ಮೈಸೂರು ಚಾಮುಂಡಿಬೆಟ್ಟದ ಮಹಿಷಾಸುರನ ಹೆಬ್ಬೆರಳನ್ನು ಊನಗೊಳಿಸಿದ ಕಿಡಿಗೇಡಿಗಳು
ಮೈಸೂರು : ನಾಡ ಅಧಿದೇವತೆ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿನ ಮಹಿಷಾಸುರನ ಪ್ರತಿಮೆಯನ್ನು ಕಿಡಿಗೇಡಿಗಳು ವಿಘ್ನಗೊಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತರು ಮತ್ತು ಪ್ರವಾಸಿಗರನ್ನು ಸ್ವಾಗತಿಸುವುದೇ ಮಹಿಷಾಸುರನ ಪ್ರತಿಮೆ. ಈ ಪ್ರತಿಮೆಯ ಕಾಲಿನ ಹೆಬ್ಬೆರಳನ್ನು ಕಿಡಿಗೇಡಿಗಳು ಕಲ್ಲಿನಿಂದ ಜಜ್ಜಿ ವಿರೂಪಗೊಳಿಸಿದ ಘಟನೆ ನಡೆದಿದೆ.
ಮಹಿಷಾಸುರನ ಪ್ರತಿಮೆಯ ಸುತ್ತಲೂ ಕಬ್ಬಿಣದ ಗ್ರಿಲ್ ನಿರ್ಮಿಸಲಾಗಿದೆ. ಆದರೂ ಕಿಡಿಗೇಡಿಗಳು ಆ ಗ್ರಿಲ್ ನ ಗೇಟ್ ತೆರೆದು ಒಳ ಪ್ರವೇಶಿಸಿ ಪ್ರತಿಮೆ ಎಡಗಾಲಿನ ಹೆಬ್ಬೆರಳನ್ನು ಕಲ್ಲಿನಿಂದ ಜಜ್ಜಿದ್ದಾರೆ. ಜತೆಗೆ ಈ ಕೃತ್ಯಕ್ಕೆ ಬಳಸಿದ್ದ ಕಲ್ಲನ್ನು ಸಹ ಸಮೀಪದಲ್ಲಿಯೇ ಬಿಟ್ಟು ಹೋಗಿದ್ದಾರೆ. ದುರಂತವೆಂದರೆ, ಚಾಮುಂಡಿಬೆಟ್ಟದ ಪೋಲೀಸ್ ಠಾಣೆಯ ಮುಂದೆ ಇರುವ ಮಹಿಷಾಸುರ ಪ್ರತಿಮೆಯನ್ನು ಊನಗೊಳಿಸಿರುವುದು ಪೆÇಲೀಸರ ಕರ್ತವ್ಯ ಲೋಪಕ್ಕೆ ಸಾಕ್ಷಿಯಂತಿದೆ.

No comments:
Post a Comment