ಸಮಾಜದಲ್ಲಿ ಜಾತಿ ವ್ಯವಸ್ಥೆ ಗಟ್ಟಿಯಾಗಿ ಬೇರುರಿದೆ: ವಿ.ಶ್ರೀನಿವಾಸ್ ಪ್ರಸಾದ್
ಮೈಸೂರು,ಮಾ.9.ಸಮಾಜದಲ್ಲಿ ಜಾತಿವಾರು ವ್ಯವಸ್ಥೆ ಗಟ್ಟಿಯಾಗಿ ಬೇರುರಿರುವುದರಿಂದ ವ್ಯಕ್ತಿ ವ್ಯಕ್ತಿಯನ್ನೇ ದ್ವೇಷದಿಂದ ನೋಡುವ ಮಾರಕ ವಾತವರಣ ಸೃಷ್ಟಿಯಾಗಿದ್ದು, ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಕಂಟಕವಾಗಿ ಮಾರ್ಪಟ್ಟಿದೆ ಎಂದು ಮೈಸೂರು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್ ಆತಂಕ ವ್ಯಕ್ತ ಪಡಿಸಿದ್ದಾರೆ.
ಇಂದು ಕಲಾಮಂದಿರದಲ್ಲಿ ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮೈಸೂರು ಜಿಲ್ಲಾ ಕುಂಬಾರರ ಸಂಘ ಸಂಸ್ಥೆಗಳು ಹಾಗೂ ಸರ್ವಜ್ಞ ಜಂಯತ್ಯೋತ್ಸವ ಸಮಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂತ ಸರ್ವಜ್ಞರು ಜಾತಿ ವ್ಯವಸ್ಥೆಯನ್ನು ತಮ್ಮ ವಂಚನ ಸಾಹಿತ್ಯದಲ್ಲಿ ವಿರೋದಿಸಿದರು. ಸಮಾಜದಲ್ಲಿ ಸಮಾನತೆ, ಶಾಂತಿ ಹಾಗೂ ನೆಮ್ಮದಿಯ ಜೀವನವನ್ನು ಕಟ್ಟಲು ಶ್ರಮಿಸಿದ ಮಹಾನ್ ಸಂತ ಚೇತನ. ಸರ್ವಜ್ಞರ ಹೆಸರು ಸೂಚಿಸುವಂತೆ ಸರ್ವಜ್ಞರು ತಮ್ಮ ಜೀವಿತಾವಧಿಯಲ್ಲಿ ಸರ್ವವನ್ನೂ ಸಂಪೂರ್ಣವಾಗಿ ತ್ಯಾಗಮಾಡಿದ ಹೃದಯ ಶ್ರೀಮಂತಿಕೆಯ ಜ್ಞಾನ ಸರೋವರ. ಸರ್ವಜ್ಞರ ಜ್ಞಾನ ಕೌಶಲ್ಯ ಕುರಿತು ಈಗಾಗಲೇ ಹಲವು ಸಂಶೋಧನೆಗಳು ನಡೆದಿವೆÉ. ದೇಶ ಉದ್ದಕ್ಕೂ ಸಂಚರಿಸಿ ಸರ್ವಜ್ಞರು ತಮ್ಮ ವಚನದಲ್ಲಿ ಜಾಗೃತಿ ಅರಿವು ಹಾಗೂ ಬದಲಾವಣೆಯ ಸಂದೇಶವನ್ನು ಸಾರಿದ್ದಾರೆ ಎಂದು ಹೇಳಿದರು.
ಸಂತ ಸರ್ವಜ್ಞರು ಸೇರಿದಂತೆ ಯಾವುದೇ ಮಹಾನ್ ಸಾಧಕರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಸಾಧಕರ ಜ್ಞಾನವು ಎಲ್ಲಾ ಜಾತಿ, ವರ್ಗ ಹಾಗೂ ಸಮುದಾಯದ ಜನರ ಉಪಯೋಗಕ್ಕೆ ಸಿಗುವಂತಾಗಬೇಕು. ಸರ್ವಜ್ಞರು ತಮ್ಮ ಮೂರು ಸಾಲಿನ ತ್ರಿಪದಿ ವಚನಗಳಲ್ಲಿ ಕೆಲವೇ ವಿಷಯಗಳಿಗೆ ತಮ್ಮನ್ನು ಬಂಧಿಸಿಕೊಳ್ಳದೆ ಸಮಾಜದ ಸರ್ವತೋಮುಖ ಅಭಿವೃದ್ಧಿದೃಷ್ಟಿಯಿಂದ ವಚನಗಳನ್ನು ರಚನೆ ಮಾಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕøತರಾದ ಡಾ. ಕುಂ.ವೀರಭದ್ರಪ್ಪ ಅವರು ಸಂತ ಸರ್ವಜ್ಞರ ವಚನಗಳಲ್ಲಿರುವ ಮೌಲ್ಯಗಳನ್ನು ಜೀವನಗಳಲ್ಲಿ ಅಳವಡಿಸಿಕೊಂಡರೆ ಉತ್ತಮ ಪ್ರಗತಿ ಕಾಣಲು ಸಾಧ್ಯ. ರಾಜಸ್ತಾನ್ ರಾಜ್ಯದಲ್ಲಿ ಕುಂಬಾರ ಸಮುದಾಯ ಜನರ ಅಭಿವೃದ್ಧಿಗಾಗಿ ಮೀಸಲಾತಿ ನೀಡಲಾಗಿದೆ. ಸರ್ಕಾರ ಕುಂಬಾರ ಸಮುದಾಯದವರನ್ನು ಪರಿಶಿಷ್ಟ ಜಾತಿ ಸೇರುಸುವ ಮುಖಾಂತರ ರಾಜ್ಯದಲ್ಲಿರುವ 12 ಲಕ್ಷೂ ಹೆಚ್ಚು ಜನರಿಗೆ ನ್ಯಾಯ ಸಿಗುವಂತಾಗಬೇಕು ಎಂದರು.
ಸಂತ ಸರ್ವಜ್ಞರ ಜ್ಞಾನವು ಅಪಾರ ಮೌಲ್ಯದಿಂದ ಕೂಡಿದೆ. ಶಾಲಾ ಮಕ್ಕಳಿಗೆ ಸರ್ವಜ್ಞರ ಕುರಿತು ಜ್ಞಾನವನ್ನು ವೃದ್ಧಿಸಲು ಒಂದರಿಂದ ಹತ್ತನ್ನೇ ತರಗತಿಗಳ ಪಠ್ಯಪುಸ್ತಕಗಳಲ್ಲಿ ಅಳವಡಿಸಲು ಹಾಗೂ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕುಂಬಾರ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಖಾಯಂ ಸದಸ್ಯತ್ವ ನೀಡಲು ರಾಜ್ಯ ಸರ್ಕಾರದ ವತಿಯಿಂದ ಕ್ರಮವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವಾಸು ಅವರು ಜಾತಿವಂತನಾಗುವುದರ ಬದಲು ನೀತಿವಂತರಾಗಲು ಎಲ್ಲಾ ಜಾತಿ ವರ್ಗಗಳ ಜನರು ಮುಂದಾಗಬೇಕು. ರಾಜ್ಯ ಸರ್ಕಾರದಿಂದ ಎಲ್ಲಾ ಸಮುದಾಯದ ಜನರಿಗೆ ಅನೇಕ ಕಲ್ಯಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶೈಕ್ಷಣಿಕವಾಗಿ ಪ್ರಗತಿ ಹೊಂದರೆ ಮಾತ್ರ ಸಮಾಜದಲ್ಲಿರುವ ಅತೀ ಸಣ್ಣ ಸಮುದಾಯದಕ್ಕೆ ಸೇರಿದ ವ್ಯಕ್ತಿಯು ಉತ್ತಮ ಅಭಿವೃದ್ಧಿ ಕಾಣಲು ಸಾಧ್ಯ ಎಂದು ತಿಳಿಸಿದರು.
ಚಿತ್ರದುರ್ಗದ ಕುಂಬಾರರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಮೈಸೂರಿನ ಈರನಗೆರೆಯ ನಾಗಾನಂದ ಸ್ವಾಮೀಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ. ಬಿ.ಪುಷ್ಪ ಅಮರನಾಥ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಕೆ.ಆರ್.ಮೋಹನ್ ಕುಮಾರ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷರಾದ ಅನಂತು, ಜಿಲ್ಲಾಧಿಕಾರಿ ಶಿಖಾ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಪಾಲಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ್ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಂತ ಸರ್ವಜ್ಞರ ವೇದಿಕೆ ಕಾರ್ಯಕ್ರಮ್ಮಕ್ಕೂ ಮುನ್ನ ನಗರದ ಕೋಟೆ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿ ಆಯೋಜಿಸಲಾದ ಸಂತ ಕವಿ ಸರ್ವಜ್ಞರ ಭಾವಚಿತ್ರದ ಮೆರವಣಿಗೆಗೆ ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಆರ್.ಲಿಂಗಪ್ಪ ಅವರು ಚಾಲನೆ ನೀಡಿದರು.
ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ: ಪುಷ್ಪ ಅಮರನಾಥ್
ಮೈಸೂರು,ಮಾ.9.-ಹಾಸ್ಟೆಲ್ ವಿದ್ಯಾರ್ಥಿಗಳ ಆರೋಗ್ಯ ಕಾಪಾಡಲು ವಾರ್ಡನ್‍ಗಳು ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಇನ್ನಿತರ ಇಲಾಖಾ ವ್ಯಾಪ್ತಿಗೆ ಬರುವ ವಸತಿ ನಿಲಯಗಳ ವಾರ್ಡನ್‍ಗಳಿಗೆ ಆಯೋಜಿಸಲಾಗಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ನಂಜನಗೂಡು ಕಸ್ತೂರಿ ಬಾ ಶಾಲೆ ಹಾಗೂ ದೊಡ್ಡಹುಂಡಿ ವಸತಿ ಶಾಲೆಯಲ್ಲಿ ನಡೆದ ಆಹಾರ ಕಲುಷಿತ ಘಟನೆಗಳಿಂದ ನಾವು ಎಚ್ಚೆತ್ತುಕೊಳ್ಳಬೇಕಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ವಹಿಸಬೇಕಾದ ಮುನ್ನಚ್ಚರಿಕಾ ಕ್ರಮಗಳ ಬಗ್ಗೆ ವಾರ್ಡನ್‍ಗಳಿಗೆ ಈ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು ಎಂದರು.
ವಸತಿನಿಲಯಗಳು ಆಹಾರ ಸರಬರಾಜು, ಸಾಗಾಣಿಕೆ, ತಾಯಾರಿಕೆ ಹಾಗೂ ಮಕ್ಕಳಿಗೆ ಊಟ ಬಡಿಸುವವರೆಗೆ ಸ್ವಚ್ಫತೆಗೆ ಆದ್ಯತೆ ನೀಡಬೇಕು. ಈ ಯಾವುದೇ ಹಂತದಲ್ಲೂ ನಿರ್ಲಕ್ಷತೆ ವಹಿಸಿದರೆ ಆಹಾರ ಕಲುಷಿತವಾಗುತ್ತದೆ ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಸ್ಟೆಲ್ ಮಕ್ಕಳಿಗೆ ಗುಣಮಟ್ಟ ಹಾಗೂ ಸುರಕ್ಷಿತ ಆಹಾರ ನೀಡುವ ಜವಾಬ್ದಾರಿ ವಾರ್ಡನ್‍ಗಳ ಮೇಲಿದೆ ಎಂದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯ ಅಂಕಿತ ಅಧಿಕಾರಿ ಡಾ|| ಚಿದಂಬರ್ ಅವರು ಮಾತನಾಡಿ ಆಹಾರ ಕಲಬೆರಕೆ ವಿರುದ್ಧ ಕಾಯ್ದೆ 1920 ರಿಂದ ಜಾರಿಗೆ ತರಲಾಯಿತು ಧರ್ಮದ ಚೌಕಟ್ಟಿನಲ್ಲಿ ವ್ಯಾಪಾರ ನಡೆಸುತ್ತಿದ್ದವರು ಹೆಚ್ಚಿನ ಲಾಭಗಳಿಸಲು ಆಹಾರದಲ್ಲಿ ಕಲಬೆರಕೆ ಪ್ರಾರಂಭಿಸಿದರು ಇದನ್ನು ತಡೆಗಟ್ಟಿ ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯನ್ನು 2006 ರಲ್ಲಿ ಜಾರಿಗೆ ತರಲಾಯಿತು ಎಂದರು.
ಈ ಕಾಯಿದೆಯಡಿ ಆಹಾರ ಘಟಕಗಳು ಕಡಲೆಕಾಯಿ ಮಾರಾಟ ಮಾಡುವವರಿಂದ ಹೊಟೇಲ್ ರೆಸ್ಟೋರೆಂಟ್‍ನವರು ಸಹ ನೋಂದಣಿ ಮಾಡಿಕೊಳ್ಳಬೇಕು. ಗ್ರಾಹಕರಿಗೆ ನೀಡಲಾಗುವ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಪರಿಶೀಲಿಸಲಾಗುವುದು ಈ ಕಾಯಿದೆಯ ಉಲ್ಲಂಘನೆ ಕಂಡುಬಂದಲ್ಲಿ 1 ಲಕ್ಷದಿಂದ 10 ಲಕ್ಷದವರೆಗೆ ಹಾಗೂ 6 ತಿಂಗಳಿಂದ ಜೀವಿತಾವಧಿ ಸೆರೆವಾಸದ ಶಿಕ್ಷೆ ವಿಧಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸೂಕ್ಷ್ಮಜೀವಿ ತಜ್ಞ ಮಾತನಾಡಿ ಆಹಾರದಲ್ಲಿ ಕಲ್ಮಶಗಳು ಭೌತಿಕ, ರಾಸಾಯನಿಕ ಹಾಗೂ ಜೈವಿಕವಾಗಿ ಸೇರಬಹುದು ಇವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಭೌತಿಕವಾಗಿ ಕಲ್ಲು, ಮಣ್ಣು, ಆಹಾರ ಮಾಡುವವರ ಸರದ ಮಣಿ,ಉಂಗುರ ಮುಂತಾದ ಆಭರಣಗಳು ಸೇರಬಹುದು. ರಾಸಾಯನಿಕವಾಗಿ ಪಾತ್ರೆ ಸರಿಯಾಗಿ ತೊಳೆಯದಿದ್ದಾಗ ಉಳಿದಿಕೊಳ್ಳುವ ಸಾಬೂನು, ಶೌಚಾಲಯ ತೊಳೆಯಲು ಬಳಸುವ ಫಿನೈಲ್, ಕೀಟನಾಶಕ ಮುಂತಾದವುಗಳು ಸಣ್ಣಪುಟ್ಟ ತಪ್ಪಿನಿಂದ ಆಹಾರ ಸೇರಬಹುದು, ಜೈವಿಕವಾಗಿ ನೊಣ, ಇರುವೆ, ಜಿರಳೆ, ಹಲ್ಲಿ, ಸೀನುವಾಗ, ಕೆಮ್ಮುವಾಗ, ಕೊಳೆತ ತರಕಾರಿ, ಗಾಯದಿಂದ ಹಾನಿ ಉಂಟು ಮಾಡುವ ಸೂಕ್ಷ್ಮಜೀವಿಗಳು ಸೇರಿ ಆಹಾರ ವಿಷಯುತವಾಗುತ್ತದೆ ಎಂದರು.
ಆಹಾರ ತಯಾರಿಸುವಾಗ ಕೈತೊಳೆಯುವುದು, ರಾಸಾಯನಿಕ ವಸ್ತುಗಳನ್ನು ಅಡಿಗೆ ಮನೆಯಿಂದ ದೂರವಿಡುವುದು ಮುಂತಾದ ಸಣ್ಣ ಪುಟ್ಟ ಒಳ್ಳೆಯ ಅಭ್ಯಾಸಗಳನ್ನು ಅಡುಗೆ ಮಾಡುವವರು ರೂಢಿಸಿಕೊಂಡರೆ ದೊಡ್ಡ ಅವಘಡಗಳನ್ನು ದೂರವಿಡಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜವರೇಗೌಡ, ಮುಖ್ಯಕಾರ್ಯನಿರ್ವಾಹಕಾಧಿಕಾರಿ ಪಿ.ಎ.ಗೋಪಾಲ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರಕಾಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪರೀಕ್ಷಾ ಕೇಂದ್ರಗಳ ಸುತ್ತ ನಿಷೇದಾಜ್ಞೆ
ಮೈಸೂರು,ಮಾ.9-ಮೈಸೂರು ನಗರದಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆ ದಿನಾಂಕ:12-03-2015 ರಿಂದ 27-03-2015 ರವರೆಗೆ ನಡೆಯಲಿದೆ. ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಮೈಸೂರು ನಗರದ ಪೊಲೀಸ್ ಆಯುಕ್ತ ಡಾ|| ಎಂ.ಎ. ಸಲೀಂ ಅವರು ಆದೇಶ ಹೊರಡಿಸಿದ್ದಾರೆ.
1973ರ ಸಿ.ಆರ್.ಪಿ.ಸಿ. ಕಲಂ 144ರ ಅನ್ವಯ ಹೊರಡಿಸಿದ ಈ ಆದೇಶದನ್ವಯ ಪರೀಕ್ಷಾ ಕೇಂದ್ರಗಳ ಬಳಿ ಇರುವ ಎಲ್ಲ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆಯೂ, ಪರೀಕ್ಷಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸಬಾರದು ಮತ್ತು ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದೆಂದು ಸೂಚಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು,ಮಾ.9.(ಕ.ವಾ.)-ಹೆಚ್.ಡಿ.ಕೋಟೆ ತಾಲ್ಲೂಕಿನ ಸಮಗ್ರ ಶಿಶು ಅಭಿವೃದ್ದಿ ಯೋಜನೆಯಲ್ಲಿ ಖಾಲಿ ಇರುವ 2 ಅಂಗನವಾಡಿ ಕಾರ್ಯಕರ್ತೆ, 3 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 10 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು 18 ರಿಂದ 35 ವರ್ಷ ವಯೋಮಿತಿಯೊಳಗಿನ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಅರ್ಜಿ ಸಲ್ಲಿಸಲು 2015ರ ಮಾರ್ಚ್ 30 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಹೆಚ್.ಡಿ.ಕೋಟೆ. ದೂರವಾಣಿ ಸಂಖ್ಯೆ: 255320 ನ್ನು ಸಂಪರ್ಕಿಸಬಹುದು.
ಶ್ರೀ ಮಹಾಬಲೇಶ್ವರ ಸ್ವಾಮಿಯವರ ಬ್ರಹ್ಮ ರಥೋತ್ಸವ
ಮೈಸೂರು,ಮಾ.9.(ಕ.ವಾ.)-ಶ್ರೀ ಚಾಮುಂಡೇಶ್ವರಿ ಅಮ್ಮನವರ ಸಮೂಹ ದೇವಸ್ಥಾನದ ವತಿಯಿಂದ ಚಾಮುಂಡೇಶ್ವರಿ ಬೆಟ್ಟ ಶ್ರೀ ಮಹಾಬಲೇಶ್ವರ ಸ್ವಾಮಿಯವರ ಬ್ರಹ್ಮ ರಥೋತ್ಸವ ಮಾರ್ಚ್ 11 ರಂದು ನಡೆಯಲಿದೆ.
ಮಾರ್ಚ್ 9 ರಂದು ರಾತ್ರಿ ವೃಷಭ ವಾಹನ, ಮಾರ್ಚ್ 10 ರಂದು ರಾತ್ರಿ ಕಳಶಾರೋಹಣ ನಂತರ ಗಜವಾಹನ, ಮಾರ್ಚ್ 11 ರಂದು ಬೆಳಿಗ್ಗೆ 11-5 ರಿಂದ 11-30 ಶುಭ ವೃಷಭ ಲಗ್ನದಲ್ಲಿ ಯಾತ್ರಾದಾನ ನಂತರ ಶ್ರೀಯವರ ಬ್ರಹ್ಮ ರಥೋತ್ಸವ ಹಾಗೂ ಸಾಯಂಕಾಲ ಹಂಸವಾಹನ, ಮಾರ್ಚ್ 12 ರಂದು ರಾತ್ರಿ ಆಶ್ವಾರೋಹಣ, ಭೂತವಾಹನ, ಮಾರ್ಚ್ 13 ರಂದು ಬೆಳಿಗ್ಗೆ ಅವಭೃತ, ತೀರ್ಥಸ್ನಾನ ಹಾಗೂ ರಾತ್ರಿ ತೆಪ್ಪೋತ್ಸವ ಪಲ್ಲಕ್ಕಿ ಉತ್ಸವ ಧ್ವಜಾವರೋಹಣ, ಮಾರ್ಚ್ 14 ರಂದು ಸಾಯಂಕಾಲ ಪಂಚೋಪಚಾರ ಹಾಗೂ ರಾತ್ರಿ ಕೈಲಾಸ ವಾಹನ, ಶಯನೋತ್ಸವ ಹಾಗೂ ಮಾರ್ಚ್ 15 ರಂದು ಬೆಳಿಗ್ಗೆ ಮಹಾಭಿಷೇಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕೈಗಾರಿಕೋದ್ಯಮಿಗಳಿಂದ ಅರ್ಜಿ ಆಹ್ವಾನ
ಮೈಸೂರು,ಮಾ.9-ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ ವತಿಯಿಂದ ಹೊಸದಾಗಿ ಕೈಗಾರಿಕಾ ವಸಾಹತು ನಿರ್ಮಾಣ ಮಾಡಲು ಸೂಕ್ತ ಜಮೀನನ್ನು ಭೂಸ್ವಾಧೀನ ಪಡೆದುಕೊಳ್ಳುವ ಕ್ರಮ ಜರುಗಿಸಲಾಗಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದಲ್ಲಿ ಮೈಸೂರು ನಂಜನಗೂಡು-ಊಟಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಮೈಸೂರು ನಗರದಿಂದ 25 ಕಿ.ಮೀ. ದೂರದ ರೀಡ್ ಅಂಡ್ ಟೈಲರ್ ಪ್ಯಾಕ್ಟರಿ ಹತ್ತಿರ ಹೊಸದಾಗಿ ಕೈಗಾರಿಕಾ ವಸಾಹತು ಅಭಿವೃದ್ದಿಪಡಿಸಿ ವಿವಿಧ ಮಾದರಿ /ಅಳತೆ 20,000 ಚ.ಅಡಿ, 10,000 ಚ.ಅಡಿ, 5,000 ಚ.ಅಡಿ ಮತ್ತು 3,000 ಚ.ಅಡಿ ಹಾಗೂ ವಿಶೇಷ ಮಾದರಿ ನಿವೇಶನಗಳನ್ನು ಸೂಕ್ತ ಅರ್ಹ ಭಾವಿ ಉದ್ದಿಮೆದಾರರಿಗೆ ಕೈಗಾರಿಕೆ ಚಟುವಟಿಕೆ ನಡೆಸಲು ಹಂಚಿಕೆ ಮಾಡಲಾಗುವುದು.
ಈ ಹಿನ್ನೆಲೆಯಲ್ಲಿ ಆಸಕ್ತಿಯುಳ್ಳ ಭಾವಿ ಉದ್ಯಮಿಗಳು, ಹಾಲಿ ಕೈಗಾರಿಕೋದ್ಯಮಿಗಳು ತಮ್ಮ ತಮ್ಮ ಯೋಜನೆಗೆ ಅನುಗುಣವಾಗಿ ಬೇಕಾಗುವ ನಿವೇಶನಗಳ ಅಳತೆಯನ್ನು ನಮೂದಿಸಿ ಬೇಡಿಕೆ ಪತ್ರವನ್ನು ಸ್ವವಿವರವುಳ್ಳ ಅರ್ಜಿಯೊಂದಿಗೆ ಉದ್ದೇಶಿಸಿರುವ ಕೈಗಾರಿಕಾ ವಸಾಹತು, ಯಾದವಗಿರಿ, ಮೈಸೂರು ಇವರಿಗೆ ರೂ. 5000/- ಗಳ ಡಿ.ಡಿ. ಯೊಂದಿಗೆ ಮಾರ್ಚ್ 31 ರೊಳಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2515630ನ್ನು ಸಂಪರ್ಕಿಸುವಂತೆ ಕೋರಿದೆ.
ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು,ಮಾ.9.ಪಿರಿಯಾಪಟ್ಟಣ ತಾಲ್ಲೂಕಿನ ಹಲಗನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಖಾಲಿ ಇರುವ ಮೇಲ್ವಿಚಾರಕರ ಹುದ್ದೆಯನ್ನು ಗೌರವ ಸಂಭಾವನೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹಲಗನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಿಂದ ಅಥವಾ ತಾಲ್ಲೂಕಿನ ಶಾಖಾ ಗ್ರಂಥಾಲಯದಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಏಪ್ರಿಲ್ 1 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2525875ನ್ನು ಸಂಪರ್ಕಿಸಬಹುದು.
ಅಪರಿಚಿತÀ ವ್ಯಕ್ತಿಯ ಶವÀ ಪತ್ತೆಗಾಗಿ ಮನವಿ
ಮೈಸೂರು,ಮಾ.9.ಮಂಡ್ಯ-ಹನಕೆರೆ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ ಕಿ.ಮೀನಂ-90/500-600ರಲ್ಲಿ ಮಾರ್ಚ್ 6 ರಂದು ಸುಮಾರು 50 ವರ್ಷ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದಾರೆ. ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
ಈ ಅಪರಿಚಿತ ವ್ಯಕ್ತಿಯು 5.6 ಅಡಿ ಎತ್ತರ, ಗೋಧಿ ಮೈಬಣ್ಣ, ದೃಢಕಾಯ ಶರೀರ, ದುಂಡುಮುಖ, ತಲೆಯಲ್ಲಿ ಕಪ್ಪು ಬಿಳಿ ಮಿಶ್ರಿತ ಕೂದಲು, ಕುಪ್ಪು ಬಿಳಿ ಮಿಶ್ರಿತ ಗಡ್ಡ ಮೀಸೆ, ಕಿವಿ ಚುಚ್ಚಿದೆ ಎಡಗಾಲಿನ ಪಾದದ ಹಿಂಭಾಗ ಬಿಳಿ ತೊನ್ನು ಇರುತ್ತದೆ ಹಾಗೂ ಹಳೆಯ ಗಂಟು ಇರುತ್ತದೆ. ಬಿಳಿ ಉದ್ದ ಗೆರೆಯುಳ್ಳ ತುಂಬ ತೋಳಿನ ಬಿಳಿ ಗೆರೆಯುಳ್ಳ ಶರ್ಟ್, ಬಿಳಿ ಬಣ್ಣದ ಪಂಚೆ ಧರಿಸಿರುತ್ತಾರೆ.
ಮೃತ ವ್ಯಕ್ತಿಯ ದೇಹವÀನ್ನು ಮಂಡ್ಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.
No comments:
Post a Comment