ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಪುತ್ರಿ ಪ್ರಿಯಾಂಕ ಗಾಂಧಿ ಅವರನ್ನು ಸಕ್ರಿಯ ರಾಜಕಾರಣಕ್ಕೆ ತರುವಂತೆ ಬಹು ದಿನಗಳ ಕಾಂಗ್ರೆಸ್ ಮುಖಂಡರ ಒತ್ತಾಯಕ್ಕೆ ಅಂತೂ ಕಾಲ ಕೂಡಿ ಬಂದತ್ತಿದೆ.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಜೆ ಮೇಲೆ ತೆರಳಿದ್ದು ಅವರು ಬಂದ ಮೇಲೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
ಇದೇ ವೇಳೆ, ಪ್ರಿಯಾಂಕ ಗಾಂಧಿಗೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗುತ್ತದೆ ಎಂದು ದೆಹಲಿಯ ಕಾಂಗ್ರೆಸ್’ನ ಉನ್ನತ ಮೂಲಗಳಿಂದ ಮಾಹಿತಿ ಬಂದಿದೆ.
ಮುಂದಿನ ಏಪ್ರಿಲ್ನಲ್ಲಿ ಎಐಸಿಸಿ ಸಭೆಯಲ್ಲಿ ರಾಹುಲ್, ಅಧ್ಯಕ್ಷ ಗಾದಿಯನ್ನು ಏರುವ ಸಾಧ್ಯತೆ ಇದ್ದು, ಅವರ ತಂಡಕ್ಕೆ ಪ್ರಿಯಾಂಕ ಸೇರ್ಪಡೆಯಾಗಲಿದ್ದಾರೆ. ಕಾರ್ಯಕರ್ತರ ಒತ್ತಡ ಮೇರೆ ಪ್ರಿಯಾಂಕ ಸಕ್ರೀಯ ರಾಜಕೀಯಕ್ಕೆ ಬರಲಿದ್ದಾರೆ ಎಂದು ತಿಳಿದುಬಂದಿದೆ.
No comments:
Post a Comment