Thursday, 5 March 2015

ಮೈಸೂರು ಸುದ್ದಿಗಳು

  ಪ್ರವಾಸ ಕಾರ್ಯಕ್ರಮ
     ಮೈಸೂರು, ಮಾ.5. ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಮಾರ್ಚ್ 6 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಅಂದು ಮಧ್ಯಾಹ್ನ 3 ಗಂಟೆಗೆ ಆಗಮಿಸಿ ಸರಗೂರು ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸಂಜೆ 4-30 ಗಂಟೆಗೆ ಹ್ಯಾಂಡ್ ಪೋಸ್ಟ್ ರಸ್ತೆ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.
ಲೋಕ್ ಅದಾಲತ್
      ಮೈಸೂರು, ಮಾ.5-ಮೈಸೂರು ತಾಲ್ಲೂಕಿನ ತಹಶೀಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಖಾತೆ ವರ್ಗಾವಣೆ ಬಗ್ಗೆ ತಕರಾರು ದಾಖಲಾಗಿರುವ ಪ್ರಕರಣ ಲೋಕ್ ಅದಲತ್ ನಲ್ಲಿ ಬಗೆಹರಿಸಲು ದಿನಾಂಕ 06-03-2015 ಮತ್ತು 14-03-2015 ರಂದು ಮಿನಿ ವಿಧಾನಸೌಧ ಮೈಸೂರು ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಲೋಕ್ ಅದಾಲತ್ ನಡೆಸಲಾಗುವುದು
    ಈ ಲೋಕ್ ಅದಾಲತ್ ನಲ್ಲಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಹಿರಿಯ ವಕೀಲರುಗಳು ರಾಜಿ ಅಧಿಕಾರಿಗಲಾಗಿರುತ್ತಾರೆ. ತಹಶೀಲ್ದಾರ್ ರವರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಪಕ್ಷಕಾರಗಳು ಸದರಿ ಅವಕಾಶದ ಸದುಪಯೋಗ ಪಡೆದುಕೊಂಡು, ದೀರ್ಘಕಾಲದಿಂದ ವಿವಾದವಿರುವ ಖಾತಾ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಮೈಸೂರು ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ದರಪಟ್ಟಿ ಆಹ್ವಾನ
     ಮೈಸೂರು, ಮಾ.5.-ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ 2014-15ನೇ ಸಾಲಿಗೆ ಮೈಸೂರು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಾಧನ ಸಲಕರಣೆ ಖರೀದಿಸಲು ಅರ್ಹ ಸಂಸ್ಥೆಗಳಿಂದ ದರಪಟ್ಟಿ ಆಹ್ವಾನಿಸಿದೆ.
      ಆಸಕ್ತ ಸಂಸ್ಥೆಗಳು ಸಾಧನ ಸಲಕರಣೆ ವಿವರ ಹಾಗೂ ಹೆಚ್ಚಿನ ಮಾಹಿತಿಗೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ, ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಡಿ.ಸುಬ್ಬಯ್ಯ ರಸ್ತೆ ಮೈಸೂರು ದೂರವಾಣಿ ಸಂಖ್ಯೆ 0821-2496686ನ್ನು ಸಂಪರ್ಕಿಸುವುದು. ದರಪಟ್ಟಿಯನ್ನು ಮಾರ್ಚ್ 16ರ ಸಂಜೆ 4 ಗಂಟೆಯೊಳಗಾಗಿ ಮೊಹರು ಮಾಡಿದ ಲಕೋಟೆಯಲ್ಲಿ  ಸಲ್ಲಿಸುವುದು.
ಭತ್ತದ ಹಲ್ಲಿಂಗ್ : ಅಕ್ಕಿಗಿರಣಿಗಳಿಗೆ ಸೂಚನೆ
      ಮೈಸೂರು, ಮಾ.5.(ಕ.ವಾ.)-ಮೈಸೂರು ಜಿಲ್ಲೆಯಲ್ಲಿ ಭತ್ತವನ್ನು ಕಸ್ವಂ ಹಲ್ಲಿಂಗ್‍ಗಾಗಿ 91 ಅಕ್ಕಿಗಿರಣಿಗಳಿಗೆ 357347.58 ಕ್ವಿಂ ಒಪ್ಪಂದ ಮಾಡಿಕೊಂಡಿದ್ದು, ದಿನಾಂಕ 03-03-2015 ರವರೆಗೆ 298862.44 ಕ್ವಿಂ. ಭತ್ತವನ್ನು ಹಲ್ಲಿಂಗ್ ಮಾಡಲು ಎತ್ತುವಳಿ ಮಾಡಿರುತ್ತಾರೆ.
     ಒಪ್ಪಂದ ಮಾಡಿಕೊಂಡಿರುವ ಅಕ್ಕಿಗಿರಣಿಗಳು ಜಿಲ್ಲಾಧಿಕಾರಿಗಳ ಆದೇಶದ ಹದಿನೈದು ದಿನಗಳ ಒಳಗೆ ಭತ್ತ ಎತ್ತುವಳಿ ಮಾಡಿ ನುರಿಸಬೇಕಿದ್ದು, ಕಾರ್ಯ ವಿಳಂಬವಾಗಿರುತ್ತದೆ. ಒಪ್ಪಂದ ಮಾಡಿಕೊಂಡಿರುವ ಅಕ್ಕಿಗಿರಣಿಗಳು ಮಾರ್ಚ್ 8 ರೊಳಗಾಗಿ ಭತ್ತವನ್ನು ಎತ್ತುವಳಿ ಹಾಗೂ  ಹಲ್ಲಿಂಗ್ ಮಾಡಿಸಿ ಹಿಂದಿರುಗಿಸುವುದು ತಪ್ಪಿದಲ್ಲಿ ಅಗತ್ಯ ವಸ್ತುಗಳ ಕಾಯಿದೆ 1955ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ. 6 ರಂದು ಕಾರ್ಯಾಗಾರ
     ಮೈಸೂರು, ಮಾ.5-ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿ ವತಿಯಿಂದ ಮಾರ್ಚ್ 6 ರಂದು ಬೆಳಿಗ್ಗೆ 10-30ಕ್ಕೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರದ ತರಬೇತಿ ಕಾರ್ಯಾಗಾರ  ಏರ್ಪಡಿಸಲಾಗಿದೆ.
     ಈ ಕಾರ್ಯಾಗಾರದಲ್ಲಿ ಮೈಸೂರು ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ/ನರ್ಸಿಂಗ್ ಹೋಂ ಗಳಿಂದ ಒಟ್ಟು 100 ಜನ ವೈದ್ಯಾಧಿಕಾರಿಗಳು ಭಾಗವಹಿಸಲಿದ್ದಾರೆ.
       ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ  ಕೆ.ಬಿ.ಪ್ರಭುಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು,  ಜನನ ಮರಣಗಳ ಜಂಟಿ ಮುಖ್ಯ ನೋಂದಣಾಧಿಕಾರಿ ಸುಬ್ರಹ್ಮಣ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ. ಮೈಸೂರು ವೈದ್ಯಕೀಯ ಕಾಲೇಜಿನ  ಸಹಾಯಕ ಪ್ರಾಧ್ಯಾಪಕ ಡಾ.ಆನಂದ್ ಪಿ. ರಾಯಮನೆ ಅವರು  ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಾ. 8 ರಂದು ಅಂತರರಾಷ್ಟ್ರೀಯ ದಿನಾಚರಣೆ
         ಮೈಸೂರು, ಮಾ೬ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಾರ್ಚ್ 8 ರಂದು ಬೆಳಿಗ್ಗೆ  10-30 ಗಂಟೆಗೆ  ಜಗನ್ಮೋಹನ ಅರಮನೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುವುದು.
     ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ವಾಸು ಅವರು ಅಧ್ಯಕ್ಷತೆ  ವಹಿಸುವರು.
     ಮಹಿಳೆಯರಿಗೆ ಇರುವ ಕಾನೂನು ಸೌಲಭ್ಯಗಳ ಜೆ.ಎಸ್.ಎಸ್. ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ|| ಕೆ.ಎಸ್. ಸುರೇಶ್ ಅವರು ಉಪನ್ಯಾಸ ನೀಡಲಿದ್ದಾರೆ. ಸ್ಪಂದನ ಮಹಿಳಾ ಕಲಾತಂಡ ಹಾಗೂ ಆರ್.ಎಲ್.ಹೆಚ್.ಪಿ. ಸಂಸ್ಥೆಯವರು "ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ" ಕುರಿತು -    ಕಿರುನಾಟಕ ನಡೆಸಿ ಕೊಡಲಿದ್ದಾರೆ.
    ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಸಾ.ರಾ.ಮಹೇಶ್, ಹೆಚ್.ಪಿ. ಮಂಜುನಾಥ್, ಎಸ್. ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂಧನ್, ಮರಿತಿಬ್ಬೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕೆ.ಆರ್. ಮೋಹನ್‍ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಬಣ್ಣ ಮತ್ತು ಅರಗು ಕಾರ್ಖಾನೆ ಅನಂತು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರರು ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷ ಲೋಕಾಮಣಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸುವರು.
    ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಂದು ಬೆಳಿಗ್ಗೆ 9 ಗಂಟೆಗೆ ಅರಮನೆ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜಾಥಾ ನಡೆಯಲಿದೆ.



No comments:

Post a Comment