Saturday, 14 March 2015


ಮಳವಳ್ಳಿಯಲ್ಲಿ ನಿರಾತಂಕವಾಗಿ ನಡೆದ ಪಿಯು ಪರೀಕ್ಷೆ
   ಮಂಡ್ಯ:ಇದೇ ಮಾ.12 ರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ  ದ್ವಿತೀಯ ಪಿಯುಸಿ  ಪರೀಕ್ಷೆಗಳು ಆರಂಭಗೊಂಡಿದ್ದು ಮೂರನೇ ದಿನವಾದ ಇಂದು ಮಳವಳ್ಳಿಯ ಶಾಂತಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ರಾಜ್ಯಶಾಸ್ತ್ರ ಪರೀಕ್ಷೆಯು ನಿರಾತಂಕವಾಗಿ ನಡೆಯಿತು.ಶಾಂತಿ ಪ.ಪೂ.ಕಾಲೇಜಿನಲ್ಲಿ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು 20 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.ಸ.ಪ.ಪೂ.ಕಾಲೇಜಿನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 485 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.ಇದುವರೆಗೆ ತಾಲೂಕಿನಲ್ಲಿ ಯಾವುದೇ ಡಿಬಾರ್ ಆಗಿರುವುದಿಲ್ಲ.ಇಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಬಿ.ಎಂ.ಶ್ರೀಕಂಠಯ್ಯ ಅವರ ನೇತೃತ್ವದ ಜಿಲ್ಲಾ ಜಾಗೃತ ದಳದ ತಂಡ ಹಾಗೂ ಪುಟ್ಟಸ್ವಾಮಿ ನೇತೃತ್ವದ ತಾಲೂಕು ಜಾಗೃತ ದಳದ ತಂಡ ಭೇಟಿ ನೀಡಿ ಪರಿಶೀಲಿಸಿತು.ತಂಡದಲ್ಲಿ ಸದಸ್ಯರಾದ ಎಂ.ನಿಂಗರಾಜು,ಸಿದ್ದಲಿಂಗಮೂರ್ತಿ,ಶಿವಕುಮಾರ್,ಹೊಳಲು ಶ್ರೀಧರ್,ಶಿವಾನಂದ್,ನಾಗಮ್ಮ  ಉಪಸ್ಥಿತರಿದ್ದರು.

                                 

No comments:

Post a Comment