Thursday, 19 March 2015

ಗ್ರಾಮೀಣ ಭಾಗದ ಮಕ್ಕಳಿಲ್ಲದ ದಂಪತಿಗಳಿಗೆ ಉಚಿತ ತಪಾಸಣಾ ಶಿಬಿರ

ಮಂಡ್ಯ, ಮಾರ್ಚ್ 19, 2015: ಮೈಸೂರು ನಗರದ ಕುವೆಂಪುನಗರದ ವಿಶ್ವಮಾನವ ಡಬ್ಬಲ್ ರೋಡ್‍ನಲ್ಲಿರುವ ಗುಣಶೀಲ ಅಸಿಸ್ಟೆಡ್ ರಿಪೆÇ್ರೀಡಕ್ಷನ್ ಸೆಂಟರ್ ಇದೇ ಬರುವ ಮಾರ್ಚ್ 27 ರಂದು (ಶುಕ್ರವಾರ) ಮಂಡ್ಯ, ಚಾಮರಾಜನಗರ, ಕೊಡಗು ಮತ್ತು ಮೈಸೂರು ಭಾಗದ ಬಂಜೆತನ ಸಮಸ್ಯೆ ಎದುರಿಸುತ್ತಿರುವ ದಂಪತಿಗಳಿಗೆ ಉಚಿತ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದೆ. ತಪಾಸಣೆಗೊಳಗಾಗುವ ಮಕ್ಕಳಿಲ್ಲದ ದಂಪತಿಗಳಿಗೆ ಉಚಿತ ಸಾಮಾನ್ಯ ಪರೀಕ್ಷೆ, ರಕ್ತ ತಪಾಸಣೆ, ಸ್ಕ್ಯಾನಿಂಗ್ ಮತ್ತು ಆಪ್ತ ಸಮಾಲೋಚನೆಯನ್ನು ವೈದ್ಯರ ತಂಡ ನೀಡಲಿದೆ. ಉಚಿತ ತಪಾಸಣಾ ಶಿಬಿರ ಬೆಳಿಗ್ಗೆ 8-30 ರಿಂದ ಮದ್ಯಾನ್ಹ 2 ರವರೆಗೆ ನಡೆಯುತ್ತದೆ. ಸಂತಾನಫಲ ಚಿಕಿತ್ಸೆ ತಜ್ಞೆ ಡಾ. ದೇವಿಕಾ ಗುಣಶೀಲ ಮತ್ತು ಅವರ ವೈದ್ಯರ ತಂಡ ಮಕ್ಕಳಿಲ್ಲದ ದಂಪತಿಗಳಿಗೆ ಉಚಿತ ತಪಾಸಣೆ ಮತ್ತು ಸಲಹೆಗಳನ್ನು ನೀಡಲಿದ್ದಾರೆ. ಉಚಿತ ತಪಾಸಣೆಗೆ ಸೋಮವಾರದಿಂದ ಶನಿವಾರದ ನಡುವೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ಅವಧಿಯಲ್ಲಿ ಮುಂಚಿತವಾಗಿ ಹೆಸರನ್ನು ನೋಂದಾಯಿಸಬೇಕಾಗಿ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಾಯಿಸಲು ಸಂಪರ್ಕಿಸಿ: 0821-2343585 ಅಥವಾ 0821-2343385. ವಿಳಾಸ: ಗುಣಶೀಲ ಅಸಿಸ್ಟೆಡ್ ರಿಪೆÇ್ರೀಡಕ್ಷನ್ ಸೆಂಟರ್, ವಿಶ್ವಮಾನವ ಡಬ್ಬಲ್ ರೋಡ್, ಕುವೆಂಪುನಗರ, ಮೈಸೂರು.

No comments:

Post a Comment