Tuesday, 24 March 2015

ಸರ್ವಜನಾಂಗ ಹಿತರಕ್ಷಣಾ ವೇದಿಕೆಯಿಂದ ಅಂತರಾಷ್ಟ್ರೀಯಾ ಮಹಿಳಾ ದಿನ  ಚರಣೆ
ಮೈಸೂರು,ಮಾ.24- ಮೈಸೂರು ಜಿಲ್ಲೆಯ ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ಮಹಿಳಾ ವಿಭಾಗ ವತಿಯಿಂದ  ಇದೆ ತಿಂಗಳ 29ರ ಭಾನುವಾರ ನಗರದ ಕಲಾ ಮಂದಿರದ ಮನೆಯಂಗಳದಲ್ಲಿ  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು  ಆಚರಿಸಲಿದೆ.
  ಈ ಕಾರ್ಯಕ್ರಮವನ್ನು  ಜಿಲ್ಲಾ ಪಂಚಾಯಿತಿ ಅಧುಕ್ಷೆ ಡಾ, ಪುಷ್ಪಾಅಮರ್‍ನಾಥ್ ಉದ್ಘಾಟಿಸಲಿದ್ದಾರೆ, ಅಧ್ಯಕ್ಷತೆಯನ್ನು ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ಮಹಿಳಾ ಅಧ್ಯಕ್ಷೆ ಸಿ.ಯಶೋಧ ನಾರಾಯಣ್ ವಹಿಸಲಿದ್ದಾರೆ,  ಮುಖ್ಯ ಭಾಷಣಕಾರರಾಗಿ ಮೈ.ವಿ.ವಿಯ ಪೋಸ್ಟ್ ಡಾಕ್ಟರ್ ಆಫ್ ಆಲ್ ಫೆಲೋಡಾ. ಎಂ. ಕನ್ನಿಕಾ ಮಾತನಾಡಲಿದ್ದಾರೆ.
 ಮುಖ್ಯ ಅಥಿತಿಗಳಾಗಿ ಸ.ಜ.ಹಿ.ವೆಯ ರಾಜ್ಯಾಧ್ಯಕ್ಷ ವೇಣುಗೋಪಾಲ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೆಹೆನಾಬಾನು, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಉಪಮೇಯರ್ ಮಹದೆವಮ್ಮ, ವಜ್ರೇಗೌಡ, ಹರೀಶ್ಗೌಡ, ಡಾ. ಗೀತಾ ಅವದಾನಿ, ಗಿಡಮೂಲಿಕೆ ವೃದ್ಯೆ  ಮಾಸ್ತಮ್ಮ, ನೀಲಮ್ಮ, ಖುರ್ಷಿದ್‍ಬೇಗಂ, ಬಿ,ಟಿ.ರಾಜಮ್ಮ, ಪಿ.ಯು.ವೇದಾವತಿ ಮುಂತಾದವರು ಭಾಗವಹಿಸಲಿದ್ದಾರೆ.

No comments:

Post a Comment