ ಪರೀಕ್ಷೆ ದಿನಾಂಕ 18-05-2015 ರಿಂದ ಪ್ರಾರಂಭವಾಗಲಿದೆ. ಪರೀಕ್ಷೆಗಳಿಗೆ ನಿಗಧಿತ ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕ 27-03-2015 ಕೊನೆಯ ದಿನಾಂಕವಾಗಿರುತ್ತದೆ ಹಾಗೂ ದಿನಾಂಕ 06-04-2015 ರವರೆಗೆ ರೂ. 200/- ದಂಡ ಶುಲ್ಕದೊಂದಿಗೆ ಪಾವತಿಸಲು ಅವಕಾಶವಿರುತ್ತದೆ.
ಪರೀಕ್ಷಾ ಅರ್ಜಿಯನ್ನು ಅಂಚೆ ಮುಖಾಂತರ ವಿದ್ಯಾರ್ಥಿಗಳ ವಿಳಾಸಕ್ಕೆ ರವಾನಿಸಲಾಗಿದ್ದು, ಅರ್ಜಿ ತಲುಪದೇ ಇರುವ ವಿದ್ಯಾರ್ಥಿಗಳು ಹತ್ತಿರದ ಪ್ರಾದೇಶಿಕ ಕೇಂದ್ರ/ಕೇಂದ್ರ ಕಚೇರಿ, ಮೈಸೂರು ಇಲ್ಲಿ ಅರ್ಜಿ ಪಡೆದು ನಿಗದಿತ ದಿನಾಂಕದೊಳಗೆ ಶುಲ್ಕ ಪಾವತಿಸುವುದು.
ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವೆಬ್‍ಸೈಟ್ ತಿತಿತಿ.ಞsouexಚಿm.iಟಿ ನಲ್ಲಿ ಅಥವಾ ದೂರವಾಣಿ ಸಂಖ್ಯೆ : 0821-2515169, 2519942 ಇxಣ : 489, 490, 491, 492 ನ್ನು ಸಂಪರ್ಕಿಸಬಹುದು.
ಕಾಲರಾ ಮತ್ತು ಕರುಳುಬೇನೆ ನಿಯಂತ್ರಿಸಲು ಕ್ರಮ
ಮೈಸೂರು,ಮಾ.11-ಕಾಲರಾ ಮತ್ತು ಕರಳುಬೇನೆ ಪ್ರಕರಣ ವರದಿಯಾದ ತಕ್ಷಣ ರೋಗಿಯ ಮನೆಗೆ ಭೇಟಿ ನೀಡಿ ರೋಗಿ ಕುಟುಂಬ ಸದಸ್ಯರಿಗೆ ಸಂಪರ್ಕ ಚಿಕಿತ್ಸೆ ನೀಡಿ ರೋಗಿಯ ಮನೆಗೆ ಸೋಂಕು ನಿವಾರಕ ಸಿಂಪಡಣೆ ಮಾಡಿ ಸಮುದಾಯದಲ್ಲಿ ಗುಂಪು ಸಭೆ ಮಾಡಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸೂಕ್ತ ಅಂಶಗಳ ಬಗ್ಗೆ ಜನಸಾಮಾನ್ಯರಿಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.
ಸಮುದಾಯ ಕುಡಿಯಲು ಬಳಸುವ ನೀರಿನ ಮೂಲಗಳಾದ ಓವರ್ ಹೆಡ್ ಟ್ಯಾಂಕ್ ಕ್ಲೀನಿಂಗ್ ಹಾಗೂ ವಾಲ್ವ್ ಪಾಯಿಂಟ್‍ಗಳಲ್ಲಿ ನೀರು ಸೋರಿಕೆಯಾಗುತ್ತಿದ್ದರೆ ಗ್ರಾಮದ ಬೀದಿಗಳಲ್ಲಿ ಪೈಪ್ ಲೈನ್‍ಗಳು ಹೊಡೆದು ನೀರು ಸೋರಿಕೆಯಾಗುತ್ತಿದ್ದರೆ ಕೂಡಲೇ ದುರಸ್ತಿ ಮಾಡಿ ಪ್ರತಿನಿತ್ಯ ನೀರಿಗೆ ಕ್ಲೋರಿನೇಷನ್ ಮಾಡಿ ಸಮುದಾಯಕ್ಕೆ ಶುದ್ದ ಕುಡಿಯುವ ನೀರು ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಮುದಾಯದಲ್ಲಿ ಉಂಟಾಗಿರುವ ರೋಗ ಪ್ರಕರಣಗಳ ಬಗ್ಗೆ ಸೂಕ್ತವಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಟಾಂ ಟಾಂ ಮೂಲಕ ಪ್ರಚಾರ ಮಾಡಲು ಸ್ಥಳೀಯ ಆಡಳಿತದ ಸಹಯೋಗದಲ್ಲಿ ಕ್ರಮ ವಹಿಸಲಾಗುತ್ತಿದೆ.
ನೀರಿನ ಮಾದರಿ ಹಾಗೂ ರೋಗಿಯ ಮಲ ನಮೂನೆಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಜಿಲ್ಲಾ ಪ್ರಯೋಗಶಾಲೆಗೆ ಅಳವಡಿಸಲಾಗುತ್ತಿದೆ. ನೀರಿನ ಮಾದರಿಗಳು ಪರೀಕ್ಷೆಯಲ್ಲಿ ಕುಡಿಯಲು ಯೋಗ್ಯವಲ್ಲವೆಂದು ಫಲಿತಾಂಶ ಬಂದಲ್ಲಿ ಕುಡಿಯಲು ಯೋಗ್ಯವಾಗುವಂತೆ ಪರಿವರ್ತಿಸಲು ಸೂಕ್ತವಾದ ಕ್ರಮ ಕೈಗೊಳ್ಳಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆದು ತುರ್ತು ಔಷಧಗಳೊಂದಿಗೆ ರೋಗಿಗಳಿಗೆ ಚಿಕಿತ್ಸೆ ಮತ್ತು ಸಲಹೆ ನೀಡಲಾಗುತ್ತಿದೆ.
ಇಲಾಖಾ ನೌಕರರೊಡಗೂಡಿ ಸಮೀಕ್ಷಾ ಕಾರ್ಯವನ್ನು ನಡೆಸಲಾಗುತ್ತಿದೆ. ಅಂಗನವಾಡಿ ಮತ್ತು ಶಾಲೆಗಳಿಗೆ ಭೇಟಿ ನೀಡಿ ಶುದ್ಧವಾದ ನೀರು ಮತ್ತು ಆಹಾರವನ್ನು ಮಕ್ಕಳಿಗೆ ವಿತರಿಸುವಂತೆ ಸಲಹೆ ನೀಡಲಾಗುತ್ತಿದೆ ಹಾಗೂ ಶೌಚಾಲಯದ ಬಳಕೆ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಲಾಗುತ್ತಿದೆ ಎಮದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಲಾನುಭವಿಗಳಿಗೆ ಕಿಟ್ ವಿತರಣೆ
ಮೈಸೂರು,ಮಾ.11-ತೋಟಗಾರಿಕೆ ಇಲಾಖೆ ವತಿಯಿಂದ ಕೈತೋಟ ಮತ್ತು ತಾರಸಿ ತೋಟ ತರಬೇತಿ ಕಾರ್ಯಕ್ರಮವನ್ನು ಮಾರ್ಚ್ 12 ರಂದು ಬೆಳಿಗ್ಗೆ 11-30ಕ್ಕೆ ಕುಕ್ಕರಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ|| ಬಿ. ಪುಷ್ಪಾ ಅಮರನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಫಲಾನುಭವಿ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗುವುದರ ಜೊತೆಯಲ್ಲಿ ಸಾರ್ವಜನಿರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿದ್ಯುತ್ ನಿಲುಗÀಡೆ
ಮೈಸೂರು,ಮಾ.11-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 ಕೆವಿ ದೊಡ್ಡಕೆರೆ ಮೈದಾನ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ 66/11 ಕೆವಿ ಜೆ.ಸಿ. ಮತ್ತು ಸಿದ್ದಾರ್ಥನಗರ ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಮಾರ್ಚ್ 12 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ನಿಲುಗಡೆಗೊಳಿಸಲಾಗುವುದು.
ಕುರುಬರಹಳ್ಳಿ, ಜೆ.ಸಿ.ನಗರ, ಕೆ.ಸಿ.ಲೇಔಟ್, ಸಿದ್ದಾರ್ಥನಗರ, ಆಲನಹಳ್ಳಿ ಲೇಔಟ್, ಆಲನಹಳ್ಳಿ, ಗಿರಿದರ್ಶಿನಿ ಲೇಔಟ್, ನಂದನಿಲೇಔಟ್, ಪೊಲೀಸ್ ಲೇಔಟ್, ಲಲಿತಾದ್ರಿಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಲಿದೆ ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳು ಸಹಕರಿಸಬೇಕಾಗಿ ಕೋರಿದೆ.
ವಾಯು ಪಡೆಗೆ ನೇಮಕಾತಿ
ಮೈಸೂರು,ಮಾ.11.ಭಾರತೀಯ ಅರ್ಹ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಭಾರತೀಯ ವಾಯು ಪಡೆಯಲ್ಲಿ ಗ್ರೂಪ್-ಎಕ್ಸ್ ಟೆಕ್ನೀಕಲ್ ಟ್ರೇಡ್, ಮತ್ತು ಗ್ರೂಪ್-ವೈ ಅಟೋ ಟೆಕ್ನೀಕಲ್, ಜಿಟಿಐ ಮತ್ತು ಐಎಎಫ್(ಪಿ) ಟ್ರೇಡ್ ಹುದ್ದೆಗಳ ನೇಮಕಾತಿ ರ್ಯಾಲಿ ಮಾರ್ಚ್ 22 ರಿಂದ 28 ರವರೆಗೆ ಬೆಳಗಾವಿ ಜಿಲ್ಲೆಯ ಕುಮಾರ್ ಗಂಧರ್ವ ಹಾಲ್‍ನಲ್ಲಿ ನಡೆಯಲಿದೆ.
ಗ್ರೂಪ್-ಎಕ್ಸ್ ಹುದ್ದೆಗಳಿಗೆ ದಿನಾಂಕ:26-03-2015 ರಿಂದ 27-03-2015 ರ ವರೆಗೆ ಎಲ್ಲಾ ಜಿಲ್ಲೆಯ ಅಭ್ಯರ್ಥಿಗಳಿಗೆ ನೇಮಕಾತಿ ನಡೆಯಲಿದ್ದು, ವಿಧ್ಯಾರ್ಹತೆ:- ಪಿಯುಸಿ ತೇರ್ಗಡೆಯಾಗಿರಬೇಕು ಗಣಿತ, ಭೌತ ಶಾಸ್ತ್ರ, ಇಂಗ್ಲೀಷ್ ವಿಷಯಗಳಲ್ಲಿ 50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಪಾಲಿಟೆಕ್ನಿಕ್‍ಲ್ಲಿ 3 ವರ್ಷದ ಡಿಪ್ಲೋಮ ಪಡೆದಿರಬೇಕು. ವಯೋಮಿತಿ 01 ಆಗಸ್ಟ್ 1995 ರಿಂದ 30 ನವೆಂಬರ್ 1998 ರ ಒಳಗೆ ಜನಿಸಿದವರಾಗಿರಬೇಕು, ಎತ್ತರ-152.5 ಸೆಂ.ಮೀ. ಇರಬೇಕು.
ಗ್ರೂಪ್-ವೈ ಆಟೊಮೋಬೈಲ್ ಟೆಕ್ನೀಷಿಯನ್, ಗ್ರೌಂಡ್ ಟ್ರೈನಿಂಗ್ ಇಸ್ಟ್ರಕ್ಟರ್, ಮತ್ತು ವಾಯುದಳ ಪೊಲೀಸ್ ಹುದ್ದೆಗಳಿಗೆ ದಿನಾಂಕ:22-03-2015 ರಿಂದ 23-03-2015 ರ ವರೆಗೆ ಮೈಸೂರು ಜಿಲ್ಲೆಯ ಅಭ್ಯರ್ಥಿಗಳಿಗೆ ನೇಮಕಾತಿ ನಡೆಯಲಿದೆ. ವಿಧ್ಯಾರ್ಹತೆ:- ಪಿಯುಸಿ ತೇರ್ಗಡೆಯಾಗಿದ್ದು, ಇಂಗ್ಲೀಷ್ ವಿಷಯದಲ್ಲಿ 50 ಅಂಕಗಳೊಂದಿಗೆ ಪಾಸಾಗಿರಬೇಕು ವಯೋಮಿತಿ:- 01 ಆಗಸ್ಟ್ 1995 ರಿಂದ 30 ನವೆಂಬರ್ 1998 ರ ಒಳಗೆ ಜನಿಸಿದವರಾಗಿರಬೇಕು, ಎತ್ತರ-165 ಸೆಂ.ಮೀ.ಯಾಗಿದ್ದು, ವೇತನ 20500=00 ಹಾಗೂ ಇನ್ನೀತರೆ ಭತ್ಯೆಗಳನ್ನು ಒಳಗೊಂಡಿರುತ್ತದೆ.
ರ್ಯಾಲಿಯಲ್ಲಿ ಭಾಗವಹಿಸುವವರು ಮೂಲ ಎಸ್.ಎಸ್.ಎಲ್.ಸಿ/ಪಿಯುಸಿ ಅಂಕಪಟ್ಟಿ, 7 ಕಲರ್ ಪಾಸ್ ಪೋರ್ಟ ಸೈಜಿನ ಭಾವಚಿತ್ರ, ಹೆಚ್.ಬಿ ಪೆಸ್ಸೀಲ್, 2 ಸ್ವ-ವಿಳಾಸ ಹೊಂದಿರುವ ಕವರ್, ಯಾವ ಜಿಲ್ಲೆಯ ಅಭ್ಯರ್ಥಿ ಎಂದು ಧೃಡೀಕರಿಸಲು ಡೋಮಾಸಿಯಲ್ ಸರ್ಟಫೀಕೆಟ್ ಪಡೆದಿರಬೇಕು.
ಹೆಣ್ಣು ಮಗು ರಕ್ಷಿಸಿ ಶಿಕ್ಷಣ ಕೊಡಿಸಿ ಜಾಗೃತಿ ಕಾರ್ಯಕ್ರಮ
ಮೈಸೂರು,ಮಾ.11-ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಮೈಸೂರು ತಾಲ್ಲೂಕು ಪಂಚಾಯಿತಿ ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಮಾರ್ಚ್ 12 ರಂದು ಬೆಳಿಗ್ಗೆ 11 ಗಂಟೆಗೆ ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಹೆಣ್ಣು ಮಗು ರಕ್ಷಿಸಿ ಶಿಕ್ಷಣ ಕೊಡಿಸಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗಮೂರ್ತಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಸದಸ್ಯೆ ಭಾಗ್ಯಶಿವಮೂರ್ತಿ ಅವರು ಅಧ್ಯಕ್ಷತೆ ವಹಿಸುವರು.
ಮೈಸೂರು ತಾಲ್ಲೂಕು ಪಂಚಾಯತ್ ಸದಸ್ಯ ರೇವಣ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ರಾಧಾ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ವಿದ್ಯುತ್ ನಿಲುಗÀಡೆ
ಮೈಸೂರು,ಮಾ.11-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ 66/11 ಕೆವಿ ದೇವನೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ 66/11 ಕೆವಿ ಭಾರತ್‍ನಗರ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಮಾರ್ಚ್ 12 ರಂದು ಬೆಳಿಗ್ಗೆ 10 ರಿಂದ ಸಂಜೆ 5-30 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ನಿಲುಗಡೆಗೊಳಿಸಲಾಗುವುದು.
ಕಾಮನಕೆರೆಹುಂಡಿ, ಸಿದ್ದಲಿಂಗಪುರ, ಹಳೇಕೆಸರೆ, ನಾಗನಹಳ್ಳಿ, ಲಕ್ಷ್ಮೀಪುರ, ಕಳಶ್ತವಾಡಿ, ಸಾತಗಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಲಿದೆ ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳು ಸಹಕರಿಸಬೇಕಾಗಿ ಕೋರಿದೆ.
ಮಾ. 14 ರಂದು ಲೋಕ್ ಅದಾಲತ್
ಮೈಸೂರು,ಮಾ.11.ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದಿನಾಂಕ 14-03-2015 ರಂದು ಮೈಸೂರು ಜಿಲ್ಲೆಯಾದ್ಯಂತ ರಾಷ್ಟ್ರೀಯ ಲೋಕ್ ಅದಾಲತ್‍ನ್ನು ಹಮ್ಮಿಕೊಳ್ಳಲಾಗಿದೆ.
ಈ ಲೋಕ್ ಅದಾಲತ್‍ನಲ್ಲಿ ರೆವಿನ್ಯೂ ಪ್ರಕರಣಗಳು, ನರೇಗಾ ಪ್ರಕರಣಗಳು ಹಾಗೂ ಭೂ ಸ್ವಾಧೀನ ಪ್ರಕರಣಗಳಲ್ಲಿ ಇತ್ಯರ್ಥವಾಗಬಹುದಾದಂತಹ ವ್ಯಾಜ್ಯಗಳನ್ನು ಕಾನೂನು ರೀತ್ಯಾ ಇತ್ಯರ್ಥಗೊಳಿಸಲಾಗುವುದು. ಸಾರ್ವಜನಿಕರು ಇದರ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2330130ನ್ನು ಸಂಪರ್ಕಿಸಬಹುದು.
ಮಾ. 28 ರಂದು ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ
ಮೈಸೂರು,ಮಾ.11. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಮಾರ್ಚ್ 28 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ.ಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ
ಮೈಸೂರು,ಮಾ.11-ಮೈಸೂರು ನಗರದ ಕೆ.ಆರ್. ಕ್ಷೇತ್ರದ ವ್ಯಾಪ್ತಿಯಲ್ಲಿನ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ, ವಿಧವಾವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಹಾಗೂ ಮನಸ್ವಿ ಯೋಜನೆ ಮಂಜೂರಾತಿ ಪ್ರತಿಯನ್ನು ಮಾರ್ಚ್ 12 ರಂದು ಬೆಳಿಗ್ಗೆ 10 ಗಂಟೆಗೆ ಕುವೆಂಪುನಗರದಲ್ಲಿರುವ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಕೆ.ಆರ್. ಕ್ಷೇತ್ರದ ಶಾಸಕರಾದ ಎಂ.ಕೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ವಿತರಿಸಲಾಗುವುದು.
No comments:
Post a Comment