ಭೇರ್ಯ,ಮಾ,18- ಬಯಲು ಶೌಚಾಲಯದಿಂದಾಗಿ ಗ್ರಾಮದ ನೈರ್ಮಲ್ಯ ಹಾಳಾಗುವುದರ ಜೊತೆಗೆ ನಮ್ಮಗಳ ಆರೋಗ್ಯ ಕೂಡ ಹಾಳಾಗುವುದು ಖಂಡಿತ ಆದ್ದರಿಂದ ಬಯಲು ಶೌಚಾಲಯವನ್ನು ನಿಲ್ಲಿಸಿ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಿ ಕೊಳ್ಳಿ ಎಂದು ಹರಂಬಳ್ಳಿ ಕೊಪ್ಪಲು ಶಾಲೆಯ ಮುಖ್ಯಶಿಕ್ಷಕ ಸ್ವಾಮಿ ತಿಳಿಸಿದರು. ಅವರು ಹೊಸಅಗ್ರಹಾರ ಗ್ರಾ.ಪಂ.ವತಿಯಿಂದ ಹಮ್ಮಿಕೊಂಡಿದ್ದ ರಾಷ್ಠ್ರೀಯಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ವಚ್ಚತಾ ಸಪ್ತಾಹ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಬಳಿ ತಿಪ್ಪೆ ಮತ್ತು ಕಸ ಹಾಕದಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದ ಅವರು ಪ್ರತಿಯೊಂದು ಮಗು ಅಕ್ಷರ ಕಲಿಯ ಬೇಕು ಎಂಬ ಉದೇಶದಿಂದ ಸರ್ಕಾರ ಕೋಟ್ಯಾಂತರ ಹಣ ಖರ್ಚು ಮಾಡುತ್ತಿದ್ದು ಅದರಂತೆ ಶಾಲಾ ಮಕ್ಕಳಿಗೆ ಶೌಚಾಲಯ ಬಳಸುವುದುಕ್ಕಾಗಿ ಹೈಟೇಕ್ ಶೌಚಾಲಯಗಳನ್ನು ಸರ್ಕಾರ ಪ್ರತಿಯೊಂದು ಶಾಲೆಗಳಲ್ಲಿ ನಿರ್ಮಿಸಿದ್ದು ಕೋಟ್ಯಾಂತರ ಹಣವನ್ನು ವಿನಿಯೋಗಿಸಿದೆ ಎಂದರು.
ಪ್ರತಿಯೊಬ್ಬರು ಬಯಲು ಶೌಚಾಲಯದಿಂದ ಮುಕ್ತಿಗೊಳಿಸಿ ಶೌಚಾಲಯ ಬಳಸಲು ಸರ್ಕಾರ ಕೋಟ್ಯಾಂತರ ಹಣವನ್ನು ಮೀಸಲಿಟ್ಟಿದೆ ಎಂದ ಅವರು ನಮ್ಮ ಗ್ರಾ.ಪಂ.ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿ ಕೊಂಡು ಉತ್ತಮ ಪರಿಸಿರ ಹಾಗೂ ನೈರ್ಮಲ್ಯವನ್ನು ಕಾಪಾಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಇದಕ್ಕೂ ಮುನ್ನ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಂದ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ವಚ್ಚತೆ ಬಗ್ಗೆ ಜಾಥ ನಡೆಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು.
ಸ್ತ್ರೀಶಕ್ತಿ ಸಂಘದ ಮಹಿಳೆಯರು ಹಾಗೂ ಗ್ರಾಮದ ಕೆಲ ಯುವ ಮುಖಂಡರು ಗ್ರಾ.ಪಂ.ಪಿಡಿಓ ದಿವ್ಯಾ ಅವರ ಜೊತೆಗೂಡಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಕೆಲವು ಕಡೆಗಳಲ್ಲಿ ಗ್ರಾಮವನ್ನು ಸ್ವಚ್ಚ ಮಾಡಿದರು.
ಕಾರ್ಯಕ್ರಮದಲ್ಲಿ ಪಿಡಿಓ ದಿವ್ಯಾ, ಎಸ್.ಡಿ.ಎಂ.ಸಿ ಅಧ್ಯಕ್ಷೆ ದಾಕ್ಷಾಯಿಣಿ, ಮಾಜಿ ಅಧ್ಯಕ್ಷ ಜವರೇಗೌಡ, ಗ್ರಾಮಲೆಕ್ಕೀಗ ರವೀಂದ್ರ, ಶಿಕ್ಷಕರಾದ ಸತೀಶ್, ಲೋಕೇಶ್, ಮಂಜುನಾಥ್, ಶ್ರೀನಿವಾಸ್, ಲಕ್ಷ್ಮೀ, ನಾರಾಯಣ, ರೇವಣ್ಣ, ಬಿಲ್‍ಕಲ್ಟರ್ ಸ್ವಾಮಿ, ಸ್ತ್ರೀಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಗ್ರಾಮಸ್ಥರು ಭಾಗವಹಸಿದ್ದರು,
No comments:
Post a Comment